ಬೇಕಾಗಿರುವುದು ರಾಜಕೀಯ ಅಸ್ತಿತ್ವವೇ ವಿನಃ ಕೇವಲ ಭ್ರಷ್ಟಚಾರ ನಿಗ್ರಹವಲ್ಲ
– ನವೀನ್ ನಾಯಕ್
ಅಣ್ಣಾ ನೇತೃತ್ವದ ಜನಲೋಕಪಾಲ ಹೋರಾಟದಿಂದ ಪ್ರಸಿದ್ದರಾದ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಗೇರಿ ಬದಲಾವಣೆಯ ಪರ್ವ ತರಲು ಹೊರಟಿದ್ದಾರೆ. ಸರಕಾರ ರಚಿಸಲು ಜನರ ಅಭಿಪ್ರಾಯ ಸಂಗ್ರಹಿಸಿದ ಕಾರಣಕ್ಕೆ ಹಗಲು ರಾತ್ರಿ ಮಾಧ್ಯಮಗಳು ತಲೆದೂಗಿದ್ದೇ ತೂಗಿದ್ದು. ಎಲ್ಲಾ ಮಾಧ್ಯಮಗಳಲ್ಲಿ ಒಂದೇ ಕೂಗು. ಇದೇ ನೈಜ ಪ್ರಜಾಪ್ರಭುತ್ವ!. ಈ ಮಾಧ್ಯಮಗಳ ಕಣ್ಣಿಗೆ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಮತ್ತು ದೆಹಲಿಯಲ್ಲಿ ಮೊದಲ ಸ್ಥಾನ ಪಡೆದ ಬಿಜೆಪಿ ನೈಜ ಪ್ರಜಾಪ್ರಭುತ್ವದಲ್ಲಿ ಗೆದ್ದಿದ್ದಲ್ಲ ! ಪಕ್ಷ ಕಟ್ಟಿ ಒಂದು ವರ್ಷದಲ್ಲೇ ಎರಡನೆಯ ಸ್ಥಾನಕ್ಕೆ ಬರುವುದು ಅಚ್ಚರಿಯೇ, ಅವರ ಪ್ರಯತ್ನಕ್ಕೆ ನಾವು ಶಹಭಾಸ್ ಹೇಳಲೇ ಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಆಡಳಿತ ನೀಡಲು ಆಪ್ ಪಕ್ಷವೇ ಮುಂಚೂಣಿಗೆ ಬರಬೇಕೆಂಬ ನಿರ್ಧಾರವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಯುವಕರ ಮನಸ್ಸಲ್ಲಿ ತುಂಬಿದ್ದರು. ರಾಜಕೀಯ ಮಾಡುವುದು ಹೇಗೆ ಅಂತ ನಾವು ಕಲಿಸುತ್ತೇವೆ, ನಮಗೆ ಕೆಂಪು ಗೂಟದ ಕಾರು ಬೇಕಿಲ್ಲ, ನಮಗೆ ಭದ್ರತೆ ಬೇಕಿಲ್ಲ, ಸರಕಾರಿ ಭವ್ಯ ಮನೆಯೂ ಬೇಕಿಲ್ಲ ಹೀಗೆ ಒಂದರ ಮೇಲೊಂದಂತೆ ಘೋಷಿಸತೊಡಗಿದರು. ಯುವಕರ ಉತ್ಸಾಹ ಇಮ್ಮಡಿಯಾಗಿತ್ತು. ತಮ್ಮ ನಾಯಕನಿಗೆ ಈ ಜಗದಲ್ಲಿ ಬೇರಾರು ಸರಿಸಾಟಿ ಇಲ್ಲವೆಂಬತೆ ವರ್ತಿಸತೊಡಗಿದರು. ಅಣ್ಣಾ ಹಜಾರೆಯವರು ಯಾವಾಗ ತನ್ನ ಹೆಸರನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರೋ ಕೇಜ್ರಿವಾಲ್ ಅಭಿಮಾನಿಗಳು ಬುಸುಗುಡತೊಡಗಿದರು. ಸಾಲದೇ ಐಎಸಿ ಚಳುವಳಿಯ ಹಣದ ಲೆಕ್ಕ ಕೇಳಿದರೋ ಎಲ್ಲ ಅಭಿಮಾನಿಗಳು ಸಿಡಿದೆದ್ದರು. ಅಣ್ಣಾ ಮುದುಕರಾಗಿದ್ದಾರೆ ಹುಚ್ಚರಂತೆ ವರ್ತಿಸುತಿದ್ದಾರೆ ಎಂಬ ಕ್ಷುಲ್ಲಕ ಮಾತುಗಳನ್ನು ಸಾಮಾಜಿಕ ತಾಣದ ತುಂಬ ಪಸರಿಸತೊಡಗಿದರು. ಯಾರ ಏಳಿಗೆಗೆ ಯಾರು ಕಾರಣರಾಗಿದ್ದರೋ ಅವರು ಮದುಕರಾಗಿದ್ದರು ಹುಚ್ಚರಾಗಿದ್ದರು.
ಇದೇ ಅರವಿಂದ್ ಕೇಜ್ರಿವಾಲ್ ಉಪವಾಸ ಬಿಟ್ಟು ಇನ್ನು ನಮಗುಳಿದ ದಾರಿ ರಾಜಕೀಯ ಒಂದೇ! ನಾವು ರಾಜಕೀಯ ಪ್ರವೇಶ ಮಾಡಬೇಕೆಂದರು. ಈ ಹೋರಾಟ ರಾಜಕೀಯೇತರವಾಗಿದ್ದರಿಂದಲೇ ನನ್ನಂತಹ ಅನೇಕ ಸಹೋದರ ಸಹೋದರಿಯರು ತಮ್ಮ ಕೆಲಸ ಬಿಟ್ಟು ಈ ಹೋರಾಟದಲ್ಲಿ ಭಾಗವಹಿಸಿದಲ್ಲದೇ ಉಪವಾಸ ಸಹಿತ ಕುಳಿತಿದ್ದೆವು. ಬೀದಿ ಬೀದಿಯಲ್ಲಿ ನಿಂತು ಕರಪತ್ರ ಹಿಡಿದು ಜನರನ್ನು ಓಲೈಸಿ ಹೋರಾಟ ಬಲಗೊಳ್ಳುವಂತೆ ಮಾಡಿದೆವು. ಹೋರಾಟದ ಬಗ್ಗೆ ಜನರಲ್ಲಿ ಅದರ ಅಗತ್ಯತೆ ತಿಳಿಸಿ ಗೆಲುವು ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ಮೂಡಿಸಿ ಜನರನ್ನು ಫ್ರೀಡಂ ಪಾರ್ಕ ಕಡೆ ಎಳೆಯುವಲ್ಲಿ ಸಫಲರಾದೆವು. ಇತ್ತ ಅಣ್ಣಾ ಹೋರಾಟಕ್ಕೆ ಸಿಗುತಿದ್ದ ಬೆಂಬಲ ನೋಡಿ ಮಾದ್ಯಮಗಳು ಟಿ ಆರ್ ಪಿ ಎಣಿಕೆಯಲ್ಲಿ ಲಾಭವಾಗುವ ದೃಷ್ಟಿಯಿಂದ 24*7 ಗಂಟೆ ಫ್ರೀಡಂ ಪಾರ್ಕಲ್ಲಿ ಠಿಕಾಣಿ ಹೂಡಿದ್ದವು. ಅಲ್ಲೇ ಇದ್ದ ನಮಗೆ ಹಬ್ಬದಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂತೋಷವಿತ್ತು. 1947ರಲ್ಲಿ ನಾವಿರಲಿಲ್ಲ, ಈ ಹೋರಾಟದಲ್ಲಿ ನಾವಿದ್ದೇವೆ ಎಂದು ಎರಡಕ್ಕೂ ತಾಳೆ ಮಾಡಿ ದೇಶಕ್ಕೆ ಸೇವೆ ಮಾಡಲು ಹೊರಟಿದ್ದೇವೆ ಎಂಬ ಅಧಮ್ಯ ವಿಶ್ವಾಸವಿತ್ತು.
ಆದರೆ ಮುಂದಾದ್ದೇನು? ಯುಪಿಎ ಮಾತನಾಡಿದರೆ ತಾವೇ ಹೆಚ್ಚು ಪ್ರಚಾರ ಕೊಟ್ಟಂಗಾಗುತ್ತದೆಂಬುದನ್ನು ತಿಳಿದು ಸುಮ್ಮನಾಯಿತು. ಈ ಷಡ್ಯಂತ್ರಕ್ಕೆ ಒಳಗಾದ ಕೇಜ್ರಿವಾಲರು ಇದು ಧಿವ್ಯ ನಿರ್ಲಕ್ಷ್ಯ ಎಂಬ ನೆಪ ಒಡ್ಡಿ ರಾಜಕೀಯ ಕಣಕ್ಕೆ ಧುಮುಕುವುದನ್ನು ಜನತೆ ಮುಂದೆ ಇಟ್ಟರು. ಅಣ್ಣಾರವರೇ ಅಷ್ಟು ತಾಳ್ಮೆಯಿಂದ ಇದ್ದರೂ ಇವರೇಕೆ ಸಹನೆ ತಾಳಲು ನಿರ್ಧರಿಸಲಿಲ್ಲ. ಅಷ್ಟಕ್ಕೂ,ಅಣ್ಣಾರವರು ರಾಜಕೀಯ ಪಕ್ಷ ಸ್ಥಾಪಿಸಲು ಒಪ್ಪಿಗೆ ನೀಡಿರಲಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಅದೇ ಅಣ್ಣಾರವರನ್ನು ಮುಂದಿಟ್ಟುಕೊಂಡು ಜನತೆಯಲ್ಲಿ ಎಸ್ ಎಮ್ ಎಸ್ ರಾಜಕೀಯ ಶುರುವಾಯಿತು. ಅತ್ಯಂತ ನೋವಿನ ಸಂಗತಿ ಅದೇ ಆಗಿತ್ತು. ರಾಜಕೀಯೇತರ ಹೋರಾಟ ರಾಜಕೀಯವಾಗಿದ್ದು. ಇದರ ನೇರ ಪರಿಣಾಮ ಕೆಲವು ದಿನಗಳ ಹಿಂದೆ ನಡೆದ ಹೋರಾಟದಲ್ಲಿ ಕಂಡಿತ್ತು. ಯಾವ ಮಸೂದೆಗಾಗಿ ಜನರು ತನ್ನೆಲ್ಲಾ ಕೆಲಸಗಳನ್ನು ಬಿಟ್ಟು ತಮ್ಮ ಕುಟುಂಬದ ಸಮೇತ ಬಂದು ಫ್ರೀಡಂ ಪಾರ್ಕಲ್ಲಿ ಕೂರುತಿದ್ದರೋ ಅವರೆಲ್ಲಾ ಕಾಣೆಯಾಗಿದ್ದರು. ಕಾಲೇಜಿಗೆ ಹೋರಾಟಕ್ಕೆ ಕರೆಯಲು ಹೋದರೆ ರಾಜಕೀಯಕ್ಕೆ ನಾವು ಬರಲ್ಲವೆಂದರು. ಮುಂಚೆ ಆಟೋ ಚಾಲಕರೊಂದಿಗೆ ಜನಲೋಕಪಾಲ್ ಬಗ್ಗೆ ಮಾತನಾಡಿದಾಗ ಆವರು ಕೇಳಲು ಉತ್ಸಾಹಿಯಾಗಿದ್ದರು ಸ್ವಲ್ಪ ತಿರಸ್ಕಾರ ಮನಸ್ಸಿದ್ದರೂ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೆವು. ಚಳುವಳಿ ವಿಭಜನೆಯಾದ ಮೇಲೆ ಅದೇ ಹೋರಾಟದ ಬಗ್ಗೆ ತಿರಸ್ಕರಿಸಲು ಪ್ರಾರಂಭಿಸಿದರು. ಈ ಹೋರಾಟಗಳೆಲ್ಲಾ ಇಷ್ಟೇ ಸಾರ್. ನಮಗೋ ದೇಶಕ್ಕೋ ಒಳ್ಳೆಯದಾಗುತ್ತದೆ ಎಂದು ಬೆಂಬಲಿಸುತ್ತೀವಿ. ಅದನ್ನೇ ಬಳಸಿಕೊಂಡು ರಾಜಕೀಯ ಮಾಡ್ತಾರೆ ಸಾರ್.ನಾಯಕರು ಹೆಸರು ಮಾಡಿಕೊಂಡ ಮೇಲೆ ನಾವು ಅವರ ಕಣ್ಣಿಗೆ ಕಾಣುವುದಿಲ್ಲ. ಈಗ ಬಂದಿರುವ ರಾಜಕಾರಿಣಿಗಳೆಲ್ಲ ಎಲ್ಲಿಂದ ಬಂದಿದ್ದು ಸಾರ್ ಆ ಏರಿಯಾದ ಕಾರ್ಪೋರೇಟರ್ ನೋಡಿ ಸಾ. ಒಂದ್ ಕಾಲ್ದಾಗೆ ನಾವು ಅವ್ನು ಒಟ್ಟಿಗೆ ಬೀಡಿ ಹೊಡಿತಿದ್ವಿ. ಅವನು ಎಲೆಕ್ಷನ್ಗೆ ನಿಂತಾಗ ಇಡೀ ಬೀದಿ ಸುತ್ತಿ ಸುತ್ತಿ ಪ್ರಚಾರ ಮಾಡಿ ಒಂದೆರಡು ಸಲ ಸೋತಾಗ್ಲು ಬಿಡದೆ ಗೆಲ್ಸಿದ್ವಿ ಸಾ! ಈಗ ನೋಡಿ ಬಡ್ಡಿಮಗ ಗೇಟ್ ಒಳಗೆ ನಮ್ಮನ್ನು ಬಿಡ್ಕೊಳ್ಳಲ್ಲ. ನಮ್ ಹಣೆಬರಹನೇ ಇಷ್ಟ್ ಸಾ ಅಂದ.
ಹೌದು.ನಾವೇನೇ ಬದಲಾವಣೆ ತರುತ್ತೇವೆ ಅಂತ ಪ್ರಾಮಾಣಿಕವಾಗಿ ಹೊರಟರೂ 6 ದಶಕಗಳ ರಾಜಕೀಯ ಇತಿಹಾಸ ನಮ್ಮನ್ನ ಅನುಮಾನದಿಂದ ನೋಡುವಂತೆ ಮಾಡೇ ಮಾಡುತ್ತದೆ. ದೇಶದ ರಾಜಕೀಯ ಇತಿಹಾಸ ಗಮನಿಸಿದರೆ ಆಪ್ ಹೇಗೆ ಭಿನ್ನ ! ಹಲವು ಪಕ್ಷಗಳ ಹಳೆಯ ನಾಯಕರ ನಿಸ್ವಾರ್ಥ ರಾಜಕಾರಣ ಅಲ್ಲಿರಲಿಲ್ಲವೇ. ಈಗ ಅತ್ಯಂತ ಭ್ರಷ್ಟವಾಗಿ ಇಡೀ ಭಾರತದ ಹೆಗಲ ಮೇಲೆ ಕೂತಿರುವ ಕಾಂಗ್ರೆಸ್ ಹಿಂದಿರುವ ನಾಯಕರು ಎಂತವರು, ಒಬ್ಬರೇ ಇಬ್ಬರೇ ಸಹಸ್ರಾರು ದೇಶಭಕ್ತ ನಾಯಕರನ್ನು ಕಂಡ ಪಕ್ಷವದು. ಅಹಿಂಸೆ ಸತ್ಯ ತ್ಯಾಗವನ್ನು ಪ್ರತಿಪಾದಿಸಿದ ಗಾಂಧಿಯ ನೇತೃತ್ವ ಕಂಡ ಪಕ್ಷವದು. ಈಗಿನ ಕಾಂಗ್ರೆಸ್ಸನ್ನು ಗಮನಿಸಿದರೆ ಅಲ್ಲಿ ಗಾಂಧಿ ನೆನಪಾಗುವರೇ ? ತಿಲಕರು, ಪಟೇಲರು , ಶಾಸ್ತ್ರಿಗಳು. ಊಹೂಂ ಒಬ್ಬರೂ ನೆನಪಿಗೆ ಬರುವುದಿಲ್ಲ. ಬರುವುದು ಕುಟುಂಬಾಡಳಿತವೇ ಹೊರತು ಈ ನಾಯಕರುಗಳಲ್ಲ. ಹಿಂದೆ ಮಹಾನ್ ನಾಯಕರ ನೇತೃತ್ವದ ಪಕ್ಷವೇ ಇಂದು ಹದಗೆಟ್ಟಿ ಹೋಗಿದೆ. ಯಾವ ಗುಲಾಮತನದ ವಿರುದ್ದ ಶಾಂತಿ ಅಹಿಂಸೆಯಿಂದ ಸಂಘಟಿತರಾಗಿ ಸಿಡಿದ್ದೆದ್ದಿದರೋ ಅದೇ ಪಕ್ಷ ಇಂದು ಒಂದು ಕುಟುಂಬಕ್ಕೆ ಗುಲಾಮರಂತೆ ವರ್ತಿಸುತ್ತಿದೆ. ಎಷ್ಟೊಂದು ಅಸಹಜ. ಹೆಚ್ಚು ಕಮ್ಮಿ ಎಲ್ಲಾ ಪಕ್ಷಗಳ ಇಂದಿನ ನಡಿಗೆ ಅದರ ಇತಿಹಾಸಕ್ಕೆ ವಿರುದ್ದ!
ಅಲ್ಲೊಂದು ಇಲ್ಲೊಂದು ವ್ಯಕ್ತಿಗಳು ಪ್ರಾಮಾಣಿಕರಾಗಿ ಕಂಡರೂ ಇಡೀ ಪಕ್ಷವೇ ಪ್ರಾಮಾಣಿಕವಾಗಿ ಕಂಡು ಬರದು. ಇದೆಲ್ಲಕ್ಕಿಂತ ಆಪ್ ಹೇಗೆ ಭಿನ್ನ. ಈ ಪ್ರಶ್ನೆ ಮೂಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಅರವಿಂದ್ ಕೇಜ್ರಿವಾಲರನ್ನು ಜನ ಇಂದು ಗುರುತಿಸುತ್ತಾರೆ ಎಂದರೆ ಜನಲೋಕ್ ಪಾಲ್ ಹೋರಾಟದ ಮೂಲಕವೇ. ಇದರಲ್ಲಿ ಎರಡು ಮಾತಿಲ್ಲ. ಉಪವಾಸ ಕೂತು 10 ದಿನಕ್ಕೇ ಅವರು ನಿರಾಶರಾದರು ಎಂದರೆ ಅದು ನಮ್ಮ ಭ್ರಾಂತಿ ಅಷ್ಟೇ. ಏಕೆಂದರೆ ಅವರು ಹಿಂದಿನಿಂದಲೂ ಹೋರಾಟಗಾರರಾಗಿದ್ದರು. ತಾಳ್ಮೆಗೆಡವುವ ಪರಿಸ್ಥಿತಿ ಆಗ ಬರಲಿಲ್ಲವೆಂದರೇ ನಂಬಲು ಸಾಧ್ಯವೇ? ಒಂದು ರೇಷನ್ ಕಾರ್ಡ್ ತೆಗೆದುಕೊಳ್ಳೋಕೆ ಎಷ್ಟು ಪರದಾಡಬೇಕು ಹೇಳಿ. ಆ ಅಧಿಕಾರಿ ಸತಾಯಿಸಿದ ಎಂದ ಮಾತ್ರಕ್ಕೆ ನಾವು ಪ್ರಯತ್ನವನ್ನು ಬಿಡುತ್ತೇವೆಯೇ ಅಥವಾ ನಾನು ಅದರ ಅರ್ಹತೆಗೆ ತಕ್ಕಂತೆ ಓದಿ ಬಂದು ಅಧಿಕಾರಿಯಾಗಲು ಪ್ರಯತ್ನಿಸುತ್ತೀನ? ಸಧ್ಯಕ್ಕೆ ನನಗೆ ಬೇಕಾಗಿದ್ದು ರೇಷನ್ ಕಾರ್ಡ್ ಅದನ್ನು ತೆಗೆದುಕೊಂಡು ಆಮೇಲೆ ಬೇಕಾದರೆ ಸಾಕಷ್ಟು ಸಮಯ ತೆಗೆದುಕೊಂಡು ಅರ್ಹತೆ ಗಳಿಸಿ ಕೆಲಸಕ್ಕೆ ಪ್ರಯತ್ನಿಸುವುದು ಉಚಿತವಲ್ಲವೇ.ನಾವು ಕೋಪಗೊಂಡರೆ ಶತ್ರುವು ಮುಕ್ಕಾಲು ಭಾಗ ಗೆದ್ದಂತೇ ಸರಿ.ಯುಪಿಎ ನಿಧಾನವಾಗಿ ಚಳುವಳಿಯನ್ನು ಎರಡು ಭಾಗ ಮಾಡಿಬಿಟ್ಟಿತು. ಇದರ ಪರಿಣಾಮ ಅಣ್ಣಾ ಹಜಾರೆಯವರ ಹೋರಾಟಕ್ಕೆ ತೀರ್ವ ತರದಲ್ಲಿ ಹೊಡೆತ ಬಿತ್ತು. ಯಾವ ವಿಧ್ಯಾರ್ಥಿಗಳು ಬಂದು ಹೋರಾಟಕ್ಕೆ ಶಕ್ತಿ ತುಂಬಿ ಸರಕಾರಕ್ಕೆ ಖಡಕ್ ಸಂದೇಶವನ್ನು ಕಳುಹಿಸುತಿದ್ದರೋ ಆ ಇಡೀ ಸಮೂಹವೇ ನಾಪತ್ತೆಯಾಯಿತು. ಬೆಂಬಲ ನೀಡುತ್ತಿದ್ದವರೆಲ್ಲಾ ನಿರ್ಲಕ್ಷಿಸತೊಡಗಿದರು. ಇಡೀ ಚಳುವಳಿ ಕಳೆಗುಂದಲು ಶುರುವಾಯಿತು.
ಇತ್ತ ರಾಜಕೀಯ ಶುರು ಮಾಡಿದ ಕೇಜ್ರಿಯವರು ದೆಹಲಿಯಲ್ಲಿ ಗೆಲುವನ್ನು ಕಾಣತೊಡಗಿದರು. ಅವರ ಉತ್ಸಾಹ ಹೇಗಿತ್ತೆಂದರೆ ತಮ್ಮನ್ನು ಬಿಟ್ಟರೆ ಈ ಭಾರತದೊಳು ಬೇರಾರು ಪ್ರಾಮಾಣಿಕರಿಲ್ಲ ಎಂಬಂತೆ ಅಧಿಕಾರ ಸಿಕ್ಕರೆ ಬೆರಳೆಣಿಕೆ ದಿನದಲ್ಲಿ ಅದೂ ಹತ್ತು ಹದಿನೈದು ದಿನದೊಳಗೆ ಬೇಡಿಕೆಗಳನ್ನು ಪೂರೈಸುತ್ತೇವೆಂದರು. ಅಧಿಕಾರಕ್ಕೆ ಬಂದ ಕೂಡಲೇ ಶೀಲರವರನ್ನು ಜೈಲಿಗೆ ಕಳುಹಿಸುತ್ತೇವೆಂದರು. ದೆಹಲಿಯಲ್ಲಿ ನಡೆದ ಅತ್ಯಚಾರಗಳಿಗೆಲ್ಲಾ ಮಾಜಿ ಮುಖ್ಯಮಂತ್ರಿ ಶೀಲರವರನ್ನೇ ಗುರಿ ಮಾಡಿದರು. ತಮ್ಮ ಪಕ್ಷದಲ್ಲಿ ತಪ್ಪು ಮಾಡಿದ ಯಾವುದೇ ವ್ಯಕ್ತಿಯನ್ನು ಸಹಿಸುವುದಿಲ್ಲ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದರು. ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವವರೆಗೂ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದರು. ಸಾಲದೇ ಈ ಬಗ್ಗೆ ತನ್ನ ಮಕ್ಕಳ ಮೇಲೆ ಪ್ರಮಾಣವನ್ನು ಕೂಡ ಮಾಡಿದರು. ಎಲ್ಲವನ್ನು ಕ್ಯಾಮರದ ಮುಂದೆ ಘಂಟಾಘೋಷವಾಗಿ ಹೇಳಿದರು. ಗೆದ್ದ ಮೇಲೇ ? ಕಾಂಗ್ರೆಸ್ ಏನೋ ಬೇಷರತ್ ಬೆಂಬಲ ನೀಡುತ್ತದೆ ಎಂದಿತು. ನೇರವಾಗಿ ಅವರೊಂದಿಗೆ ಮಾತುಕತೆಗೆ ಮುಂದಾಗದ ಕೇಜ್ರಿಯವರು ತಮ್ಮ ಪಕ್ಷದ 18 ಬೇಡಿಕೆಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿಗೆ ಕಳುಹಿಸಿತು. ಇಲ್ಲಿ ಗಮನಿಸಬೇಕಾದ ಅಂಶ ಬಿಜೆಪಿ ಪಕ್ಷ ಎಲ್ಲಿಯೂ ಆಪ್ ಗೆ ಬೆಂಬಲ ನೀಡುತ್ತದೆ ಎಂದು ಅಧಿಕೃತವಾಗಿ ಹೇಳಿಲ್ಲ. ಮತ್ತೆ ಕೇಜ್ರಿಯವರು ಬೇಡಿಕೆಗಳ ಪಟ್ಟಿ ಕಳುಹಿಸಿದ್ದಾದರೂ ಏಕೆ ? ಹೌದು ರಾಜಕೀಯ ಆಟವಾಡಲು ಹಿಂದೆಯೇ ಶುರು ಮಾಡಿದ್ದರು ! ಈಗ ಅಧಿಕಾರಕ್ಕಾಗಿ ಸೂಕ್ಷವಾಗಿ ಹೋರಾಟ. ಅಂದರೆ ನಾವು ಆಧಿಕಾರಶಾಹಿಗಳಲ್ಲ. ಜನಪರ ವ್ಯಕ್ತಿಗಳು ನಾವು ನಮ್ಮ ಬೇಡಿಕೆಗೆ ಯಾವುದೇ ಪಕ್ಷ ಬೆಂಬಲಿಸಿದರೂ ಮಾತುಕತೆಗೆ ಸಿದ್ದವೆಂಬ ಅಂಶವನ್ನು ಹೊರಹಾಕಿದರು. ಇದರ ಗೂಡಾರ್ಥ ತಮಗೆ ಅಧಿಕಾರ ಬೇಕಾಗಿದೆ, ಕಾಂಗ್ರೆಸ್ಸಿನೊಂದಿಗೆ ನೇರವಾಗಿ ಹೋದರೆ ಆಮ್ ಆದ್ಮಿ ಕಲ್ಲನ್ನು ಕೈಗೆತ್ತಿಕೊಂಡಾನು ಎಂಬ ಅನುಮಾನದಿಂದ ಎರಡೂ ಪಕ್ಷಗಳಿಗೆ ಪತ್ರವನ್ನು ಕಳುಹಿಸಿತು.
ಕಾಂಗ್ರೆಸ್ಸಿಗೂ ಬೇಕಾಗಿದ್ದೂ ಇದೇ! ಅತಂತ್ರವಾಗಿ 6 ತಿಂಗಳ ನಂತರ ಚುನಾವಣೆಯಾಗುವ ಸಮಯದಲ್ಲಿ ಉಳಿದ ತಮ್ಮ 8 ಸ್ಥಾನದ ಅಸ್ತಿತ್ವವೂ ಕಳೆದುಹೋಗುವ ಭಯ ಅದಕ್ಕಿತ್ತು. ಅಲ್ಲಿವರೆಗೆ ಬಳಲಿ ಸಾಯುವ ಬದಲು ಬಾಯಿಗೆ ಹನಿ ನೀರು ಹಾಕುತಿದ್ದರೆ ಜೀವಂತವಾಗಿ ಮುಂದೆ ಪುಟಿದೇಳಬಹುದು ಎಂಬ ದೃಢ ನಿರ್ದಾರ ಆ ಪಕ್ಷದ ವಕ್ತಾರರು ಮಾಡಾಗಿತ್ತು. ಕಾಂಗ್ರೆಸ್ಸಿನ ಈ ನಡೆ ಹೊಸದೇನು ಆಗಿರಲಿಲ್ಲ. ಹಿಂದೆ ತುರ್ತು ಪರಿಸ್ತಿತಿಯಲ್ಲಿ ಹೀನಾಯವಾಗಿ ಸೋತಿದ್ದಾಗ ಇಂದಿರಾವರು ಸಮಯ ನೋಡಿ ಜನತಾ ಸರಕಾರದ ಉಪಪ್ರಧಾನಿ ಚರಣ್ ಸಿಂಗ್ ರವರನ್ನು ತಮ್ಮ ಗಾಳಕ್ಕೆ ಸಿಲುಕಿಸಿದರು. ನಂತರ ಆರೇ ತಿಂಗಳುಗಳಲ್ಲಿ ಬೆಂಬಲ ಹಿಂತೆಗೆದುಕೊಂಡು ಸರಕಾರವನ್ನು ಬೀಳಿಸಿತು. ಇದೇ ನಡೆಯನ್ನು ರಾಜೀವ್ ಗಾಂಧಿ ಕೂಡ ಬಳಸಿದ್ದರು, ಬೋಫೋರ್ಸ್ ಹಗರಣ ಕುಖ್ಯಾತಿ ಪಡೆದ ಕಾಂಗ್ರೆಸ್ 1990ರಲ್ಲಿ ಜನತಾದಳವನ್ನು ಒಡೆದು ಹೊರಬಂದ ಚಂದ್ರಶೇಕರ್ ರವರಿಗೆ ಬಾಹ್ಯ ಬೆಂಬಲವನ್ನಿತ್ತರು. ಬೆಂಬಲ ಹಿಂಪಡೆಯಲು ರಾಜೀವ್ ಗಾಂಧಿ, ಹರಿಯಾಣ ಪೋಲಿಸರನ್ನು ಕಾವಲು ಕರ್ತವ್ಯಕ್ಕೆ ತಮ್ಮ ನಿವಾಸದ ಮುಂದೆ ನೇಮಿಸಿದ್ದರೆಂಬ ಹಾಸ್ಯಸ್ಪದ ಕಾರಣ ನೀಡಿದ್ದರು. ಹೀಗೆ ಕಾಂಗ್ರೆಸ್ ತನ್ನ ಕಷ್ಟದ ಸಮಯದಲ್ಲಿ ಆಡಳಿತ ಪಕ್ಷದಲ್ಲಿ ಬಂಡಾಯವೇಳುವವರನ್ನು ಬಾಹ್ಯಬೆಂಬಲದ ಮೂಲಕ ಹೊರತಂದು ಸರಕಾರ ರಚಿಸುವಂತೆ ಮಾಡಿ ಕೇವಲ ಆರು ತಿಂಗಳೊಳಗೆ ತನ್ನ ಖೆಡ್ಡಾಕ್ಕೆ ಬೀಳಿಸುತಿತ್ತು. ಇದೇ ಮಾದರಿಯಾಗಿ ದೆಹಲಿಯಲ್ಲಿ ಕಾಂಗ್ರೆಸ್ ಬೀಸಿದ ಬಲೆಗೆ ಆಪ್ ಅತ್ತಿತ್ತ ನೋಡಿಕೊಂಡು ಹೋಗಿ ಸಿಕ್ಕಿಹಾಕಿಕೊಂಡಿದೆ. ಆಪ್ ತನ್ನನ್ನು ತಾನು ಚಾಣಕ್ಷತನವೆಂದು ಬಿಂಬಿಸಿಕೊಳ್ಳಲು ಎಸ್ ಎಮ್ ಎಸ್ ರಾಜಕೀಯ ಶುರು ಮಾಡಿತು. ಆದರೆ ಪರದೆ ಹಿಂದೆ ಕಾಂಗ್ರೆಸ್ ನಗುತ್ತಿರುವುದು ಎದ್ದು ಕಾಣುತ್ತಿದೆ. ಕೇವಲ ಲೋಕಸಭೆಯವರೆಗೂ ಪರದೆ ಹಿಂದೆ ಆಟವಾಡುತ್ತಾರೆ. ಬಂಡಾಯವನ್ನು ವಿಜೃಂಭಿಸಿ ಹೊಸ ಪಕ್ಷದ ವಿಶ್ವಾಸ ನಷ್ಟಕ್ಕೀಡಾಗುವಂತೆ ಮಾಡಿ ಆಟದಲ್ಲಿ ಗೆದ್ದು ಬಿಡುವ ಹುನ್ನಾರ ಅವರ ಇತಿಹಾಸವನ್ನು ಗಮನಿಸಿದರೆ ಸ್ಪಷ್ಟವಿದೆ.
ಇದೀಗ ಕಾಂಗ್ರೆಸ್ಸಿಗರು ಆಪ್ ಪಕ್ಷವನ್ನು ಹೊಗಳಲು ಶುರು ಮಾಡಿದ್ದಾರೆ. ಅಂದರೆ ಬದಲಾವಣೆಯ ಮತ ಮೋದಿಯವರ ಕಡೆ ತಿರುಗದಿರಲಿ ಎಂಬ ಏಕೈಕ ಆಸೆಗೆ. ಮೋದಿಯವರ ವಿರುದ್ದ ತನ್ನೆಲ್ಲಾ ಅಸ್ತ್ರಗಳನ್ನು ಬಳಸಿ ವಿಫಲವಾದ ಯುಪಿಎ ಪರ್ಯಾಯವಾಗಿ ಮಾರ್ಗ ಕಂಡುಹಿಡಿದಿರುವುದು ಅರವಿಂದ್ ಕೇಜ್ರಿವಾಲ್ ಮೂಲಕ. ಈ ಅಸ್ತ್ರವನ್ನು ಈಗ ಲೋಕಸಭೆಗೆ ಯಶಸ್ವಿಯಾಗಿ ಬಳಸಲು ತನ್ನ ಹಿಡಿತವಿರುವ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿ ಬಳಸುತ್ತಿದೆ.ಇಲ್ಲಿ ಆಪ್ ಪಕ್ಷದವರು ಕೂಡ ದುಡುಕುವ ಪ್ರಯತ್ನಕ್ಕೆ ಕೈ ಇಟ್ಟಿದ್ದಾರೆ. ಈ ದೇಶದಲ್ಲಿ ಪ್ರಾಮಾಣಿಕರನ್ನು ಕೇವಲ ಖೆಡ್ಡಕ್ಕೆ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಹಿಂದಿನಿಂದಲೂ ಹಿಡಿತದಲ್ಲಿಟ್ಟುಕೊಂಡು ಬಂದಿದೆ. ಈ ಕುಟಿಲತೆಯಿಂದ ಕೇಜ್ರಿಯವರು ಪಾರಾಗುವ ಯಾವುದೇ ದಾರಿಗಳು ಎದುರಿನಲ್ಲಿ ಕಾಣುತ್ತಿಲ್ಲ. ತಮ್ಮ ಆಡಳಿತದಲ್ಲಿ ದಿನಗಳಲ್ಲಿ ಸಾಧಿಸುತ್ತೇವೆಂಬ ಅವರ ಮಾತುಗಳು ಸುಳ್ಳಾಗತೊಡಗಿವೆ. ಜನಲೋಕಪಾಲ್ ಬಗ್ಗೆ ಶೀಲರವರನ್ನು ಜೈಲಿಗೆ ಕಳುಹಿಸುವ ಬಗ್ಗೆ ಈ ರೀತಿಯ ಮಹಾನ್ ಕಾರ್ಯಗಳ ಬಗ್ಗೆ ಆಪ್ ಮುಖಂಡರು ಚಕಾರವನ್ನೇ ಎತ್ತುತ್ತಿಲ್ಲ. ಜೊತೆಗೆ ಕೆಲವೇ ದಿನದೊಳಗೆ ಬಿನ್ನಿಯವರು ಬಂಡಾಯ ಎದ್ದಿದ್ದಾರೆ. ಇಲ್ಲಿಯವರೆಗೆ ಹೊಸ ಪಕ್ಷವಾದರೂ ಹೊಸ ಸಾಧನೆ ಏನನ್ನೂ ಮಾಡಿಲ್ಲ, ಭಯಂಕರ ಸಾಧನೆ ಎಂಬಂತೆ ತೋರಿಸಿದ್ದು ಕೇವಲ ಮಾದ್ಯಮವಷ್ಟೇ.
ಲಂಚದ ಬಗ್ಗೆ ದೂರು ಸಲ್ಲಿಸಲು ದೂರವಾಣಿ ಸಂಖ್ಯೆ ಮೊದಲಿನಿಂದಲೂ ಗುಜರಾತಿನಲ್ಲಿದೆ. ವಿದ್ಯುತ್ ಬಿಲ್ ಕಡಿಮೆ ಗೋವದಲ್ಲಿ ಇವರಿಗಿಂತ ಕಡಿಮೆ ಇದೆ. ಸರಳ ಜೀವನ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಮನೋಹರ್ ಪರೀಕರ್ ಇನ್ನೂ ಹಲವಾರು ಮುಖ್ಯಮಂತ್ರಿಗಳಲ್ಲಿ ಕಾಣಬಹುದು. ಇವರಿಗಿಲ್ಲದ ಪ್ರಚಾರ ಗೆದ್ದ ದಿನ ಆಪ್ ಗೆ ಬರಲು ಕಾರಣವೇನು? ಇದೆಲ್ಲದರಲ್ಲೂ ” ಕೈ ” ವಾಡವಂತೂ ಖಂಡಿತಾ ಇದೆ. ಅಷ್ಟೇ ಏಕೆ ಕೃಷಿಗಾಗಿ, ಕುಡಿಯಲು ನೀರಿಗಾಗಿ ಕಾವೇರಿ ನದಿಯ ವಿವಾದ ಪ್ರತಿ ವರ್ಷ ಬೆನ್ನು ಬಿಡದಂತೆ ಕಾಡಿದೆ. ಎರಡೂ ರಾಜ್ಯಗಳು ಕೇವಲ ನ್ಯಾಯಾಲಯದ ತೀರ್ಪಿಗಾಗಿ ಕಿತ್ತಾಡುತ್ತಿವೆ. ಅದೂ ಮಲೆನಾಡಿನಲ್ಲಿ ಈ ಪರಿ ಹೋರಾಟ. ಅದೇ ಗುಜರಾತಿನ ಬಂಜರು ಭೂಮಿಯಲ್ಲಿ ಇಂದು ಯಾವ ಸಮಸ್ಯೆ ಇಲ್ಲದೇ ರೈತ ಕೃಷಿ ಮಾಡುತಿದ್ದಾನೆ! ಅಲ್ಲಿನ ಅಂತರ್ಜಲ ಮಟ್ಟ ದಿನೆದಿನೆ ಏರುತ್ತಿದೆ. ಎಂದಾದರೂ ಮಾದ್ಯಮ ಈ ವಿಚಾರವನ್ನು ಕರ್ನಾಟಕಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದೆಯೇ? ಅಥವ ಇಲ್ಲಿಯ ರಾಜಕಾರಣ ಅದನ್ನು ಯೋಚಿಸುವ ಪರಿಜ್ಞಾನವನ್ನು ಬೆಳೆಸಿಕೊಂಡಿದೆಯೇ ? ಒಳ್ಳೆಯ ವಿಚಾರಗಳನ್ನು ಮಾದ್ಯಮ ತನ್ನ ಉಳಿವಿಗಾಗಿ ಒಮ್ಮೊಮ್ಮೆ ಪ್ರದರ್ಶಿಸುತ್ತಿದೆ ವಿನಃ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿಲ್ಲ.
ಅಣ್ಣಾರವರ ಲೋಕಪಾಲ್ ಹೋರಾಟಕ್ಕೆ ಯಶಸ್ಸು ಸಿಕ್ಕಾಗ ಇದೇ ಅರವಿಂದ್ ಕೇಜ್ರಿವಾಲ್ ಮೂಗು ಮುರಿದು ಜೋಕ್ ಪಾಲ್ ಎಂದು ಮೂದಲಿಸಿದರು. ಅದಲ್ಲದೇ ಅಣ್ಣಾ ಈ ಮಸೂದೆಯನ್ನು ಒಪ್ಪಬಾರದಿತ್ತು, ಅವರು ಉಪವಾಸವನ್ನು ಮುಂದುವರೆಸಬೇಕೆಂದು ಸಲಹೆ ಕೊಡುವುದು ಎಷ್ಟು ಹಾಸ್ಯಸ್ಪದ. ಯಾವ ಹೋರಾಟದಿಂದ ಪ್ರಯೋಜನವಿಲ್ಲವೆಂದು ರಾಜಕೀಯಕ್ಕೆ ದುಮುಕಿದ್ದರೋ ಅದೇ ಹೋರಾಟವನ್ನು ಇವರು ಸಮರ್ಥಿಸುವುದು ಅವರ ದ್ವಂದ್ವಕ್ಕೆ ಕಾರಣ. ಅಣ್ಣಾ ಹಜಾರೆಯವರ ವಯಸ್ಸೇನು ಇವರ ವಯಸ್ಸೇನು? ಹತ್ತು ದಿನಕ್ಕೆ ಸುಸ್ತಾಗಿ ಸೋತು ಉಪವಾಸ ಬಿಟ್ಟ ಇವರು ಅದೇ ಹತ್ತು ದಿನಕ್ಕೆ ಗೆದ್ದ ಅಣ್ಣಾ ಹಜಾರೆಯವರಿಗೆ ಸಲಹೆ ಕೊಡುವುದು ದೊಡ್ಡ ವಿಡಂಬಣೆಯೇ ಸರಿ. ಅವರ ಆತ್ಮಸಾಕ್ಷಿ ಕೆಣಕದಿದ್ದದು ಅತ್ಯಾಶ್ಚರ್ಯ. ಪ್ರಚಾರವೊಂದೇ ಆಪ್ ಪಕ್ಷದ ಹೆಗ್ಗಳಿಕೆ ವಿನಃ ಸಾಧನೆಯಲ್ಲ. ಸಾಧಿಸಲು ದೆಹಲಿ ಸಿಕ್ಕಿದೆ. ಸಾಧಿಸಿ ತೋರಿಸಿದ ನಂತರ ದೇಶ ಸಿಗುತ್ತದೆ. ಅಲ್ಲಿಯವರೆಗೆ ಆ ಪಕ್ಷಕ್ಕೆ ತಾಳ್ಮೆ ಇದ್ದಂತಿಲ್ಲ. ತನ್ನ ಕಾಲ ಮೇಲೆ ತಾನೆ ಕಲ್ಲೆತ್ತಿ ಹಾಕಿಕೊಳ್ಳುವ ಪ್ರಯತ್ನ ಮುಂದುವರೆಸಿದೆ.
ಕೇಜ್ರಿವಾಲರ ರಾಜಕೀಯ ನೋಡಿದರೆ ಹೊಸ ನಟನೊಬ್ಬ ನಾಯಕನಾಗಿ ಅವನ ಸಿನಿಮಾ ನೂರು ದಿನ ಬಾಕ್ಸ್ ಆಫೀಸ್ ತುಂಬಿಸಿ ಎರಡನೇ ಚಿತ್ರ ಬೋರ್ದ್ ಗೆ ಇಲ್ಲದಾಗುತ್ತದಲ್ಲ ಹಾಗಿದೆ. ರಾಜಕೀಯ ಅಷ್ಟು ಸುಲಭದ ಹಾದಿಯಲ್ಲ. ಪ್ರತಿ ನಡೆಯನ್ನೂ ಎಚ್ಚರದಿಂದ ಇಡಬೇಕು. ಇಲ್ಲವಾದರೆ ಸೋಲು ಖಂಡಿತ. ಕಾಯುವ ತಾಳ್ಮೆ ಇಲ್ಲದ ಅವಸರದ ವ್ಯಕ್ತಿಗೆ ರಾಜಕೀಯ ಸಲ್ಲದ ಕ್ಷೇತ್ರ.
http://ladaiprakashanabasu.blogspot.in/2014/01/blog-post_1834.html
“ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಶಾಂತಿ ಮತ್ತು ಸೌಹಾರ್ದತೆಯಲ್ಲಿ ನಂಬಿಕೆಯಿರುವ ಎಲ್ಲರೂ ಕೋಮು ಸೌಹಾರ್ದತೆಗಾಗಿ ಬಲಿದಾನ ಮಾಡಿದ ಗಾಂಧೀಜಿಯನ್ನು ಎಂದಿಗೂ ಮರೆಯಬಾರದು. ಗಾಂಧಿ ಹತ್ಯೆ ನಂತರ ಭೂಗತರಾದಂತೆ ಇದ್ದ ಈ ಫ್ಯಾಸಿಸ್ಟರು 1992ರಲ್ಲಿ ಒಮ್ಮೆಲೇ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಿ ತಮ್ಮ ಅಸ್ತಿತ್ವ ತೋರಿಸಿಕೊಂಡರು. ಆಗ ಅಡ್ವಾಣಿ ನಡೆಸಿದ ರಥಯಾತ್ರೆ ಚಕ್ರಕ್ಕೆ ಸಾವಿರಾರು ಜನ ಬಲಿಯಾದರು. ನಂತರ ಗುಜರಾತ್‌ನಲ್ಲಿ ಅದರ ಪುನರಾವರ್ತನೆಯಾಯಿತು. ಈಗ ದೇಶವನ್ನು ಗುಜರಾತ್ ಮಾಡಲು ನಮೋ ಹಂತಕ ಪಡೆ ದಾಪುಗಾಲಿಡುತ್ತ ಬರುತ್ತಿದೆ.
ಗಾಂಧಿ ಬಿರ್ಲಾರಂತಹ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ಟೀಕಿಸುತ್ತಿದ್ದ ಕಮ್ಯುನಿಸ್ಟರು ವೈಯಕ್ತಿಕವಾಗಿ ಗಾಂಧಿ ಬಗ್ಗೆ ತುಂಬಾ ಗೌರವದ ಭಾವನೆ ಹೊಂದಿದ್ದರು. ಆದರೆ ಪ್ರಜಾಪ್ರಭುತ್ವ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲದ ಫ್ಯಾಸಿಸ್ಟ್ ಪರಿವಾರ ತನ್ನ ನಿಲುವನ್ನು ಒಪ್ಪದ ಗಾಂಧೀಜಿಯನ್ನು ಬಲಿ ತೆಗೆದುಕೊಂಡಿತು. ಈಗಲೂ ಭಾರತ ಗಾಂಧಿ ಹಂತಕ ಪಡೆಯ ಭೀತಿಯನ್ನು ಎದುರಿಸುತ್ತಲೇ ಇದೆ. ಈ ದೇಶ ಶಾಂತಿ ಮತ್ತು ನೆಮ್ಮದಿಯಿಂದ ಮುನ್ನಡೆಯಬೇಕಾದರೆ, ಈ ಫ್ಯಾಸಿಸ್ಟ್ ಪರಿವಾರ ನಿರ್ನಾಮವಾಗಬೇಕು.”
-100
😀
ರಾಹುಲ್ ಗಾಂಧಿಗೆ ತರಭೇತಿ ನಿಮ್ಮದೇ ಅಂತೆ ಹೌದೆ ಶೆಟ್ಕರ್ ಸಾಯೇಬ್ರೆ 😉
+1
ಗಾಂಧೀಜಿಯವರನ್ನು ಮರೆತವರು ಯಾರು ? ಶಾಂತಿಯಾಗಿ ಬಾಳುವ ಬದಲು ರಾಜಕೀಯದಲ್ಲಿ ಮತವನ್ನು ಬೆರೆಸಿ ಸಾಮಾನ್ಯ ಜನ ಉಗ್ರರಾಗುತ್ತಿರುವಂತೆ ಮಾಡುತ್ತಿರುವುದು ಯಾರು ? ಕಳೆದ 6 ದಶಕಗಳಲ್ಲಿ ನಾವು ಕೋಮು ಸೌಹರ್ದವನ್ನು ಸಾಧಿಸಿದ್ದೇವೆಯೇ ? ಇಷ್ಟು ವರ್ಷಗಳಲ್ಲಿ ಶಾಂತಿ, ಜಾತ್ಯತೀತತೆ ಇರುವ ಸರಕಾರಗಳಲ್ಲವೇ ಆಡಳಿತ ನಡೆಸಿದ್ದು ! ಯಾವ ಗುಣಗಳಿಗಾಗಿ ಇಡೀ ಪಕ್ಷವನ್ನು ಅಥವಾ ಪರಿವಾರವನ್ನು ಫ್ಯಾಸಿಸ್ಟ್ ಎಂದು ಕರೆಯುತ್ತೀರಿ ? ಅಯೋದ್ಯೆಯನ್ನು ಮೊದಲು ಕೆಣಕಿದ್ದು ಯಾರು ? ಸ್ಥಳೀಯ ಸಮಸ್ಯೆಯನ್ನು ರಾಜಕೀಯಗೊಳಿಸಿದ್ದು ಅದೇ ಜಾತ್ಯತೀತ ಕಾಂಗ್ರೆಸ್ ಅಲ್ಲವೇ ? ಮಂದಿರವಿದ್ದ ಪುರಾವೆಗಳು ಖಚಿತವಾದ ಮೇಲೆ ಕ್ರಮ ಕೈಗೊಳ್ಳಲು ಸರಕಾರ ಹಿಂದೆ ಮುಂದೆ ನೋಡಿದ್ದೇಕೆ ? ಪರದೇಶಿಯವನ್ನೊಬ್ಬನು ಮಂದಿರವನ್ನು ಕೆಡವಿ ಕಟ್ಟಿದ ಕಟ್ಟಡವನ್ನು ಇಲ್ಲಿನವರು ಸಹಿಸುವುದೆಂತು ? ಮಂದಿರ ರಾಜಕೀಯವಾಗಿ ವಿವಾದವಾಗುವಾಗ ಹಿಂದುಗಳಿಗೆ ರಾಜಕೀಯ ನ್ಯಾಯ ಒದಗಿಸಲು ಬಂದ ಪಕ್ಷಗಳಿಗೆ ನೀವೇಕೆ ಫ್ಯಾಸಿಸ್ಟ್ ಎನ್ನುತ್ತೀರಿ ? ಸ್ವಾತಂತ್ರ್ಯ ಕೊಟ್ಟಿದ್ದು ನಮ್ಮತನವನ್ನು ಸ್ವಾಭಿಮಾನವನ್ನು, ಉಳಿಸಿಕೊಳ್ಳಲು ಮತ್ತು ಭವ್ಯ ಭಾರತವನ್ನು ಕಟ್ಟಲು ಹೊರತು ಪರದೇಶಿಗಳ ಕೂಹಕ ಇತಿಹಾಸವನ್ನು ಉಳಿಸಿಕೊಳ್ಳಲು ಅಲ್ಲ.
ಅಡ್ವಾಣಿಯವರು ನಡೆಸಿದ ಯಾವ ರಥ ಯಾತ್ರೆಯಲ್ಲಿ ಸಾವಿರಾರು ಜನ ಸಿಕ್ಕು ಬಲಿಯಾದರು ? ಅವರನ್ನು ರಥದಡಿಗೆ ಮಲಗಿಸಿದವರು ಯಾರು ! ಕನ್ನಡದ ಶಂಕರ್ ನಾಗ್ ರವರ ಆಕ್ಸಿಡೆಂಟ್ ಸಿನಿಮ ತರವೇ ? ಸಲ್ಮಾನ್ ಖಾನ್ ಮಲಗಿಕೊಂಡಿದ್ದವರ ಮೇಲೆ ಕಾರು ಹತ್ತಿಸಿಕೊಂಡು ಹೋದ ತರವೇ ? ಯಾವ ರೀತಿ ? ಗುಜರಾತಿನಲ್ಲಿ ಘಟನೆ ನಡೆಯಲು ಕಾರಣವೇನು ? ಅದರ ಬಗ್ಗೆ ಯೋಚಿಸಬೇಕಲ್ಲವೇ ? ಕ್ರಿಯೆಗೆ ಸಿಕ್ಕ ಪ್ರತಿಕ್ರಿಯೆ ಅದು, ಗುಜರಾತಿನ ಮುಖ್ಯಮಂತ್ರಿಗಳಿಗೆ ಪಕ್ಕದ ಮೂರು ರಾಜ್ಯದ ಕಾಂಗ್ರೆಸ್ ಸರಕಾರ ಪೋಲಿಸ್ ವ್ಯವಸ್ತೆ ಕಳುಹಿಸಿ ಸಹಾಯ ಮಾಡಲಿಲ್ಲ! ಜನರು ವ್ಯಗ್ರರಾಗಿರುವಾಗ ಮೋದಿ ಇದ್ದರೇನು ಕಮ್ಯುನಿಷ್ಟರು ಇದ್ದರೇನು ? ಅಷ್ಟಕ್ಕೂ ಮೋದಿ ಮೇಲಿರುವ ಎಲ್ಲಾ ಕೇಸಿನಿಂದ ಕ್ಲೀನ್ ಚಿಟ್ ಸಿಕ್ಕಿದೆಯಲ್ಲವೇ ? ಆದರೂ ನಿಮ್ಮ ಅನುಮಾನವೇಕೆ ? ನಿಮ್ಮ ಅನುಮಾನವನ್ನು ಖಚಿತಪಡಿಸುವ ಸಾಕ್ಷ್ಯವಿದ್ದರೆ ಸುಪ್ರಿಂ ಕೋರ್ಟಿಗೆ ಸಲ್ಲಿಸಬಹುದಲ್ಲವೇ , ಇಲ್ಲದಿದ್ದರೆ ಈ ದೇಶದ ನ್ಯಾಯಾಂಗ ವ್ಯವಸ್ತೆಯನ್ನು ಅಣಕಿಸುತಿದ್ದೀರೆಂದು ಅರ್ಥವಲ್ಲವೇ ?
‘ದೇವರಂತೆ ಧರ್ಮವಂತೆ
ಜಾತಿಯಂತೆ ಪಂಥವಂತೆ
ಜನ ಜನಗಳ ಒಡೆಯಲಿಕ್ಕೆ
ಬಡ ಜನಗಳ ಸುಲಿಯಲಿಕ್ಕೆ
ಎಂಥೆಂಥ ಮಂತ್ರವೋ
ಎಂಥೆಂಥ ತಂತ್ರವೋ ’
(ಆರ್.ವಿ ಭಂಡಾರಿ, ’ಸಿಮೋಲ್ಲಂಘನೆ’)
‘ಹೊತ್ತು ಮುಳುಗುವ ಮುನ್ನ ಹೊತ್ತು ನಡೆಯುವ ಬನ್ನಿ
ಜಿಗಿದು ಅಡಿಗೆ ದೇವರ ಕೋಣೆಯ ತುಳಿದು
ಉಪ್ಪರಿಗೆನ್ನೇರಿ ಅಗಳಿ ಮುರಿದು
ಕುದಿವ ಸಹಸ್ರ ಕಿರಣಗಳ
ಎಸಳು ಎಸಳಿಗೆ ಉಜ್ಜಿ ಪ್ರೀತಿ ಮುಕ್ಕುವುದಕ್ಕೆ
ಹೆಪ್ಪು ಕರಗಲೇಬೇಕು ದ್ರವಿಸಿ ಪಾರಜವಾಗಿ
ಜುಟ್ಟು ಜನಿವಾರಗಳ ಗೋಸುಂಬೆಗಳ ಬಾಯಿಗಳ
ಕಚಕಚ ಕೊಚ್ಚಿ ಬೇಲಿ ಬಿಚ್ಚುವುದಕ್ಕೆ
ಮತ್ತೆ ಮತ್ತೆ ಕಾಯುವುದಿಲ್ಲ’
(ಜಿ. ಎಸ್. ಅವಧಾನಿ, ’ಗಂಗೋತ್ರಿಯ ಹಕ್ಕಿಗಳ’)
ದರ್ಗಾ ಸರ್ ಕೂಡ ಇಂತದ್ದೇ ಅರ್ಥದ ವಿಚಾರಗಳನ್ನು ಹೇಳಿದ್ದರೆ ಅದು ಈಗ ಸಿಗದಿದ್ದರಿಂದ ಅವರದೇ ವಿಚಾರಗಳನ್ನು ಹೇಳಿರುವ ಈ ಕವನಗಳನ್ನು ಉಲ್ಲೇಖಿಸಿದ್ದೇನೆ. ಇನ್ನೆಷ್ಟು ಕಾಪಿ ಪೇಸ್ಟುಗಳನ್ನು ಮಾಡಲಿ ನಿಮ್ಮ ಅಜ್ಞಾನವನ್ನು ತೊಳೆಯಲು ಮತ್ತು ಮುಖವಾಡವನ್ನು ಕಳಚಲು
ಸ್ವಧರ್ಮಮಪಿ ಚಾವೇಕ್ಷ ನ ವಿಕಮ್ಪಿತುಮರ್ಹಸಿ |
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋನ್ಯತ್ ಕ್ಚತ್ರೀಯಸ್ಯ ನ ವಿದ್ಯತೇ
-ಭಗವದ್ಗೀತ
ಆ ಯಪ್ಪನಿಗೆ ಭಗವದ್ಗೀತೆ ಹೇಳ್ತೀರಲ್ರೀ ನವೀನ, ಖುರಾನ್ ಹೇಳಿ. ಇಲ್ಲ ಅಭಿನವ ಚನ್ನಬಸವನ ಖುರಾನಿಗೆ ಸಮನಾದ ವಚನಗಳನ್ನು ಉಲ್ಲೇಖಿಸಿ
huh. 🙂 ಕುರಾನಿಗೆ ವಚನಗಳು ಸಮವೇ