ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 27, 2013

4

ಗೊಂಬೆಯಾಟವಯ್ಯಾ…

‍ನಿಲುಮೆ ಮೂಲಕ

ಮೂಲ ಲೇಖಕರು : ತನ್ಯರಾಜ್ ಪುರೋಹಿತ್
ಕನ್ನಡಕ್ಕೆ : ಪ್ರಶಾಂತ್ ಭಟ್

Chessಅಧಿಕಾರದ ಮೇಲಿನ ಹಂತಗಳಲ್ಲಿ ನಡೆಯುವ ಒಳಸಂಚುಗಳ ಮತ್ತು ತಂತ್ರಗಳ ಕತೆ ಯಾವತ್ತಿಗೂ ಕುತೂಹಲ ಹುಟ್ಟಿಸುತ್ತದೆ. ನಮಗೆಲ್ಲ ಅಂತಹ ವಿಷಯಗಳನ್ನು ಕೇಳಲು ಮತ್ತು ಇನ್ನೊಬ್ಬರಿಗೆ ಹೇಳಲು ತುಂಬಾ ಆಸಕ್ತಿ; ಅವು ನಮ್ಮ ಅರಿವನ್ನೂ ಮೀರಿ ನಮ್ಮನ್ನ ದಂಗು ಬಡಿಸುತ್ತದೆ! ಯಾಕೆಂದರೆ ಅಧಿಕಾರ ಪಡೆಯಲು ವ್ಯಕ್ತಿ/ಸಂಘಟನೆಗಳು ಮಾಡುವ, ಹೂಡುವ ಆಟಗಳು ನಾವೆಲ್ಲ ಕಲ್ಪನೆ ಮಾಡಲೂ ಅಸಾಧ್ಯವಾದದ್ದು!

ಈಗ ನೋಡಿ, ರಾಜಕೀಯದಲ್ಲಿ ಮೋದಿಯವರ ಮುಂದಿನ ದೊಡ್ಡ ನಡೆ ಏನು? ಅಥವಾ ಬಿ.ಜೆ.ಪಿ. ಗೆಗಂಡಾಂತರ ತಂದೊಡ್ಡಲು ರಾಹುಲ್ ಹೆಣೆಯುತ್ತಿರುವ ತಂತ್ರವೇನು? ಇಂತಹ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುವುದು ಇವೆಲ್ಲಾ ಸಂಪೂರ್ಣವಾಗಿ ಕಾರ್ಯಗತವಾದ ಮೇಲೇ. ನಾವು ಅಂದುಕೊಳ್ಳುತ್ತೇವೆ ಏನೆಂದರೆ ಈ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಎಲ್ಲವೂ ತಿಳಿದಿದೆ ಯಾಕೆಂದರೆ ಅವರು ಈ ಆಟವನ್ನೆಲ್ಲಾ ಹತ್ತಿರದಿಂದ ನೋಡಿರುತ್ತಾರೆ ಅಂತ; ಈ ಮಾತು ಸಂಪೂರ್ಣ ನಿಜವಲ್ಲ. ಮೇಲಿನ ಹಂತಗಳಲ್ಲಿ ನಡೆಯುವ ದೊಡ್ಡ ದೊಡ್ಡ ಆಟಗಳ ಬಗ್ಗೆ ಅವರಿಗೆಅರಿವೇ ಇರುವುದಿಲ್ಲ ಮತ್ತು ತಾವು ಪಾನ್ ಗಳಾಗಿ ನಡೆಸಲ್ಪಡುವುದೂ ಗೊತ್ತಿರುವುದಿಲ್ಲ.ಈ ಆಟಗಳು ಕೇವಲ ದೊಡ್ಡವರ ಮೇಲೆ  ಕೇಂದ್ರೀಕೃತವಾಗಿರುತ್ತದೆ. ಕೆಲವು ನಂಬಿಕಸ್ಥ ದಳಪತಿಗಳ ಹೊರತು ಮತ್ತಾರಿಗೂ ಇದರ ಸಳುಹೂ ಸಿಕ್ಕಿರುವುದಿಲ್ಲ ನಮ್ಮ ನಿಮ್ಮೆಲ್ಲರಂತೆ!

ರಾಜಕಾರಣಿಗಳು ನಾವಂದುಕೊಂಡಿರುವುದಕ್ಕಿಂತ ಬುದ್ಧಿವಂತರಾಗಿರುತ್ತಾರೆ. ಅವರಿಗೆ ಒಂದು ಸಾಮಾನ್ಯ ಗಣಿತದ ಲೆಕ್ಕಾಚಾರ ತಿಳಿಯದಿರಬಹುದು ಆದರೆ ಎದುಗಿರುವ ವ್ಯಕ್ತಿಯ ಆಳ, ಅಗಲವ ಕ್ಷಣಾರ್ಧದಲ್ಲಿ ಅಳೆಯಬಲ್ಲರು; ಒಂದು ವಿಷಯವನ್ನ ಹತ್ತಾರು ವರ್ಷಗಳಿಗೆ ಧಕ್ಕೆ ಬಾರದಂತೆ ತಂತ್ರ ಹೆಣೆಯುವ ಚಾತುರ್ಯ ಅವರದ್ದು, ಆ ತಂತ್ರವನ್ನು ಜಾರಿಗೊಳಿಸುವುದರಲ್ಲಂತೂ ಅವರ ಮೀರಿಸಿದವರಿಲ್ಲ! ರಾಹುಲ್ ಗಾಂಧಿ ಎಂಬ ಹೆಸರು ನಗುವ ಸರಕಾಗಿ ತುಂಬ ಕಾಲವಾಯ್ತು. ‘ಪಪ್ಪು’, ‘ಬುದ್ಧು’ ನಂತಹ ಹೆಸರುಗಳು ಆ ಹೆಸರೊಂದಿಗೇ ಸೇರಿ ಹೋಗಿದೆ. ಮೋದಿ ಮಾತ್ರವಲ್ಲ ಯಾವ ಪ್ರೊಫ಼ೆಷನಲ್ ರಾಜಕಾರಣಿಗೂ ಸರಿದೂಗದ, ಜನರಲ್ಲಿ ಉತ್ಸಾಹ ತುಂಬಲಾರದ ನಾಯಕ(?) ರಾಹುಲ್ ಎಂದು ನಮಗೆಲ್ಲಾ ಅಗತ್ಯಕ್ಕಿಂತ ಸ್ಪಷ್ಟವಾಗೇ ಗೊತ್ತಾಗಿ ಹೋಗಿದೆ. ಹಾಗಾದರೆ ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಅಥವಾ ಇದನ್ನೂ ಕಾಣಲಾರದಷ್ಟು ಅವರು ಮೂರ್ಖರಾಗಿದ್ದಾರೆಯೆ? ಅಥವಾ ಕಾಂಗ್ರೆಸ್ ಅದಾಗಲೇ ತನ್ನ ‘ಪ್ಲಾನ್ ಬಿ’ ಯನ್ನ ಜಾರಿಗೊಳಿಸಿದೆಯೇ?

ಹೌದು!!

ಮೋದಿ ಭಾರತದ ರಾಜಕೀಯದಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡು ೨-೩ ವರ್ಷಗಳಾದವು. ಅವರ ವ್ಯಕ್ತಿತ್ವ, ಅಭಿವೃದ್ಧಿಯ ಗಾಥೆಗಳು ಹೊಸ ವಿಶ್ವಾಸ ಮೂಡಿಸಿವೆ. ಗುಜರಾತ್ ನ ಯಶೋಗಾಥೆ ಮೋದಿಯನ್ನ ನಿರ್ಲಕ್ಷಿಸಾಧ್ಯ ಎಂಬ ಸ್ಪಷ್ಟ ಸಂದೇಶ ನೀಡಿವೆ.ಇದು ಕಾಂಗ್ರೆಸ್ ನ್ನು ಬಹುದೊಡ್ಡ ಸಂಕಟದತ್ತ ತಳ್ಳಿ ಹಾಕಿದೆ.ಯಾಕೆಂದರೆ ಮೋದಿಯನ್ನು ಅಭಿವೃದ್ಧಿಯಲ್ಲಾಗಲೀ, ಚಾರ್ಮ್ ನಲ್ಲಾಗಲೀ ಸರಿದೂಗುವ ಒಬ್ಬನ್ನೇ ಒಬ್ಬ ವ್ಯಕ್ತಿ ಈಗ ಕಾಂಗ್ರೆಸ್ ಪಾಳಯದಲ್ಲಿ ಇಲ್ಲ!!!
ಕಾಂಗ್ರೆಸ್ ಗೆ ಬಹಳ ಮೊದಲೇ ( ಉತ್ತರ ಪ್ರದೇಶ, ಬಿಹಾರಗಳಲ್ಲೆ) ಗೊತ್ತಾಗಿ ಹೋಗಿತ್ತು ಮೋದಿಯ ವಿರುದ್ಧ ರಾಹುಲ್ ಯಾವ ಗಿಡದ ತೊಪ್ಪಲೂ ಅಲ್ಲ ಎಂದು.ಅವರಿಗೆ ಮತ್ತೊಬ್ಬರನ್ನ ಹುಡುಕಬೇಕಿತ್ತು! ಆದರೆ ಕಾಂಗ್ರೆಸ್ ನಿಂದಲೇ ಒಬ್ಬರನ್ನ ಆರಿಸುವುದೆಂದರೆ! ‘ಶಿವ,ಶಿವಾ ಅದಂತೂ ಸಾಧ್ಯವೇ ಇಲ್ಲ’ ಯಾಕೆಂದರೆ ಅದು ಕಾಂಗ್ರೆಸ್ ನ ಗೋಲ್ಡನ್ ರೂಲ್ ನ ಸ್ಪಷ್ಟಉಲ್ಲಂಘನೆ!

‘ಗಾಂಧಿ ಕುಟುಂಬವೇ ಯಾವತ್ತೂ ಮೇಲೆ’ ಎಂಬುದೇ ಆ ಗೋಲ್ಡನ್ ರೂಲ್! ಏನು ಮಾಡೋದು ಈ ಸಮಸ್ಯೆಗೆ? ನಾನು ಮೊದಲೇ ಹೇಳಿದಂತೆ ರಾಜಕಾರಣಿಗಳು ಬುದ್ಧಿವಂತರು;ಅವರು ಸಮಸ್ಯೆಗಳನ್ನ ಅವಕಾಶಗಳಾಗಿ ಪರಿವರ್ತಿಸಿಕೊಂಡರು!
೨೦೧೦-೧೧ ನೇ ವರ್ಷಗಳಲ್ಲಿ ಹಗರಣಗಳ ಕಾರ್ಮೋಡ ಕಾಂಗ್ರೆಸ್ ನ್ನು ಕವಿದಿತ್ತು; ಆಗ ಬಂತುನೋಡಿ ‘ಅಣ್ಣಾ ಹಜಾರೆ’ ಯವರ ಚಳುವಳಿ ಮತ್ತು ಅವರ ಸಂಗಾತಿಗಳ ತಂಡ.ಆ ತಂಡದಲ್ಲಿದ್ದವರಾದರು ಎಂಥಹವರು! ಒಬ್ಬರು ಸುಪ್ರೀಮ್ ಕೋರ್ಟ್ ಲಾಯರ್, ಇನ್ನೊಬ್ಬರು ಮಾಜಿ ಐ.ಪಿ.ಯಸ್. ಅಧಿಕಾರಿ, ಮತ್ತೊಬ್ಬರು ಐ.ಐ.ಟಿ. ಪಧವೀದರ, ಒಬ್ಬರರು ಸ್ವಾಮೀಜಿ ಹಾಗೂ ಇನ್ನೂ ಉತ್ಸಾಹಿಗಳು. .ನಿಲ್ಲಿ ನಿಲ್ಲಿ ಯಾರದು ಮೂರನೇಯವರು, ಹಾಂ ಅದೇ ಐ.ಐ.ಟಿ ಜನ…ನಾವೀಗ ಅವರನ್ನ ‘ ಎ’ ಅಂತ ಕರೆಯೋಣ.

೧.ಆತ ಒಳ್ಳೆಯ ಭಾಷಣಕಾರನೇ,ಜನರ ಗಮನ ಸೆಳೆಯುವ ಚಾತುರ್ಯ ಆತನಿಗಿದೆಯೇ? – ಹೌದು
೨.ಅವನಿಗೆ ಯುವಕರ ಸೆಳೆಯುವ ಚಾರ್ಮ್ ಇದೆಯೇ?ಯಾಕೆಂದರೆ ಅವರೇ ನಿರ್ಧರಿಸುವ ಮತಗಳು – ಹೌದು.ಅವನು ಯುವಕರ ಕಣ್ಮಣಿ
೩.ಅವನು ಜನರಲ್ಲಿ ತಾನೊಬ್ಬ ಪ್ರಾಮಾಣಿಕ,ಜನಸೇವೆಯ ಹಂಬಲದ,ತ್ಯಾಗಜೀವಿಯ ಕಥೆಯನ್ನ ಹೇಳುತ್ತಿರುವನೇ?- ಹೌದು ಹೌದು.
ಹುರ್ರೇ ಹುರ್ರೇ!!! ಇಲ್ಲೊಬ್ಬ ಸಿಕ್ಕಿಬಿಟ್ಟ.ಮೋದಿಗೆ ಪರ್ಯಾಯವಾಗಿ ನಾವು ನಿಲ್ಲಿಸಬಹುದಾದವ!

‘ಕರೆಯಿರಿ ಮ್ಯಾಡಮ್ ನ,ಅವರೊಂದ್ಸಲ  ನೋಡಿ ಒಪ್ಪಿಗೆ ಸೂಚಿಸಿದರೆ ಆತ ಶುರು ಮಾಡೋಣ’ ನೋಡಿ, ಮೋದಿ ಎಂತಹ ಗಟ್ಟಿ ವ್ಯಕ್ತಿತ್ವದವರೂ ಅಂದರೆ ೨೦೧೪ ರ ಲೋಕಸಭಾ ಚುನಾವಣೆಯ ಸಂಪೂರ್ಣ ಗಮನ ಅವರ ಪಕ್ಷದಿಂದ ಅವರತ್ತ ಹರಿದಿದೆ.ಮೋದಿ ಈ ರೀತಿ ಆಟದ ಸ್ವರೂಪವನ್ನೇ ಬದಲಾಯಿಸಿದ್ದರಿಂದ ಕಾಂಗ್ರೆಸ್ ಗೆ ಅವರನ್ನ ಟಾರ್ಗೆಟ್ ಮಾಡುವುದರ ಹೊರತು ಅನ್ಯ ಮಾರ್ಗವೇ ಇಲ್ಲ.ಅದಕ್ಕೊಬ್ಬ ಬೇಕು ಮತ್ತವ ಸಿಕ್ಕಿಯೂ ಬಿಟ್ಟ!

ಇಲ್ಲೊಂದು ವಿಷಯ ಗಮನಿಸಿ. ಈಗ ೨೦೧೪ ರ ಚುನಾವಣೆ ಮತ್ತು ಅಧಿಕಾರ ಅನ್ನುವುದು ಬರೀ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ನಡುವಿನ ಕದನವಲ್ಲ..ಅದು ಅದಕ್ಕಿಂತ ಮೇಲೆ.ಸಾಮಾನ್ಯವಾಗಿ ಬಿ.ಜೆ.ಪಿ.ಗೆ ಓಟು ಹಾಕದವರೂ ಈ ಬಾರಿ ಮೋದಿಯ ಹೆಸರು ನೋಡಿ ಹಾಕುವಂತಹ ಪರಿಸ್ಥಿತಿ ಬಂದದ್ದರಿಂದ ಮತ್ತು ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಲ್ಲಿ ಯಾರೂ ಅರ್ಹರಿಲ್ಲದ್ದರಿಂದ ಕಾಂಗ್ರೆಸ್ ಈ ದಾಳ ಉರುಳಿಸಿತು! ಸರಿ. ಅಣ್ಣಾ ಚಳುವಳಿ ಮುಗಿಯಿತು; ಮತ್ತೆರಡು ತಿಂಗಳ ಬಳಿಕ ಅದೇ ವಿಷಯದ ಬೆಳವಣಿಗೆ ನೋಡಿಕೊಂಡು ವಾಪಸ್ ಸತ್ಯಾಗ್ರಹ ನಡೆಸುವ ಬಗ್ಗೆ ಮಾತಾಯಿತು.ಆದರೆ ಅಲ್ಲೇ ಕತೆ ತಿರುವು ತೆಗೆದುಕೊಂಡಿತು.ಅಣ್ಣಾ ಚಳುವಳಿಯಲ್ಲಿ ‘ಎ’ ಜೊತೆ ಗುರುತಿಸಿಕೊಂಡಿದ್ದ ಕೆಲವರು ರಾಜಕೀಯಕ್ಕೆ ಬರುವ ಆಕಾಂಕ್ಷೆ ವ್ಯಕ್ತಪಡಿಸಿದರು.” ನಾವು ಚಳುವಳಿಗಾರರು, ಪ್ರಜಾಪ್ರಭುತ್ವದ ಐದನೇ ಕಂಬ. ನಾವು ರಾಜಕೀಯಕ್ಕೆ ಬಂದರೆ ಸರಕಾರದ ಮೇಲೆ ಒತ್ತಡ ಹೇರಿ ಜನೋಪಯೋಗಿ ಕೆಲಸ ಮಾಡಲು ಒಳ್ಳೆಯದು” ಎಂದು ದನಿ ಎತ್ತಿದರು.ಸಹಜವಾಗೇ ಅಣ್ಣಾ ಹಜಾರೆ ವಿರೋಧಿಸಿದರು.ಆದರೆ ಅವರು ಅದಾಗಲೇ ತಮ್ಮ ಮನಸು ಬದಲಾಯಿಸಿಕೊಂಡಾಗಿತ್ತು.ಚಳುವಳಿ ಒಡೆಯಿತು.ಹೊಸ ಪಕ್ಷವೊಂದು ಅದರ ಗೋರಿಯ ಮೇಲೆ ಹುಟ್ಟಿತು!

ಇದರ ಮಧ್ಯೆ ಪ್ರಜಾಪ್ರಭುತ್ವದ ನಾಲ್ಕನೇ ಕಂಬ ‘ಸಮೂಹ ಮಾಧ್ಯಮಗಳು’ ತಮಗೆ ಒಪ್ಪಿಸಿದ ಕೆಲಸವಾದ ‘ಎ’ ಸುತ್ತ ಪ್ರಾಮಾಣಿಕ,ದಕ್ಷ,ಜನಾನುರಾಗಿ ವ್ಯಕ್ತಿಯ ಪ್ರಭಾವಲಯವನ್ನು ನಿರ್ಮಿಸತೊಡಗಿದವು. ರಾಹುಲ್ ಗಾಂಧಿಯನ್ನು ಒಪ್ಪಲು ಸಿದ್ಧರಿಲ್ಲದ ಯುವಕರು ಸಹಜವಾಗೇ ಆಕರ್ಷಿತರಾದರು. ‘ಎ’ ತನ್ನ ಕೆಲಸ ಶುರು ಮಾಡಿದರು, ದೇಶದ ರಾಜಧಾನಿಯಲ್ಲಿ; ನಮ್ಮ ಹೆಚ್ಚಿನ ‘ಟಿ.ವಿ. ಚಾನೆಲ್ ಗಳು’ ಹೇಗೂ ಅಲ್ಲಿಯವೇ ಆದ್ದರಿಂದ ಅವರಿಗೂ ತಮ್ಮ ಕೆಲಸ ಸುಲಭವಾಯಿತು. ಅಲ್ಲಿಯ
ಪರಿಸ್ಥಿತಿ ಅಷ್ಟರವರೆಗೆ ಹೇಗಿತ್ತು ಅಂದರೆ ಕಾಂಗ್ರೆಸ್ ಸೋಲುತ್ತದೆ ಮತ್ತು ಆ ಮತಗಳು ಬಿ.ಜೆ.ಪಿ. ತೆಕ್ಕೆಗೆ ಎಂದು..ಆದರೆ ಈ ತಂತ್ರದಿಂದ ಮತ ವಿಭಜನೆಯಾಗಿ ಬಿ.ಜೆ.ಪಿ. ಅಧಿಕಾರದ ಗದ್ದುಗೆಯಿಂದ ದೂರ ಉಳಿಯುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ! ಎಲ್ಲರೂ ತಿಳಿದದ್ದು ಏನೆಂದರೆ ಈ ಹೊಸ ಪಕ್ಷ ಬಿ.ಜೆ.ಪಿ. ಯ ಮತ ಕಸಿಯುತ್ತದೆ ಮತ್ತು ತನ್ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು.ಆದರೆ ೨೦೧೪ ರ ಲೋಕಸಭೆಯ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಗೆ ಬರೀ ೭ ಲೋಕಸಭಾ ಸ್ಥಾನ ಇರುವ ಈ ರಾಜಧಾನಿಯ ಜುಜುಬಿ ವಿಧಾನಸಭಾ ಚುನಾವಣೆಗಿಂತ ದೊಡ್ಡ ಉದ್ದೇಶಗಳಿತ್ತೂ ಅಂತ ಯಾರಿಗೂ ಹೊಳೆಯಲಿಲ್ಲ!

ಇಲ್ಲಿ ನೋಡಿ. ೨೦೧೪ರ ಚುನಾವಣೆಗೆ ‘ಎ’ ನ್ನ ಸಜ್ಜುಗೊಳಿಸಿದರೆ, ಅವರ ಪಕ್ಷ ವಿಧಾನಸಭೆಯಲ್ಲಿ ಗೆದ್ದರೆ,ಲೋಕಸಭಾ ಚುನಾವಣೆಯಲ್ಲಿ ಅದೇ ಚಿಮ್ಮುಹಲಗೆಯಾಗಿ ಕನಿಷ್ಟ ಪಕ್ಷ ೧೦-೧೫ ಸೀಟು ಮತ್ತು ಬಿ.ಜೆ.ಪಿ. ಪಡೆವ ಮತಗಳಲ್ಲಿ ಪಾಲು..ಅಲ್ಲಿಗೆ ಮೋದಿ ಪ್ರಧಾನಿ ಆಗೊಲ್ಲ ಎಂಬುದೇ ‘ಮಾಸ್ಟರ್ ಪ್ಲಾನ್”!!! ಅಲ್ಲಾ ಸ್ವಾಮಿ ಸ್ವಲ್ಪ ಅಂಕಿ -ಅಂಶ ಗಮನಿಸಿ; ರಾಹುಲ್ ರಾಜಸ್ಥಾನದಲ್ಲಿ ೨೦ ರ್ಯಾಲಿ ಮಾಡಿದ್ರು..ರಾಜಧಾನಿಯಲ್ಲಿ ೨ ರ್ಯಾಲಿ..ಅವರ ಅಮ್ಮ ಸೋನಿಯ ಕೇವಲ ೧.ಸಾಕೇ? ಕಾಂಗ್ರೆಸ್ನ ಯಾವೊಬ್ಬ ನಾಯಕನೂ ರಣೋತ್ಸಾಹದಿಂದ ಪ್ರಚಾರ ಮಾಡಿದ್ದು ಕಾಣಲೇ ಇಲ್ಲ! ರಾಜಧಾನಿಯಲ್ಲಿ ಈರುಳ್ಳಿ ಬೆಲೆಯೇ ನಿರ್ಣಾಯಕ ಎಂದು ಅಲ್ಲಿಯ ಮುಖ್ಯಮಂತ್ರಿ ಅಧಿಕ ಪೂರೈಕೆಗೆ  ‘ಕೃಷಿ ಇಲಾಖೆ’ಯ ಬಾಗಿಲು ಬಡಿದದ್ದೇ ಬಂತು.. ಮುಂಬೈಯಿಂದ ರಾಜಧಾನಿಗೆ ಈರುಳ್ಳಿ ತುಂಬಿದ ಲಾರಿಗಳು ಹೊಯ್ತಂತಪ್ಪಾ! ಎಲ್ಲಿ ಹೊಯ್ತು? ದೇವರಿಗೇ ಗೊತ್ತು? ಅಥವಾ ‘ಅವರಿಗೋ?’ ಹೀಗೆ ಉದ್ದೇಶಪೂರ್ವಕವಾಗಿ  ‘ರಾಜಧಾನಿಯ ಗದ್ದುಗೆಯಾಟ’ದಲ್ಲಿ ದೇಶಕ್ಕೊಬ್ಬ ‘ಆಶಾ
ಕಿರಣ’ ಉದಯಿಸಿದ!!!

ಸಮೂಹ ಮಾಧ್ಯಮಗಳು ಉಳಿದ ಮೂರು ರಾಜ್ಯಗಳಲ್ಲಿ ಬಿ.ಜೆ.ಪಿ. ಯ ಗೆಲುವನ್ನ ನಿರ್ಲಕ್ಷಿಸಿ,ಮೋದಿ ಅಲೆಯೇ ಸುಳ್ಳು ಎನ್ನುತ್ತಾ ಬರಿಯ ರಾಜಧಾನಿಯ ‘ಎ’ ನ ಪಕ್ಷದ ಗೆಲುವನ್ನ ಹಾಡಿ ಹೊಗಳುವುದರಲ್ಲಿ ತಲ್ಲೀನರಾದವು.ಕಾದು ನೋಡಿ ಮುಂದಿನ ಅಂಕಕ್ಕೆ! ‘ಎ’ ರಾಷ್ಟ್ರ ರಾಜಕೀಯಕ್ಕೆ ಬರಬೇಕು ಅಂತ ಜನಮತ ಅಂತಾನೂ ಬರುತ್ತೆ, ಮೋದಿಯನ್ನ ಸೋಲಿಸಿ ‘ಎ’ ಪ್ರಧಾನಿ ಆಗುತ್ತಾರೆ ಅಂತ ಸಮೀಕ್ಷೆ ಅಂತಲೂ ಬರುತ್ತೆ. ಈ ರಾಜಕೀಯದ ಚದುರಂಗದಾಟದ ಮುಂದಿನ ನಡೆಯ ಕುತೂಹಲ ಎಲ್ಲರಿಗೂ ಇದೆ!

ಕಾದು ನೋಡೋಣ!

ಚಿತ್ರ ಕೃಪೆ :http://www.chess.az

4 ಟಿಪ್ಪಣಿಗಳು Post a comment
 1. ಡಿಸೆ 27 2013

  ಇದು tanayrajpurohith.wordpress ಅವರ ಲೇಖನದ ಭಾವಾನುವಾದ

  ಉತ್ತರ
  • ರವಿ
   ಡಿಸೆ 27 2013

   ಇತ್ತೀಚೆಗೆ ಎಲ್ಲೋ ಓದಿದ್ದೇನೆ ಈ ಲೇಖನವನ್ನು..

   ಉತ್ತರ
 2. Akash
  ಡಿಸೆ 27 2013

  ಕಾಂಗ್ರೆಸ್ ಫೀನಿಕ್ಸ್ ಹಕ್ಕಿಯಂತೆ. ಅದನ್ನು ಮುರಿದು ಮುದ್ದೆ ಮಾಡಿದರೂ ಏನಾದರೂ ಪ್ಲ್ಯಾನ್ ಮಾಡಿ ಎದ್ದು ಬರುತ್ತೆ . ಇನ್ನು ಮಾಧ್ಯ್ಮಮದವರೂ ಅದರತ್ತ ಬುದ್ಡಿಜೀವಿಗಳೂ ಅದರತ್ತ ಅದು ಆಡಿದ್ದೇ ಆಟ . ನೋಡಿದ್ದೆ ನೋಟ ಏನು ಮಾಡುವದು? ಭಾರತದಲ್ಲಿ ಹುಟ್ಟಿದ್ದಕ್ಕೆ ಅನುಭವಿಸಬೇಕು. ಬೇರೆ ದಾರಿನೇ ಇಲ್ಲ. ಭಾರತ ಮಾತೆಗೆ ಯಾವಾಗ ಮುಕ್ತಿ ಸಿಗುವದೋ ದೇವರೇ ಬಲ್ಲ.

  ಉತ್ತರ
 3. P R kamalakshi baby
  ಡಿಸೆ 27 2013

  ಇಲ್ಲಿ ಸಮೂಹ ಮಾಧ್ಯಮಗಳು 3 ರಾಜ್ಯಗಳ ಬಿ ಜೆ ಪಿ ಗೆಲುವನ್ನು ನಿರ್ಲಕ್ಷಿಸಿ, ಕೇವಲ ರಾಜಧಾನಿಯ ಎ ಪಕ್ಷದ ಗೆಲುವನ್ನು ಹಾಡಿ ಹೊಗಳುತ್ತಿರುವುದಲ್ಲ, ಇದ್ದಕ್ಕಿದ್ದ ಹಾಗೆ ಉದಯಿಸಿದ ಪಕ್ಷ ಒಮ್ಮಿಂದೊಮ್ಮೆಗೆ ಈ ಪರಿ ಜನಾನುರಾಗಿಯಾಗಿದ್ದು ಹೇಗೆ ಎಂದು ಚಿಂತನೆಗೆ ಹಚ್ಚುತ್ತದೆ. ಜನಸಾಮಾನ್ಯ ಹೊಸದೊಂದು ದಾರಿಯತ್ತ ಹೊರಳಿರಬಾರದೇಕೆ? ಎಂಥವರನ್ನೆಲ್ಲಾ ಆರಿಸಿ ಗದ್ದುಗೆಗೆ ಕೂರಿಸಿದ್ದಾಗಿದೆ, ಇವರನ್ನು ಒಮ್ಮೆ ಯಾಕೆ ನೋಡಬಾರದು ಎಂದು ನನ್ನ ಅಭಿಪ್ರಾಯ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments