ರಾಜಿನಾಮೆ ಕೊಡಲು ಸಿದ್ಧ !
– ನವೀನ್ ನಾಯಕ್
ರಾಜಿನಾಮೆ ಕೊಡಲು ಸಿದ್ಧ !
ಯಾರು ಗೊತ್ತೇ ಹೀಗೆ ಹೇಳಿದ್ದು ? ನರೇಂದ್ರ ಮೋದಿಯವರು !
ಅಡ್ವಾಣಿ ಮತ್ತು ಅಟಲ್ ಜೀಯರ ನಡುವೆ ಎದ್ದ ಭಿನ್ನಾಭಿಪ್ರಾಯಗಳಲ್ಲಿ ಮಹತ್ವದ ಎರಡು ಘಟನೆಗಳು ಒಂದು ಅಯೋಧ್ಯಾ ವಿಚಾರ ಇನ್ನೊಂದು ಮೋದಿಯವರ ರಾಜಿನಾಮೆ ವಿಚಾರ. ಮೋದಿಯವರ ವಿಚಾರದಲ್ಲಿ ಅಡ್ವಾಣಿಯವರು ತಮ್ಮ ದೃಷ್ಟಿಕೋನವನ್ನು ಬೇರೆ ರೀತಿಯಾಗಿಸಿಕೊಂಡರು. ದಂಗೆಯ ಸಮಯದಲ್ಲಿ ಗುಜರಾತಿಗೆ ತೆರಳಿ ಅಲ್ಲಿಯ ಸಮಾಜದ ವಿವಿಧ ವರ್ಗಕ್ಕೆ ಸೇರಿದ ಅಪಾರ ಜನದೊಂದಿಗೆ ಮಾತನಾಡಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಅರಿತುಕೊಂಡರು. ಕ್ರಮಗಳ ಕುರಿತು ಅಲ್ಲಿಯ ಜನತೆ ತೃಪ್ತಿಯನ್ನು ಹೊಂದಿತ್ತು. ಇದರಿಂಧ ಮೋದಿಯವರು ಅಪರಾಧಿಯಾಗಿರಲಿಲ್ಲ ಬದಲಾಗಿ ಅವರು ಸ್ವಯಂ ರಾಜಕೀಯ ಬಲಿಪಶುವಾಗಿದ್ದಾರೆಂಬುದು ತಿಳಿದುಕೊಂಡರು. ಆದ್ದರಿಂದ ಮುಖ್ಯಮಂತ್ರಿಯಾಗಿ ಒಂದು ವರ್ಷವೂ ಕಳೆಯದ ಮೋದಿಯವರನ್ನು ಸಂಕೀರ್ಣ ಕೋಮು ಸನ್ನಿವೇಶಕ್ಕೆ ರಾಜಿನಾಮೆ ಪಡೆಯುವುದು ಅನ್ಯಾಯವಾಗುತ್ತದೆ. ಅದಲ್ಲದೇ ರಾಜಿನಾಮೆ ಪಡೆಯುವುದರಿಂದ ಗುಜರಾತಿನ ಸಾಮಾಜಿಕ ಸ್ಥಿತಿಗತಿಯನ್ನು ಧೀರ್ಘಕಾಲೀನವಾಗಿ ಹದಗೆಡಬಹುದೆಂದು ಅಡ್ವಾಣಿಯವರು ಅರಿತುಕೊಂಡರು.
ಎನ್ ಡಿ ಎ ಮೈತ್ರಿಕೂಟವು 1998 ರಲ್ಲಿ ಸರಕಾರ ರಚನೆಯಾದ ಸಂದರ್ಭದಿಂದ 2002ರವರೆಗೆ ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಭಾಜಪ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಹಿಂದೂ ಕೋಮಿನ ಉನ್ಮಾದಕ್ಕೆ ಒಳಗಾಗುತ್ತಾರೆ ಎಂಬ ರಾಜಕೀಯ ವಿರೋಧಿಗಳ ಆಪಾದನೆಗೆ ತಕ್ಕ ಉತ್ತರ ನೀಡಿದ್ದರು. ಆದರೆ ಈ ಸಾಧನೆಯನ್ನು ಗೋಧ್ರ ಮತ್ತು ನಂತರದ ಘಟನೆಗಳು ಮುಚ್ಚಿಹಾಕಿದವು. ಇದರಿಂದ ಕೇಂದ್ರ ಸರಕಾರದ ವರ್ಚಸ್ಸಿಗೆ ತೀರ್ವವಾಗಿ ಧಕ್ಕೆಯಾಗಿತ್ತು. ಈ ದಂಗೆಯ ಸಮಯದಲ್ಲಿ ಎನ್ ಡಿ ಎ ಒಕ್ಕೂಟದಲ್ಲಿ ಮೋದಿ ಕುರಿತು ಅಪಸ್ವರಗಳು ತಾರಕಕ್ಕೆ ಏರಿದ್ದವು. ಪ್ರತಿಪಕ್ಷಗಳು ಮೋದಿ ರಾಜಿನಾಮೆ ನೀಡಲೇಬೇಕೆಂಬ ಬೇಡಿಕೆ ಉತ್ತುಂಗಕ್ಕೆ ಏರಿತ್ತು. ಈ ಬೆಳವಣಿಗೆಗಳಿಂದ ವಾಜಪೇಯಿಯವರು ಕಳೆಗುಂದಿದ್ದರು. ವೈಯಕ್ತಿಕವಾಗಿ ವಾಜಪೇಯಿಯವರು ಕೂಡ ರಾಜಿನಾಮೆಗೆ ಬಯಸಿದ್ದರು. ಈ ದಂಗೆಗೆ ಪರ್ಯಾಯವಾಗಿ ಏನೋ ಒಂದು ಕ್ರಮ ಕೈಗೊಳ್ಳಬೇಕೆಂದು ಅನಿವಾರ್ಯವಾಗಿ ಮೋದಿ ರಾಜಿನಾಮೆ ಪಡೆಯಬೇಕೆಂದು ಅಟಲ್ ಜೀ ಯವರಿಗೆ ಅನಿಸಿತ್ತು. ಆದರೆ ಅಟಲ್ ಜೀಯವರ ಈ ಕ್ರಮಕ್ಕೆ ಅಡ್ಡ ನಿಂತವರೇ ಲಾಲ್ ಕೃಷ್ಣ ಅಡ್ವಾಣಿ !
2002 ಏಪ್ರಿಲ್ ನಲ್ಲಿ ಭಾಜಪದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆ ಗೋವಾದಲ್ಲಿ ನಡೆಯುವುದಿತ್ತು. ಈ ಸಭೆಯಲ್ಲಿ ಗುಜರಾತ್ ಬಗ್ಗೆ ಮತ್ತು ಮೋದಿಯವರ ಭವಿಷ್ಯದ ಕುರಿತು ಏನು ನಿರ್ಣಯ ಕೈಗೊಳ್ಳಬಹುದೆಂದು ಮಾದ್ಯಮಗಳು ಚರ್ಚಿಸುತಿದ್ದವು. ಈ ಸಭೆಗೆ ಅಟಲ್ ಜೀಯವರು ವಿಶೇಷ ವಿಮಾನದಲ್ಲಿ ತಮ್ಮೊಂದಿಗೆ ಬರಲು ಅಡ್ವಾಣಿಯವರಿಗೆ ಆಹ್ವಾನವಿತ್ತರು. ಇದಕ್ಕೊಪ್ಪಿಕೊಂಡ ಅಡ್ವಾಣಿಯರೊಂದಿಗೆ ವಿದೇಶಾಂಗ ಸಚಿವರಾಗಿದ್ದ ಹಾಗು ವಾರ್ತಾ ಮತ್ತು ಸಂಪರ್ಕ ಸಚಿವರಾಗಿದ್ದ ಅರುಣ್ ಶೌರಿಯವರು ಹಾಜರಾಗಿದ್ದರು. ವಿಮಾನದಲ್ಲಿನ ಪ್ರಧಾನಿಯವರ ಪ್ರತ್ಯೇಕ ಸಮಾಲೋಚನ ಕೊಠಡಿಯಲ್ಲಿ ಕೆಲವು ವಿಚಾರಗಳ ಕುರಿತು ಚರ್ಚಿಸಿದ ನಂತರ ಗುಜರಾತ್ ಕಡೆ ಮುಖಂಡರ ಮಾತುಕತೆ ಹೊರಳಿತು. ಈ ವಿಷಯ ಬಂದಾಗ ವಾಜಪೇಯಿಯವರು ಮೌನಕ್ಕೆ ಶರಣಾದರು. ಸ್ವಲ್ಪ ಸಮಯ ಉಳಿದವರೂ ಮಾತನಾಡಲಿಲ್ಲ. ಕಡೆಗೆ ಮೌನ ಮುರಿದು ಜಸ್ವಂತ್ ರವರು ವಾಜಪೇಯಿಯವರಿಗೆ ಏನು ಆಲೋಚನೆ ಮಾಡುತಿದ್ದೀರೆಂದು ಪ್ರಶ್ನಿಸಿದರು. ಅದಕ್ಕೆ ಅಟಲ್ ಜೀಯವರು “ಕಮ್ ಸೇ ಕಮ್ ಇಫ್ತೀಫೆ ಕಾ ಆಫರ್ ತೋ ಕರ್ತೆ ” ( ಕಡೇ ಪಕ್ಷ ಮೋದಿಯವರು ರಾಜನಾಮೆ ಕೊಡಬಹುದಾಗಿ ಹೇಳಬಹುದಲ್ವಾ ?) ಎಂದರು. ಪ್ರತ್ಯುತ್ತರವಾಗಿ ಅಡ್ವಾಣಿಯವರು ” ಮೋದಿ ರಾಜಿನಾಮೆಯಿಂದಾಗಿ ಗುಜರಾತ್ ಪರಿಸ್ಥಿತಿ ಸುಧಾರಿಸುವುದಾದರೆ ಅವರು ರಾಜಿನಾಮೆ ನೀಡುವಂತೆ ನಾನೇ ಹೇಳುತ್ತೇನೆ. ಆದರೆ ರಾಜಿನಾಮೆಯಿದ ಪ್ರಯೋಜನವಾಗುತ್ತದೆ ಎಂದು ನಾನು ನಂಬುವುದಿಲ್ಲ. ಅದಾಗಿಯೂ ರಾಜಿನಾಮೆಯನ್ನು ರಾಷ್ಟ್ರೀಯ ಮಂಡಳಿಯಾಗಲೀ, ಕಾರ್ಯಕಾರಿಣಿ ಸಮಿತಿಯಾಗಲೀ ಸ್ವೀಕರಿಸಬಹುದೆಂದು ಹೇಳಲಾಗದು ಎಂದರು.
ತದನಂತರ ಗೋವಕ್ಕೆ ಬಂದ ಕೂಡಲೇ ಅಡ್ವಾಣಿಯವರು ಮೋದಿಯವರನ್ನು ಭೇಟಿಯಾಗಿ ರಾಜಿನಾಮೆಯನ್ನು ಪ್ರಸ್ಥಾಪಿಸುವಂತೆ ಹೇಳಿದರು. ಈ ಕುರಿತು ಮೋದಿ ಕೂಡ ಒಪ್ಪಿಕೊಂಡರು. ಮಾಧ್ಯಮಗಳ ನಿರೀಕ್ಷೆಯಂತೆ ಗುಜರಾತ್ ಕುರಿತು ಕಾರ್ಯಕಾರಿಣಿಯಲ್ಲಿ ಪ್ರಸ್ಥಾಪವಾಯಿತು. ಎಲ್ಲ ಮುಖಂಡರ ಮಾತಿನ ನಂತರ ಮೋದಿ ಗುಜರಾತ್ ಕುರಿತು ತಮ್ಮ ವಿಶ್ಲೇಷಣೆಯನ್ನು ಪ್ರಸ್ತಾಪಿಸಿದರು. ಇದರಲ್ಲಿ ಇತಿಹಾಸದುದ್ದಕ್ಕೂ ಗುಜರಾತ್ ನಡೆದು ಬಂದ ದಾರಿ, ಈ ಹಿಂದೆ ನಡೆದಿರುವಂತಹ ಕೋಮು ಗಲಭೆಗಳು, ತಿಂಗಳುಗಟ್ಟಲೇ ಕರ್ಫ್ಯು ವಿಧಿಸಿರುವುದನ್ನು ಸಮಿತಿಯ ನೆನಪಿಗೆ ತಂದರು. ಎಲ್ಲಾ ವಿಷಯಗಳನ್ನು ನಿಸ್ಪಕ್ಷಪಾತವಾಗಿ ವಿವರಿಸಿದ ಮೇಲೆ ತಮ್ಮ ಸರಕಾರದ ಕ್ರಮಗಳನ್ನೂ ವಿವರಿಸಿದರು. ನಂತರ ಸಮಿತಿಯನ್ನು ಉದ್ದೇಶಿಸಿ ಏನೇ ಆದರೂ ನನ್ನ ರಾಜ್ಯದಲ್ಲಿ ಆಗಿರುವುದಕ್ಕೆ ರಾಜ್ಯ ಸರಕಾರದ ಮುಖ್ಯಸ್ಥನಾಗಿ ನಾನು ಹೊಣೆಯನ್ನು ಹೊತ್ತಿಕೊಳ್ಳುತ್ತೇನೆ. ತತ್ಸಂಬಂಧ ರಾಜಿನಾಮೆಯನ್ನೂ ನೀಡುತ್ತೇನೆ ಎಂದು ಹೇಳಿಕೆ ನೀಡಿದರು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ನೂರಕ್ಕೂ ಹೆಚ್ಚು ಸದಸ್ಯರಿದ್ದ ಸಮಿತಿ ಕೂಡಲೇ ” ಇಸ್ತೀಫಾ ಮತ್ ದೋ ” ( ರಾಜಿನಾಮೆಯನ್ನು ನೀಡಬೇಡಿ ) ಎಂದು ಒಕ್ಕೊರಲಿನಿಂದ ಕೂಗಿದರು. ಅಡ್ವಾಣಿಯವರು ಹಿರಿಯ ನಾಯಕರ ಸಲಹೆಯನ್ನು ಸ್ವೀಕರಿಸಲು ಶುರುಮಾಡಿದರು. ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು, ರಾಜಿನಾಮೆಯ ಅವಶ್ಯಕತೆ ಇಲ್ಲವೆಂದು. ಈ ಎಲ್ಲಾ ಬೆಳವಣಿಗೆಗಳು ನಡೆದು ದಶಕವೇ ಕಳೆದುಹೋಗಿವೆ. ತನ್ನ ಅಧಿಕಾರವದಿಯಲ್ಲಿ 2002 ರ ಗಲಭೆಯ ನಂತರ ಒಂದೇ ಒಂದು ಗಲಭೆ ನಡೆಯದ ಹಾಗೆ ನೋಡಿಕೊಂಡಿದ್ದಾರೆ ಮೋದಿ. ಗುಜರಾತ್ ಕಂಡ ಮೊದಲ ಕೋಮು ಗಲಭೆ ರಹಿತ ದಶಕ ಮೋದಿಯವರ ಆಡಳಿತದಲ್ಲೇ !
ಹಿರಿಯರ ಮಾತಿಗೆ ಸಹಮತ ವ್ಯಕ್ತಪಡಿಸಿ ತನ್ನ ರಾಜಿನಾಮೆಯನ್ನು ಪ್ರಕಟಿಸಿದ ಮೋದಿಯವರನ್ನು ಇತ್ತೀಚೆಗೆ ಅಡ್ವಾಣಿಯವರ ವಿರುದ್ಧ ಮಾದ್ಯಮಗಳು ಎತ್ತಿ ಕಟ್ಟುತ್ತಿವೆ. ಆದರೆ ಅಧಿಕಾರದ ಹಪಾಹಪಿ ಈ ಇಬ್ಬರೂ ಮಹಾನ್ ನಾಯಕರಿಗೆ ಇಲ್ಲ. ಎನ್ ಡಿ ಎ ಆಡಳಿತದ ಸಮಯದಲ್ಲಿ ಅಟಲ್ – ಅಡ್ವಾಣಿ ಸಂಘರ್ಷ ಎಂಬ ಸುಳ್ಳು ಸುದ್ದಿ ಹರಡುತಿದ್ದರು. ಈಗ ಸ್ವಲ್ಪ ಬದಲಾವಣೆಯೊಂದಿಗೆ ಅಂದರೆ ಮೋದಿಯನ್ನು ಅಡ್ವಾಣಿ ಪ್ರತಿಸ್ಪರ್ಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಮೋದಿ ಮತ್ತು ಅಡಡ್ವಾಣಿಯವರ ಸಂಬಂಧ ಕುರಿತು ಹೆಚ್ಚಿನ ಮಾಹಿತಿ ಅಡ್ವಾಣಿಯವರ ನನ್ನ ದೇಶ ನನ್ನ ಜೀವನ ಪುಸ್ತಕದಲ್ಲಿ ಸಿಗುತ್ತದೆ. ಕನ್ನಡಕ್ಕೆ ವಿಶ್ವೇಶ್ವರ ಭಟ್ಟರು ಅನುವಾದಿಸಿದ್ದಾರೆ.
ಚಿತ್ರ ಕೃಪೆ : http://www.rediff.com
ಅಬ್ಬ ಹೊಸ ವಿಷಯ. ರಾಜಧರ್ಮ ಪಾಲಿಸುವಂತೆ ಅಟಲ್‌ಜಿ ಮೋದಿಗೆ ತಿಳಿಸಿದಾಗ ಮೀಡಿಯಾ ಕ್ಯಾಮರಾಗಳೆದುರೋ ಮೋದಿ ಗದರಿದ್ದು ಹೇಗೆಂದು ಯೂಟ್ಯೂಬಿನಲ್ಲಿರುವ ವಿಡೀಯೋ ನೋಡಿ. ಅಂಥವರು ರಾಜಿನಾಮೆ ಕೊಡಲು ಮುಂದಾಗಿದ್ದರೆಂದು ಯಾಕೆ ಇನ್ನೋಂದು ಸುಳ್ಳನ್ನು ಹೊಸದಾಗಿ ಸೃಷ್ಟಿಸುತ್ತೀರಾ?
ಇದು ಹೊಸ ವಿಷಯವಲ್ಲ , ಹಳೇ ವಿಷಯ. ಮಾದ್ಯಮ ತೋರಿಸದ ವಿಚಾರ. ಆ ಸಮಯದಲ್ಲಿ ಅಟಲ್ ಜೀ ಮೋದಿ ವಿಚಾರದಲ್ಲಿ ಬೇಸರಿಸಿಕೊಂಡಿದ್ದು ನಿಜ! ಅಟಲ್ ಜೀ ಮೇಲೆ ಇದ್ದ ಪಕ್ಷದ ಆಂತರಿಕ ಮತ್ತು ಬೇರೆ ಪಕ್ಷಗಳಿಂದ ಇದ್ದ ಒತ್ತಡ ಮೋದಿ ವಿರುದ್ದ ಬೇಸರಿಸಿಕೊಳ್ಳಲು ಕಾರಣ. ಇದಕ್ಕೊಂದು ಉತ್ತರ ನೀಡಲೇಬೇಕಿತ್ತು. ಅವರ ದೃಷ್ಟಿ ಮೋದಿ ಮೇಲೆ ಬಿದ್ದಾಗ ಅದಕ್ಕೆ ಅಡ್ಡ ನಿಂತಿದ್ದು ಅಡ್ವಾಣಿಯವರೇ. ಅದಲ್ಲದೇ ಅಟಲ್ ಜೀ ರಾಜಧರ್ಮ ಪಾಲಿಸು ಎಂದು ಸಲಹೆ ನೀಡಿದ್ದರು ವಿನಃ ಮೋದಿ ರಾಜಧರ್ಮ ಪಾಲಿಸುತ್ತಿಲ್ಲವೆಂದಲ್ಲ. ಇನ್ನು ಮೋದಿ ಅದಕ್ಕೆ ಪ್ರತ್ಯುತ್ತರವಾಗಿ ಅದನ್ನೇ ಪಾಲಿಸುತಿದ್ದೇನೆ ಎಂದು ಹೇಳಿದ್ದಾರೆ. ಇದರಲ್ಲಿ ಗದರಿದ್ದಾರೆ ಎಂದು ನನಗನ್ನಿಸಲಿಲ್ಲ.
ತಿದ್ದುಪಡಿ ( ವಿದೇಶಾಂಗ ಸಚಿವರಾಗಿದ್ದ ಹಾಗು ವಾರ್ತಾ ಮತ್ತು ಸಂಪರ್ಕ ಸಚಿವರಾಗಿದ್ದ ಅರುಣ್ ಶೌರಿಯವರು ಹಾಜರಾಗಿದ್ದರು. ) ಬದಲು ( ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಹಾಗು ವಾರ್ತಾ ಮತ್ತು ಸಂಪರ್ಕ ಸಚಿವರಾಗಿದ್ದ ಅರುಣ್ ಶೌರಿಯವರು ಹಾಜರಾಗಿದ್ದರು. ) ಎಂದು ಓದಿಕೊಳ್ಳಬೇಕಾಗಿ ವಿನಂತಿ
ಇದುವರೆಗಿನ ಯಾವ ತನಿಖೆಯೂ … ಗೋಧ್ರ ರೈಲು ಹತ್ಯಾಕಾಂಡದ ಹಿಂದಿನ ರಾಜಕೀಯ ಪಿತೂರಿ ಏನಿತ್ತು ಎಂದು ಬೆಳಕು ಚೆಲ್ಲಿಲ್ಲ …. ನನಗನಿಸುತ್ತೆ , ಗೋಧ್ರ ರೈಲು ಹತ್ಯಾಕಾಂಡದ ಹಿಂದೆ ಕಾಂಗ್ರೆಸ್ಸಿನ ರಾಜಕೀಯ ಪಿತೂರಿ ಅಡಗಿದೆ. ಕೋಮು ಹಿಂಸೆಯನ್ನು ಹುಟ್ಟಿಸಿ .. ಕೇಂದ್ರದ ವಾಜಪೇಯೀ ಸರಕಾರ & ಗುಜರಾತಿನ ನರೇಂದ್ರ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿ … ಅಧಿಕಾರ ಕಬಳಿಸುವ ಸಂಚಿತ್ತು !! … ಸ್ವಾತಂತ್ರ್ಯಾ ನಂತರ ಕಾಲ ಕಾಲಕ್ಕೂ ನಡೆದ ಬಹಳಷ್ಟು ಕೋಮು ಹಿಂಸಾಚಾರಗಳು ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿವೆ