ತುಳುವಿಗೆ ೮ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ…!
– ರಾಕೇಶ್ ಶೆಟ್ಟಿ
ಬೆಂಗಳೂರಿನ ಸಮಸ್ತ ತುಳು ಸಂಘಟನೆಗಳೂ ಒಗ್ಗೂಡಿ,ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವಂತೆ ಮತ್ತು ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಸೆಪ್ಟಂಬರ್ ೨೮ ರ ಶನಿವಾರ ಕಳೆದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ’ಹಕ್ಕೊತ್ತಾಯ – ಪ್ರತಿಭಟನೆ’ಯನ್ನು ಮಾಡಿದ್ದವು.ಅಂದಿನ ಪ್ರತಿಭಟನೆಯ ನೇತೃತ್ವ ವಹಿಸಿದವರು ಹಿರಿಯ ಸಾಹಿತಿ ಡಾ|| ಡಿ.ಕೆ ಚೌಟ ಅವರು. ಚೌಟ ಅವರ ಭಾಷಣದಲ್ಲಿ ಇಷ್ಟು ವರ್ಷಗಳ ಕಾಯುವಿಕೆಯನ್ನು ಕಡೆಗಣಿಸಿದ ರಾಜಕಾರಣಿಗಳು,ವ್ಯವಸ್ಥೆಗಳ ಮೇಲೆ ಸಾತ್ವಿಕ ಕೋಪ ಎದ್ದು ಕಾಣುತಿತ್ತು.ಹಾಗೆಯೇ ತುಳುವಿಗೆ ಇರುವ ಅಪಾಯ, ನಮ್ಮ ಭೂಮಿ ಮಲಯಾಳಿಗಳ ಪಾಲಾಗುತ್ತಿರುವ ಬಗೆಗಿನ ಆತಂಕವಿತ್ತು.ಆ ದಿನ ಬಹಳಷ್ಟು ಜನ ಮಾತನಾಡಿದರು.ಆದರೆ ನಿಜವಾಗಿಯೂ ತುಳುವರ ಅಸ್ಮಿತೆಯನ್ನು ಬಡಿದ್ದೆಬ್ಬಿಸುವಂತ ಮಾತನಾಡಿದ್ದು ಚೌಟ ಅವರೊಬ್ಬರೇ.ಅವರ ಮಾತು ಮತ್ತದಕ್ಕೆ ವ್ಯಕ್ತವಾದ ಸ್ಪಂದನೆ ಕಂಡಾಗ ಏನಾದರೂ ಒಳ್ಳೆಯ ಬೆಳವಣಿಗೆಗಳು ಆಗಬಹುದು ಅಂದುಕೊಳ್ಳುತಿದ್ದೆ.ಅಷ್ಟರಲ್ಲೇ, ರಾಜಕಾರಣಿಗಳ ಆಗಮನವಾಯಿತು…!
ಒಬ್ಬರು ಚಿಕ್ಕಮಗಳೂರಿನ ಸಂಸದ ಜಯಪ್ರಕಾಶ್ ಹೆಗ್ಡೆ,ಮತ್ತೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್.ಇಂತ ಪ್ರತಿಭಟನಾ ಸಭೆಗಳಿಗೆ ರಾಜಕಾರಣಿಗಳನ್ನೇಕೆ ಕರೆಯುತ್ತಾರೆ ಅನ್ನುವುದು ನನಗೆ ಅರ್ಥವಾಗಲಿಲ್ಲ!
ಅದಕ್ಕೇ ಸರಿಯಾಗಿಯೇ ಈ ಇಬ್ಬರ ಮಾತುಗಳು ಸಾಗಿತ್ತು.ಪ್ರತಿಭಟನೆಗೆಂದು ಬಂದವರನ್ನು ತಮ್ಮ ಆಶ್ವಾಸನೆಗಳ ಮೂಲಕ,ಹಾಸ್ಯ ಚಟಾಕಿಗಳ ಮೂಲಕ ಸಮಾಧಾನಪಡಿಸುವ ಎಂದಿನ ರಾಜಕಾರಣಿಗಳ ಓಲೈಕೆಯ ಶೈಲಿಯ ಭಾಷಣ.೮ನೇ ಪರಿಚ್ಚೇದ ಬಿಟ್ಟು ಕೋರಿರೊಟ್ಟಿ,ನೀರ್ ದೋಸೆ ಇತ್ಯಾದಿ ಇತ್ಯಾದಿ.ಅನಂತ ಕುಮಾರ್ ಅವರು ನವೆಂಬರ್ ತಿಂಗಳಲ್ಲಿ ನೀವು ಒಂದು ತುಳು ನಿಯೋಗವನ್ನು ಕರೆದುಕೊಂಡು ದೆಹಲಿಗೆ ಬನ್ನಿ ಆ ಸಮಯಕ್ಕೆ ಶುರುವಾಗುವ ಸಂಸತ್ತಿನ ಅಧಿವೇಶನದಲ್ಲಿ ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಮಾತನಾಡುವ ಅಂತ ಹೇಳಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ್ದರು.ಅನಂತ ಕುಮಾರ್ ಅವರ ಮಾತನ್ನು ಹೆಗ್ಡೆಯವರು ಅನುಮೋದಿಸಿದ್ದರು.ವೇದಿಕೆಯಲ್ಲಿದ್ದವರೂ ಅದಕ್ಕೇ ಸಮ್ಮತಿಸುವುದರೊಂದಿಗೆ ಪ್ರತಿಭಟನಾ ಸಭೆ ’ಶಾಂತ’ವಾಯಿತು.
ಮೊನ್ನೆ ನನಗೆ ತಿಳಿದಂತೆ, ನವೆಂಬರ್ ತಿಂಗಳಿನಲ್ಲಿ ದೆಹಲಿಗೆ ನಿಯೋಗ ಹೋಗಲಿಲ್ಲ.ಕಾರಣ ನಮ್ಮ ಅನಂತ ಕುಮಾರ್ ಅವರು ಮಧ್ಯಪ್ರದೇಶದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಂತೆ…! ಮತ್ತೆ ಜನವರಿಯಲ್ಲಿ ಬನ್ನಿ ಅಂದಿದ್ದಾರೆ ಅಂತ ತಿಳಿಯಿತು.ಫೆಬ್ರವರಿಯಲ್ಲಿ ಸಂಸತ್ತಿನ ಮತ್ತೊಂದು ಅಧಿವೇಶನ ನಡೆಯಲಿದೆ ಅದರಲ್ಲಿ ಈ ರಾಜಕಾರಣಿಗಳು ಏನು ಮಾಡುತ್ತಾರೆ ನೋಡೋಣ ಅಂದುಕೊಳ್ಳುತ್ತಲಿದ್ದೆ.ಜನವರಿ ೪ ರ ವಿಜಯವಾಣಿ ಪತ್ರಿಕೆ ಓದುವಾಗ “ತುಳುವಿಗೆ ಮಾನ್ಯತೆ- ಅಡ್ಡಗೋಡೆ ಮೇಲೆ ದೀಪವಿಟ್ಟ ಕೇಂದ್ರ” ಅನ್ನುವ ಸುದ್ದಿ ಓದಿದೆ.”ನಿರ್ದಿಷ್ಟ ಭಾಷೆಯೊಂದನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ಅಥವಾ ಆ ಭಾಷೆ ಸಂವಿಧಾನದ ಮಾನ್ಯತೆ ಪಡೆಯಲು ಏನೆಲ್ಲಾ ಅರ್ಹತೆ ಹೊಂದಿರಬೇಕು ಎಂಬುದನ್ನು ಪಟ್ಟಿ ಮಾಡಲಿಕ್ಕಾಗಿ ಅಂತರ್ ಸಚಿವಾಲಯವೊಂದನ್ನು ರಚಿಸಲು ಹೊರಟಿದೆಯಂತೆ…!” ಕೇಂದ್ರದ ಈ ನಡೆ ತುಳುವನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ಉದ್ದೇಶಕ್ಕೆ ವಿಳಂಬ ಮಾಡಲು ಹೊರಟಿದೆಯೇ? ಹಾಗೊಂದು ಅನುಮಾನ ಕಾಡುತ್ತಿದೆ.
ಹೌದು.ತುಳುವನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವುದು ಕೇವಲ ಕೇಂದ್ರ ಸರ್ಕಾರದ ಜವಬ್ದಾರಿ ಅಷ್ಟೇ ಏನು?ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪಾಲಿಲ್ಲವೇ?
೨೦೦೩ರಲ್ಲಿ ತುಳುವಿಗೆ ೮ನೇ ಪರಿಚ್ಛೇದವನ್ನು ನೀಡಿ ಅನ್ನುತ್ತ ದನಿಯೆತ್ತಿದವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್.ಆಗ ತಜ್ಞರು “ತುಳು” ರಾಜ್ಯವೊಂದರ ಅಧಿಕೃತ ಭಾಷೆಯಲ್ಲದ ಕಾರಣ ಅದಕ್ಕೆ ಆ ಸ್ಥಾನಮಾನ ನೀಡಲಾಗದು ಅಂದಿದ್ದರು.ಹಾಗಿದ್ದರೆ ತಪ್ಪು ಕೇಂದ್ರದ್ದೋ ಇಲ್ಲ ರಾಜ್ಯ ಸರ್ಕಾರದ್ದೋ? ಅಷ್ಟಕ್ಕೂ,ಅದೇ ವರ್ಷದಲ್ಲಿ ಅಧಿಕೃತ ರಾಜ್ಯಭಾಷೆಗಳಲ್ಲದ ಸಿಂಧಿ,ಮೈಥಿಲಿ,ಬೋಡೊ ಭಾಷೆಗಳಿಗೆ ಕೇಂದ್ರ ಮಾನ್ಯತೆ ನೀಡಿತು.ಇದು ಸಾಧ್ಯವಾಗಿದ್ದು ಆಯಾ ರಾಜ್ಯಸರ್ಕಾರಗಳ ಮತ್ತು ಅಲ್ಲಿನ ನಾಯಕರಿಂದಾಗಿ.ಅವರಿಗೆ ಸಾಧ್ಯವಾಗಿದ್ದು ನಮ್ಮ ಸೋ-ಕಾಲ್ಡ್ ನಾಯಕರಿಗೇಕೆ ಸಾಧ್ಯವಾಗಲಿಲ್ಲ? ನಮ್ಮಲ್ಲೂ ಕೇಂದ್ರದಲ್ಲೇ ಆಸ್ಕರ್ ಫರ್ನಾಡಿಂಸ್,ವೀರಪ್ಪ ಮೊಯ್ಲಿಯಂತಹ ಘಟಾನುಘಟಿಗಳಿದ್ದೂ ಯಾವುದೇ ಪ್ರಯೋಜನವಾಗಲಿಲ್ಲ.ಇನ್ನು ಕರಾವಳಿಯ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಏನು ಮಾಡಲಿಲ್ಲ.ಮೊನ್ನೆ ಹೀಗಾಗಿ ಇದು ಕೇಂದ್ರದ ಕೆಲಸ ಮಾತ್ರ ಅನ್ನುವುದು ಅರ್ಧ ಸತ್ಯವಷ್ಟೆ. ಕರ್ನಾಟಕ ಸರ್ಕಾರವೇಕೆ “ತುಳು”ವಿಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನ-ಮಾನ ನೀಡುತ್ತಿಲ್ಲ? ಎಲ್ಲಾ ತಪ್ಪನ್ನು “ಕೇಂದ್ರ ಸರ್ಕಾರ”ದ ಮೇಲಷ್ಟೇ ಹೊರಿಸಿ ಕೈ ತೊಳೆದುಕೊಳ್ಳುವುದು ಸರಿಯೇ? ತುಳುನಾಡ್ದ ಜಾತ್ರೆಯಲ್ಲಿ ಸಚಿವ ರಮಾನಾಥ ರೈ ಅವರು ’ಒಂದಲ್ಲಾ ಒಂದು ದಿನ ನಮ್ಮ ಕನಸು ಈಡೇರಲಿದೆ.’ ಅನ್ನುತ್ತಾರಲ್ಲ, ಒಂದಲ್ಲ ಒಂದು ದಿನ ಈಡೇರಿಸಲು ಸರ್ಕಾರಗಳೇನು ದೇವರೇ?
ಈ ರಾಜಕಾರಣಿಗಳನ್ನು ಸೇರಿಸಿಕೊಂಡು ಮಾಡುವ ಯಾವುದೇ ಹೋರಾಟಗಳೂ ಅವರ ಅನುಕೂಲಕ್ಕೆ ತಕ್ಕಂತೆಯೇ ನಡೆಯುತ್ತವಷ್ಟೇ.ಇಂತ ಹಿನ್ನೆಲೆಯಿರುವ ರಾಜಕಾರಣಿಗಳನ್ನು ನಂಬಿಕೊಂಡು,ಅವರನ್ನು ಪ್ರತಿಭಟನಾ ವೇದಿಕೆಯ ಮೇಲೆ ಬಿಟ್ಟುಕೊಂಡು ಅವರ ಕೈಗೆ ಮೈಕನ್ನೂ ಕೊಟ್ಟು ಅವರ ಭಾಷಣ ಕೇಳುವುದ್ಯಾವ ಪುರುಷಾರ್ಥಕ್ಕೆ? ನಮಗೆ ನ್ಯಾಯಯುತವಾಗಿ ಸಿಗಬೇಕಾದ್ದನ್ನು ಕೇಳುವುದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು.”ನಮ್ಮ ಹಕ್ಕನ್ನು ಕೇಳಬೇಕೆ ಹೊರತು ಬೇಡಬಾರದು”.
ರಾಜಕಾರಣಿಗಳಿಗೆ (ಪಕ್ಷಾತೀತವಾಗಿ) ಅರ್ಥವಾಗುವುದು ತುಳು ಅಥವಾ ಕನ್ನಡ ಭಾಷೆಯಲ್ಲ ಅವರದೇನಿದ್ದರೂ ’ವೋಟ್ ಭಾಷೆ’. ಅವರ ಜೊತೆ ಮಾತನಾಡುವಾಗ ನಾವು ಅದೇ ಭಾಷೆಯನ್ನೇ ಬಳಸಬೇಕು ಆಗಷ್ಟೇ ಅವರಿಗೆ ನಮ್ಮ ದನಿ ಕೇಳುವುದು.ತುಳುವನ್ನು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸುವ ಹೋರಾಟ ಶುರುವಾಗಿ ದಶಕಗಳುರಿಳಿವೆ.ತುಳುವಿನ ಇವತ್ತಿನ ಸ್ಥಿತಿಗೆ ಇತರರನ್ನು ದೂರುವ ಮೊದಲಿಗೆ, ಕನ್ನಡವನ್ನು ತಲೆಯ ಮೇಲೆ ಹೊತ್ತು ತಿರುಗುವ ’ಕರ್ನಾಟಕದ ತುಳುವರು” (ಇವರ ಪೈಕಿ ನಾನೂ ಇದ್ದೇನೆ), ಹಿಂದಿಯನ್ನು ತಲೆ ಮೇಲೆ ಹೊತ್ತು ತಿರುಗುವ ’ಮುಂಬೈ ತುಳುವರು’’, ಮನೆಯ ಸಾಕು ನಾಯಿಯೊಂದಿಗೂ ಇಂಗ್ಲೀಷಿನಲ್ಲೇ ಮಾತನಾಡುವ ’ಇಂಗ್ಲೀಷ್ ತುಳುವರು’ ಹೀಗೆ ಒಟ್ಟಾರೆಯಾಗಿ ತುಳುವಿನ ಇವತ್ತಿನ ಸ್ಥಿತಿಗೆ ತುಳುವರೇ ಕಾರಣ.ಇನ್ನಾದರೂ ’ತುಳುವರು’ ತಮ್ಮ ಇತರೇ ’ಲೋಕಕಲ್ಯಾಣ ಕಾರ್ಯ’ಗಳ ಜೊತೆಗೆ ತುಳುವನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ವಿಷಯದಲ್ಲಿ, ರಾಜಕಾರಣಿಗಳನ್ನು ಬದಿಗಿಟ್ಟು, ತಾವೇ ಒಗ್ಗಟ್ಟನ್ನು ಪ್ರದರ್ಶಿಸದಿದ್ದರೆ ಮುಂದಿನ ಪೀಳಿಗೆಯೂ ಇದೇ ವಿಷಯವನ್ನಿಡಿದು ಪ್ರತಿಭಟನೆಯನ್ನು ಮಾಡುತ್ತಿರಬೇಕಾಗಬಹುದು ಅಥವಾ ನಮಗೆ ಹಿಡಿ ಶಾಪವನ್ನೇ ಹಾಕಬಹುದು.ಯುನೆಸ್ಕೋದ ಪಟ್ಟಿಮಾಡಿರುವ ಭಾರತದ ಅಳಿವಿನಂಚಿನಲ್ಲಿರುವ ೧೯೭ ಭಾಷೆಗಳಲ್ಲಿ ನಮ್ಮ “ತುಳು” ಕೂಡ ಇದೇ ಅನ್ನುವುದನ್ನು ನೆನಪಿಟ್ಟುಕೊಳ್ಳೋಣ.ತುಳುವಿನ ಅಳಿವಿಗೂ ಉಳಿವಿಗೂ ಅಂತಿಮವಾಗಿ ತುಳುವರೇ ಕಾರಣರಾಗುತ್ತಾರೆ ಅನ್ನುವುದನ್ನ ಮತ್ತೆ ಮತ್ತೆ ನಮಗೇ ನಾವೇ ಹೇಳಿಕೊಳ್ಳೋಣ.
ಏನೇ ಒಗ್ಗಟ್ಟು ಪ್ರದರ್ಶಿಸಿದರೂ ನಮ್ಮ ವ್ಯವಸ್ಥೆಯಲ್ಲಿ ಕೊನೆಗೆ ಅದು ಜನಪ್ರತಿನಿಧಿಗಳ ಮೂಲಕವೇ ಕೇಂದ್ರಸರ್ಕಾರಕ್ಕೆ ಹಾಗೂ ಸಂವಿಧಾನಕ್ಕೆ ಹೋಗಬೇಕು. ಆದ್ದರಿಂದ ಒಗ್ಗಟ್ಟು ಪ್ರದರ್ಶಿಸುವುದು ಅನ್ನುವ ಜೊತೆಗೆ ಹೇಗೆ ಪ್ರದರ್ಶಿಸುವುದು ಅನ್ನುವುದನ್ನೂ ವಿವರಿಸಿ. ನಮ್ಮ ಭಾಷೆಗೆ ಸ್ಥಾನ ಕೊಡಿ ಅಂತ ಅಲ್ಲಿ ದೆಹಲಿಯಲ್ಲಿ ಹೋಗಿ ಅಂಗಲಾಚುವ ಸ್ಥಿತಿ ನಮ್ಮ ಭಾರತದ ವ್ಯವಸ್ಥೆಯದ್ದು. ಅಲ್ಲಿ ಕೂತ ಉತ್ತರಭಾರತೀಯರಿಗೆ ತುಳುವಿನ ಗಂಧಗಾಳಿಯೂ ಇರುವುದಿಲ್ಲ. ಇದ್ದುದ್ದರಲ್ಲಿ ನಮ್ಮ ಸಂಸದರಲ್ಲಿ ಅನಂತಕುಮಾರ್ ಎಷ್ಟೋ ಪರವಾಗಿಲ್ಲ. ಕರ್ನಾಟಕದ ವಿಷಯಗಳ ಪರವಾಗಿ ಎಲ್ಲಾ ಸಂಸದರನ್ನು ದೆಹಲಿಯಲ್ಲಿ ಒಗ್ಗೂಡಿಸುವವರೇ ಅವರು.
i am totally agree with you Rakesh, even i was there when anathkumar made promises of such..yeah actually he deviated the protest by cracking some foolish jokes..he thought that we all will be happy when he say kori rotti..we know these tactics from such leaders..really if somebody wishes from our so called leader then it will not be a big task for them but they wont do such..
Rakesh Anna.. you are absolutely right…We , spineless Tuluvas only responsible for our pathetic status!
When you mentioned about the words of Dk Chowta at Bangalore..here in Mumbai too we have a Chowta ..Mr Dayasagar Chowta a Former young Journalist.. 4 moths back he gave a very detailed thoughtful insightful speach at Mumbai University Kannada Department..regarding Inclusion of Tulu in to contitutions 8 th schedule. . he gave the very detailed information regarding how Bodo language got the 8 th schedule entry..it was a hair raising example ..the committed language loving Bodo peples fight ..Even at the time of Adyar Tulu Vishva Parba time in a preparatory Mumbai Programme he gave the minute details why and how our language failed to get entry in to 8 th schedule status… even he agreed to work out the detail strategy for the fight..But you know Rakesh Sir..these So called Mumbai Tuluvas kept him away from all Tulu Parba related functions fearing he will stole thier name & fame at Vishwa Tulu Parba.. what i belive is he should have included first in to our Tulu Akademy ..but who will convince the akademi people? Chowta sir though very busy in Corporate Media, is also known for hi programme MC’ s..hard hittting speaches ..with humor..wit..all over Mumbai. , for last 2 decades ordinary Tulu -Kannadiga like me working for the language because of his powerfull talks..disciplined programmes..
But here what happenes you know ? people who host the visiting Tulunadu like Pradeep Kumar kalkura, Punaroor, Ramanath Rai, other ministers..only get birth in the akademis..like Karnoor Mohan rai.. Suresh shetty Yeyyadi actually they are commercial organisers of different Drama teams for their livelyhood….or 84 year old people like Dr suneetha Shetty , HBL Rao… and in Chowta Sir’s case he is last person to ask or apply or influence any post..he s such a simple & honest ..I wish one day he will get some representation in our language akademis and his voice will be heard at all corners of power center for the better opprtunity of our dearest Tulu Language
R P Suvarna,
Mumbai.
D k CHOUTA IS A MAN WHO WOLD LIKE TO COME AND ATAY I A HOUSE SOME BODY ELSE HAS BUILT . WHERE WAS HE 25 YEARS AGO .