ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 27, 2013

19

ಭೈರಪ್ಪನವರ ಆತ್ಮಕಥನ ‘ಭಿತ್ತಿ’ ಓದುತ್ತಾ…

‍ರಾಕೇಶ್ ಶೆಟ್ಟಿ ಮೂಲಕ

– ಪ್ರಶಸ್ತಿ.ಪಿ, ಸಾಗರ

Bhittiಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ  ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.

ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.

ಅಪ್ಪನಿಗೆ ಸರಿಯಾಗಿ ಒಬ್ಬ ಅಜ್ಜಿ. ಆಕೆಗೆ ಮಗ ಮಾಡೋದೆಲ್ಲವೂ ಸರಿ. ಭೈರಪ್ಪನದ್ದೆಲ್ಲವೂ ತಪ್ಪು. ಭೈರಪ್ಪನಿಗೆ ಆತನ ತಂಗಿ ಲಲಿತೆಗೆ ಅವಳು ಅನ್ನದೇ ಇದ್ದ ದಿನಗಳಿಲ್ಲ. ಹುಟ್ಟಿಸಿದ ಅಪ್ಪನನ್ನು ಸಾಕುವುದು ನಿನ್ನ ಕರ್ತವ್ಯವಲ್ಲವೇ ಎಂದು ಶಾಲೆ ಓದೋ ಹುಡುಗನಿಗೆ ನ್ಯಾಯ ಹೇಳೋ ಅಂತ ಮನಸ್ಸು ಅವಳದ್ದು!!

ಕತೆಯಲ್ಲಿ ಬರೋ ಇನ್ನೊಬ್ಬ ವಿಲನ್ ಮಾವ. ಭೈರಪ್ಪನಿಗೆ ನೀರಲ್ಲಿ ಈಜೋ ಹುಚ್ಚು. ಭೈರಪ್ಪನ ಅಣ್ಣ ರಾಮಣ್ಣ ಕಾಲರಾ ಬಂದು ಸತ್ತು ಹೋಗಿರುತ್ತಾನೆ. ಒಟ್ಟಿಗೇ ಮಕ್ಕಳನ್ನು ಕಳೆದುಕೊಂಡ ಭೈರಪ್ಪನ ತಾಯಿಗೆ ಈತನೂ ಎಲ್ಲಿ ಸತ್ತು ಹೋಗುತ್ತಾನೋ ಎಂಬ ಭಯದಲ್ಲಿ ಮಾವನ ಮನೆಗೆ ಓದೋಕೆ ಕಳಿಸುತ್ತಾಳೆ. ಅಲ್ಲಿಯೋ ಭೈರಪ್ಪನಿಗೆ ನಿತ್ಯ ಚಿತ್ರಹಿಂಸೆ. ಮನೆ ಕೆಲಸ ಎಲ್ಲಾ ಮಾಡಿಸಿ, ಹೊಟ್ಟೆಗೂ ಸರಿಯಾಗೆ ಹಾಕದೇ ಸತಾಯಿಸೋ ಅತ್ತೆ. ಎಲ್ಲದಕ್ಕೂ ದೊಣ್ಣೆ ಹಿಡಿದೇ ಮಾತನಾಡಿಸೋ ಮಾವ. ಸಾಲದೆಂಬಂತೆ ಮಾವನಿಗೆ ದುಡ್ಡು ತಿನ್ನೋ ಚಟ. ಭೈರಪ್ಪನಿಗೆ ಪರೀಕ್ಷೆಗೆ ಕಟ್ಟೋಕೆ ಅಂತ ಅವರಮ್ಮ ಕೊಟ್ಟಿರೋ ದುಡ್ಡನ್ನೂ ಬಿಡದೇ ತಿನ್ನುತ್ತಾನೆ ಮಾವ ! ನಂತರ ಭೈರಪ್ಪನ ಹೆಸರೇಳಿ ಅವನ ತಂಗಿ ಮದುವೆ ಸಮಯದಲ್ಲೂ ಬಿಡದೇ ದುಡ್ಡು ನುಂಗುವಂತಹ ನೀಚ ಮನಸ್ಥಿತಿ ಮಾವನದು. ದನದ ಕೊಟ್ಟಿಗೆಯಿಂದ ದೇವಸ್ಥಾನದ ಪಡಿಚಾರಿಕೆಯವರೆಗೆ ಎಲ್ಲಾ ಕೆಲಸ ಮಾಡಲೂ ಭೈರಪ್ಪ ಬೇಕು ಮಾವನಿಗೆ. ತಿಳಿಯದ ಜನರಿಗೆ ಆ ಶಾಂತಿ ಈ ಶಾಂತಿ ಅನ್ನುವುದು. ಬೆಳಬೆಳಗ್ಗೆಯೇ ಅವರ ಮನೆಗೆ ಹೋಗೋದು. ಅವರನ್ನೆಲ್ಲಾ ಅದು ತನ್ನಿ ಇದು ತನ್ನಿ ಅಂತ ಮನೆಯಿಂದ ಹೊರಗೆ ಅಟ್ಟೋದು. ಮನೆಯಲ್ಲಿದ್ದ ಬೆಲ್ಲ, ದುಡ್ಡು ಹೀಗೆ ಕದಿಯೋದು ಮಾವನ ಕೆಲಸ. ರಾತ್ರೆಯಾದಾಗ ಎಲ್ಲಿಯದೋ ಎಳನೀರು ಇಳಿಸೋದು, ಇನ್ನೆಲ್ಲೋ ಕದಿಯೋದು.. ಹೀಗೆ ಮಾವ ಮಾಡದ ಕೆಲಸವಿಲ್ಲ. ಇಷ್ಟೆಲ್ಲಾ ಕಳ್ಳ ಕೆಲಸಗಳಿಗೂ ಭೈರಪ್ಪನ ನೆರವು ಬೇಕು.. ಒಟ್ಟಿನಲ್ಲಿ ಭೈರಪ್ಪ ಆ ಸಮಯದಲ್ಲಿ ರಕ್ತಹೀನತೆಯಿಂದಲೋ, ನಿದ್ರಾಹೀನತೆಯಿಂದಲೋ ಸಾಯದೇ ಇದ್ದಿದ್ದೇ ಹೆಚ್ಚು. ಬೇರೆಯವರ ಮನೆಯಲ್ಲಿದ್ದು ಓದೋದು ಎಷ್ಟು ಕಷ್ಟ ಅನ್ನೋದನ್ನ ಮನ ಮಿಡಿಯುವಂತೆ ವರ್ಣಿಸಿದ್ದಾರೆ. ಮುಂದೆ ತನ್ನ ತಂಗಿಗೆ ಸಂಬಂಧ ನೋಡುವ ಸಂದರ್ಭ ಬರುತ್ತದೆ. ಎಲ್ಲಾ ಸೆಟ್ಟಾಯಿತು ಎಂದು ಭೈರಪ್ಪ ಸಂತಸಪಡುವ ಹೊತ್ತಿನಲ್ಲೇ ಸಂಬಂಧದ ಸುದ್ದಿಯೇ ನಿಂತು ಹೋಗುತ್ತೆ. ಎಲ್ಲೋ ಜಾತ್ರೆಗೆ ಮಾವ , ಅತ್ತೆ ಬಂದಿದ್ದಾರೆ ಎಂದು ಸುದ್ದಿ ತಿಳಿದು ಅಲ್ಲಿಗೆ ಬರೋ ಭೈರಪ್ಪನಿಗೆ ಅವರು ತನ್ನ ತಂಗಿಯನ್ನು ಜವಾಬ್ದಾರಿಯಿಲ್ಲದೇ ಅಲ್ಲೇ ಬಿಟ್ಟು ಹೋದ ಕತೆ ತಿಳಿಯುತ್ತೆ ! ಮಾವ ಅಂದರೆ ಹೀಗಿರಬೇಕು !!

ಇದ್ದಿದ್ದರಲ್ಲಿ ಕಲ್ಲೇಗೌಡರದು ಸಚ್ಚಾರಿತ್ರ್ಯ. ಭೈರಪ್ಪನಿಗೆ ಕಷ್ಟವಾದಾಗಲೆಲ್ಲಾ ನೆರವಿಗೆ ಧಾವಿಸೋರು ಅವರೇ. ಭೈರಪ್ಪನ ತಾಯಿಯ ಸಂಸ್ಕಾರದ ಸಮಯದಲ್ಲಿ, ಆಮೇಲೆ ಅವನು ಹೈಸ್ಕೂಲಿಗೆ ಸೇರೋ ಸಮಯದಲ್ಲಿ ದುಡ್ಡಿಲ್ಲದೆ ಬಂದಾಗ ಮನೆ ಮನೆಗೆ ದಮ್ಮಡಿ ಹೊಡೆಸಿ ಪ್ರತಿ ಮನೆಯಿಂದ ನಾಲ್ಕು ಕಾಯಿ, ಐವತ್ತು ಪೈಸೆ ಹೀಗೆ ದುಡ್ಡು ಹೊಂದಿಸಿಕೊಡುವವರು ಅವರು. ಅವರ ನೆರೆವೂ ಇಲ್ಲದಿದ್ದರೆ ಚಿಂತಾಜನಕ ಪರಿಸ್ಥಿತಿ.

ಆಮೇಲೆ ಬರೋದು ದೇವರಯ್ಯನವರು. ಅವರ ಮಗನನ್ನು ಭೈರಪ್ಪನ ಅಮ್ಮನೇ ಎದೆಹಾಲುಣಿಸಿ ಸಾಕಿರುತ್ತಾರೆ. ಅಷ್ಟಿದ್ದರೂ ಆ ದೇವರಯ್ಯನವರ ಹೆಂಡತಿಗೆ ತನ್ನ ಗಂಡ ಭೈರಪ್ಪನಿಗೆ ಸಹಾಯ ಮಾಡೋದು ಇಷ್ಟವಿಲ್ಲ. ಒಂದೆರಡು ಬೊಗಸೆ ರಾಗಿ ಕೊಡಲು ಹೋಗಿದ್ದಕ್ಕೆ ಗಂಡ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದಾನೆ ಎಂದು ದೊಡ್ಡ ಗಲಾಟೆಯೆಬ್ಬಿಸಿದ ಪುಣ್ಯಾತ್ಮೆ ಅವಳು.

ಮುಂದೆ ಬರೋ ಮತ್ತೊಂದು ಪಾತ್ರ ಸತ್ಯನಾರಾಯಣ. ಭೈರಪ್ಪನೇ ಓಡಾಡಿ ಸತ್ಯನಾರಾಯಣನಿಗೆ ಶ್ಯಾನುಭೋಗಿಕೆ ಕೊಡಿಸಿರುತ್ತಾನೆ. ಅವನ ಮನೆಯಲ್ಲೇ ಭೈರಪ್ಪನ ತಂಗಿ ಅಡಿಗೆ ಮಾಡಿಕೊಂಡು ಒಂದು ಮೂಲೆಯಲ್ಲಿ ಇರುತ್ತಾಳೆ. ಮುಂದೆ ಆಕೆಗೆ ಸಂಬಂಧ ನೋಡುವ ಸಂದರ್ಭದಲ್ಲಿ ಭೈರಪ್ಪ ತಾನು ಹೇಗೇಗೋ ಕೂಡಿಟ್ಟ ದುಡ್ಡನ್ನೆಲ್ಲಾ ತಂದು ಕೊಡುತ್ತಾನೆ. ಸತ್ಯನಾರಾಯಣ ಆ ದುಡ್ಡನ್ನೆಲ್ಲಾ ನುಂಗಿ ಹಾಕಿ ಬಂದ ಸಂಬಂಧಗಳನ್ನು ಸುಳ್ಳು ಹೇಳಿ ಮುರಿಯುತ್ತಾ ಕಾಲ ಹರಣ ಮಾಡತೊಡಗುತ್ತಾನೆ.

ಮುಂದೆ ಭೈರಪ್ಪನೇ ಎಮ್ ಎ ಓದೋ ಹೊತ್ತಿನಲ್ಲಿ ತಂಗಿ ಲಲಿತೆಯ ಮದುವೆ ಮಾಡುತ್ತಾನೆ. ಆದ್ರೆ ಭಾವ ಇಸ್ಪೀಟ್ ಲಂಪಟ. ಅವನಿಂದಾಗೋ ಗೋಳುಗಳು.ಅವನಿಗೆ ಅಂದ ಭೈರಪ್ಪ ಜಮೀನು ಕೊಡಿಸಿದರೂ ಆತ ಇಸ್ಪೀಟಿಗೆ ಮತ್ತೆ ದಾಸನಾಗೋದು.. ಹೀಗೆ ಅವನದ್ದೂ ಒಂದು ಗೋಳಿನ ಕತೆ.

ಇದರ ಮಧ್ಯೆ ಬರೋದು ಭೈರಪ್ಪನ ಸ್ವಾಮಿ ಮೇಷ್ಟ್ರು, ಅಯ್ಯಂಗಾರ್ ಮಾಷ್ಟ್ರು ಹೀಗೆ ಹಲವಾರು ಮಾಸ್ತರುಗಳು. ಸ್ವಾಮಿ ಮಾಸ್ತರ ಸಿಗರೇಟು ಕತೆ, ಪೇಪರ್ ಲೀಕ್ ಮಾಡೋ ಕತೆ, ಇನ್ನೊಂದು ಮಾಸ್ತರ ಜೊತೆ ನುಗ್ಗೇಹಳ್ಳಿಯ ಅವರ ತೋಟದ ಬಾವಿಯಲ್ಲಿ ಈಜು ಕಲಿತ ಕತೆ ಹೀಗೆ ನುರೆಂಟು ಕತೆಗಳು ಮಧ್ಯ ಮಧ್ಯ. ಅಯ್ಯಪ್ಪಾ ಅದೆಷ್ಟೆಂದು ಮಾಸ್ತರುಗಳು. ಆ ಮಾಸ್ತರು ಹೀಗೆ ಪೇಟ ಧರಿಸ್ತಿದ್ರು, ಕುಂಕುಮ ಇಡ್ತಿದ್ರು, ಕರಿ ಆಯ್ಯಂಗಾರಿ.. ಹೀಗೆ ಪುಟಕ್ಕೆರೆಡು ಪಾತ್ರಗಳು !! ಅವರು ಮೊದಲನೆ ತರಗತಿಯಿಂದ ಪಿ ಎಚ್ಡಿ ಓದೋ ತನಕ ಸಿಕ್ಕ ಮಾಸ್ತರಗಳ ಬಗ್ಗೆ ಒಬ್ಬರನ್ನೂ ಬಿಡದೇ ವರ್ಣಿಸಿದ್ದಾರೆ. ಅವರಲ್ಲಿ ಶಾಂತಮ್ಮನವರು, ತಿರುಮಲಾಚಾರ್ಯರದ್ದು ಸ್ವಲ್ಪ ತೂಕದ ಪಾತ್ರ.

ಬಾಲ್ಯದಲ್ಲಿ ಒಂದು ಅಂಗಿ ಚಡ್ಡಿಯಲ್ಲೇ ಕಳೆದು, ಬಳಪ, ಪೆನ್ಸಿಲ್ಲಿಗೆ ಗತಿಯಿಲ್ಲದಂತ ಸ್ಥಿತಿ, ಅವರಿಗಿದ್ದ ನಾಟಕದ ಪದಗಳ ಹುಚ್ಚು, ನಾಟಕದ ಕತೆ ಹೇಳಿ ಒಂದು ರಜಾದಲ್ಲಿ ೨೫ ರೂಪಾಯಿ ಸಂಪಾದಿಸಿದ ಕತೆ, ಊದುಬತ್ತಿ ಮಾರಿದ ಕತೆ  ಹೀಗೆ ಅಲೆಮಾರಿಯಂತೆ ಊರೂರು ಸುತ್ತಿದ ಹಲವು ಕತೆಗಳು ಬರುತ್ತದೆ.ಆಮೇಲೆ ಪೈಲ್ವಾನರ ಕುಸ್ತಿ ನೋಡುತ್ತಾ ನೋಡುತ್ತಾ ಅದರಲ್ಲೇ ಅವರ ಕಾದಂಬರಿ ಭೀಮಕಾಯ ತಯಾರಾದ ಪರಿಯನ್ನೂ ವರ್ಣಿಸಿದ್ದಾರೆ.ಹೀಗೆ ಒಮ್ಮೆ ಒಬ್ಬ ಸಂತೇಶಿವರದವ ಇವರು ಓದುತ್ತಿದ್ದ ಊರಿಗೆ ಬರುತ್ತಾನೆ. ಬೆಂಗಳೂರಿಗೆ ಹೋಗ್ತೀನಿ ಮಿಲಿಟರಿಗೆ ಸೇರ್ಬೇಕು ಅಂತ ಅವನಾಸೆ. ಅವನ ಜೊತೆಗೆ ಹೊರಟ ಇವರ ದುಡ್ಡನ್ನು ಒಬ್ಬ ಲಪಟಾಯಿಸುತ್ತಾನೆ. ಅತ್ತ ಆರ್ಮಿಯ ಕೆಲಸವೂ ಸಿಗೋಲ್ಲ. ವಾಪಾಸ್ ಬರೋಕೂ ದುಡ್ಡಿರೋಲ್ಲ.ಈ ತರ ಮೋಸ ಹೋದ ಘಟನೆಗಳು ಒಂದೆರಡಲ್ಲ. ಆಮೇಲೆ ಹೋಟೇಲ್ ಸೇರ್ಬೇಕು ಅಂತ ಧಾರವಾಡಕ್ಕೆ ಹೋಗಿ, ಅಲ್ಲಿ ಹೋಟೇಲುಗಳೆಲ್ಲಾ ಬಾಗಿಲು ಹಾಕಿದ್ದರಿಂದ ರಾಣೆಬೆನ್ನೂರಿಗೆ ಹೋಗಿ.. ಅಲ್ಲಿಂದ ಮುಂಬೈಗೆ ಹೋಗಿ .. ಅಲ್ಲಿ ಕೂಲಿಯವರ ಜೊತೆ ಬದುಕಿ,ಅಲ್ಲೇ ಟಾಂಗಾ ಗಾಡಿ ಲೈಸನ್ಸು ಪಡೆಯೋ ಮಟ್ಟಕ್ಕೆ ಬರುತ್ತಾರೆ. ಅಷ್ಟರಲ್ಲಿ ಒಂದು ವರ್ಷವೇ ಕಳೆದುಹೋಗಿರುತ್ತೆ. ಆದರೆ ಅಷ್ಟರಲ್ಲಿ ತಮ್ಮ ಗುರಿ ಓದೋದು, ಟಾಂಗಾ ಗಾಡಿಯಲ್ಲ ಅಂತ ಮತ್ತೆ ಮೈಸೂರಿಗೆ ಮರಳುತ್ತಾರೆ.

ಮೈಸೂರಿನ ಓದು, ಅಲ್ಲಿನ ರಾಜಕೀಯ, ಅನಂತರದ ಓದು ಅಲ್ಲಿ ಮತ್ತೆ ರಾಜಕೀಯ, ಭಾಷಣ ಸ್ಪರ್ಧೆಗಳಲ್ಲಿ ಇವರಿಗೆ ಬರುತ್ತಿದ್ದ ಬಹುಮಾನಗಳು, ಅಲ್ಲಿ ಮತ್ತೆ ರಾಜಕೀಯ ಹೀಗೆ ತರ ತರದ ರಾಜಕೀಯಗಳು. ಕೊನೆಗೆ ಕೀರ್ತಿನಾಥ ಕುರ್ತಕೋಟಿಯವರ ಮುನ್ನುಡಿ ಮತ್ತು ಪ್ರಕಾಶನಗಳ ರಾಜಕೀಯ,ಯಪ್ಪಾ.. ಹೀಗೂ ಉಂಟೆ ಅನಿಸುತ್ತೆ. ಆಮೇಲೆ ಗುಜರಾತ್, ದೆಲ್ಲಿಗೆ ಹೋಗಿ ಅಲ್ಲಿ ಸೇವೆ ಸಲ್ಲಿಸೋ ಇವರು ಕರ್ನಾಟಕಕ್ಕೆ ಬಂದಾಗ ಇಲ್ಲಿನ ನವ್ಯ, ನವೋದಯ, ಬಂಡಾಯ, ದಲಿತ, ಮಹಿಳಾ ಸಾಹಿತ್ಯಗಳೆಂಬ ಹೊಡೆದಾಟಗಳು. ಒಬ್ಬರು ಇನ್ನೊಬ್ಬರನ್ನು ಮೂಲೆಗುಂಪು ಮಾಡೋ ಪ್ರಯತ್ನಗಳು.. ಅಬ್ಬಬ್ಬಾ.. ಸಾಹಿತಿ ಅಂದ್ರೆ ಸುಮ್ನೇ ತನ್ನ ಪಾಡಿಗೆ ಸೃಜನಶೀಲರಾಗಿದ್ದರೆ, ಮತ್ತೊಬ್ಬ ಸೃಜನಶೀಲನನ್ನು ಪ್ರೋತ್ಸಾಹಿಸುತ್ತಾ ಇದ್ದರೆ ಸಾಲದೇ .. ತಮ್ಮದೇ ಸರಿಯೆನ್ನೋ ರಾಜಕೀಯ, ಗುಂಪುಗಾರಿಕೆ ಮಾಡಬೇಕೇ ಎನ್ನೋ ಪ್ರಶ್ನೆ ಎಷ್ಟೋ ಸಾರಿ ಕಾಡುತ್ತದೆ. ಕ್ಲಾಸಲ್ಲಿ ಫೇಲಾಗೋ ಹಂತದಿಂದ ಯೂನಿವರ್ಸಿಟಿ ಗೋಲ್ಡ್ ಮೆಡಲ್ ಹೊಡೆಯೋ ತನಕ ಅವರು ಬೆಳೆದು ಬಂದ ಪರಿ, ಎದುರಿಸಿದ ಕಷ್ಟಗಳು.. ಹೀಗೆ ಎಷ್ಟೋ ಕತೆಗಳು.. ಬರೆದರೆ ಮುಗಿಯದಷ್ಟು.. ಆ ಪುಸ್ತಕವನ್ನು ಓದಿಯೇ ಅದನ್ನು ಆನಂದಿಸಬೇಕು.

ಚಿತ್ರ ಕೃಪೆ : http://www.a4dable.in

19 ಟಿಪ್ಪಣಿಗಳು Post a comment
 1. ಸೆಪ್ಟೆಂ 27 2013

  Good article have decided to read this book, never known about this. Thank you.

  ಉತ್ತರ
 2. ಗಿರೀಶ್
  ಸೆಪ್ಟೆಂ 27 2013

  ಇದೆಲ್ಲವೂ ಅವರ ಗೃಹಭಂಗ ಕೃತಿಯಲ್ಲಿದೆ. ಭಿತ್ತಿಯಲ್ಲಿ ಸ್ವಲ್ಪ ಹೆಚ್ಚಿನದಿದೆ. ಮೂಲತಃ ಹಳೆ ಮೈಸೂರು ಪ್ರಾಂತ್ಯ ತೀರಾ ಕಾಡುವ ಸಮಸ್ಯೆಗಳಿರದ ಮಧ್ಯಮ ಸ್ತರದ ಬದುಕು ಈ ಪ್ರಾಂತ್ಯದಲ್ಲಿದೆ, ಆದರೆ ಮಹಾರಾಜರ ಕಾಲ ಕಳೆದು ಹೈದರಾಲಿ ಆಡಳಿತ ಬಂದ ನಂತರ ಬ್ರಾಹ್ಮಣ ಕುಟುಂಬಗಳಲ್ಲಿನ ಸಂಕಷ್ಟ ಅತಿಯಾಯಿತು, ಈ ಚಿತ್ರಣವನ್ನು ಗೃಹಭಂಗ ಕಟ್ಟಿಕೊಡುತ್ತದೆ. ಅದೇ ಪ್ರಾಂತ್ಯದಿಂದ ಬಂದವರಿಗೆ ಗೃಹಭಂಗ ಹೆಚ್ಚು ಆತ್ಮೀಯವಾಗಿ ಕಾಣಿಸುತ್ತದೆ. ಭಿತ್ತಿಯಲ್ಲಿ ಇರುವುದಂತೂ ಆ ಪ್ರಾಂತ್ಯದ ಬದುಕನ್ನು ಹತ್ತಿರದಿಂದ ನೋಡಿದಂತೆ ಭಾಸವಾಗುತ್ತದೆ.
  ನಿಮ್ಮ ಲೇಖನ ಅಪೂರ್ಣವೆ?

  ಉತ್ತರ
  • Nagshetty Shetkar
   ಸೆಪ್ಟೆಂ 27 2013

   “ಮಹಾರಾಜರ ಕಾಲ ಕಳೆದು ಹೈದರಾಲಿ ಆಡಳಿತ ಬಂದ ನಂತರ ಬ್ರಾಹ್ಮಣ ಕುಟುಂಬಗಳಲ್ಲಿನ ಸಂಕಷ್ಟ ಅತಿಯಾಯಿತು” ಭೂಸುರರೇ ಆಗಿದ್ದ ಬ್ರಾಹ್ಮಣರು ಹಿಂದೂ ಮಹಾರಾಜರ ಆಡಳಿತ ಕಾಲದಲ್ಲಿ ಹಸಿವೆ ಎಂದರೇನು ತಿಳಿಯದವರಾಗಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರಜಾಸತ್ತಾತ್ಮಕ ನಿಲುವುಗಳನ್ನು ಹೊಂದಿದ್ದ ಹೈದರ್ ಅಲಿಯು ಅಧಿಕಾರ ಪಡೆದ ಮೇಲೆ ಬ್ರಾಹ್ಮಣರಿಗೆ ಬಿಟ್ಟಿ ಕೂಳು ತಪ್ಪಿತು. ಕಾಯಕ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಹೈದರ್ ಅಲಿಯು ಬ್ರಾಹ್ಮಣರೂ ದುಡಿದು ಅನ್ನ ಸಂಪಾದಿಸಬೇಕು, ಆಗಲೇ ಸಮಾಜಕ್ಕೆ ಹಿತ ಎಂಬ ದೂರದರ್ಶಿತ್ವ ಹೊಂದಿದ್ದ. ತಿನ್ನುವ ವರ್ಗಕ್ಕೆ ಸೇರಿದ್ದ ಬ್ರಾಹ್ಮಣರಿಗೆ ದುಡಿಮೆಯ ಅಆಇಈ ತಿಳಿದಿರಲಿಲ್ಲ. ಹಾಗಾಗಿ ಹಳೆ ಮೈಸೂರು ಪ್ರಾಂತ್ಯದ ಬ್ರಾಹ್ಮಣರಿಗೆ ಹೈದರ್ ಅಲಿ ಅಂದರೆ ದ್ವೇಷ.

   ಉತ್ತರ
   • ಸೆಪ್ಟೆಂ 27 2013

    ಚಿತ್ರದುರ್ಗದ ರಾಜರು ಬೇಡರಾಗಿದ್ದರೂ ಅವರು ಬ್ರಾಹ್ಮಣರು ಕುಳಿತು ತಿನ್ನಲು ಸಹಾಯ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಒಂದು ಕಾಲಕ್ಕೆ ತನಗೆ ಸಹಾಯ ಮಾಡಿದ್ದ ಮದಕರಿನಾಯಕನನ್ನು ಸೋಲಿಸಿ ಬ್ರಾಹ್ಮಣರಿಗೆ ದುಡಿದು ತಿನ್ನಲು ಕಲಿಸಲು ಹೈದರ್ ಅಲಿ ಪ್ರಯತ್ನಿಸಿದ್ದ.

    ಉತ್ತರ
  • vidya
   ಜನ 17 2014

   ಪ್ರಶಸ್ತಿ ಅವರೆ ಅತ್ಯುತ್ತಮ ಲೇಖನ ಆಯ್ದು ಕೊಂಡಿದ್ದಕ್ಕೆ ಮೊದಲು ನಿಮಗೆ ಶಭಾಶ್ ಮಾತಿನ ಪ್ರಶಸ್ತಿ. ನಮ್ಮ ತಂದೆಯವರು ಕೂಡ ಭೈರಪ್ಪನವರ ತಂದೆಯಂತೆ ಬೆಜವಾಬ್ದಾರಿ ಅಂತ ನನಗೆ ಯಾವಾಗಲೂ ಸಿಟ್ಟಿತ್ತು. ಆದರೆ ಈ ಭಿತ್ತಿ ಓದಿದ ಮೇಲೆ ತೀರ ಭೈರಪ್ಪನವರ ತಂದೆ ತರಹ ನಮ್ಮ ತಂದೆ ಇರಲಿಲ್ಲವೆಂದು ಸಮಾಧಾನಿಯಾಗಿದ್ದೇನೆ. ಯಾವ ಮಕ್ಕಳಿಗೂ ಲಿಂಗಣ್ಣಯ್ಯನಂಥ ತಂದೆ ಇರಬಾರದು. ತುಂಬಾ ನೊಂದ ವ್ಯಕ್ತಿಗಳೇ ಜೀವನದಲ್ಲಿ ಮುಂದೆ ಬರುತ್ತಾರೆ. ಅದಕ್ಕೇ ಭೈರಪ್ಪನವರಿಗೆ ಅಂಥಾ ಬದುಕು ಕೊಟ್ಟನೇ ಭ್ಹಗವಂತ???

   ಉತ್ತರ
 3. Salman Khan
  ಸೆಪ್ಟೆಂ 27 2013

  @ Nagshetty Shetkar: ಸ್ವಾಮೀ, ತ.ರಾ.ಸು. ಅವರ ‘ದುರ್ಗಾಸ್ತಮಾನ’ ಕಾದಂಬರಿ ಓದಿ, ನಿಮ್ಮ ‘ಹೈದರಾಲಿ’ ಎಷ್ಟು ನಂಬಿಕಸ್ಥ, ಸಜ್ಜನ ಅಂತ ತಿಳಿಯುತ್ತೆ.

  ಉತ್ತರ
  • Nagshetty Shetkar
   ಸೆಪ್ಟೆಂ 27 2013

   ತರಾಸು ಬ್ರಾಹ್ಮಣರು ಹಾಗೂ ಅವರ ಓದುಗರೂ ಬಹುಪಾಲು ಜನ ಬ್ರಾಹ್ಮಣರು. ನಾನು ಆಗಲೇ ಹೇಳಿದೆ ಹಳೆ ಮೈಸೂರು ಪ್ರಾಂತ್ಯದ ಬ್ರಾಹ್ಮಣರಿಗೆ ಹೈದರ್ ಅಲಿ ಅಂದರೆ ದ್ವೇಷ.

   ಉತ್ತರ
   • M.A.Sriranga
    ಸೆಪ್ಟೆಂ 27 2013

    Mr.Shetkar will you please give any AADHAARA for your NEW HISTORY? I do not know where you are living,but in Hyderabad Karnaataka all castes are suffered a lot by the RAJAKS, They are under Hyderabad Nizams protection. Why you divide sahitis and readers by your caste spectacles?

    ಉತ್ತರ
    • ಸೆಪ್ಟೆಂ 29 2013

     ಅದೇನೋ ಗಾದೆ ಇದೆಯಲ್ಲ – ಕಾಮಾಲೆ ಕಣ್ಣಿನ ಕಥೆ – ಹಾಗಾಯ್ತು. ಅಷ್ಟೆ. ಅನಿಷ್ಟಕ್ಕೆಲ್ಲ ಶನೀಶ್ವರ ಇದ್ದಾನಲ್ಲ, ಗುರಿಮಾಡಲಿಕ್ಕೆ!

     ಉತ್ತರ
     • ಆಕ್ಟೋ 4 2013
     • Nagshetty Shetkar
      ಆಕ್ಟೋ 4 2013

      “ಅನಿಷ್ಟಕ್ಕೆಲ್ಲ ಶನೀಶ್ವರ” Mr. Hamsanandi, what are you saying? Was holocaust an imagination of Israeli Jews? Was Kalyana massacre a story perpetuated by Sharanas? Didn’t Sanantanis persecute Sharanas through Bijjala? Didn’t Brahmins exploit the Shoodras and Dalits of India for thousands of years in the guise of caste system and Vaidik shahi? Isn’t Brahmanya an everyday reality in India? Is Darga Sir a fool to talk about all these? Which world are you living in? Now I dread living in NaMo’s country!

      ಉತ್ತರ
      • ಸಹನಾ
       ಆಕ್ಟೋ 4 2013

       ಈ ಹಿಂದೆ ಇದೇ ರೀತಿಯ ನಿಮ್ಮ ಹೇಳಿಕೆಗಳ ಪರಿಣಾಮವನ್ನು ತೋರಿಸಿ 0.03 % ಗೂ ಕಡಿಮೆ ಇದ್ದ ಬ್ರಾಹ್ಮಣರು 97% ರಷ್ಟಿದ್ದ ನಮ್ಮ ಶೂದ್ರರೂ ದಲಿತರನ್ನು ತುಳಿದು ಶೋಷಿಸುತ್ತಿದ್ರು ಅಂದ್ರೆ ನಾವೆಲ್ಲ ರಣಹೇಡಿಗಳೂ, ಮುಠ್ಠಾಳರೂ ಮೂರ್ಖರೂ, ದಡ್ಡರೂ ಆಗಿದ್ದೆವೆ ಅಂತ ಕೇಳಿದ ಪ್ರಶ್ನೆಗೆ ನಿಮ್ಮಿಂದ ಇನ್ನೂ ಸರಿಯಾದ ಉತ್ತರಾನೇ ಬಂದಿಲ್ಲ!!! ಅಧರೆ ಅದೇ ಭಜನೇನೆ ಎಲ್ಲಾ ಕಡೆ ಮಾಡ್ತಿದ್ದೀರಲ್ರಿ….

       ಕಲ್ಯಾಣದ ಬಿಜ್ಜಳನ ಸೈನ್ಯ ಪೂರ್ತಿ ಏನು ಬ್ರಾಹ್ಮಣರೇ ತುಂಬಿಕೊಂಡಿದ್ರಾ!!! ಅಷ್ಟೊಂದು persucution ಆಗಿದ್ರೂ ಈ ಭಾಗದಲ್ಲಿ ಬ್ರಾಹ್ಮಣರ ಜನಸಂಖ್ಯೆಗಿಂತ ಲಿಂಗಾಯತರ ಜನಸಂಖ್ಯೆಯೇ ಹೋಲಿಸಲಾಗದಷ್ಟು ಜಾಸ್ತಿ ಇದೆಯಲ್ಲಾ??? (ಇಲ್ಲವೇ ಲಿಂಗಾಯತರು ಶರಣರಲ್ಲವೆನ್ನವ ಹುನ್ನಾರವನ್ನೇನಾದರೂ ನೀವೂ ದರ್ಗಾ ಇಟ್ಕೊಂಡಿದ್ದೀರಾ??) ಒಂದೊಮ್ಮೆ ಬ್ರಾಹ್ಮಣರೇ ಬಹುಸಂಖ್ಯಾತರಾಗಿದ್ದು ಶೋಷಣೆ ಮಾಡ್ತಾ ಇದ್ದು ಈಗ ಅವರ ಸಂಖ್ಯೆ ಅಲ್ಲಿ ನಗಣ್ಯ ಮಟ್ಟಕ್ಕೆ ಇಳಿದಿದೆ ಎನ್ನೋದಾದ್ರೆ ನಿಮ್ಮ ಥಿಯರಿ ಉಲ್ಟಾ ಹೊಡೆಯುತ್ತೆ!! ಅಂದ್ರೆ ಬ್ರಾಹ್ಮಣರ ಮೇಲೇನೆ persucution ಆಗಿರುವ ಸಾಧ್ಯತೆ ಲಾಜಿಕ್ಕಾಗಿ ಕಾಣ್ತಾ ಇದೆ. ಅದು ಇಂದಿಗೂ ನಿಮ್ಮ ಮತ್ತು ದರ್ಗಾ ಹೇಳಿಕೆಗಳ ಮೂಲಕ ಮುಂದುವರಿತಾ ಇರೋದು ನೋಡಿದ್ರೆ ಇದೇ ಸತ್ಯ ಇರಬೇಕು ಅನ್ಸಿತ್ತಿದೆಯಪ್ಪ…

       ರೀ ಶೆಟ್ಕರ್ ನಿಮ್ಮ ಹೇಳಿಕೆಗಳ ತಾರ್ಕಿಕ ಪರಿಣಾಮಗಳನ್ನು ಯೋಚಿಸಿ ಮಾತಾಡ್ರೀ,, ಇಲ್ಲಾ ಅಂದ್ರೆ ಒಂದೋ ಯಡವಟ್ಟಪ್ಪಾ ಆಗ್ತೀರಿ ಇಲ್ಲವೇ ಜೋಕರ್ ಆಗ್ತೀರಿ….

       ಉತ್ತರ
       • Nagshetty Shetkar
        ಆಕ್ಟೋ 4 2013

        Ms. Sahana, you are making ridiculous statements. For a section of society to exploit another section of the society, you are saying that former should be larger than latter. What kind of logic is this?

        ಉತ್ತರ
        • ಸಹನಾ
         ಆಕ್ಟೋ 4 2013

         ತಲೆ ಇದೆಯೇ???? ಇಲ್ಲ ಕಣ್ಣು ಬುದ್ದಿ ಎಲ್ಲಾ ಕುರುಡೋ??? ನಾನು 40% vs 60% ಅನ್ನೋಮಟ್ಟದ ಹೋಲಿಕ ಮಾಡ್ತಿಲ್ಲಾ… 03% ಎಲ್ಲಿ 97% ಎಲ್ಲಿ??? ಕಾಮನ್ ಸೆನ್ಸ್ ಇದ್ರೆ ಈ ಲಾಜಿಕ್ ಅರ್ಥ ಆಗುತ್ತೆ ಅದೇ ಇಲ್ಲಾ ಅಂದ್ರೆ???

         ಉತ್ತರ
 4. ಸೆಪ್ಟೆಂ 29 2013

  For readers like me Literature is the Religion, and Kannada literature, Hindi literature, English literature etc are the castes!! So I belong to both English and Kannada caste!!

  And I feel Ta.ra.su, kuvempu, bhairappa, Devudu, triveni all belong to the same caste that is Kannada Literature.

  But I am astonished to see people(?) mentioning different castes which are in not in my list 😦

  ಉತ್ತರ
  • Nagshetty Shetkar
   ಸೆಪ್ಟೆಂ 29 2013

   ಭಾರತವೆಂಬ ಜಾತಿಕೂಪದಲ್ಲಿ ನಿತ್ಯವೂ ಹೊರಲಾಡುತ್ತಿದ್ದರೂ ಜಾಣಕುರುಡು ತೋರಿಸುವ ನಿಮ್ಮ ವರಸೆ ಮೆಚ್ಚಿದೆ!

   ಉತ್ತರ
 5. Kotturswamy MS
  ಸೆಪ್ಟೆಂ 30 2013

  ತರಾಸುರವರ ‘ದುರ್ಗಾಸ್ತಮಾನ’ ಐತಿಹಾಸಿಕ ಕಾದಂಬರೆಯಷ್ಟೇ, ಆದರೆ ಅದರಲ್ಲಿ ಇರೋದೆಲ್ಲಾ ಐತಿಹಾಸಿಕ ಸತ್ಯಗಳಲ್ಲ, ಅದರಲ್ಲಿ ಹೈದರ್ ಅಲಿ ಮತ್ತು ಟಿಪ್ಪುವನ್ನು ಖಳರಂತೆ ಸೃಷ್ಟಿಸಿರುವುದನ್ನು ಸ್ವತಃ ತರಾಸುರವರೇ ಸಮ್ಮತಿಸಿದ್ದರು. ಅಲ್ಲದೇ ಅವರ ಹಿಂತಿರುಗಿ ನೋಡಿದಾಗ ಆತ್ಮಕತೆಯಲ್ಲಿ ಇದನ್ನ ಪ್ರಾಸ್ತಾಪಿಸಿ, ಟಿಪ್ಪು ಮತ್ತು ಹೈದರ್ ಅಲಿಯನ್ನು ಕೇಂದ್ರವಾಗಿಟ್ಟುಕೊಂಡು ಕಾದಂಬರಿಯೊಂದನ್ನು ಬರೆಯುವಂತೆ ಕಾದಂಬರಿ ಲೇಖಕರೊಬ್ಬರಿಗೆ ಹೇಳಿದ್ದರೆಂದು ತರಾಸು ತಮ್ಮ ಆತ್ಮ ಕತೆಯಲ್ಲಿ ತಿಳಿಸಿರುವರು.

  ಉತ್ತರ
 6. vageesh
  ಆಕ್ಟೋ 1 2013

  ಕಡೆಗೂ ಮುಕ್ತಿ ಅನ್ನುವುದರ ತಳಹದಿಯೂ ಚಿಲುಮೆಯೂ ಆಗಿರುವುದು, ಆಗಬೇಕಾದ್ದು ತೀರ ಆತ್ಮನಿಷ್ಠುರವಾದ ಸಾಮಾಜಿಕ-ವೈಯಕ್ತಿಕ ನೀತಿಧರ್ಮ ಪ್ರಜ್ಞೆ ಮತ್ತು ಸಾತ್ವಿಕ ತಾತ್ವಿಕತೆಗಳೇ ಹೊರತು ಬರಿದೇ ಕಾನೂನು ಕಟ್ಟಲೆಗಳ ವ್ಯಾಖ್ಯೆಯಲ್ಲ.

  ಎರಡು ಉದಾಹರಣೆ ಕೊಡುತ್ತೇನೆ. ನನ್ನವರೇ, ನನ್ನ ಬಳಗವೇ ಆಗಿರುವ ವಾಮಪಂಥೀಯರು, ಸಮಾಜವಾದಿಗಳು ಅನ್ನಿಸಿಕೊಳ್ಳುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಿಂದೂತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವಷ್ಟು ಕಟುವಾಗಿ ಇಸ್ಲಾಮೀಯತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವುದಿಲ್ಲ, ಎದುರು ಹಾಕಿಕೊಳ್ಳು ವುದಿಲ್ಲ, ಯಾಕೆ? ಎಷ್ಟೋ ವೇಳೆ, ಈ ನನ್ನ ಬಳಗವು ಅಂಥದನ್ನು ಕುರಿತು ಒಂದು ಮಾತನ್ನೂ ಆಡುವುದಿಲ್ಲ, ಯಾಕೆ? ಇಲ್ಲಿ, ತಸ್ಲೀಮಾ ನಸ್ರೀನರ ಮೇಲೆ ಆಗುತ್ತ ಬಂದಿರುವ ದಾಳಿಯನ್ನು ನೋವಿನಿಂದ ನೆನೆಯುತ್ತಿ ದ್ದೇನೆ.

  ಆಕೆ ನಮ್ಮ ದೇಶದ ಪ್ರಜೆಯಲ್ಲದಿರಬಹುದು; ಹಲವರು ಹೇಳುವಂತೆ, ಬರಿಯ ಸಾಹಿತ್ಯಿಕ-ಕಲಾತ್ಮಕವಾದ ನೋಟದಿಂದ ನೋಡಿದರೂ, ತೀರ ಎರಡನೆಯ ದರ್ಜೆಯ, ಅಥವಾ ಅದಕ್ಕಿಂತ ಕಡಿಮೆ ದರ್ಜೆಯ, ಲೇಖಕಿಯಾಗಿರಬಹುದು. ಆದರೆ, ‘ನನ್ನ ಬಂಗಾಳ, ನನ್ನ ಕೋಲ್ಕತ್ತ, ನನ್ನ ಬಾಂಗ್ಲಾ ನುಡಿ’ ಎಂದು ಮನಕಲಕುವಂತೆ ಹಲುಬುವ, ಕನವರಿಸುವ ಆ ಹೆಣ್ಣುಮಗಳ ಪರವಾಗಿ ನಾವು ನಿಲ್ಲದೆಯೇ ಹೋದೆವಲ್ಲ! ಪಶ್ಚಿಮ ಬಂಗಾಳದ ವಾಮಪಂಥೀಯ ಸರ್ಕಾರ ಮತ್ತು ಸೂಪರ್‌ಪವರ್ ದರ್ಜೆಯ ಕನಸು ಕಾಣುವ ಭಾರತದ ಘನ ಸರ್ಕಾರಗಳೆರಡೂ ಆಕೆಯನ್ನು ದೇಶದಿಂದಲೇ ಹೊರದೂಡಿ ದುವಲ್ಲ!

  ಅದೂ ಈ ನಮ್ಮ ದೇಶವು ಆಕೆಗೆ ಅಭಯ, ಆಶ್ರಯಗಳನ್ನು ಕೊಟ್ಟಾದ ಮೇಲೆ! ಮೇಲಾಗಿ, ನನ್ನದು ಎಂದು ನಾನು ತಿಳಿದಿರುವ ಈ ಬಳಗವು ಇಂಥವರನ್ನು ತನ್ನ ದೇಶದವರು, ಹೊರದೇಶದವರು ಎಂದು ವಿಂಗಡಿಸಿ ನೋಡಹತ್ತಿದ್ದು ಎಂದಿನಿಂದ? ಜಗತ್ತಿನ ನೊಂದವರೆಲ್ಲ ತನ್ನವರು ಅನ್ನುವಂಥದಲ್ಲವೇ, ನನ್ನ ಬಳಗ? ಸಂಕಟ ವಾಗುತ್ತದೆ, ನಾಚಿಕೆಯಾಗುತ್ತದೆ, ಸಿಟ್ಟು ಬರುತ್ತದೆ; ಯಾವುದು ಹೆಚ್ಚೋ, ಹೇಳಲಾರೆ.

  ಮತ್ತೊಂದು ಉದಾಹರಣೆ, ಈಗ್ಗೆ ಹತ್ತು ವರ್ಷದ ಹಿಂದೆ, ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಳು ಸೇರಿ ಹೊರತಂದ ‘ಕರ್ನಾಟಕ ಚಲನಚಿತ್ರ ಇತಿಹಾಸ’ ಅನ್ನುವ ಎರಡು ಸಂಪುಟಗಳ ಹೆಬ್ಬೊತ್ತಿಗೆಗೆ ಆದುದು. ಆ ವೇಳೆಯಲ್ಲಿ, ಆ ಹೊತ್ತಿಗೆಯ ಒಕ್ಕಣೆಯಲ್ಲಿ ಅಲ್ಲಿ ಇಲ್ಲಿ ತಮಗೆ ಒಪ್ಪಿಗೆಯಾಗುವಂಥದು ಇಲ್ಲವೆಂದೋ, ಅಲ್ಲಿ ಇಲ್ಲಿ ಅದು ಕೆಲವರನ್ನು ಕುರಿತು ಮಾಡಿರುವ ಟೀಕೆ-ಟಿಪ್ಪಣಿ ತಮಗೆ ಒಪ್ಪಿಗೆಯಾಗುವಂಥ ನುಡಿಗಟ್ಟಿನಲ್ಲಿಲ್ಲವೆಂದೋ ದೂರುವ ಬಲಿಷ್ಠರ ಒಂದು ಪಂಥವೇ ಹುಟ್ಟಿಕೊಂಡು, ಆ ಪಂಥವು ಮಾಡಿದ ವ್ಯವಸ್ಥಿತ ವಾದ ಒಳವೊಳಗಿನ ದಾಳಿಯಿಂದಾಗಿ ಆ ಪುಸ್ತಕದ ಮಾರಾಟವನ್ನೇ ನಿಷೇಧಿಸಲಾಯಿತು. ದುಃಖ ಮತ್ತು
  ಆತಂಕದ ಮಾತೆಂದರೆ, ಇವರೂ ನನ್ನ ಬಳಗವೇ ಎಂದು ನಾನು ಹೇಳಬಹುದಾದವರು ಕೂಡ ಆ ಪಂಥದ ಮುಂಚೂಣಿಯಲ್ಲಿದ್ದು ಆ ಪುಸ್ತಕ ಪತಂಗವನ್ನು ಕಡ್ಡಿಪೆಟ್ಟಿಗೆಯಲ್ಲಿ ಕೂಡಿಹಾಕಿದುದು.

  ಮುಕ್ತಿಯ ಪಥಕ್ಕೆ ಧರ್ಮಲಂಡರು, ಅಂದರೆ ಹಿಂದೂತ್ವ ವಾದಿಗಳು, ಇಸ್ಲಾಮೀಯತಾವಾದಿಗಳು ಮತ್ತು ಬೇರೆ ವಾದಪಂಥಗಳಿಗೆ ಸೇರಿದ ಅವರಂಥ ಬೇರೆಯವರು, ಅಡಚಣೆಯಾಗುವುದು ಆಶ್ಚರ್ಯದ ಮಾತಲ್ಲ. ಧರ್ಮಿಷ್ಠರೇ ಹಾಗೆ ಮಾಡುವುದು ಮಾತ್ರ ಆಶ್ಚರ್ಯದ ಮಾತಷ್ಟೇ ಅಲ್ಲ, ತುಂಬ ದುಃಖದ ಮಾತೂ ಹೌದು.
  -ರಘುನಂದನ, ರಂಗಕರ್ಮಿ .
  Prajavani 1-10-2013

  ಉತ್ತರ
  • akash
   ಜನ 17 2014

   ನೀವು ಪ್ರಜಾವಾಣಿಯೊಳಗೆ ಹೀಗೆ ಬರೆದಿದ್ದೀರಾ? ಇದನ್ನು ಪ್ರಜಾವಾಣಿ ಪ್ರಕಟಿಸಿದೆಯೆ ಆಶ್ಚರ್ಯ ಸರ್.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments