ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 15, 2014

ನಿಜವಾದ ಜ್ಞಾನ

‍ನಿಲುಮೆ ಮೂಲಕ
– ಮಯೂರಲಕ್ಷ್ಮಿ
 
ಜ್ಞಾನನಿಜವಾದ ಜ್ಞಾನವೆಂದರೆ ಓದಿ ತಿಳಿಯುವುದೋ? ಹಿರಿಯರ ಅನುಭವಗಳಿಂದ ಅರಿಯುವುದೋ? ಹೀಗೊಂದು ಜಿಜ್ಞಾಸೆ ಕಾಡುವುದುಂಟು. ಲಿಪಿಗಳ ಅನ್ವೇಷಣೆಯೇ ಇರದಿದ್ದ ಕಾಲದಲ್ಲಿ ಎಲ್ಲವನ್ನೂ ಅಸಾಮಾನ್ಯ ಸ್ಮರಣ ಶಕ್ತಿಯಿಂದ ಅರಿತು ಕಲಿಯುತ್ತಿದ್ದರು. ನಂತರ ಪುಸ್ತಕಗಳ ಸಹಾಯದಿಂದ ಓದಿ, ಬರೆದು ಕಲಿಯಲು ಸಮಯವೇನೋ ಹಿಡಿಯುತ್ತಿತ್ತು, ಆದರೆ ಅದು ಸಹಜವಾಗಿರುತ್ತಿತ್ತು. ಇಂದಿನ ನಮ್ಮ ಕಲಿಕಾ ರೀತಿಯಲ್ಲಿ ಆ ಸಹಜತೆಯನ್ನು ನಾವು ಕಾಣುತ್ತೇವೆಯೇ? ಒತ್ತಡವಿಲ್ಲದೆ ಕಲಿಯಲು ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣದಿಂದ ನಾವು ಗಳಿಸುವ ಪದವಿಗಳು ನಿಜವಾದ ಜ್ಞಾನವಾಗುವುದೇ? ನಮ್ಮ ಇಂದಿನ ವಿದ್ಯಾರ್ಥಿಗಳು ಮಾಹಿತಿಯನ್ನು ನಿಜವಾದ ಅಧ್ಯಯನದಿಂದ ಪಡೆಯುತ್ತಿದ್ದಾರೆಯೇ? ಇಲ್ಲ, ಓದಿ ಕಲಿಯುವ ತಾಳ್ಮೆ ಈಗಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ಎಲ್ಲವೂ ಕಣ್ಣ ಮುಂದೆ ಕೈಬೆರಳುಗಳ ಚಲನೆಯಿಂದಲೇ ಸಾಧ್ಯವಾಗುತ್ತಿದೆ.
 
ನಮ್ಮ ಬಹುತೇಕ ವಿದ್ಯಾರ್ಥಿಗಳು ಕೇವಲ ಮೂಲಕ ಮಾಹಿತಿಯನ್ನು ಕಲೆಹಾಕುತ್ತಾರೆ. ಅವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆಯೇ! ಉತ್ತಮ ಕೈಬರಹಕ್ಕೆ ವಿಶೇಷ ಅಂಕಗಳಿರುತ್ತಿದ್ದ ಕಾಲವೆಲ್ಲಿ? ಟೈಪ್ ಮಾಡುತ್ತಾ ಬರೆಯುವ ಅಭ್ಯಾಸವೇ ತಪ್ಪಿಹೋಗುತ್ತಿರುವ ಈ ಕಾಲವೆಲ್ಲಿ? ಈ ಎಲ್ಲಾ ‘ಶಾರ್ಟ್ ಕಟ್’ಗಳಿಂದಾಗಿ ಕೇಳುವ ಕೇಳಿದ್ದನ್ನು ಬರೆಯುವ ವ್ಯವಧಾನವೂ ಮರೆಯಾಗುತ್ತಿದೆ. ನಾವು ಕಲಿತ ಸಮಯವೆಷ್ಟು? ಅರ್ಥ ಮಾಡಿಕೊಂಡದ್ದೆಷ್ಟು? ಈ ವಿವೇಚನೆಯಿದೆಯೇ?
“ಕೇವಲ ಮಾಹಿತಿಯೊಂದೇ ಜ್ಞಾನವಲ್ಲ” ಎಂದಿದ್ದಾನೆ ಐನ್‍ಸ್ಟೀನ್.ನಮ್ಮ ಕಲಿಕೆಯು ಜ್ಞಾನದಿಂದ ತುಂಬಿದ್ದು ನಮ್ಮಲ್ಲಿನ ಕ್ರಿಯಾಶೀಲತೆಗೆ ಪೂರಕವಾಗಿರಬೇಕು. 
ಟಿ. ಎಸ್. ಎಲಿಯಟ್ ‘ದಿ ರಾಕ್’ ಎನ್ನುವ ಕವನದಲ್ಲಿ ಹೀಗೆ ಹೇಳಿದ್ದಾನೆ:
 
ನಾವೀಗ ನೋಡುವುದು ಕೊನೆಯಿಲ್ಲದ ಅನ್ವೇಷಣೆ, ಸಂಶೋಧನೆಗಳು. ಇಲ್ಲಿ, ಮಾತಿದೆ, ಜ್ಞಾನದ ಮೌನವಿಲ್ಲ, ಪದಗಳ ಅರ್ಥಹೀನತೆಯಿಂದ ಅಜ್ಞಾನವೇ ತುಂಬಿದೆ. ನಂತರದ ಅವನ ಪ್ರಶ್ನೆ ಹೀಗಿದೆ:

Where is the wisdom we have lost in knowledge?

Where is the knowledge we have lost in information?

ಜ್ಞಾನದ ಹುಡುಕಾಟದಲ್ಲಿ ನಾವು ಕಳೆದುಕೊಂಡ ಅರಿವೆಲ್ಲಿ?
ಮಾಹಿತಿಯಲ್ಲಿ ನಾವು ಕಳೆದುಕೊಂಡ ಜ್ಞಾನವೆಲ್ಲಿ?

ಒಂದು ಪುಟ್ಟ ಉದಾಹರಣೆ, ಟೊಮ್ಯಾಟೋ ಎನ್ನುವುದು ತರಕಾರಿಯಲ್ಲ, ಒಂದು ಹಣ್ಣು ಎನ್ನುವುದು ಜ್ಞಾನ ವಾದರೆ, ಇದನ್ನು ಹಣ್ಣುಗಳೊಂದಿಗೆ ಬೆರೆಸಿ ತಿನ್ನಲಾಗುವುದಿಲ್ಲ ಎಂಬುದು ಅರಿವು

ಚಿತ್ರಕೃಪೆ :vedanta-atlanta.org

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments