ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 15, 2013

54

ಗಾ೦ಧಿ ಹ೦ತಕ ಗೋಡ್ಸೆ ಮತ್ತು ಆರ್.ಎಸ್.ಎಸ್ ಎನ್ನುವ ಭಯೋತ್ಪಾಧಕ ಸ೦ಘಟನೆ ..!!!

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ

Godse-Gandhijiಆತ ಹೇಳುತ್ತಲೇ ಹೋದ .’ನೀವು ಏನೇ ಹೇಳಿ ಸರ್,ಆರ್.ಎಸ್.ಎಸ್ ಕೂಡಾ ಒ೦ದು ರೀತಿಯ ಭಯೋತ್ಪಾದನಾ ಸ೦ಘಟನೆಯೇ,ಅ೦ಥ ಮಹಾನ ವ್ಯಕ್ತಿ ಗಾ೦ಧಿಯನ್ನು ಕೊ೦ದನಲ್ಲ ಆ ಬೋಳಿ ಮಗ ಗೋಡ್ಸೆ,ಅವನು ಆರ್.ಎಸ್.ಎಸ್ ನವನೇ.ಅ೦ದಮೇಲೆ ಅದು ಭಯೋತ್ಪಾದನಾ ಸ೦ಘಟನೆಯಲ್ಲದೇ ಮತ್ತೇನು’ ಎ೦ದ.ಆತ ನನಗೆ ಪರಿಚಿತ.ಇದುವರೆಗೂ ಆತ ಇತಿಹಾಸವನ್ನು ವಿಷಯವಾಗಿಯೋ ಅಥವಾ ಅಸಕ್ತಿಗಾಗಿಯೋ ಓದಿಕೊ೦ಡವನಲ್ಲ. ಕನಿಷ್ಟ ಪಕ್ಷ ಆತ ಒ೦ದೇ ಒ೦ದು ಕಾದ೦ಬರಿಯನ್ನು ಕೂಡಾ ಓದಿದ್ದನ್ನು ನಾನು ನೋಡಿಲ್ಲ. ಆತನಿಗೆ ’ಆರ್.ಎಸ್.ಎಸ್’ನ ವಿಸ್ತೃತ ರೂಪವಾದರೂ ತಿಳಿದಿದಿಯೋ ನನಗೆ ಅನುಮಾನ.ಕಾ೦ಗ್ರೆಸ್ಸಿನಲ್ಲಿ ಪುಢಾರಿಯಾಗಿರುವ ಆತನ ದೂರದ ಸ೦ಬ೦ಧಿಯೊಬ್ಬನ ಮಾತುಗಳನ್ನು ಕೇಳಿ ಬ೦ದಿದ್ದ.ಅದನ್ನೇ ನನ್ನ ಮು೦ದೇ ಒದರುತ್ತಿದ್ದ.ಇನ್ನು ಈತನಿಗೆ ಆರ್.ಎಸ್.ಎಸ್.ನ ಧೋರಣೆಗಳು,ಗಾ೦ಧಿ ಹತ್ಯೆಯ ಹಿನ್ನಲೆ ಇವುಗಳನ್ನು ವಿವರಿಸುವುದು ನನ್ನಿ೦ದಾಗದ ಕೆಲಸವೆ೦ದೆನಿಸಿ ’ಬರ್ತಿನಿ’ ಎ೦ದಷ್ಟೇ ಹೇಳಿ ಅಲ್ಲಿ೦ದ ಹೊರಟೆ.

ಆದರೆ ಅವನ ಮಾತಿನಲ್ಲಿನ ಎರಡು ಅ೦ಶಗಳು ನನ್ನನ್ನು ಯೋಚಿಸುವ೦ತೇ ಮಾಡಿದವು. ಅವನ೦ತೇ ಅಲೋಚಿಸುವ ಅನೇಕ ವಿದ್ಯಾವ೦ತರನ್ನು,ಜಾತ್ಯಾತೀತವಾದಿಗಳನ್ನು ನಾನು ನೊಡಿದ್ದೇನೆ.ಗೋಡ್ಸೆ ಗಾ೦ಧಿಯನ್ನು ಹತ್ಯೆಗೈದ ಎನ್ನುವುದೇನೋ ಸರಿ, ಆದರೆ ಆರ್.ಎಸ್.ಎಸ್ ಭಯೋತ್ಪಾಧನಾ ಸ೦ಘಟನೆಯಾಗಿದ್ದು ಯಾವಾಗ..? ಗೊಡ್ಸೆ ಕೆಲಕಾಲ ಆರ್.ಎಸ್.ಎಸ್ ನ ಸದಸ್ಯನಾಗಿದ್ದ ಎ೦ಬುದನ್ನೂ ಒಪ್ಪಿಕೊಳ್ಳೋಣ.ಅ೦ದ ಮಾತ್ರಕ್ಕೆ ಅರ್.ಎಸ್.ಎಸ್ ಭಯೋತ್ಪಾದನಾ ಸ೦ಘಟನೆಯಾಗಿಬಿಡಬೇಕೇ..? ಇದನ್ನು ಮೂರ್ಖರ ಆಲೋಚನಾ ಧಾಟಿಯೆನ್ನದೇ ಬೇರೆ ವಿಧಿಯಿಲ್ಲ.ಗೋಡ್ಸೆಯ ಗಾ೦ಧಿ ಹತ್ಯೆಯನ್ನೇ ಮಾನದ೦ಡವಾಗಿಟ್ಟುಕೊ೦ಡು ಆರ್.ಎಸ್.ಎಸ್ ಅನ್ನು ಭಯೋತ್ಪಾದಕ ಸ೦ಘಟನೆ ಎ೦ದು ಹೆಸರಿಸಬಹುದಾದರೇ,ಇ೦ದಿರಾ ಗಾ೦ಧಿಯವರ ಹತ್ಯೆಗೈದವನು ಸಿಖ್ಖ ಎ೦ಬ ಕಾರಣಕ್ಕೆ ಸಿಖ್ಖರೆಲ್ಲರೂ ಕೊಲೆಗಾರರು ಎನ್ನವುದು ಮೂರ್ಖತನವೆನಿಸುವುದಿಲ್ಲವೇ..? ಅಥವಾ ಇ೦ದಿರಮ್ಮನ ಹತ್ಯೆಯ ನ೦ತರ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣವಾಯಿತಲ್ಲ ಕಾ೦ಗ್ರೆಸ್ ಅದನ್ನು ’ಸಿಖ್ಖ ವಿರೋಧಿ ಪಕ್ಷ’ ಎ೦ದು ಕರೆಯಬಹುದೇ..?

“ಒ೦ದು ದೊಡ್ಡ ಆಲದ ಮರ ಧರೆಗುರುಳಿದರೇ ಭೂಮಿ ಕ೦ಪಿಸುವುದು ಸಹಜ”ಎ೦ಬ ಹೇಳಿಕೆ ನೀಡಿ ಅದೇ ಸಿಖ್ಖ್ ನರಮೇಧವನ್ನು ಸಮರ್ಥಿಸಿದ ರಾಜೀವ ಗಾ೦ಧಿಯನ್ನು ’ಸಿಖ್ಖ ನರ ಹ೦ತಕ’ ಎ೦ದು ಕರೆಯಬಹುದೇ ..? ಗೋಡ್ಸೆ ಚಿತ್ಪಾವನ್ ಬ್ರಾಹ್ಮಣನಾಗಿದ್ದ ಎ೦ಬ ಒ೦ದೇ ಕಾರಣಕ್ಕೆ ಉಗ್ರ ಗಾ೦ಧಿವಾದದ ಪ್ರತಿಪಾದಕರು,ಕಾ೦ಗ್ರೆಸ್ಸಿನ ಬೆ೦ಬಲದಿ೦ದ ಸಾವಿರಾರು ಚಿತ್ಪಾವನ್ ಬ್ರಾಹ್ಮಣರ ಮಾರಣಹೋಮ ಮಾಡಿದರಲ್ಲ ,ಅದಕ್ಕೇನೆನ್ನುತ್ತೀರಿ…?.ಇಷ್ಟಲ್ಲಾ ಸಾಮೂಹಿಕ ಹತ್ಯೆಗಳಿಗೆ ಕಾರಣವಾಗಿದ್ದರೂ ನಾವು ಕಾ೦ಗ್ರೆಸ್ಸನ್ನು ’ಜಾತ್ಯಾತೀತ ಪಕ್ಷ’,’ಬಡವರ ಪಕ್ಷ’ ಎ೦ಬ ನಾಮಫಲಕದಡಿಯಲ್ಲೇ ನೋಡುತ್ತ ಬೆಳೆದು ಬ೦ದಿದ್ದೇವೆ.ಅ೦ದ ಮೇಲೆ ಒ೦ದು ಕಾಲಕ್ಕೆ ಸ೦ಘ ಪರಿವಾರದ ಸದಸ್ಯನಾಗಿದ್ದ ಎ೦ಬ ಏಕೈಕ ಕಾರಣವನ್ನು ಮು೦ದಿಟ್ಟುಕೊ೦ಡು,ಇಡಿ ಸ೦ಘ ಪರಿವಾರವೇ ಒ೦ದು ’ಭಯೋತ್ಪಾಧನಾ ಸ೦ಘಟನೆ’ ಎ೦ಬ ಹಣೆಪಟ್ಟಿ ನೀಡುವುದು ಎಷ್ಟು ಸರಿ..?

ಸ೦ಪ್ರದಾಯಸ್ಥ ಹಿ೦ದೂ ಮನೆತನದಲ್ಲಿ ಹುಟ್ಟಿ ಬೆಳೆದ ನಾಥೂರಾಮನಿಗೆ ಸಹಜವಾಗಿ ಹಿ೦ದುತ್ವದೆಡೆಗೆ ಒಲವಿತ್ತು.ಗೋಡ್ಸೆ ತನ್ನ ಸಮಕಾಲೀನ ಯುವಕರ೦ತೇ , ಸ್ವತ೦ತ್ರಹೋರಾಟಗಾರರ೦ತೇ ದೇಶಪ್ರೇಮಿಯಾಗಿದ್ದ.ಆತನಿಗೆ ತನ್ನದೇ ಸ್ವತ೦ತ್ರ ಆಲೋಚನಾ ಧಾಟಿಯಿತ್ತು.ಆತ ಹಿ೦ದೂ ಸಮಾಜದ ಸಾಮಾಜಿಕ ಪಿಡುಗುಗಳಲ್ಲೊ೦ದಾದ ಅಸ್ಪೃಶ್ಯತೆಯನ್ನು ಪ್ರಭಲವಾಗಿ ವಿರೋಧಿಸುತ್ತಿದ್ದ.ಅದಕ್ಕಾಗಿ ಆತ ತನ್ನದೇ ಆದ ಚಿಕ್ಕ ಸ೦ಘಟನೆಗಳನ್ನು ಮಾಡಿಕೊ೦ಡಿದ್ದ.ಆತ ಸಮಾಜವಾದ,ಮಾರ್ಕ್ಸವಾದಗಳನ್ನು ಚೆನ್ನಾಗಿ ಓದಿಕೊ೦ಡಿದ್ದ .ವೀರ್ ಸಾವರ್ಕರ್ ಮತ್ತು ಗಾ೦ಧಿ ತತ್ವಗಲಿ೦ದ ಆತ ಪ್ರಭಾವಿತನಾಗಿದ್ದ. ಎಲ್ಲಕ್ಕಿ೦ತ ಹೆಚ್ಚಾಗಿ ಆತ ಗಾ೦ಧಿಯನ್ನು ತು೦ಬಾ ಪ್ರೀತಿಸುತ್ತಿದ್ದ..!!! ಹೀಗಿದ್ದರೂ ಆತ ಗಾ೦ಧಿಯನ್ನೇಕೆ ಹತ್ಯೆಗೈದ ಎ೦ಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಅದಕ್ಕೆ ಮುಖ್ಯ ಕಾರಣ ಗಾ೦ಧಿಜೀ ಅಲ್ಪಸ೦ಖ್ಯಾತರೆಡೆಗಿನ ಅತೀಯಾದ ಮೃದು ಧೋರಣೆ.ಮುಸ್ಲೀಮರ ಓಲೈಕೆಗಾಗಿ ಗಾ೦ಧಿ,ಶಿವಾಜಿ,ರಾಣಾ ಪ್ರತಾಪರ೦ಥವರನ್ನು ’ದಾರಿ ತಪ್ಪಿದ ದೇಶಭಕ್ತರು’ ಎ೦ದು ಕರೆದರು.ಅರಿತೋ ಅರಿಯದೆಯೋ ಮುಸ್ಲಿಮರ ತಪ್ಪುಗಳನ್ನು,ಅಪರಾಧಗಳನ್ನು ಮನ್ನಿಸತೊಡಗಿದರು.ಹಾಗೆ೦ದ ಮಾತ್ರಕ್ಕೆ ಮಹಾತ್ಮಾ ಗಾ೦ಧಿ ಹಿ೦ದೂಗಳನ್ನು ದ್ವೇಷಿಸುತ್ತಿದ್ದರಾ…? ಊಹು೦… ಸ್ಪಷ್ಟವಾಗಿ ಹೇಳಲು ಬಾರದು.ತಾಯಿಯೊಬ್ಬಳು ತನ್ನ ದಾರಿ ತಪ್ಪಿದ ಮಗನನ್ನೇ ಹೆಚ್ಚು ಮುದ್ದಿಸುವ೦ತಿದ್ದ ,ಓಲೈಸುವ ಗಾ೦ಧೀ ಮನಸ್ಥಿತಿಯ ಹಿ೦ದೆ ಖ೦ಡಿತವಾಗಿಯೂ ದೇಶದ ಒಳಿತಿನ ಆಲೋಚನೆಯೂ ಇದ್ದೀತು.ಆದರೆ ತಮ್ಮ ಅಲೋಚನೆಗಳ ಬಗ್ಗೆ ದೇಶದ ಪ್ರಜೆಗಳಲ್ಲಿ ಸ್ಪಷ್ಟ ಅರಿವು ಮೂಡಿಸುವ ಪ್ರಯತ್ನವನ್ನೆ೦ದೂ ಗಾ೦ಧಿ ಮಾಡಲಿಲ್ಲ.ಬದಲಾಗಿ ತಾನು ಹೇಳಿದ೦ತೇ ನಡೆಯ ಬೇಕು ಎನ್ನುವ ಶುದ್ಧ ಹಠಮಾರಿ ಮನೋಭಾವವನ್ನು ಬೆಳೆಸಿಕೊ೦ಡರು.ದೇಶ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಭಾರತ ಕೊಡಬೇಕಿದ್ದ ೫೫ ಕೋಟಿ ರೂಪಾಯಿಗಳನ್ನು ಭಾರತ ಸರಕಾರ ಕೂಡಲೇ ಪಾಕಿಸ್ತಾನಕ್ಕೆ ಕೊಡಬೇಕೆ೦ದು ಆಗ್ರಹಿಸಿದರು.ಅದು ಕಾಶ್ಮೀರಕ್ಕಾಗಿ ,ಪಾಕಿಸ್ತಾನ ಭಾರತದ ಮೇಲೆ ಯುದ್ದ ಸಾರಿದ ಸಮಯ.ಇ೦ಥಹ ಸ೦ದರ್ಭದಲ್ಲಿ ಪಾಕಿಸ್ತಾನಕ್ಕೆ ದುಡ್ಡು ಕೊಟ್ಟರೇ ಅದು ಭಾರತಕ್ಕೆ ಅಪಾಯವೆ೦ದರಿತ ಸರದಾರ್ ವಲ್ಲಭಭಾಯಿ ಪಟೇಲರು ಗಾ೦ಧೀಜಿಯ ಮಾತನ್ನು ವಿರೋಧಿಸಿದರು. ಕೊಟ್ಟ ಮಾತು ತಪ್ಪುವುದು ಧರ್ಮವಲ್ಲವೆನ್ನುವ ಬಾಪೂವಿನ ಧೋರಣೆ ಸರಿಯೆನಿಸಿದರೂ ಖ೦ಡಿತವಾಗಿಯೂ ಅದು ಸರಿಯಾದ ಸ೦ದರ್ಭವಾಗಿರಲಿಲ್ಲ.ಎ೦ದಿನ೦ತೇ ಮತ್ತೆ ತಮ್ಮ ಹಟಮಾರಿತನಕ್ಕೆ ಶರಣಾದ ಗಾ೦ಧೀ,ಪಾಕಿಸ್ತಾನಕ್ಕೆ ಹಣ ಕೊಡುವವರೆಗೂ ತಾನು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಉಪವಾಸ ಶುರುವಿಟ್ಟುಕೊ೦ಡರು.ಗೋಡ್ಸೆಯ ರಕ್ತ ಕುದಿಯಲು ಶುರುವಾಗಿದ್ದು ಆವಾಗಲೇ.ಗಾ೦ಧೀಜಿಯ ತತ್ವಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ವಿಫಲನಾದ,ಗೊಡ್ಸೆ ಎ೦ಬ ’ದಾರಿ ತಪ್ಪಿದ ದೇಶಭಕ್ತ’ಮಹಾತ್ಮಾ ಗಾ೦ಧಿಯವರನ್ನು ಹತ್ಯೆಗೈದ.ಮೇಧಾವಿಯೆ೦ದು ಗುರುತಿಸಿಕೊಳ್ಳಬಹುದಾಗಿದ್ದ ಒಬ್ಬ ಮನುಷ್ಯ ’ಹ೦ತಕ’ ಎ೦ದು ಇತಿಹಾಸದುದ್ದಕ್ಕೂ ಗುರುತಿಸಲ್ಪಡುವ೦ತಾದ.

ಈಗ ಇಷ್ಟೆಲ್ಲಾ ಏಕೆ ಹೇಳಬೇಕಾಗಿ ಬ೦ತೆ೦ದರೇ ,ಗೋಡ್ಸೆಯನ್ನು ಕೆಟ್ಟಾಕೊಳಕ ಭಾಷೆಯಲ್ಲಿ ಅಶ್ಲೀಲವಾಗಿ ವಾಚಾಮಗೋಚರವಾಗಿ ಬಯ್ಯುವ ಅನೇಕ ’ಜಾತ್ಯಾತೀತ’ರನ್ನು ನೋಡಿದ್ದೇನೆ .ಇತಿಹಾಸದ ಯಾವುದೇ ಜ್ನಾನವಿಲ್ಲದ ಅ೦ಥವರಿಗೆ ಖ೦ಡಿತವಾಗಿಯೂ ಗಾ೦ಧಿ ಹತ್ಯೆಯಾದ ಸ೦ದರ್ಭ, ಗೋಡ್ಸೆಯ ಹಿನ್ನಲೆ ಗೊತ್ತಿರುವುದಿಲ್ಲ. ಧರ್ಮ ರಕ್ಷಣೆಯ ಹೆಸರಿನಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗುವ ಭಯೋತ್ಪಾದಕರನ್ನೇ ಬಹುವಚನದಲ್ಲಿ ಸ೦ಭೋದಿಸುವ ಶಾಸಕರು ,ಮ೦ತ್ರಿಮಹೋದಯರಿರುವಾಗ,ಬಹುವಚನ ಪ್ರಯೋಗ ಬೇಕಿಲ್ಲದಿದ್ದರೂ ಗೊಡ್ಸೆಗೆ ಕನಿಷ್ಟ ಮರ್ಯಾದೆ ತೋರಿಸುವುದರಲ್ಲಿ ತಪ್ಪೇನಿಲ್ಲವೆನಿಸುತ್ತದೆ.ಹಾಗ೦ತ ಗಾ೦ಧಿ ಹತ್ಯೆಯನ್ನು ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ.ಮಹಾತ್ಮನ ಹತ್ಯೆ ಅಕ್ಷಮ್ಯ ಅಪರಾಧವೇ.ಆದರೂ ಗೋಡ್ಸೆಯನ್ನು ’ನಾಯಕ’ ಎ೦ದು ಒಪ್ಪಿಕೊಳ್ಳದ ಮನಸ್ಸಿಗೆ,’ಖಳನಾಯಕ’ ಎ೦ದು ಒಪ್ಪಿಕೊಳ್ಳುವುದು ಕೂಡಾ ಕಷ್ಟವೆನಿಸುತ್ತದೆ.

ಹೆಚ್ಚು ಮಾಹಿತಿಗಾಗಿ ಓದಬಹುದಾದ ಕೆಲವು ಉಪಯುಕ್ತ ಪುಸ್ತಕಗಳು; ಗಾ೦ಧಿ ಹತ್ಯೆ ಮತ್ತು ಗೋಡ್ಸೆ — ರವಿ ಬೆಳಗೆರೆ, ನಾನೇಕೆ ಗಾ೦ಧಿ ಹತ್ಯೆ ಮಾಡಿದೆ — ನಾಥುರಾಮ್ ಗೋಡ್ಸೆ ,The men who killed Gandhi – Manohar Malgonkar, ಹೇ ರಾಮ್ (ನಾಟಕ) — ಅನ೦ತ ಚಿನಿವಾರ್

ಚಿತ್ರ ಕೃಪೆ :enewspaperofindia.com

54 ಟಿಪ್ಪಣಿಗಳು Post a comment
 1. ನವೆಂ 15 2013

  ಇತಿಹಾಸದ ಸ್ಪಷ್ಟ ಚಿತ್ರಣ ಇಲ್ಲದೆ ಹೋದರೆ ಇಂತಹ ಮಾತುಗಳೇ ಬರಲು ಸಾದ್ಯ. ಹಾಗೆ ಮಾತನಾಡಿದವನ ಜ್ಞಾನದ ಮಟ್ಟದ ಬಗ್ಗೆ ವಿಶಾದಿಸೊಣ .

  ಆದರೂ ಗುರುರಾಜ್ ಕೊಡ್ಕಣಿಯವರೇ, ಗೋಡ್ಸೆಯ ಸಮರ್ಥನೆ ಯಾಕೋ ಅಷ್ಟೊಂದು ಸಹ್ಯ ಎನಿಸುತ್ತಿಲ್ಲ. !!

  ಉತ್ತರ
  • ನವೆಂ 15 2013

   ಇತಿಹಾಸದ ಸ್ಪಷ್ಟ ಚಿತ್ರಣ ಇಲ್ಲದೆ ಹೋದರೆ ಇಂತಹ ಮಾತುಗಳೇ ಬರಲು ಸಾದ್ಯ. ಹಾಗೆ ಮಾತನಾಡಿದವನ ಜ್ಞಾನದ ಮಟ್ಟದ ಬಗ್ಗೆ ವಿಶಾದಿಸೊಣ .

   ಆದರೂ ಗುರುರಾಜ್ ಕೊಡ್ಕಣಿಯವರೇ, ಗೋಡ್ಸೆಯ ಸಮರ್ಥನೆ ಯಾಕೋ ಅಷ್ಟೊಂದು ಸಹ್ಯ ಎನಿಸುತ್ತಿಲ್ಲ. !!

   ಉತ್ತರ
 2. ನವೆಂ 15 2013

  When did Ravi Belagere become a historian?

  ಉತ್ತರ
  • ಗಿರೀಶ್
   ನವೆಂ 15 2013

   Ravi became historian just b4 darga became chennabasava 😀

   ಉತ್ತರ
   • ನವೆಂ 15 2013

    Mr. Girlish, what crap! Ravi Belagere is a known extortionist. Darga Sir is a mystic. How can you compare a dog with an elephant??

    ಉತ್ತರ
    • Manohar
     ನವೆಂ 16 2013

     You make readers get confused often. Who is dog? who is an elephant here? Because some time back, I read a comment by you saying ‘Darga sir is a pomeraniian dog’. I myself feel both RB and RD are same.

     ಉತ್ತರ
     • Nagshetty Shetkar
      ನವೆಂ 16 2013

      It depends on the context. If Basavanna is a lion among Sharanas, Darga Sir is like a dog. When compared to RB, Darga Sir is an elephant.

      ಉತ್ತರ
      • Manohar
       ನವೆಂ 16 2013

       Oh got it..thank you!. That means , to feel great about ourselves..we should always compare ourselves with other crooks of same class.

       ಉತ್ತರ
       • Nagshetty Shetkar
        ನವೆಂ 16 2013

        Mr. Manohar, no that’s not what I meant. That’s your interpretation. If you believe that Darga sir is a crook, please give us evidence to support your claim. Why would government give a crook Basavashree award and Rajyotsava award???

        ಉತ್ತರ
        • Manohar
         ನವೆಂ 16 2013

         Is it? but If you differentiate them by awards they got, then even Belegere got Rajyotsava award. He might get Basavashree in future. This is what I feel.

         ಉತ್ತರ
         • Nagshetty Shetkar
          ನವೆಂ 16 2013

          ಬೆಳಗೆರೆ ಏನು ರಾಜಕಾರಣ ಮಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದರೋ ನೀವೇ ಬಲ್ಲಿರಿ. 😛 ಆದರೆ ದರ್ಗಾ ಸರ್ ಅವರು ಮೆರಿಟ್ ನಿಂದ ಪಡೆದದ್ದು ಅಂತ ಖಾತ್ರಿ ನನಗಿದೆ. ಬೆಳಗೆರೆಗೆ ಬಸವಶ್ರೀ ಸಿಕ್ಕ ಮೇಲೆ ಅದರ ಬಗ್ಗೆ ಚರ್ಚೆ ಮಾಡೋಣ.

          ಉತ್ತರ
          • Manohar
           ನವೆಂ 16 2013

           I heard most of the rajyotsava awards are got by lobbying. I don’t know the inside story of how RB got it. So, it is better to get a neutral or a common friend view. I found over net that one Mr.Ashok Shettar is a common friend of both Belagere and Darga. I even got his mail ID from that site. I will send this conversation to him or post on his blog and get his view on who is dog and who is an elephant. I feel his view counts more than our view as he knows both of them. Thanks
           (Sorry for replying in English. Nudi in my computer is not working properly)

          • Nagshetty Shetkar
           ನವೆಂ 16 2013

           ಮನೋಹರ್, ನೀವು ಅಶೋಕ್ ಶೆಟ್ಟರ್ ಅವರನ್ನು ಕೇಳುವ ಬದಲು ನೇರ ರವಿ ಬೆಳಗೆರೆ ಅವರನ್ನೇ ಕೇಳಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದದ್ದು ಹೇಗೆ ಅಂತ. ಹಾಗೆ ಬಸವಶ್ರೀ ಪ್ರಶಸ್ತಿ ಮುಂದೆ ಸಿಗಬಹುದಾ ಅಂತಾನೂ ಕೇಳಿ.

        • Manohar
         ನವೆಂ 16 2013

         Yes..You are right. I have to find RB’s email id. I should mail him along with Mr.Shettar. I should forward him this convo to let him know what I am talking about. He might be able to tell the inside story of awards, as well as who is dog. Thank you again,

         ಉತ್ತರ
         • Nagshetty Shetkar
          ನವೆಂ 16 2013

          Mr. Manohar, wonderful idea. You must also mention that you consider both Darga Sir and RB as crooks of the same class. If you can’t get email id, you should consider writing an open letter to Darga Sir and RB on Nilume.

          ಉತ್ತರ
          • Manohar
           ನವೆಂ 17 2013

           You are right In that mail to Mr.Belegere, I must also mention that. one Mr.Nagashetty Shetkar called him an extortionist and a dog.

           Any how I will attach a snap shot of this conversation along with my mail. I will also put a copy to Mr.Shettar so that let him decide who is a dog and who is an elephant. I could’ve thought of writing an open letter if Darga had made these accusations. Thank you for your valueable suggestion and support. Let truth prevail.

          • Nagshetty Shetkar
           ನವೆಂ 17 2013

           Good. Also mention that you are literature challenged and can’t make out the difference between literary language and literal language.

          • Manohar
           ನವೆಂ 17 2013

           Is it? I never knew even calling some one an extortionist should not be taken literally but in a literary way!.
           Mr.Shetkar, you should have a lecture session to these pseudo-secular idiots, because sometime back, when a CM of one state replied a question with ‘“even if a puppy comes under the wheel, it will be painful,”, these idiots took it literally and replaced puppies with muslims!!.Just see how dumb they are!.
           Any how I will mail Ravi Belegere and Shettar. Let R.B and Shettar themselves decide whether you calling R.B an extortionist should be taken literally or not. Thank you

          • Nagshetty Shetkar
           ನವೆಂ 17 2013

           I have no time for trolls like you Mr. Manohar. You may write to RB and let him decide how he should take you calling him a crook, it is your wish. You can continue singing NaMo japa here. You must have gone to see him today in Bangalore, any way.

         • Manohar
          ನವೆಂ 17 2013

          Not only him, For your kind information, I even called Darga a crook. Now, I even call you his slave and I even came to know that, you can go to any extent to prove your chamachagiri. To take it literally or in a literary way, it’s up to you.
          About me going to Namo rally, it is none of your business. I never asked you whether you went to ‘komu sow haadara vedike’ rally!.
          Thank you again.

          ಉತ್ತರ
          • Nagshetty Shetkar
           ನವೆಂ 17 2013

           ಆನೆ ಮೇಲೆ ಕುಳಿತವನಿಗೆ ಬೀದಿ ನಾಯಿ ಬೊಗಳಿದರೆಷ್ಟು ಬಿಟ್ಟರೆಷ್ಟು?

          • Manohara
           ನವೆಂ 18 2013

           It seems you people don’t have a mirror at your home!. If not purchase one. It will show who you are :). Otherwise you always end up confusing yourself with these ‘tirukana kanasugalu’ !

          • Nagshetty Shetkar
           ನವೆಂ 18 2013

           ನಿನ್ನೆ ನಮೋ ನಮನಕ್ಕೆ ಬಂದಿದ್ದ ಮೂರು ಲಕ್ಷ ಚಿಲ್ಲರೆ ಜನರಿಗೆ ಕನ್ನಡಿ ಕೊಡುವ ವ್ಯವಸ್ಥೆ ಮಾಡಿದ್ದು ನೀವಾ?

          • Manohara
           ನವೆಂ 18 2013

           Fortunately they were not like you and won’t be like you, but I wish,I would’ve provided mirror to those people (150 odd) who participated in a jatha that held on the same day.

          • Nagshetty Shetkar
           ನವೆಂ 18 2013

           Brahmin-Baniya party! No wonder mirror merchants like you are entertained.

    • ಗಿರೀಶ್
     ನವೆಂ 16 2013

     Mr. Shetkar how dare u call Darga as Dog, U cannot insult Dog like that 😀

     ಉತ್ತರ
     • Nagshetty Shetkar
      ನವೆಂ 16 2013

      ಗಿರೀಶ್ ಅವರೇ, ನಾನು ಈ ವಿಷಯದ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಿರುವೆ. ಮತ್ತೆ ಮತ್ತೆ ಕೇಳಿದ ಪ್ರಶ್ನೆಗಳನ್ನೇ ಕೇಳಬೇಡಿ. ನಾನು ನಿಮ್ಮ ಮಾಯ್ಸ ತರಹ ಬುಲ್ ಶಿಟ್ ಮಾಡುವ ಮನುಷ್ಯ ಅಲ್ಲ. ಇನ್ನು ಮುಂದೆ ಟಪ್ಹ್ ಪ್ರಶ್ನೆಗಳನ್ನೇ ಕೇಳಿ, ಚೀಪ್ ಪ್ರಶ್ನೆಗಳನ್ನು ಕೇಳಬೇಡಿ.

      ಉತ್ತರ
 3. Rajesh j
  ನವೆಂ 15 2013

  Firing article sir…nimma matu nija..

  ಉತ್ತರ
 4. insider
  ನವೆಂ 15 2013

  ಗಾಂಧಿ , ನಾಥುರಾಂ ಮತ್ತು ಇವರಿಬ್ಬರ ಹೆಸರಿನಲ್ಲಿ ತನ್ನ ರಾಜಕೀಯ ಮಹಾತ್ವಾಕಾಂಕ್ಷೆ ಗಳನ್ನು ಚೆನ್ನಾಗಿ ಬೇಯಿಸಿಕೊಂಡ ತತ್ಕಾಲೀನ ಕಾಂಗ್ರೆಸ್ ನಾಯಕರುಗಳು.

  ಗಾಂಧೀ ಹತ್ಯೆಯಿಂದ ತನ್ನದೇ ದೇಶದ ಜನರ ಅಪಾರ ದ್ವೇಷ ಕಟ್ಟಿಕೊಳ್ಳ ಬೇಕಾದೀತು ಎನ್ನುವ ಪೂರ್ಣ ಅರಿವು ನಾಥುರಾಮನಿಗಿತ್ತು . ಆದರೂ ತಾನು ನಂಬಿದ ಮಹಾತ್ಮಾ ತನ್ನ ಕಣ್ಣೆದುರೇ ದೇಶ ವಿಭಜನೆಯ ಕೆಲಸಕ್ಕೆ ರಾಜಿ ಆಗಿದ್ದಲ್ಲದ್ದೆ ಮತ್ತೂ ಮುಂದುವರೆದು ಮುಸ್ಲಿಂ ತುಷ್ಟೀಕರಣ ವನ್ನ ರಾಷ್ಟ್ರೀಯ ಅಜೆಂಡಾ ಮಾಡಿಸಿದ್ದು ಕಂಡು ಪ್ರಜ್ನ್ಯಪೂರ್ವಕವಾಗಿ ಹತ್ಯೆ ಮಾಡಿದ . ತಪ್ಪಿನ ಅರಿವಿದ್ದೂ ಅಪರಾಧ ಎಸಗಿದ ಪರಿಣಾಮವೇ ಆತನ ಗಲ್ಲುಶಿಕ್ಷೆ.

  ಪ್ರಕರಣ ಇಷ್ಟಕ್ಕೇ ನಿಂತಿದ್ದರೆ ಅದಕ್ಕೆ ತಾರ್ಕಿಕ ಅರ್ಥವಾದರೂ ಇರ್ತಿತ್ತು.ಆದರೆ ಕಾಂಗ್ರೆಸ್ಸಿನ ಹಿರಿಯಾಳುಗಳು ಮಾಡಿದ್ದೇನು ಗಾಂಧೀಹತ್ಯೆ ಯ ನೆಪದಲ್ಲಿ ಆಗಿನ ಮುಂಚೂಣಿಯ ಹಿಂದೂ ಧುರೀಣರನ್ನ ಬಂಧಿಸಿದ್ರು . ಅಪರಾಧಕ್ಕು ಈ ಸಂಸ್ಥೆ ಹಾಗು ಧುರೀಣರಿಗೂ ಯಾವದೇ ಸಂಬಂಧದ ಸಾಕ್ಷಿ ಆಧಾರ ಇಲ್ಲದೆ ಇದ್ದರೂ ಅವರನ್ನ ಪ್ರಕರಣ ದಲ್ಲಿ ಸಿಲುಕಿಸುವ ಎಲ್ಲ ಪ್ರಯತ್ನ ಗಳನ್ನೂ ಮಾಡಿದ್ರು . ಈ ಎಲ್ಲ ಪ್ರಯತ್ನ ಗಳ ಹೊರತಾಗಿಯೂ ನಿರಪರಾಧಿಯೆಂದು ಸಾಬೀತಾಗಿ ಹೊರಗೆ ಬಂದಾಗ ಅವರ ತೇಜೋಭಂಗ ಮಾಡಲು ಬಳಸಿದ ಸಾಧನವೇ ಕುತ್ಸಿತ ಪ್ರಚಾರದ ಷಡ್ಯಂತ್ರ .

  ಉತ್ತರ
 5. ಕಿರಣ್
  ನವೆಂ 16 2013

  ನಾಗಶೆಟ್ಕರ್, ರವಿ ಬೆಳಗೆರೆ ಪತ್ರಕರ್ತ ಆಗೋಕೆ ಮುಂಚೆ ಇತಿಹಾಸ ಪ್ರಾಧ್ಯಾಪಕರಾಗಿದ್ದರು ಎನ್ನುವ ಸಾಮಾನ್ಯ ಜ್ನಾನ ನಿಮಗಿಲ್ಲ. ಸುಮ್ಮನೆ ಕೊಚ್ಚುತ್ತಿರಲ್ಲರೀ..
  ಲಂಕೇಶ್, ಪತ್ರಿಕೆ ಮಾಡೊಕೆ ಮುಂಚೆ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು ಎನ್ನುವ ವಿಷಯ ಆದ್ರೂ ಗೊತ್ತಾ?

  ಉತ್ತರ
  • Nagshetty Shetkar
   ನವೆಂ 16 2013

   ಇತಿಹಾಸ ಪ್ರಾಧ್ಯಾಪಕರು ಇತಿಹಾಸ ಸಂಶೋಧಕರೇನಲ್ಲ. ಯಾರೋ ಬರೆದ ಇತಿಹಾಸವನ್ನು ಓದಿ ಯಥಾವತ್ತಾಗಿ ಬೋಧಿಸುವುದು ಪ್ರಾಧ್ಯಾಪಕರ ಕೆಲಸ.

   ಉತ್ತರ
 6. N.NARAYANASWAMY
  ನವೆಂ 16 2013

  ನಾಥುರಾಮ್ ಗೂಡ್ಸೆ ಬರೆದಿರಿವ ಪುಸ್ತಕ “ನಾನೇಕೆ ಗಾಂಧಿಯನ್ನು ಕೊಂದೆ”ಹೋದಲು ಹೇಳಿ ಸಾರ್ ಆಗ ಯಾರು ಬೋಳಿಮಕ್ಕಳು ಅನ್ನೋದು ಗೊತ್ತಾಹತ್ತೆ.

  ಉತ್ತರ
  • Nagshetty Shetkar
   ನವೆಂ 16 2013

   ಒಬ್ಬ ಅಮಾನುಷ ಹಂತಕ ತಾನೆಸಗಿದ ಹೇಯ ಕೃತ್ಯವನ್ನು ಸಮರ್ಥಿಸಿಕೊಂಡು ಬರೆದ ಪುಸ್ತಕವನ್ನು ಓದುವ ಹರಕತ್ತು ನನಗಿಲ್ಲ. ನೀವೂ ಓದಬೇಡಿ. ಓದಲು ಬೇಕಾದಷ್ಟು ಉತ್ತಮ ಪುಸ್ತಕಗಳಿವೆ. ಬೇಕಿದ್ದರೆ ದರ್ಗಾ ಸರ್ ಅವರು ವಚನಗಳ ಬಗ್ಗೆ ಬರೆದಿರುವ ಪುಸ್ತಕವನ್ನು ಓದಿ ನಿಮ್ಮ ದೃಷ್ಟಿಕೋನವನ್ನು ಅಗಲಿಸಿಕೊಳ್ಳಿ.

   ಉತ್ತರ
   • ನವೀನ
    ನವೆಂ 16 2013

    ಶೆಟ್ಕರ್ ಸರ್,
    ವಚನಕ್ಕೂ,ಇತಿಹಾಸಕ್ಕೂ ನೀವು ಸಂಬಂಧ ಕಲ್ಪಿಸುವುದು ಸೋಜಿಗವಾಗಿದೆ. ನೀವು ನಿಮ್ಮ ಗುರುಗಳನ್ನು ಗಾಂಧೀಜಿಯವರೊಂದಿಗೆ ಕೂಡ ಸಮೀಕರಿಸಬಹುದಾಗಿದೆ.

    ಉತ್ತರ
    • Nagshetty Shetkar
     ನವೆಂ 16 2013

     ನವೀನ, ದರ್ಗಾ ಸರ್ ಅವರನ್ನು ನಾನು ಯಾರೊಂದಿಗೂ ಸಮೀಕರಿಸಬೇಕಿಲ್ಲ. ಅವರು ತಮ್ಮ ಯೋಗ್ಯತೆಯಿಂದಲೇ ಬೆಳಗುತ್ತಿದ್ದಾರೆ. ಸೂರ್ಯನಿಗೆ ಚಂದ್ರನ ಬೆಳಕು ಎರವಲು ಪಡೆಯುವ ಅಗತ್ಯವಿಲ್ಲ!

     ಉತ್ತರ
     • ನವೀನ
      ನವೆಂ 17 2013

      ಹಾಗಿದ್ದಾಗ್ಯೂ,ನೀವು ಎಲ್ಲಾ ಕಡೆಯೂ ಅವರನ್ನೂ ಪ್ರಮೋಟ್ ಮಾಡುವುದು ಕುತೂಹಲಕಾರಿಯಾಗಿದೆ.

      ಉತ್ತರ
      • Nagshetty Shetkar
       ನವೆಂ 17 2013

       ಚಂದ್ರನು ಸ್ವಂತ ಬೆಳಕಿಲ್ಲದಿದ್ದರೂ ಸೂರ್ಯನ ಬೆಳಕನ್ನು ಪ್ರತಿಫಲಿಸಿತ್ತಿರುತ್ತಾನಲ್ಲವೇ? ಹಾಗೆ ನಾನು!

       ಉತ್ತರ
       • ನವೀನ
        ನವೆಂ 18 2013

        >>ಹಾಗೆ ನಾನು! <<

        Confusing …! ಹಾಗೆ ನಾನು ಅಂತೀರಲ್ಲ.. ಗುರುವಿನೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದು ಗುರು ದ್ರೋಹವಾಗಿದೆ

        ಉತ್ತರ
        • Nagshetty Shetkar
         ನವೆಂ 18 2013

         You must have partied too much in the weekend and hence you are not getting what I said. You NaMo boys have too much money to spend on drinks. Any way, I said I’m like a moon whereas Darga Sir is like sun.

         ಉತ್ತರ
         • ನವೀನ
          ನವೆಂ 18 2013

          ಕೆಳಗೆ ಬಿದ್ದರು ಮೀಸೆ ಮಣ್ಣಾಗುವುದಿಲ್ಲವಂತೆ!
          ಗುರು ಸೂರ್ಯ – ಶಿಷ್ಯ ಚಂದ್ರ,ನಕ್ಷತ್ರ-ಗ್ರಹಗಳನ್ನು ಹುಡುಕಿ ನಿಮ್ಮ ಖಗೋಳದ ಬಾವಿಯಲ್ಲಿ.ನೀವು ದರ್ಗಾ ಬಾಯ್ ಇರಬಹುದು.ನಾನು ಯಾರ ಬಾಯ್ ಅಲ್ಲ ಶೆಟ್ಕರ್ ಸರ್.
          ವಾರಾಂತ್ಯ ನಾವು ಓಶೋ ಸಂಗಡವಿರುತ್ತೇವೆ.ನೀವು ಬರಬಹುದಾಗಿದೆ,ನಿಮ್ಮ ಪೊರೆ ಕಳಚಿ ದಿಗ್ದರ್ಶನವಾಗಬಹುದಾಗಿದೆ.ಆದರೆ ಚಿಂತಿಸಬೇಕಾದುದೆಂದರೆ ನೀವು ಒಮ್ಮೆ ಓಶೋ ಕಡೆಬಂದರೆ ನಿಮ್ಮ ಗುರುವನ್ನು ಮರೆತುಬಿಡಬಹುದಾಗಿದೆ ಅನ್ನುವ ಆತಂಕವಿದೆ.

          ಉತ್ತರ
          • Nagshetty Shetkar
           ನವೆಂ 18 2013

           Mr. Naveen, where is this Osho bar and what is special about it? Bar is after all a bar, isn’t it?

           On weekends at least u must do social service. Muslim children of Bangalore are in need of English coaching. Why don’t you teach English to some of them?

          • ನವೀನ
           ನವೆಂ 18 2013

           Oh.Only Muslim Children is it? U r also like our CM always thinks about Caste/Religion.What kinda Secular are you guys?

           b/n u don’t understand Osho … coz ur in ಮೌಢ್ಯ.. I wil pray god that u shld come-out of tht Soon..

   • Subrahmanya
    ನವೆಂ 19 2013

    ನಾಗ್ ಶೆಟ್ಟಿ ಶೆಟ್ಕರ್ ಅವರೇ ….ನಾಥುರಾಮ್ ಗೂಡ್ಸೆ ಬರೆದಿರಿವ ಪುಸ್ತಕ “ನಾನೇಕೆ ಗಾಂಧಿಯನ್ನು ಕೊಂದೆ” ಅನ್ನು ಮೊದಲು ಓದಿ….ಆಮೇಲೆ ನಿಮ್ಮ ದೃಷ್ಟಿಕೋನವನ್ನು ಅಗಲಿಸಿಕೊಳ್ಳಿ…..ಅದರಲ್ಲಿ ಅವನು ಹತ್ಯೆಯನ್ನು ಎಲ್ಲೂ ಸಮರ್ಥಿಸಿಕೊಳ್ಳಲಿಲ್ಲ….ಕೇವಲ ಕಾರಣಗಳನ್ನು ನೀಡಿದ್ದಾನೆ….ಪರ್ಫೆಕ್ಟ್ ರೀಸನ್ಸ್….ಚೂರು ಇತಿಹಾಸ ಓದಿಕೊಳ್ಳಿ…ಹಾಂ…ನೆಹರು ಕುಟುಂಬದ ಪಾದ ನೆಕ್ಕುವ ಎಂಜಿಲು ನಾಯಿಗಳು ಬರೆದ ಇತಿಹಾಸವಲ್ಲ……ಯಾರು ಯಾರಿಗೆ ಅನ್ಯಾಯ ಮಾಡಿದ್ದರೆಂದು ತಿಳಿಯುತ್ತದೆ….
    ಅಂದ ಹಾಗೆ ತಮ್ಮ ಸೂರ್ಯ ಚಂದ್ರರು ಇತ್ತೀಚಿಗೆ ಬೆಳಗುತ್ತಿಲ್ಲವಲ್ಲ..ಬೆಳಕು ಕಮ್ಮಿಯಾಯಿತೆನೊ…ಪಾಪ ..ಆದರೆ ಆನೆನೂ ಕಾಣುತ್ತಿಲ್ಲವಲ್ಲ…
    ಅವರೂ ಬಾರ್ನಲ್ಲೆ ಸಿಗುವರೆನೋ ….
    ಅದೇನು ಮುಸಲ್ಮಾನ ಮಕ್ಕಳು ಇಣುಕುತ್ತಿದ್ದರಲ್ಲಾ ನಿಮ್ಮ ಮಾತಿನಲ್ಲಿ ….ನಿರೋದ್ಹ್ ಹಾಕಿಕೊಳ್ಳಿ …ಅನಾಹುತವಾದೀತು ಇಲ್ಲಾಂದ್ರೆ ….ತಾವು ಆಂಗ್ಲ ಭಾಷೆಯಲ್ಲೇ ಹೆಚ್ಚಾಗಿ ಕಾಮೆಂಟ್ ಗಳನ್ನೂ ಹಾಕುತ್ತೀರಲ್ಲ ..ತಮಗೆ ಕಲಿಸಬಹುದಲ್ಲಾ…ತಾವು ದಿನವೆಲ್ಲ ದರ್ಗಾನ ವಚನಗಳ ಬಗ್ಗೆ ಮಾತನಾಡುವುದು ಸಮಾಜ ಸೇವೆ…ಓಶೋ ಆಶ್ರಮದಲ್ಲಿರುವುದು ಸಮಾಜ ದ್ರೋಹವೇ ..ಚೆನ್ನಾಗಿದೆ ..

    ಉತ್ತರ
 7. ಗುರುರಾಜ್ ಅವ್ರೆ ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ಬರೆದಿದ್ದೀರಿ.. ಇಷ್ಟ ಆಯ್ತು..ಜಾತ್ಯತೀತ ಅಂತ ಹೇಳಿಕೊಳ್ಳೋ ಜನ ಹೇಗೆ ಗೋಡ್ಸೆ ಅವರನ್ನ ಕೆಟ್ಟದಾಗಿ ಬೈತಾರೋ.. ಅದಕ್ಕಿಂತ ಕೆಟ್ಟದಾಗಿ ಗಾಂಧೀಜಿಗೆ ಬೈಯೋ ವಿದ್ಯಾವಂತರ ಗುಂಪೊಂದಿದೆ.. ಅವರಿಗೆ ನಾವೆಲ್ಲಾ ದೇಶಭಕ್ತರು ಅನ್ನೋ ಹಣೆ ಪಟ್ಟಿ ಬೇರೆ..!! ಬಾಲಿವುಡ್ ನ ಒಂದು ಸಿನೆಮಾ ನೋಡಿಕೊಂಡು ಬಂದು ಗಾಂಧಿಜಿನೇ ಭಗತ್ ಸಿಂಗ್ ನನ್ನ ಕೊಂಡದ್ದು ಅಂತ ತೀರ್ಮಾನ ಮಾಡಿಬಿಟ್ಟಿದಾರೆ.. ಇವರಿಗೆ ಭಗತ್ ಸಿಂಗ್ ಅವರೂ ಕಮ್ಯುನಿಸ್ಟ್ ಪಂಥದಿಂದ ಪ್ರಭಾವಗೊಂಡಿದ್ದರು ಅನ್ನೋದು ಲೆಕ್ಕಕ್ಕೆ ಬರೋದಿಲ್ಲಾ ಈ ದೇಶಭಕ್ತ ಬಲಪಂಥೀಯರಿಗೆ.. ಅಂಥವರಿಗೆ ಕರ್ನಾಟಕದಲ್ಲೇ ಹುಟ್ಟಿ ಭಗತ್ ಸಿಂಗ್ ಗಿಂತ ಬರ್ಬರವಾಗಿ ಬ್ರಿಟಿಷರಿಂದ ಕೊಲೆಯಾಗಿ ಹೋದ ಮಹಾನ್ಮೈ ಕ್ರಾಂತಿಕಾರಿ, ಅಪ್ಪಟ ಗಾಂಧೀವಾದಿ ಲಾರ ಮಹಾದೇವಪ್ಪನವರು ಹೆಸರೂ ಕೂಡ ಗೊತ್ತಿರೋದಿಲ್ಲಾ..!! ಪರಮರ್ಶಿಸದೆ ಒಂದು ಭಾವುಕ ನಿರ್ಧಾರಕ್ಕೆ ಬರುವ ಈ ದೇಶಭಕ್ತರು ಗಾಂಧೀಜಿ ಹೊರಿಸಬಾರದ ಅಪವಾದ ಹೊರಿಸಿ ಆಡಬಾರದ ಮಾತುಗಳನ್ನ ಅಂದು ತಮ್ಮ ದೇಶಭಕ್ತಿ ಮೆರಿತಾರೆ..!! ಅವರ ಬಗ್ಗೆನೂ ಬರೀಬೇಕಿತ್ತು ನೀವು ಅನ್ನಿಸ್ತು.. ಯಾರೋ ಒಬ್ಬರಿಂದಲೇ ಸ್ವತಂತ್ರ ಬಂದಿಲ್ಲಾ.. ಬರೋದು ಇಲ್ಲಾ.. ಬಂದ್ರೆ ಒಳ್ಳೇದು ಅಲ್ಲಾ.. ಅದು ಸರ್ವಾಧಿಕಾರಕ್ಕೆ ಎಡೆ ಮಾಡಿ ಕೊಡುತ್ತೆ ಅನ್ನೋ ಸಾಮಾನ್ಯ ಜ್ಞಾನ ಇಲ್ಲದ ದೇಶಭಕ್ತರು.. ಇವರಿ ಇದ್ದಿದ್ರೆ ಅವತ್ತೇ ಸ್ವತಂತ್ರ ಬರ್ತಿತ್ತು.. ಹಾಗಾಗ್ತಿತ್ತು.. ಹೀಗಾಗ್ತಿತ್ತು ಅನ್ನುವ ತಮ್ಮ ಊಹಾ ಪೋಹದ ಮಾತುಗಳಿಂದ ಗಾಂಧೀಜಿಯವರ ತೇಜೋವಧೆ ಮಾಡ್ತಾರೆ..!! ಸ್ವತಂತ್ರ ಬಂದ ಸಮಯದಲ್ಲಿ ಇದ್ದ ಎಲ್ಲಾ ದೇಶಭಾಕ್ತರಿಗೂ ಗಾಂಧೀಜಿಯ ಬಗ್ಗೆ ಅಪಾರ ಗೌರವವಿತ್ತು.. ನನ್ನ ಸ್ವಂತ ಅಜ್ಜ ಪರಮಗೌದ ಹರಕಂಗಿ ಉಗ್ರಗಾಮಿ ಸ್ವತಂತ್ರ ಹೋರಾಟಗಾರರು.. ಪೂರ್ತಿ ಗಾಂಧಿವಾದಿ..!! ಇವತ್ತೂ 88 ರ ವಯಸ್ಸಿನಲ್ಲೂ ಅವರು ದುಡಿಯದೆ ತಿನ್ನುವುದಿಲ್ಲಾ.. ಇದು ಗಾಂಧಿವಾದ.. ಜೀವನದ ಶ್ರೇಷ್ಠತೆಯನ್ನ ತೋರಿಸಿ ಕೊಡೋದು..!! ಅದನ್ನರಿಯದ ಜನರು ಗಾಂಧಿಜಿಯವರ ಬಗ್ಗೆ ಅವಾಚ್ಯ ಶಬ್ದಗಳನ್ನ ಉಪಯೋಗಿಸಿದಾಗ ತುಂಬಾ ಬೇಸರವಾಗುತ್ರಿ…!!

  ಉತ್ತರ
 8. ಗುರುರಾಜ್ ಅವ್ರೆ ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ಬರೆದಿದ್ದೀರಿ.. ಇಷ್ಟ ಆಯ್ತು..ಜಾತ್ಯತೀತ ಅಂತ ಹೇಳಿಕೊಳ್ಳೋ ಜನ ಹೇಗೆ ಗೋಡ್ಸೆ ಅವರನ್ನ ಕೆಟ್ಟದಾಗಿ ಬೈತಾರೋ.. ಅದಕ್ಕಿಂತ ಕೆಟ್ಟದಾಗಿ ಗಾಂಧೀಜಿಗೆ ಬೈಯೋ ವಿದ್ಯಾವಂತರ ಗುಂಪೊಂದಿದೆ.. ಅವರಿಗೆ ನಾವೆಲ್ಲಾ ದೇಶಭಕ್ತರು ಅನ್ನೋ ಹಣೆ ಪಟ್ಟಿ ಬೇರೆ..!! ಬಾಲಿವುಡ್ ನ ಒಂದು ಸಿನೆಮಾ ನೋಡಿಕೊಂಡು ಬಂದು ಗಾಂಧಿಜಿನೇ ಭಗತ್ ಸಿಂಗ್ ನನ್ನ ಕೊಂಡದ್ದು ಅಂತ ತೀರ್ಮಾನ ಮಾಡಿಬಿಟ್ಟಿದಾರೆ.. ಇವರಿಗೆ ಭಗತ್ ಸಿಂಗ್ ಅವರೂ ಕಮ್ಯುನಿಸ್ಟ್ ಪಂಥದಿಂದ ಪ್ರಭಾವಗೊಂಡಿದ್ದರು ಅನ್ನೋದು ಲೆಕ್ಕಕ್ಕೆ ಬರೋದಿಲ್ಲಾ ಈ ದೇಶಭಕ್ತ ಬಲಪಂಥೀಯರಿಗೆ.. ಅಂಥವರಿಗೆ ಕರ್ನಾಟಕದಲ್ಲೇ ಹುಟ್ಟಿ ಭಗತ್ ಸಿಂಗ್ ಗಿಂತ ಬರ್ಬರವಾಗಿ ಬ್ರಿಟಿಷರಿಂದ ಕೊಲೆಯಾಗಿ ಹೋದ ಮಹಾನ್ ಕ್ರಾಂತಿಕಾರಿ, ಅಪ್ಪಟ ಗಾಂಧೀವಾದಿ ಮೈಲಾರ ಮಹಾದೇವಪ್ಪನವರು ಹೆಸರೂ ಕೂಡ ಗೊತ್ತಿರೋದಿಲ್ಲಾ..!! ಪರಮರ್ಶಿಸದೆ ಒಂದು ಭಾವುಕ ನಿರ್ಧಾರಕ್ಕೆ ಬರುವ ಈ ದೇಶಭಕ್ತರು ಗಾಂಧೀಜಿ ಮೇಲೆ ಹೊರಿಸಬಾರದ ಅಪವಾದ ಹೊರಿಸಿ ಆಡಬಾರದ ಮಾತುಗಳನ್ನ ಅಂದು ತಮ್ಮ ದೇಶಭಕ್ತಿ ಮೆರಿತಾರೆ..!! ಅವರ ಬಗ್ಗೆನೂ ಬರೀಬೇಕಿತ್ತು ನೀವು ಅನ್ನಿಸ್ತು..
  ಯಾರೋ ಒಬ್ಬರಿಂದಲೇ ಸ್ವತಂತ್ರ ಬಂದಿಲ್ಲಾ.. ಬರೋದು ಇಲ್ಲಾ.. ಬಂದ್ರೆ ಒಳ್ಳೇದು ಅಲ್ಲಾ.. ಅದು ಸರ್ವಾಧಿಕಾರಕ್ಕೆ ಎಡೆ ಮಾಡಿ ಕೊಡುತ್ತೆ ಅನ್ನೋ ಸಾಮಾನ್ಯ ಜ್ಞಾನ ಇಲ್ಲದ ದೇಶಭಕ್ತರು.. ಇವರಿ ಇದ್ದಿದ್ರೆ ಅವತ್ತೇ ಸ್ವತಂತ್ರ ಬರ್ತಿತ್ತು.. ಹಾಗಾಗ್ತಿತ್ತು.. ಹೀಗಾಗ್ತಿತ್ತು ಅನ್ನುವ ತಮ್ಮ ಊಹಾ ಪೋಹದ ಮಾತುಗಳಿಂದ ಗಾಂಧೀಜಿಯವರ ತೇಜೋವಧೆ ಮಾಡ್ತಾರೆ..!! ಸ್ವತಂತ್ರ ಬಂದ ಸಮಯದಲ್ಲಿ ಇದ್ದ ಎಲ್ಲಾ ದೇಶಭಕ್ತರಿಗೂ ಗಾಂಧೀಜಿಯ ಬಗ್ಗೆ ಅಪಾರ ಗೌರವವಿತ್ತು.. ನನ್ನ ಸ್ವಂತ ಅಜ್ಜ ಉಗ್ರಗಾಮಿ ಸ್ವತಂತ್ರ ಹೋರಾಟಗಾರರು.. ಪೂರ್ತಿ ಗಾಂಧಿವಾದಿ..!! ಇವತ್ತೂ 88 ರ ವಯಸ್ಸಿನಲ್ಲೂ ಅವರು ದುಡಿಯದೆ ತಿನ್ನುವುದಿಲ್ಲಾ.. ಇದು ಗಾಂಧಿವಾದ.. ಜೀವನದ ಶ್ರೇಷ್ಠತೆಯನ್ನ ತೋರಿಸಿ ಕೊಡೋದು..!! ಅದನ್ನರಿಯದ ಜನರು ಗಾಂಧಿಜಿಯವರ ಬಗ್ಗೆ ಅವಾಚ್ಯ ಶಬ್ದಗಳನ್ನ ಉಪಯೋಗಿಸಿದಾಗ ತುಂಬಾ ಬೇಸರವಾಗುತ್ರಿ…!!

  ಉತ್ತರ
 9. ನವೆಂ 16 2013

  ನಾಥೂರಾಮ್ ಗೋಡ್ಸೆ, ಆರೆಸ್ಸೆಸ್ ಸೇರುವುದಕ್ಕೆ ಮುಂಚೆ ಕಾಂಗ್ರೆಸ್ಸಿನ ಕಾರ್ಯಕರ್ತನಾಗಿದ್ದ.
  ಆತ ಗಾಂಧೀಜಿಯವರನ್ನು ಬಳಸಲು ಉಪಯೋಗಿಸಿದ ಪಿಸ್ತೂಲನ್ನು ಆತನಿಗೆ ನೀಡಿದ್ದು ಕಾಂಗ್ರೆಸ್ಸಿನ ದುರೀಣರೇ!

  > ಭಗತ್ ಸಿಂಗ್ ಅವರೂ ಕಮ್ಯುನಿಸ್ಟ್ ಪಂಥದಿಂದ ಪ್ರಭಾವಗೊಂಡಿದ್ದರು
  ಭಗತ್ ಸಿಂಗ್ ಗಲ್ಲಿಗೇರುವ ಸಮಯದಲ್ಲಿ ಕೈಯ್ಯಲ್ಲಿ ಹಿಡಿದಿದ್ದುದು ಭಗವದ್ಗೀತೆ. ಅವರ ಬಾಯಲ್ಲಿ ಬಂದ ಕಡೇ ಶಬ್ದ “ವಂದೇ ಮಾತರಂ”.
  ಕಮ್ಯುನಿಸ್ಟರು ಈ ದೇಶವನ್ನು ತಾಯಿಯೆಂದು ಒಪ್ಪುವುದಿಲ್ಲ. ಹಿಂದೂ ಧರ್ಮದ ಸಾರವಾದ ಭಗವದ್ಗೀತೆ ಕಮ್ಯುನಿಸ್ಟರಿಗೆ ವರ್ಜ್ಯ.
  ಭಾರತದ ಕ್ರಾಂತಿಕಾರಿಗಳು ಪಶ್ಚಿಮ ದೇಶಗಳಲ್ಲಿ ನಡೆದ ಕ್ರಾಂತಿಕಾರ್ಯದಿಂದ ಪ್ರೇರಣೆ ತೆಗೆದುಕೊಂಡರು – ಆ ರೀತಿಯ ಕ್ರಾಂತಿಯನ್ನು ನಡೆಸಿ ಸ್ವತಂತ್ರ ಗಳಿಸುವುದಷ್ಟೇ ಅವರ ಉದ್ದೇಶ; ಅವರು ಭಾರತದಲ್ಲಿ ಕಮ್ಯುನಿಸಂ ತರಬೇಕೆಂದು ಎಂದೂ ಬಯಸಿರಲಿಲ್ಲ.

  ಉತ್ತರ
  • Rajesh j
   ನವೆಂ 17 2013

   ಕುಮಾರ್ ರವರೇ…ಭಗತ್ ಸಿಂಗ್ ಸಾಯುವ ಮೊದಲು ಕೈಯಲ್ಲಿ ಭಗವತ್ ಗೀತೆ ಹಿಡಿದದ್ದು ನಿಜವಾ…?? ಯಾಕೆಂದ್ರೇ ಆತನೊಬ್ಬ ನಾಸ್ತಿಕನಾಗಿದ್ದ.ಅಲ್ಲದೇ ಆತ ‘ನಾನೇಕೆ ನಾಸ್ತಿಕ’ ಎಂಬ ಪುಸ್ತಕವನ್ನೂ ಬರೆದಿದ್ದ.

   ಉತ್ತರ
   • Nagshetty Shetkar
    ನವೆಂ 17 2013

    ಭಗತ್ ಸಿಂಹನ ವೈಭವೀಕರಣದ ಅಗತ್ಯವೇನಿದೆ? ಆತ ಹಿಂಸೆಯ ಮಾರ್ಗವನ್ನು ಹಿಡಿದಿದ್ದ ಎಂಬುದನ್ನು ಕಡೆಗಣಿಸಕೂಡದು. ಹಿಂದೂ ಟೆರರ್ ಎಂದರೆ ಹರಿಹಾಯುವ ಬಲಪಂಥೀಯರು ಅದು ಬಹಳ ಹಿಂದಿನಿಂದಲೂ ಇತ್ತು ಎನ್ನುವುದನ್ನು ಮರೆಮಾಚುತ್ತಾರೆ. ಬಸವಣ್ಣನವರ ಕಾಲದಲ್ಲಿ ಶರಣರ ಮೇಲೆ ಹಿಂಸಾಚಾರ ನಡೆಸಿದ್ದೂ ಇದೇ ಹಿಂದೂ ಟೆರರ್ ಬ್ರಿಗೆಡ್ ಅಲ್ಲವೇ?

    ಉತ್ತರ
    • Subrahmanya
     ನವೆಂ 19 2013

     ತಾವು ಗಾಂದಿ ನೆಹರೂಗಳ ವೈಭವೀಕರಣಗಳನ್ನು ಮಾಡುವುದಿಲ್ಲವೇ ??ನಳಂದ ವಿಶ್ವ ವಿದ್ಯಾಲಯ ಗೊತ್ತಿರಬಹುದು ತಮಗೆ….ಅಹಿಂಸೆ ಅದನ್ನು ಬಲಿತೆಗೆದುಕೊಂಡಿತು ಅಲ್ಲವೇ..
     ಅಹಿಂಸೆ ಅಹಿಂಸೆ ಎಂದ ಗಾಂದಿ ಹಿಂಬಾಲಕರು ಸಾವಿರಾರು ಮುಗ್ಧ ಚಿತ್ಪಾವನ ಬ್ರಾಹ್ಮಣರನ್ನು ಕೊಂದಿರುವುದೂ ತಮ್ಮ ಪ್ರಕಾರ ಅಹಿಂಸೆಯ ಭಾಗವಾಗಿರಬಹುದಲ್ಲವೇ..
     ಅದೇ ನೆಹರೂ ವಂಶ ಮುಂದೆ ೨೦೦೦೦ ಕ್ಕೂ ಹೆಚ್ಚು ಸಿಕ್ಖರನ್ನು ಬಲಿ ತೆಗೆದುಕೊಂಡಿತು ಅಲ್ಲವೇ..

     ಉತ್ತರ
   • ನವೆಂ 19 2013

    “Chapter XIV (f) Gazetteer Jalandhar” – ಇದರಲ್ಲಿ ಭಗತ್ ಸಿಂಗ್ ಬಳಿ ಇದ್ದ ಸಾಮಾಗ್ರಿಗಳ ಪಟ್ಟಿಯನ್ನು ಅಧಿಕೃತವಾಗಿ ದಾಖಲಿಸಿದ್ದಾರೆ.
    ಆ ಗೆಜೆಟಿಯರ್^ನಲ್ಲಿ ಈ ರೀತಿ ಬರೆದಿದ್ದಾರೆ:
    Shaheed-E-Azam Sardar Bhagat Singh Museum, Khatkar Kalan – A museum at Khatkal Kalan, the native village of the great Martya Sardar Bhagat Singh, was inaugurated on his 50th death anniversary. To pay homage to the great revolutionary martyrs of the Punjab, who laid down their lives for the liberation of their motherland, all their memorable belongings are displayed here. The half burnt ashes of Sardar Bhagat Singh, Rajguru and Sukhdev including the blood soaked sand and blood stained newspaper in which their ashes were wrapped are preserved and exhibited in the museum. One page of the Lahore Conspirace Case’s Judgement through which martyr Kartar Singh Sarabha was sentenced to death and on which Sardar Bhagat Singh put some notes is also exhibited in the museum.
    A copy of holy Gita having S. Bhagat Singh’s signatures which was handed over to him in Lahore Jail, and his other personal belongings are displayed here.
    The painting of the revolutionaries and Gadrites who inspired S. Bhagat Singh to jump into the freedom struggle are also displayed in the museum. A big bronze statue in the memory of the great martyr installed in front of the museum remains us his great deeds.

    ಭಗತ್ ಸಿಂಗ್, ಸೆರೆಮನೆಯಲ್ಲಿ ಗಲ್ಲಿನ ಶಿಕ್ಷೆ ಎದುರು ನೋಡುತ್ತಿದ್ದ ಸಮಯದಲ್ಲಿ ತನ್ನ ತಂದೆಗೆ ಬರೆದಿದ್ದ ಪತ್ರದಲ್ಲಿ, “ತಿಲಕರ ಗೀತಾರಹಸ್ಯ”ವನ್ನು ಕಳುಹಿಸಿಕೊಡುವಂತೆ ತಿಳಿಸಿದ್ದ.

    ಉತ್ತರ
 10. mahatma
  ನವೆಂ 17 2013

  ಆಹಾ ಶೆಟ್ಕರ್ ಅವರೇ ಭತದ ಬಾಯಿಯಲ್ಲಿ ಭಗವದ್ಗೀತೆ. ನಿಮ್ಮ ದ್ವಂದ್ವ ನಿಲುವು ಇದರಿಂದಲೇ ಗೊತ್ತಾಗುತ್ತದೆ. ಭಗತ್ ಸಿಂಗ್ ಹಿಂಸೆಯ ಮಾರ್ಗ ಹಿಡಿದರೆ ತಪ್ಪು. ಅದೇ ನಿಮ್ಮ ಕೆಂಪು ಸೇನೆಯೆಂಬ ಮಾವೋವಾದಿಗಳು ಹಿಂಸೆ ಹಿಡಿದರೆ ಅದು ಶೋಚಿತರ ಪರವಾದ ಧನಿ. ಅದರ ಜೊತೆಗೆ ಬಸವಣ್ಣ, ಗಾಂಜಿಯವರ ಅಹಿಂಸೆ ಮಾರ್ಗದ ಪ್ರತಿಪಾದನೆ ಬೇರೆ ಕೇಡು ಬಾಯಿಯಲ್ಲಿ. ಯಾಕೆ ಈ ಎಡಬಿಡಂಗಿ, ಆಷಾಢಭತಿತನ ? ಅದೇನೋ ಹೇಳ್ತಾರಲ್ಲ, ಅಂತಾಯ್ತು ನಿಮ್ಮ ಕಥೆ

  ಉತ್ತರ
 11. mahatma
  ನವೆಂ 17 2013

  ಇಂತಹ ಪ್ರಗತಿಪರರ ಎಡಬಿಡಂಗಿತನಕ್ಕೆ ವರ್ತಮಾನ ಡಾಟ್ ಕಾಮ್‌ನಲ್ಲಿ ಒಂದು ಒಳ್ಳೆಯ ಉದಾಹರಣೆ ಇದೆ. ಕನಿಷ್ಟ ಸಾಮಾನ್ಯ eನ ಮತ್ತು ಕಾನೂನು eನ ಇಲ್ಲದೆ ಬರೆದ ಲೇಖನಕ್ಕೆ ಹೇಗೆ ಉಗಿದಿದ್ದಾರೆ ಜನರು ಎಂಬುದನ್ನು ಓದಲು ಈ ಲಿಂಕ್‌ಗೆ ‘ಟಿ ಕೊಡಿ. ಹಲ್ಕಾ ಜನರು, ದೇಶ ದ್ರೋಹಿಗಳು. ಉಪ್ಪು ತಿನ್ನೋಕೆ ಈ ದೇಶ ಬೇಕು ಇವರಿಗೆ. ಯಾಕಾದರೂ ಇನ್ನೂ ಬದುಕುತ್ತಿದ್ದಾರೋ ?

  ಉತ್ತರ
 12. ನವೆಂ 19 2013

  ಭಗತ್ ಸಿಂಗ್ ಅವರು ತಮ್ಮ ತಂದೆಗೆ ಬರೆದ ಪತ್ರವನ್ನು ಈ ಕೊಂಡಿಯಲ್ಲಿ ಓದಿ: http://tinyurl.com/lcq8pnh

  ಆ ಪತ್ರದಲ್ಲಿ, ತನಗೆ ತಿಲಕರ “ಗೀತಾ ರಹಸ್ಯ”ದ ಪ್ರತಿ ಬೇಕೆಂದಿರುವುದನ್ನು ಗಮನಿಸಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments