ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2013

2

ಮಲಾಲಾ ~ ನಿಜವಾದ ಕಥೆ(ಪುರಾವೆಗಳ ಸಹಿತ)

‍ನಿಲುಮೆ ಮೂಲಕ

ಮೂಲ : ನದೀಂ ಎಫ್ ಪರಾಚ

ಅನುವಾದ : ನಿವೇದಿತ ಥಾಡಣಿ

Malalaಸೆಪ್ಟೆಂಬರ್ 2012 ರಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಒಬ್ಬ ತಾಲಿಬಾನ್ ಕಾರ್ಯಕರ್ತ  15 ವರ್ಷದ ಶಾಲಾ ಹುಡುಗಿಯ ಮುಖ ಮತ್ತು ತಲೆಗೆ  ಗುಂಡು ಹಾರಿಸಿದ್ದಾನೆ  ಎಂದು ವರದಿಯಾಯಿತು.ಈ ದಾಳಿ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಈ ಸುದ್ದಿಗೆ  ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತುಂಬಾ ಮಹತ್ವ ನೀಡಲಾಯಿತು.

ಅವಳೇ ಮಲಾಲಾ.

ಪಾಕಿಸ್ತಾನದಲ್ಲಿ ನಂತರ ಇಂಗ್ಲೆಂಡ್ ನಲ್ಲಿ  ವೈದ್ಯರು ಮಲಾಲಾಳ  ಮುಖ ಮತ್ತು ತಲೆಯ ಮೇಲೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದರೂ ಅವಳು ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿತ್ತು.

ಇಂದು ಮಲಾಲಾ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಮಹಿಳೆಯರ ಶಿಕ್ಷಣದ ಸಲುವಾಗಿ ಅದರಲ್ಲೂ ವಿಶೇಷವಾಗಿ ತೀವ್ರವಾದಿಗಳು ಮತ್ತು ಉಗ್ರಗಾಮಿಗಳು ಬಾಲಕಿಯರ ಶಾಲೆಗಳನ್ನು ಹಾರಿಸಿದ ಪ್ರದೇಶಗಳಲ್ಲಿ ಕೆಲಸ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಇದು ಪೂರ್ತಿ ಕಥೆಯ ಕೇವಲ ಒಂದು ಭಾಗ ಮಾತ್ರ. ಆದರೆ ನಿಜವಾಗಿಯೂ ಗುಂಡಿಕ್ಕಿದ  ದಿನ ಏನಾಯಿತು ಎಂದು  ಮಲಾಲಾ ಹೇಳಿದ್ದ ಪೂರ್ತಿ ವರದಿಯಲ್ಲಿ ಅರ್ಧದಷ್ಟು ವರದಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿ ಹಾಕಿವೆ.

ಈ ವರ್ಷದ  ಎಪ್ರಿಲ್ ತಿಂಗಳಿನಲ್ಲಿ Dawn.com ತನ್ನ ಅತ್ಯಂತ  ಒಳ್ಳೆಯ ವರದಿಗಾರರ ಒಂದು ತಂಡವನ್ನು ಸ್ವಾತ್ ಕಣಿವೆಗೆ ಐದು ತಿಂಗಳ ಅತೀ ತೀವ್ರ ತನಿಖೆ ಮಾಡಲು ಕಳಿಸಿತು. ಅವರ ಈ ಐದು ತಿಂಗಳ ಸತತ ಸಾಮೂಹಿಕ ಸಂಶೋಧನೆ ಮಲಾಲಾ ಕಥೆಯ ಸತ್ಯಾಸತ್ಯತೆಯನ್ನು ಪುರಾವೆಗಳ ಜೊತೆಗೆ ಅಗೆದು ತಗೆದು ಪಾಶ್ಚಾತ್ಯ ಮಾಧ್ಯಮಗಳ ವರದಿಗೆ ಸವಾಲು ಒಡ್ಡಿದೆ.

ತನಿಖೆಯ ನಂತರ ತಿಳಿದು ಬಂದ ಅಂಶಗಳು

 • ಮಲಾಲಾ ಹುಟ್ಟಿದ್ದು  ಸ್ವಾತ್ ಕಣಿವೆಯಲ್ಲಲ್ಲ  ಮತ್ತು ಅವಳು ಪುಶ್ತುನ್ ಜಾತಿಯವಳು ಅಲ್ಲ. ಸ್ವಾತ್ ನಲ್ಲಿ ಒಂದು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ನಡೆಸುತ್ತಿರುವ ಒಬ್ಬ ಗೌರವಾನ್ವಿತ ವೈದ್ಯರಾದ ಡಾಕ್ಟರ. ಇಮ್ತಿಯಾಜ್ ಅಲಿ ಖಂಜಾಯಿ ಅವರು ಮಲಾಲಾ ಪುಶ್ತುನ್ ಅಲ್ಲ ಎಂದು ಸಾಧಿಸುತ್ತಾರೆ. ಅವರ ಬಳಿ DNA ಪುರಾವೆ ಕೂಡ ಇದೆಯೆಂದು ನಮ್ಮ ವರದಿಗಾರರಿಗೆ ತಿಳಿಸಿದ್ದಾರೆ.
 •  ನಮಗೆ ವರದಿಯನ್ನು ತೋರಿಸಿದ ಅವರು ಮಲಾಲಾ ಮಗುವಾಗಿದ್ದಾಗ  ಕಿವಿನೋವಿನ ಚಿಕಿತ್ಸೆಗಾಗಿ  ತಮ್ಮ ಚಿಕಿತ್ಸಾಲಯದಲ್ಲಿ ಅವಳ ತಂದೆ ತಾಯಿ ಕರೆದುಕೊಂಡು ಬಂದಾಗ  ಅವರು ಮಲಾಲಾಳ ಕಿವಿಯ ಮೇಣವನ್ನು ಸಂಗ್ರಹಿಸಿ ಇಟ್ಟಿದ್ದಾಗಿ  ಹೇಳಿದರು. ಹೋದ ವರ್ಷ ಅವಳನ್ನು ಗುಂಡಿಕ್ಕಿದ ಸುದ್ದಿ ಕೇಳಿದ ಅವರಿಗೆ ಆ ಮೇಣದ ಸಂಗ್ರಹದ ನೆನಪಾಗಿ ಅದನ್ನು ಹೊರತಗೆದರು. ‘ನಾನು ನನ್ನ ರೋಗಿಗಳ ಕಿವಿಯ ಮೇಣವನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದೇನೆ’ ಎನ್ನುತ್ತಾರೆ ಈ ವೈದ್ಯರು.
 • ಅವರ ಡಿಎನ್ಎ ವರದಿಯ ಪ್ರಕಾರ ಮಲಾಲಾ ಬಹುಶಃ ಪೋಲೆಂಡ್ ಮೂಲದವಳು.  ಇದನ್ನು
  ಕಂಡುಹಿಡಿದ ಬಳಿಕ, ವೈದ್ಯರು ಮಲಾಲಾಳ  ತಂದೆಗೆ ಕರೆ ಮಾಡಿ ಮಲಾಲಾಳ  ಮೂಲ ನನಗೆ ತಿಳಿದಿದೆ ಅವಳು ಯಾರು ಎಂದು ನನಗೆ ಗೊತ್ತಾಗಿದೆ ಎಂದು ತಿಳಿಸಿದಾಗ ಅವಳ ತಂದೆ ಅಚ್ಚರಿಗೊಂಡು ಗಾಬರಿಯಾದರು. ಈ ಸತ್ಯವನ್ನು ಬಹಿರಂಗಗೊಳಿಸಬಾರದೆಂದು  ಬೇಡಿಕೊಂಡರು. ಆದರೆ ನನಗೆ ಸಂಪೂರ್ಣ ಸತ್ಯವನ್ನು ಹೇಳಿದರೆ ಮಾತ್ರ ಆ ಗುಟ್ಟನ್ನು ಬಿಟ್ಟುಕೊಡುವದಿಲ್ಲ ಎಂದು ವೈದ್ಯರು ಅವರಿಗೆ ಹೇಳಿದ್ದರಂತೆ.
 •  ಮಲಾಲಾಳ ತಂದೆ, ಅವಳ ನಿಜವಾದ ಹೆಸರು ಜೇನ್ ಎಂದು  ಮತ್ತು ಅವಳು 1997 ರಲ್ಲಿ ಹಂಗರಿಯಲ್ಲಿ ಜನಿಸಿದ್ದಳು ಎಂದು ಹೇಳಿದ್ದಾರೆ. ಅವಳ ನಿಜವಾದ ಜೈವಿಕ ತಂದೆತಾಯಿಗಳು ರಹಸ್ಯವಾಗಿ ಕ್ರಿಶ್ಚಿಯನ್ ಮಿಷನರಿಯರಾಗಿ ಕ್ರಿಶ್ಚಿಯನ್ ಧರ್ಮಕ್ಕೆ  ಪರಿವರ್ತನೆಗೊಂಡ ನಂತರ 2002 ರಲ್ಲಿ ಸ್ವಾತ್ಗೆ ಆಗಮಿಸಿದಾಗ , ಉಡುಗೊರೆಯಾಗಿ ಈಗಿನ ತಂದೆ ತಾಯಿಯರಿಗೆ ದತ್ತು ಕೊಟ್ಟು ತೊರೆದು ಹೋಗಿದ್ದರು.
 •  ನಮ್ಮ ವರದಿಗಾರರು ವೈದ್ಯರನ್ನು ‘ಈಗ ಏಕೆ ಮಲಾಲಾಳ ನಿಜ ಗುರುತನ್ನು ಬಹಿರಂಗಪಡೆಸಿದ್ದಿರಿ?’ ಎಂದು   ಕೇಳಿದಾಗ, ಅವರು  ಮಲಾಲಾ ಪಾಕಿಸ್ತಾನದ ವಿರೋಧಿ ಪಕ್ಷಗಳಿಂದ ಸ್ವಾತ್ಗೆ ಕಳಿಸಿದ ವ್ಯಕ್ತಿ ಎಂದು ಮನವರಿಕೆಯಾಗಿದೆ ಎಂದರು.
 •  ನಂತರ ಗುಂಡು ಹೊಡೆದ ಯುವಕ ಕೂಡ ಪುಶ್ತುನ್  ಅಲ್ಲ ಎಂದು ಸಾಬೀತು ಮಾಡಬಹುದು,ಅವನ ಕಿವಿಯ ಮೇಣದ ಸಂಗ್ರಹ ಕೂಡ ಅವರ ಹತ್ತಿರ ಇದೆ ಎಂದು  ವೈದ್ಯರು ಹೇಳುತ್ತಾರೆ.
 •  ಶೂಟರನ ಕಿವಿಯ ಮೇಣದ ಡಿಎನ್ಎ ಪರೀಕ್ಷೆ ಮಾಡಿದ ವೈದ್ಯರು ಅವನು ಬಹುಶಃ ಇಟಲಿ ಮೂಲದವನು ಎಂದು ಕಂಡುಹಿಡಿದರು. ನಂತರ ಸೂಕ್ಷ್ಮದರ್ಶಕದ ಅಡಿಯಲ್ಲಿ ಆ ಮನುಷ್ಯನ ಕಿವಿಯ ಮೇಣವನ್ನು ನೋಡಲು ನಮ್ಮ ವರದಿಗಾರರನ್ನು ಆಹ್ವಾನಿಸಿದ್ದರು.
 •  “ನೀವು ಕಾಣುವ ಮೇಣದಲ್ಲಿ  ಸಣ್ಣ ಹಳದಿ ಪಿಜ್ಜಾ ತುಣುಕುಗಳು ಇವೆ,” ಇದು ವೈದ್ಯರು ನೀಡುವ ವಿವರ. ಜನವರಿ 2012 ರಲ್ಲಿ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಐ.ಎಸ್.ಐ ನ ಕೆಲವು ಹಿರಿಯ ಸದಸ್ಯರಿಗೆ ತಮ್ಮ ಸಂಶೋಧನೆಗಳನ್ನು ಇಮೇಲ್  ಮೂಲಕ ಕಳಿಸಿದ್ದಾರೆ.
 • ಕೆಲವು ದಿನಗಳ ನಂತರ ವೈದ್ಯರು ಸೌದಿ ಅರೇಬಿಯಾದಲ್ಲಿ ಸೌದಿ ರಾಜಮನೆತನದ ಕುಟುಂಬದ ಕೆಲವು ಸದಸ್ಯರ  ಕಿವಿಯ ಮೇಣದ ಮಾದರಿಗಳನ್ನು ಸಂಗ್ರಹಿಸುವ ಸಮಯದಲ್ಲಿ ಅವರ  ಚಿಕಿತ್ಸಾಲಯದ ಮೇಲೆ ಪೊಲೀಸರು ದಾಳಿ ಮಾಡಿದರು. ಕ್ಲಿನಿಕ್ಕಿನಲ್ಲಿ ಅವರ ಸಿಬ್ಬಂದಿಯವರಿಗೆ ಮೇಣದ ಮಾದರಿಯ ಸಂಗ್ರಹದ ಬಗ್ಗೆ ತಿಳಿಯಲು  ಪೊಲೀಸರು ಕಿರುಕುಳ ನೀಡಿದರು.
 •  ಈ ವರ್ಷದ ಜೂನ್  ತಿಂಗಳಿನಲ್ಲಿ  ಒಬ್ಬ ಯುವ ಐ.ಎಸ್.ಐ ಅಧಿಕಾರಿ ವೈದ್ಯರನ್ನು ಭೇಟಿ ಮಾಡಿ ದಾಳಿ ಮಾಡಿದರ ಬಗ್ಗೆ ಕ್ಷಮೆ ಯಾಚಿಸಿದನು  ಮತ್ತು ಐ.ಎಸ್.ಐಗೆ  ಮಲಾಲಾಳ ನಿಜಾಂಶದ ಬಗ್ಗೆ ಮೊದಲೇ ಚೆನ್ನಾಗಿ ಅರಿವಿತ್ತು ಎಂದು ತಿಳಿಸಿದನು. ನಮ್ಮ ತಂಡದವರು ತುಂಬಾ ಪುಸಲಾಯಿಸಿದ ನಂತರ ವೈದ್ಯರು ನಮಗೆ ಐ.ಎಸ್.ಐ ಅಧಿಕಾರಿಯ ಸೆಲ್ ಫೋನ್ ಸಂಖ್ಯೆಯನ್ನು ಕೊಟ್ಟರು
 • ಆ ಅಧಿಕಾರಿ ಮೊದ ಮೊದಲು ನಮ್ಮೊಡನೆ ಮಾತನಾಡಲು ನಿರಾಕರಿಸುತ್ತಲೇ ಇದ್ದರು.  ಆದರೆ ಅಂತಿಮವಾಗಿ  ತನ್ನ ಗುರುತನ್ನು ಬಿಟ್ಟು ಕೊಡದೆ,  ‘ಮಾಸ್ಟರ್ X ‘ ಎಂದು ಉಲ್ಲೇಖಿಸುವ ಷರತ್ತಿನೊಂದಿಗೆ ಮಾತನಾಡಲು ಒಪ್ಪಿದರು. ‘ಮಾಸ್ಟರ್ X’ ಸ್ವಾತ್ನ ಒಂದು ಪರಿತ್ಯಕ್ತ ಬಾಲಕಿಯರ ಶಾಲೆಯಲ್ಲಿ ನಮ್ಮ ವರದಿಗಾರನನ್ನು  ಭೇಟಿ ಮಾಡಿದರು. ತನ್ನ ಮುಖವನ್ನು ಮರೆಮಾಡಲು, ಆ ಅಧಿಕಾರಿ ಒಂದು  ಸ್ಪೈಡರ್ ಮ್ಯಾನ್ ಮುಖವಾಡ ಧರಿಸಿದ್ದರು.
 • ಅವರು ನಮ್ಮ ವರದಿಗಾರರಿಗೆ ಹೇಳಿದರು: “ಈ ವಿಷಯ ಒಂದಲ್ಲ ಒಂದು ದಿನ ಹೊರ ಬರಲೇ ಬೇಕಿತ್ತು. ನಾನು ನಿಜವಾದ ದೇಶ ಭಕ್ತ ಮತ್ತು ಇಂತಹ ಅಪಾಯಕಾರಿ ರಹಸ್ಯವನ್ನು ತುಂಬಾ ದಿನ ಮುಚ್ಚಿಡಲು ಸಾಧ್ಯವಿಲ್ಲ.” ನನ್ನ ತಂದೆ ಹೇಳಿದ ಮಾತು ನೆನಪಿಗೆ ಬಂತು “ಪೀಟರ್, ಮಹಾನ್ ಶಕ್ತಿಯ ಜೊತೆ ಮಹಾನ್ ಜವಾಬ್ದಾರಿ ಬರುತ್ತದೆ”
 • ಆ ಅಧಿಕಾರಿಯನ್ನು ಬಹಿರಂಗ ಗೊಳಿಸಿದ್ದರಿಂದ  ಮುಂದಿನ ಆಘಾತಕಾರಿ ಅನ್ವೇಷಣೆಯನ್ನು (ಅದು ಪುರಾವೆ ಸಹಿತವಾಗಿ) ಮಾಡಲು ದಾರಿಯಾಯಿತು.
 •  ಮಲಾಲಾಳ ಶೂಟಿಂಗ್ ಗುಪ್ತಚರ ಏಜೆನ್ಸಿಗಳಿಂದ ಆಡಲಾದ ಒಂದು ಆಟ. ಆ ಅಧಿಕಾರಿ ನಮ್ಮ ವರದಿಗಾರನಿಗೆ ಹೇಳಿದ ಪ್ರಕಾರ ಇಡೀ  ಘಟನೆ  ಉತ್ತರ ವಝೀರಿಸ್ತಾನ್ ಪಾಕಿಸ್ತಾನದ ಸೇನೆಯ ಆಕ್ರಮಣವನ್ನು ಹಾದಿಯನ್ನು ಸುಗಮಗೊಳಿಸಾಲು ಪಾಕಿಸ್ತಾನ ಮತ್ತು ಅಮೇರಿಕಾದ ಏಜೆನ್ಸಿಗಳು  ಮಾಡಿದ ಒಂದು ಸಾಹಸ.  ಇದು ಎಲ್ಲಾ ಒಂದು ನಾಟಕ ಎಂದು ಅವರು ವಿವರಿಸಿದರು. “ಪಾಕಿಸ್ತಾನ ಸೇನೆಯು ಉತ್ತರ ವಝೀರಿಸ್ತಾನವನ್ನು ಆಕ್ರಮಿಸಿಲು ಆಟ ಆಡಿತು”
 • ಉತ್ತರ ವಝೀರಿಸ್ತಾನ್ ಪಾಕಿಸ್ತಾನದ ಒಂದು ಭಾಗವಾಗಿದ್ದಾಗ ಕೂಡ  ‘ಆಕ್ರಮಣ’  ಪದದ ಬಳಕೆ ಏಕೆ ಎಂದು ಆ ಅಧಿಕಾರಿಯನ್ನು ಕೇಳಿದಾಗ, ಅಧಿಕಾರಿ ಉತ್ತರಿಸಿದರು: “ಉತ್ತರ ವಝೀರಿಸ್ತಾನ್ ಒಂದು ಸ್ವಾಯತ್ತ ಇಸ್ಲಾಮಿಕ್ ಎಮಿರೇಟ್ಸ್ ಆಗಿದೆ. ಇದು ಶತಮಾನಗಳಿಂದ ಹಾಗೆ ನಡೆದು ಬಂದಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಸತ್ಯ ತಿರುಚುವ ಮತ್ತು ಪಾಕಿಸ್ತಾನ ಭಾಗವಾಗಿದೆ ಎಂದು ನಮ್ಮ ಮಕ್ಕಳಿಗೆ  ಕಲಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಪ್ರದೇಶವು ತೈಲ, ಚಿನ್ನ, ತಾಮ್ರ, ಬೆಳ್ಳಿ, ಕಂಚು, ಕಲ್ಲಿದ್ದಲು, ವಜ್ರಗಳು, ಅನಿಲ ಮತ್ತು ಡೈನೋಸಾರ್ ಪಳೆಯುಳಿಕೆಗಳ ಅವಶೇಷಗಳನ್ನು ಊಹಿಸಲಾಗದ ಪ್ರಮಾಣದಲ್ಲಿ ಹೊಂದಿದೆ.  ಇದೇ  ಕಾರಣಕ್ಕಾಗಿ ಅಮೆರಿಕನ್ನರು ಕೂಡ ಇದರ ಹಿಂದೆ ಬಿದ್ದಿದ್ದಾರೆ”
 • ಈ ಅಂಶವನ್ನು ಸಾಬಿತು ಪಡಿಸಲು ಏನಾದರೂ ಸಾಕ್ಷಿ ಇದೆಯೇ ಎಂದು ಕೇಳಿದ್ದಕ್ಕೆ ಆ ಅಧಿಕಾರಿ ಡೈನೋಸಾರ್ ಮೂಳೆಗಳುಳ್ಳ ಛಾಯಾಚಿತ್ರಗಳನ್ನು   ತೋರಿಸಿದರು.
 •  ತಾಲಿಬಾನ್ ಪುರಾತತ್ತ್ವ ಶಾಸ್ತ್ರ ವಿಭಾಗ ಉತ್ತರ ವಝೀರಿಸ್ತಾನವನ್ನು ಉತ್ಖನನ  ಮಾಡಿತು. ತಾಲಿಬಾನ್ ಭೂವಿಜ್ಞಾನ ವಿಭಾಗ ಅಧ್ಯಯನ ಮಾಡಿದ ನಂತರ  ಇಲ್ಲಿ  ತೈಲ, ಚಿನ್ನ, ತಾಮ್ರ, ಬೆಳ್ಳಿ, ಕಂಚು, ಕಲ್ಲಿದ್ದಲು, ವಜ್ರಗಳು ಮತ್ತು ಅನಿಲ ಕುರುಹುಗಳನ್ನು ಹೊಂದಿದ್ದ ಪುರಾವೆಗಳು ಸಿಕ್ಕವು”
 • ಈ ಶೂಟಿಂಗ್ ಅಮೆರಿಕನ್ ಮತ್ತು ಪಾಕಿಸ್ತಾನದ ಏಜೆನ್ಸಿಗಳೇ ನಡೆಸಿದವು ಅನ್ನುವದಕ್ಕೆ ಏನು  ಪುರಾವೆ  ಎಂಬ ಪ್ರಶ್ನೆಗೆ ಒಂದು ಕಾಗದದ ತುಣುಕನ್ನು ಹೊರ ತಗೆದು ಅಧಿಕಾರಿ ಹೇಳಿದರು: “ಇದೇ  ಸಾಕ್ಷಿ, ಇದನ್ನು ತಾಲಿಬಾನ್ ಕ್ವಾಂಟಮ್ ಭೌತಶಾಸ್ತ್ರದ  ವಿಭಾಗದಲ್ಲಿ ಡಿಕೋಡ್ ಮಾಡಲಾಯಿತು”.
 • ‘ಲಿಬ್ ಫಿಶ್’ ಮತ್ತು ‘ಆಯಿಲ್ ಗುಲ್ ‘ ನಡುವೆ ಟ್ವಿಟರಿನಲ್ಲಿ ನಡೆದ ಟ್ವೀಟ್ ವಿನಿಮಯದ ಸಂಕ್ಷಿಪ್ತ ಸ್ಕ್ರೀನ್ ಶಾಟ್ ಆ ಕಾಗದದಲ್ಲಿತ್ತು.
  ಅಧಿಕಾರಿ  ಹೇಳಿದರು ‘ಲಿಬ್ ಫಿಶ್” ವಾಸ್ತವವಾಗಿ ಕತಾರ್  ಮೂಲದ ಸಿಐಎ ಆಪರೇಟಿವ್  ಮತ್ತು ‘ಆಯಿಲ್ ಗುಲ್ ‘ ಲಾಹೋರ್ ಮೂಲದ ಐ.ಎಸ್.ಐ ಪತ್ತೆದಾರ. ಅವರಿಬ್ಬರ ನಡುವೆ ನಡೆದ ಟ್ವಿಟ್ಟರ್ ಸಂದೇಶ ವಿನಿಮಯವನ್ನು  ಪಾಕಿಸ್ತಾನದ ಖೈಬರ್ ಪಖ್ತುಂಕ್ವ ಪ್ರಾಂತ್ಯದ ಸ್ವಾಬಿ ಮೂಲದ ಮತ್ತು ವೃತ್ತಿಯಲ್ಲಿ ಒಬ್ಬ ಎಂಜಿನಿಯರ್  ಆದ ‘ಸುನಾಮಿ ಮಮ್ಮಿ’ ಎಂಬವರಿಂದ ಡೀಕೋಡ್ ಮಾಡಲಾಯಿತು.

ಅಧಿಕಾರಿ ಮೂಲಕ ನಮಗೆ ಒದಗಿದ ‘ಲಿಬ್ ಫಿಶ್’ ಮತ್ತು ‘ಆಯಿಲ್ ಗುಲ್ ‘ ನಡುವೆ ನಡೆದ ಟ್ವಿಟರ್ ವಿನಿಮಯವನ್ನು ಪ್ರಕಟಿಸುತ್ತಿದ್ದೇವೆ:

@ LibFish : ಯೋ, @ OilGul,  ಜೀವನ ಹೇಗೆ ನಡೆದಿದೆ?

@ OilGul : ಲೈಫ್ ಇಸ್ ಕೂಲ್, ಮೇಟ್

@ LibFish : @ OilGul ಶೀಘ್ರದಲ್ಲೇ ಕತಾರ್ ಭೇಟಿಗೆ ಯಾವುದೇ ಅವಕಾಶ?

@ OilGul : @ LibFish Haha. ನನ್ನ ‘ ಓ’  ಲೆವೆಲ್ ಪರೀಕ್ಷೆಗಳನ್ನು ಮಾಡಿದ ನಂತರ. ತುಂಬಾ ಕಠಿಣ

@ LibFish @ OilGul Haha. ಹೌದು,  ಅದು ಹಾಗೇನೆ, ಅಲ್ಲವೇ?

ಈ ಸಂಭಾಷಣೆ ನಡೆದದ್ದನ್ನು ತಿಳಿದ ಸುನಾಮಿ ಮಮ್ಮಿ ಕೂಡ ಅವರ ಜೊತೆ ಸೇರಿದರು ಎಂದು ಅಧಿಕಾರಿ  ಹೇಳಿದರು.

@ Tsunami_Mommy: ಏಜೆಂಟ್ಸ್! ನೀವು  ಏನು ಮಾಡುತ್ತಿದ್ದರಾ ಅಂತ  ನನಗೆ ಗೊತ್ತು. ನೀವಿಬ್ಬರು ಇಸ್ಲಾಂ ಧರ್ಮ ವಿರೋಧಿ  ಮತ್ತು ಪಾಕಿಸ್ತಾನ ವಿರೋಧಿ ಬಸ್ತಾಸ್ @ OilGul @ LibFish

@ OilGul ಡ್ಯೂಡ್, ನೀವು ಯಾರು? ನೀವೇಕೆ  ನಮ್ಮನ್ನು ಟ್ರೊಲ್ ಮಾಡ್ತಾ ಇದ್ದೀರಾ?
@ Tsunami_Mommy: ಶಟ್ ಅಪ್, ನೀವು ನಕಲಿ liberalz ಫ್ಯಾಸಿಸ್ಟ್ ಏಜೆಂಟ್ಸ IK ಇಸ್ ಬೆಸ್ಟ್ NA250  ರಿಗ್ಗಿಂಗ್ 1  ಬಿಲಿಯನ್ ಫೇಕ್ ಲಿಬೇರಲ್ಜ್ ವೋತೆಸ್ ಆಂಟಿ -ಪಾಕಿಸ್ತಾನಿ ಆಂಟಿ -ಇಸ್ಲಾಮ್  INSHALLAH  ನ್ಯಾ ಬಾಕಿಸ್ತಾನ್ ತಬ್ದೀಲಿ ..

ಸಿಐಎ ಮತ್ತು ಐ.ಎಸ್.ಐ ಕೂಡಿ ಮಾಡುತ್ತಿರುವ ನಕಲಿ ಶೂಟಿಂಗ್ ಯೋಜನೆಯ ಬಗ್ಗೆ ತಿಳಿದಾಗ ಈ ಸಂಶಯಾಸ್ಪದ ಟ್ವಿಟರ್ ವಿನಿಮಯವನ್ನು ಡಿಕೋಡ್ ಮಾಡಲು ಪ್ರಸಿದ್ಧ ಪಾಕಿಸ್ತಾನಿ ಭಾಷಾಶಾಸ್ತ್ರಜ್ಞ ಮತ್ತು WW-II ದ ಕೋಡ್ ಭಂಜಕ, ಮುಸ್ತನ್ಸರ್ ಹುಸೇನ್ ತರಾರ ಅವರನ್ನು ಉಪಯೋಗಿಸಿದ್ದಾಗಿ ಆ ಅಧಿಕಾರಿ ಹೇಳಿದರು.

ವೈದ್ಯರು, ಅಧಿಕಾರಿ ಮತ್ತು ಮುಸ್ತನ್ಸರ್ ಹುಸೇನ್  ತರಾರ್  ಒದಗಿಸಿದ ಸಾಕ್ಷ್ಯವನ್ನು (ಪುರಾವೆಗೆ) ಒಟ್ಟಿಗೆ  ಕೂಡಿಸಿ  ಶೂಟಿಂಗ್ ಮೇಲೆ ಸುನಾಮಿ ಮಮ್ಮಿ ಬರೆಯುತ್ತಿದ್ದ ಪುಸ್ತಕದ ಹಸ್ತಪ್ರತಿಯನ್ನು ಆ ಅಧಿಕಾರಿ ನಮ್ಮ ವರದಿಗಾರನಿಗೆ ನೀಡಿದರು.

‘A Fake Shooting of a Fake Liberal by a Fake Liberal, You Bastaaas.’  ಶೀರ್ಷಿಕೆಯುಳ್ಳ ಆ ಪುಸ್ತಕದ ಹಸ್ತಪ್ರತಿಯ ಸಂಕ್ಷಿಪ್ತ ವಿವರಣೆ ಹೀಗಿದೆ :

ಅಕ್ಟೋಬರ್ 1, 1997: ಬುಡಾಪೆಸ್ಟ್ನಲ್ಲಿ ಹಂಗರಿ ಮೂಲದ ತಂದೆ ತಾಯಿಗಳಿಂದ ಮಲಾಲಾಳ ಜನ್ಮ  ಮತ್ತು ಅವಳ ಹೆಸರು ಜೇನ್.

ಅಕ್ಟೋಬರ್ 4, 2002:  ಸಿಐಎ ಅವಳ ಪೋಷಕರನ್ನು ನೇಮಿಸಿ ಅವರಿಗೆ ಇವ್ಯಾಂಜೆಲಿಕಲ್ ಕ್ರಿಶ್ಚಿಯನ್ ಧರ್ಮ, ಸಂಮೋಹನ ಮತ್ತು ಕರಾಟೆಯಲ್ಲಿ ಲಘು ತರಬೇತಿಗಳನ್ನೂ ನೀಡುತ್ತದೆ.

ಅಕ್ಟೋಬರ್ 7, 2003: ಅವರು ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ NGO ಸೇವಕರಾಗಿ ಸ್ವಾತ್ಗೆ ಬರುತ್ತಾರೆ. ಅಲ್ಲಿ ಅವರು ಕಡಿಮೆ ಮಟ್ಟದ ಐ.ಎಸ್.ಐ ದಳ್ಳಾಳಿ  ಜೊತೆ ಸಂಪರ್ಕ ಮಾಡಿಕೊಂಡು ಆ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುತ್ತಾರೆ. ಜೇನ್ ಳನ್ನು ಅಲ್ಲಿ ಬಿಟ್ಟು ಹಿಂದಿರುಗುತ್ತಾರೆ. ಯೇಸುವಿನ ಹೆದರಿಕೆಯಿಂದ ಆ ದಲ್ಲಾಳಿ ಅವಳ ಹೆಸರನ್ನು ಮಲಾಲಾ ಎಂದು ಬದಲಾಯಿಸುತ್ತಾನೆ.

ಅಕ್ಟೋಬರ್ 30, 2007: ಮಲಾಲಾ ತನ್ನದೇ ಆದ ಬ್ಲಾಗಿನಲ್ಲಿ ಉಗ್ರಗಾಮಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು  ಬಿಟ್ಟು   ಬೈಬಲ್ ಓದಲು ಸಲಹೆ ನೀಡಿ ಬರೆಯಲು ಪ್ರಾರಂಭ ಮಾಡುತ್ತಾಳೆ.

ಅಕ್ಟೋಬರ್ 21, 2011: ತನ್ನ ಇವ್ಯಾಂಜೆಲಿಕಲ್ ಬ್ಲಾಗ್ ಬರೆಯುವ ಕೆಲಸವನ್ನು ನಿಲ್ಲಿಸಿ ಮತ್ತು ಬದಲಿಗೆ ತನ್ನ ಮನೆಕೆಲಸ ಮುಗಿಸಲು ಉಗ್ರಗಾಮಿಗಳು ಮನವಿ ಮಾಡುತ್ತಾರೆ.

ಅಕ್ಟೋಬರ್ 1, 2012: ಸಿಐಎ ಮತ್ತೆ ನ್ಯೂಯಾರ್ಕಿನ ಏಕಾಂಗಿಯಾಗಿದ್ದ ಇಟಾಲಿಯನ್ ಅಮೆರಿಕನ್ (ರಾಬರ್ಟ್)ನನ್ನು ನೇಮಿಸಿ ಅವನಿಗೆ ಗನ್ ಸ್ಲಿಂಗಿಂಗ್ ಮತ್ತು ನಟನೆಯಲ್ಲಿ ಒಂದು ಲಘು ತರಬೇತಿಯನ್ನು ನೀಡುತ್ತದೆ.

ಅಕ್ಟೋಬರ್ 7, 2012 ಸಿಐಎ ಮತ್ತು  ಐ.ಎಸ್.ಐ ಜೊತೆಕೂಡಿ ಮಲಾಲಾಳ ನಕಲಿ  ಶೂಟಿಂಗ್ ಬಗ್ಗೆ ಯೋಜನೆ ಮಾಡಿ ಅವಳ ತಂದೆ ತಾಯಿಗೆ ಅದರ ಬಗ್ಗೆ ತಿಳಿಸಿ ಹೇಳುತ್ತಾರೆ.

ಅಕ್ಟೋಬರ್ 11, 2012: ಇಟಾಲಿಯನ್ ಅಮೇರಿಕನ್ ಉಜ್ಬೆಕ್ ಹೋಮಿಯೋಪತಿ ಚಿಕಿತ್ಸಕನ ವೇಷದಲ್ಲಿ ಸ್ವಾತ್ಗೆ ಆಗಮಿಸುತ್ತಾನೆ.

ಅಕ್ಟೋಬರ್ 12, 2012: ರಾಬರ್ಟಗೆ ಖಾಲಿ ತುಂಬಿದ್ದ ಒಂದು ಗನ್ನನ್ನು ನೀಡಲಾಗಿತ್ತು. ಅವನು ಮಲಾಲಾಳ ಶಾಲೆಯ ವ್ಯಾನನ್ನು ತಡೆಗಟ್ಟಿ ನಕಲಿ ಗುಂಡನ್ನು ಹೊಡೆಯುತ್ತಾನೆ. ಮಲಾಲಾ  ಗುಂಡು ತಾಕಿದ ಹಾಗೆ ನಾಟಕವಾಡಿ ತನ್ನ  ಹತ್ತಿರವಿದ್ದ ಮಿಚೆಲ್ ನ ಟೊಮಾಟೊ ಕೆಚಪನ ಚಿಕ್ಕ ಪ್ಯಾಕ್ಕನ್ನು ತೆಗೆದು ಕೈ ಮತ್ತು ಮುಖದ ಮೇಲೆ ಹಚ್ಚಿಕೊಳ್ಳುತ್ತಾಳೆ. ಇದ್ದಕ್ಕಿದ್ದ ಹಾಗೆ ಥಟ್ಟನೆ ಒಂದು ನಕಲಿ ಆಂಬುಲೆನ್ಸ್ ಆಗಮಿಸಿ ಮಲಾಲಾಳನ್ನು ಅಲ್ಲಿದ ಕರೆದುಕೊಂಡು ಹೋಗುತ್ತದೆ. ತಾಲಿಬಾನ್ ಮತಾಂಧರು ಮಲಾಲಾಳ ಮುಖ ಮತ್ತು ತಲೆಗೆ ಗುಂಡು  ಹೊಡೆದರು ಎಂದು ವಿಶ್ವದಲ್ಲಿ ಪ್ರಚಾರ ಮಾಡಲಾಗುತ್ತದೆ.

ಮಲಾಲಾಳ ಗೆಳತಿಯರು ಆ ಬಂದೂಕುಧಾರಿ ಮಲಾಲಾಳ ಹೆಸರನ್ನು ಕೇಳಿ ನಂತರ ಅವಳಿಗೆ ಗುಂಡು ಹೊಡೆದ ಎಂದು ಹೇಳಿದರು ಎಂದು ಸುದ್ದಿ ಮಾಧ್ಯಮಗಳಲ್ಲಿ ತೋರಿಸಲಾಯಿತು.ಆದರೆ ಮಾಧ್ಯಮಗಳು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಈ ವಿಷಯವನ್ನು ಹೇಗೆ ಮುಚ್ಚಿಟವು ಎಂದು ಆ ಅಧಿಕಾರಿ ನಮ್ಮ ಜೊತೆ ಪುರಾವೆಯನ್ನು ಹಂಚಿಕೊಂಡರು.

ಸಾಕ್ಷ್ಯದ ಪ್ರಕಾರ,  ಆ ಬಂದೂಕುಧಾರಿ ವ್ಯಾನ್ ನಿಲ್ಲಿಸಿ, ಪಶ್ತು ಭಾಷೆಯಲ್ಲಿ  ‘ಯಾರು ಜೇನ್ …  ಅಂದರೆ , ಜೀನೆಟ್ಟೆ … ಅಲ್ಲ … ಆಲ್ಬರ್ಟಾ ಜೋನ್ ಲುಕಾಸ್?’ ಎಂದು ಕೇಳಿದ.

ಗೊಂದಲಗೊಂಡ ಹುಡುಗಿಯರು ಒಬ್ಬರನ್ನೊಬ್ಬರು ನೋಡುವಾಗ ವ್ಯಾನ್ ಚಾಲಕ ಇನ್ನೇನು ವ್ಯಾನ್ ಓಡಿಸಲು ಸಿದ್ದವಾದಾಗ ಬಂದೂಕುದಾರಿ ಗನ್ ಅನ್ನು ಹೊರ ತಗೆದು ‘ಯುನೊ ಮೊಮೆಂಟೋ ಯುನೊ ಮೊಮೆಂಟೋ …’ ಎಂದು ಕೂಗಲು ಆರಂಭಿಸಿದ.

ನಂತರ ಒಂದು ಹುಡುಗಿಯನ್ನು ನೋಡಿ  ‘ನೀನು ನನ್ನ ಏಕೆ ನೋಡುತ್ತಿರುವಿ’ ಎಂದು ಕೇಳಿದ. ಆಗ ಅವಳು ತನ್ನ ಶಾಲಾ ಚೀಲವನ್ನು ಕೆಳಗೆ ಒಗೆದು ‘ಇಲ್ಲ, ಮೂರ್ಖನೆ, ನಾನು ನಿನ್ನನ್ನೇ ನೋಡುತ್ತಾ ಇದ್ದೆ, ಮಲಾಲಾ, ಮಲಾಲಾ, ನೆನಪಿದೆಯಾ? ಫೂಲ್.’ ಎಂದಳು

ಮಾಧ್ಯಮದಲ್ಲಿ ತೋರಿಸಿದ ಆಸ್ಪತ್ರೆಗೆ ಸೇರಿಸಿದ ಹುಡುಗಿ ಮಲಾಲ ಅಲ್ಲ ಎಂದು ಅಧಿಕಾರಿ ಪುರಾವೆಗಳನ್ನು ತೋರಿಸಿದ್ದಾರೆ.  ಅದನ್ನು ಸಾಬಿತು ಪಡಿಸಲು ತಮ್ಮ ಜೊತೆಗಿದ್ದ ಛಾಯಾಚಿತ್ರಗಳನ್ನು ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಶೂಟಿಂಗ್ ನಡೆದ  ಕೆಲವೇ ಗಂಟೆಗಳಲ್ಲಿ  ತಮ್ಮ ಐಫೋನನಲ್ಲಿ ತಗೆದ ವೀಡಿಯೊ ತೋರಿಸಿದ್ದಾರೆ. ಅದರಲ್ಲಿ ಮಲಾಲಾ ಸ್ವಾತ್  ಬೆಟ್ಟಗಳಲ್ಲಿ ಖುಷಿಯಿಂದ ಬಂಗೀ ಜಂಪಿಂಗ್ ಮಾಡುತ್ತಿರುವದು ಕಾಣುತ್ತದೆ.

ಅಧಿಕಾರಿಯ ಹೇಳಿಕೆಯಂತೆ ನಾವು ಮತ್ತೆ ಆ ವೈದ್ಯರನ್ನು ಸಂಪರ್ಕಿಸಿದೆವು, ಆ ವೈದ್ಯರ ಪ್ರಕಾರ ಆಸ್ಪತ್ರೆಯಲ್ಲಿ ಅವರು ತಗೆದ ಕಿವಿ ಮೇಣದ ಡಿಎನ್ಎ ಪ್ರಕಾರ  ಅಲ್ಲಿ ಯಾವುದೇ ಬಾಲಕಿ ಇರಲಿಲ್ಲ. ಅದು ಒಂದು ತಲೆದಿಂಬಾಗಿತ್ತು.

ಆ ವೈದ್ಯ ಒಬ್ಬ ಅಂಚೆ ಮನುಷ್ಯನಾಗಿ ಆಸ್ಪತ್ರೆಯ ಆಪರೇಷನ್ ಕೊನೆಗೆ ನುಸುಳಿ ಆ  ಕಿವಿಯ ಮೇಣವನ್ನು  ತೆಗೆದುಕೊಂಡರಂತೆ.  ಹಾಗೆಯೇ ತಮ್ಮ ನೋಕಿಯಾ ಮೊಬೈಲಿನಿಂದ  ಅವಳ ಛಾಯಾಚಿತ್ರ ತೆಗೆದುಕೊಂಡು ಬಂದರು.

ಮರಳಿ ಬಂದ  ಮೇಲೆ ಆ ಚಿತ್ರವನ್ನು ದೊಡ್ಡದು ಮಾಡಿ ನೋಡಿದಾಗ ಅವರಿಗೆ ತುಂಬಾ ಅಚ್ಚರಿಯಾಯಿತಂತೆ.

ನಂತರ ಅದರ ಒಂದು  ಪ್ರಿಂಟ್  ನಮಗೆ ನೀಡಲಾಯಿತು

ಪಾಕಿಸ್ತಾನ್ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ, ಈ ಕಥೆಯನ್ನು ಗಂಭಿರವಾಗಿ ತಗೆದುಕೊಳ್ಳುವದಕ್ಕೆ ಇಷ್ಟು ಪುರಾವೆ ಮತ್ತು ಸಾಕ್ಷಿಗಳು ಸಾಕು ಎಂದು ನಾವು ನಂಬುತ್ತೇವೆ ಹಾಗೂ ಇವುಗಳ ಸಹಾಯದಿಂದ ವಿಶ್ವಸಂಸ್ಥೆಗೆ ಮತ್ತೊಮ್ಮೆ ಗಂಭಿರವಾಗಿ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಆಗ್ರಹಿಸಬಹುದಲ್ಲವೇ?

ಹಕ್ಕು ನಿರಾಕರಣೆ: ಮೇಲಿನ ಲೇಖನ ವಿಡಂಬನೆ ಮತ್ತು ಕಾಲ್ಪನಿಕ ಮತ್ತು ಯಾವುದೇ ರೀತಿಯಲ್ಲಿ ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರಯತ್ನವನ್ನು ಮಾಡಿಲ್ಲ.

ಕೃಪೆ : ಡಾವ್ನ್.ಕಾಂ

ಚಿತ್ರ ಕೃಪೆ : ಸತೀಶ್ ಆಚಾರ್ಯ

2 ಟಿಪ್ಪಣಿಗಳು Post a comment
 1. Manohar Naik
  ಆಕ್ಟೋ 21 2013

  ಕೊನೆಯಲ್ಲಿ “ಹಕ್ಕುನಿರಾಕರಣೆ” ಯಲ್ಲಿ ಬರೆದ ಸಾಲುಗಳಿಂದ ಗೊಂದಲದಲ್ಲಿದ್ದೇನೆ.. ಯಾರಾದರೂ ನಿವಾರಿಸಿ. ಈ ಲೇಖನ ನಿಜವೋ ಅಥವಾ ಕಾಲ್ಪನಿಕವೋ?

  ಉತ್ತರ
  • ಕಲ್ಪನ
   ಆಕ್ಟೋ 21 2013

   ಕಾಲ್ಪನಿಕ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments