Skip to content

ಡಿಸೆಂಬರ್ 3, 2013

7

6-5=2 ಚಿತ್ರ ವಿಮರ್ಶೆ

by ನಿಲುಮೆ

-ಡಾ.ಅಶೋಕ್ ಕೆ ಆರ್

6-5=2ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.
ಎರಡು ಘಂಟೆಯ 6-5=2 ಚಿತ್ರ ಪ್ರೀತಿ ಪ್ರೇಮದ ಚಿತ್ರಗಳ ಗುಂಗಿನಲ್ಲಿ ಕಳೆದುಹೋದ ಪ್ರೇಕ್ಷಕರನ್ನು ಖಂಡಿತ ಹೊಡೆದೆಬ್ಬಿಸುತ್ತದೆ! ಬಹುಶಃ ಉಪೇಂದ್ರ ನಿರ್ದೇಶನದ ಶ್ ಚಿತ್ರದ ನಂತರ ಕನ್ನಡದಲ್ಲಿ ಬಂದ ಪರಿಣಾಮಕಾರಿ ‘ದೆವ್ವದ’ ಚಿತ್ರ ಎಂದರೆ ತಪ್ಪಲ್ಲ. ಕೊನೇಪಕ್ಷ ಶ್  ಸಿನಿಮಾದಲ್ಲೂ ಪ್ರೀತಿ ಪ್ರೇಮ ಕಾಮ ಹಾಡು ಫೈಟುಗಳಿದ್ದವು. ಈ ಚಿತ್ರದಲ್ಲಿ ಅದೂ ಇಲ್ಲ. ಆರು ಮಂದಿ ಟ್ರೆಕ್ಕಿಂಗಿಗೆಂದು ಹೋಗುತ್ತಾರೆ, ಕಾಡಿನ ಪರಿಸರ ಗಮನಿಸಿದರೆ ಗುಂಡ್ಯ, ಬಿಸಿಲೆ, ಕುಮಾರಪರ್ವತವಿರಬೇಕು. ಆ ಆರು ಜನರಲ್ಲಿ ಒಬ್ಬ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಬೇಕೆಂಬ ಕನಸನ್ನೊತ್ತವನು. ತನ್ನ ಗುರುವಿನಿಂದ ಒಂದು ಕ್ಯಾಮೆರಾ ತರುತ್ತಾನೆ ಟ್ರೆಕ್ಕಿಂಗಿನ ಪ್ರತಿ ಘಟ್ಟವನ್ನು ಚಿತ್ರಿಸಬೇಕೆಂಬ ಆಸೆಯೊಂದಿಗೆ. ಇಡೀ ಚಿತ್ರ ಆ ಕ್ಯಾಮೆರಾದಲ್ಲಿ ಚಿತ್ರಿತವಾದ ‘ನೈಜ’ ದೃಶ್ಯಗಳಷ್ಟೇ! ಟ್ರೆಕ್ಕಿಂಗಿನ ಸಮಯದಲ್ಲಿ ನಡೆದ ತಮಾಷೆ ಸಿಟ್ಟು ಸೆಡವು ದುರ್ಘಟನೆಗಳು ಅಲ್ಲಿನ ರಮ್ಯ ಪರಿಸರವೆಲ್ಲ ಲೇಟ್ ರಮೇಶನ ಕ್ಯಾಮೆರಾದಲ್ಲಿ ಹಸಿಹಸಿಯಾಗಿ ಬಂಧಿಯಾಗಿದೆ. ಚಾರಣಕ್ಕೆಂದು ಬಂದವರ ಮೇಲೆ ಆ ಪರಿಸರದಲ್ಲಿನ ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡುತ್ತವೆ. ಬದುಕುವರ್ಯಾರು, ಸಾಯುವವರ್ಯಾರು, ಕಾಣೆಯಾಗುವವರ್ಯಾರು ಎಂಬುದೇ ಚಿತ್ರದ ಹೂರಣ. ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡಲು ಕಾರಣವೇನು ಎಂಬುದರ ವಿವರವಿಲ್ಲ, ಮನದಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಯಾವ ವಿವರಗಳೂ ಚಿತ್ರದಲ್ಲಿಲ್ಲ! ಯಾಕೆಂದರೆ ಸ್ವರ್ಣಲತಾ ಪ್ರೊಡಕ್ಷನ್ನಿನ ಜಾಹೀರಾತು ತಿಳಿಸುವಂತೆ ಇದು ಚಲನಚಿತ್ರವಲ್ಲ! ನೈಜ ವಿಡಿಯೋ ಅಷ್ಟೇ!!
ಈ ಚಿತ್ರದ ನಿರ್ದೇಶಕರು (ಅಶೋಕ್ ಎಂದು ಒಂದು ವೆಬ್ ಪುಟದಲ್ಲಿ ಓದಿದ ನೆನಪು) ಚಿತ್ರ ಮುಗಿದ ನಂತರವೂ ಇದು ನೈಜ ವಿಡೀಯೋವೆಂಬ ಭಾವನೆಯೇ ಉಳಿಯಲೆಂಬಂತೆ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಕೊನೆಗೆ ತಮ್ಮ, ತಮ್ಮ ತಂತ್ರಜ್ಞರ, ಕಲಾವಿದರ ಹೆಸರುಗಳ್ಯಾವುವನ್ನೂ ಚಿತ್ರದ ಆರಂಭದಲ್ಲಾಗಲೀ ಅಂತ್ಯದಲ್ಲಾಗಲೀ ತೋರಿಸೇ ಇಲ್ಲ! ಕೆಟ್ಟ ಚಿತ್ರಗಳಲ್ಲೂ ತಮ್ಮ ಹೆಸರು ಮಿಂಚುತ್ತಲೇ ಇರಬೇಕು ಎಂದು ಬಯಸುವ ಅನೇಕರ ನಡುವೆ ಈ ಸಿನಿಮಾದವರ ಸಿನಿಮಾ ಪ್ರೀತಿಗೆ ಮೆಚ್ಚುಗೆ ಸೂಚಿಸಲೇ ಬೇಕು. ಇಲ್ಲಿ ಗೆಲ್ಲುವುದು ಸಿನಿಮಾ, ಅದರ ಚಿತ್ರಕಥೆ, ಛಾಯಾಗ್ರಹಣ, ಅದ್ಭುತ ಧ್ವನಿಗ್ರಹಣ. ತಿಗಣೆ, ಜೊಲ್ಲು ಪ್ರಕಾಶ, ಬೋಟಿ ರಮೇಶ, ನವೀನ, ದೀಪಾ, ಸೌಮ್ಯ ಪಾತ್ರದಲ್ಲಿ ಪ್ರತಿಯೊಬ್ಬರು ನೈಜತೆಗೆ ಹತ್ತಿರವಾಗಿ ಅಭಿನಯಿಸಿದ್ದಾರೆ. ಜೊಲ್ಲು ಪ್ರಕಾಶ ಮತ್ತು ತಿಗಣೆಯ ಪಾತ್ರಧಾರಿಗಳು ಅತಿ ಹೆಚ್ಚು ಹತ್ತಿರವಾಗುತ್ತಾರೆ, ಮುಂದೆ ಅನೇಕ ಚಿತ್ರಗಳಲ್ಲಿ ಇವರನ್ನು ಕಾಣಲಾರಂಭಿಸಿದರೆ ಅಚ್ಚರಿಯೇನಿಲ್ಲ. ಭಯಹುಟ್ಟಿಸುವ ದೃಶ್ಯಗಳು, ಬೆಚ್ಚಿಬೀಳಿಸುವ ಅನೇಕ ದೃಶ್ಯಗಳಿವೆ ಚಿತ್ರದಲ್ಲಿ. ‘ಆssss’ ಎಂದು ಪ್ರೇಕ್ಷಕರು ಅಲ್ಲಲ್ಲಿ ಗಾಬರಿಯಿಂದ ಕಿರುಚುವುದು ಚಿತ್ರದ ಪ್ರಯತ್ನಕ್ಕೆ ಸಂದ ಜಯ. ಇದರ ಜೊತೆಯಲ್ಲಿ ನಗಿಸುವ ‘ಹಾರರ್ ದೃಶ್ಯಗಳೂ’ ಇವೆ! ಮುಖ್ಯವಾಗಿ ದೆವ್ವ/ಮೋಹಿನಿ ರಾಗವಾಗಿ ಇವರ ಹೆಸರು ಹಿಡಿದು ಕೂಗುವುದು ಮತ್ತು ಕೊನೆಯಲ್ಲಿ ಮೂಡಿಬರುವ ದೆವ್ವ! ಇವೆರಡು ದೃಶ್ಯಗಳ ಜಾಗದಲ್ಲಿ ಮತ್ತಷ್ಟು ಭೀತಿ ಹುಟ್ಟಿಸುವ ಧ್ವನಿಗ್ರಹಣಕ್ಕೆ ಒತ್ತು ಕೊಟ್ಟಿದ್ದರೆ ಸಿನಿಮಾ ನೈಜ ಘಟನೆಯೆಂದು ಭಾವಿಸುವವರ ಸಂಖೈ ಹೆಚ್ಚುತ್ತಿತ್ತು! ಅದೇನೇ ಇರಲಿ ಈ ಚಿತ್ರ ನೋಡಿದವರ್ಯಾರಾದರೂ ಚಾರಣಕ್ಕೆ ಹೋದರೆ ಈ ಚಿತ್ರದ ದೃಶ್ಯಗಳು ನೆನಪಾಗುವುದು ಖಂಡಿತ!
ಈ ಚಿತ್ರ ಸಂಪೂರ್ಣವಾಗಿ ಕನ್ನಡದದ್ದೆಂದು ಹೇಳುವುದು ಕಷ್ಟ. 1999ರಲ್ಲಿ ತೆರೆಕಂಡ ಆಂಗ್ಲ ಚಿತ್ರ Blair Witch Hunt ಚಿತ್ರದಿಂದ ಸ್ಪೂರ್ತಿಗೊಂಡಿರುವ ಚಿತ್ರವಿದು. ಚಿತ್ರದಲ್ಲಿ ಸಂಪೂರ್ಣ ಕನ್ನಡದ ಸೊಗಡು, ಕರ್ನಾಟಕದ ಚಾರಣಪ್ರಿಯ ಸ್ಥಳಗಳು, ಮೂಲ ಚಿತ್ರಕ್ಕಿಂತ ಭಿನ್ನವಾದ ಬಹುತೇಕ ದೃಶ್ಯಗಳು ಇರುವುದರಿಂದ ರಿಮೇಕ್ ಎನ್ನಲಾಗದೇನೋ?! ಒಟ್ಟಿನಲ್ಲಿ ಹೆಚ್ಚಿನ ಪ್ರಚಾರವೂ ಇಲ್ಲದೆ ಯಾವುದೇ ‘ಸ್ಟಾರ್ ಕಾಸ್ಟ್’ ಇಲ್ಲದ ಈ ಚಿತ್ರ ಬಹಳಷ್ಟು ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುತ್ತಿದೆ. ಅಷ್ಟರಮಟ್ಟಿಗೆ ಚಿತ್ರ ಯಶ ಕಂಡಿದೆ. ‘ಸ್ಪೂರ್ತಿ’ ಪಡೆಯುವುದನ್ನೂ ನಿಲ್ಲಿಸಿ ಮತ್ತಷ್ಟು ಹೊಸ ಚಿಂತನೆಯ ಸಿನಿಮಾಗಳು ಈ ಚಿತ್ರತಂಡದಿಂದ ಮೂಡಿ ಬರಲಿ.
ಅಂದಹಾಗೆ ಏನಿದು 6-5=2 ಅಂದರೆ? ನನಗಂತೂ ತಿಳಿಯಿತು, ಸಿನಿಮಾ ನೋಡಿ ನೀವೂ ಅರಿತುಕೊಳ್ಳಿ……
Advertisements
7 ಟಿಪ್ಪಣಿಗಳು Post a comment
  1. ಚಿತ್ರದ ಟ್ರೈಲರ‍್ರೇ ತುಂಬಾ ಅದ್ಬುತವಾಗಿದೆ.. ಚಿತ್ರವನ್ನು ನೋಡಬೇಕು.

    ಉತ್ತರ
    • ನವೀನ
      ಡಿಸೆ 5 2013

      ಇವತ್ತು ಸಂಜೆ ನೋಡುವ ಅಂತ ಹೋದರೆ ಟಿಕೆಟ್ ಸಿಗಲಾರದೆ ವಾಪಸ್ಸು ಬರಬೇಕಾಗಿ ಬಂತು

      ಉತ್ತರ
  2. ಡಿಸೆ 9 2013

    ಮೂವಿ ನಿಜಕ್ಕೂ ಚೆನ್ನಾಗಿದೆ. ಆದರೆ ಆ ವಿಡಿಯೊ ನೈಜ್ಯವಾದದ್ದು ಎಂದು ಒಪ್ಪಿಕೊಳ್ಳುವದು ಕಷ್ಟ. ಬಹಳಷ್ಟು ಸಂದೇಹಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಉದಾರಣೆಗೆ, ಕಾಡಿನಲ್ಲಿ ದಾರಿ ತಪ್ಪಿ ಮತ್ತದೆ ಜಾಗಕ್ಕೆ ಮರಳುವದು. ನಂತರ ದಾರಿ ಸಿಕ್ಕ ನಂತರವೂ ರಾತ್ರಿಯವರೆಗೂ ಕಾಡಿನಿಂದ ಹೊರಹೋಗದೆ ಇದ್ದುದು. ಭೂತದ ಆಕೃತಿ ಥೇಟ್ ಇಂಗ್ಲೀಷ್ ಫಿಲ್ಮಿನ ದೆವ್ವದ ಆಕೃತಿಯನ್ನೆ ಹೋಲುವದು ಇತ್ಯಾದಿ. ಸಿನೇಮಾದ creation ಬಹಳಷ್ಟು ಮಟ್ಟಿಗೆ ಇಂಗ್ಲೀಷ್ ಮೂವಿಯಾದ ‘Paranormal activity’ ಯನ್ನು ಹೋಲುತ್ತದೆ(ಆ ಮೂವಿಯಲ್ಲಿಯೂ ವಿಡಿಯೊ ದೃಷ್ಯಗಳು ನೈಜ್ಯವೆಂದು ಹೇಳಿಕೊಂಡು ಚಿತ್ರಿಸಲಾಗಿದೆ). ಆದರೂ ಮೂವಿ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ ಎನ್ನುವದರಲ್ಲಿ ಯಾವ ಸಂಶಯವೂ ಇಲ್ಲ.

    ಉತ್ತರ
  3. ಪಿಸುಮಾತು
    ಡಿಸೆ 10 2013

    ನಿನ್ನೆ ಈ ಚಿತ್ರವನ್ನು ನೋಡಿ ಬಂದೆ. ಕನ್ನಡದ ಮಟ್ಟಿಗೆ ಅದ್ಬುತವಾದ ಪ್ರಯತ್ನ ಎಂದೇ ಹೇಳಬೇಕು.
    ಹಾಗೆಯೇ ಚಿತ್ರದಲ್ಲಿ ತೋರಿಸಿರುವ ಯಾವ ವೀಡಿಯೋ ಸಹ ನೈಜ ಅಂತ ಯಾರೂ ಅಂದುಕೊಳ್ಳುವುದು ಅನಗತ್ಯ. ಅದು ಚಿತ್ರ ತಂಡದ ಟ್ರಿಕ್ಸ್ ಅಷ್ಟೇ. ಏಕೆಂದರೆ ೨೦೧೦ ರಲ್ಲಿ ಮೂವರು ಟ್ರೆಕ್ಕಿಂಗ್ ಹೋಗಿ ದಾರಿ ತಪ್ಪಿಸಿಕೊಂಡು ಮೃತರಾಗಿದ್ದು ಅಂದು ಸುರಿದ ಭಯಂಕರ ಮಳೆಯಿಂದಾಗಿ ಮಾತ್ರ. ಆದರೆ ಈ ಚಿತ್ರದಲ್ಲಿ ಮಳೆಯ ಯಾವ ಸುಳುಹು ಸಹ ಇಲ್ಲ. ಅಲ್ಲದೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ವಿಷಯಗಳಲ್ಲಿ ನಿರ್ದೇಶಕರು ‘ನೈಜತೆ‘ ಸೃಷ್ಟಿಸುವಲ್ಲಿ ಎಡವಿದ್ದಾರೆಂಬುದು ತಿಳಿಯುತ್ತದೆ. ಹಾಗಾಗಿ ನೈಜತೆಯನ್ನು ಹೊರಗಿಟ್ಟು ಕೇವಲ ಒಂದು ಚಿತ್ರವಾಗಿ ನೋಡಿದರೆ ಅದ್ಬುತ ಅನುಭವ ನೀಡುವ ಚಿತ್ರವಿದು.

    ಉತ್ತರ
  4. ನಿನ್ನೆ ನಾನು ನೋಡಿದೆ.ಇದು ನಿಜವಾಗಿ ನಡೆದಿರುವಂತದ್ದು ಅನ್ನುವ ಭ್ರಮೆ ಹುಟ್ಟಿಸುವಂತೆ ಚಿತ್ರಿಸಿದ್ದಾರೆ.ನಾ ಹೋಗಿದ್ದ ಥಿಯೇಟರಿನಲ್ಲಿ ಹಾಳಾದ್ದು ಜನ ಹೆದರಿಕೊಂಡು ಮಧ್ಯೆ ಮಧ್ಯೆ ಮಾತನಾಡುತ್ತಲೇ ಇದ್ದರು 🙂
    ನಮ್ಮ ಹಿಂದೆ ಒಂದು ಫ್ಯಾಮಿಲಿ ಕುಳಿತಿತ್ತು.ಕ್ಲೈಮಾಕ್ಸ್ ದೃಶ್ಯದಲ್ಲಿ ಮೋಹಿನಿ ಕಾಣಿಸಿಕೊಂಡಾಗ, ಆ ಫ್ಯಾಮಿಲಿಯ ಹುಡುಗಿ ಕಿರುಚಿಕೊಂಡು ಅಳಲು ಶುರುಮಾಡಿದಳು.ನನಗೆ ಒಮ್ಮೆಲೇ ಎರಡೆರಡು ಕಿರುಚಾಟ ಕೇಳಿದ ಅನುಭವ. ಅವಳ ಹಿಂದೆ ಕುಳಿತಿದ್ದ ಇನ್ನೊಬ್ಬ, ’ಹೇ ಸಾಕು ಆಫ್ ಮಾಡು ಗುರು’ ಅನ್ನಲಿಕ್ಕೆ ಶುರುಮಾಡಿದ್ದ 🙂
    ಕನ್ನಡದಲ್ಲಿ ಇಂತ ಹೊಸ ಪೀಳಿಗೆಯ ನಿರ್ದೇಶಕರು ಹೆಚ್ಚುತ್ತಿರುವುದು ಸಂತೋಷದ ವಿಷಯ.

    ಉತ್ತರ
  5. mohan
    ಡಿಸೆ 16 2013

    film super, adhare nanu obba graphic artist namage yavudu nyja yavudu dupe antha gothaguthe adhare kannadalli namge entha film kotta vobba extra ordinary director sikkidralla anth kushi aguthe.

    ಉತ್ತರ
  6. rakesh
    ಡಿಸೆ 9 2017

    6-5=2 ಈ ಸಿನಿವಮ ಅದ್ಬತಮಯ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments