Skip to content

ಮಾರ್ಚ್ 3, 2014

86

ಜಗತ್ತಿಗೆ ಕಮ್ಯುನಿಸಂನ ಕೊಡುಗೆ ಕತ್ತಲೆ!?

by ನಿಲುಮೆ

– ನರೇಂದ್ರ ಕುಮಾರ್

ಉತ್ತರ ಕೊರಿಯಾರಷ್ಯಾ ಕಮ್ಯುನಿಸ್ಟ್ ದೇಶವಾಗಿತ್ತು. ಅದು ಕೂಡಾ “Super Power” ಎನಿಸಿಕೊಂಡು ಅಮೆರಿಕಕ್ಕೆ ಸರಿಸಮಾನವಾಗಿ ನಿಂತಿತ್ತು. ಅಮೆರಿಕ ಅಂತರಿಕ್ಷಕ್ಕೆ ಉಪಗ್ರಹವನ್ನು ಚಿಮ್ಮಿಸಿದರೆ, ರಷ್ಯಾವೂ ಉಪಗ್ರಹವನ್ನು ಕಳುಹಿಸಿತ್ತಿತ್ತು. ಹೀಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ, ತಾನು ಅಮೆರಿಕಕ್ಕಿಂತ ಹಿಂದಿಲ್ಲ ಎಂದು ತೋರಿಸುತ್ತಿತ್ತು. ಯುದ್ಧ ಸಾಮಾಗ್ರಿಗಳ ಉತ್ಪಾದನೆಯಲ್ಲೂ ಅದು ತನ್ನ ಸಾಮರ್ಥ್ಯ ತೋರ್ಪಡಿಸುತ್ತಿತ್ತು. ಒಟ್ಟಿನಲ್ಲಿ, ರಷ್ಯಾವೂ ಒಂದು ಮುಂದುವರೆದ ರಾಷ್ಟ್ರವೆಂದು ಜಗತ್ತು ನಂಬಿತ್ತು. ಆದರೆ, 80ರ ದಶಕದ ಅಂತ್ಯ ಭಾಗದಲ್ಲಿ ಗೋರ್ಬಚೇವ್ ಅವರು ಅಧಿಕಾರಕ್ಕೆ ಬಂದ ನಂತರ ಪೊರೆ ಹರಿಯಿತು. ರಷ್ಯಾದಿಂದ ಕಮ್ಯುನಿಸಂ ಉಚ್ಚಾಟಿಸಲಾಯಿತು. USSR ಎನ್ನುವ ರಾಷ್ಟ್ರ ಛಿದ್ರವಾಯಿತು. ಆಗ ತಿಳಿದ ಸತ್ಯವೆಂದರೆ, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಕಮ್ಯುನಿಸ್ಟ್ ದೇಶಗಳಲ್ಲಿ ಏನಾಗುತ್ತಿದೆ, ಅವುಗಳ ನಿಜವಾದ ಸ್ಥಿತಿ ಏನೆಂಬುದು ಹೊರಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಮಾದ್ಯಮಗಳೂ ಅಲ್ಲಿನ ಸರಕಾರದ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ, ತಮಗೆ ಬೇಕಾದ ಚಿತ್ರವನ್ನು ಮಾತ್ರ ಎಲ್ಲೆಡೆ ಅವರು ಬಿತ್ತರಿಸುತ್ತಿರುತ್ತಾರೆ.

ಇದೇ ಕಥೆ ಜರ್ಮನಿಯದ್ದು. ಪಶ್ಚಿಮ ಜರ್ಮನಿಯಲ್ಲಿ ಪ್ರಜಾಪ್ರಭುತ್ವವಿದ್ದರೆ, ಪೂರ್ವ ಜರ್ಮನಿ ಕಮ್ಯುನಿಸಂ ಆಲಿಂಗಿಸಿಕೊಂಡಿತ್ತು. 1989ರಲ್ಲಿ ಬರ್ಲಿನ್ ಗೋಡೆ ಬೀಳುವ ತನಕ ಪೂರ್ವ ಜರ್ಮನಿಯ ಸ್ಥಿತಿ ಯಾರಿಗೂ ತಿಳಿದಿರಲಿಲ್ಲ. ಆ ನಂತರ ತಿಳಿದದ್ದೇನೆಂದರೆ, ಕಮ್ಯುನಿಸಂ ಅಪ್ಪಿಕೊಂಡಿದ್ದ ಪೂರ್ವ ಜರ್ಮನಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿತ್ತು. ಜನರು ದಟ್ಟದರಿದ್ರರಾಗಿದ್ದರು. ಇತ್ತ ಕಡೆ ಪಶ್ಚಿಮ ಜರ್ಮನಿ ಜಾಗತಿಕ ಶಕ್ತಿಯಾಗುತ್ತಿತ್ತು.

ಎಲ್ಲಾ ಕಮ್ಯುನಿಸ್ಟ್ ದೇಶಗಳ ಕಥೆಯೂ ಹೀಗೆಯೇ! ಒಟ್ಟಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಕಮ್ಯುನಿಸಂ ಹೋಗುವವರೆಗೆ ಕಾಯಬೇಕು. ಆ ನಂತರವೇ ಸತ್ಯದರ್ಶನವಾಗುವುದು!!

ಆದರೆ, ಅದಕ್ಕೆ ಅಪವಾದವೇನೋ ಎಂಬಂತಿದೆ ಇತ್ತೀಚೆಗೆ NASA ಪ್ರಕಟಿಸಿರುವ ಭೂಗ್ರಹದ ಚಿತ್ರ.

ಕಮ್ಯುನಿಸಂ ಅಪ್ಪಿಕೊಂಡಿರುವ ದೇಶಗಳು ಕತ್ತಲಲ್ಲಿರುತ್ತವೆ ಎನ್ನುವುದಕ್ಕೆ NASA ಸಂಸ್ಥೆಯ International Space Station (ISS) ಭೂಮಿಗೆ ರವಾನಿಸಿರುವ ಚಿತ್ರವೇ ಸಾಕ್ಷಿ. ರಾತ್ರಿಯ ವೇಳೆ ತೆಗೆದಿರುವ ಭೂಗ್ರಹದ ಚಿತ್ರದಲ್ಲಿ, ಒಂದು ಕಡೆ ದಕ್ಷಿಣ ಕೊರಿಯಾ ದೇಶದ ತುಂಬಾ ದೀಪಗಳು ಹತ್ತಿ ಉರಿಯುತ್ತಿರುವಾಗ, ಉತ್ತರ ಕೊರಿಯಾ ದೇಶವು ಕತ್ತಲ ಕೂಪದಲ್ಲಿದೆ.ಕಮ್ಯುನಿಸ್ಟ್ ದೇಶವಾದ ಉತ್ತರ ಕೊರಿಯಾ ಸ್ಥಿತಿ ಹೇಗಿದೆ ಎನ್ನುವುದು ಕಮ್ಯುನಿಸಂ ಅಲ್ಲಿಂದ ಉಚ್ಚಾಟಿತವಾಗುವ ಮೊದಲೇ ಈ ಚಿತ್ರದಲ್ಲಿ ತಿಳಿಯುವಂತಿದೆಯಾ?
ಒಂದು ನೂರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಹೇಳಬಹುದು ಅಲ್ಲವೇ?

Advertisements
Read more from ಲೇಖನಗಳು
86 ಟಿಪ್ಪಣಿಗಳು Post a comment
 1. vidyashankara kotla
  ಮಾರ್ಚ್ 3 2014

  ಚೀನಾದ ಕಥೆ ಏನಾಗಬಹುದು

  ಉತ್ತರ
  • Nagshetty Shetkar
   ಮಾರ್ಚ್ 3 2014

   Americaದ ಕಥೆ ಏನಾಗಬಹುದು?

   ಉತ್ತರ
   • naveennayak799
    ಮಾರ್ಚ್ 3 2014

    ಉಳಿದ ಕಮ್ಯುನಿಷ್ಟ್ ದೇಶಗಳ ಚಿತ್ರ ತೆಗೆಯುತ್ತ ಕಮ್ಯುನಿಷ್ಟರನ್ನು ಬೆತ್ತಲುಗೊಳಿಸಬಹುದು

    ಉತ್ತರ
    • ವಿಜಯ್ ಪೈ
     ಮಾರ್ಚ್ 4 2014

     ಒಟ್ಟಿನಲ್ಲಿ ಕಮ್ಯುನಿಷ್ಟ್ ರಾಷ್ಟ್ರಗಳ ಪಾಡು..ಬೆಳಗ್ಗೆ ಬೆತ್ತಲೆ..ರಾತ್ರಿ ಕತ್ತಲೆ ಅಂತಾಯ್ತು!

     ಉತ್ತರ
 2. Nagshetty Shetkar
  ಮಾರ್ಚ್ 3 2014

  “ರಾತ್ರಿಯ ವೇಳೆ ತೆಗೆದಿರುವ ಭೂಗ್ರಹದ ಚಿತ್ರದಲ್ಲಿ, ಒಂದು ಕಡೆ ದಕ್ಷಿಣ ಕೊರಿಯಾ ದೇಶದ ತುಂಬಾ ದೀಪಗಳು ಹತ್ತಿ ಉರಿಯುತ್ತಿರುವಾಗ, ಉತ್ತರ ಕೊರಿಯಾ ದೇಶವು ಕತ್ತಲ ಕೂಪದಲ್ಲಿದೆ”

  ridiculous argument.

  ಉತ್ತರ
 3. Nagshetty Shetkar
  ಮಾರ್ಚ್ 3 2014

  Dear moderator, please ensure that articles have at least a minimum quality. Junk articles such as this one waste every body time and make author laughing stock.

  ಉತ್ತರ
  • naveennayak799
   ಮಾರ್ಚ್ 3 2014

   🙂 =D ಲೇಖನದ ಬಗ್ಗೆ ಚರ್ಚಿಸಿ.
   ಮಾರ್ಕ್ಸ್ ವಾದ ಆಮೇಲೆ ಮಾಡುವ.

   ಉತ್ತರ
  • ಮಾರ್ಚ್ 3 2014

   ಶೇಟ್ಕರ್ ಅವರೇ,
   NASA ಅನ್ನೇ ನಿಷೇಧಿಸಿಬಿಟ್ಟರೆ ಒಳ್ಳೆಯದು ಅಲ್ಲವೇ?
   ಇದೇ ಸುದ್ದಿ ಜಗತ್ತಿನ ಪ್ರಮುಖ ಮಾಧ್ಯಮಗಳಲ್ಲಿ ಈಗಾಗಲೇ ಪ್ರಕಟವಾಗಿದೆ. ಅವೆಲ್ಲವೂ “Junk Articles”ಗಳೇ ಆಗಿರಬೇಕಲ್ಲವೇ!? 😉

   ನೀವು ನಿಜಕ್ಕೂ ಸತ್ಯದ ಆರಾಧಕರಾದರೆ, ಬುದ್ಧಿಜೀವಿಗಳಾದರೆ, ನಿಮ್ಮ ಬುದ್ಧಿಯನ್ನು ಯಾರಿಗೂ ಮಾರಿಕೊಂಡಿಲ್ಲದಿದ್ದರೆ, ಲೇಖನಕ್ಕೆ ಸಂಬಂಧಿಸಿ ಮೌಲಿಕ ವಿಶ್ಲೇಷಣೆ ಮಾಡಿ; ಲೇಖನದಲ್ಲಿ ಸತ್ಯಾಂಶವಿಲ್ಲದಿದ್ದರೆ ಅದು ಯಾವುದು ಎಂದು ತೋರಿಸಿ.
   ಅದನ್ನು ಬಿಟ್ಟು “Junk, Rubbish” ಇತ್ಯಾದಿ ಪದಗಳನ್ನೇ ಉಪಯೋಗಿಸಿಕೊಂಡು ಮಾತನಾಡುತ್ತಿದ್ದರೆ, ನಿಮ್ಮ ಪ್ರತಿಕ್ರಿಯೆಯೇ Junk” ಆಗಿಬಿಡುತ್ತದೆ ಎನ್ನುವುದು ತಿಳಿದಿರಲಿ.

   ಉತ್ತರ
  • ಮಾರ್ಚ್ 3 2014

   ಶೇಟ್ಕರ್ ಅವರೇ,

   ನೀವು “ridiculous argument”, “Junk articles” ಎಂದೆಲ್ಲಾ ಹೇಳುತ್ತಿರುವ ಲೇಖನಕ್ಕೆ ನಿಮ್ಮಿಂದಲೇ ಮೂರು ವಿವಿಧ ಪ್ರತಿಕ್ರಿಯೆ ಬಂದಿದೆ. “ridiculous argument” ಬಗ್ಗೆ ಏಕಿಷ್ಟು ತಲೆಕೆಡಿಸಿಕೊಂಡುಬಿಟ್ಟಿದ್ದೀರಿ? 😉

   ನಮ್ಮ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಚೀನಾ, ರಷ್ಯಾ, ಉತ್ತರ ಕೊರಿಯಾ, ಪೂರ್ವ ಜರ್ಮನಿ, ಇತ್ಯಾದಿ ಕಮ್ಯುನಿಸ್ಟ್ ದೇಶಗಳಂತೆ ಇಲ್ಲಿ ಆಳುವವರಿಗೆ ಇಷ್ಟವಾಗಿದ್ದನ್ನೇ ಹೇಳಬೇಕೆನ್ನುವ ಒತ್ತಾಯವಿಲ್ಲ.
   ಹೀಗಾಗಿ, ಮಾಡರೇಟರ್ ಅವರಿಗೆ ಬರೆದು ಲೇಖನವನ್ನೇ ಮುಚ್ಚಿಸಿಹಾಕಿ, ಜಗತ್ತಿಗೆ ಸತ್ಯವೇ ತಿಳಿಯದಂತೆ ಮಾಡುವ ನಿಮ್ಮ ಪ್ರಯತ್ನ ವ್ಯರ್ಥವಷ್ಟೇ!

   ಅದೆಲ್ಲಾ ವಾಮಮಾರ್ಗ (leftist tactics)ಗಳನ್ನೂ ಬಿಟ್ಟು, ವೈಚಾರಿಕ ಚರ್ಚೆಗಳನ್ನು ಮುಂದಿಡಿ. ಪದೇಪದೇ ಬಾಲಿಶವಾಗಿ ಮಾತನಾಡಿ ಅವಹೇಳನಕ್ಕೆ ಗುರಿಯಾಗಬೇಡಿ. ಬಾಯಿಬಿಟ್ಟರೆ ಬಣ್ಣಗೇಡಾಗುವುದೆಂಬ ಭಯವಿದ್ದರೆ ಬಾಯಿ ತೆರೆಯದಿದ್ದರೇನೇ ಒಳ್ಳೆಯದಾಗಬಹುದು ಅಲ್ಲವೇ!? 😉

   ಉತ್ತರ
  • ವಿಜಯ್ ಪೈ
   ಮಾರ್ಚ್ 3 2014

   [please ensure that articles have at least a minimum quality.]
   ಅಲ್ಲಿ ಪಕ್ಕದಲ್ಲಿ ನಿಮ್ಮ ‘ವೃತ್ತಿ’ ಭಾಂದವರ ಕೆಲವು ಬ್ಲಾಗಗಳಿವೆ. ಅಲ್ಲಿ ಹೋಗಿ ಈ ರಿಕ್ವೆಸ್ಟ್ ಮಾಡಿಕೊಳ್ಳಿ. ಅವುಗಳ ಗುಣಮಟ್ಟ ಸುಧಾರಿಸಬಹುದು 🙂
   ದರಿದ್ರ, ತಿಕ್ಕಲು ಎಡಬಿಡಂಗಿಗಳ ಬಗ್ಗೆ, ಅವರ ಸಿದ್ಧಾಂತದ ಬಗ್ಗೆ ಮಾತನಾಡುವುದು..ಸಮಯ ಹಾಳು ಮಾಡಿದಂತೆ ಎಂಬುದು ನಿಮ್ಮ ಮಾತಿನ ತಾತ್ಪರ್ಯವಾಗಿದ್ದರೆ..ತಮ್ಮ ತಿಳುವಳಿಕೆಗೆ ಧನ್ಯವಾದಗಳು! 🙂

   ಉತ್ತರ
 4. M.A.Sriranga
  ಮಾರ್ಚ್ 3 2014

  ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಮ್ಯುನಿಸ್ಟ್ ವಿಚಾರಧಾರೆಗಳು ಜತೆಜತೆಗೆ ಹೋಗಲಾರವು. ಅವರು ತಮಗೆ “ಬೇಕಾದ ಸುದ್ದಿಯನ್ನಷ್ಟೇ” ಹೊರಗಡೆಗೆ ಬಿಡುತ್ತಾರೆ. ಇಂದು ಈ ವಿಚಾರಧಾರೆಗೆ ಅಂಟಿಕೊಂಡಿರುವ ಕನ್ನಡದ ಬ್ಲಾಗ್ ಗಳು ಒಂದೆರೆಡು ನಮ್ಮಲ್ಲಿವೆ. ಅದರಲ್ಲಿನ ವಿಚಾರಗಳಿಗೆ ವ್ಯತಿರಿಕ್ತವಾದುದನ್ನು ಅವು ತಡೆಹಿಡಿಯುತ್ತಿವೆ; ಮತ್ತು ಅದೇ ಉಸಿರಿನಲ್ಲಿ ಇತರರನ್ನು ಫ್ಯಾಸಿಸ್ಟ್ ಎನ್ನುತ್ತಿವೆ. ಈಗ್ಗೆ ಎರಡು ಮೂರು ದಿನಗಳ ಹಿಂದೆ ಕನ್ನಡದ ಪ್ರಸಿದ್ಧವಾದ ಬ್ಲಾಗ್ ಒಂದರಲ್ಲಿ ಪ್ರಕಟವಾದ ಅದರ star ಲೇಖಕರ ಒಂದೆರೆಡು ಲೇಖನಗಳ ಬಗ್ಗೆ ನಾನು ಸಭ್ಯ ಭಾಷೆಯಲ್ಲಿ ಬರೆದ ಪ್ರತಿಕ್ರಿಯೆಗಳು ಪ್ರಕಟವಾಗಿಲ್ಲ. ಅದೇ ಬ್ಲಾಗು ಗಳು ಬೇರೆಯವರನ್ನು ಕೋಮುವಾದಿಗಳು ಎಂದು ಪ್ರತಿದಿನ ಅಕ್ಷರಗಳ “ಯುದ್ಧ”ದ ಮೂಲಕ ಹಂಗಿಸುತ್ತಿವೆ.

  ಉತ್ತರ
  • ಮಾರ್ಚ್ 3 2014

   ನೀವು ಹೇಳಿದ್ದು ಶತ-ಪ್ರತಿಶತ ಸರಿಯಾಗಿದೆ.
   ನಾನೂ ಕೂಡಾ ಈ ಹಿಂದೆ ಅಂತಹ ಬ್ಲಾಗುಗಳಲ್ಲಿನ ಲೇಖನಕ್ಕೆ ಪ್ರತಿಕ್ರಿಯೆ ಬರೆದಿದ್ದೆ.
   ಇಲ್ಲಿಯವರೆಗೆ ಒಂದೂ ಪ್ರತಿಕ್ರಿಯೆ ಪ್ರಕಟವಾಗಿಲ್ಲ.
   ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕತ್ತು ಹಿಸುಕಿ ಸಾಯಿಸುವುದೇ ವಾಮಮಾರ್ಗಿಗಳ ತಂತ್ರ.
   ಸುಳ್ಳನ್ನೇ ಸತ್ಯವೆಂದು ಸಾವಿರ ಸಲ ಹೇಳಿದರೆ, ಅದನ್ನೇ ಸತ್ಯವೆಂದು ಜನ ನಂಬುತ್ತಾರೆ ಎನ್ನುವುದು ಮತ್ತೊಂದು ತಂತ್ರ – ಅರ್ಥಾತ್, ಸತ್ಯವನ್ನು ಕೊಂದರೆ, ಉಳಿಯುವ ಸುಳ್ಳೇ ಸತ್ಯವಾಗುತ್ತದೆ!!

   ರಷ್ಯಾದಲ್ಲಿ ಮಳೆಯಾದರೆ ಭಾರತದಲ್ಲಿ ಕೊಡೆ ಹಿಡಿಯುತ್ತಿದ್ದವರಿಗೆ, ರಷ್ಯಾದಲ್ಲಿ ಕಮ್ಯುನಿಸಂ ಅವಸಾನವಾದ ನಂತರ ತಮ್ಮ ಬಳಿಯಿರುವ ಕೊಡೆಯನ್ನೇನು ಮಾಡುವುದೆಂದು ತಿಳಿಯುತ್ತಿಲ್ಲ. 😉

   ಉತ್ತರ
  • ವಿಜಯ್ ಪೈ
   ಮಾರ್ಚ್ 3 2014

   ಶ್ರೀರಂಗ ಅವರೆ..
   ಅವು ಬ್ಲಾಗ ಗಳಲ್ಲ. ಕರಪತ್ರ ಪ್ರಕಟನಾ ಸ್ಥಳಗಳು, ಡಂಪಿಂಗ ಗ್ರೌಂಡಗಳು. ನೀವು ‘ತವಕ, ತಲ್ಲಣ, ನೆಲದ ದನಿ, ಶೋಷಕ ಸಂಸ್ಕೃತಿ, ವೈದಿಕಶಾಹಿ, ಬಂಡವಾಳಶಾಹಿ’ ಇವೇ ಮುಂತಾದ ಮಾತಿನಲ್ಲಿಯೇ ಬುದ್ಧನ ಕಾರುಣ್ಯ ತೋರುವ ‘ಶಬ್ದ’ವಿದ್ಯೆ ಕಲೆಯ ಪಾರಂಗತರಾದರೆ ನಿಮಗಲ್ಲಿ ಸ್ಥಳವಿದೆ :).

   ಉತ್ತರ
   • M.A.Sriranga
    ಮಾರ್ಚ್ 3 2014

    ವಿಜಯ ಪೈ ಅವರಿಗೆ–ಇಲ್ಲ ಪೈ ಅವರೆ.. ಆ ಬ್ಲಾಗಿನಲ್ಲಿ ಪ್ರಕಟವಾದ ಲೇಖನಗಳನ್ನು ನೋಡಿಯೇ ಅದು ”ಆ ಮಾದರಿ”ಯ ಗುಂಪಿಗೆ ಸೇರಿದ್ದು ಎಂದು ತಿಳಿಯಿತು. ನಾನು ಎರಡು ದಿನ ಸುಮ್ಮನೆ ಪರೀಕ್ಷಿಸುವ ಎಂದು ಆ ಬ್ಲಾಗಿನಲ್ಲಿ comments ಮಾಡಿದೆ. ನಮ್ಮ ಅಭಿಪ್ರಾಯವನ್ನು ಕೇಳಲು ತಯಾರಿಲ್ಲದವರ ಜತೆ ಮಾತಾಡಿ ಪ್ರಯೋಜನವಿಲ್ಲ. ಇನ್ನು ಕಮ್ಯುನಿಸಂ ಬಗ್ಗೆ ಒಂದೆರೆಡು ಮಾತು ಹೇಳಬೇಕು. ಇಲ್ಲವಾದರೆ ತಪ್ಪಾಗುತ್ತದೆ. ಇಂದು ಖಾಸಗಿಯವರ ಬಗ್ಗೆ ಎಲ್ಲರೂ ಬೊಬ್ಬೆ ಹೊಡೆಯುತ್ತಾರೆ. ಆದರೆ ಆ ಕಮ್ಯುನಿಸಂ ಗೆ ಬದ್ಧವಾದ ಕಾರ್ಮಿಕ ಸಂಘಟನೆಗಳೇ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಹಳ್ಳ ಹಿಡಿದು ಹೋಗಿರುವುದಕ್ಕೆ ಕಾರಣ ಎಂಬುದನ್ನು ನಾವು ಮರೆಯಬಾರದು. ಕಾರ್ಮಿಕರೇ ಕಾರ್ಖಾನೆಯ ಮಾಲೀಕರು ಎಂದು ಘೋಷಣೆ ಕೂಗಿಕೊಂಡು ಅವುಗಳಿಗೆ ಬೀಗ ಹಾಕಿಸಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದರು. ನಮ್ಮಲ್ಲೇ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಉದಾಹರಣೆ ಇದೆ. ‘ನೀನೂ ಬಾಳು,ನಮ್ಮನ್ನೂ ಬಾಳಲಿಕ್ಕೆ ಬಿಡು’ ಎಂಬ ಮಾತೇ ಕಮ್ಯುನಿಸ್ಟರಿಗೆ ಅಪಥ್ಯ.

    ಉತ್ತರ
    • ಗಿರೀಶ್
     ಮಾರ್ಚ್ 4 2014
    • ವಿಜಯ್ ಪೈ
     ಮಾರ್ಚ್ 4 2014

     [ನಮ್ಮ ಅಭಿಪ್ರಾಯವನ್ನು ಕೇಳಲು ತಯಾರಿಲ್ಲದವರ ಜತೆ ಮಾತಾಡಿ ಪ್ರಯೋಜನವಿಲ್ಲ.]
     ಅವರಿಗೆ ಲೇಖನ ಬರೆಯುವ ಮೊದಲೇ ಬರುವ ಎಂತಹ ಅಭಿಪ್ರಾಯಗಳು ಬರುತ್ತವೆ ಎಂಬ ಕಲ್ಪನೆ ಇರುತ್ತದೆ. ಈ ಜನ ವಿಷಯ ಆಧರಿತ ಲೇಖನ ಬರೆಯುವದಕ್ಕಿಂತ..ಅಜೆಂಡ ಆಧಾರಿತ ಲೇಖನ ಬರೆಯುವುದೇ ಹೆಚ್ಚು. ವಿಷಯ ಏನೇ ಇರಲಿ, ಅದಕ್ಕೆ ತಮ್ಮ ಅಜೆಂಡಾ ಸುತ್ತುವುದಷ್ಟೇ ಈ ಜನರ ಕೆಲಸ. ನಿಮಗೆ ನಗೆ ಲೇಖನ ಬರೆಯುವ ಅಭ್ಯಾಸ ಆಗಬೇಕೆಂದರೇ ಈ ಎಡಬಿಡಂಗಿಗಳ (ವಿಶೇಷವಾಗಿ ಕರ್ನಾಟಕದ ಎಡಬಿಡಂಗಿಗಳು) ಲೇಖನ ಓದಬೇಕು.

     [ಆದರೆ ಆ ಕಮ್ಯುನಿಸಂ ಗೆ ಬದ್ಧವಾದ ಕಾರ್ಮಿಕ ಸಂಘಟನೆಗಳೇ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಹಳ್ಳ ಹಿಡಿದು ಹೋಗಿರುವುದಕ್ಕೆ ಕಾರಣ ಎಂಬುದನ್ನು ನಾವು ಮರೆಯಬಾರದು.]
     ಬಡತನ/ದರಿದ್ರತೆಗಳೇ ಇವರ ಬಂಡವಾಳ..ಅವೆರಡು ಇಲ್ಲಿದಿದ್ದಲ್ಲಿ ‘ಹಕ್ಕಿಗಾಗಿ ಹೋರಾಟ, ಅಸಮಾನತೆ ವಿರುದ್ಧ ಹೋರಾಟ’ ಎಂಬ ಅಸ್ತ್ರವನ್ನು ಹರಿಬಿಡುತ್ತವೆ. ಒಟ್ಟಿನಲ್ಲಿ ಇವರಿಗೆ ಜೀವಂತವಾಗಿರಲು ಯಾವುದಾದರೂ ‘ಹೋರಾಟ’ ಬೇಕು!. ಇವರಿಗೆ ಗೊತ್ತಾಗಿ ಬಿಟ್ಟಿದೆ..ಜನ ಅರ್ಥಿಕವಾಗಿ ಸಬಲ/ಸ್ವಾವಲಂಬಿ ಗಳಾದಷ್ಟು ತಮ್ಮ ಸಿದ್ಧಾಂತದ ಮರಣ ಹತ್ತಿರವಾಗುತ್ತದೆ ಎಂದು. ಉದಾಹರಣೆಗೆ, ಕೆಲವು ತಿಂಗಳ ಹಿಂದಿನ ಧರ್ಮಸ್ಥಳದ ಪ್ರಕರಣ ತೆಗೆದುಕೊಳ್ಳಿ. ಈ ಜನ ಹಿನ್ನಲೆಯಲ್ಲಿ ಉಳಿದು, ಆ ಪ್ರಕರಣವನ್ನು ಉಪಯೋಗಿಸಿಕೊಳ್ಳಲು ಪಟ್ಟ ಪ್ರಯತ್ನಗಳನ್ನು ಗಮನಿಸಿದಿರಾ? ಇವರಿಗೆ ಆ ಪ್ರಕರಣದಲ್ಲಿ ಸೌಜನ್ಯಾ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವುದಕ್ಕಿಂತ ತಮ್ಮ ಬೆಳೆ ಬೇಯಿಸಿಕೊಳ್ಳುವುದು ಮುಖ್ಯವಾಗಿತ್ತು. ಇವರಿಗೆ ಜನ ಸ್ವಸಹಾಯ ಸಂಘಗಳ ನೆರವಿನಿಂದ ಸ್ವಾವಲಂಬಿಗಳಾಗುತ್ತಿರುವುದು/ ಅವರ ಬದ್ಧತೆ ಇನ್ನೊಬ್ಬರ ಕಡೆಗೆ ತಿರುಗುತ್ತಿರುವುದು ಸಹಿಸಲಸಾಧ್ಯವಾಗಿತ್ತು. ಇವರ ಬೆಳ್ತಂಗಡಿ ಸುತ್ತಮುತ್ತಲಿನ ‘ಕಾಡಿನ ಹೋರಾಟ’ ಮತ್ತು ಇತ್ತ ಕಾರ್ಮಿಕ ಸಂಘಟನೆಗಳ ಮೂಲಕ ಮಾಡುತ್ತಿರುವ ‘ನಾಡಿನ ಹೋರಾಟ’ ಎರಡೂ ಅಪ್ರಸ್ತುತವಾಗಲು ಪ್ರಾರಂಭವಾದಾಗ ಸುರು ಹಚ್ಚಿಕೊಂಡಿದ್ದೇ ಈ ‘ಸೌಜನ್ಯಳಿಗೆ ನ್ಯಾಯ’ ಎಂಬ ಮುಖವಾಡದ ಹೋರಾಟ.

     ನಮ್ಮ ಕರ್ನಾಟಕದ ಮಟ್ಟಿಗೆ ಬಂದರೆ., ನಮ್ಮ ಕರ್ನಾಟಕದ ಎಡಬಿಡಂಗಿಗಳು ಅಪರೂಪದ ಮಿಶ್ರತಳಿಯವು. ಮಾರ್ಕ್ಸ, ಲೆನಿನ್, ಮಾವೊ ಇವೆಲ್ಲುಗಳ ಮಿಶ್ರಣದ ಗೊಂದಲಮಯ ಪ್ರಾಡಕ್ಟುಗಳು. ದಿನದ ಹೊತ್ತಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾರಟ್, ಯೇಚೂರಿ ಇವುಗಳ ಮನಸ್ಸಿನಲ್ಲಿ… ಆದರೆ ಸಂಜೆಯಾಗುತ್ತಿದ್ದಂತೆ ಕಾಡಿನ ‘ಹೋರಾಟ’ ಗಾರರ ಬಗ್ಗೆ ಪ್ರೀತಿ, ಕಕ್ಕುಲಾತಿ ಉಕ್ಕಲು ಪ್ರಾರಂಭವಾಗಿಬಿಡುತ್ತದೆ. ಆಗಾಗ ಪ್ರಸ್ತುತವಾಗಿರಲು ಇರಲಿ ಎಂದು ಜಾತಿ/ಧರ್ಮದ ಹೋರಾಟಕ್ಕೆ ಗಾಳಿ ಹಾಕುವ ಕಾರ್ಯವನ್ನು ಸುರು ಹಚ್ಚಿಕೊಳ್ಳುತ್ತವೆ. ಹಾಗೆಯೇ ತಾವು ಸಿಪಿಐ(ಎಮ್) ಗಳೊ ಅಥವಾ ಸಿಪಿಐ(ಎಮ್ ಎಲ್) ಗಳೊ ಎಂಬ ಬಗ್ಗೆ ಗೊಂದಲ ಬೆಳಗ್ಗೆ ಎದ್ದ ಕೂಡಲೇ ಅನುಭವಿಸುತ್ತವೆ. ಇವುಗಳಲ್ಲಿರುವ ಕೆಲವು ಬಹುಪಾತ್ರಾಭಿನಯ ಪ್ರವೀಣರು..ಅನುಕೂಲಕ್ಕೆ ತಕ್ಕ ಹಾಗೆ ಆಳುವ ಪಕ್ಷದವರ ಬೆನ್ನು ಕೆರೆದು ಕೂಡಲೊಂದು ಕುರ್ಚಿ, ಸಂಪಾಗಿರಲಷ್ಟು ಗಂಜಿ ಸಂಪಾದಿಸುವ ಕಲೆಯಲ್ಲಿ ಪಾರಂಗತರು.

     ಹೀಗೆ ಒಟ್ಟಿನಲ್ಲಿ ಈ ಎಡ ಬಿಡಂಗಿಗಳು ನಮ್ಮ ದೇಶವನ್ನು ಕೊರೆಯತ್ತಿರುವ ಗೆದ್ದಲು ಹುಳುಗಳು. ಸಿದ್ಧಾಂತ, ಅಜೆಂಡ ಪ್ರಿಯರಾದ ಈ ಜನ ಭಾರತ-ಚೀನ ಯುದ್ಧ ನಡೆದಾಗ ಕೂಡ, ಚೀನ ಆಕ್ರಮಣಕಾರಿಯಾಗಿ ನಡೆದುಕೊಂಡಾಗ ಕೂಡ ಚೀನದ ಪರವಾಗಿ ನಿಲ್ಲಲು, ಪ್ರೀತಿ ತೋರಿಸಲು ಹಿಂಜರಿಯುವುದಿಲ್ಲ!. ಕಾಲಕ್ಕೆ ತಕ್ಕಂತೆ, ಇವರ ಚೀನ ಕೂಡ ಬದಲಾಗಿ, ಬಂಡವಾಳಶಾಹಿ ತತ್ವ ಅಳವಡಿಸಿಕೊಂಡು ಆರ್ಥಿಕ ಸುಧಾರಣೆ ತಂದುಕೊಂಡರೂ, ಇವಿನ್ನೂ ಇಲ್ಲಿ ಶತಮಾನಗಳ ಹಿಂದಿನ ಸಿದ್ಧಾಂತ-ವಾದಗಳಿಗೆ ಜೋತು ಬಿದ್ದಿವೆ. ಇಷ್ಟೆಲ್ಲ ಇದ್ದರೂ ಮಾತು ಮಾತಿಗೆ ವಿಚಾರವಾದ-ವಿಚಾರವಾದ ಎಂದು ಹಲಬುವುದನ್ನು ನಿಲ್ಲಿಸುವುದಿಲ್ಲ!. ನಮ್ಮ ಪುಣ್ಯವೆಂದರೇ ನಮ್ಮ ದೇಶದಲ್ಲಿ ಇವುಗಳ ಅವಸಾನ ಸುರುವಾಗಿದೆ..ಇವು ಆದಷ್ಟು ಬೇಗ ಇತಿಹಾಸ ಸೇರಲಿ.

     ಉತ್ತರ
 5. M.A.Sriranga
  ಮಾರ್ಚ್ 3 2014

  ssnk ಅವರಿಗೆ– ಈ ದಿನ ಮೇಲೆ ಹೇಳಿದ ಬ್ಲಾಗಿಗರ ಇಮೇಲ್ ವಿಳಾಸಕ್ಕೆ ಅವರ ‘ಭಿನ್ನಮತ’ವನ್ನು ಹತ್ತಿಕ್ಕುತ್ತಿರುವ ವಿಚಾರದ ಬಗ್ಗೆ ಮೇಲ್ ಮಾಡಿದರೆ ಅದು ಡೆಲಿವರಿ ಆಗದೆ ನನಗೇ ವಾಪಸ್ಸು ಬಂತು. ಕಾರಣ ತಿಳಿಯಲಿಲ್ಲ. ಕೊನೆಗೆ ಅಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ನಾನು ಅವರ ಈ censorship ಕುರಿತು ತಿಳಿಸಿದ್ದೇನೆ. ಊರಿಗೆಲ್ಲಾ ಉಪದೇಶ ಮಾಡುವವರೇ ತಮ್ಮ ವಿರುದ್ಧದ ಮಾತುಗಳಿಗೆ ಹೆದರುತ್ತಾರೆ ಎಂದು ಅರಿವಾಯ್ತು. ಇನ್ನೊಂದು ವಿಶೇಷವೆಂದರೆ ”ನಿಲುಮೆ”ಯಲ್ಲಿ ಸದಾ ಕ್ರಿಯಾಶೀಲರಾಗಿರುವ commentator ಆ ಬ್ಲಾಗಿನಲ್ಲಿ ಕಾಣಿಸಲಿಲ್ಲ!!

  ಉತ್ತರ
 6. valavi
  ಮಾರ್ಚ್ 3 2014

  ಊರಿಗೆಲ್ಲಾ ಉಪದೇಶ ಮಾಡುವವರೇ ತಮ್ಮ ವಿರುದ್ಧದ ಮಾತುಗಳಿಗೆ ಹೆದರುತ್ತಾರೆ ಎಂದು ಅರಿವಾಯ್ತು. ಇನ್ನೊಂದು ವಿಶೇಷವೆಂದರೆ ”ನಿಲುಮೆ”ಯಲ್ಲಿ ಸದಾ ಕ್ರಿಯಾಶೀಲರಾಗಿರುವ commentator ಆ ಬ್ಲಾಗಿನಲ್ಲಿ ಕಾಣಿಸಲಿಲ್ಲ!! ಸರಿಯಾಗೆ ಹೇಳಿದ್ದೀರಿ. ಅವರು ಇಲ್ಲಿ ಮಾತ್ರ ಬರೆಯುತ್ತಾರೆ ಅಲ್ಲಿ ಏನನ್ನೂ ಬರೆಯುವದಿಲ್ಲ.

  ಉತ್ತರ
 7. ಮಾರ್ಕ್ಸ್ ಮಂಜು
  ಮಾರ್ಚ್ 3 2014

  ಸಾಮಾನ್ಯವಾಗಿ ಸಂತೃಪ್ತಿಯ ಬದುಕನ್ನು ಬಯಸುವವರು,ದೈವವನ್ನು ಬೆಳಕಿನೊಂದಿಗೆ ಹೋಲಿಸುತ್ತಾರೆ.ಯಾವಾಗ ಮನುಷ್ಯ ತನ್ನ ಸಂತೃಪ್ತಿಯನ್ನು ಮರೆತು,ತನ್ನ ಬದುಕನ್ನೂ ಮೀರಿದ ಒಂದನ್ನು ಕಾಣಬಯಸುತ್ತಾನೋ,ಅವನ ಸಾಧನೆ ಮತ್ತು ಜೀವನದ ಉದ್ದೇಶ ಮುಕ್ತಿ ಅಥವಾ ಅಸ್ತಿತ್ವದೊಡನೆ ವಿಲೀನವಾಗುವುದು ಆಗಿರುತ್ತದೋ,ಆಗ ನಾವು ದೈವವನ್ನು “ಕತ್ತಲೆ”ಯೆಂದು ಪರಿಗಣಿಸುತ್ತೇವೆ.

  ನಮ್ಮ ಕಾಮ್ರೇಡುಗಳ ಉದ್ದೇಶವೇ ಹೀಗೆ ಮಹಾನ್ ವ್ಯಾಪ್ತಿಯಿಂದೊಡಗೂಡಿದೆ.ಹಾಗಾಗಿ ಕತ್ತಲೆಯೆಂದರೆ ಹಿಂದುಳಿದಿರುವುದು ಎಂದುಕೊಂಡರೆ ಅದು ನಿಮ್ಮ ತಪ್ಪು. ಧರ್ಮವನ್ನು ನಾವು ಅಫೀಮು ಎನ್ನುತ್ತೇವೆ ನಿಜ.ಆದರೆ, ಒಮ್ಮೊಮ್ಮೆ ಹೀಗೆ ಆಧ್ಯಾತ್ಮವನ್ನು ಮಾತಾಡಿ ಸಿದ್ಧಾಂತವನ್ನು ಉಳಿಸಿಕೊಳ್ಳುವುದು ಮಹರ್ಷಿ ಮಾರ್ಕ್ಸ್ ಹೇಳಿಕೊಟ್ಟಿದ್ದಾರೆ

  ಉತ್ತರ
  • ಮಾರ್ಚ್ 4 2014

   [[ಆಗ ನಾವು ದೈವವನ್ನು “ಕತ್ತಲೆ”ಯೆಂದು ಪರಿಗಣಿಸುತ್ತೇವೆ.]]
   ಇಲ್ಲಿ “ನಾವು” ಎಂದರೆ ಯಾರು?

   [[ಧರ್ಮವನ್ನು ನಾವು ಅಫೀಮು ಎನ್ನುತ್ತೇವೆ ನಿಜ.]]
   ಇಲ್ಲಿ ಧರ್ಮ ಎನ್ನುವ ಪದ ಪ್ರಯೋಗವೇ ತಪ್ಪು. Religion ಎಂಬ ಪದವನ್ನು ಧರ್ಮ ಎಂದು ಅನುವಾದ ಮಾಡಿಕೊಂಡುಬಿಟ್ಟಿದ್ದೀರಿ. ಕಾರ್ಲ್ ಮಾರ್ಕ್ಸ್ ಅವರು “Religion is opium of the people” ಎಂದು ಹೇಳಿದ್ದು.
   ಅವರು ಹೇಳಿದ Religion ಎನ್ನುವ ಪದವನ್ನು ಯೂರೋಪಿನ ಸಂದರ್ಭಕ್ಕೆ ಅನುವಾಗಿ ಉಪಯೋಗಿಸಲಾಗಿತ್ತು.
   ಅದೇ ಸಂದರ್ಭಕ್ಕನುವಾಗಿಯೇ Secularism ಎನ್ನುವ ಪದವೂ ಹುಟ್ಟಿಕೊಂಡದ್ದು.
   ಅದನ್ನು ನಮ್ಮ ಕಮ್ಯುನಿಸ್ಟರು ಭಾರತಕ್ಕೆ ಅನ್ವಯಿಸುವುದಕ್ಕೋಸ್ಕರ “Religion ಅಂದರೆ ಧರ್ಮ” ಎಂದು ತಪ್ಪಾಗಿ ಅನುವಾದಿಸಿಬಿಟ್ಟಿರಿ.
   ಧರ್ಮ ಎನ್ನುವುದು Religion ಅಲ್ಲ. ಅದು ಅದಕ್ಕಿಂತ ಬಹಳ ವ್ಯಾಪ್ತಿಯನ್ನು ಹೊಂದಿರುವ, ವಿಶಾಲ ಅರ್ಥವನ್ನು ಹೊಂದಿರುವ, ಇಡೀ ಜಗತ್ತಿಗೇ ಅನ್ವಯಿಸುವ ಪದ.
   ನಿಮಗೆ Religionಗೆ ಕನ್ನಡ ಅಥವಾ ಭಾರತೀಯ ಭಾಷೆಗಳಲ್ಲಿ ಪದ ಬೇಕೆಂದರೆ, ‘ಮತ’ ಎನ್ನುವ ಪದವನ್ನು ಉಪಯೋಗಿಸಿಕೊಳ್ಳಬಹುದು.

   [[ಒಮ್ಮೊಮ್ಮೆ ಹೀಗೆ ಆಧ್ಯಾತ್ಮವನ್ನು ಮಾತಾಡಿ]]
   ಕಾರ್ಲ್ ಮಾರ್ಕ್ಸ್ ಅವರಿಗೆ ಕೂಡಾ, ತಾನು ಮಾತನಾಡುತ್ತಿರುವುದು ಆಧ್ಯಾತ್ಮವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿತ್ತು.
   ನೀವೇಕೆ ಅಷ್ಟೊಂದು ಗೊಂದಲಕ್ಕೊಳಗಾಗಿದ್ದೀರಿ?

   ಉತ್ತರ
   • ಮಾರ್ಕ್ಸ್ ಮಂಜು
    ಮಾರ್ಚ್ 5 2014

    [[ಇಲ್ಲಿ “ನಾವು” ಎಂದರೆ ಯಾರು?]]
    ನಾವು ಎಂದರೆ ದುಡಿಯುವ ವರ್ಗ,ಅಥವಾ ಭಾರತೀಯ ಸಂದರ್ಭಕ್ಕೆ ಬಹುಜನರು

    [[ಕಾರ್ಲ್ ಮಾರ್ಕ್ಸ್ ಅವರು “Religion is opium of the people” ಎಂದು ಹೇಳಿದ್ದು.]]

    ಮಾರ್ಕ್ಸ್ ಹೇಳಿದ ಆ Religion ತಾನೇ ನಿಮ್ಮ ಧರ್ಮ.ಮತ್ತಿನ್ನೇನು ನೀವು ಡಿಕ್ಷನರಿಯ ಬಲದಿಂದಲೇ ಸಾವಿರಾರು ವರ್ಷಗಳಿಂದ ತುಳಿಯುತ್ತ ಬಂದಿದ್ದು ಅನ್ನುವುದು ಬಹುಜನರಿಗೆ ತಿಳಿದುಹೋಗಿದೆ.

    [[ಕಾರ್ಲ್ ಮಾರ್ಕ್ಸ್ ಅವರಿಗೆ ಕೂಡಾ, ತಾನು ಮಾತನಾಡುತ್ತಿರುವುದು ಆಧ್ಯಾತ್ಮವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿತ್ತು.
    ನೀವೇಕೆ ಅಷ್ಟೊಂದು ಗೊಂದಲಕ್ಕೊಳಗಾಗಿದ್ದೀರಿ? ]]

    ಹೀಗ್ಯಾಕೆ ಆಧ್ಯಾತ್ಮವೆನ್ನುವುದು ನಿಮ್ಮ ಅಂದರೆ, ಧರ್ಮಿಷ್ಟರ ಸ್ವತ್ತೆಂಬಂತೆ ಮಾತನಾಡುತಿದ್ದೀರಿ Mr.SSNK.you look confused here.ತತ್ವ ಸಿದ್ಧಾಂತದೊಳಗೂ ಆಧ್ಯಾತ್ಮದ ಮಾತುಗಳು ಬರಬಹುದು.ಆಧ್ಯಾತ್ಮವೆಂದರೆ ದೇವರ ಸುತ್ತ ಸುತ್ತುವುದಿಲ್ಲ.ನಮ್ಮಂತ ಕಾಯಕಯೋಗಿ (I m loving this phrase from Mr.Nagshetty Shetkar)ಗಳೂ ಆಧ್ಯಾತ್ಮದ ಮಾತನಾಡಬಲ್ಲೆವೆಂಬುದಕ್ಕೆ ನನ್ನ ಮೇಲಿನ ಕಮೆಂಟು ಒಂದು ಉದ್ಧರಣೆ.

    Overall, I liked your sincere effort in attempt of a serious Debate Mr.SSNK. Good keep it up.

    ಉತ್ತರ
    • ಮಾರ್ಚ್ 5 2014

     [[ಮಾರ್ಕ್ಸ್ ಹೇಳಿದ ಆ Religion ತಾನೇ ನಿಮ್ಮ ಧರ್ಮ.ಮತ್ತಿನ್ನೇನು ನೀವು ಡಿಕ್ಷನರಿಯ ಬಲದಿಂದಲೇ ]]
     ಆ ನಿಮ್ಮ ಡಿಕ್ಷನರಿ ಬರೆದವರು ಪಶ್ಚಿಮದವರು.
     ಧರ್ಮ ಎನ್ನುವುದರ ಗಂಧ ಗಾಳಿಯೂ ಇಲ್ಲದ ಆ ಜನಕ್ಕೆ ಧರ್ಮ ಏನೆನ್ನುವುದು ಅರ್ಥವಾಗಲಿಲ್ಲ. ಏಕೆಂದರೆ, ಆ ಕಲ್ಪನೆಯೇ ಅವರಲ್ಲಿರಲಿಲ್ಲ. ಹೀಗಾಗಿ, ಅದನ್ನು ತಪ್ಪಾಗಿ Religion ಎಂದು ಅನುವಾದಿಸಿಟ್ಟರು.
     ಕುರುಡರು ಆನೆಯನ್ನು ನೋಡಿದ ಕಥೆಯಂತೆ ಇದು. ಹುಟ್ಟಾ ಕುರುಡರಾದ ಸ್ನೇಹಿತರು, ಆನೆಯನ್ನು ಕಂಬ, ಬೀಸಣಿಕೆ, ಆಕಾಶ, ಇತ್ಯಾದಿಯಾಗಿ ಅರ್ಥೈಸಿದರು. ಏಕೆಂದರೆ, ಅಲ್ಲಿಯವರೆಗೂ ಆನೆಯನ್ನು ನೋಡದಿದ್ದ ಅವರು, ತಾವು ತಿಳಿದಿದ್ದ ಒಂದು ವಸ್ತುವಿಗೆ ಅದನ್ನು ಹೋಲಿಸಿಕೊಂಡು ಕಲ್ಪಿಸಿದರು.
     ಇದೇ ರೀತಿ, ಧರ್ಮ ಏನೆನ್ನುವುದೇ ತಿಳಿಯದ ಪಶ್ಚಿಮದ ಕುರುಡರು, ಅದನ್ನು Religion ಇರಬೇಕೆಂದರು – ಅವರಿಗೆ ತಿಳಿದದ್ದು Religion ಮಾತ್ರ, ಧರ್ಮವಲ್ಲ.

     ಆದರೆ, ಈ ನೆಲದಲ್ಲಿ ಹುಟ್ಟಿರುವ, ಈ ನೆಲದ ಸಂಸ್ಕೃತಿಯ ಗಂಧಗಾಳಿಯನ್ನೇ ಉಸಿರಾಡುತ್ತಿರುವ ನಿಮಗೆ ಧರ್ಮ ಮತ್ತು Religion ನಡುವಣ ವ್ಯತ್ಯಾಸ ತಿಳಿಯುತ್ತಿಲ್ಲವೆಂದರೆ ಆಶ್ಚರ್ಯವಾಗುತ್ತಿದೆ!

     ನಮ್ಮಲ್ಲಿರುವ ಎಷ್ಟೋ ವಿಚಾರಗಳು ಪಶ್ಚಿಮದ ಚಿಂತನೆಗಿಂತ ಭಿನ್ನವಾದದ್ದು. ಹೀಗಾಗಿ, ನಮ್ಮಲ್ಲಿರುವ ಅನೇಕ ಪದಗಳಿಗೆ ಅವರ ಭಾಷೆಯಲ್ಲಿ ಸಮಾನಾರ್ಥಕ ಪದವಿಲ್ಲ.
     ಉದಾಹರಣೆಗೆ, ‘ಪುಣ್ಯ’ ಎನ್ನುವ ಪದಕ್ಕೆ ಇಂಗ್ಲಿಷಿನಲ್ಲಿ ಸಮಾನಾರ್ಥಕ ಪದ ಹೇಳಿ ನೋಡೋಣ!?

     ಉತ್ತರ
    • valavi
     ಮಾರ್ಚ್ 5 2014

     @ಮಾರ್ಕ್ಸ ಮಂಜಣ್ಣ ಮತ್ತು ಶೆಟ್ಕರ್ ಅವರಿಗೆಮಾರ್ಕ್ಸ್ ವಾದ, ಸಮಾನತೆ, ವರ್ಗಭೇದ ಇತ್ಯಾದಿ ಬಡಬಡಿಸುವ ಸ್ನೇಹಿತರೆ ನೀವು ನಿಮ್ಮ ವೇತನದಲ್ಲಿನ ಎಷ್ಟು ಪಾಲು ಹಣವನ್ನು ಬಡವರಿಗೆ ಮೀಸಲಿರಿಸಿದ್ದೀರಿ. ಬಡವರಿಗಾಗಿ ನಿಮ್ಮ ಐಷಾರಾಮಿ ಜೀವನವನ್ನು ಎಷ್ತು ತ್ಯಾಗ ಮಾಡಿದ್ದೀರಿ. ಹಳ್ಳಿಗಳಲ್ಲ್ಲಿ ಸಾಲದ ಶೂಲದಲ್ಲಿ ನರಳಾಡುತ್ತಿರುವ ನಿಮ್ಮ ಚಿಕ್ಕಪ್ಪ ದೊಡ್ಡಪ್ಪಂದಿರಿಗೆ ನೀವೆಷ್ಟು ಸಹಾಯ ಮಾಡಿದ್ದೀರಿ?? ನಿಮ್ಮ ಆಫೀಸಿನ ಶ್ರಮಜೀವಿ ಪಿಯೂನ್ಗೆ ನಿಮ್ಮಷ್ಟೆ ವೇತನ ಕೊಡಿಸಲು ನೀವು ಪ್ರಯತ್ನಿಸಿದ್ದೀರಾ?? ಹೋಗಲಿ ಆ ಶ್ರಮಿಕನಿಗೆ ಎಲ್ಲರೂ ಎಕವಚನದಲ್ಲಿ ಮಾತನಾಡಿದಾಗ ನೀವೇನಾದರೂ ಪ್ರತಿಭಟಿಸಿದ್ದೀರಾ? ಅದೂ ಹೊಗಲಿ, ನಿಮ್ಮ ಆಫೀಸಿನ ಕಾರ್ಯಕ್ರಮಗಳಲ್ಲಿ ಈ ಶ್ರಮಜೀವಿಗಳ ಕಾರ್ಯಕ್ಕೆ ವಂದನಾರ್ಪಣೆ ಹ್ಜೇಳಿದ್ದೀರಾ?? ಈ ಶ್ರಮಜೀವಿಗಳನ್ನು ನಿಮ್ಮ ಹುಟ್ಟು ಹಬ್ಬದ ಪಾರ್ಟಿಗಳಿಗೆ ಆಹ್ವಾನಿಸಿದ್ದೀರಾ?? ಅವರ ಜೊತೆಗೆ ಊಟ ಮಾಡಿದ್ದೀರಾ? ನಿಮ್ಮ ಮನೆಯ ಶೌಚಾಲಯ ಸ್ವಚ್ಛಗೊಳಿಸಿದವನಿಗೆ ನೀವೂ ಒಂದು ದಿನ ಪಡಿಯುವ ವೇತನ ಅವನಿಗೂ ನೀಡಿದ್ದೀರಾ? ನಾನು ವ್ಹೈಟ್ಕಾಲರು ನನಗೂ ಶ್ರಮಜೀವಿಗೆ ಕೊಡುವಷ್ಟೇ ವೇತನ ಕೊಡಿ ಎಂದು ನೀವು ಹೇಳಿ ನಿಮ್ಮ ಹೆಚ್ಚುವರಿ ವೇತನವನ್ನು ಶ್ರಮಜೀವಿಗೆ ನೀಡಿದ್ದೀರಾ?? ಇವಾವ ಕೆಲಸ ಮಾಡದ ನೀವು ಮಾರ್ಕ್ಸನ ಬಗ್ಗೆ ಪುಸ್ತಕ ಓದಿದರೆ ನಿಮ್ಮ ಕರ್ತವ್ಯ ಮುಗಿಯಿತೆ?? ನಿಮ್ಮ ಪ್ರ ಗತಿ ಪರರು ತಮಗೆ ಸಂದ ಪ್ರಶಸ್ತಿ ಮೊತ್ತವನ್ನು ಎಂದಾದರೂ ಶ್ರಮಿಕರ ಕಲ್ಯಾಣಕ್ಕೆ ಖರ್ಚು ಮಾಡಿದ ಉದಾಹರಣೆ ಇದೆಯೇ?? ತಮ್ಮ ಒಂದಾದರೂ ಪುಸ್ತಕವನ್ನು ಶ್ರಮಿಕನೋರ್ವನಿಗೆ ಅರ್ಪಿಸಿದ್ದಾರೆಯೆ?? ಪುಸ್ತ್ಕಕದ ಬದನೆಕಾಯಿ ಬೇಡ. ಕೃತಿಯಲ್ಲಿ ಮಾರ್ಕ್ಸ್ ಇರಲಿ.

     ಉತ್ತರ
  • ವಿಜಯ್ ಪೈ
   ಮಾರ್ಚ್ 4 2014

   ಮಾರ್ಕ್ಸಮಂಜಣ್ಣ..
   ಹೌದು ನಿಮ್ಮ ಮಾತು ಒಪ್ಪುವಂತದ್ದು.. ನಮ್ಮ ಎಡಬಿಡಂಗಿಗಳಿಗೆ ಕತ್ತಲೆಯೇ ಬೆಳಕು..ಬತ್ತಲೆಯೇ ಬದುಕು!!. ಅದಕ್ಕೆ ಇವೆರಡು ಜಗತ್ತಿನಲ್ಲಿ ಕಾಯಂ ಆಗಿ ಇರಲು/ಇರಿಸಲು ಸಾಧ್ಯವಾಗುವಂತಹ ಎಲ್ಲ ‘ಹೋರಾಟ’ವನ್ನು ಅವರು ಮಾಡುತ್ತಾರೆ 🙂

   ಉತ್ತರ
   • ಮಾರ್ಕ್ಸ್ ಮಂಜು
    ಮಾರ್ಚ್ 5 2014

    b/n In India i like the way you people call my name “ಮಾರ್ಕ್ಸಮಂಜಣ್ಣ..” ಇದರಲ್ಲಿ ತಳವರ್ಗದ ಮುಗ್ಧತೆಯ ದನಿಯ ಕೇಳಿದ ಅನುಭವವಾಗುತ್ತದೆ ನನಗೆ

    ಉತ್ತರ
 8. ಗಿರೀಶ್
  ಮಾರ್ಚ್ 4 2014

  ಮಾರ್ಕ್ಸ್ ವಾದವೂ ಲಿಂಗಾಯತರದ್ದೇ. ಮಾನವತಾವಾದವೂ ಲಿಂಗಾಯತರದ್ದೇ, ವೇದಗಳು ಜಾನಪದಗಳು ಹಾಗಾಗಿ ಅವೂ ಲಿಂಗಾಯತರದ್ದೇ,
  ಅದ್ವೈತವೂ ಲಿಂಗಾಯತರದ್ದೇ, ಇದೊಂತರ ಜಗತ್ತಿನ ಎಲ್ಲವನ್ನೂ ಲಿಂಗಾಯತರ ಗೂಟಕ್ಕೆ ನೇತು ಹಾಕುವ ಇಂತಹ ಜಾತಿ ಮೂಲಬೂತವಾದಿಗಳಿಂಡ ಸಮಾಜಕ್ಕೆ ಏನೂ ಪ್ರಯೋಜನವಿಲ್ಲ. ಅವರನ್ನು Ignore ಮಾಡಿ ಮುಂದುವರೆಯಿರಿ. ಜಾತಿ ವಿನಾಶ ಎಂದು ಹೇಳಿಕೊಂಡು ಅತಿ ಹೆಚ್ಚು ಜಾತಿ ತಾರತಮ್ಯ ಅಸ್ಪೃಶ್ಯತೆ ಆಚರಿಸಿದ್ದು ಇದೇ ಲಿಂಗಾಯತರೆ. ಇಂತ ಲಿಂಗಾಯತ ಜಾತಿ ಮೂಲ’ಭೂತ’ವಾದಿಗಳನ್ನು ಪಕ್ಕಕ್ಕಿಡಿ ಸಾಕು.

  ಉತ್ತರ
 9. Nagshetty Shetkar
  ಮಾರ್ಚ್ 4 2014

  ಉತ್ತರ ಕೊರಿಯಾದ ಜನರು ನಿಜಕ್ಕೂ ಬುದ್ಧಿವಂತರು. ಬೆಳಗಿನ ಹೊತ್ತು ಕಾಯಕ ಯೋಗಿಗಳಾಗಿ ದುಡಿದು ರಾತ್ರಿಯ ಹೊತ್ತು ಬೆಳಕು ಆರಿಸಿ ಸುಖವಾಗಿ ನಿದ್ರೆ ಮಾಡಿ ವಿಶ್ರಾಂತಿ ಪಡೆಯುತ್ತಾರೆ. ದಕ್ಷಿಣ ಕೊರಿಯಾದ ಜನರು ಅಮೇರಿಕನ್ ಸಂಸ್ಕೃತಿಯ ಗುಲಾಮರು. ರಾತ್ರಿಯ ಹೊತ್ತು ಅಬ್ಬರದ ಬೆಳಕಿನಲ್ಲಿ ಪಬ್ಬು ಬಾರು ಡಿಸ್ಕೋ ಥೆಕ್ ನೈಟ್ ಕ್ಲಬ್ಬುಗಳಲ್ಲಿ ಕುಡಿದು ಕುಣಿದು ಮೋಜು ಮಾಡುತ್ತಾರೆ. ನೀವು ಬಂಡವಾಳಶಾಹಿಗಳಿಗೆ ನಿಮ್ಮ ಬುದ್ಧಿಮತ್ತೆಯನ್ನು ಒತ್ತೆ ಇಟ್ಟ ಜನ, ನಿಮಗೆ ರಾತ್ರಿಯಾ ಹೊತ್ತು ವಿದ್ಯುತ್ ದುಂದುವೆಚ್ಚ ಮಾಡುವುದೇ ಪ್ರಗತಿ ಆಗಿ ಕಾಣುತ್ತಿದೆ. ಏನು ಮಾಡುವುದು?

  ಉತ್ತರ
  • ಮಾರ್ಕ್ಸ್ ಮಂಜು
   ಮಾರ್ಚ್ 4 2014

   You have stolen my words Mr.Nagshetty Shetkar. Kudos

   ಕತ್ತಲೆಯೆಂದರೆ ಸಮಾನತೆಯ ಪ್ರತೀಕ. ಬೆಳಕು ನೀಡಿದರೆ, ಜನರು ಅವರ ಶಕ್ತಾನುಸಾರ ವಿದ್ಯುದೀಪಗಳನ್ನು ಬಳಸುತ್ತಾರೆ.ಕೆಲವರು ಝೀರೋ ಬಲ್ಬುಗಳನ್ನೂ.ಕೆಲವರೂ ಟ್ಯೂಬ್ ಲೈಟುಗಳನ್ನು ಬಳಸುತ್ತಾರೆ.ಇನ್ನು ಕೆಲವರು ಅಲಂಕಾರಿಕ ದೀಪಗಳನ್ನು ಬಳಸುತ್ತಾರೆ.ಬಂಡವಾಳಶಾಹಿ ಮಾಲುಗಳಲ್ಲಂತೂ ಕೇಳುವುದೇ ಬೇಡ. ಇದು ಶಕ್ತಿಯ ಅಸಮಾನ ಹಂಚಿಕೆಯ ಮೂಲವಾಗುತ್ತದೆ.ಆದರೆ, ಕತ್ತಲೆಯೆಂದರೇ ಎಲ್ಲರಿಗೂ ಒಂದೇ ‘ಸಮಾನತೆ’.ಈ ವಿಷಯಗಳು ವೈದಿಕರಿಗೆ ಸುಲಭವಾಗಿ
   ಅರ್ಥೈಸಿಕೊಳ್ಳಲಾಗುವುದಿಲ್ಲ. ಪೂರ್ ಫೇಲೋಸ್

   ಉತ್ತರ
   • Nagshetty Shetkar
    ಮಾರ್ಚ್ 4 2014

    ವೈದಿಕರ ವಿಚಾರವನ್ನೇಕೆ ಕಮ್ಯೂನಿಸ್ಟ್ ಚರ್ಚೆಯಲ್ಲಿ ತುರುಕುತ್ತಿದ್ದೀರಿ ಮಿ. ಮಂಜು? ಅನಗತ್ಯ ವಿಷಯಾಂತರ ಮಾಡಿ ಗೊಂದಲ ಹುಟ್ಟಿಸುವ ಕೆಲಸ ಮಾಡಬೇಡಿ.

    ಉತ್ತರ
    • ಮಾರ್ಕ್ಸ್ ಮಂಜು
     ಮಾರ್ಚ್ 4 2014

     Oh.Come-on Mr. Nagshetty Shetkar ಇಲ್ಲಿ ಕಮ್ಯುನಿಸಂ ಅನ್ನು ಗೇಲಿ ಮಾಡುತ್ತಿರುವವರು ವೈದಿಕರಲ್ಲವೇನು

     ಉತ್ತರ
     • ವಿಜಯ್ ಪೈ
      ಮಾರ್ಚ್ 4 2014

      ರಿ ಮಾರ್ಕ್ಸಮಂಜಣ್ಣ…ಇದೇನಿದು ಎಲ್ಲದರಲ್ಲೂ ವೈದಿಕರನ್ನು ಎಳೆದು ತರುತ್ತಿರಲ್ಲ! ಇಂತಹ ವಿಷಯದಲ್ಲಿ ಹೇಳತೀರದ ಸುಖ ಅನುಭವಿಸುವ, ಅಪಾರ ಅನುಭವವಿರುವ ಶೆಟ್ಕರ್ ಸಾಹೇಬರೇ ಇದು ಸರಿಯಲ್ಲ ಎಂದಾಗಲಾದರೂ ಅರ್ಥ ಮಾಡಿಕೊಳ್ಳುವುದು ಬೇಡವೆ?? ಅಂದ ಹಾಗೆ ನಮ್ಮ ಭಾರತದಲ್ಲಿ ಕಮ್ಯುನಿಷ್ಟ್ ಪಕ್ಷಗಳಿಗೆ ವೈದಿಕ ಹಿನ್ನಲೆಯಿಂದ ಹೋದ ನಾಯಕರೇ ಬಂಡವಾಳ..ತಿಳಿದುಕೊಳ್ಳಿ!.

      ಉತ್ತರ
      • ಮಾರ್ಕ್ಸ್ ಮಂಜು
       ಮಾರ್ಚ್ 4 2014

       ಹಿನ್ನೆಲೆಯನ್ನು ಅಳಿಸಿಕೊಂಡು ಅಂದರೆ, ನೀವುಗಳು ಸುಳ್ಳು ಸುಳ್ಳೇ ವಿಜೃಒಭಿಸಿ ಹೇಳುವ ನಿಮ್ಮ ಪುರಾಣ,ಸಂಸ್ಕೃತಿ,ಸಂಸ್ಕೃತದ ಕತೆಗಳನ್ನು ತೊರೆದು ಅವರು ಮಾರ್ಕ್ಸ್ ಸನ್ನಿಧಾನಕ್ಕೆ ಬಂದ ಕ್ಷಣವೇ ಕಾಮ್ರೇಡುಗಳಾಗುತ್ತಾರೆ.ಹಾಗಿರುವಾಗ ಅವರನ್ನು ವೈದಿಕರೆನ್ನುವುದು not at all fair Mr. Vijay Pai.

       ಮಿ.ನಾಗಶೆಟ್ಟಿ ಶೆಟ್ಕರ್ ಅವರ ಕಾಯಕಯೋಗಿ ಪದದಿಂದ ನಾನು deeply ಪ್ರಭಾವಿತನಾಗಿದ್ದೇನೆ.ನಮ್ಮ ನಡುವೆ ಹುಳಿಹಿಂಡುವ ಕೆಲಸ ಮಾಡಬೇಡಿ

       ಉತ್ತರ
       • ವಿಜಯ್ ಪೈ
        ಮಾರ್ಚ್ 4 2014

        ಹ್ಮ..ಸರಿ..ಅದೂ ಕೂಡ ಸನ್ನಿಧಾನವೇ ಅಂತಾಯ್ತು!. ಅಂದ ಹಾಗೆ..ಹುಳಿಹಿಂಡುವ ಕಾಯಕದ ಪೇಟಂಟ್ ನಮ್ಮ ಹತ್ತಿರ ಇಲ್ಲ.. ಮೇಲೆ ನೀವು ಉದಾಹರಿಸಿದವರನ್ನು ಸಂಪರ್ಕಿಸಿ.. ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು.ಸರಿಯಾದ ಮಾಹಿತಿಗೆ.

        ಉತ್ತರ
     • M.A.Sriranga
      ಮಾರ್ಚ್ 4 2014

      ವೈದಿಕರು=ಕತ್ತಲೆಯಿಂದ ಬೆಳಕಿನೆಡೆಗೆ
      ಮಾರ್ಕ್ಸ್ ವಾದ=ಬೆಳಕಿನಿಂದ ಕತ್ತಲೆಯೆಡೆಗೆ
      ಇದು ಸರಿಯಾದ ಘೋಷಣೆ
      ಓದುಗರೇ ಆಯ್ಕೆ ನಿಮ್ಮದು.

      ಉತ್ತರ
  • ವಿಜಯ್ ಪೈ
   ಮಾರ್ಚ್ 4 2014

   ಪಾಪ..ಉತ್ತರ ಕೋರಿಯಾದವರು ಅಣುಬಾಂಬ ಮತ್ತು ಕ್ಷಿಪಣಿಗಳನ್ನು ಹೊಲದಲ್ಲಿ ಬೆಳೆಯುತ್ತಾರೆ ಬೆವರು ಸುರಿಸಿ, ಕಾಯಕ ಮಾಡಿ!
   ನಮ್ಮ ದೇಶದಲ್ಲಿ ಎಡಬಿಡಂಗಿಗಳು ತಮ್ಮ ರಾತ್ರಿಯ ‘ಕಾಯಕಯೋಗ’ಕ್ಕೆ ಬೆಳಗ್ಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ!.

   ಉತ್ತರ
   • Nagshetty Shetkar
    ಮಾರ್ಚ್ 4 2014

    ಅಮೆರಿಕದಂತಹ ಆಕ್ರಮಣಕಾರನನ್ನು ದೂರವಿಡಲು ಅಣು ಬಾಂಬ್ ಮತ್ತು ಕ್ಷಿಪಣಿ ಅಗತ್ಯ ಮಿ. ವಿಜಯ್.

    ಉತ್ತರ
    • ವಿಜಯ್ ಪೈ
     ಮಾರ್ಚ್ 4 2014

     ಒಹ್ ಹೌದೆ? ದೂರದ ಆಕ್ರಮಣಕಾರಿ ಅಮೇರಿಕ ಬಿಡಿ..ಅಕ್ಕ-ಪಕ್ಕದ ಚೀನ, ದಕ್ಷಿಣ ಕೋರಿಯ, ಜಪಾನ ಮುಂತಾದವುಗಳ ಜೊತೆ ಉ.ಕೋರಿಯದ ಸಂಬಂಧ ಹೇಗಿದೆ ಎಂದು ಮೊದಲು ನೋಡಿ.

     ಅದರಿಲಿ..ಅಲ್ಲ ಪಕ್ಕದಲ್ಲಿ ನಿಮ್ಮ ‘ವೃತ್ತಿ’ ಬಾಂಧವರು ‘US not soft on Modi,’ ಅಂತ ಹೇಳಿಕೊಂಡು ಮಾನವೀಯತೆ ತುಂಬಿರುವ ತಮ್ಮ ಗೆಳೆಯ ತಮ್ಮ ಪರವಾಗಿ ನಿಂತ, ತಮಗೆ ವಿಜಯ ಸಿಕ್ಕಿದೆ ಎಂಬಂತೆ ಕುಣಿದಾಡ್ತಿದಾರೆ..ಇಲ್ಲಿ ನೋಡಿದ್ರೆ ನೀವು ಅಮೇರಿಕ ನಾಶವಾಗುವ ಆಸೆ ಇಟ್ಟುಕೊಂಡು, ಕನಸು ಕಾಣುತ್ತಿದ್ದೀರಿ!. ಅಲ್ಲ ಸ್ವಾಮಿ..ನಿಮ್ಮ ಪ್ರಕಾರ ಮೋದಿ ಕೂಡ ಬಂಡವಾಳಶಾಹಿ, ಆಕ್ರಮಣಕಾರಿ..ಹಾಗಿದ್ದಾಗ …ಹೋಗಲಿ ಬಿಡಿ..ಎಡಬಿಡಂಗಿ ಅಜೆಂಡಾಗಳು!

     ಉತ್ತರ
     • Nagshetty Shetkar
      ಮಾರ್ಚ್ 4 2014

      “ಮೋದಿ ಕೂಡ ಬಂಡವಾಳಶಾಹಿ, ಆಕ್ರಮಣಕಾರಿ”

      ನಿಸ್ಸಂಶಯವಾಗಿ! ಯಾವ ಸಂದೇಹವೇ ಇಲ್ಲ! ಈಗಲಾದರೂ ನಿಮಗೆ ಜ್ಞಾನೋದಯವಾಯಿತಲ್ಲ!!

      ಉತ್ತರ
      • ವಿಜಯ್ ಪೈ
       ಮಾರ್ಚ್ 4 2014

       ಪಾಪ..ವಾಕ್ಯಗಳನ್ನು ಪೂರ್ತಿ ಓದಿ ಅರ್ಥಮಾಡಿಕೊಳ್ಳಲು, ಉಳಿದೆಲ್ಲ ಸಮಸ್ಯೆಗಳ ಜೊತೆಗೆ ದೃಷ್ಟಿದೋಷದ ಸಮಸ್ಯೆ ಕೂಡ ಇದೆ. ಸಾಹೇಬರೆ..ಸ್ವಲ್ಪ ಕನ್ನಡಕ ಹಾಕಿಕೊಂಡು ನೋಡಿದರೆ ಅಲ್ಲಿ ‘ನಿಮ್ಮ ಪ್ರಕಾರ’ ಎಂಬ ಎರಡು ಶಬ್ದಗಳು ಕಾಣಿಸುತ್ತವೆ..ಸೇರಿಸಿಕೊಂಡು ಓದಿ..

       ಉತ್ತರ
  • Nagshetty Shetkar
   ಮಾರ್ಚ್ 4 2014

   ನಿಮ್ಮ ವಿವೇಕಯುಕ್ತ ಮಾತುಗಳು ಇಲ್ಲಿನ ಅಂಧ ಗೂಳಿಗಳಿಗೆ ಅರ್ಥವಾಗಲ್ಲ. ಕೊಳ್ಳುಬಾಕ ಸಂಸ್ಕೃತಿಗೆ ಮಾರಿಕೊಂಡ ಜನ ಇವರು.

   ಉತ್ತರ
   • ವಿಜಯ್ ಪೈ
    ಮಾರ್ಚ್ 4 2014

    ಕೊಳ್ಳುಬಾಕ ಸಂಸ್ಕೃತಿಯವರನ್ನಾದರೂ ಸುಧಾರಿಸಬಹುದು…ಆದರೆ ಜೊಳ್ಳುತಲೆ ಸಂಸ್ಕೃತಿಯವರನ್ನು ಏನು ಮಾಡೋಣ?? 🙂

    ಉತ್ತರ
 10. M.A.Sriranga
  ಮಾರ್ಚ್ 4 2014

  ಪೈ ಅವರಿಗೆ- ಅಂತೂ ಇಷ್ಟು ದಿನ ಆದ ಮೇಲೆ ನಮಗೊಬ್ಬರು ಹೊಸ ಗೆಳೆಯರು ಸಿಕ್ಕಿದರು. ಇವರ ಹೆಸರೂ ‘ಮಾರ್ಕ್ಸ್ ಬ್ಲಾಗ್’ ನಲ್ಲಿ ಕಾಣಲಿಲ್ಲ.

  ಉತ್ತರ
  • ವಿಜಯ್ ಪೈ
   ಮಾರ್ಚ್ 4 2014

   ಹೌದು ಸರ್..ಹೆಸರು ಕೂಡ ಚೆನ್ನಾಗಿದೆ!. ಕನ್ನಡ ಮೂವಿ ಟೈಟಲ್ ಮಾಡಿದ್ರೂ ಸಕತ್ತಾಗಿರುತ್ತೆ 🙂

   ಉತ್ತರ
   • ಮಾರ್ಕ್ಸ್ ಮಂಜು
    ಮಾರ್ಚ್ 5 2014

    ನನ್ನ ಹೆಸರು ಹೊಸತೋ ,ಹಳೆಯದೋ ಮುಖ್ಯವಾಗುವುದಿಲ್ಲ Mr.M.A Sriranga & Mr.Vijay Pai

    ಮುಖ್ಯವಾಗುವುದು My Words.…

    “A specter is haunting Europe – the specter of Communism – Karl Marx”

    I will replace Europe and put India in above phrase and … I will not rest till this Haunting Specter Vanish…

    ಉತ್ತರ
    • ವಿಜಯ್ ಪೈ
     ಮಾರ್ಚ್ 5 2014

     ಆಯ್ತು ಬಿಡಿ ಸರ್..ಒಪ್ಪುತ್ತೇನೆ. ಈ ಒಂದು ಹೆಸರಿನ ಕಾರಣದಿಂದ ವಿಷಯಾಂತರ ಆಗುವುದು ಬೇಡ.
     [I will replace Europe and put India in above phrase and … I will not rest till this Haunting Specter Vanish…]
     ಹಗಲು ಕನಸು ಆಘಾತಕ್ಕೆ ಕಾರಣ!
     ಇಲ್ಲಿದ್ದ ನಿಮ್ಮವರೊಬ್ಬರು ಈಗಾಗಲೇ ನಿಮ್ಮನ್ನು ನಡುನೀರಿನಲ್ಲಿ ಕೈಬಿಟ್ಟು ಇನ್ನೊಂದು ಲೇಖನಕ್ಕೆ ಜಂಪ ಹೊಡೆದಿದ್ದಾರೆ..ಕ್ರಾಂತಿ ಚಿರಾಯುವಾಗಲಿ!

     ಉತ್ತರ
     • M.A.Sriranga
      ಮಾರ್ಚ್ 5 2014

      ವಿಜಯ ಪೈ ಅವರಿಗೆ– ಯಾವ ಲೇಖನಕ್ಕೆ ಜಂಪ್ ಮಾಡಿದ್ದಾರೆ ತಿಳಿಸಿ. ಅಲ್ಲಿ ಸಾಧ್ಯವಾದರೆ ಅವರ ದರ್ಶನಭಾಗ್ಯ ಸಿಗುತ್ತದೇನೋ ನೋಡುವ!!?

      ಉತ್ತರ
      • ಮಾರ್ಕ್ಸ್ ಮಂಜು
       ಮಾರ್ಚ್ 6 2014

       Mr.Vijay Pai Says : ” ಇಲ್ಲಿದ್ದ ನಿಮ್ಮವರೊಬ್ಬರು ಈಗಾಗಲೇ ನಿಮ್ಮನ್ನು ನಡುನೀರಿನಲ್ಲಿ ಕೈಬಿಟ್ಟು ಇನ್ನೊಂದು ಲೇಖನಕ್ಕೆ ಜಂಪ ಹೊಡೆದಿದ್ದಾರೆ..ಕ್ರಾಂತಿ ಚಿರಾಯುವಾಗಲಿ!”

       I Say : I no very well about this,ನನ್ನಂತವರಿಗೆ ಕರ್ನಾಟಕದ ಕಾಮ್ರೇಡುಗಳು ನಡುನೀರಿನಲ್ಲಿ ಕೈಬಿಡುವುದು ಹೊಸವಿಷಯವೇನಲ್ಲ. ಒಬ್ಬರಿಗೊಬ್ಬರು ಅನ್ನುವಂತೆ ನಿಂತಿದ್ದರೆ ಕೇರಳದಂತೆ ಇಲ್ಲಿಯೂ ಶ್ರಮಿಕವರ್ಗದ ಸರ್ಕಾರವೊಂದು ಅಸ್ತಿತ್ವದಲ್ಲಿರಬೇಕಿತ್ತು.

       ಉತ್ತರ
       • ವಿಜಯ್ ಪೈ
        ಮಾರ್ಚ್ 6 2014

        ಮಾರ್ಕ್ಸ ಮಂಜಣ್ಣ..
        ಕೊನೆಗೂ ಬಂದಿತಲ್ಲ ಬುದ್ಧಿ!. ನೀವು ಮೊದಲು ಅವರ ಬೆನ್ನು ಚಪ್ಪರಿಸಲು ಸುರು ಮಾಡಿದಾಗಲೇ ನಿಮಗೆ ಮುಂದೆ ಈ ಗತಿ ಕಾದಿದೆ ಅಂತ ಗೊತ್ತಿತ್ತು:). ಅವರದ್ದು ಬೇರೆ ತರಹದ ‘ಕ್ರಾಂತಿ’. ತಾವು ಮಾತನಾಡಿದ್ದನ್ನೇ ಸಮರ್ಥಿಸಲಾಗದೇ ಇನ್ನೊಂದು ಲೇಖನಕ್ಕೆ ಜಂಪ ಹೊಡೆಯೋವುದು ಅವರು ಲಾಗಾಯ್ತಿನಿಂದ ಪೋಷಿಸಿಕೊಂಡು ಬಂದಂತಹ ವಿದ್ಯೆ. ನೀವು ಹೊಸಬರು..ಗಾಳಕ್ಕೆ ಬಿದ್ದಿರಿ ಅಷ್ಟೆ!. ಏನೇ ಆಗಲಿ..ನೀವು ಇನ್ನೂ ಸುಸ್ತಾಗದೇ ಮಾರ್ಕ್ಸ ನ ಶ್ರಮಿಕ ಸರ್ಕಾರದ ಕನಸಿನಲ್ಲೇ ಇದ್ದೀರಲ್ಲ..ಓದಿ ಸಂತೋಷವಾಯ್ತು 🙂

        ಉತ್ತರ
        • Nagshetty Shetkar
         ಮಾರ್ಚ್ 6 2014

         ಹೀಗೆ ಅವರಿವರ ಅವಹೇಳನ ನಿಂದನ ಮಾಡುತ್ತಾ ಟೈಮ್ ವೇಸ್ಟ್ ಮಾಡುವ ಬದಲು ಮೈಮುರಿದು ದುಡಿಯಿರಿ ಮಿ. ವಿಜಯ್, ಕನಿಷ್ಟಪಕ್ಷ ಬೊಜ್ಜು ಕರಗೀತು.

         ಉತ್ತರ
         • ವಿಜಯ್ ಪೈ
          ಮಾರ್ಚ್ 6 2014

          ಒಹ್..ನಮ್ಮ ಗುರುಗಳು ಇನ್ನೂ ಇಲ್ಲೇ ಇದಾರೆ!. :). ಹ್ಮ ಗುರುಗಳೇ..ಮೈಮುರಿದು ದುಡಿಯೋದು ಅಂದ್ರೆ …..ವಿರೋಧಿ ಸಮೀತಿ/……….. ವೇದಿಕೆ/ ‘ಸತ್ಯ’ ಶೋಧನಾ ಸಮೀತಿ ಮುಂತಾದವನ್ನು ಕಟ್ಟಿಕೊಂಡೆ??. ಅಂದಹಾಗೆ ನೀವ್ಯಾಕೆ ಥೀಸಿಸ್ ಬರೆಯೋಕೆ ಹೋದಿರಿ? ಮುಂದೆ ಕಾಲೇಜಲ್ಲಿ ಬೆವರು ಸುರಿಸಿ ಲೆಕ್ಚರ್ ಕೊಡೋಣ ಎಂದೆ??

          ಉತ್ತರ
 11. Nagshetty Shetkar
  ಮಾರ್ಚ್ 4 2014

  ಅಮೇರಿಕಾ ಪ್ರಣೀತ ಬಂಡವಾಳಶಾಹಿಯ ಅಂತ್ಯ ಸದ್ಯದಲ್ಲೇ ಕಾಣುವಿರಿ. ಆಗ ನೀವು ಸಾಫ್ಟ್ವೇರ್ ಕೂಲಿಗಳು ಎಲ್ಲಿಗೆ ಗುಳೆ ಹೋಗುವಿರಿ?

  ಉತ್ತರ
  • ವಿಜಯ್ ಪೈ
   ಮಾರ್ಚ್ 4 2014

   ಶೆಟ್ಕರ್ ಸಾಹೇಬರೆ…ಅಮೇರಿಕ ಬಿದ್ದು ಹೋಗುವುದರಿಂದ ನಿಮ್ಮ ಕಮ್ಯುನಿಸ್ಮ ಉದ್ಧಾರವಾಗುವುದಿಲ್ಲ..ಬೆಳಗುವುದಿಲ್ಲ. ಅಮೇರಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಯಾವ ರಾಷ್ಟ್ರದ್ದಿದೆಯೆಂದು ಮತ್ತು ಆ ರಾಷ್ಟ್ರವೇಕೆ ಅಷ್ಟು ಸುಲಭದಲ್ಲಿ ಅಮೇರಿಕೆಯನ್ನು ಸಾಯಲು ಬಿಡುವುದಿಲ್ಲವೆಂದು ನಿಮಗೆ ಗೊತ್ತಾದರೆ ಇಂತಹ ತಿರುಕನ ಕನಸು ಕಾಣುವುದನ್ನು ನಿಲ್ಲಿಸುತ್ತೀರಿ!.

   ಉತ್ತರ
   • ಮಾರ್ಚ್ 4 2014

    ಅಮೆರಿಕದ ಡಾಲರ್ ಕುಸಿದರೆ ಮೊದಲು ಕುಸಿದು ಬೀಳುವುದು ಚೀನಾ! 😉
    ಕಮ್ಯುನಿಸ್ಟ್ ಚೀನಾ ಅಮೇರಿಕದ ಆರ್ಥಿಕತೆಯ ಮೇಲೆ ಇಷ್ಟೊಂದು ಅವಲಂಬಿತವಾಗಿಬಿಟ್ಟಿದೆ ಪಾಪ!

    ಉತ್ತರ
    • ಮಾರ್ಕ್ಸ್ ಮಂಜು
     ಮಾರ್ಚ್ 4 2014

     Mr.Vijay Pai and Mr.SSNK you people are attacking Mr.Nagshetty Shetkar in the same way how US Lead NATO does.

     ಕಣ್ಣು ತೆರೆದು ನೋಡಬೇಕು ಜಗತ್ತನ್ನು.ಆಗ ನಿಮ್ಮ ಅಂತದೃಷ್ಟಿಗೆ ಅಂತ ಸತ್ಯಗಳು ಗೋಚರವಾಗುತ್ತವೆ.ನಿಮ್ಮ ತಲೆಗಳೋ ಬರೀ ಅಬ್ಬರ ಭಾಷಣದ ಮೈಕಿನ ಸದ್ದಿಗೆ ಮತ್ತು ಬಂಡವಾಳಶಾಹಿಯ ಕುರುಡು ಕಾಂಚಾಣದೆದುರಿಗೆ ಕುಣಿಯುತ್ತಿವೆ.ಇದರಿಂದ ನೀವುಗಳು ಹೊರಬರುವುದು ಒಳ್ಳೆಯದು.

     ಅಮೇರಿಕಾ ಪ್ರಣೀತ ಬಂಡವಾಳಶಾಹಿಯ ಅಂತ್ಯ ಸದ್ಯದಲ್ಲೇ ಕಾಣುವಿರಿ. ಎನ್ನುವ Mr.Nagshetty Shetkar is very much right. ಸಿರಿಯಾದಲ್ಲಿ ತಮ್ಮ ನ್ಯಾಟೋ ಪಡೆಯನ್ನು ಕಟ್ಟಿಕೊಂಡು ಅಮಾಯಕರ ರಕ್ತಹೀರಲು ಹೊರಟಾಗ ಅದಕ್ಕೆ ಬ್ರೇಕ್ ಹಾಕಿದ್ದು ಕಮ್ಯುನಿಸ್ಟ್ ರಷ್ಯಾ.ನಿಮ್ಮ ಅಮೇರಿಕಾಗೆ ಮುಖಭಂಗವಾಗಿ ಯುದ್ಧೋತ್ಸಾಹ ಕುಸಿದಿತ್ತು.ಅದು ನಿಮಗೆ ಗೊತ್ತಿಲ್ಲವೆನಿಸುತ್ತದೆ.ಈಗ ಉಕ್ರೇನ್ ಅನ್ನು ಬಂಡವಾಳಶಾಹಿಗಳು ಕಬಳಿಸಿ ನವವಸಾಹತು ಕಟ್ಟಲು ಹೊರಟಿವೆ.ಅಲ್ಲಿಯೂ ಅವರಿಗೆ ರಷ್ಯಾ ತಡೆಯೊಡ್ಡಲಿರುವುದು ಗ್ಯಾರಂಟಿ.

     “Mr. Narendra Kumar Says, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ” ಅವರಿಗೆ ಮೇಲಿನ ಘಟನೆಗಳ ಮೂಲಕ ಹೇಳಬಯಸುತ್ತೇನೆ.ಮತ್ತೆ ರಷ್ಯಾ ಧೂಳುಕೊಡವಿ ಎದ್ದು ಬರುತ್ತಿದೆ.ಕಣ್ಣು ಉಜ್ಜಿಕೊಂಡು ನೋಡಿ

     ಉತ್ತರ
     • ಮಾರ್ಚ್ 4 2014

      [[“Mr. Narendra Kumar Says, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ” ಅವರಿಗೆ ಮೇಲಿನ ಘಟನೆಗಳ ಮೂಲಕ ಹೇಳಬಯಸುತ್ತೇನೆ.ಮತ್ತೆ ರಷ್ಯಾ ಧೂಳುಕೊಡವಿ ಎದ್ದು ಬರುತ್ತಿದೆ.ಕಣ್ಣು ಉಜ್ಜಿಕೊಂಡು ನೋಡಿ]]
      ಮಾರ್ಕ್ಸ್ ಮಂಜು ಅವರೇ, ಒಂದು ವಿಷಯವನ್ನಂತೂ ಒಪ್ಪಿಕೊಂಡಿರಿ; ಅದೆಂದರೆ, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ ಎನ್ನುವುದು. 😉 ಅದು ಆ ಸ್ಥಿತಿಗೆ ತಲುಪಲು ಕಾರಣ ಕಮ್ಯುನಿಸಂ.
      ರಷ್ಯಾದಲ್ಲಿ ಲೆನಿನ್ ಅವರ ಮೂರ್ತಿಗಳನ್ನು ಕಿತ್ತೊಗೆಯುವ ಮೂಲಕ ಕಮ್ಯುನಿಸಂಗೆ ತಿಲಾಂಜಲಿ ನೀಡಲಾಗಿದೆ.
      ಹೀಗಾಗಿ, “ರಷ್ಯಾ ಧೂಳುಕೊಡವಿ ಎದ್ದು ಬರುತ್ತಿದೆ” ಎನ್ನುವ ನಿಮ್ಮ ಮಾತೂ ಸತ್ಯವಾಗುತ್ತದೆ.

      ಅಂತೂ ನೀವೇ ಒಂದು ವಿಷಯವನ್ನು ಸ್ಪಷ್ಟ ಪಡಿಸಿಬಿಟ್ಟಿರಿ. ಕಮ್ಯುನಿಸಂನಿಂದ ರಷ್ಯಾ ಕಿತ್ತು ತಿನ್ನುವ ಬಡತನಕ್ಕೆ ದೂಡಲ್ಪಟ್ಟಿತು; ಮತ್ತು ಕಮ್ಯುನಿಸಂ ಕಿತ್ತೆಸೆದ ನಂತರ, ಮತ್ತೊಮ್ಮೆ ಧೂಳುಕೊಡಹಿ ಮೇಲೇಳಲಿದೆ!

      ಉತ್ತರ
     • ವಿಜಯ್ ಪೈ
      ಮಾರ್ಚ್ 5 2014

      ಹ್ಮ..ನಮ್ಮ ಮಂಜಣ್ಣವರ ಮಾತು ಕೇಳಿದರೆ ಮಂಗ ಕೂಡ ಮರದಿಂದ ಕೈ ಬಿಡಬೇಕು!. ಸರ್..ಒಂದು ಕುತೂಹಲ ನನಗೆ..ನಿಮಗೆ/ ನಿಮ್ಮ ಗುಂಪಿನವರಿಗೆ ಇಂಥಹ ‘ಸತ್ಯ’ಗಳನ್ನೆಲ್ಲ ಬರೆಯುವ ಕಲೆ ಅದ್ಹೇಗೆ ಸಿದ್ಧಿಸುತ್ತೆ??

      [ಮತ್ತೆ ರಷ್ಯಾ ಧೂಳುಕೊಡವಿ ಎದ್ದು ಬರುತ್ತಿದೆ.ಕಣ್ಣು ಉಜ್ಜಿಕೊಂಡು ನೋಡಿ]
      ಹೌದಿರಬಹುದು..ಆದರೆ ಕೊಡವಿಕೊಳ್ಳಲೇ ಇನ್ನೊಂದು ಶತಮಾನ ಬೇಕು. ಅಷ್ಟು ಧೂಳೆಬ್ಬಿಸಿ, ರಾಡಿ ಮಾಡಿಟ್ಟು ಹೋಗಿದ್ದಾರೆ ನಿಮ್ಮ ಕುಟುಂಬದವರು! 🙂

      ಉತ್ತರ
      • Nagshetty Shetkar
       ಮಾರ್ಚ್ 6 2014

       ಮಾರ್ಕ್ಸ್ ವಾದ ಅಮರ. ಏಕೆಂದರೆ ಅದು ಮಾನವನ ಬಗ್ಗೆ ಋತ ಸತ್ಯವನ್ನೇ ಹೇಳಿದೆ ಮಿ. ವಿಜಯ್. ದರ್ಗಾ ಸರ್ ಅವರು ಮಾರ್ಕ್ಸ್ ವಾದವನ್ನು ವಚನಗಳಿಗೆ ಅಪ್ಲೈ ಮಾಡಿರುವುದೂ ಈ ಕಾರಣಕ್ಕೆ ತಿಳಿಯಿತೇನು ಮಿ. ವಿಜಯ್?

       ಉತ್ತರ
       • ವಿಜಯ್ ಪೈ
        ಮಾರ್ಚ್ 6 2014

        ನಾನು ಇನ್ನೊಂದು ಲೇಖನದಲ್ಲಿ ಇದರ ಬಗ್ಗೆ ಬರೆದಿದ್ದೇನೆ..ಲಿಂಗಾಯಿತಿಸ್ಮ ನ ಅಧಿಕೃತ ವಕ್ತಾರರ ಬಗ್ಗೆ. ಈಗ ಅದು ವಚನಗಳಿಗೂ ಲಾಗೂ ಆಗುತ್ತದೆ ಗುರುಗಳೆ.

        ನಿಲುಮೆಯ ಮಿತ್ರರೆ..ವಚನದ ವಿಷಯಕ್ಕೆ ಬಂದರೆ ಭಾರತದ ಮಟ್ಟಿಗೆ ನಮ್ಮ ಶೆಟ್ಕರ್ ಗುರುಗಳು ಅಧಿಕೃತ ವಕ್ತಾರರು. ಆದರೆ ಜಾಗತಿಕ ರೆಫೆರೆನ್ಸುಗಳ ಬಗ್ಗೆ (ಮಾರ್ಕ್ಸ್ ವಾದವನ್ನು ವಚನಗಳಿಗೆ ಅಪ್ಲೈ ಮಾಡುವುದು, ವಚನಗಳ ಆಧಾರದಲ್ಲಿ ಮಾನವ ಹಕ್ಕು ಚಳುವಳಿ ರಚನೆಯಾದದ್ದು, ವಿಶ್ವ ಸಂಸ್ಥೆಯ ಜನನಕ್ಕೆ ಪ್ರೇರಣೆಯಾದದ್ದು, ವಿಶ್ವ ಮಹಿಳಾ ಹಕ್ಕುಗಳ ಮೂಲ ಯಾವುದು ಇತ್ಯಾದಿ..ಇತ್ಯಾದಿ) ನಿಮಗೆ ಅನುಮಾನಗಳಿದ್ದಲ್ಲಿ ನಮ್ಮ ಗುರುಗಳ ಗುರುಗಳನ್ನು ಸಂಪರ್ಕಿಸಿ.

        ಉತ್ತರ
       • ಮಾರ್ಕ್ಸ್ ಮಂಜು
        ಮಾರ್ಚ್ 7 2014

        Mr.Nagshetty Shetkar : U say “ದರ್ಗಾ ಸರ್ ಅವರು ಮಾರ್ಕ್ಸ್ ವಾದವನ್ನು ವಚನಗಳಿಗೆ ಅಪ್ಲೈ ಮಾಡಿರುವುದೂ ಈ ಕಾರಣಕ್ಕೆ ತಿಳಿಯಿತೇನು ಮಿ. ವಿಜಯ್?”, Darga is one of the finest mind b/n us. Y don’t he form a political outfit with this ideology? ಕರ್ನಾಟಕದಲ್ಲಿ ಕೋಮುವಾದಿ ಬೇರುಗಳ ನಿರ್ಮೂಲನೆಗೆ ಇಂತ ಕ್ರಾಂತಿಕಾರಿ ಕೆಲಸ ಆಗಬೇಕೆಂದು ನಿಮಗೂ ಅನಿಸುವುದಿಲ್ಲವೇ?

        ಉತ್ತರ
        • Nagshetty Shetkar
         ಮಾರ್ಚ್ 7 2014

         ದರ್ಗಾ ಸರ್ ಅವರು ಏನು ಮಾಡಬೇಕು ಮಾಡಕೂಡದು ಅಂತ ಹೇಳಲು ನೀವಾಗಲಿ ನಾನಾಗಲಿ ಯಾರು? ದರ್ಗಾ ಸರ್ ಅವರು ನಿಮಗಿಂತ ನನಗಿಂತ ಹೆಚ್ಚು ತಿಳುವಳಿಕೆ ಹಾಗೂ ಅನುಭವ ಇರುವ ವ್ಯಕ್ತಿ. ಅವರಿಗೆ ರಾಜಕೀಯ ಪಕ್ಷ ಮಾಡಬೇಕು ಅಂತ ಅನ್ನಿಸಿದಾಗ ಅವರು ಮಾಡುತ್ತಾರೆ. ತಿಳಿಯಿತೆ?

         ಉತ್ತರ
         • ಮಾರ್ಕ್ಸ್ ಮಂಜು
          ಮಾರ್ಚ್ 7 2014

          “ದರ್ಗಾ ಸರ್ ಅವರು ನಿಮಗಿಂತ ನನಗಿಂತ ಹೆಚ್ಚು ತಿಳುವಳಿಕೆ ಹಾಗೂ ಅನುಭವ ಇರುವ ವ್ಯಕ್ತಿ.” Oh pls Mr.Nagshetty Shetkar don’t include me like this. I don’t want to be judged by anybody. Darga might be better.ನನ್ನ ಅನುಭವದ ಬಗ್ಗೆ ನಿಮಗೆ ಗೊತ್ತಿಲ್ಲವಾದ್ದರಿಂದ ನಿಮ್ಮ ಮಾತನ್ನು ಮನ್ನಿಸುತ್ತೇನೆ

          ಉತ್ತರ
          • Nagshetty Shetkar
           ಮಾರ್ಚ್ 7 2014

           don’t waste my time. go do something productive. become a kaayaka yogi.

          • ಮಾರ್ಕ್ಸ್ ಮಂಜು
           ಮಾರ್ಚ್ 7 2014

           Mr.Nagshetty Shetkar : I thought ur wise enough to understand that I’m Kayaka Yogi.. But you don’t seems to be one. Well I m not intrstd in Prsnl level arguments

          • Nagshetty Shetkar
           ಮಾರ್ಚ್ 8 2014

           Marx Manju, what’s your real life identity? Why are u hiding behind fake id? What is your commitment to Marxism? Why are u dragging Darga Sir’s name into your comments? What’s your hidden agenda?

        • Nagshetty Shetkar
         ಮಾರ್ಚ್ 8 2014

         ದರ್ಗಾ ಸರ್ ಅವರು ಏನು ಮಾಡಬೇಕು ಮಾಡಕೂಡದು ಅಂತ ಹೇಳಲು ನೀವಯಾರು? ದರ್ಗಾ

         ಉತ್ತರ
         • ವಿಜಯ್ ಪೈ
          ಮಾರ್ಚ್ 8 2014

          ಕೊಡಲು ಉತ್ತರವಿಲ್ಲದಾಗ ತಮ್ಮೊಳಗೆ ಜಗಳ ಮಾಡುಕೊಳ್ಳುವ ನಾಟಕ!!. ಓದುಗರಲ್ಲಿ ಗೊಂದಲ ಸೃಷ್ಟಿಸುವುದು. ಈ ಎಡಬಿಡಂಗಿಗಳು ಸುಧಾರಿಸುವುದಿಲ್ಲ.

          ಉತ್ತರ
          • Nagshetty Shetkar
           ಮಾರ್ಚ್ 8 2014

           Mr. Vijay, are you a joker? Why do you comment when it is not concerning you?

          • ವಿಜಯ್ ಪೈ
           ಮಾರ್ಚ್ 8 2014

           [Mr. Vijay, are you a joker?]
           ಗುರುವರ್ಯರೆ..ಈ ಪಟ್ಟ ಸುರ್ಯ ಚಂದ್ರರಿರುವವರೆಗೆ ನಿಮ್ಮದೇ! ನಾವೆಲ್ಲ ಅಷ್ಟು ಸುಲಭವಾಗಿ ಕಸಿದುಕೊಳ್ಳಲು ಆಗುವುದಿಲ್ಲ.

           ಅಂದಹಾಗೆ ನೀವು ಸ್ವಲ್ಪ ಮೇಲೆ ಸ್ಕ್ರೋಲಿಸಿ ನೋಡಿದರೆ ಅಲ್ಲಿ ನನ್ನ ಪ್ರಶ್ನೆಗೆ ಮಾರ್ಕ್ಸ ಮಂಜು ಅವರು ಉತ್ತರ ನೀಡಿದ್ದು ನಿಮಗೆ ಕಂಡು ಬರುತ್ತದೆ. ಇಲ್ಲಿ ಮಧ್ಯದಲ್ಲಿ ಬಂದವರು ನೀವು ..ನಾನಲ್ಲ! ಮತ್ತು ನನ್ನ ಆಕ್ಷೇಪ ನಿಮ್ಮಿಬ್ಬರನ್ನು ಕುರಿತು. ನಿಜಸ್ಥಿತಿ ಹೀಗಿದ್ದರಿಂದ ನಿಮ್ಮ ಪಟ್ಟಕ್ಕೆ ಎಂದೂ ಧಕ್ಕೆಯಾಗಲಾರದು ಎಂದು ಹೇಳಲು ಬಯಸುತ್ತೇನೆ. 🙂

          • Nagshetty Shetkar
           ಮಾರ್ಚ್ 8 2014

           Mr. Vijay, you might be a joker but I’m a sharana.

          • ವಿಜಯ್ ಪೈ
           ಮಾರ್ಚ್ 9 2014

           ಗುರುಗಳೆ..
           ನಿಮ್ಮ ಬಾಯಿಯಲ್ಲಿ ಶರಣ ಶಬ್ದ ಕೇಳಿ, ನಿಮ್ಮನ್ನು ಹಾಗೂ ನಿಮ್ಮ ಗುಂಪಿನ ಕೆಲವರನ್ನು ನೀವು ಶರಣ ಎಂದು ಕರೆದುಕೊಳ್ಳುವುದನ್ನು ಕೇಳಿ ಕೇಳಿ…ನನಗೇನಾದರೂ ಈ ಎರಡರಲ್ಲಿ ಒಂದು ಆರಿಸಿ ಎಂಬ ಆಯ್ಕೆ ಕೊಟ್ಟರೆ ನಾನು ನನ್ನನ್ನು ಶರಣ ಎಂದು ಕರೆದುಕೊಳ್ಳಲು ಇಚ್ಚಿಸುವುದಿಲ್ಲ! 🙂

          • Nagshetty Shetkar
           ಮಾರ್ಚ್ 9 2014

           “ನಿಮ್ಮ ಬಾಯಿಯಲ್ಲಿ ಶರಣ ಶಬ್ದ ಕೇಳಿ, ನನಗೇನಾದರೂ ಈ ಎರಡರಲ್ಲಿ ಒಂದು ಆರಿಸಿ ಎಂಬ ಆಯ್ಕೆ ಕೊಟ್ಟರೆ ನಾನು ನನ್ನನ್ನು ಶರಣ ಎಂದು ಕರೆದುಕೊಳ್ಳಲು ಇಚ್ಚಿಸುವುದಿಲ್ಲ! ”

           So you have admitted that you are not a sharana but a joker. Good realisation.

         • Nagshetty Shetkar
          ಮಾರ್ಚ್ 8 2014

          Darga Sir knows what to do. He doesn’t need lessons from fakesters of nilume aka namo cyber army.

          ಉತ್ತರ
          • ಮಾರ್ಕ್ಸ್ ಮಂಜು
           ಮಾರ್ಚ್ 10 2014

           Mr.Nagshetty Shetkar : You have asked me What is my hidden agenda …

           ನನ್ನ ಜೀವನದ agenda ಒಂದೇ.ಅದು ಮಾರ್ಕ್ಸ್.ಶೋಷಿತರ,ಬಡವರ ಸರ್ವಸಮಾನತೆಯ ಸಮಾಜ. ನನ್ನನ್ನು ನಮೋ ಆರ್ಮಿಗೆ ಹೋಲಿಸುವ ಪಾಪದ ಕೆಲಸ ಮಾಡುವುದನ್ನು ನಿಲ್ಲಿಸಿ.ಇದಕ್ಕಿಂತ ದೊಡ್ಡ ಅಪಮಾನ ನನಗೆ ಇನ್ನೊಂದಿಲ್ಲ

          • Nagshetty Shetkar
           ಮಾರ್ಚ್ 10 2014

           ಓಕೆ ಮಂಜು, ನಿಮ್ಮ ಮಾತನ್ನು ಕೃತಿಗೆ ಇಳಿಸಿ. ಆಮೇಲೆ ನಿಮ್ಮೊಡನೆ ಮಾತು.

 12. valavi
  ಮಾರ್ಚ್ 4 2014

  ಅಮೇರಿಕೆಯ ಮೇಲೆ ಇಂಡಿಯಾದ ಸೈಬರ್ ಕೂಲಿಗಳು ನಿಂತಿಲ್ಲ. ಜಗತ್ತಿಗೆ ಸೈಬರ್ ಅದೆ ಸಾಫ್ಟ್ವೇರ್ ಕೂಲಿಗಳ ಅಗತ್ಯ್ ಅತಿ ಹೆಚ್ಚಿದೆ. ಅಂದಹಾಗೆ ನಿಮಗೂ ಈ ಕೂಲಿಗಳು ಬೇಕೇ ಬೇಕಲ್ಲ. ಏಕೆಂದರೆ ನಿಮ್ಮ ವಾದವನ್ನು ಕೇಳಲು ನಿಮ್ಮ ತತ್ಮಗಳ ಪ್ರಚಾರಕ್ಕಾಗಿ ಈ ಕೂಲಿಗಳು ಇಲ್ಲದಿದ್ದರೆ ಹೇಗೆ? ನಿಮ್ಮ ಮೊಬೈಲ್, ನಿಮ್ಮ ವಾಷಿಂಗ ಮಸಿನ್ ,ನಿಮ್ಮ ಅಡಿಗೆ ಒಲೆ,(ಇಂಡಕ್ಷನ್ ಬೇಸ್) ನಿಮ್ಮ ಏ.ಸಿ ನಿಮ್ಮ ಗೀಜರ್ ನಿಮ್ಮ ಪತ್ರಿಕೆ, ಟಿ.ವಿ, ನಿಮ್ಮ ಮನರಂಜನೆ , ನಿಮ್ಮ ಮನೆಯ ಮಹಡಿ ಏರುವ ಮೂವಿ ಸ್ಟೆಪ್ ,ಲಿಫ್ಟ ನಿಮ್ಮ ರಸ್ತೆ ದೀಪಗಳು, ನಿಮ್ಮ ಮನೆಯ ರೈಸ್ ಕುಕ್ಕರ್ (ಇಲೆಕ್ಟ್ರಾನಿಕ್) ನಿಮ್ಮ ಅಗತ್ಯಕ್ಕೆ ತಕ್ಕಂತೆ 24 ತಾಸು ಕೆಲಸ ಮಾಡುವ ಎ.ಟಿ. ಎಮ್ ರೇಲ್ವೆಯಲ್ಲಿ ಟಿಕೆಟ್ ಬುಕ್ ಹಿಡಿದು ಹಳಿ ಚೆಂಜ್ ಮಾಡುವದು ಇವೆಲ್ಲ ನಿಮ್ಮ ಅಗತ್ಯಗಳು ಈ ಕೂಲಿಗಳಿಂದಲೇ ಅಲ್ಲವೆ ಕೆಲ್ಸ್ ಮಾಡೋದು? ಆ ಕೂಲಿಗಳಿಲ್ಲದಿದ್ದರೆ ಮೊದಲು ನೀವು ಹೇಗಿರುತ್ತೀರಿ ಎಂದು ಲೆಕ್ಕ ಹಾಕಿ. ಮಾರ್ಕ್ಸನ ಕೂಲಿಗಳಿಂದ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಆಗೇನು ಮಾಡುವಿರಿ?

  ಉತ್ತರ
 13. ಮಾರ್ಚ್ 4 2014

  “ಸೈಬರ್” ಕೂಲಿಗಳ ಮೇಲೆ ಈ ಸೊಟ್ಟನೋಟವೇಕೆ? ಅವರು ಮಾಡುವುದೂ ಕಾಯಕವೇ ಅಲ್ಲವೇ ?

  ಉತ್ತರ
  • ವಿಜಯ್ ಪೈ
   ಮಾರ್ಚ್ 5 2014

   ಇಲ್ಲ ಸರ್ ..ಅವರ ‘ಕಾಯಕ’ಯೋಗ ಬೇರೆ ಇದೆ! 🙂

   ಉತ್ತರ
 14. ಮಾರ್ಚ್ 4 2014

  ಶೇಟ್ಕರ್ ಅವರೇ,

  ಇಲ್ಲಿ ನಾವು ಆಧರಿಸಿರುವುದು ವೈಜ್ಞಾನಿಕ ಕುರುಹನ್ನು ಮಾತ್ರ. ಮತ್ತು ಆ ಕುರುಹನ್ನು ನೀಡಿರುವುದು NASA ದಂತಹ ಜಾಗತಿಕ ಮಟ್ಟದಲ್ಲಿ ಬಾಹ್ಯಾಂತರಿಕ್ಷ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯುಚ್ಚ ಸಾಧನೆಗಳನ್ನು ಮಾಡಿರುವ ಸಂಸ್ಥೆ.
  ಅದು ನೀಡಿರುವ ಚಿತ್ರದಲ್ಲಿ ಉತ್ತರ ಕೊರಿಯಾ ದೇಶ ಕತ್ತಲಲ್ಲಿದೆ. ಅದೇ ಸಮಯದಲ್ಲಿ ಚೀನಾ ದೇಶದಲ್ಲಿ ಬೆಳಕಿದೆ.
  ಅದಕ್ಕೆ ನಿಮ್ಮ ಉತ್ತರ:
  [[ಉತ್ತರ ಕೊರಿಯಾದ ಜನರು ನಿಜಕ್ಕೂ ಬುದ್ಧಿವಂತರು. ಬೆಳಗಿನ ಹೊತ್ತು ಕಾಯಕ ಯೋಗಿಗಳಾಗಿ ದುಡಿದು ರಾತ್ರಿಯ ಹೊತ್ತು ಬೆಳಕು ಆರಿಸಿ ಸುಖವಾಗಿ ನಿದ್ರೆ ಮಾಡಿ ವಿಶ್ರಾಂತಿ ಪಡೆಯುತ್ತಾರೆ.]]

  ಹಾಗಾದರೆ, ಕಮ್ಯುನಿಸ್ಟ್ ಚೀನಾದ ಜನ ದಡ್ಡರು; ಅವರು ಕಾಯಕ ಯೋಗಿಗಳಲ್ಲ; ಚೀನಾದ ಜನ ಸುಖವಾಗಿ ನಿದ್ರೆ ಮಾಡುತ್ತಿಲ್ಲ; ಎಂದೇ? 😉

  ಉತ್ತರ
 15. ಮಾರ್ಚ್ 4 2014

  ಶೇಟ್ಕರ್ ಅವರೇ ಮತ್ತು ಮಾರ್ಕ್ಸ್ ಮಂಜು ಅವರೇ,

  ಪ್ರಾಯಶಃ ವಿಜ್ಞಾನವನ್ನೇ ನೀವು ಅಫೀಮು ಎಂದೆನ್ನುವಿರೇನೋ!?
  ಏಕೆಂದರೆ, ವಿಜ್ಞಾನದ ಆವಿಷ್ಕಾರದಿಂದಲ್ಲವೇ ಉತ್ತರ ಕೊರಿಯಾದ ‘ಕತ್ತಲು’ ಜಗತ್ತಿಗೆ ತಿಳಿದದ್ದು.
  NASA ಆಗಸಕ್ಕೆ ಉಪಗ್ರಹವನ್ನು ಕಳುಹಿಸದೇ ಹೋಗಿದ್ದರೆ, ಅಲ್ಲಿಂದ ಭೂಮಿಯ ಚಿತ್ರ ತೆಗೆಯದೇ ಹೋಗಿದ್ದರೆ, ತೆಗೆದ ಚಿತ್ರವನ್ನು ಪ್ರಕಟಿಸದೇ ಇದ್ದಿದ್ದರೆ, ಚೆನ್ನಾಗಿರುತ್ತಿತ್ತು ಅಲ್ಲವೇ?
  ಸತ್ಯ ತಿಳಿದಿದ್ದರಿಂದಲ್ಲವೇ ಕಷ್ಟಕ್ಕೆ ಬಂದದ್ದು. ಹೀಗಾಗಿ, ಸತ್ಯವನ್ನು ಮತ್ತು ಸತ್ಯಕ್ಕೆ ಕಾರಣವಾದ ವಿಜ್ಞಾನವನ್ನು ನಿಷೇಧಿಸಿಬಿಟ್ಟರೆ ಯಾರಿಗೂ ಸತ್ಯವೇ ತಿಳಿಯುವುದಿಲ್ಲ ಅಲ್ಲವೇ?
  ಹೇಗೆ ಕಮ್ಯುನಿಸ್ಟ್ ದೇಶಗಳ ಒಳಗೆ ಏನು ನಡೆಯುತ್ತದೆ ಎನ್ನುವುದು ಹೊರ ಜಗತ್ತಿಗೆ ತಿಳಿಯುವುದಿಲ್ಲವೋ, ಕಮ್ಯುನಿಸ್ಟ್ ದೇಶಗಳ ಜನರಿಗೆ ಹೊರಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿಯುವುದಿಲ್ಲವೋ, ಆ ರೀತಿ ಮಾಡಿಬಿಟ್ಟರೆ ಕಮ್ಯುನಿಸಂ ಉಳಿದೀತು. ಅದು ಬಿಟ್ಟು ಬೇರೆ ದಾರಿಯೇ ಇಲ್ಲ ಎನಿಸುತ್ತದೆ!
  ಲೆನಿನ್, ಸ್ಟಾಲಿನ್, ಮಾವೋ ಇವರುಗಳು ಮಾಡಿದ್ದು ಇದೇ. ಹೀಗಿರುವಾಗ, ಈ ‘ಅತ್ಯುತ್ತಮ’ ಸಲಹೆ ನೀಡಲು ನೀವೇಕೆ ಹಿಂಜರಿಯಬೇಕು!? 😉

  ಉತ್ತರ
  • ಮಾರ್ಕ್ಸ್ ಮಂಜು
   ಮಾರ್ಚ್ 5 2014

   “Mr. SSNK Says : ಲೆನಿನ್, ಸ್ಟಾಲಿನ್, ಮಾವೋ ಇವರುಗಳು ಮಾಡಿದ್ದು ಇದೇ. ಹೀಗಿರುವಾಗ, ಈ ‘ಅತ್ಯುತ್ತಮ’ ಸಲಹೆ ನೀಡಲು ನೀವೇಕೆ ಹಿಂಜರಿಯಬೇಕು!?”

   I wan to to remind him that I am not ‘ಲೆನಿನ್ ಮಂಜು’,’ಸ್ಟಾಲಿನ್ ಮಂಜು’, ‘ಮಾವೋ ಮಂಜು’. I am ‘ಮಾರ್ಕ್ಸ್ ಮಂಜು’.

   ನಾನು ಮಾರ್ಕ್ಸ್ ಹೊರತೂ ಲೆನಿನ್,ಸ್ಟಾಲಿನ್,ಮಾವೋ ಅಲ್ಲ.

   ನಿಮ್ಮ ನಾಡಿನ ಕಮ್ಯುನಿಸ್ಟರಿಗೆ ಈ ಜನರ ನಡುವೆ ಇರಬಹುದಾದ ವ್ಯತ್ಯಾಸಗಳ ಅರಿವಿಲ್ಲದಿರುವುದು ಅವರ ನಡೆಗಳಿಂದ ನನಗೆ ಆಗಾಗ ಗೊತ್ತಾಗುತ್ತದೆ.

   ಮಾರ್ಕ್ಸ್ ಅನ್ನು ಅರಿಯಿರಿ ನಿಮಗೆ ನಿಮ್ಮ ಹೆಜ್ಜೆಗಳು ತಪ್ಪಿದ್ದೆಲ್ಲಿ ಎಂಬುದು ಅರಿವಿಗೆ ಬರುತ್ತದೆ

   ಉತ್ತರ
   • ವಿಜಯ್ ಪೈ
    ಮಾರ್ಚ್ 5 2014

    ಮಾರ್ಕ್ಸ ಮಂಜಣ್ಣ..
    ನಿಮ್ಮ ಗುಂಪಿನವರು ಹೀಗೆ ಗೊಂದಲ ಉಂಟುಮಾಡುವಲ್ಲಿ, ತಾವೇ ಗೊಂದಲಗೊಳ್ಳುವಲ್ಲಿ ವಿಶ್ವಪ್ರಖ್ಯಾತರು! ಕರ್ನಾಟಕದ ಕಾಮ ರೆಡ್ಡುಗಳು ಉಪಯೋಗಿಸಿಕೊಳ್ಳುವುದೆಲ್ಲ ಲೆನಿನ್,ಸ್ಟಾಲಿನ್,ಮಾವೋ ಸಿದ್ಧಾಂತ,.. ಎದುರಿಗೆ ಮುಖವಾಡವಾಗಿ ಆ ಮಾರ್ಕ್ಸ್. ಇದು ಗಾಂಧೀಜಿಯವರನ್ನು ಮುಂದಿಟ್ಟುಕೊಂಡು ಮುಂಡಾಮೋಚುವವರ ಕಾರ್ಯವೈಖರಿಯಂತಿದೆ!. ( ಈಗ ಗಾಂಧೀಜಿ=ಮಾರ್ಕ್ಸ್ ಅಂತ ಹೇಳಿದೆ ಅಂತ ತಿಳಿದುಕೊಳ್ಳಬೇಡಿ ಮತ್ತೆ..ಅದು ಉದಾಹರಣೆಯಷ್ಟೆ)

    ಉತ್ತರ
   • ಮಾರ್ಚ್ 5 2014

    [[ಸತ್ಯವನ್ನು ಕೊಂದರೆ, ಉಳಿಯುವ ಸುಳ್ಳೇ ಸತ್ಯವಾಗುತ್ತದೆ]]
    ಸಣ್ಣ ತಿದ್ದುಪಡಿ. ಕಮ್ಯುನಿಸ್ಟರು ಸತ್ಯವನ್ನೆಂದೂ ಕೊಲ್ಲುವುದಿಲ್ಲ.
    ಅವರು ಸತ್ಯ ಹೇಳುವವರನ್ನು ಕೊಲ್ಲುತ್ತಾರೆ ಅಷ್ಟೇ! ಕಮ್ಯುನಿಸ್ಟರು ಹೇಳಿದ್ದನ್ನು ಒಪ್ಪುವವರಿಗೆ ಮಾತ್ರ, ಕಮ್ಯುನಿಸ್ಟರ ಪ್ರಪಂಚದಲ್ಲಿ ಬದುಕಲು ಹಕ್ಕಿರುತ್ತದೆ, ಉಳಿದವರು ಪರಲೋಕಕ್ಖೇ ಟಿಕೆಟ್ ತೆಗೆದುಕೊಳ್ಳಬೇಕು!! 😉

    ಉತ್ತರ
 16. M.A.Sriranga
  ಮಾರ್ಚ್ 5 2014

  ಮಾರ್ಕ್ಸ್ ಮಂಜು ಅವರಿಗೆ– ಅಷ್ಟು ದಿನ ಕಮ್ಯುನಿಸಂ ನ ಭದ್ರಕೋಟೆಯಲ್ಲಿ ಇದ್ದ ಮತ್ತು ಅಮೆರಿಕಾಕ್ಕೆ ಪರ್ಯಾಯ ಶಕ್ತಿಯಾಗಿದ್ದ ಜತೆಗೆ ಭಾರತಕ್ಕೂ ಒಂದು ಬಲವಾದ ಸ್ನೇಹಪರ ದೇಶವಾಗಿದ್ದ ussr ಏಕೆ ಛಿದ್ರ ಛಿದ್ರ ವಾಗಿ ಹೋಯ್ತು? ಇದಕ್ಕೊಂದು ಸಮಂಜಸ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ತಿಳಿಸುವಿರಾ?

  ಉತ್ತರ
  • M.A.Sriranga
   ಮಾರ್ಚ್ 10 2014

   ಪೈ ಅವರಿಗೆ–ಒಂದೇ ಬಳ್ಳಿಯ ಹೂವುಗಳಂತೆ ಇದ್ದವರು ಇಷ್ಟು ಬೇಗ ಬೇರ್ಪಡಲು ಕಾರಣ ತಿಳಿಯಲಿಲ್ಲ!

   ಉತ್ತರ
   • ಮಾರ್ಕ್ಸ್ ಮಂಜು
    ಮಾರ್ಚ್ 10 2014

    Mr.M.A.Sriranga USSR ಛಿದ್ರವಾಗಿದ್ದು ಬಂಡವಾಳಶಾಹಿಗಳ ಕುತಂತ್ರದಿಂದ.ಕ್ರುಶ್ಚೇವ್ ಬಂಡವಾಳಶಾಹಿಗಳ ಬಲೆಗೆ ಸಿಕ್ಕಿಬಿದ್ದಿದ್ದು ಇತಿಹಾಸದ ಕ್ರೌರ್ಯವೇ ಸರಿ.

    “ಒಂದೇ ಬಳ್ಳಿಯ ಹೂವುಗಳಂತೆ ಇದ್ದವರು ಇಷ್ಟು ಬೇಗ ಬೇರ್ಪಡಲು ಕಾರಣ ತಿಳಿಯಲಿಲ್ಲ!” – ಕಾಮ್ರೇಡುಗಳ ತತ್ವ ಸಿದ್ಧಾಂತಗಳ ಬದ್ಧತೆಯಿರುತ್ತದೆ, ನಿಮ್ಮ ವೈದಿಕ ಸನಾತನಿಗಳ ಹಾಗೆ ಕೆಲಸಕ್ಕೆ ಬಾರದ ಭಾವನೆಯ ಬೆಸುಗೆಯಲ್ಲ.ಒಂದೇ ಬಳ್ಳಿಯ ಹೂಗಳು ಎನ್ನುವುದೆಲ್ಲ ಬೂರ್ಜ್ವಾ ಮಾತುಗಳಂತೆ ದನಿಸುತ್ತವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments