ದಲಿತ ನಾಯಕರಿಗೆ ದಲಿತರ ಮೇಲೇಕಿಲ್ಲ ಕಾಳಜಿ?
– ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿಯ ಮುನ್ನಾ ಎರಡು ದಿನಗಳಲ್ಲಿ ದೇಶದ ಗೃಹ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು ಸೇರಿ ನಾಲ್ವರು ರಾಜಕಾರಣಿಗಳು ಇದ್ದಕ್ಕಿದ್ದಂತೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ, ಕಾಳಜಿ ರಕ್ಷಣೆಯ ಮಾತುಗಳನ್ನಾಡಿದ್ದಾರೆ. ಪ್ರಮುಖವಾಗಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಬೇಡಿ ಎಂದಿದ್ದಾರೆ.
ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಪೊಲೀಸ್ನ ಹಾಲಿ ನಿರ್ದೇಶಕರಿಗೆ ಪತ್ರ ಬರೆದು ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲಿ 2 ರಿಂದ 3 ಮಂದಿ ಮುಸ್ಲಿಂ ಸಿಬ್ಬಂದಿಗಳನ್ನು ನೇಮಿಸುವಂತೆ ಆದೇಶಿಸಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಸಮುದಾಯದ ಖಾತೆ ಪಡೆದಿರುವ ಕೆ. ರೆಹಮಾನ್ ಖಾನ್ ಕೂಡ ಮುಸ್ಲಿಂ ಯುವಕರನ್ನು ಬಂಧಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಇನ್ನು ಅಹಿಂದ ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಮೇಲೆ ‘ಎಲ್ಲೋ’ ದೌರ್ಜನ್ಯ ನಡೆಸಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲವೆಂಬ ಕಠೋರ ಸಂದೇಶ ಕೊಟ್ಟಿದ್ದಾರೆ. ಹೀಗೆ ಒಂದು ಸಮುದಾಯದ ಬಗೆಗಿನ ಕಾಳಜಿ ವ್ಯಕ್ತಪಡಿಸುವ ಮೂಲಕ ಭಾರತದಲ್ಲಿ ದಲಿತರು ಕೂಡ ನಿತ್ಯವೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಮರೆತಿರುವ ಈ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದು ಅನಿವಾರ್ಯವೆನಿಸುತ್ತಿದೆ.
1928ರಲ್ಲಿ ಸುದೀರ್ಘ ಒಂದು ವರ್ಷ ಭಾರತದಾದ್ಯಂತ ಪ್ರವಾಸ ಮುಗಿಸಿದ ಮಹಾತ್ಮ ಗಾಂಧೀಜಿಯವರು ಒರಿಸ್ಸಾದಿಂದ ಸಾಬರಮತಿ ಆಶ್ರಮಕ್ಕೆ ಬರುತ್ತಾರೆ. ಆ ವೇಳೆಗೆ ಅಂತಾರಾಷ್ಟ್ರೀಯ ಮೈತ್ರಿ ಸಂಘದ ಸದಸ್ಯರು ಅಮೆರಿಕ, ಇಂಗ್ಲೆಂಡ್, ಸ್ವಿಜರ್ಲ್ಯಾಂಡ್, ರಷ್ಯಾ, ಸ್ಪೀಡನ್ ರಾಷ್ಟ್ರಗಳಿಂದ ಆಗಮಿಸುತ್ತಾರೆ. ಅವರೊಂದಿಗೆ ಮುಕ್ತ ಸಮಾಲೋಚನೆ ನಡೆಸುತ್ತಾ ಅವರು, ಒಂದು ವರ್ಷ ತಾವು ಭಾರತ ಪ್ರವಾಸದಲ್ಲಿ ಕಂಡಂತಹ ಕೃಷಿಕರು, ದಲಿತರು ಮತ್ತು ಆದಿವಾಸಿಗಳ ಬದುಕಿನ ಸಂಘರ್ಷಗಳ ಅಧ್ಯಾಯ ಮತ್ತು ಅನುಭವಗಳನ್ನು ಈ ರೀತಿ ಹಂಚಿಕೊಳ್ಳುತ್ತಾರೆ…
“ಎಲ್ಲಾ ಮತಗಳು ಸತ್ಯವಾದವು, ಎಲ್ಲಾ ಮತಗಳಲ್ಲಿಯೂ ಕೆಲವು ದೋಷಗಳು ಇದ್ದೇ ಇರುತ್ತವೆ, ಎಲ್ಲಾ ಮತಗಳೂ ನನಗೆ ಹಿಂದು ಧರ್ಮದಷ್ಟೇ ಪ್ರಿಯವಾದುವು, ನನ್ನ ಧರ್ಮದಂತೆಯೇ ಪೂಜ್ಯಭಾವ ಇತರೆ ಧರ್ಮಗಳ ಮೇಲೂ ಇದೆ. ಆದ ಕಾರಣ ಮತಾಂತರದ ಆಲೋಚನೆಯೇ ಅಸಾಧ್ಯವಾದುದು. ದೇವರೇ ನನಗೆ ಕರುಣಿಸಿರುವ ಬೆಳಕನ್ನು, ಪೂರ್ಣ ಪ್ರಕಾಶ ಮತ್ತು ಸತ್ಯಗಳನ್ನು ಅವರಿಗೂ(ಅನ್ಯ ಧರ್ಮೀಯರಿಗೆ) ಕರುಣಿಸು.”
ಕೇಂದ್ರ ಗೃಹಮಂತಿ ಶಿಂದೆಯವರು ಒಂದು ಸಮುದಾಯದ ಓಲೈಕೆಗಾಗಿ ನೀಡಿದ ಹೇಳಿಕೆಗಳನ್ನು ಗಮನಿಸಿದಾಗ ಗಾಂಧೀಜಿಯವರ ಮಾತುಗಳನ್ನು ಮೆಲಕು ಹಾಕಬೇಕಾಯಿತು. ಕಾಂಗ್ರೆಸ್ಸಿಗೆ ಮುಸಲ್ಮಾನರ ಬಗ್ಗೆ ಇರುವ ಪ್ರೀತಿ ನಿನ್ನೆ ಮೊನ್ನೆಯದಲ್ಲ. ಮುಸ್ಲಿಂ ಲೀಗ್ ಪ್ರಾರಂಭಗೊಂಡಾಗಿನಿಂದ ಸ್ವಾತಂತ್ರ್ಯಾ ನಂತರದ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಮುಸ್ಲಿಮರನ್ನು ಓಲೈಸುತ್ತಲೇ ಬರುತ್ತಿದೆ. ಗಾಂಧೀಜಿಯವರು ಮತ್ತೊಂದಡೆ ಭಗವದ್ಗೀತೆಯನ್ನು ಆಧಾರವಾಗಿಟ್ಟುಕೊಂಡು ಲೋಕ ಕಲ್ಯಾಣದ ಮಾತುಗಳನ್ನಾಡುತ್ತಿದ್ದರು. ಕೃತಿಯಲ್ಲಿ ತೋರಿಸುತ್ತಿದ್ದರು. ಅವರ ಪ್ರೀತಿ ಮುಕ್ತವಾಗಿರುತ್ತಿತ್ತು. ಗಾಂಧೀ ಭಾರತದ ಮುಸ್ಲಿಮರನ್ನು ಪ್ರೀತಿಸಿದಷ್ಟು ಮತ್ಯಾರೂ ಪ್ರೀತಿಸಲಿಲ್ಲ. ಸುಶೀಲ್ ಕುಮಾರ್ ಶಿಂದೆ ಕಳಕಳಿ, ರೆಹಮಾನ್ ಖಾನ್ರ ಕಾಳಜಿ, ಇವರಿಗೆ ಪುಟವಿಟ್ಟಂತೆ ಸಿದ್ದರಾಮಯ್ಯನವರ ಹೇಳಿಕೆ, ಮುಲಾಯಂಸಿಂಗ್ರ ಅತಿಯಾದ ಮಮತೆಗಳೆಲ್ಲವೂ ದೇಶವನ್ನು ಮತ್ತೊಂದು ವಿಭಜನೆಗೆ ಅಣಿಗೊಳಿಸುತ್ತಿವೆ. ಬಾಂಗ್ಲಾದೇಶ ಮತ್ತು ಪಾಕ್ ನಂತರ ಜಮ್ಮು ಕಾಶ್ಮೀರದಲ್ಲಿ ಉದ್ಭವವಾದ ಪ್ರತ್ಯೇಕವಾದದ ಬೆಂಕಿ ಇಂದಿಗೂ ಆರಿಲ್ಲ. ಜಾತ್ಯತೀತರೆಂದು ಹೇಳಿಕೊಳ್ಳುವ ಬಹುತೇಕರು ಇಂದು ವಾಸ್ತವವನ್ನೇ ಮರೆ ಮಾಚಿ ಮಾತನಾಡುತ್ತಿರುವುದು ದೇಶದ ದೌರ್ಭಾಗ್ಯವೇ ಸರಿ. ಬಹುಸಂಖ್ಯಾತ ಹಿಂದುಗಳನ್ನು ಹೊಂದಿರುವ ಭಾರತವನ್ನು ‘ಹಿಂದುಸ್ಥಾನ’ ಎಂದುಕರೆದರೂ ಸಾಕು, ಕೂಡಲೇ ಆತನನ್ನು ಆರ್.ಎಸ್.ಎಸ್.ನವನು, ಮನುವಾದಿ ಎಂದೆಲ್ಲಾ ದೂಷಿಸಲಾಗುತ್ತದೆ. ದೇಶದ ಶೇ. 25 ರಷ್ಟು ದಲಿತರು ಹಿಂದುತ್ವದ ಭಾಗವಾಗಿಯೇ ಬದುಕುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಅನ್ಯ ಧರ್ಮಗಳಿಗೆ ಮತಾಂತರಗೊಂಡವರಿಗೆ ಅಲ್ಲಿಯೂ ಅಸಮಾನತೆ ತಪ್ಪಿದ್ದಲ್ಲ. ಶಿಂದೆಯಂತಹ ಕಾಂಗ್ರೆಸ್ಸಿಗರ ಬಾಯಲ್ಲಿ ಅಪ್ಪಿತಪ್ಪಿಯೂ ದಲಿತರ ರಕ್ಷಣೆಯ ಬಗ್ಗೆ ಒಂದೇ ಒಂದು ಪಡಿನುಡಿಯೂ ಹೊರಬಿದ್ದಿಲ್ಲ. ದಲಿತರು ಕಾಂಗ್ರೆಸ್ನಲ್ಲಿ ಜೀತದಾಳುಗಳು, ಮತಗಟ್ಟೆಗೆ ಬಂದು ಓಟು ಹಾಕುವ ಸರಕುಗಳೆಂದೇ ಅವರು ಭಾವಿಸಿದ್ದಾರೆ. ಬಹುಜನ ಸಮಾಜವಾದಿ ಪಕ್ಷ 2010 ರಲ್ಲಿ ಸರ್ಕಾರದಿಂದಲೇ ವರದಿಯೊಂದನ್ನು ಹೊರತಂದಿತು. ಆ ವರದಿ ಪ್ರಕಾರ ದಲಿತರ ಮೇಲೆ ಪ್ರತಿ 18 ನಿಮಿಷಕ್ಕೊಂದು ದೌರ್ಜನ್ಯ ನಡೆಯುತ್ತಿದೆ.
ಪ್ರತಿದಿನ ಮೂರು ದಲಿತ ಮಹಿಳೆಯರ ಮೇಲೆ ಮಾನಭಂಗ, 2 ದಲಿತರ ಕೊಲೆ, 2 ದಲಿತ ಮನೆಗಳಿಗೆ ಬೆಂಕಿ ಹಚ್ಚುವುದು, 11 ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಶೇ.27.6 ರಷ್ಟು ಹಳ್ಳಿಗಳಲ್ಲಿ ದಲಿತರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವಂತಿಲ್ಲ. ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟದ ತಾರತಮ್ಯ ಇದಾವುದೂ ಸರ್ಕಾರಕ್ಕೆ ಅವಮಾನ ಎನಿಸುತ್ತಿಲ್ಲ. ಯಾಕೆ ಶಿಂದೆ ಸೇರಿದಂತೆ ಕಾಂಗ್ರೆಸ್ನ ಬಹುತೇಕ ದಲಿತ ನಾಯಕರು ನವಬ್ರಾಹ್ಮಣರನ್ನು ಅಪ್ಪಿಕೊಂಡಂತೆ ವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದ ಖೈರ್ಲಾಂಜಿ ಘಟನೆ, ಹರಿಯಾಣಾದಲ್ಲಿ ದಲಿತರ ಚರ್ಮ ಸುಲಿದ ಪ್ರಕರಣ, ಕರ್ನಾಟಕದ ಕಂಬಲಪಲ್ಲಿಯಂತಹ ಸಾವಿರಾರು ಘಟನೆಗಳು ನಡೆದು ಹೋದರೂ ಶಿಂದೆಯಂಥ ದಲಿತ ನಾಯಕರ ಮನ ಕಲಕುವುದಿಲ್ಲವೇಕೆ? ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಬೇಡಿ ಎಂದು ರಾಜ್ಯಗಳಿಗೆ ಪತ್ರ ಬರೆಯುವ ದಲಿತ ನಾಯಕ, ದಲಿತ ಮೀಸಲಾತಿಯಲ್ಲಿಯೇ ಕೇಂದ್ರ ಸಚಿವರಾಗಿರುವ ಶಿಂದೆಗೆ, “ದಲಿತರು ಈ ದೇಶದ ಅವಿಭಾಜ್ಯ ಅಂಗ. ಪ್ರಜಾಪ್ರಭುತ್ವದಲ್ಲಿ ಎಲ್ಲರಂತೆ ದಲಿತರೂ ಸಮಾನರು, ಅವರ ಮೇಲೆ ದೌರ್ಜನ್ಯ ನಡೆದರೆ ಕ್ರಮಕೈಗೊಳ್ಳಿ” ಎಂದು ಪತ್ರ ಬರೆಯಲು ಏಕೆ ಧೈರ್ಯ ಬರುತ್ತಿಲ್ಲ?
“ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿದರೆ ಹುಷಾರ್!” ಎಂದು ಹೇಳುವ ನಮ್ಮ ಮುಖ್ಯಮಂತ್ರಿಗಳಿಗೆ “ರಾಜ್ಯದಲ್ಲಿ ದಲಿತರನ್ನು ಮುಟ್ಟಿದರೆ ಜೋಕೆ” ಎಂದು ಹೇಳುವ ತಾಕತ್ತು ಬರುತ್ತಿಲ್ಲವೇಕೆ? ಇಷ್ಟಕ್ಕೂ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆಗೊಳಗಾದವರಲ್ಲ. ಮೇಲ್ವರ್ಗದಿಂದ ಅವರು ದೌರ್ಜನ್ಯಕ್ಕೆ ಒಳಗಾದ ನಿದರ್ಶನಗಳೇ ಇಲ್ಲ. ಏಕೆಂದರೆ ಈ ಸಮುದಾಯಗಳು ಹೆಚ್ಚಾಗಿ ನಗರವಾಸಿಗಳೇ ಹೊರತು ಗ್ರಾಮೀಣ ವಾಸಿಗಳಲ್ಲ. ಅಕಸ್ಮಿಕ ಕೋಮುಗಲಭೆಗಳಲ್ಲಿ ತೊಂದರೆಗೆ ಸಿಲುಕಿದರೂ ಅವರಿಗೆ ನಗರ ವಾಸಿಗಳದ್ದಾರಿಂದ ರಕ್ಷಣೆಯು ಅಷ್ಟೆ ಬೇಗ ಸಿಗುತ್ತದೆ. ಹೀಗಿದ್ದೂ ಇವರ ಬಗ್ಗೆ ಕಾಳಜಿ ವಹಿಸುವುದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ನಿತ್ಯವೂ ಮೇಲ್ಜಾತಿಗಳಿಂದ ಶೋಷಣೆಗೆ ಒಳಗಾಗುವ ದಲಿತರ ಬಗ್ಗೆ ಈ ನಾಯಕರುಗಳಿಗೆ ಏಕೆ ಇಷ್ಟೊಂದು ತಾತ್ಸರ ಎಂಬುವುದೇ ಪ್ರಶ್ನೆ. ಉತ್ತರ ಪ್ರದೇಶದಲ್ಲಿ ಪ್ರತಿ ಠಾಣೆಯಲ್ಲಿ 2-3 ಮುಸ್ಲಿಂ ಸಿಬ್ಬಂದಿ ನೇಮಕಕ್ಕೆ ಆದೇಶಿಸುವ ಮುಲಾಯಂ ಸರ್ಕಾರ ದಲಿತರಿಗೂ ಅವಕಾಶ ಸಿಗುವಂತೆ ಆದೇಶಿಸಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅಲ್ಲಿನ ದಲಿತರೆಲ್ಲರೂ ಮಾಯಾವತಿ ಜೊತೆಗೆ ಇದ್ದಾರೆ. ಹಾಗಾಗಿ ಅಲ್ಪಸಂಖ್ಯಾತರ ಓಲೈಕೆ ಅನಿವಾರ್ಯ. ಇನ್ನು ಕಾಂಗ್ರೆಸ್ಸಿಗರಿಗೆ ಹೇಗಾದರೂ ದಲಿತರು ನಮಗೆ ಓಟು ನೀಡುವ ಜನರೆಂಬ ಗರ್ವ ತುಂಬಿ ತುಳುಕುತ್ತಿದೆ. ಆ ಕಾರಣಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ದಲಿತರ ಸ್ಥಿತಿ ಬದಲಾಗಿಲ್ಲ. ರೆಹಮಾನ್ ಖಾನ್ ಮುಸ್ಲಿಂ ಸಮುದಾಯದ ಮೇಲೆ ಕೇವಲ ಮಮತೆ ತೋರಿಸುವ ಬದಲು ಸಾಚಾರ್ ವರದಿಯಲ್ಲಿ ನೀಡುವ ಅಂಶಗಳನ್ನು ಗಮನಿಸಿ ಮುಸ್ಲಿಮರಿಗೆ ಸರ್ಕಾರಿ ಹುದ್ದೆಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲಿ. ಮುಂದಾದರೂ ನಮ್ಮನ್ನು ಪ್ರತಿನಿಧಿಸುವ ದಲಿತ, ಅಲ್ಪಸಂಖ್ಯಾತ ಸಮುದಾಯದ ರಾಜಕಾರಣಿಗಳು ದಿಕ್ಕು ತಪ್ಪಿದ ಆಲೋಚನೆಗಳಿಂದ ಹೊರಬಂದು ಸಮುದಾಯಗಳ ಅಭಿವೃದ್ದಿಗೆ ಶ್ರಮಿಸಲಿ. ಕೇವಲ ಮತಬ್ಯಾಂಕ್ ಹೆಚ್ಚಿಸಿಕೊಳ್ಳಲು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಲ್ಪಸಂಖ್ಯಾತರ ಓಲೈಕೆಯಲ್ಲಿ ಪೈಪೋಟಿ ನಡೆಸಿದರೆ ದೇಶ ಖಂಡಿತ ಉದ್ಧಾರವಾಗಲಾರದು. ದಲಿತರೂ ಕೂಡ ಈ ನೆಲದ ಮಕ್ಕಳಲ್ಲವೇ? ಅವರೂ ಎಲ್ಲರಂತೆ ಬದುಕಬೇಕಲ್ಲವೇ? ಈ ಬಗ್ಗೆ ಗಂಭೀರ ಚರ್ಚೆಯ ಅಗತ್ಯವಿದೆ.
ಚಿತ್ರ ಕೃಪೆ : http://www.thehindu.com
good artile by swamiji
ಅಲ್ಪಸಂಖ್ಯಾತರ ಓಲೈಕೆಯ ಕುರಿತು ಅಸಮಧಾನ ವ್ಯಕ್ತಪಡಿಸುವ ಲೇಖನ ಅದೇ ರಭಸದಲ್ಲಿ ದಲಿತರ ಒಲೈಕೆಯನ್ನು ಮಾಡಬೇಕು ಎಂದು ಒತ್ತಾಯಿಸುವಂತೆ ತೋರುತ್ತದೆ. ಲೇಖನದ ಮೊದಲ ಭಾಗದಲ್ಲಿ “ಓಲೈಕೆ ರಾಜಕಾರಣ”ದ ಕುರಿತು ಇರುವ ಸಮಸ್ಯೆಗಳನ್ನು ಚರ್ಚಿಸುತ್ತದೆ ಎಂಬ ಕುತೂಹಲವನ್ನು ಮೂಡಿಸಿದರೂ ಉತ್ತರಾರ್ಧದಲ್ಲಿ ನಿರಾಸೆ ಮೂಡಿಸುತ್ತದೆ, ಏಕೆಂದರೆ ಯಾವ ವಾದವನ್ನು ತಿರಸ್ಕರಿಸುವ ಮೂಲಕ ಲೇಖನ ಪ್ರಾರಂಭವಾಗುತ್ತದೆಯೋ ಅದನ್ನೆ ಮತ್ತೊಂದು ರೀತಿಯಲ್ಲಿ ಒಪ್ಪುವಂತಹ ಒತ್ತಡವನ್ನೂ ಹೇರುತ್ತದೆ. ಆದ್ದರಿಂದ ಲೇಖನವು ವಿಪರ್ಯಾಸದ ವಾದಗಳನ್ನು ಮುಂದೊತ್ತಿದ್ದೆ ಎಂದು ಹೇಳಬಹುದು.
ಅಲ್ಪಸಂಖ್ಯಾತರನ್ನು ಓಲೈಸಬೇಕೋ ಅಥವಾ ಇತರರನ್ನು ಓಲೈಸಬೇಕೋ ಎಂಬುದು ಆಸಕ್ತಿದಾಯಕ ವಿಷಯವಲ್ಲ ಮತ್ತು ರಾಜಕಾರಣದ ನಿಜವಾದ ಕಾರ್ಯವೂ ಅಲ್ಲ. ಓಲೈಕೆ ರಾಜಕಾರಣವನ್ನು ಉಪಮೆಯ ಮೂಲಕ ಹೇಳುವುದಾದರೆ, ಕಾಲೇಜು ವಿದ್ಯಾರ್ಥಿಗಳ “ಬಕೆಟ್ ಹಿಡಿಯುವ” ಕಲ್ಪನೆ ಹೋಲಿಸಬಹುದು. ಅಂದರೆ ತಮ್ಮ ಸ್ವಹಿತಾಸಕ್ತಿ ಓಲೈಕೆ ರಾಜಕಾರಣದ ಮುಖ್ಯ ಗುರಿಯಾಗಿರುತ್ತದೆಯೇ ಹೋರತು ಪ್ರಜೆಗಳ ಹಿತಾಸಕ್ತಿಯಲ್ಲ.
ಸ್ವಾಮೀಜಿ
ಇನ್ನೊಂದು ಕಡೆ ಲಿಂಗಾಯತ-ವೀರಶೈವರು ಹಿಂದೂಗಳೇ ಅಲ್ಲ. ಅವರು ಸ್ವತಂತ್ರ ಧರ್ಮದವರು. ಅದಕ್ಕೆ ಅವರದ್ದು ಹಿಂದೂ ಅಲ್ಲದ ಬೇರೆಯೊಂದು ಧರ್ಮವೆಂದು ಪರಿಗಣಿಸಿ ಅಲ್ಪಸಂಖ್ಯಾತರಿಗೆ ಸಿಗುವ ಮಿಸಲಾತಿ ಇತ್ಯಾದಿ ಸವಲತ್ತು ಕೊಡಬೇಕೆಂದು ಇತ್ತೀಚಿಗೆ ಟಿವಿ ತುಂಬಾ ಮಾತುಕತೆ.
ಸರಕಾರದವರು ಎಲ್ಲ ಪ್ರಜೆಗಳಿಗೂ ರಕ್ಷಣೆ-ಕೊಡಬೇಕು ಬರಿ ಅಲ್ಪಸಂಖ್ಯಾತರು, ದಲಿತರಿಗೆ ಮಾತ್ರವಲ್ಲ.
‘ಬಸವಣ್ಣ’ ಜಾತಿ ಬಿಡಿ ಎಂಬ ತತ್ವವನ್ನು ಅವನ ಅನುಯಾಯಿ ಎಂದು ಕರೆದುಕೊಳ್ಳುವವರೇ ಪಾಲಿಸದೇ, ಮನುಧರ್ಮ ಶಾಸ್ತ್ರದಲ್ಲಿ ನಂಬಿಕೆ ಇರುವ ವೈದಿಕರಿಗೆ ತಿವಿದರೆ ಅದು ಸರಿಯೇ!
ಜಾತ್ಯಾತೀತ ದೇಶದಲ್ಲಿ ಒಬ್ಬ ನಿಜಾವಾಗಲೂ ಮನುಧರ್ಮ ಶಾಸ್ತ್ರದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ, ಅವನನ್ನು ಎಲ್ಲ ಸರಿ ದೇಶದಿಂದಲೇ ಹೊರಗಟ್ಟುವಿರಾ? ಆಗ ಅದು ಜಾತ್ಯಾತೇತತೆಯೇ ?
ಈ ದೇಶದಲ್ಲಿ ಎಲ್ಲರಿಗೂ ಅವರವರ ಧರ್ಮಗಳನ್ನೂ ಪಾಲನೆ-ಮಾಡುವ ಹಕ್ಕಿದೆ, ಆದರೆ ವೈದಿಕರಿಗೆ, ಹಿಂದುಗಳಿಗೆ ವೇದದಲ್ಲಿ ಶ್ರದ್ಧೆ ಇರುವವರು ಮಾತ್ರ ಜಾತ್ಯಾತೀತರು, ಧರ್ಮಾತೀತರು ಆಗಿರಲೇ ಬೇಕು! ಅದು ಯಾವ ನ್ಯಾಯ, ತರ್ಕ ?
ಈ ದೇಶದಲ್ಲಿ ಅತ್ಯಾಚಾರ, ಕೊಲೆ, ಹಿಂಸೆ ಎಲ್ಲ ಜಾತಿ, ಧರ್ಮ, ಪಂಗಡದವರ ಮೇಲೂ ನಡೆಯುತ್ತಿದೆ .
“ಈ ದೇಶದಲ್ಲಿ ಅತ್ಯಾಚಾರ, ಕೊಲೆ, ಹಿಂಸೆ ಎಲ್ಲ ಜಾತಿ, ಧರ್ಮ, ಪಂಗಡದವರ ಮೇಲೂ ನಡೆಯುತ್ತಿದೆ .” Manuvadi mentality behind all this crime.
ಸರಿ. ಜಗತ್ತಿನಲ್ಲಿ ನಡೆಯುವ ಎಲ್ಲ ಅತ್ಯಾಚಾರ, ಕೊಲೆ, ಹಿಂಸೆ ಮನುವಾದಿ ಮನಸ್ಥಿತಿಯಿಂದಲೇ ನಾಗಶೆಟ್ಟಿ ಹೇಳ್ತಾರೆ !
ನಮ್ಮ ಶೆಟ್ಕರ್ ಸರ್ ಅವರು ಮನುವಿನ ಕಟ್ಟಾ ಅಭಿಮಾನಿ.ದಿನಕ್ಕೊಂದು ಬಾರಿ ಮನು ಹೆಸರೆತ್ತದೆ ಅವರಿಗೆ ನಿದ್ದೆಯೇ ಬರುವುದಿಲ್ಲವಂತೆ 😛
ಯಾವುದಾರು ಮನುವಾದಿಗಳು, ಬ್ರಾಹ್ಮಣರು, ಮೇಲೆಜಾತಿಯವರು ಇಲ್ಲದ ಕಂಪನಿ ಮಾಡಿಹ ನಿದ್ರೆ ಮಾತ್ರೆ ಸಿಕ್ಕರೆ …
ಏನ್ ಬದನೇಕಾಯಿ !
Dalits should stop converting to Buddhism or Christianity. When Basavadwaita is there, what is the need for Buddhism or Christianity? When Dalits take up Lingayata religion, they will become socially and politically powerful.
[Dalits should stop converting to Buddhism or Christianity. When Basavadwaita is there,]
ಇದನ್ನು..
Dalits should stop converting to Buddhism or Christianity. When Islam and Basavadwaita is there, ಎಂದು ಓದಿಕೊಳ್ಳಬೇಕು.
ಮೇಲಿನ ಸಣ್ಣ ತಿದ್ದುಪಡಿ ನಮ್ಮ ಗುರುಗಳ ಪರವಾಗಿ..
Mr. Vijay, millions of Hindus have converted to Islam in the history of India. They don’t need your advice.
Crap.
Millions of Hindus/Buddhists/Jains etc have converted to Islam in the history of India because of fear, not because of any intellectual debate.
Look at Pakistan and Bangladesh, they have been just committing genocide of Hindus or converting them to Islam.
And this Nagshetty adores Islam!
Basavadwaita ಇದು ಯಾವ ಹೊಸ ಧರ್ಮ?
ಬಸವಣ್ಣ ಆದ್ವೈತವನ್ನಾಗಲಿ, ವಿಶಿಷ್ಟಾದ್ವೈತವನ್ನಾಗಲಿ ಪ್ರತಿಪಾದಿಸಿಲ್ಲ. ಬಸವಣ್ಣ ಅವರದು ಶೂನ್ಯ ಸಿದ್ಧಾಂತ. ಅಲ್ಲಿ ಆತ್ಮದ ಕಲ್ಪನೆ ಇಲ್ಲವಲ್ಲ !