ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2013

18

ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Siddu n URAಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.

ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.

ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,

ತಿಂಗಳುಗಳ ಹಿಂದೆ ವಾಡಿಯಾ ಸಭಾಂಗಣದಲ್ಲಿ ಬರಗೂರು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಯು.ಆರ್ ಅನಂತ ಮೂರ್ತಿ “ಮೋದಿ ಭಾರತದಲ್ಲಿ ನಾನಿರಲಾರೆ” ಅಂದಿದ್ದು ವ್ಯಾಪಕ ಟೀಕೆಗೊಳಗಾಯಿತು.ನನ್ನಂತ ಕೆಲವರು ಫೇಸ್ಬುಕ್,ಟ್ವಿಟರ್ ನಲ್ಲಿ ಸೌಮ್ಯವಾಗಿಯೇ ಹೋಗಿ ಬನ್ನಿ ಸರ್, ಹ್ಯಾಪಿ ಜರ್ನಿ ಎಂದೆವು.ಇನ್ನು ಕೆಲವರು ಸ್ವಲ್ಪ ಅತಿರೇಕ ಎನಿಸುವಂತೆ ವಯಸ್ಸಾಗಿದೆ ಸೀದಾ ಮೇಲೆ ಹೋಗಿ ಬಿಡಿ ಅನ್ನುವಂತೆಯೆಲ್ಲ ನಾಲಿಗೆ ಹರಿಬಿಟ್ಟರು. ಮೂರ್ತಿಯವರ ಮಾತನ್ನು ಒಪ್ಪಬೇಕು ಅಂತೇನಿಲ್ಲ,ಆದರೆ ವಿರೋಧಿಸುವಾಗ ಅದು ಕೆಟ್ಟದಾಗಿ,ನಿಂದನೀಯವಾಗಿ ಇರುವುದು ಆರೋಗ್ಯಕರ ಸಮಾಜದ ಲಕ್ಷಣ ಖಂಡಿತ ಅಲ್ಲ.ಇನ್ನು ಹೀಗೆ ಮಾತನಾಡಿದ ಯುವ ಸಮೂಹವನ್ನೇನೋ ಸಹಿಸಿಕೊಳ್ಳಬಹುದು.ಆದರೆ,”ಜ್ಞಾನಪೀಠ” ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಅನಂತ ಮೂರ್ತಿಗಳು ತಮ್ಮ ಹೇಳಿಕೆಯ ನಂತರವೆದ್ದ ವಿವಾದಗಳ ಕುರಿತು ನೀಡಿದ ಸಂದರ್ಶನದಲ್ಲಿ “ಸುಳ್ಳಾಡಿದ್ದು” ಸರಿಯೇ? ಅದನ್ನೇ ಹೇಗೆ ಒಪ್ಪುವುದು?

ಪ್ರತಿ ಭಾರತೀಯನಿಗೂ ಪ್ರಧಾನಿ ಆಗುವ ಹಕ್ಕಿದೆ. ಹಾಗಿರುವಾಗ ಮೋದಿ ಯಾಕೆ ಪ್ರಧಾನಿ ಆಗಬಾರದು ಅಂತೀರಿ? ಅನ್ನುವ ಸಂದರ್ಶಕರ ಪ್ರಶ್ನೆಗೆ ಉತ್ತರಿಸುತ್ತ, ಮೂರ್ತಿಯವರು
ಈ ದೇಶಕ್ಕೆ ಅತ್ಯಂತ ಕಳಪೆ ಮಾದರಿ ಅಂದರೆ ಮೋದಿ. ಬದಲಾಗುವ ಚಿಹ್ನೆಗಳು ಆತನ ಭಾಷೆಯಲ್ಲೇ ಇಲ್ಲ. ಅಷ್ಟು ಜನ ಕೋಮು ಗಲಭೆಯಲ್ಲಿ ಸತ್ತರಲ್ಲ, ಅವರು ಓಡ್ತಾ ಇರೋ ಕಾರಿನ ಚಕ್ರಕ್ಕೆ ಕುನ್ನಿಗಳು ಸಿಕ್ಕಂಗೆ ಅಂತಂದನಲ್ಲ ನಾನು ಅತನನ್ನು ಯಾವತ್ತೂ ಕ್ಷಮಿಸಲ್. ಅಷ್ಟು ಜನ ಸತ್ತಾಗ ದುಃಖವಾಗ್ಬೇಕು. ಬಾಯಿ ಕಟ್ಟಿದಂತಾಗ್ಬೇಕು. ಆದರೆ, ಆತನ ಇಮೇಜೇ ಭಯ ಹುಟ್ಟಿಸತ್ತೆ. ಇಂಥ ಮಾತು ಯಾರ ಬಾಯಿಂದಾದರೂ ಬರೋದಕ್ಕೆ ಸಾಧ್ಯವಾ?ಅಂದರು.

ಅಸಲಿಗೆ ಮೋದಿ,ಹಾಗೆ ಕೋಮು ಗಲಭೆಯಲ್ಲಿ ಸತ್ತವರನ್ನು ಕಾರಿನೆಡೆಗೆ ಸಿಕ್ಕ ಕುನ್ನಿಗಳು ಅಂದಿದ್ದರಾ?

ಕಳೆದ ಜುಲೈ ತಿಂಗಳಿನಲ್ಲಿ ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ “ನಾಯಿ ಮರಿ” ಬಂದಿದ್ದು ಹೇಗೆ ಅಂತ ನೋಡಿದರೆ,

ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”

ಮೋದಿ : ಭಾರತದ ಸುಪ್ರೀಂ ಕೋರ್ಟು ಜಗತ್ತಿನ ಅತಿ ಉತ್ತಮ ಕೋರ್ಟುಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ.ಸುಪ್ರೀಂ ಕೋರ್ಟು ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (SIT) ಅನ್ನುವ ದಕ್ಷ,ಚಾಣಾಕ್ಷ ಅಧಿಕಾರಿಗಳ ತಂಡವನ್ನು ನೇಮಕಾತಿ ಮಾಡಿತ್ತು.ಅವರು ಕೊಟ್ಟ ವರದಿಯಲ್ಲಿ ನನಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ.

ಇನ್ನೊಂದು ವಿಷಯ,ಕಾರಿನಲ್ಲಿ ಹೋಗುವಾಗ ನೀವು ಡ್ರೈವ್ ಮಾಡುತ್ತಿರಿ ಇಲ್ಲ ಹಿಂಬದಿಯಲ್ಲಿ ಕುಳಿತಿರಿ, ಆಗ “ನಾಯಿ ಮರಿ”ಯೊಂದು ಚಕ್ರದಡಿಗೆ ಬಂದರೆ ನಿಮಗೆ ನೋವಾಗುವುದಿಲ್ಲವೇ? ಆಗುತ್ತದೆ.ನಾನೊಬ್ಬ ಮುಖ್ಯಮಂತ್ರಿಯೋ ಅಲ್ಲವೋ ಆದರೆ ನಾನೂ ಒಬ್ಬ ಮನುಷ್ಯ ತಾನೇ? ಎಲ್ಲಾದರೂ ಕೆಟ್ಟದ್ದು ನಡೆದರೇ ನೋವಾಗಿಯೇ ಆಗುತ್ತದೆ.”

ಈಗ ಹೇಳಿ ಸತ್ತವರನ್ನು ಕುನ್ನಿಗೆ ಹೋಲಿಸಿದ್ದು ಮೋದಿಯೋ ಇಲ್ಲ ಅನಂತ ಮೂರ್ತಿಯವರೋ? ಮೋದಿಯನ್ನು ಅವನ ವಿರೋಧಿಗಳು “ಫೇಕೂ” ಅನ್ನುತ್ತಾರೆ.ಹಾಗಾದರೆ ಮೂರ್ತಿಗಳು ಹೇಳಿದ್ದು ಸುಳ್ಳೇ ತಾನೆ? ಕರ್ನಾಟಕದ ಜನರಿಗೆ ಸುಳ್ಳು ಸಂದೇಶ ಕೊಟ್ಟ ಮೂರ್ತಿಯವರನ್ನೂ “ಫೇಕೂ” ಅನ್ನೋಣವೇ? ಬೇಡ ಬಿಡಿ.ಹಿರಿಯರೊಬ್ಬರನ್ನು ಹಾಗೆಲ್ಲ ಕರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ.

ಇತ್ತೀಚೆಗಿನ ಅವರ ಸಂದರ್ಶನಗಳ ಇನ್ನಷ್ಟು ಹೇಳಿಕೆಗಳನ್ನು ನೋಡಿದರೆ ಮೂರ್ತಿಯವರ ಸೆಲೆಕ್ಟಿವ್ ಉತ್ತರಗಳಿಗೆ ಸಾಕ್ಷಿಗಳು ಸಿಗುತ್ತವೆ.ಮೋದಿ,ಬಿಜೆಪಿ ಬಗ್ಗೆ ಮಾತನಾಡುವಾಗ ಅವೆರಡರ ಸುತ್ತಲೇ ಸುತ್ತುವ ಮೂರ್ತಿಗಳು,

“ಹಿಂದೂಗಳ ವಿಚಾರಕ್ಕೆ ಬಂದಾಗ ಇಷ್ಟು ಕಟ್ಟುನಿಟ್ಟಾಗಿ ಮಾತಾಡುವ ನಿಮ್ಮಂಥ ಬುದ್ಧಿಜೀವಿಗಳು ಇನ್ನೊಂದು ಕೋಮಿನ ವಿಚಾರ ಬಂದಾಗ ಯಾಕೆ ಸುಮ್ಮನಾಗುತ್ತೀರಿ?” ಅನ್ನುವ ಪ್ರಶ್ನೆಗೆ,

ಇರಾನ್,ಕೃಪಲಾನಿ,ತಮಿಳರು ಅಂತ ಏನೇನೋ ಮಾತಾಡಿ ಕೈ ಎತ್ತುತ್ತಾರೆ.ಇಂತವರೆಲ್ಲ “ಸಾಕ್ಷಿ ಪ್ರಜ್ನೆ”ಯ ಬಗ್ಗೆ ಮಾತನಾಡಿದರೆ ಆ ಪದ ಅರ್ಥಗೆಡದೆ ಇರುತ್ತದೆಯೇ?

ಮೋದಿ ಭ್ರಷ್ಟನಲ್ಲ ಮತ್ತು ದಕ್ಷ ಅನ್ನುವುದು ನಾಯಕನಲ್ಲಿ ಸಹಜವಾಗಿ ಇರಬೇಕಾದ ಗುಣ ಅನ್ನುವ ಮೂರ್ತಿಗಳಿಗೆ,ಈ ದೇಶದಲ್ಲಿ ಇಂತ ನಾಯಕರು ಇರುವುದೇ ಬೆರಳೆಣಿಕೆಯಷ್ಟು, ಮತ್ತು ಅಂತವರನ್ನು ಕನಿಷ್ಟ (ವಿರೋಧಿಗಳಾದರೂ ಸರಿ) ಅಭಿನಂದಿಸಬೇಕು ಅನ್ನುವ ದೊಡ್ಡ ಮನಸ್ಸೂ ಇಲ್ಲವೇ? ಇವರ ಪಾಲಿಗೆ ರಾಹುಲ್ ಮುಗ್ಧನಂತೆ.ಮುಗ್ಧನೊಬ್ಬ ಪ್ರಧಾನಿಯಾದರೆ ತೊಂದರೆಯಿಲ್ಲವಂತೆ.ಆದರೆ, ನೀವ್ ಏನೇ ಹೇಳ್ರಿ ನಮ್ ರಾಹುಲ್ ಗಾಂಧಿ ಲೆಕ್ಕಾಚಾರದ ಮನುಷ್ಯ. ಮುಗ್ಧನಾದರೂ (ಅವಕಾಶಮೂರ್ತಿಗಳ ಪ್ರಕಾರ…!) ಲೆಕ್ಕ ತಪ್ಪದ ಸೂಕ್ಷ್ಮ ಮನಸ್ಸು ಅವರದು.ನೋಡಿ ತನ್ನನ್ನು ಕಚ್ಚಿದ ಯಕಶ್ಚಿತ್ ಸೊಳ್ಳೆಗಳ ಲೆಕ್ಕವನ್ನೂ (25,000…!) ಇಟ್ಟಿದ್ದಾರೆ ಅವರು. ಇಂತವರನ್ನು ಭವಿಷ್ಯದ ಆಶಾಕಿರಣ ಅನ್ನುವ ಭಟ್ಟಂಗಿಗಳಿಗೆ ಏನು ಕಚ್ಚಿರಬಹುದು?

ಏನು ಕಚ್ಚಿರಬಹುದು ಅನ್ನುವುದು ನಿಮ್ಮ ಊಹೆಗೆ ಬಿಡುತ್ತೇನೆ.

ಇಂತ ಹೇಳಿಕೆಗಳೆಲ್ಲ ಮುಗಿದು ಸ್ವಲ್ಪ ತಣ್ಣಗಿದ್ದ ಮೂರ್ತಿಗಳು ಮತ್ತೆ ಬಂದಿದ್ದು ಸೈಬರ್ ಸೈನ್ಯ ಕಟ್ಟಿ ಅನ್ನುವ ಮೂಲಕ.ಸೈನ್ಯವನ್ನು ಕಟ್ಟಿಕೊಳ್ಳಿ ಮೂರ್ತಿಗಳೇ.ಆದರೆ ,ಮತ್ತೊಮ್ಮೆ ಹೇಳುತ್ತೇನೆ,ನೆನಪಿಡಿ.ಸಾಮ್ರಾಟ ಅಶೋಕನ ಬಳಿಯೂ ಸೈನ್ಯವಿತ್ತು ಆದರೆ, ಗೆದ್ದಿದ್ದು ’ ಸ್ವಾಭಿಮಾನಿ ಕಳಿಂಗ’. ಖಂಡಿತ ನಾನು ನಿಮ್ಮನ್ನೂ,ನಿಮ್ಮ ಸೆಕ್ಯುಲರ್ ಸೈನ್ಯವನ್ನು ಅಶೋಕನಿಗೆ ಹೋಲಿಸಿ ಅವರನ್ನು ಅವಮಾನಿಸಲು ಬಯಸುವುದಿಲ್ಲ. ಅಗಾಧ ಸಂಪತ್ತು,ಅಧಿಕಾರ ಬಲ ಎಲ್ಲ ಇದ್ದೂ ಅಶೋಕ ಮಂಡಿಯೂರಿದ್ದು ಸ್ವಾಭಿಮಾನಿಗಳ  ಪುಟ್ಟ ಪಡೆಯೊಂದಕ್ಕೆ ಅಂತ ಹೇಳಲಷ್ಟೆ.

ಇನ್ನೊಂದು ಮಾತು,ಸೈಬರ್ ಸೈನ್ಯ ಕಟ್ಟಿಕೊಂಡು ಬಂದು “ಮೋದಿ ಅಭಿಮಾನಿಗಳು ಅಟ್ಯಾಕ್ ಮಾಡುತಿದ್ದಾರೆ” ಅಂತೆಲ್ಲ ಅಲವತ್ತುಕೊಳ್ಳಬೇಡಿ.ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಈಗಿನ ಕಾಲಘಟ್ಟ ದ ವರಸೆ ಮೂರ್ತಿಗಳೇ. ಸಾಹಿತಿಗಳು/ಬುದ್ಧಿಜೀವಿಗಳು ಹೇಳಿದ್ದೆಲ್ಲವೂ ಸರಿ ಅನ್ನುವ ದಶಕಗಳು ಈಗಿನದಲ್ಲ.ಸಾಮಾನ್ಯ ಜನರಿಗೆ ಈಗ ಪ್ರತಿಕ್ರಿಯಿಸಲು ವೇದಿಕೆಗಳಿವೆ.ಹಾಗಾಗಿ ಇನ್ಮುಂದೆ ಯೋಚಿಸಿ ಮಾತನಾಡಿ.ಭಾರತವಿರಲಿ ಕರ್ನಾಟಕವನ್ನೂ ಬಿಡುವುದಿಲ್ಲ ಎಂದಿರಿ ಸಂತೋಷ ಇಲ್ಲೇ ಇರಿ.ಆದರೆ ಸುಖಾಸುಮ್ಮನೆ ಪ್ರಶಾಂತವಾಗಿರುವ ಸಾಗರಕೆ ಕಲ್ಲೆಸೆದು,ಆಮೇಲೆ ರಾಡಿಯಾಯಿತು ಅಂತ ಗೋಳಾಡಬೇಡಿ. ಬಯ್ಯೋದು ಬರೆಯುವವರ ಹಕ್ಕು ಅಂದಿದ್ದಾರೆ ಕಾರ್ನಾಡರು.ನೀವು ಬಯ್ಯುತ್ತಿರಿ ನಾವು ಬರೆಯುತ್ತಿರುತ್ತೇವೆ.

ಅಂದ ಹಾಗೆ,ಗುಡ್ ಲಕ್ ನಿಮ್ಮ ಸೈಬರ್ ಸೈನ್ಯಕ್ಕೆ

ಚಿತ್ರ ಕೃಪೆ : ಉದಯವಾಣಿ.ಕಾಂ

18 ಟಿಪ್ಪಣಿಗಳು Post a comment
 1. Sanathkumar Paleppady.
  ಆಕ್ಟೋ 28 2013

  Rakesh Shettre,..
  Doddavarenikodavara Sannathanavallade Berenilla,Kevala Hesarigoskara Horaduva evaranthaha yesto janaru yaava reethiya parinaamakku kaaranavaagalaararu.

  ಉತ್ತರ
 2. Nagshetty Shetkar
  ಆಕ್ಟೋ 28 2013

  Mr. Shetty, why is your site against progressive minded thinkers and activists like URA and Darga Sir? What wrong have they done? Is speaking against the threat of fascism a crime? Shouldn’t public intellectuals not give advice to the administration of this land? Isn’t this part of NaMo cyber army’s game plan to crush dissent?

  ಉತ್ತರ
  • ವಿಜಯ್ ಪೈ
   ಆಕ್ಟೋ 28 2013

   ‘ಕಾಯಕಯೋಗಿ’ ಗುರುಗಳೆ..

   ಎಲ್ಲಿ ತನಕ ಫ್ಯಾಸಿಸಂ ಮುಂತಾದ ಈ ಎರವಲು ಸಿದ್ಧಾಂತಗಳನ್ನು ಹರಿ ಬಿಡುತ್ತೀರಿ? ನಿಮಗೆ ನಿಮ್ಮದೇ ಸ್ವಂತ ಎನ್ನುವಂತಹ ವಿಚಾರವೇನಾದರೂ ಇದೆಯೆ? ಜನ ಈ ಪ್ರಗತಿಪರ, ವಿಚಾರವಾದಿ, ಸಾಕ್ಷಿಪ್ರಜ್ನೆಗಳೆಂದು ತಮಗೆ ತಾವು ಅಪಾದಿಸಿಕೊಂಡವರನ್ನು ಏಕೆ ಉಗಿಯುತ್ತಿದ್ದಾರೆ ಎಂದು ಇನ್ನೂ ಅರ್ಥವಾಗುತ್ತಿಲ್ಲವೆ ನಿಮಗೆ? ಸ್ವಲ್ಪ ಸುತ್ತಲೂ ಕಣ್ತೆರದು ನೋಡಿ..ನಿಮ್ಮ ಪುರಾಣ ಕತೆಯ ಪುಂಗಿ ಊದುತ್ತ ಪ್ರೋಗ್ರೆಸಿವ್ ಥಿಂಕರ್ ಪದದ ಮಾನ ಕಳೆಯಬೇಡಿ. ನಿಮ್ಮ ಅನಂತಮೂರ್ತಿಗಳಂತು ಬಿಡಿ..ಇನ್ನೂ ನೆಹರು ಕಾಲದಲ್ಲಿಯೇ ಇದ್ದಾರೆ.ಅವರ ಹೇಳಿಕೆಗಳೊ ದೇವರಿಗೆ ಪ್ರೀತಿ!

   ಉತ್ತರ
  • ಆಕ್ಟೋ 28 2013

   ಫ್ಯಾಸಿಸಂ ಯಾರದು ಅನ್ನುವುದು ಫೇಸ್ಬುಕ್ಕಿನಲ್ಲಿ ನಿಮ್ಮ ದರ್ಗಾ ಅವರು ಮೋದಿ ಅಭಿಮಾನಿಗಳು ನನ್ನನ್ನು ಅನ್-ಫ್ರೆಂಡ್ ಮಾಡಿ ಅಂದಾಗಲೇ ತಿಳಿಯುವುದಿಲ್ಲವೇ? ಅವಕಾಶಮೂರ್ತಿಗಳಿಗೆ ಮಾತನಾಡಬೇಡಿ ಅಂತ ನಾನೆಲ್ಲಿ ಹೇಳಿದ್ದೇನೆ ?

   “ಬಯ್ಯೋದು ಬರೆಯುವವರ ಹಕ್ಕು ಅಂದಿದ್ದಾರೆ ಕಾರ್ನಾಡರು.ನೀವು ಬಯ್ಯುತ್ತಿರಿ ನಾವು ಬರೆಯುತ್ತಿರುತ್ತೇವೆ. ಅಂದ ಹಾಗೆ,ಗುಡ್ ಲಕ್ ನಿಮ್ಮ ಸೈಬರ್ ಸೈನ್ಯಕ್ಕೆ” ಅಂದಿದ್ದೇನೆ.

   ಇನ್ನು ನಿಲುಮೆಯ ಬಗ್ಗೆ ಟೀಕೆ ಮಾಡುವುದು ನಿಲ್ಲಿಸಿ.ಇಲ್ಲಿ ನನ್ನ ಅಭಿಪ್ರಾಯಕ್ಕೆ ಜಾಗವಿರುವಂತೆ ನಿಮಗೂ,ದರ್ಗಾ,ಮೂರ್ತಿಗಳ ಅಭಿಪ್ರಾಯಕ್ಕೂ ಜಾಗವಿದೆ. ನಿಮಗೂ ಮತ್ತು ನಿಮ್ಮ ಗುರುಗಳಿಗೂ ಮೋದಿಯ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಅನ್ನುವ ಆಹ್ವಾನ ನೀಡುತಿದ್ದೇನೆ.

   ಉತ್ತರ
 3. Vikas Nayak
  ಆಕ್ಟೋ 28 2013

  ಅನಂತ ಮೂರ್ತಿಯವರು ಅಂದು ವಿವಾದಾಸ್ಪದ ‘ಮೋದಿಯವರು ದೇಶದ ಪ್ರಧಾನಿ ಯಾದರೆ ದೇಶವನ್ನು ತ್ಯಾಗಿಸುವೆ’ ಎಂಬ ಇಚ್ಛೆ ವ್ಯಕ್ತ ಪಡಿಸಿದ್ದುದರ ಹಿನ್ನೆಲೆ ‘ಕಾರಿನ ಚಕ್ರದಡಿ ನಾಯಿ ಮರಿ ಸಿಕ್ಖಾಕಿ ಸತ್ತರೆ ಯಾರೇ ಆಗಲಿ, ಕಾರಿನ ಚಾಲಕನೋ ಇಲ್ಲ ಕಾರಿನಲ್ಲಿ ಕುಳಿತವನೋ, ಅಂತಃಕರಣಕ್ಕೆ ನೋವಾಗದೇ?’ ಎನ್ನುವಂತೆ ಹೇಳಿದ ಮೋದಿಯವರ ಆ ಮಾತೇ? ಸರಳ, ಸುಲಭ ಭಾಷೆಯಲ್ಲಿ ಒಂದು ಉಪಮೆ ಜಗತ್ತಿಗೆ (ಕಾಂಗ್ರೆಸ್ಸಿಗರಿಗೆ ಬಿಟ್ಟು) ಅರ್ಥವಾದರೂ ಸಾಹಿತಿಗಳೆನಿಸಿದ ಅನಂತಮೂರ್ತಿಯವರು ಇದನ್ನು ಅಪಾರ್ಥವಾಗಿ ಕೊಂಡುದ್ದು ಸೋಚನಿಯ. ಅದಕ್ಕೇ ಅನ್ನೋದು, ‘ಸಂಗತಿ ಸಂಘದೋಷ’ ಅಂತ. ಕಾಂಗ್ರೆಸ್ಸಿಗರೊಂದಿಗಿದ್ದು ಅನಂತಮೂರ್ತಿಯವರೂ ಮುಟ್ಟಾಳ ಎನೆಸಿಕೊಂಡರು. ಒಮ್ಮೆ ಕರ್ನಾಟಕದಲ್ಲಿ ಇದ್ದಾಗ ನಮ್ಮ ಸಹಪ್ರಾದ್ಯಾಪಕರೊಬ್ಬರು ದ.ರಾ.ಬೇಂದ್ರೆ ಎಂಬ ಒಬ್ಬ ಹಿರಿಯ ಸಾಹಿತಿಯರು ಒಂದು ಸಾಹಿತ್ಯ ಸಮಾರಂಭದಲ್ಲಿ ಹೇಳಿದ ಮಾತನ್ನು ವಿವರಿಸುತ್ತ್ತಹೇಳಿದ ಮಾತು ನೆನಪಾಗುತ್ತದೆ. ‘ಸಾಹಿತಿ ಕಾಣುವುದೊಂದು ರಸಿಕರು, ವಿಚಾರವಂತರು ಅರ್ಥಮಾಡಿ ಕೊಳ್ಳುವುದೊಂದು ಎನ್ನುತ್ತ ಬೇಂದ್ರೆಯವರ ಸ್ವಂತ ಅನುಭವವನ್ನು ಎಲ್ಲರೊಂದಿಗೆ ಹಂಚಿ ಕೊಂಡಿದ್ದರು. ಅವರು ಹೇಳಿದ್ದು ಹೀಗೆ, ” ನಾನು(ಬೇಂದ್ರೆಯವರು) ಎಂ.ಎ. ಪ್ರಥಮ ವರ್ಷದಲ್ಲಿದ್ದಾಗ ನಮಗೆ ನಾನೇ ಬರೆದ ಪುಸ್ತಕ ಒಂದು ವಿಷಯವಾಗಿತ್ತು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳು ….. ಎನ್ನುವುದರಲ್ಲಿ ಅಂಬಿಕಾತನಯದತ್ತರ ವಿಚಾರವೇನಿತ್ತು? ಮುಂತಾಗಿಯೇ ಇದ್ದವು. ಸ್ವತಃ ನಾನೇ ಬರೆದ ಪುಸ್ತಕ ಮತ್ತೇನು ನಾನೂ ಪ್ರತಿಯೊಂದು ಪ್ರಶ್ನೆಯನ್ನು ನನ್ನ ವಿಚಾರವಿದ್ದಂತೆ ಚೆನ್ನಾಗಿ ವಿವರಿಸಿದೆ. ಪರೀಕ್ಷೆಯ ಪರಿಣಾಮ ಬಂದಾಗ ನನಗೆ ದಿಗ್ಭ್ರಮೆ ಆಯಿತು. ನನಗೆ ದೊರೆತದ್ದು ಕೇವಲ ಮೂವತ್ತೈದು ಅಂಕಗಳು ಮಾತ್ರ. ಸಾಹಿತಿ ನಾನು, ಪುಸ್ತಕದ ಲೇಖಕ ನಾನು, ವಿಚಾರ ಕೇಳಿದ್ದು ನನ್ನದೇ !!! ಅದಾಗ್ಯೂ ನನಗಿಂತ ನನ್ನ ವಿಚಾರವನ್ನು ಆ ಪರಿಕ್ಷಕರು ಚೆನ್ನಾಗಿ ಬಲ್ಲರೇ???? ಅದೇ ಅನ್ನೋದು ಸಾಹಿತ್ಯದಲ್ಲಿ ಸಾಹಿತ್ಯಕಾರರ ವಿಚಾರಕ್ಕಿಂತ ಓದುಗರ ವಿಚಾರವೇ ಸಾಹಿತಿಯ ಪರಿಚಯವಾಗುತ್ತದೆ.” ಅನಂತಮೂರ್ತಿಯವರೂ ಬೇಂದ್ರೆಯವರ ಉತ್ತರಪತ್ರಿಕೆಯನ್ನು ತಪಾಸಿಸಿದ ಪ್ರಾದ್ಯಪಕರನ್ತಾದರು. ಮನಸಶಾಸ್ತ್ರದಲ್ಲಿ ಯಾರು ಏನು ಅನ್ನುತ್ತಾರೋ ಅದು ಅರ್ಥವಾಗುವಾಗ ಮತ್ತು ಭಾವನೆಯನ್ನು ಸ್ಪರ್ಶಿಸುವಾಗ ವೈಯಕ್ತಿಕ ತಿಳುವಳಿಕೆ, ಹಿನ್ನೆಲೆಯ ಜ್ಞಾನ, ನಂಬಿಕೆ, ದೃಷ್ಟಿಕೋನ. ಅವಸ್ಥೆ, ಮುಂತಾದ ಅನೇಕ ಪ್ರಭಾವಗಳು ವಿಷಯಗಳನ್ನು ನಿರೂಪಿಸುತ್ತವೆ. ಈ ಕುರಿತು ಅನಂತ ಮೂರ್ತಿಯವರು ಏನೆಂದಾರು? ಅವರಿಗೆ ಕೇಳುವುದು ಉಚಿತವೋ ಇಲ್ಲ ಸಿದ್ಧರಾಮಯ್ಯರಿಗೆ ಕೇಳುವುದು?

  ಉತ್ತರ
  • ನವೀನ
   ಆಕ್ಟೋ 30 2013

   ಅನಂತಮೂರ್ತಿಯವರು ಈಗ ಸಾಹಿತಿಯಾಗಿ ಉಳಿದಿಲ್ಲ ಸರ್.ಅವರೀಗ ಕಾಂಗ್ರೆಸ್ಸ್ ವಕ್ತಾರರಂತೆ ಮಾತನಾಡುತ್ತಾರೆ

   ಉತ್ತರ
   • Umesh
    ಆಕ್ಟೋ 31 2013

    ಸರಿಯಾಗಿ ಹೇಳಿದಿರಿ ನವೀನ್. ಅವರೊಬ್ಬರೇ ಅಲ್ಲ, ಪ್ರಗತಿಪರ ಮುಖವಾಡ ಹೊತ್ತ ಎಲ್ಲ ಸಾಹಿತಿಗಳು ಪೈಪೋಟಿಯ ಮೇಲೆ ನಾಮುಂದು ತಾಮುಂದು ಅಂತ ಕಾಂಗ್ರೆಸ್ ಪಾರ್ಟಿ ವಕ್ತಾರರು ಆಗಿಬಿಟ್ಟಿದ್ದಾರೆ. ಇವರಲ್ಲಿ ಕೆಲವರು ಆಗಲೇ ಸ್ಥಾನ ಮಾನಗಳನ್ನೂ ಹೊಡೆದುಕೊಂಡು ಬಿಟ್ಟಿದ್ದಾರೆ.

    ಉತ್ತರ
 4. Vikas Nayak
  ಆಕ್ಟೋ 28 2013

  Mr. Nagshetty Shetkar, Your question to Rakesh Shetty itself is a puzzle !!! Rakesh is quite rationalist and progressive philosopher, and he always hooks the pseudo-rational thoughts that vitiate the concepts within the limitations of prejudices. He is young and of course forced you to ask this question to him by impressing you by his earlier thoughts!!! If you really like and wish to join the thinkers, study thoroughly more about any subject you want to pursue keep reading all that you may like or not, discuss without hesitation and ego, learn to contemplate and opine shrewdly. Never let bias, beliefs, faith, restricted attitudes, inclinations to dominate your conscience.

  Now please, can you explain what the fascism you meant in your question? Whether it is supremacy of nationalism or imposition of specific faith? In both cases if it seems dangerous then it is possible in only case of mutual repugnance of faiths and beliefs in dictating the motto of social living.

  For example, Hindu social system is a fascism in which no individual nor a group of individuals can ever be superior than society. Hindu doesn’t interfere in the faith and belief of the subjects of nation provided they do not damage the the doctrine of social unity. There are so many religions in Hindu society but all do follow the doctrine of social system. No matter one believes in god or doesn’t believe in god but still both are Hindu. One may follow Islamism or Jainism still both are Hindu. What crime do you find in fascism? Hindus are fascist and the very nature of Hindu maintained its long survival.

  What do you mean by public intellectuals and private ones? Can you define intellectual flawlessly? Do you consider me an intellectual? If yes, then why? If no, then why not? Even fools are intellectuals but not mad ones. Intellectuals need not be certified by any school of philosophy or an university. No qualification can grade the intellectuals !!! One may or may not be recognised by public as intellectual but still the intellectuals continue to be what they are. It is nonsense to believe intellectuals always shrewd, smart and right, since there are countless fools among intellectuals and indiscriminately smart, shrewd and fool have equal right to express their thoughts.

  Very interestingly yesterday I learnt a new idea of cyber army !!! Very funny indeed !! I’m unable to learn the exact reason of problem due to so called cyber army !! You used a word dissent very much pertaining to the fascism what you seem oppose. Now you are condemning the crushing of previous belief, previous public views !!!! Remember, always stand with the truth and not with what was believed, thought or officiated if they are wrong or not firm.

  Please take my views positively and don’t get disgusted. Wish you all the best !!!

  ಉತ್ತರ
  • ವಿಜಯ್ ಪೈ
   ಆಕ್ಟೋ 28 2013

   +1
   ವಿಕಾಸ ನಾಯಕ್ ರ ಆಭಿಪ್ರಾಯಕ್ಕೆ..

   ಉತ್ತರ
 5. BHASKARA
  ಆಕ್ಟೋ 28 2013

  oops.. who is progressive thinker and mind? if its URA then we shd have a different defintion of progress!!

  ಉತ್ತರ
 6. Nagesh nayak
  ಆಕ್ಟೋ 28 2013

  good one sir,

  ಉತ್ತರ
 7. ಆಕ್ಟೋ 28 2013

  +111111111111111

  ಉತ್ತರ
 8. Manohar Naik
  ಆಕ್ಟೋ 28 2013

  ರಾಕೇಶ್ ಶೆಟ್ಟಿಯವರೆ

  ಈ ಪ್ರಗತಿಪರರಿಗೆ ಯಾವ ವಿಷಯದಲ್ಲೂ ನಾಚಿಕೆ ಎಳ್ಳಷ್ಟೂ ಇಲ್ಲ, ಮೂರು ಬಿಟ್ಟವರು ಊರಿಗೇ ದೊಡ್ಡವರು ಅನ್ನುವುದನ್ನು ಸಾಬೀತು ಮಾಡಲು ಹೊರಟಿದ್ದಾರೆ..

  ಉತ್ತರ
 9. ಆಕ್ಟೋ 28 2013

  Bhattangigala gumpina swayam prerita nayaka URAM ya ee maanasika banjetana namma makkalige baradirali deva endu prarthisi, ee varshada Deepavaliyannu, NavaBharata nirmaanavagalendu aashisuttaa aacharisona…….

  ಉತ್ತರ
 10. gopalkrishna
  ಆಕ್ಟೋ 28 2013

  ಮೋದಿ ಅಧಿಕಾರಕ್ಕೆ ಬಂದರೆ ‘ಏನೇನೋ’ ಆಗುತ್ತೆ ಅಂತ ಕೆಲವರನ್ನು ಆತಂಕಕ್ಕೀಡು ಮಾಡುತ್ತಿರುವವರು ತಾವು ಇರುವುದು ಭಾರತದಲ್ಲಿಯೇ ಹೊರತು, ಆಫ್ಘಾನಿಸ್ತಾನ, ಪಾಕಿಸ್ತಾನ, ಚೀನಾದಲ್ಲಿ ಅಲ್ಲ ಎಂಬುದನ್ನು ಮರೆತಂತಿದೆ. ದಿನೆ ದಿನೇ ಗಡಿಯಲ್ಲಿ ಸೈನಿಕರ ಪ್ರಾಣ ಹೋಗುತ್ತಿದ್ದರೂ, ಚೀನಾ ಪ್ರೇರಿತ(!) ಬಾಂಬ್ ಸ್ಫೋಟಗಳ ಮೂಲಕ ಸಾಮಾನ್ಯರ ಸಾಮೂಹಿಕ ಹತ್ಯೆ ನಡೆಯುತ್ತಿದ್ದರೂ ಮಾನವನ ಹಕ್ಕುಗಳ ಬಗ್ಗೆ ಮಾತನಾಡದಿದ್ದವರು ಭಯೋತ್ಪಾದಕರನ್ನು ಬಂಧಿಸಿದಾಗ/ಗಲ್ಲುಶಿಕ್ಷೆಗೆ ಗುರಿಪಡಿಸಿದಾಗ ‘ನಮ್ಮದು ಜೀವ, ಅವರದೂ ಜೀವ’ ಅಂಥ ಬೊಬ್ಬೆ ಹೊಡೆಯಲು ಶುರುವಿಡುತ್ತಾರೆ. ಯಾವುದೋ ‘ಹಿಡನ್ ಅಜೆಂಡಾ’ ಸಾಧಿಸಿಕೊಳ್ಳಲು ದೇಶದ ಆಂತರಿಕ/ಬಾಹ್ಯ ವಿಚಾರಗಳನ್ನು ಬಳಸಿಕೊಳ್ಳುವವರಿಂದ ‘ಬುದ್ಧಿ’ ಹೇಳಿಸಿಕೊಳ್ಳಬೇಕಾಗಿರುವುದೇ ದುರಂತ!
  ಜಾತಿ, ಧರ್ಮಕ್ಕಿಂತ ದೇಶದ ವಿಚಾರವನ್ನು ವಾಸ್ತವದ ನೆಲೆಗಟ್ಟಿನಲ್ಲಿಟ್ಟು ನೋಡುವ ರಾಕೇಶ್ ಶೆಟ್ಟಿಯವರ ಬರಹಗಳು ಅರ್ಥಪೂರ್ಣವಾಗಿರುತ್ತವೆ…

  ಉತ್ತರ
 11. ಆಕ್ಟೋ 29 2013

  murkhanobba bettavanu harabahudendare,ahudu ahudahudennabeku ? !

  ಉತ್ತರ
 12. Vikas Nayak
  ಆಕ್ಟೋ 30 2013

  ಇಲ್ಲಿ ಪ್ರಗತಿಪರರು, ವಿಚಾರವಂತರು, ವಿಚಾರವಾದಿಗಳು, ಅನಂತಮೂರ್ತಿಗಳ ಕಾಲ, ನೆಹರು ಕಾಲ, ಯಾರು ಯಾರಿಗೆ ಏಕೆ ಏನು ಹೇಳುತ್ತಿರುವರು ಒಂದು ತಿಳಿಯುತ್ತಿಲ್ಲ. ನನ್ನ ವಿಷಯ ಗ್ರಹಣ ಕುಂದಿದೆಯೋ ನನಗಿನ್ನೂ ಕನ್ನಡದಲ್ಲಿ ಬರೆದ ಲೇಖನೆ ಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಅಭ್ಯಾಸ ಮಾಡಬೇಕೋ ಈ ಬಗ್ಗೆ ವಿಚಾರ ಮಾಡಬೇಕು ಎನಿಸುತ್ತಿದೆ. ಅಲ್ಲ ಇವರು ಬರೆದುದು ತಿಳಿಯುತ್ತಿಲ್ಲ ಅಂದಮೇಲೆ ನಾನು ಬರೆದುದು ಸರಿಯೋ ಎನ್ನುವ ಪ್ರಶ್ನೆ ಬೇರೆ. ಕ್ಷಮಿಸಿ ಮಿತ್ರರೇ ಈ ಮುಂದೆ ನಿಮ್ಮ ಬರಹಗಳನ್ನು ಪುನಃ ಪುನಃ ಓದಿ ಎಷ್ಟೆಲ್ಲಾ ಅರ್ಥಗಳಾಗುತ್ತವೆ ಎಂದು ತಿಳಿಯುವ ಪ್ರಯತ್ನ ಮಾಡುವೆ. ಕನ್ನಡದಲ್ಲಿ ನನ್ನ ವಿಚಾರಗಳನ್ನು ವ್ಯಕ್ತ ಪಡಿಸುವ ದುಸ್ಸಹಾಸ ಮಾಡೆನು. ಅರ್ಥವೋ ಅನರ್ಥವೋ ನನ್ನ ಬರಹದಲ್ಲಿ ತಪ್ಪುಗಳಾಗಿರಲೇ ಬೇಕು, ತಿಳಿದವರು ನೀವು ನನ್ನ ಪ್ರತ್ನಕ್ಕೆ ಸಲುಹಿಸಿ ಎಂದು ಕೇಳಿ ಕೊಳ್ಳುತ್ತೇನೆ.

  ಉತ್ತರ
  • ನವೀನ
   ಆಕ್ಟೋ 30 2013

   ಮಾನ್ಯರೇ, ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆಯೆಲ್ಲ… ವಿಜಯ್ ಪೈ ಅವರು ಒಪ್ಪಿದ್ದಾರೆ.ಮತ್ತೆ ಯಾಕೆ ಈ ಅನುಮಾನ ನಿಮಗೆ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments