ಫೇಸ್ಬುಕ್ ಗ್ರಾಫ್ ಸರ್ಚ್
– ರಾಘವೇಂದ್ರ ಎಂ. ಸುಬ್ರಹ್ಮಣ್ಯ
ನೀವೆಲ್ಲ ಫೇಸ್ಬುಕ್ಕನ್ನು ಯಾವ ಕಾರಣಕ್ಕಾಗಿ ಬಳಸುತ್ತೀರಿ!? ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆನ್ನುವುದನ್ನು ತಿಳಿಯಲು, ನಿಲುಮೆಯ ಫೇಸ್ಬುಕ್ಕ್ ಗುಂಪಲ್ಲಿ ತರತರದ ಚರ್ಚೆಗಳನ್ನು ಮಾಡಲು, ನಿಮ್ಮ ಕವನರಚನೆ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿವಿದ ರೀತಿಯ ಕೌಶಲ್ಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಅಲ್ಲವೇ? ಆದರೆ ಯಾರದರೂ ಯಾವುದಾದರೂ ಚರ್ಚೆಯಲ್ಲಿ ‘binomial theorem’ ಅಂದಕೂಡಲೇ, ಅಥವಾ “cervical cancer” ಬಗ್ಗೆ ಮಾತನಾಡಿದಕೂಡಲೇ ನೀವೇನು ಮಾಡುತ್ತೀರಿ? ಇನ್ನೊಂದು ಟ್ಯಾಬ್ ತೆಗೆದು ಅಲ್ಲಿ ಆ ವಿಷಯದ ಬಗ್ಗೆ ‘ಗೂಗಲ್’ನಲ್ಲಿ ಮಾಹಿತಿ ಹುಡುಕುತ್ತೀರಿ.
ಆದರೆ, ಫೇಸ್ಬುಕ್ ತನ್ನದೇ ಆದ ಹುಡುಕುಯಂತ್ರ(search engine)ವನ್ನು ತಂದಿದೆ ಎನ್ನುವ ವಿಚಾರ ಬಹಳ ಜನರಿಗೆ ತಿಳಿದಂತಿಲ್ಲ. ಗ್ರಾಫ್ ಸರ್ಚ್ ಎನ್ನುವ ಈ ಹೊಸ ಕೊಡುಗೆ ನಿಮ್ಮ ಫೇಸ್ಬುಕ್ ಪೇಜಿನಲ್ಲಿ ಅಡಗಿ ಕುಳಿತಿದೆ. ಇದು ಅಂತಿಂತ ಕೊಡುಗೆಯಲ್ಲ. ಬಹಳ ಕಿಲಾಡಿ ಹಾಗೂ ಬಹಳ ಉಪಯುಕ್ತವಾದುದು. ಗೂಗಲ್ ಹೇಗೆ ನಿಮಗೆ ಬೇಕಾದ ಮಾಹಿತಿಯನ್ನು ಅಂತರ್ಜಾಲದಲಿ ಹುಡುಕಿ ತೆಗೆಯುತ್ತದೆಯೋ, ಹಾಗೆಯೇ ಇದನ್ನು ಉಪಯೋಗಿಸಿ ನೀವು ನಿಮ್ಮ ಫೇಸ್ಬುಕ್ ಸ್ನೇಹಿತರು ಏನು ಮಾಡುತ್ತಿದ್ದಾರೆ? ಯಾರು ನಿಮಗೂ ಸಹ ಇಷ್ಟವಾದ ಪುಸ್ತಕಗಳನ್ನು ಓದುತ್ತಿದ್ದಾರೆ? ನಿಮ್ಮತರಹದೇ ಅಭಿರುಚಿ ಇರುವ ಜನರು ಎಲ್ಲಿದ್ದಾರೆ? ಯಾರಿದ್ದಾರೆ? ಎಂದು ಹುಡುಕಬಹುದು. ಇದೊಂದು ಬಹಳ ಸರಳವಾದ ಲಾಕ್ಷಣಿಕ ಹುಡುಕುಯಂತ್ರ(semantic search engine).
ಅಂದರೆ ನೀವು ದಾರಿಯಲ್ಲಿ ಹೋಗೋ ಜನರ ಹತ್ರ ಹೇಗೆ ಅಡ್ರೆಸ್ ಕೇಳ್ತೀರೋ ಹಾಗೆಯೇ ಇಲ್ಲಿ ಕೇಳಬಹುದು. ಯಾವುದೇ ಪ್ರೋಗ್ರಾಮಿಂಗ್ ಅಧ್ಯಯನ ಮಾಡಬೇಕಿಲ್ಲ. ಉದಾಹರಣೆಗೆ:
• ನಾನು “People who live in Dubai, United Arab Emirates from Bangalore, India” ಅಂಥಾ ಹುಡುಕಿ ದುಬೈನಲ್ಲಿ ನೆಲೆಸಿರುವ ಬೆಂಗಳೂರಿನ ಜನರ ಸಂಪರ್ಕ ಬೆಳೆಸಿಕೊಳ್ಳಬಹುದು.
• ನೀವು “People who live in Bangalore, India and who like Cycling” ಅಂಥಾ ಹುಡುಕಿ ನೀವೇ ಒಂದು ಸೈಕ್ಲಿಂಗ್ ಕ್ಲಬ್ ಶುರುಹಚ್ಚಿಕೊಳ್ಳಬಹುದು.
• “My friends who like Santeshivara Lingannaiah Bhyrappa ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ” ಅಂಥಾ ಹುಡುಕಿ ನಿಮ್ಮ ಫೇಸ್ಬುಕ್ ಸ್ನೇಹಿತರಲ್ಲಿ ಯಾರ್ಯಾರಿಗೆ ಬೈರಪ್ಪನವ ಬಗ್ಗೆ ಆಸಕ್ತಿ ಇದೆ ಅಂಥಾ ತಿಳ್ಕೋಬಹುದು. [“My freinds” ಪದವನ್ನು ತೆಗೆದು “People” ಅಂಥಾ ಹಾಕಿದ್ರೆ, ನಿಮ್ಮ ಸ್ನೇಹಿತರು ಮಾತ್ರವಲ್ಲದೇ ಅವರ ಸ್ನೇಹಿತರು ಹಾಗೂ ಯಾರು-ಯಾರು ಬೈರಪ್ಪ ಇಷ್ಟ ಅಂಥಾ ಫೇಸ್ಬುಕಿನಲ್ಲಿ ಹೇಳ್ಕೊಂಡಿದ್ದಾರೋ ಅವರೆಲ್ಲರ ಪ್ರೊಫೈಲ್ ಗಳು ತೋರಿಸಲ್ಪಡುತ್ತವೆ].
• ಅಮೇರಿಕಾ ಅಥವಾ ಯೂರೋಪಿನಲ್ಲಿರುವ ಹುಡುಗಿಯರಾದರೆ “Who are single men in San Francisco and are from India” ಅಂಥಾ ಹುಡುಕಿಕೊಂಡು (ಕೊಳಕ್ಕೆ ಕಲ್ಲೆಸೆದು) ಭಾರತೀಯ ಹುಡುಗರನ್ನು ಡೇಟಿಂಗ್ ಪ್ರಯತ್ನಗಳನ್ನು ಮಾಡಬಹುದು
• ನಾನು H.Rನಲ್ಲಿ ಕೆಲಸಮಾಡುವುದ್ದರಿಂದ ನನ್ನ ಕಂಪನಿಗೆ ಹ್ಯಾಲಿಬರ್ಟನ್ ಎಂಬ ಕಂಪನಿಯಿಂದ ಮೆಕ್ಯಾನಿಕಲ್ ಎಂಜಿನಿಯರ್ ಗಳು ಬೇಕಾಗಿದ್ದರೆ “Mechanical Engineers who work at Halliburton” ಅಂಥಾ ಹುಡುಕಿ ಮಿಕಗಳನ್ನು ಬಲೆಗೆ ಹಾಕ್ಕೋಬಹುದು
• ನೀವು ವೆನಿಸ್ ಗೆ ಹನಿಮೂನಿಗೆ ಹೋಗ್ತಾ ಇದ್ದೀರಾ? ಅಲ್ಲಿಗೆ ಇದಕ್ಕಿಂತಾ ಮುಂಚೆ ಹನಿಮೂನಿಗೆ ಹೋದವರ ಫೋಟೊಗಳನ್ನ ನೋಡಿ, ಆಮೇಲೆ ಹೋಗೋದೋ ಬೇಡ್ವೋ ಅಂಥಾ ನಿರ್ಧರಿಸಬೇಕೆ? “Honeymoon photos taken in Venice, Italy” ಅಂಥಾ ಹೋಡೀರಿ.
• ಮನೆಯಿಂದಾ ಫೋನ್ ಮಾಡಿ “ಶ್ರಿಂಗೇರೀಲಿ ಖಂಡಾಬಟ್ಟೆ ಮಳೆ ಮಾರಾಯ” ಅಂಥಾ ಹೇಳಿದ್ರಾ?. ಎಷ್ಟೊಂದು ನೆರೆ ಬಂದಿದೆ ಅಂಥಾ ಎಲ್ಲರೂ ಹೇಳಿ ಹೊಟ್ಟೆ ಉರಿಸಿದ್ರಾ?? “Recent photos taken in Sringeri” ಅಂಥಾ ಹೊಡೆದು ಫೋಟೋಗಳನ್ನು ನೋಡಿ “ಮಠದಲ್ಲಿ ಹದಿನಾರನೇ ಮೆಟ್ಲಿಗೆ ನೀರು ಬಂತಾ!!??” ಅಂಥಾ ಮೂಗಿನ ಮೇಲೆ ಅಥವಾ ಮೂಗಿನೊಳಗೆ ಬೆರಳಿಟ್ಕೋಬಹುದು
• ಕ್ಯಾನ್ಬೆರ್ರಾದಲ್ಲಿದ್ದೀರಿ, ಇಂಡಿಯನ್ ಫುಡ್ಡು ತಿನ್ಬೇಕು ಅಂಥಾ ನಾಲಗೆ ತೊಂದರೆ ಕೊಡ್ತಾ ಇದ್ಯಾ? ಯಾವ ಹೋಟ್ಲು ಬೆಸ್ಟು ಅಂಥಾ ಗೊತ್ತಿಲ್ವಾ? ಗೂಗಲ್ ಮಾ ಡಬಹುದು ಹೌದು. ಆದರೆ ಅದರಲ್ಲಿ ಬರುವ ಉತ್ತರಗಳು ಕೆಲವೊಮ್ಮೆ ಜಾಹೀರಾತುಗಳಾಗಿರ್ತವೆ. ವಸ್ತುನಿಷ್ತವಾದ ಅವಲೋಕನಗಳು ಸಿಗುವುದು ಕಷ್ಟ ಅನ್ನಿಸ್ತೆದೆಯಾ? “My friends who checked in at Indian restaurants in Canberra, Australian Capital Territory” ಅಂಥಾ ಹುಡುಕಿ. ನಿಮ್ಮ ಸ್ನೇಹಿತರು ಯಾರು ಅಲ್ಲಿಗೆ ಹೋಗಿದ್ರು ನೋಡಿ ಒಂದು ಫೋನು ಹೊಡೀರಿ
ಇಷ್ಟೇ ಅಲ್ಲದೆ, ಈ ಎಲ್ಲಾ ಹುಡುಕಾಟಗಳನ್ನು ಮತ್ತು ಉತ್ತರಗಳನ್ನು ಪೇಜಿನ ಬಲಭಾಗದಲ್ಲಿರುವ “Refine this search” ಬಳಸಿ ಇನ್ನೂ ನಿಖರ ಉತ್ತರಗಳನ್ನು ಪಡೆಯಬಹುದು. ಬಂದಿರುವ ಉತ್ತರಗಳನ್ನು ವ್ಯಕ್ತಿಗಳ ಊರು, ಹೆಸರು, ವಿಳಾಸ, ವಿಧ್ಯಾರ್ಹತೆ ಯಾವ ಮಾನದಂಡವನ್ನು ಬೇಕಾದರೂ ಉಪಯೋಗಿಸಿ ಫಿಲ್ಟರ್ ಮಾಡಬಹುದು!!! ಹೆಂಗೆ!?
ಇದನ್ನು ಉಪಯೋಗಿಸಲು ನಿಮ್ಮ ಫೇಸ್ಬುಕ್ ಪೇಜಿನಲ್ಲಿ ಎಡಬಾಗದಲ್ಲಿ ನಿಮ್ಮ ಹೆಸರಿನ ಸ್ವಲ್ಪ ಕೆಳಗೆ “Browse” ಎನ್ನುವ ಒಂದು ಕೊಂಡಿ ಇದೆ ನೋಡಿ. ಇದರ ಮೇಲೆ ಕ್ಲಿಕ್ಕಿಸಿ. ಫೇಸ್ಬುಕ್ ಸುಮ್ಮನೆ ಒಂದು ಮನಬಂದ ಹುಡುಕಾಟ ಮಾಡಿ ಒಂದು ಪುಟವನ್ನು ತೋರಿಸುತ್ತದೆ. ಇಲ್ಲಿಂದ ನೀವು ಮುಂದುವರಿಸಬಹುದು.
ನೀವು ಕೇಳಿದ ಪ್ರಶ್ನೆಗೆ ಫೇಸ್ಬುಕ್ಕಿನ ಒಳಗೆ ಉತ್ತರ ಸಿಗದಿದ್ದಾಗ, ಈ ಹುಡುಕುಯಂತ್ರ ಅಲ್ಲಿಂದ ಒಂದು ಹೆಜ್ಜೆ ಮುಂದೆ ಹೋಗಿ ಅಂತರ್ಜಾಲವನ್ನೆಲ್ಲಾ ಹುಡುಕಾಡಿ ಕೆಲವು ಉತ್ತರಗಳನ್ನು ನಿಮಗೆ ಕೊಡುತ್ತದೆ. ಇದರಲ್ಲಿ ಸಿಗುವ ಉತ್ತರಗಳನ್ನು ಫಿಲ್ಟರ್ ಮಾಡಲಾಗದಿದ್ದರೂ, ಉತ್ತರಗಳು ಗೂಗಲ್ಲಿನಷ್ಟೇ ಪರಿಣಾಮಕಾರಿ. ಹೀಗೆ, ಈ ಹುಡುಕುಯಂತ್ರ ವೆಬ್ ಜಗತ್ತಿನ ಎರಡೂ ಮಗ್ಗುಲಿನಲ್ಲಿ (ಫೇಸ್ಬುಕ್ ಹಾಗೂ ಅಂತರ್ಜಾಲ) ಹುಡುಕಿ ನಿಮಗೆ ಉತ್ತರಗಳನ್ನು ನೀಡುತ್ತದೆ. ಸಾಮನ್ಯ ಮನುಷ್ಯನೊಬ್ಬ ತಿಂಗಳಿಗೆ ಹದಿನೈದೂವರೆ ಘಂಟೆ ಫೇಸ್ಬುಕ್ ಎಂಬ ಪೇಜಿನಲ್ಲಿಯೇ ಕಳೆಯುತ್ತಾನೆಂಬ ಅಂಕಿಅಂಶಗಳ (http://www.statisticbrain.com/social-networking-statistics/) ಮಹತ್ವವನ್ನರಿತ ಫೇಸ್ಬುಕ್ ಈ ಹುಡುಕುಯಂತ್ರಕ್ಕೆ ಚಾಲನೆ ಕೊಟ್ಟಿದೆ. ಜನ ಫೇಸ್ಬುಕ್ನಲಿ ಸಮಯ ಕಳೆಯೋದಕ್ಕೂ ಈ ಹುಡುಕುಯಂತ್ರಕ್ಕೂ ಏನು ಸಂಬಂಧ ಅಂತಾ ಯೋಚಿಸ್ತಿದ್ದೀರಾ? ಹೇಳ್ತೀನಿ ಕೇಳಿ…
ಅಂತರ್ಜಾಲದ ಹುಡುಕು ಮಾರುಕಟ್ಟೆ(searching business)ಯಲ್ಲಿ ಗೂಗಲ್ ಎಂಬ ದೈತ್ಯ ಕಂಪನಿ ಬಹಳ ವರ್ಷಗಳಿಂದ ತನ್ನ ಪ್ರಾಬಲ್ಯ ಮೆರೆದಿದೆ. ಹುಡುಕುವುದು ಅಂದರೆ ‘ಗೂಗಲ್’ ಮಾಡುವುದು ಎನ್ನುವ ಪದಬಳಕೆ ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡುವಷ್ಟರ ಮಟ್ಟಿಗೆ ಗೂಗಲ್ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ‘ಗೂಗಲ್’ನ ಮುಖ್ಯ ಉತ್ಪನ್ನ ಅದರ google.com ಎನ್ನುವ ಹುಡುಕುಯಂತ್ರವಾದರೂ, ‘ಗೂಗಲ್’ಗೆ ಅತೀ ಹೆಚ್ಚಿನ ಆದಾಯ ಬರುವುದು ಅದರ ಜಾಹೀರಾತಿನ ವ್ಯವಹಾರದಿಂದ. [ಗೂಗಲ್ ಹೇಗೆ ಅಷ್ಟೊಂದು ಆದಾಯಗಳಿಸುತ್ತದೆ ಎಂಬುದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಈಗ ಬೇಡ] ಈ ಹುಡುಕು ವ್ಯವಹಾರದಲ್ಲಿ ‘ಗೂಗಲ್’ ಮುಖ್ಯ ವೈರಿಯಾಗಿದ್ದದ್ದು ‘ಯಾಹೂ’ ಎಂಬ ಕಂಪನಿ [ವಾಸ್ತವಸಲ್ಲಿ ಅಂತರ್ಜಾಲ ಹುಡುಕಾಟದ ವ್ಯವಹಾರ ಆರಂಬಿಸಿದ್ದೇ ಯಾಹೂ. ‘ಗೂಗಲ್’ನ ಚಾಣಾಕ್ಷಮತಿಗಳು ತಮ್ಮ ಉತ್ತಮ ಉತ್ಪನ್ನಗಳಿಂದ ಹಾಗೂ ವ್ಯವಹಾರ ಚತುರಮತಿಯಿಂದ ಯಾಹೂವನ್ನು ಇನ್ನಿಲ್ಲವಾಗಿಸಿದರು]. ಅದನ್ನು ಮಟ್ಟ ಹಾಕಿದ ಮೇಲೆ ‘ಗೂಗಲ್’ಗೆ ಹುಡುಕಾಟದ ವ್ಯವಹಾರದಲ್ಲಿ ಸ್ಪರ್ದಿಯಾದದ್ದು ಮೈಕ್ರೋಸಾಫ್ಟ್. ಹಾಗೆಯೇ ಜಾಹೀರಾತಿನ ವ್ಯವಹಾರದಲ್ಲಿ ‘ಗೂಗಲ್’ ಸ್ಪರ್ಧೆ ಒಡ್ಡುತ್ತಿರುವುದು ಫೇಸ್ಬುಕ್. ‘ಯಾಹೂ’ಗೆ ಆದ ಗತಿಯನ್ನು ಗಮನಿಸಿದ ಮೈಕ್ರೋಸಾಫ್ಟ್ ತಕ್ಷಣ ಅತ್ಯಂತ ಜನಪ್ರಿಯ ಸಾಮಾಜಿಕ ತಾಣವಾದ ‘ಫೇಸ್ ಬುಕ್’ ಜೊತೆ ಈ ಒಪ್ಪಂದಕ್ಕಿಳಿಯಿತು. ‘ಶತ್ರುವಿನ ಶತ್ರು ನಮಗೆ ಮಿತ್ರ’ ಎಂಬಂತೆ ಗೂಗಲ್ ಎಂಬ ಜಟ್ಟಿಯನ್ನು ಮಣಿಸಲು ಈ ಇಬ್ಬರು ಜಟ್ಟಿಗಳು ಒಟ್ಟಾದರು. ಈ ಒಪ್ಪಂದದ ಪ್ರಕಾರ ಮೈಕ್ರೋಸಾಫ್ಟ್ ತನ್ನ ‘ಬಿಂಜ್’ ಹುಡುಕುಯಂತ್ರವನ್ನು ಫೇಸ್ಬುಕ್ಕಿನ ಪೇಜಿನಲ್ಲಿ ಅಡಕವಾಗಿಸುವುದು. ಈಗ ನೀವು ಈ ‘Browse’ ಕೊಂಡಿ ಉಪಯೋಗಿಸಿ “Italian Restaurant in Yelahanka” ಅಂಥಾ ಹುಡುಕಿದಾಗ ಬರುವ ಉತ್ತರಗಳಲ್ಲಿ ಯಾವುದಾದರೂ ಇಟಾಲಿಯನ್ ಹೋಟೆಲ್ ‘ಮೈಕ್ರೋಸಾಫ್ಟ್’ಗೆ ಅಥವಾ ಫೇಸ್ಬುಕ್ಕಿಗೆ ದುಡ್ಡು ಪಾವತಿಸದ್ದರೆ, ಅದರ ಹೆಸರು ಎಲ್ಲಕ್ಕಿಂತ ಮೇಲಿರುತ್ತದೆ. ಸಾಮಾನ್ಯವಾಗಿ ನಾವು ಗೂಗಲ್ ನಲ್ಲಿ ಎನಾದ್ರೂ ಹುಡುಕಿದಾಗ ಮೊದಲ ಐದು ಪಲಿತಾಂಶಗಳನ್ನೇ ಹೆಚ್ಚಾಗಿ ನಂಬುತ್ತೇವೆ/ಆ ಮಾಹಿತಿಯನ್ನು ಬಳಸಿಕೊಳ್ಳುತ್ತೇವೆ ಎಂದು ಆದಾಗಲೇ ನಿರೂಪಿಸಲಾಗಿದೆ ಆದ್ದರಿಂದ ನೀವು ಆ ಹೋಟೆಲ್ಲಿಗೇ ಹೋಗುವ ಸಾಧ್ಯತೆಗಳು ಹೆಚ್ಚು ಹೀಗೆಯೇ ನೀವು ಮಾಡುವ ಹುಡುಕಾಟಗಳಲ್ಲಿ ಜಾಹೀರಾತುಗಳಿದ್ದರೆ ಅದರ ಮೇಲೆ ನೀವು ಕ್ಲಿಕ್ಕಿಸಿದಾಗಲೆಲ್ಲಾ ‘ಮೈಕ್ರೋಸಾಫ್ಟ್’ಗೆ ಅಥವಾ ಫೇಸ್ಬುಕ್ಕಿಗೆ ಹಣ ಸಂದಾಯವಾಗುತ್ತಿರುತ್ತದೆ. ಈ ಆದಾಯವನ್ನು ಬಿಂಜ್ ಹಾಗೂ ಫೇಸ್ಬುಕ್ ಹಂಚಿಕೊಳ್ಳುತ್ತವೆ. ಫೇಸ್ಬುಕ್ ಅನ್ನು ಜಗತ್ತಿನಲ್ಲಿ 1.4 ಶತಕೋಟಿ ಜನರು ಉಪಯೋಗಿಸುತ್ತಾರೆ. ಇವರೆಲ್ಲಾ ಗೂಗಲ್ ಬದಲು ಫೇಸ್ಬುಕ್ ಸರ್ಚ್ ಉಪಯೋಗಿಸಿ ಆ ಪಲಿತಾಂಶಗಳ ಮೇಲೆ ತಮ್ಮ ವಾಣಿಜ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿದಾಗ ಬರುವ ಆದಾಯವೆಷ್ಟು!? ಒಮ್ಮೆ ಯೋಚಿಸಿ ನೋಡಿ!
ಈ ಹುಡುಕಾಟದಿಂದ ನಮಗೆ, ಅಂದರೆ ಬಳಕೆದಾರರಿಗೆ ಯಾವುದೇ ಲಾಭ-ನಷ್ಟವಿಲ್ಲ. ಯಾವುದೇ ಹೆದರಿಕೆ ಇಲ್ಲದೆ ನೀವಿದನ್ನು ಉಪಯೋಗಿಸಬಹುದು. ಆದರೆ ಗೂಗಲ್ಲಿಗೆ ಗೀಳು ಹಿಡಿವವರಂತೆ ಅಂಟಿಕೊಂಡಿರುವ ನಮಗೆ ಇದು ಇಷ್ಟವಾಗಬಹುದೇ? ಎಂಬ ಪ್ರಶ್ನೆಯನ್ನು ಕಾಲವೇ ಉತ್ತರಿಸಲಿದೆ.
Happy Graph Searching to you all……
ಚಿತ್ರ ಕೃಪೆ :thehackernews.com
ಸಮಾಜವಾದಿ ಕಮ್ಯುನಿಷ್ಠ್ ಪ್ರಕಾರ ಇದು ತಪ್ಪು. ಇದರಿಂದ ಅಭಿನವ ಚನ್ನಬಸವಣ್ಣನ ಅನುಯಾಯಿಗಳಿಗಾಗಲಿ ದರ್ಗಾ ಅವರಿಗಾಗಲಿ ಯಾವ ಪ್ರಯೋಜನವೂ ಇಲ್ಲ. ನಿಲುಮೆ ನಿರ್ವಾಹಕರು ದಯವಿಟ್ಟು ಇಸ್ಲಾಮೀಕರಣಕ್ಕೆ ಸಹಾಯವಾಗುವಂತ ಲೇಖನಗಳನ್ನು ಮಾತ್ರ ಪ್ರಕಟಿಸಬೇಕೆಂದು ವಿನಂತಿ
ಅತ್ಯುತ್ತಮವಾಗಿ ಹೇಳಿದ್ದೀರಿ. ಹಾಗೆ ಈ ಲೇಖನ ದಮನಿತ ವರ್ಗಕ್ಕೂ ಪ್ರಯೋಜನವಿಲ್ಲ. ದಮನಿತರನ್ನು ಇನ್ನಷ್ಟು ತುಳಿಯಲು ಪುರೋಹಿತಶಾಹಿ ಹುನ್ನಾರ, ಮನುವಾದಿಗಳ ಕುತಂತ್ರ , ನಮೋ ಸೇನೆಯ ಷಡ್ಯಂತ್ರ , R S S ನಿಗೂಢ ತಂತ್ರ ಜ್ಞಾನ, ಈನ್ನೂ ಏನೇನೋ ಈ ಲೇಖನದಲ್ಲಿ ಅಡಗಿದೆ. ಈ ಕೂಡಲೇ ಈ ಲೇಖಕರ ಎಲ್ಲಾ ಲೇಖನಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವದು ಒಳಿತು. ಇಲ್ಲವಾದರೆ ಮೂರ್ತಿ ಸರ್, ದರ್ಗಾ ಸರ್, ಕಾರ್ನಾಡ ಸರ್, ಗೌರಮ್ಮ , ಅನುಪಮ, ಭಗವಾನ್ ಸರ್, ಹಾಗೂ ನಾನು ಹೋರಾಟ ಕೈಗೊಳ್ಳುತ್ತೀವಿ. ಎಚ್ಚರ! ಇಲ್ಲದಿದ್ದರೆ ನಿಮ್ಮ ಮೇಲೆ ರಾಡಿ ಎರಚುತ್ತೇವೆ. ನೆಲಮೂಲ ಸಂಸ್ಕೃತಿಯನ್ನು ಹಾಳು ಮಾಡಿದೆಯೆಂದು ಬರಗೂರು ಸರ್ ಅವರನ್ನೂ ಕರಿಯುತ್ತೀನಿ. ಕೋರ್ಟಗೂ ಹೋಗತೀನಿ ಹೂಷಾರ್!!
“ಇಲ್ಲವಾದರೆ ಮೂರ್ತಿ ಸರ್, ದರ್ಗಾ ಸರ್, ಕಾರ್ನಾಡ ಸರ್, ಗೌರಮ್ಮ , ಅನುಪಮ, ಭಗವಾನ್ ಸರ್, ಹಾಗೂ ನಾನು ಹೋರಾಟ ಕೈಗೊಳ್ಳುತ್ತೀವಿ. ಎಚ್ಚರ! ಇಲ್ಲದಿದ್ದರೆ ನಿಮ್ಮ ಮೇಲೆ ರಾಡಿ ಎರಚುತ್ತೇವೆ.”
dear moderator, please take action on Mr. Akash for unnecessarily dragging Darga Sir’s name into the discussion.
dear moderator, please take action on Mr.ನಾಗಶೆಟ್ಟಿ for unnecessarily dragging ಭೈರಪ್ಪಾ Sir’s name into the discussion.
Lier.
Lier. ಸತ್ಯವನ್ನು ಒಪ್ಪಿಕೊಂಡಿರಲ್ಲಾ ಸಂತೋಷ, ಪ್ರತಿ ಸಲ ನಿಮ್ಮ ಕಮೆಂಟುಗಳನ್ನು ನಿಮಗೆ ತೋರಿಸಿ ನೀವು ಯಾವಾಗ ಎಲ್ಲಿ ಏನೇನು ಕಮೆಂಟು ಮಾಡಿರುವಿರೆಂದು ತೋರಿಸುತ್ತಾ ಕೂತು ನನ್ನ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುವದಿಲ್ಲ. ಆದರೆ ನಿಮ್ಮ ಜೊತೆಗಿನ ಒಂದು ಚರ್ಚೆಯಿಂದ ಒಂದು ವಿಷಯ ಗೊತ್ತಾಯಿತು. ಅದೆನೆಂದರೆ ಪೂರ್ತಿ ಜಾಣರ ಜೊತೆ ಚರ್ಚೆ ಮಾಡಬೇಕು. ಇಲ್ಲವೆ ಪೂರ್ತಿ ದಡ್ಡರ ಜೊತೆ ನಾದರೂ ಚರ್ಚೆ ಮಾಡಬೇಕು. ಅರ್ಧಾಮರ್ಧಾ ಇದ್ದವರ ಜೊತೆ ಚರ್ಚೆಗಿ ಹೊದರೆ ಸುಮ್ಮನೆ ಸಮಯ ಹಾಳು. ಅಹಂಕಾರಕ್ಕೆ ಉದಾಸೀನವೇ ಮದ್ದು.
You are a liar. I never dragged SLB’s name into the discussion on fb search. But you dragged Darga Sir’s name. You said cheap things about a saintly man. You are not even 1/1000th as scholar as Darga Sir. Yet you started preaching on ahankara. Moderator of nilume has joined hands with you. He is not going to take action against you. Obviously nilume is infested with namocyberarmy.
+1
ನೀವ್ಯಾಕೆ ಸ್ವಾಮಿ ನಿಮ್ಮ ಕಾಮೆಂಟಿಗೆ ನೀವೇ +1 ಹಾಕಿಕೊಳ್ಳುತ್ತೀರಾ? ನನಗೆ ಇದರ ಬಗ್ಗೆ ತುಂಬಾ ಅನುಮಾನವಿದೆ. ನೀು ನೀವು ತಾನೆ ಶೆಟ್ಕರ್ 😉
“ನನಗೆ ಇದರ ಬಗ್ಗೆ ತುಂಬಾ ಅನುಮಾನವಿದೆ” ಅದೇನು ಅಂತ ಬೊಗಳ್ರೀ ಭಟ್ಟರೆ!
ಓಹೋ ನಿಮಗೆ ಬೊಗಳಿದ್ರೆ ಮಾತ್ರ ಅರ್ಥವಾಗುವುದಾ? ಛೇ. ನಿರ್ವಾಹಕರೆ ನಾಯಿಗಳನ್ನೆಲ್ಲಾ ನಿಲುಮೆಯೊಳ ಬಿಡುವುದೇಕೆ? 😉
+೧೦೦
ನೀವು ಮಾಡಿದ ಟೀಕೆಗಳು ಇಲ್ಲಿವೆ ಓದಿಕೊಳ್ಳಿ [“ಭೈರಪ್ಪನವರು ಈ ಎಪ್ಪನ ತರಹ ಬೊಗಳೆ ಬಿಟ್ಟಿಲ್ಲ.” ನಿಮ್ಮವರ ಹೂಸು ನಿಮಗೆ ಗಂಧಕ್ಕಿಂತ ಹೆಚ್ಚು ಪರಿಮಳ!]] ಇದು ಯಾರ ಟೀಕೆ?? ಅಥವಾ ಟೀಕೆಯೇ ಅಲ್ಲವೋ??
ಇದಕ್ಕೆ ನನ್ನ ಉತ್ತರ ನೀವು ಭೈರಪ್ಪನವರನ್ನು ಬಾಯಿಗೆ ಬಂದಂತೆ ಬೈಯಬಹುದು. ಆದರೆ ಮನೋಹರ್ ಅವರು ಮಾರ್ಕ್ಸನನ್ನು ಬೈಯಬಾರದು ಚನ್ನಾಗಿದೆ ನ್ಯಾಯ. ಮತ್ತೆ ನನ್ನನ್ನೆ false allegations. When will you learn to speak truth? ಹೀಗೆ ಕೆಳುತ್ತೀರಲ್ಲಾ??
[[ ಜ್ಞಾನಪೀಠ ಪ್ರಶಸ್ತಿ ಪಡೆದು ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದ ನಮ್ಮ ಕಾಲದ ಅತ್ಯಂತ ಶ್ರೇಷ್ಠ ದಾರ್ಶನಿಕ ಸಾಹಿತಿ ಅನಂತಮೂರ್ತಿಯವರೇ ಭೈರಪ್ಪನವರ ಸಾಹಿತ್ಯಕ್ಕೆ ಮೂರು ಕಾಸಿನ ಬೆಲೆ ಕೊಟ್ಟಿಲ್ಲ.]] ಇದೂ ಸಹ ನಿಮ್ಮದೇ ಕಮೆಂಟ್ ಇಲ್ಲಿ ಯಾರನ್ನು ಟೀಕಿಸಿದ್ದೀರಿ??
[[ “ಟಿಪ್ಪುವು ಹತ್ತಾರು ಸಹಸ್ರ ಹಿಂದುಗಳನ್ನು ಮತಾಂತರಿಸಿದ, ಕೊಚ್ಚಿ ಹಾಕಿದ, ಮಾನಿನಿಯರ ಮಾನ ಹರಣ ಮಾಡಿದ. ” ಹೌದಾ?!! ನಿಮ್ಮ ಬಳಿ ಸಾಕ್ಷಿ ಆಧಾರಗಳಿವೆಯಾ? ಅಥವಾ ಭೈರಪ್ಪನವರ ಕಾದಂಬರಿಗಳೇ ಆಧಾರವಾ? ಇದು ಯಾರನ್ನು ನೀವು ಎಳೆದು ತಂದು ಹೇಳಿದ್ದೀರಿ.]] ನೀವೆಕೆ ಇಲ್ಲಿ ಬಭೈರಪ್ಪರನ್ನು ಎಳೆದು ತರಬೇಕಿತ್ತು. ನಮಗಾದರೆ ದರ್ಗಾ ಸರ್ ಅವರನ್ನು ಎಳೆದು ತರುತ್ತೀರೆಂದು ಹೇಳುತ್ತೀರಿ.
ನೀವು ಬಭೈರಪ್ಪ ಬಗ್ಗೆ ಮಾತ್ರವಲ್ಲ ಬಾಲು ಸರ್ ಕುರಿತು ಹೀಗೆ ಟೀಕೆ ಮಾಡಿದ್ದೀರಿ. ಓದಿಕೊಳ್ಳಿ.
[[ ದರ್ಗಾ ಸರ್ ಅವರು ವಚನಗಳ ಬಗ್ಗೆ ಬರೆದ ಸತ್ಯಗಳನ್ನು ಘೆಂಟ್ ಬಾಲಂಗೋಚಿಗಳು ಎದುರಿಸಲು ಧೈರ್ಯ ಸಾಲದೆ ಫೇಕ್ ಐಡಿ ಮೂಲಕ ಸ್ನೈಪರ್ ಅಟಾಕ್ ಮಾಡಿದರು. ಆದರೆ ದರ್ಗಾ ಸರ್ ಅವರು ಯಾವ ಸತ್ಯಗಳ ಪರವಾಗಿ ನಿಂತರೋ ಆ ಸತ್ಯಗಳಿನ್ನೂ ಅಳಿದಿಲ್ಲ. ಪ್ರಗತಿಪರರ ಧೀಮಂತಿಕೆಗೆ ಅಂತ್ಯವಿಲ್ಲ]]
ಘೆಂಟ್ ಬಾಲಂಗೋಚಿಗಳ ಇಂದಿನ ನಮ್ಮ ಸಮಾಜಶಾಸ್ತ್ರೀಯ ಚರ್ಚೆಯನ್ನು ತಿಪ್ಪೆಗುಂಡಿಗೆ ಎಸೆಯೋಣ
[[ಷಣ್ಮುಖ ಅವರದ್ದು ಜಾಣ ಕುರುಡು. ಬಾಲು ಅವರ ಕ್ರೌರ್ಯದ ಕತೆಗಳು ಜನಜನಿತವಾಗಿವೆ. ಡಿ ಎಸ್ ನಾಗಬೂಷಣ ಬಾಲು ಅವರ ಕ್ರೌರ್ಯದ ಬಗ್ಗೆ ಬರೆದ ಲೇಖನ ಬಾಲಂಗೋಚಿಗಳ ವಲಯದಲ್ಲಿ ಶಾಕ್ ವೇವ್ಸ್ ಉಂಟು ಮಾಡಿತ್ತು. ಚೆನ್ನಿ ಸರ್ ಅವರು academic obscenity ಎಂದು ಕರೆದದ್ದು ಬಾಲು ಅವರ ಕ್ರೌರ್ಯವನ್ನಲ್ಲವೆ?]] ಇಲ್ಲಿ ಬಾಲು ಸರ್ ಅವರನ್ನು ವಿನಾಕಾರಣ್ ಎಳಿದು ತಂದು ಟೀಕಿಸಿದ್ದೀರಿ.
[[ನಮೋಸುರ ಸುರೆಯ ಧಾರೆಯನ್ನೇ ಹರಿಸಬಹುದು, ಆದರೆ ರಾಕ್ಷಸನ ಬೆಂಬಲಕ್ಕೆ ದರ್ಗಾ ಸರ್ ಎಂದಿಗೂ ನಿಲ್ಲುವುದಿಲ್ಲ.]] ಇಲ್ಲಿ ಮೋದಿ ಅವರನ್ನು ರಾಕ್ಷಸ ಎನ್ನಲಾಗಿದೆ ಹಾಗೂ ತಾವೆ ದರ್ಗಾ ಸರ್ ಅವರ ಹೆಸರನ್ನು ಕಾರಣವಿಲ್ಲದೇ ಎಳೆದು ತಂದಿದ್ದಾರೆ.
[[ನರಸತ್ತ ನಿಸ್ತೇಜ ನಿರ್ವೀರ್ಯ ಕುಹುಕ ಪಂಡಿತರು ಕುಮಾರ್ ಅವರ ರೂಪದಲ್ಲಿ ತಮ್ಮ ಮನಸ್ಸಿನ ನಂಜನ್ನು ಕಾರುತ್ತಿದ್ದಾರೆ.]] ಇಲ್ಲಿ ಪಂಡಿತರನ್ನು ವಿನಾಕಾರಣ ಎಳೆದು ತಂದು ಟೀಕೆ ಮಾಡಲಾಗಿದೆ.
ಅಷ್ಟೇ ಅಲ್ಲಾ ವ್ಯಕ್ತಿಗತ ಕೀಳು ಮಟ್ತದ ನೀಂದನೆ ಸಹ ಮಾಡಿರುವಿರಿ. ಅದನ್ನು ಈ ಹಿಂದೆ ನಾನು ತೋರಿಸಿದ್ದೇನಿ. ನಿಮ್ಮ ದರ್ಗಾ ಸರ್ ಕುರಿತು ನಾನು ನಾನೇ (ಆಕಾಶ್ ಮಾತ್ರ, ) ಎಲ್ಲೆಲ್ಲಿ ಟೀಕಿಸಿದ್ದೇನಿ ಎಂದು ನೀವು ಸಾಕ್ಶಿ ಸಮೇತ ತೋರಿಸಿ. ತೋರಿಸಲೇಬೇಕು. ನೀವು ಮೋದಿಯವರನ್ನೂ ಹೀಗೆ ಟೀಕೆ ಮಾಡಿದ್ದೀರಿ. ನಾನು ನಿಮಗೆ ಕೊಡುತ್ತಿರುವ ಕೊನೆ ಕಮೆಂಟ ಇದು. ಏಕೆಂದರೆ ಪೂರ್ತಿ ಜಾಣರ ಜೊತೆ ಚರ್ಚೆ ಮಾಡಬೇಕು. ಇಲ್ಲವೆ ಪೂರ್ತಿ ದಡ್ಡರ ಜೊತೆ ನಾದರೂ ಚರ್ಚೆ ಮಾಡಬೇಕು. ಅರ್ಧಾಮರ್ಧಾ ಇದ್ದವರ ಜೊತೆ ಚರ್ಚೆಗೆ ಹೊದರೆ ಸುಮ್ಮನೆ ಸಮಯ ಹಾಳು.
ಆಕಾಶ್, ಮೈಮೇಲೆ ಕೆಂಡ ಬಿದ್ದವರ ತರಹ ಯಾಕೆ ವರ್ತಿಸುತ್ತಿದ್ದೀರಿ? ಹಾಗೂ ನಿಮ್ಮ ಜಾಣತನದ ಬಗ್ಗೆ ಏಕೆ ಇಷ್ಟೊಂದು ಗರ್ವ ಪಡುತಿದ್ದೀರಿ? ನೀವು ಜಾಣರಿರಬಹುದು ಆದರೆ ಜಾಣತನ ಸೊಕ್ಕಾಗಿ ಪರಿವರ್ತನೆಗೊಂಡು ನಿಮ್ಮ ಮೂರ್ಖತನವನ್ನು ಬಯಲುಗೊಳಿಸುತ್ತಿದೆ. “ನಿಮ್ಮ ದರ್ಗಾ ಸರ್ ಕುರಿತು ನಾನು ನಾನೇ (ಆಕಾಶ್ ಮಾತ್ರ, ) ಎಲ್ಲೆಲ್ಲಿ ಟೀಕಿಸಿದ್ದೇನಿ ಎಂದು ನೀವು ಸಾಕ್ಶಿ ಸಮೇತ ತೋರಿಸಿ. ” ಅಂತ ಆಗ್ರಹವಿತ್ತಿದ್ದೀರಿ. ನೀವೇ ಅಲ್ಲವೆ ಬರೆದದ್ದು ” ಈ ಕೂಡಲೇ ಈ ಲೇಖಕರ ಎಲ್ಲಾ ಲೇಖನಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವದು ಒಳಿತು. ಇಲ್ಲವಾದರೆ ಮೂರ್ತಿ ಸರ್, ದರ್ಗಾ ಸರ್, ಕಾರ್ನಾಡ ಸರ್, ಗೌರಮ್ಮ , ಅನುಪಮ, ಭಗವಾನ್ ಸರ್, ಹಾಗೂ ನಾನು ಹೋರಾಟ ಕೈಗೊಳ್ಳುತ್ತೀವಿ. ಎಚ್ಚರ! ಇಲ್ಲದಿದ್ದರೆ ನಿಮ್ಮ ಮೇಲೆ ರಾಡಿ ಎರಚುತ್ತೇವೆ.” ಅಥವಾ ನಾನಾ? ದರ್ಗಾ ಸರ್ ಅವರಂತಹ ಸಂತನನ್ನೇಕೆ ನಿಮ್ಮ ವ್ಯಂಗ್ಯಕ್ಕೆ ಬಲಿಕೊಟ್ಟಿರಿ? ನಿಮ್ಮದು ನಾಚಿಕೆಗೇಡು ವರ್ತನೆ ಅಲ್ಲವೆ?
ಅವೆಲ್ಲಾ ಇರಲಿ ಅವರು ನಿಮ್ಮ ಮಾತುಗಳನ್ನು ಇಲ್ಲಿ ಉಲ್ಲೇಖಿಸಿ ನಿಮ್ಮನ್ನು ಬೆತ್ತಲು ನಿಲ್ಲಿಸಿದ್ದಾರೆ ದಯವಿಟ್ಟು ಬಟ್ಟೆ ಹಾಕಿಕೊಳ್ಳುವ ಪ್ರಯತ್ನ ಮಾಡುವಿರಾ? 😉
“ಅವೆಲ್ಲಾ ಇರಲಿ”
ಬ್ರಾಹ್ಮಣ್ಯದ ಗತ್ತಿನಿಂದ ಹುಕುಂ ನೀಡುವುದನ್ನು ನಿಲ್ಲಿಸಿ ಭಟ್ಟರೆ! ಫೇಸ್ ಬುಕ್ ಸರ್ಚ್ ಸಂದರ್ಭದಲ್ಲಿ ದರ್ಗಾ ಸರ್ ಅವರ ಬಗ್ಗೆ ವಿನಾಕಾರಣ ಅವಹೇಳನಕಾರಿ ಕಮೆಂಟನ್ನು ಏಕೆ ಬರೆದಿರಿ ಎಂದು ಮೊದಲು ಹೇಳಿ.
ಪಾಪ..ಯಾಕೆ ಅವರ ‘ಸಂತ’ರ ಬಗ್ಗೆ ಅವಹೇಳನಕಾರಿ ಮಾತು ಆಡಿದ್ರಿ ಅಂತ ಹೇಳ್ರಿ ಆಕಾಶ ಮತ್ತು ಗಿರೀಶ. ಈ ಶಿಷ್ಯಂದಿರು ತುಂಬ ಮನಸ್ಸಿಗೆ ಹಚ್ಚಿಕೊಂಡು ನಿನ್ನೆಯಿಂದ ಊಟ ಬಿಟ್ಟಿದ್ದಾರೆ. ಅವರ ಮಾತನಾಡಿದ್ದರೆ ಬಗ್ಗೆ ಪ್ರಶ್ನಿಸಬೇಡಿ. ಅವರು ಆಧುನಿಕ ‘ಶರಣ’ರು. ಹಾಗೆ ಮಾತನಾಡುವುದು ಮತ್ತು ಅಲ್ಲಗೆಳೆಯವುದು ಅವರ ಕಾಯಕ. ನೀವು ಭಟ್ಟರು ಹೀಗೆಲ್ಲ ಮಾತನಾಡಬಾರದು.
ದರ್ಗಾ ಅವರಿಗೆ ಅವಹೇಳನ ನನ್ನ ಯಾವ ವಾಕ್ಯದಲ್ಲಾಗಿದೆ ತಿಳಿಸಿ?
ಪ್ರಚಲಿತ ತಂತ್ರಜ್ಞಾನದ ಬಗ್ಗೆ ಸರಳ ಸುಂದರ ಲೇಖನ. ಧನ್ಯವಾದಗಳು .
“ಅಭಿನವ ಚನ್ನಬಸವಣ್ಣನ ಅನುಯಾಯಿಗಳಿಗಾಗಲಿ ದರ್ಗಾ ಅವರಿಗಾಗಲಿ ಯಾವ ಪ್ರಯೋಜನವೂ ಇಲ್ಲ” dear moderator, please take action on Mr. Girish for unnecessarily dragging Darga Sir’s name into the discussion.
ತಪ್ಪಿತಸ್ಥ ಗಿರೀಶ್ ಅವರ ಮೇಲೆ ಕ್ರಮ ತೆಗೆದುಕೊಳ್ಳಕಾಗದಂತಹ ನಪುಂಸಕರೇ ನಿಲುಮೆಯ ನಿರ್ವಾಹಕರು? ಅಥವಾ ನಿರ್ವಾಹಕರ ಚಿತಾವಣೆಯಿಂದಲೇ ದರ್ಗಾ ಸರ್ ಅವರಂತಹ ಅನುಭಾವಿಯ ತೇಜೋವಧೆ ಮಾಡಲಾಗಿದೆಯೆ? ಯಕ್ಷಪ್ರಶ್ನೆ!
ಬಸವಣ್ಣನನ್ನು ಹೈಜಾಕ್ ಮಾಡುತ್ತಿರುವವರ ಹುನ್ನಾರವನ್ನು ತಿಳಿಯಲಾಗದಂತಹ ತಿಳಿಗೇಡಿಗಳೇ ನಾಗಶೆಟ್ಟಿಗಳು.
ದೇಶವನ್ನೇ ಹೈಜಾಕ್ ಮಾಡಿ ಕಟುಕರ ಕೈಗೆ ಕೊಡಲು ಹೊರಟಿರುವ ನಮೋಸುರನ ಬಾಲಂಗೋಚಿಗಳ ಹುನ್ನಾರ ನಮಗೂ ತಿಳಿದಿದೆ ಭಟ್ಟರೆ!
ಉನ್ನತಿಯೆಡೆಗೆ ಹೈಜಾಕಾಗಲಿ ಬಿಡಿ. ನಾಗಶೆಟ್ಟಿಗಳೆ, ಸುನ್ನತಿಯೆಡೆಗೆ ಹೈಜಾಕ್ ಬೇಡ 😉
ಈ ಯಪ್ಪ ತನ್ನ ಗುಲಾಮಿ ಗಾನ ನಿಲ್ಲಿಸುವ ಸೂಚನೆ ಕಾಣಿಸುವುದಿಲ್ಲ!. ತನ್ನ ಸುತ್ತಮುತ್ತಲ ವಾತಾವರಣವನ್ನು ತಿಪ್ಪೆಗುಂಡಿ ಮಾಡುವ ತನಕ ವಿರಮಿಸುವುದಿಲ್ಲ.
“ಗುಲಾಮಿ ಗಾನ” Moderator Sir, please take note of the derogatory term used against me.
nivu hegiddirO haage nimma baigalada coment ide
೧) ನಿರ್ವಾಹಕನಾಗಿ ನನಗೆ ಇಲ್ಲಿ ಪ್ರತಿಕ್ರಿಯಿಸಿರುವ ಶೆಟ್ಕರ್,ಗಿರೀಶ್,ಆಕಾಶ್ ಮತ್ತು ಮನೋಹರ್ ಎಲ್ಲರೂ ಒಂದೇ.Constructive ಮತ್ತು ನಾಲ್ಕು ಜನರಿಗೆ ಉಪಯೋಗವಾಗುವಂತಹ Positive Feedback ಗಳಿದ್ದರೆ ಖಂಡಿತ ನಾವದನ್ನು ಸ್ವೀಕರಿಸುತ್ತೇವೆ. ಆದರೆ, ನಿಲುಮೆ ಯಾವ’ಕರಣ’ಕ್ಕೆ ವೇದಿಕೆಯಾಗಬೇಕು ಅನ್ನುವಂತ ಸಲಹೆಗಳು ನಮಗೆ ಬೇಡ.
೨) ಇಲ್ಲಿ ನಡೆದಿರುವ ಚರ್ಚೆಗೂ, ಈ ಲೇಖನಕ್ಕೂ ಯಾವುದೇ ಸಂಬಂಧವಿಲ್ಲ.ಆದರೂ ನಾವಿದನ್ನು ಅಳಿಸುವುದಿಲ್ಲ. ಓದುಗರಿಗೂ ತಿಳಿಯಲಿ ಅಂತರ್ಜಾಲದಲ್ಲಿ ಎಂತೆಂತ ಕಮೆಂಟುಗಳು ಬರುತ್ತವೆ, ಯಾರ ಪ್ರಭುದ್ಧತೆ ಎಷ್ಟಿದೆ ಅನ್ನುವುದು.
೩) ನಿಲುಮೆಯ ನಿರ್ವಾಹಕರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವ ನಿಮಗೆ ನಿಮ್ಮ ಭಾಷೆಯ/ನಾಲಿಗೆಯ ಮೇಲೆ ಹಿಡಿತವಿಲ್ಲವೇ? ಅಷ್ಟಕ್ಕೂ,ನಿಲುಮೆಯನ್ನು ಪ್ರಶ್ನಿಸುವ ನೈತಿಕ ನಿಮಗಿದೆಯೇ? ನಿಮಗೆ ಹೇಳುವುದು ಏನಾದರೂ ಇದ್ದರೆ ಲೇಖನ ಬರೆದುಕೊಡಿ. ನಿಮಗೆ ಮುಕ್ತ ಅಹ್ವಾನವಿದೆ ಎಂದು ಹಿಂದೆಯೂ ಹೇಳಿದ್ದೇನೆ. ನಿಮಗೆ ಅದೂ ಸಾಧ್ಯವಿಲ್ಲ.ಆದರೆ, ನಿಲುಮೆಯನ್ನು ಸದಾ ಕಾಲ ಟೀಕಿಸುತ್ತ ಹೊರಗಿನ ಬ್ಲಾಗುಗಳ ಲಿಂಕುಗಳನ್ನು ತಂದು ಹಾಕುವುದನ್ನು ನೀವು ಬಿಡುವುದಿಲ್ಲ. ನಾನೂ ಈ ಮುಂಚೆಯೂ ನಿಮಗೆ ಹಲವಾರು ಬಾರಿ ಹೇಳಿದ್ದೆ, ಈಗಲೂ ಮತ್ತೇ ಅದೇ ಮಾತುಗಳನ್ನು ಹೇಳುತಿದ್ದೇನೆ.ಕ್ರಿಯೆಗೆ ತಕ್ಕ ಪ್ರತಿಕ್ರಿಯೆಗಳೇ ದೊರೆಯುತ್ತವೆ. ಬಿತ್ತಿದಂತೆ ಬೆಳೆ ಎಂಬ ನೀತಿಯಂತೆ. .
೪) ನೀವು ಅನಾವಶ್ಯಕವಾಗಿ ದರ್ಗಾ ಅವರನ್ನೋ ಅಥವಾ ಇನ್ಯಾರ ಹೆಸರನ್ನೋ ಇಲ್ಲಿ ಎಳೆದು ತರಬೇಡಿ ಅಂದರೂ ಮತ್ತೆ ಎಳೆದು ತರುತ್ತೀರಿ.ನೀವು ಯಾರನ್ನಾದರೂ ಟೀಕಿಸಬಹುದು.ಅದೇ ಉಳಿದವರು ನಿಮ್ಮನ್ನೋ,ನೀವು ಪದೇ ಪದೇ ಅನಾವಶ್ಯಕವಾಗಿ ಉಲ್ಲೇಖಿಸುವ ದರ್ಗಾ ಅವರನ್ನು ಟೀಕಿಸಬಾರದು ಎನ್ನುವುದು ಯಾವ ನ್ಯಾಯ? ನಿಮಗೆ ಸಂಬಂಧಪಟ್ಟವರೆಲ್ಲರೂ ತುಂಬಾ ಗೌರವಾನ್ವಿತರು, ಅವರಿನಿಲ್ಲಿ ಉಳಿದವರು ಟೀಕಿಸಬಾರದು ಎಂಬುದು ನಿಮ್ಮ ನಿಲುವು/ಬಯಕೆಯಾಗಿದ್ದಲ್ಲಿ, ಮೊದಲು ನೀವು ಅವರ ಹೆಸರಿನ್ನಿಲ್ಲಿ ಉಲ್ಲೇಖಿಸುವುದನ್ನು ನಿಲ್ಲಿಸಿ.
೫)ಮತ್ತೆ,ಮತ್ತೆ ಇದೇ ಮಾತುಗಳನ್ನು ನಾನು ಹೇಳಬಯಸುವುದಿಲ್ಲ.ನಿಲುಮೆಯನ್ನು ಹೇಗೆ ನಡೆಸಲಿಚ್ಚಿಸುತ್ತೇವೆ ಅನ್ನುವುದನ್ನು ನಿಲುಮೆಯ ನಿಲುವಿನಲ್ಲಿಯೇ ಸ್ಪಷ್ಟವಾಗಿ ಹೇಳಿದ್ದೇವೆ.ಹಾಗೆ ಇದುವರೆಗೂ ನಡೆದುಕೊಂಡಿದ್ದೇವೆ,ಮುಂದೆಯೂ ನಡೆಯಲಿದ್ದೇವೆ. ನೀವು ಇಲ್ಲಿ ಪ್ರತಿಕ್ರಿಯಿಸಲು ಮತ್ತು ರಚನಾತ್ಮಕವಾಗಿ ಟೀಕಿಸಲು ಸ್ವತಂತ್ರರು.ಆದರೆ,ಸ್ವೇಚ್ಚಾಚಾರಕ್ಕೆ ನಾವು ಅವಕಾಶ ನೀಡುವುದಿಲ್ಲ.ಇದು ಎಲ್ಲಾ ಕಮೆಂಟಿಗರಿಗೂ ಅನ್ವಯ.ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿ ಬಳಸಿಕೊಳ್ಳುವವರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ,ಅಂತವರು ಚರ್ಚೆಯಿಂದ ದೂರವಿರುವುದೇ ಒಳಿತು.
ಧನ್ಯವಾದಗಳು…
neevobba neero chakravarthi. nilumeyu komuvaadada benkiyinda uridu boodi aaguttide. Aadare neevu swamaghnaraagi piteelu baarisuttaa kulitiddeeri!