ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 4, 2014

14

ಧರ್ಮದ ಅರ್ಥ ಮತ್ತು ಅದರ ಮೇಲಿನ ಹಣದ ಸಂಬಂಧ

‍ನಿಲುಮೆ ಮೂಲಕ

-ನವೀನ್ ನಾಯಕ್

ಧರ್ಮಧರ್ಮದ ವ್ಯಾಖ್ಯಾನವನ್ನು ದೀನ್ ದಯಾಳ್ ಉಪಾಧ್ಯಾಯರವರು ಹೀಗೆ ವಿವರಿಸುತ್ತಾರೆ.
” ಯತೋಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮ ” ಅಂದರೆ ಯಾವುದರಿಂದ ಐಹಿಕ ಮತ್ತು ಪಾರಲೌಕಿಕ ಉನ್ನತಿ ದೊರೆಯುವುದೋ ಅದು ಧರ್ಮ. ಮುಂದುವರೆಸಿ ಹೇಳುತ್ತಾರೆ ,
ಮಹರ್ಷಿ ಚಾಣಕ್ಯರವರ ಪ್ರಕಾರ ” ಸುಖಸ್ಯ ಮೂಲಂ ಧರ್ಮಃ, ಧರ್ಮಸ್ಯ ಮೂಲಂ ಅರ್ಥಃ “( ಸುಖವು ಧರ್ಮದ ಮೂಲಕವಾದರೆ ಧರ್ಮವು ಅರ್ಥಮೂಲ ) , ಇಲ್ಲಿ ಹಣವಿಲ್ಲದೇ ಧರ್ಮವೂ ನಿಲ್ಲುವುದಿಲ್ಲ ಎಂಬ ಸೂಚನೆ ಇದೆ.
ಅಂದರೆ ಭಾರತದಲ್ಲಿ ಭೌತಿಕ ಆಧ್ಯಾತ್ಮಿಕ ಜಗತ್ತಿನ ಕುರಿತಲ್ಲದೇ ಹಣ- ಸಂಪತ್ತುಗಳ  ಬಗೆಗೂ ವಿಚಾರ ಮಾಡಲಾಗಿದೆ. ಇದನ್ನು ಅರ್ಥೈಸಿಕೊಳ್ಳುವಾಗ ಧರ್ಮದ ವ್ಯಾಪಕ ಪರಿಭಾಷೆಯನ್ನು ತೆಗೆದುಕೊಳ್ಳಬೇಕು. ಅಂದರೆ  ಮತ , ಪಂಥ, ಅಥವಾ ರಿಲಿಜನ್ ಎಂದು ಭಾವಿಸುವ ಸಂಕುಚಿತ ಅಥವ ಆಧುನಿಕ ಭ್ರಮಾಯುಕ್ತ ಅರ್ಥವನಲ್ಲ.
ಸಮಾಜವನ್ನು ಧರಿಸಿರುವುದು ,  ಐಹಿಕ ಮತ್ತು ಪಾರಲೌಕಿಕ ಉನ್ನತಿಗೆ ಸಹಾಯಕವಾಗುವಂತಹದು, ಮಾನವನ ಕರ್ಮಗಳನ್ನು ನಿರ್ಧಾರ ಮಾಡಿ ಅವನು ಕರ್ತವ್ಯದ ಸೂಚನೆಯನ್ನು ಪಡೆಯಲು ಕಾರಣವಾಗುವಂತಹುದು, ವ್ಯಕ್ತಿಯು ತನ್ನ ಎಲ್ಲ ಪ್ರಕಾರದ ಉನ್ನತಿಗಳನ್ನು ಮಾಡಿಕೊಳ್ಳುವತ್ತ, ಸಮಷ್ಟಿಯ ಉದ್ಧಾರದಲ್ಲಿ ಸಹಾಯಕವಾಗಲು ಸಾಧ್ಯವಾಗುವಂತಹುದು. ಒಟ್ಟಾರೆಯಾಗಿ ಇಂಥಹ ನಿಯಮ ವ್ಯವಸ್ತೆ ಹಾಗೂ ಅದರಲ್ಲಿ ಅಡಗಿದ ಭಾವವೇ ಧರ್ಮ.
ಈಗ ಅರ್ಥದ ಅಭಾವವಾದಾಗ ಉದಾಃ ಮೂಲಕ ಧರ್ಮದ ಪರಿಕಲ್ಪನೆ ಗಮನಿಸುವ.
ವಿಶ್ವಾಮಿತ್ರರು ಹಸಿವೆಯಿಂದ ಅತ್ಯಂತ ಪೀಡಿತನಾದಾಗ ರಾತ್ರಿಯ ಸಮಯದಲ್ಲಿ ಕಳ್ಲತನದಿಂದ ಚಾಂಡಾಲನ ಮನೆಗೆ ನುಗ್ಗಿ ನಾಯಿಯ ಎಂಜಲ ಮಾಂಸವನ್ನು ತಿಂದರೆಂದು ಹೇಳಲಾಗುತ್ತದೆ. ಇದರಿಂದ ಅವರು ಧರ್ಮದ ಹಲವು ಎಲ್ಲೆಗಳನ್ನು ಮುರಿದ ಹಾಗಾಯಿತು. ನಿಯಮಗಳ ದೃಷ್ಟಿಯಲ್ಲಿ ( ಕಳ್ಳತನ, ಚಾಂಡಾಲ, ನಾಯಿ ಎಂಜಲು ಮತ್ತು ಮಾಂಸ ) ಕೆಲವನ್ನು ಮುರಿಯಲಾಯಿತು. ಈ ಪರಿಸ್ತಿತಿಗೆ ಆಪತ್ ಧರ್ಮದ ಹೆಸರು ಕೊಟ್ಟು ಶಾಸ್ತ್ರಕಾರರು ಅವರ ಈ ವ್ಯವಹಾರವನ್ನು ಯೋಗ್ಯವೆಂದೇ ನಿರ್ಧರಿಸಿದ್ದಾರೆ.
   ಹೀಗೆ ಹಣದ ತೊಂದರೆ ನಿರಂತರವಾದಾಗ ಆಪತ್ ಧರ್ಮವು ಅರ್ಥಾತ್ ಕಳ್ಳತನ ಕೂಡ ಧರ್ಮವೇ ಆಗಿಬಿಡುತ್ತದೆ. ಮತ್ತು ಇಂಥ ಸಂಕಟವು ಸಮಷ್ಟಿಗೆ ಸಂಬಂಧಿಸಿದಾಗ ಅಂದರೆ ಸಮಾಜದ ಬಹಳಷ್ಟು ಜನರನ್ನು ಇದು ಆವರಿಸಿದಾಗ ಒಬ್ಬರು ಇನ್ನೊಬ್ಬರಲ್ಲಿ ಕಳ್ಳತನ ಮಾಡಿ ತಮ್ಮ ಧರ್ಮವನ್ನು ನಿಭಾಯಿಸುತ್ತಾರೆ. ಆದರೆ ಎಲ್ಲಾ ಕಡೆಯೂ ಅಭಾವವೇ ಇದ್ದಾಗ ಕಳ್ಳತನ ಮಾಡುವುದಾದರು ಯಾರದನ್ನು ? ಅಂದರೆ ಅಂತಹ ಸಮಯದಲ್ಲಿ ಸಮಾಜವೇ ನಾಶವಾಗುತ್ತದೆ.
   ಇದಲ್ಲದೇ ಹಣದ ಅತ್ಯಧಿಕ ಪ್ರಭಾವ ಕುರಿತು ಕೂಡ ಭಾರತ ತನ್ನದೇ ಆದ ವಿಶಿಷ್ಟ ದೃಷ್ಟಿಕೋನವನ್ನೇ ಹೊಂದಿದೆ. ಇದು ಪಾಶ್ಚಿಮಾತ್ಯಕ್ಕೂ ನಮಗಿರುವ ವ್ಯತ್ಯಾಸಗಳಲ್ಲೊಂದು. ಪಶ್ಚಿಮದ ಜನರು ಹಣದ ಪ್ರಭಾವದ ಕಡೆ ವಿಚಾರ ಮಾಡಲಿಲ್ಲ. ಆದರೆ ಭಾರತದಲ್ಲಿ ಈ ಕುರಿತು ಹೀಗೆ ವ್ಯಾಖ್ಯಾನಿಸಿದೆ, ಹಣವು ತನ್ನಲ್ಲಿ ಅಥವಾ ಅದರ ಮೂಲಕ ಪಡೆದ ಸರಕುಗಳಲ್ಲಿ ಮತ್ತು ಅದರಿಂದ ಪಡೆದುಕೊಂಡ ” ಭೋಗ” ವಿಲಾಸದಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ. ಈ ಆಸಕ್ತಿಯನ್ನು ಹಣದ ಪ್ರಭಾವ ಎಂದು ಕರೆಯಲಾಗುತ್ತದೆ. ಈ ವ್ಯವಸ್ತೆಯಲ್ಲಿ ಹಣದ ಗುಂಗಷ್ಟೇ ಹತ್ತಿಕೊಂಡರೆ ಆತ ದೇಶ, ಧರ್ಮ, ಜೀವನದ ಸುಖ ಎಲ್ಲವನ್ನು ಮರೆತು ಬಿಡುತ್ತಾನೆ. ಅದೇ ರೀತಿ ಮನುಷ್ಯನು ಪೌರುಷಹೀನನಾಗಿ ತನ್ನ ಹಾಗೂ ಸಮಾಜದ ನಾಶಕ್ಕೆ ಕಾರಣನಾಗುತ್ತಾನೆ.
   ಹಣದ ಕೊರತೆಯ ಪ್ರಭಾವದಲ್ಲಿ “ಅರ್ಥದ ” ಸಾಧನತ್ವ ನಷ್ಟವಾಗಿ ಅದು ಸಾಧ್ಯವಷ್ಟೇ ಆಗುತ್ತದೆ. ಎರಡನೆಯ ಪ್ರಭಾವ ಅಂದರೆ ಹಣದ ಅತ್ಯಧಿಕ ಪ್ರಭಾವದಲ್ಲಿ ಧರ್ಮಾಚರಣೆಯ ಸಾಧನವಾಗದೇ ವಿಷಯಭೋಗದ ಸಾಧನವಾಗುತ್ತದೆ. ವಿಷಯ ಸುಖದ ಹಸಿವಿಗೆ ಮಿತಿಯೇ ಇಲ್ಲದಿರುವಾಗ ಈ ದಾಸ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವಾಗಲೂ ಹಣದ ಕೊರತೆ ಕಾಡುತ್ತಿರುತ್ತದೆ. ಅದಲ್ಲದೇ ಪೌರುಷಹಾನಿಯಿಂದಾಗಿ ಆತನ ಹಣ ಸಂಪಾದಿಸುವ ಸಾಮರ್ಥ್ಯವೂ ಕೂಡ ಕುಸಿಯುತ್ತಾ ಹೋಗುತ್ತದೆ.
14 ಟಿಪ್ಪಣಿಗಳು Post a comment
    • ವಿಜಯ್ ಪೈ
      ಮಾರ್ಚ್ 5 2014

      ಎಂದಿನಂತೆಯೇ ನಮ್ಮ ಶೆಟ್ಕರ್ ಸಾಹೇಬರಿಗೆ ಬಹು ಪ್ರಿಯವಾದ ಬಡಾಯಿ ಲದ್ದಿ! 🙂

      ಹೈಸ್ಕೂಲ್ ಗಳಲ್ಲಿ ನಮಗೆ ವಿಸ್ತರಿಸಿ ಬರೆಯಿರಿ ಅನ್ನುವ ಒಂದೆರಡು ಪ್ರಶ್ನೆಗಳಿರುತ್ತಿದ್ದವು. ಇಲ್ಲಿ ಅದಕ್ಕೊಂದು ಸಕತ್ತಾದ ಉದಾಹರಣೆಯಿದೆ.
      ಅರ್ಥ : ”
      ಮಾಡಲು ‘ಯೋಗ್ಯ’ವಾದ ಕೆಲಸವಿಲ್ಲದೇ ನಮ್ಮ ತಂಡದ ಕೆಲವರು ನಿರೋದ್ಯೋಗಿಗಳಾಗಿದ್ದಾರೆ. ಅವರಿಗೆ ಸಣ್ಣದೊಂದು ಗಂಜಿಕೇಂದ್ರದ ವ್ಯವಸ್ಥೆ ಮಾಡಿಕೊಟ್ಟು, ಅವರು ಮತ್ತು ಅವರ ‘ವಿಚಾರ’ ಗಳು ಜೀವಂತವಾಗಿರಲು ಸಹಾಯ ಮಾಡಬೇಕಾಗಿ ವಿನಂತಿ ”

      ವಿಸ್ತರಣೆ :
      ಮಾನ್ಯ ಶಿಕ್ಷಣ ಸಚಿವರು ತಕ್ಷಣ (1) ಪ್ರೌಢಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಪ್ರಸಕ್ತ ಸಮಿತಿಯನ್ನು ಬರ್ಕಾಸ್ತು ಗೊಳಿಸಬೇಕು (2) ಈಗಾಗಲೆ ಆಯ್ಕೆಯಾಗಿರುವ ಎಲ್ಲಾ ಮನುವಾದಿ, ಕೋಮುವಾದಿ ಪುಸ್ತಕಗಳನ್ನು ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನಂತಹ ಕೋಮುವಾದಿ ಸಂಸ್ಥೆಗಳ ಪ್ರಕಟಣೆಗಳನ್ನು ತಿರಸ್ಕರಿಸಬೇಕು (3) ಹೆಸರಾಂತ, ಸಮರ್ಥ ಶಿಕ್ಷಣತಜ್ಞರು ಮತ್ತು ಸಾಹಿತಿಗಳನ್ನು ಒಳಗೊಂಡ ಹೊಸ ಆಯ್ಕೆ ಸಮಿತಿಯೊಂದನ್ನು ರಚಿಸಬೇಕು (4) ಸಮಿತಿಯು ಮಕ್ಕಳ ವಿಕಸನಕ್ಕೆ ಅನುಕೂಲಕರವಾದ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡುವಂತೆ ನೋಡಿಕೊಳ್ಳಬೇಕು (5) ಪ್ರಸಕ್ತ ಡಿಎಸ್‌ಇಆರ್‌ಟಿ, ಪಠ್ಯಪುಸ್ತಕ ಸಂಘ ಮತ್ತು ವಿವಿಧ ಸಮಿತಿಗಳಲ್ಲಿರುವ ಮನುವಾದಿ ಮತ್ತು ಕೋಮುವಾದಿಗಳನ್ನು ತೆಗೆದುಹಾಕಿ ಅವುಗಳನ್ನು ಬರ್ಕಾಸ್ತುಗೊಳಿಸಬೇಕು (6) ಹೆಸರಾಂತ ಮತ್ತು ಸಮರ್ಥ ಶಿಕ್ಷಣತಜ್ಞರನ್ನೊಳಗೊಂಡ ಹೊಸ ಸಮಿತಿಗಳನ್ನು ರಚಿಸಬೇಕು (7) ಅವು ಎನ್‌ಸಿಎಫ್ 2005ಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿರುವ ಹೊಸ ಪಠ್ಯಪುಸ್ತಕಗಳನ್ನು ರಚಿಸುವಂತೆ ನೋಡಿಕೊಳ್ಳಬೇಕು (8) ಈಗಾಗಲೇ ವಿತರಿಸಲಾಗಿರುವ ನೂತನ ಪಠ್ಯಪುಸ್ತಕಗಳಲ್ಲಿರುವ ಆಕ್ಷೇಪಣೀಯ ಅಂಶಗಳನ್ನು ಕಲಿಸದಂತೆ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಬೇಕು (9) ಕೇಸರೀಕರಣಗೊಂಡಿರುವ ಪುಸ್ತಕಗಳನ್ನೆಲ್ಲ ಆದಷ್ಟು ಶೀಘ್ರದಲ್ಲಿ ಹಿಂದೆಗೆದುಕೊಂಡು ಎನ್‌ಸಿಎಫ್ 2005ಕ್ಕೆ ಅನುಗುಣವಾದ ಹೊಸ ಪಠ್ಯಪುಸ್ತಕಗಳನ್ನು ವಿತರಿಸುವ ಏರ್ಪಾಟು ಮಾಡಬೇಕು. (10) ಇನ್ನಷ್ಟು ಸಲಹೆ ಸೂಚನೆಗಳಿಗಾಗಿ ಪಠ್ಯಪುಸ್ತಕಗಳ ಕೇಸರೀಕರಣ ವಿರೋಧಿ ಹೋರಾಟ ಸಮಿತಿ ಈಗಾಗಲೆ ಬರೆದ ಪತ್ರಗಳನ್ನು ಅವಲೋಕಿಸಬಹುದು.

      ಉತ್ತರ
      • valavi
        ಮಾರ್ಚ್ 5 2014

        ಮಾನ್ಯ ಶಿಕ್ಷಣ ಸಚಿವರು ಏನೇನು ಮಾಡಬೇಕಂದರೆ
        (5) ಪ್ರಸಕ್ತ ಡಿಎಸ್‌ಇಆರ್‌ಟಿ, ಪಠ್ಯಪುಸ್ತಕ ಸಂಘ ಮತ್ತು ವಿವಿಧ ಸಮಿತಿಗಳಲ್ಲಿರುವ ಮನುವಾದಿ ಮತ್ತು ಕೋಮುವಾದಿಗಳನ್ನು ತೆಗೆದುಹಾಕಿ ಅವುಗಳನ್ನು ಬರ್ಕಾಸ್ತುಗೊಳಿಸಬೇಕು
        ಹಾಗೂ ಆ ಜಾಗದಲ್ಲಿ ಮುಸಲ್ಮಾನ ಅರಸರನ್ನು ಬ್ರಿಟಿಷರನ್ನು ಹೊಗಳುವ ಭಟ್ಟಂಗಿಗಳನ್ನು ಕಾಮ್ರೆಡ್ ಗಳನ್ನು ನೇಮಿಸಬೇಕು.
        4) ಸಮಿತಿಯು ಮಕ್ಕಳ ವಿಕಸನಕ್ಕೆ ಅನುಕೂಲಕರವಾದ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡುವಂತೆ ನೋಡಿಕೊಳ್ಳಬೇಕು
        ಅಂದರೆ ನಮ್ಮ ಮಕ್ಕಳು ನಾನು ದಡ್ಡ ನನ್ನತಾತ ಮುತ್ತಾತಂದಿರು ಮಹಾ ಮೂರ್ಖರು. ನಮ್ಮದು ಮೂರ್ಖರ ಪರಂಪರೆ . ವಿದೇಶಿಯರು ನಮ್ಮನ್ನು ಒದ್ದು ಆಳಲಿಕ್ಕೆ ಹುಟ್ಟಿದ್ದಾರೆ. ನಾವು ಒದೆಸಿಕೊಳ್ಳಲು ಹುಟ್ಟಿದ್ದೇವೆ. ಇತ್ಯಾದಿಗಳಿರುವ ಪುಸ್ತಕ ಪ್ರಕಟಿಸಬೇಕು.
        (3) ಹೆಸರಾಂತ, ಸಮರ್ಥ ಶಿಕ್ಷಣತಜ್ಞರು ಮತ್ತು ಸಾಹಿತಿಗಳನ್ನು ಒಳಗೊಂಡ ಹೊಸ ಆಯ್ಕೆ ಸಮಿತಿಯೊಂದನ್ನು ರಚಿಸಬೇಕು
        ಈ ಸಮಿತಿಯಲ್ಲಿ ಕೇವಲ ಕಾಮ್ರೆಡರೇ ತುಂಬಿರಬೇಕು. ತಪ್ಪಿ ಕೂಡ ರಾಷ್ಟ್ರವಾದಿಗಳಿರಬಾರದು. ಈ ಪುಸ್ತಕ ಓದಿದ ಮಕ್ಕಳು ಪಾಕಿಸ್ತಾನದೊಂದಿಗೆ ಇಂಡಿಯಾ ಕ್ರಿಕೆಟನಲ್ಲಿ ಸೋತಾಗ ಯುನಿವರ್ಸಿಟಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಬೇಕು. ಈಗ ಕೇವಲ ಮುಸ್ಲೀಂ ಮಕ್ಕಳು ಮಾತ್ರ ಹೀಗೆ ಮಾಡುತ್ತಾರೆ. ಮುಂದೆ ಹಿಂದೂ ಮಕ್ಕಳೂ ಹೀಗೆ ಮಾಡುವಂತಾಗಬೇಕು. (10) ಇನ್ನಷ್ಟು ಸಲಹೆ ಸೂಚನೆಗಳಿಗಾಗಿ ಪಠ್ಯಪುಸ್ತಕಗಳ ಕೇಸರೀಕರಣ ವಿರೋಧಿ ಹೋರಾಟ ಸಮಿತಿ ಈಗಾಗಲೆ ಬರೆದ ಪತ್ರಗಳನ್ನು ಅವಲೋಕಿಸಬಹುದು.
        ಹಾಗೂ ಬೇಕಿದ್ದರೆ ಲಡಾಯಿ ಬರಹಗಾರರನ್ನು ಸಂಪರ್ಕಿಸಿ. ಇಲ್ಲವೆ ಬರಗೂರರು, ಗೌರಮ್ಮ, ಭಗವಾನರು, ಜ್ಞಾನಪೀಠಿಗಳಾದ 6/7 ನಿಡುಮಾಮಿಡಿಯವರು, ಮರಳು ಸಿದ್ದಪ್ಪನವರು, ಬಷೀರ್ ಅವರು, ಅಗ್ನಿ ಅವರು, ಇಂಥವರ ಅಮೂಲ್ಯ ಸಲಹೆ ತಗೋಳ್ಳಿ.
        ಒಟ್ಟಿನಲ್ಲಿ ಭಾರತ ಹಳ್ಳ ಹಿಡಿಯುವಂತೆ, ಭಾರತದ ಮಕ್ಕಳು ತಮ್ಮನ್ನು ತಾವು ಮೂರ್ಖರೆಂದು ತಿಳಿಯಲು ಏನು ಬೇಕೋ ಅದೆಲ್ಲವನ್ನು ಮಾಡಿ. ಶೀಘ್ರ ಕ್ರಮ ಕೈಗೊಳ್ಳಿ. ಪ್ಲೀಜ್;……………..

        ಉತ್ತರ
        • Nagshetty Shetkar
          ಮಾರ್ಚ್ 6 2014

          ಕಜ್ಜಿಯಾದವರ ಹಾಗೆ ಯಾಕೆ ಈ ರೀತಿ ಮೈ ಮನಸ್ಸು ಕೆರೆದುಕೊಳ್ಳುತ್ತಿದ್ದೀರಾ ವಲವಿಯವರೇ? ಮನುವಾದ ನಿಮ್ಮನ್ನು ಈ ಸ್ಥಿತಿಗೆ ತಂದುಬಿಟ್ಟಿತೇ? ಛೆ!!

          ಉತ್ತರ
          • valavi
            ಮಾರ್ಚ್ 6 2014

            ಕಜ್ಜಿಯಾಗಿರುವದು ಯಾರಿಗೆ ಎಂದು ನೀವು ನೋಡಿಕೊಂಡರೆ ತಿಳಿಯುತ್ತೆ. ಶತಮಾನದಿಂದಲೂ ಮನುವನ್ನು ಬೈಯುತ್ತಲೇ ಬಂದಿರುವ ನೀವು ಮನುವಿಗಿಂತ 10 ಪಾಲು ಅಸಹ್ಯ ಕಾನೂನುಗಳನ್ನು ಮಾಡಿದ ಔರಂಗಜೇಬನ ಬಗ್ಗೆ ಮಾತ್ರ ಏನೂ ಹೇಳುವದಿಲ್ಲ. ಏಕೆಂದರೆ ಅವರು ವೈದಿಕರಂತೆ ಸುಮ್ಮನೆ ಕುಳುತುಕೊಳ್ಳದೇ ಒದೆಯುತ್ತಾರೆಂದು ಸುಮ್ಮನೆ ಕುಳಿತು ಕೊಳ್ಳುತ್ತೀರಿ. ಈ ಹಿಂದೆ ಶಾರು ಎಂಬ ಒಬ್ಬರು ಈ ಬಗ್ಗೆ ನಿಮ್ಮ ಗಮನ ಸೆಳೆದಿದ್ದರು. ನೀವು ಉತ್ತರಿಸದೇ ಫೇಕ್ ಐ.ಡಿ ನಾಟಕವಾಡಿ ಜಾರಿಕೊಂಡಿರಿ. ಈಗಲಾದರೂ ಉತ್ತರಿಸುವಿರಾ??
            [[ಪೂರ್ವಾಗ್ರಹ ಬಿಡಬೇಕಾದವರು ಯಾರು?? ಅವರ ಬಗ್ಗೆ ವಸ್ತುನಿಷ್ಟವಾಗಿ ಓದಬೇಕಾದವರು ಯಾರು?? ಔರಂಗಜೇಬನ ಇತಿಹಾಸವನ್ನು ಬರೆದ ಸಾಕಿ ಮುಸ್ತಾದ್ ಖಾನ್ ಎಂಬುವವನು ಮಾಸಿರ್ -ಇ-ಆಲಂಗೀರಿ ಎಂಬ ಕೃತಿಯಲ್ಲಿ ಔರಂಗಜೇಬನ ಕುರಿತು ಬೆಳಕು ಚಲ್ಲಿದ್ದಾನೆ. ಔರಂಗಜೇಬನು ಮಥುರಾದ ದೇವಾಲಯ ನಾಶ ಮಾಡಿದ್ದು ಕಾಶಿಯಲ್ಲಿನ ವಿಶ್ವನಾಥ ದೇಗುಲ ನಾಶಗೊಳಿಸಿರುವ ಕುರಿತು ಹೇಳಿದ್ದಾನೆ. ೧೬೬೯ರಲ್ಲಿ ಕಾಶಿ ದೇವಾಲಯ ನಾಶ ಮಾಡಿದರೆಂದು ಹಾಗೂ ೧೬೭೦ರಲ್ಲಿ ಮಥುರಾದ ದೇವಾಲಯ ನಾಶ ಮಾಡಿದರೆಂದು ಬರೆದಿದ್ದಾನೆ. ಇನ್ನು ಬಾಬರನು ತನ್ನ ಆತ್ಮ ಕಥೆಯಲ್ಲಿಯೇ ತಾನು ಜಿಹಾದದ ಅಂಗವಾಗಿ ಹಿಂದೂ ರಾಜರೊಡನೆ ಯುದ್ಧ ಮಾಡಿದೆನೆಂದು ಹೇಳಿಕೊಂಡಿದ್ದಾನೆ. ಮತ್ತು ಔರಂಗಜೇಬನು ಉದಯಪುರ ಅರಮನೆಯ ಮುಂದಿನ ಗುಡಿ , ಉದಯ ಸಾಗರ ದಂಡೆಯ ಮೂರು ಮಂದಿರ, ಉದಯಪುರದ ಸುತ್ತಮುತ್ತ೧೭೨ ಮಂದಿರಗಳು ಚಿತ್ತೂರಿನಲ್ಲಿ೬೩ ಮಂದಿರಗಳು,ಅಂಬೇರಿನಲ್ಲಿ ೬೬ ಮಂದಿರಗಳು, ಇವನ್ನು ನಾಶಪಡಿಸಿದ್ದ್ದಾಗಿ ಮಾಸಿರ್-ಇ-ಆಲಂಗೀರಿಯಲ್ಲಿ ಹೇಳಿದೆ. ಈಗ ಹೇಳಿ ಯಾರು ಪೂರ್ವಾಗ್ರಹ ಪೀಡಿತರು??

            ಇನ್ನು ಸದಾ ಮನುವನ್ನು ಬೈಯ್ಯುವ ತಾವು ಪವಿತ್ರ ಕುರಾನ್ ನಲ್ಲಿ ಏನು ಹೇಳಿದ್ದಾರೆಂದು ಸ್ವಲ್ಪ ತಿಳಿದುಕೊಳ್ಳಿ ನಿಮಗಾಗಿ ಸ್ವಲ್ಪ ಶಾಂಪಲ್ಸ್ ಉದಾಹರಣೆ ಕೊಡುತ್ತಿದ್ದೇನೆ.
            ಅಲ್ಲಾಹುವಿನ ಪ್ರತಿಸ್ಫರ್ದಿ ದೇವರನ್ನು ನಂಬಿದರೆ ಅಂಥ ವ್ಯಕ್ತಿ ಇದ್ದಾನೆಂದು ಹೇಳಿದರೆ ಅದು ರಾಜದ್ರೋಹವಾಗುತ್ತದೆ. ಮರಣದಂಡನೆಯೊಂದೇ ಅದಕ್ಕೆ ಶಿಕ್ಷೆ. ಅಲ್ಲಾಹುವಿನ ಮಾರ್ಗದಲ್ಲಿ ಶ್ರಮಿಸುವದಕ್ಕೆ ಜಿಹಾದ್ ಎಂದು ಹೆಸರು. ನಂಬದೇ ಇರುವವರ ರಾಜ್ಯವನ್ನು ನಂಬುವವರ ರಾಜ್ಯವಾಗಿ ಮಾಡಲು ಯುದ್ಧ ಮಾಡುವದಕ್ಕೆ ಜಿಹಾದ್ ಎನ್ನುತ್ತಾರೆ.ಯುದ್ಡದಲ್ಲಿ ಗೆದ್ದ ಮೇಲೆ ನಂಬದಿದ್ದವರೆಲ್ಲ ಗೆದ್ದವರ ಗುಲಾಮರಾಗುತ್ತಾರೆ. ಪ್ರಪಂಚದ ಪ್ರಜಾ ಸಮಸ್ತರೆಲ್ಲರನ್ನೂ ಇಸ್ಲಾಮಿಗೆ ಪರಿವರ್ತಿಸಿ ಎಲ್ಲ ವಿಧವಾದ ಭಿನ್ನ ನಂಬಿಕೆಗಳನ್ನು ನಾಶ ಮಾಡುವದೇ ಇಸ್ಲಾಂ ರಾಜ್ಯದ ಗುರಿ. (ಪವಿತ್ರ ಕುರಾನ್ IX 5.6) ಪುಣ್ಯ ಮಾಸಗಳು ಕಳೆದ ನಂತರ ಬೇರೆ ದೇವರನ್ನು ಸೇರಿಸುವವರನ್ನು ನೀನು ಎಲ್ಲಿಯೇ ಕಾಣಲಿ ಕೊಂದು ಹಾಕು. ಅವರು ಧರ್ಮಾಂತರರಾದರೆ ಬಿಟ್ಟು ಬಿಡು. (ಕುರಾನ್ VII,39-42,) ಅವರು ತಮ್ಮ ಹಳೆಯ ನಂಬಿಕೆಗೆ ಹಿಂದಿರುಗಿದರೆ ಎಲ್ಲವೂ ಅಲ್ಲಾಹುವಿನ ಧರ್ಮವಾಗುವವರೆಗೆ ಹೋರಾಡು. ನಿಜ ಧರ್ಮವನ್ನು ಅನುಸರಿಸದವರು ವಿನಯದಿಂದ ಜೆಸಿಯಾವನ್ನುಸ್ವತಃ ಕೈಗಳಿಂದ ತಂದೊಪ್ಪಿಸಬೇಕು ಅಲ್ಲಿಯವರೆಗೆ ಕಾಳಗ ಮಾಡಿ. {{ಜೆಸಿಯಾ ಸ್ವೀಕರಿಸುವ ಮುಸಲ್ಮಾನನು ಎತ್ತರವಾದ ಪೀಠದ ಮೇಲೆ ಕುಳಿತಿರಬೇಕು. ಮುಸಲ್ಮಾನನು ಕ್ಯಾಕರಿಸಿದರೆ ಅವನ ಎಂಜಲನ್ನು ಭಕ್ತಿಯಿಂದ ಸೇವಿಸಬೇಕು. ಅಸಹ್ಯ ಪಡಬಾರದು.}} {{ಮುಸಲ್ಮಾನನಲ್ಲದವನನ್ನು ಕೊಂದರೆ ಅದು ಅಪರಾಧವಲ್ಲ. (ಕುರಾನ್ IX,29) }}
            {{ಇನ್ನು ಔರಂಗಜೇಬನ ಆಸ್ಥಾನದಲ್ಲಿದ್ದ ನಿಯಮಗಳಿವು. ಶ್ಯಾಂಪಲ್ ನೋಡಿ. ಮುಸ್ಲಿಂ ಅಲ್ಲದವನು ಉತ್ತಮ ಬಟ್ಟೆ ತೊಡುವಂತಿಲ್ಲ. ಕುದುರೆ ಏರುವಂತಿಲ್ಲ. ಆಯುಧ ಇಟ್ಟುಕೊಳ್ಳುವಂತಿಲ್ಲ.ನ್ಯಾಯಾಲಯದಲ್ಲಿ ಇವನ ಸಾಕ್ಷಿಗೆ ಬೆಲೆ ಇಲ್ಲ. ಯೋಧನಾಗುವ ಅವಕಾಶವಿಲ್ಲ.ಪ್ರತಿ ಮುಸಲ್ಮಾನನ ಎದಿರು ಬಗ್ಗಿ ನಡೆಯಬೇಕು. ವಿಶೇಷ ಭೂಕಂದಾಯ ತೆರಬೇಕು.(ಖರಜ್ ) ಜಾತ್ರೆ ಉತ್ಸವಗಳಿಗಾಗಿ ಒಂದುಗೂಡುವಂತಿಲ್ಲ. ಹೊಸ ದೇವಾಲಯ ನಿರ್ಮಿಸುವಂತಿಲ್ಲ. ದುರಸ್ತಿ ಮಾಡುವಂತಿಲ್ಲ. ಮುಸಲ್ಮಾನ ವ್ಯಾಪಾರಿಗಳಿಗೆ ತೆರಿಗೆ ಮನ್ನಾ ನೀಡಿದರೆ ಹಿಂದೂ ವ್ಯಾಪಾರಿಗಳು ಶೆ ೫ರಷ್ಟು ತೆರಿಗೆ ನೀಡಬೇಕು. ಮುಖ್ಯ ಗುಮಾಸ್ತೆ ಮತ್ತು ಲೆಕ್ಕದ ಗುಮಾಸ್ತೆ ಯಾಗಿರುವ ಎಲ್ಲ ಹಿಂದೂಗಳನ್ನು ವಜಾ ಗೊಳಿಸಿ ಮುಸಲ್ಮಾನರನ್ನು ನೇಮಿಸಿದಾ. ಇದು ಔರಂಗಜೇಬನ ಸಾಧನೆ.!??}}
            ಸದಾ ಮನುವನ್ನು ಬೈಯ್ಯುವ ಶೆಟ್ಕರ್ ಸಾಬರೆ ಒಂದು ದಿನವಾದರೂ ಪ್ರಾಂಜಲ ಮನದಿಂದ ಕುರಾನದಲ್ಲು ಮನು ಹೇಳಿದಂತೆಯೇ ಹೇಳಿದ್ದಾರಲ್ಲ? ಎಂದು ಯೋಚಿಸಿದ್ದೀರಾ?? ಒಂದೇ ಒಂದು ಸಲ ಈ ಕುರಿತು ಮಾತನಾಡಿದ್ದೀರಾ? ನೀವು ಕೇಳಬಹುದು ಔರಂಗಜೇಬನ ಆದೇಶಗಳೆಲ್ಲಾ ಕಟ್ಟು ನಿಟ್ಟಿನಿಂದ ಪಾಲಿಸಲ್ಪಡುತ್ತಿದ್ದವೆ? ಹಾಗಾದರೆ ಮನುವಿನ ಮಾತುಗಳೆಲ್ಲಾ ಕಟ್ತುನಿಟ್ಟಿನಿಂದ ಆಚರಿಸಲ್ಪಡುತ್ತಿದ್ದವೆ?? ಶೂದ್ರರೆಂದರೆ ಕೇವಲ ದಲಿತರಲ್ಲ. ಒಕ್ಕಲುತನ ಮಾಡುವ ಒಕ್ಕಲಿಗನಿಂದ ಹಿಡಿದು ದಲಿತರವರೆಗೆ ಎಲ್ಲರೂ ಶೂದ್ರರೆ. ಕರ್ನಾಟಕದಲ್ಲಿ ರಾಜ್ಯವಾಳಿದ ಹೆಚ್ಚಿನ ಅರಸರೆಲ್ಲಾ ಶೂದ್ರರೇ ಆಗಿದ್ದರು. ಒಂದು ವೇಳೆ ಮನುವಿನ ಸ್ಮೃತಿಯಲ್ಲಿ ಹೇಳಿದಂತೆ ನಡೆಯುತ್ತಿದ್ದರೆ ಈ ಅರಸರೆಲ್ಲ ಹೇಗಿರುತ್ತಿದ್ದರು?? ಕೇವಲ ಮನು ಹೇಳಿದ ಮಾತ್ರಕ್ಕೆ ಅವನನ್ನು ದೂಷಿಸುವ ನೀವು ಅವನಂತೆಯೇ ಹೇಳಿದ ಪ್ರವಾದಿಯವರ ಬಗ್ಗೆ ಏಕೆ ಮಾತನಾಡುವದಿಲ್ಲ? ಔರಂಗಜೇಬನ ಬಗ್ಗೆ ಯಾಕೆ ತೆಗಳುವದಿಲ್ಲ?? ಇಲ್ಲಿ ಮನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನ್ಯಾಯ ಇಬ್ಬರಿಗೂ ಒಂದೇ ತೆರನಾಗಿರಬೇಕಲ್ಲವೆ?? ಒಂದು ವೇಳೆ ಪ್ರವಾದಿಗಳು ಹೇಳಿದ್ದು ಸರಿ ಎಂದು ನೀವು ಹೇಳಿದರೆ ಮನುವಿನ ಹೇಳಿಕೆಯನ್ನೂ ಒಪ್ಪಬೇಕು. ಮನುವಿನದು ತಪ್ಪಾದರೆ ಪ್ರವಾದಿಗಳದ್ದೂ ತಪ್ಪಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ???
            ಜಗತ್ತಿಗೆ ಗಣಿತವನ್ನು, ತತ್ವಜ್ಞಾನವನ್ನು, ಆಧ್ಯಾತ್ಮವನ್ನು, ಆಯುರ್ವೇದವನ್ನು, ವಿಜ್ಞಾನವನ್ನು, ಭಾಷೆಯನ್ನು, ಬರವಣಿಗೆಯನ್ನು, ವ್ಯಾಕರಣವನ್ನು , ಅಂಕಿಗಳನ್ನು, ಭೂಗರ್ಭ ಶಾಸ್ತ್ರ, ಖಗೋಳ ಶಾಸ್ತ್ರ, ಗ್ರಹನಕ್ಷತ್ರಗಳ ಚಲನೆ , ಸಾಗರಯಾನಶಾಸ್ತ್ರ, ಕಲೆ, ಸಂಗೀತ, ಸಾಹಿತ್ಯ ಮುಂತಾದ ಅನೇಕಾನೇಕ ಕಾಣಿಕೆ ನೀಡಿದ ಭಾರತ {{೭ನೇ ಶತಮಾನದಿಂದ ೧೭ ನೇ ಶತಮಾನದವರೆಗೆ ಒಂದಾದರೂ ಸಾಧನೆ ಮಾಡಿತಾ?? ಇಲ್ಲ!! ಯಾಕಿಲ್ಲ??}} ಮುಸಲ್ಮಾನ ದೊರೆಗಳ ಕ್ರೂರ ಆಡಳಿತವೇ ಕಾರಣ. ಭಕ್ತಿಯಾರ ಖಿಲ್ಜಿ ಹಾಳು ಮಾಡಿದ ವಿಶ್ವ ವಿದ್ಯಾಲಯಗಳೆಷ್ಟು?? ಸುಮಾರು ೨೫. ಮುಂದಿನ ಯಾವ ಮುಸಲ್ಮಾನ ಅರಸನೂ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲಿಲ್ಲ. ಕೆಲವರು ಹೇಳುವದುಂಟು: ಯುದ್ಡಮಾಡಲು ಬಂದವನು ಲೂಟಿ ಮಾಡುವದು ಸಹಜ . ದೇವಾಲಯಗಳು ಸಂಪತ್ತಿನ ಆಗರಗಳಾಗಿದ್ದವು. ಆದ್ದರಿಂದ ಅವುಗಳ ಮೇಲಿನ ದಾಳಿ ಸಹಜ ಎಂದು. ಆದರೆ ವಿಶ್ವವಿದ್ಯಾಲಯಗಳಲ್ಲಿ ಎಂಥ ಸಂಪತ್ತಿರುತ್ತಿತ್ತು?? ಗ್ರಂಥ ಭಾಂಡಾರಗಳಲ್ಲಿ ಯಾವ ಸಂಪತ್ತಿತ್ತು?? ಬ್ರಿಟಿಶ್‍ರಂತೆ ಆ ಗ್ರಂಥಗಳನ್ನು ತಮ್ಮ ದೇಶಕ್ಕೆ ಒಯ್ದು ಅಧ್ಯಯನ ಮಾಡಿ ಮನುಕುಲಕ್ಕೆ ಹಿತವಾದುದನ್ನು ಮಾಡಿದರಾ ಅದೂ ಇಲ್ಲ. ಸಾವಿರ ಸಾವಿರ ವರ್ಷಗಳ ಭಾರತೀಯರ ಸತತ ಪರಿಶ್ರಮದ ಫಲವಾದ ಅಪಾರ ಬೌದ್ಡಿಕ ಸಂಪತ್ತನ್ನು ಕೆಲವೇ ಕೆಲವು ತಾಸುಗಳಲ್ಲಿ ಉರಿದು ಬೂದಿ ಮಾಡಿದರು. ಇಷ್ಟಾದರೂ ಕಾಶಿಯಲ್ಲಿ ಪುನಃ ಸ್ಥಾಪಿಸಿದ ಸಂಸ್ಕೃತ ವಿಶ್ವ್ವವಿದ್ಯಾಲಯವನ್ನು ಔರಂಗಜೇಬ ಪುನಃ ಹಾಳು ಮಾಡಿದ. ತಾವುಗಳಾದರೂ ಆ ಬೌದ್ಡಿಕ ಸಂಪತ್ತನ್ನು ಉಪಯೋಗಿಸಿ ಕೊಂಡರೆ??? ಅದೂ ಇಲ್ಲ. ಜಗತ್ತು ಜ್ಞಾನ, ವಿಜ್ಞಾನ, ಸಾಗರಯಾನ ಶೊಧನೆ , ಮುಂತಾದ ಹತ್ತು ಹಲವು ಸಂಶೋಧನೆಯಲ್ಲಿ ತೊಡಗಿಕೊಂಡಾಗ ಭಾರತೀಯರೇನು ಮಾಡುತ್ತಿದ್ದರು ಗೊತ್ತಾ?? ತಮ್ಮ ಬೀಜ ಒಡೆಸಿಕೊಂಡು ತಮ್ಮ ಹೆಣ್ಣು ಮಕ್ಕಳನ್ನು ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆ ಮಾಡಿ ಮುಸ್ಲೀಂ ಸರದಾರರು ಹಂಚಿಕೊಳ್ಳುವದನ್ನು ಕಾಣುತ್ತಾ, ತಮ್ಮ ದೇವರ ಮೂರ್ತಿಯನ್ನು ಉಚ್ಚೆ ಹೇಲು ಮಾಡುವ ಸ್ಥಳದಲ್ಲಿ ಹೂತು ಹಾಕುವದನ್ನು ಕಾಣುತ್ತಾ, (ಮುಸ್ಲೀಂ ಇತಿಹಾಸಕಾರರೇ ಈ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ) ಜೆಸಿಯಾ ಕಂದಾಯ ಕೊಡುತ್ತಾ ಅಸ್ತಿತ್ವವನ್ನೇ ಕಳೆದುಕೊಂಡಿದ್ದರು.
            ಇವೆಲ್ಲವನ್ನು ಹೇಳಿದಾಗ ಈ ಬುದ್ದು ಜೀವಿಗಳು ಏನು ಹೇಳುತ್ತಾರೆ ಗೊತ್ತಾ?? ಬೌದ್ಡರನ್ನು ಭಾರತದಿಂದ ಓಡಿಸಿದ್ದು, ಅವರ ಸ್ತೂಪ ವಿಹಾರಗಳನ್ನು ಹಾಳು ಮಾಡಿದಂತೆ ಮುಸಲ್ಮಾನರೂ ಮಾಡಿದ್ದಾರೆ ಅದರಲ್ಲೇನು ತಪ್ಪು?? ಎನ್ನುತ್ತಾರೆ. ಆದರೆ ಬೌದ್ಧರನ್ನು ಭಾರತದಿಂದ ಓಡಿಸಿದ್ದು ಯಾರು ??
            ಅಂಬೇಡ್ಕರ್ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ. ” ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಂರ ಆಕ್ರಮಣಗಳೇ ಕಾರಣ. ‘ಬುತ್ ‘ ಎಂದರೆ ಅರೇಬಿಕ ಭಾಷೆಯಲ್ಲಿ ‘ಬುದ್ಡ’ ಇಸ್ಲಾಂ ಹೆಜ್ಜೆ ಇಟ್ಟಲ್ಲೆಲ್ಲ ಬೌದ್ಧ ಮತ ನಾಶವಾಯಿತು.ಮುಸ್ಲಿಂರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧ ಮತವೇ ಕಣ್ಣಿಗೆ ಕಾಣುತ್ತಿತ್ತು.ಬ್ಯಾಕ್ಟ್ರಿಯಾ , ಪಾರ್ಥಿಯಾ, ಅಪಘಾನಿಸ್ತಾನ ಗಾಂಧಾರ , ಚೈನಾದ್, ಟರ್ಕಿಸ್ತಾನ, ಅಷ್ತೇ ಅಲ್ಲ ಇಡೀ ಏಶ್ಯಾ ಖಂಡವೇ ಬೌದ್ಧಮತವಾಗಿತ್ತು. ಇಸ್ಲಾಂ ಕಾಲಿಡುವ ಮೊದಲು. ನಳಂದಾ ತಕ್ಷಶಿಲಾ ಇವುಗಳ ಮೇಲೆ ದಾಳಿ ಮಾಡಿ ಬೌದ್ಧರನ್ನು ಕೊಚ್ಚಿ ಹಾಕಿದರು. ತಲೆ ಬುರುಡೆ ಬೋಳಿಸಿದ ಬೌದ್ಧ ಸನ್ಯಾಸಿಗಳ ಅದೆಷ್ಟು ರಾಶಿ ಬಿದ್ದಿತ್ತೆಂದರೆ ಆ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳಲು ಒಬ್ಬನೇ ಒಬ್ಬ ಬೌದ್ಧ ಸನ್ಯಾಸಿ ಉಳಿದಿರಲಿಲ್ಲ. ಬೌದ್ಧ ಸನ್ಯಾಸಿಗಳ ಮೂಲೋತ್ಪಾಟನೆ ಆಗಿತ್ತು. ಭಾರತದಲ್ಲಿ ಬೌದ್ಧ ಮತ ಮೂಲೋತ್ಪಾಟನೆ ಆಗಲು ನಿಸ್ಸಂಶಯವಾಗಿ ಇಸ್ಲಾಂ ಕಾರಣ.”
            ಯಾರೋ ಮಾಡಿದ ತಪ್ಪಿಗೆ ಇವತ್ತಿನ ಜನ ಹೊಣೆಗಾರರಲ್ಲ. ಹಳೆ ಗಾಯವನ್ನು ಏಕೆ ಕೆದಕಬೇಕು?? ಎನ್ನುವದು ಕೆಲವರ ವಾದ . ಆದರೆ ಮನುವಿನ ವಿಷಯ ಬಂದಾಗ ಈ ಮಾತು ಇವರಿಗೆ ನೆನಪಿಗೆ ಬರುವದಿಲ್ಲ. ಇನ್ನು ಮಾನ್ಯ ಪಾಂಡೆ ಎನ್ನುವವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಸಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
            [[ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ.]]
            {{ ಮಾನ್ಯ ಭೈರಪ್ಪನವರು ಈ ಕುರಿತು ಒಂದು ಪ್ರಶ್ನೆಯನ್ನು ತಮ್ಮ ‘ಆವರಣ’ ಕಾದಂಬರಿಯ ಮುಖಾಂತರ ಕೇಳುತ್ತಾರೆ . ಏನೆಂದರೆ ಅಲ್ಲಿ ಶೀಲ ಹರಣವಾಗಿದ್ದರಿಂದ ದೇವಾಲಯ ನಾಶ ಸರಿ. ಆದರೆ ಅದೇ ಅಪವಿತ್ರಗೊಂಡ ಸ್ಥಳದಲ್ಲಿ ಜ್ಞಾನವ್ಯಾಪೀ ಮಸೀದೆಯನ್ನು ಅವೇ ಕಲ್ಲು ಇಟ್ಟಿಗೆ ಗೋಡೆ ಬೊದಿಗೆ ಉಪಯೋಗಿಸಿ ಕಟ್ಟಿದರಲ್ಲ?? ಮಸೀದೆ ನಿರ್ಮಾಣಕ್ಕೆ ಈ ಅಪವಿತ್ರತೆ ಅಡ್ಡ ಬರಲಿಲ್ಲವೆ?!! ಮಥುರಾದ ಹಾಗೂ ಉದಯಪುರ ಅರಮನೆಯ ಮುಂದಿನ ಗುಡಿ , ಉದಯ ಸಾಗರ ದಂಡೆಯ ಮೂರು ಮಂದಿರ, ಉದಯಪುರದ ಸುತ್ತಮುತ್ತ೧೭೨ ಮಂದಿರಗಳು ಚಿತ್ತೂರಿನಲ್ಲಿ೬೩ ಮಂದಿರಗಳು,ಅಂಬೇರಿನಲ್ಲಿ ೬೬ ಮಂದಿರಗಳನ್ನು ನೆಲ ಸಮ ಮಾಡಿದರಲ್ಲ ಇಲ್ಲೆಲ್ಲ ಯಾವ ಮೈಲಿಗೆ ಬೆನ್ನು ಹತ್ತಿತ್ತು??!! }}ಆದರೆ ಈ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಯಾವ ಬುದ್ಧಿಜೀವಿಯು ಹೋಗಿಲ್ಲ. ವಾದವು ತಮ್ಮಂತೆ ಇಲ್ಲ ಎಂದಾಗ ಕೆಸರೆರಚಾಟ ಇಲ್ಲವೇ ಪಲಾಯನವಾದ ಇವು ಬುದ್ಧಿಜೀವಿಗಳ ವರಸೆಗಳೇ ಆಗಿವೆ.

            ಉತ್ತರ
            • ವಿಜಯ್ ಪೈ
              ಮಾರ್ಚ್ 6 2014

              ನೀವು ಇಷ್ಟೆಲ್ಲ ಒಂದೇ ಸಲ ಬರೆದು, ಪ್ರಶ್ನೆ ಕೇಳಿ ಬಿಟ್ಟರೆ ಹೇಗೆ?? ಉಗುಳು ಇಳಿಯದ ಗಂಟಲಲ್ಲಿ ಕಡಬು ತುರುಕಿದಂತಾಯಿತು!!. ನಮ್ಮ ಗುರುಗಳ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು ನೀವು.:)

              ಉತ್ತರ
    • M.A.Sriranga
      ಮಾರ್ಚ್ 5 2014

      ಶೆಟ್ಕರ್ ಅವರೇ — ತಾವು ನೀಡಿದ ಕೊಂಡಿಯ ಲೇಖನವನ್ನು ಓದಿದ್ದಾಯ್ತು. ಇದನ್ನು ಮಾಡಿರುವುದು ”ಅಹಿಂದ” ಸರ್ಕಾರ. ಏಕೆ ಹೀಗೆ ಎಂದು ”ಲಡಾಯಿ”ಗೆ ಪ್ರತಿಕ್ರಿಯೆ ಕಾಲಂ ನಲ್ಲಿ comment ಮಾಡಿದರೆ ಅದನ್ನು publish ಮಾಡುವುದಿಲ್ಲ. ಏಕೆ? ನಿಮಗೂ ”ಅಲ್ಲಿ” ಇಂತಹ ”ಅನುಭವ” ಆಗಿರಬಹುದೆಂದು ನನ್ನ ಭಾವನೆ.

      ಉತ್ತರ
      • valavi
        ಮಾರ್ಚ್ 5 2014

        ಶೆಟ್ಕರ್ ಅವರ ಅನುಭವ ನಿಮ್ಮಂತಿರಲಿಕ್ಕಿಲ್ಲ. ಏಕೆಂದರೆ ಅವರೂ ಆ ಬ್ಲಾಗಿನ ವಿಚಾರಿಗಳೇ. ಆದರೆ ನನ್ನ ಅನುಭವವಂತೂ ನಿಮ್ಮದರಂತೆ ಇದೆ. ಅವಧಿಯಲ್ಲೂ ಹೀಗೆ ತಮಗೆ ಸರಿ ಕಾಣದ ಕಮೆಂಟನ್ನು ತಮ್ಮ ವಿಚಾರಗಳಿಗೆ ಹೊಂದದ ಕಮೆಂಟು ಪ್ರಕಟಿಸುವದೇ ಇಲ್ಲ. ನಾವು ಲೇಖಕರಿಗಾಗಲಿ ಅಥವಾ ಕಮೆಂಟಿಗರಿಗಾಗಲಿ ವೈಯುಕ್ತಿಕ ನಿಂದನೆ ಮಾಡಿದ್ದರೆ ಕೆಟ್ಟ ಭಾಷೆ ಬಳಸಿದ್ದರೆ ಖಂಡಿತ ಅಂಥ ಕಮೆಂಟುಗಳನ್ನು ತಡೆಹಿಡಿಯಲೇ ಬೇಕು. ಆದರೆ ವಿರೋಧವಿರುವ ವಿಚಾರಗಳ ಕಮೆಂಟನ್ನು ಏಕೆ ತಡೆಹಿಡಿಯುತ್ತಾರೆ?? ಇವರದೆಂಥ ಅಭಿವ್ಯಕ್ತಿ ಸ್ವಾತಂತ್ರ? ಮಾತೆತ್ತಿದರೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬೊಗಳೆ ಬಿಡುವವರೇ ಈ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದರೆ ಹೇಗೆ?????? ಇವರೆಂಥ ವಿಚಾರವಾದಿಗಳು? ಬುದ್ಧಿಜೀವಿಗಳು??

        ಉತ್ತರ
        • M.A.Sriranga
          ಮಾರ್ಚ್ 5 2014

          ಲಡಾಯಿಗಿಂತ ”ಗುಜರಿಅಂಗಡಿ” ವಾಸಿ. ಅಲ್ಲಿನ ಲೇಖನಗಳು ಒಮ್ಮುಖ ರೀತಿ-ನೀತಿಯವಾದರೂ commentsಗೆ censorship ಇಲ್ಲ. ಯುದ್ಧದ ಹೆಸರಿಟ್ಟುಕೊಂಡ ಬ್ಲಾಗಿನವರು commentsಗೆ ಹೆದರಿದರೆ ಇನ್ನು ”ಲಡಾಯಿ”ಯಾರ ಮೇಲೆ ಮಾಡುತ್ತಾರೋ?!!

          ಉತ್ತರ
          • ವಿಜಯ್ ಪೈ
            ಮಾರ್ಚ್ 6 2014

            ಹೌದು ಸರ್..ನೀವು ಹೇಳಿದ್ದು ಸರಿ. ಬಶೀರ ಗುಜರಿ ಅಂಗಡಿಯಲ್ಲಿ ಕನಿಷ್ಟ ಪಕ್ಷ ಪ್ರತಿಕ್ರಿಯೆಗಳು ಪ್ರಕಟವಾಗುತ್ತವೆ. ಓದುಗರಿಗೆ ವಿಷಯಾಧಾರಿತ ಪ್ರತಿಕ್ರಿಯೆಗೆ ಅವಕಾಶವಿದೆ. ಆ ಮಟ್ಟಿಗಾದರೂ ಗುಜರಿ ಅಂಗಡಿಯನ್ನು ಮೆಚ್ಚಬೇಕು.
            ಅಲ್ಲಿಯ ಈ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ನೋಡಿ.

            http://gujariangadi.blogspot.in/2013/04/blog-post_18.html

            ಉತ್ತರ
  1. naveennayak799
    ಮಾರ್ಚ್ 5 2014

    🙂 ಕೇಸರೀಕರಣ ಇಲ್ಯಾಕೆ ಬಂತು !!!!!!

    ಉತ್ತರ
    • ವಿಜಯ್ ಪೈ
      ಮಾರ್ಚ್ 6 2014

      ಏಕೆಂದರೆ ಬಣ್ಣಗುರುಡು ರೋಗದ ಕಾರಣ ಅವರಿಗೆ ಉಳಿದ ಬಣ್ಣಗಳು ಕಾಣುವುದಿಲ್ಲ! 🙂

      ಉತ್ತರ
  2. M.A.Sriranga
    ಮಾರ್ಚ್ 7 2014

    ವಾಳವಿ ಅವರಿಗೆ– ತಮ್ಮ ಅಧ್ಯಯನದ ವಿಸ್ತಾರಕ್ಕೆ ನನ್ನ ಅಭಿನಂದನೆ ಮತ್ತು ವಂದನೆಗಳು. ವಿಜಯ ಪೈ ಅವರಿಗೆ– ತಾವು ಸೂಚಿಸಿದ ಆ ಲೇಖನವನ್ನು ಓದಿದೆ. ಸುಮಾರು ೨೭ ಪ್ರತಿಕ್ರಿಯೆಗಳು ಬಂದಿವೆ. ನಿಜಕ್ಕೂ ಬಷೀರ್ ಅವರಿಗೊಂದು ಸಲಾಂ ಹೇಳಲೇಬೇಕು.

    ಉತ್ತರ
    • Nagshetty Shetkar
      ಮಾರ್ಚ್ 7 2014

      ಅಂತೂ ನಮೋ ಕಾಲ ಬುಡಕ್ಕೆ ಬಿದ್ದಿರಿ ನೀವೂ ಕೂಡ! ಛೆ!

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments