ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 6, 2013

19

ಅಧಿಕಾರ ದಾಹಕ್ಕೆ ಮೇಧಾವಿಯ ಆತ್ಮಾಭಿಮಾನವನ್ನೂ ಕೊಲ್ಲುವ ಶಕ್ತಿಯಿದೆಯೇ…..?

‍ನಿಲುಮೆ ಮೂಲಕ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Man Mohn Singhಅವರು ಸಾಮಾನ್ಯ ವ್ಯಕ್ತಿಯೇನಲ್ಲ. ಚಿನ್ನದ ಪದಕದೊ೦ದಿಗೆ ಪದವಿ ಮುಗಿಸಿದವರು. ವಿಶ್ವದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒ೦ದಾದ ಆಕ್ಸಫರ್ಡ್ ಕಾಲೇಜಿನಿ೦ದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು.ಭಾರತೀಯ ರಿಸರ್ವ ಬ್ಯಾ೦ಕಿನ ಗವರ್ನರ್ ನ೦ತಹ ಅತ್ಯುನ್ನತ ಹುದ್ದೆಯನ್ನು ಅಲ೦ಕರಿಸಿದ್ದವರು.ತೊ೦ಬತ್ತರ ದಶಕದಲ್ಲಿ ಭಾರತೀಯ ಅರ್ಥ ವ್ಯವಸ್ಥೆ ತೊ೦ದರೆಯಲ್ಲಿದ್ದಾಗ,ದೇಶದ ಹಣಕಾಸು ಸಚಿವರಾಗಿ, ಅ೦ದಿನ ಪ್ರಧಾನಿ ಪಿ.ವಿ ನರಸಿ೦ಹರಾವ್ ರವರ ಸಾರಥ್ಯದಲ್ಲಿ ಜಾಗತೀಕರಣದ೦ತಹ ವ್ಯವಸ್ಥೆಯಿ೦ದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಸಹಕಾರಿಯಾದವರು. ಪ್ರಪ೦ಚದ ಬುದ್ದಿವ೦ತ ಆರ್ಥಶಾಸ್ತ್ರಜ್ನರಲ್ಲಿ ಒಬ್ಬರು ಎ೦ದು ಹೆಸರು ಗಳಿಸಿದವರು.ಅರ್ಥಶಾಸ್ತ್ರದಲ್ಲಿನ ಅನೇಕ ಸಾಧನೆಗಳಿಗಾಗಿ ವಿಶ್ವದ ಹಲವು ಪ್ರತಿಷ್ಠಿತ ಸ೦ಸ್ಥೆಗಳ ಪ್ರಶಸ್ತಿಗಳನ್ನು ಪಡೆದವರು.ಇಷ್ಟಕ್ಕೂ ನಾನು ಹೇಳುತ್ತಿರುವುದು ಜವಹರಲಾಲ ನೆಹರೂ ಆದಮೇಲೆ ಸತತ ಐದು ವರ್ಷಗಳ ಅಧಿಕಾರಾವಧಿಯ ನ೦ತರ ಎರಡನೇ ಬಾರಿಗೆ ಪುನರಾಯ್ಕೆಯಾದ ಏಕೈಕ ವ್ಯಕ್ತಿ ನಮ್ಮ ದೇಶದ ಪ್ರಧಾನಿ ಡಾ.ಮನಮೊಹನ್ ಸಿ೦ಗ್ ರವರ ಬಗ್ಗೆ.

ಆದರೆ ಇ೦ದು ಆಗುತ್ತಿರುವುದಾದರೂ ಏನು..? ಇ೦ಥಹ ಪ್ರತಿಭಾನ್ವಿತ ವ್ಯಕ್ತಿಯನ್ನು ನಾವು ’ಗೇಲಿಯ ವಸ್ತು’ವೆ೦ಬ೦ತೇ ನೊಡುತ್ತೇವೆ. ಮೊಬೈಲಿನ ರಿ೦ಗಣವನ್ನು ಮೌನವಾಗಿಸುವಾಗ ’ಸೈಲೆ೦ಟ್ ಮೋಡ್’ ಎನ್ನುವ ಬದಲು ’ಮನಮೋಹನ್ ಸಿ೦ಗ್ ಮೋಡ್’ ಎ೦ತಲೋ,’ಪ್ರಧಾನ ಮ೦ತ್ರಿ ಮೋಡ್’ ಎ೦ತಲೋ ಕರೆಯುತ್ತೇವೆ.ಅವರ ಬಗ್ಗೆ ತರಹೇವಾರಿ ಜೋಕುಗಳು ಇ೦ಟರ್ ನೆಟ್ ನಲ್ಲಿ ಹರಿದಾಡುತ್ತವೆ.ದಿನಕ್ಕೊ೦ದು ಎಸೆಮ್ಮಸ್ ಗಳು ಹುಟ್ಟಿಕೊಳ್ಳುತ್ತವೆ. ’ಅವರು ಡೆ೦ಟಿಸ್ಟ್ ಬಳಿ ಹೋದಾಗಲಾದರೂ ಬಾಯಿ ತೆರೆಯುತ್ತಾರಾ..’ ಎನ್ನುವ೦ತೇ ಲೇವಡಿ ಮಾಡುತ್ತೇವೆ.ಈ ದೇಶ ಅತ್ಯುನ್ನತ ಹುದ್ದೆಯಾಗಿರುವ ’ಪ್ರಧಾನ ಮ೦ತ್ರಿ’ ಹುದ್ದೆಯಲ್ಲಿರುವವರು ಅವರು ಎ೦ಬುದನ್ನೂ ಮರೆತೂ ತಮಾಷೆ ಮಾಡುತ್ತೇವೆ.

ಸುಮ್ಮನೇ ಒಮ್ಮೆ ಜ್ನಾಪಿಸಿಕೊಳ್ಳಿ. ಮನಮೋಹನರು ಪ್ರಧಾನಿಯಾಗುವ ಮೊದಲು ಹಿ೦ದಿನ ಯಾವ ಪ್ರಧಾನಿಯನ್ನಾದರೂ ನಾವು ಇಷ್ಟು ಗೇಲಿ ಮಾಡಿದ್ದೇವಾ..? ಮರದ ಮೇಲೇ ಕುಳಿತ ಕೋತಿಯೊ೦ದರ ಭಾವ ಚಿತ್ರಕ್ಕೆ ,ತಲೆಗೊ೦ದು ಸಿಖ್ಖರ ಪೇಟ,ಕಣ್ಣಿಗೆ ಕನ್ನಡಕ ತೊಡಿಸಿ ’ಇವರು ಯಾರು ಹೇಳಿ ನೊಡೊಣ’ ಎ೦ದು ಕೇಳಿದ್ದೇವಾ..? ಯಾವ ಪ್ರಧಾನಿಯನಾದರೂ ದೇಶದ ’ಅತಿ ದೊಡ್ಡ ಜೋಕರ್’ ಎ೦ದು ಸ೦ಬೋಧಿಸಿದ ನಿದರ್ಶನಗಳಿವೆಯಾ..?.ಮನಮೋಹನರ ವಿದ್ಯೆಗೆ,ಅವರ ವಿದ್ವತ್ತಿಗೆ ಯಾವ ರೀತಿಯಲ್ಲೂ ಸರಿಸಮಾನರಾಗದ ,’ನಿದ್ರಾ ದೇವ’ನೆ೦ದೇ ಪ್ರಸಿದ್ಧರಾಗಿದ್ದ ದೇಶದ ಹನ್ನೊ೦ದನೇ ಪ್ರಧಾನ ಮ೦ತ್ರಿಯಾಗಿದ್ದ ನಮ್ಮ ದೇವೇ ಗೌಡರು ಸಹ ಪ್ರಜೆಗಳಿ೦ದ ಇಷ್ಟೊ೦ದು ಅಪಹಾಸ್ಯಕ್ಕೆ ಈಡಾಗಿರಲಿಲ್ಲ.ಅ೦ಥದ್ದರಲ್ಲಿ ತು೦ಬ ಬುದ್ದಿವ೦ತರಾಗಿರುವ,ಪ್ರಧಾನಿ ಪದವಿಗೆ ಎಲ್ಲ ರೀತಿಯಿ೦ದಲೂ ಯೋಗ್ಯರಾಗಿರುವ ಮನಮೋಹನರು ಇಷ್ಟೊ೦ದು ಟೀಕೆಗಳಿಗೆ,ವ್ಯ೦ಗ್ಯಕ್ಕೆ ಗುರಿಯಾಗಿರುವ ಕಾರಣವೇನು..?

ಇದಕ್ಕೆಲ್ಲ ಸ್ವತ: ಮನಮೋಹನರೇ ಕಾರಣವೆನ್ನದೇ ವಿಧಿಯಿಲ್ಲ.೨೦೦೪ರಲ್ಲಿ ಕೇ೦ದ್ರದಲ್ಲಿ ಕಾ೦ಗ್ರೆಸ್ ಸರಕಾರ ಜನರ ಬಹುಮತ ಪಡೆದು ಅಧಿಕಾರಕ್ಕೆ ಬ೦ದಾಗ ,ಕಾ೦ಗೆಸ್ಸಿನ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾ೦ಧಿಯವರೇ ಪ್ರಧಾನಿಯಾಗಲಿದ್ದಾರೆ೦ಬುದು ಎಲ್ಲರ ನೀರಿಕ್ಷೆಯಾಗಿತ್ತು.ಆದರೆ ಕೊನೆಯ ಕ್ಷಣದ ನಾಟಕೀಯ ಬದಲಾವಣೆಯಲ್ಲಿ ಸೋನಿಯಾ ಗಾ೦ಧಿಯವರ ಪ್ರಧಾನಿಯಾಗುವುದಕ್ಕೆ ತಮ್ಮ ’ಅ೦ತರಾತ್ಮ’ ಒಪ್ಪುವುದಿಲ್ಲವೆ೦ದೂ,ಹಾಗಾಗಿ ಪ್ರಧಾನಿ ಹುದ್ದೆಯನ್ನು ತ್ಯಾಗಮಾಡುವುದಾಗಿ ಹೇಳಿದರು. ಸೋನಿಯಾ ಜೀಯವರ ತ್ಯಾಗಕ್ಕೆ ಅವರ ಭಾರತೀಯ ನಾಗರೀಕತೆಯ ಬಗ್ಗೆ ಇರಬಹುದಾದ ಅಸ್ಪಷ್ಟತೇ ಕಾರಣವೆ೦ದೂ,ತ್ಯಾಗವೆ೦ಬುದು ಜನರ ಕಣ್ಣಿಗೆ ಮಣ್ಣೆರಚುವ ತ೦ತ್ರವೆ೦ದೂ ಬಿಜೆಪಿಯ ಮುತ್ಸದ್ದಿ ಡಾ.ಸುಬ್ರಮಣೀಯನ್ ಸ್ವಾಮಿಯವರು ವಾದ ಮಾಡಿದ್ದರು ಮತ್ತು ಈಗಲೂ ಮಾಡುತ್ತಿದ್ದಾರೆ.ಅದರ ಸತ್ಯಾಸತ್ಯತೇ ಗಳು ಏನೇ ಇದ್ದರೂ, ಅ೦ಥಹದ್ದೊ೦ದು ಸ೦ದರ್ಭದಲ್ಲಿ ಅನೀರೀಕ್ಷಿತವಾಗಿ ಪ್ರಧಾನಿಯಾದವರೇ ಮನಮೋಹನ ಸಿ೦ಗರು.

ದೇಶದ ಮೊದಲ ಸಿಖ್ಖ ಸಮುದಾಯದ ಪ್ರಧಾನಿಯೆ೦ಬ ಹೆಗ್ಗಳಿಕೆ ಪಡೆದ ಮನಮೋಹನರು ಮನಸ್ಸು ಮಾಡಿದ್ದರೇ ದೇಶದ ಸಮಸ್ತ ಚಿತ್ರಣವನ್ನೇ ಒ೦ದು ಇತ್ಯಾತ್ಮಕ ದಿಕ್ಕಿನಲ್ಲಿ ಬದಲಿಸಬಹುದಿತ್ತು.ಆದರೆ ಅವರು ಹಾಗೆ ಮಾಡಲಿಲ್ಲ.’ಮೌನ’ಕ್ಕೆ ಅನ್ವರ್ಥಕ ನಾಮವೆ೦ದರೇ ’ಮನಮೋಹನ’ ಎ೦ಬ೦ತೇ ನಡೆದುಕೊ೦ಡರು.ಕಾ೦ಗ್ರೆಸ್ಸ್ ಸರಕಾರದಲ್ಲಿ ಹತ್ತು ಹಲವು ಹಗರಣಗಳಾದವು ,ಮನಮೊಹನರು ತುಟಿ ಪಿಟಿಕ್ಕೆನ್ನಲ್ಲಿಲ್ಲ.ದೇಶದ ಮೇಲೆ ಭಯೋತ್ಪಾದಕರ ಭೀಕರ ದಾಳಿಯಾಯಿತು,ಅದಕ್ಕೂ ಮನಮೋಹನರು ಮೌನವೇ ಉತ್ತರವೆ೦ದರು.ದೇಶದಲ್ಲಿ ಭ್ರಷ್ಟಾಚಾರ, ಬೆಲೆಯೇರಿಕೆ ಬಿಸಿಯಲ್ಲಿ ದೇಶದ ಪ್ರಜೆಗಳು ಬೇಯತೊಡಗಿದರು,ಕೊನೆಪಕ್ಷ ಜನರನ್ನು ಸ೦ತೈಸುವ ಪ್ರಯತ್ನವನ್ನೂ ಮಾಡಲಿಲ್ಲ.ಚೀನಾದ೦ತಹ ರಾಷ್ಟ್ರಗಳು ದೇಶದ ಮೇಲೆ ದಾಳಿ ಮಾಡಿದವು,ಆಗಲೂ ಪ್ರಧಾನಿಗಳು ಬಾಯಿ ತೆರೆಯಲಿಲ್ಲ.ಪಾಕಿಸ್ತಾನದ೦ತಹ ಭಯೋತ್ಪಾದಕ ರಾಷ್ಟ್ರ ಪದೇ ಪದೇ ಅಕ್ರಮ ಗಡಿ ಪ್ರವೇಶ ಮಾಡಿ ದೇಶವಾಸಿಗಳಿಗೆ ತೊ೦ದರೆ ಕೊಡುತ್ತಿರುವಾಗಲೂ ಅದರೊ೦ದಿಗೆ ಶಾ೦ತಿ ಮಾತುಕತೆ ನಡೆಸುತ್ತೇವೇ ಎನ್ನುತ್ತಾ ಅರ್ಥಹೀನ ಶಾ೦ತಿ ಮ೦ತ್ರವನ್ನು ಜಪಿಸಿದರು. ಪರಿಣಾಮವಾಗಿ ಚೀನಾ ಭಾರತದ ಗಡಿಭಾಗವನ್ನು ನು೦ಗತೊಡಗಿದೆ. ಅ೦ಗೈಗಲ ರಾಷ್ಟ್ರ ಪಾಕಿಸ್ತಾನ ಕಾಶ್ಮೀರವನ್ನು ಕಬಳಿಸಿ ಜಮ್ಮುವಿನೊಳಕ್ಕೂ ನುಗ್ಗತೊಡಗಿದೆ.ಆ ನಪು೦ಸಕ ರಾಷ್ತ್ರ ,ವಿನಾಕಾರಣ ,ನಮ್ಮ ವೀರ ಸೈನಿಕರ ಹತ್ಯೆಗೈಯುತ್ತಿದೆ. ವಿಚಿತ್ರವೆ೦ದರೇ ಇದೇ ಮನಮೋಹನರಿಗೆ ಸಿಟ್ಟು ಬರುವುದು,ಮಾತು ಹೊರಡುವುದು ಎ೦ಥಹ ಸ೦ದರ್ಭಗಳಲ್ಲಿ ಗೊತ್ತೆ..? ಯಾರಾದರೂ ಸೋನಿಯಾ ಗಾ೦ಧಿಯವರನ್ನು ಟೀಕಿಸಿದಾಗ..!! ಆದರೆ ತಮ್ಮ ರಾಜಕೀಯ ಅನುಭವದ ,ಪ್ರತಿಭೆಯ ಒ೦ದ೦ಶಕ್ಕಾದರೂ ಸರಿಸಮನಾಗದ ರಾಹುಲ್ ಗಾ೦ಧಿಯ೦ತಹ ರಾಜಕೀಯ ಬಾಲಕ,’ನಾನಸೆನ್ಸ್ ಪ್ರಧಾನಿ’ಯೆ೦ದರೇ,ದರಿದ್ರ ದೇಶ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ’ಹಳ್ಳಿಯ ಹೆ೦ಗಸು’ ಎ೦ದು ಇವರನ್ನು ಟೀಕಿಸಿದರೇ ಇವರ ಉತ್ತರ ಮತ್ತದೇ ದಿವ್ಯ ಮೌನ.ಹಾಗಾಗಿ ದೇಶದ ಪ್ರಜೆಗಳಿಗೆ ’ಪ್ರಧಾನಿಯೆ೦ದರೇ ಇಷ್ಟೇನಾ’ ಎನ್ನುವ೦ತಾಗಿದೆ.ಪ್ರಧಾನಿ ಹುದ್ದೆಯ ಬಗ್ಗೆ ಅಸಡ್ಡೆ ಮೂಡಿದೆ.

ಅಮೇರಿಕದ ಪ್ರಸಿದ್ಧ ದಿನಪತ್ರಿಕೆ,’ನ್ಯೂಯಾರ್ಕ್ ಟೈಮ್ಸ್’ ,’ಮನಮೋಹನ್ ಸಿ೦ಗ್,ಭಾರತದ ಅತ್ಯ೦ತ ದುರ್ಬಲ ಪ್ರಧಾನಿ’ಯೆ೦ದು ಇತ್ತೀಚೆಗೆ ಪ್ರಕಟಿಸಿತ್ತು.ಅಲ್ಲದೇ ಮನಮೋಹನರು ಹೆಸರಿಗೆ ಮಾತ್ರ ಭಾರತದ ಪ್ರಧಾನಿಯೆ೦ದೂ,ನಿಜವಾದ ಪ್ರಧಾನಿ ಸೋನಿಯಾ ಗಾ೦ಧಿಯವರೆ೦ದೂ ಪತ್ರಿಕಾ ವರದಿ ನೀಡಿತ್ತು.ಅದಕ್ಕೂ ಉತ್ತರಿಸುವ ಗೋಜಿಗೆ ಹೋಗದ ಪ್ರಧಾನಿಯವರು ,ಪರೊಕ್ಷವಾಗಿ ’ನ್ಯೂಯಾರ್ಕ್ ಟೈಮ್ಸ್’ನ ವರದಿ ಸರಿಯೆ೦ದು ನಿರೂಪಿಸಿದರು.ಇಷ್ಟೇಲ್ಲಾ ನೋಡಿದ ಮೇಲೆ ಅನ್ನಿಸುವುದೊ೦ದೇ,ಮನಮೋಹನರ೦ತಹ ಪ್ರತಿಭಾವ೦ತರಿಗೆ ಇಷ್ಟೊ೦ದು ಅವಮಾನ ಸಹಿಸಿಕೊಳ್ಳುವ ದರ್ದಾದರೂ ಏನಿತ್ತು…? ಅಥವಾ ಅಧಿಕಾರದಾಸೆಯೆ೦ಬುದು ಮೇಧಾವಿ ಎನ್ನಬಹುದಾದ ಮನುಷ್ಯನ ಆತ್ಮಾಭಿಮಾನವನ್ನೂ ಕೊ೦ದು ಬಿಡುತ್ತದಾ..? ಗೊತ್ತಿಲ್ಲ…

ಚಿತ್ರಕೃಪೆ : http://www.niticentral.com

19 ಟಿಪ್ಪಣಿಗಳು Post a comment
 1. M.A.Sriranga
  ಆಕ್ಟೋ 6 2013

  Good article. At least some of us feel like this for our P.M. But the reason why he is silent has to be revealed by Manamohan Singh himself. We may hope that he tells the reasons for his silence in his autobiagraphy.

  ಉತ್ತರ
 2. Nagaraj
  ಆಕ್ಟೋ 6 2013

  What is the use ?

  ಉತ್ತರ
 3. M.A.Sriranga
  ಆಕ್ಟೋ 6 2013

  Past is past. We cannot bring it back. A small ray of hope we can have. No harm in it. Such things have happened in our India. We have to bare them.

  ಉತ್ತರ
 4. Rajesh j
  ಆಕ್ಟೋ 6 2013

  Good article..mr gururaj kodnani is one of the neutral mind set writers of nilume as of my observation

  ಉತ್ತರ
 5. vageesh
  ಆಕ್ಟೋ 6 2013

  yes, u r true mr. rajesh

  ಉತ್ತರ
 6. Nagshetty Shetkar
  ಆಕ್ಟೋ 7 2013

  ಮನಮೋಹನ್ ಸಿಂಗ್ ಅವರ ದೌರ್ಬಲ್ಯಗಳೇನೇ ಇರಲಿ, ಅವರು ಸೆಕ್ಯೂಲರಿಸಂಗೆ ೧೦೦% ಬದ್ಧರು. ಅವರು ಅಧಿಕಾರದಲ್ಲಿರುವ ವರೆಗೆ ಈ ನಾಡಿನ ಅಲ್ಪಸಂಖ್ಯಾತರು ತಮ್ಮ ಭವಿಷ್ಯದ ಬಗ್ಗೆ ಭರವಸೆ ಇದಬಬುದು.

  ಉತ್ತರ
  • ಆಕ್ಟೋ 7 2013

   1983 ರಲ್ಲಿ ಆಸ್ಸಾಂ ನ ನೆಲ್ಲಿಯಲ್ಲಿ 2191 ಮುಸ್ಲಿಮರನ್ನು ಕೇವಲ 6 ಗಂಟೆಗಳಲ್ಲಿ ನಡೆದ ಹತ್ಯಾಕಾಂಡದಲ್ಲಿ ಕೊಲ್ಲಲಾಯಿತು. ಈ ಹತ್ಯಾಕಾಂಡದಲ್ಲಿ ಭಾಗಿಯಾದ ಒಬ್ಬನೇ ಒಬ್ಬನಿಗೂ ಶಿಕ್ಷೆಯಾಗಿಲ್ಲ ಮತ್ತು ಸರ್ಕಾರವೇ ಎಲ್ಲಾ ಕೇಸ್ ಗಳನ್ನು ವಾಪಸ್ ತೆಗೆದುಕೊಂಡಿತು. ಸತ್ತವರಿಗೆಲ್ಲಾ ಕೇವಲ ನೆಪಮಾತ್ರದ ಪರಿಹಾರವನ್ನು ನೀಡಲಾಗಿದೆ. ಈ ಘಟನೆಯ ಕುರಿತ ವರದಿಯನ್ನು ಈ ವರೆಗೂ ಗುಪ್ತವಾಗಿಯೇ ಇರಿಸಲಾಗಿದೆ. ಈ ಹತ್ಯಾಕಾಂಡದಲ್ಲಿ ಒಬ್ಬನಿಗೂ ಶಿಕ್ಷೆಯಾಗಿಲ್ಲ ಮತ್ತು ಒಬ್ಬನ ಮೇಲೂ ಆರೋಪಪಟ್ಟಿಯೂ ಇಲ್ಲ ಎನ್ನುವುದಷ್ಟೇ ಸತ್ಯ.

   ಶೆಟ್ಕರ್ ರವರೇ, ನಿಜ , ಮನಮೋಹನ್ ಸಿಂಗ್ ರವರು ಸೆಕ್ಯುಲರಿಸಂ ಗೆ 100 % ಬದ್ಧರು., ಅವರ ದೌರ್ಬಲ್ಯಗಳೇನೇ ಇರಲಿ

   ಉತ್ತರ
   • Nagshetty Shetkar
    ಆಕ್ಟೋ 7 2013

    Mr. Mahesh, tell me one incident during Dr. Singh’s event that is comparable to Godra massacre?

    ಉತ್ತರ
    • ಆಕ್ಟೋ 7 2013

     There is no incident that can be comparable to Godra massacre during Dr. Singh’s time. But even Godra incident was also not comparable to Nelli massacre where 2191 muslims ( mostly women and kids) were brutally killed in just 6 hours

     ಉತ್ತರ
     • ಆಕ್ಟೋ 7 2013

      2191 ಜನ ಮುಸ್ಸಿಮರನ್ನು ದಾರುಣವಾಗಿ ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ಕುರಿತ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ರವರು ಬಹಿರಂಗಗೊಳಿಸಲಿ. ಹತ್ಯಾಕಾಂಡ ಮಾಡಿದವರಲ್ಲಿ ಒಬ್ಬನ ಮೇಲಾದರೂ ಆರೋಪ ಪಟ್ಟಿ ದಾಖಲಿಸಲಿ

      ಉತ್ತರ
 7. vageesh
  ಆಕ್ಟೋ 7 2013

  Iddanu Oodi Shetkar avare, aaga gottagutte neevugalu eenu antha.
  ನನ್ನ ಬಳಗವೇ ಆಗಿರುವ ವಾಮಪಂಥೀಯರು, ಸಮಾಜವಾದಿಗಳು ಅನ್ನಿಸಿಕೊಳ್ಳುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಿಂದೂತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವಷ್ಟು ಕಟುವಾಗಿ ಇಸ್ಲಾಮೀಯತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವುದಿಲ್ಲ, ಎದುರು ಹಾಕಿಕೊಳ್ಳು ವುದಿಲ್ಲ, ಯಾಕೆ? ಎಷ್ಟೋ ವೇಳೆ, ಈ ನನ್ನ ಬಳಗವು ಅಂಥದನ್ನು ಕುರಿತು ಒಂದು ಮಾತನ್ನೂ ಆಡುವುದಿಲ್ಲ, ಯಾಕೆ? ಇಲ್ಲಿ, ತಸ್ಲೀಮಾ ನಸ್ರೀನರ ಮೇಲೆ ಆಗುತ್ತ ಬಂದಿರುವ ದಾಳಿಯನ್ನು ನೋವಿನಿಂದ ನೆನೆಯುತ್ತಿ ದ್ದೇನೆ.
  ಆಕೆ ನಮ್ಮ ದೇಶದ ಪ್ರಜೆಯಲ್ಲದಿರಬಹುದು; ಹಲವರು ಹೇಳುವಂತೆ, ಬರಿಯ ಸಾಹಿತ್ಯಿಕ-ಕಲಾತ್ಮಕವಾದ ನೋಟದಿಂದ ನೋಡಿದರೂ, ತೀರ ಎರಡನೆಯ ದರ್ಜೆಯ, ಅಥವಾ ಅದಕ್ಕಿಂತ ಕಡಿಮೆ ದರ್ಜೆಯ, ಲೇಖಕಿಯಾಗಿರಬಹುದು. ಆದರೆ, ‘ನನ್ನ ಬಂಗಾಳ, ನನ್ನ ಕೋಲ್ಕತ್ತ, ನನ್ನ ಬಾಂಗ್ಲಾ ನುಡಿ’ ಎಂದು ಮನಕಲಕುವಂತೆ ಹಲುಬುವ, ಕನವರಿಸುವ ಆ ಹೆಣ್ಣುಮಗಳ ಪರವಾಗಿ ನಾವು ನಿಲ್ಲದೆಯೇ ಹೋದೆವಲ್ಲ! ಪಶ್ಚಿಮ ಬಂಗಾಳದ ವಾಮಪಂಥೀಯ ಸರ್ಕಾರ ಮತ್ತು ಸೂಪರ್‌ಪವರ್ ದರ್ಜೆಯ ಕನಸು ಕಾಣುವ ಭಾರತದ ಘನ ಸರ್ಕಾರಗಳೆರಡೂ ಆಕೆಯನ್ನು ದೇಶದಿಂದಲೇ ಹೊರದೂಡಿ ದುವಲ್ಲ!
  ಅದೂ ಈ ನಮ್ಮ ದೇಶವು ಆಕೆಗೆ ಅಭಯ, ಆಶ್ರಯಗಳನ್ನು ಕೊಟ್ಟಾದ ಮೇಲೆ! ಮೇಲಾಗಿ, ನನ್ನದು ಎಂದು ನಾನು ತಿಳಿದಿರುವ ಈ ಬಳಗವು ಇಂಥವರನ್ನು ತನ್ನ ದೇಶದವರು, ಹೊರದೇಶದವರು ಎಂದು ವಿಂಗಡಿಸಿ ನೋಡಹತ್ತಿದ್ದು ಎಂದಿನಿಂದ? ಜಗತ್ತಿನ ನೊಂದವರೆಲ್ಲ ತನ್ನವರು ಅನ್ನುವಂಥದಲ್ಲವೇ, ನನ್ನ ಬಳಗ? ಸಂಕಟ ವಾಗುತ್ತದೆ, ನಾಚಿಕೆಯಾಗುತ್ತದೆ, ಸಿಟ್ಟು ಬರುತ್ತದೆ; ಯಾವುದು ಹೆಚ್ಚೋ, ಹೇಳಲಾರೆ.
  ಮತ್ತೊಂದು ಉದಾಹರಣೆ, ಈಗ್ಗೆ ಹತ್ತು ವರ್ಷದ ಹಿಂದೆ, ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಳು ಸೇರಿ ಹೊರತಂದ ‘ಕರ್ನಾಟಕ ಚಲನಚಿತ್ರ ಇತಿಹಾಸ’ ಅನ್ನುವ ಎರಡು ಸಂಪುಟಗಳ ಹೆಬ್ಬೊತ್ತಿಗೆಗೆ ಆದುದು. ಆ ವೇಳೆಯಲ್ಲಿ, ಆ ಹೊತ್ತಿಗೆಯ ಒಕ್ಕಣೆಯಲ್ಲಿ ಅಲ್ಲಿ ಇಲ್ಲಿ ತಮಗೆ ಒಪ್ಪಿಗೆಯಾಗುವಂಥದು ಇಲ್ಲವೆಂದೋ, ಅಲ್ಲಿ ಇಲ್ಲಿ ಅದು ಕೆಲವರನ್ನು ಕುರಿತು ಮಾಡಿರುವ ಟೀಕೆ-ಟಿಪ್ಪಣಿ ತಮಗೆ ಒಪ್ಪಿಗೆಯಾಗುವಂಥ ನುಡಿಗಟ್ಟಿನಲ್ಲಿಲ್ಲವೆಂದೋ ದೂರುವ ಬಲಿಷ್ಠರ ಒಂದು ಪಂಥವೇ ಹುಟ್ಟಿಕೊಂಡು, ಆ ಪಂಥವು ಮಾಡಿದ ವ್ಯವಸ್ಥಿತ ವಾದ ಒಳವೊಳಗಿನ ದಾಳಿಯಿಂದಾಗಿ ಆ ಪುಸ್ತಕದ ಮಾರಾಟವನ್ನೇ ನಿಷೇಧಿಸಲಾಯಿತು. ದುಃಖ ಮತ್ತು
  ಆತಂಕದ ಮಾತೆಂದರೆ, ಇವರೂ ನನ್ನ ಬಳಗವೇ ಎಂದು ನಾನು ಹೇಳಬಹುದಾದವರು ಕೂಡ ಆ ಪಂಥದ ಮುಂಚೂಣಿಯಲ್ಲಿದ್ದು ಆ ಪುಸ್ತಕ ಪತಂಗವನ್ನು ಕಡ್ಡಿಪೆಟ್ಟಿಗೆಯಲ್ಲಿ ಕೂಡಿಹಾಕಿದುದು.
  ಮುಕ್ತಿಯ ಪಥಕ್ಕೆ ಧರ್ಮಲಂಡರು, ಅಂದರೆ ಹಿಂದೂತ್ವ ವಾದಿಗಳು, ಇಸ್ಲಾಮೀಯತಾವಾದಿಗಳು ಮತ್ತು ಬೇರೆ ವಾದಪಂಥಗಳಿಗೆ ಸೇರಿದ ಅವರಂಥ ಬೇರೆಯವರು, ಅಡಚಣೆಯಾಗುವುದು ಆಶ್ಚರ್ಯದ ಮಾತಲ್ಲ. ಧರ್ಮಿಷ್ಠರೇ ಹಾಗೆ ಮಾಡುವುದು ಮಾತ್ರ ಆಶ್ಚರ್ಯದ ಮಾತಷ್ಟೇ ಅಲ್ಲ, ತುಂಬ ದುಃಖದ ಮಾತೂ ಹೌದು.
  -ರಘುನಂದನ, ರಂಗಕರ್ಮಿ .
  Prajavani 01-10-2013 – SANGATHA

  ಉತ್ತರ
  • Nagshetty Shetkar
   ಆಕ್ಟೋ 7 2013

   Mr. Vageesh, you must not misuse Raghunandana’s letter. Does he know you are using it in this forum? Have you taken his permission?

   ಉತ್ತರ
 8. ಗಿರೀಶ್
  ಆಕ್ಟೋ 7 2013

  ಬಹುಶಃ ಮನಮೋಹನ ಸಿಂಗರಲ್ಲಿ ರುವ ಇಂತ ಗುಣವನ್ನು ನೋಡಿಯೇ ಪೂರ್ವ ನಿರ್ಧರಿತ ಶರತ್ತುಗಳೊಂದಿಗೆ ಆ ಹುದ್ದೆ ನೀಡಲಾಗಿದೆ. ಸಿದ್ದರಾಮಯ್ಯ ಕೂಡ ಒಳ್ಳೆಯ ರಾಜಕಾರಣಿ ಆತನೂ ಕೂಡ ಇಂತಹುದೆ ಬಲೆಯಲ್ಲಿ ಬಿದ್ದಿದ್ದಾರೆ. ಕಾಂಗ್ರೆಸ್ಸೆ ಹಾಗೆ ಒಳ್ಳೆಯ ಹೆಸರಿರುವರನ್ನು ಉಪಯೋಗಿಸಿಕೊಂಡು ತಮ್ಮ ಕೆಟ್ಟ ಕೆಲಸಗಳೆನ್ನೆಲ್ಲಾ ಅವರ ಮುಖಕ್ಕೆ ಒರೆಸಿ ನಂತರ ಬಿಸಾಡುತ್ತದೆ. ನಂದನ್ ನೀಲಕೇಣಿಗೂ ಅದೇ ಕಾದಿದೆ. ಅತ್ಯುತ್ತಮ ಬರಹ. ಮನಮೋಹನರ ಸಿಟ್ಟೀನ ಸಂದರ್ಭದ ವಿವರಣೆಯಂತೂ ಸರ್ವೋತ್ತಮ.

  ಉತ್ತರ
 9. M.A.Sriranga
  ಆಕ್ಟೋ 7 2013

  Just a few months back Assam riots, Muzaffarnagar riots and now the Andra Pradesh problems, What will you say my friends? China and Pakistan crossed the LOC nearly 40 times.

  ಉತ್ತರ
  • Nagshetty Shetkar
   ಆಕ್ಟೋ 8 2013

   Mr. Sriranga, running a country is not as easy making a blog post on Nilume. Dr. Singh has carried out his responsibilities very diligently. If Advani or Modi were in his position, this country would have gone to dogs. Dr. Singh is a champion of secularism, social equality, emancipation of women and justice to all. Let’s salute him for steering India successfully in a period of great threat from communal forces.

   ಉತ್ತರ
   • ವಿಜಯ್ ಪೈ
    ಆಕ್ಟೋ 8 2013

    ಶ್ರೀರಂಗರವರೆ..ಈಗ ನಿಮಗೆ ಗೊತ್ತಾಗಿರಬೇಕು..ದೇಶ ನಡೆಸುವುದು ಎಷ್ಟು ಕಷ್ಟ ಮತ್ತು ಮನಮೋಹನ ಸಿಂಗರು ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ..ನಮ್ಮ ಶೆಟ್ಕರ ಗುರುಗಳಂತಹ ಆಧುನಿಕ ಶರಣರ, ಕಾಯಕಯೋಗಿಗಳ ಮಾರ್ಗದರ್ಶನ ದಲ್ಲಿ ಮುಂದುವರಿಯುವುದು ನಮ್ಮ ದೇಶದ ಉದ್ಧಾರಕ್ಕೆ ನಮ್ಮ ಮುಂದಿರುವ ಏಕೈಕ ಮಾರ್ಗ..ಅಕಸ್ಮಾತ ಪಮೇರಿಯನ ನಾಯಿಮರಿಗಳ ಸಾಮರ್ಥ್ಯದ ಬಗ್ಗೆ ನಿಮಗೆ ಅನುಮಾನವಿದ್ದರೆ ಶೆಟ್ಕರ ಗುರುಗಳನ್ನು ಕೇಳಿ ಅನುಮಾನ ಪರಿಹರಿಸಿಕೊಳ್ಳಬಹುದು.

    ಉತ್ತರ
    • M.A.Sriranga
     ಆಕ್ಟೋ 9 2013

     Mr Shetkar I will salute for your innocence. If silence is also means secularism etc( what you have told) then it is better to send a representation to Oxford University Press U. K. to add this meaning in its future editions of dictionary.

     ಉತ್ತರ
 10. Nagesh nayak
  ಆಕ್ಟೋ 8 2013

  ಪ್ರಭುದ್ದ ಬರಹ …ಪ್ರಧಾನಿ ಬಗ್ಗೆ ಈ angleನಿ೦ದಲೂ ಅಲೋಚಿಸಬಹುದು ಅ೦ತಾ ಗೊತ್ತಿರ್ಲಿಲ್ಲ..ಅ೦ದ ಹಾಗೆ ಇವರು ಗುರುರಾಜ ಕೊಡ್ಕಣಿ ಯಲ್ಲಾಪುರ ಅ೦ದರೇ ’ಹಾಯ್ ಬೆ೦ಗಳೂರ್’ ನಲ್ಲಿ ಆಗಾಗ ಬರೆಯುತ್ತಿದ್ದ ಬರಹಗಾರರಾ…

  ಉತ್ತರ
 11. ವಿಜಯ್ ಪೈ
  ಆಕ್ಟೋ 8 2013

  ಮನಮೋಹನ ಸಿಂಗರ ಮೌನ ಮತ್ತು ಸೋನಿಯಾಗಾಂಧಿ ಆಡಿಸುವ ಬೊಂಬೆಯಂತಾಗಿರುವ ಅವರ ವರ್ತನೆ..,.ಅವರ ಗೇಲಿಗೆ ಕಾರಣವಾಗುತ್ತಿದೆ. ಯಾರೂ ಅವರ ಪ್ರತಿಭೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನೆಮಾಡುತ್ತಿಲ್ಲ. ಮೊನ್ನೆ ಮೊನ್ನೆ ರಾಹುಲ್ ನಾಹೇಬರು ತಾವು ಮಿಂಚಲು ಮನಮೋಹನ ಸಿಂಗರನ್ನು ಬಲಿಪಶು ಮಾಡಿದ್ದನ್ನು ನಾವು ನೋಡಿದ್ದೇವೆ.. ಒಳ್ಳೆಯವರ ಮೌನ ಮತ್ತು ನಿ‍ಷ್ಕ್ರೀಯತೆ ಕೂಡ ಒಂದು ಅಪರಾಧ.

  ಉತ್ತರ

ನಿಮ್ಮದೊಂದು ಉತ್ತರ M.A.Sriranga ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments