ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 16, 2014

3

ಚುನಾವಣಾ ಸಮೀಕ್ಷೆಗಳನ್ನೆಲ್ಲಾ ಸುಳ್ಳು ಮಾಡಬಹುದಾ ೨೦೧೪ ರ ಚುನಾವಣಾ ಫಲಿತಾಂಶ ?

‍ನಿಲುಮೆ ಮೂಲಕ

– ಅನಿಲ್ ಚಳಗೇರಿ

2014 Election೨೦೧೪ ರ ಚುನಾವಣಾ ಸಮೀಪಿಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರದ ಕಾವು ಏರುತ್ತಿದೆ, ಒಂದಡೆ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಅಬ್ಬರ, ಮತ್ತೊಂದಡೆ ರಾಹುಲ್ ಗಾಂಧಿಯನ್ನು ಶತಾಯ ಗತಾಯ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆನ್ನುವ ಕಾಂಗ್ರೆಸ್ ನಾಯಕರ ಹಠ, ನಾವು ಕಾಂಗ್ರೆಸ್ಸಿನ ಜೊತೆಗೂ ಇಲ್ಲ, ಬಿಜೆಪಿಯ ಜೊತೆಗೂ ಇಲ್ಲ ಎನ್ನುವ ಥರ್ಡ್ ಫ್ರಂಟ್ ನ ಎನ್ನುವ ಪ್ರಾದೇಶಿಕ ಪಕ್ಷಗಳ ಗುಂಪು, ಈ ತ್ರಿಕೋಣ ಪೈಪೋಟಿಯಲ್ಲಿ ಅತ್ಯಂತ ಮುಂಚುಣಿಯಲ್ಲಿರುವವರು ನರೇಂದ್ರ ಮೋದಿ ಎನ್ನುವದರಲ್ಲಿ ಯಾವುದೇ ಸಂಶವೇಯಿಲ್ಲ, ಆದರೆ ೨೦೦೯ ರ ಚುನಾವಣೆಯಲ್ಲಿ ಒಂಬತ್ತು ರಾಜ್ಯಗಳಲ್ಲಿ ತನ್ನ ಖಾತೆಯನ್ನೇ ತಗೆಯದ ಬಿಜೆಪಿ ೨೦೧೪ ಚುನಾವಣೆಯಲ್ಲಿ ೨೭೨ ಮುಟ್ಟಬಹುದೆ? ಎನ್ನುವ, ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಮೋದಿಯವರು ಸುಳ್ಳು ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತಲ್ಲಿವೆ.

೯ ರಾಜ್ಯಗಳಲ್ಲಿ ನಿಮ್ಮ ಖಾತೆಯೇ ತೆರೆದಿಲ್ಲ, ಅಂದರೆ ಒಂದು ಲೋಕಸಭಾ ಸೀಟ್ ಗೆಲ್ಲಿಸಲಾಗಿಲ್ಲ, ಅದ್ಹೇಗೆ ಬಿಜೆಪಿ ದೆಹಲಿಯ ಕನಸು ಕಾಣುತ್ತಿದೆ ಎನ್ನುವವರು ಇತ್ತೀಚಿಗಿನ ಮೋದಿಯವರ ಜನಪ್ರೀಯತೆ ಹಾಗು ಹಿಂದೆಂದಿಗೂ ಇರದ ರಾಜ್ಯಗಳಲ್ಲಿ ಬಿಜೆಪಿಯ ದೊಡ್ಡ ಸಂಖ್ಯೆಯ ಕಾರ್ಯಕರ್ತರನ್ನು ನೋಡಿ ಹುಬ್ಬೇರಿಸುವಂತೆ ಮಾದಿದೆ.  ೨೦೦೯ ರಲ್ಲಿ ನಡೆದ ಚುನಾವಣೆ ಫಲಿತಾಂಶ ನೋಡಿದರೆ ಆಂಧ್ರ ಪ್ರದೇಶ, ದೆಹಲಿ, ಹರ್ಯಾಣ, ಜಮ್ಮು ಕಾಶ್ಮೀರ , ಕೇರಳ, ಒರಿಸ್ಸಾ, ತಮಿಳ್ ನಾಡು ಹಾಗು ಉತ್ತರಾಖಂಡದಲ್ಲಿ ಬಿಜೆಪಿ ಒಬ್ಬ ಲೋಕಸಭಾ ಸದಸ್ಯನನ್ನು ಗೆಲ್ಲಿಸಲಾಗಲಿಲ್ಲ, ಅದನ್ನೇ ಗುರಿಯಾಗಿಟ್ಟುಕೊಂಡ ಬಿಜೆಪಿ ನರೇಂದ್ರ ಮೋದಿಯವರ ಈ ಅಲೆಯನ್ನು ಈ ರಾಜ್ಯಗಳಲ್ಲಿ ತನ್ನ ಪ್ರಭಾವ ಹೆಚ್ಚಿಸುವದರಲ್ಲಿ ಒಂದಿಷ್ಟರ ಮಟ್ಟಿಗೆ ಯಶಸ್ವಿಯಾಗಿದೆ.  ಯಾವ ಜಮ್ಮು ಹಾಗು ಕಾಶ್ಮೀರ ಅಬ್ದುಲ್ಲಾ ಗಳ ಕೈಯಲ್ಲಿ ಕಳೆದ ೬೦ ವರ್ಷಗಳಿಂದ ಬೇರೆ ರಾಜಕೀಯ ವಿಕಲ್ಪವೇ ಇಲ್ಲವೇನು ಅನ್ನುತ್ತಿತ್ತೋ ಅಲ್ಲಿಂದ ಪ್ರಾರಂಭಿಸಿ, ಬರಿ ಡಿಎಂಕೆ ಹಾಗು ಎಐಡಿಎಂಕೆಗಳಿಗೆ ಮಾತ್ರ ಇಲ್ಲಿ ಉಳಿಗಾಲ ಎನ್ನುವ ತಮಿಳು ನಾಡಿನ ರಾಜಕೀಯ ಲೆಕ್ಕಾಚಾರವನ್ನು ಸುಳ್ಳು ಮಾಡಲು ಹೊರಟಿದೆ, ಇದಕ್ಕೆ ಸಾಕ್ಷಿಯಾಗಿದ್ದೆ ಜಮ್ಮು ಹಾಗು ತಮಿಳು ನಾಡಿನಲ್ಲಿ ನಡೆದ ಬೃಹತ್ತ್ ಸಮಾವೇಶ ಹಾಗು ಸಾಲು ಸಾಲು ಬಿರುಸಿನ ರಾಜಕೀಯ ಚಟುವಟಿಕೆಗಳೇ ಸಾಕ್ಷಿ.

ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯಿಂದ ಹೊರಗೆ ವಿಚಾರ ಮಾಡದ ಕೇರಳ ಹಾಗು ಪಶ್ಚಿಮ ಬಂಗಾಳ ಮೋದಿಯವರ ಅಭಿವೃದ್ಧಿ ಮಾಡೆಲ್ ಗೆ ಮಾರು ಹೋದಂತಿದೆ, ಇದನ್ನೇ ಮತಗಾಳಾಗಿ ಪರಿವರ್ತಿಸಲು ನರೇಂದ್ರ ಮೋದಿಯವರು ಮತ್ತೆ ಮತ್ತೆ ಈ ರಾಜ್ಯಗಳಿಗೆ ಹೆಚ್ಚಿನ ಪ್ರವಾಸ ಮಾಡುತ್ತಿದ್ದಾರೆ.   ಇನ್ನು ಅಭಿವೃದ್ಧಿಯಿಂದ ವಂಚಿತವಾಗಿರುವ ಹಾಗು ಬರಿ ಸ್ಥಳೀಯ ನಾಯಕರ ಪ್ರಚಾರಕ್ಕೆ ಮಾತ್ರ ಸೇರುತ್ತಿದ್ದ ಗುವಾಹಟಿಯಲ್ಲಿ ಮೊನ್ನೆ ೩ ಲಕ್ಷಕ್ಕಿಂತ ಹೆಚ್ಚು ಜನ ಮೋದಿಯವರ ಇಂಫಾಲ್ ಸಮಾವೇಶಕ್ಕೆ ಬಂದಿದ್ದು ಎಲ್ಲರಿಗೂ ಅಚ್ಚರಿ ಹುಟ್ಟಿಸಿತು.  ಆಂಗ್ಲ ಪತ್ರಿಕೆಯೊಂದು ಹೇಳುವಂತೆ ೮೦ ರ ದಶಕದ ನಂತರ ರಾಷ್ಟೀಯ ನಾಯಕನೊಬ್ಬನಿಗೆ ಅಸ್ಸಾಮಿನ ಜನ ಮೆಚ್ಚಿರುವದು ಇದೆ ಮೊದಲಿಗೆ, ಇದು ಜನರ ಬದಲಾವಣೆಯ ನಿರೀಕ್ಷೆಯನ್ನು ಎತ್ತಿ ತೋರಿಸುತ್ತಿದೆ.

ಈಗಾಗಲೇ ನಡೆದ ೫ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ತೋರಿಸಿದೆ, ಹೀಗಾಗಿ ಮೋದಿಯವರ ನಾಯಕತ್ವವನ್ನು ಒಪ್ಪಿರುವ ಸ್ಥಳೀಯ ನಾಯಕರ ಮೇಲೆ ಜವಾಬ್ದಾರಿ ವಹಿಸಿ ಸ್ವತಹ ಮೋದಿಯವರು ಅಷ್ಟೊಂದು ಪ್ರಚಾರ ಮಾಡುವ ಅವಶ್ಯಕತೆಯೇನು ಕಾಣಿಸುತ್ತಿಲ್ಲ.  ಶಿವರಾಜ್ ಸಿಂಘ್ ಚೌಹಾಣ್, ರಮನ್ ಸಿಂಘ್, ವಸುಂದರಾ ರಾಜೆ ಹಾಗು ದಿಲ್ಲಿಯಲ್ಲಿ ಹರ್ಷವರ್ಧನ್ ನಾಯಕತ್ವ ಲೋಕಸಭೆಯಲ್ಲಿ  ಒಳ್ಳೆಯ ಫಲಿತಾಂಶ ಕೊಡುವದು ನಿಶ್ಚಿತ. ಅಷ್ಟಕ್ಕೂ ಈಗಾಗಲೇ ಬಿಜೆಪಿಯ ಪ್ರಾಭಲ್ಲ್ಯವಿರುವ ಕರ್ನಾಟಕ ಹಾಗು ಗೋವಾ ಕೂಡ ನರೇಂದ್ರ ಮೋದಿಯವರು ಕಡೆಗಣಿಸಿಲ್ಲ, ಸ್ತಳೀಯ ಕಾರ್ಯಕರ್ತರ ಜೊತೆ ಮೋದಿಯವರು ಇಲ್ಲೂ ತಮ್ಮ ಪ್ರಭಾವವನ್ನು ಹೆಚ್ಚಿಸಲು ಬಿರುಸಿನ ಪ್ರಚಾರ ಕೆಲಸ ನಡೆಯುತ್ತಲೇ ಇದೆ.

ವಿವಿಧ ರಾಜ್ಯಗಳಲ್ಲಿ ಸ್ತಳೀಯ ವಿಷಗಳ ಮುಖಾಂತರ ಹತ್ತಿರವಾಗುವದರಲ್ಲಿ ನರೇಂದ್ರ ಮೋದಿ ತುಂಬಾ ಚಾಣಾಕ್ಷರು, ಕಾಶ್ಮೀರದಲ್ಲಿ ಭಯೋತ್ಪಾದನೆ,  ಆಂಧ್ರದಲ್ಲಿ ತಿಲಂಗನಾ, ತಮಿಳು ನಾಡಿನಲ್ಲಿ ಶ್ರೀಲಂಕ, ಅಸ್ಸಾಮಿನಲ್ಲಿ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮಾತನಾಡಿದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯ ಮಂತ್ರ. ಅವರ ಭಾಷಣಕ್ಕೆ ಮುಂಚೆ ಸ್ಥಳೀಯ ಭಾಷೆಗಳಲ್ಲಿ ಒಂದಿಷ್ಟು ಸಾಲುಗಳನ್ನು ಮಾತನಾಡುವದಾಗಲಿ, ಆಯಾ ರಾಜ್ಯಕ್ಕೂ ಹಾಗು ಗುಜರಾತಿಗೆ ಅಥವಾ ವಯ್ಯಕ್ತಿಕವಾಗಿ ಇರುವ ಸಂಭಂಧ ಹೇಳುವದರೊಂದಿಗೆ ಜನರಿಗೆ ಹತ್ತಿರ ಹೋಗಲು ಪ್ರಯತ್ನಿಸುತ್ತಾರೆ, ಆ ರಾಜ್ಯಾದ ಜನ ಅವಕಾಶ ಕೊಟ್ಟಲ್ಲಿ ಆಯಾ ರಾಜ್ಯಗಳ ಸಮಸ್ಯೆ ಬಗೆಹರಿಸುವದರ ಕಡೆಗೆ ಗಮನ ಮೊದಲು ಗಮನ ಹರಿಸುತ್ತೇನೆ ಎನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸುತ್ತಾರೆ.  ಅದಕ್ಕೆ ಇರಬೇಕು ಹಿಂದಿಯನ್ನೇ ಸರಿಯಾಗಿ ಅರಿಯದ ಹಾಗು ರಾಷ್ಟೀಯ ಪಕ್ಷಿಗಳಿಗೆ ಮಣೆ ಹಾಕದ ತಮಿಳು ನಾಡಿನ ಹಾಗು ಕೇರಳದ ಲಕ್ಷಾನು ಲಕ್ಷ ಜನ ಮೋದಿಯವರನ್ನು ಕಂಡು ಖುಷಿ ಪಡುವದು.

ಮೊದಲೇ ಕಾಂಗ್ರೆಸ್ಸಿನ ದೂರಾಡಳಿತ ಹಾಗು ಬೃಷ್ಟಚಾರದಿಂದ ಬೇಸತ್ತ ಸಾಮಾನ್ಯ ಜನರಿಗೆ ನರೇಂದ್ರ ಮೋದಿ ಒಬ್ಬ ನಾಯಕನಷ್ಟೇ ಅಲ್ಲ, ಬದಲಾವಣೆಯ ದಾರಿ ದೀಪವಾಗಿ ಕಾಣುತಿದ್ದಾರೆಂದರೆ ತಪ್ಪಾಗದು. ಅದಕ್ಕೆ ಇರಬೇಕೇನೋ, ಮೋದಿಯವರು ಖುದ್ದು ಮಾತನಾಡುತಿದ್ದಾಗ ಜನ “ಮೋದಿ ಮೋದಿ ” ಎನ್ನುವ ಘೋಷಣೆ ಕೂಗುತ್ತಿರುತ್ತಾರೆ, ಅವರಿಗೆ ಬೇಕಿದ್ದು ಮೋದಿಯೆಂಬು ವ್ಯಕ್ತಿ ಮಾತ್ರವಲ್ಲ, ಬದಲಾವಣೆ ತರಲೆಬೇಕೆನ್ನುವ ಕನಸಿನ ಆಶಾಕಿರಣದ ಪದಗಳವು. ಮೋದಿ ಆ ಬದಲಾವಣೆಯ ದಾರಿಯೇಡಗೆ ಕರೆದು ಕೊಂಡು ಹೋಗಬಲ್ಲ ಸಮರ್ಥ ನಾಯಕ ಎನ್ನುವ ವಿಶ್ವಾಸ ಈಡೀ ಭಾರತದ ಜನರಲ್ಲಿ ಎದ್ದು ಕಾಣಿಸುತ್ತಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ.  ದುಡ್ಡಿದ್ದವರು ಯಾರಾದರು ದೊಡ್ಡ ಸಮಾವೇಶಗಳನ್ನು ಮಾಡಬಹುದು ನಿಜ, ಆದರೆ ಮೋದಿಯವರ ಸಮಾವೇಶಗಳಲ್ಲಿ ಸೇರುವ ಯುವಕರ ಸಂಖ್ಯೆ, ಅವರಲ್ಲಿನ ಶಿಸ್ತು ಹಾಗು ಅವರಲ್ಲಿರುವ ಉತ್ಸಾಹ ಅವರು ಹಣಕ್ಕೆ ಬಂದವರಲ್ಲವೆಂದು  ಸ್ಪಷ್ಟವಾಗಿ
ಗೋಚರಿಸುತ್ತದೆ.

ಇನ್ನು ಮೊದಲಿಂದಲು “ಒಂದು ಚುನಾವಣೆಗೆ ಒಬ್ಬ ನಾಯಕ” ಎನ್ನುವದರಲ್ಲಿ ನಂಬಿಕೆಯಿಟ್ಟ ಬಿಜೆಪಿ ಮೋದಿಯವರ ದಿಟ್ಟ ಮಾತು, ಸ್ವಚ್ಛ ಚಾರಿತ್ರ್ಯ ಹಾಗು ಸ್ಪಷ್ಟ ಗುರಿಯನ್ನು ತನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವದರಲ್ಲಿ ಯಾವುದೇ ರೀತಿಯಿಂದ ಹಿಂದುಳಿದಿಲ್ಲ, ಪ್ರಾರಂಭದಲ್ಲಿ ಒಂದಿಷ್ಟು ಭಿನ್ನಾಭಿಪ್ರಾಯಗಳಿದ್ದರು, ಮೋದಿಯೇ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಮೇಲೆ ಯಾವುದೇ ರೀತಿ ಗೊಂದಲಗಳಿಂದ ದೂರ ಉಳಿದಿರುವದು ಹಾಗು ತನ್ನೆಲ್ಲ ಕಾರ್ಯಕರ್ತರ ಶಕ್ತಿಯನ್ನು ಒಬ್ಬ ಬಲಿಷ್ಠ ನಾಯಕನನ್ನು ಗೆಲ್ಲಿಸುವದರಲ್ಲಿ ತೊಡಗಿಸಿರುವದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಒಡೆದು ಅಳುವದರಲ್ಲಿ ನಿಸ್ಸೀಮರಾದ ಕಾಂಗ್ರೆಸ್ಸಿನ ನಾಯಕರು ನರೇಂದ್ರ ಮೋದಿಯವರನ್ನು ದೂಶಿಸುವದರಲ್ಲಿ ಏನು ಕಡಿಮೆ ಮಾಡಿಲ್ಲ, ಚುನಾವಣೆ ಹತ್ತಿರ ಬಂದೆಂತೆಲ್ಲ ಮೋದಿ, ಬಿಜೆಪಿ ಹಾಗು ಅರ್ ಎಸ್ ಎಸ್ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಫಲಿತಾಂಶಗಳಲ್ಲಿ ಒಂದಿಷ್ಟು ಎಡವಟ್ಟಾದರು ಕಮ್ಯುನಲ್ ಪಕ್ಷದವರನ್ನು ದೂರವಿಡಬೇಕು ಎನ್ನುವ ನೆಪ ಮಾಡಿ ಯುಪಿಯೆ ಥರ್ಡ್ ಫ್ರಂಟ್ ಅನ್ನುವ ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿಯಿಲ್ಲದ ರಾಜಕೀಯ ಪಕ್ಷಗಳೊಡನೆ ಸೇರಿದರು ಸೇರಬಹುದು. ಇನ್ನು ದಿನಬೆಳಗಾದರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ ಮೊದಲಿಂತೆ ಅಷ್ಟೇನೂ ಸಮಸ್ಯೆ ಆಗಲಿಕ್ಕಿಲ್ಲ ಆದರೆ ಸಂಪೂರ್ಣ ತಳ್ಳಿಹಾಕುವಂತಿಲ್ಲ.

ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಬೇರೆ ಸಮಯದಲ್ಲಿ ಸಾಮಾನ್ಯ ಜನ ಪ್ರಭು ಆಗುತ್ತಾರೋ ಇಲ್ಲವೋ, ಆದರೆ ಚುನಾವಣೆಯಲ್ಲಿ ಮಾತ್ರ ಮತದಾರನೇ ಪ್ರಭು, ದೇಶದ ಭವಿಷ್ಯದ ಬಗ್ಗೆ ಅವನು ಮಾಡಿದ್ದ ನಿರ್ಧಾರವೇ ಕೊನೆ, ಆದರೆ ೨೦೧೪ ಚುನಾವಣೆಯಲ್ಲಿ ನರೇಂದ್ರ ಬರಿ ಹೆಚ್ಚಿನ ಸಂಖ್ಯೆಯ ಲೋಕಸಭಾ ಸೀಟ್ ಗೆಲ್ಲುವದಷ್ಟೇ ಅಲ್ಲ, ದೇಶದ ಉದ್ದಗಲಕ್ಕೂ ಬಿಜೆಪಿಯ ವೋಟ ಶೇರ್ ಹೆಚ್ಚು ಮಾಡುವದರಲ್ಲಿ ಯಾವುದೇ ಸಂಶಯವೇ ಇಲ್ಲ,  ಈ ಬಾರಿಯ ಚುನಾವಣೆಯ ಫಲಿತಾಂಶ ಎಲ್ಲ ಲೆಕ್ಕಗಳನ್ನು ಮೀರಿವದಂತು ಶಥಸಿದ್ದ.  ಅಷ್ಟಕ್ಕೂ ಭಾರತಕ್ಕೆ ಈಗ ಬೇಕಿರುವದು ಒಬ್ಬ ಪ್ರಭುದ್ದ ರಾಜಕಾರಣಿ ಹಾಗು ಸ್ಪಷ್ಟ ಬಹುಮತದ ಸ್ತಿರ ಸರ್ಕಾರ.

3 ಟಿಪ್ಪಣಿಗಳು Post a comment
 1. ಫೆಬ್ರ 17 2014

  ಹತ್ತು ವರ್ಷಗಳಿಂದ ಯುಪಿಎ ಸರಕಾರದ ದುರಾಡಳಿತದಿಂದ ರೋಸಿಹೋಗಿರುವ ಜನ ಬದಲಾವಣೆಗೆ ಹಾತೊರೆಯುತ್ತಿದ್ದಾರೆ.
  ಇದೇ ಅವಧಿಯಲ್ಲಿ ಗುಜರಾತಿನಲ್ಲಾಗಿರುವ ಅಭಿವೃದ್ಧಿ ಮತ್ತು ಮೂರು ಬಾರಿ ಪುನರಾಯ್ಕೆಗೊಂಡು ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಮಾದ್ಯಮಗಳು ಮತ್ತು (ದೇಶವಿರೋಧಿ) ಸಿಕ್ಯುಲಾರ್ ಪಡೆಗಳು ಎಷ್ಟೇ ಅಪಪ್ರಚಾರ ನಡೆಸಿದರೂ, ಕಣ್ಮುಂದೆ ಕಾಣುವ ಅಭಿವೃದ್ಧಿಯನ್ನು ಮರೆಮಾಚುವುದು ಸಾಧ್ಯವಿಲ್ಲ ತಾನೆ? ಯುಪಿಎ ದುರಾಡಳಿತಕ್ಕೆ ಗುಜರಾತಿನ ಅಭಿವೃದ್ಧಿ ಮಾದರಿ ಉತ್ತರವಾಗಿದೆ. ಹೀಗಾಗಿಯೇ ಕೇರಳದಂತಹ ರಾಜ್ಯದಲ್ಲೂ, ಅಲ್ಲಿನ ರಾಜ್ಯ ಸರಕಾರ ತನ್ನ ಯೋಜನೆಯ ಜಾಹಿರಾತುಗಳಲ್ಲಿ ಗುಜರಾತಿನ ರಸ್ತೆಗಳ ಚಿತ್ರಗಳನ್ನೇ ಹಾಕುತ್ತಿದ್ದಾರೆ!
  ದೇಶದ ಜನರೇನೂ ಕುರುಡರಲ್ಲ, ಕಿವುಡರಲ್ಲ, ದಡ್ಡರೂ ಅಲ್ಲ. ಅವರಿಗಿಂದು ಸತ್ಯ ಅರ್ಥವಾಗಿದೆ. ಬದಲಾವಣೆಗೆ ಹಾತೊರೆಯುತ್ತಿರುವ ಜನರಿಗೆ ಮೋದಿ ಆಶಾಕಿರಣವಾಗಿ ಗೋಚರಿಸಿದ್ದಾರೆ. ಚುನಾವಣೆಯಲ್ಲಿ ಭಾಜಪಕ್ಕೇ ಪೂರ್ಣ ಬಹುಮತ ಬಂದರೂ ಅಚ್ಚರಿಯಿಲ್ಲ.

  ಭಾಜಪಕ್ಕೆ ಪೂರ್ಣ ಬಹುಮತ ಬಂದಲ್ಲಿ, ದೇಶವನ್ನು ಕಳೆದೆರಡು ದಶಕಗಳಿಂದ ಕಾಡುತ್ತಿರುವ ಸಮ್ಮಿಶ್ರ ಸರಕಾರಗಳ ಕತ್ತಲಯುಗ ಕಳೆದಂತಾಗುತ್ತದೆ. ಭಾರತದ ರಾಜಕೀಯಕ್ಕೇ ಹೊಸ ದಿಕ್ಕು ಸಿಗುತ್ತದೆ. ಕಮ್ಯುನಿಸಂ, ಮಾವೋಯಿಸಂ, ನಕ್ಸಲ್^ವಾದ, ಸಿಕ್ಯುಲಾರ್ ವಾದ, ಜಿಹಾದಿ ಭಯೋತ್ಪಾದನೆ, ಭ್ರಷ್ಟಾಚಾರ, ಮತಾಂತರ, ಹಿಂದು ವಿರೋಧ – ಇವೆಲ್ಲವೂ ಶಾಶ್ವತವಾಗಿ ಸಮಾಧಿಯನ್ನು ಸೇರುತ್ತವೆ! ಭಾರತವು ಮತ್ತೊಮ್ಮೆ ಅಭಿವೃದ್ಧಿ ಪಥದಲ್ಲಿ ಸಾಗಿ, ಜಗತ್ತಿನಲ್ಲೇ ಅದ್ವಿತೀಯ ದೇಶವಾಗಿ ಮಿಂಚುತ್ತದೆ, ಜಗತ್ತಿಗೇ ಶಾಂತಿಯ ಸಂದೇಶವನ್ನು ಸಾರುತ್ತದೆ.

  ಉತ್ತರ
 2. Basu
  ಫೆಬ್ರ 19 2014

  ಚುನಾವಣಾ ಫಲಿತಾಂಶಗಳಲ್ಲಿ ಒಂದಿಷ್ಟು ಎಡವಟ್ಟಾದರು ಕಮ್ಯುನಲ್ ಪಕ್ಷದವರನ್ನು ದೂರವಿಡಬೇಕು ಎನ್ನುವ ನೆಪ ಮಾಡಿ ಯುಪಿಯೆ ಥರ್ಡ್ ಫ್ರಂಟ್ ಅನ್ನುವ ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿಯಿಲ್ಲದ ರಾಜಕೀಯ ಪಕ್ಷಗಳೊಡನೆ ಸೇರಿದರು ಸೇರಬಹುದು………………..100% right

  ಉತ್ತರ

ನಿಮ್ಮದೊಂದು ಉತ್ತರ Basu ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments