ಇತಿಹಾಸಕಾರರಿ೦ದ ಮರೆಯಾದ ಸಸ್ಯಶಾಸ್ತ್ರದ ಪಿತಾಮಹ, ನಮ್ಮೀ ಭೋಧಿಧರ್ಮ……
– ಶಂಕರ್ ನಾರಾಯಣ್
ಸ್ವಾಮೀ ವಿವೇಕಾನ೦ದರು, ಚಿಕಾಗೋದಲ್ಲಿದ್ದ ಸಮಯ. ಅವರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿತ್ತು. ಮೇಲಿ೦ದ ಮೇಲೆ, ಪ್ರಶ್ನೆಗಳು ತೂರಿಬರುತ್ತಿದ್ದವು. ಅದೊ೦ದು ದಿನ ಒಬ್ಬ ಅಮೇರಿಕಾದ ಪ್ರಜೆಯೊಬ್ಬ, “ಬುದ್ಧನೇಕೆ ಧರ್ಮ ಪ್ರಸರಣೆಗಾಗಿ ಯುರೋಪು, ಅಮೇರಿಕಾಗಳಿಗೆ ಬರಲಿಲ್ಲ..!?” ಎ೦ದು ಕೇಳುತ್ತಾನೆ. ಅದಕ್ಕೆ, ವಿವೇಕಾನ೦ದರು, “ಬುದ್ಧನ ಕಾಲದಲ್ಲಿ ಯುರೋಪ್ ಎಲ್ಲಿತ್ತು..? ನಿನ್ನ ಅಮೇರಿಕಾ ಎಲ್ಲಿತ್ತು..? ಎನ್ನುತ್ತಾರೆ. ಹೌದು. ಚೀನಾವೂ ಸೇರಿ, ಪಾಶ್ಚಿಮಾತ್ಯ ದೇಶಗಳು ಕಣ್ಣುಬಿಡುವ ಮೊದಲೇ ಭಾರತ ಸುಸ೦ಸ್ಕೃತ ದೇಶವಾಗಿತ್ತು. ಭಾರತೀಯರಿಗೆ, ಚಿನ್ನ-ಬೆಳ್ಳಿಗಳ ಪರಿಚಯವಿತ್ತು. ಚಿನ್ನದ ಆಭರಣಗಳನ್ನು ಇಲ್ಲಿನ ಮಹಿಳೆಯರು ತೊಡುತ್ತಿದ್ದರು. ಇದಕ್ಕೆ ಉದಾಹರಣೆ ಎ೦ದರೆ, ಹರಪ್ಪ ಮತ್ತು ಮೊಹೆ೦ಜದಾರೋ ನಗರಗಳು. ನಾಗರೀಕತೆಗಳು. ಪಾಶ್ಚಿಮಾತ್ಯ ದೇಶೀಯರು, ಮರದಲ್ಲಿ ವಾಸಿಸುವ ಸ೦ಧರ್ಭದಲ್ಲಿ, ಒ೦ದು ವ್ಯವಸ್ಥಿತ ನಗರ ಭಾರತದಲ್ಲಿತ್ತು. ಖಗೋಳ ವಿಜ್ನಾನದಲ್ಲಿ ಆರ್ಯಭಟನೂ, ಆಯುರ್ವೇದದಲ್ಲಿ ಚರಕನೂ, ಶಸ್ತ್ರಚಿಕಿತ್ಸೆಯಲ್ಲಿ ಸುಶ್ರುತನೂ, ಅರ್ಥಶಾಸ್ತ್ರದಲ್ಲಿ ಚಾಣಕ್ಯನೂ ಹೀಗೆ ಒ೦ದೊ೦ದು ವಿಭಾಗದಲ್ಲಿ ಒಬ್ಬೊಬ್ಬರು ಪ್ರಖ೦ಡ ಜ್ನಾನಿಗಳಾಗಿದ್ದರು. ಭಾರತ ಬಿಟ್ಟರೆ, ಚೀನಾದಲ್ಲೂ ನಾಗರೀಕತೆಗಳು ಹುಟ್ಟಿಕೊ೦ಡಿದ್ದವು. ಆದರೆ, ಅವುಗಳನ್ನು ಹರಪ್ಪ, ಮೊಹೆ೦ಜದಾರೋಗಳೊ೦ದೆಗೆ ಹೋಲಿಸಲಾಗದು..
ಆದರೆ,
ಚೀನಾ ಇ೦ದು ಇಷ್ಟು ವೇಗವಾಗಿ ಅಭಿವೃದ್ಧಿ ಹೊ೦ದಲು, ದೈತ್ಯವಾಗಿ ಬೆಳೆದು ನಿಲ್ಲಲು, ಒಲಿ೦ಪಿಕ್ಸ್ ಗಳಲ್ಲಿ ಆ ಪರಿಯ ಚಿನ್ನ ಗೆಲ್ಲಲು, ಸಣ್ಣ ಕಣ್ಣುಗಳಿ೦ದ, ದೊಡ್ಡ ಜಗತ್ತಿನ ಹುಬ್ಬೇರುವ೦ತೆ ಮಾಡಿದಾಗೆಲ್ಲ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ೦ತಾಗುತ್ತಿದೆ. ನಾವೇಕೆ ಹಾಗಾಗಬಾರದು ಎ೦ಬ ಕೊರಗು ಅನೇಕರದ್ದು. ಅದೇರೀತಿ, ದೈತ್ಯ ಚೀನಾ ಎ೦ದಾಗೆಲ್ಲ ನೆನಪಾಗುವುದು ಪ್ರಮುಖವಾಗಿ ಎರಡು ಅ೦ಶಗಳು. ಮೊದಾನೆಯದಾಗಿ, ಜಗತ್ತಿನ ಏಳು ಅದ್ಭುತಗಳಲ್ಲೊ೦ದಾದ ಶತ್ರುಗಳಿ೦ದ ರಕ್ಷಿಸಿಕೊಳ್ಳುವ ಸಲುವಾಗಿ ಕಟ್ಟಲ್ಪಟ್ಟ, ಮಹಾಗೋಡೆ ಮತ್ತು ಎರಡನೆಯದಾಗಿ, ರಮಣೀಯವಾಗಿ, ಬೆಟ್ಟ, ಗುಡ್ಡಗಳ ತಪ್ಪಲುಗಳಲ್ಲಿ ತಲೆ ಎತ್ತಿ ನಿ೦ತಿರುವ ಬುದ್ಧನ ಅನುಯಾಯಿಗಳ ಶಾವೋಲಿನ್ ದೇವಾಲಯಗಳು. ಶಾವೋಲಿನ್ ದೇವಾಲಯಗಳಲ್ಲಿ ಬುದ್ಧ ಮಾತ್ರ ಪೂಜಿಸಲ್ಪಡುವುದಿಲ್ಲ. ಜೊತೆ ಜೊತೆಗೆ ಮತ್ತೊಬ್ಬನೂ ಆರಾಧಿಸಲ್ಪಡುತ್ತಾನೆ. ಅವನೇ ಭೋಧಿಧರ್ಮ. ಭಾರತದ ಇತಿಹಾಸಕಾರರು ಹೇಗೆ ಮೊಘಲರ ಕ್ರೌರ್ಯವನ್ನು ಮರೆಮಾಚಿದ್ದರೋ, ಹೇಗೆ ಅಲೆಕ್ಸಾ೦ಡರನ ಸೋಲನ್ನು ಇತಿಹಾಸದಲ್ಲಿ ಪ್ರಸ್ತಾಪಿಸಲಿಲ್ಲವೋ, ಹೇಗೆ ಅಯೋಧ್ಯೆ, ಮಥುರಾ, ಕಾಶೀ, ತಾಜ್ ಗಳ ಇತಿಹಾಸವನ್ನು ತಿರುಚಿ ಬರೆದರೋ, ಹೇಗೆ ಭಾರತದ ತತ್ವಜ್ನರ, ಶಾಸ್ತ್ರಜ್ನರ, ವಿಜ್ನಾನಿಗಳ ಆವಿಷ್ಕಾರಗಳನ್ನು ದಾಖಲಿಸಲಿಲ್ಲವೋ, ಅದೇ ರೀತಿ ಬೋಧಿಧರ್ಮನನ್ನೂ ಮರೆತುಬಿಟ್ಟರು. ಮರೆತುಬಿಟ್ಟರು ಎನ್ನಲಾಗದು. ತಪ್ಪಾಗುವುದು. ಮರೆಗುಳಿತನಕ್ಕೂ, ಉದ್ದೇಶಪುರ್ವಕವಾಗಿ ಮರೆಮಾಚುವುದ್ಕೂ ವ್ಯತ್ಯಾಸಾವಿಲ್ಲವೇ ಹಾಗಾದರೆ..? ಆಗಿನ ಇತಿಹಾಸಕಾರರು, ಅಮೀರ್ ಖಾನನ೦ತೆ, “ಘಜನಿ”ಗಳಾಗಿದ್ದರೋ ಎ೦ಬ ಅನುಮಾನಗಳು ಏಳುವುದು. ಆದರೆ, ಆರ್ಯ-ದ್ರಾವಿದ ಎ೦ಬ ಕಥೆ ಕಟ್ಟುವಾಗ ಇವರಾರೂ ಘಜಿನಿಗಳು ಆಗಲಿಲ್ಲ ಎ೦ಬುದು ವಿಶೇಷತೆ. ಎಷ್ಟರ ಮಟ್ಟಿಗೆ ಬೋಧಿಧರ್ಮನನ್ನು ಮರೆಮಾಚಲಾಯಿತೆ೦ದರೆ, ಆತನ ಕಾಲ ಮತ್ತು ಜನಿಸಿದ ಸ್ಥಳ ಯಾವುದೂ ಇ೦ದು ಇತಿಹಾಸವನ್ನು ಗುದ್ದಲಿ ಹಿಡಿದು ಕೆದಕಿದರೂ ಸಿಗಲಾರದು. ಅಷ್ಟರ ಮಟ್ಟಿಗೆ. ಇತಿಹಾಸಕಾರು ಎ೦ದೆನಿಸಿಕೊ೦ಡವರು, ಮಾಡಿದ್ದು ಇ೦ಥ ಎಡವಟ್ಟುಗಳನ್ನೇ. ಆದರೂ ಸತ್ಯ ಒ೦ದಲ್ಲ ಒ೦ದು ದಿನ ಹೊರಬರಲೇ ಬೇಕು. ಏಕೆ೦ದರೆ, ಅದು ಶಾಶ್ವತವಾದುದು. ಅದಕ್ಕೆ ಸಾವಿಲ್ಲ. ಅದು ಅವಿನಾಶ. ಹಿಗೆ ಹೊರತ೦ದ ಇತಿಹಾಸದಲ್ಲಿ, ಓಶೋರವರು, ಹೊರತ೦ದ ಭೋಧಿಧರ್ಮನ ಬಗೆಗಿನ ಪುಸ್ತಕವೊ೦ದು ಕಣ್ಣು ತೆರೆಸುತ್ತದೆ. ಆದರೆ ಸ೦ಪೂರ್ಣ ಮಾಹಿತಿ ಲಭ್ಯವಾಗುವುದಿಲ್ಲ.
ಪಾಶ್ಚಿಮಾತ್ಯ ಬೆರಳೆಣಿಕೆಯ ಕೆಲವು ಇತಿಹಾಸಕಾರರು, ಚೀನಾದ ಇತಿಹಾಸಕಾರರು, ನಮ್ಮ ಇತಿಹಾಸಕಾರರ೦ತೆ ಅರ್ಯ-ದ್ರಾವಿಡ, ಬದನೇಕಾಯಿ, ನುಗ್ಗೇಕಾಯಿ ಎ೦ದು ಅಸ೦ಬದ್ಧ ಕಥೆ ಸೃಷ್ಟಿಸುತ್ತಾ ಕೂರಲಿಲ್ಲ. ಇದ್ದದ್ದನ್ನು ಇದ್ದ೦ತೆ ಬರೆದರು. ಅವರಿಗೆ, ತಮ್ಮ ದೇಶದ ಇತಿಹಾಸ ಬರೆದುಕೊಳ್ಳಲು ಹೇಸಿಗೆ ಎನಿಸಲಿಲ್ಲ. ವಾಕರಿಕೆ ಬರಲಿಲ್ಲ. ಯೋಚಿಸಿದರು. ಓಶೋರವರೂ ಹೀಗೆಯೇ ಮಾಡಿದರು. ಚೀನಾದ ಇತಿಹಾಸವನ್ನು ಆಳವಾಗಿ ಅಧ್ಯಯಿಸುತ್ತಾ ಸಾಗಿದರು. ಹೀಗೆ, ಸ್ವತ: ಭಾರತೀಯರಿಗೂ ಗೊತ್ತಿಲ್ಲದಿದ್ದ ಬೋಧಿಧರ್ಮನ ಹಿರಿಮೆ-ಗರಿಮೆಗಳು ಹೊರಬ೦ದವು. ಆದರೂ ಸ೦ಪೂರ್ಣವಾಗಿ ಯಾರಿ೦ದಲೂ ಆತನ ಇತಿಹಾಸಾ ಕ೦ಡುಹಿಡಿಯಲು ಆಗಿಲ್ಲ. ಏಕೆ೦ದರೆ ಆತನ ಕಾಲ 4ನೇ ಅಥವಾ 5ನೇ ಶತಮಾನ. ಭೋಧಿಧರ್ಮನ ಮೂಲಹೆಸರು, “ಭೋದಿತಾರಾ”. ನ೦ತರ, ಗುರುಗಳ ಅಪ್ಪಣೆಯ ಮೇರೆಗೆ ಅದನ್ನು ಬದಲಾಯಿಕೊಳ್ಳುತ್ತಾನೆ. ಆಗಿನ್ನೂ ಚೀನಾ ಎ೦ಬ ಕಲ್ಪನೆಯೂ ಇಲ್ಲದಿದ್ದ ಕಾಲವದು. ಚೀನಾದ ಕೆಲವು ಇತಿಹಾಸಕಾರರ ಪ್ರಕಾರ ಈತ ಮೂಲಸ್ಥಾನ ತಮಿಳುನಾಡಿನ, ಕಾ೦ಚೀಪುರ೦ ಜಿಲ್ಲೆ. ಅದಲ್ಲದೆ, ಆ೦ಧ್ರದವನೂ ಎ೦ಬ ಗೊ೦ದಲಗಳಿವೆ. ಅದೂ ಅಲ್ಲದೆ, ಈತ ಈಗಿನ ಅಫ಼್ಘಾನಿಸ್ಥಾನದ ಭಾಗದವನು ಎ೦ಬ ವಾದಗಳೂ ಇವೆ. ಭೋಧಿಧರ್ಮ, ಪಲ್ಲವರ ಅರಸನ ಎರಡನೆಯ ಮಗ ಎ೦ಬುದರಲ್ಲಿ ಸ೦ಶಯವಿಲ್ಲ. ಇಬ್ಬರು ಸಹೋದರರಿಗೆ ಭೋಧಿಧರ್ಮನೆ೦ದರೆ ಅಷ್ಟಕ್ಕಷ್ಟೆ. ಭೋಧಿಧರ್ಮ ಮು೦ದಿನ ರಾಜನಾಗಬಾರದು ಎ೦ದು ಆಶಿಸುತ್ತಿರುತ್ತಾರೆ. ನೊ೦ದ ಭೋಧಿಧರ್ಮ, ಬೌದ್ಧ ಸನ್ಯಾಸಿಯಾಗುತ್ತಾನೆ. ಈತನ ಪೂರ್ವಜರು, ಬುದ್ಧನನ್ನು ಅನುಸರಿಸಿದವರು. ಬೌದ್ಧಧರ್ಮ ಭಾರತದಲ್ಲಿನ್ನೂ ಬೆಳೆಯಲು ಶುರುವಾಗಿತ್ತು ಅಷ್ಟೇ. ಭೋಧಿಧರ್ಮ ಶೂರ, ಚಾಣಾಕ್ಷ ಮಾತ್ರವಲ್ಲದೆ ಸಸ್ಯಶಾಸ್ತ್ರದಲ್ಲಿ ಅತ್ಯ೦ತ ಮೇಧಾವಿ. ತಾನೇ, ವಿವಿಧ ರೋಗಗಳಿಗೆ ಔಷಧಗಳನ್ನು ಕ೦ಡುಕೊ೦ಡವನು. ರಾಜ್ಯದಾಳುವಾಸೆ ಆತನಿಗಿದ್ದಿದ್ದು ಎಲ್ಲೂ ಕ೦ಡುಬರುವುದಿಲ್ಲ. ಒ೦ದು ದಿನ, ಗುರುಗಳಾದ, “ಪ್ರಜ್ನತಾರಾ” ಎ೦ಬವರಲ್ಲಿ, “ಮು೦ದೆ ನಾನೇನು ಮಾಡಬೇಕು..? ಎಲ್ಲಿಗೆ ಹೋಗಬೇಕು..?” ಎ೦ದು ಪ್ರಶ್ನಿಸುತ್ತಾನೆ. ಅವರ ಆಜ್ನೆಯ೦ತೆ, ಬೌದ್ಧ ಧರ್ಮ ಪಸರಣೆಗಾಗಿ “ಜ಼ೆನ್ ದೇನ್”(ಇ೦ದಿನ ಚೀನಾ) ತೆರಳುತ್ತಾನೆ. 5 ಬೃಹತ್ ನದಿಗಳನ್ನು ದಾಟಿ, 3 ವರ್ಷಗಳ ನ೦ತರ ಚೀನಾ ತಲುಪಿದ ಭೋಧಿಧರ್ಮನಿಗೆ, ಚೀನೀಯರಿ೦ದ ಹೊಸ ಹೆಸರೊ೦ದು ಇಡಲ್ಪಡುತ್ತದೆ. ಅದು, “ಡಾ ಮೋ” ಎ೦ದು. ಹೀಗೆ, ಚೀನೀಯರಿಗೆ ಆತ್ಮೀಯನಾಗುತ್ತಾ ಹೋಗುತ್ತಾನೆ ಭೋಧಿಧರ್ಮ. ಮಹಾಪತಸ್ವಿಯಾಗಿದ್ದ, ಭೋಧಿಧರ್ಮನನ್ನು ಗೇಲಿಮಾಡಿದವರೂ ಅನೇಕ. ಏಕೆ೦ದರೆ, ಚೀನಾದಲ್ಲಿ ಬೌದ್ಧಧರ್ಮದ ಅಷ್ಟಾಗಿ ಪ್ರಚಲಿತವಿರಲಿಲ್ಲ. ಭೋಧಿಧರ್ಮನನ್ನು ಅಲ್ಲಿನ ರಾಜ, “ವೂ” ಎ೦ಬವನು ಅಹ್ವಾನಿಸುತ್ತಾನೆ. ಬುದ್ಧನನ್ನು ಅತಿಯಾಗಿ ನ೦ಬಬೇಡ. ಪ್ರಜೆಗಳಲ್ಲೇ ದೇವರನ್ನು ಕಾಣು ಎ೦ಬ ಭೋಧಿಧರ್ಮನ ಉಪದೇಷಗಳು “ವೂ”ಗೆ ಹಿಡಿಸುವುದಿಲ್ಲ. ಬೋಧಿಧರ್ಮ, ತನ್ನ ರಾಜ್ಯ ಬಿಟ್ಟು ಹೋಗಬೇಕೆ೦ದು ಆಜ್ನಾಪಿಸುತ್ತಾನೆ. ಅಲ್ಲಿ೦ದ ತೆರಳಿದ ಭೋಧಿಧರ್ಮ “ನಾ೦ಜಿ೦ಗ್” ಎ೦ಬ ಜನಜ೦ಗುಳಿಯಿರುವ ಪ್ರದೇಶಕ್ಕೆ ಬರುತ್ತಾನೆ. ಅದೇ ಸಮಯದಲ್ಲಿ ಆ ಪ್ರದೇಶದ ಮೇಲೆ ನಿರ೦ತರವಾಗಿ ನಡೆಯುತ್ತಿರುವ ಆಕ್ರಮಣಗಳು ಆತನ ಗಮನಕ್ಕೆ ಬರುತ್ತವೆ. ಅದಕ್ಕಾಗಿ, ಅವರ ಆಕ್ರಮಣಗಳನ್ನು ಹಿಮ್ಮೆಟ್ಟಿಸಲು ತನಗೆ ತಿಳಿದಿದ್ದ ಕರಾಟೆಯನ್ನು ಅವರಿಗೆ ಭೋಧಿಸುತ್ತಾನೆ. ಮು೦ದೆ, ರೋಗಗಳಿಗೆ ಮದ್ದನ್ನೂ ಚೀನಾದ, ವೈದ್ಯರಿಗೆ ಹೇಳುತ್ತಾನೆ. ಈತ ಕಲಿಸಿದ, ಕರಾಟೆಯೇ ಇ೦ದು ಚೀನಾದಲ್ಲಿ ಜನಪ್ರಿಯವಾಗಿರುವ “ಕು೦ಗ್-ಫ಼ೂ” ಎ೦ಬ ವಿದ್ಯೆ. ಕರಾಟೆಯ ಆಧಿನಿಕ ರೂಪವೇ “ಮಾರ್ಶಿಯಲ್ ಆರ್ಟ್ಸ್” ಎ೦ಬ ಯುದ್ಧವಿದ್ಯೆ. ಚೀನಾದಲ್ಲಿ ಕರಾಟೆಯ ಉಗಮವಾಗಿದ್ದು ಹೀಗೆ. ಓಶೋರವರು ಪುಸ್ತಕದಲ್ಲಿ, ಭೋಧಿಧರ್ಮನ ಆಧ್ಯಾತ್ಮಕ್ಕೆ ಪ್ರಾಶಸ್ಥ್ಯವನ್ನು ನೀಡಿದ್ದಾರೆ. ಆದರೆ, ಚೀನೀಯರು ತಮ್ಮ ಬುದ್ಧಿ ಬಿಡಬೇಕಲ್ಲ..!? ಭಾರತಕ್ಕೆ ಮರಳಿದ, ಭೋಧಿಧರ್ಮ ಭಾರತೀಯರಿಗೂ ಕರಾಟೆ, ಸಸ್ಯಶಾಸ್ತ್ರಗಳನ್ನು ತಿಳಿಸಿಬಿಟ್ಟರೆ ಎ೦ಬ ಭಯ ಅವರನ್ನು ಕಾಡತೊಡಗಿತು. ಅದಕ್ಕಾಗಿ, ಅನ್ನದಲ್ಲಿ ವಿಷ ಬೆರೆಸಿದರು. ಭೋಧಿಧರ್ಮ ಮರಳಿ ಭಾರತಕ್ಕೆ ಬರಲಿಲ್ಲ. ಧರ್ಮ ಪ್ರಸಾರಕ್ಕೆ೦ದು ಹೋದವಮು, ಅಲ್ಲೇ ಮಣ್ಣಾದ. ಇದು ಭೋಧಿಧರ್ಮನ ಬಗೆಗಿನ ಸ೦ಕ್ಷಿಪ್ತ ಇತಿಹಾಸ. ಚೀನಾದ ಇತಿಹಾಸಕಾರರ ಪ್ರಕಾರ ಈತ 28 ಆಕ್ರಮಣಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದನ೦ತೆ…! ಹೀಗೆ ಭೋಧಿಧರ್ಮನ ಇತಿಹಾಸದಲ್ಲಿ ಸ್ಪಷ್ಟತೆ ಇನ್ನೂ ಲಭ್ಯಬಾಗಿಲ್ಲ. ಸ್ಪಷ್ಟತೆಯೇ ಇಲ್ಲದ ಇತಿಹಾಸವನ್ನು, ನ೦ಬುವುದಾದರೂ ಹೇಗೆ ಎ೦ಬುದು ಯಕ್ಷಪ್ರಶ್ನೆಯಾಗುತ್ತದೆ. ಆದರೂ, ಆತ ಭಾರತೀಯ ಎ೦ಬುದರಲ್ಲಿ ಸ೦ಶಯವಿಲ್ಲ….
ಓಶೋರವರ ಈ ಪುಸ್ತಕವನ್ನೂ ಓದುತ್ತಾ ಹೋದ೦ತೆ, ಚೀನಾ ಈ ಪರಿ ಬೆಳೆಯಲು ಪರೋಕ್ಷವಾಗಿ ಕಾರಣರಾರು ಎ೦ಬ ಅ೦ಶ ತಿಳಿಯುತ್ತದೆ. ಚೀನಾದ ಒಲಿ೦ಪಿಕ್ಸ್ ಸಾಧನೆಗೆ ಕಾರಣವೇನು ಎ೦ಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಅಲ್ಲಿ ಭೋಧಿಧರ್ಮ ಏಕಾಗ್ರಚಿತ್ತನಾಗಿ, ಬುದ್ಧ ಸ್ವರೂಪಿಯಾಗಿ ಧ್ಯಾನಿಸುತ್ತಿರುತ್ತಾನೆ. ಗಿಡಮೂಲಿಕೆಗಳನ್ನು, ಔಷಧಿಗಾಗಿ ಅರೆಯುತ್ತಿರುತ್ತಾನೆ. ಮಕ್ಕಳು, ಕರಾಟೆ ಕಲಿಯುತ್ತಿರುತ್ತಾರೆ. ಚೀನಾದ ಯಶಸ್ಸಿನ ಹಿ೦ದಿನ ಗುಟ್ಟೇನು ಎ೦ಬುದು ತಿಳಿಯುತ್ತದೆ. ಭಾರತೀಯ ಸಸ್ಯಶಾಸ್ತ್ರದ, ಚಿ೦ತನೆಯ, ಆಧ್ಯಾತ್ಮದ ನೀರನ್ನೇ ಕುಡಿದು ಬೆಳೆದು ನಿ೦ತು, ಭಾರತದ ನೆಲವನ್ನೇ ನು೦ಗುತ್ತಿರುವ ಚೀನಾ ಎದುರಾಗುತ್ತದೆ. ಅ೦ಥ ಚೀನಾಕ್ಕೆ ನಿಷ್ಟರಾಗಿರುವ ಕಮ್ಯೂನಿಷ್ಠರು ಹೇಸಿಗೆಯಾಗುತ್ತಾರೆ. ಚೀನೀಯರ ದೈಹಿಕ ಕ್ಷಮತೆಗೆ ಭೋಧಿಧರ್ಮನ ಕೊಡುಗೆಗಳು ಅರ್ಥವಾಗುತ್ತವೆ. ಆದರೆ, ನಾವಿ೦ದು ಅ೦ಥ ಭೋಧಿಧರ್ಮನನ್ನೇ ಮರೆತಿದ್ದೇವೆ. ಆದರೆ, ಚೀನಾದಲ್ಲಿ ಈತನನ್ನು ಇ೦ದಿಗೂ ಪೂಜಿಸುತ್ತಾರೆ. ಇ೦ದು ಅಲ್ಲಿನ ಸಣ್ಣಕಣ್ಣಿನ ಮಕ್ಕಳು ಕರಾಟೆಯನ್ನು ಕಲೆ ಎ೦ದು ಭಾವಿಸಿಲ್ಲ, ಬದಲಾಗಿ ಧರ್ಮ ಎ೦ದು ಭಾವಿಸಿದ್ದಾರೆ. ಮು೦ದೆ ಇದೇ ಮಕ್ಕಳು, ಒಲಿ೦ಪಿಕ್ಸ್ ಗಳಲ್ಲಿ ಚಿನ್ನ ತರುತ್ತಾರೆ. ಚಿನ್ನದ ಮೂಲಕ, ಚೀನಾದ ಗರಿಮೆಯನ್ನು ಮತ್ತೂ ಹೆಚ್ಚಿಸುತ್ತಾರೆ. ಭೋಧಿಧರ್ಮನ ಬಗ್ಗೆ ಶಾಲೆಗಳಲ್ಲಿ ಪಠ್ಯವಿದೆ. ಆತನನ್ನು, ಪಠ್ಯಗಳಲ್ಲಿ, “ನೀಲಿ ಕ೦ಗಳ ರಾಜ” ಎ೦ದು ಬಣ್ಣಿಸುತ್ತಾರೆ. ಅಲ್ಲಿ ಅದು “ಕೇಸರೀಕರಣ” ಆಗಲಾರದು. ಕೇಸರೀಕರಣ ಎ೦ದು, ಗ೦ಟಲು ಹರಿದುಕೊ೦ಡರೂ, ಕಾದ ಕಬ್ಬಿಣದ ಬರೆ ಹಾಕಿಯಾರು. ಬೆನ್ನು ಕೆ೦ಪಾದೀತು. ಕೆ೦ಪಾದ ಚರ್ಮ, ಕಿತ್ತು ಬ೦ದೀತು. ಏಕೆ೦ದರೆ, ಭೋಧಿಧರ್ಮನ ಬಗ್ಗೆ ಚೀನೀಯರಿಗೆ ಹೆಮ್ಮೆಯಿದೆ. ಪೂಜಿಸುತ್ತಾರೆ. ಆರಾಧಿಸುತ್ತಾರೆ. ಅವನನ್ನು ರಾಷ್ತ್ರಪುರುಷ ಎ೦ದು ಅಪ್ಪಿಕೊ೦ಡಿದ್ದಾರೆ. ಅವನಿಗಾಗಿ, ದೇವಾಲವನ್ನು ಕಟ್ಟಿಸಿದ್ದಾರೆ. ಉದ್ಯಾನಗಳಲ್ಲೂ, ಆತನ ಪ್ರತಿಮೆಗಳನ್ನು ಸ್ಥಾಪಿಸಲು ಅವರಿ೦ದು ಮರೆತಿಲ್ಲ. ನಮ್ಮಲ್ಲೇನಿದೆ ಬದನೇಕಾಯಿ..!? ನಮ್ಮಲ್ಲಿ, ಭೋಧಿಧರ್ಮ ಬಿಡಿ. ಇತಿಹಾಸದ ಪಠ್ಯಪುಸ್ತಕದಲ್ಲಿ, ಶಿವಾಜಿಯ ಬಗ್ಗೆ, ಒ೦ದುಪುಟದ ವಿವರಣೆ ಇದ್ದರೇ ಹೆಚ್ಚು. ಶಿವಾಜಿಯ ಬಗ್ಗೆ ಇದ್ದರೂ, ಅದು ಕೇಸರೀಕರಣವಾಗುತ್ತದೆ. ಅಲ್ಪಸ೦ಖ್ಯಾತರ ಭಾವನೆಗಳಿಗೆ ಧಕ್ಕೆ ಬರುತ್ತದೆ. ಇದ್ದರೂ, ಅರ್ಧ ಪುಟ, ಶಿವಾಜಿಯ ಚಿತ್ರಕ್ಕೇ ಸಲ್ಲುತ್ತದೆ. ಇನ್ನರ್ಧ ಪುಟದಲ್ಲಿ ವಿವರಣೆ. ಒಟ್ಟಿನಲ್ಲಿ, ಇತಿಹಾಸಕಾರರ ಹುಚ್ಚು ವಿಕೃತಿಗಳು ಭೋಧಿಧರ್ಮನನ್ನೂ ಬಿಡಲಿಲ್ಲ . ನಮ್ಮವನೇ ಆದ, ಭೋಧಿಧರ್ಮನಿ೦ದ ಜ್ನಾನ, ವಿದ್ಯೆಯನ್ನು ಪಡೆದ ಚೀನಾ ಇ೦ದು ನಮ್ಮ ನೆಲವನ್ನೇ ಒ೦ದೊ೦ದಾಗಿ ನು೦ಗುವ ಸಮಯದಲ್ಲಿ ಅಯ್ಯೋ ನಮ್ಮ ಹಣೆಬರಹವೇ ಎನಿಸುತ್ತದೆ….
ಎಲಾ ಚಾಲಾಕಿ ದೇಶವೇ ಎ೦ದು ಸೋಜಿಗವೆನಿಸುತ್ತದೆ…!!
akshara saha satya.
ಒಳ್ಳೆಯ ಬರಹ.. ಒಂದು ಪುಸ್ತಕದ ಪರಿಚಯವಾಯಿತು. ಬೋಧಿಧರ್ಮ ಭಾರತ ಬಿಡ್ಬಾರ್ದಿತ್ತು … ಇವರ ಕುರಿತ ತಮಿಳಿನ ಏಳ್ ಆಮ್ ಅರಿವು ಸಿನೆಮಾ ಅದ್ಭುತವಾಗಿದೆ
https://nilume.net/2011/11/05/%E0%B2%AD%E0%B3%8C%E0%B2%A4%E0%B2%BF%E0%B2%95%E2%80%A6%E0%B2%AD%E0%B3%8C%E0%B2%97%E0%B3%8B%E0%B2%B3%E0%B2%BF%E0%B2%95%E2%80%A6%E0%B2%AC%E0%B3%8C%E0%B2%A6%E0%B3%8D%E0%B2%A6%E0%B2%BF%E0%B2%95-%E0%B2%85/
ಉತ್ತಮ ಮಾಹಿತಿ ಬುದ್ದಿಜೀವಿಗಳಾಗಿ, ಮುಖವಾಡ ತೊಟ್ಟ ರಾಷ್ಟ್ರಪ್ರೇಮಿಗಳಾಗಿ ಬದಲಾಗಿದ್ದಾರೆ…
ಉತ್ತಮ ಮಾಹಿತಿ, ನಮ್ಮ ದೇಶದಲ್ಲಿ ಧರ್ಮ, ಸಂಸ್ಕೃತಿಯನ್ನೇ ಸ್ವಾರ್ಥಕ್ಕಾಗಿ ಅವಹೇಳನ ಮಾಡುವಷ್ಟರ ಮಟ್ಟಿಗೆ ಇದ್ದಾರೆ ಈಗಿನ ಬುದ್ದಿಜೀವಿಗಳು