ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 29, 2013

5

ಸರ್ವಾಧಿಕಾರಿ ಧೋರಣೆಯ ಪ್ರಗತಿಪರರು ಮತ್ತು ಮೋದಿ

by ನಿಲುಮೆ

– ಪ್ರಸನ್ನ,ಬೆಂಗಳೂರು

Modiಅಹಮದಾಬಾದಿನ ಮೆಟ್ರೊಪಾಲಿಟನ್ ನ್ಯಾಯಾಲಯ ಪ್ರಗತಿಪರರಿಗೆ ಒಂದು ತಡೆಯಲಾರದ ಆಘಾತ ನೀಡಿದೆ. ಈ ಆಘಾತವನ್ನು ಸಹಿಸಿಕೊಂಡು ಈಗಲಾದರೂ ಈ ಬುದ್ದಿಗೇಡಿಗಳು ತಮ್ಮ ಮಾರ್ಗ ಸರಿ ಪಡಿಸಿಕೊಳ್ಳುತ್ತರೇನೋ ಎಂಬ ನಮ್ಮ ನಿರೀಕ್ಷೆ ಹುಸಿಯಾಗುವಂತಿದೆ, ಯಥಾ ಪ್ರಕಾರ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಲ್ಲೇ ಇನ್ನೂ ಬಿದ್ದು ಒದ್ದಾಡುತ್ತಿದ್ದಾರೆ. ನಾನಂತೂ ಇವರನ್ನು ಪ್ರಜಾಪ್ರಭುತ್ವ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಕಾನೂನಗಳನ್ನು ಗೌರವಿಸದ ದೇಶದ್ರೋಹಿಗಳೆಂದೆ ಪರಿಗಣಿಸುತ್ತೇನೆ. ಹೇಗೆಂದಿರಾ?

ನೀವೆ ಗಮನಿಸಿ ೨೦೦೨ದಿಂದೀಚೆಗೆ ಇವರು ಹಾಡುತ್ತಿದ್ದುದು ಒಂದೇ ರಾಗ ಅದು ಮೋದಿ ನರಹಂತಕ ಎಂಬುದು, ಇವರ ಅಧಿನಾಯಕಿಯಂತೂ ಆತನನ್ನು ಸಾವಿನ ವ್ಯಾಪಾರಿಯೆಂದು ಜರೆದು ನಾಲಿಗೆ ಕುಲ ಹೇಳುತ್ತದೆಂಬುವುದನ್ನು ತೋರಿಸಿಕೊಟ್ಟುಬಿಟ್ಟಿದ್ದಲ್ಲದೇ ತನ್ನ ನಾಲಿಗೆಯನ್ನು ತಾನೆ ಕಚ್ಚಿ ಕೊಳ್ಳುವಂತಾಯ್ತು. ಗುಜರಾತಿನ ಜನರು ಸತತ ೩ ಬಾರಿ ಇವರ ತಲೆಯ ಮೇಲೆ ಕಲ್ಲು ಹಾಕಿದ್ದೂ ಆಯ್ತು. ಆದರೂ ನಮ್ಮ ಕರ್ನಾಟಕದ ಪ್ರಗತಿಪ್ರರು ಮಾತ್ರ ಇನ್ನೂ ಆ ರೋಗದಿಂದ ಹೊರಬರಲೇ ಇಲ್ಲ.

ಇವರುಗಳು ಅದೆಷ್ಟು ಸರ್ವಾಧಿಕಾರಿಗಳೆಂದರೆ ನ್ಯಾಯಾಲಯದ ಯಾವ ತೀರ್ಪುಗಳು ಇವರ ಲೆಕ್ಕಕ್ಕಿಲ್ಲ. ಒಂದಲ್ಲ ಎರಡಲ್ಲ ೪ ಹಂತದ ತನಿಖೆ ಅವೆಲ್ಲವೂ ಸುಪ್ರೀಂ ಕೋರ್ಟಿನ ಕಣ್ಗಾವಲಿನಲ್ಲೇ ನಡೆದರೂ ಇವರಿಗೆ ಸಮಾಧಾನವಿಲ್ಲ. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯಗಳನ್ನು ದುರುಪಯೋಗ ಪಡಿಸಿಕೊಂಡು ಒಂದಾದ ನಂತರ ಮತ್ತೊಂದು ಪ್ರಕರಣಗಳನ್ನು ದಾಖಲಿಸುತ್ತಲೇ ಹೋದಂತೆಲ್ಲಾ ನ್ಯಾಯಾಲಯ ಆತನಿಗೆ ಕಳಂಕರಹಿತನನ್ನಾಗಿ ಮಾಡುತ್ತಾ ಹೋಯ್ತು. ಹೋಗಲಿ ನ್ಯಾಯಾಲಯದ ವಿಷಯದಲ್ಲಿ ಪ್ರಭಾವ ಬೀರುತ್ತನೆಂದು ಕೊಂಡರೆ ಕೆಲವು ಪ್ರಕರಣಗಳನ್ನು ಗುಜರಾತಿನಿಂದ ಹೊರಗೆ ನಡೆಸಲಾಯ್ತು. ಅಲ್ಲಿಯೂ ಈ ದ್ರೋಹಿಗಳಿಂದ ನ್ಯಾಯಾಲಯದ ಮೂಲಕ ಈತನ ಕೂದಲೂ ಕೊಂಕಿಸಲು ಸಾಧ್ಯವಾಗಲಿಲ್ಲ. ಯಾವುದೇ ವಿವಾದ ಅಥವ ಆಪಾದನೆ  ಒಂದು ತಾರ್ಕಿಕ ಕೊನೆ ತಲುಪುವುದು ನ್ಯಾಯಾಲಯದಲ್ಲಿಯೇ ಎಂದು ಈಗಾಗಲೆ ಪ್ರತಿಯೊಬ್ಬರು ಒಪ್ಪಿಕೊಳ್ಳುತ್ತಾರೆ. ಆದರೆ ಈ ಪ್ರಗತಿಪರರಿಗೆ ಮಾತ್ರ ತಮ್ಮ ನಿಲುವಿನಂತೆಯೇ ನ್ಯಾಯಾಲಯವೂ ತೀರ್ಪು ಕೊಡಬೇಕೆಂದು ಹಪಹಪಿಸುತ್ತಾರೆ. ಇದು ಅಪ್ಪಟ ಸರ್ವಾಧಿಕಾರಿ ಧೋರಣೆಯಲ್ಲದೆ ಮತ್ತೇನು? ವಿಪರ್ಯಾಸವೆಂದರೆ ಇವರು ತಮ್ಮನ್ನು ತಾವು ಪ್ರಜಾಪ್ರಭುತ್ವದ ರಕ್ಷಕರು ಎಂದು ಕರೆದುಕೊಳ್ಳುತಾರೆ. ಪ್ರಜಾಪ್ರಭುತ್ವ ರೀತ್ಯಾ ಒಪ್ಪಿ ಸ್ಥಾಪಿತವಾದ ನ್ಯಾಯಾಲಯದ ತೀರ್ಪುಗಳನ್ನೂ ಗೌರವಿಸದ ಈ ಅತೃಪ್ತ ಆತ್ಮಗಳು. ಮುಂದೆ ಹೋಗಿ ಪ್ರಜಾ ಪ್ರಭುತ್ವದ ಸಮರದಲ್ಲಿಯೂ ಮೋದಿಯನ್ನು ಏನೂ ಮಾಡಲಾಗಲಿಲ್ಲ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಇನ್ನು ತಮ್ಮ ಸಾಮಾಜಿಕ ನ್ಯಾಯ, ಧರ್ಮ ನಿರಪೇಕ್ಷತೆಗಳ ಬಗ್ಗೆ ಇವರಿಗಿಂತ ಹೆಚ್ಚು ಸಮಾಜವಾದಿಯಾಗಿ ಕಾಣುವ ಮೋದಿಯನ್ನು ಅದು ಯಾವ ನೈತಿಕತೆಯ ಆಧಾರದಲ್ಲಿ ವಿರೋಧಿಸುತ್ತಾರೋ ಅವರೇ ಹೇಳಬೇಕು?

ಆದರೂ ಇವರಿಗೆ ಯುಪಿಎದ ಭ್ರಷ್ಟಾಚಾರ ಕೇವಲ ಪಿಕ್ ಪಾಕೆಟ್ಟಿನಂತೆ ಗೋಚರಿಸುತ್ತದೆ, ಭ್ರಷ್ಟಾಚಾರಕ್ಕಿಂತ ಕೋಮುವಾದ ಹೆಚ್ಚು ಅಪಾಯಕಾರಿ ಎಂದು ಊಳಿಡುತ್ತಾರೆ. ಅವರ ಈ ಚೀರಾಟ ಕೇವಲ ಕಾಂಗ್ರೆಸ್ ರಕ್ಷಣೆಯೆ ಹೊರತು ಇವರ ಸೈದ್ದಾಂತಿಕ ನಿಲುವಲ್ಲ. ಏಕೆಂದರೆ ಭ್ರಷ್ಟಾಚಾರ ಕೆಲವೇ ವ್ಯಕ್ತಿಗಳ ಬಳಿ ಸಂಪತ್ತಿನ ಕ್ರೋಡೀಕರಣವಾಗುವ ಕ್ರಿಯೆ. ಹೇಗೆ ನೋಡಿದರೂ ಈ ಕ್ರೋಡೀಕರಣ ಇವರು ಪ್ರತಿಪಾದಿಸುವ ಸಮಾಜವಾದವನ್ನಾಗಲಿ ಸಾಮಾಜಿಕ ನ್ಯಾಯವನ್ನಾಗಲಿ ಇನ್ನೂ ಮುಂದುವರೆದು ಇವರು ಪ್ರತಿಪಾದಿಸುವ ಸಮಾನತೆಗಾಗಲಿ ಮೊದಲ ಅಡ್ಡಿಯಾಗುತ್ತದೆ. ಆದರೂ ಇವರಿಗೆ ಕಾಂಗ್ರೆಸಿನ ಭ್ರಷ್ಟಾಚಾರ ಪಿಡುಗಾಗಿ ಕಾಣಿಸುವುದೇ ಇಲ್ಲ. ಇವರುಗಳ ಕೇಸರಿ ಕಾಮಾಲೆ ರೋಗಕ್ಕೆ ಇದಕ್ಕಿಂತ ಸ್ಪಷ್ಟ ಸಾಕ್ಷಿ ಕೊಡಲು ಸಾಧ್ಯವಿಲ್ಲ.

ಮೋದಿ ಎಂಬ ವ್ಯಕ್ತಿ ಈಗಾಗಲೇ ಪ್ರಜಾಪ್ರಭುತ್ವ ರೀತ್ಯಾ ನ್ಯಾಯಾಲಯಗಳ ರೀತ್ಯಾ ಮತ್ತು ಸಾಂವಿಧಾನಿಕ ರೀತ್ಯಾ ತಾನು ತಪ್ಪು ಮಾಡಿಲ್ಲವೆಂದು ಸಾಬೀತು ಪಡಿಸಿದ್ದಾನೆ, ಆದರೂ ಇವರುಗಳು ಇದೀಗ ಹೊಸ ರಾಗ ನೈತಿಕ ಮತ್ತು ಆತ್ಮಸಾಕ್ಷಿಯ ಮಾತನ್ನು ಆಡುತ್ತಿರುವುದು ಹಾಸ್ಯಾಸ್ಪದ.

ಕ್ವಟ್ರೋಚಿಯನ್ನು ಬಿಡುವಾಗ ಕಾಣದ ನೈತಿಕತೆ ಆತ್ಮಸಾಕ್ಷಿ, ೧೯೮೪ರ ದಂಗೆಗಳಿಗೆ ಉಂಟಾಗದ ನಾಚಿಕೆ. ಭೋಪಾಲ್ ದುರಂತದ ಆರೋಪಿಯನ್ನು ರಾತ್ರೋರಾತ್ರಿ ವಿಮಾನ ಹತ್ತಿಸುವಾಗ ಕಾಣದ ಆತ್ಮಸಾಕ್ಷಿ ಇವರುಗಳು ನಿರೀಕ್ಷಿಸುವುದು ತಪ್ಪಲ್ಲವಾದರೂ, ಅದಕ್ಕೂ ಈಗಾಗಲೇ ಆತ ಉತ್ತರ ನೀಡಿದ್ದಾನೆ. ಆತ ಹೇಳುವುದಿಷ್ಟೇ ಭಾರತೀಯ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಮೂಲಕ ನಾನು ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಗಲ್ಲಿಗೇರಿಸಿ. ತಪ್ಪು ಮಾಡಿದ್ದರೆ ಕೇವಲ ಕ್ಷಮೆ ಕೇಳುವ ಮೂಲಕ ನನಗೇಕೆ ನನ್ನ ತಪ್ಪುಗಳಿಂದ ಮುಕ್ತಿ ಸಿಗಬೇಕು?

ಮಾಂಸದ ಅಂಗಡಿಯ ಮುಂದೆ ಪ್ರಾಣಿಗಳನ್ನು ನೇತು ಹಾಕುವಂತೆ ಪ್ರಜಾಪ್ರಭುತ್ವವನ್ನು ತುರ್ತುಪರಿಸ್ಥಿತಿಯ ಮೂಲಕ ನೇತುಹಾಕಿದ ಕಾಂಗ್ರೆಸ್ ಮತ್ತವರ ಸರ್ವಾಧಿಕಾರಿಗಳಿಗೆ ಅದ್ಯಾವ ನೈತಿಕತೆಯಿದೆ ಮೋದಿಯ ಬಗ್ಗೆ ಟೀಕಿಸಲು?

ಇದೇ ರೀತಿ ಕಾಂಗ್ರೆಸಿಗರ ತನಿಖೆ ಮತ್ತು ವಿಚಾರಣೆ ಎಂದಾದರೂ ನಡೆದಿದೆಯೆ? ೧೯೮೪ರ ದಂಗೆಗಳ ಬಗ್ಗೆ ಇನ್ನೂ ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣ ಮಾಡಿರುವ ಕಾಂಗ್ರೆಸ್, ಇದೇ ಪ್ರಕರಣವನ್ನು ದೆಹಲಿಯಾಚೆ ಕಾಂಗ್ರೆಸೇತರ ರಾಜ್ಯಗಳಲ್ಲಿ ತನಿಕೆ ನಡೆಸಿ ವಿಚಾರಣೆ ನಡೆಸಿದ್ದರೆ ಈ ಹೊತ್ತಿಗೆ ಶಿಕ್ಷಿತರು ಅವರ ಶಿಕ್ಷೆ ಪೂರೈಸಿಯಾಗಿರುತ್ತಿತ್ತು.

ಇವರ ಆಶಯವಿಷ್ಟೇ ಆತನು ಮಾಡದ ತಪ್ಪಿಗೆ ಇವರಂತೆ ನಡೆಯದಿದ್ದಕ್ಕೆ ಇವರುಗಳೇ ಅವರನ್ನು ನೇಣಿಗೇರಿಸಲು ಬಿಡಬೇಕು. ಇವರಿಗೆ ನ್ಯಾಯಾಲಯಗಳಾಗಲಿ, ಚುನಾವಣೆಗಳಾಗಲಿ, ಕಾನೂನುಗಳಾಗಲಿ ಅಗತ್ಯವಿಲ್ಲ ಗೌರವಿಸುವುದೂ ಇಲ್ಲ. ಕೇವಲ ತಮ್ಮ ಸೈದ್ದಾಂತಿಕ ವಿರೋಧಿಗಳು ಇರಬಾರದು ಬದುಕಬಾರದು ಎನ್ನುವ ಸರ್ವಾಧಿಕಾರಿ ಜಿಹಾದಿ ಮನಸ್ಥಿತಿ ಅಷ್ಟೇ.

ನೂರಾರು ಪ್ರಕರಣಗಳು, ಸಾವಿರಾರು ವಿರೋಧಿಗಳು, ಹತ್ಯೆಗೈಯಲು ಹೊಂಚು ಹಾಕುತ್ತಿರುವ ಉಗ್ರರು, ಹಣಿಯಲು ಕಾಯುತ್ತಿರುವ ಈ ಪ್ರಗತಿಪರರುಗಳು ಎಲ್ಲರೂ ನಿಲ್ಲುವುದು ಅದೇ ಸಾಲಿನಲ್ಲಿ ನ್ಯಾಯಾಂಗವನ್ನು ಗೌರವಿಸಿದ, ಸಂವಿಧಾನವನ್ನು ಮಾನ್ಯ ಮಾಡದ. ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸದ ಸರ್ವಾಧಿಕಾರಿಗಳ ಸಾಲಿನಲ್ಲಿಯೇ.

ಇನ್ನು ಮುಂದೆಯೂ,ಯಾರಾದ್ರೂ ಮೋದಿಯನ್ನು ನರಹಂತಕನೆಂದರೆ ಸ್ಪಷ್ಟವಾಗಿ ಅವರು ಭಾರತದ ನ್ಯಾಯಾಂಗವನ್ನು ಅನುಮಾನಿಸುತ್ತಿದ್ದಾರೆ ಅವಮಾನ ಮಾಡುತ್ತಿದ್ದಾರೆಂದೇ ಅರ್ಥ.

ಚಿತ್ರ ಕೃಪೆ :http://www.newsyaps.com

5 ಟಿಪ್ಪಣಿಗಳು Post a comment
 1. ವಿಜಯ್ ಪೈ
  ಡಿಸೆ 30 2013

  ಪ್ರಸನ್ನ..
  ನಿಮ್ಮ ವಿಚಾರಗಳೊಂದಿಗೆ ಸಹಮತವಿದೆ. ಈ ಜನ ಮೋದಿ ಬಗ್ಗೆ ಅಪಪ್ರಚಾರ ಮಾಡಿದಷ್ಟು ಒಳ್ಳೆಯದು. ಅದು ಧನಾತ್ಮಕವಾಗಿಯೇ ಸಹಾಯ ಮಾಡುತ್ತದೆ. ಒಂದು ಮಾತು..ನೀವು ಈ ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ, ಬುದ್ದಿಜೀವಿ ಶಬ್ದಗಳನ್ನು ಬಳಸಬೇಕಾದರೆ, ಅವುಗಳ ನಿಜ ಅರ್ಥಕ್ಕೆ ಆಗುವ ಅವಮಾನವನ್ನು ತಪ್ಪಿಸಬೇಕಾದರೆ..ಅವನ್ನು ” ” ಹಾಕಿ ಬಳಸುವುದು ಒಳ್ಳೆಯದು :).

  ಉತ್ತರ
 2. ayya nimm...
  ಡಿಸೆ 31 2013
  • ನವೀನ
   ಡಿಸೆ 31 2013

   ಅಯ್ಯಾ ನಿಮ್ … (ಹೆಸರು ಹಾಕಿಕೊಳ್ಳದಷ್ಟು “ಮಡಿವಂತಿಕೆ”)
   ಎಂತೆಂತ ಪುರಾವೆಗಳನ್ನು ಕೊಡುವ ಸ್ಥಿತಿಗೆ ಬಂದಿದ್ದೀರಿ ಎಂದು ನೋಡಿದಾಗ ಮರುಕವುಂಟಾಗುತ್ತಿದೆ.ನೀವು ಇಂತ ಹತಾಶಕಾರಿ ಮನಸ್ಥಿತಿಯಿಂದ ಹೊರಬರುವುದು ಅಗತ್ಯವಾಗಿದೆ

   ಉತ್ತರ
   • ayya nimm...
    ಜನ 3 2014

    ‘ಪುರಾವೆ’ ಯಲ್ಲ. ಒಂದು ಮೂಲಭೂತ ಪ್ರಶ್ನೆ , ಲೇವಡಿ. ಅದನ್ನೂ ಬಿಡಿಸಿ ಹೇಳ್ಬೇಕಾ.. ಅಯ್ಯಾ ನಿಮ್..!

    ನಿಲುಮೆಯೇ ಅನಾಮಿತ್ವದ ಆಯ್ಕೆಯನ್ನೂ ಕೊಟ್ಟಿರುವಾಗ ‘ಮಡಿವಂತಿಕೆ’ ಅಂತ ಜರೆಯುವುದೇಕೆ? ಅದು ನನ್ನ ಆಯ್ಕೆ. ನಾನು ‘ರಮೇಶ’ ಅಂತ ಬರೆದಿದ್ದರೆ ಅದೇ ನನ್ನ ನಿಜ ಪ್ರಪಂಚದ ಹೆಸರಾ ಅನ್ನೋದನ್ನ ತಿಳಿಯಲಿಕ್ಕೆ ನಿಮಗೇನಾದರೂ ಮಾರ್ಗಗಳಿವೆಯಾ? ಈ ವರ್ಚುಯಲ್ ಪ್ರಪಂಚದಲ್ಲಿ ಬೇಕಾದದ್ದು ನಿರ್ದೇಶಿಸಲು ಒಂದು ಟ್ಯಾಗ್ ಅಷ್ಟೇ ಅಲ್ಲವಾ? ಹೋಗಲಿ ‘importance of anonimity in internet’ ಅಂತ ಗೂಗ್ಲಣ್ಣನ್ನ ಕೇಳಿ ನೋಡಿ.

    ಮರುಕವು ನಿಮ್ಮ ಮೇಲೆ ನಮಗೂ ಆಗುತ್ತೆ: ನಿಮ್ಮ ಕೂಪಮಂಡೂಕತನಕ್ಕೆ, ಔಚಿತ್ಯಪ್ರಜ್ನೆಯಿಲ್ಲದೇ ನೋವಾಗಲೀ ಅಂತಲೇ ಬಳಸುವ ಅತಿವ್ಯಂಗ್ಯಕ್ಕೆ… ಅರೆಬೆಂದ ಎರವಲು ವಿಚಾರಗಳನ್ನ ಕುರುಡಾಗಿ ಅನುಸರಿಸುವ ಕೂಪದಿಂದ ಹೊರಬನ್ನಿ ಅಂತ ಬಿಟ್ಟಿ ಸಲಹೆಯನ್ನ ನಾವೂ ನಿಮಗೆ ನಿಮಗಿಂತಲೂ ಹೆಚ್ಚು ಸಮರ್ಥನೆಗಳೊಂದಿಗೆ ನೀಡಬಹುದು. 🙂

    ಉತ್ತರ
    • ನವೀನ
     ಜನ 3 2014

     ಛೆ ಛೆ. ಪಾಪ! ಇನ್ನು ಮೋದಿ ವಿರೋಧಿಗಳ ಬಳಿ ಉಳಿದಿರುವ ಅಸ್ತ್ರವಿದೊಂದೆ ಆಗಿದೆ.ವಿರೋಧಿಸಲು ಇನ್ನೇನೂ ಸಿಗದಿದ್ದಾಗ ಹತಾಶೆಯೊಂದೆ ಮಂತ್ರವಾಗುತ್ತದೆ

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments