ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 13, 2013

8

ಸೆಮಿಫೈನಲ್ ಮತ್ತು ಫೈನಲ್

‍ನಿಲುಮೆ ಮೂಲಕ

-ನವೀನ್ ನಾಯಕ್

4 States Election1ಭಾರತದ  ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆ ಹಲವು ಹೊಸ ವಿಚಾರಗಳನ್ನು ತೆರೆದಿಟ್ಟಿದೆ.
1) ನೋಟ ( none of the above ) ಬಳಸಲು ಮೊದಲು ಶುರು ಮಾಡಿದ್ದು.
2) ಜನಲೋಕಪಾಲ್ ಹೋರಾಟದಿಂದ ಬಂದ ರಾಜಕೀಯ ಪಕ್ಷ ಆಪ್
3) ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಪೂರ್ವ ತಯಾರಿಗೆ ಜನರ ನಾಡಿ ಮಿಡಿತ ತಿಳಿಯಲು ಸಿಕ್ಕ ಒಂದು ಅವಕಾಶ.
4) ಮೋದಿ ಮತ್ತು ಕಾಂಗ್ರೆಸ್ ಹಣಾಹಣಿ.

ಇಡೀ ದೇಶದ ಪ್ರಜೆಗಳನ್ನು ಡಿಸೆಂಬರ್ 8 ಕ್ಕೆ ಗಮನೀಯವಾಗುವಂತೆ ಮಾಡಿದ್ದು ಈ ನಾಲ್ಕು ಕಾರಣಗಳಿಗಾಗಿ. ಪ್ರಸಕ್ತ ರಾಜಕಾರಣದ ವೈಫಲ್ಯದಿಂದಾಗಿ ಹೈರಾಣಾಗಿರುವ ಜನರು ರಾಜಕೀಯಕ್ಕೆ ಯಾವ ಪಾಠ ಕಲಿಸಬಹುದೆಂದು ಎಲ್ಲರೂ ತಿಳಿಯಲು ಬಯಸುತಿದ್ದರು. ಮತದಾರ ಪ್ರಭು ಇಲ್ಲಿ ಯಾವ ಅಂಶ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬಹುದು, ಆತನ ಸಧ್ಯದ ಮನಸ್ಥಿತಿ ಏನು. ಇದು ಆಯಾ ರಾಜ್ಯಕ್ಕೆ ಸಂಬಂದಪಟ್ಟರೂ ದೇಶಕ್ಕೆ ಖಂಡಿತಾ ಮೇಲಿನ ನಾಲ್ಕು ಕಾರಣಗಳಿಗಾಗಿ ಮಾರ್ಗದರ್ಶಿಯಾಗಿದೆ.

1) ನೋಟ- ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸುಪ್ರೀಂ ತೀರ್ಪಿನ ಅನ್ವಯ ವೋಟಿಂಗ್ ಮೆಷೀನಲ್ಲಿ ಬಳಸಲಾಯಿತು. ಇದೊಂದು ಕ್ರಾಂತಿಕಾರಕ ಬದಲಾವಣೆಯಾದರೂ ಅಭ್ಯರ್ಥಿಗಳ ಮೇಲೆ ಇದರ ಪ್ರಭಾವ ಬೀರದಂತಿದೆ. ಚುನಾವಣ ಆಯೋಗ ಇದನ್ನು ಬೆಲೆ ಇಲ್ಲದ ಮತಗಳು ಎಂದು ಪರಿಗಣಿಸಿವೆ. ಏಕೆಂದರೆ ನೋಟದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಗಳನ್ನು ಆಯೋಗ ಕಂಡುಕೊಂಡಿಲ್ಲ. ಅದೇನೆ ಇರಲಿ, ಇದರಿಂದ ನಿಂತಿರುವವರೆಲ್ಲ ಕಳ್ಳರೇ ನಂಗೆ ಯಾರೂ ಇಷ್ಟವಿಲ್ಲದ ಕಾರಣ  ಮತದಾನ ಮಾಡುತ್ತಿಲ್ಲ ಎಂದು ನೆಪವೊಡ್ಡಿ ನಿರ್ಲಕ್ಷ್ಯವಹಿಸುತಿದ್ದ ಸುಶಿಕ್ಷಿತರ ಪ್ರತಿಕ್ರಿಯೆ ತಿಳಿಯಬಹುದಿತ್ತು. ನಾಲ್ಕು ರಾಜ್ಯದಲ್ಲಿ 11.53 ಕೋಟಿ ಮತ ಚಲಾವಣೆಯಾಗಿದೆ ಅದರಲ್ಲಿ 1.31 ಶೇಕಡಾ ಮತದಾರರು ಈ ವ್ಯವಸ್ತೆಯನ್ನು ಬಳಸಿದ್ದಾರೆ.

ದೆಹಲಿಯಲ್ಲಿ 49,730 , ಛತ್ತೀಸ್ಘಡದಲ್ಲಿ 3.56 ಲಕ್ಷ , ಮಧ್ಯಪ್ರದೇಶದಲ್ಲಿ  5.9 ಲಕ್ಷ , ರಾಜಸ್ತಾನದಲ್ಲಿ 5.67 ಲಕ್ಷ ಜನರು ಅಭ್ಯರ್ಥಿಗಳ ಮೇಲೆ ಈ ಕ್ರಮ ಕೈಗೊಂಡಿದ್ದಾರೆ. ಇದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಕರೆಗಂಟೆ. ನೋಟ ಒತ್ತುವವನು ಸುಮ್ಮನೆ ಒತ್ತುವುದಿಲ್ಲ ಅಭ್ಯರ್ಥಿಯ ಬಗ್ಗೆ ತನಗೆ ತಿಳಿದಿರುವ ರೀತಿಯಲ್ಲಿ ವಿಮರ್ಶಿಸತೊಡಗಿದ್ದಾನೆ. ಹೀಗಾಗಿ ರಾಜಕೀಯ ಪಕ್ಷಗಳು ಒಳ್ಳೆಯ ಅಭ್ಯರ್ಥಿಗೆ ಬೆಲೆ ಕೊಡಲು ಸಹಾಯಕವಾಗಿವೆ. ಹಣಬಲ ಜನಬಲವಿದ್ದರೂ ಮತಬಲ ಸಿಗುವುದು ಕಷ್ಟವಾಗುತ್ತದೆ.  ಎಲ್ಲಾ ಪಕ್ಷಗಳಿಗೆ ತಿಳಿಯಬೇಕಾಗಿದ್ದು ಮತದಾರ ಬದಲಾಗಿದ್ದಾನೆ ಪ್ರೌಢನಾಗಿದ್ದಾನೆಂಬುದು. ಇದನ್ನು ಅರಿಯದಿದ್ದರೆ ಕೊಚ್ಚಿ ಹೋಗುವುದು ಖಂಡಿತ.  ಉದಾಃ ದೆಹಲಿ.

2) ಆಪ್! ಹೌದು ಅಕ್ಷರಶಃ ಇದರ ಬಗ್ಗೆ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಈಗಿನ ಸನ್ನಿವೇಶಕ್ಕೆ ಇಂತಹದೊಂದು ಉತ್ತರದ ಜರೂರತ್ತಿತ್ತು. ಇಲ್ಲಿ ಕೊಟ್ಟ ಪರ್ಯಾಯವಂತೂ ಅವಿಸ್ಮರಣೀಯ. ಅಹಂನಿಂದ ಆನೆ ನಡದದ್ದೇ ದಾರಿ ಎಂಬಂತೆ ವರ್ತಿಸುತಿದ್ದ ರಾಜಕೀಯದ ಬೆನ್ನಹುರಿ ಮುರಿದಂತಯೇ ಈ ಬೆಳವಣಿಗೆ. ಅದಕ್ಕಾಗಿ ಆಪ್ ಕಾರ್ಯಕರ್ತರಿಗೆ ತಲೆಬಾಗಲೇಬೇಕು. ಆಪ್ ನಾಯಕರ ಈಗಿನ ನಡೆ ಅದೇನೆ ಇರಲಿ ಮತದಾರ ಯಾವ ರೀತಿ ತಯರಾಗುತಿದ್ದಾನೆ ಎಂಬುವುದನ್ನು ಈ ಪಕ್ಷದ ಮುಖಾಂತರ ಹೊರ ಹಾಕಿದ್ದಾನೆ. ಯಾವುದು ಸಾದ್ಯವಿಲ್ಲವೋ ಅಂತ ಅಂದುಕೊಂಡಿದ್ದೆವೋ ಅದನ್ನು ಸಾಧ್ಯ ಮಾಡಿ ಡಿಸೆಂಬರ್ 8ರಂದು ನಮ್ಮ ಮುಂದೆ ಇಟ್ಟಿದ್ದಾನೆ. ಸೋತವರು ಗೆದ್ದವರು ಪರದಾಡುತ್ತಿರುವವರೆಲ್ಲಾ ಗಮನಿಸಿ ಜನರಿಗೆ ಅವಕಾಶ ಕೊಡಿ. ಅದಕ್ಕೆ ಒಳ್ಳೆಯ  ಉತ್ತರವನ್ನೇ ಅವನು ನೀಡುತ್ತಾನೆ. ಕಳ್ಳರೊಳಗೊಬ್ಬನನ್ನು ಆಯ್ಕೆ ಮಾಡಿ ಕೊಡಿ ಎಂದು ಆದೇಶ ಹೊರಡಿಸುವುದನ್ನು ಇನ್ನು ನಿಲ್ಲಿಸಲು ಪ್ರಯತ್ನಿಸಿ. ಪ್ರಜೆ ಬಯಸುವುದು ರಾಜಕೀಯವನ್ನು ಆಡಳಿತ ವಿರೋಧ ಪಕ್ಷಗಳನ್ನು ಒಳಗೊಂಡ ಸರಕಾರವನ್ನೇ ಹೊರತು ಬಾರ್ ಗಳನ್ನಲ್ಲ.

3) ಪಂಚ ರಾಜ್ಯದ ಚುನಾವಣೆ ಕಲಿಸಿರುವ ಪಾಠ ರಾಜಕೀಯದ ಅನುಭವಕ್ಕಿಂತ ಮಾಡಿರುವ ಕೆಲಸದ ಶಕ್ತಿಯೇ ಮುಖ್ಯ. ಜನರಲ್ಲಿ ಉಳಿಸಿಕೊಂಡಿರುವ ನಂಬಿಕೆ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಮತದಾರರೇ ಪ್ರಭುಗಳು ಎಂಬುದು ರಾಜಕಾರಿಣಿಗಳು ತಿಳಿಯಬೇಕಾಗಿದೆ. ಜನಲೋಕಪಾಲ್ ಬಿಲ್ಲಿಗಾಗಿ ಹೋರಾಟ ನಡೆಯುತಿದ್ದಾಗ, ನಿರ್ಭಯ ನ್ಯಾಯಕ್ಕಾಗಿ ಸಮಾಜದ ರಕ್ಷಣೆಗಾಗಿ ಹೋರಾಟ ನಡೆಯುತಿದ್ದಾಗ, ಆಗ ಜನಪ್ರತಿನಿದಿಗಳು ಕೊಟ್ಟ  ಉಡಾಫೆ ಉತ್ತರಗಳು ಇನ್ನು ನೀಡಲು ಯೋಚಿಸಬೇಕಾಗುತ್ತದೆ. ಎಸ್ ಮತದಾರ ಎಚ್ಚರಗೊಳ್ಳುತಿದ್ದಾನೆ. ಆತನಿಗೆ ಅರಿವಾಗಿದೆ ಅದರ ಮೌಲ್ಯ.  ಇನ್ನು ಆರು ತಿಂಗಳಲ್ಲಿ ಮಹತ್ತರ ಬದಲಾವಣೆಯಾಗುವುದು ಸಮಾಜದ ಮೇಲೆ ಅದರ ಪರಿಣಾಮ ಬೀಳುವುದು ಕನಿಷ್ಟವಷ್ಟೆ. ಮಹತ್ತರ ಬದಲಾವಣೆ ಎಂದರೆ ಓಲೈಸುವ ಯೋಜನೆ ಇರಬಹುದು, ತಮ್ಮ ತಮ್ಮ ಪಕ್ಷದ ಮುಂದಿನ ನಾಯಕರನ್ನು ಮುಂದಿಡುವುದಿರಬಹುದು. ಇವೆಲ್ಲ ಅಂಶಗಳು ಇನ್ನು ಮುಂದೆ ಜನರನ್ನು ಬದಲಿಸುವುದು ಕಷ್ಟ. ಕೇವಲ ಪಕ್ಷದ, ನಾಯಕನ , ಅಭ್ಯರ್ಥಿಯ ಚರಿತ್ರೆಯನ್ನಷ್ಟೇ ಹೆಚ್ಚು ಜನ ಗಮನಿಸುವುದು. ಈಗಾಗಲೇ ತಮ್ಮ ಕನಸು ಭವಿಷ್ಯವನ್ನು ತಮ್ಮ ಕಾರ್ಯವಿದಾನವನ್ನು ಜನರ ಮುಂದಿಡುವಲ್ಲಿ ನಾಯಕರು ಮುಗಿ ಬೀಳುತಿದ್ದಾರೆ. ಸಮಾವೇಶಗಳಾಗುತ್ತಿವೆ ಅಭ್ಯರ್ಥಿ ಮಾಡಿರುವ ಕೆಲಸದ ಬಗ್ಗೆ ತುಲನೆ ನಡೆಯತೊಡಗಿವೆ.

4) ಎಲ್ಲಾ ಪಕ್ಷಗಳು ನೈತಿಕ ಮತ್ತು ಅನೈತಿಕ ರಾಜಕಾರಿಣಿಗಳನ್ನು ಹೊಂದಿವೆ. ಒಂದು ಪಕ್ಷ ಅಧಿಕಾರದ ಸಮಯದಲ್ಲಿ ಜನತೆಯ ಆಶೋತ್ತರಗಳನ್ನು ಗಾಳಿಗೆ ತೂರಿದರೆ ಆ ಪಕ್ಷವನ್ನೋ ವ್ಯಕ್ತಿಯನ್ನೋ ಬದಲಿಸಲು ಚುನಾವಣೆಯಲ್ಲಿ ಮಾತ್ರ  ಅವಕಾಶ ಸಿಗುತ್ತದೆ. ತನ್ನ ಅಭ್ಯರ್ಥಿಗಳ ನೈತಿಕತೆಯ ಬಗ್ಗೆ ಗಮನವೀಯದ ರಾಜಕೀಯ ಪಕ್ಷಗಳ ಕಾರಣದಿಂದಾಗಿ ಪರ್ಯಾಯ ಎಂಬ ಅವಕಾಶ ಮಾತ್ರ ಜನಕ್ಕೆ ಇರುವುದು. ಈ ಪರ್ಯಾಯ ಶುದ್ದವಿಲ್ಲದಿದ್ದರೂ ಕೆಲವೊಮ್ಮೆ ಅನಿವಾರ್ಯವೂ ಆಗಿದೆ. ಇಲ್ಲವೇ ಆಮಿಷಕ್ಕೆ ಒಳಗಾಗಿ ಬೆಂಬಲಿಸಿ ನಂತರ ಪಶ್ಚತಾಪ ಪಡುವ ಹಳೇ ಖಾಯಿಲೆಯಿಂದ ಬಳಲುತ್ತಿರುವವರಿಂದ ಆಯ್ಕೆಯಾಗಿ ಬರುವುದೂ ಇದೆ. ರಾಜಕೀಯ ಪಕ್ಷಗಳು ದೆಹಲಿ ಪಾಠ ಕಲಿತು ಒಳ್ಳೆಯ ಅಭ್ಯರ್ಥಿಗಳಿಗೆ ಬೆಲೆ ನೀಡುವುದು ಉತ್ತಮ. ಇದೆಲ್ಲದರ ಹೊರತಾಗಿ ಈಗ ಅಧ್ಯಕ್ಷೀಯ ಮಾದರಿಯಲ್ಲಿ ಅಲೆ ಏಳತೊಡಗಿದೆ. ಒಂದೆಡೆ ಮೋದಿಯವರು ಆರ್ಭಟಿಸುತಿದ್ದರೆ ಯುವಕರು ಒಟ್ಟಾಗತೊಡಗಿದ್ದಾರೆ. ಮೋದಿಯನ್ನು ಎಷ್ಟು ಸಾದ್ಯವೋ ಅಷ್ಟು ತೀಡಿ ಬಿಟ್ಟರು ಪ್ರತಿಪಕ್ಷಗಳು. ಎಲ್ಲರೂ ವಿಫಲವಾಗತೊಡಗಿದ್ದಾರೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಈ ಸೆಮಿಫೈನಲ್ ನಲ್ಲಿ ಕಳಪೆ ಪ್ರದರ್ಶನ ನೀಡಿ ಚಿಂತೆಗೆ ಒಳಗಾಗಿದ್ದಾರೆ. ಅದರ ಹೈಕಮಾಂಡ್ ಪ್ರಧಾನಿ ಅಭ್ಯರ್ಥಿಯನ್ನು ಸಧ್ಯದಲ್ಲಿ ಘೋಷಿಸುವುದಾಗಿ ಹೇಳಿಕೊಂಡಿದೆ. ಹೈಕಮಾಂಡ್ ಮತ್ತು ಕುಟುಂಬದ ಸಂಬಂದದ ಬಿಕ್ಕಟ್ಟಿನಿಂದ ಹೊರಬರುವುದು ಅಸಾಧ್ಯವಾಗಿದೆ. ಬೇರೊಬ್ಬ ವ್ಯಕ್ತಿಯನ್ನು ಅದು ಘೋಷಿಸಿದರೂ ಪ್ರಯೋಜನವಾಗದು. ಕೈಗೊಂಬೆಯಾಗಿರುವ ಹಾಲಿ ಪ್ರಧಾನಿಯವರು ಜನರ ಕಣ್ಣ ಮುಂದಿದ್ದಾರೆ. ಸರಣಿ ಹಗರಣ, ಆಢಳಿತ ವೈಫಲ್ಯ , ಗಡಿ ಶಾಂತಿಯಲ್ಲಿ ಕಾಪಾಡುವಲ್ಲಿ ವಿಫಲವಾಗಿದ್ದಲ್ಲದೇ ದೇಶದೊಳಗೆ ನಡೆದ ಭಯೋತ್ಪಾದನೆ ತಡೆಯುವಲ್ಲೂ ವಿಫಲವಾಗಿದ್ದಾರೆ. ಇಂಥ ಗಂಭೀರ ಸಮಸ್ಯೆಗಳಿಗೆ ಸರಕಾರ ತೋರಿದ ದೋರಣೆ ನಿಜಕ್ಕು ಪ್ರಜೆಗಳಿಗಾದ ಅವಮಾನ. ಈ ಎಲ್ಲವನ್ನು  ಎದುರಿಸಿರುವ ಮತದಾರ 2014ರ ಚುನಾವಣೆಗೆ ಯಾವ ರೀತಿಯ ಉತ್ತರ ನೀಡುತ್ತಾನೆಂಬುದು ಕಾದು ನೋಡಬೇಕು.

ಚಿತ್ರಕೃಪೆ :tulunadunews.com

8 ಟಿಪ್ಪಣಿಗಳು Post a comment
 1. ಡಿಸೆ 13 2013

  ದೆಹಲಿಯ ಚುನಾವಣೆಯ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೊರನೋಟಕ್ಕೆ ಕಾಣದ ಮಹತ್ವದ ವಿಷಯವೊಂದು ತಿಳಿಯುತ್ತದೆ.
  ಮೇಲ್ನೋಟಕ್ಕೆ ಎಎಪಿ ಪಕ್ಷವು ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳಿಂದ ಸ್ಥಾನಗಳನ್ನು ಕಸಿದುಕೊಂಡಿದೆ.
  ಆದರೆ, ಪಕ್ಷಗಳಿಗೆ ಬಂದಿರುವ ಶೇಕಡಾವಾರು ಮತಗಳು ಬೇರೆಯೇ ಕಥೆಯನ್ನು ಬಿಚ್ಚಿಡುತ್ತವೆ.

  ಕಾಂಗ್ರೆಸ್ ಪಕ್ಷವು ಹಿಂದಿನ ಚುನಾವಣೆಯಲ್ಲಿ 40.31% ಮತ ಗಳಿಸಿತ್ತು. ಈ ಬಾರಿ, ಅದು ಗಳಿಸಿದ್ದು ಕೇವಲ 24.55%.
  ಭಾಜಪವು ಹಿಂದಿನ ಚುನಾವಣೆಯಲ್ಲಿ 36.84% ಗಳಿಸಿತ್ತು. ಈ ಬಾರಿ ಅದು ಗಳಿಸಿದ್ದು 33.07%.
  ಎಎಪಿ ಪಕ್ಷವು ಗಳಿಸಿದ್ದು 29.49%.

  ಮೇಲಿನ ಅಂಕಿ-ಅಂಶಗಳಿಂದ, ಎಎಪಿ ಪಕ್ಷವು ಕಾಂಗ್ರೆಸ್^ನಿಂದ ಮತಗಳನ್ನು ಕಸಿದಿರುವುದು ಕಾಣುತ್ತದೆ. ಆದರೆ, ಕಾಂಗ್ರೆಸ್^ಗಿಂತ ಬಹುದೊಡ್ಡ ಹೊಡೆತ ಬಿದ್ದಿರುವುದು ಬಹುಜನ ಸಮಾಜ ಪಕ್ಷಕ್ಕೆ.
  ಬಹುಜನ ಸಮಾಜ ಪಕ್ಷದ ಕುರಿತಾಗಿ ಯಾರೂ ಮಾತನಾಡದೇ ಇರುವುದರಿಂದ, ಮುಖ್ಯವಾದ ಈ ಅಂಶ ಯಾರೂ ಗಮನಿಸಿಲ್ಲವೆನಿಸುತ್ತದೆ.
  ಬಹುಜನ ಸಮಾಜ ಪಕ್ಷವು ಹಿಂದಿನ ಚುನಾವಣೆಯಲ್ಲಿ 14.05% ಗಳಿಸಿತ್ತು. ಈ ಬಾರಿ ಅದಕ್ಕೆ ಬಿದ್ದಿರುವುದು ಕೇವಲ 5.35%!!
  ಅಂದರೆ, ಅದು ಶೇಕಡಾ 60ರಷ್ಟು ಮತಗಳನ್ನು ಕಳೆದುಕೊಂಡಿದೆ. ಈ ಎಲ್ಲಾ ಮತಗಳು ಎಎಪಿ ಪಕ್ಷಕ್ಕೆ ಹೋಗಿದೆ.

  ಭಾಜಪದ ಮತದಲ್ಲಿ ಶೇಕಡಾ 3 ಕಡಿಮೆಯಾಗಿದೆ ಅಷ್ಟೇ. ಇದರ ಅರ್ಥ, ಭಾಜಪ ತನ್ನ ಮತಗಳನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸಫಲವಾಗಿದೆ. ಭಾಜಪದ ಮತದಾರರು ಅದರ ಕೈಹಿಡಿದಿರುವುದು ಸ್ಪಷ್ಟ.
  ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷಗಳ ಕೈಬಿಟ್ಟ ಮತದಾರರು ಯಾರು ಎನ್ನುವುದು ಕುತೂಹಲದ ಪ್ರಶ್ನೆ.
  ಆ ಪಕ್ಷಗಳಿಗೆ ಮತ ನೀಡುತ್ತಿದ್ದ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಎಎಪಿ ಕೈಹಿಡಿದಿದ್ದಾರೆ!

  ಇದರ ಅರ್ಥ ಇಷ್ಟೇ. ಎಎಪಿ ಪಕ್ಷವು ದೇಶದೆಲ್ಲೆಡೆ ಚುನಾವಣೆಗೆ ನಿಂತರೆ, ಅದರಿಂದ ಹೊಡೆತ ಬೀಳುವುದು, ಕಾಂಗ್ರೆಸ್ ಮತ್ತು ಇನ್ನಿತರ “ತಥಾಕಥಿತ ಜಾತ್ಯಾತೀತ ಪಕ್ಷಗಳಿಗೆ”. ಅಂದರೆ, ಕಾಂಗ್ರೆಸ್^ನ ಮತಗಳು ಎಲ್ಲೆಡೆ ಹಂಚಿ ಹೋಗುವುದು. ಇದರಿಂದ ಲಾಭವಾಗುವುದು ಭಾಜಪಕ್ಕೆ ಮಾತ್ರ!

  ಇನ್ನು ದೆಹಲಿಗೇ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಕಿ-ಅಂಶ:
  ಈ ಸಲದ ಚುನಾವಣೆಯಲ್ಲಿ ಬಿದ್ದಿರುವ ಮತಗಳನ್ನು ಗಮನಿಸಿದರೆ, ದೆಹಲಿಯಲ್ಲಿರುವ 7 ಲೋಕಸಭಾ ಕ್ಷೇತ್ರಗಳಲ್ಲಿ ಭಾಜಪವು 6 ಸ್ಥಾನಗಳಲ್ಲಿ ಮೊದಲ ಪಕ್ಷವಾಗಿ ನಿಂತಿದೆ. ಉಳಿದ 1 ಸ್ಥಾನದಲ್ಲಿ ಎಎಪಿ ಪಕ್ಷವು ಮುಂದಿದೆ. ಕಾಂಗ್ರೆಸ್^ಗೆ ಸಿಕ್ಕಿರುವುದು 0!!
  ಇದಕ್ಕೆ ಕಾರಣ, ಎಎಪಿ ಉಮೇದುವಾರರು ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದರೂ, ಅವರು ಗೆದ್ದಿರುವುದು ಬಹಳ ಕಡಿಮೆ ಅಂತರದಿಂದ. ಆದರೆ, ಭಾಜಪದ ಉಮೇದುವಾರರು ಗೆದ್ದಿರುವಲ್ಲೆಲ್ಲಾ ದೊಡ್ಡ ಅಂತರದಿಂದ ಗೆದ್ದಿದ್ದಾರೆ, ಆದರೆ, ಸೋತಿರುವಲ್ಲೆಲ್ಲಾ ಕಡಿಮೆ ಅಂತರದಿಂದ ಸೋತಿದ್ದಾರೆ!

  ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಎಎಪಿ ಪಕ್ಷವು ದೆಹಲಿಯ ಸ್ಥಳೀಯ ಚುನಾವಣೆಯಲ್ಲಿ ತನ್ನ ಪ್ರತಾಪ ತೋರಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಅದು ಮಿಸುಕಾಡುವುದು ಕಷ್ಟ. ಹೆಚ್ಚೆಂದರೆ, ಅದು ಕಾಂಗ್ರೆಸ್ ಮತಗಳನ್ನು ಕದಿಯುತ್ತದೆ. ಇದರಿಂದ ಭಾಜಪಕ್ಕೇ ಲಾಭವಾಗುತ್ತದೆ. ವಿಧಾನ ಸಭಾ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಮತ ಹಾಕಿದವರೂ, ಲೋಕಸಭಾ ಚುನಾವಣೆಯಲ್ಲಿ ಭಾಜಪಕ್ಕೆ (ಅರ್ಥಾತ್ ನರೇಂದ್ರ ಮೋದಿ) ಮತ ಹಾಕುವೆವೆಂದು ಹೇಳಿರುವುದು ಗಮನಿಸಬೇಕಾದ ಅಂಶ. ಹೀಗೆ, ಇದನ್ನೆಲ್ಲಾ ಗಮನಿಸಿದಾಗ, ಎಎಪಿ ನಿಲ್ಲುವುದರಿಂದ ಭಾಜಪವು ಸ್ವಂತ ಶಕ್ತಿಯ ಆಧಾರದ ಮೇಲೇ ಕೇಂದ್ರ ಸರಕಾರ ರಚಿಸುವ ದಿನಗಳು ದೂರವಿಲ್ಲ ಎನಿಸುತ್ತದೆ!

  ಉತ್ತರ
 2. ಗಿರೀಶ್
  ಡಿಸೆ 13 2013

  ಕುಮಾರ್ (y)

  ಉತ್ತರ
 3. ಡಿಸೆ 13 2013

  @ಕುಮಾರ್ ರವರೇ, ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ. ಭಾಜಪಕ್ಕೆ ಬೆಂಬಲಿಸುವ ಮತದಾರರು ಕೇವಲ ಭ್ರಷ್ಟಚಾರ ವಿಷಯವನ್ನು ಮಾತ್ರವಿಟ್ಟುಕೊಳ್ಳುವುದಿಲ್ಲ. ಗಡಿ ಸಮಸ್ಯೆ, ಒಡೆದು ಆಳುವ ಪಕ್ಷಗಳಿಗೆ ಸೆಡ್ಡು ಹೊಡೆಯಲು ಇನ್ನಿತರ ಕಾರಣಗಳಿಗಾಗಿ. ಗುಜರಾತ್ ಮತ್ತು ಮಧ್ಯಪ್ರದೇಶ್ ಚುನಾವಣೆಯಲ್ಲಿ ಹೊಸ ಮುಖಗಳ ಪರಿಚಯ ಮಾಡಿದ್ದಾರೆ. ಭಾಜಪದಲ್ಲಿ ಉತ್ತಮ ನಾಯಕನಿದ್ದರೆ ಶುದ್ಧ ಹಸ್ತನಾಗಿದ್ದರೆ ಆಡಳಿತವಿರುವ ಕಡೆ ಎಲ್ಲರೂ ಮೆಚ್ಚುವಂತಹ ಸಾದನೆಯನ್ನು ಮಾಡಿದ್ದಾರೆ. ಗೋವ, ಮಧ್ಯಪ್ರದೇಶ,ಛತ್ತೀಸ್ ಘಡ, ಗುಜರಾತ್ ಈ ಎಲ್ಲ ಕಡೇ ನಾಯಕತ್ವದ ಅರ್ಹತೆಯನ್ನು ಹೊಂದಿರುವವರೇ ಆಗಿದ್ದಾರೆ.
  ದೆಹಲಿಯಲ್ಲಿ ಈ ಬಾರಿ ಹೆಚ್ಚು ಸ್ಥಾನ ಗಳಿಸಲು ಇರುವ ಕಾರಣಗಳೆರಡು ಒಬ್ಬರು ಮೋದಿ ಇನ್ನೊಬ್ಬರು ಮೋದಿ ಕಾರ್ಯತಂತ್ರ. ಗೋಯೆಲ್ ಅವರನ್ನು ಮುಂದಿಟ್ಟಿದ್ದರೆ ಪಕ್ಷ ನಾಲ್ಕು ಹೆಜ್ಜೆ ಹಿಂದಿಡುತಿತ್ತು.

  ಉತ್ತರ
 4. Nagshetty Shetkar
  ಡಿಸೆ 14 2013

  ಮಾನ್ಯರೇ, ಆಂ ಆದ್ಮಿ ಪಕ್ಷವು ಕೋಮುವಾದಿಗಳ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಕೂಡದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತು ಕೋಮುವಾದಿ ಪಕ್ಷಗಳಿಗೆ ಪಾಠ ಕಲಿಸಬೇಕು. ಅದೇ ಯುಕ್ತ ಹಾಗೂ ಜನಸಮ್ಮತ.

  ಉತ್ತರ
  • ಡಿಸೆ 14 2013

   [[ಆಂ ಆದ್ಮಿ ಪಕ್ಷವು ಕೋಮುವಾದಿಗಳ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಕೂಡದು.]]
   ಶೇಟ್ಕರ್ ಅವರೇ,
   ದಯವಿಟ್ಟು ನನ್ನ ಈ ಕೆಳಗಿನ ಸಂದೇಹಗಳನ್ನು ಪರಿಹರಿಸಿ:
   ೧. ಕೋಮುವಾದ ಎಂದರೇನು?
   ೨. ಕೋಮುವಾದಿಗಳು ಯಾರು?
   ೩. ಕಾಂಗ್ರೆಸ್^ನವರು ಏಕೆ ಕೋಮುವಾದಿಗಳಲ್ಲ?
   ೪. ಎಎಪಿ ಪಕ್ಷದವರು ಏಕೆ ಕೋಮುವಾದಿಗಳಲ್ಲ?
   ೫. ಎಎಪಿ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಕೋಮುವಾದ ಹೇಗೆ ದೂರಾಗುತ್ತದೆ?

   ಉತ್ತರ
 5. M.A.Sriranga
  ಡಿಸೆ 14 2013

  ಸೆಮಿ ಫೈನಲ್ ಬಿಜೆಪಿಗೆ ಸ್ವಲ್ಪ ನೆಮ್ಮದಿ ತಂದಿದೆ. ಇನ್ನು ಫೈನಲ್ ನಲ್ಲಿ ಉತ್ತರದ ರಾಜ್ಯಗಳಲ್ಲಿ ಬಿಜೆಪಿಗೆ ಬಹುಶಃ ಅಂಥ ಸಮಸ್ಯೆ ಬರಲಾರದು. ಜತೆಗೆ ಬಿಜೆಪಿ ಈಗ ಅಧಿಕಾರಕ್ಕೆ ಬಂದಿರುವ ರಾಜ್ಯಗಳು ಎಚ್ಚರಿಕೆಯಿಂದ ರಾಜ್ಯಭಾರ ನಡೆಸಬೇಕು. ಕರ್ನಾಟಕದ ಪಾಠ ಅವರ ಮನಸ್ಸಿನಲ್ಲಿ ಇರಬೇಕು. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಒಂದಾಗಿವೆ. ನಿರೀಕ್ಷೆ ಇಟ್ಟುಕೊಳ್ಳಬಹುದು. ದಕ್ಷಿಣದ ರಾಜ್ಯಗಳದ್ದೇ ಸಮಸ್ಯೆ. ಆಂಧ್ರದಲ್ಲಿ ತೆಲಂಗಾಣ ಸಮಸ್ಯೆ. ತಮಿಳುನಾಡಿನಲ್ಲಿ ಎ ಐ ಡಿ ಎಂ ಕೆ -ಬಿಜೆಪಿಗೆ ಎಷ್ಟು ಸ್ಥಾನ ಸಿಗಬಹುದು? ಈಗಲೇ ಅಂದಾಜು ಮಾಡಲಿಕ್ಕಾಗುವುದಿಲ್ಲ. ಚುನಾವಣೆ ವೇಳೆಗೆ ಯಾರು ಯಾರು “ಮೈತ್ರಿ” ಬೆಳೆಸುಕೊಳ್ಳುತ್ತಾರೋ? ಕೇರಳದಲ್ಲಿ ಬಿಜೆಪಿ ಈ ಬಾರಿಯಾದರೂ ಬೇರೂರಬಹುದೇ? ಇನ್ನು ನಮ್ಮ ಕರ್ನಾಟಕದಲ್ಲಿ ಮಗ್ಗುಲು ಮುಳ್ಳಾಗಿರುವ ವಿಚಾರವಾದಿಗಳು,ಕೋಮುಸೌಹಾರ್ದ ವೇದಿಕೆಯವರು ಜತೆಗೆ ಮಾಮೂಲಿ ಓಟು ಬ್ಯಾಂಕ್ ಗಳೆಲ್ಲಾ ಸೇರಿ ಏನು ಮಾಡುತ್ತಾರೋ? ನಮ್ಮ ನಿರೀಕ್ಷೆಯ ಜತೆ ಈ ಎಲ್ಲಾ ಆತಂಕಗಳೂ ನಮ್ಮನ್ನು ಕಾಡುತ್ತಿದೆ ಅಲ್ಲವೇ?

  ಉತ್ತರ
 6. M.A.Sriranga
  ಡಿಸೆ 14 2013

  ಕಾಂಗೈ- ಎ ಎ ಪಿ ಲೋಕಸಭೆ ಚುನಾವಣೆಯಲ್ಲಿ ಜತೆಗೂಡಿದರೆ ಎ ಎ ಪಿ ಇದುವರೆಗೆ ಹೋರಾಟ ಮಾಡಿದ್ದೆಲ್ಲಾ ವ್ಯರ್ಥವಾಗುವುದಿಲ್ಲವೇ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments