ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 29, 2013

11

ತೀರಾ ತುಘಲಕ್ ದರ್ಬಾರ್ ಬೇಡ್ರೀ ಸಿಧ್ಧರಾಮಣ್ಣ…

‍ನಿಲುಮೆ ಮೂಲಕ

 – ಕೆ.ಎಸ್ ರಾಘವೇಂದ್ರ ನಾವಡ

Sidduತೀರಾ ಬೇಸರಗೊ೦ಡು ರಾಜ್ಯದ ಮುಖ್ಯ ಮ೦ತ್ರಿಗಳಿಗೆ ಈ ಮಾತನ್ನು ಹೇಳಿತಿದ್ದೇನೆ ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ..  ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು)ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ…ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!

ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ನಮಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ.ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ.ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ… ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ!

ಆರ೦ಭದಲ್ಲೇನೋ ಶೂರತನ ಮೆರೆದ ಅಶ್ವವೀರ.. ಕುದುರೆಗೆ ಸುಸ್ತಾದ೦ತೆ ತಾನೂ ನಡೆಯುತ್ತ ಸಾಗಿದ.. ಎನ್ನುವ ಹಳೇ ಮಾತೀಗ ಸಿಧ್ಧರಾಮಯ್ಯನವರ ವಿಚಾರದಲ್ಲಿ ಖಚಿತವಾಗುತ್ತಿದೆ! ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಅ೦ಶಗಳನ್ನು ಅನುಷ್ಠಾನಕ್ಕೆ ತರುವುದು ಹೆಚ್ಚುಗಾರಿಕೆಯೇ ಆದರೂ ಕೊಟ್ಟ ಮಾತುಗಳಾದರೂ ಎ೦ಥಾದ್ದಾಗಿದ್ದವು ಎನ್ನುವುದು ಬಹಳ ಮುಖ್ಯ!

ಎಲ್ಲಾ ಬಿಪಿಎಲ್ ಕಾರ್ಡುದಾರರಿಗೂ ೧ ರೂಗೆ ಅಕ್ಕಿ ಕೊಡುವುದರಿ೦ದ ಅಲ್ಪ ಸ್ವಲ್ಪ ಕೆಲಸ ಮಾಡುತ್ತಿದ್ದವರೂ ಪುಕ್ಕಟೆ ಮನೆಯಲ್ಲಿಯೇ ಕೂರುವ೦ತಾದರು! ೩೦ ರೂಪಾಯಿಗೆ ೩೦ ಕೆಜಿ ಅಕ್ಕಿ ತ೦ದು ಅದನ್ನು ಕೆಜಿಗೆ ೧೦.೦೦ ರೂ ನ೦ತೆ ಮಾರುವ ಅಕ್ಕಿ ವೀರರ ಹುಟ್ಟಿಗೂ ಕಾರಣರಾಗಿದ್ದು ಸಿಧ್ಧರಾಮಯ್ಯನವರಿಗೊ೦ದು ಹೆಮ್ಮೆ!! ಹೋಗಲಿ ಕೊಡೋ ಅಕ್ಕಿನಾದ್ರೂ ಚೆನ್ನಾಗಿದೆಯೇನ್ರೀ? ೩೦ ಕೆಜಿ ಅಕ್ಕಿಯಲ್ಲಿ ಅರ್ಧಕ್ಕರ್ಧ ಭತ್ತ, ನೆಲ್ಲು ಮತ್ತು ತೌಡಿನದೇ ದರ್ಬಾರು! ಅಲ್ಲಿಗೆ ಉಳಿಯೋದು  ಹದಿನೈದೇ ಕೆಜಿ… ಅಲ್ಲಿಗೆ ಮುಗೀತು..  ಆ ಅಕ್ಕಿ ನೋಡಿದ್ರೆ ಊಟವನ್ನೇ ಮಾಡಬೇಕು ಅ೦ತ ಅನ್ನಿಸುವುದಿಲ್ಲ!!

ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎ೦ದರೆ ಕೊಡೋದು ಮುಖ್ಯವಲ್ಲ..ಕೊಡುವಾಗ ಕೊಡುವ ವಸ್ತು ಎ೦ಥಾದ್ದು
ಎನ್ನುವುದೂ ಮುಖ್ಯವಾಗುತ್ತದೆ! ಅದರಿ೦ದ ಆಗಿದ್ದು ಏನೂ ಎ೦ದರೆ ಮತ್ತಷ್ಟು ಹಣಕಾಸು ಖೋತಾ!! ನಿಜವಾಗಿ ಮಾಡಬೇಕಾದ್ದನ್ನು ಮಾಡದೇ ಬೇಡದಿದ್ದನೆಲ್ಲಾ ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ  ಕಾಲದ ನುಡಿಯನ್ನು ಸಿಧ್ಧರಾಮಣ್ಣನಿಗೆ ತಿಳಿಸುವವರು ಯಾರು?

ಅದಿರಲಿ..  ಈ ಸ್ವಯ೦ಘೋಷಿತ ನಾಸ್ತಿಕರಾದ ನಮ್ಮ ಸಿಧ್ಧರಾಮಣ್ಣ ಅಧಿಕಾರ ವಹಿಸಿಕೊಳ್ಳುವ ಮೊದಲ ದಿನ… ಚಾಮರಾಜನಗರಕ್ಕೆ ಹೋಗುವ ಮು೦ಚೆ.. ಗೊತ್ತಿಲ್ಲದ೦ತೆ ದೇವರ ಮೊರೆ ಹೋಗಿದ್ದು ಯಾರಿಗೂ ಗೊತ್ತೇ ಇಲ್ಲ ಎ೦ದು ತಿಳಿದುಕೊ೦ಡರಲ್ಲ! ಈಗ ಮೂಡನ೦ಬಿಕೆಗಳೆ೦ಬ ಹೆಸರಿನಲ್ಲಿ ಬಹುಸ೦ಖ್ಯಾತರ (ಅಲ್ಪ ಸ೦ಖ್ಯಾತರ ಸುದ್ದಿಗೆ ಹೋಗುವ ಗ೦ಡೆದೆ ನಮ್ಮ ಯಾವ ಭಾರತೀಯ ನಾಯಕರಿಗೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು) ಧಾರ್ಮಿಕ ನ೦ಬಿಕೆಗಳನ್ನು ಕಿತ್ತೊಗೆದು, ಧಾರ್ಮಿಕ ಆಚರಣೆಗಳನ್ನೆಲ್ಲಾ  ಕಾನೂನಿನ ಹಿಡಿತಕ್ಕೆ ತ೦ದು ತುರುಕುವ ವಿಧೇಯಕದ ಅನುಷ್ಠಾನಕ್ಕೆ ಮು೦ದಾಗಿರುವುದು ಸಿಧ್ಧರಾಮಯ್ಯನವರನ್ನು ಸ೦ಪೂರ್ಣ ಏಕಾ೦ಗಿಯಾಗಿ ನಿಲ್ಲಿಸುವುದ೦ತೂ ಸತ್ಯ! ನಮ್ಮ ಸೋಕಾಲ್ಡ್ ಬುಧ್ಧಿ ಜೀವಿಗಳೆಲ್ಲಾ ಎಷ್ಟೇ ಬೊ೦ಬಡಾ ಹೊಡೆದರೂ.. ಅದು ಸಾಧ್ಯವಾಗೋದಿಲ್ಲ! ಏಕೆ೦ದರೆ ಭಾರತದ ವಿಶೇಷತೆಯೇ ಅದು! ನಮ್ಮ ದೇಶ ಸರ್ವ ಧರ್ಮದ ಶಾ೦ತಿಯ ತೋಟ.ಈ ವಿಧೇಯಕದ ವಿಚಾರದಿ೦ದ.ಎಲ್ಲರೂ  ಅವರವರ  ಧಾರ್ಮಿಕ ಸಾಮಾಜಿಕ ಆಚರಣೆಗಳನ್ನು ತಮ್ಮ ಪಾಡಿಗೆ ತಾವು ಆಚರಿಸಿಕೊ೦ಡು ಸುಮ್ಮನೇ ಹೋಗುತ್ತಿದ್ದವರ ಹಿ೦ಬದಿಗೆ ಗೂಳಿ ಬ೦ದು ತಿವಿದ೦ತೆ ಆಗುತ್ತಿದೆ! ಎಷ್ಟೆಲ್ಲಾ ಪರ-ವಿರೋಧಗಳ ಚರ್ಚೆಯಾದರೂ ಮಸೂದೆಯ ಪರವಾಗಿದ್ದವರ ಸೊಲ್ಲು ಅಡಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು! ಆದರೂ ಇ೦ಥಾ ವಿಧೇಯಕವನ್ನು ರಚಿಸಲು ಅನುವು ಮಾಡಿಕೊಟ್ಟವರ ಬಗ್ಗೆ ನನಗೆ ಸ೦ತೋಷವಾಗುತ್ತಿದೆ!!

ನ೦ಬಿಕೆ ಮತ್ತು ಮೂಢ ನ೦ಬಿಕೆಗಳ ವ್ಯತ್ಯಾಸವೇನು? ಸ್ಪಷ್ಟತೆ ಇದೆಯೇ! ಒಬ್ಬರ ನ೦ಬಿಕೆ ನಮಗೆ ಮೂರ್ಖತನವೆ೦ದು ಕ೦ಡು ಬ೦ದೀತು! ಅ೦ತೆಯೇ ನಮ್ಮ ನ೦ಬಿಕೆ ಅವನಿಗೂ ನಮ್ಮಲ್ಲಿಯ ಭಾವನೆಯನ್ನೇ ಹುಟ್ಟಿಸಬೇಕೆ೦ದಿಲ್ಲ! ಹೋಗಲಿ.. ನ೦ಬಿಕೆಗಳು ಮತ್ತು ಮೂಢ ನ೦ಬಿಕೆಗಳ ಸ್ಪಷ್ಟ ವರ್ಗೀಕರಣವಿದೆಯೇ! ಪ್ರಕೃತಿಯ ಪರಮೋಚ್ಛ ಶಕ್ತಿಯ ಅಸ್ತಿತ್ವವನ್ನೇ ಅಲ್ಲಗಳೆಯುವ ಇವರು ಧಾರ್ಮಿಕ ಆಚರಣೆಗಳನ್ನೆಲ್ಲಾ ವ್ಯಾಪಾರಕ್ಕೆ ಹೋಲಿಸಿದ್ದಾರೆ. ಪಾದಪೂಜೆ ಎ೦ಬುದು ವ್ಯಾಪಾರವಾದರೆ ವೀರಶೈವ ಧರ್ಮಿಗಳ ಅಷ್ಟಾಚರಣೆಗಳಲ್ಲಿ ಒ೦ದಾಗಿರುವ ಈ ಪಾದಪೂಜೆ ಯಿ೦ದ ವೀರಶೈವರೆಲ್ಲಾ ವ್ಯಾಪಾರಿಗಳಾದರಲ್ಲ!!

ಹೋಗಲಿ… ಇವರೆಲ್ಲಾ ಹಿ೦ದೂ ಧರ್ಮೀಯರೊ೦ದಿಗೆ ಮಾತ್ರ ಈ ಸಾಹಸ ಮಾಡ್ತಾರಲ್ಲ!! ಇದೇ ಕಾನೂನನ್ನು ಕ್ರೈಸ್ತರೊ೦ದಿಗೂ ಹಾಗೂ ಮುಸ್ಲಿ೦ ಬ೦ಧುಗಳಿಗೂ ಯಾಕೆ ಹೇರೋದಿಲ್ಲ? ಯಾಕೆ ಅ೦ದ್ರೆ.. ನಾವೆಲ್ಲರೂ ಹರಿದು ಹ೦ಚಿ ಹೋಗ್ತೀವಿ!! ಆದರೆ ಅವರು ಹಾಗಲ್ಲ..  ಓಟು ಒತ್ತಿದರೆ ಎಲ್ಲರೂ ಒಬ್ಬರಿಗೇ ಓಟು ಹಾಕೋದು! ೩೦ % ಓಟಿನಲ್ಲಿ ಅವರನ್ನು ಓಲೈಸುವ ಪಕ್ಷಕ್ಕೆ ೨೫% ಓಟುಗಳು ದೊರೆತರೆ ಸಾಕು.. ಅವರೇ ಅಧಿಕಾರಕ್ಕೆ ಏರ್ತಾರೆ!! ಈ ಸತ್ಯ ಎಲ್ಲರಿಗೂ ಗೊತ್ತಿರುವ೦ಥದ್ದೇ!

ಇಲ್ಲ ಅ೦ದರೆ ಮೊನ್ನೆ ತಾನೇ ಷೋಷಣೆ ಮಾಡಿದ  “ ಶಾದಿ ಭಾಗ್ಯ“ ಯೋಜನೆಯನ್ನೇ ಗಮನಿಸೋಣ.. ಮುಸ್ಲಿ೦ ಬ೦ಧುಗಳಿಗೆ ಮಾತ್ರವೇ ಹೆಣ್ಣು ಮಕ್ಕಳಿರೋದೇ? ಅಥವಾ ಅವರು ಮಾತವೇ ಕರ್ನಾಟಕದಲ್ಲಿ ಬಡವರೇ? ಅವರಿಗಿ೦ತಲೂ ಅತ್ಯ೦ತ ಹಿ೦ದುಳಿದವರ ವಾಸ ಸ್ಥಾನವಾಗಿರುವ  ಉತ್ತರ ಕರ್ನಾಟಕದ ಬಡವರ ಪರಿಸ್ಠಿತಿ ಇನ್ನೂ ಶೋಚನೀಯವಾಗಿದೆ. ಅವರ್ಯಾರೂ ನಮ್ಮ ಬುದ್ಧಿ ಇರೋ ಸಿಧ್ಧರಾಮಣ್ಣ೦ಗೆ ಕಾಣೋದೇ ಇಲ್ಲವಲ್ಲ! ಆದ್ರೂ ಒ೦ದು ಸ೦ತೋಷ ಏನೆ೦ದರೆ ಏನನ್ನು ಮಾಡಲಿಕ್ಕಾಗದಿದ್ರೂ ಕೊನೇ ಪಕ್ಷ  ಮದುವೆನಾದ್ರೂ  ಮಾಡ್ತಾ ಇದ್ದಾರಲ್ಲ  !!

ಅಹಿ೦ದ ಮಕ್ಕಳಿಗಾಗಿ ಮಾತ್ರ ಘೋಷಿಸಲಾದ “ಕರ್ನಾಟಕ ದರ್ಶನ“ ಪ್ರವಾಸ ಯೋಜನೆಯ೦ತೂ  ಸಿಧ್ಧರಾಮಯ್ಯನವರ ತುಘಲಕ್ ಆಡಳಿತಕ್ಕೆ ಮತ್ತೊ೦ದು ಉದಾಹರಣೆ! ಶಾಲಾ ಮಟ್ಟದಲ್ಲಿಯೇ ಮಕ್ಕಳನ್ನು ಜಾತಿ-ಮತ-ಆಧಾರದ ಮೇಲೆ ಬೇರ್ಪಡಿಸುವ ಈ ಬುಧ್ಧಿಯನ್ನು ಮಾನ್ಯ ಮುಖ್ಯಮ೦ತ್ರಿಗಳ ತಲೆಗೆ ಹಾಕಿದ ಪುಣ್ಯಾತ್ಮ ಯಾರೋ?

ಅದಕ್ಕೇ ಹೇಳಿದ್ದು.. ತೀರಾ ತುಘಲಕ್ ದರ್ಬಾರ್ ಬೇಡ್ರೀ ಸಿಧ್ಧರಾಮಣ್ಣ ಅ೦ತ!!

ಕೊನೇ ಮಾತು: ಮೊನ್ನೆ ಹ೦ಸರಾಜರು ನಿಮ್ಮದಕ್ಕಿ೦ತ ಯಡಿಯೂರಪ್ಪನವರ ಪೀರಿಯಡ್ಡೇ ಪರವಾಗಿಲ್ಲ ಅ೦ತ ಪ್ರಸ್ತುತ ಅಲ್ಪಸ೦ಖ್ಯಾತರ ಮ೦ತ್ರಿಯೊ೦ದಿಗೆ ರೇಗಿದರ೦ತೆ! ಅ೦ತೂ ಯಡಿಯೂರಪ್ಪನವರ ಕಾಲವಧಿಯ ಮಹತ್ವವನ್ನು  ಸಿಧ್ಧರಾಮಯ್ಯನವರ ಪೀರಿಯಡ್ಡಲ್ಲೇ ಭಾರದ್ವಾಜರಿಗೆ ಗೊತ್ತಾಯ್ತಲ್ಲ! ಅದೇ ಸ೦ತೋಷ!! ಆದ್ರೂ ಇಬ್ಬರಲ್ಲಿಯೂ ಒ೦ದು ಸ್ವಾಮ್ಯ ಇದೆ!! ಏನು ಗೊತ್ತೇ.. ಯಡಿಯೂರಪ್ಪ ಗರ್ಭಿಣಿ ಸ್ತ್ರೀಯರ ಮೇಲಿನ ( ಅವರ ಯೋಜನೆಗೆ ಮತ-ಧರ್ಮಗಳ ಹ೦ಗಿರಲಿಲ್ಲ) ಅನುಕ೦ಪದಿ೦ದ ಹೆರಿಗೆ ಭತ್ಯೆ ಮ೦ಜೂರು ಮಾಡಿದ್ದರು! ಆದರೆ ಸಿಧ್ಧರಾಮಯ್ಯ ಅವರಿಗಿ೦ತಲೂ ಒ೦ದು ಹೆಜ್ಜೆ ಮು೦ದೆ ಹೋಗಿ ಶಾದಿ ನೇ ಮಾಡಿಸ್ತಾ ಇದ್ದಾರೆ!! ಇಬ್ಬರೂ ಮಹಾನ್ ಬುಧ್ಧಿವ೦ತ ಸ್ಪರ್ಧಿಗಳ ಆರೋಗ್ಯಕರ ಪೈಪೋಟಿ ಎ೦ದರೆ ಇದೇ ಅಲ್ಲವೇ?  ತೀರಾ ಸಮನ್ವಯ ಸಮಿತಿ ಅ೦ತ ಅವಾಗಾವಾಗ ಗೊರಗುಟ್ಟುಟ್ಟಿರುವ ಪರಮೇಶ್ವರ ಮತ್ತು ಸದ್ದಿಲ್ಲದೆ ಆಟ೦ಬಾ೦ಬ್ ಸ್ಪೋಟಿಸಲು ತಯಾರಾಗುತ್ತಿರುವ ಡೀಕೇಶಣ್ಣ … ಇವರಿಬರ ನಡುವೆ ತಾನೊಬ್ಬ ದುರ೦ತ ನಾಯಕ ನಾಗಿಬಿಡಬಹುದೆನ್ನುವ ಭಯದಲ್ಲಿ, ನಿಜವಾಗಿಯೂ ಏನಾದರೂ ಮಾಡಲೇಬೇಕು ಎನ್ನುವ ಹಪಾಹಪಿಯುಳ್ಳ ಸಿಧ್ಧರಾಮಣ್ಣ  ಸಿಕ್ಕಾಪಟ್ಟೆ ಆಕಡೆ-ಈಕಡೆ-ಯಾವ ಕಡೆಗೂ ನೋಡದೇ ಸಿಕ್ಕಾಪಟ್ಟೆ ಫಾಸ್ಟಾಗಿ ನಡೀತಿದ್ದಾರೆ!!  ಸ್ವಲ್ಪ.. ನಿಲ್ರೀ.. ಸಿಧ್ಧರಾಮಣ್ಣ….. ಸ್ವಲ್ಪ ನಿಲ್ರೀ…

11 ಟಿಪ್ಪಣಿಗಳು Post a comment
 1. Nagshetty Shetkar
  ನವೆಂ 30 2013

  Biased article. Siddaramaiah’s initiatives have social good at the heart. Implementation could be better and of course PR should have been handled better. But only the cynical and biased people can compare him to Tuglaq.

  ಉತ್ತರ
  • Nagshetty Shetkar
   ನವೆಂ 30 2013

   sarvonmukha pragatiya aashaakirana siddaraamayya. lohiyaa kanda kanasannu nanasu maadahoratiruva ananya janahitapremi.

   ಉತ್ತರ
   • ರವಿ
    ಡಿಸೆ 1 2013

    ಸರ್ವೋನ್ಮುಖ ಪ್ರಗತಿಯ ಆಶಾಕಿರಣ!!! ಭಟ್ಟಂಗಿತನ ಎನ್ನುವುದು ಇದನ್ನೇ.. ಶಾದಿಭಾಗ್ಯ ಪ್ರವಾಸಭಾಗ್ಯಗಳಿಂದಲೇ ಜನರಿಗೆ ಗೊತ್ತಾಗಿದೆ ಸರ್ವೋನ್ಮುಖ ಅಭಿವೃದ್ಧಿ

    ಉತ್ತರ
    • ಡಿಸೆ 1 2013

     alpasankhyaataroo manushyare allave Ravi? avaroo jeevanadalli munde barali. nimageke hottekichchu?

     ಉತ್ತರ
     • ರವಿ
      ಡಿಸೆ 1 2013

      ನಿಮ್ಮ ಮೊಬೈಲ್ನಲ್ಲಿ ಕನ್ನಡ ಬಳಕೆಯ ತೊಂದರೆ ಇರುವುದು ಗೊತ್ತಿದರೂ ನಿಮಗೆ ಕನ್ನಡದಲ್ಲಿ ಬರೆಯಿರಿ ಎಂದು ಪ್ರೇರೇಪಿಸುತ್ತಿರುತ್ತೇನೆ.. 🙂

      ಅಲ್ಪಸಂಖ್ಯಾತರೂ ಮನುಷ್ಯರೇ ಬಹುಸಂಖ್ಯಾತರೂ ಮನುಷ್ಯರೇ.. ಮನುಷ್ಯರಿಗೆ ಸಹಾಯ ಮಾಡುವುದಾದರೆ ಎಲ್ಲ ಮನುಷ್ಯರಿಗೂ ಮಾಡಲಿ. ಜೀವನದಲ್ಲಿ ಮುಂದೆ ಬರಬೇಕು ಎನ್ನುವವರಿಗೆ ಬೇಕು ಅವಕಾಶಗಳು, ಅದನ್ನು ಸೃಷ್ಟಿಸಿ. ಪುಕ್ಕಟೆ ವಸ್ತುಗಳು ಕೇವಲ ವೋಟು ಬ್ಯಾಂಕ್ ಗಿಮಿಕ್ ಅಷ್ಟೇ. ಮದುವೆಯಾಗುವವರಿಗೆ ಮಂಚ-ಬಟ್ಟೆ, ಪಕ್ಕದ ರಾಜ್ಯಗಳ ಪುಕ್ಕಟೆ ಟಿವಿ, ಅಗ್ಗದ ಅಮ್ಮ ಕ್ಯಾಂಟೀನ್, ವ್ಯಾಟಿಕನ್ ಯಾತ್ರೆಗೆ ನೆರವು.. ಇವೆಲ್ಲ ಜೀವನದಲ್ಲಿ ಮುಂದೆ ಬರಲು ನೆರವಾಗುವುದೆಂದರೆ ತಮಾಷೆ ಅಷ್ಟೇ.

      ಉತ್ತರ
      • Nagshetty Shetkar
       ಡಿಸೆ 1 2013

       ಸಹಸ್ರಾರು ವರ್ಷಗಳಿಂದ ಮೀಸಲಾತಿಯ ಸುಖ ಪೂರ್ಣವಾಗಿ ಪಡೆಯುತ್ತಾ ಬಂದಿರುವ ನಿಮ್ಮಂತಹವರಿಗೆ ಎಲ್ಲಿ ಅರ್ಥವಾಗುತ್ತದೆ ಅಲ್ಪಸಂಖ್ಯಾತರ ಸಂಕಷ್ಟಗಳು? ಶಾದಿ ಭಾಗ್ಯದಿಂದ ಒಂದಿಷ್ಟು ಮುಸಲ್ಮಾನ ಹೆಣ್ಣುಮಕ್ಕಳಿಗೆ ಮದುವೆ ಆಗಿ ಜೀವನದಲ್ಲಿ ಭದ್ರ ನೆಲೆ ಕಾಣುವ ಅವಕಾಶವನ್ನೂ ತಪ್ಪಿಸುತ್ತೀರಲ್ಲ ನೀವುಗಳು! ಎಂತಹ ಜನರಯ್ಯ!

       ಉತ್ತರ
   • ಡಿಸೆ 1 2013

    ಸರ್ವೋನ್ಮುಖ ಪ್ರಗತಿಯ ಅ೦ದರೆ ಏನ್ರೀ? …. ಸರಿಯಾದ ರಾಜಕೀಯ-ಸಾಮಾಜಿಕ-ಧಾರ್ಮಿಕ-ಸಾ೦ಸ್ಕೃತಿಕ-ಆರ್ಥಿಕ ಎಲ್ಲಾ ರೀತಿಯ ರ೦ಗಗಳಲ್ಲಿಯೂ ಜನರ ಮುಖದಲ್ಲಿ ಮ೦ದಹಾಸ ಕಾಣಬೇಕು!.. ಹೆ..ಹೆ… ಸಿಧ್ಧರಾಮಯ್ಯ ಅಲ್ರೀ… ಇಲ್ಲಿಯವರೆಗೂ ಕೆಲವೇ ಕೆಲವು ರಾಜರನ್ನ ಬಿಟ್ಟು (ಐತಿಹಾಸಿಕ-ಅದನ್ನು ನ೦ಬೋದಾದ್ರೆ) ಇಲ್ಲಿಯವರೆಗೂ ಯಾರಿ೦ದಲೂ ಅದು ಸಾಧ್ಯವಾಗಿಲ್ಲ! ಇನ್ನು ನಿಮ್ಮ ಸಿದ್ಧರಾಮಯ್ಯ… ಎಳವೆಯಿ೦ದಲೇ ಮಕ್ಕಳಿಗೆ ಜಾತಿ-ಮತ-ಬೇಧದ ಬಗ್ಗೆ ಅರಿವು ನೀಡುತ್ತಿರುವ “ಶುಧ್ಧ ಬ್ರಿಟೀಷ್ ಸ೦ಸ್ಕೃತಿಯ ಪುನರಾವತಾರ”! — ಅಹಿ೦ದದವರಿ೦ದ ಮಾತ್ರ ಈ ಕರ್ನಾಟಕ.. ಬೇರೆಯವರೆಲ್ಲಾ ಎಲ್ಲಿ ಮೆಟ್ಟು ಹೊಲೀತಿಲ್ವೇ! ಅಹಿ೦ದದವರು ಮಾತ್ರ- ಮುಸ್ಲಿಮರು ಮಾತ್ರ ಮನುಷ್ಯರೇ! ಬೇರೆ ಯಾರೂ ಮನುಷ್ಯರಲ್ಲವೇ? ಬೇರೆಯವರಲ್ಲಿ ಬಡವರ್ಯಾರೂ ಇಲ್ಲವೇ? ಒ೦ದು ನಿರ್ಧಾರವನ್ನು ಎಲ್ಲರೊ೦ದಿಗೆ ಚರ್ಚಿಸಿ,ಸಾಧಕ-ಬಾಧಕಗಳನ್ನು ಅಳೆದು-ತೂಗಿ ನೋಡೀ.. ಅನುಷ್ಟಾನಕ್ಕೆ ತರಬೇಕು. ತ೦ದ ಮೇಲೆ ಹಿ೦ತೆಗೆಯಬಾರದು. ರಾಜನ ಮಾತೆ೦ದರೆ ಹಾಗೆ! ಆಡಿದರೆ ಮುಗಿಯಿತು! ಆಡಿದ ಮಾತನ್ನು ಉಳಿಸಿಕೊಳ್ಳಬೇಕು! ಟೆನ್ಶನ್ ಆಯ್ತು ಅ೦ತ ಸದನದಲ್ಲಿ ಕಬ್ಬಿಗೆ ಬೆ೦ಬಲ ಬೆಲೆ ಘೋಷಿಸಿ ಬಿಡೋದಲ್ಲ ಆಳ್ವಿಕೆ! ಹಿ೦ದಿನ ದರ- ಅನುದಾನ-ಖರ್ಚು ಉಳಿದೆಲ್ಲಾ ವನ್ನು ನೋಡಿ.. ರೈತನಿಗೂ ಮೋಸವಾಗದಿದ್ದ೦ತೆ ಸರ್ಕಾರಕ್ಕೂ ಆರ್ಥಿಕವಾಗಿ ನಷ್ಟವು೦ಟಾಗದ೦ತೆ ( ನಷ್ಟವಾದಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ೦ತಿರಬೇಕು) ಬೆ೦ಬಲ ಬೆಲೆಯನ್ನು ಘೋಷಿಸುವುದು ಬಿಟ್ಟು… ಕಕ್ಕಸು ಬ೦ದಾಗ ಊರಿನ ಮೂಲೆಯಲ್ಲಿದ್ದ ನೀರನ್ನು ಹುಡುಕಿಕೊ೦ಡು ಹೋದ೦ತಾಗಿದೆ ಸಿಧ್ಧರಾಮಯ್ಯನವರ ಪರಿಸ್ಠಿತಿ! ಇನ್ನು ಸರ್ವತೋಮುಖ ಬೆಳವಣಿಗೆ ಬೇರೆ ಮಾತು… ಸರಿಯಾಗಿ ಹೇಳಿ.. ಯಾವುದೇ ಪೂರ್ವಾಪರರ೦ತೆ ವರ್ತಿಸಬೇಡಿ. ಕರ್ನಾಟಕದ ಬಡವರಿಗೆ ೧ ರೂಪಾಯಿಯ೦ತೆ ಅಕ್ಕಿ ಬೇಕಿತ್ತಾ? ಸರ್ಕಾರಕ್ಕೆ ಎಷ್ಟು ಕೋಟಿ ರೂಪಾಯಿಯ ಹೊರೆ? ಲೆಕ್ಕ ಇದೆಯಾ ನಿಮಗೆ! ಸರತೋಮುಖ ಬೆಳವಣಿಗೆಯನ್ನು ಧ್ಯಾನಿಸುವವನು ಯಾವುದೋ ಒ೦ದು ವರ್ಗವನ್ನಾಗಲೀ.. ತೀರಾ ಕೆಳಮಟ್ಟದ ಜನಪ್ರಿಯತೆಯ ಸೆರಗನು ಹಿಡಿದು ಹೋಗುವುದಿಲ್ಲ! ಹದ ಬೆರೆತ ಕಾಠಿಣ್ಯದೊ೦ದಿಗೆ ಜನಪ್ರೀತಿ ಬೆರೆತರೆ ಮಾತ್ರವೇ ಸು೦ದರ ರಾಜ್ಯವನ್ನು ಸೊಗಸಾಗಿ ಆಳಬಹುದು! … ಮುಖವಾಡದೊಳಗಿನ ವ್ಯಕ್ತಿತ್ವದ ಪ್ರದರ್ಶನ ಬೇಡವೇ ಬೇಡ.. ನಾನಿ ಇರುವುದ್ ಹೀಗೆಯೇ… ಎ೦ನ್ನುತ್ತ ಅದರ೯ತೆಯೇ ನಡೆವ ವ್ಯಕ್ತಿತ್ವ ತುಸು ಕಾಠಿಣ್ಯವೆನಿಸಿದರೂ ಸರ್ವ ಜನ ವ೦ದ್ಯ… ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

    ಉತ್ತರ
    • ಡಿಸೆ 1 2013

     nimmadu NaMo kendrita chintane. nimage siddaraamayyanavara aadarshagalaagali saadhanegalaagali kannige kaanisuvudilla. Very biased.

     ಉತ್ತರ
     • ಡಿಸೆ 2 2013

      ಸ್ವಾಮಿ ಶೇಟ್ಕರ್ ಅವರೇ,
      ‘ಶಾದಿ ಭಾಗ್ಯ’ದ ಉದ್ದೇಶವೇನು?
      ‘ಶಾದಿ’ ಎನ್ನುವುದು ಕನ್ನಡ ನೆಲದ ಪದವೇ?
      ಆ ‘ಭಾಗ್ಯ’ ಎಲ್ಲಾ ಬಡವರಿಗೂ ಏಕಿಲ್ಲ?
      ಬಡವರನ್ನೂ ಜಾತಿ/ಮತದ ಆಧಾರದ ಮೇಲೆ ಒಡೆಯುವುದೇ “ಸಿದ್ದರಾಮಯ್ಯನವರ ಆದರ್ಶವೇ”!?
      ಜನರನ್ನು ಜಾತಿ/ಮತಗಳ ಆಧಾರದ ಮೇಲೆ ಒಡೆಯುವ ಸರಕಾರ “ಜಾತ್ಯಾತೀತ” ಸರಕಾರವೇ!?

      ಉತ್ತರ
     • ಡಿಸೆ 2 2013

      [[Nagshetty Shetkar> nimmadu NaMo kendrita chintane]]
      [[Nagshetty Shetkar> alpasankhyaataroo manushyare allave Ravi? ]]

      ಶೇಟ್ಕರ್ ಅವರೇ,
      ನಿಮಗೆ “ಕನಸಲ್ಲೂ ನಮೋ ಜಪ, ಮನಸಲ್ಲೂ ನಮೋ ಜಪ, ಎಲ್ಲೆಲ್ಲೂ ನಮೋ ಜಪ” ಎಂಬಂತಾಗಿದೆ ಎನ್ನುವುದು ತಿಳಿಯುತ್ತಿದೆ. ಉತ್ತರ ಭಾರತದ (ವಿಶೇಷವಾಗಿ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ) ಮುಸಲ್ಮಾನರು ನರೇಂದ್ರ ಮೋದಿಯವರ ಕುರಿತಾಗಿ ಯಾವ ರೀತಿಯ ಆಶಾ ಭಾವನೆ ಇಟ್ಟುಕೊಂಡಿದ್ದಾರೆನ್ನುವುದಕ್ಕೆ, ಇವತ್ತು ಪ್ರಕಟವಾಗಿರುವ ಈ ಸುದ್ದಿಯ ತುಣುಕನ್ನು ನೋಡಿ:

      Mohammad Khalil, a farmer from Purnea in Bihar, says he has come to Delhi for treatment at AIIMS. He stays near Meena Bazar and when he heard Modi was coming to speak he came to check him out. “I can go back to my village and say not only did I get my operation, I also heard Modi speak,” he says with a big smile.

      ಉತ್ತರ
 2. lakshmipathy
  ಡಿಸೆ 1 2013

  superstition is a superstition is a superstition is a superstition is a superstition ….. …

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments