ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 13, 2013

23

ಬಸವ ಚಳುವಳಿಯನ್ನು ಕಾಡುತ್ತಿರುವ ಸಾಹಿತ್ಯ ಲೋಕದ ಬು(ಲ)ದ್ಧಿ ಜೀವಿಗಳು !

‍ನಿಲುಮೆ ಮೂಲಕ

– ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ

vachana-charche       ಇಷ್ಟು ದಿನಗಳವರೆಗೆ ಧಾರ್ಮಿಕ ಲೋಕದ ಗುಂಗಾಡುಗಳು ಬಸವಣ್ಣನರನ್ನು ಕಾಡುತ್ತಿದ್ದವು. ಅವರು ರಚಿಸಿದ ವಚನಗಳಿಗೆ ತದ್ವಿರುದ್ಧವಾಗಿ ತಾವು ಬದುಕಿದ್ದಲ್ಲದೆ ತಮ್ಮ ಭಕ್ತರ ಹಿಂಡನ್ನು ತಮ್ಮ ಹಿಂದೆ ಕಟ್ಟಿಕೊಂಡು ಬಸವಾದಿ ಶರಣರಿಗೆ ಸಾಕಷ್ಟು ಅಪಚಾರ ಮಾಡಿದ್ದರು. ಇದೀಗ ಸಾಹಿತ್ಯ ಲೋಕದ ಗುಂಗಾಡುಗಳೂ ತಾವೇನು ಕಡಿಮೆ ಇಲ್ಲ ಎಂದು ಬಸವಣ್ಣನವರನ್ನು ಹಾಗೂ ಅವರು ಬರೆದ ವಚನ ಸಾಹಿತ್ಯವನ್ನು ಪರಾಮರ್ಶಿಸುವ ಎಗ್ಗತನ ತೋರುತ್ತ, ಇಲ್ಲ ಸಲ್ಲದ ಕುಯುಕ್ತಿಗಳನ್ನು ನಡೆಸಿದ್ದಾರೆ.  ಹಲವಾರು ವರ್ಷಗಳಿಂದ ಬಸವಣ್ಣನವರ ಕುರಿತು ಪರಾಮರ್ಶಿಸುವ ಬುದ್ದಿವಂತಿಕೆಯನ್ನು ತೋರುತ್ತಿರುವ ಬುದ್ಧಿಜೀವಿ ವೇಷದಾರಿ ಬರಹಗಾರರು ಸಮಯ ಸಿಕ್ಕಾಗಲೆಲ್ಲ ಬಸವಣ್ಣನವರ ಮೇಲೆ ಕೆಸರನ್ನು ಎರಚುತ್ತ ತಾವು ದೊಡ್ಡವರಾಗಬೇಕೆಂಬ ಹುನ್ನಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವಸಂಗತಿಯೆ ಆಗಿದೆ.

ಹಿಂದೊಮ್ಮೆ ಗುಲ್ಬರ್ಗಾದ ಕಪಟರಾಳ ಕೃಷ್ಣರಾವ್ ಎಂಬ ಸಂಶೋಧಕನೋರ್ವ ಅನುಭವ ಮಂಟಪವೇ ಇಲ್ಲ ಎಂದು ಸಂಶೋಧಿಸಿ ಹೇಳಿದ್ದ. ಆಗ ಲಿಂಗಾಯತ ಧರ್ಮದವರೆಂದು ಸೋಗುಹಾಕಿರುವ ಸೋಗಲಾಡಿ ಗುರು- ಜಗದ್ಗುರುಗಳೆಲ್ಲ ತಮ್ಮ ತುಟಿಗಳನ್ನು ಹೊಲಿದುಕೊಂಡು ತೆಪ್ಪಗಿದ್ದರು. ಅರೆಬರೆ ಜ್ಞಾನದ ಲಿಂಗವಂತ ಸಮಾಜದ ಜನಗಳು ‘ನಮಗೂ ಬಸವಣ್ಣನವರಿಗೂ ಯಾವ ಬಾದರಾಯಣ ಸಂಬಂಧ ?’ ಎಂದುಕೊಂಡು ಕಪಟರಾಳರ ಕಪಟತನವನ್ನು ಪ್ರಶ್ನಿಸಲು ಹೋಗಲಿಲ್ಲ. ಈಗೀಗ ಬುದ್ದಿಜೀವಿಗಳೆಂದು ತಮ್ಮಷ್ಟಕ್ಕೆ ತಾವೇ ಕರೆದುಕೊಂಡಿರುವ ಕೆಲವು  ಸೋಕಾಲ್ಡ ಜನಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಸಂಶೋಧಿಸುತ್ತಿದ್ದೇವೆ ಎಂಬ ನೆವದಲ್ಲಿ ಸಾಕಷ್ಟು ಘಾಸಿಯನ್ನುಂಟುಮಾಡಿದ್ದಾರೆ. ‘ಮಹಾಚೈತ್ರ’ ಕೃತಿಯ ಮೂಲಕ ಎಚ್.ಎಸ್. ಶಿವಪ್ರಕಾಶ, ‘ಆನುದೇವ ಹೊರಗಣದವನು’ ಪುಸ್ತಕದ ಮೂಲಕ ಬಂಜಗೇರಿ ಜಯಪ್ರಕಾಶ, ‘ಧರ್ಮಕಾರಣ’ದ ಮೂಲಕ ಪಿ.ವಿ.ನಾರಾಯಣ ಮುಂತಾದವರು ತಮ್ಮ ಮೂಗಿನ ನೇರಕ್ಕೆ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಈಗಾಗಲೇ ಮೂತಿಗೆ ಇಕ್ಕಿಸಿಕೊಂಡಿದ್ದಾರೆ.

ಆದರೂ ಇತ್ತೀಚೆಗೆ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ಮಹಾಶಯರುಗಳು ವಚನಕಾರರು ಜಾತಿ ವಿರೋಧಿಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ ಎಂದೂ ಜೊತೆಗೆ ಅದು ಬ್ರಾಹ್ಮಣ ವಿರೋಧಿ ಚಳುವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.   ಇದನ್ನು ಕೆಲವು ಜನ ಸೋಕಾಲ್ಡ  ಬು(ಲ)ದ್ದಿ ಜೀವಿಗಳು ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದು ಅವರ ಎಬಡತನಕ್ಕೆ ಸಾಕ್ಷಿಯಾಗಿದೆಯೆಂದರೂ ತಪ್ಪಾಗುವುದಿಲ್ಲ.

  ಯಾವುದೇ ವ್ಯಕ್ತಿಯ ವ್ಯಕ್ತಿತ್ವಕ್ಕೆ ಘಾಸಿಯಾದಾಗ ಸಹಜವಾಗಿ ಸ್ವಾಭಿಮಾನಿಯಾದ ವ್ಯಕ್ತಿ ಸಿಡಿದೇಳುತ್ತಾನೆ. ಕಸುವಿಲ್ಲದ, ಆತ್ಮಸ್ಥೈರ್ಯವಿಲ್ಲದ ವ್ಯಕ್ತಿತ್ವಗಳು , ಒಂದು ಸಣ್ಣ ಪ್ರತಿರೋಧಕ್ಕೆ ಅಲ್ಲಿಯೇ ಕುಸಿದು ಬೀಳುತ್ತವೆ. ದಕ್ಷಿಣ ಆಫ್ರಿಕಾ ದೇಶಕ್ಕೆ ಹೋಗುವ ಸಂದರ್ಭದಲ್ಲಿ ಮೋಹನದಾಸ ಕರಮಚಂದಗಾಂಧಿ ಪ್ರಥಮ ದರ್ಜೆಯ ಟಿಕೇಟು ಪಡೆದು ಪ್ರಯಾಣಿಸುತ್ತಿರುತ್ತಾರೆ. ಗಾಂಧೀಜಿ ಕಪ್ಪು ವರ್ಣದವರಾದ್ದರಿಂದ ಆ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವ  ಬಿಳಿ ವರ್ಣದ ಜನಗಳು ಆಕ್ಷೇಪಿಸಿ, ಗಾಂಧೀಜಿಯವರನ್ನು ರೈಲ್ವೆಯಿಂದಲೆ ಸ್ಟೇಷನ್‍ವೊಂದರಲ್ಲಿ ಅಕ್ಷರಶಃ ನೂಕಿಸುತ್ತಾರೆ. ಸ್ವಾಭಿಮಾನಿಯಾದ ಗಾಂಧೀಜಿ ಅದನ್ನು ಪ್ರತಿಭಟಿಸಿ ಅಲ್ಲಿಯೇ ಸತ್ಯಾಗ್ರಹ ಆರಂಭಿಸುತ್ತಾರೆ. ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಮಣಿದ ರೈಲ್ವೆ ಇಲಾಖೆ ಮತ್ತೆ ಅವರಿಗೆ ಪ್ರಥಮ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವ ಅವಕಾಶ ಒದಗಿಸಿಕೊಡುತ್ತಾರೆ. ಈ ಘಟನೆಯ ಮೂಲಕ ಗಾಂಧೀಜಿಗೆ ಮನದಟ್ಟಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಮೇಲಾಗುತ್ತಿರುವ ಅನ್ಯಾಯವನ್ನು ಸತ್ಯಾಗ್ರಹದ ಮೂಲಕ ಪ್ರತಿಭಟಿಸಿದರೆ ನ್ಯಾಯ ದೊರಕುತ್ತದೆ ಎಂದು.ಈ ಘಟನೆಯೇ ಅವರಲ್ಲಿ ಗಾಂಧಿತನ ಬೆಳೆಯಲು ಕಾರಣವಾಯಿತು. ಅದರಂತೆ ಡಾ. ಅಂಬೇಡ್ಕರ್ ಅವರು ಸಹ ‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಎಂಬಂತೆ ಸಾಕಷ್ಟು ಸಲ ನೋವು ಹೆಜ್ಜೆ ಹೆಜ್ಜೆಗೂ ಇದಿರಾಗುವ ಅವಮಾನಗಳನ್ನು ಅನುಭವಿಸಿದರು. ಉಳ್ಳವರು ಶೋಷಿತರ ಮೇಲೆ ಮಾಡುವ ಅನ್ಯಾಯ- ಅತ್ಯಾಚಾರಗಳನ್ನು ನೆನೆದು ಬಸವಳಿದು ಹೋಗುವುದಿಲ್ಲ. ತಮ್ಮ ಚೇತನವನ್ನು  ಉದ್ಧೀಪನಗೊಳಿಸುವ ಮೂಲಕ ತಳವರ್ಗದವರ ಮೇಲೆ ಆಗುತ್ತಿರುವ ಶೋಷಣೆಗಳನ್ನು ತಪ್ಪಿಸಲು ಅಹರ್ನಿಶಿ ಶ್ರಮಿಸಿದರು.

ಅಂತೆಯೇ ಬಸವಣ್ಣನವರೂ ಸಹ ತಮ್ಮ ಉಪನಯನ ಸಂದರ್ಭದಲ್ಲಿ ಕೇಳಿರಬಹುದೆಂದು ಹೇಳಲಾಗುತ್ತಿರುವ ಪ್ರಶ್ನೆಗಳಿಗೆ ಬ್ರಾಹ್ಮಣ ಸಮಾಜ ತತ್ತರಗೊಂಡದ್ದು ಸುಳ್ಳಲ್ಲ. ದಾರವನ್ನು ಹಾಕಿಕೊಳ್ಳುವ ಮೂಲಕ ಯಾರಾದರೂ ಬ್ರಾಹ್ಮಣ ಆಗುವಂತಿದ್ದರೆ ನನ್ನ ಅಕ್ಕ ಅಕ್ಕನಾಗಮ್ಮಳಿಗೂ ಅದನ್ನು ಹಾಕಬಹುದಲ್ಲ ! ಎಂದು ಬಸವ ಕೇಳಿದ್ದು ಅಂದಿನ ಕರ್ಮಠ ಸಮಾಜಕ್ಕೆ ಬೆಂಕಿ ಬಿದ್ದಂತೆ ಆಗಿರಬೇಕು. ಆಗ ಬಸವ ಬಾಲಕನಾಗಿದ್ದರೂ ಆತನಿಗೆ ಯಾವ ಸದರು ಕೊಡದೆ ಅಕ್ಕ- ತಮ್ಮನನ್ನು ಇಂಗಳೇಶ್ವರದಿಂದಲೇ ಓಡಿಸಿರುವ ಸಾಧ್ಯತೆ ಇದೆ. ಏಕೆಂದರೆ ಬಸವಣ್ಣ ತನ್ನೊಂದು ವಚನದಲ್ಲಿ

ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ

ನಂಟರು ಬಂದರೆ ಸಮಯವಿಲ್ಲೆನ್ನಿ

ಇಂದು ಬರುವ ನಂಟರು ಅಂದೇಕೆ ಬಾರರು

ನೀರಿಂಗೆ ನೇಣಿಂಗೆ ಹೊರಗಾದಂದು?

ಸಮಯಾಚಾರಕ್ಕೊಳಗಾದಂದು?

ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತು:

ಬಳಿಕ ಬಂಧುಗಳುಂಟೆ ಕೂಡಲ ಸಂಗಮದೇವ?

ಅಂದರೆ ಉಪನಯನದ ಉದ್ದೇಶವನ್ನು ಪ್ರಶ್ನಿಸಿದ್ದಕ್ಕೆ  ಕರ್ಮಠ ಆಗಮಿಕ ಶೈವ ಕುಲದ ಬ್ರಾಹ್ಮಣರು ಇಂಗಳೇಶ್ವರದಿಂದಲೇ ಬಸವಣ್ಣ ಹಾಗೂ ಅವರ ಸಹೋದರಿ ಅಕ್ಕನಾಗಮ್ಮಳನ್ನು  ಬಹಿಷ್ಕರಿಸಿ ಬಿಟ್ಟರು. ಬ್ರಾಹ್ಮಣ ಸಮಾಜ ಹಾಗೂ ಊರಿನಿಂದಲೇ ತಿರಸ್ಕøತನಾದ ಬಸವಣ್ಣನವರು ಸಾಕಷ್ಟು ನೋವುಗಳನ್ನು ಅವಮಾನಗಳನ್ನು ಅನುಭವಿಸಿರ ಬಹುದು. ಆದ್ದರಿಂದಲೇ ಆತ ಆಕ್ರೋಶಗೊಂಡು ಇಂದು ಬರುವ ನೆಂಟರು ( ಮಂತ್ರಿಯಾಗಿದ್ದಾಗ ಬರುವವರು) ಅಂದೇಕೆ (ನೀರಿಗೆ ನೇಣಿಗೆ ಹೊರಗಾದಾಗ ) ಬಾರರು ? ಎಂದು ಪ್ರಶ್ನಿಸಿರಬೇಕು. ಬಸವಣ್ಣನವರ ಬಾಲ್ಯದ ಸಂದರ್ಭದಲ್ಲಿ ಈ ರಭಸದ ಘಟನೆ ಜರುಗಿರದಿದ್ದರೆ, ಬ್ರಾಹ್ಮಣ ಸಮಾಜ ಆತನಿಗೆ ಇನ್ನಿಲ್ಲದ ಅವಮಾನ, ಚಿತ್ರಹಿಂಸೆ ಕೊಡದೆ ಹೋಗಿದ್ದರೆ ಆತ ಮುಂದೆಯೂ ಬ್ರಾಹ್ಮಣರ ದುರ್ವತನೆ, ಕುಟೀಲೋಪಾಯತನಗಳನ್ನು ಅರಿಯುತ್ತಿರಲಿಲ್ಲ. ಜಾತಿಗಳು ಅಂದು ಸಮಾಜದಲ್ಲಿ ಮಾಡಿದ ಕೊಳಕುತನವನ್ನು ಸಹ ಆತನನ್ನು ಹೆಚ್ಚು ಕಲಕುತ್ತಿರಲಿಲ್ಲ. ತನ್ನ ವೈಯಕ್ತಿಕತೆಯ ಮೇಲಾದ ಹಲ್ಲೆ ಬಸವಣ್ಣನೊಳಗಿನ ಬಸವಣ್ಣತನವನ್ನು ಬಡಿದೆಬ್ಬಿಸಿತು.  ಅಂದಿನ ದಿನಮಾನಗಳಲ್ಲಿ ಜನಿವಾರವನ್ನು ಯಜ್ಞೋಪವಿತ ಎಂದು ಕರೆಯುತ್ತಿದ್ದರು. ರಾಜ ಮಹಾರಾಜರೂ ಸಹ ತಮ್ಮ ಗುರುಗಳನ್ನಾಗಿ ಬ್ರಾಹ್ಮಣರನ್ನೇ ಆಶ್ರಯಿಸುತ್ತಿದ್ದರು. ಒಂದರ್ಥದಲ್ಲಿ ಬ್ರಾಹ್ಮಣ ರಾಜ ಮಹಾರಾಜರನ್ನೂ ತನ್ನ ಕಿರುಗುಣಿಕೆಯಲ್ಲಿ ಕುಣಿಸಬಹುದಾದ ತುಂಬಾ ಪ್ರಭಾವಿ ವ್ಯಕ್ತಿಯಾಗಿದ್ದ.  ಬ್ರಾಹ್ಮಣರ ಸಂಕೇತವಾದ  ಜನಿವಾರವನ್ನು ಬಸವಣ್ಣ ನೇಣು ಎಂದು ತಿರಸ್ಕಾರಯುತ ದನಿಯಲ್ಲಿ ಕರೆದದ್ದು ಸ್ಥಾಪಿತ ವ್ಯವಸ್ಥೆಗೆ ಹಿಡಿದ ಬಹುದೊಡ್ಡ ಸ್ಪೋಟವಾಗಿತ್ತು. ಇದರೊಂದಿಗೆ ಬಸವಣ್ಣನವರು ಹೊಲೆ ಪಿಂಡದ ಮೂಲಕವೇ ಜೀವ ಜಗತ್ತು ಹುಟ್ಟಿಕೊಂಡಿದೆ. ಎಲ್ಲರೂ ಹುಟ್ಟುವುದು ಒಂದೆ ಬಗೆ ಹಾಗಿರುವಾಗ ಈ ಜಾತಿಗಳಾದರೂ ಯಾಕೆ ?

ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ

ಜಲ ಬಿಂದುವಿನ ವ್ಯವಹಾರ ಒಂದೇ,

ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲಾ ಒಂದೇ

ಏನನೋದಿ, ಎನ ಕೇಳಿ, ಏನು ಫಲ ?

ಕುಲಜನೆಂಬುದಕ್ಕೆ ಆವುದು ದೃಷ್ಟ ?

ಸಪ್ತಧಾತು ಸಮಂಪಿಂಡಂ ಸಮಯೋನಿಸಮುದ್ಭವಂ

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ

ಹಾಸನಿಕ್ಕಿ ಸಾಲಿಗನಾದ,ವೇದವನೋದಿ ಹಾರುವನಾದ

ಕರ್ಣದಲ್ಲಿ ಜನಿಸಿದವರುಂಟೆ  ಜಗದೊಳಗೆ ?

ಇದುಕಾರಣ ಕೂಡಲಸಂಗಮದೇವಾ

ಲಿಂಗಸ್ಥಲವನರಿದವನೆ ಕುಲಜನು

ಹುಟ್ಟಿನ ಮೂಲವನ್ನು ಬಿಚ್ಚಿರಿಸಿ, ವೃತ್ತಿಗಳು ವ್ಯಕ್ತಿಯ ಜಾತಿಯನ್ನು ನಿರ್ಧರಿಸಿವೆಯೆ ಹೊರತು, ಎಂದೆಂದಿಗೂ ಯಾರೂ ಮೂಲತಃ ಯಾವ ಜಾತಿಯವರೂ ಅಲ್ಲ ಎಂಬ ಸಂದೇಶವನ್ನು ಅವರು ಜಗತ್ತಿಗೆ ನೀಡಿದ್ದಾರೆ. ಆದರೆ ಅದುವರೆಗೆ ವರ್ಣ ವ್ಯವಸ್ಥೆಯ ಅಡಿಯಲ್ಲಿ ಸಮಾಜವನ್ನು ಸಾವಿರ ಸಾವಿರ ಓಳುಗಳನ್ನು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಪಟಾಲಂ ಭದ್ರವಾಗಿ ಬೇರುಬಿಟ್ಟಿತ್ತು. ಆ ಬೇರುಗಳ ಬುಡಕ್ಕೆ ಸತ್ಯದ ಕೊಡಲಿಪೆಟ್ಟುಗಳನ್ನು ಕೊಡುವ ಮೂಲಕ ಶರಣರು ಅವು ಶಿಥಿಲಗೊಳ್ಳುವಂತೆ ವ್ಯವಸ್ಥಿತವಾದ ವೈಚಾರಿಕ ವಿಚಾರಗಳನ್ನು ಬಿತ್ತಿದರು.

ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ :

ಕುಲವೇ ಡೋಹಾರನ ? ಕುಲವೇ ಮಾದಾರನ ? ಕುಲವೇ ದೂರ್ವಾಸನ

ಕುಲವೇ ವ್ಯಾಸನ? ಕುಲವೇ ವಾಲ್ಮೀಕನ ? ಕುಲವೇ ಕೌಂಡಿನ್ಯ

ಕುಲವ ನೋಳ್ಪಡೆ ಹುರುಳಿಲ್ಲ ;

ಅವರ ನಡೆಯ ನೋಳ್ಪಡೆ ನಡೆಯುವರು ತ್ರಿಲೋಕದಲಿಲ್ಲ ನೋಡಾ

ಕಪಿಲಸಿದ್ದ ಮಲ್ಲಿಕಾರ್ಜುನ

ಎಂದು ಶರಣ ಸಿದ್ಧರಾಮೇಶ್ವರರು ಕುಲವನ್ನು ಅರಸುವುದು ಸರ್ವತಾ ತಪ್ಪು ಎಂಬುದನ್ನು ಇತಿಹಾಸದ ಉದಾಹರಣೆಗಳನ್ನು ನೀಡುವ ಮೂಲಕ ಸಿದ್ಧಪಡಿಸಿದ್ದಾರೆ. ಶರಣರಿಗೆ ಖಚಿತವಾಗಿ ಗೊತ್ತಿತ್ತು ಪಾಪಸು ಕಳ್ಳಿಯಂತೆ ಮಾನವನ ಏಳಿಗೆಗೆ ತೊಡಕಾಗಿರುವ ಜಾತಿ ನಿರ್ಮೂಲನೆಯಾಗದ ಹೊರತು ಅಥವಾ ಬ್ರಾಹ್ಮಣದ ಅಕ್ಟೋಪಸ್ ಹಿಡಿತ ಬಿಡಿಸದ ಹೊರತು ಸಮಾಜ ಎಂದೂ ಮುಕ್ತವಾಗಿ ಉಸಿರಾಡಲು ಸಾಧ್ಯವಿಲ್ಲವೆಂಬುದನ್ನು ಕಂಡುಕೊಂಡರು. ಆದ್ದರಿಂದಲೇ ಅವರು, ಶೋಷಿತ ಸಮುದಾಯದ ಜನಗಳಲ್ಲಿ ಮೊದಲು ಆತ್ಮವಿಶ್ವಾಸ ತುಂಬಲು ಸಾಕಷ್ಟು ಶ್ರಮಿಸಿದರು.

ತಲೆಯ ತಗ್ಗಿಸಿ ನೆಲನ ಬರೆಯುತ್ತಿದ್ದಿರದೇಕೆ

ಮಾದಾರ ಚೆನ್ನಯ್ಯನ ಗೋತ್ರವೆಂದು ಹೇಳಿ

ಡೋಹಾರ ಕಕ್ಕಯ್ಯನ ಗೋತ್ರವೆಂದು ಹೇಳಿ

ಎಂದು ಹುರಿದುಂಬಿಸಿದರು. ‘ಅಡ್ಡದೊಡ್ಡ ನಾನಲ್ಲಯ್ಯ, ದೊಡ್ಡ ಬಸಿರು ಎನಗಿಲ್ಲವಯ್ಯ’ ಎಂದು ತಮ್ಮನ್ನು ತಾವು ಛೇಡಿಸಿಕೊಳ್ಳುತ್ತ ‘ಬಾಣನವ ನಾನು. ಮಯೂರನವ ನಾನು’ ಎಂದು ಶೋಷಿತ ಸಮುದಾಯದೊಂದಿಗೆ ತನ್ನನ್ನು ಗುರುತಿಸಿಕೊಂಡರು. ‘ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ’ ಎಂದು ಅವಲತ್ತುಕೊಂಡರು.’ ಆನು ಹಾರುವನೆಂದರೆ ಕೂಡಲ ಸಂಗಮ ನಗುವಯ್ಯ’ ಎಂದು ತಮಗಂಟಿದ ಬ್ರಾಹ್ಮಣ್ಯವನ್ನು ತೊಡೆದುಕೊಳ್ಳಲು ಯತ್ನಿಸಿದರು.

ಜಾತಿವಿಡಿದು ಸೂತಕವನರಸುವೆ

ಜ್ಯೋತಿವಿಡಿದು ಕತ್ತಲೆಯನರಸುವೆ!

ಇದೇಕೋ ಮರುಳು ಮಾನವಾ ?

ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ

ಮಂಡೋದರಿ ಕಪ್ಪೆಯ ಮಗಳು

ಕುಲವನರಸದಿರಿಂಬೋ ಕುಲದಿಂದ ಮುನ್ನೇನಾದಿರಿಂ ಬೋ

ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ, ಕಶ್ಯಪ್ಪ ಕಮ್ಮಾರ

ಕೌಂಡಿನ್ಯನೆಂಬ ಋಷಿ ಮೂರು ಭುವನರಿಯೆ ನಾವಿದ ಕಾಣಿಬೋ

ನಮ್ಮ ಕೂಡಲಸಂಗನ ವಚನವಿಂತೆಂಬುದು

ಶ್ವಪಚೋಪಿಯಾದಡೇನು,ಶಿವಭಕ್ತನೆ ಕುಲಜಂ ಬೋ

ಕಮ್ಮೆ ಕುಲದಲ್ಲಿ ಹುಟ್ಟಿದವರೆಲ್ಲ ಕೀಳಲ್ಲವೆ ಅಲ್ಲ. ಕಮ್ಮೆ ಕುಲವೆಂದು ಸಮಾಜ ತಿಳಿದುಕೊಂಡವರಲ್ಲಿಯೇ ಶ್ರೇಷ್ಠಾತಿ ಶ್ರೇಷ್ಠರು ಹುಟ್ಟಿ ಜಗತ್ತನ್ನು ಬೆಳಗಿಸಿದ್ದಾರೆ. ಯಾರಲ್ಲಿ ನಿಷ್ಕಲ್ಮಶವಾದ ಭಕ್ತಿಯಿದೆಯೋ ಅವನೇ ಕುಲಜನು ಎಂದು ಪ್ರತಿಪಾದಿಸಿದರು.

‘ಸತ್ತುದ ನೆಳೆವವ ಎತ್ತಣ ಹೊಳೆಯ ?

ಹೊತ್ತು ತಂದು ನೀವು ಕೊಲುವಿರಿ’

ಎಂದು ಪ್ರಶ್ನಿಸುವ ಮೂಲಕ ಹೊತ್ತು ತಂದು ಕೊಲುವವರೆ ಹೊಲೆಯರೆ ಹೊರತು. ಸತ್ತ ದನವನ್ನು ಎಳೆದು ಹಾಕುವವನು ಹೊಲೆಯನಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ನುಡಿದು ಹುಸಿದಡೆ ಹೊಲೆ. ಮಾತು ತಪ್ಪಿದಡೆ ಹೊಲೆಯೆ ಹೊರತು ಯಾವ ವ್ಯಕ್ತಿಯೂ ಹುಟ್ಟಿನ ಮೂಲಕ ಹೊಲೆ ಬ್ರಾಹ್ಮಣನಾಗಲು ಸಾಧ್ಯವಿಲ್ಲವೆಂದು ಉದಾಹರಣೆ ಸಮೇತ ತಿಳಿಸಿಕೊಡುತ್ತಾರೆ. ಇದನ್ನು ಹಲವಾರು ಜಾನಪದ ವ್ಯಕ್ತಿಗಳು ತಮ್ಮ ಕಾವ್ಯಗಳಲ್ಲಿ ಹೀಗೆ ಹಿಡಿದಿಟ್ಟಿದ್ದಾರೆ.

ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ

ಭಲೇರೆ ಬಸವಯ್ಯ ಬಸವಣ್ಣ || ನಿನ್ನುಸಿರು

ನೆಲೆಯಾಯ್ತು ನಿತ್ಯ ಜನಪದಕೆ |

ಕುಲಗೆಡಿಸಿ ಬಸವಯ್ಯ ಕಲಕು ಮಾಡಿದ ನಾಡ

ಚಿಲಕ ಮುರದಂಗ ಬಾಗಿಲಕ. ಅರಸಿದ್ದು

ಮಲಕ ಮುರದಂಗ ಅರಮನೆಗೆ

ಹೀಗೆಲ್ಲ ಜಾತಿಯ ಬೇಲಿಯನ್ನು ಕಿತ್ತು, ಎಲ್ಲರನ್ನೂ ಕಲಕು ಮಾಡಿ, ವೈದಿಕರ ಭದ್ರವಾದ ಕೋಟೆಯನ್ನು ಸೀಳಿ ನಿಂತರೂ ಆತನಿಗೆ ಸಮಾಧಾನವಾಗಲಿಲ್ಲ.

ಮಾದಾರ ಚೆನ್ನಯ್ಯನ ಮನೆಯ ದಾಸಿಯ ಮಗಳು

ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗ

ಬೆರಣಿಯನಾಯಲು ಹೋಗಿ ಸಂಗವ ಮಾಡಿದರು

ಅವರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮ ಸಾಕ್ಷಿಯಾಗಿ

ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಬ್ರಾಹ್ಮಣ್ಯದ ಪರಲನ್ನು ಹರಕೊಳ್ಳಲು ಯತ್ನಿಸಿದರು. ‘ಆನು ಹಾರುವನೆಂದರೆ ಕೂಡಲಸಂಗಮದೇವ ನಗುವಯ್ಯ’ ಎಂದೆಲ್ಲ ತಮ್ಮನ್ನು ಹಂಗಿಸಿಕೊಳ್ಳುತ್ತ ಬ್ರಾಹ್ಮಣರ ಕುಯುಕ್ತಿಗಳನ್ನು ಒಂದೊಂದಾಗಿ ಸಾರಿ ಹೇಳಿದರು. ಬ್ರಾಹ್ಮಣರೆ ಹೇಳಿಕೊಂಡು ಬಂದಿದ್ದ ಹಲವಾರು ಕಂದಾಚಾರ ಮೂಢನಂಬಿಕೆಗಳನ್ನು ಕಿತ್ತಿ ಎಸೆದು ಬಿಟ್ಟರು. ದೇವರಿಂದಲೇ ನಿರ್ಮಿತವಾದುದು ಎಂದು ಹೇಳಿಕೊಂಡು ಬಂದಿದ್ದ ವೇದಗಳನ್ನು ಪಟಾಪಂಚಲಗೊಳಿಸಿಬಿಟ್ಟರು.

ವೇದವೆಂಬುದು ಓದಿನ ಮಾತು,

ಶಾಸ್ತ್ರವೆಂಬುದು ಸಂತೆಯ ಸುದ್ದಿ,

ಪುರಾಣವೆಂಬುದು ಪುಂಡರಗೋಷ್ಠಿ

ಶಾಸ್ತ್ರವೆಂಬುದು ಅನೃತದ ನುಡಿ

ಕಿಚ್ಚು ದೈವವೆಂದು ಹವಿಯ ನಿಕ್ಕುವ

ಹಾರುವ ಮನೆಯಲಿ ಕಿಚ್ಚೆದ್ದು ಸುಡುವಾಗ

ಬಚ್ಚಲ ನೀರು , ಬೀದಿಯ ಧೂಳ ಹೊಯ್ದು

ಬೊಬ್ಬಿಟ್ಟೆಲ್ಲರ ಕರೆವರಯ್ಯ

ವಂದನೆಯ ಮರೆದು ನಿಂದಿಸುವರು ಕೂಡಲಸಂಗಮದೇವಾ

ವೇದ ಶಾಸ್ತ್ರಗಳು ದೇವರಿಂದ ನಿರ್ಮಿತವಾದವುಗಳು ಎಂದು ಬೊಗಳೆ ಬಿಟ್ಟುಕೊಂಡು ತಮ್ಮ ಉಪಜೀವನಕ್ಕೆ ದಾರಿ ಮಾಡಿಕೊಂಡಿದ್ದ ಬ್ರಾಹ್ಮಣರ ಎಡಬಿಡಂಗಿತನವನ್ನು ಬಯಲುಗೊಳಿಸಿದರು. ಕಿಚ್ಚನ್ನು ದೇವರೆಂದು ಆರಾಧಿಸುವ, ಪೂಜಿಸುವ ಆ ಅಗ್ನಿ ದೇವನಿಗೆ ಬೆಲೆಬಾಳುವ ವಸ್ತ್ರ, ಗೋಡಂಬಿ, ದ್ರಾಕ್ಷಿ, ತುಪ್ಪ, ಚಂದನ ಕಟ್ಟಿಗೆ, ತುಪ್ಪ ಸುರಿವಿ ದೇವರನ್ನು ಸಂತೃಪ್ತಿಗೊಳಿಸಲು ಸಂತಸಪಡುವ ಬ್ರಾಹ್ಮಣ ತನ್ನ ಮನೆಗೆ ಅಗ್ನಿ ದೇವ ಪ್ರವೇಶಿಸಿದಾಗ ಅರೆ ಹುಚ್ಚನಂತೆ ವರ್ತಿಸುವುದು ಏಕೆ ? ಬೀದಿಯ ಧೂಳೂ, ಬಚ್ಚಲ ನೀರನ್ನು ಹಾಕಿ ಬೊಬ್ಬಿಟ್ಟು ಕರೆಯುವ ವಾಸ್ತವ ಚಿತ್ರಣ ನಮ್ಮ ಕಣ್ಮುಂದೆ ಕಟ್ಟುತ್ತಾರೆ. ಇದನ್ನೆಲ್ಲ ಗಮನಿಸಿಯೆ ಈ ನೆಲಮೂಲದ ಜಾನಪದರು ಮೈದುಂಬಿ ಹಾಡುತ್ತಾರೆ.

ಓದಿದನು ಬಸವಯ್ಯ ವೇದದೊಳಗಿನ ಹುಸಿಯ |

ಬೇಧ ಬೇಧವನೇ ಬಿಚ್ಚಿಟ್ಟ || ಬಸವಣ್ಣ

ತೇದುಂಡ ಜೀವ ಜನಪದಕೆ |

ವೇದ ವೇದದ ವಾದ ಬೇಧ ಇಕ್ಕಿತು ಜಗಕೆ |

ದಾದು ಮಾಡೋರು ಯಾರಿಲ್ಲ || ಬಸವಯ್ಯ

ಬೇಧ ಬಿಡಿಸಿದ ಕುಲ ಕುಲಕ |

ಸ್ಥಾಪಿತ ಮೌಲ್ಯಗಳಾಗಿದ್ದ ದೇವರು- ಧರ್ಮ, ಮೇಲು- ಕೀಳು, ಸ್ವರ್ಗ- ನರಕ ಎಂಬ ಕರ್ಮಠ ಆಚರಣೆಗಳನ್ನು ಅವುಗಳ ತಳಕ್ಕೆ ಕೈಹಾಕಿ ಬೇರು ಸಮೇತ ಸುಟ್ಟುಬಿಟ್ಟರು.ಶರಣೆ ಬೊಂತಾದೇವಿ  ‘ಊರ ಒಳಗಣ ಬಯಲು. ಊರ ಹೊರಗಣ ಬಯಲೆಂದುಂಟೆ ? ಬ್ರಾಹ್ಮಣ ಬಯಲು, ಹೊಲೆ ಬಯಲೆಂದುಂಟೆ. ಬಯಲು ಬಯಲೊಂದೆ’ ಎಂದು ಖಚಿತ ಪಡಿಸಿದರು. ‘ವೇದ ನಡನಡುಗಿತ್ತು ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದೀತಯ್ಯಾ.ಆಗಮ ಹೆರ ತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಟ ಕಾರಣ ಎನ್ನುವ ಮೂಲಕ ವೇದಗಳು ಆಗಮಗಳು ,ಶಾಸ್ತ್ರಳೆಲ್ಲ ಗಡ ಗಡ ನಡುಗಿ ಹೋದವು. ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ’ವೆಂದು ಖಚಿತ ಪಡಿಸಿದರು.ವೇದ ಶಾಸ್ತ್ರಗಳು ಎಂಥ ವಿಕೃತವಾದ ಜೇಡಬಲೆಯನ್ನು ಹೆಣೆದುಬಿಟ್ಟಿವೆಯೆಂದರೆ ಅವುಗಳಿಂದ ಪಾರಾಗಿ ಹೊರಬರುವುದೇ ಕಷ್ಟ ಎನ್ನುವಂತಾಗಿದೆ. ಆದ್ದರಿಂದ ಅವುಗಳ ವಿರುದ್ಧ ಬಸವಣ್ಣನವರು ಮನುಷ್ಯರನ್ನಷ್ಟೇ ಪ್ರತಿಭಟಿಸಲು ತೊಡಗಲಿಲ್ಲ. ವೇದವನೋದಿದವರ ಮುಂದೆ ಅಳು ಕಂಡ್ಯಾ.ಶಾಸ್ತ್ರವನೋದಿದವರ ಮುಂದೆ  ಅಳುಕಂಡ್ಯಾ. ನೀನತ್ತದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವಾ ಎನ್ನುತ್ತ ಹೋತಿನ ಕಡೆಯಿಂದಲೂ ಪ್ರತಿಭಟನೆಗೆ ಹಚ್ಚಿದರು.

12 ನೇ ಶತಮಾನದವರೆಗೆ ಹೆಣ್ಣನ್ನು ಮಾಯೆಯೆಂದು ಕರೆಯುತ್ತಿದ್ದುದನ್ನು ಖಂಡಿಸಿದ್ದಲ್ಲದೆ ‘ಹೆಣ್ಣು ಹೆಣ್ಣಲ್ಲ . ಹೆಣ್ಣು ರಕ್ಕಸಿಯಲ್ಲ ಆಕೆ ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂದು ಕರೆಯುವ ಮೂಲಕ ಆಕೆಗೂ ಸಮಾಜದಲ್ಲಿ ಸ್ಥಾನ ಮಾನವನ್ನು ಒದಗಿಸಿಕೊಟ್ಟರು. ಸುತ್ತಿ ಸುತ್ತಿ ಬಂದಡಿಲ್ಲ. ಲಕ್ಷಗಂಗೆಯ ಮಿಂದಡಿಲ್ಲ. ತುತ್ತ ತುದಿಯ ಮೇರು ಗಿರಿಯ ಮುಟ್ಟಿ ಕೂಗಿದಡಿಲ್ಲ. ಓದದೇ ಗಿಳಿ ? ಹಾಡದೆ ತಂತಿ ? ಏತ ತಲೆಬಾಗಿದರೇನು ಗುರುಭಕ್ತನಾಗಲ್ಲುದೆ ? ಇಕ್ಕುಳ ಕೈಮುಗಿದರೇನು ಭೃತ್ಯಾಚಾರಿಯಾಗಬಲ್ಲುದೆ ? ಎಂದೆಲ್ಲ ಬ್ರಾಹ್ಮಣ್ಯದ ಕುಯುಕ್ತಿಗಳನ್ನು ಇಂಚಿಂಚಾಗಿ ಬಯಲು ಮಾಡಿದರು. ಕುಲವೇ ದೊಡ್ಡದು ಎಂದು ನಂಬಿಕೊಂಡು ಬಂದಿದ್ದ ಮೌಲ್ಯಗಳನ್ನು ತಲೆಕೆಳಗೆ ಮಾಡಿದರು ; ಅಷ್ಟೇ ಅಲ್ಲದೆ ‘ಜಾತಿ ಸಂಕರವಾದ ಬಳಿಕ ಕುಲವನರಸುವರೆ ?’ ಎಂದು ಪ್ರಶ್ನಿಸಿ ಅವನ್ನು ತನ್ನ ಕಾಲಲ್ಲಿ ಹಾಕಿ ತಿಕ್ಕಿ ತಿಕ್ಕಿ ತುಳಿದು ಹಾಕಿದರು. ಆದ್ದರಿಂದಲೇ ನಟವರ ಜನಾಂಗದಿಂದ ಬಂದಿದ್ದ ಅಲ್ಲಮಪ್ರಭುವನ್ನು ಶೂನ್ಯ ಸಿಂಹಾಸನ ಗದ್ದುಗೆಯ ಮೇಲೆ ಕುಳ್ಳಿರಿಸಿ ಸಮಾಧಾನ ಪಟ್ಟುಕೊಂಡರು. ನಗೆ ಮಾರಿ ತಂದೆ ಎಂಬ ವಚನಕಾರನಂತೂ ಸಂಸ್ಕøತ ಭಾಷೆಯ ಮೂಲಕ ಬ್ರಾಹ್ಮಣರು ಹೇಗೆ ಶೋಷಣೆ ನಡೆಸುತ್ತಿದ್ದರು ಎಂಬುದನ್ನು ಅತ್ಯಂತ ಸೊಗಸಾಗಿ ಹಿಡಿದಿಟ್ಟಿದ್ದಾರೆ.

ಕಲ್ಲಿಯ ಹಾಕಿ ನೆಲ್ಲವ ತಳೆದು

ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ;

ವಾಗ್ವೈದೆತವಕಲಿತು

ಸಂಸ್ಕøತ ಮಾತಿನ ಪಸರವ ಮುಂದೆ ಇಕ್ಕಿಕೊಂಡು

ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ

ಅದೇತರ ನುಡಿ, ಮಾತಿನ ಮರೆ

ಆತುರವೈರಿ ಮಾರೇಶ್ವರಾ

ಎಂದು ವಿವರವಾಗಿ ವಿಷದ ಪಡಿಸಿದ್ದಾರೆ. ಬ್ರಾಹ್ಮಣ ಭೂಯಿಷ್ಠವಾದ ಸಂಸ್ಕøತ ಭಾಷೆಯೊಂದೆ ದೊಡ್ಡದಲ್ಲ. ಅದೊಂದೆ ದೇವ ಭಾಷೆಯಲ್ಲ. ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎನ್ನುವ ಮೂಲಕ ಸಂಸ್ಕøತ ಭಾಷೆಯೇ ಶ್ರೇಷ್ಠವೆಂದು ಸಾರಿಕೊಂಡು ಬಂದಿದ್ದ ಪರಂಪರಾಗತ ನುಡಿಗಳನ್ನು ತುಂಡರಿಸಿದರು. ನೆಲದ ಭಾಷೆಯನ್ನು ದೇವ ಭಾಷೆ ಆಗುವಂತೆ ಮಾಡಿದರು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಸ್ವರ್ಗ- ನರಕಗಳು ಮೇಲೇಲ್ಲೂ ಮರ್ತಲೋಕವೇ ಕರ್ತಾರನ ಕಮ್ಮಟವೆಂದು ಜಾಗೃತಗೊಳಿಸದರು. ಮೂಲತಃ ಮನುಷ್ಯ ಜ್ಞಾನದ ಶಿಶುವಾಗಿದ್ದರೂ ಅಜ್ಞಾನದ ತೊಟ್ಟಿಲಲ್ಲಿ ಮಲಗಿದ್ದಾನೆ.ಸಕಲ ವೇದಶಾಸ್ತ್ರಗಳು ನೇಣಿನ ಕುಣಿಕೆಗಳಾಗಿ ನಮ್ನನ್ನು ಕಾಡುತ್ತಿವೆ. ಜೊತೆಗೆ ಭ್ರಾಂತಿಯ ತಾಯಿಯ ಜೋಗುಳವೂ ಕೂಡ ನಮ್ಮನ್ನು ಎಚ್ಚರಗೊಳ್ಳದಂತೆ ತಡೆದು ನಿಲ್ಲಿಸಿವೆ. ಸತ್ಯದ ಅರಿವಾಗಬೇಕಾದರೆ , ಜ್ಞಾನದ ಬೆಳಕು ನಮ್ಮ ಅಂತರಂಗದಲ್ಲಿ ಬೆಳಗಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು. ನೇಣಿನ ಕುಣಿಕೆಗಳಾದ ವೇದ- ಶಾಸ್ತ್ರಗಳ ಕುಣಿಕೆ ಕತ್ತರಿಸಿಕೊಳ್ಳಬೇಕು. ಭ್ರಾಂತಿಯ ಜೋಗುಳಕ್ಕೆ ತಲೆದೊಗುವುದು ನಿಲ್ಲಿಸಬೇಕು, ಆಗ ಮಾತ್ರ ಸತ್ಯ ಅಥವಾ ಗುಹೇಶ್ವರ ಕಾಣುತ್ತಾನೆ ಎನ್ನುತ್ತಾರೆ ಅಲ್ಲಮಪ್ರಭುಗಳು.

ಇದರೊಂದಿಗೆ  ಶೋಷಣೆಗೆ ಗುರಿಯಾಗಿದ್ದ ಜನಗಳಿಗೆ ‘ದಂದಣ್ಣ ದತ್ತಣ ಎನ್ನಿ’ ಎಂದು ಹುರಿದುಂಬಿಸಿ, ಪುರೋಹಿತಶಾಹಿ ಉಂಟುಮಾಡಿದ್ದ ಭಯವನ್ನು ಹೋಗಲಾಡಿಸಿದರು. ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಎಂಬ ವಚನಕಾರ್ತಿ ಕುರಿಕೋಳಿ ಕಿರು ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.ಶಿವಗೆ ಪಂಚಾಮೃತವ ಕರೆವ ಪಶುವತಿಂಬ ಮಾದಿಗ ಕೀಳು ಜಾತಿಯೆಂಬರು. ಅವರೆಂತು ಕೀಳು ಜಾತಿಯಾದರು ? ಜಾತಿಗಳು ನೀವೇಕೆ ಕೀಳಾಗಿರೋ ? ಬ್ರಾಹ್ಮಣನುಂಡುದು ಪುಲ್ಲಿಗೆ. ಬ್ರಾಹ್ಮಣಗೆ ಶೋಭಿತವಾಯಿತು. ಅದೆಂತೆಂದಡೆ ಸಿದ್ದಲಿಕೆಯಾಯಿತು. ಸಗ್ಗಳೆಯಾಯಿತು. ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯಾ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ ಎಂಬ ವಾಸ್ತವದ ಸಂಗತಿಗಳನ್ನು ಕ್ರೂಢಿಕರಿಸಿ ಹೇಳಿದರು. ’ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ !’ ಎಂದು ಹೇಳಿ ಬ್ರಾಹ್ಮಣರ ಇತಿವೃತ್ತವನ್ನೆಲ್ಲ ಬಿಚ್ಚಿರಿಸಿ ಹೊಸ ಶೋಷಣಾಮುಕ್ತವಾದ ಸಮಾಜವನ್ನು ಕಟ್ಟಬಯಸಿದ್ದ ಬಸವಣ್ಣವರು ಜಾತಿಗಳ ವಿರೋಧಿಯಾಗಿರಲಿಲ್ಲ; ಏಕೆಂದರೆ ಅವರ ಕೆಲವೇ ವಚನಗಳಲ್ಲಿ ಜಾತಿ ವಿರೋಧಿ ನಿಲುವುಗಳನ್ನು ಕಾಣುತ್ತೇವೆ ಎಂಬುದು ತೀರಾ ಬಾಲಿಷವಾದ ಸಂಗತಿಯಾಗಿದೆ. ಅಲ್ಲಮಪ್ರಭು ತಮ್ಮೊಂದು ವಚನದಲ್ಲಿ ‘ಎರಡೆಂಬತ್ತು ಕೋಟಿ ವಚನ ಹಾಡಿ’ ಎಂದು ಹೇಳಿದ್ದಾರೆ. ಸಧ್ಯ ಲಭ್ಯವಾಗಿರುವ ವಚನಗಳು ಅತ್ಯಲ್ಪ ಮಾತ್ರ. ಆದರೂ ಅವುಗಳ ಒಡಲಲ್ಲಿ ಜಾತಿ ಪದ್ಧತಿ ಹಾಗೂ ಬ್ರಾಹ್ಮಣ್ಯ ವಿರೋಧಿ ನಿಲುವುಗಳು ಹಾಸುಹೊಕ್ಕಾಗಿವೆ. ಇದನ್ನೆಲ್ಲ ಸರಿಯಾಗಿ ಪರಾಂಭರಿಸಿ ನೋಡದ ಅವರು ಬಸವ ಚಳುವಳಿ ಬ್ರಾಹ್ಮಣ ವಿರೋಧಿ ಚಳುವಳಿಯಾಗಿರಲಿಲ್ಲ ಎಂದು ತೀರ್ಮಾನಿಸುವುದು ನೋಡಿದರೆ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂದಂತೆ ಆಗುತ್ತದೆ. ಅಥವಾ ಇವೆಲ್ಲ ಗೊತ್ತಿದ್ದರೂ ಕಣ್ಣಲ್ಲಿ ಕಟ್ಟಿಗೆ ಆಡಿಸಿದಂತೆ ಮಾಡಿ ನೋಡಬೇಕೆಂಬ ಕುಯುಕ್ತಿ ಇರುವಂತೆ ಕಾಣುತ್ತದೆ.

*ಕೊನೆಯಲ್ಲಿ ಈ ‘ಬುದ್ಧಿಜೀವಿ’ ಪಂಡಿತರಲ್ಲಿ ನನ್ನ ಕೋರಿಕೆ ಇಷ್ಟೆ. ಮೊದಲು ವಚನಗಳನ್ನು ಚೆನ್ನಾಗಿ ಓದಿಕೊಳ್ಳಿ. ಬರಿ ಓದಿದರೆ  ಅವು ಅರ್ಥವಾಗುವುದಿಲ್ಲ. ಅವು ಎಷ್ಟು ಸರಳವಾಗಿ ಕಣುತ್ತಿವೆಯೋ ಅಷ್ಟು ನಿಗೂಢವಾಗಿವೆ. ಅಧ್ಯಯನಾತ್ಮಕವೂ ಆಗಿವೆ. ಅವನ್ನು ಮೊದಲು ಚೆನ್ನಾಗಿ ಪಚನ ಮಾಡಿಕೊಳ್ಳಿ. ಒಂದು ಮಾತು : ಅಂದು ಬರೆಯಲ್ಪಟ್ಟ ಯಾರದೇ ಅಥವಾ ಯಾವುದೇ ವಚನ ಅವು ಪ್ರತ್ಯೇಕವೆಂಬಂತೆ ತೋರಿದರೂ, ಎಲ್ಲವೂ ಸೇರಿ ಒಂದೇ ವಚನ ಕಾವ್ಯಕ್ಕೆ ಸೇರಿದ ಬಿಡಿ ಬಿಡಿ ನುಡಿಗಳು.ಆದ್ದರಿಂದ ಯಾವ ವಚನವನ್ನೂ ಬಿಡಿಬಿಡಿಯಾಗಿ ಓದಿ ನೋಡದೆ, ಇಡೀ ವಚನ ಕಾವ್ಯದ ಹಿನ್ನೆಲೆಯಲ್ಲಿ ಓದಿ ನೋಡಿ. ಆಗ ನಿಮಗೇ ಸತ್ಯ ಯಾವುದೆಂದು ಅರ್ಥವಾಗುತ್ತದೆ. ಬದಲಿಗೆ ಬಿಡಿ ಬಿಡಿಯಾಗಿ ಓದಿದರೆ ಇಂಥದೇ ಗೊಂದಲದ ಹುದುಲಲ್ಲಿ ನೀವು ಮತ್ತೆ ಸಿಕ್ಕಿಬೀಳುತ್ತೀರಿ.

* ಲಿಂಗಣ್ಣ ಸತ್ಯಂಪೇಟೆಯವರ ಮಠಗಳು ಮಾರಾಟಕ್ಕಿವೆ ಎಂಬ ಕೃತಿಯ ‘ನನ್ನ ಕುಲ ಯಾವುದು ಕೇಳಿರಣ್ಣ !’ ಎಂಬ ಲೇಖನದಿಂದ

23 ಟಿಪ್ಪಣಿಗಳು Post a comment
  1. Nagshetty Shetkar
    ಆಕ್ಟೋ 13 2013

    “ಬುದ್ಧಿಜೀವಿ ವೇಷದಾರಿ ಬರಹಗಾರರು ಸಮಯ ಸಿಕ್ಕಾಗಲೆಲ್ಲ ಬಸವಣ್ಣನವರ ಮೇಲೆ ಕೆಸರನ್ನು ಎರಚುತ್ತ ತಾವು ದೊಡ್ಡವರಾಗಬೇಕೆಂಬ ಹುನ್ನಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವಸಂಗತಿಯೆ ಆಗಿದೆ.”

    Vishwaradhya Sir, I’m confused by your statements. Darga Sir was in the forefront of recent Vachana debate. Are you calling Darga Sir also a fake intellectual? He has discovered 14 new meanings to Jangama which has resulted in new connections between Vachanas, Marxism, and Human Rights. Darga Sir is not a statistician like Balu Rao who counts jati/kula in Vachanas. Darga Sir is a semantician. He injects new meanings to Vachanas. He has said everything you have said in this article.

    ಉತ್ತರ
    • ನವೀನ
      ಆಕ್ಟೋ 13 2013

      Shetkar Sir,

      u r saying that ” Daarga injects new meanings to Vachanas”. Does that mean, he is trying put-forth is words over vachanas?

      ಉತ್ತರ
      • Nagshetty Shetkar
        ಆಕ್ಟೋ 13 2013

        You vaidik viruses need injection and Darga sir is doing it.

        ಉತ್ತರ
        • ನವೀನ
          ಆಕ್ಟೋ 13 2013

          ಅವರ ಆರೋಗ್ಯದ ಬಗ್ಗೆ ನಮಗೆ ಕಾಳಜಿಯಿದೆ (ನಿಮಗಿಲ್ಲದಿರಬಹುದು).. Take Care 🙂

          ಉತ್ತರ
    • M.A.Sriranga
      ಆಕ್ಟೋ 13 2013

      Mr. Shetkar in your opinion only vachanas and your Sir is the whole and sole of kannada literature. And also you firmly believes that only in 12th century and now by your Sir the whole world has opened their eyes From 12th century to your Sir’s jamaana the world is in dark. The funny thing is with all these prejudices you claim that you are a democratic man!

      ಉತ್ತರ
      • Nagshetty Shetkar
        ಆಕ್ಟೋ 13 2013

        Mr. Sriranga, Vishwaradhya Sir is a good friend of Darga Sir. Both are Sharanas of this century. I’ve great respect and love for both. People like you who read the above article will think Vishwaradhya Sir has exposed Darga Sir. And CSLC will use it as a weapon to attack the new wave of Basava Dharma. That’s why I want Vishwaradhya Sir to clear confusion caused by his sweeping statements on Vachana researchers.

        ಉತ್ತರ
      • M.A.Sriranga
        ಆಕ್ಟೋ 13 2013

        Mr.Shetkar once again you are escaping and avoiding my question. i am not worried about your Guru Bhakti. Dr. P V Narayana in his VACHANA SAMAGRA book page 20 has written that “vachanakaararu eegina arthada samaja sudhaaraneya kaaryadalli todagidavaralla. …………idee jana samudaayavannu basavanna eradu vibhaaga maaduttaane:Bhaktaru, Bhavigalu endu. ……(Book published by vasanta prakaashana Bangalore. 2005)If you believe your two Sirs are greater than Basavanna and other vachanakaararu, you have every right to have that.

        ಉತ್ತರ
        • Nagshetty Shetkar
          ಆಕ್ಟೋ 13 2013

          Mr.Sriranga, “If you believe your two Sirs are greater than Basavanna and other vachanakaararu” No, I don’t believe this. Both of my Sirs understand what their position is in the pantheon of Sharanas. I’ve already written that Darga Sir is like a Pomeranian dog if Basavanna is a lion among Vachanakaras. Vishwaradhya Sir is like a parrot. But what is the status of P.V. Narayana?

          ಉತ್ತರ
          • M.A.Sriranga
            ಆಕ್ಟೋ 14 2013

            Mr. Shetkar if we agree or disagree with some persons or with their views does not make any harm. But calling some body that too your Sir as a DOG is not a good taste.(Whetheir local or foreign dog) Secondly status of a person should not be assessed by how many PRASHASTI’s he got. I do not know why you are very fond of lions dogs parrot?

            ಉತ್ತರ
            • Nagshetty Shetkar
              ಆಕ್ಟೋ 14 2013

              Mr. Sri Ranga,(“Mr. Shetkar, you are warned for abusing names of discussants” -Moderator) I’ve never called anyone a dog in my life! Please don’t put your words into my mouth. You seem to be interested in literature. Yet you don’t recognize similies I’ve used!

              ಉತ್ತರ
    • ವಿಜಯ್ ಪೈ
      ಮಾರ್ಚ್ 9 2014

      [ He injects new meanings to Vachanas.]
      ಇದಂತೂ ಒಪ್ಪಿಕೊಳ್ಳಬೇಕಾದ್ದದ್ದೆ!. ಕಾರ್ಲ ಮಾರ್ಕ್ಸ್, ವಿಶ್ವಸಂಸ್ಥೆ, ಮಾನವ ಹಕ್ಕು ಸಂಘಟನೆ, ಮಹಿಳಾ ಹಕ್ಕು ಚಳುವಳಿ ಹೀಗೆ ಎಲ್ಲದಕ್ಕೂ ವಚನಗಳು ಪ್ರೇರಣೆ ಅಂತ ಅವರು ತೋರಿಸಿಕೊಟ್ಟಿದ್ದಾರೆ. ಅವರು ಸಧ್ಯಕ್ಕೆ ಇಂಜೆಕ್ಟ ಮಾಡದೇ ಬಿಟ್ಟಿರುವ/ಮುಂದೆ ಮಾಡಬಹುದಾದ ವಿಷಯವೆಂದರೆ ಆಪ್ ಪಕ್ಷ/ಕೇಜ್ರಿವಾಲ್ ಗೆ ವಚನಗಳ ಪ್ರೇರಣೆ ಎನ್ನುವ ವಿಷಯ.

      ಉತ್ತರ
  2. M.A.Sriranga
    ಆಕ್ಟೋ 13 2013

    Mr. Vishwaradhya in “Prajavani” about three months Vachana Sunami has already over. Now you are starting Failin birugali.Ok. Now veerashaivaas are telling that they are separate by focusing Basavanna as their God. It is ironic that what Basavanna said is becoming a seed for another caste. In this situation what Basavanna might have been said about caste system is becoming null and void.

    ಉತ್ತರ
  3. Amaresh
    ಆಕ್ಟೋ 13 2013

    This article has given us no new insights on vachana movement. It has rehashed Ranjan Darga’s now stale “insights” which were discussed on Avadhi site. (Ranjan Darga should file a plagiarism case against Viswaradhya for copy pasting his writings without acknowledging them). I and several other readers had exposed the flaws in Darga’s arguments on Avadhi. Vishwaradhya was also there on Avadhi calling all of us Vaidik viruses. But he didn’t address any of the flaws we pointed out. Now he has rehashed same old shit. Why Nilume is proven jokers like Viswaradhya I don’t understand!

    ಉತ್ತರ
    • Amaresh
      ಆಕ್ಟೋ 13 2013

      Last sentence should be corrected as follows: why Nilume is entertaining proven jokers like Viswaradhya I don’t understand!

      ಉತ್ತರ
      • Nagshetty Shetkar
        ಆಕ್ಟೋ 13 2013

        Mr. Amaresh, you have called Vishwaradhya Sir a proven joker. What proof do you have to support your hypothesis? In your logic, even Darga Sir must be a proven joker!! But the rest of the world doesn’t think that Darga Sir is a joker. He was given Rajyotsava award not for joking. Be sensible when you make accusations.

        ಉತ್ತರ
        • Nagshetty Shetkar
          ಆಕ್ಟೋ 14 2013

          Mr. Amaresh, you asked proof on Avadhi for even self-evident facts that Darga Sir mentioned. And here when I asked you to give proof to show that Vishwaradhya Sir is a joker, you go silent!

          ಉತ್ತರ
        • kallappa
          ಮಾರ್ಚ್ 8 2014
          • Nagshetty Shetkar
            ಮಾರ್ಚ್ 9 2014

            Yes, Mr. Kallappa, this is the sorry state of affairs in nilume. All progressive minded people have been called jokers, edabidangi, ganji giraaki, etc by the namo cyber army snipers. When you protest, they attack more and in a group.

            ಉತ್ತರ
            • ವಿಜಯ್ ಪೈ
              ಮಾರ್ಚ್ 9 2014

              ಗುರುಗಳೆ..
              ಕಲ್ಲಪ್ಪನವರು ಆರು ಕಲ್ಲು ಇಟ್ಟು ಹೋಗಿದ್ದಾರೆ. ಬಹುಶ: ನಿಮಗೆ ಹೊಡೆಯಲು! :). ಎರಡನೆಯದಾಗಿ, ನೀವು ‘progressive stinkers’ ಅನ್ನುವುದನ್ನು ಒಪ್ಪಿಕೊಂಡಿದ್ದೇವೆ!

              ಉತ್ತರ
  4. Umesh
    ಆಕ್ಟೋ 13 2013

    ಬಸವಾದಿ ಶರಣರು ವೇದ ಶಾಸ್ತ್ರಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ಶ್ರದ್ದೆ ಹೊಂದಿದ್ದರು. ಕೆಳಗಿನ ಉರಿಲಿಂಗಿಪೆದ್ದಿಯವರ ವಚನ ಇದನ್ನು ಸ್ಪಷ್ಟಪಡಿಸುತ್ತದೆ;

    “ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದಗಳೆಂಬ ನಾಲ್ಕು ಶಾಖೆಗಳು.
    ಅನಂತಾ ವೈ ವೇದಾ ಉಪವೇದಗಳೆಂಬ ಉಪಶಾಖೆಗಳು, ಶಾಸ್ತ್ರಗಳೆಂಬ ಅಂಕುರ ಪಲ್ಲವ, ಪುರಾಣಗಳೆಂಬ ಪುಷ್ಪ
    ಅಗಮಂಗಲೆಂಬ ಕಾಯಿ ಬಲಿದು ಶ್ರೀ ಪಂಚಾಕ್ಷರಿ ಎಂಬ ಮಧುರ ಹಣ್ಣುಗಳು ಅಗಣಿತ ಫಲವನು ಅನಂತ ಕಾಲ ಭೋಗಿಸಲು
    ಮತ್ತಂ ಜಿಹ್ನೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುನ್ತೆ
    ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?”

    ಉತ್ತರ
  5. Mukhesha
    ಆಕ್ಟೋ 13 2013

    Same old interpretations copy pasted. interestingly, same few vacanas were repeatedly used by many and this fellow is not an exception, he say nothing new!!! Surprisingly these many people couldn’t realise this intellectual poverty!!!!! Funny part is the advice on how to read vacanas also copy pasted :-). I wonder When will they learn to speak themselves !!!! Grow up people … This attitude only expose your ignorance in Scientific discussions. Exposing your childish interpretations is nothing to do with the merit of vacanas or sharanas. Better you learn to understand such basic differences and then come for intellectual discussion.

    ಉತ್ತರ
  6. M.A.Sriranga
    ಆಕ್ಟೋ 15 2013

    Mr.Shetkar pl see your comments dated 13th oct 2013 in which you have called your sir as dog. That is why I quoted your remarks only. I have no interest in putting my words to some body’s mouth. If I want to say something I will tell directly.

    ಉತ್ತರ
  7. ರಾಜಣ್ಣ ದೇವಗೌಡರ್
    ನವೆಂ 22 2014

    ಬಲ್ಲವರಾರಾದರೂ ನನಗೆ ಈ ಕೆಳಗಿನ ವಚನದ ಅರ್ಥ ತಿಳಿಸುತ್ತೀರಾ?

    “ಜಾತಿವಿಡಿದು ಸೂತಕವನರಸುವೆ ಜ್ಯೋತಿವಿಡಿದು ಕತ್ತಲೆಯನರಸುವೆ! ಇದೇಕೊ ಮರುಳುಮಾನವಾ ಜಾತಿಯಲ್ಲಿ ಅಧಿಕನೆಂಬೆ ! ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ `ಭಕ್ತನೆ ಶಿಖಾಮಣ’ ಎಂದುದು ವಚನ. ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು, ಕೆಡಬೇಡ ಮಾನವಾ.”

    ಜಾತಿವಿಡಿದು ಸೂತಕವನರಸುವುದು ಎಂದರೇನು?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments