ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?
-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್
ಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.
ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.
ನಾವು ಇನ್ನೊಂದು ಬದಿಯಿಂದ ಯೋಚನೆ ಮಾಡಿದ್ರೆ, ಒಂದು ವೇಳೆ ‘ತುಳುನಾಡು’ ಒಂದು ಸಣ್ಣ ರಾಜ್ಯವಿಗಿರುತ್ತಿದ್ದರೆ, ತುಳು ಭಾಷೆಯ ಪರಿಸ್ಥಿತಿ ಇಂದಿಗೆ ಹೇಗಿರುತ್ತಿತ್ತು ಅನ್ನೋದು..! ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಪ್ರಭಾವವನ್ನು ಸಹಿಸಿಕೊಳ್ಳುವ ಶಕ್ತಿ ತುಳು ಭಾಷೆಗೆ ಇದೆಯಾ ಅನ್ನೋದು..! ಮುಖ್ಯವಾಗಿ ಮಲಯಾಳಿಗಳ ವಲಸೆ ಬುದ್ಧಿ ! ಸ್ವಲ್ಪ ಸಂಸ್ಕೃತಿ, ಆಚಾರ ವಿಚಾರ, ಆಹಾರ ಕ್ರಮ ಒಂದೇ ರೀತಿ ಇರೋದ್ರಿಂದ, ಅವರ ಪ್ರಭಾವ ತುಳು ಭಾಷೆಯ ಮೇಲೆ, ತುಳುವರ ಮೇಲೆ ನೇರವಾಗಿ, ದೊಡ್ಡ ರೀತಿಯಲ್ಲಿ ಆಗಿರುತ್ತಿತ್ತು..! ಮುಖ್ಯವಾಗಿ ಮುಸ್ಲಿಮರು, ಈಗ ತುಳುವರೇ ಆಗಿರುವ ಮಲಯಾಳಿ ಬಿಲ್ಲವರು ಸಂಪೂರ್ಣ ಮಲೆಯಾಳಿಗಳಾಗಿ ತುಳುವರ ಜನಸಂಖ್ಯೆ ಕಮ್ಮಿ ಆಗುವ ಭಯವೂ ಇತ್ತು. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲೂ ತುಳು ಭಾಷೆಯನ್ನು ಸಂಪೂರ್ಣವಾಗಿ ಉಪಯೋಗಿಸಲು ಆಗದೇ ಇರುವುದರಿಂದ ಹಿಂದಿ, ಇಂಗ್ಲಿಷ್ ಭಾಷೆಗಳು ತುಳುನಾಡಲ್ಲಿ ಆರ್ಭಟಿಸುತ್ತಿತ್ತು. ಇದಕ್ಕೆಲ್ಲಾ ತಡೆಯಾಗಿ ನಿಂತಿದ್ದು ಕನ್ನಡ…! ಹಾಗಂತ ತುಳು ಭಾಷೆಯ ಶಕ್ತಿಯನ್ನು, ಶ್ರೀಮಂತಿಕೆಯ ಬಗ್ಗೆ ಪ್ರಶ್ನೆ ಮಾಡುತ್ತಿರುವುದಲ್ಲ. ಇದು ತುಳುವರ ಇಚ್ಚಾಶಕ್ತಿಯ ಮೇಲಿನ ಸಂದೇಹ…! ತುಳುವರಿಗೆ ಈ ಬೆಳವಣಿಗೆಗಳಿಂದ ಹೊರಬರಲು ಖಂಡಿತಾ ಕಷ್ಟವಾಗುತ್ತಿತ್ತು..!
ಆದ್ರೆ ಕನ್ನಡದ್ದು ಬೇರೆಯದೇ ಕಥೆ. ಸಂಸ್ಕೃತಿ, ಮಾತನಾಡುವ ಶೈಲಿ, ಆಹಾರ ಪದ್ಧತಿ.. ಹೀಗೆ ತುಳುವರಿಂದ ಪ್ರತ್ಯೇಕವಾಗಿಯೇ ಗುರುತಿಸಲ್ಪಡುವ ಕನ್ನಡಿಗರಿಗೆ, ತುಳುವರ ಬದುಕಿನ ಶೈಲಿಯನ್ನು ಬದಲಾಯಿಸಲು ತುಂಬಾ ಕಷ್ಟ. ಹಾಗೆಯೇ ಇಂದು ಕನ್ನಡ ಭಾಷೆಯಿಂದ ಆಗಿರುವ ನಷ್ಟವೂ ಕೂಡ ಕನ್ನಡಿಗರಿಂದ ಆಗಿರುವುದಲ್ಲ, ಬದಲಾಗಿ ತುಳುವರೇ ಇಚ್ಚೆಪಟ್ಟು ಮಾಡಿರುವ ಪ್ರಮಾದ ಇದು. ಆದ್ರೆ ಇದನ್ನು ಸರಿಪಡಿಸುವ ಅವಕಾಶ ಈಗಲೂ ತುಳುವರಿಗಿದೆ. ಇದೆಕ್ಕೆ ತುಳುವರು ಬದಲಾಗಬೇಕು. ಹಾಗಂತ ಇದಕ್ಕೆ ತುಳು ರಾಜ್ಯ ಖಂಡಿತಾ ಪರಿಹಾರ ಅಲ್ಲ. ಕನ್ನಡ ಎಂಬ ದೊಡ್ಡ ಅಸ್ತ್ರವನ್ನು ಬಳಸಿಕೊಂಡು ಈಗ ದುರ್ಬಲವಾಗಿರುವ ತುಳು ಭಾಷೆಯನ್ನು, ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ. ಒಟ್ಟಾರೆ ಪರಭಾಷೆಗಳ ಪ್ರಭಾವದಿಂದ ತುಳು ಭಾಷೆ ಉಳಿಯುವಿಕೆಗೆ ಕನ್ನಡ ಸಹಾಯ ಮಾಡಿರುವುದನ್ನು ನಾವು ಒಪ್ಪಲೇಬೇಕು. ಆದ್ರೆ ತುಳು ಭಾಷೆಯ ಒಳಗೆ ಕನ್ನಡವನ್ನು ಬೆರಕೆ ಮಾಡುವಂತಹ ಪ್ರಯತ್ನಗಳು ಭವಿಷ್ಯದಲ್ಲಿ ತುಳುವಿನ ಬುಡವನ್ನು ಅಲ್ಲೋಲ ಕಲ್ಲೋಲ ಮಾಡುವುದಂತೂ ಸತ್ಯ..! ಏನಂತೀರ ತುಳುವರೇ….?
ಪರಭಾಷೆಗಳ ಆಕ್ರಮಣದಿಂದ ತುಳುವನ್ನು ಕನ್ನಡ ಹೇಗೆ ರಕ್ಷಿಸಿತು? ತುಳುವನ್ನು ಪೂರ್ಣಪ್ರಮಾಣದ ಅನುಷ್ಠಾನ ಬಹುಶಃ ಸಾಧ್ಯವಿರಲಿಲ್ಲ ಅದಕ್ಕೆ ಬೇರೆ ಯಾವುದೋ ಭಾಷೆ ಆಕ್ರಮಿಸುವ ಸ್ಥಾನವನ್ನು ಕನ್ನಡ ಆಕ್ರಮಿಸಿದೆ ಅಷ್ಟೇ. ಸುಮ್ಮನೆ ಕನ್ನಡಕ್ಕೆ ಏಕೆ ಇಷ್ಟೆಲ್ಲಾ ಮರ್ಯಾದೆ? ರಾಜ್ಯ ಬೇಡ, ಆಡಳಿತ ಭಾಷೆ ಬೇಡ.. ಸರಿ, ಕನ್ನಡ ಅಸ್ತ್ರ ಬಳಸಿ ತುಳುವನ್ನು ಹೇಗೆ ಬೆಳೆಸುತ್ತೀರಾ? ಒಂತೆ ಬುದ್ಪಾದ್ ಪನ್ಲೆ ಮಾರ್ರೆ..
ಕನ್ನಡವು ತುಳುಭಾಷೆಯ ಯಾವ ಸ್ಥಾನವನ್ನು ಆಕ್ರಮಿಸಿಲ್ಲ. ೧೯೫೩ರ ಮುಂಚೆ ತುಳುಭಾಷಿಕ ಪ್ರದೇಶವು ಮೈಸೂರು ಅರಸುತನದ ( ಕೊನೆಯ ಕನ್ನಡ ರಾಜಾಡಳಿತ ) ಅಧೀನದಲ್ಲಿ ಇರಲಿಲ್ಲ; ಬ್ರಿಟಿಷರ ಅಧೀನದಲ್ಲಿತ್ತು.
ಕರ್ನಾಟಕ ಏಕೀಕರಣದ ಪ್ರಕ್ರಿಯೆಯಲ್ಲಿ ಆ ಪ್ರದೇಶದವರೆ ಸ್ವಪ್ರೇರಣೆಯಿಂದ ಭಾಗವಹಿಸಿ ಕರ್ನಾಟಕವೆಂಬ ಕನ್ನಡರಾಜ್ಯಾನ್ತರ್ಗತವಾದರು.
ಈಗ ಸ್ವಪ್ರೇರಣೆಯಿಂದ ತುಳು-ಜನ ರಾಜಕೀಯವಾಗಿ ಬೇರ್ಪಡಲು ಬಯಸಿದರೆ ಅದರಲ್ಲಿ ನಾವು ಕನ್ನಡಿಗರ ಅಡ್ಡಿ ಇರಬಾರದು, ಎಂದು ನನ್ನ ಆಶಯ.
“ಕನ್ನಡವು ತುಳುಭಾಷೆಯ ಯಾವ ಸ್ಥಾನವನ್ನು ಆಕ್ರಮಿಸಿಲ್ಲ.” – ಹೌದು ತುಳು ಹೆಚ್ಚಾಗಿ ಆಡು ಭಾಷೆಯಾಗಿತ್ತು. ಇಲ್ಲಿ ಲೇಖಕರು ಕನ್ನಡವು ತುಳುವಿನ ಮೇಲೆ ಬೇರೆ ಭಾಷೆಯ ಆಕ್ರಮಣವನ್ನು ತಡೆಯಿತು ಎಂದಿದ್ದು ಅರ್ಥವಾಗಲಿಲ್ಲ. ಸಂವಹನಕ್ಕೆ ಯಾವುದೊ ಒಂದು ಭಾಷೆ ಬೇಕಾಗಿರುವಾಗ, ಬೇರೆ ಭಾಷೆಗಳದ್ದು ಆಕ್ರಮಣ ಎಂದು ಲೇಖಕರು ಹೇಳುವುದಾದರೆ ಕನ್ನಡವೂ ತುಳುನಾಡನ್ನು ಆಕ್ರಮಿಸಿತು ಎಂದೆ.
ಕನ್ನಡವು ತುಳುನಾಡನ್ನು ಆಕ್ರಮಿಸಿಲ್ಲ. ಆ ವಾದ ತಪ್ಪು.
ತುಳುನಾಡಿನ ವಾಸಿಗಳೇ ಸ್ವ-ಇಚ್ಛೆಯಿಂದ ಕನ್ನಡನಾಡಾದ ಕರ್ನಾಟಕಕ್ಕೇ ಸೇರಿರೋದು. ಕನ್ನಡಿಗರು ಬಲಾತ್ಕಾರವಾಗಿ ಅಕ್ರಮಿಸಿಲ್ಲ.
ಬೇರೆಯಾಗುವುದಕ್ಕೆ ನನ್ನಂತಹ ಕನ್ನಡಿಗರ ಪರ-ವಿರೋಧವಿಲ್ಲ.
If Tulunad was a separate state then Tulu automatically would have gained strength coz it wouls have been the official language of the state. And today tulu is at threath coz its privilage of ”official” language in tu;lunad is forcefully occupied by Kannada.
“”official” language in tu;lunad is forcefully occupied by Kannada.”
ಅಪ್ಪಟ ಸುಳ್ಳು. ನಿರಾಧಾರವಾದ ಅಪವಾದ. ನಿಮ್ಮ ಅಜ್ಜ, ಮುತ್ತಜ್ಜರನ್ನೊಮ್ಮೆ ಕೇಳಿ ನೋಡಿ!
ಕನ್ನಡವು ತುಳುಭಾಷೆಯ ಯಾವ ಸ್ಥಾನವನ್ನು ಆಕ್ರಮಿಸಿಲ್ಲ. ೧೯೫೩ರ ಮುಂಚೆ ತುಳುಭಾಷಿಕ ಪ್ರದೇಶವು ಮೈಸೂರು ಅರಸುತನದ ( ಕೊನೆಯ ಕನ್ನಡ ರಾಜಾಡಳಿತ ) ಅಧೀನದಲ್ಲಿ ಇರಲಿಲ್ಲ; ಬ್ರಿಟಿಷರ ಅಧೀನದಲ್ಲಿತ್ತು.
ಕರ್ನಾಟಕ ಏಕೀಕರಣದ ಪ್ರಕ್ರಿಯೆಯಲ್ಲಿ ಆ ಪ್ರದೇಶದವರೆ ಸ್ವಪ್ರೇರಣೆಯಿಂದ ಭಾಗವಹಿಸಿ ಕರ್ನಾಟಕವೆಂಬ ಕನ್ನಡರಾಜ್ಯಾನ್ತರ್ಗತವಾದರು.
Fazal Ali ಕಮಿಷನ್ ತುಳುಭಾಷಿಕ ಪ್ರದೇಶಕ್ಕೆ ಭೇಟಿ ನೀಡಿ ಜನಾಭಿಪ್ರಾಯ ಸಂಗ್ರಹಿಸಿಯೇ ಅದನ್ನು ಕರ್ನಾಟಕಕ್ಕೆ ಸೇರಿಸಿದ್ದು.
http://en.wikipedia.org/wiki/Ethnic_nationalism
http://en.wikipedia.org/wiki/Ethnology
ನನ್ನ ಮಾತು ಬರಿ ಅಕಾಡೆಮಿಕ್ ಕಡೆಯಿಂದ ಇತಿಹಾಸ ಹಾಗು Ethnology ದೃಷ್ಟಿಯಿಂದ …
ಯುರೋಪ್, ಹಳೆಯ ಸೋವಿಯತ್ ಯೂನಿಯನ್ ಹಾಗು ಯುಗೊಸ್ಲಾವಿಯ -ಗಳನ್ನೂ ಗಮನಿಸಿರಿ .
ತುಳುನಾಡು ಒಂದು ethnic nation. ಅದು ಈಗಾಗಲೇ ಅಸ್ತಿತ್ವದಲ್ಲಿದೆ. ಆದರೆ ಅದು ಇಂಡಿಯಾ ಎಂಬ ರಾಜಕೀಯ (political) ಒಕ್ಕೂಟದ ಒಳಗೆ ಬಂಧವಾಗಿದೆ. ಆದುದರಿಂದ ತನ್ನದೇ ರಾಜಕೀಯ ಸ್ವಾತಂತ್ರ್ಯವಿಲ್ಲ. ರಾಜಕೀಯ ಸ್ವಾತಂತ್ರ್ಯ ಒಂದು ethnicity ಬೆಳವಣಿಗೆಯಲ್ಲಿ ಒಂದು ದೊಡ್ಡ ಹೆಜ್ಜೆ.
ತುಳುನಾಡಿಗರು ಒಂದು ವಿಚಾರವನ್ನು ಗಮನಿಸಬೇಕು. ಕರ್ನಾಟಕ ಎಂಬ ರಾಜ್ಯ ಆದುದ್ದೇ ‘ಕನ್ನಡ ಭಾಷಿಕ ಪ್ರಾಂತ್ಯಗಳ ಒಗ್ಗೂಡಿಕೆ’ ಎಂಬ ಧ್ಯೇಯದ ಮೇಲೆ. ಕರ್ನಾಟಕದ ರಚನೆಗೆ ಕನ್ನಡಿಗರು ಬೇಡಿದರೆ ಹೊರತು, ಅದನ್ನು ತಾವೇ ಮಾಡಿಕೊಳ್ಳುವ ಅಧಿಕಾರವು ಅವರ ಬಳಿ ಇರಲಿಲ್ಲ. ಕೇಂದ್ರ ಸರಕಾರದ ‘ವರ’ದಿಂದ ಕರ್ನಾಟಕ ಹುಟ್ಟಿದು (ಇಂದು ತೆಲಂಗಾಣ ಹುಟ್ಟುತ್ತಿರುವ ಹಾಗೆ).
ನನ್ನ ಅನಿಸಿಕೆ ..
ತುಳುನಾಡು ಬೇಕೇ ಬೇಡವೇ ಎಂಬ ಪ್ರಶ್ನೆ ಕನ್ನಡಿಗರ ಮನಸ್ಸಿನಲ್ಲ ಇಲ್ಲವೇ ಇಲ್ಲ. ಹೆಚ್ಚಿನವರಿಗೆ ಅದು ಬೇಕಾಗೂ ಇಲ್ಲ.
ನಾನೊಬ್ಬ ಸಾಮಾನ್ಯ ಕನ್ನಡಿಗ ನನ್ನಂತವರು ‘ಬೇರ್ಪಟ್ಟ ತುಳುನಾಡು’ ರಾಜ್ಯವನ್ನು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ.
ನನ್ನ ವಿನಂತಿ, ಈ ವಿಷಯವನ್ನು ‘ಕನ್ನಡಿಗರ ತುಳುನಾಡಿನ ಆಕ್ರಮಣ, Occupation’ ಎಂದು ಬಿಂಬಿಸಿ ಕನ್ನಡಿಗರು ಹಾಗು ತುಳು-ಜನರ ನಡುವೆ ಕಿತ್ತಾಟ ಹತ್ತಿಸ-ಬೇಡಿ. ‘ತುಳುನಾಡು ಬೇಕು’ ಎಂದು ಕನ್ನಡಕ್ಕೆ ಕನ್ನಡಿಗರಿಗೆ ಅನ್ನಬಾರದ್ದು ಅನ್ನಬೇಡಿ. ಅಷ್ಟೇ!
ತುಳುನಾಡು ಎಂಬ ಬೇರ್ಪಟ್ಟ ರಾಜ್ಯವು ಆಗಬೇಕಿದ್ದರೆ ಅದು ಕನ್ನಡಿಗರ ಬೆಂಬಲದಿಂದ ಆಗಲ್ಲ. ಕೇಂದ್ರದ ಸರಕಾರದ ಬೆಂಬಲದಿಂದ!
“ಕರ್ನಾಟಕತ್ವ ಎನ್ನುವದು ಬಹುತ್ವ, ಶ್ರೇಣೀಕರಣ, ಸಂಘರ್ಷ ಹಾಗೂ ಸಂಕರಶೀಲತೆಗಳ ಸಾಂಸ್ಕೃತಿಕ ವಾಸ್ತವ. ಎರಡು ಎರಡೂವರೆ ಸಾವಿರ ವರುಷಗಳ ಆಗುವಿಕೆ. ಹಲವಾರು ಜನಾಂಗ ಧರ್ಮ ಪ್ರಭುತ್ವ ಭಾಷೆ ಸಮಾಜೋ ಆರ್ಥಿಕ ಸ್ಥಿತ್ಯಂತರಗಳಿಗೆ ಮುಖಾಮುಖಿಯಾಗುತ್ತ ಸಂಘರ್ಷ ನಿರಾಕರಣೆ ಹಾಗೂ ಸ್ವೀಕರಣ ಮಿಲನಗಳನ್ನೊಳಗೊಂಡಂತೆ ರೂಪತಾಳಿದ ಲೋಕಗ್ರಹಿಕೆಯ ವಿಧಾನ. ಇಂದಿಗೂ ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಜಾತಿ ಸಮುದಾಯಗಳಿವೆ. ಐವತ್ತಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಏಳೆಂಟು ಧರ್ಮ ಹಾಗೂ ಹತ್ತಾರು ಪಂಥಗಳ ಅನುಯಾಯಿಗಳಿದ್ದಾರೆ. ಇವುಗಳ ನಡುವೆ ತಾರತಮ್ಯ ಸಮಾನತೆಯ ಹೋರಾಟ ಜೀವಂತವಾಗಿದೆ. ವರ್ಗ ವರ್ಣ ಲಿಂಗಾಧಾರಿತ ಅಸಮಾನ ನೆಲೆಗಳಂತೂ ಭಿನ್ನ ಆಯಾಮಗಳಲ್ಲಿ ರೂಪಾಂತಗೊಂಡಿವೆ. ಇಂಥ ಕರ್ನಾಟಕವನ್ನು ಪ್ರತಿನಿಧಿಸುವ ಸಮರ್ಥ ಪ್ರತಿಮೆ ಎಂದರೆ ಕನ್ನಡ ವೊಂದೇ. ಅಥವಾ ಪ್ರತಿಮೀಕರಣದ ಅಗತ್ಯವಿಲ್ಲ. ಇಷ್ಟಾಗಿಯೂ ಬೇಕೇ ಎಂದರೆ ಈ ಎಲ್ಲ ವೈವಿಧ್ಯ ವೈರುಧ್ಯ ಅಸ್ಮಿತೆಗಳನ್ನು ಒಳಗೊಳ್ಳುವ ಪ್ರತಿಮೆಗಾಗಿ ಚಿಂತಿಸಬೇಕಾಗುತ್ತದೆ. ಲಿಂಗಾಯತಧರ್ಮ ಇಷ್ಟಲಿಂಗದ ರೂಪಕವನ್ನು ಗುಡಿಗೆ ಪರ‍್ಯಾಯವಾಗಿ ನೀಡಿತು. ದಲಿತ ಸಂಘರ್ಷ ಸಮಿತಿಗೆ ಕಸಬರಿಗೆ ಸಂಕೇತವಾಗಿತ್ತು. ಬಂಡಾಯ ಸಂಘಟನೆಗೆ ಪೆನ್ನು ಸಂಕೇತವಾಗಿತ್ತು. ಎಡಪಕ್ಷಗಳು ಶ್ರಮಿಕ ವರ್ಗದ ಆಯುಧಗಳನ್ನೇ ಸಂಕೇತವಾಗಿ ಬಳಸಿಕೊಂಡಿವೆ. ಭುವನೇಶ್ವರಿಯ ಜಾಗದಲ್ಲಿ ಹೊಸ ರೂಪಕ ರೂಪತಾಳಬೇಕಾದದ್ದು ಇಂದಿನ ಅನಿವಾರ್ಯತೆ. ”
“ಕರ್ಣಾಟಕತ್ವವನ್ನು ಭುವನೇಶ್ವರಿ ಪ್ರತಿಮೆಯಿಂದ ಬೇರ್ಪಡಿಸುವ, ಮೈಸೂರು ದಸರಾ ಆಚರಣೆಯನ್ನು ಚಾಮುಂಡೇಶ್ವರಿ ಪೂಜೆ ಹಾಗೂ ಮೆರವಣಿಗೆಗಳಿಂದ ಬಿಡುಗಡೆಗೊಳಿಸುವ ಮೂಲಕ ನಿರ್ಮತೀಯ ಕರ್ನಾಟಕತ್ವದ ಉಳಿವಿಗಾಗಿ ಕರ್ನಾಟಕದಲ್ಲಿ ಒಂದು ಚಳುವಳಿಯೇ ನಡೆಯಬೇಕಾಗಿದೆ.”
http://ladaiprakashanabasu.blogspot.in/2013/11/blog-post_7.html
Tulu is an integral component of Karnatakatva. Tulunadu state idea is dangerous to Karnatakatva.
ಇರಬಹುದು ..
ವರ್ಷಾನುವರ್ಷ ಕನ್ನಡಸೇನೆಗಳು ತುಳು, ಕೊಡವ, ಕೊಂಕಣಿ, ಟಿಬೆಟ್ಟಿಗರು ಮುಂತಾದ ಬುಡಕಟ್ಟುಗಳಿಗೆ ಬಾಹ್ಯಶತ್ರುಗಳಿಂದ(ಬಹಮನಿ, ಮೊಗಲ, ಪೋರ್ಚುಗೀಸರು) ರಕ್ಷಣೆಯನ್ನು ಹಾಗು ಆಶ್ರಯ ಕೊಟ್ಟಿರಬಹುದು…
ಆದರೆ, ಬೇರೆಯಾಗ ಬಯಸುವವರಿಗೆ ಸಂತೋಷವಾಗಿ, ಜನಾಂಗೀಯವೈರತ್ವಕ್ಕೆ ಎಡೆಕೊಡದೇ ಬೇರ್ಪಡುವ ದೊಡ್ಡ ಮನಸನ್ನು ನಾವು ಕನ್ನಡಿಗರು ಬೆಳೆಸಿಕೊಳ್ಳಬೇಕು. ಹಠದಿಂದ ಜತೆಯಿರುವುದು ಹಿಂಸೆಗೆ ವೈರತ್ವಕ್ಕೆ ದಾರಿ .
ತುಳುನಾಡು, ಕೊಡವನಾಡು ಮುಂತಾದ ಕರ್ನಾಟಕದಲ್ಲಿರುವ ಬುಡಕಟ್ಟುಗಳು ಸ್ವ-ಇಚ್ಚೆಯಿಂದ ಕರ್ನಾಟಕದಿಂದ ಬೇರ್ಪದುವುದನ್ನು ಕನ್ನಡಿಗರು ವಿರೋಧಿಸಲೂ ಬಾರದು, ಸಮರ್ಥಿಸಲೂ ಬಾರದು.. ಎರಡು ವೈರತ್ವಕ್ಕೆ ದಾರಿಮಾಡ ಬಲ್ಲದು. ಇಂತಹ ವಿಚಾರದಲ್ಲಿ ಕನ್ನಡಿಗರು ತಟಸ್ಥರಾಗಿರುವುದು ಒಳ್ಳೆಯದು.
ನಾಳೆ ಇಂತಹುದೇ ವಿಚಾರವು ಭಾರತದ ಒಂದು ಪ್ರಾಂತ್ಯ ಭಾರತದ ಒಕ್ಕೂಟದಿಂದ ಬೇರ್ಪಡುವ ವಿಚಾರವಾಗಿ ಬಂದರೂ ನಾವು ಕನ್ನಡಿಗರು ತಟಸ್ಥವಾಗಿರುವುದೇ ಸಾಧು.
-1
“ಹಠದಿಂದ ಜತೆಯಿರುವುದು ಹಿಂಸೆಗೆ ವೈರತ್ವಕ್ಕೆ ದಾರಿ”
ಮಾಯ್ಸ ಅವರ ಮಾತು ಅಹುದು ಅಹುದು ಎನ್ನುವಂಥದ್ದು .. ಕಾಶ್ಮೀರವಾಗಲಿ ತೆಲಂಗಾಣವಾಗಲಿ ಕೊಡಗು ತುಳುನಾಡಾಗಲಿ ಒಕ್ಕೂಟದಲ್ಲಿ ಇರಲು ಇಚ್ಛೆ ಇಲ್ಲದವರು ತಮ್ಮ ಬೇರ್ಪಡುವಿಕೆಯ ಸಾಧ್ಯತೆ ಭಾಧ್ಯತೆಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕು (ಕಾಶ್ಮೀರ ತೆಲಂಗಾಣಗಳದ್ದು ಭಾಷೆಯ ಸಮಸ್ಯೆ ಅಲ್ಲ – ಛತ್ತೀಸ್ ಘಡ, ಉತ್ತರಾಖಂಡ, ಜಾರ್ಖಂಡಗಳದ್ದೂ ಭಾಷೆಯ ಸಮಸ್ಯೆ ಇರಲಿಲ್ಲ).
ಉನ್ನತ ಶಿಕ್ಷಣದಲ್ಲಿ ಇಂಗ್ಲಿಶ್ ಭಾಷೆ ಪ್ರಾಮುಖ್ಯತೆ ಪಡೆದಿರುವ ಭಾರತದಂಥ ದೇಶದಲ್ಲಿ ಒಕ್ಕೂಟದಿಂದ ಭಾಷೆ ರಕ್ಷಣೆಗೋಸ್ಕರ ಒಕ್ಕೂಟದಿಂದ ಹೊರ ನಡೆಯುವುದು ಬಹುಶಃ ಉಪಯೋಗವಿಲ್ಲದ್ದು. ಒಕ್ಕೂಟದಲ್ಲಿ ಇದ್ದರೂ ಬೇರೆಯಾದರೂ ಒಂದೇ. ಹಾಗೆ ನೋಡಿದರೆ ಕನ್ನಡವೇ ಸೇರಿದಂತೆ ಭಾರತದ ಬಹುತೇಕ ಭಾಷೆಗಳು ತಮ್ಮನ್ನು ಉಳಿಸಿಕೊಳ್ಳಲು ಹೆಣಗುತ್ತಿವೆ.
Mr. Ravi, there is no need to divide India further on the basis of language. There is no end to such a division as India has thousands of languages and dialects.
ಭಾರತದಲ್ಲಿ ರಾಜ್ಯಗಳ ರಚನೆ ಭಾಷಾವಾರು. ಅದಕ್ಕೆ ಸತ್ತ ಹುತಾತ್ಮರು ಮಾತುಕೇಳಿ ನರಕಯಾತನೆ ಪಡುವರು.
ಆಂಧ್ರ ರಾಷ್ಟ್ರ ರಚನೆಗೆ ಪೊಟ್ಟಿ ಶ್ರೀರಾಮುಲು ನಿರಶನ-ಮಾಡಿ ಭಾಷೆಗೊಸ್ಕರ ಹುತಾತ್ಮರಾದರು. ಅದೇ ಕರ್ನಾಟಕ, ತಮಿಳುನಾಡು, ಮಾಹಾರಾಷ್ಟ್ರ, ಗುಜರಾತು ಮುಂತಾದೆಡೆ ಜನ ಬೆವರು ಹಾಗು ರಕ್ತ ಸುರಿಸಿ ಅವರವರ ಭಾಷಾವಾರು ರಾಜ್ಯಗಳನ್ನು ರಚಿಸಿಸಿಕೊಂಡರು.
ರವಿ
“ಉನ್ನತ ಶಿಕ್ಷಣದಲ್ಲಿ ಇಂಗ್ಲಿಶ್ ಭಾಷೆ ಪ್ರಾಮುಖ್ಯತೆ ಪಡೆದಿರುವ ಭಾರತದಂಥ ದೇಶದಲ್ಲಿ ಒಕ್ಕೂಟದಿಂದ ಭಾಷೆ ರಕ್ಷಣೆಗೋಸ್ಕರ ಒಕ್ಕೂಟದಿಂದ ಹೊರ ನಡೆಯುವುದು ಬಹುಶಃ ಉಪಯೋಗವಿಲ್ಲದ್ದು. ಒಕ್ಕೂಟದಲ್ಲಿ ಇದ್ದರೂ ಬೇರೆಯಾದರೂ ಒಂದೇ. ಹಾಗೆ ನೋಡಿದರೆ ಕನ್ನಡವೇ ಸೇರಿದಂತೆ ಭಾರತದ ಬಹುತೇಕ ಭಾಷೆಗಳು ತಮ್ಮನ್ನು ಉಳಿಸಿಕೊಳ್ಳಲು ಹೆಣಗುತ್ತಿವೆ.”
೧. ಭಾರತವು ಹೆಸರಿಗೆ ಒಕ್ಕೂಟ . ಆದರೆ ಅಲ್ಲಿ ಸಂಪೂರ್ಣ federation ಇಲ್ಲ. ಅಲ್ಲಿರುವುದು USSR ಮಾದರಿಯ ಬಲಾಢ್ಯ ಕೇಂದ್ರ ಹಾಗು ಆ ಕೇಂದ್ರಕ್ಕೆ ಸಲಾಮು ಹಾಕಲೇ ಬೇಕಾದ ಅಧೀನ ರಾಜ್ಯಗಳು. ಅದುದುರಿಂದ ಭಾರತವು ಒಂದು federation ಇಲ್ಲವೇ USA ತೆರನಾದ ಒಕ್ಕೂಟ ಎಂಬುದು ಒಂದು ಭ್ರಾಂತಿ.
೨. ಉನ್ನತ ಶಿಕ್ಷಣಕ್ಕೆ ಇಂಗ್ಲಿಷ್ ಭಾಷೆ ಪ್ರಮುಖವಾಗಿರುವುದು ಬರಿ ಭಾರತದಲ್ಲಲ್ಲ. ಇಂದು ಯುರೋಪ್ ಮುಂತಾದೆಡೆಗಳಲ್ಲೂ ಕೂಡ ಇಂಗ್ಲಿಷ್ ಬೇಕು ಉನ್ನತ ಶಿಕ್ಷಣಕ್ಕೆ. ಆದರೆ ಬಹುತೇಕ ಯುರೋಪ್ ದೇಶಗಳಲ್ಲಿ ನೆಲದ ಭಾಷೆಯಲ್ಲಿ ಎಲ್ಲ ಸೌಲಭ್ಯ ಹಾಗು ಶಿಕ್ಷಣ ಸಿಗುವುದು.
೩. “ಒಕ್ಕೂಟದಲ್ಲಿ ಇದ್ದರೂ ಬೇರೆಯಾದರೂ ಒಂದೇ.” ಇದೇ ವಾದವನ್ನು ಭಾರತವು ಸ್ವತಂತ್ರವಾಗುವ ಸಮಯ ಹಲವರು ಹೇಳಿ, ಭಾರತ Britainನಲ್ಲಿ Wales, Scotland ಮುಂತಾದವು ಇರುವ ಹಾಗೆ ಒಂದು ಭಾಗವಾಗಿರಲಿ ಎಂದು ಹೇಳಿದರು.
೪. ಕನ್ನಡದ ಅಸ್ತಿತ್ವಕ್ಕೆ ಯಾವ ಅಪಾಯವಿಲ್ಲ. ಕನ್ನಡ ಭಾಷೆ ಉಳಿಯಲು ಕನ್ನಡ-ಭಾಷಿಕರು ಹೆಚ್ಚ ಬೇಕು. ಕನ್ನಡ ಭಾಷಿಕರು ಹೆಚ್ಚಾಗಲು ಆ ಭಾಷಿಕರು ಹೆಚ್ಚು ಮಕ್ಕಳನ್ನು ಹೇರುವುದು ಇಲ್ಲವೇ, ಬೇರೆ ಭಾಷಿಕರನ್ನು ಕನ್ನಡ-ಭಾಷಿಕರಾಗಿ ಮಾಡುವುದು ಎಂಬ ಎರಡು ದಾರಿಗಳು. ಅದರಲ್ಲಿ ಕನ್ನಡಿಗರು ಹೆಚ್ಚು ಸಂಪತ್ತು ಹಾಗು ಮಕ್ಕಳನ್ನು ಹೊಂದುವುದು ಸುಲಭದಾರಿ.
ಕನ್ನಡ ಭಾಷೆಯೊಂದೇ ಪ್ರಧಾನಭಾಷೆಯಾಗಿರುವ ಒಂದು ರಾಜಕೀಯವಾಗಿ ಸ್ವಾತಂತ್ರ್ಯ ದೇಶ ಕನ್ನಡ ಭಾಷೆಯ ಉಳಿವು, ಹೆಚ್ಚಳ ಹಾಗು ಮೇಲ್ಮಟ್ಟಕ್ಕೆ ಅನುಕೂಲವೇ; ಆದರೆ ಅದೊಂದೇ ಮಾರ್ಗವಲ್ಲ. ಭಾರತವನ್ನು ನಿಜವಾದ federation ಇಲ್ಲವೇ USA ತರಹದ ಒಂದು ರಾಜ್ಯಗಳ ಒಕ್ಕೂಟವನ್ನಾಗಿ ರೂಪಿಸುವುದೂ ಕೂಡ ಇನ್ನೊಂದು ಮಾರ್ಗ.
Mr. Maysa, the unity we have achieved is a long fought one. We should not undo it by dividing the country into many more states based on languages and dialects. There is no substance in your claim that a separate state will help Tulu survive and thrive.
ಸ್ವಾಮೀ ಕನ್ನಡದಲ್ಲಿ ಬರೆಯಿರಿ. ನನಗೆ ನನ್ನ ಭಾಷೆ, ಜನ ಹಾಗು ನನ್ನ ಭಾಷೆಗೆ ನಂಟಾದ ಭಾಷೆ ಬಗ್ಗೆ ಇಂಗ್ಲಿಷಲ್ಲಿ ಪ್ರಲಾಪಿಸುವ ಅಗತ್ಯವಿಲ್ಲ.
ತುಳು ಭಾಷೆಯ ಭವಿಷ್ಯ ಹಾಗು ವರ್ತಮಾನ ಆ ಭಾಷೆಯ ಭಾಷಿಕರಿಗೆ ಬಿಟ್ಟಿದ್ದು. ಕನ್ನಡಿಗನಾಗಿ ನಾನು ಅದಕ್ಕೆ ಪರ-ವಿರೋಧ ಮಾಡಲ್ಲ!
ನನ್ನದು ಕನ್ನಡ ಭಾಷೆ ; ಅದಕ್ಕೆ ವೈರಿಗಳನ್ನು ನೀಗಿಸುವುದು ನನ್ನ ಆಶಯ.
ಮಾನ್ಯರೇ, “ತುಳು ಭಾಷೆಯ ಭವಿಷ್ಯ ಹಾಗು ವರ್ತಮಾನ ಆ ಭಾಷೆಯ ಭಾಷಿಕರಿಗೆ ಬಿಟ್ಟಿದ್ದು. ಕನ್ನಡಿಗನಾಗಿ ನಾನು ಅದಕ್ಕೆ ಪರ-ವಿರೋಧ ಮಾಡಲ್ಲ! ”
ಕರ್ನಾಟಕವನ್ನು ಹೋಳು ಮಾಡಿ ತುಳುನಾಡು ಕಟ್ಟಲು ಕೆಲವರು ಮುಂದಾದರೆ ನೀವು ಅದು ನನಗೆ ಸಂಬಂಧಿಸಿದ್ದು ಅಲ್ಲ ಅಂತ ಸುಮ್ಮನಿರುತ್ತೀರಾ?
ಕರ್ನಾಟಕ/ಕನ್ನಡನಾಡು ಕನ್ನಡ ಭಾಷಿಕರು ಆಧಿಕ್ಯದಲ್ಲಿ ವಾಸಿಸುವ ಪ್ರದೇಶ.
ತುಳುನಾಡಿನಲ್ಲಿ ಕನ್ನಡಿಗರು ಅಲ್ಪಸಂಖ್ಯೆಯಲ್ಲಿ ಇರುವುದಾದರೆ, ಅದು ಕರ್ನಾಟಕದಲ್ಲಿರದಿದ್ದರೆ ನನ್ನಗೆ ಆತ್ಮತಃ ಅಭ್ಯಂತರವಿಲ್ಲ.
ಆದರೆ ಒಂದು ಪಕ್ಷ ಆ ಪ್ರದೇಶದಲ್ಲಿ ಕನ್ನಡ ಭಾಷಿಕರು ಬಾಹುಳ್ಯದಲ್ಲಿದರೆ, ಆ ಪ್ರದೇಶವು ಕರ್ನಾಟಕದಲ್ಲಿ ಇರುವಂತೆ ಮಾಡುವಷ್ಟು ತಾಕತ್ತು ಅಲ್ಲಿನ ಕನ್ನಡ ಭಾಷಿಕರಿಗೆ ಉಂಟು ಹಾಗು ಆಗ ಅದು ಕನ್ನಡಿಗರ ಹಕ್ಕು. ಆ ಪ್ರದೇಶದಲ್ಲಿ ಯಾವ ಭಾಷೆಯ ಭಾಷಿಕರು ಬಾಹುಳ್ಯದಲ್ಲಿ ಇದ್ದಾರೆ? ನನಗೆ ಗೊತ್ತಿಲ್ಲವಲ್ಲ. ಇದೇ ನನ್ನ ವಾದ ಕನ್ನಡಿಗರು ಹೆಚ್ಚಳದಲ್ಲಿರುವ ಎಲ್ಲಾ ಪ್ರದೇಶಗಳಿಗೂ ಅನ್ವಯ.
+1 ಅತ್ಯಂತ ಸ್ಪಷ್ಟ
“ಆ ಪ್ರದೇಶದಲ್ಲಿ ಯಾವ ಭಾಷೆಯ ಭಾಷಿಕರು ಬಾಹುಳ್ಯದಲ್ಲಿ ಇದ್ದಾರೆ? ನನಗೆ ಗೊತ್ತಿಲ್ಲವಲ್ಲ. ” then you first get some basic knowledge and then present your views.
ಕನ್ನಡದಲ್ಲಿ ಬರೆಯಿರಿ.
೨೦೧೧ರ ಜನಗಣತಿ ಇನ್ನೂ ಪೂರ್ತಿ ಪ್ರಕಟಗೊಂಡಿಲ್ಲ.
ರವಿ ಅವರೇ,
ಒಪ್ಪಿಗೆಗೆ ಧನ್ಯವಾದ.
ಇತ್ತೀಚಿಗೆ ‘ಬಸವಣ್ಣ’ನ ಹೆಸರಲ್ಲಿ ಅರುಚಾಟ ಯಾಕೋ ಜಾಸ್ತಿಯಾಗಿದೆ.
ಆದರೆ ಮೊದಲಿಂದಲೂ ಬಸವ-ತತ್ವವನ್ನು ಒಳಗೊಂಡ ಕನ್ನಡ-ತತ್ವದಲ್ಲಿ ಹೊಂದಾಣಿಕೆ ಹಾಗು ಸಮಾಧಾನ, ಒತ್ತು ‘ಸಮಾನತೆ ಹೆಸರಿನ’ ರಂಪಾಟಕ್ಕಿಂತ ಜಾಸ್ತಿ ಎಂಬ ಮನವರಿಕೆ ಬೇಕಿದೆ ಎಂದು ಅನ್ನಿಸುತ್ತೆ;
ಹೊಂದಾಣಿಕೆ ಹಾಗು ಸಮಾಧಾನಗಳು ಇಲ್ಲದೇ, ಹಠದಿಂದ, ದೂಷಣೆಗಳಿಂದ ಯಾವ ಸಮಾನತೆ, ಸಾಮಾಜಿಕನ್ಯಾಯ ಸಿಗುವುದಿಲ್ಲ. ಸಿಗುವುದು ಬರಿ ಅಹಮ್ಮಿನ ಅರುಚಾಟ, ಹೊಂಚುಗಾರಿಕೆ ಹಾಗು ವೈರತ್ವ.
How can there be any ಹೊಂದಾಣಿಕೆ of the exploited with the exploiters? Won’t that always be in favour of the exploiters? There can be ಸಮಾಧಾನ only when there is ಸಮಾನತೆ.
ಕನ್ನಡದಲ್ಲಿ ಬರೆಯಿರಿ ..
ಜಗತ್ತು ಗುಣದಿಂದಲೇ ಅಸಮಾನ.
“ಜಗತ್ತು ಗುಣದಿಂದಲೇ ಅಸಮಾನ. ” ಬಸವಣ್ಣನವರು ಹೀಗೆ ಅಭಿಪ್ರಾಯ ಪತ್ತಿದ್ದಾರಾ?
ಬಸವಣ್ಣನ ಅಭಿಪ್ರಾಯ ಎಂದು ನಾನು ಹೇಳಿಲ್ಲ.
“ಜಗತ್ತು ಗುಣದಿಂದಲೇ ಅಸಮಾನ. ” ಇದು ನನ್ನ ಅನಿಸಿಕೆ. ಜಗತ್ತಲ್ಲಿ ದೊಡ್ಡದ್ದು ಇದ್ದಾರೆ, ಅದಕ್ಕಿಂತ ಕಿರಿದು ಇದ್ದೇ ಇರಬೇಕು.
ಶ್ರೇಷ್ಠವಾದ ಗುಣಗಳು ಇದ್ದಾರೆ, ಅದಕ್ಕಿಂತ ಕೀಳಾದ ಗುಣಗಳು ಇರಲೇ ಬೇಕು.
ಉತ್ತಮರು ಇದ್ದಾರೆ, ಅಧಮರು ಇರಲೇ ಬೇಕು. ಇಲ್ಲದ್ದರೆ ತುಲನೆ ಅಸಾಧ್ಯ!
To see the meaninglessness of your argument, imagine what happens if the minority language in the Tulunadu state demand exactly the same – a new state for their language giving exactly the same reason. Where does this end? At village level? At keri level? This leads to the situation that existed in medieval India.
ಕನ್ನಡದಲ್ಲಿ ಬರೆಯಿರಿ.
ರಾಜ್ಯಗಳ ಗಾತ್ರ ಎಷ್ಟಿರಬೇಕು ಎಂದು ನಿರ್ಧರಿಸುವ ಹಕ್ಕು ನಿಮಗೆ ಯಾರು ಕೊಟ್ಟರು?
ನಮ್ಮ ಸಂವಿಧಾನದಲ್ಲಿ ಇದಕ್ಕೆ ಏನು ಅನುವಿದೆಯೋ ಅದು ಆಗಲಿ. ಅಸಂವಿಧಾನಿಕವಾಗಿ ನಡೆಯುವ ಅಧಿಕಾರ ಯಾರಿಗೂ ಇಲ್ಲ.
ಪೂರ್ವೋತ್ತರ ಭಾರತದಲ್ಲಿ ಇರುವ ಚಿಕ್ಕಚಿಕ್ಕ ರಾಜ್ಯಗಳು ಹೇಗೆ ರಚನೆಯಾದವೋ ಹಾಗೆ ಭಾರತದ ಎಲ್ಲೆಡೆ ನಡೆಯಲಿ.
ಅರ್ಥವಿಲ್ಲದ್ದು ಎಂದೇಕೆ ಹೇಳುತ್ತೀರಿ? ಗ್ರಾಮ ಕೇರಿ ಅದೇನೇ ಇರಲಿ, ಅದು ಬೇರೆಯಾಗ ಬಯಸುವವರಿಗೆ ಬಿಟ್ಟಿದ್ದು.. ಬೇರೆಯಾಗಬೇಕು ಎಂದ ಕೂಡಲೇ ಹೊಸ ರಾಜ್ಯ ಸೃಷ್ಟಿಯಾಗುವುದಿಲ್ಲ.. ಮಾನ್ಯತೆ ಸಿಗುವುದಾದರೆ ಅದೂ ಆಗಲಿ ಬಿಡಿ.. ನಿಮಗೇನು ತೊಂದರೆ? ಬೆಂಗಳೂರಿಗಿಂತ ಸಣ್ಣ ನಗರ ಸಿಂಗಾಪುರ, ಮಲೇಶಿಯಾ ಒಕ್ಕೂಟದಿಂದ ಹೊರಹಾಕಲ್ಪಟ್ಟು ದೇಶವಾಗಿಲ್ಲವೇ? ↕
ದಯವಿಟ್ಟು ಕನ್ನಡದಲ್ಲಿ ಬರೆಯಿರಿ.. ಕನ್ನಡವನ್ನು ಇಂಗ್ಲೀಷಿನ ಹಾವಳಿಯಿಂದ ಮೊದಲು ರಕ್ಷಿಸಿ, ಆಮೇಲೆ ತುಳುನಾಡು ಬೇಕೋ ಬೇಡವೋ ಎಂದು ಹೇಳಿ..
ಭಾರತವು ಊರು ಕೇರಿಗಳಾಗಿ ಒಡೆದು ಹೋದರೆ ಪಾಕಿಸ್ತಾನ ಸುಮ್ಮನೆ ಕುಲಿತಿರುತ್ತದೆಯೇ?
ಭಾರತದ ಒಕ್ಕೂಟವು ಒಡೆಯುತ್ತಿಲ್ಲವಲ್ಲ. ಆಗುತ್ತಿರುವುದು ಭಾರತದೊಳಗೆ ಒಂದು ರಾಜ್ಯ. !
ಅವರೇನು ಮಾಡುತ್ತಾರೆ? ಅವರೂ ಹಾಗೇ ಮಾಡಲಿ ಬಿಡಿ 😉
ಮತ್ತೊಂದು ‘ವಿಶ್ವಕೋಶ’ ದ ರೆಫರೆನ್ನು ನಮ್ಮ ಪ್ರಿಯ ಶೆಟ್ಕರ್ ಗುರುಗಳದ್ದು!. ಈ ರೆಫೆರೆನ್ಸುಗಳ ಹಿಂಬಾಲಿಸಿ ಅಲ್ಲಿಗೆ ಹೋದ್ರೆ..ಅಲ್ಲಿ ಮತ್ತೆರಡು ನಗೆಲೇಖನ ಓದಿ ಬರಬಹುದು..ಈಗಷ್ಟೆ ಒಂದು ಲೇಖನ ಓದಿದೆ..ಸಕತ್ ಹಾಸ್ಯಭರಿತವಾಗಿತ್ತು..ಅದರಲ್ಲಿ ಒಬ್ಬ ಮಹಾನುಭಾವರು ತಾನು ಮಂಗಳೂರಿಗೆ ಹೋಗುವಾಗ ಅಲ್ಲೆಲ್ಲ ದೊಡ್ಡ ದೊಡ್ಡ ಮೋದಿ ಪೋಸ್ಟರ್ ನೋಡಿದ್ದು, ಅದರಲ್ಲಿ ವಿವೇಕಾನಂದರ ಚಿತ್ರವೂ ಇದ್ದಿದ್ದು..ಅದನ್ನು ನೋಡಿ ತನಗೆ ಹೊಟ್ಟೆ ಕಿವುಚಿ, ಸಿಟ್ಟು ಉಕ್ಕಿಬಂದು ಕೂದಲು, ಬಟ್ಟೆ ಹರಿದು ಕೊಳ್ಳುವ ಸ್ಥಿತಿಗೆ ತಲುಪಿದ್ದ ಬಗ್ಗೆ ‘ರಸ’ವತ್ತಾಗಿ ಬರೆದಿದ್ದಾರೆ. ಅಂದ ಹಾಗೆ ವಿವೇಕಾನಂದರು ಎಡಪಂಥಿಯರಾಗಿದ್ದರಂತೆ ತಮಗೆ ಗೊತ್ತಿಲ್ಲದಂತೆ!!.. ಶೆಟ್ಕರ್ ಗುರುಗಳೆ ಧನ್ಯವಾದ..ನಿಮ್ಮ ವಿಶ್ವಕೋಶದ ಕೊಂಡಿಗಳನ್ನು ಆಗಾಗ ಹಾಕುತ್ತಿರಿ..:)
Mr.Vijay, for your information, this article on Karnatakatva appeared in Avadhi too. It has found a lot of attention by many readers who are not prejudiced like you. Not all agree with views expressed in the article but no body derided it like you. If you think you are the greatest authority on all matters you are definitely making an ass of yourself. If you have something meaningful to say, speak else keep your mouth shut. Ok naa?
!!!
.ಇನ್ನೊಂದು ಸಲ ನನ್ನ ಪ್ರತಿಕ್ರಿಯೆ ಓದಿ..ನಾನು ಮಾತನಾಡಿದ್ದು ನೀವು ಲಿಂಕ್ ಕೊಟ್ಟ ಆರ್ಟಿಕಲ್ ಬಗ್ಗೆ ಅಲ್ಲ ಅನ್ನುವುದು ಅರ್ಥವಾಗುತ್ತದೆ. ನಾನು ಹೇಳಿದ್ದು, ನೀವು ಕೊಟ್ಟ ವಿಶ್ವಕೋಶದ ಲಿಂಕನ್ನು ಹಿಂಬಾಲಿಸಿ ಹೋದಾಗ ಆ ತಾಣದಲ್ಲಿ ಸಿಕ್ಕ ಇನ್ನೊಂದು ಹಾಸ್ಯ ಲೇಖನದ ಬಗ್ಗೆ.. ಮೊದಲು ಅರ್ಥ ಮಾಡಿಕೊಂಡು, ಆಮೇಲೆ ಪ್ರತಿಕ್ರಿಯೆ ನೀಡಿ!.
[If you think you are the greatest authority on all matters you are definitely making an ass of yourself.]
ನಿಮ್ಮ ಜೊತೆ ಪಾಂಡಿತ್ಯದಲ್ಲಿ ಅದ್ಹೆಗೆ ಸ್ಪರ್ಧೆ ಮಾಡಲಿಕ್ಕೆ ಆಗುತ್ತೆ ಗುರುಗಳೆ..ಆ ವಿಷಯದಲ್ಲಿ ಇಲ್ಲಿ ನೀವೇ ಹೀರೊ!..ನಿಮ್ಮ ಪಟ್ಟ ನಾವು ಕಸಿದುಕೊಳ್ಳಲು ಬರುವುದಿಲ್ಲ. ನಾವೆಲ್ಲ ಮೈಲು ದೂರ.. 🙂
.
[ If you have something meaningful to say, speak else keep your mouth shut. Ok naa?]
ವಿಷಯ ಗೊತ್ತಿಲ್ಲದೆ ಬಾಯಿ ತೆರೆಯಲು, ಯಾರ್ಯಾರೊ ಬರೆದ ಲೇಖನವನ್ನು ಕಾಪಿ-ಪೇಸ್ಟ್ ಮಾಡಿ ತಂದು ಹಾಕಲು ನಾನೇನು ನೀವಾ.. ಗುರುಗಳೆ?
“..ನಾನು ಮಾತನಾಡಿದ್ದು ನೀವು ಲಿಂಕ್ ಕೊಟ್ಟ ಆರ್ಟಿಕಲ್ ಬಗ್ಗೆ ಅಲ್ಲ ಅನ್ನುವುದು ಅರ್ಥವಾಗುತ್ತದೆ.” Why are you talking about articles that are not relevant to the subject of this essay Mr. Vijay? What is the relevance of “ಒಬ್ಬ ಮಹಾನುಭಾವರು ತಾನು ಮಂಗಳೂರಿಗೆ ಹೋಗುವಾಗ ಅಲ್ಲೆಲ್ಲ ದೊಡ್ಡ ದೊಡ್ಡ ಮೋದಿ ಪೋಸ್ಟರ್ ನೋಡಿದ್ದು, ಅದರಲ್ಲಿ ವಿವೇಕಾನಂದರ ಚಿತ್ರವೂ ಇದ್ದಿದ್ದು..ಅದನ್ನು ನೋಡಿ ತನಗೆ ಹೊಟ್ಟೆ ಕಿವುಚಿ, ಸಿಟ್ಟು ಉಕ್ಕಿಬಂದು ಕೂದಲು, ಬಟ್ಟೆ ಹರಿದು ಕೊಳ್ಳುವ ಸ್ಥಿತಿಗೆ ತಲುಪಿದ್ದ ” to the topic of Tulunadu? Isn’t your behavior that of trolls?
ಏನು ಮಾಡೊದು ಗುರುಗಳೆ..ಬಹುಶಃ ನಿಮ್ಮ ಪ್ರಭಾವ..ಸಂಗತಿ ದೋಷ ಇರಬಹುದು..ನೀವು ಭರ್ಜರಿ ಪ್ರಭಾವ ಮಾಡಿ ಬಿಟ್ಟಿದ್ದೀರಿ ಇಲ್ಲಿ ಎಲ್ಲರ ಮೇಲೆ. ನಿಮಗೆ ಧನ್ಯವಾದ ಹೇಳುವಾಗ, ಆದ ಸಂತೋಷದ ಬಗ್ಗೆ ಸ್ವಲ್ಪ ವಿವರಣೆ ಕೊಡಬೇಕಾಯಿತು..ಅದಕ್ಕೆ ಸ್ವಲ್ಪ ವಿಷಯಾಂತರವಾಯಿತು….:)
Mr. Vijay, good that you have admitted your troll-like behavior. Since you realize your mistake, you should restrain yourself from behaving like a troll in the near future. Otherwise, whatever you write will not be taken seriously.
ಹೌದು ಗುರುಗಳೆ..ನೀವು ಹೇಳಿದ್ದು ಶತ ಪ್ರತಿಶತ ಸರಿ..ಈ ಸಂಗತಿ ದೋಷದಿಂದ ಮುಕ್ತಿ ಪಡೆಯಬೇಕು..ನಾನು ನಿಮ್ಮ ಹಾಗೆ ಆಗಬಾರದು..
Mr. Vijay, you have given a promise and you should always remember to abide by it.
<>
ಶೆಟ್ಕರ್ ಸರ್,
ಈ “ಏಳೆಂಟು ಧರ್ಮ ಹಾಗೂ ಹತ್ತಾರು ಪಂಥಗಳು” ಯಾವುವು?
ಶೆಟ್ಕರ್ ರವರೇ, ಪ್ರತಿಮೆ, ಪೂಜೆ, ಮೆರವಣಿಗೆಗಳಿಲ್ಲದೆ ಆರಾಧಿಸತೊಡಗಿದರೆ ಅದು ಇಸ್ಲಾಂ ಧರ್ಮದಂತೆ ನಡೆದುಕೊಂಡಂತಾಗುವದಿಲ್ಲವೇ ? ಆಗ ಅದು ಹೇಗೆ ನಿರ್ಮತೀಯವಾಗುತ್ತದೆ.?
Are you saying Basava Dharma and Islam are one and the same? Was it not Basavanna who gave people Ishta Linga Pooja concept to those who were banned from Manuvadi temples?
ತುಳುವಿಗೆ ಕಂಟಕವಾಗಬಹುದಾಗಿದ್ದ ಹಿಂದಿಯನ್ನು ತಡೆದು ನಿಲ್ಲಿಸುವುದರಲ್ಲಿ ಕನ್ನಡ ಪ್ರಮುಖ ಪಾತ್ರ ವಹಿಸಿದೆ. ಈಗಲೂ ಹಿಂದಿಯಿಂದಲೇ ತುಳುವಿಗೆ ತೊಂದರೆ ಇರುವುದು. ಏಕೆಂದರೆ ತುಳು ಮಕ್ಕಳಿಗೆ (ತುಳುನಾಡ ಎಲ್ಲಾ ಜನರಿಗೂ) ತುಳು ಕಲಿಯಲು ಶಿಕ್ಷಣದಲ್ಲಿ ಅವಕಾಶವಿಲ್ಲ. ಆದರೆ ಹಿಂದಿಯನ್ನು ಅಗತ್ಯವಿಲ್ಲದಿದ್ದರೂ ಕಲಿಯಬೇಕು.
ಸಂವಿಧಾನದಲ್ಲಿ ಅಧಿಕೃತ ಭಾಷೆ ಸ್ಥಾನ ಪಡೆದು ಅದನ್ನು ಶಿಕ್ಷಣದಲ್ಲಿ ಇಡುವಂತಾಗಬೇಕು. ಆ ಪ್ರದೇಶದವರೆಲ್ಲರೂ ತ್ರಿಭಾಷಾ ಸೂತ್ರದಲ್ಲಿ ತುಳು ಆಯ್ದುಕೊಳ್ಳುವ ಅವಕಾಶ ಕೊಡಬೇಕು. ತುಳು ರಾಜ್ಯ ಇದಕ್ಕೆ ಪರಿಹಾರವಲ್ಲ. ಏಕೆಂದರೆ ತುಳುವರು ಮತ್ತು ಕನ್ನಡಿಗರು ತುಳುನಾಡ ಪ್ರದೇಶದಲ್ಲೂ ಸೇರಿಹೋಗಿದ್ದಾರೆ. ಕನ್ನಡವು ತುಳುವಿಗೆ ಯಾವತ್ತೂ ಪೂರಕವಾಗೇ ಇದೆ ಇರುತ್ತದೆ.
ಈ ವಾದದಲ್ಲಿ ಒಂದು ಚೂರು ಹುರುಳಿಲ್ಲ ಏಕೆಂದರೆ :
೧. ತುಳು ಭಾಷೆಯನ್ನು ಕನ್ನಡದ ಹಾಗೆ ಶಾಲೆ, ಮಠ ಇಲ್ಲವೇ ಗುರು-ಪರಂಪರೆಯಲ್ಲಿ ಕಲಿಸಿರುವ ಉದಾಹರಣೆಯೇ ಇಲ್ಲ. ತುಳುವಿನಲ್ಲಿ ಗ್ರಂಥಗಳ ರಚನೆಯಾಗಿದೆ ನಿಜ. ಆದರೆ ತುಳು ಭಾಷೆಗೆ ಕನ್ನಡ, ಸಂಸ್ಕೃತ ಭಾಷೆಗಳ ಹಾಗೆ ಶಿಕ್ಷಣ-ಪರಂಪರೆಯೇ ಇಲ್ಲ/ ಇರಲಿಲ್ಲ. ತುಳು ಬಹುತೇಕ ಕೆಲವ ಮೌಖಿಕವಾಗಿ ಅಸ್ತಿತ್ವದಲ್ಲಿ ಇರುವ ಭಾಷೆ. ಆದುದರಿಂದ ಅದರ ಯಥಾಸ್ಥಿತಿಯನ್ನು ಮುಂದುವರಿಸಲು ಅದರ ಭಾಷಿಕರು ಅದನ್ನು ಮೌಖಿಕಪರಂಪರೆಯಲ್ಲಿ ಉಳಿಸಿಕೊಳ್ಳಬೇಕು.
೨. ಹಿಂದಿ, English ಹಾಗು ಸಂಸ್ಕೃತ ಭಾಷೆಗಳ ‘ಕಂಟಕ’ ಭಾರತದ ಎಲ್ಲಾ ಭಾಷೆಗಳಿಗೂ ಇದೆ. ಕರ್ನಾಟಕದಲ್ಲಿ ಹಿಂದಿ, English ಹಾಗು ಸಂಸ್ಕೃತ ಭಾಷೆಗಳನ್ನು ಕಲಿಯಲು ಅವಕಾಶವಿರುವ ಹಲವು ಕೇಂದ್ರೀಯ ಶಾಲೆಗಳಲ್ಲಿ ಕನ್ನಡಕ್ಕೆ ಕೂಡ ಜಾಗವಿಲ್ಲ.
“ಕನ್ನಡವು ತುಳುವಿಗೆ ಯಾವತ್ತೂ ಪೂರಕವಾಗೇ ಇದೆ ಇರುತ್ತದೆ”
ಅಲ್ಲ
“ಕರ್ನಾಟಕ ರಾಜ್ಯವು ತುಳುವಿಗೆ ಯಾವತ್ತೂ ಪೂರಕವಾಗೇ ಇದೆ”.
ತುಳುವಿಗೆ ಕರ್ನಾಟಕ ರಾಜ್ಯದಲ್ಲಿ ಸರಕಾರ ಹಾಗು ಪ್ರಜೆಗಳ ಬೆಂಬಲವಿದೆ.
ಮಾಯ್ಸ ಮಹಾರಾಜರ ಮಾತಿಗೆ ನಮ್ಮ ಬೆಂಬಲ ನೀಡುವುದು ಅಗತ್ಯವಾಗಿದೆ 😛
ಇನ್ನು ತುಳು ಭಾಷೆಯು ಕನ್ನಡ ಇಲ್ಲವೇ ಸಂಸ್ಕ್ರ್ತುತದಂತಹ ಹಿರಿ-ಭಾಷೆಗಳ ಸಮಾನಕ್ಕೆ ತುಲ್ಯವಾಗಬೇಕಿದ್ದರೆ :
೧. ಅದಕ್ಕೆ ಕನ್ನಡ ಹಾಗು ಸಂಸ್ಕೃತಕ್ಕೆ ಇರುವ ಹಾಗೆ ಗುರುಪರಂಪರೆಯಂತಹ ಒನ್ದುಅ ಶಿಕ್ಷಣಪರಂಪರೆ ಹುಟ್ಟಬೇಕು.
ಕನ್ನಡಕ್ಕೆ ಲಿಂಗಾಯತ ಮಠಗಳು, ಜೈನ ಮಠಗಳು, ಇರುವ ಹಾಗೆ, ಸಂಸ್ಕೃತಕ್ಕೆ ಬ್ರಾಹ್ಮಣ-ಇತ್ಯಾದಿಗಳ ಮಠಗಳು ಇರುವ ಹಾಗೆ.
ಇದು ಬಹಳ ಮುಖ್ಯ!