ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 2, 2013

2

ನನ್ನ ಗಾಂಧೀಜಿ

‍ನಿಲುಮೆ ಮೂಲಕ

-ಬಿಂಧು ಮಾಧವಿ,ಹೈದರಾಬಾದ್

ಗಾಂಧೀಜಿ ನಮ್ಮೆಲ್ಲರಿಗೂ ಸೇರಿದವರು, ಹಾಗಿದ್ದರೂ ಏಕೆ ಈ ಶಿರೋನಾಮೆ ಎಂದು ಕೇಳುವಿರಾ? ಏಕೆಂದರೆ ಗಾಂಧೀಜಿ ಎನ್ನುತ್ತಿದ್ದಂತೆ ಒಬ್ಬೊಬ್ಬೊರಗೂ ಅವರದೇ ಆದ ಒಂದು ರೂಪು ಮನಸ್ಸಿನಲ್ಲಿ ಮೂಡುವುದು. ಗಾಂಧೀಜಿ ಎಂದರೆ ನನ್ನ ಮನಸ್ಸಿನಲ್ಲಿ ಬರುವ ಚಿತ್ರಗಳ ಬಗ್ಗೆ ಈ ಲೇಖನ, ಹಾಗಾಗಿ ಇದು, ನನ್ನ ಗಾಂಧೀಜಿ.

ಮಹಾತ್ಮಾ ಗಾಂಧಿ ಎನ್ನುತ್ತಿದ್ದಂತೆ ಒಂದೇ ಎರಡೇ ಹಲವಾರು ಚಿತ್ರಗಳು, ವಿಷಯಗಳು, ಕವಿತೆಗಳು ಮತ್ತು ಪುಸ್ತಕಗಳು ನನ್ನ ಮುಂದೆ ಬಂದು ನಿಲ್ಲುತ್ತವೆ. ಎಲ್ಲಿಂದ ಪ್ರಾರಂಭಿಸಲಿ? ಬಹುಶಃ ಕಣ್ಣಮುಂದೆ ಬಂದು ನಿಲ್ಲುವ ಮೊಟ್ಟಮೊದಲ ಚಿತ್ರ ರಿಚರ್ಡ್ ಅಟೆನ್ ಬರೋ ತೆಗೆದೆ ಆಂಗ್ಲ ಚಲನ ಚಿತ್ರ  ’ಗಾಂಧಿ’ . ಅದರಲ್ಲಿನ ಗಾಂಧಿ ಪಾತ್ರಧಾರಿ ಬೆನ್ ಕಿಂಗ್ಸ್ಲೇ. ಅವರು ಯಾವತ್ತಿದ್ದರೂ ನಮ್ಮ ಪಾಲಿಗೆ ಗಾಂಧಿಯೇ ಹೊರತು ಬೆನ್ ಕಿಂಗ್ಸ್ ಲೇ ಅಲ್ಲ. ಅದರಲ್ಲಿನ ಚಾರ್ಲ್ಸ್ ನ ಪಾತ್ರ, ಕಸ್ತೂರಿ ಬಾ ಪಾತ್ರ, ಜಿನ್ನಾ ಎಲ್ಲರೂ ಪಾತ್ರಗಳಾಗಿ ಕಾಣುವರೇ ಹೊರತು, ಪಾತ್ರಧಾರಿಗಳು ಎಂದು ಎನಿಸುವುದಿಲ್ಲ. ಚಿಕ್ಕಂದಿನಿಂದಲೇ ನಮಗೆ ಈ ರೀತಿಯ ಚಿತ್ರಗಳನ್ನು ತೋರಿಸಿ ನಮಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶಭಕ್ತಿಯ ಬಗ್ಗೆ, ಸಮಾನತೆಯ ಬಗ್ಗೆ ಅರಿವು ಮೂಡಿಸಿದ ನನ್ನ ತಂದೆ ತಾಯಿಗೆ ನಾನು ಎಂದೂ ಚಿರ ಋಣಿ. ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿದರು, ಆ ಬ್ರ‍ಿಟಿಷರೇ ಏಕೆ ಇಡೀ ವಿಶ್ವವೇ ಗಾಂಧೀಜಿಯ ಮುಂದೆ ತಲೆಬಾಗಿತು. ನೋಡು ಒಬ್ಬ ಆಂಗ್ಲ ನಿರ್ದೇಶಕನು ಗಾಂಧಿ ಚಿತ್ರವನ್ನು ಎಷ್ಟರಮಟ್ಟಿಗೆ ತೆಗೆದಿದ್ದಾನೆ, ಅದನ್ನು ಆಂಗ್ಲ ಕಲಾವಿದ ಬೆನ್ ಕಿಂಗ್ಸ್ ಲೇ ಎಷ್ಟು ಸಮಂಜಸವಾಗಿ ಮಾಡಿದ್ದಾನೆ ಎಂದು ನನ್ನ ಅಮ್ಮ ಹೇಳಿದ ನುಡಿಗಳು ಇಂದಿಗೂ ನೆನಪಿದೆ. ಹಾಗಾಗಿ ನಾನೂ ಕೂಡ ನನ್ನ ಐದು ವರ್ಷದ ಮಗಳಿಗೆ ಇಂದು ಬೆಳಿಗ್ಗೆ youtube ನಲ್ಲಿ ಗಾಂಧಿ ಚಿತ್ರವನ್ನು ಹಾಗಿ ತೋರಿಸುತ್ತಿದ್ದೆ. ಅವಳೂ ಆಸಕ್ತಿಯಿಂದ ನೋಡುತ್ತಿದ್ದಳು, ಗೆಳೆಯರು ಬಂದು ಆಡಲು ಕರೆಯುವವರೆಗೆ!! ಒಂದು ವೇಳೆ ಅವಳು ಚಿತ್ರವನ್ನು ಕಡೆಯವರೆಗೆ ನೋಡಿದರೆ, ಅವಳು ಗಾಂಧೀಜಿಯನ್ನು ಏಕೆ ಕೊಂದರು ಎಂದು ಕೇಳುತ್ತಾಳೆ. ಐದು ವರ್ಷದ ಅವಳಿಗೆ ಸತ್ಯಕ್ಕಾಗಿ ಹೋರಾಡಿದವರಿಗೆ, ನ್ಯಾಯಕ್ಕಾಗಿ ಹೋರಾಡಿದ ಗಾಂಧಿತಾತನಿಗೆ ಈ ರೀತಿಯ ಅಂತ್ಯ ಎಂದು ತಿಳಿದರೆ, ಅವಳಿಗೆ ಸತ್ಯಕ್ಕೇ ಜಯ, ಎಂಬ ಮಾತಿನ ಮೇಲೆ ನಂಬಿಕೆಯೇ ಬರುವುದಿಲ್ಲ. ಹಾಗಾಗಿ ಚಿತ್ರವನ್ನು ಕೊನೆಯ ತನಕ ತೋರಿಸಬೇಕೇ ಬೇಡವೇ ಎಂಬ ಪ್ರಶ್ನೆ ನನ್ನ ಮುಂದೆ!

ಗಾಂಧೀಜಿ ಎನ್ನುತ್ತಿದ್ದಂತೆ ನನ್ನ ಮನಸ್ಸಿನ ಮುಂದೆ ಸುಳಿಯುವ ಮತ್ತೊಂದು ಚಿತ್ರವೆಂದರೆ, ಮೈಸೂರಿನ ಮಾನಸಗಂಗೋತ್ರಿಯ ’Gandhian Studies’ ಎಂಬ ವಿದ್ಯಾ ಕೇಂದ್ರ. ಈಗ ಅಲ್ಲಿ ಆ ಕೇಂದ್ರ ಕಾರ್ಯನಿರತವಾಗಿದೆಯೋ ಇಲ್ಲವೋ ತಿಳಿದಿಲ್ಲ. ಬಹುಶಃ ಆಗ ನಾನು ಹತ್ತನೇ ತರಗತಿಯಲ್ಲಿ ಇದ್ದೆ. Competition Success Review  ಎಂಬ ಮಾಸಪತ್ರಿಕೆಯಲ್ಲಿ ಗಾಂಧೀಜಿ ಬಗ್ಗೆ ಪ್ರಬಂಧದ ಸ್ಪರ್ಧೆ ಇತ್ತು. ಅಲ್ಲಿಯವರೆಗೆ ನನಗೆ ಸ್ಪರ್ಧೆ ಎಂದರೆ, ಎಲ್ಲವನ್ನೂ ಮನನ ಮಾಡಿಕೊಂಡು ಯಾವುದೇ ಪುಸ್ತಕದ ಸಹಾಯವಿಲ್ಲದೇ ಬರೆಯಬೇಕು ಎಂದು. ಪರೀಕ್ಷೆಯಲ್ಲಿ ಬರೆದಂತೆ. ಈ ಪತ್ರಿಕೆಗೆ ನಾವು ಎಲ್ಲಾ ಪುಸ್ತಕಗಳನ್ನೂ ಅಧ್ಯಯನ ಮಾಡಿ ಪ್ರಬಂಧ ಬರೆದು ಅಂಚೆಯಲ್ಲಿ ಕಳುಹಿಸಬೇಕಾಗಿತ್ತು. ಇದು ಬಹಳ ಸುಲಭದ ಕೆಲಸ ಎಂದು ನನಗೆ ಅನ್ನಿಸಿತು. ನನ್ನ ತಂದೆ ತಾಯಿ ಇಬ್ಬರೂ ಶಿಕ್ಷಣ ಕ್ಷೇತ್ರದಲ್ಲಿದ್ದುದರಿಂದ ಅವರ ಮಾರ್ಗದರ್ಶನ ಎಂದಿಗೂ ಹೇರಳವಾಗಿರುತ್ತಿತ್ತು. ಅಷ್ಟು ಸಾಲದು ಎಂದು ನಮ್ಮ ಕುಟುಂಬದ ಮಿತ್ರರೊಬ್ಬರು, ಅವರ ಹೆಸರು ಗಂಗಮ್ಮ, ನನ್ನನ್ನು ಈ ಮಾನಸಗಂಗೋತ್ರಿಯ ’ಗಾಂಧಿಯನ್ ಸ್ಟಡೀಸ್’ ಗೆ ಕರೆದುಕೊಂಡು ಹೋದರು. ನೀನು ನಿನಗೆ ಬೇಕಾದ ಪುಸ್ತಕಗಳನ್ನು ಆರಿಸಿಕೋ ನನ್ನ ಕಾರ್ಡ್ ನಲ್ಲಿ ಅದನ್ನು ನೀನು ಎರವಲು ಪಡೆಯಬಹುದು ಎಂದರು.   I can still feel the silence, the aroma the captivity of that place. ಪ್ರತಿಯೊಂದು ಪುಸ್ತಕಗಳೂ ಗಾಂಧಿಯ ಬಗ್ಗೆ. ಅಲ್ಲಿಗೆ ಬರುವ ಪ್ರತಿಯೊಬ್ಬರೂ ಬುದ್ಧಿಜೀವಿಗಳೇ, ಗಾಂಧಿಯ ಉಪಾಸಕರೇ ಹಾಗಾಗಿ ಆ ಗ್ರಂಥಾಲಯ positve energy ಇಂದ ತುಂಬಿ ತುಳುಕುತ್ತಿತ್ತು. ಪುಸ್ತಕಗಳನ್ನು ತೆಗೆದುಕೊಳ್ಳುವ ಮುನ್ನ ಅವರು ನನ್ನನ್ನು ಗಾಂಧೀ ಅಧ್ಯಯನದ ಕೆಲವು ಉಪನ್ಯಾಸಕರ ಬಳಿ ಕರೆದುಕೊಂಡು ಹೋದರು. ಬಹುಶಃ ಒಬ್ಬ ಅಧ್ಯಾಪಕಿಯ ಹೆಸರು ಸರಸ್ವತಿ ಎಂದು. ನಾನು ಅವರಿಗೆ, ನಾನು ಗಾಂಧೀಜಿಯ ಬಗ್ಗೆ ಪ್ರಬಂಧ ಬರೆಯಬೇಕು ಎಂದು ಹೇಳಿದೆ. ಅದಕ್ಕೆ ಅವರು ’ಗಾಂಧೀಜಿಯ ಬಗ್ಗೆ ಏನು ಬರೆಯುತ್ತೀಯ? ಅವರು ಸಾಗರವಿದ್ದಂತೆ. ಅವರ ಬಗ್ಗೆ ನಾವು ಎಷ್ಟು ಹೇಳಿದರೂ ಸಾಲದು, ಎಷ್ಟು ತಿಳಿದರೂ ಸಾಲದು. ನೀನು ಸಮುದ್ರಕ್ಕೆ ಹೋಗಿ ಒಂದು ಬೊಗಸೆ ನೀರು ತೆಗೆದುಕೊಂಡರೆ, ಇನ್ನೂ ಎಷ್ಟು ನೀರು ಇರುತ್ತದೆ ಅಲ್ಲಿ, ಹೌದಾ? ಸಮುದ್ರದ ನೀರನ್ನಷ್ಟೂ ನಾವು ತೆಗೆದುಕೊಳ್ಳಲ್ಲು ಸಾಧ್ಯವೇ? ಇಲ್ಲವಲ್ಲಾ? ಹಾಗೆಯೋ ಗಾಂಧೀಜಿ ಎಂದು ಹೇಳಿದರು.

ಆಗಲೇ ನನಗೆ ಗಾಂಧೀಜಿಯ ಬಗ್ಗೆ ಪ್ರಬಂಧ ಬರೆಯುವುದು ಸುಲಭ ಸಾಧ್ಯವಲ್ಲ ಎಂಬ ಅನುಮಾನ ಹುಟ್ಟಿತು. ನಂತರ ಮತ್ತೆ ನನ್ನನ್ನು ಗ್ರಂಥಾಲಯಕ್ಕೆ ಬಿಟ್ಟು ನನ್ನ ಗಂಗಮ್ಮ ಆಂಟಿ ಅವರ ತರಗತಿಗೆ ಹೋದರು. ಅವರೂ ಗಂಗೋತ್ರಿಯಲ್ಲಿ ಉಪನ್ಯಾಸಕರು. ಸರಸ್ವತಿ ಮೇಡಂ ಕೂಡ ನನಗೆ ಕೆಲವು ಪುಸ್ತಕಗಳ ಬಗ್ಗೆ ಹೇಳಿದ್ದರು, ಅಂತೆಯೇ ನಾನು ಅಲ್ಲಿ ಇದ್ದ ಪ್ರತಿಯೊಂದು ಪುಸ್ತಕವನ್ನೂ ನೋಡುತ್ತಿದ್ದೆ. ನನಗೆ ಆಗ ಅಷ್ಟೇ ಅಲ್ಲ, ಈಗಲೂ ಕೂಡ ಒಳ್ಳೆಯ print ಇರುವ, ಮುದ್ದಾದ ಅಕ್ಷರಗಳಿರುವ, ದಪ್ಪದಾದ ಹಾಳೆಯಿರುವ, ಗಟ್ಟಿ ಹೊರಮೈ ಇರುವ ಪುಸ್ತಕಗಳೆಂದರೆ ಬಲು ಪ್ರೀತಿ. ಅಲ್ಲಿ ಅಂತಹ ಪುಸ್ತಕಗಳು ಹೇರಳವಾಗಿದ್ದವು. ಗಾಂಧೀಜಿ ಬರೆದ My experiments with truth ಕೂಡ ಅಲ್ಲಿ ಇತ್ತು. ಹಾಗೆಯೇ ಅನೇಕ ಆಂಗ್ಲ ಲೇಖಕರ ಪುಸ್ತಕಗಳನ್ನು ಆರಿಸಿಕೊಂಡೆ. Gandhiji and women, Gandhi by Godse ಹೀಗೆ ಅನೇಕ ಪುಸ್ತಕಗಳು. ಒಂದು ಗ್ರಂಥಾಲಯದ ತುಂಬಾ ಒಬ್ಬ ವ್ಯಕ್ತಿಯ ಬಗ್ಗೆ ಪುಸ್ತಕಗಳು ಎಂದರೆ, ಅದು ಬಹುಶಃ ಗಾಂಧೀಜಿಯ ಬಗ್ಗೆ ಮಾತ್ರ ಸಾಧ್ಯ ಎಂದು ನನ್ನ ಎಣಿಕೆ. ಗಾಂಧೀಜಿಯ ಬಗ್ಗೆ ಎಷ್ಟು ಬರೆದರೂ ನನ್ನ ಪ್ರಬಂಧ ಮುಗಿಯುತ್ತಿರಲಿಲ್ಲ. ಬಹುಶಃ ಸ್ಪರ್ಧೆಗೆ ಕೊನೆಯ ದಿನಾಂಕ ಇದ್ದುದರಿಂದ ನಾನು ಪ್ರಬಂಧವನ್ನು ಮುಗಿಸಿ ಪತ್ರಿಕೆಗೆ ಕಳುಹಿಸಿದೆ. ನನಗೇನೂ ಬಹುಮಾನ ಬರಲಿಲ್ಲ. ಆಂಗ್ಲ ಭಾಷೆಯಲ್ಲಿ ನನಗೆ ಆಗ ಅಷ್ಟು ಹಿಡಿತ ಇರಲಿಲ್ಲ. ಅದೂ ರಾಷ್ಟ್ರಮಟ್ಟದ ಸ್ಪರ್ಧೆ. ಆದರೆ ಆ ಪುಸ್ತಕಗಳು, ಗಂಗೋತ್ರಿಯ ಆ ಗ್ರಂಥಾಲಯ ಅವೆಲ್ಲವೂ ನನಗೆ ಇಂದಿಗೂ ಅಪ್ಯಾಯಮಾನ. ನಾನು ಆಗ ಯಾವ ಯಾವ ಪುಸ್ತಕಗಳನ್ನು ಓದಿದ್ದೆ ಎಂಬ ಪಟ್ಟಿ ನನಗೆ ಸಿಕ್ಕರೆ, ಈಗಲೂ ಆ ಪುಸ್ತಕಗಳನ್ನು ಓದಬೇಕೆಂಬುವ ತವಕ.

ಹಾಗೆಯೇ ಅಲಹಾಬಾದಿಗೆ ಹೋದಾಗ ಅಲ್ಲಿ ನೆಹ್ರೂವಿನ ಮನೆ ಆನಂದ ಭವನದಲ್ಲಿ ಗಾಂಧೀಜಿಯ ಆತ್ಮಚರಿತ್ರೆಯ ಕನ್ನಡದ ರೂಪಾಂತರ ಸಿಕ್ಕಿತು. ಅದು ಕರ್ಣಾಟಕದಲ್ಲಿ ದೊರಕುವುದೇ ಆದರೂ ಅಲಹಾಬಾದಿನಲ್ಲಿ ಕನ್ನಡದ ಪುಸ್ತಕವಿದೆಯಲ್ಲ ಎಂದು ಅಲ್ಲಿ ಕೊಂಡುಕೊಂಡೆ.

ಗಾಂಧಿ ಎನ್ನುತ್ತಿದ್ದಂತೆ ನೆನಪಿಗೆ ಬರುವ ಹಾಡುಗಳು ಎರಡು, ಒಂದು, ’ದೇ ದಿ ಹಮೆ ಅಜ಼ಾದಿ ಬಿನಾ ಖಡ್ಗ್ ಬಿನಾ ಢಾಳ್, ಸಾಬರ್ ಮತೀ ಕೆ ಸಂತ್ ತೂನೆ ಕರ್ ದಿಯಾ ಕಮಾಲ್’ ಜಾಗೃತಿ ಚಿತ್ರದಿಂದ.

ಇನ್ನೊಂದು ಪದ್ಯವೆಂದರೆ

’ತಿಳಿನೀಲದಲ್ಲಿ ತಾ ನೀಲವಾಗಿ ಅವ ಹೋದ ದೂರ ದೂರ

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕ, ಇನ್ನೊಮ್ಮೆ ಏಕೆ ಬಾರ?

……………………………

ಹೋದ ಹೋದನವ ತ್ಯಾಗ ಜೀವನದ ತುಟ್ಟ ತುದಿಯನೇರಿ..

ಇದು ನನ್ನ ಗಾಂಧೀಜಿ.

2 ಟಿಪ್ಪಣಿಗಳು Post a comment
 1. ಆಕ್ಟೋ 3 2012

  > ಒಂದು ವೇಳೆ ಅವಳು ಚಿತ್ರವನ್ನು ಕಡೆಯವರೆಗೆ ನೋಡಿದರೆ, ಅವಳು ಗಾಂಧೀಜಿಯನ್ನು ಏಕೆ ಕೊಂದರು ಎಂದು ಕೇಳುತ್ತಾಳೆ.
  > ಐದು ವರ್ಷದ ಅವಳಿಗೆ ಸತ್ಯಕ್ಕಾಗಿ ಹೋರಾಡಿದವರಿಗೆ, ನ್ಯಾಯಕ್ಕಾಗಿ ಹೋರಾಡಿದ ಗಾಂಧಿತಾತನಿಗೆ ಈ ರೀತಿಯ ಅಂತ್ಯ ಎಂದು ತಿಳಿದರೆ,
  > ಅವಳಿಗೆ ಸತ್ಯಕ್ಕೇ ಜಯ, ಎಂಬ ಮಾತಿನ ಮೇಲೆ ನಂಬಿಕೆಯೇ ಬರುವುದಿಲ್ಲ
  ನಿಮಗಿನ್ನೂ ಸತ್ಯದ ಕುರಿತಾಗಿ ನಂಬಿಕೆಯಿಲ್ಲ ಎನಿಸುತ್ತದೆ.
  ಸತ್ಯದ ಕುರಿತಾಗಿ ನಂಬಿಕೆಯಿದ್ದರೆ, ಪೂರ್ಣ ಸತ್ಯವನ್ನು ತಿಳಿಸಲು ಸಂಶಯವೇಕೆ?
  ಮತ್ತು ಗಾಂಧೀಜಿಯವರ ಕೊಲೆಗೆ ಕಾರಣಗಳೇನು? ಅದರಲ್ಲಿ ಕೊಲೆ ಮಾಡಿದವನು ನಿಜಕ್ಕೂ ಖಳನಾಯಕನೇ ಅಥವಾ ಗಾಂಧೀಜಿಯ ಅನುಯಾಯಿಗಳು ಆತನನ್ನು ಖಳನಾಯಕನನ್ನಾಗಿ ಬಿಂಬಿಸಿರುವರೇ? ಈ ವಿಷಯಗಳನ್ನೂ ನೀವು ಅಧ್ಯಯನ ಮಾಡಬೇಕು.
  ಗಾಂಧೀಜಿಯವರ ಅನುಯಾಯಿಗಳು (ಅಥವಾ ಅವರ ಹೆಸರನ್ನು ತಮ್ಮ ಸ್ವಾರ್ಥದ ರಾಜಕಾರಣಕ್ಕೆ ಬಳಸಿಕೊಂಡವರು) ಮಾಡಿದ ಬಹಳ ದೊಡ್ಡ ಮೋಸವೆಂದರೆ, ಬೇರೆ ಯಾವ ಸ್ವಾತಂತ್ರ್ಯ ಹೋರಾಟಗಾರನ ಹೆಸರೂ ಗಾಂಧೀಜಿಯವರದಕ್ಕಿಂತ ಮೇಲೆ ಬರದಂತೆ ಮಾಡಿದ್ದು.
  ಇದೇ “ಅನುಯಾಯಿ”ಗಳು ಗಾಂಧೀಜಿಯವರ ಕೊಲೆಯಾದ ನಂತರ ನಡೆಸಿದ (ಅ)ಹಿಂಸೆಯ ಕೃತ್ಯಗಳು.
  ಸತ್ಯದ ಹುಡುಕಾಟ ನಡೆಸುವವರು, ಇದೇ ರೀತಿಯ ಬಹಳಷ್ಟು ಸತ್ಯಗಳನ್ನು ತಿಳಿಯಬೇಕಾಗುತ್ತದೆ – ಈ ಎಲ್ಲಾ ಸತ್ಯಗಳು ನಮ್ಮ ನಂಬಿಕೆಯ ರೀತ್ಯಾ ಇಲ್ಲದಿರಬಹುದು ಅಥವಾ ನಾವು ತಿಳಿದಿರುವುದಕ್ಕಿಂತ ತೀರಾ ಭಿನ್ನವಾಗಿರಬಹುದು; ಆದರೂ, ಅದು ಸತ್ಯ!!

  ಉತ್ತರ
 2. manju
  ಆಕ್ಟೋ 5 2013

  taahu innu1 pusthaka odabeku adu Gandhiya bagge baredantha amulyavada pusthaka adu Kannadakke anuvada adanthaha pusthaka adara esaru GANDHI ANthaka Gandhiye tumba adbuthavada pusthaka Gandhiya nija darshna niduvantha pusthaka

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments