‘ಹಾಚಿ’ !
– ಪ್ರಶಾಂತ್ ಯಾಳವಾರಮಠ
ಆ ದೇವರು ಪ್ರೀತಿ ವಿಶ್ವಾಸವನ್ನು ಎಲ್ಲಿ.. ಹೇಗೆ.. ಯಾಕೆ..ಸೃಷ್ಟಿಸುತ್ತಾನೋ.. ಅದು ಅವನಿಗೇ ಗೊತ್ತು!
ಪ್ರೊಫೆಸರ್ ಹೈದೆಸಬುರೋ ಯುನೋ ತಮ್ಮ ದೈನಂದಿನ ಕೆಲಸವಾದ ನೃತ್ಯ ಕಲಿಸುವುದನ್ನು ಮುಗಿಸಿ ಎಂದಿನಂತೆ ದಿನಾಲೂ ಬರುವ ಟ್ರೆನಿನಿಂದ ಸಂಜೆ ತಮ್ಮ ಮನೆಯ ಕಡೆಗೆ ಹೊರಟರು. ತಮ್ಮ ಸ್ಟೇಷನ್ ಬಂದಮೇಲೆ ಇಳಿದು ಇನ್ನೇನು ಹೊರಗೆ ಹೋಗಬೇಕೆನ್ನುವಸ್ಟರಲ್ಲಿ ಅವರ ಕಾಲುಗಳ ಹತ್ತಿರ ಒಂದು ಅಚ್ಚರಿ!! ಒಂದು ಮುದ್ದು ಮುದ್ದಾದ ನಾಯಿ ಮರಿ ಅವರ ಕಾಲುಗಳ ಹತ್ತಿರ ಓಡಾಡುತ್ತಿತ್ತು. ತುಂಬಾ ಮುದ್ದಾದ ನಾಯಿ ಮರಿಯ ಮುಗ್ದತೆ ಮತ್ತು ಸೌಂದರ್ಯಕ್ಕೆ ಮನಸೋತ ಪ್ರೊಫೆಸರ್ ಅದನ್ನ ಎತ್ತಿ ಮುದ್ದಾಡಿದರು. ಮುಂದೆ ಅಯ್ಯೋ ಇದು ಇದರ ಮಾಲಿಕನಿಂದ ಕಣ್ ತಪ್ಪಿಸಿಕೊಂಡಿರಬೇಕೆಂದು ಸ್ಟೇಷನ್ನಲ್ಲಿ ಎಲ್ಲರನ್ನು ವಿಚಾರಿಸಿದರು ಕೊನೆಗೆ ಸ್ಟೇಷನ್ ಮಾಸ್ತರ್ ಹತ್ತಿರನು ವಿಚಾರಿಸಿದರು ಯಾವುದೇ ಸುಳಿವು ಸಿಗಲಿಲ್ಲ. ಸ್ಟೇಷನ್ ಮಾಸ್ತರನು ಎಲ್ಲರೂ ಇಲ್ಲಿ ಊಟದ ಡಬ್ಬಿಗಳನ್ನು ಇಡುತ್ತಾರೆ ಅದ್ದರಿಂದ ನಾನು ಇದನ್ನು ಇಲ್ಲಿ ಇರಿಸಿಕೊಳ್ಳಲಿಕ್ಕೆ ಆಗೋದಿಲ್ಲ ಎಂದು ಹೇಳಿ ನೀವು ಬೇಕಾದರೆ ಇವತ್ತು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಾಳೆ ಯಾರಾದರು ಇದರ ಮಾಲಿಕರು ಬರುತ್ತಾರೆನೋ ನೋಡೋಣ ಎಂದನು. ಅಸ್ಟು ಮುದ್ದಾದ ಆ ಮರಿಯೇನ್ನು ಅಲ್ಲಿಯೇ ಎಲ್ಲಾದರು ಬಿಟ್ಟು ಹೋಗಲಿಕ್ಕೆ ಪ್ರೊಫೆಸರ್ ಗೆ ಮನಸ್ಸಾಗಲಿಲ್ಲ. ಮರಿಯನ್ನು ತೆಗೆದುಕೊಂಡು ಮನೆಗೆ ಹೋದರು. ಆದರೆ ಮನೆಯಲ್ಲೊಂದು ತೊಂದರೆ! ಏನೆಂದರೆ ಪ್ರೊಫೆಸರ್ ಪತ್ನಿಗೆ ನಾಯಿಗಳು ಅಂದರೆ ಆಗ್ತಾ ಇರಲಿಲ್ಲ.ಇನ್ನು ಇ ಮರಿಯೇನ್ನು ಅವಳಿಗೆ ತಿಳಿಯದ ಹಾಗೆ ಬಚ್ಚಿಟ್ಟು ನಾಳೆ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ಅದರ ಮಾಲಿಕರಿಗೆ ಕೊಟ್ಟರಾಯಿತು ಎಂದು ತಿಳಿದರು. ನಿದಾನವಾಗಿ ಮನೆಯೊಳಗೇ ಹೋಗಿ ಇ ಮುದ್ದಾದ ಮರಿಯೇನ್ನು ಒಂದು ಮುಚ್ಚಳವಿಲ್ಲದ ಕಟ್ಟಿಗೆಯ ಬಾಕ್ಸ್ ನಲ್ಲಿ ಮಲಗಿಸಿದರು. ಆದರೆ ಆ ಮರಿ ಎಸ್ಟೊಂದು ಚೂಟಿಯಾಗಿತ್ತು ಅಂದರೆ ಕಟ್ಟಿಗೆಯ ಬಾಕ್ಸ್ ನಿಂದ ಹೊರಗೆ ಬಂದು ಬಿಡುತಿತ್ತು! ಅದನ್ನು ಮತ್ತೆ ಅದರಲ್ಲೇ ಬಚ್ಚಿಟ್ಟರು… ಅಷ್ಟರಲ್ಲಿ ಅವರ ಪತ್ನಿ ಅವರಲ್ಲಿಗೆ ಬಂದು ಊಟಕ್ಕೆ ಕರೆದಳು.. ಪ್ರೊಫೆಸರ್ ಊಟವಾದ ಮೇಲೆ ಮಲಗಲು ತೆರಳಿದರು. ಆ ನಾಯಿ ಮರಿಯು ರಾತ್ರಿ ಬಾಕ್ಸ್ ನಿಂದ ಹೊರಗೆ ಬಂದು ನೇರವಾಗಿ ಪ್ರೊಫೆಸರ್ ಮಲಗಿರುವ ಕೊನೆಗೆ ಹೋಗಲು ಅದರಬಗ್ಗೆ ಪ್ರೊಫೆಸರ್ ಪತ್ನಿಗೆ ತಿಳಿದು ಹೋಯಿತು. ಸಿಟ್ಟಿನಲ್ಲಿದ್ದ ಪತ್ನಿಗೆ ವಿಷಯ ತಿಳಿಸಿ ನಡೆದದ್ದನ್ನು ಹೇಳಿ ಕೇವಲ ಒಂದು ದಿನ ಅಷ್ಟೇ ಎಂದು ಸಮಜಾಯಿಸಿದರು.
ಬೆಳೆಗ್ಗೆ ತಮ್ಮ ದೈನಂದಿನ ರೂಡಿಯ ಹಾಗೆ ತಯಾರಾದ ಪ್ರೊಫೆಸರ್ ಆ ಮುದ್ದಾದ ‘ನಾಯಿಮರಿ’ಯನ್ನು ತೆಗೆದುಕೊಂಡು ಮತ್ತೆ ಸ್ಟೇಷನ್ಗೆ ಹೋದರು ಅಲ್ಲಿ ಯಾರಾದರು ಇ ಮರಿಯ ಬಗ್ಗೆ ವಿಚಾರಿಸಿದ್ದಾರೋ ಏನೋ ಎಂದು ಎಲ್ಲಕಡೆ ಕೇಳಿದರು ಟೀ ಸ್ಟಾಲ್ ಮಾಲಿಕನನ್ನು, ಸ್ಟೇಷನ್ ಮಾಸ್ತರ್ ರನ್ನು ಕೇಳಿದರು ಆದರೆ ಯಾರು ವಿಚಾರಿಸಿರಲಿಲ್ಲಾ! ಇತ್ತ ಮತ್ತೆ ತಮ್ಮ ದೈನಂದಿನ ಟ್ರೇನ್ ಬಿಡುವ ಸಮಯವಾಗುತ್ತ ಬಂತು ಅವಸರದಲ್ಲಿ ಏನು ಮಾಡೋದು ಅಂದು ಟ್ರೇನ್ ಅಲ್ಲಿ ನಾಯಿಗಳಿಗೆ ಪ್ರವೇಶವಿಲ್ಲದಿದ್ದರು ಸ್ಟೇಷನ್ ಮಾಸ್ತರ್ ಹತ್ತಿರ ರಿಕ್ವೆಸ್ಟ್ ಮಾಡಿಕೊಂಡು ವಿದಿಯಿಲ್ಲದೆ ತಮ್ಮ ಜೊತೇನೆ ತೆಗೆದುಕೊಂಡು ಹೋದರು. ಸಂಜೆ ಮತ್ತೆ ಅದೇ ಕಾಯಕ ಸ್ಟೇಷನ್ ಅಲ್ಲಿ ವಿಚಾರಿಸೋದು! ಆದರೆ ಏನು ಉಪಯೋಗವಾಗಲಿಲ್ಲ ಮತ್ತೆ ಮನೆಯಲ್ಲಿ ಹೆಂಡತಿಯಿಂದ ಬೈಗುಳಗಳು.. ಅದಕ್ಕೋಸ್ಕರ ಒಂದು ಪ್ಲ್ಯಾನ್ ಮಾಡಿ ಆ ನಾಯಿಮರಿಯ ಚಿತ್ರವನ್ನು ತೆಗೆದು ಅದರ ಕೆಳಗೆ ಸಂಪರ್ಕಿಸಬೇಕಾದ ಟೆಲಿಫೋನ್ ನಂಬರ್ ಬರೆದು ಎಲ್ಲ ಕಡೆ ಅಂಟಿಸಿದರು ಸ್ಟೇಷನ್ ಅಲ್ಲಿ, ಟೀ ಸ್ಟಾಲ್ ಅಲ್ಲಿ, ಹತ್ತಿರದ ಅಂಗಡಿಯಲ್ಲಿ ಮತ್ತು ಸ್ಟೇಷನ್ ಮುಂದಿನ ಗಾರ್ಡನ್ನಲ್ಲಿ ಅಂಟಿಸಿದರು… ಅದರ ಮಾಲೀಕ ಇದನ್ನು ನೋಡಿಯಾದರೋ ಅಥವಾ ಯಾರಾದರು ನೋಡಿ ಅದರ ಮಾಲಿಕನಿಗೆ ತಿಲಿಸುತ್ತಾರೆಂಬ ಆಶಯ! ಆದರೆ ಇಂಥಹ ಯಾವ ಪ್ರಯತ್ನಗಳು ಸಹಾಯಮಾಡಲಿಲ್ಲ..ಒಂದು ದಿನ ಪ್ರೊಫೆಸರ್ ಆ ನಾಯಿಮರಿಯ ಪೆಟ್ಟಿಗೆಯ ಮೇಲೆ ಅಂಟಿಸಿದ್ದ ಜಪಾನಿ ಭಾಷೆಯಲ್ಲಿದ್ದ ಚೀಟಿಯನ್ನು ತೆಗೆದುಕೊಂಡು ತಮ್ಮ ಗೆಳೆಯರಾದ ಮತ್ತು ಫೈಟ್ ಮಾಸ್ತರಾದ ವ್ಯಕ್ತಿಯ ಹತ್ತಿರ ಹೋಗಿ ನಾಯಿಮರಿಯ ಮೂಲ ಮತ್ತು ಮಾಲಿಕನನ್ನು ತಿಳಿಯಲು ಪ್ರಯತ್ನಿಸಿದರು.. ಫೈಟ್ ಮಾಸ್ತರ್ ಆ ಚೀಟಿಯನ್ನು ಓದಿ ಅದು ಜಪಾನಿನಿಂದ ಬೇರೆಡೆಗೆ ಕಳಿಸಲು ಉಪಯೋಗಿಸಿದ್ದೆಂದು ಮತ್ತು ಅದರ ಕುತ್ತಿಗೆಯಲ್ಲಿ ಕಟ್ಟಿರುವು ಚಿನ್ಹೆ ಜಪಾಟೆ ಪ್ರೊಫೆಸರ್ ಅಂದರೆ ಎಲ್ಲಿಲ್ಲದ ಖುಷಿ ಪಂಚಪ್ರಾಣ ಪ್ರೊಫೆಸರ್ ಎಲ್ಲಿಯೇ ಹೋಗಲಿ ಅಲ್ಲಿಗೆ ಹಾಚಿ ಹೋಗಿಯೇ ಹೋಗುತ್ತಿತ್ತು ಅವರ ಜೊತೇನೆ ಇರುತ್ತಿತ್ತು…
ಮರಿ ಹಾಚಿಯು ಬೆಳೆದು ದೊಡ್ಡದಾಯಿತು ದಿನಾಲು ಮುಂಜಾನೆ ಪ್ರೊಫೆಸರ್, ಅವರ ಹೆಂಡತಿ ಮಕ್ಕಳ ಜೊತೆ ಆಟವಾಡುವುದು, ಮನೆಯ ಹತ್ತಿರ ಓಡಾಡುವುದು ಇನ್ನಿಲ್ಲದ ಚೇಷ್ಟೆ ಮಾಡೋದು ಅದರ ರುಟೀನ ಆಗಿತ್ತು..ಪ್ರೊಫೆಸರ್ ತಮ್ಮ ಕೆಲಸಕ್ಕೆ ಹೋಗಲು ದಿನಾಲು ಟ್ರೈನ್ ಬಳಸುತ್ತಿದ್ದರು ಹಾಚಿ ಒಂದು ದಿನವು ತಪ್ಪದೆ ಮುಂಜಾನೆ ಅವರನ್ನು ಸ್ಟೇಷನ್ ಗೆ ಬಿಡಲು ಹೋಗುತ್ತಿತ್ತು ದಾರಿಯುದ್ದಕ್ಕೂ ಪ್ರೊಫೆಸರ್ ಜೊತೆ ಆಟವಾಡುತ್ತ ಹೋಗುತ್ತಿತ್ತು ಪ್ರೊಫೆಸರ್ ಹಾಚಿ ಜೊತೆಗೂಡಿ ಚಿಕ್ಕಮಕ್ಕಳ ತರಹವಾಗಿರುವುದನ್ನು ಬೀದಿಯ ಜನ ನೋಡಿ ಸಂತೋಷಪಡುತ್ತಿದ್ದರು.. ಸಂಜೆ ಟ್ರೇನ್ ಬರುವ ವೇಳೆಗೆ ಸರಿಯಾಗಿ ಹಾಚಿ ಸ್ಟೇಷನ್ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಕಾಯುತ್ತಿತ್ತು! ಒಂದು ದಿನ ಪ್ರೊಫೆಸರ್ ಅವಸರದಿಂದಾಗಿ ಹಾಚಿಯನ್ನು ಮನೆಯಲ್ಲೇ ಬಿಟ್ಟು ಮನೆಯ ಮುಂದಿನ ಗೆಟನ್ನು ಮುಚ್ಚಿಕೊಂಡು ಹೋದರು ಆದರೆ ಹಾಚಿಗೆ ಹೋಗದೆ ಇರುವುದಕ್ಕಾಗದೆ ಸ್ಟೇಷನ್ ಗೆ ಹೋಗಲೇಬೇಕೆಂದು ಕಟ್ಟಿಗೆಯಿಂದ ಮಾಡಿದ್ದ ಬೇಲಿಯ ಕೆಳಗೆ ಬಿಲವನ್ನು ಕೊರೆದು ಸ್ಟೇಷನ್ ಗೆ ಓಡಿಹೋಗಿ ಅವರಜೊತೆ ಸೇರಿಕೊಂಡಿತ್ತು! ಹೀಗೆ ಇಸ್ಟೊಂದು ಅನ್ನ್ಯೋನ್ಯ ವಾಗಿರುವಬಗ್ಗೆ ಸ್ಟೇಷನ್ ಅಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು ಹಾಚಿ ಪ್ರೊಫೆಸರ್ ಕೆಲಸಕ್ಕೆ ಹೋದಮೇಲೆ ಸ್ಟೇಷನ್ ಮುಂದೆ ಇರುವ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡು ಮನೆಗೆ ಹೋಗುತ್ತಿತ್ತು. ಮತ್ತೆ ಸಂಜೆ ಟ್ರೇನ್ ಬರುವ ಸಮಯಕ್ಕೆ ಸರಿಯಾಗಿ ಬಂದು ಅದೇ ಕಟ್ಟೆಯ ಮೇಲೆ ಕುಳಿತುಕೊಂಡು ಪ್ರೊಫೆಸರ್ ಅವರ ಬರುವನ್ನು ಕಾಯುತ್ತಿತ್ತು ಅವರು ಸ್ಟೇಷನ್ ನಿಂದ ಹೊರಗೆ ಬಂದ ತಕ್ಷಣ ಓಡಿಹೋಗಿ ಅವರನ್ನು ತಬ್ಬಿಕೊಂಡು ಮುದ್ದಾಡುತ್ತಿತ್ತು ಪ್ರೊಫೆಸರ್ ರು ಅಸ್ಟೆ.. ಅಸ್ಟೆ ಪ್ರೀತಿಯಿಂದ ಅದನ್ನು ತಬ್ಬಿಕೊಂಡು ಮುದ್ದಾಡುತ್ತಿದ್ದರು ಇದನ್ನು ಕಂಡ ಅಲ್ಲಿಯ ಜನರು ಇವರಿಬ್ಬರ ಪ್ರೀತಿಯನ್ನು ಕಂಡು ಬೆರಗುಗೊಳ್ಳುತ್ತಿದ್ದರು. ಒಂದು ದಿನ ಮುಂಜಾನೆ ಪ್ರೊಫೆಸರ್ ಮತ್ತು ಹಾಚಿ ಎಂದಿನಂತೆ ಕುಣಿದು ಕುಪ್ಪಳಸುತ್ತ ಸ್ಟೇಷನ್ ಕಡೆಗೆ ಬರುತ್ತಿದ್ದರು ಅದೇ ಸಮಯಕ್ಕೆ ಸ್ಟೇಷನ್ ಮಾಸ್ತರ್ ಗೆ ಒಂದು ಫೋನ್ ಕರೆ ಬಂದಿತು ಅದು ಆ ನಾಯಿಮರಿಯನ್ನು ಕಳೆದುಕೊಂಡಿದ್ದ ಮಾಲಿಕನದ್ದಾಗಿತ್ತು ಪ್ರೊಫೆಸರ್ ಮತ್ತು ಹಾಚಿಯ ಅನ್ನ್ಯೋನ್ನತೆಯನ್ನು ಕಂಡು ಬೆರಗಾಗಿದ್ದ ಸ್ಟೇಷನ್ ಮಾಸ್ತರ್ ಹಾಚಿಯ ಬಗ್ಗೆ ಗೊತ್ತಿಲ್ಲ ಎಂದು ಹೇಳಿಬಿಟ್ಟರು! ಹೀಗೆ ಪ್ರೊಫೆಸರ್ ಮತ್ತು ಹಾಚಿಯನ್ನು ಬೇರ್ಪಡಿಸಲು ಯಾರಿಗೂ ಮನಸ್ಸಾಗುತ್ತಿರಲಿಲ್ಲ. ಪ್ರೊಫೆಸರ್ ಮತ್ತು ಹಾಚಿಯ ಪ್ರೀತಿ ಹೀಗೆ ವರ್ಷಗಳವರೆಗೆ ಸಾಗಿತು.
ಇತ್ತ ಟ್ರೈನ್ ಸ್ಟೇಷನ್ ಹತ್ತಿರ ‘ಹಾಚಿ’ ತನ್ನ ಒಡೆಯ ಪ್ರೀತಿಯ ಪ್ರೊಫೆಸರ್ ಬರುತ್ತಾರೆಂದು ತಾನು ದಿನಾಲೂ ಕುಳಿತುಕೊಳ್ಳುವ ಕಟ್ಟೆಯ ಮೇಲೆ ಕುಳಿತುಕೊಂಡಿತ್ತು. ಯಾವುದೇ ಟ್ರೈನ್ ಬರುವ ಶಬ್ದ ಬಂದರೆ ಸಾಕು ತನ್ನ ಕಿವಿ ಎನ್ನು ನಿಮಿರಿಸಿ ಸ್ಟೇಷನ್ನಿಂದ ಹೊರಗೆ ಬರುವ ಎಲ್ಲರನ್ನು ಅತಿ ಕಾತರದಿಂದ ನೋಡುತ್ತಿತ್ತು.. ನನ್ನ ಒಡೆಯನನ್ನ ನೋಡಿದಿರಾ.. ನನ್ನ ಒಡೆಯ ಬಂದರಾ.. ಎಂದು ಎಲ್ಲರನ್ನು ಕೇಳುವ ಹಾಗೆ ಇತ್ತು ಹಾಚಿಯ ಆ ಕಾತುರದ ನೋಟ. ಹೀಗೆ ಅಂದು ಸಂಜೆ ರಾತ್ರೀ ಇಡಿ ಅದೇ ಕಟ್ಟೆಯ ಮೇಲೆ ಕುಳಿತುಕೊಂಡು ಪ್ರೊಫೆಸರ್ ಬಂದೆ ಬರುತ್ತಾರೆಂದು ‘ಹಾಚಿ’ ಕಾಯುತ್ತ ಕುಳಿತುಕೊಂಡಿತ್ತು! ಮುಂದೆ ಮನೆಗೆನಾದರೂ ಬಂದಿದ್ದರಾ ಅಂತ ಮನೆಗೆ ಬಂದು ತನ್ನ ಪ್ರೊಫೆಸರ್ರನ್ನು ಹುಡುಕಿತು.. ಅವರ ಮನೆಯ ಎಲ್ಲ ಕೋಣೆ,ಗಾರ್ಡನ್, ಮನೆಯ ಮುಂದಿನ ಶೆಡ್ಡು ಹೀಗೆ ಯಾವುದನ್ನ ಬಿಡದೆ ಹುಡುಕುತ್ತಿತ್ತು.
ಈ ಸುದ್ದಿತಿಳಿದು ಪ್ರೊಫೆಸರ್ ಹೆಂಡತಿ, ಮಗಳು ಮತ್ತು ಅಳಿಯ ಅತಿವ ದುಖ್ಖದಿಂದ ಅವರ ಅಂತಿಮ ಕ್ರಿಯೆ ಎನ್ನು ಮಾಡಿಮುಗಿಸಿ ಮರಳಿ ಮನೆಗೆ ಬಂದರು. ಮನೆಯಲ್ಲಿ ಹಾಚಿ ಪ್ರೊಫೆಸರ್ರಿಗೆ ಹುಡುಕುತ್ತಿರುವುದನ್ನು ಕಂಡು ಅವರೆಲ್ಲರ ದುಃಖ ಇಮ್ಮಡಿಗೊಂಡು ಅತ್ತರು…ಆದರೆ ಹಾಚಿ ಮಾತ್ರ ತನ್ನ ಹುಡುಕುವ ಕೆಲಸವನ್ನು ನಿಲ್ಲಿಸಿರಲಿಲ್ಲ! ಮರುದಿನ ಹಾಚಿ ಮತ್ತೆ ಸ್ಟೇಷನ್ ನೆಡೆಗೆ ಹೊರಟಿತು ತನ್ನ ಒಡೆಯ ಬರುತ್ತಾನೆಂದು.. ದಿನವಿಡೀ ಅಲ್ಲಿಯೇ ಕುಳಿತುಕೊಂಡಿತು.. ಹೀಗೆಯೇ ಕೆಲವು ದಿನಗಳು ಕಳೆದವು. ಪ್ರೊಫೆಸರ್ ಹೆಂಡತಿ & ಮಗಳು ತಮ್ಮ ಅಳಿಯನ ಮನೆಗೆ ಶಿಫ್ಟ್ ಆದರು. ಹಾಚಿಯೇನ್ನು ತಮ್ಮ ವ್ಯಾನಿನಲ್ಲಿ ಕುಳ್ಳಿರಿಸಿಕೊಂಡು ಹೊರಟು ಹೋದರು.. ಆದರೆ ಹಾಚಿಯ ಬಾಡಿದ ಮುಖ ಬಾಡಿದ ಹಾಗೆಯೇ ಊಳಿದಿತ್ತು ಪ್ರೊಫೆಸರ್ ಇಲ್ಲದೆ ಅದು ನರಕಯಾತನೆ ಅನುಭವಿಸುತ್ತಿತ್ತು! ಇತ್ತ ಅಳಿಯನ ಮನೆಗೆ ಬಂದು ಇಳಿದುಕೊಂಡ ಹಾಚಿ ಏನೋ ಒಂದು ಚಿಂತೆಯಲ್ಲಿ ಸುಮ್ಮನೆ ಕುಳಿತುಕೊಂಡಿತ್ತು.. ಎಲ್ಲರೂ ಮನೆಗೆ ಬಂದಮೇಲೆ ಸಮಯನೋಡಿ ಅಲ್ಲಿಂದ ಓಡಿಹೋಯಿತು ಪ್ರೊಫೆಸರ್ ಅಳಿಯ ಅದರ ಹಿಂದೆ ಹಾಚಿ ಹಾಚೀ ..ಹಾಚೀ ಎಂದು ಎಷ್ಟು ಕೂಗಿದರು ಮರಳಿ ನೋಡದೆ ಓಡಿಹೋಯಿತು.. ಓಡಿಹೊಗುವಾಗ ಟ್ರೈನ್ ಶಬ್ದ ಕೇಳಿ ಹಳಿಯ ಕಡೆಗೆ ಹೋಗಿ ಆ ಹಳಿಯ ಮುಖಾಂತರ ಮತ್ತೆ ಪ್ರೊಫೆಸರ್ ಬರುತ್ತಿದ್ದ ಸ್ಟೇಷನ್ ತಲುಪಿತು, ತಲುಪಿ ಮತ್ತೆ ಪ್ರೊಫೆಸರ್ ಬರುತ್ತಾರೆಂದು ತಾನು ಕುಳಿತುಕೊಳ್ಳುವ ಕಟ್ಟೆಯ ಮೇಲೆ ಕುಳಿತುಕೊಂಡಿತು.. ಅಲ್ಲಿಗೆ ಬಂದ ಪ್ರೊಫೆಸರ್ ಅಳಿಯ ಮತ್ತು ಮಗಳು ಎಷ್ಟು ಕರೆದರೂ ಅವರ ಜೊತೆ ಹೋಗಲಿಲ್ಲ ‘ಹಾಚಿ’.
ಇವತ್ತು ನೀವು ಜಪಾನ್ ಗೆ ಹೋದರೆ ಅಲ್ಲಿನ ‘ಶಿಬುಯಾ’ ಟ್ರೈನ್ ಸ್ಟೇಷನ್ ಎದುರಿಗೆ ಹಾಚಿಯ ಕಂಚಿನ ಪುತ್ತಳಿ ಸಿಗುತ್ತದೆ! ಪ್ರತಿವರ್ಷ ಹಾಚಿಗೊಸ್ಕರ ಅಲ್ಲಿ ಸಮಾರಂಭವನ್ನು ಏರ್ಪಡಿಸುತ್ತಾರೆ ಅದರ ನಿಯತ್ತು, ಪ್ರೀತಿಯ ಬಗ್ಗೆ ಹಾಡಿ ಹೊಗಳುತ್ತಾರೆ!
ಹಾಚಿಯ ಬಗ್ಗೆ ಹೇಳಲು ಇದು ನನ್ನ ಒಂದು ಸಣ್ಣ ಪ್ರಯತ್ನ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಹಾಚಿಯ ಮೇಲೆ ತೆಗೆದಿರುವ ಎರಡು ಚಿತ್ರಗಳನ್ನು ನೋಡಿ ‘Hachiko: A Dog’s Story ‘ & ‘hachiko monogatari’ …. ಒಂದು ಮಾತು ಅಂತರು ಸತ್ಯ ನೀವು ಅಳದೆ ಇ ಚಿತ್ರವನ್ನು ಪೂರ್ತಿಯಾಗಿ ನೋಡಲು ಸಾದ್ಯವಿಲ್ಲ ! ನೋಡಿ ನಿಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳಿ…
ಇಂತಹ ವಂಡರ್ ಡಾಗ್ ‘ಹಾಚಿ’ಗೆ ಹ್ಯಾಟ್ಸ್ಅಪ್ !
Yes,i have seen the movie
ಎರಡು ಮೂರು ವರ್ಷಗಳ ಹಿಂದೆ ನೋಡಿದ ಒಂದು ಉತ್ತಮ ಚಿತ್ರವನ್ನು ಮೆಲುಕು ಹಾಕಿಸಿದ್ದಕ್ಕೆ ವಂದನೆಗಳು ಪ್ರಶಾಂತ.. ರಿಚರ್ಡ್ ಗೇರ್ ಹಾಗೂ ನಾಯಿಯ ಅಭಿನಯ ಮರೆಯಲಾಗದು.. ವಿಶೇಷವಾಗಿ ಆ ಒಡೆಯನನ್ನು ಅಂದು ಕೆಲಸಕ್ಕೆ ಹೋಗದಂತೆ ತಡೆಯುವ ದೃಶ್ಯವಂತೂ ನಮ್ಮನ್ನು ಭಾವೊದ್ವೇಗಕ್ಕೊಳಗಾಗುವಂತೆ ಮಾಡುತ್ತದೆ
ಮಾನ್ಯರೇ, ನಾನು ಚಲನಚಿತ್ರ ನೋಡಿಲ್ಲಾ. ಆದರೆ, ನಿಜವಾದ ಕಥೆ ಒಳ್ಳೆಯ ನಿರೋಪಣೆ. ಕೊನೆಯ ಪ್ಯಾರ ಓದುವಾಗ ಎಂತಹಾ ಕಲ್ಲು ಹೃದಯದವರಾದರೂ ಸಹ ಕಣ್ಣು ತೇವಗೊಳ್ಳುತ್ತವೆ. ಮನುಷ್ಯನ ಬಳಿ ಅಲ್ಪಕಾಲವಿದ್ದರೂ ಹಾಕಿದ ಅನ್ನಕ್ಕೆ ಋಣ ತೀರಿಸಲು ತಮ್ಮ ಪ್ರಾಣವನ್ನೇ ಪಣವಾಗಿಡುತ್ತವೆ. ದುರಾದೃಷ್ಟಕ್ಕೆ ಅವುಗಳು ಅಲ್ಪ ವಯಸ್ಸಿನವು ನಮ್ಮ ಕಣ್ಮುಂದೆಯೇ ಪ್ರಾಣಬಿಡುವುದನ್ನು ನೋಡಲು ಮತ್ತು ಸಹಿಸಲು ಸಾಧ್ಯವಾಗುವುದಿಲ್ಲ. ಪ್ರೀತಿಯಿಂದ ಸಾಕಿದ ಪ್ರಾಣಿಗಲು ನಮ್ಮ ಕಣ್ಮುಂದೆಯೇ ಪ್ರಾಣಬಿಡುವುದನ್ನು ನೋಡಲು ಸಾಧ್ಯವಾಗುವುದಿಲ್ಲ.
ಚೆನ್ನಾಗಿ ಬರೆದಿದ್ದೀರಿ ಪ್ರಶಾಂತ..ಹಾಚಿ ನೋಡ ಬಯಸುವವರಿಗೆ,. ಇಲ್ಲಿದೆ ನೋಡಿ
youtube.com/watch?v=nxNMzVDp4wQ
ತಪ್ಪದೇ ನೋಡಿ. ಒಂದೂವರೆ ಗಂಟೆ ಕಳೆದಿದ್ದು ಗೊತ್ತಾಗುವುದಿಲ್ಲ..
ಜಪಾನ್ ಮತ್ತು ಇಂಗ್ಲೀಶ್ ಭಾಷೆಗಳಲ್ಲಿ ಈ ಚಿತ್ರ ಬಂದಿದೆ. ಇದು ನೈಜ ಘಟನೆಯನ್ನಾಧರಿಸಿದ ಚಿತ್ರ ಎಂದು ಹೇಳುತ್ತಾರೆ. ಆ ರೈಲ್ವೆ ನಿಲ್ದಾಣಕ್ಕೆ ಹಚಿಕೊ ನಿಲ್ದಾಣವೆಂದೆ ಹೆಸರಿಸಿದ್ದಾರೆಂದು ಹೇಳಲಾಗುತ್ತದೆ. ಮತ್ತು ಆ ಹಚಿಕೊದೊ ನೈಜ ಚಿತ್ರ ಲಭ್ಯವಿದೆ.
hey.am also watched that movie may be 7 or 8 months ago.its realllllllllllyyyyyyyyyyyy superb.
one of the kind heart person gave that c.d.making,narration excellent.try to watch.