ವಿಷಯದ ವಿವರಗಳಿಗೆ ದಾಟಿರಿ

ಜುಲೈ 25, 2013

6

ಮೋದಿ ಸ್ವಲ್ಪ ಸಿಹಿ , ಸ್ವಲ್ಪ ಕಹಿ

‍ನಿಲುಮೆ ಮೂಲಕ

– ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ

Modi12ನಮ್ಮ ಭಾರತ ಬಹು ಭವ್ಯವನ್ನು ಮೆರೆಯುವ ದೇಶ, ಪ್ರಪಂಚದಲ್ಲೆ ಉತ್ತಮವಾದ ಇತಿಹಾಸ ಹೊಂದಿರುವ ದೇಶ ಅನೇಕ ಅದ್ಭುತಗಳಿಗೆ ಹೆಸರಾದ ದೇಶ , ರಾಜಕೀಯದಲ್ಲಿ ಈಡಿ ಪ್ರಪಂಚವೆ ಕಣ್ಣರಳಿಸಿ ನೋಡುವಂತೆ ಇರುವ ದೇಶ , ಇಂದಿನ ರಾಜಕೀಯ ಏಕೊ ಬೇಸರ ಮೂಡಿಸುತ್ತಿದೆ. ಏಕೆಂದರೆ ಎಲ್ಲವು ಗಿಮಿಕ್ ಬರಿ ಜಾಹಿರಾತು ಜೀವನ ಜಾಹಿರಾತಿನಲ್ಲಿ ರಾಜಕೀಯ ನೈಜವಾಗಿ ಜನರ ಮುಟ್ಟು ಕೆಲಸಗಳು ಆಗುತ್ತಿಲ್ಲ ಎಂಬುವುದು ಭಾರತೀಯರ ಪಾಲಿಗೆ ಕಹಿಸತ್ಯ.

ಇತ್ತಿಚಿಗೆ ನಮ್ಮ ಅಂತರಜಾಲ ತಾಣಗಳಲ್ಲಿ ಮಾನ್ಯ ಮೋದಿಯವರ ವಿಚಿತ್ರ ಜಾಹಿರಾತುಗಳನ್ನು ನೋಡಿ ಗಾಬರಿ ಹುಟ್ಟಿಸುತ್ತವೆ. ಇನ್ನೇನು ತಾನು ಈ ದೇಶದ ಪ್ರಧಾನಿಯಾಗಿರುವೇನು ಎಂಬ ಕಲ್ಪನೆ ಅವು ನೊಡುಗರಿಗೆ ಮೂಡಿಸುತ್ತವೆ. ಮುಗ್ದ ಜನರನ್ನು ಇನ್ನಷ್ಟು ಮಂದರನ್ನಾಗಿ ಮಾಡುವ ಈ ಜಾಹಿರಾತುಗಳು ಅವರಿಂದ ಅದೆಷ್ಟು ಹಣ ವಸೂಲಿ ಮಾಡಬಹುದು ಲೆಕ್ಕಹಾಕಿ ನಾಳೆ ಇವರು ನಮ್ಮ ದೇಶದ ಪ್ರಧಾನಿಯಾದರೆ ಈಡಿ ನಮ್ಮ ದೇಶವನ್ನು ಜಾಹಿರಾತಿನಲ್ಲಿ ಮುಳಗಿಸುವುದರಲ್ಲಿ ಸಂದೇಹವೆ ಇಲ್ಲಾ.

ಮೊನ್ನೆ  ಪ್ರತಾಪ ರವರು ಬರೆದ ಮೋದಿ ಯಾರು ತುಳಿಯದ  ಹಾದಿ ಪುಸ್ತಕ ಓದಿದೆ ಅಲ್ಲಿ ಪುಸ್ತಕ ದುದ್ದಕ್ಕು  ಅವರ ವ್ಯಕ್ತಿತ್ವ ಬಹಳ ಮಾರ್ಮಿಕವಾಗಿ ಬರೆದಿದ್ದಾರೆ. ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೆ ಈ ರಾಜಕೀಯ ಹಾದಿ ಹಿಡಿದು ಆರ್ ಎಸ್ ಎಸ್ ನ ಪಕ್ಕ ಕಾರ್ಯಕರ್ತನಾಗಿ ಮತ್ತೆ ಅದೆ ಗರಡಿಯಲ್ಲಿ ಪಳಗಿದ ಹುಲಿ ಎಂಬ ಮಾತು ಒಂದಡೆ ಕೇಳಿ ಬರುತ್ತದೆ. ಅವರ ಛಲ ಸಾಧನೆ ಎಲ್ಲವು ಮೆಚ್ಚಲೇಬೇಕು ಒಬ್ಬ ವ್ಯಕ್ತಿ ಯಾರ ಸಹಾಯವಿಲ್ಲದೆ ರಾಜಕೀಯ ರಂಗದಲ್ಲಿ ಅಷ್ಟು ಮೇಲೆತ್ತರಕ್ಕೆ ಬೆಳಿಯುವವುದು ಸಾಮಾನ್ಯವಾದ ಮಾತಲ್ಲಾ, ಆದರೆ ತಾನು ಈ ದೇಶದ ಪ್ರಧಾನಿಯಾಗಬೇಕು ಎನ್ನುವುದು ಸಾಮಾನ್ಯ ಜನ ಮಾತಾಡಿ ಅವರಿಗೆ ಗೌರವದಿಂದ ಸೂಚಿಸಬೇಕು, ಆದರೆ ಅದೇಕೊ ಮೋದಿಯವರು ಈ ಜಾಹಿರಾತಿನ ಸಹಾಯ ಪಡೆದು ತಾವು ಮುಂದಿನ ಪ್ರಧಾನಿಯೆಂದು ಬಿಂಬಿಸುತ್ತಿರುವರು ತಿಳಿಯದು, ಇದು ಹುಲಿಗೆ ಹೋಲಿಸುವ ರೀತಿ ಸರಿಯೆ ನೀವೆ ಯೋಚಿಸಿ.

ಇನ್ನು ನಮ್ಮ ದೇಶದಲ್ಲಿ ಹಲವಾರು ಜನ ಇವರ ಬಗ್ಗೆ ಅಸಮದಾನಕರ ಧ್ವನಿ ಎತ್ತಿದ್ದು ತುಂಬಾ ಸತ್ಯವಾದ ಮಾತು ಮೊನ್ನೆ ತಾನೆ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದನ್ನು ತಾವು ಬಯಸುವುದಿಲ್ಲ ಎಂದು ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. “ಒಬ್ಬ ಭಾರತೀಯನಾಗಿ ನನಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಬೇಕಾಗಿಲ್ಲ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ” ಎಂದು ಅಮಾರ್ತ್ಯ ಸೇನ್ ನುಡಿದಿದ್ದಾರೆ. ಈ ನುಡಿಗೆ ಮೋದಿ ಬೆಂಬಲಿಗರು ವಿಚಿತ್ರವಾಗಿಯೆ   ಪ್ರತಿಕ್ರಿಯಿಸುತ್ತಾರೆ. . ಯಾರು ಮೋದಿ ಹಾಗೂ ಆರ್ ಎಸ್ ಎಸ್ ನ ಬಗ್ಗೆ  ಮಾತಾನಾಡುವವರೊ ಅವರಿಗೆಲ್ಲ ಇಟ್ಟಿರುವ ಹೆಸರು ಬುದ್ಧಿ ಜೀವಿಗಳು. ಅಂದರೆ ಇವರ ಪಾಲಿಗೆ ಒಬ್ಬ ಅರ್ಥ ಶಾಸ್ತ್ರಜ್ಞ ಹೇಳಿದ ಮಾತು ಕಾಲ ಕಸವಾಗಿ ಕಾಣುತ್ತೆವೆ.

ಏನೆ ಹೇಳಿದರು ಕೇಳಿಕೊಂಡು ಜನ ಹೂಂ ಎನ್ನಬೇಕು ಅನ್ನವುವುದು ಆಪೇಕ್ಷ ಪಡುತ್ತಾರೆ ಇವರು.  ಮೋದಿ ಗುರಾತಿನ ಹಾಟ್ರಿಕ್ ಹಿರೋ ಇರಬಹುದು, ಆದರೆ ಈ ದೇಶದ ಜವಾಬ್ದಾರಿ ಹೊರುವ ಧೈರ್ಯವಿದೆಯೆ? ಅನುಭವ ವಿದೆಯೆ? ವಿಚಾರಿಸಬೇಕಾದ ಸಂಗತಿ. ಹೀಗೆ ಹ್ಯಾಟ್ರಿಕ್ ಚಿಂತನೆ ಮಾಡಿದರೆ ಮಾನ್ಯ ಖರ್ಗೆಯವರು ಸತತ ಹತ್ತು ಬಾರಿ ಆರಿಸಿ ಬಂದ ಒಂದೆ ಕ್ಷೇತ್ರದಲ್ಲಿ ಒಂಬತ್ತು ಬಾರಿ ಆರಿಸಿ ಬಂದ ,ಮಾಹಾನ್ ನಾಯಕ ಪ್ರಚಾರದಲ್ಲಿಯೆ ಇಲ್ಲದೆ ಸಾಗುತ್ತಿರುವ ಜನಸೇವೆ ಮಾಡುತ್ತಿರುವ ಎಲ್ಲಿಯು ನನಗೆ ಮುಖ್ಯಮಂತ್ರಿ ಮಾಡಿ ಪ್ರಧಾನಿ ಮಾಡಿ ಎಂದು ಗೋಗರಿದಿಲ್ಲ ಹಾಗೂ ಮಾಧ್ಯಮ ಮುಂದೆ ಹೇಳಿಯು ಕೊಂಡಿಲ್ಲಾ ಅವರು ನೈಜವಾದ ಸಮಾಜಸೇವಕರು ಮೋದಿಯ ಹಾಗೆ ಪ್ರಚಾರ ಜಾಹಿರಾತು ಪ್ರೀಯರಲ್ಲಾ.
ದೇಶದ ನಾಯಕರುಗಳಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಮತ್ತು ಉನ್ನತ ನಾಯಕರು. ಭಾರತವನ್ನು ನಡೆಸಲು ನರೇಂದ್ರ ಮೋದಿ ಅತ್ಯಂತ ಸಶಕ್ತರು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಹೇಳಿರುವುದು ನೋಡಿದರೆ ಇವರಿಗೆ ದೇಶದ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಮೇಲೆಕೆ ಈ ಮನಸ್ಸಿಲ್ಲ ಅಲ್ಲದೆ ಅಡ್ವಾಣಿ ಒಪ್ಪದಿದ್ದಾಗ ಮಾನ್ಯ ಪ್ರತಾಪ ರವರು ಏಕೆ ಅಡ್ಡ ವಾಣಿ ಎಂದು ಹಿರಿಯರ ಬಗ್ಗೆ ವ್ಯಂಗ್ಯವಾಗಿ ಬರೆದಿದ್ದು ನೋಡಿದರೆ ಒಂದಡೆ ಮೋದಿ ಹಲವರನ್ನು ತನ್ನ ಪ್ರಚಾರಕ್ಕಾಗಿಯೆ ನೇಮಿಸಿದ್ದಾರೆ ಎಂಬುವುದು ಬಿಂಬಿತವಾಗುತ್ತದೆ.

ಮುಂದಿನ ಲೋಕಸಭೇ ಚುನಾವಣೆಗೆ ಗುಜರಾತಿನ ಹಾಲಿ ಮುಖ್ಯಮಂತ್ರಿ ನರೆಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ- ಇದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸ್ಪಷ್ಟೋಕ್ತಿ.’ಮೋದಿ ಕೇವಲ ಗುಜರಾತಿನಲ್ಲಷ್ಟೇ ಪ್ರಸಿದ್ಧರಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ಅಲ್ಲದೆ, ಉತ್ತರದಿಂದ ದಕ್ಷಿಣ ಪೂರ್ವದಿಂದ ಪಶ್ಚಿಮದ ವರೆಗೆ ಅವರು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಈ ಖ್ಯಾತಿಯೇ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಲಾಭ ತಂದುಕೊಡಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಮಾನ್ಯರೆ ಈ ಮಾತು ಪಕ್ಷದೊಳಗೆ ಹೇಳಿದರೆ ಸಾಲದು  ಸಾಮಾನ್ಯ ಮನುಷ್ಯನೊಬ್ಬ ಹೇಳಿದರೆ ನೈಜವಾಗಿ ಮೋದಿಯವರ ವರ್ಚಸ್ಸು  ಅರ್ಥವಾಗುತ್ತದೆ. ಯಾವುದೆ ಹುದ್ದೆ ಕಸಿದುಕೊಳ್ಳುವುದರಲ್ಲಿ ಅರ್ಥವಿಲ್ಲ ತಾನಾಗಿಯೆ ಜನರಿಂದ ಒಲಿದು ಬರಬೇಕು ಅದು ಶಶ್ವತವಾದ ಹುದ್ದೆ ಆದರೆ ಹುಲಿಯೆಂದು ನಾಮಕರಣ ಮಾಡಿದರೆ ಸಾಲದು ಅದರಿಂದ ಕಾಡಿಗೆ ಒಂದಿಷ್ಟು ರಕ್ಷಣೆ ಸಿಕ್ಕು ಅಲ್ಲಿನ ಎಲ್ಲರು ಅವರ ಬಗ್ಗೆ ಮಾತಾಡಲಿ ,ಬರಿತಾವು ರಾಜಕೀಯ ಲಾಭಕ್ಕಾಗಿ  ಈಡಿ ದೇಶ ಆಳುವ ಲೆಕ್ಕಚಾರ ಪಕ್ಕಾ ಎದ್ದು ಕಾಣುತ್ತದೆ.

ಮೊದಲು ಜನರಲ್ಲಿಗೆ ಹೋಗಿ ಜನರ ಅಭಿಪ್ರಾಯ ಸಂಗ್ರಹಿಸಿ  ಪ್ರತಿಯೊಂದು ಜನಾಂಗ ಹಾಗೂ ಜಾತಿ ಲೆಕ್ಕಾಚಾರ ಮಾಡಿದರೆ ನೈಜ ಮೋದಿ ಅಭಿಮಾನಿಗಳು ಅರ್ಥವಾಗುತ್ತದೆ. ಗುಜರಾತಿನಲ್ಲಿ ನಡೆದ ಘಟನೆ ಇನ್ನು ಯಾರು ಮರೆತಿಲ್ಲ ಬರಿ ದೊಡ್ಡ ಕಾರ್ಯಕ್ರಮ ಮಾಡಿ ಉದ್ದ ಬಾಷಣ ಮಾಡಿ ನಾನೊಬ್ಬ ಹಿಂದೂ ರಾಷ್ಟ್ರವಾದಿ ಎಂದರೆ  ಮುಸ್ಲಿಂ ರಿಗೆ ಕೋಪ ಬರೆದೆ ಇರುವುದೆ ದೇಶ ಆಳುವ ಕನಸು ಕಾಣುತ್ತಿರುವ ಒಬ್ಬ ವ್ಯಕ್ತಿ ನೀಡುವ ಮಾತೆ ಇದು.

ನಾವು ಎಷ್ಟೆ ಕಡೆಯ ಮಾತುಗಳನ್ನು ಅವಲೋಕಿಸಿದಾಗ ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದವರು ಅವರ ನಿಕಟವರ್ತಿಗಳು ಮಾತ್ರ ಅದರಂತೆ ಅವರ ನಿಕಟವರ್ತಿಯೆ ಆದ ಮಾನ್ಯ ಠಾಕ್ರೆಯವರ ಪ್ರತಿಕ್ರಿಯೆ ಇನ್ನು ವಿಚಿತ್ರವಾಗಿದೆ . ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಎನ್‌ಡಿಎ ಅಂಗ ಪಕ್ಷ ಶಿವಸೇನೆ, ಬಿಜೆಪಿಯಲ್ಲಿ ‘ರಾಷ್ಟ್ರೀಯ ನಾಯಕ’ ಎನ್ನುವಂತಹ ವ್ಯಕ್ತಿಗಳು ಇಲ್ಲ ಎಂದು ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಹೇಳಿದ್ದಾರೆ. ನೇರವಾಗಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾರಾಗಬೇಕು ಎಂಬುದನ್ನು ತಿಳಿಸಿಲು ನಿರಾಕರಿಸಿದ ಠಾಕ್ರೆ, 2014ರ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುವುದು .  ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ‘ರಾಷ್ಟ್ರೀಯ ನಾಯಕ’ ಎನ್ನುವಂತವರು ಯಾರು ಇಲ್ಲ ಎಂದರು ಪದೆ ಪದೆ ರಾಷ್ಟ್ರೀಯ ನಾಯಕರನ್ನು ಕಡೆಗಣಿಸುವ ಕೆಲಸ ಬಿಜೆಪಿಯ ಇಂದಿನ ರಾಜಕಾರಣಿಗಳು ಮಾಡುತ್ತಿರುವದು ಏನು ತಿಳಿಯದಾಗಿದೆ.

ಇನ್ನು ನರೇಂದ್ರ ಮೋದಿ ಪ್ರಚಾರ ಪ್ರೀಯ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಬರುತ್ತವೆ. ಈ ದೇಶದಲ್ಲಿ 28 ಮಂದಿ ಮುಖ್ಯಮಂತ್ರಿಗಳು ಹಾಗೂ ಅನೇಕ ಜನ ಹಿರಿಯ ಪ್ರಧಾನಿಗಳಿದ್ದರು,  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಅತಿಯಾದ ಪ್ರಚಾರ ಸಿಗುತ್ತಿದೆ ಎಂದು ನಿಮಗೂ ಅನ್ನಿಸಿರಬಹುದು. ಆದರೆ ಅದು ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು, ಮೋದಿ ಅವರ ಪ್ರಚಾರದ ರಹಸ್ಯವನ್ನು ಬಯಲು ಮಾಡಿರುವುದಾಗಿ ರಾಷ್ಟ್ರೀಯ ನಿಯತಕಾಲಿಕೆಯೊಂದು ಹೇಳಿಕೊಂಡಿದೆ. ಇನ್ನು ಅದನ್ನು ದೇಶದ ಜನರೆಲ್ಲರು ಓದಿಯು ಆಗಿದೆ ತಾನು ದೇಶ ಆಳಲೇಬೇಕು ಎನ್ನುವ ಹಂಬಲಕ್ಕೆ ಬಿದ್ದ ಮೋದಿ ಹೇಗೆಲ್ಲ ಕೆಲಸ ಮಾಡುತ್ತಿರುವರು ಎನ್ನುವುದು ಇನ್ನು ವಿವರಿಸುವ ಅಗತ್ಯವಿಲ್ಲ ಅನಿಸುತ್ತದೆ.

ದೇಶೀಯವಾಗಿ ಹೇಗೆ ಸಿಗುತ್ತೆ ಪ್ರಚಾರ ಎನ್ನುವುದು ಹುಡುಕುತ್ತಾ ಹೊದರೆ   ದೇಶೀ ಮಟ್ಟದಲ್ಲಿ ಒಂದು ಪತ್ರಿಕಾ ಪ್ರಚಾರ ಸಂಸ್ಥೆ ಯನ್ನು ಮೋದಿ ನೇಮಿಸಿಕೊಳ್ಳುತ್ತಾರೆ. ಇದಕ್ಕೆ ಗುಜರಾತ್ ಸರ್ಕಾರ ಮಾಹಿತಿಗಳನ್ನು ನೀಡಿ, ಯಾವ ಮಾಧ್ಯಮಗಳಲ್ಲಿ ಎಷ್ಟು ವರದಿ ಪ್ರಕಟವಾಗಬೇಕು ಎಂಬ ಆದೇಶ ನೀಡುತ್ತದೆ. ಅದರಂತೆ ವರದಿಗಳು ಪ್ರಕಟವಾಗುವಂತೆ ಪಿ.ಆರ್. ಏಜೆನ್ಸಿ ನೋಡಿಕೊಳ್ಳುತ್ತದೆ.  ಹಿರಿಯ ಪತ್ರಕರ್ತರನ್ನು ಹಾಗೂ ಯುವ ಬರಹಗಾರರನ್ನು  ಮೋದಿ ಔತಣದ ಜೊತೆಗೆ ನೋಟು ಕೊಟ್ಟು ಖರಿದಿಸಿರುವ ಸ್ಥಿತಿ ತುಂಬಾ ಸ್ಪಷ್ಟವಾಗಿ ಅವರ ಬರಹಗಳಲ್ಲೆ ಎದ್ದು ಕಾಣುತ್ತದೆ.  ಆನ್‌ಲೈನ್ ಸಾಮಾಜಿಕ ತಾಣಗಳಲ್ಲಿ ತಮ್ಮ ಪರ ಪ್ರಚಾರಕ್ಕೆ  ಅನೇಕ ಬಾಹ್ಯ ಬೆಂಬಲ ನೀಡಿರುವ ಮೋದಿ ಅತಿಯಾದ ಪ್ರಚಾರಕ್ಕೆ ಒತ್ತು ನೀಡುತ್ತಾರೆ ಎನ್ನುವುದು ಸ್ಪಷ್ಟ ಮಾತು.

ಇನ್ನು ಆಗಷ್ಟ ಹತ್ತರಂದು ನಡೆಯಲಿರುವ ಮೋದಿ ಬಾಷಣಕ್ಕೆ ಐದು ರುಪಾಯಿ ನಿಗದಿಯಾಗಿದ್ದು ಅದರಿಂದ ಸಾರ್ವಜನಿಕರಿಗೆ ಲಾಭವಾಗುವಂತೆ ನೆರಸಂತರಸ್ತಿರಿಗೆ ಕೊಡುವ ವಿಚಾರ ಒಪ್ಪುವ ಕೆಲಸವೆ ಸರಿ ಆದರೆ ಒಬ್ಬ ರಾಜಕೀಯ ವ್ತಯಕ್ತಿಯ ಭಾಷಣ ಕೇಳಲು ಹಣ ಕೊಡುತ್ತಿರುವುದು ಇದು ಮೊದಲ ಬಾರಿಯೆನೊ ಅನಿಸುತ್ತಿದೆ. ಜನ ಏ ಬರಿ ಐದು ರುಪಾಯೆ ಅಂತಾ ಚೀಪ್ ಅಂದುಕೊಂಡು ಕೂಡಾ ಬರಬಹುದುದು, ಅಲ್ಲದೆ ರಾಜಕೀಯದವರಿಗೆ ಕೂಡಾ ಕೊಡಬೇಕಾಯಿತು ಕಾಣಿಕೆ ಅಂತಾನು ಬರಬಹುದು, ಆದರೆ ಆ ಹಣ ಎಷ್ಟು ಸರಿಯಾಗಿ ನೈಜವಾದವರಿಗೆ ಮುಟ್ಟುತ್ತೆ ಎನ್ನುವ ಲೆಕ್ಕಚಾರ ಮೋದಿ ಕೊಡಲಾರರು ಎನ್ನುವುದು ಅಷ್ಟೆ ಸತ್ಯ.

ಇನ್ನು ಮೋದಿಯನ್ನು ಏಕೆ ಬೆಂಬಲಿಸಬೇಕು? ಎನ್ನುವ ವಿಚಾರ ಮಾಡಿದರೆ ನಾವು ಗುಜರಾತಿನ ಕೆಲವು ಮಾದರಿ ನಗರಗಳನ್ನು ನೋಡಲೇಬೇಕು. ಅಲ್ಲಿ ರಸ್ತೆ ಜನರ ಜೀವನ ಸ್ಥಿತಿಗತಿ ಅವರ ನಗರಗಳ ವೈಭವ ಎಲ್ಲವು ಹೇಳಿಕೊಳ್ಳುವ ಉನ್ನತ ಸ್ಥಿತಿಯಲ್ಲಿವೆ.  ಆಪತ್ತು ನಿರ್ವಹಿಸಲೆಂದೇ ಗುಜರಾತ್ ನಲ್ಲಿ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದ್ದು ಗುಜರಾತ್ ವಿಪತ್ತು ನಿರ್ವಹಣಾ ಮಂಡಳಿಯು ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳು ಈ ಸಂಸ್ಥೆಗೆ ಕರಗತವಾಗಿದೆ. ಈ ಸಂಸ್ಥೆ 24×7 ಕಾರ್ಯನಿರ್ವಹಣೆ ಹಾಗೆಯೇ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ ಅಲ್ಲದೇ, ಅಲ್ಲಿನ ಸಹಾಯವಾಣಿಗಳು ಗುಜರಾತಿಗಳಿಗೆ ಜನಪ್ರಿಯವಾಗಿಬಿಟ್ಟಿವೆ. ಈ ಸಹಾಯವಾಣಿಗಳ ಸಂಖ್ಯೆ ಕೇವಲ ಗುಜರಾತಿಗಳಿಗಷ್ಟೇ ಅಲ್ಲದೇ ವಿದೇಶದಲ್ಲಿರುವ ಅನಿವಾಸಿ ಗುಜರಾತಿಗಳಿಗೂ ಜನಪ್ರಿಯವಾಗಿದೆ.  ಈ ರೀತಿ ಹೊಸ ಯೋಜನೆಯೊಂದನ್ನು ರೂಪಿಸಿರುವ ಮೋದಿ ನಿಜಕ್ಕು ಮಾತಿಗೆ ಪಾತ್ರರು ಎನ್ನಬುದು.

ಜನರ ರಕ್ಷಣೆಗೆ ಸರ್ಕಾರ ಸದಾ ಬದ್ಧ ಎಂಬುದನ್ನು ಗುಜರಾತ್ ನ ಜನರಿಗೆ ಮನದಟ್ಟು ಮಾಡಿಕೊಡುವುದರಲ್ಲಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿರುವುದರ ಪರಿಣಾಮ ಇಂದು ವಿಶ್ವದ ಯಾವುದೇ ಮೂಲೆಯಲ್ಲಿ ವಾಸಿತ್ತಿರುವ ಗುಜರಾತಿಗಳು ತಮಗೆ ಯಾವುದೇ ವಿಪತ್ತು ಸಂಭವಿಸಿದರೂ ಮೊದಲು ಸಂಪರ್ಕಿಸುವುದು ಮುಖ್ಯಮಂತ್ರಿ ಕಚೇರಿಯನ್ನು!. ಗುಜರಾತ್ ಜನತೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮೋದಿ ಜಾರಿಗೆ ತಂದಿರುವುದರಿಂದಲೇ ಉತ್ತರಾಖಂಡದಲ್ಲಿಯೂ ಗುಜರಾತಿಗಳನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ರಕ್ಷಿಸಲು ಸಾಧ್ಯವಾಗಿದ್ದು ಎಂದು ತಿಳಿಯಿತು. ಇದು ಹಲವಾರು ಪತ್ರಿಕೆಗಳು ಮಾಡಿದ ಸುದ್ದಿಯಿಂದ ಇತ್ತಿಚಿಗೆ ಹೊರಬಂದಿದೆ.

ಮೋದಿ  ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ , ಜಮೀನುಗಳಿಗೆ ನೀರು ಸಿಗುವ ಬಗ್ಗೆ , ಈಗ ಗುಜರಾತ್‌ನ ತುಂಬೆಲ್ಲ ರಸ್ತೆಗಳು ಫ್ಲೈಓವರ್‌ಗಳಿವೆ. ಹೀಗೆ ಪ್ರಶ್ನೆಗಳನ್ನು ಕೇಳುವ ಮೋದಿ  ನನಗೆ ಸಂತೋಷವಿಲ್ಲ. ಎನ್ನುವ  ಅಚ್ಚರಿಯ ಮಾತಿನಿಂದ ಜನರನ್ನು  ನಿಶ್ಯಬ್ದವಾಗಿ ಮಾಡುವ ಶಕ್ತಿ ಮೋದಿಯ ಬಾಷಣ ಮೋಡಿಯಲ್ಲಿದ್ದು ಅಷ್ಟೆ ಸತ್ಯ .  ಗುಜರಾತಿನ ಮುಖ್ಯಮಂತ್ರಿ ಬೃಹತ್ ಜನಸಮೂಹವನ್ನೂ  ತನ್ನ ಮನಬಂದಂತೆ  ನುಡಿಸಿಕೊಳ್ಳುವದಂತು ಸತ್ಯ . ಜನಜಂಗುಳಿಯನ್ನು ನಿಭಾಯಿಸುವಲ್ಲಿ ಅವರು ಅತಿ ನಿಪುಣ,  ತನ್ನ ಭಾಷಣ ಕಲೆಯ ಮೂಲಕ ಜನರು ತಲೆದೂಗುವಂತೆ ಮಾಡಿಬಿಡಬಲ್ಲ ಮಾತಿನ ಚತುರ. ಗಡಸು ಧ್ವನಿ, ಸ್ಪಷ್ಟ ಮಾತು, ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಜನರಲ್ಲಿ ಹುಚ್ಚೆಬ್ಬಿಸಬಲ್ಲ ವ್ಯಕ್ತಿ ಮೋದಿ.

ಮೋದಿಯ ಇನ್ನೊಂದು ಬಹುಮುಖ್ಯ ಜನ ಆಕರ್ಷಣಾ ಗುಣವೆಂದರೆ ಅವರ ಹಣಿದ ಚುನಾವಣೆಯ ಪ್ರಣಾಳಿಕೆ ತನ್ನ ರಾಜ್ಯದ ಸಮಸ್ತ ಜನತೆಗೆ ದೃಷ್ಠಿಯಲ್ಲಿ ಇಟ್ಟುಕೊಂಡ ಅವರು ಅದರಿಂದಲೆ ಅರ್ಧ ಪ್ರಚಾರ ಗಿಟ್ಟಿಸಿಕೊಂಡರೆ ಅಚ್ಛರಿಯೇನಿಲ್ಲ. ಸಾಮಾನ್ಯವಾಗಿ ಮೋದಿ ಬಳಸುವ ಕೆಲವು ಮುಖ್ಯ ಮಾತುಗಳೆಂದರೆ ” ಹಮ್ ಹಿಂದೂಸ್ಥಾನಕೊ ಕಾಂಗ್ರೇಸ್ ಕಿ ಛಾಯೋಂಸೆ ದೂರ ಕರೆಂಗೆ ” ಅಲ್ಲದೆ ಅವರ ಮಾತಿನ ಧಾಟಿಯಲ್ಲಿ ಹಲವು ಗೋಷಣೆಗಳು ಇರುತ್ತವೆ ಇದರಿಂದಲೂ ಜನ ಅವರತ್ತ ಮುಖ ಮಾಡುತ್ತಾರೆ.

ಮೋದಿ ‘ಅಭಿವೃದ್ಧಿ ಅಜೆಂಡಾ’  16 ಲಕ್ಷ ಹೆಕ್ಟೇರಿಗೆ ನೀರಾವರಿ ಸಂಪರ್ಕ,  ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಸಂಸ್ಕರಣಾ ಘಟಕ, ಪ್ರತಿ ಜಿಲ್ಲೆಗಳಲ್ಲೂ ಶೈತ್ಯಾಗಾರದ ನಿರ್ಮಾಣ, ರಾಜ್ಯದಲ್ಲಿ ಶ್ವೇತ ಕ್ರಾಂತಿಗಾಗಿ ಹಾಲಿನ ಉತ್ಪಾದನೆಗೆ ಒತ್ತು, ಗುಜರಾತ್ ಜವಳಿ ರಾಜಧಾನಿಯಾಗಿ ಅಭಿವೃದ್ಧಿ , ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ,  ರಸ್ತೆ ಸಂಪರ್ಕ ಸೌಲಭ್ಯ ದ್ವಿಗುಣ  ವಿದ್ಯುತ್ ಉತ್ಪಾದನೆಯಲ್ಲಿ ದ್ವಿಗುಣ,  ವಿದ್ಯುತ್ ಉತ್ಪಾದನೆಗೆ ಇನ್ನಷ್ಟು ಒತ್ತು,  ಸೌರಾಷ್ಟ್ರದಲ್ಲಿರುವ ಡ್ಯಾಂಗಳಿಗೆ ನರ್ಮದಾ ನೀರು ಪೂರೈಕೆ,  ಸೌರಾಷ್ಟ್ರಕ್ಕೆ 10,000 ಕೋಟಿ ರೂಪಾಯಿಯ ವಿಶೇಷ ಯೋಜನೆ, 16 ಲಕ್ಷ ಮಹಿಳೆಯರಿಗೆ ಉದ್ಯೋಗ,  50 ಲಕ್ಷ ಮನೆಗಳ ನಿರ್ಮಾಣ, 30 ಲಕ್ಷ ಯುವಕರಿಗೆ ಉದ್ಯೋಗ, ಉದ್ಯೋಗದ ವಯೋಮಿತಿ 25 ವರ್ಷದಿಂದ 28ಕ್ಕೆ ಹೆಚ್ಚಳ,  ದೇಶದಲ್ಲೇ ಮೊದಲ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪನೆ, ಸಿಎಂ ವಿದ್ಯಾರ್ಥಿ ವೇತನ ಯೋಜನೆ ಜಾರಿ,  ಸೂರತ್, ರಾಜ್ ಕೋಟ್, ವಡೋದರಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ , ಹೀಗೆ ಒಂದೆ ಎರಡೆ ಹತ್ತಾರು ಹೊಸ ಹೊಸ ಯೋಜನೆಗಳನ್ನು ಹೊರತರುವ  ಮುಖ್ಯಮಂತ್ರಿ ತನ್ನ ಅದೀನದಲ್ಲಿರುವ ಎಲ್ಲವು ಹೊಸತಾಗಿ ಮಾಡುವ ಕೌಶಲ್ಯ ಹೊಂದಿರುವರು  ಮೋದಿ. ಅತ್ಯಂತ ಜಾಣ ಮುಖ್ಯಮಂತ್ರಿ ಎನ್ನುವ ಹೆಸರಿಗು ಪಾತ್ರರಾಗಿದ್ದಾರೆ .

ಹೀಗೆ ಸದ್ಯದ ರಾಷ್ಟ್ರ ರಾಜಕೀಯದಲ್ಲಿ ತನ್ನ ಅಸ್ತಿತ್ವದ ಅಲೆಯೆಬ್ಬಿಸಿರುವ ಮೋದಿ ಮುಂದೆ ಲೋಕಸಭೆ ಚುನಾವಣೆಯಲ್ಲಿ ಮೋಡಿ ಮಾಡುವರೊ ಅಥವಾ ಮುಖ ತೋರಿಸದೆ ಮರೆಯಾಗುವರೊ ತಿಳಿಯದು.  ಗುಜರಾತ ರಾಜ್ಯದಲ್ಲಿ ಮಾಡಿದ ಮೋಡಿ ಈಡಿ ದೇಶದಲ್ಲಿ ಮೋದಿ ಮಾಡುವರು ಎನ್ನುವ ಲೆಕ್ಕಚಾರ ಹಲವರದ್ದು , ಆದರೆ ಈ ಮೋಡಿ ಲೋಕಸಭೆಯಲ್ಲಿ ಏನಾದರು ಫಲ ಕೊಡಬಹುದೆ ಎನ್ನುವುದೆ ಕಾದು ನೋಡಬೇಕಿದೆ.  ಆದರೆ ಅಲ್ಪ ಸಂಖ್ಯಾತರು ಹಾಗೂ ಹಿಂದೂಳಿದ ವರ್ಗ ಮೋದಿಯವರನ್ನು ಬೆಂಬಲಿಸುವುದು ಸ್ವಲ್ಪ ಯೋಚಿಸಬೇಕಾದ ಸಂಗತಿ ಆದರೂ ಮೊದಿ ಅವರ ಮೇಲೆಯು ಮೋಡಿ ಮಾಡಿದರೆ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.  ಒಟ್ಟಿನಲ್ಲಿ ಮೋದಿಯವರು ಸ್ವಲ್ಪ ಸಿಹಿ ಸ್ವಲ್ಪ ಕಹಿಯಾಗಿದ್ದು ಜನರ ಮನಸ್ಸಿನ ಮೇಲೆ ಯಾವುದು ಪರಿಣಾಮ ಬೀರುವುದು ತಿಳಿಯದು. ಎಲ್ಲದ್ದಕ್ಕು ಜನ ಉತ್ತರ ನೀಡಲಿದ್ದಾರೆ.

6 ಟಿಪ್ಪಣಿಗಳು Post a comment
  1. ಜುಲೈ 25 2013

    Following things to be noted:
    1. Pratap simha is not funded by Modi, even I support Modi. This is because I am a patriot.
    2. Modi has not asked anybody to make him PM. He always says, don’t dream of becoming something dream of doing things.
    3. Congress has always done split and rule policy, it is good that Modi is becoming threat to congress greed.
    4. Modi is gaining publicity not because of his marketing strategy, but because of his good work and stupid media.

    ಉತ್ತರ
    • Gopalakrishna Bhagwat
      ಆಗಸ್ಟ್ 3 2013

      Mr. Ajay your statements above just resemble the feelings of a fan of film star, nothing more than that. There is no logic or rationality in your views. They are just emotional outbursts.
      1. You said you support Modi because you are a patriot. If you had said just that you are a patriot then it would have been accepted. But you said You support Modi because you are patriot shows logically fallacy. If I support Mr. Shivaraj singh Chauhan Am I not a patriot?

      2. In your second argument it is true that one should dream of doing good things. But everybody should remember that we should GOOD things

      3.In your third argument You blamed congress about split and rule. Other parties are also doing the same divide and rule politics in the name of religion and creating communal violence

      4. In your fourth argument You have said Modi is gaining publicity because of stupid media. This is the only truth you have said in your argument. The ‘good work’ concept is hollow propaganda of his followers and not a fact

      ಉತ್ತರ
      • Patriot
        ಆಗಸ್ಟ್ 14 2013

        No logic in your Logical fallacy. All are patriot irrespective whom you support. One supports gandhi and another supports Bose…..

        ಉತ್ತರ
  2. Nagaraj
    ಜುಲೈ 25 2013

    And I know what is Amartyasen is.

    ಉತ್ತರ
    • Gopalakrishna Bhagwat
      ಆಗಸ್ಟ್ 3 2013

      I too know who u r

      ಉತ್ತರ
  3. Deepak Kamath
    ಜುಲೈ 25 2013

    “ಏನೆ ಹೇಳಿದರು ಕೇಳಿಕೊಂಡು ಜನ ಹೂಂ ಎನ್ನಬೇಕು ಅನ್ನವುವುದು ಆಪೇಕ್ಷ ಪಡುತ್ತಾರೆ ಇವರು. ಮೋದಿ ಗುರಾತಿನ ಹಾಟ್ರಿಕ್ ಹಿರೋ ಇರಬಹುದು, ಆದರೆ ಈ ದೇಶದ ಜವಾಬ್ದಾರಿ ಹೊರುವ ಧೈರ್ಯವಿದೆಯೆ? ಅನುಭವ ವಿದೆಯೆ? ವಿಚಾರಿಸಬೇಕಾದ ಸಂಗತಿ”
    ಮೋದಿಯವರು ಈ ದೇಶದ ಜವಾಬ್ದಾರಿಯನ್ನು “ಬೇರೆಯವರು ಬರೆದುಕೊಟ್ಟ ಭಾಷಣ ಓದುವರಿಗಿಂತ” ಸಮರ್ಥವಾಗಿ ನಿಭಾಯಿಸುತ್ತಾರೆ. ಇನ್ನು ಅನುಭವದ ಬಗ್ಗೆ ಹೇಳೋದಾದ್ರೆ ಪ್ರಧಾನಿಯಾಗಲು ಬಯಸುತ್ತಿರುವ ಇತರರಿಗಿಂತ ( ಅಡ್ವಾಣಿ ಅವರನ್ನು ಬಿಟ್ಟು ) ಮೋದಿಯವರೇ ಅತ್ಯುತ್ತಮ ಅಭ್ಯರ್ಥಿ. ಮೂರು ಬಾರಿ ಮುಖ್ಯಮತ್ರಿಯಾದವರು.
    ಸ್ವಂತ ವಿಚಾರ ಶಕ್ತಿ ಇಲ್ಲದ, ಭಾರತದ ಇತಿಹಾಸ, ಸಂಸ್ಕೃತಿ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದವರಿಗಿಂತ, ಮೋದಿ ಉತ್ತಮರು. ಭಾರತ ಹಣಕಾಸು ಬಿಕ್ಕತ್ತಿನಲ್ಲಿದೆ, ಚೀನಾ ಮತ್ತು ಪಾಕಿಸ್ತಾನ ಕಾಲುಕೆರೆದು ಜಗಳಕ್ಕೆ ಬರುತ್ತವೆ. ಇಂತಹ ಸಂಧರ್ಬದಲ್ಲಿ ನಮಗೆ ಒಬ್ಬ ಸಮರ್ಥ ನಾಯಕ ಬೇಕು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments