ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 5, 2013

7

ಮಿ.ರಾಹುಲ್,ಹಿರೋಯಿಸಂ ಅನ್ನುವುದು ಸಿನೆಮಾಗಳಲ್ಲೇ ಚೆನ್ನ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Rahul Gandhiಕಾಂಗ್ರೆಸ್ಸಿನ ನಾಯಕರಾಗಿದ್ದಂತಹ ಅರ್ಜುನ್ ಸಿಂಗ್ ಅವರ ಆತ್ಮಕತೆ ‘A Grain of Sand in the Hourglass of Time’ ಯಲ್ಲಿ ಒಂದು ಪ್ರಸಂಗವನ್ನು ದಾಖಲಿಸಿದ್ದಾರೆ ಅನ್ನುವ ವರದಿಯೊಂದು ಕಳೆದ ವರ್ಷ ಪತ್ರಿಕೆಗಳಲ್ಲಿ ಬಂದಿತ್ತು.ಅಲ್ಲಿ ಅವರು ಆಗಿನ್ನೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರದಿದ್ದ ಸೋನಿಯಾ ಅವರನ್ನು ಪಕ್ಷಕ್ಕೆ ಕರೆ ತಂದು ಅಧ್ಯಕ್ಷೆಯ ಪಟ್ಟಕಟ್ಟುವ ಬಗ್ಗೆ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಬಳಿ ಮಾತನಾಡಲು ಸೀತರಾಂ ಕೇಸರಿ ಮತ್ತಿತ್ತರರೊಂದಿಗೆ ಹೋಗಿರುತ್ತಾರೆ. ಸೋನಿಯಾರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಇವರ ಮಾತನ್ನು ಕೇಳಿ ಕ್ಷಣಕಾಲ ಸುಮ್ಮನಿದ್ದ ಪಿವಿಎನ್ ಒಮ್ಮೆಲೇ ” ರೈಲಿನ ಕಂಪಾರ್ಟ್-ಮೆಂಟ್ ಗಳನ್ನು ಇಂಜಿನ್ನಿಗೆ ಜೋಡಿಸಿದಂತೆ,ಕಾಂಗ್ರೆಸ್ಸ್ ಅನ್ನು ನೆಹರೂ ಕುಟುಂಬಕ್ಕೆ ಜೋತು ಬೀಳಿಸುವುದೇಕೆ? ಬೇರೆ ದಾರಿಗಳಿಲ್ಲವೇ ನಮ್ಮ ಮುಂದೆ?” ಅಂತ ಸಿಡುಕುತ್ತಾರೆ. ಕಾಂಗ್ರೆಸ್ಸಿನಂತ ಲಕೋಟೆ ಪಕ್ಷದಲ್ಲಿ ಪಿವಿಎನ್ ಮತ್ತು ಸೀತರಾಂ ಕೇಸರಿಯವರನ್ನು ಆಮೇಲೆ ಹೇಗೆ ನಡೆಸಿಕೊಳ್ಳಲಾಯಿತು ಅನ್ನುವುದೆಲ್ಲ ಮತ್ತೆ ಬಿಡಿಸಿ ಹೇಳಬೇಕಿಲ್ಲ.

೧೨೮ ವರ್ಷಗಳ ಇತಿಹಾಸ ಹೊಂದಿರೋ ಈ ರಾಷ್ಟ್ರೀಯ ಪಕ್ಷಕ್ಕೆ “ನೆಹರೂ ಕುಟುಂಬ”ದ ಬೋಗಿಯನ್ನು ಮೊದಲಿಗೆ ಜೋಡಿಸಿದ್ದು ಮಹಾತ್ಮ ಗಾಂಧೀಜಿ.ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ಅಂತ ದಿಗ್ಗಜರನ್ನೆಲ್ಲ ಬದಿಗೆ ಸರಿಸಿ ಜವಹರಲಾಲ್ ನೆಹರೂ ಅವರನ್ನು ಗಾಂಧೀಜಿ ಮುನ್ನೆಲೆಗೆ ತಂದ ಹಿನ್ನೆಲೆಯೇನು ಅನ್ನುವುದರ ಬಗ್ಗೆ ಇವತ್ತಿಗೂ ಬೇರೆ ಬೇರೆ ಕತೆಗಳಿವೆ.ನೆಹರೂ ನಂತರ ಬಂದ ಇಂದಿರಾ ಅವರು ನೆಹರೂಗಿಂತ ಉತ್ತಮವಾಗಿ ದೇಶವನ್ನು ಮುನ್ನಡೆಸಿದರೂ, ಸುಲಭವಾಗಿ ದಕ್ಕಿದ್ದಂತಹ ಪ್ರಧಾನಿ ಹುದ್ದೆ ಅವರೊಳಗಿನ ಸರ್ವಾಧಿಕಾರಿಯನ್ನು ಜಾಗೃತಗೊಳಿಸಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಕಪ್ಪುಚುಕ್ಕೆ “ಎಮರ್ಜೆನ್ಸಿ”ಯ ದಿನಗಳಿಗೆ ಕಾರಣವಾಯಿತು. (ಆದರೆ ಕರ್ನಾಟಕದ ಕೆಲವು ಬುದ್ಧಿಜೀವಿಗಳಿಗೆ ಈಗಲೂ ಕಾಂಗ್ರೆಸ್ಸ್ ಪ್ರಜಾಪ್ರಭುತ್ವದ ರಕ್ಷಕನಂತೆ,”ಬತ್ತಲಾರದ ಗಂಗೆ” ಕಾಣುತ್ತದೆ…! ) ಇಂದಿರಾ ಹಂತಕರ ಗುಂಡಿಗೆ ಬಲಿಯಾದ ನಂತರ ಕಾಂಗ್ರೆಸ್ಸ್ ರೈಲಿನ ಬೋಗಿಗೆ ’ರಾಜೀವ್’ ಜೋಡಣೆಯಾದರು.

ರಾಜಕೀಯವನ್ನು ಅಮ್ಮ ಇಂದಿರಾ ಮತ್ತು ಸಹೋದರ ಸಂಜಯ್ ಪಾಲಿಗೆ ಬಿಟ್ಟು, ತಮ್ಮ ಪಾಡಿಗೆ ತಾವು ಪೈಲಟ್ ಆಗಿದ್ದಂತಹ ರಾಜೀವರನ್ನು ಕಾಂಗ್ರೆಸ್ಸಿನ ವಂದಿ ಮಾಗಧರು ತಂದು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದರು.ಯಾವುದೇ ರಾಜಕೀಯ ಅನುಭವ ಇಲ್ಲದೇ ಕೇವಲ ಅಮ್ಮನ ಹೆಸರಿನಲ್ಲಿ ಬಂದು ಕೂತ ರಾಜೀವ್, “ಶಾ ಬಾನು ಪ್ರಕರಣ,ರಾಮಜನ್ಮ ಭೂಮಿ ವಿವಾದ,ಭೋಪಾಲ್ ಅನಿಲ ದುರಂತದ ರೂವಾರಿಯನ್ನು ದೇಶ ಬಿಟ್ಟು ಕಳುಹಿಸಿದ್ದು” ಹೀಗೆ ತೆಗೆದುಕೊಂಡ ಸಾಲು ಸಾಲು ತಪ್ಪು ನಿರ್ಧಾರಗಳು ಮತ್ತು ಅಂತಿಮವಾಗಿ ಶ್ರೀಲಂಕಾಕ್ಕೆ ಭಾರತೀಯ ಶಾಂತಿಪಾಲನ ಪಡೆಯನ್ನು ಕಳುಹಿಸುವ ನಿರ್ಧಾರ ಅವರ ಪ್ರಾಣವನ್ನೇ ಬಲಿತೆಗೆದುಕೊಂಡಿದ್ದು ವಿಪರ್ಯಾಸ.

ರಾಜೀವ್ ನಂತರ ಕಾಂಗ್ರೆಸ್ಸ್ ರೈಲಿಗೆ ಜೋಡಣೆಯಗಿದ್ದು ಸೋನಿಯಾ.ಸೋನಿಯಾ ಪ್ರಧಾನಿಯಾಗಲು ನಿರಾಕರಿಸಿದ ಮಹಾನ್ ನಾಯಕಿ ಅನ್ನುವುದು ಕಾಂಗ್ರೆಸ್ಸಿಗರ ಅಂಬೋಣವಾದರೆ, ಪ್ರಧಾನಿ ಹುದ್ದೆಗೆ ಅಡ್ಡಲಾದ ಅಂಶಗಳ ಬಗ್ಗೆ ಬೇರೆ ಬೇರೆ ಚರ್ಚೆಗಳೂ ಇವತ್ತಿಗೂ ಚಾಲ್ತಿಯಲ್ಲಿವೆ.ಹೀಗಿರುವಾಗ ಮತ್ತೊಂದು ಬೋಗಿಯ ಜೋಡಣೆಯಾಯಿತು “ರಾಹುಲ್” ರೂಪದಲ್ಲಿ. ೨೦೦೪ ರಲ್ಲಿ ಸಂಸದರಾಗಿ ಆಯ್ಕೆಯಾದಗಿನಿಂದ ಇವತ್ತಿನವರೆಗಿನ ಈ ೯ ವರ್ಷಗಳಲ್ಲಿ ತಮ್ಮ ಭಟ್ಟಂಗಿ ಮೀಡಿಯಾಗಳಿಂದ,ಪಕ್ಷದ ನಾಯಕರಿಂದ “ಯುವರಾಜ,ಭವಿಷ್ಯದ ಪ್ರಧಾನಿ” ಅಂತೆಲ್ಲ ಬಹುಪರಾಕ್ ಹಾಕಿಸಿಕೊಂಡಿದ್ದು ಬಿಟ್ಟರೆ “ರಾಹುಲ್” ಈ ದೇಶಕ್ಕೆ ನೀಡಿದ ಕೊಡುಗೆಯೇನು? ಅಷ್ಟಕ್ಕೂ,ದೇಶವನ್ನು ಆಳುತಿದ್ದ ರಾಜ-ಮಹಾರಾಜರ ಕಾಲ ಮುಗಿದು ಪ್ರಜಾಪ್ರಭುತ್ವ ಇರುವ ಈ ನಾಡಿನಲ್ಲಿ ಈಗ ಮತ್ತೆಲ್ಲಿಂದ ಬಂದರು ಈ “ಯುವರಾಜ”? ರಾಹುಲ್ ಅವರನ್ನು ಮುಗ್ಧ ಅನ್ನುವ ನಮ್ಮ ಅವಕಾಶಮೂರ್ತಿಗಳಿಗೆ “ಯುವರಾಜ”ನ ಸಾಧನೆಯೇನು ಅಂತ ಕೇಳಬೇಕೆನಿಸಲಿಲ್ಲವೇ?
ರಾಹುಲ್ ಗಾಂಧಿ ಪ್ರಧಾನಿಯಾಗ ಬಹುದಾದರೆ ನನ್ನಂತಹ ಮತ್ತು ನಿಮ್ಮಂತಹ ಯುವಕರು ಯಾಕಾಗಬಾರದು? ಅನ್ನುವ ಪ್ರಶ್ನೆ ನನಗೆ ರಾಹುಲ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿದ ದಿನದಿಂದಲೇ ಕಾಡುತ್ತಿದೆ.ಅದಕ್ಕೆ ಉತ್ತರವೂ ಬಹಳ ಸರಳವಾಗಿದೆ.ನಾನು/ನೀವು ’ಬತ್ತಲಾರದ ಗಂಗೆ’ ಪಕ್ಷದ ಮೊದಲ ಕುಟುಂಬದ ಕುಡಿಗಳಲ್ಲವಲ್ಲ.ಕುಡಿಗಳಾಗಿದ್ದರೆ,ಖುದ್ದು ನಮ್ಮ ಪ್ರಧಾನಿಯಿಂದಲೇ ಶುರುಮಾಡಿ ಎಲ್ಲ ಹೊಗಳುಭಟ್ಟರೂ ಬಹುಪರಾಕ್ ಹಾಕಿರುತಿದ್ದರು…!

ಯುವನಾಯಕ ಅಂತ ಅವರ ಬೆಂಬಲಿಗರಿಂದ ಕರೆಸಿಕೊಳ್ಳುವ ಈ  ಸೋ-ಕಾಲ್ಡ್ ಯುವನಾಯಕ ಕಳೆದ ೯ ವರ್ಷಗಳಲ್ಲಿ ಎಂದಾದರೂ ಒಮ್ಮೆ ಈ ದೇಶದ ಯುವಕರ ಗಮನ ಸೆಳೆಯುವ ಮಾತನಾಡಿದ್ದಾರೆಯೇ? “ಅಮ್ಮ ಅಧಿಕಾರ ವಿಷ ಮಗಾ” ಅಂತಿದ್ದರು ಅನ್ನುವುದನ್ನು ರಾಹುಲ್ ಭಾಷಣದಲ್ಲಿ ಹೇಳಿದ್ದನ್ನು ’ಅದ್ಭುತ’ ಅನ್ನಲು ಕೇವಲ ಸಾಗರಿಕ ಘೋಸ್ ರಂತವರಿಗೆ ಮಾತ್ರ ಸಾಧ್ಯವಷ್ಟೆ. “ಹೊಟ್ಟೆ ತುಂಬಾ ತಿನ್ನಿ,೧೦೦ ದಿನ ಕೆಲಸ ಮಾಡಿ,ಕಾಂಗ್ರೆಸ್ಸಿಗೆ ವೋಟು ಮಾಡಿ” ಅನ್ನುವ ಮಾತನ್ನು ಇವರ ಮುತ್ತಜ್ಜನ ಕಾಲದಿಂದಲೂ ಈ ದೇಶದ ಜನತೆ ಕೇಳುತ್ತಲೇ ಬಂದಿದ್ದಾರೆ.ನಮ್ಮ ಪೀಳಿಗೆಯವರ ಮುಂದೆ ಇಂತ ಸ್ಲೋಗನ್ನುಗಳ್ಳು ಹಾಸ್ಯಾಸ್ಪದವಾಗುತ್ತವೆ. ನಮಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಬಲ್ಲ ಸರ್ಕಾರ ಬೇಕೆ ಹೊರತು,ಸರ್ಕಾರಿ ಯೋಜನೆಗಳಿಗಾಗಿ ಸರತಿ ಸಾಲಿನಲ್ಲಿ ನಿಂತು ಕೈಯೊಡ್ಡುವಂತ ಗುಲಾಮಾಗಿರಿಯಲ್ಲ ಅನ್ನುವುದು ರಾಹುಲ್ ಅವರಿಗೂ ಮತ್ತು ಅವರಿಗೆ ಭಾಷಣ ಬರೆದುಕೊಡುವವರಿಗೂ ಅರ್ಥವಾದಂತಿಲ್ಲ…!

ಈ ೯ ವರ್ಷಗಳಲ್ಲಿ ಸುಮ್ಮನಿದ್ದ ರಾಹುಲ್ ಮೊನ್ನೆ ಒಮ್ಮೆಲೆ ನಿದ್ರಾವಸ್ಥೆಯಿಂದ ಎದ್ದು ಬಂದವರಂತೆ, ಕಾಂಗ್ರೆಸ್ಸಿನ ಮಾಧ್ಯಮದ ವಿಭಾಗದ ಅಜಯ್ ಮಾಕೇನ್ ಅವರು ನಡೆಸುತಿದ್ದ ಮಾಧ್ಯಮ ಸಂವಾದದಲ್ಲಿ ಧಿಡೀರ್ ಪ್ರತ್ಯಕ್ಷರಾಗಿ “ಕಳಂಕಿತ ಜನಪ್ರತಿನಿಧಿಗಳ ರಕ್ಷಿಸುವ ಸಲುವಾಗಿ ಜಾರಿ ಮಾಡಲು ಹೊರಟಿರುವ ಸುಗ್ರೀವಾಜ್ನೆ ಸಂಪೂರ್ಣ ಮೂರ್ಖತನದ್ದು.ಇದನ್ನು ಹರಿದು ಕಸದ ಬುಟ್ಟಿಗೆ ಬಿಸಾಕಬೇಕು… ” ಅಂದು ಬಿಟ್ಟರು. ಸುಪ್ರೀಂ ಕೋರ್ಟು ಈ ಬಗ್ಗೆ ತೀರ್ಪು ನೀಡಿದಾಗ ಅದನ್ನು ರಾಹುಲ್ ಸ್ವಾಗತಿಸಿದ್ದು ಎಲ್ಲೂ ನೋಡಲಿಲ್ಲ,ಓದಲಿಲ್ಲ. ಖುದ್ದು ಸರ್ಕಾರವೇ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿ ಸುಪ್ರೀಂ ಕೋರ್ಟಿನಿಂದ ಟೀಕೆಗೊಳಗಾದಾಗಲೂ ರಾಹುಲ್ ತುಟಿ ಬಿಚ್ಚಲಿಲ್ಲ.ಸರ್ಕಾರ ಸುಗ್ರೀವಾಜ್ಞೆ ತಂದು ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟಾಗ ರಾಹುಲ್ ಏನು ಮಾಡುತಿದ್ದರು? ಕಾಂಗ್ರೆಸ್ಸಿನಂತ ಪಕ್ಷದಲ್ಲಿ ರಾಹುಲ್ ಅವರಿಗೆ ತಿಳಿಯದಂತೆ ನಡೆದಿರಬಹುದಾದ ವಿದ್ಯಾಮಾನವೇನಲ್ಲ ಅನ್ನುವುದು ಎಲ್ಲರಿಗೂ ತಿಳಿದಿರುವಂತದ್ದೇ.ತಮ್ಮ ಇಮೇಜಿನ ಕುರಿತು ಪಕ್ಷದೊಳಗೆ ಅಸಮಾಧಾನ ಮಡುಗಟ್ಟಿರುವ ಸಂದರ್ಭದಲ್ಲಿ, ಬಾಲಿವುಡ್ ಸಿನೆಮಾದಂತೆ “ಧಿಡೀರ್ ಹೀರೋ” ಆಗಲು ಹೊರಟು ನಿಂತರು ಅನ್ನಿಸುತ್ತದೆ.ಹಾಗೆ ಹೀರೋ ಆಗಲು ಹೊರಟು ತಮ್ಮದೇ ಪಕ್ಷದ ಮತ್ತು ತಮ್ಮದೇ ಸರ್ಕಾರದ ಪ್ರಧಾನಿಯನ್ನು ರಾಹುಲ್ ಅವಮಾನಿಸಿದರು. ಅವರ ನಿಲುವಿನ ಹಿಂದೆ ಯಾವುದೇ ರಾಜಕೀಯ ಲಾಭದ ಹವಣಿಕೆಯಿಲ್ಲವೆಂದಾಗಿದ್ದರೆ ಹೀಗೆ ಬಹಿರಂಗವಾಗಿ ಪ್ರಧಾನಿಗೆ ಮುಜಗರ ಮಾಡಬೇಕಿರಲಿಲ್ಲ. ಅಪರೂಪಕ್ಕೆಂಬಂತೆ ಮೌನಮೋಹನ್ ಸಿಂಗ್ ಅವರು “ಸುಗ್ರೀವಾಜ್ಞೆ” ಯನ್ನು ಪಕ್ಷದ ಕೋರ್ ಕಮಿಟಿಯಲ್ಲಿ,ಸಂಪುಟದಲ್ಲಿ ಮತ್ತು ಸೋನಿಯಾ ಅವರ ಗಮನಕ್ಕೆ ತಂದೇ ತರಲಾಗಿತ್ತು ಅಂತ ರಾಹುಲ್ ಅವರಿಗೆ ಸಣ್ಣಗೆ ಬಿಸಿ ಮುಟ್ಟಿಸಿದ್ದಾರೆ.

ರಾಹುಲ್ ಜೋಕುಗಳಿಗೆ ಅಂತರ್ಜಾಲದಲ್ಲಿ ಬರವಿಲ್ಲ. ಈ “ಸುಗ್ರೀವಾಜ್ಞೆ”ಯ ಮೇಲಿನ ಅವರ ನಿಲುವನ್ನು ಕುರಿತು ಏಕ್ತಾ ಅಗರ್ವಾಲ್ ಅನ್ನುವವರು ಮಾಡಿದ ಟ್ವೀಟ್ ಹೀಗಿದೆ “ಪ್ರಜಾಪ್ರತಿನಿಧಿ ಸುಗ್ರೀವಾಜ್ಞೆ” ನಾನ್ ಸೆನ್ಸ್ ಅನ್ನುವುದು ರಾಹುಲ್ ಅವರಿಗೆ ೩ ದಿನದ ನಂತರ ಅರ್ಥವಾಗಿದೆ.ಆದರೆ ಇದನ್ನು ದೂರಲು ತಾನು ಬಳಸಿದ ಶಬ್ಧ ಸರಿಯಲ್ಲ ಎಂದು ಅರಿಯಲು ೭ ದಿನ ತೆಗೆದುಕೊಂಡಿದ್ದಾರೆ.”

ಖುದ್ದು ರಾಷ್ಟ್ರಪತಿಗಳೇ “ಸುಗ್ರೀವಾಜ್ಞೆ” ಕುರಿತು ಕೇಂದ್ರದ ನಿಲುವನ್ನು ಪ್ರಶ್ನಿಸಿ ಹೊರಟಾಗ,ಸರ್ಕಾರ ಮುಜುಗರಕ್ಕೀಡಾಗುವ ಸಂದರ್ಭದಲ್ಲಿ ರಾಹುಲ್ ಮುಂದೆ ಬಂದರು. ಇನ್ನು ಕೇವಲ ಬಾಯಿ ಮಾತಿಗೆ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದ ಇತರ ರಾಜಕೀಯ ಪಕ್ಷಗಳಿಗೆ ಸಮೀಕರಿಸಿದಾಗ,ರಾಹುಲ್ ನಡೆಯ ಹಿಂದೆ ಏನೇ ಉದ್ದೇಶವಿರಲಿ,ಒಳ್ಳೆಯದು ಎಲ್ಲಿಂದ ಬಂದರೂ ಪಡೆದುಕೋ ಅನ್ನುವ ವೇದದ ಮಾತಿನಂತೆ ಅವರ “ನಾನ್ ಸೆನ್ಸ್” ಅನ್ನು ಅಭಿನಂದಿಸುತ್ತ,ಕ್ರಿಮಿನಲ್ ಜನಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸನ ಸಭೆಗಳಿಂದ ಹೊರಗಿಡಲು ಸುಪ್ರಿಂಕೋರ್ಟ್ ನೀಡಿದ ಐತಿಹಾಸಿಕ  ತೀರ್ಪು ಅನುಷ್ಟಾನಕ್ಕೆ ಬರಲಿ, ಆ ಮೂಲಕ ರಾಜಕೀಯ ಶುದ್ದೀಕರಣಕೆ ಓಂಕಾರವಾಗಲಿ ಎಂದು ಆಶಿಸುತ್ತೇನೆ.ಹಾಗೆಯೇ, ಮಿ.ರಾಹುಲ್ ಈ ಹಿರೋಯಿಸಂ ಅನ್ನುವುದು ಸಿನೆಮಾಗಳಲ್ಲೇ ಚೆನ್ನ ಮತ್ತು ಇಂತ ಹಿರೋಯಿಸಂಗಳಿಗೆಲ್ಲ ಈಗಿನ ಕಾಲದ ಯುವಕರು ಮರುಳಾಗುವುದಿಲ್ಲ ಅನ್ನುವುದನ್ನು ಅರಿತುಕೊಂಡು, ಅಪ್ಪನ ಹೆಸರಿನ ಅರ್ಹತೆಯನ್ನಿಟ್ಟುಕೊಂಡು ಪ್ರಧಾನಿಯಾಗುವ ಕನಸು ಕಾಣುವುದು ನಿಲ್ಲಿಸಿಬಿಡಿ.

ಚಿತ್ರಕೃಪೆ : www.ndtv.com

7 ಟಿಪ್ಪಣಿಗಳು Post a comment
  1. M.A.Sriranga
    ಆಕ್ಟೋ 5 2013

    India has to learn a lesson from the world’s big brother America. Just for one health care program(Obama Care) America govt is shut down since four days. In our central and state govt so many programs are running. During 2014 elections some more FREE offers may come. If some body tries to speak about it they will be branded with some name.

    ಉತ್ತರ
  2. THilak
    ಆಕ್ಟೋ 9 2013

    Kalam has told tht he was ready to make Sonia as PM and still u say it was a drama..!!! Also someone makes tall claims that he is against corruption and passes weakest lokayukta,, that is not drama??? Nilume Guys- Get well soon !!! Except that u are against congress, don say my country , against corruptions etc.. And start wearing Chaddi’s lol lol

    ಉತ್ತರ
    • M.A.Sriranga
      ಆಕ್ಟೋ 9 2013

      If Rahul’s stand was correct about SUGRIVAAGNE then why should he feel sorry for the words he spoken in that high melodramatic press meet? I think Mr, THilak you may
      know that Mahatma Gandhiji wanted to dissolve the Congress Party itself after getting independence in 1947. Do not think only Congress can save India. Others can also do that. They are also the citizens of our India. We are not suffering from any fever cold etc. We are alright. So there is no question of getting well soon. Why you brand a blog which is doing good work with some name? Please read today”s news paper. Karnataka Govt has set up a committee for SAMSKRUTIKARANA with Sri Baraguru Ramachandrappa as its president. You may feel happy.

      ಉತ್ತರ
      • THilak
        ಆಕ್ಟೋ 10 2013

        Funny – Who killed Gandhiji also started talking about his wishes. Gandhi Giri Zindabaad. Am sure Baraguru can make lot of changes much more than Nilume.. lol …for the betterment of Kannada.

        ಉತ್ತರ
    • Alok
      ಆಕ್ಟೋ 9 2013

      Thilak, can you give the proof where Kalam has mentioned that? Dr.Subramanyan Swami has given the background drama scenes on this.Everyone is aware of this now, so need to create a Tyagamayi role now. Why ru bringing Lokayukta here also? Dont divert the topic.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments