ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 22, 2013

2

ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!

‍ನಿಲುಮೆ ಮೂಲಕ

– ವಿಕಾಸ್ ಪುತ್ತೂರು

Mouna -China‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ  ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು  ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ,  ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ  ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ  ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ,  ಚಿಂಗಿಯರ ಕುತಂತ್ರಗಳನ್ನಂತೂ  ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು  ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ  ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ  ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ,  ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.

ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ  ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ  ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು  ಬಿಟ್ಟರೆ, ಉಳಿದ  8 ದೇಶಗಳೊಡನೆಯೂ  ಭಾರತದ  ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ  ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.

  ಪ್ರಭಲವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ ಮುಂದೊಮ್ಮೆ ಚೀನಾಗೆ ಅಡ್ಡಿಯುಂಟುಮಾಡಬಹುದು  ಹಾಗು ಭಾರತದ ಕೆಲವೊಂದು ಪ್ರದೇಶಗಳನ್ನು (“Statergic location”ಗಳನ್ನು) ವಶಪಡಿಸಿಕೊಂಡರೆ ಭಾರತ ಹಾಗು  ಏಶಿಯ ಖಂಡದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು ಎಂಬ ದುರಾಲೋಚನೆಯೇ, ಕಮ್ಮ್ಯೂನಿಸ್ಟ್  ಚೀನಾ, ಭಾರತದ ವಿರುದ್ಧ ಇಂದು  ಕತ್ತಿ ಮಸಿಯುತ್ತಿರುವುದರ  ಹಿಂದಿರುವ ರಹಸ್ಯ. ಕಮ್ಮ್ಯೂನಿಸ್ಟರ ಶಬ್ದಕೋಶದಲ್ಲಿ ಶಾಂತಿಯ ಅರ್ಥವನ್ನು ಹುಡುಕುವುದು, ಜಿಹಾದಿಗಳ ಮತಗ್ರಂಥದಲ್ಲಿ ಕರುಣೆಯನ್ನು ಹುಡುಕಿದಷ್ಟೇ ವ್ಯರ್ಥ! 1949ರಲ್ಲಿ ಅಂತರ್ಯುದ್ಧದ ಪರಿಣಾಮವಾಗಿ  ಚೀನಾ ಕಮ್ಮ್ಯೂನಿಸ್ಟರ ಕೈ ಸೇರಿತು,  ಅಂದಿನಿಂದ ಇಂದಿನವರೆಗೂ ಅಲ್ಲಿ  ಶಾಂತಿ ನೆಲೆಸಲೇಯಿಲ್ಲ. ಇಷ್ಟಕ್ಕೂ ಚೀನಾದ ವಿಕೃತ “communist expansionist” ಮನಸ್ಥಿತಿಯನ್ನು ಬಿಟ್ಟರೆ ಭಾರತದ ವಿರುದ್ಧ ಸಮರ ಸಾರಲು ಚೀನಾದ ಬಳಿ ಬೇರ್ಯಾವ ಪ್ರಬಲ ಕಾರಣವೂ ಇಲ್ಲ.

ವಿಸ್ತರಣಾ ಮನೋಭಾವ EXPANSIONISM” ಕಮ್ಮ್ಯೂನಿಸ್ಟರ ಮತ್ತೊಂದು ವಿಕೃತ ಗುಣ. ಈ ವಿಕೃತಿಯ ಪರಿಣಾಮವಾಗಿ ಶ್ರೀಮಂತ ಸಾಂಸ್ಕೃತಿಕ ಇತಿಹಾಸಭರಿತ, ವಿಶ್ವದ ಸಿಹಿನೀರಿನ ಖನಿಜವಾಗಿದ್ದ  ಹಾಗು ಹಿಮಾಲಯದ ಬಹುತೇಕ ಎತ್ತರದ  ಶಿಖರಗಳನ್ನೋಳಗೊಂಡಿದ್ದ ಟಿಬೆಟ್, ಚೀನಿ ಕಮ್ಮ್ಯೂನಿಸ್ಟರ ಹೊಟ್ಟೆ ಸೇರಿತು. ಟಿಬೆಟ್ ಅತಿಕ್ರಮಣದ ಹಿಂದೆ ಸಾಮರ್ಥ್ಯಕ್ಕಿಂತ ಹೆಚ್ಚು ರಾಜಕೀಯ ತಂತ್ರಗಾರಿಕೆ ಆಡಗಿತ್ತು. ಭಾರತದ ಮೇಲೆ ಚೀನಾಗೆ  ನೇರ ಪ್ರಭಾವ ಹೇರಬೇಕಿದ್ದರೆ, ಟಿಬೆಟ್ ಪ್ರದೇಶದ ವಶದ ಹೊರತು ಅದು ಅಸಾಧ್ಯವಾಗಿತ್ತು, ಟೀಬಿಟ್ ಬಹುತೇಕ ಹಿಮಾಲಯದ ಪರ್ವತ ಶ್ರೇಣಿಗಳಿಂದ ಕೂಡಿದ್ದು, ಆದರ  ತಪ್ಪಲಿನಲ್ಲಿ ಭಾರತದ ಹಲವಾರು ರಾಜ್ಯಗಳು ಇರುವುದರಿಂದ ಚೀನಾ ಮಿಲಿಟರಿಗೆ ಮೇಲುಗೈ ಸದಾ ಕಟ್ಟಿಟ್ಟ ಬುತ್ತಿ, ಇದನ್ನು ಬಹಳ ಬುದ್ಧಿವಂತಿಕೆಯಿಂದ  ಅರಿತು, ಕಾರ್ಯಾಚರಣೆಗೈದ ಕೆಂಪು ಸೈನ್ಯ 1950ರಲ್ಲಿ ಟಿಬೇಟ್ ಪ್ರದೇಶವನ್ನು  ಆಕ್ರಮವಾಗಿ ವಶಪಡಿಸಿಕೊಳ್ಳುತ್ತದೆ, ಇದರೊಂದಿಗೆಯೇ ಭಾರತದೊಂದಿಗಿನ ಗಡಿ ಶೇ100ರಷ್ಟು ಚೀನಾ ಹೆಚ್ಚಿಸಿಕೊಳ್ಳುತ್ತದೆ.  ಭೂತಾನ್ ಹಾಗು ನೇಪಾಳ ದೇಶಗಳ ನೇರ ಸಂಪರ್ಕ ಚೀನಾಗೆ ಲಭಿಸಿದ್ದು ಕೂಡ ಈ ಆಕ್ರಮಣದ ಅನಂತರವಷ್ಟೇ.  ಇದೀಗ ಟಿಬೆಟ್ ಮಾದರಿಯಲ್ಲೇ ಭಾರತದ ಹಲವಾರು ಪ್ರದೇಶಗಳನ್ನು, ತನ್ನ ಸ್ವಾರ್ಥಗಳಿಗಾಗಿ ನುಂಗಬೇಕೆಂಬ ವಿಕೃತ ಬಯಕೆ ಚೀನಾದ್ದು.

ಚೀನಾ  ತಕರಾರು ಎತ್ತುತ್ತಿರುವುದು ಭಾರತದ ಸಾಮಾನ್ಯ ಪ್ರದೇಶಗಳ ಮೇಲಲ್ಲ. ಬದಲಿಗೆ   ಆರ್ಥಿಕವಾಗಿಯೂ, ಭೌಗೋಳಿಕವಾಗಿಯೂ ಚೀನಾಗೆ ಅತ್ಯಂತ ಸಹಕಾರಿಯಾಗಬಲ್ಲ Statergic location” ಗಳ ಮೇಲೆ.  ಜಮ್ಮು ಕಾಶ್ಮೀರ ರಾಜ್ಯದ ಅಕ್ಸಾಯಿ ಚಿನ್ ಪ್ರದೇಶ ಈಗಾಗಲೇ ಚೀನಾದ ವಶದಲ್ಲಿದೆ, ಈಶಾನ್ಯ ರಾಜ್ಯಗಳ ಪ್ರಮುಖ ರಾಜ್ಯವಾದ ಅರುಣಾಚಲ ಪ್ರದೇಶದ ಬಗ್ಗೆ  ಚೀನಾದ ಖ್ಯಾತೆ  ಹೊಸತೇನಲ್ಲ, ನೇಪಾಳ ಹಾಗು ಭೂತಾನ್ ರಾಷ್ಟ್ರಗಳ ಮಧ್ಯಭಾಗದಲ್ಲಿರುವ ಸಿಕ್ಕಿಂ ರಾಜ್ಯದ ಮೇಲೂ ಇದೀಗ ಅವರ ಕೆಂಪುಕಣ್ಣು ಬಿದ್ದಿದೆ, ಇಷ್ಟುಸಾಲದಕ್ಕೆ  ಸಿಂಧೂ ಸಾಗರದಲ್ಲಿರುವ  ಭಾರತದ ನೂರಾರು ದ್ವೀಪಗಳಮೇಲೂ ಸವಾರಿಮಾಡಲು ಹೊರಟಿದೆ ಚೀನಾ.  ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದ ಭೂಮಿ (ಗಿಲ್ಜಿತ್ ಪ್ರದೇಶ) ಇಂದೇನಾದರು ಭಾರತದ ವಶದಲ್ಲಿಯೇ ಉಳಿದ್ದಿದ್ದರೆ, ಚೀನಾ ಹಾಗು ಪಾಕಿಸ್ತಾನದ ನಡುವೆ, ನೇರ ಸಂಪರ್ಕವೇ ಇರುತ್ತಿರಲಿಲ್ಲ, ದುರದೃಷ್ಟವಷಾತ್, ಇಂದು ಹಾಗಿಲ್ಲ! ಚೀನಾ-ಪಾಕಿಸ್ತಾನದ ಆತಂಕಕಾರಿ ಸಂಗಮಕ್ಕೆ ಕಾರಣಕರ್ತರಾದಕ್ಕೆ, ಬಿಗ್ ಥ್ಯಾಂಕ್ಸ್-ಟು ನೆಹರು!   ಭಾರತದ ಮೇಲೆ ಪ್ರಭಾವ ಬೀರಲು, ನಿಯಂತ್ರಣ ಸಾಧಿಸಲು, ಚೀನಾಗೆ, ಪಾಕಿಸ್ತಾನದ ಬದಿಯಿಂದಲೂ ಭಾರತದ ಸಂಪರ್ಕ ಅನಿವಾರ್ಯ. ಇದನ್ನರಿತ ಚೀನಾ,  ಜಮ್ಮು-ಕಾಶ್ಮೀರದ  ಅಕ್ಸಾಯಿ-ಚಿನ್ ಪ್ರದೇಶವನ್ನು ಆಕ್ರಮವಾಗಿ ವಶಪಡಿಸಿಕೊಂಡು ಅಲ್ಲಿಂದ ಪಾಕ್ ಆಕ್ರಮಿತ ಗಿಲ್ಜಿತ್ ಪ್ರದೇಶದ ಮೂಲಕ ಪಾಕಿಸ್ತಾನಕ್ಕೆ ನೇರ ಸಂಪರ್ಕ ಇದೀಗ  ಸ್ತಾಪಿಸಿಕೊಂಡಿದೆ.  ಭಾರತ ಮತ್ತು ಪಾಕಿಸ್ತಾನದ ನಡುವೆ, ಮುಂದೊಮ್ಮೆ  ಸಂಘರ್ಷ  ಸಂಭವಿಸಿದಲ್ಲಿ  ಚೀನಿ ಸೈನಿಕರನ್ನು ಪಾಕಿಸ್ತಾನದೊಳಬಿಟ್ಟುಕೊಳ್ಳಲು ಈ ಮಾರ್ಗದ ಮೂಲಕ ಸುಲಭ ಸಾಧ್ಯವೆಂದು, ಪಾಕಿಸ್ತಾನ ಹಾಗು ಚೀನಾ ಬಹುಕಾಲ ಹಿಂದೆ  ಹೂಡಿರುವ  ಜಂಟಿ ಹುನ್ನಾರವಿದು. ಭಾರತದ ಭೂಮಿಯ ಮೇಲೆ, ಚೀನಾ-ಪಾಕಿಸ್ತಾನದ ನಡುವೆ, ಮುಂದೆ, ಭಾರತದ ವಿರುದ್ಧ ಸೆಣೆದಾಡಳು ಚತುಸ್ಪಥ ರಸ್ತೆಗಳ ನಿರ್ಮಾಣವಾದರೂ   ಯಾವ ಅಚ್ಚರಿಯೂ ಬೇಡ!  ಇದೀಗ ನಮ್ಮದೇ ಕಾಶ್ಮೀರದ ಅರ್ಧಕ್ಕೂ ಹೆಚ್ಚು ಭಾಗ ಚೀನಿ ಹಾಗು ಪಾಕಿಸ್ತಾನದ ವಶದಲ್ಲಿದೆ! ಆದರೆ, ನಮ್ಮ ಮೌನವೃತಾಧಾರಿ   ಪ್ರಧಾನಿಗಳು  ಮಾತ್ರ ಬಸವನಂತೆ ಕುತ್ತಿಗೆ ಅಲುಗಾಡಿಸುತ್ತಾ   ಬಾಯಿ ಮಾತ್ರ ಬಿಡದೆ ಮಾತುಕತೆ ಮಾಡುತ್ತಲೇ ಇದ್ದಾರೆ!

ಚೀನಾಗೆ, ಚೈನಾ ಸಮುದ್ರದ ಮೂಲಕ ಅಮೇರಿಕಾ ಹಾಗು ಆಸ್ಟ್ರೇಲಿಯಾ ಖಂಡಗಳ ಕಡಲುಗಳಿಗೆ  ನೇರ ಸಂಪರ್ಕವಿದೆ, ಈ ವ್ಯಾಪಿಯಲ್ಲಿ ಹೈ-ಟೆಕ್ ಬಂದರುಗಳನ್ನು ನಿರ್ಮಿಸಿ, ತನ್ನ  ನೌಕಾಪಡೆಗಳನ್ನು  ಗಡತ್ತಾಗಿ ಇಟ್ಟಿರುವ ಚೀನಾ, ಈ ಭಾಗದ ಸಮುದ್ರದ ಮೇಲೆ ತಕ್ಕ ಮಟ್ಟಿಗೆ ನಿಯಂತ್ರಣವನ್ನೂ ಹೊಂದಿದೆ.  ಸಿಂಧು ಸಾಗರದಲ್ಲಿಯೂ ತಮ್ಮ ನೌಕಾಪಡೆಗಳು ಪ್ರಾಭಲ್ಯ ಸ್ಥಾಪಿಸಿದರೆ ಅರ್ಧದಷ್ಟು ಪ್ರಪಂಚದ (ಆಫ್ರಿಕಾ, ಯುರೋಪ್ ಹಾಗೂ ಏಶಿಯ) ಮೇಲೆ ನಿರಾಯಾಸವಾಗಿ ನಿಯಂತ್ರಣ ಹೇರಬಹುದೆಂಬ ಲೆಕ್ಕಾಚಾರದಲ್ಲಿದೆ ಚೀನಾ. ಆದರೆ, ಆಫ್ರಿಕಾ, ಯುರೋಪ್ ಹಾಗೂ ಏಶಿಯ ಖಂಡಗಳ  ದೇಶಗಳಿಗೆ ಸಂಪರ್ಕ ಕಲ್ಪಿಸುವ ಯಾವ ಸಮುದ್ರ ಮಾರ್ಗವೂ ಪ್ರಸ್ತುತ ಚೀನಾದ ವ್ಯಾಪಿಗೆ ಬರುವುದಿಲ್ಲ. ಈ ಕಾರಣ “By Hook or Crook”  ಸಿಂಧು ಸಾಗರಕ್ಕೆ  ಸಂಪರ್ಕ ಕಲ್ಪಿಸುವ ಭೂಪ್ರದೇಶ ಅವರಿಗೆ ಬೇಕಾಗಿದೆ. ಅವರ “expansionist  criminal brain” ಕೆಲಸ ಶುರು ಮಾಡಿದ್ದು ಇಲ್ಲಿಯೇ ನೋಡಿ!  ಇದರ ಬಗ್ಗೆ ಕಾರ್ಯತಂತ್ರ ರೂಪಿಸುತ್ತಾ ಚೀನಾದ ಕಮ್ಮ್ಯೂನಿಸ್ಟರ  ಕಣ್ಣಿಗೆ ಇದೀಗ  ಬಿದ್ದಿರುವುದು  ಭಾರತದ ಈಶಾನ್ಯ ರಾಜ್ಯಗಳು.  ಬಂಗಾಲಕೊಲ್ಲಿಗೂ ದಕ್ಷಿಣ ಚೀನಾದ ನಡುವೆ ಸೇತುವೆಯ ರೀತಿ ಕಾರ್ಯನಿರ್ವಹಿಸುವ ಜತೆಯಲ್ಲಿಯೇ ಆರ್ಥಿಕವಾಗಿಯೂ, ತಾಂತ್ರಿಕವಾಗಿಯೂ  ತಮ್ಮ ಚೌಕಟ್ಟಿನೊಳಗೆ ಬರಬಲ್ಲ ಏಕಮಾತ್ರ ಭೂಪ್ರದೇಶ ಈಶಾನ್ಯ ಭಾರತ.   ಸಿಕ್ಕಿಂ, ಅರುಣಾಚಲದಾದಿಯಾಗಿ   ಉದಯವಾಗಿ ತ್ರಿಪುರಾದವರೆಗೂ ಎಂಟು ರಾಜ್ಯಗಳಾಗಿ ಹರಡಿಕೊಂಡಿರುವ ಈಶಾನ್ಯ ಭಾರತವನ್ನು ಕಬಳಿಸಬೇಕಾದರೆ ಪ್ರಾಥಮಿಕ ಹಂತದಲ್ಲಿ ಅರುಣಾಚಲವನ್ನು ಕಬಳಿಸಬೇಕು ಎಂಬ ಸೂಕ್ಷ್ಮ ಲೆಕ್ಕಾಚಾರದಲ್ಲಿ  ಕಾರ್ಯನಿರತವಾಗಿದೆ ಚೀನಾ.  ಭಾರತದ ಅವಿಭಾಜ್ಯ ಅಂಗವೆಂದು ಹೆಸರಿನಲ್ಲಿಯೇ ಸ್ಪಷ್ಟವಾಗಿ ಗುರುತಿಸಬಹುದಾದಂತಹ ಅರುಣಾಚಲದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ಎರಡರ ಪೈಕಿ ಒಂದರಲ್ಲಿ ಬಹುತೇಕ ಚೀನಾದ ಪ್ರಭಾವ ಈಗಾಗಲೇ ಇದೆ.  ಚೀನಾಗೆ ಪ್ರವಾಸಿಸುವ  ಅರುಣಾಚಲದ ವಾಸಿಗರಿಗೆ, ಚೀನಾ, ಕಳೆದ ಹತ್ತು ವರ್ಷಗಳಿಂದ ವಿಭಿನ್ನರೀತಿಯ ವೀಸಾವನ್ನು ನೀಡುತ್ತಿದೆ.  “ಚೀನಾದ ದೃಷ್ಟಿಯಲ್ಲಿ ಅರುಣಾಚಲಿಗರು ಇತರೆ ಭಾರತೀಯರಿಗಿಂತ ಭಿನ್ನ”ವೆಂಬ ಭ್ರಮೆ  ಅರುಣಾಚಲಿಗರ ಮನಸಿನಲ್ಲಿ ಮೂಡಿಸಿ, ರಾಜ್ಯದ  ಕೆಲೆವಡೆಗಳಲ್ಲಿ  ದ್ವಂದ್ವ ಸೃಷ್ಟಿಸಿ, ಚೀನಾ ಪರವಾದ ವಾತಾವರಣ ಸೃಷ್ಟಿಸುವಲ್ಲಿ ಅವರು  ಈಗಾಗಲೆ ಯಶಸ್ವಿಯಾಗಿದ್ದಾರೆ! ನಮ್ಮ ಸರಕಾರ ಹೀಗೆ ನಾಮರ್ದರಂತೆ, ಇದನ್ನು ಮುಂವರಿಯಲು ಬಿಟ್ಟರೆ, ಚೀನಾದವರ ಪ್ರಾಥಮಿಕ ಹಂತದ ಕಾರ್ಯಾಚರಣೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯ ಬೇಡ! ಹೀಗೊಂದುವೇಳೆ ಅರುಣಾಚಲವನ್ನು  ಆಕ್ರಮಿಸಿದಲ್ಲಿ, ಚೀನಾ ಸೈನ್ಯಕ್ಕೆ, ಅರುಣಾಚಲಕ್ಕೆ ಆಂಟಿಕೊಂಡಿರುವ  ಅಸ್ಸಾಮಿಗೆ  ನೇರ ಸಂಪರ್ಕ ಲಭಿಸುತ್ತದೆ. ಅಸ್ಸಾಂ’ನ ಬಹುತೇಕ ಸ್ಥಳಗಳಲ್ಲಿ ಕೇವಲ ಬಾಂಗ್ಲಾದೇಶದ ಇಸ್ಲಾಮಿಕ್ ಅತಿಕ್ರಮಣಕಾರರು ವಾಸಿಸುತ್ತಿದ್ದು  ಪ್ರತ್ಯೇಕಾವಾದದ ಮನಸ್ಥಿತಿ ಹೆಚ್ಚಿರುವುದರಿಂದ ಜಿಹಾದಿ ಶಕ್ತಿಗಳನ್ನು ಬಳಸಿಕೊಂಡು ತಮ್ಮ ಬೇಳೆ ಸುಲಭವಾಗಿ ಬೇಯಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಚೀನಾದ್ದು.

ಹೀಗೆ ಅಸ್ಸಾಮಿನವರೆಗೂ ಒಂದೊಮ್ಮೆ ಬಂದರೆ, ನೇಪಾಳ ಹಾಗೂ ಬಾಂಗ್ಲಾದ ನಡುವಿನಲ್ಲಿದ್ದುಕೊಂಡು ಪ್ರಮುಖ ಭಾರತಕ್ಕೂ ಈಶಾನ್ಯಕ್ಕೂ ಸಂಪರ್ಕ ಕಲ್ಪಿಸುವ ಕೇವಲ 22ಕಿಮಿ ಅಗಲದ ರಸ್ತೆಯಾದ ಸಿಲಿಗುರಿ ಕಾರಿಡಾರ್ ಅಥವಾ ಚಿಕನ್ ನೆಕ್’ನಮೇಲೆ   ಮಿತ್ರರಾಷ್ಟ್ರಗಳಾದ ನೇಪಾಳ ಹಾಗೂ ಬಾಂಗ್ಲಾದ ಸಹಾಯದಿಂದ ದಾಳಿ ಮಾಡಿ ಹಿಡಿತ ಸಾಧಿಸಿದಲ್ಲಿ, ಈಶಾನ್ಯ ರಾಜ್ಯಾಗಳಿಗು, ಪ್ರಮುಖ-ಭಾರತಕ್ಕೂ ಇರುವ ಏಕಮಾತ್ರ  ಸಂಪರ್ಕ ಕಡಿತಗೊಳ್ಳುತ್ತದೆ. ದುರದೃಷ್ಟವಶಾತ್ ಒಂದೊಮ್ಮೆ ಈ ಪರಿಸ್ಥಿತಿ ನಿರ್ಮಾಣವಾದರೆ, ಈಶಾನ್ಯ ರಾಜ್ಯಗಳಿಗೆ ಒಂದು ಮಾತ್ರಯನ್ನು ಸಹ ನಾವು ವಿಮಾನದಲ್ಲೇ ಸಾಗಿಸಬೇಕಾದೀತು! ಭಾರತದ ಪರಕ್ಕಿಂತ ಚೀನಾಗೆ ಹೆಚ್ಚು ವಿರೋಧಿಯಾರುವ ಭೂತಾನ್ ದೇಶದ ಪೂರ್ವಕ್ಕೆ ಹಾಗೂ  ಚಿಕನ್ ನೆಕ್’ಗೆ ಅಂಟಿಕೊಂಡಂತೆ ಅದರ ಉತ್ತರಭಾಗದಲ್ಲಿದೆ, ಭಾರತದ ಅತ್ಯಂತ ಸುಂದರ ರಾಜ್ಯ, ಸಿಕ್ಕಿಂ. ವೈರಿಯ ಮೇಲೆ ಹಿಡಿತಕ್ಕೂ, ಚಿಕನ್ ನೆಕ್’ನ ಮೇಲೆ ದಾಳಿಯ ಕಾರ್ಯಾಚರೆಣೆಗೂ ಚೀನಾಗೆ ಅತ್ಯಂತ ಸಹಕಾರಿಯಾಗಬಲ್ಲ ಸಿಕ್ಕಿಂ, ಚೀನಾದ “Most wanted Indian State“. ಈರೀತಿ ಚಿಕನ್ ನೆಕ್’ನ ಮೇಲೆ ಹಿಡಿತ ಸಾಧಿಸಿ, ಪ್ರಮುಖ ಭಾರತದಿಂದ  ಭಾರತೀಯ ಸೈನಿಕರಾರು ಈಶಾನ್ಯ ರಾಜ್ಯಗಳಿಗೆ  ಪ್ರವೇಶಿಸದಿರುವ ಹಾಗೆ ನೋಡಿಕೊಳ್ಳುವ ಒಂದು ವ್ಯವಸ್ತಿತ  ಷಡ್ಯಂತ್ರ ಹೆಣೆದಿದೆ ಚೀನಾ. ಚಿಕನ್-ನೆಕ್ ವಶವಾದ ನಂತರದಲ್ಲಿ, ಮಂಗೋಲಾಯಿಡ್ ರೇಸ್’ನ ಜನತೆ ಹೆಚ್ಚಿರುವ ಸ್ಥಳಗಳನ್ನು ತನ್ನ ಬಳೀ ಇರಿಸಿಕೊಂಡು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಅಸ್ಸಾಮಿನ ಸುತ್ತಮುತ್ತಲಿನ ಪ್ರದೇಶವನ್ನು ಬಾಂಗ್ಲಾದೇಶಕ್ಕೆ ಬಿಟ್ಟುಕೊಟ್ಟು, ಆಂತರಿಕ  ಒಡಂಬಡಿಕೆಯ ಮೂಲಕ  ತ್ರಿಪುರಾ ಕೆಳಗಿನ ಕೆಲ ಕಡಲತೀರಗಳನ್ನು ತನ್ನ  ವಶಕ್ಕೆ ಪಡೆದು, ಪ್ರಸ್ತುತ ದಕ್ಷಿಣ ಚೀನಾಗೆ ಬಂಗಾಲ ಕೊಲ್ಲಿಯಿಂದ ನೇರ ಸಂಪರ್ಕ ಕಲ್ಪಿಸಿಕೊಳ್ಳುವ ಬಹುದೊಡ್ಡ “masterplan” ಈ ಕಮ್ಮ್ಯೂನಿಸ್ಟರದ್ದು. ಈ ರೀತಿಯಾಗಿ ಬಂಗಾಳಕೊಲ್ಲಿಯ ಸಂಪರ್ಕ ಪಡೆದೊಡನೆ ಸಿಂಧು ಸಾಗರದಲ್ಲಿ ತನ್ನ ಪ್ರಭಾವ ವೃದ್ಧಿಗೊಳಿಸಲು “String of Pearls” ಎಂಬ ಮತ್ತೊಂದು ಕಾರ್ಯಾಚರಣೆಯೂ ಈಗಾಗಲೇ ಜಾರಿಯಲ್ಲಿದೆ.

2 ಟಿಪ್ಪಣಿಗಳು Post a comment
 1. pruthvijith
  ಸೆಪ್ಟೆಂ 1 2013

  ನೀವು ಹೇಳಿದ್ದೆಲ್ಲ ಯೋಚನೆ ಮಾಡಬೇಕಾದ್ದೆ, ಆದರೆ ಹೇಳಿದ್ದನ್ನು ಇನ್ನಷ್ಟು ಉದ್ವೇಗರಹಿತವಾಗಿ, ಯಾವುದೇ ನಿಲುವುಗಳಿಗೆ ಅಂಟಿಕೊಳ್ಳದೇ ಬರೆದಿದ್ದರೆ ಒಳ್ಳೆಯದಿತ್ತು. ಎಲ್ಲವೂ ನಾವು ಹೆದರಿಕೊಂಡಂತೆ ನಡೆಯುವುದಿಲ್ಲ, ಕೇವಲ ಹೆದರಿಸುವ ಕೆಲಸವನ್ನು ಚೀನಾ ಮಾಡುತ್ತಿದೆ. ಲೇಖನ ಚೆನ್ನಾಗಿದೆ.

  ಉತ್ತರ
  • Nagaraj Hebbar
   ಜನ 5 2015

   ಹೌದೌದು…pruthvijith ರೆ.. ಚೀನೀಯರು ಮೊದಲು ಹಾಗೇ ಹೆದರಿಸ್ತಾರೆ ಆಮೇಲೇನು ಮಾಡ್ತಾರೆ ಅಂತ ೧೯೬೨ ರಲ್ಲೆ ಗೊತ್ತಾಗಿದ್ರು ನಿಮ್ಮಂತ ದೂರಾಲೋಚನೆ ಇಲ್ಲದೆ ಇರುವವರು ಹೀಗೆ ಯೋಚಿಸ್ತಾರೆ ಬಿಡಿ.. ನಿಮ್ಮಂಥ ನೆಹರು ತಲೆ ಇರೊದ್ರಿಂದೇ ಭಾರತಕ್ಕೆ ಈ ಸ್ಥಿತಿ..

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments