ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2013

52

ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?

‍ನಿಲುಮೆ ಮೂಲಕ

– ವಿದ್ಯಾ ಕುಲಕರ್ಣಿ

ಬ್ರಾಹ್ಮಣನವೆಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.

ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.

1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ.

“ಸನಾತನಿಗಳು ಕನಕನಿಗೆ ಉಡುಪಿಯ ಮಠದಲ್ಲಾಗಲೀ ಇನ್ನಾವುದೇ ದೇವಾಲಯದಲ್ಲಾಗಲೀ ಸಿಗಬೇಕಾದ ಗೌರವ ಸ್ಥಾನ ಮಾನಗಳು ಸಿಗದಂತೆ ಮಾಡಿದರು. ಅತ್ತ ಕನಕರು ಒಂದು ಜಾತಿ ಜನಾಂಗಕ್ಕೆ ಏನೂ ಸಹಾಯ ಮಾಡದಂತೆ ಇತ್ತ ಬ್ರಾಹ್ಮಣ ಸಮುದಾಯದಲ್ಲೂ ಗೌರವ ಸಿಗದಂತೆ ಮಾಡಿದರು.” ಎಂದು ಹೇಳುತ್ತಾರೆ. ಮುಂದುವರಿದು ಅವರು ಹೇಳುತ್ತಾರೆ.”ಕನಕನಾಯಕನೆಂಬ ಯುದ್ಧಕಲಿಯನ್ನು ದಕ್ಷ ಆಡಳಿತಗಾರನನ್ನು ಮಾನಸಿಕವಾಗಿ ಅಧ್ವಾನ ಮಾಡಿದರು.ಆಳುವ ಕನಕನಾಯಕನನ್ನು ಬಿಕ್ಷೆ ಬೇಡುವ ಕನಕನನ್ನಾಗಿಸಿದರು.”ಎಂದು ಬರೆದಿದ್ದಾರೆ. ಕನಕದಾಸರು ಬಿಕ್ಷುಕರಾಗಿದ್ದರೆ ಬಾಡದಲ್ಲಿ ಕಾಗಿನೆಲೆಯಲ್ಲಿ ದೇವಸ್ಥಾನಗಳನ್ನು ಹೇಗೆ ಕಟ್ಟಿಸುತ್ತಿದ್ದರು? ಅವರು ಮಾನಸಿಕವಾಗಿ ಅಧ್ವಾನಿಗಳಾಗಿದ್ದರೆ ‘ನಳಚರಿತ್ರೆ, ‘ಮೋಹನತರಂಗಿಣಿ, ‘ರಾಮಧಾನ್ಯ ಚರಿತೆ’, ಯಂಥ ಅದ್ಭುತ ಕೃತಿಗಳು ಅವರಿಂದ ಹೇಗೆ ಹೊರಬರುತ್ತಿದ್ದವು? ಮನಸ್ಥಿಮಿತವಿಲ್ಲದ ವ್ಯಕ್ತಿ ಅದ್ಬುತವಾದ ಕೀರ್ತನೆಗಳನ್ನು ರಚಿಸಲು ಸಾಧ್ಯವಿದೆಯೆ? ವಿಜಯಾ ಅವರು ಕನಕರ ಕೃಷ್ಣ ಭಕ್ತಿಯನ್ನೆ ಹುಚ್ಚುತನದ್ದು, ಮತಿಬ್ರಮಣೆಯದ್ದು ಎಂದು ಹೇಳಿ ಕನಕರನ್ನು ತಾವೇ ಅವಮಾನಿಸಿದ್ದಾರೆ.

ಶ್ರೀ ವ್ಯಾಸರಾಯರು ಕನಕರಿಗೆ ಏನೋ ಮೋಡಿ ಮಾಡಿ ಅಥವಾ ಹೆದರಿಸಿ ಇಲ್ಲವೇ ಮತಿಹೀನನನ್ನಾಗಿಸಿ ಅವರಿಂದ( ಕನಕರಿಂದ ) ವಿಷ್ಣುವನ್ನು ಹೊಗಳುವ ಕಾವ್ಯಗಳನ್ನು ಬರೆಸಿದರೆಂಬ ಧ್ವನ್ಯಾರ್ಥದಲ್ಲಿ ಲೇಖಕಿ ಹೇಳುತ್ತಾರೆ. ಆದರೆ ಕಾವ್ಯ ಎಂಬುದು ನೆತ್ತಿಯ ಮೇಲೆ ಕತ್ತಿ ಊರಿ ಬರಸಿದರೆ ಬರುವಂಥದ್ದೇ? ಅದು ಹೃದಯದಿಂದ ಬರಬೇಕಲ್ಲವೆ? ಇಷ್ಟು ಸಣ್ಣ ವಿಚಾರವೂ ಲೇಖಕಿಗೆ ಹೊಳೆದಿಲ್ಲವೆ?! ಇಲ್ಲಿ ಬ್ರಾಹ್ಮಣರನ್ನು ಟೀಕಿಸುವ ಗುರಿ ಮಾತ್ರ ಇದೆಯೇ ಹೊರತು ಕನಕರ ಕುರಿತು ಹೇಳುವ ತಹತಹಿಕೆ ಇಲ್ಲವೇ ಇಲ್ಲ. ಕನಕನ ಕಿಂಡಿಯ ಕಥೆ ಹೇಳಿ ಪ್ರವಾಸಿಗರಿಂದ ಬ್ರಾಹ್ಮಣರು ಹಣ ಸಂಗ್ರಹಿಸುತ್ತಾರೆ. ಅದಕ್ಕಾಗಿ ಕನಕನ ಕಿಂಡಿ ಕಥೆ ಎಬ್ಬಿಸಿದ್ದಾರೆ ಎನ್ನುತ್ತಾರವರು. ಆದರೆ ಆ ಕಿಂಡಿ ಕನಕನ ಕಿಂಡಿ ಅಲ್ಲ, ನವಗ್ರಹ ಕಿಂಡಿ ಎಂದು ಕೃಷ್ಣಮಠದ ಯತಿಗಳು ಹೇಳಿದರೆ ಕನಕರ ಹೆಸರನ್ನು ಬೇಕೆಂತಲೆ ದೂರ ಮಾಡುವದಕ್ಕಾಗಿ ಹೀಗೆ ಹೇಳುತ್ತಿದ್ದಾರೆಂದು ನಾಡಿನಾದ್ಯಂತ ವಿವಾದಕ್ಕೆ ಶುರುವಿಟ್ಟುಕೊಂಡರು. ಏನು ಮಾಡಿದರೂ ಟೀಕೆ ತಪ್ಪುವದಿಲ್ಲ. ಹೀಗೇಕೆ? ಅರ್ಥವಾಗುತ್ತಿಲ್ಲ.

೨) ನಾಯಿ ನರಿಗಳಂತೆ ಮೈ ಪರಚಿಕೊಳ್ಳುತ್ತಾರೆ ವೈದಿಕರು. ಇದೇ ಪತ್ರಿಕೆಯ ಒಂದು ಸುದ್ದಿಯಲ್ಲಿ ಶ್ರೀ ಎ.ಕೆ. ಸುಬ್ಬಯ್ಯ ಎನ್ನುವವರು ‘ಮೌಢ್ಯ ಮುಕ್ತ ಕರ್ನಾಟಕ’ ಎಂಬ ಸಂವಾದದಲ್ಲಿ ” ಮೌಢ್ಯಾಚರಣೆ ಪ್ರತಿಬಂಧಕ ಮಸೂದೆಯಲ್ಲಿ ಯಾವುದೆ ಧರ್ಮದ ಸ್ವಾತಂತ್ರ್ಯ ಕಸಿದುಕೊಳ್ಳುವ ಯಾವುದೇ ಅಂಶಗಳಿಲ್ಲ. ಹೀಗಿದ್ದರೂ ವೈದಿಕರು ನಾಯಿ-ನರಿಗಳಂತೆ ಮೈಪರಚಿಕೊಂಡು ಗುಲ್ಲೆಬ್ಬಿಸುತ್ತಿದ್ದಾರೆ”. ಎಂದು ಹೇಳಿದ್ದಾರೆ. ಇರಲಿ, ಇದೇ ಪತ್ರಿಕೆಯಲ್ಲಿ ಮೋದಿಯವರು ಮುಸ್ಲಿಂ ಜನತೆಯನ್ನು ನಾಯಿ ಕುನ್ನಿಗೆ ಹೋಲಿಸಿದ್ದಾರೆ ಎಂದು ಸಿಕ್ಕಾಪಟ್ಟೆ ಜರಿದಿದ್ದರು. ಆದರೆ ವೈದಿಕರನ್ನು ನಾಯಿ-ನರಿಗೆ ಹೊಲಿಸಿದ ಸುಬ್ಬಯ್ಯನವರ ಬಗ್ಗೆ ಒಬ್ಬರೂ ಟೀಕೆ ಮಾಡಿಲ್ಲ!!

ಉತ್ತರ ಸ್ಪಷ್ಟವಾಗಿದೆ. ವೈದಿಕರು ಇರುವದೇ ಪ್ರತಿಶತ ೩. ಅವರೂ ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೆಡಿ ಎಂಬಂತಿದ್ದಾರೆ.ಸಂಘಟನೆಯಂತೂ ಇಲ್ಲವೇ ಇಲ್ಲ. ಇವೇನು ತಾನೆ ಮಾಡುತ್ತವೆ? ಎಂಬ ಉಡಾಫೆಯಿಂದ ನಾಯಿ ನರಿ ಎಂದರೂ ಎಲ್ಲರೂ ಸುಮ್ಮನಿದ್ದಾರೆ. ಅದೇ ಪ್ರತಿಶತ ೧೪ ರಷ್ಟಿರುವ ಮುಸಲ್ಮಾನರಿಗೆ ಗೌರವ ಹೆಚ್ಚು. ಅವರಿಗೆ ಅವಮಾನವಾಗುವಂತೆ ಮೋದಿ ಹೇಳಿರದಿದ್ದರೂ ಎಲ್ಲರು ಅವರಿಗೆ ಅವಮಾನವಾಯಿತೆಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ವೈದಿಕರಿಗೆ ಏನೆಂದರೂ ನಡೆಯುತ್ತದೆ. ಏಕೆಂದರೆ ವೈದಿಕರು ತಲೆ ಕೈ ಕಾಲು ಕತ್ತರಿಸಲು ಕರೆ ಕೊಡುವದಿಲ್ಲವಲ್ಲ?

೩) ಹೋ.ಬ. ರಘೋತ್ತಮ ಅವರು ‘ಸಾಮ್ರಾಟ್ ಅಶೋಕ’ ಎಂಬ ಅಂಕಣ ಬರಿದಿದ್ದಾರೆ. ಅದರಲ್ಲಿ ಕನ್ನಡ ನಾಡಿನ ಇತಿಹಾಸದಲ್ಲಿ ಅಶೋಕನ್ನು ಕಡೆಗಣಿಸಿದ್ದಾರೆ ಇತ್ಯಾದಿ ಹೇಳುತ್ತಾ ಕರ್ನಾಟಕದಲ್ಲಿ ” ಕದಂಬ ಮಯೂರವರ್ಮನನ್ನು ಹೊಗಳುತ್ತಾ ಟಿಪ್ಪು ಹೈದರಾಲಿಗಳನ್ನು ನಾಲ್ವಡಿ ಕೃಷ್ಣರಾಜರನ್ನು ತೆಗಳುತ್ತಾರೆ”. ಎಂದಿದ್ದಾರೆ. ಹಾಗೇ ” ಅಶೋಕನಿಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗಲಾರದ್ದಕ್ಕೆ ಕಾರಣ ಅವನು ವೈದಿಕರಿಗೆ ಒಗ್ಗದ ಬೌದ್ಧಧರ್ಮವನ್ನು ಪಸರಿಸಿದ. ಮತ್ತು ವೈದಿಕರಿಗೆ ಒಲ್ಲದ ಶಾಂತಿ ಸಾಮರಸ್ಯವನ್ನು ಹರಡುವವನಾಗಿದ್ದ”. ಎಂದಿದ್ದಾರೆ. ಹಾಗಿದ್ದರೆ ವೈದಿಕರು ಅಶಾಂತಿ ಪ್ರಿಯರೆ? ಯುದ್ಧೋತ್ಸಾಹಿಗಳೆ? ಅವರು ಯಾರ ಮೇಲಾದರೂ ತಾವಾಗಿಯೇ ಆಕ್ರಮಣ ಮಾಡಿದ್ದಾರೆ? ಯಾರ ಮೇಲೆ ಬಾಂಬಗಳನ್ನು ಸ್ಪೋಟಿಸಿದ್ದಾರೆ? ಯಾರ ತಲೆ ಕೈ ಕಾಲು ಕಡಿದರೆ ಹಣ ನೀಡುವುದಾಗಿ ಘೋಷಿಸಿದ್ದಾರೆ? ಒಂದಾದರೂ ಉದಾಹರಣೆ ನೀಡಿರಿ. ಇನ್ನು ಅಶೋಕನಿಗೆ ಸಿಗಬೇಕಾದ ಪ್ರಾತಿನಿಧ್ಯದ ಕುರಿತು; ನೀವು ಶಿಕ್ಷಣ ಇಲಾಖೆಗಳಿಗೆ ಪಠ್ಯಪುಸ್ತಕ ರಚನಾ ಸಮಿತಿಗಳಿಗೆ ಪತ್ರ ಬರೆದು ಈ ವಿ‍ಷಯದ ಬಗ್ಗೆ ಗಮನಸೆಳೆಯಬಹುದಲ್ಲವೆ? ಬ್ರಾಹ್ಮಣರ, ವೈದಿಕರ ಟೀಕೆ ಮಾಡಿದರೆ ಅಶೋಕನ ಬಗ್ಗೆ ಕನ್ನಡ ಮಕ್ಕಳು ತಿಳಿಯುತ್ತಾರೆಯೇ?? ಇವತ್ತಿನ ಸಿ.ಬಿ.ಎಸ್.ಇ. ಇಂಗ್ಲೀಷ್ ಮಾಧ್ಯಮದ ಸಿಲಬಸ್ ನಲ್ಲಿ ಭಾರತಿಯ ಅರಸರ ಬಗ್ಗೆ ಮಕ್ಕಳು ಕಲಿಯುವದೇ ಇಲ್ಲ ಕೇವಲ ರಷ್ಯಾ ಕ್ರಾಂತಿ, ಫ್ರೆಂಚ ಕ್ರಾಂತಿ ಹಾಗೂ ಹಿಟ್ಲರ್, ನಪೋಲಿಯನ್ ಇವರ ಬಗ್ಗೆ ಮಾತ್ರ ಕಲಿಯುತ್ತಾರೆ. ಈ ಕುರಿತು ಇಲಾಖೆಯ ಗಮನ ಸಳೆಯುವದು ಪ್ರತಿ ಭಾರತೀಯನ ಕರ್ತವ್ಯವು ಆಗಿದೆ.

೪) ಶೂದ್ರ ಶೀನಿವಾಸರವರು ಇದೇ ಪತ್ರಿಕೆಯಲ್ಲಿ ೨೩-೧೧-೨೦೧೩ರ ಅಂಕಣದಲ್ಲಿ ಶೀ ಪೆರಿಯಾರ್ ರಾಮಸ್ವಾಮಿ ಬಗ್ಗೆ ಬರೆಯುತ್ತ ” ಮಡಿವಂತ ಬ್ರಾಹ್ಮಣರ ಜುಟ್ಟು ಕತ್ತರಿಸಿದ್ದು ಬಿಟ್ಟರೆ ಹಿಂಸಾತ್ಮಕ ಕೃತ್ಯ ಎಲ್ಲೂ ನಡಿದಿಲ್ಲ “. ಎನ್ನುತ್ತಾರೆ. ಇಲ್ಲಿ ಬ್ರಾಹ್ಮಣರ ಜುಟ್ಟು ಕತ್ತರಿಸಿದ್ದು ತಪ್ಪೆ ಅಲ್ಲ ಎನ್ನುವಂತೆ ಲೇಖಕರು ಹೇಳುತ್ತಾರೆ. ಯಾಕೆಂದರೆ ಆ ಬ್ರಾಹ್ಮಣರು ಮಡಿವಂತರು ಅದಕ್ಕೆ ಅವರಿಗೆ ಈ ಶಿಕ್ಷೆ ಎಂಬ ಧ್ವನಿ ಇಲ್ಲಿದೆ. ಆದರೆ ಆ ಬ್ರಾಹ್ಮಣ ವರ್ಗಕ್ಕೆ ಶರೀರದ ಗಾಯಗಳಾಗಿರದೇ ಇರಬಹುದು. ಮಾನಸಿಕ ಗಾಯ ?? ಯಾವ ತಪ್ಪಿಗೆ ಅವರಿಗೆ ಈ ಶಿಕ್ಷೆ? ಎಂದೋ ಯಾರೋ ಮಾಡಿದ ತಪ್ಪಿಗೆ ಇವತ್ತಿನವರಿಗೆ ಶಿಕ್ಷೆ ಸರಿಯೇ? ಪೆರಿಯಾರ್ ರನ್ನು ಸಮರ್ಥಿಸಿಕೊಳ್ಳುತ್ತಾ ಮುಂದುವರಿದು ಶೀನಿವಾಸರು ಹೀಗೆ ಹೇಳುತ್ತಾರೆ ” ಪೆರಿಯಾರ್ ರವರ ಸಿಟ್ಟು ಆಕ್ರೋಶಗಳ ಹಿಂದಿನ ಮಾನವಿಯ ಸಂಭಂದಗಳ ಬಗೆಗಿನ ವಿ‍ಷಾದವನ್ನು ನಾವು ಯಾರೂ ಪ್ರಶ್ನಿಸುವಂತಿಲ್ಲ “.

ಒಬ್ಬ ಮನುಷ್ಯನ ನಂಬಿಕೆಗಳಿಗೆ ಮರೆಯಲಾಗದ ಗಾಯ ಮಾಡಿ ಕೇಕೆ ಹಾಕಿದ ಪೆರಿಯಾರ್ ಅವರು ಆಧುನಿಕ ಮನುವೇ ಅಲ್ಲವೆ? ಬ್ರಾಹ್ಮಣ ಹಾವು ಎರಡೂ ಒಟ್ಟಿಗೆ ಕಂಡಾಗ ಮೊದಲು ಬ್ರಾಹ್ಮಣನನ್ನು ಸಾಯಿಸಿ ಎಂದು ಹೇಳುವ ಈ ಪೆರಿಯಾರ್ ಅವರು ಇನ್ನೊಬ್ಬ ಮನುವಿನಂತೆ ವರ್ತಿಸಿದ್ದಾರೆ. ಅಂಥವರನ್ನು ನಿಮ್ಮವರೆಂಬ ಕಾರಣಕ್ಕೆ ನೀವು ಸಮರ್ಥಿಸಿದರೆ ಮನುವನ್ನು ತೆಗಳುವ ಅಧಿಕಾರ ನಿಮಗೆಲ್ಲಿಂದ ಬರುತ್ತದೆ?? ಇನ್ನೊಂದು ವಿಷಯ ಶ್ರೀರಾಮನಿಗೆ ಸೇಲಂನಲ್ಲಿ ಶ್ರೀ ಪೆರಿಯಾರ್ರು ಚಪ್ಪಲಿ ಹಾರ ಹಾಕಿದಾಗ ಪೆರಿಯಾರ್ ಅವರ ಮೇಲೆ ಭೌತಿಕ ಪರಿಣಾಮಗಳಾಗುತ್ತವೆ (ಹಲ್ಲೆ) ಎಂದುಕೊಂಡಿದ್ದೆವು. ಹಾಗೇನೂ ಸಂಭವಿಸಲಿಲ್ಲ. ಎಂದು ನೀವು ಹೇಳಿದ್ದೀರಿ. ಯೋಚಿಸಿ ಇದೇ ಕಾರ್ಯವನ್ನು ನೀವು ಬೇರೆ ಧರ್ಮಿಯರಿಗೆ ಮಾಡಿದ್ದರೆ ಪರಿಸ್ಥಿತಿ ಎಷ್ಟು ಅಲ್ಲೋಲ ಕಲ್ಲೋಲವಾಗುತ್ತಿತ್ತೋ ಊಹಿಸಿ. ಹೊ.ಬ ರಘೋತ್ತಮ ಅವರು ವೈದಿಕರಿಗೆ ಒಲ್ಲದ ಶಾಂತಿಯನ್ನು ಅಶೋಕ ಪಸರಿಸಿದ ಎಂದಿದ್ದಾರೆಂದು ಹಿಂದೆ ಹೇಳಿದ್ದೇನೆ . ಒಂದು ವೇಳೆ ವೈದಿಕರು ಅಶಾಂತಿ ಪ್ರಿಯರೂ ಯುದ್ಧೋತ್ಸಾಹಿಗಳೂ ಆಗಿದ್ದರೆ ಇಂಥ ಪ್ರಕರಣಗಳು ನಡೆದಾಗ ಏನೇನಾಗುತ್ತಿದ್ದವೋ ನೀವೇ ಊಹಿಸಿ.

ಯಾವುದೋ ಕಾಲದಲ್ಲಿ ಹಿಂದುಗಳ ಮೇಲೆ ಅನ್ಯಾಯ ಅತ್ಯಾಚಾರ ಮಾಡಿದರೆಂದು ಇವತ್ತಿನ ಮುಸಲ್ಮಾನರ ಮೇಲೆ ಹರಿಹಾಯುವದನ್ನು ನೀವೇ ಖಂಡಿಸುತ್ತೀರಿ.ಆದರೆ ಬ್ರಾಹ್ಮಣರ ವಿಚಾರ ಬಂದಾಗ ಜಾಣ ಕಿವುಡ ಮೂಗರಾಗುತ್ತೀರಿ.ಏಕಿಂಥ ಇಬ್ಬಂದಿತನ.?! ಇನ್ನು ಸನತ್ ಕುಮಾರ ಬೆಳಗಲಿ ಅವರಂತೂ ಇದೇ ಪತ್ರಿಕೆಯಲ್ಲಿ ಮೋದಿಯನ್ನು ಆರ್.ಎಸ್.ಎಸ್. ನ್ನು ವೈದಿಕರನ್ನು ಬೈಯ್ಯಲು ಗುತ್ತಿಗೆ ಹಿಡಿದವರಂತೆ ಲೇಖನಗಳನ್ನು ಬರೆಯುತ್ತಾರೆ. R.S.S. ಹಾಗೂ ವೈದಿಕರು ಕೆಳವರ್ಗದವರ ತಲೆಕೆಡಿಸಿ ದಲಿತರ ಮೇಲೆ ಮುಸಲ್ಮಾನರ ಮೇಲೆ ದಬ್ಬಾಳಿಕೆ ಮಾಡಲು ಪ್ರೇರೇಪಣೆ ನೀಡುತ್ತಾರೆಂದು ಪದೇ ಪದೇ ಅನೇಕ ಲೇಖಕರು ಬರೆದಿದ್ದಾರೆ. ಸನತ್ಕುಮಾರರು ಆರ್.ಎಸ್.ಎಸ್. ಮೋದಿಯವರನ್ನು ಹಾಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಾರೆ. ಆದರೆ ನಾನು ಒಂದೆರಡು ಕೆಳಗಿನ ಘಟನೆಗಳನ್ನು ಈವಿಷಯದ ಮೇಲೆ ಬೆಳಕು ಚೆಲ್ಲಲು ಹೇಳುತ್ತೇನೆ.

೨೦೧೨ನೇ ಗಣೇಶ ಉತ್ಸವದಲ್ಲಿ ಬಿಜಾಪುರದ ಸಮೀಪದ ಜುಮನಾಳ ಎಂಬ ಗ್ರಾಮದಲ್ಲಿ ಕೋಮು ಗಲಭೆ ನಡೆಯಿತು. ಮಸೀದಿಯ ಎದುರು ಬೇಕೆಂದೇ ವಾದ್ಯವನ್ನು ಜೋರಗಿ ಬಾರಿಸಿದರೆಂದು ಮಸೀದಿಯಲ್ಲಿದ್ದವರು ಕಲ್ಲು ಎಸೆದರಂತೆ.ಇದೇ ಗಲಭೆಗೆ ಕಾರಣವಾಯಿತು. ಇಲ್ಲಿ ಗಮನಿಸುವ ಅಂಶವೆಂದರೆ ಕೆಳವರ್ಗದ ಜನರಿಗೆ ಪ್ರಚೋದನೆ ನೀಡಲು ಒಂದೇ ಒಂದು ಬ್ರಾಹ್ಮಣ ಕುಟುಂಬ ಈ ಊರಲ್ಲಿ ಇಲ್ಲ !! ಅಷ್ಟೇ ಅಲ್ಲ ಆರ್.ಎಸ್.ಎಸ್. ನ ಸಂಸ್ಥೆ ಇಲ್ಲಿ ತನ್ನ ಶಾಖೆ ಹೊಂದಿಲ್ಲ. ಇಲ್ಲಿಯ ಅನೇಕರಿಗೆ ಆರ್,ಎಸ್.ಎಸ್. ಹೆಸರೂ ಗೊತ್ತಿಲ್ಲ . ಆದರೂ ಕೋಮು ಗಲಭೆ ನಡೆದಿದೆ. ಯಾರ ಚಿತಾವಣೆಯಿಂದ???

ಬಿಜಾಪುರ ಜಿಲ್ಲೆಯ ಅನೇಕಾನೇಕ ಕಡೆಯ ಹಳ್ಳಿಗಳಲ್ಲಿ ಬ್ರಾಹ್ಮಣ ಕುಟುಂಬಗಳೇ ಇಲ್ಲ. ಇದ್ದರೂ ಕೂಡ ಆ ಮನೆಗಳಲ್ಲಿ ಕೇವಲ ವೃದ್ಧರು ಮಾತ್ರ ಇದ್ದಾರೆ. ಇವರು ಊರ ಉಸಾಬರಿಗೆ ಹೋಗುತ್ತಾರೆಯೇ? ಆದರೂ ಈ ಹಳ್ಳಿಗಳಲ್ಲಿ ದಲಿತರ ಶೋ‌ಷಣೆ ಇನ್ನೂ ನಿಂತಿಲ್ಲ. ಯಾಕೆ??? ಊರಿನ ಕುಡಿಯುವ ನೀರಿನ ಬಾವಿ ಕೆರೆಗಳನ್ನು ದಲಿತರು ಮುಟ್ಟದಂತೆ ಕೂಲಿಯಾಳುಗಳನ್ನು ನಿಯಮಿಸಿ ಎಲ್ಲಾ ಜಾತಿಯವರು (ಅಸ್ಪೃಶ್ಯರಲ್ಲ) ಉದಾ: ಲಿಂಗಾಯತ ಕುರುಬ, ಕ್ಷೌರಿಕ , ಅಗಸ , ಸಾಬರು(ಮುಸ್ಲಿಂರು) ಎಲ್ಲರೂ ಆ ಆಳಿಗೆ ಪ್ರತಿದಿನ ಮನೆಗೊಬ್ಬರಂತೆ ಕಾಯುತ್ತಾರೆ. ಅಥವಾ ಕಾದವರಿಗೆ ಕೂಲಿ ಕೊಡುತ್ತಾರೆ. ಇಲ್ಲೆಲ್ಲ ಬ್ರಾಹ್ಮಣರು ಇಲ್ಲವೇ ಇಲ್ಲ. ಆರ್.ಎಸ್.ಎಸ್. ಹೆಸರೇ ಇವರುಗಳು ಕೇಳಿಲ್ಲ. ಆದರೂ ದಲಿತರ ಶೋಷಣೆ ನಡೆಯುತ್ತಿದೆ.!! ಯಾರ ಚಿತಾವಣೆಯಿಂದ?? ವಸ್ತುಸ್ಥತಿ ಹೀಗಿದ್ದೂ ಬ್ರಾಹ್ಮಣರ ಟೀಕೆ ಏಕೆ ಮಾಡುತ್ತಾರೆ? ಎಷ್ಟೋ ಅಮೂಲ್ಯ ವಿಷಯಗಳಿಗೆ ದನಿಯಾಗಬೇಕಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವೇದಿಕೆಯಾಗಬೇಕಾದ ಪತ್ರಿಕೆಗಳೇಕೆ ಬ್ರಾಹ್ಮಣರ ಟೀಕೆಗೆ ನಿಂತಿವೆ???

ಬ್ರಾಹ್ಮಣ ಜನಾಂಗ ಈ ದೇಶಕ್ಕೆ ಮನುವನ್ನು ಮಾತ್ರ ನೀಡಿದೆಯೇ?

ಬ್ರಾಹ್ಮಣ ಜನಾಂಗದ ಕೊಡುಗೆ ಈ ದೇಶಕ್ಕೆ ಸ್ವಲ್ಪವೂ ಇಲ್ಲವೆ? ಖ್ಯಾತ ಮಾನವತಾವಾದಿ ಬಸವಣ್ಣ ಬುದ್ಧ ( ಬುದ್ಧನು ಶಾಕ್ಯ ವಂಶದವನು.ಶಾಕ್ಯವಂಶ ಹಾಗೂ ಶುಂಗ ವಂಶದವರು ಬ್ರಾಹ್ಮಣರಾಗಿದ್ದರೆಂದು ಬಾಶಮ್ ಅವರು ‘ಪ್ರಾಚೀನ ಭಾರತವೆಂಬ ಅದ್ಭುತ’ ಗ್ರಂಥದಲ್ಲಿ ಹೇಳಿದ್ದಾರೆ) ಇವರು ಬ್ರಾಹ್ಮಣ ಬಸಿರಿನಿಂದಲೇ ಬಂದವರಲ್ಲವೆ?? ವಿಜ್ಙಾನ, ಗಣೀತ, ತಂತ್ರಜ್ಙಾನ, ಆಯುರ್ವೇದ, ಆಧ್ಯಾತ್ಮ ವ್ಯಾಕರಣ,ಯೋಗ ಮುಂತಾದ ಅನೇಕಾನೇಕ ಶಾಸ್ತ್ರ ಗ್ರಂಥಗಳಲ್ಲಿ ಬ್ರಾಹ್ಮಣರ ಕೊಡುಗೆಯಿಲ್ಲವೇ? ಈ ದೇಶಕ್ಕೆ ನೊಬೆಲ್,ಈ ನಾಡಿಗೆ ಜ್ಞಾನಪೀಠ,ಭಾರತರತ್ನ ದೊರಕಿಸಿದ ಮಹನೀಯರಲ್ಲಿ ಬ್ರಾಹ್ಮಣರಿಲ್ಲವೆ?? ಬಿಜಾಪುರದ ಗಣಪತಿರಾವ ಕಾರ್ಖಾನೀಸ್ (ಕಾಕಾ ಕಾರ್ಖಾನೀಸ್) ತಮ್ಮ ತನು ಮನ ಧನದಿಂದ ದಲಿತರಿಗಾಗಿ ದುಡಿದ ಬ್ರಾಹ್ಮಣರೇ ಅಲ್ಲವೇ?? ಇಂಥ ಎಷ್ಟೋ ಮಹನೀಯರು ಇದೇ ಧರ್ಮದಲ್ಲಿ ಆಗಿ ಹೋಗಿದ್ದಾರೆ ಆದರೆ ಆಧುನಿಕ ವಿಚಾರವಾದಿಗಳಿಗೆ (?) ಕೇವಲ ಮನು ಮಾತ್ರ ಏಕೆ ಕಾಣುತ್ತಾನೆ???

ಈ ರಾಷ್ಟ್ರವನ್ನು ಕಟ್ಟಬೇಕೆಂಬ, ಹಿಂದೂಗಳನ್ನು ಒಂದು ಮಾಡಬೇಕೆನ್ನುವ ತ‌ಹತ‌ಹಿಕೆ ಇರುವ R.S.S ಮೇಲೆ ಏಕೆ ಗೂಬೆ? ಇಂಥ ಬ್ರಾಹ್ಮಣ ದ್ವೇಷವನ್ನೇ ಉಸಿರಾಶಿಸುವ ಈ ಪತ್ರಿಕೆ ಈ ರಾಷ್ಟ್ರಕ್ಕೆ ಯಾವ ಸಂದೇಶ ನೀಡುತ್ತದೆ? ಒಂದು ಜನಾಂಗವನ್ನು ಸತತವಾಗಿ ನಿಂದಿಸಿಕೊಂಡು ಬರುವದರಿಂದ ಇವರಿಗೆ ಈ ದೇಶಕ್ಕೆ ಯಾವ ಲಾಭವಿದೆ ??

ಕೊನಯದಾಗಿ…. ಬ್ರಾಹ್ಮಣರಾಗಿ ಹುಟ್ಟಿರುವದೇ ನಮ್ಮ ತಪ್ಪೇ? ಅದಕ್ಕಾಗಿ ಟೀಕೆ ಮಾಡಿಸಿಕೊಂಡು ಅವಮಾನ ಮಾಡಿಸಿಕೊಂಡು ಬಾಳಬೇಕಾ ??ಈ ನಾಡಿನ ವಿಚಾರವಾದಿಗಳೇ ಉತ್ತರ ಹೇಳಿ ಪ್ಲೀಜ್…

ಚಿತ್ರ ಕೃಪೆ: ಪಿಕೆಮೋಹನ್.ವರ್ಡ್ಪ್ರೆಸ್.ಕಾಂ

52 ಟಿಪ್ಪಣಿಗಳು Post a comment
  1. ಡಿಸೆ 24 2013

    ವಾರ್ತಾಭಾರತಿ, ಪತ್ರಿಕೆಯನ್ನಾಗಲೀ ಅಥವಾ ಪ್ರಜಾವಾಣಿಯ ಕೆಲವು ಅಂಕಣಕಾರರನ್ನಾಲೀ ಗಂಭೀರವಾಗಿ ಪರಿಗಣಿಸಬಾರದು. ಅವರ ಹೇಳಿಕೆಗಳಲ್ಲಿನ ದ್ವಂದ್ವಗಳನ್ನು ಅವರೆ ಉತ್ತರಿಸಲಾರರು. ಇವರ ನಿಲುವುಗಳನ್ನು ವೈಜ್ನಾನಿಕವಾಗಿ ನಿರೂಪಿಸಲು ಇವರಿಂದ ಸಾಧ್ಯವೂ ಇಲ್ಲ. ವಾರ್ತಾಭಾರತಿಯ ಬಶೀರನ ಹುಚ್ಚಾಟ ಒಂದೆರಡಲ್ಲ. ಆತನ ಚೀಪ್ ಪ್ರಾವೀಣ್ಯತೆ ಎಂದರೆ ’ಡಿವೈಡ್ ಆಂಡ್ ರೂಲ್’. ಕೆಳವರ್ಗದವರ ಪರವಾಗಿ ಮಾತನಾಡಿಸುವನಂತೆ ನಟಿಸುತ್ತಾ ತನ್ನ ಇಸ್ಲಾಮೀ ಮನಸ್ಥಿತಿಯನ್ನು ಕಕ್ಕುತ್ತಾನೆ. ಇವತ್ತು ಬಹಳಷ್ಟು ಕೆಳವರ್ಗದವರು ಎನಿಸಿಕೊಂಡಿದ್ದವರು ಆರ್ಥಿಕವಾಗಿ, ಬೌದ್ಧಿಕವಾಗಿ ಮೇಲ್ಮಟ್ಟಕ್ಕೆ ಬಂದವರಿದ್ದಾರೆ. ಅವರಾರೂ ಬ್ರಾಹ್ಮಣ ದ್ವೇಷದಿಂದ ಬಂದವರಲ್ಲ. ಆದರೆ ಬ್ರಾಹ್ಮಣ ದ್ವೇಷವನ್ನು ಹೊತ್ತು ರಾಜಕೀಯ ಮಾಡುವದರಿಂದ ಆರ್ಥಿಕವಾಗಿ ಮೇಲ್ಬಂದ ಕೆಳವರ್ಗದವರು ಬೌದ್ಧಿಕವಾಗಿ ಇನ್ನೂ ಕೆಳಮಟ್ಟದಲ್ಲಿಯೇ ಇದ್ದಾರೆ. ಬ್ರಾಹ್ಮಣ್ಯ ದ್ವೇಷ ಸಮಸ್ಯೆಗಳನ್ನು ಪರಿಹರಿಸುವಂತಿದ್ದರೆ ಇಂತಹ ಸ್ವಘೊಶಿತ ದಲಿತ ಚಿಂತಕರ ಸಂಖ್ಯೆ ಏರುತ್ತಲಿರಲಿಲ್ಲ. ಸಾಲದ್ದಕ್ಕೆ ಬುದ್ಧನ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾ ಆತನ ಆದರ್ಷಗಳನ್ನೂ ಹೈಜಾಕ್ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು. ನಿಜವಾದ ಬುದ್ಧನ ಅನುಯಾಯಿಯಾಗಬೇಕೆಂದರೆ ಬುದ್ಧ ಹೇಳಿದ ’ಬ್ರಾಹ್ಮಣ’ ರಾಗಲಿ ಇವರು.

    ಉತ್ತರ
  2. makara
    ಡಿಸೆ 24 2013

    @ಬಾಲಚಂದ್ರ ಭಟ್ ಅವರೆ ಚೆನ್ನಾಗಿ ಹೇಳಿದ್ದೀರಿ. ಸಖಾ ಸುಮ್ಮನೇ ಭಾರತೀಯ ಸಂಸ್ಕೃತಿಯನ್ನೂ ಬ್ರಾಹ್ಮಣರನ್ನೂ ಟೀಕಿಸುವುದನ್ನೇ ಕಾಯಕ ಮಾಡಿಕೊಂಡರೆ ಬುದ್ಧಿಜೀವಿಗಳೆನಿಸಿಕೊಳ್ಳುತ್ತೇವೆ ಎನ್ನುವ ದೂ(ದು)ರಾಲೋಚನೆ ಇವರದು.

    @ವಿದ್ಯಾ ಅವರೆ,
    ಬಿಜಾಪುರದ ಜುಮನಾಳದಲ್ಲಿ ಮಸೀದಿಯ ಮುಂದೆ ಮೆರವಣಿಗೆ ಸಾಗಿದ್ದರಿಂದ ಮುಸಲ್ಮಾನರು ರೊಚ್ಚಿಗೆದ್ದು ಮೆರವಣಿಗೆಯಲ್ಲಿ ಸಾಗಿದ್ದವರ ಮೇಲೆ ಕಲ್ಲೆಸದರು ಎನ್ನುವುದಾದರೆ ಈ ಮುಸಲ್ಮಾನರು ಜಲ್ಲಿ ಕಲ್ಲುಗಳನ್ನು ಮಸೀದಿಯಲ್ಲೇಕೆ ಸಂಗ್ರಹ ಮಾಡಿದ್ದರು ಎನ್ನುವುದನ್ನು ವಿಚಾರಿಸಿದರೆ ಸತ್ಯಾಂಶ ಹೊರಬೀಳುತ್ತದೆ. ಮಜಲೀಸ್ ಇತ್ತೇಹಾದ್ ಮುಸ್ಲಮೀನ್ (MIM) ಮತ್ತು ಇಂಡಿಯನ್ ಯೂನಿಯನ್ ಮುಸ್ಲೀಮ್ ಲೀಗ್ (IUML) ಇವು ಕೋಮುವಾದಿಗಳಲ್ಲ ಆದರೆ ಇವು ಸೆಕ್ಯೂಲರ್ ಪಕ್ಷಗಳು. ನೀವೇನಾದರೂ ಹಿಂದೂಸ್ಥಾನ ಎಂದಿರೋ ಆಗ ನೀವು ಖಂಡಿತಾ ಕೋಮುವಾದಿಗಳು; ಇದೇ ನಮ್ಮ ಸೆಕ್ಯೂಲರಿಝಮ್ 🙂

    ಉತ್ತರ
  3. Prasanna Rameshwara T S
    ಡಿಸೆ 24 2013

    ವಿದ್ಯಾ ಕುಲಕರ್ಣಿಯವರ ಲೇಖನವು ವಿಚಾರಪೂರಿತವೂ ಸತ್ಯವಾಗಿಯೂ ಇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳ ಮೇಲಾದರೂ ಮೀಸಲು ಪದ್ಧತಿಯು ಅಲ್ಪಸಂಖ್ಯಾತರನ್ನು ಮೇಲೆತ್ತುವ ನೆಪದಲ್ಲಿ ಮುಂದುವರೆದು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರು ಸಾಮರ್ಥ್ಯವಿದ್ದೂ ಸರ್ಕಾರದ ಎಷ್ಟೋ ಯೋಜನೆಗಳಿಂದ ವಂಚಿತರಾಗುವಂತಹ ಪರಿಸ್ಥಿತಿ ಮುಂದುವರೆದಿದೆ. ಇಂತಹ ವ್ಯವಸ್ಥಿತ ದಬ್ಬಾಳಿಕೆ, ಶೋಷಣೆಗಳನ್ನು ನಾವು ಬ್ರಾಹ್ಮಣರು ಎಲ್ಲಿಯವರೆಗೂ ಸಹಿಸಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ನಮ್ಮ ಸ್ಥಿತಿ ಶೋಚನೀಯವಾಗೇ ಇರುತ್ತದೆ. ಭಾರತೀಯ ಸಂಸ್ಕೃತಿಯನ್ನೂ ಬ್ರಾಹ್ಮಣರನ್ನೂ ಟೀಕಿಸುವುದನ್ನೇ ಕಾಯಕ ಮಾಡಿಕೊಂಡ ಬುದ್ಧಿಜೀವಿಗಳೆನಿಸಿಕೊಳ್ಳಲು ಹೊರಟಿರುವ ಇಂಥ ವ್ಯಕ್ತಿ ಮತ್ತು ಪತ್ರಿಕೆಗಳನ್ನು ಧಿಕ್ಕರಿಸಬೇಕು.

    ಉತ್ತರ
  4. M.A.Sriranga
    ಡಿಸೆ 24 2013

    ವಿದ್ಯಾ ಕುಲಕರ್ಣಿ ಅವರಿಗೆ-
    ಇಂದು ನಮ್ಮ ಕರ್ನಾಟಕದ ಕೆಲವು ಸಾಹಿತಿಗಳು,ಬುದ್ಧಿಜೀವಿಗಳು ಮತ್ತು ಪ್ರಗತಿಪರರ ಚಿಂತನೆಯ ಲಹರಿ ಹೇಗಿದೆಯೆಂದರೆ (೧)ಅಖಿಲ ಭಾರತ ಮಟ್ಟದಲ್ಲಿ ಸುದ್ದಿಯಾಗಬೇಕಾದರೆ ಹಿಂದುಗಳನ್ನು ಟೀಕಿಸಬೇಕು ಪತ್ರಿಕೆಗಳಿಗೆ ಬರೆಯಬೇಕು
    (೨) ಲೋಕಲ್ ಮಟ್ಟದಲ್ಲಿ ಸುದ್ದಿಯಲ್ಲಿರಬೇಕಾದರೆ ಬ್ರಾಹ್ಮಣ-ಅಬ್ರಾಹ್ಮಣದ ಬಗ್ಗೆ ಸಮಯಸಿಕ್ಕಿದಾಗಲೆಲ್ಲ ಮಾತಾಡಬೇಕು ಮತ್ತು ಬರೆಯಬೇಕು. ಇಂತಹವರಿಗೆ ಗಾಳ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನಮ್ಮಲ್ಲಿ ಸಾಕಷ್ಟಿವೆ. ಒಂದು ವೇಳೆ ನಾವುಗಳೇನಾದರು ಆ ಲೇಖನಗಳ ವಿರೋಧವಾಗಿ ಪ್ರತಿಕ್ರಿಯೆ/ಲೇಖನ ಬರೆದರೆ ಅವುಗಳನ್ನು ಅವು ಪ್ರಕಟಿಸುವುದು ಅನುಮಾನ. ಒಂದುವೇಳೆ ಪ್ರಕಟವಾದರೆ ನಮ್ಮ ಪೂರ್ವ ಜನ್ಮದ ಪುಣ್ಯ ಎಂದುಕೊಳ್ಳಬೇಕು ಅಷ್ಟೇ. ಇಂತಹ ಅನುಭವಗಳು ನನಗೂ ಆಗಿವೆ. ಹೀಗಾಗಿ ನಾನು ಅಂತಹ ಲೇಖಕರ ವಿಳಾಸವೋ, ಇ -ಮೇಲ್ .ಐಡಿಯೋ ಇದ್ದರೆ ಅವರುಗಳಿಗೇ ನೇರವಾಗಿ ಬರೆದುಬಿಡುತ್ತೇನೆ. ಅವರು ಓದಲಿ/ಬಿಡಲಿ/ನಮಗೆ ಉತ್ತರಿಸಲಿ ಅಥವಾ ಬಿಡಲಿ. ಒಂದಿಬ್ಬರು ಉತ್ತರಿಸಿದ್ದಾರೆ. ಹಲವರು ಉಪೇಕ್ಷಿಸಿದ್ದಾರೆ. ಜತೆಗೆ ತಾವು ಹೇಳಿದಂತಹ ವಾರ್ತಾಭಾರತಿಯಂತಹ ಪತ್ರಿಕೆಗಳನ್ನು ಓದಿ ಅವುಗಳಲ್ಲಿ ಹೊಸ ವಿಚಾರವೇನಾದರೂ ಇದೆಯೇ ಎಂದು ನೋಡಿ ಬಿಟ್ಟು ಬಿಡಬೇಕಷ್ಟೇ. ಏಕೆಂದರೆ ನಮ್ಮನ್ನು ಒಬ್ಬರು ಟೀಕಿಸಿದಾಗ ಸಹಜವಾಗಿ ನಮಗೆ ಬೇಸರ/ಕೋಪ ಬರುತ್ತದೆ. ಆದರೂ ಅದರಲ್ಲಿ ಸ್ವಲ್ಪವಾದರೂ ನಿಜ ಇದೆಯೋ ಇಲ್ಲವೋ ಎಂದು ಯೋಚಿಸುವುದರಿಂದ ನಮ್ಮ ಮಾನಸಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ನನ್ನ ಭಾವನೆ. .

    ಉತ್ತರ
  5. M.A.Sriranga
    ಡಿಸೆ 24 2013

    ಬಾಲಚಂದ್ರ ಭಟ್ ಅವರಿಗೆ-
    ಈ ಬ್ರಾಹ್ಮಣ-ಅಬ್ರಾಹ್ಮಣ ಚಳುವಳಿ/ದ್ವೇಷ ಸುಮಾರು ಒಂದು ನೂರು ವರ್ಷಗಳಷ್ಟು ಹಳೆಯದು. ೧೯೧೬ರ ಸಮಯದಲ್ಲಿ ಸರ್ ಎಂ ವಿ ಅವರು ಅಂದಿನ ಮೈಸೂರು ಸಂಸ್ಥಾನದ ದಿವಾನರ ಹುದ್ದೆಗೆ ರಾಜೀನಾಮೆ ಕೊಟ್ಟದ್ದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಕೆಲವರು ಪಿತೂರಿ ಮಾಡಿದ್ದರಿಂದ. ಇಂದು ಸರ್ಕಾರಾದ ಸವಲತ್ತುಗಳಿಂದ ಬ್ರಾಹ್ಮಣರು ಕೇವಲ ಅವರ ಜಾತಿಯ ಕಾರಣದಿಂದ ವಂಚಿತರಾಗಿರುವುದು ಒಮ್ಮೊಮ್ಮೆ ನಮಗೆ ಬೇಸರ ತರಿಸುತ್ತದೆ. ಇದು ನಿಜ. ಆದರೆ ಯಾವ ಆಸರೆ ಇಲ್ಲದೆಯೂ ಆ ಜನಾಂಗ ಮುಂದುವರಿಯುತ್ತಿರುವುದು ಒಳಿತೇ ಆಯಿತೆಂದು ಅಂದುಕೊಳ್ಳಬೇಕು.

    ಉತ್ತರ
  6. ಶ್ರೀಕಾಂತ್
    ಡಿಸೆ 24 2013

    ವಾರ್ತಾಭಾರತಿಯಂತಹ ಗುಜರಿ ಅಂಗಡಿಗೂ ಕಾಯಕ್ಕಿಲ್ಲಿದ ಪತ್ರಿಕೆಯನ್ನು ನೀವು ಓದುತ್ತೀರೆಂದರೆ ಆ ಪೆಕರ ಜಿಹಾದಿ ಪತ್ರಕರ್ತನ ಹುನ್ನಾರ ಫಲಿಸಿದೆಯೆಂದೇ ಅರ್ಥವಲ್ಲವೆ? ಇನ್ನು ಬ್ರಾಹ್ಮಣರನ್ನು ಬಯ್ದರೆ ದಲಿತರು ಮತ್ತು ಮಿಕ್ಕ ವರ್ಗಗಳವರನ್ನು ಸಂತುಷ್ಠ ಪಡಿಸಿದಂತೆ, ಹಾಗಾಗಿ ಬಶೀರ ಅಂತಹ ಕೆಲಸಕ್ಕೆ ಇಳಿಯುತ್ತಾನೆ. ನಿಜಕ್ಕೂ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಅದರಲ್ಲೂ ಉತ್ತರ ಕರ್ನ್ಟಕದಲ್ಲಿ ಮತ್ತು ದಕ್ಷಿಣದ ಹಳೇ ಮೈಸೂರು ಪ್ರಾಂತ್ಯದಲ್ಲಿ ಯಾವ ಜಾತಿಯವರಿಂದ ಎಂದು ಯಾವ ಹುಂಬನೂ ಹೇಳಬಲ್ಲ. ಆದರೆ ಯಾವ ಬುದ್ದಿಜೀವಿ ಎನಿಸಿಕೊಂಡ ಎಪರತೆಪರಗಳಿಗೆ ಆ ಪ್ರಬಲ ಜಾತಿಯ ವಿರುದ್ದ ಸೊಲ್ಲೆತ್ತಲೂ ಸಾಧ್ಯವಿಲ್ಲ. ಹಾಗಾಗಿ ಯಾರಿಗೂ ಪ್ರತಿಯಾಡದ ಬ್ರಾಹ್ಮಣರನ್ನು ಬಯ್ದು ತೀಟೆ ತೀರಿಸಿಕೊಂಡು ಸರಕಾರದಿಂದ ಒಂದಷ್ಟು ಪ್ರಶಸ್ತಿ ಜಾಹಿರಾತು ಹಣ ಮಾಡಿಕೊಳ್ಳುವ ಹುನ್ನಾರವಷ್ಟೇ, ವಸ್ತುಸ್ಥಿತಿ ಯಾರಿಗೂ ಬೇಡ.

    ಉತ್ತರ
    • ಜನ 18 2015

      Please read breaking India by Mr.Rajiv Malhotra. all these guys are funded to write against one community to widen the presumed faultline and break India. Surely B.M.Bashir and the likes must be getting kick backs from innumerable NGOs.

      ಉತ್ತರ
      • Nagshetty Shetkar
        ಜನ 18 2015

        Even Balu Rao of Ghent (CSLC patron) thinks that Rajiv Malhotra is a pompous idiot!! Yet we are advised by Sudarshan Rao to read Rajiv Malhotra and get educated!

        ಉತ್ತರ
        • ani
          ಜನ 18 2015

          ರಾಜೀವ್ ಮಲ್ಹೋತ್ರಾರ ಯಾವ ಬರಹಕ್ಕೆ ಬಾಲುರವರು ಹಾಗೆ ಹೇಳಿದ್ದಾರೆ ತಿಳಿಸಿ. ಬಹುಷ ಬೇರೆಯಾವುದಾದರೂ ಬರಹದ ಬಗ್ಗೆ ಹಾಗೆ ಹೇಳಿರಬೇಕೆನಿಸುತ್ತದೆ.

          ಉತ್ತರ
  7. ಡಿಸೆ 24 2013

    Very good article. Cudos to Vidya!

    Instead of commenting more, I will wait for some cheap entertainment from our “foot in the mouth” expert Nagshetty Shetkar 😉 😛

    ಉತ್ತರ
    • Nagshetty Shetkar
      ಡಿಸೆ 28 2013

      ಇಂದು ಬ್ರಾಹ್ಮಣರಲ್ಲೂ ಒಳ್ಳೆಯವರಿದ್ದಾರೆ, ಅಸಮಾನತೆಯ ವಿರುದ್ಧ ಹಾಗೂ ಶೋಷಿತರ ಪರ ಧ್ವನಿ ಎತ್ತುವವರಿದ್ದಾರೆ, ಕಾಯಕವನ್ನು ನೆಚ್ಚಿ ದುಡಿಮೆಯಲ್ಲಿ ತೊಡಗಿರುವವರಿದ್ದಾರೆ. ಹಿಂದೆ ಇಂತಹವರ ಸಂಖ್ಯೆ ತುಂಬ ಕಡಿಮೆ ಇತ್ತು. ಬಹುತೇಕ ಬ್ರಾಹ್ಮಣರು ಭೂಸುರರೇ ಎಂಬಂತೆ ಸ್ವಮಗ್ನರಾಗಿ ಸುಖಜೀವನ ನಡೆಸುತ್ತಿದ್ದರು. ಕನಕದಾಸರ ಕಾಲದ ಬ್ರಾಹ್ಮಣರು ಎಂತಹವರಾಗಿದ್ದರೆಂಬುದಕ್ಕೆ ’ಕುಲ ಕುಲ ಎಂದೇಕೆ ಹೊಡೆದಾಡುವಿರಿ’ ಎಂಬ ಹಾಡೇ ನಿದರ್ಶನ. ಬಸವಣ್ಣನವರ ಕಾಲದಲ್ಲಿ ಶರಣರ ಮಾರಣಹೋಮ ಕೂಡ ನಡೆಸಿದ್ದರು ಅಂದಿನ ಬ್ರಾಹ್ಮಣರು. ಸಹಸ್ರಾರು ವರ್ಷಗಳ ಕಾಲ ವೈದಿಕ ಧರ್ಮದ ಚಾತುರ್ವರ್ಣ್ಯ ಹಾಗೂ ಮನುಸ್ಮೃತಿ ಮೂಲಕ ಬ್ರಾಹ್ಮಣರು ನಾಡಿನ ಸಂಪತ್ತನ್ನೂ ಅಧಿಕಾರವನ್ನೂ ತಮ್ಮಲ್ಲೇ ಕ್ರೋಢೀಕರಿಸಿಕೊಂಡಿದ್ದರು. ಸಹಜವಾಗಿಯೇ ಆ ಕಾರಣಕ್ಕೆ ಅಲ್ಪಸಂಖ್ಯಾತರಿಗೆ ಶೂದ್ರಾತಿಶೂದ್ರರಿಗೆ ದಲಿತರಿಗೆ ಬ್ರಾಹ್ಮಣರ ಬಗ್ಗೆ ಇನ್ನೂ ಸಾತ್ವಿಕ ಸಿಟ್ಟು ಇದೆ. ಸಂವಿಧಾನದ ಮೂಲಕ ಸಿಕ್ಕ ಹಕ್ಕುಗಳನ್ನು ಬ್ರಾಹ್ಮಣ್ಯದ ಪ್ರತಿಪಾದಕರು ಪಿತೂರಿ ನಡೆಸಿ ಕಿತ್ತುಕೊಂಡಾರು ಎಂಬ ಭಯವಿದೆ. ಆದುದರಿಂದ ಬ್ರಾಹ್ಮಣರು ಮಾತು ಮಾತಿಗೆ ’ಬ್ರಾಹ್ಮಣ ಟೀಕೆ’ ಎಂದು ಹರಿಹಾಯುವ ಬದಲು ಸಂಯಮದಿಂದ ವರ್ತಿಸಿ ತಮ್ಮ ಸೆಕ್ಯೂಲರ್ ಬದ್ಧತೆಯನ್ನು ನುಡಿ ಆಚಾರ ಹಾಗೂ ನಡೆಗಳ ಮೂಲಕ ತೋರಿಸಿಕೊಡುವ ಕೆಲಸ ಮಾಡತಕ್ಕದ್ದು.

      ಉತ್ತರ
      • Manohar
        ಡಿಸೆ 28 2013

        “ಅಂದಿನ ಬ್ರಾಹ್ಮಣರು. ಸಹಸ್ರಾರು ವರ್ಷಗಳ ಕಾಲ ವೈದಿಕ ಧರ್ಮದ ಚಾತುರ್ವರ್ಣ್ಯ ಹಾಗೂ ಮನುಸ್ಮೃತಿ ಮೂಲಕ ಬ್ರಾಹ್ಮಣರು ನಾಡಿನ ಸಂಪತ್ತನ್ನೂ ಅಧಿಕಾರವನ್ನೂ ತಮ್ಮಲ್ಲೇ ಕ್ರೋಢೀಕರಿಸಿಕೊಂಡಿದ್ದರು.”

        ಹೌದೆ? ಸಂಪತ್ತು ಮತ್ತು ಅಧಿಕಾರವನ್ನು ಕ್ರೋಢಿಕರಿಸಿಕೊಂಡ ಬ್ರಾಹ್ಮಣ ರಾಜರ/ಸಾಮಂತರ ಕೆಲವು ಹೆಸರುಗಳನ್ನು ಕೊಡಬಹುದೆ?

        “ಆದುದರಿಂದ ಬ್ರಾಹ್ಮಣರು ಮಾತು ಮಾತಿಗೆ ’ಬ್ರಾಹ್ಮಣ ಟೀಕೆ’ ಎಂದು ಹರಿಹಾಯುವ ಬದಲು ಸಂಯಮದಿಂದ ವರ್ತಿಸಿ ತಮ್ಮ ಸೆಕ್ಯೂಲರ್ ಬದ್ಧತೆಯನ್ನು ನುಡಿ ಆಚಾರ ಹಾಗೂ ನಡೆಗಳ ಮೂಲಕ ತೋರಿಸಿಕೊಡುವ ಕೆಲಸ ಮಾಡತಕ್ಕದ್ದು.”

        ಅಪ್ಪಣೆಯಾಗಲಿ ಮಹಾನುಭಾವರೆ!..ನೀವು ಸೆಗಣಿ ಬಕೆಟನ್ನು ಕೆಳಗಿಡಬೇಡಿ. ನಿಮ್ಮ ಕೆಲಸ ಮುಂದುವರೆಸಿ!, ಬ್ರಾಹ್ಮಣರು ಸಂಯಮ ತೋರಿಸಿ ನಿಮ್ಮ ಅಪ್ಪಣೆ ಪಾಲಿಸಲಿ..

        ಉತ್ತರ
  8. ಡಿಸೆ 24 2013

    ಈ ರೀತಿ ಬರೆಯುವವರ ಶಿಕ್ಷಣದ ಹಿನ್ನೆಲೆಯನ್ನು ಗಮನಿಸಿದರೆ, ಇವರು ಹೀಗೇಕೆ ಬರೆಯುತ್ತಾರೆ ಎನ್ನುವುದು ತಿಳಿಯುತ್ತದೆ.
    ಇಂತಹವರನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿಯೇ ಅರುಣ್ ಶೌರಿಯವರು “Eminent Historians” ಪುಸ್ತಕ ಬರೆದಿದ್ದಾರೆ.
    ಅದು ಇತ್ತೀಚೆಗೆ ಕನ್ನಡಕ್ಕೂ ಭಾಷಾಂತರಗೊಂಡಿದೆ.
    ಪ್ರತಿಯೊಬ್ಬ ಹಿಂದುವೂ ಓದಲೇಬೇಕಾದ ಪುಸ್ತಕವಿದು. ನಮ್ಮ ಇತಿಹಾಸವನ್ನು ಯಾವ ರೀತಿ ತಿರುಚಲಾಗಿದೆ, ತಿರುಚಿದವರು ಯಾರು, ಅವರು ಹಾಗೆ ಮಾಡಿದ್ದೇಕೆ, ಅದರಿಂದಾದ ಅನಾಹುತಗಳೇನು, ಇತ್ಯಾದಿ ವಿಷಯಗಳ ಕುರಿತಾಗಿ ಬರೆದಿರುವ ಸಂಶೋಧನಾ ಗ್ರಂಥವಿದು. ಈ ರೀತಿಯ ಶಿಕ್ಷಣ ಪಡೆದವರು, ಈ ದೇಶಕ್ಕೆ ಸಂಬಂಧಿಸಿದ ವಿಷಯದಲ್ಲಿ ಒಳ್ಳೆಯ ಭಾವನೆ ಹೊಂದಲು ಸಾಧ್ಯವೇ ಇಲ್ಲ. ಮತ್ತು ಈ ದೇಶಕ್ಕೆ ಒಳ್ಳೆಯದು ಮಾಡಿದ ಬ್ರಾಹ್ಮಣರ ಕುರಿತಾಗಿಯೂ ಇವರು ಧ್ವೇಷ ಬೆಳೆಸಿಕೊಂಡಿದ್ದಾರೆ.
    ಇದನ್ನು ಸರಿಪಡಿಸಲು, ನಮ್ಮ ಇತಿಹಾಸ ಶಿಕ್ಷಣವನ್ನು ಅಂತಹವರ ಕೈಯ್ಯಿಂದ ಪ್ರತ್ಯೇಕಿಸಬೇಕು, ನೈಜ ಇತಿಹಾಸದ ಪುಸ್ತಕಗಳನ್ನು ಬರೆಸಬೇಕು, ಆ ರೀತಿಯ ಇತಿಹಾಸವನ್ನೇ ನಮ್ಮ ಮಕ್ಕಳು ಓದುವಂತಾಗಬೇಕು. ಆಗ ಮಾತ್ರ ಇದೆಲ್ಲಾ ಸರಿಹೋಗಬಹುದು.

    ಉತ್ತರ
  9. ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ, ಬಾಲಚಂದ್ರ ಅವರು ಹೇಳಿದಂತೆ , ಬಷೀರ್ ಅಂತವರು ಒಡೆದು ಆಳುವ ನೀತಿ ಅನುಸರಿಸಲು ಬ್ರಾಹ್ಮಣ ದ್ವೇಷ ತೋರ್ಪಡಿಸುತ್ತಿದ್ದಾರೆ, ದೌರ್ಜನ್ಯ ಮಾಡುವವರು ಬ್ರಾಹ್ಮಣರು ಮಾತ್ರವೇ ಅಂದ ಕೂಡಲೇ ಅದು ಬ್ರಾಹ್ಮಣ ಅಲ್ಲ ” ಬ್ರಾಹ್ಮಣ್ಯ ” ಅನ್ನೋ ಹೊಸ ರಾಗ ಹಾಡುತ್ತಾರೆ… ಹಿಂದೊಮ್ಮೆ ನನ್ನ ಬ್ಲಾಗ್ಲ್ ಲ್ಲಿ ರವಿ ಬೆಳೆಗೆರೆ ಅವರ ಇದೆ ವಿಷಯದ ಮೇಲಿನ ಒಂದು ಲೇಖನ ಪ್ರಕಟಿಸಿದ್ದೆ , ತುಂಬಾ ಮನ ಮುಟ್ಟುವ ಹಾಗೆ ಬರೆದಿದ್ದಾರೆ, ಅದರ ಲಿಂಕ್ ಕೆಳಗೆ ಕೊಡುತ್ತೇನೆ , ಈ ಲೇಖನಕ್ಕೆ ಪೂರಕವಾಗಿ ,
    ಜಾತಿ-ಧರ್ಮ ಮತ್ತು ಸಾಹಿತಿಗಳು ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲವು ಪ್ರಶ್ನೆಗಳು!
    http://www.salaake.blogspot.in/2013/08/blog-post.html
    http://www.salaake.blogspot.in/2013/08/blog-post.html

    ಉತ್ತರ
  10. ಶ್ರೀಕಾಂತ್
    ಡಿಸೆ 24 2013
  11. vidya
    ಡಿಸೆ 24 2013

    ಅವಿನಾಶ್ ಅವರೆ ನಿಮ್ಮ ಸಲಾಕೆಯಲ್ಲಿನ ಲೇಖನ ಓದಿದೆ. ಇದನ್ನು ರವಿ ಬೆಳಗೆರೆ ಬರೆದಿದ್ದಾರೆ ಎಂದರೆ ನನಗೆ ಜಗತ್ತಿನ 8ನೇ ಅದ್ಭುತವೆನಿಸುತ್ತಿದೆ. ಈ ಲೇಖಕರು ಹಾಯ್ ಬೆಂಗಳೂರು ಪತ್ರಿಕೆಯ ಬೆಳಗೆರೆ ಹೌದಾ??!!!!!!

    ಉತ್ತರ
    • ಅರವಿಂದ
      ಡಿಸೆ 24 2013

      ಅವಿನಾಶ್‌ ಅವರೇ ವಿದ್ಯಾ ಅವರ ಅಭಿಪ್ರಾಯದಲ್ಲಿ ನನಗೂ ಸಹಮತವಿದೆ. ನಾನು ಸಲಾಕೆಯಲ್ಲಿನ ಲೇಖನ ಓದಿದೆನಾದರೂ ಕೆಳಗೆ ಆತನ ಹೆಸರಿದ್ದುದು ಗಮನಿಸಿರಲಿಲ್ಲ. ಆದರೆ ಮರುಪೋಸ್ಟ್‌ಗಳಾದ ಮೇಲೆ ನೋಡಿದಾಗ ಅಂತಹಾ ವ್ಯಕ್ತಿಯಿಂದ ಇಂತಹಾ ಲೇಖನವೇ ಎಂದು ವಿದ್ಯಾ ಅವರಿಗನಿಸಿದ್ದೇ ಅನುಮಾನ ನನಗೂ ಬಂತು.

      ಉತ್ತರ
  12. ಗಿರೀಶ್
    ಡಿಸೆ 24 2013

    ಅವರ ಬ್ರಾಹ್ಮಣ ದ್ವೇಷಕ್ಕೆ ಕಾರಣ ಇದೆ. ಯಾವುದೇ ಮತ ಪ್ರಸಾರವಾಗದಂತೆ ತಡೆದವರು ಬ್ರಾಹ್ಮಣರೆ ಅದು ಇವರಿಗೆ ಉರಿಯಲು ಕಾರಣ. ಅಂದ ಹಾಗೆ ಆ ಭಯೋತ್ಪಾದಕ ಪತ್ರಕರ್ತ ಹೇಳುವುದು ಬ್ಯಾರಿಗಳು ಒಂದು ಕಾಲದಲ್ಲಿ ಬ್ರಾಹ್ಮಣರೇ ಆಗಿದ್ದವರಂತೆ. 😀

    ಉತ್ತರ
  13. ಡಿಸೆ 24 2013

    ಇತ್ತೀಚೆಗೆ ಮಾಧ್ಯಮಗಳು ಹಾಗೂ ಪತ್ರಿಕೆಗಳಿಗೆ ಇಂತಹ ಬ್ರಾಹ್ಮಣ ವಿರೋಧಿ ಧೋರಣೆಗಳೆ ಬಹು ಪ್ರಿಯವಾದಂತಹ ವಿಚಾರಗಳಾಗಿವೆ.
    ಬೇರೆಯ ಜಾತಿ-ಧರ್ಮದವರನ್ನು ಕೆಣಕಿದರೆ ಉಂಟಾಗಬಹುದಾದಂತಹ ಪರಿಣಾಮಗಳು ಬ್ರಾಹ್ಮಣರಿಂದ ಉಂಟಾಗುವುದಿಲ್ಲವಲ್ಲ ಅದೇ ಕಾರಣ.

    ಉತ್ತರ
  14. ಡಿಸೆ 25 2013

    ” ಶ್ವಾನ ತಾ ಬೊಗಳುವುದು, ಆನೆ ತಾ ಪೋಗುವುದು.” ಎಂಬಂತೆ ಇಂದಿನ ಬ್ರಾಹ್ಮಣರು ನಡೆದು ಸಾಧಿಸಿ ತೋರಿಸಬೇಕಿದೆ. ಬ್ರಾಹ್ಮಣರನ್ನು ನಿಂದಿಸುವ ಜನಕ್ಕೆ ಬ್ರಾಹ್ಮಣರು ನೊಂದುಕೊಳ್ಳಬೇಕಿಲ್ಲ, ನಿಂದೆಗೆ ಮಹತ್ವವನ್ನೂ ಕೊಡಬೇಕಿಲ್ಲ. ಬ್ರಾಹ್ಮಣರು ಬಿದ್ದಾಗ ಯಾರೂ ಕೂಡಾ ಬ್ರಾಹ್ಮಣರನ್ನು ಕೈಹಿಡಿದು ಎತ್ತಲಾರರು (ಸರಕಾರವಾಗಲಿ, ಬ್ರಾಹ್ಮಣೇತರರಾಗಲಿ). ಇದರ ನಿರೀಕ್ಷೆಯೂ ತರವಲ್ಲ. ಹೀಗಿದ್ದಾಗ ಭಗವಂತನನ್ನೇ ಬ್ರಾಹ್ಮಣರು ನಂಬಿದವರು., ಬ್ರಾಹ್ಮಣರು ವಿದ್ವತ್ತು, ಪಾಂಡಿತ್ಯವನ್ನು ಉಳಿಸಿ, ಬೆಳೆಸಿಕೊಳ್ಳ ಬೇಕಿದೆ. ” ಧರ್ಮೋ ರಕ್ಷತಿ ರಕ್ಷಿತಃ ” ಧರ್ಮವೇ ಬ್ರಾಹ್ಮಣರ ಮೂಲಾಧಾರ.

    ಉತ್ತರ
  15. Muralikrishna
    ಡಿಸೆ 26 2013

    Now a days everybody can understand the real things… let them bark like street dogs…we need not care…even long long ago we are being targetted… especially with regard to temple issues… like pooja and brahmana santarpane in temples….. their baseless comments make us stronger and stronger…

    ಉತ್ತರ
  16. ಡಿಸೆ 26 2013

    issue is not if madesnana is right or wrong ..that will be decided by court and govt.. but issue is amount of time media( especially casteist media rags like vanti bharti,g LANGESH patrike /buddhi jeevis spend on abusing a caste wrt amount of time they spend on jihadi acts like bombing,fake currency etc. DISPROPORTIONATE OUTRAGE done so that it fetches them votes .so better for brahmins also to stop this ritual so that these vanti bhartis do not get any such issue against brahmins. ( 1 ritual which is protected by freespeech and is voluntary and court also has not stpped it since prima facie it comes under right to religious belief gets 100 hours of media time and anti-natiuonal jihadi acts like bombing, fake currency etc do not get even 25 hours of media time) votes=power=mla=money/power=caste power goes up.. these vanti bharati, g LANGESH patrike are nothing but casteist patrike.. they start a term vaidika/brahmanya and keep abusing indirectly every week under their casteist magazine..that caste bias shows up very easilly.. check the issues they choose in headlines/frontpage…check the politicians they try to support more often.. 1 magazine wrote 40 seats for BSY in 2013 mla elections is 100% certain just before mla elections to influence voters..it also gave list of seats where the bsy party is going to win….but bsy got only 6 seats… shows how much casteist these weekly magazines are..these weekly magazines have lots of provocationary articles. but only against brahmins..these vanti bhartis / langesh patrike never ever hurt major castes like vokkaliga/lingayat/kuruba/nayaka/dalits ..they will target people from these castes..but issue wise they will never target these caste/swamijis from these castes.. there is a saying …check out the ABC persons/social groups, xyz individual/organization does not accuse/abuse..this xyz individual/organization finds that accusing ABC PERSons/organizaton/social groupgs is difficult or risky or not worthy enough or hurts their cause… this saying is enough to tell the tale..

    ಉತ್ತರ
  17. ಅವಿನಾಶ್ ಹೆಗ್ಡೆ
    ಡಿಸೆ 26 2013

    @ವಿದ್ಯಾ , @ಅರವಿಂದ್ . ಆ ಲೇಖನ ಮೊದಲು ನನಗೆ ಸಿಕ್ಕಾಗ ಅದು ರವಿ ಬೆಳೆಗೆರೆ ಬರೆದಿದ್ದು ಅಂತ ಗೊತ್ತಿರಲಿಲ್ಲ.. ನಂತರ ಕೆಲವು ಸ್ನೇಹಿತರ ಮೂಲಕ ಅದು ರವಿ ಬೆಳಗೆರೆಯ ಲೇಖನ ಅಂತ ತಿಳಿಯಿತು… ಮೊದಲು ನನಗೂ ಕೂಡ ಆಶ್ಚರ್ಯ ಆಗಿತ್ತು … ಆದ್ರೆ ಈ ಕಲಿಗಾಲದಲ್ಲಿ ಏನು ಬೇಕಾದ್ರೂ ಆಗಬಹುದು ಅಲ್ವೇ ..? ರವಿ ಬೆಳೆಗೆರೆಯ ಲೇಖನ ಗಾಡವಾದ ಚಿಂತನೆಗೆ ಇಂಬು ಕೊಡುತ್ತದೆ ಅನ್ನುವುದಂತೂ ಸತ್ಯ.

    ಉತ್ತರ
  18. vidya
    ಡಿಸೆ 26 2013

    ಅವಿನಾಶ ಅವರೆ ನಿಮ್ಮ ಬ್ಲಾಗ್ ಸಲಾಕೆಗೆ ಏನಾದರೂ ಕಮೆಂಟ್ ಬರೆಯಬೇಕೆಂದರೆ ಸಾಧ್ಯವಾಗುತ್ತಿಲ್ಲ. ಹೇಗೆ ಬರೆಯಬೇಕೆಂದು ತಿಳಿಸಿದರೆ ಅಲ್ಲಿಯೇ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.ದಯವಿಟ್ಟು ತಿಳಿಸುವಿರಾ??

    ಉತ್ತರ
    • ಅವಿನಾಶ್ ಹೆಗ್ಡೆ
      ಡಿಸೆ 28 2013

      @ ವಿದ್ಯಾ , ಕೆಲವೊಮ್ಮೆ ಗೂಗಲ್ Atom ಕೈ ಕೊಡುವುದರ ಪರಿಣಾಮ ಅದು, ಈಗ ಸರಿಯಾಗಿದೆ ಅನ್ನಿಸ್ತಾ ಇದೆ. ಯಾವುದೇ ಪ್ರೊಫೈಲ್ ಆಯ್ಕೆ ಮಾಡುವ ಅಗತ್ಯ ಕೂಡ ಇಲ್ಲ… ನೇರವಾಗಿ ಕಾಮೆಂಟ್ ಮಾಡಬಹುದು

      ಉತ್ತರ
  19. Akash
    ಡಿಸೆ 26 2013

    ಬಹಳ ಜನ ಓದುಗರು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದರೆ ಬ್ರಾಹ್ಮಣರ ಟೀಕೆ ಸಾಮಾನ್ಯ ವಿಷಯ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದು ವಿದ್ಯಾ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಬ್ರಾಹ್ಮಣರು ಪ್ರತಿಭಟನೆ ಮಾಡದಿದ್ದರೆ ಅವರು ಪರಮಹಂಸರ ಕಥೆಯಲ್ಲಿ ಬರುವ ಹಾವಿನಂತಾಗಬೇಕಾಗುತ್ತದೆ. ಅವಕಾಶಗಳು ಸಿಕ್ಕಾಗ ಪ್ರತಿಭಟಿಸಿದರೇನು ತಪ್ಪು?? ಅವರು ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ. ಆ ಮೂಲಕ ಸ್ವಲ್ಪ ಜನ ಯುವಕರಾದರೂ ಜಾಗೃತರಾದರೆ ಅವರ ಪ್ರಯತ್ನ ಯಶ ಕಾಣಬಹುದಲ್ಲವೆ?? ಹಾಗೆ ತೆಗಳುವವರಿಗೂ ನಾವು ಏನು ಬರೆದರೂ ನಡೆಯುತ್ತದೆ ಎಂದು ತಿಳಿದವರಿಗೆ ಸ್ವಲ್ಪವಾದರೂ ಬಿಸಿ ತಗಲುವದಲ್ಲವೆ?

    ಉತ್ತರ
  20. M.A.Sriranga
    ಡಿಸೆ 27 2013

    ಆಕಾಶ್ ಅವರಿಗೆ —-
    ಇಂದು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಬ್ರಾಹ್ಮಣರ ಸಂಖ್ಯೆ ಶೇಕಡಾ ಮೂರು ಅಥವಾ ನಾಲ್ಕು ಎಂದು ಒಂದು ಲೇಖನದಲ್ಲಿ ಓದಿದ ನೆನಪು. ಇನ್ನು ಕರ್ನಾಟಕದ ಜನಸಂಖ್ಯೆಯ ಒಟ್ಟು ಪ್ರಮಾಣಕ್ಕೆ ಹೋಲಿಸಿಕೊಂಡರೆ ಎಷ್ಟಿರಬಹುದು? ನಮ್ಮ ಪ್ರತಿಭಟನೆಯನ್ನು ಕೋಮುವಾದ, ಅಲ್ಪ ಸಂಖ್ಯಾತರ ವಿರೋಧಿ, ದುರ್ಬಲರ ವಿರೋಧಿ ಎಂದು ಪಟ್ಟಭದ್ರ ಹಿತಾಸಕ್ತಿಗಳು ಬಿಂಬಿಸಿ ಆ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುತ್ತವೆ. ಇದರ ಜತೆಗೆ ನಮ್ಮ ತಾತ,ಮುತ್ತಾತರ ಕಾಲದ ತೋಳ -ಕುರಿಮರಿಯ ಕಥೆ ಮತ್ತು ಪಾಪದ ಮೂಟೆಯ ಭಾರ ಇನ್ನೂ ನಮ್ಮ ಹೆಗಲಿನ ಮೇಲೆ ಕೂರಿಸಿದ್ದಾರಲ್ಲ! ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ಅಂತಹವರನ್ನು ಉಪೇಕ್ಷಿಸಿ, ಈ ಸಮಯದಲ್ಲಿ ನಮ್ಮ ಏಳ್ಗೆಯನ್ನು ನಾವೇ ಕಂಡುಕೊಳ್ಳುವ ದಿಕ್ಕಿನಲ್ಲಿ ನಡೆಯುವುದೇ ಉತ್ತಮ.

    ಉತ್ತರ
    • ಅವಿನಾಶ್ ಹೆಗ್ಡೆ
      ಡಿಸೆ 28 2013

      @ಶ್ರೀರಂಗರವರೆ , ನಿಮಗೆ ಗೊತ್ತೇ ಮುಸ್ಲಿಮರನ್ನು ತೆಗಳಿ ಬರೆಯಲು ಪತ್ರಿಕೆಗಳು ಹಿಂದೆ ಮುಂದೆ ನೋಡುತ್ತವೆ ಯಾಕೆ ಅಂತ ? ಎಲ್ಲಿ ಬಂದು ಜಾಡಿಸಿ ಒದ್ದರೋ ಅಂತ…. ಬ್ರಾಹ್ಮಣರು ನಿಮ್ಮ ಹಾಗೆ ಉದಾರಿಗಳಾಗಿದ ಪರಿಣಾಮವನ್ನ ಈಗ ಅನುಭವಿಸುತ್ತಿರುವುದು… ಧ್ವನಿ ಒಂದಿರಲಿ , ಎರಡಿರಲಿ, ಪ್ರತಿಭಟನೆ ಮಾಡಲೇಬೇಕು ….

      ಉತ್ತರ
  21. ಜನ 3 2014

    Dear all, DIVINE ACHARYATRAYA SEVA FOUNDATON IS ORGANSING A SEMINAR TO ANSWER ALL THESE ALLEGATIONS AGAINST BRAHMN COMMUNITY ON MAY 1. WE HAVE IDENTIFIED 8 MAJOR ALLEGATIONS WHICH WILL BE DISCUSSED IN THE SEMINAR. THE SEMINAR WILL BE ATTENDED BY EMINENT HISTORIANS, SCIENTISTS, SOCIAL ACTIVISTS & JOURNALISTS. WE HAVE ALSO INVITED PAPERS ON THESE TOPICS. WHICH WILL BE PUBLISHED IN BOOK FORMAT ON THE DAY OF SEMINAR. PLEAE FIND TIME TO CALL ME 9448354624 OR MAIL YOUR DETAILS TO shri.shrama@gmail.com.

    ಉತ್ತರ
    • Nagshetty Shetkar
      ಜನ 3 2014

      ದರ್ಗಾ ಸರ್ ಅವರನ್ನು ಆಹ್ವಾನಿಸಿದ್ದೀರಾ? ಬ್ರಾಹ್ಮಣರ ಪೊಳ್ಳುತನದ ಬಗ್ಗೆ ಖರಾರುವಾಕ್ಕಾಗಿ ದರ್ಗಾ ಸರ್ ಅವರಲ್ಲದೆ ನಿಮ್ಮ ವಿಪ್ರವೃಂದ ಮಾತನಾಡಬಲ್ಲದೆ???

      ಉತ್ತರ
      • Manohar
        ಜನ 3 2014

        ಬಾವಿಯಲ್ಲಿನ ಕಪ್ಪೆ!! ಈ ಹೊಸ ವರುಷದಲ್ಲಾದರೂ ಆ ಹರಕಲು ದರ್ಗಾ ಪುರಾಣವನ್ನು ಬಿಟ್ಟು ತನ್ನ ಸ್ವಂತ ಕಾಲುಗಳ ಮೇಲೆ ನಿಂತುಕೊಳ್ಳುವ ಪ್ರಯತ್ನ ಮಾಡಬಹುದು ಎಂಬ ನಿರೀಕ್ಷೆಯಿತ್ತು.

        ಉತ್ತರ
        • Nagshetty Shetkar
          ಜನ 3 2014

          ಸತ್ಯವನ್ನು ಎದುರಿಸಲಾರದ ನಿಮ್ಮಂತಹವ್ರು ದರ್ಗಾ ಸರ್ ಅವರ ನಿಂದನೆಯಲ್ಲೇ ಜೀವನ ಸವೆಸುತ್ತೀರಿ!

          ಉತ್ತರ
          • Manohar
            ಜನ 4 2014

            ಮತ್ತೆ ದರ್ಗಾ!. ನಿಮ್ಮ ಸ್ವಂತ ಬುದ್ದಿಯ ಅಭಿಪ್ರಾಯಗಳೇನಾದರೂ ಇದ್ದರೆ ವ್ಯಕ್ತಪಡಿಸಿ. ಪಕ್ಕಾ ಗುಲಾಂರಂತೆ ವರ್ತಿಸಬೇಡಿ.

            ಉತ್ತರ
      • Nagshetty Shetkar
        ಜನ 16 2015
    • Nagshetty Shetkar
      ಜನ 16 2015

      ನಿಮ್ಮ ಸಂಶೋಧನೆ ಮುಗಿದ ಮೇಲೆ ನಿಮ್ಮ ಪುಸ್ತಕದ ಒಂದು ಗೌರವ ಕಾಪಿಯನ್ನು ದರ್ಗಾ ಸರ್ ಅವರಿಗೆ ಕಳುಹಿಸಿಕೊಡಿ.

      ಉತ್ತರ
      • gnk
        ಜನ 16 2015

        ಯಾರು ಸ್ವಾಮಿ ಈ ದರ್ಗಾ ಸರ್?? ನಿಮಗೂ ಅವ್ರ್ಗು ಏನ್ ಸಂಬಂಧ??

        ತಲೆ ಚಿಟ್ಟು ಹಿಡಿತಿದೆ ಈ ಹೆಸ್ರು ಕೇಳಿ ಕೇಳಿ.. OMG

        ಉತ್ತರ
        • Nagshetty Shetkar
          ಜನ 16 2015

          ಮನುವಾದಿಗಳಿಗೆ ವೈದಿಕೇತರ ಹೆಸರು ಕೇಳಿದರೆ ತಲೆ ಚಿಟ್ಟು ಹಿಡಿಯುತ್ತದೆ. ತಪ್ಪು ಯಾರದು? ದರ್ಗಾ ಸರ್ ಯಾರು ಅಂತ ನಿಲುಮೆಯ ಓದುಗರಾದ ನಿಮಗೆ ಗೊತ್ತಿಲ್ಲ ಅಂದರೆ ನಂಬುವುದು ಕಷ್ಟ! ನಿಲುಮೆಯ ಮನುವಾದಿಗಳ ನಂ ೧ ದುಃಸ್ವಪ್ನ ದರ್ಗಾ ಸರ್ ಅವರೇ ಆಗಿದ್ದಾರೆ.

          ಉತ್ತರ
    • ಶೆಟ್ಟಿನಾಗ ಶೇ.
      ನವೆಂ 21 2016

      ವಿಪ್ರ ಆನಂದ್ ಅವರು ಮಾತು ಕೊಟ್ಟಂತೆ ಪುಸ್ತಕವನ್ನು ಪ್ರಕಟಿಸಲೂ ಇಲ್ಲ, ವಿಪ್ರರ ಒಕ್ಕೂಟವು ಬ್ರಾಹ್ಮಣ್ಯದ ಬಗ್ಗೆ ಪ್ರಗತಿಪರರು ಮಾಡಿರುವ ವಸ್ತುನಿಷ್ಠ ಟೀಕೆಯನ್ನು ಎದುರಿಸಲೂ ಇಲ್ಲ! ಮಡುಗಟ್ಟಿದ ಮನಸ್ಸುಗಳಿಗೆ ಅಂಬೇಡ್ಕರ್ ರಚಿತ ಸಂವಿಧಾನವೇ ಮದ್ದು. ಪಂಕ್ತಿಭೇದವನ್ನು ಆಚರಿಸುವವರನ್ನು ಜೈಲಿಗಟ್ಟಿ ಮಾನವ ಘನತೆಯನ್ನು ಉಳಿಸಿ.

      ಉತ್ತರ
  22. ಜನ 3 2014

    We will invite,slaves, sons, grand sons and inheritors of Lord Macaulay and Karl Marx.Only true patriots will be invited.

    ಉತ್ತರ
    • Nagshetty Shetkar
      ಜನ 3 2014

      ಸರಿ, ವಿಪ್ರರು ಮನುವಿನ ಮೊಮ್ಮಕ್ಕಳಷ್ತೇ ಅಲ್ಲ ಮೆಕಾಲೆಯ ಮಕ್ಕಳೂ ಹೌದು.

      ಉತ್ತರ
  23. ಜನ 3 2014

    We will not invite slaves of Muslims, sons,grand sons and inheritors of Lord Macaulay and Karl Marx. Only true patriots will be invited. Answer the points raised by ravi belagere first if you have guts than come to argue with Brahmins.

    ಉತ್ತರ
    • Nagshetty Shetkar
      ಜನ 3 2014

      ನಿಮ್ಮ್ಸ ಮಾತುಗಳೇ ಸಾರಿ ಹೇಳಿವೆ ನೀವು ಮನುವಿನ ಮೊಮ್ಮಕ್ಕಳು ಅಂತ. ನಿಮ್ಮೊಡನೆ ಏನು ಮಾತು? ಸಂವಿಧಾನವೇ ನಿಮಗೆ ಪಾಠ ಕಲಿಸುತ್ತದೆ.

      ಉತ್ತರ
    • Nagshetty Shetkar
      ಜನ 16 2015

      ಆನಂದ ಅವರೇ, ಎಲ್ಲಿದೆ ನಿಮ್ಮ ಪುಸ್ತಕ? ಇನ್ನೂ ಪ್ರಕಟವಾಗಿಲ್ಲದಿದ್ದರೆ ನಿಲುಮೆ ಪ್ರಕಾಶನದ ವತಿಯಿಂದ ಪ್ರಕಟಿಸಿ. ವಿಪ್ರವಲಯ ಕಾತರದಿಂದ ನಿಮ್ಮ ಪುಸ್ತಕವನ್ನು ನಿರೀಕ್ಷಿಸುತ್ತಿದೆ! ಹ್ಹೆ ಹ್ಹೆ!

      ಉತ್ತರ
      • ಶೆಟ್ಟಿನಾಗ ಶೇ.
        ನವೆಂ 21 2016

        “ORGANSING A SEMINAR TO ANSWER ALL THESE ALLEGATIONS AGAINST BRAHMN COMMUNITY”

        ಎಲ್ಲಾ ಬೋಗಸ್. ಬೆಂಗಳೂರಿನ ಐಟಿಬಿಟಿ ವಿಪ್ರರಿಂದ ದುಡ್ಡು ಸಂಗ್ರಹ ಮಾಡಲಿಕ್ಕೆ ಮಾಡಿದ ಯೋಜನೆ ಇದು ಇರಬೇಕು. ಕಲೆಕ್ಷನ್ ಚೆನ್ನಾಗಿ ಆಗಿಲ್ಲ ಅದಕ್ಕೆ ಸೇಮಿನರೂ ಇಲ್ಲಾ ಸಾರೂ ಅನ್ನಾನೂ ಇಲ್ಲ. ಕಾಸು ಕೊಟ್ಟವರಿಗೆ ಪುಸ್ತಕದ ಬದಲು ಚೆಂಬು ಸಿಕ್ಕಿರಬೇಕು.

        ಉತ್ತರ
  24. vidya
    ಜನ 3 2014

    ಆತ್ಮೀಯ ನಾಗಶೆಟ್ಟಿ ಅವರೆ ಪೂರ್ವಾಗ್ರಹ ಬಿಟ್ಟು ಸ್ವಲ್ಪ ನಾನೇನು ಬರಿದಿದ್ದಿನಿ ಓದಿರಿ. ನಾನು ಇಷ್ತು ದೊಡ್ಡ ಲೇಖನ ಬರೆದಿರುವದು ವಿನಾಕಾರಣ ಟೀಕಿಸುವವರಿಗಾಗಿ ಅಲ್ಲವೆ?? ಮತ್ತೆ ಮನುವನ್ನು ತರುವಿರಿ. ಬ್ರಾಹ್ಮಣರ ಕೊಡುಗೆ ಮನು ಮಾತ್ರವೆನೆ???

    ಉತ್ತರ
    • Nagshetty Shetkar
      ಜನ 3 2014

      ಮನುವಿನ ಮೊಮ್ಮಕ್ಕಳು ಅಂತ ಕರೆದದ್ದು ತಮ್ಮನ್ನಲ್ಲ, ವಿಪ್ರ ಸಭೆಯನ್ನು ಆಯೋಜಿಸಿ ನಮ್ಮೆಲ್ಲರನ್ನೂ ಅಲ್ಲಿಗೆ ಆಹ್ವಾನಿಸಿರುವ ಆನಂದ ಅವರನ್ನು. ತಾವು ಕಾರಣವಿಲ್ಲದೆ ನನ್ನ ಮೇಲೆ ಎಗರಿದ್ದು ಸರಿಯಲ್ಲ.

      ಉತ್ತರ
      • vidyaranya
        ಜನ 4 2014

        Who does`not know about indian constitution? who have misused and used! Arun shourie has exposed by illustrating one thousand examples in his books You are blind are pretend to be blind. Indian sicularists are a curse to this nation. You people will be chanting the same even if your kith kins are raped and murdered, you vomit all your venom just like a cobra against brahmins and very sorry, specifically to reply to the boot lickers of muslims and christians is not my goal. hence kinldy excuse. I have better things to do.

        ಉತ್ತರ
    • Manohar
      ಜನ 4 2014

      ವಿದ್ಯಾ ಮೇಡಮ್..
      ನೀವು ಈ ಮಹಾನುಭಾವರಿಗೆ ಉತ್ತರ ಕೊಡುವ ಕಷ್ಟ ತೆಗೆದುಕೊಳ್ಳಬೇಡಿ. ಇದು ವಾರ್ತಾಭಾರತಿಯ ಮಿನಿ ವರ್ಶನ್. ಬಾಲ ನಳಿಕೆ ಹಾಕಿದರೂ ನೆಟ್ಟಗಾಗಲ್ಲ.

      ಉತ್ತರ
  25. ಆ ಪತ್ರಿಕೆಯ ಪ್ರಸಾರ ಸಂಖ್ಯೆ ಎಷ್ಟಿದೆ?

    ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲವೇ ಇಲ್ಲ.

    ಆ ಪತ್ರಿಕೆಯ ಬಗ್ಗೆ ಮಾತನಾಡಿದರೆ, ಆ ಪತ್ರಿಕೆಗೆ ಸುಖಾಸುಮ್ಮನೆ ಪ್ರಚಾರ ನೀಡಿದಂತಾಗುತ್ತದೆ.

    ಉತ್ತರ
  26. ಜನ 16 2015

    atradi avara maatu nurakke nuru satya…. vaarta abhaaratige talekedisikolluvudu uchitavalla… anisutte

    ಉತ್ತರ
  27. Bheemanagowda. K.
    ನವೆಂ 20 2016

    ವಿದ್ಯಾ ಕುಲಕರ್ಣಿಯವರೇ, ನಿಮ್ಮ ಹಲವು ವಿಚಾರಗಳಿಗೆ ನನ್ನ ಸಹಮತವಿದೆ. ಆದರೆ ಸ್ವತಂತ್ರ ಬಂದಾಗಿಂದ ಮೂರು ಬಾರಿ ನಿಷೇಧಕ್ಕೋಳಗಾಗಿರುವ ಆರ್.ಎಸ್.ಎಸ್.ಸಂಘಟನೆಯ ಪರವಾಗಿ ತಾವು ವಕಾಲತ್ತು ವಹಿಸುವ ಅವಶ್ಯಕತೆ ಇರಲಿಲ್ಲ.

    ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments