ವಿಷಯದ ವಿವರಗಳಿಗೆ ದಾಟಿರಿ

ಜುಲೈ 17, 2013

1

‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?

‍ನಿಲುಮೆ ಮೂಲಕ

– ಪ್ರವೀಣ್ ಪಟವರ್ಧನ್

Modi12ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook  ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.

ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.

ರಾಯ್ಟರ್ಸ್ಗೆ ನೀಡಿದ ಸಂದರ್ಶನದಿಂದ ಮೋದಿಯವರನ್ನು ಕೇಳಬಹುದಾದಂತಹ, ತಿಳಿದುಕೊಳ್ಳುವಂತಹ, ಶ್ಲಾಘಿಸುವಂತಹ ಹಲವಾರು ವಿಷಯಗಳಿದ್ದರೂ ಸಂದರ್ಶಕರು ಕೇಳುವ ಮೊದಲನೆಯ ಪ್ರಶ್ನೆ 2002ರ ಘಟನೆಯದ್ದೇ ಆಗಿರುತ್ತೆ. ಸುಪ್ರಿಂಕೋರ್ಟ್, ಖಐಖಿ, ಈಇಐಗಳ ಸಾಲು ಸಾಲು ತನಿಖೆಗಳ ಫಲಿತಾಂಶ ”Clean chit”  ಆದರೂ, ನರೇಂದ್ರ ಮೋದಿಯವರನ್ನು ಇಷ್ಟಪಡುವ, ಆದರಿಸುವ, ಗೌರವಿಸುವ, ಹಿಂಬಾಲಿಸುವವರ ಸಂಖ್ಯೆ ಹೆಚ್ಚಿದರೂ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ, ಅವರನ್ನು ಮಾತಿನಲ್ಲಿ ಸೋಲಿಸಿದ್ದೇವೆ ಎಂದು ಬೀಗುವ, ಅಂತಹ “ಕೋಮುವಾದಿ” ನಾಯಕನ ಅವಶ್ಯಕತೆ ಈ ದೇಶಕ್ಕಿಲ್ಲ ಎಂದು ಅರಚಾಡುವವರ ಸಂಖ್ಯೆ ತೀರಾ ಕಡಿಮೆ ಇದ್ದರೂ ತಮ್ಮ ಅಸ್ತಿತ್ವವನ್ನು ತೋರ್ಪಡಿಸಲು ಮೋದಿಯವರ ಹಿಂಬಾಲಕರನ್ನು ಹತ್ತಿಕ್ಕಲು, ವಿಷ ಬೀಜ ಬಿತ್ತಲು ಶತಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅವರುಗಳಲ್ಲಿ ಕಾಂಗ್ರೆಸ್ ವಕ್ತಾರ ದಿಗ್ವಿಜಯಸಿಂಗ್ ಕೂಡಾ ಒಬ್ಬರು. ನಮ್ಮ ದೇಶದಲ್ಲಿ Sick-ularists ಪ್ರಕಾರ ಈ ದೇಶದ ಇತಿಹಾಸ ಪ್ರಾರಂಭವಾಗುತ್ತಿದ್ದುದು ಡಿಸೆಂಬರ್ 6, 1992ರಿಂದ. ಈಗ್ಗೆ ಕೆಲ ವರ್ಷಗಳ ಹಿಂದೆ ಹೊಸ ಐತಿಹಾಸಿಕ ಘಟ್ಟವನ್ನು ನಿರ್ಮಿಸುತ್ತಿರುವ Sick-ularists  ಗೆ ಮಹತ್ತರ ದಿನಾಂಕವೆಂದರೆ 2002ರ ಗೋಧ್ರಾ ದುರ್ಘಟನೆ. ಗೋಧ್ರಾ ದುರ್ಘಟನೆಯ ಮುಂಚೆ ನಡೆದ ಕರಸೇವಕರ ಕಗ್ಗೊಲೆಯನ್ನು ಮರೆತು ಬಿಟ್ಟಿರುತ್ತಾರೆ. ಇತರ ರಾಜ್ಯಗಳಲ್ಲಿ ನಡೆದ ನರಮೇಧವನ್ನು, ಅದರ ಕಾರಣವನ್ನು, ಆ ನರಮೇಧ ನಡೆದಾಗ ಆಡಳಿತದಲ್ಲಿದ್ದ ಸರ್ಕಾರವನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಗೋಧ್ರಾದಲ್ಲಿ ಯಾರೂ ಯಾವುದೇ ದಾಳಿಯನ್ನು ಸಮರ್ಥಿಸಿಕೊಳ್ಳದಿದ್ದರೂ, ನರೇಂದ್ರಮೋದಿಯವರ ಹೆಸರಿಗೆ ಮಸಿ ಬಳಿಯಲು ಹರಸಾಹಸ ಪಟ್ಟರೂ ಪ್ರತಿಯೊಂದು ಅಗ್ನಿ ಪರೀಕ್ಷೆಯಲ್ಲೂ ನಿರ್ದೋಷಿಯಾಗಿ ಹೊರ ಬರುತ್ತಿರುವವರು ನರೇಂದ್ರ ಮೋದಿಯವರು.

ಮೋದಿಯವರ ಉತ್ತರದಲ್ಲಿ ಬಂದ “ಹಿಂದು ರಾಷ್ಟ್ರೀಯವಾದಿ” ಅಂದರೆ ಏನು? ಹಿಂದು ಎಂದರೆ ಅದೊಂದು ಜಾತಿ. ರಾಷ್ಟ್ರೀಯವಾದಿ ಎಂದರೆ ಆ ರಾಷ್ಟ್ರದ ಭಕ್ತ. ಹಾಗಾಗಿ ಹಿಂದು ರಾಷ್ಟ್ರೀಯವಾದಿ ಎಂದರೆ ಹಿಂದು ಜಾತಿಗೆ ಎಲ್ಲಾ ಜಾತಿಯವರನ್ನೂ ಮತಾಂತರಿಸುವುದು. ಇತರೆ ಜಾತಿಯವರಿಗೆ ತೊಂದರೆ ನೀಡುತ್ತಾ ಶಾಂತಿ ಕದಡುವುದು ಎಂದು ಅರ್ಥೈಸಿದ ನಮ್ಮ ದಿಗ್ವಿಜಯಸಿಂಗ್ ಹಾಗೂ ಅವರಂತೆಯೇ ಯೋಚಿಸಿದ ಕೆಲವರಿಗೆ ಸರಿಯಾಗಿ ವಿಶ್ಲೇಷಣೆ ಮಾಡುವ ದೃಷ್ಟಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ… ನಮ್ಮ ದೇಶದಲ್ಲಿ ಒಬ್ಬ ಜಿಹಾದಿ ತಾನು ಮುಸಲ್ಮಾನ ಎಂದು ಘೋಷಿಸಿದರೂ, ಓಮರ್ ಅಬ್ದುಲ್ಲ ತಾನು ಮೊದಲು ಮುಸಲ್ಮಾನ, ನಂತರ ಭಾರತೀಯ ಎಂದಾಗ ಅವರ ಜಾತ್ಯತೀತೆಯನ್ನು ಒರೆಗೆ ಹಚ್ಚಲು ದಿಗ್ವಿಜಯಸಿಂಗ್ ಮುಂದಾಗುವುದಿಲ್ಲ. ಅಷ್ಟೇ ಅಲ್ಲ… ಸಂಸದ ಶಫೀಕುರ್ ರಹಮಾನ್ ಬಾರ್ಕ್ ವಂದೇ ಮಾತರಂ ಹಾಡುವುದಿಲ್ಲವೆಂದು ಸಂಸತ್ತು ಭವನದಿಂದ ಹೊರ ನಡೆದಾಗಲೂ ಈ  Sick-ulaವಾದಿಗಳು ಪ್ರತಿಭಟಿಸುವುದಿಲ್ಲ. ಅದಲ್ಲದೇ ಇದೇ ದೇಶದ ಪ್ರಧಾನಿ ಮನಮೋಹನಸಿಂಗ್ ”Muslims must have their first claim on resources” ಎಂದು ಹೇಳಿದಾಗಲೂ, ಅಲ್ಪಸಂಖ್ಯಾತರು ಎಂಬ ಹೆಸರಿನಲ್ಲಿ ಎಲ್ಲಾ ವಿವಿಧ ಕ್ಷೇತ್ರಗಳಲ್ಲಿ appeasements ನಡೆದದ್ದು ಜಾತ್ಯತೀತೆಗೆ ಮಾರಕವಾಗುವುದಿಲ್ಲ. ಆದರೆ ಮೋದಿ ಹಿಂದು ಎಂದು ಹೇಳಿಕೊಂಡರೆ ಅದು ಕೋಮುವಾದ ಎಂಬ ಈ Pseudo secularists ಕಲಿತುಕೊಳ್ಳುವ ಪಾಠ ಎಂದೋ ಗೊತ್ತಿಲ್ಲ. ನಮ್ಮ ದೇಶವನ್ನು ಭಾರತ, ಹಿಂದುಸ್ಥಾನ, ಇಂಡಿಯಾ ಅಂತೆಲ್ಲಾ ಕರೆಯುತ್ತಾರೆ. ಭಾರತ ಏಕೆ? ನಮ್ಮ ಇತಿಹಾಸದ ಪ್ರಕಾರ ಚಕ್ರವರ್ತಿಯಾಗಿ ಮೆರೆದ ಜನಪ್ರಿಯ ಸಾಮ್ರಾಟನ ಹೆಸರು ಭರತ. ಆದ್ದರಿಂದ ಭಾರತ. ಇಂಡಿಯಾ ಏಕೆ? ಈ ಭಾರತ ದೇಶದ ಮೇಲೆ ದಾಳಿ ಮಾಡಿದ ಮಹಾ ಪರಾಕ್ರಮಿ ಅಲೆಕ್ಸಾಂಡರ್, ಸಿಂಧು ನದಿಯನ್ನು ದಾಟಿ ಭಾರತದೊಳಗೆ ನುಗ್ಗಿದ. ಇವನ ಹಾಗೂ ಇವನ ಸೈನ್ಯ ಸಿಂಧು ನದಿಯನ್ನು ಉಚ್ಚರಿಸಲಾಗದೇ ಇಂಡಸ್ ಎಂದರು. ಕ್ರಮೇಣ ಎಂದು ಹಿಂದುಸ್ ಆಯ್ತು. ಇಲ್ಲಿಯ ಜನರ ನಡವಳಿಕೆಗಳು ಈ ಜನರನ್ನು ಗುರುತಿಸುವ, ಇಲ್ಲಿನ ವಿಶಿಷ್ಟ ಆಚಾರ ಪದ್ಧತಿಯನ್ನು ಗುರುತಿಸಿ ತನ್ನ ಮಾತೃ ನೆಲದ ಪದ್ಧತಿಯ ಭಿನ್ನತೆಯನ್ನು ಗುರುತಿಸುವ ಸಲುವಾಗಿ ಹಿಂದು ಎಂದು ಕರೆದ. ಹಿಂದುಗಳಿದ್ದ ನಾಡಿಗೆ ಹಿಂದುಸ್ಥಾನ್ ಎಂದು ಕೆಲವರು ಕರೆಯಲಾರಂಭಿಸಿದರು. ಇಲ್ಲಿ ಹೇಳಿದ ಯಾವೊಂದು ಮಾತು ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದ ನಮ್ಮ ದೇಶದಲ್ಲಿನ ಶಾಲಾ ಮಕ್ಕಳಿಗೆ ಸಮಾಜ ಪಠ್ಯಗಳಲ್ಲಿ ಹೇಳಿಕೊಟ್ಟ ವಿಷಯಗಳೇ ಇವು. ವಿಶ್ವದ ಹಲವು ದೇಶಗಳಲ್ಲಿ ಇಂದಿಗೂ ಹಿಂದು ಎಂದರೆ ಹಿಂದುಸ್ಥಾನದ ನಿವಾಸಿ. ಹಿಂದುಸ್ಥಾನದಲ್ಲಿ ಮಾತನಾಡುವ ಭಾಷೆ ಹಿಂದಿ. ಆದರೆ ಹಿಂದು ಎಂಬುದು ಒಂದು ಜಾತಿ, ಮುಸಲ್ಮಾನ, ಕ್ರೈಸ್ತ ತರಹದ ಜಾತಿ ಎಂಬುದು ಹಲವು  secular ಚಿಂತಕರ ವಾದ. ಹಿಂದು ಜಾತಿಯಲ್ಲ ಅದೊಂದು ”way of life” ಎಂದು ಪ್ರತಿಪಾದಿಸಿ ಗೆದ್ದವರು ಬಹಳಷ್ಟು ಸಾಧಕರಿದ್ದಾರೆ. ಕಾರಣ ಈ ಹಿಂದು ಯಾರೊಬ್ಬ ಪ್ರಾರಂಭ ಮಾಡಿ, ನಡೆದುಕೊಳ್ಳಲು ಬೇಕಿರುವ ನಿಯಮಗಳನ್ನು ದಾಖಲಿಸಿ, ಹೀಗೇ ಜೀವನ ನಡೆಸಬೇಕೆಂದು ಕಟ್ಟಪ್ಪಣೆ ಮಾಡಿದ Prophet ನಮ್ಮಲ್ಲಿ ಕಾಣಸಿಗುವುದಿಲ್ಲ. 1884ರಲ್ಲಿ ಲಾಹೋರಿನಲ್ಲಿ ಸನ್ಮಾನ ಸ್ವೀಕರಿಸಿದ ಅಲಿಫರ್ ವಿಶ್ವವಿದ್ಯಾಲಯದ ಜನಕ ಸರ್ ಸಯ್ಯದ್ ಅಹಮದ್ ಹೇಳಿದ ಮಾತುಗಳು ಇವು. “ನಾವು ನಮ್ಮ ದೇಶದಲ್ಲಿ (ಆಗಿನ್ನೂ ಪಾಕಿಸ್ತಾನ ದೇಶವಿರಲಿಲ್ಲ) ಹಿಂದು ಮುಸಲ್ಮಾನ್ ಎಂದು ವಿಭಜಿಸುವುದಕ್ಕಿಂತ ಈ ದೇವರು ನಿರ್ಮಿತ ದೇಶದಲ್ಲಿ ಎಲ್ಲರೂ ಹಿಂದುಗಳೇ ಎಂದು ಬಾಳುವುದು” ಹಿಂದುಗಳಾಗಿ ಬಾಳುವುದು ಎಂದು ಘೋರ ಪ್ರಮಾದ. ಹಿಂದುತ್ವದ ಅರ್ಥ ತಿಳಿಯದವರಿಗೆ ಹೀಗೊಂದು ಕೊನೆಯ ಮಾತು.

ಹಿಂದೆ ಒಂದು ಸಂದರ್ಶನದಲ್ಲಿ ನರೇಂದ್ರ ಮೋದಿಯವರಿಗೆ ಒಂದು ಪ್ರಶ್ನೆ ಕೇಳಲಾಯಿತು. (ಈ ಸಂದರ್ಶನ Youtubeನಲ್ಲೂ ಸಿಗುತ್ತದೆ) ಸಂದರ್ಶಕ ಕೇಳಿದ- ನೀವು ಹಿಂದುತ್ವವನ್ನು ತೀವ್ರವಾಗಿ ಪ್ರತಿಪಾದಿಸುತ್ತೀರಾ… ಜೊತೆಗೆ ನೀವೇನಾದ್ರೂ ಪ್ರಧಾನ ಮಂತ್ರಿಯಾದರೆ ಮುಸಲ್ಮಾನರು, ಕ್ರೈಸ್ತರು ನೆಮ್ಮದಿಯಾಗಿ ಜೀವಿಸಬಹುದೇ- ಅದಕ್ಕೆ ಮೋದಿಯವರ ಉತ್ತರ-ನಿಮ್ಮ ಪ್ರಕಾರ ಹಿಂದುತ್ವ ಅಂದರೆ ಏನು? ಇದುವರೆಗೂ ಹಿಂದೂಗಳು ಯಾರ ಮೇಲೂ ದಾಳಿ ಮಾಡಿಲ್ಲ. ತಮ್ಮ ಮತ/ಧರ್ಮವನ್ನು ಸ್ಥಾಪಿಸಲು ಎಂದೂ ಹೋರಾಟ ಮಾಡಿಲ್ಲ. ಮತಾಂತರಗಳನ್ನು ನಡೆಸಿಲ್ಲ. ನಮ್ಮ ಪೂರ್ವಜರು ಹೇಳಿದ ಮಾತು ಇಷ್ಟು

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಧವೇತ್॥

ಅರ್ಥಾತ್ ಎಲ್ಲರೂ ಸುಖವಾಗಿರಲಿ. ಯಾರಿಗೂ ದುಃಖ ಬಾರದಿರಲಿ ಎಂಬುದೇ ಸಾರಾಂಶ. ಇಂತಹ ಮೌಲ್ಯಗಳನ್ನೇ ಒಳಗೊಂಡ ಹಿಂದುತ್ವವನ್ನು ಪ್ರತಿಪಾದಿಸಿದರೆ ಅದು ತಪ್ಪೇ? ಸಹಜವಾಗಿಯೇ ಸಂದರ್ಶಕಿಯ ಬತ್ತಳಿಕೆಯಲ್ಲಿ ಹಿಂದುತ್ವದ ಬಗ್ಗೆ ಮತ್ತೊಂದು ಪ್ರಶ್ನೆ ಇರಲಿಲ್ಲ.

ಸ್ವಲ್ಪ ಯೋಚಿಸಿ. ಇದನ್ನೇ ಪ್ರತಿದಿನವೂ ಹಿಂದುಗಳು ದೇವರ ಮುಂದೆ ಕೈ ಮುಗಿಯುತ್ತಾ ಹೇಳುವುದಲ್ಲವೇ? ಈ ಶ್ಲೋಕ ಅರಿಯದ ಯಾರಾದರೂ ಹಿಂದು (ಭಾರತೀಯ) ಇದ್ದಾನೆಯೇ? ಈ ಶ್ಲೋಕವನ್ನು ಪಠಿಸಿ ಅದರಂತೆ ನಡೆದುಕೊಳ್ಳದ ಹಿಂದು (ಭಾರತೀಯ) ಸಿಗುತ್ತಾನೆಯೇ?

ಚಿತ್ರ ಕೃಪೆ : newindianexpress.com

1 ಟಿಪ್ಪಣಿ Post a comment
  1. P R kamalakshi baby
    ಡಿಸೆ 30 2013

    ಹೌದು ನಾವೆಲ್ಲೂ ದಾಳಿ ಮತಾಂತರ ಮಾಡಿಲ್ಲ, ಹಾಗಿದ್ದೂ ಕೆಲವರು ಒತ್ತಿ ಒತ್ತಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದೇವೆ ಎಂದು ಯಾಕಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಅನ್ನೋದೇ ಅರಿಯದಾಗಿದೆ. ಬೆಳಗಾಗೆದ್ದು ಶಾಂತಿಮಂತ್ರ ಜಪಿಸುತ್ತಾ ದಿನಚರಿ ಪ್ರಾರಂಭಸಿವವರು ನಾವು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments