ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 23, 2013

12

ಜಾತಿ ಆಧಾರಿತ ಮೀಸಲಾತಿಯ ಎರಡು ಮುಖಗಳು

‍ನಿಲುಮೆ ಮೂಲಕ

– ಮು.ಅ ಶ್ರೀರಂಗ,ಬೆಂಗಳೂರು

Reservtion is Gud r Badಜಾತಿ ಆಧಾರಿತ ಮೀಸಲಾತಿ ಕುರಿತ ಪರ-ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರುಗಳು ಮನುವಿನಿಂದ ಹಿಡಿದು ಪುರೋಹಿತಶಾಹಿ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ. ವಿರೋಧವಾಗಿರುವವರದ್ದು ಅವರವರ ಸದ್ಯದ ಸ್ವಂತ ಅನುಭವವಷ್ಟೇ ಆಗಿ ಕ್ಷೀಣ ದನಿಯಾಗಿದೆ. ಮೀಸಲಾತಿಯು ವೋಟಿನ ರಾಜಕಾರಣಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣದಿಂದ ಸ್ವಾತಂತ್ರ್ಯಾನಂತರ ಮೀಸಲಾತಿಯ ಗಡಿಗಳು(line of limits) ವಿಸ್ತಾರಗೊಳ್ಳುತ್ತಲೇ ಇದೆ. ಇದು ವೈಜ್ನಾನಿಕವೋ,ಅವೈಜ್ನಾನಿಕವೋ ಅಥವಾ ಸಹಜ ನ್ಯಾಯವೋ ಎಂಬ ಯಾವುದೇ ಚರ್ಚೆಗೆ, ಸಂವಾದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಬೆಲೆಯಿಲ್ಲ. ಇಷ್ಟಾಗಿಯೂ ಸಹ ಮೀಸಲಾತಿಯ ಗಡಿ ರೇಖೆಯಿಂದಾಚೆಗೆ ಇರುವ ಜಾತಿಗಳಲ್ಲಿನ(ಸರ್ಕಾರದ ದೃಷ್ಟಿಯಲ್ಲಿ ಮುಂದುವರಿದವರು, ಮೇಲ್ಜಾತಿಯವರು) ಕೆಲವರು ಆಗಾಗ ತಮ್ಮ ವಿರೋಧವನ್ನು ಧರಣಿ,ಮೆರವಣಿಗೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ತೀರಾ ಭಾವಾವೇಶಕ್ಕೊಳಗಾದ ಒಂದಿಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾರೆ;ಪ್ರಾಣ ಕಳೆದುಕೊಳ್ಳುತ್ತಾರೆ. ಕಾಲ ಕಳೆದಂತೆ ಜನಗಳು ಅದನ್ನೆಲ್ಲಾ ಮರೆಯುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ವ್ಯವಸ್ಥೆ ಹಿಂದಿನಂತೆಯೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ. ತಮ್ಮ ಹಿರಿಯರು ಮಾಡಿದರೆನ್ನಲಾದ ಪಾಪದ ಹೊರೆ ಹೊರಬೇಕಾಗಿ ಬಂದಿರುವ ಮೇಲ್ಜಾತಿಯ ಯುವ ಜನತೆ “ಯಾವ ರಾಜ ಬಂದರೇನು ರಾಗಿ ಬೀಸುವುದಂತೂ ತಪ್ಪುವುದಿಲ್ಲವಲ್ಲ” ಎಂಬ ಗಾದೆಯಂತೆ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುತ್ತಾರೆ. ಕ್ರಮೇಣ ಇದೇ ಅಭ್ಯಾಸವಾಗಿ ತಾನಾಯ್ತು ತನ್ನ ಸಂಸಾರವಾಯ್ತು ಎಂದು ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.

ಜಾತಿ-ಜಾತಿಗಳ ನಡುವಿನ ಸಾಮಾಜಿಕ  ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೀಸಲಾತಿಯನ್ನು “ಒಂದು” ಪರಿಹಾರವಾಗಿ ಜಾರಿಗೆ ತರಲಾಯ್ತು. ಆದರೆ ಮೀಸಲಾತಿ ಜಾರಿಗೆ ಬಂದು ಸುಮಾರು ಐವತ್ತು ವರ್ಷಗಳು ಕಳೆದ ಮೇಲೂ ಸಹ ಜಾತಿಗಳ ನಡುವಿನ ಸಾಮಾಜಿಕ ಅಸಮಾನತೆ ಹೋಗಿಲ್ಲವೆಂದರೆ ಅದಕ್ಕೆ ಕಾರಣವನ್ನು ಎಲ್ಲಿ ಹುಡುಕಬೇಕು? “ವೋಟಿನ ರಾಜಕಾರಣ” ಬಿಟ್ಟರೆ ಬೇರೆ ಕಾರಣಗಳು ಕಾಣುತ್ತಲ್ಲಿಲ್ಲ. ಮಗುವನ್ನು ಅದರ ಕೈ ಕಾಲುಗಳು ಬಲಿಯುವ ತನಕ ತಂದೆ-ತಾಯಿ ಕಂಕುಳಲ್ಲಿ ಎತ್ತಿ ಕೊಂಡಿರುವುದು ಸಹಜ. ನಂತರ ಅದು ಸ್ವಪ್ರಯತ್ನದಿಂದ ನಡೆಯುವಂತೆ ಪ್ರೋತ್ಸಾಹಿಸ ಬೇಕಾಗಿರುವುದು ತಂದೆ-ತಾಯಿಯ ಕರ್ತವ್ಯ. ಇಲ್ಲದ್ದಿದ್ದರೆ ಅದಕ್ಕೆ ಕಂಕುಳಿನ “ಆಸರೆ”ಯೇ ಹಿತವಾಗಿ ಹೋಗುತ್ತದೆ.

ನಮ್ಮ ರಾಜ್ಯ ಮತ್ತು ಕೆಂದ್ರ ಸರ್ಕಾರಗಳಲ್ಲಿರುವ ಕೆಲವರಾದರೂ ಮಂತ್ರಿಗಳಿಗೆ,ವಿವಿಧ ಸರ್ಕಾರಿ ಯೋಜನೆಗಳಲ್ಲಿ ಮುಖ್ಯಸ್ಥರಾಗಿರುವವರಿಗೆ ಇಂತಹ ಅನಿಯಮಿತ ಮೀಸಲಾತಿಯ ಸಾಧಕ-ಬಾಧಕಗಳ ಅರಿವು ಇದೆ. ಆದರೆ “ಪಕ್ಷ ರಾಜಕೀಯಕ್ಕೆ” ಬದ್ಧವಾಗಿರಬೇಕಾದ “ಅನಿವಾರ್ಯತೆ’ಅವರಿಗಿದೆ. ಹೀಗಾಗಿ ಯಾವುದು “politically correct”ಎಂದು ಪಕ್ಷ ತೀರ್ಮಾನಿಸುತ್ತದೋ ಅದಕ್ಕೆ ಅವರುಗಳು ಸಮ್ಮತಿಸಲೇ ಬೇಕಾಗಿದೆ.

(ಈ ಎರಡು ಪುಟ್ಟ ಟಿಪ್ಪಣಿಗಳಿಗೆ ಪ್ರೊ. ಎಸ್ ಎನ್  ಬಾಲಗಂಗಾಧರ ಮತ್ತು ಅವರ ಸಂಶೋಧನಾ ತಂಡದ ವಿಚಾರಗಳನ್ನು ಆಧರಿಸಿದ “ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?”ಎಂಬ ಪುಸ್ತಕ ಪ್ರೇರಣೆಯಾಗಿದೆ.  ಪ್ರಕಾಶಕರು::ಆನಂದಕಂದ ಗ್ರಂಥಮಾಲೆ ಮಲ್ಲಾಡಿಹಳ್ಳಿ  ಪ್ರಥಮ ಮುದ್ರಣ ೨೦೧೨)

ನೋಬಾಲ್ : gossip ಮತ್ತು railu ಎಂಬ ಪದಗಳ ತಮಾಷೆಯನ್ನು ಗಮನಿಸದೆ ಮಹಾಜನರು ವ್ಯಾಕುಲಗೊಂಡಿದ್ದಾರೆ. gossipಗೆ ೫ ರಿಂದ  ೧೦ ಪರ್ಸೆಂಟ್ ಆದರೂ “ಆಧಾರ್ ಕಾರ್ಡ್”ನ ಬೆಂಬಲವಿದೆ. ಆದರೆ ರೈಲಿಗಿಲ್ಲ. “ರೈಲನ್ನು ಕಂಬಿ ಇಲ್ಲದೆ ರಸ್ತೆಯ ಮೇಲೆ, ನೀರಿನ ಮೇಲೆ ಕೊನೆಗೆ ಆಕಾಶಕ್ಕೆ ಸಹ “ಬಿಡಬಹುದು”. ಅದೊಂದು ತರಹದ “ಧೂಮ ಲೀಲೆ”. ಈ ಸಲದ ಜ್ಞಾನ ಪೀಠ ಯಾರಿಗಾದರೂ ಸಿಗಲಿ ನಾವುಗಳು ಚಿಂತಿಸಿ ಬಿಪಿ,ಶುಗರ್ ಹೆಚ್ಚಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ವೈ.ಎನ್ ಕೆ  ಹೇಳಿದಂತೆ ಜ್ನಾನವಿರುವುದು ಪೀಠದಲ್ಲಿ ಅಲ್ಲ;but at the other end .

12 ಟಿಪ್ಪಣಿಗಳು Post a comment
 1. Nagshetty Shetkar
  ಆಕ್ಟೋ 23 2013

  Mr. Sriranga, your concerns about reservation mean nothing. Upper caste Manuvadis like you will never feel the pain and agony of a lower caste Indian.

  ಉತ್ತರ
  • ನವೀನ
   ಆಕ್ಟೋ 23 2013

   ಶೆಟ್ಕರ್ ಸಾಹೇಬರೇ,
   ಈ “ಮನು” ಯಾರು ನಿಮ್ಮ ಆತ್ಮೀಯರೇ? ಯಾವಗಲೂ ಅವರದೇ ಧ್ಯಾನ ನಿಮಗೆ.. ನಿಮ್ಮ ದರ್ಗಾ ಸರ್ ನಂತರ ನೀವು ಇವರನ್ನೇ ಹೆಚ್ಛು ನೆನೆಸಿಕೊಳ್ಲುತ್ತೀರಲ್ಲಾ 😛

   ಉತ್ತರ
   • ವಿಜಯ್ ಪೈ
    ಆಕ್ಟೋ 23 2013

    .ನಮ್ಮ ಶೆಟ್ಕರ್ ಗುರುಗಳು ‘ಮೋನೊ’ವಾದಿಗಳು..ಯಾವಾಗಲೂ ಒಂದೇ ರಾಗ..ಒಂದೇ ಹಾಡು ಅವರದು. ಅದನ್ನು ಪೆಟೆಂಟ್ ಕೂಡ ಮಾಡಿಸಿದ್ದಾರೆ ..ವಿಶ್ವ ಆಧುನಿಕ ಕಾಯಕಯೋಗಿಗಳ ಸಂಘ, ಕರ್ನಾಟಕ(ರಿ) ವತಿಯಿಂದ..

    ಉತ್ತರ
   • Nagshetty Shetkar
    ಆಕ್ಟೋ 24 2013

    “ಈ “ಮನು” ಯಾರು ?” ಮನು ನಿಮ್ಮ ಅಜ್ಜ! ಮನುವಿನ ಮೊಮ್ಮಕ್ಕಳೆ ನಿಮ್ಮ ಅಜ್ಜನ್ನನ್ನೇ ಮರೆತ ನಾಟಕ ಮಾಡ್ತೀರ?!

    ಉತ್ತರ
    • ವಿಜಯ್ ಪೈ
     ಆಕ್ಟೋ 24 2013

     ಹ್ಮ..ನಾವು ಮರೆತರೂ, ನಮ್ಮ ಅಜ್ಜನ ಸ್ಮರಣೆಯಿಂದಲೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ ಸಾಕಷ್ಟು ಜನ..ಇರಲಿ ಬಿಡಿ. ಶೆಟ್ಕರ್ ಗುರುಗಳೆ..ಈಗ ನಿಮ್ಮ ಅಜ್ಜ ಯಾರೆಂದು ಹೇಳಿ. ಅಪ್ಪಿ-ತಪ್ಪಿ ಬಸವಣ್ಣನವರು ನಮ್ಮ ಅಜ್ಜ ಎಂದು ಹೇಳಬೇಡಿ ಮತ್ತೆ!..ಅಕಸ್ಮಾತ ಬಸವಣ್ಣನವರಿಗೆ ಇದು ಕೇಳಿದರೆ, ಕೆಳಗಿಳಿದು ಬಂದು, ಈ ಆದುನಿಕ ಕಾಯಕಯೋಗಿ, ಶರಣಗಳನ್ನೆಲ್ಲ ಕರೆದು..ಸಾಲಾಗಿ ನಿಲ್ಲಿಸಿ ಎಡಗೈಯಿಂದ ಕಪಾಳಕ್ಕೆ ಬಿಗಿಯುತ್ತಾರೆ.

     ಉತ್ತರ
    • ನವೀನ
     ಆಕ್ಟೋ 24 2013

     ವಿಜಯ ಅವರು ಹೇಳಿದ ಹಾಗೆ,ನಮ್ಮಜ್ಜನ ಹೆಸರೇಳಿಕೊಂಡು ನಿಮ್ಮ ಹೊಟ್ಟೆಹೊರೆದುಕೊಳ್ಳುತಿದ್ದೀರಿ ಅಂತಾಯ್ತು ಶೆಟ್ಕರ್ ಸಾಹೇಬರೆ… ಸ್ವಲ್ಪ ಆದ್ರೂ ಕೃತ್ಜ್ನತೆ ಇರಲಿ 😛

     ಹೌದು ಅಂದ ಹಾಗೆ ನಿಮ್ಮ ಅಜ್ಜ ಯಾರು? (ವಿಜಯ ಅವರ ಸೂಚನೆ ನೆನಪಿರಲಿ.ಎಡಗೆನ್ನೆ ಮುಚ್ಛಿಕೊಂಡು ಹೇಳಿ ಯಾವುದಕ್ಕೂ) 😀

     ಉತ್ತರ
 2. rajeshj
  ಆಕ್ಟೋ 23 2013

  Good one sir, at least some one is dare eniugh to tell the truth

  ಉತ್ತರ
 3. ನವೀನ
  ಆಕ್ಟೋ 23 2013

  ಜಾತಿ ಆಧಾರಿತ ಮೀಸಲಾತಿ ಬೇಡವೇ ಅಥವಾ ಮೀಸಲಾತಿಯೇ ಬೇಡವೇ?ಹಾಗಿದ್ದರೆ ಇದರ ಪರಿಹಾರವೇನು?

  ಉತ್ತರ
 4. ಆಕ್ಟೋ 23 2013

  Mr. Shetkar and some sect of self-appointed progressive thinkers are quite obsessed with CSLC’s research as that has shaken all their preconceived beliefs and their unscientific methodologies at the first place. When they realized they cant prove themselves, they shed themselves into cheapest way possible-that’s ranting tantrums just like beating empty drum.

  ಉತ್ತರ
  • Nagshetty Shetkar
   ಆಕ್ಟೋ 24 2013

   Mr. Bhat, are you a paid kaaryakarta of CSLC? You are behaving like one.

   ಉತ್ತರ
 5. Nagaraj
  ಆಕ್ಟೋ 24 2013

  With low protein diet during pregnancy brain development will be very poor. Even 150% reservation will not help. Equal educational opportunities and good protein diet no one needs reservation.

  ಉತ್ತರ
 6. RUDRESH K S
  ನವೆಂ 17 2022

  I want to purchase Dunkin jalaki book bharathadalli jaathi vyavaste ideye kindly send your contact number

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments