ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 15, 2014

37

ಧರ್ಮ ಅನಿವಾರ್ಯವೇ?

‍ನಿಲುಮೆ ಮೂಲಕ

– ಪ್ರಸನ್ನ ಬೆಂಗಳೂರು

ಧರ್ಮಅಯ್ಯೋ! ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಕಣ್ರೀ ಎಂದು ನಿರಾಶದಾಯಕ ಮಾತುಗಳನ್ನು ನಾವು ಕೇಳಿರುತ್ತೇವೆ.
ಅದಕ್ಕೆ ಕಾರಣವೇನು ಎಂಬುದನ್ನು ನಾವು ಎಂದಾದರೂ ಮನಗಾಣಲು ಪ್ರಯತ್ನಿಸಿದ್ದೇವೆಯೆ?

ಕಾನೂನು (ಧರ್ಮ) ಎನ್ನುವುದು ನಿರ್ಬಂಧ, (ಇಲ್ಲಿ ನಾನು ಧರ್ಮ ಎನ್ನುವುದನ್ನು ಕಾನೂನು ಎಂದೆ ಕರೆಯುತ್ತಿದ್ದೇನೆ ಕಾರಣ ಬಹುತೇಕರಿಗೆ ನಮ್ಮಲ್ಲಿ ಧರ್ಮವೆಂದಾಕ್ಷಣ ಒಂದು ತೆರನಾದ ಅಸಡ್ಡೆ ಅಥವ ಯಾವುದಕ್ಕೂ ಬೇಡದ ಅಥವ ನಾನು ಅದರಿಂದ ದೂರವಿದ್ದು ಎಲ್ಲ ಧರ್ಮೀಯರಿಗೂ ಒಳ್ಳೆಯವನು ಸಮಾನ ಎನಿಸಿಕೊಳ್ಳಬೇಕೆನ್ನುವ ಚಟವಿರುತ್ತದೆ ಹಾಗಾಗಿ ಧರ್ಮ ಎಂಬುದನ್ನು ಕಾನೂನೆಂದೆ ನಾನು ಸಂಬೋಧಿಸುತ್ತೇನೆ.ಅದು ಹೌದೂ ಕೂಡ) ಸಂಕೋಲೆ ಅದನ್ನು ಮುರಿಯುವುದು ಧಿಕ್ಕರಿಸುವುದು ಹದಿಹರೆಯದಲ್ಲಿ ಸಾಹಸದ ಕೆಲಸ ಎನಿಸಿಕೊಳ್ಳುತ್ತದೆ. ಅಂತಹ ಕಾರ್ಯವನ್ನು ಕೆಲವರು ಆಸ್ವಾದಿಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂಬ ನಿಯಮವಿಲ್ಲ. ಆದ್ದರಿಂದಲೇ ಇಲ್ಲಿ ಕಾನೂನು ಮುರಿಯುವುದು ತಪ್ಪಿನ ಕೆಲಸ ಎನಿಸಿಕೊಳ್ಳುವುದೇ ಇಲ್ಲ. ಎಲ್ಲವೂ ಸ್ವಯಂ ನಿಯಂತ್ರಣದ ನೈತಿಕತೆಯ ಮೇಲೆ ನಿಂತಿರುತ್ತದೆ. ಉದಾಹರಣೆಗೆ ರಾತ್ರಿ ಹನ್ನೆರಡು ಗಂಟೆಯಲ್ಲಿ ನಿರ್ಜನ ಪರಿಸ್ಥಿತಿಯಲ್ಲಿ ಹಸಿರು ದೀಪಕ್ಕಾಗಿ ಕಾಯುವುದಿಲ್ಲ. ಕಾರಣ ನನ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ನೈತಿಕತೆಯಷ್ಟೇ ಇಲ್ಲಿ ಕೆಲಸ ಮಾಡುತ್ತದೆ.

ಆಫ್ ಕೋರ್ಸ್ ಧರ್ಮದ ಅವಶ್ಯಕತೆ ಬರುವುದೇ ಇಬ್ಬರಿದ್ದಾಗ. ಇದರಲ್ಲಿ ದೇವರೇಕೆ ಬಂದ ಎನ್ನುವುದೆ ನನಗೆ ಆಶ್ಚರ್ಯದ ವಿಷಯವಾಗಿತ್ತು. ಹೇಗೆ ಬಂದ ಎನ್ನುವುದಕ್ಕೆ ನನ್ನ ಅನುಭವದ ಆಧಾರದಲ್ಲಿ ಒಂದೆರಡು ಮಾತು. ಧರ್ಮ ಪಾಲಿಸುವುದು ಸಮಾಜ ಸ್ವಸ್ಥವಾಗಿ ಮುನ್ನಡೆಯಲು, ಅದನ್ನು ಪಾಲಿಸದಿದ್ದರೆ? ಎಂಬ ಪ್ರಶ್ನೆ ಬಂದಾಗ ದೇವರನ್ನು ಎಳೆದು ತರಲಾಯಿತು. ಏಕೆಂದರೆ ಎಲ್ಲವನ್ನು ಎಲ್ಲಾ ದೇಶ ಕಾಲದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾನೂನು (ಧರ್ಮ) ಪಾಲಿಸುತ್ತಾರೊ ಎಂದು ಕಾಯುವುದು ಅಸಾಧ್ಯ ಕೆಲಸ ವಾಗಿದ್ದರಿಂದ ಸ್ವಯಂ ನಿಯಂತ್ರಣಗೊಳ್ಳದವರಿಗೆ ಕಾನೂನು ಪಾಲಿಸುವಂತೆ ಮಾಡಲು ಬೇಕಾದ ಒಂದು ಕಾವಲಿನ ಶಕ್ತಿ ಅಥವ ಪಾಲಿಸದಿದ್ದರೆ ನನ್ನನ್ನು ಒಬ್ಬರು ನೋಡುತ್ತಿದ್ದಾರೆ ಎಂಬ ನಿಯಂತ್ರಣ ಹೇರಲು ಸಾಧನವೊಂದು ಬೇಕಾಗಿತ್ತು. ಪಾಲಿಸದಿದ್ದರೆ ಏನಾಗುತ್ತದೆ ಎಂಬುದರ ಅರಿವಿತ್ತು, ಏಕೆಂದರೆ ಸಮಾಜವೆಂದರೆ ಒಂದು ಒಡಂಬಡಿಕೆ, ಒಂದು ಪರಸ್ಪರ ಕೊಡುಕೊಳ್ಳುವಿಕೆ, ಒಂದು ಒಪ್ಪಂದ. ಯಾರಿರದಿದ್ದರೂ ನೋಡದಿದ್ದರೂ ಪಾಲಿಸುತ್ತೇನೆ ಎನ್ನುವವ ಧರ್ಮ ಭೀರು. ಅಂದರೆ ಒಪ್ಪಿತ ಒಪ್ಪಂದಗಳನ್ನು ಮೀರದವ ಅವನಿಗೆ ಖಂಡಿತ ದೇವರ ಭಯವಿರಬೇಕಿಲ್ಲ.

ಈಗ ಕನಕದಾಸರ ಒಂದು ಪ್ರಸಂಗ ನೆನಪಿಸಿಕೊಳ್ಳಿ, ಗುರುಗಳು ಶಿಷ್ಯರೆಲ್ಲರಿಗೂ ಯಾರಿಗೂ ಕಾಣದಂತೆ ಹಣ್ಣು ತಿನ್ನುವಂತೆ ಹೇಳುತ್ತಾರೆ. ಕನಕರನ್ನು ಬಿಟ್ಟು ಬೇರೆಲ್ಲರೂ ಯಾರಿಗೂ ಕಾಣದಂತೆ ಹಣ್ಣು ತಿನ್ನುತ್ತಾರೆ. ಆದರೆ ದೇವರು ಎನ್ನುವನೊಬ್ಬ ನಮ್ಮನ್ನು ನೋಡುತ್ತಿದ್ದಾನೆ ಅವನಿಗೆ ಎಲ್ಲವೂ ಕಾಣಿಸುತ್ತದೆ ಎನ್ನುವ ನಂಬಿಕೆ ಮೂಡಿದ್ದ ಕನಕನಿಗೆ ಹಣ್ಣು ತಿನ್ನಲು ಅಂದರೆ ಕಾನೂನು ಮೀರಲು ಸಾಧ್ಯವಾಗಲಿಲ್ಲ. ಅದು ಸ್ವಯಂ ನಿಯಂತ್ರಣ ಅದನ್ನು ಮಾಡಬೇಕಿರುವುದು ದೇವರಿಗೆ ವಹಿಸಿದ ಕೆಲಸ 😉

ಹಾಗಾಗಿಯೇ ಇಲ್ಲಿ ಯಾವುದೇ ಕಟ್ಟುಪಾಡುಗಳು ಶಾಶ್ವತವಲ್ಲ, ಬದಲಾವಣೆಗೆ ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವ ಸಂಪೂರ್ಣ ಅವಕಾಶವಿರುತ್ತದೆ. ಇಂತಹ ಅವಕಾಶಗಳಿರುವುದು ಕಾನೂನು ಪಾಲನೆ ಮಾಡದಿದ್ದರೂ ಏನೂ ಆಗುವುದಿಲ್ಲವೆಂಬುದು ಮನುಶ್ಯನಿಗೆ ಅರಿವಾಗುತ್ತಾ ಹೋಯಿತು. ಅದು ಜಾಸ್ತಿಯಾದಂತೆ ದೇವರಿಗೂ ನಾನಾ ಶಕ್ತಿಗಳನ್ನು ಆವಾಹಿಸುತ್ತಾ ಇಂತಹವರನ್ನು ನಿಯಂತ್ರಿಸುವ ಕೆಲಸವಾಯಿತೇನೊ. ಇರಲಿ ಅದು ನನ್ನ ಚರ್ಚಿಸುವ ಪರಿಧಿಯಲ್ಲಿಲ್ಲ.

ನಮ್ಮ ಭಾರತೀಯ ( ಭಾರತೀಯ ಎಂದಾಕ್ಷಣ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಚಿತ್ರಣ ಬೇಡ) ಕಾನೂನಿನಲ್ಲಿ (ಧರ್ಮದಲ್ಲಿ) ಯಾವುದೂ ಪಾಲಿಸಲೇ ಬೇಕಿರಲಿಲ್ಲ. ಏಕೆಂದರೆ ಅದನ್ನು ಯಾರೂ ಹೀಗೆ ಎಂದು ಬರೆದಿಟ್ಟಿರಲಿಲ್ಲ. ಅದು ಒಬ್ಬರ ಅಭಿಪ್ರಾಯವೂ ಆಗಿರಲಿಲ್ಲ. ಒಂದೇ ಜಾಗವನ್ನು ಎರಡು ವಸ್ತುಗಳು ಪಡೆಯಲು ಸಾಧ್ಯವಿಲ್ಲ ಎಂದು ಭೌತಶಾಸ್ತ್ರ ಹೇಳುತ್ತದೆ ಅಂತೆಯೆ ಇಬ್ಬರಿಗೂ ತೊಂದರೆಯಾಗದಿದ್ದಾಗ ಅಥವ ಒಬ್ಬ ಹೊಂದಿಕೊಂಡು ಹೋಗುವ ಮನಸ್ಥಿತಿಯವನಾದಾಗ ಕಾನೂನಿನ (ಧರ್ಮದ) ಅವಶ್ಯಕತೆ ಬರುವುದಿಲ್ಲ, ಆದರೆ ಅದು ಆಗದಿದ್ದಾಗ ಕಾನೂನು (ಧರ್ಮ) ತನ್ನ ಕೆಲಸ ಮಾಡಬೇಕಾಗುತ್ತದೆ.

ಹಾಗಾಗಿಯೇ ಕಾನೂನನ್ನು (ಧರ್ಮವನ್ನು) ಕಟ್ಟು ನಿಟ್ಟಾಗಿ ಪಾಲಿಸ ಬೇಕಾದ ಅವಶ್ಯಕತೆ ಬರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗುತ್ತಾ ಹೋಯ್ತು. ಏಕೆಂದರೆ ಕಟ್ಟುಪಾಡುಗಳು ಕಾನೂನು (ಧರ್ಮ) ಎಂಬುದು ಯಾವಗಿದ್ದರೂ ಒಂದು ಅಡಚಣೆಯೆ. ಅಂದರೆ ಸ್ವಾಭಾವಿಕ ಪ್ರಾಣಿ ಸಹಜ ಗುಣಗಳನ್ನು ಹುದುಗಿಸಿ ಅಸಹಜ ಮೈತ್ರಿ ಮಾಡಿಸುವುದು ಕಾನೂನು (ಧರ್ಮ). ಅದು ನಮ್ಮ ಸ್ವಚ್ಚಂದತೆಯನ್ನು ನಿಯಂತ್ರಿಸುವುದರಿಂದ ಅದನ್ನು ಸತತವಾಗಿ ಮುರಿಯಲು ಮನಸ್ಸು ಹವಣಿಸುತ್ತಿರುತ್ತದೆ. (ಅದನ್ನು ಮಾಡದಂತೆ ತಡೆಯಲು ದೇವರು ಹುಟ್ಟಿದ ಅದು ನನ್ನ ಚರ್ಚೆಯ ವಿಷಯವಲ್ಲ).ಅಂತಹ ಕಠಿಣ ನಿರ್ಬಂಧಗಳು ನಮ್ಮ ಪೂರ್ವಜರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿಲ್ಲವಾದ್ದರಿಂದ ಸಹಜವಾಗಿ ನಮ್ಮಲ್ಲಿ ಯಾರಿಗೂ ಕಾನೂನಿಗೆ ಮರ್ಯಾದೆ ಕೊಡುವ ಅಥವ ಸಹಜವಾಗಿ ಪಾಲಿಸುವ ಗುಣವಿಲ್ಲ. ಹಾಗಾಗಿಯೇ ನಮ್ಮಲ್ಲಿ ಒಬ್ಬ ಕಾವಲುಗಾರ ಬೇಕಾಗುತ್ತಾನೆ. ಅದು CCTV ಆಗಿರಬಹುದು ಪೋಲಿಸನಾಗಿರಬಹುದು ಹಿರಿಯರಾಗಿರಬಹುದು. ಇಂತಹ ಒಂದು ಸಹಜ ನೈತಿಕತೆಯ ನಿಯಂತ್ರಣವಿದ್ದ ಭಾರತ ರಾಮರಾಜ್ಯವಾಗಿತ್ತು. ಆದರೀಗ ಎಲ್ಲ ಕಡೆಯಿಂದಲೂ ನಾವು ನಿಯಂತ್ರಣ ತಪ್ಪಿ ಮನಸೋ ಇಚ್ಚೆ ನಡೆದು ಕೊಳ್ಳುವುದರಿಂದ ನಮ್ಮ ಮಹಿಳೆ ಸುರಕ್ಷಿತಳಲ್ಲ, ನಮ್ಮ ಕಾನೂನುಗಳು ಪದೇ ಪದೇ ಉಲ್ಲಂಘಿಸಲ್ಪಡುತ್ತವೆ. ಪ್ರತಿಯೊಬ್ಬ ಪ್ರಜೆಗೂ ಒಬ್ಬ ಪೋಲೀಸನನ್ನು ನೇಮಿಸಿದರೂ ಪ್ರತಿಯೊಂದು ಕ್ರೌರ್ಯಕ್ಕೂ ಪ್ರತಿಯೊಬ್ಬ ಪ್ರಜೆಗೊಂದರಂತೆ ಕಾನೂನು (ಸಣ್ಣ ಉದಾಹರಣೆ: ವರದಕ್ಷಿಣೆ ವಿರೋಧಿ ಕಾನೂನಿನಂತೆ ದುರುಪಯೋಗ ಮಾತ್ರ ಆಗುತ್ತದೆ, ಮಹಿಳಾ ರಕ್ಷಣೆಯ ಕಾನೂನುಗಳು) ತಂದರೂ ಸ್ವಯಂ ನಿಯಂತ್ರಣವಿಲ್ಲದಿದ್ದರೆ ಅಂತಹ ಸ್ವರ್ಣಯುಗಕ್ಕೆ ಮರಳಲು ಸಾಧ್ಯವಿಲ್ಲ. ಮರಳಲು ನಮಗಾರಿಗೂ ಇಷ್ಟವೂ ಇಲ್ಲ ಬಿಡಿ. ಮರಳಿದರೆ ಬಹುತೇಕರು ಹೊಟ್ಟೆಪಾಡಿಗಾಗಿ ಭಿಕ್ಷೆ ಎತ್ತುವ ಪರಿಸ್ಥಿತಿ ಎದುರಾಗುತ್ತದೆ.

ಸೀತಾರಾಂ ತಮ್ಮ ಧಾರಾವಾಹಿಯೊಂದರಲ್ಲಿ ಬೆತ್ತಲಾಗಿ ಮಗುವೊಂದು ಮನೆಯಿಂದ ಹೊರಹೋಗುವುದನ್ನು ಸಾಂಕೇತಿಕವಾಗಿ ತೋರಿಸುತ್ತಾ ಮನುಶ್ಯನನ್ನು ಧರ್ಮದ ಕಟ್ಟಳೆಯಲ್ಲಿ ಕಲಿಸದೆ ಸ್ವತಂತ್ರವಾಗಿ ಬಿಡಬೇಕೆಂದು ಸೂಚ್ಯವಾಗಿ ಹೇಳುತ್ತಾರೆ, ಆದರೆ ಗಮನಿಸಿ ಕಾನೂನಿನ (ಧರ್ಮ) ಅರಿವು ಮೂಡಿಸದೆ ಮನುಶ್ಯನನ್ನು ಸಮಾಜಕ್ಕೆ ಬಿಟ್ಟರೆ ಎಂತಹ ಅನಾಹುತವಾಗುತ್ತದೆ ಊಹಿಸಿಕೊಳ್ಳಿ.ಮಾನವತಾವಾದಿಗಳೆಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವ ಎಡಚರುಗಳು ಧರ್ಮ ನಾಶವಾಗಬೇಕೆಂದು ಬಯಸುತ್ತಾರೆ, ಧರ್ಮ ನಾಶವಾದರೆ ಶಾಂತಿ ನಾಶವಾಗುವುದು ಖಚಿತ. ಸಮಾಜ ಛಿದ್ರವಾಗಿ ರಾಕ್ಷಸರ ಸಾಮ್ರಾಜ್ಯವಷ್ಟೇ ಉಳಿಯಲು ಸಾಧ್ಯ

37 ಟಿಪ್ಪಣಿಗಳು Post a comment
 1. Abdulkarim Shaikh
  ಮಾರ್ಚ್ 15 2014

  Prativabbru e namma jatyatit deshdalli tamma tamma dharmavannu chennagi aritu jivis beku .Hagene itar dharmagalnnu gouravis beku.Eduve shresta Dharma.!!!

  ಉತ್ತರ
 2. ಪ್ರಸನ್ನ
  ಮಾರ್ಚ್ 15 2014

  ತಮ್ಮ ತಮ್ಮ ಧರ್ಮವೆಂದರೆ ಯಾವುದು? ಅಬ್ದುಲ್ ಕರೀಂ. ಧರ್ಮ ಎಂದರೆ ಒಂದೇ ಇರಲು ಸಾಧ್ಯ.

  ಉತ್ತರ
  • Abdulkarim Shaikh
   ಮಾರ್ಚ್ 15 2014

   Dear prasanna, Nau e jagattinalli onde Dharma nodlu innu kanista 1400 varshgalu bekagbahudu anta nanna kalpane.!!!.

   ಉತ್ತರ
 3. ಮಾರ್ಚ್ 15 2014

  Dharma is nothing but way of living.
  ಎಡ ಪಂತೀಯರು ದೇವರು ಎನ್ನುವ ಕಲ್ಪನೆ ತೆಗೆಯುವ ಆತುರದಲ್ಲಿ, ಧರ್ಮ ವನ್ನೇ ಹಾಳು ಮಾಡುತ್ತಿದ್ದಾರೆ.
  ಯಾವಾಗ ಮನುಷ್ಯ ಸತ್ಪ್ರಜೆ ಆಗುತ್ತಾನೋ, ಅವನು ಧರ್ಮ ಪರಿಪಾಲಕನು ಆಗಿರುತ್ತಾನೆ.

  ಉತ್ತರ
  • ಗಿರೀಶ್
   ಮಾರ್ಚ್ 15 2014

   ಬಾಲಚಂದ್ರ, ಇಡೀ ಲೇಖನದ ಆಶಯವನ್ನು ಒಂದು ಸಾಲಿನಲ್ಲಿ ಹೇಳಿದ್ದೀರಿ.

   ಉತ್ತರ
 4. ವಿಜಯ್ ಪೈ
  ಮಾರ್ಚ್ 16 2014

  ಧರ್ಮ ಎಂಬುದು ಸರಿಯಾದ ದಿಕ್ಕಿನಲ್ಲಿ ಸಾಗಲು ಮಾರ್ಗಸೂಚಿ, ನಮ್ಮ ಸರಿ-ತಪ್ಪುಗಳನ್ನು ಅಳೆದುಕೊಳ್ಳಲು ಒಂದು ನೈತಿಕ ಮಾನದಂಡ ಎಂಬುದು ಒಪ್ಪುವಂತದ್ದು.

  [ಮಾನವತಾವಾದಿಗಳೆಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವ ಎಡಚರುಗಳು ಧರ್ಮ ನಾಶವಾಗಬೇಕೆಂದು ಬಯಸುತ್ತಾರೆ, ಧರ್ಮ ನಾಶವಾದರೆ ಶಾಂತಿ ನಾಶವಾಗುವುದು ಖಚಿತ. ಸಮಾಜ ಛಿದ್ರವಾಗಿ ರಾಕ್ಷಸರ ಸಾಮ್ರಾಜ್ಯವಷ್ಟೇ ಉಳಿಯಲು ಸಾಧ್ಯ]
  ಈ ಎಡ ಗೆದ್ದಲು ಹುಳುಗಳಿಗೆ ಬಡತನ ಮತ್ತು ಧರ್ಮ ಎಂಬುದು ಗಂಜಿ ಸಂಪಾದನೆಯ ಮಾರ್ಗ. ಇವರು ಭಾರತವನ್ನು ಗ್ರಹಿಸುವುದೇ, ಈ ದೇಶದ ತಲೆ-ಬುಡ ಗೊತ್ತಿಲ್ಲದ ವಿಧೇಶಿ ಮಹಾನುಭಾವರು ಕೊಟ್ಟ ಕನ್ನಡಕದಿಂದ…ತಲೆಯಲ್ಲಿ ತುಂಬಿದ ಲದ್ದಿಯಿಂದ.
  ಇವರ ಧರ್ಮ ಉಳಿಸುವ ಕ್ಯಾಂಪೇನ್ ನೋಡಬೇಕೆ? ಇಲ್ಲಿವೆ ಉದಾಹರಣೆಗಳು ನೋಡಿ:
  http://communalism.blogspot.in/2014/03/save-hinduism-from-hindutva-series.html

  ಇನ್ನು ನಮ್ಮ ಕರ್ನಾಟಕದಲ್ಲೊಂದು ಸೌಹಾದ್ರ ವೇದಿಕೆಯಿದೆ. ಡಾವಣಗೇರೆಯಲ್ಲಿ ಸಡೆದ ಬೆತ್ತಲೆ ಸೇವೆಯನ್ನು ಹಿಂದೂ ಧರ್ಮಕ್ಕೆ ತಗುಲಿ ಹಾಕುವ ಇವರ ಚಾಣಾಕ್ಷತೆ ನೋಡಿ!.
  [ಮನುಷ್ಯರ ಘನತೆಗೆ ಧಕ್ಕೆ ತರುವ ಆಚರಣೆಯನ್ನು ಪ್ರ ೋತ್ಸಹಿಸುವ ಧರ್ಮ ಬೇಕೇ?!]..ಇದು ಈ ಮಹಾಮಹಿಮರು ಕೊಟ್ಟ ತಲೆಬರೆಹ.

  ಉತ್ತರ
  • ಮಾರ್ಕ್ಸ್ ಮಂಜು
   ಮಾರ್ಚ್ 17 2014

   ಧರ್ಮ ಧರ್ಮ ಎಂದುಕೊಂಡು ಬೇಳೆ ಬೇಯಿಸಿಕೊಳ್ಳುವ ನಿಮ್ಮಂತ ಸನಾತನ ವೈದಿಕರ ಬುಡಕ್ಕೆ ನಾವುಗಳು ಗೆದ್ದಲು ಹುಳಗಳು ಮಿ.ವಿಜಯ್ ಪೈ.ಗೆದ್ದಲು ಹುಳಗಳು ಕಾಯಕಜೀವಿಗಳು ಅವು ಮೈ ಮುರಿದು ದುಡಿಯುತ್ತವೆ ಜನರನ್ನು ಮರಳು ಮಾಡುವುದಿಲ್ಲ

   ಉತ್ತರ
   • ವಿಜಯ್ ಪೈ
    ಮಾರ್ಚ್ 17 2014

    ಸ್ವಾಮಿ..ಒಪ್ಪಿದೆ..ಈ ದೇಶವನ್ನು ಮರಳುಗಾಡು ಮಾಡಬೇಕು, ಆಗಲೇ ಮಾರ್ಕ್ಸ/ಎಂಗೆಲ್ಸ್/ಲೇನಿನ್/ಮಾವೊ ಆತ್ಮಕ್ಕೆ ಶಾಂತಿ ಸಿಗುವುದು ಎಂದು ಭಾವಿಸಿ ನೀವುಗಳು ಸುರು ಹಚ್ಚಿಕೊಂಡಿರುವ ನಿರಂತರ ‘ಕಾಯಕ’ಯೋಗದ ಮುಂದೆ, ನಮ್ಮವರ ಮರುಳು ಮಾಡುವಿಕೆ ಕ್ಷುಲ್ಲಕ!. ನಿಮ್ಮವರ ಧರ್ಮ ಉಳಿಸುವಿಕೆಯ ಕಾರ್ಯಾಚರಣೆಯ ಉದಾಹರಣೆಯನ್ನು ಈಗಾಗಲೇ ಕೊಟ್ಟಿದ್ದೇನೆ.

    ಅಂದ ಹಾಗೆ ಮಂಜಣ್ಣ..ತುಂಬ ದಿನ ನೀವು ಕಾಣಲೇ ಇಲ್ಲ. ನಾನೇಲ್ಲೊ ಚುನಾವಣೆ ಬಂತು..’ಕಾಯಕ’ಯೋಗ ಇನ್ನು ಭರ್ಜರಿಯಾಗಿರಬೇಕು ಅಂದುಕೊಂಡೆ. ಮೊನ್ನೆ ಒಂದು ಬ್ಲಾಗಿನಲ್ಲಿ ನಿಮ್ಮ ರಕ್ತಸಂಬಂಧಿಗಳು ಹೊರಡಿಸಿದ ಒಂದು ಮನವಿಪತ್ರ ನೋಡಿದೆ.. “ಕರ್ನಾಟಕ ಜಾತ್ಯತೀತ ಒಕ್ಕೂಟ ೨೦೧೪ ” ಒಕ್ಕೂಟವಂತೆ, ಆ ಮನವಿಪತ್ರದಲ್ಲಿಯ ಒಂದೆರಡು ಪ್ಯಾರ.
    [[
    ಲೋಕಸಭಾ ಚುನಾವಣೆ ನಿರ್ಧಾರವಾಗಿದೆ. ಯು.ಪಿ.ಎ-ಏನ್.ಡಿ.ಎ-ಮೂರನೆ ರಂಗ ಜನರ ಮುಂದೆ ಬರಲಿವೆ. ಈ ರಂಗಗಳ ಹೊರತಾಗಿಯೂ ಆಮ್ ಆದ್ಮಿ ಪಾರ್ಟಿ ಇತ್ಯಾದಿ ಪಕ್ಷಗಳು ಜನರ ಬಳಿ ಬರಲಿವೆ. ಯಾರೆಲ್ಲಾ ಬಂದರೂ ನಾವು ಗೊಂದಲಕ್ಕೆ ಒಳಗಾಗಬೇಕಿಲ್ಲ, ನಮ್ಮ ಆಯ್ಕೆ ಸ್ಪಷ್ಟವಾಗಿರಲಿ, ನೇರವಾಗಿರಲಿ ಮತ್ತು ಖಚಿತವಾಗಿರಲಿ. ಏನ್.ಡಿ.ಎ. ಯಾವ ಕಾರಣಕ್ಕೂ ನಮ್ಮ ಆಯ್ಕೆಯಾಗಕೂಡದು. ಅತ್ಯಂತ ಭ್ರಷ್ಟ-ಕೋಮುವಾದಿ-ಜಾತಿವಾದಿ-ಜನವಿರೋಧಿ ಬಣ ಇದು. ಇದರೊಂದಿಗೆ ಯಾರು ಸೇರಿದರೂ ಅವರು ಚುನಾವಣೆಯಲ್ಲಿ ತಿರಸ್ಕಾರಕ್ಕೆ ಅರ್ಹರು.
    ಯು.ಪಿ.ಎ ಕಳೆದ ಹತ್ತು ವರ್ಷ ಕೆಂದ್ರ ಸರ್ಕಾರ ನಡೆಸಿದೆ. ಇದರ ಆಡಳಿತದಲ್ಲಿ ನೂರಾರು ಲೋಪಗಳಿವೆ; ಭ್ರಷ್ಟಾಚಾರಕ್ಕೆ ಇದು ಕುಮ್ಮಕ್ಕು ನೀಡಿರುವುದೂ ಹೌದು, ಮೃದು ಕೋಮುವಾದಿ, ಮೃದು ಜಾತಿವಾದಿ ಹಾಗೂ ಸ್ವಲ್ಪ ಮಟ್ಟಿಗೆ ಜನವಿರೋಧಿಯೂ ಹೌದು.
    ಮೂರನೇ ರಂಗದ ಪ್ರತಿನಿಧಿಗಳು ಕರ್ನಾಟಕದಲ್ಲಿ ಜೆ.ಡಿ.ಎಸ್. ಮತ್ತು ಎಡ ಪಕ್ಷಗಳು. ಈ ರಂಗವನ್ನು ತಿರಸ್ಕರಿಸಲು ಕಡಿಮೆ ಕಾರಣಗಳಿವೆ. ಆದರೆ, ಲೋಕಸಭಾ ಮಟ್ಟದಲ್ಲಿ ನೋಡಿದರೆ ಕರ್ನಾಟಕದಲ್ಲಿ ಆಯ್ಕೆಯು ಮುಖ್ಯವಾಗಿ ಏನ್.ಡಿ.ಎ. (ಬಿಜೆಪಿ ಬಣ) ಮತ್ತು ಯು.ಪಿ.ಎ. (ಕಾಂಗ್ರೆಸ್ ಬಣ) ಗಳ ನಡುವೆ ನಡೆಯಬೇಕಿದೆ.
    ]]

    ಏನೇ ಇರಲಿ..ನಿಮ್ಮವರ ಈ ‘ಕಾಯಕ’ ಯೋಗ ಖುಷಿ ಕೊಟ್ಟಿತು. ಮುಖವಾಡ ಹಾಕಿಕೊಂಡು.ಗಂಜಿಯ ಜೊತೆ ನೆಂಜಿಕೊಳ್ಳಲು ಉಪ್ಪಿನ ಕಾಯಿಯ ವ್ಯವಸ್ಥೆ ಮಾಡಿಕೊಳ್ಳುವ ಜಾಣ್ಮೆಯೂ ಮೆಚ್ಚ ತಕ್ಕದ್ದು!.:)

    ಉತ್ತರ
    • Nagshetty Shetkar
     ಮಾರ್ಚ್ 17 2014

     “ಗಂಜಿಯ ಜೊತೆ ನೆಂಜಿಕೊಳ್ಳಲು ಉಪ್ಪಿನ ಕಾಯಿಯ ವ್ಯವಸ್ಥೆ”

     ಮಿ. ವಿಜಯ್, ನೀವು ಗಂಜಿಯನ್ನು ಕುಡಿಯುವುದಿಲ್ಲವೇ? ಛೆ! ಎಂತಹ ಪ್ರಶ್ನೆ ಕೇಳಿದೆ! ನೀವು ವೈದಿಕರು ಕುಡಿಯುವುದು ಶೋಷಿತರ ನೆತ್ತರನ್ನು ಅಲ್ಲವೇ!

     ಉತ್ತರ
     • ವಿಜಯ್ ಪೈ
      ಮಾರ್ಚ್ 17 2014

      [ಮಿ. ವಿಜಯ್, ನೀವು ಗಂಜಿಯನ್ನು ಕುಡಿಯುವುದಿಲ್ಲವೇ? ಛೆ! ಎಂತಹ ಪ್ರಶ್ನೆ ಕೇಳಿದೆ!]
      ಸಮಾಜದ ಬಿರುಕನ್ನು ಕಂದರ ಮಾಡಿ, ಅದರಿಂದ ಸಿಗುವ ನಿರಂತರ ಬಿಟ್ಟಿ ಗಂಜಿಯನ್ನೇ?? ಇಲ್ಲ ಕುಡಿಯವುದಿಲ್ಲ!

      [ನೀವು ವೈದಿಕರು ಕುಡಿಯುವುದು ಶೋಷಿತರ ನೆತ್ತರನ್ನು ಅಲ್ಲವೇ!]
      ಪಾಪ..ಇದೇ ಹಳೆ ಕ್ಯಾಸೆಟ್ ನ್ನು, ಅದೂ ಎರವಲು ಕ್ಯಾಸೆಟ್ ನ್ನು ಹಾಕಿ ಹಾಕಿ ಸುಸ್ತಾಗಲಿಲ್ಲ ಎಂಬುದೇ ಸಂತೋಷದ ವಿಷಯ!. ಶೋಷಿತರ ಹೆಸರಿನಲ್ಲಿ ಎಡಬಿಡಂಗಿಗಳು ನಡೆಸುವ ‘ಸೋಸು’ವಿಕೆ ನಿಲ್ಲುವ ಕಾಲ ಬಂದಿದೆ 🙂

      ಉತ್ತರ
      • Nagshetty Shetkar
       ಮಾರ್ಚ್ 17 2014

       ಹಾಡು ಹಳೆಯದಾದರೂ ಭಾವ ನವನವೀನ.

       ಉತ್ತರ
       • ವಿಜಯ್ ಪೈ
        ಮಾರ್ಚ್ 17 2014

        ನವ ನವೀನ ಭಾವಗಳನ್ನು ತುರುಕಿ ಗಂಜಿ ಸಂಪಾದಿಸಿಕೊಳ್ಳುವ ಕೆಲಸವನ್ನು ಎಡಬಿಡಂಗಿಗಳು ಯಶಸ್ವಿಯಾಗಿ ಮಾಡುತ್ತಿದ್ದಾರೆ!..ಒಪ್ಪಿಕೊಳ್ಳುವಂತದ್ದೆ!.:)

        ಉತ್ತರ
        • Nagshetty Shetkar
         ಮಾರ್ಚ್ 18 2014

         ಗಂಜಿ ಸಂಪಾದಿಸುವುದು ಕಾಯಕ ತತ್ವ. ನೆತ್ತರು ಹೀರುವುದು ಶೋಷಕ ತತ್ವ.

         ಉತ್ತರ
         • ಮಾರ್ಕ್ಸ್ ಮಂಜು
          ಮಾರ್ಚ್ 18 2014
          • ವಿಜಯ್ ಪೈ
           ಮಾರ್ಚ್ 18 2014

           ಹೌದು..ಬೆಂಕಿ ಹಚ್ಚಿಯಾದರೂ ಬಿಟ್ಟಿ ಗಂಜಿ ಸಂಪಾದಿಸುವುದು ನಿಮ್ಮ ‘ಕಾಯಕ’ ತತ್ವ ಎಂಬುದು ಒಪ್ಪುವಂತದ್ದೆ!. ಬಸವಣ್ಣನ ಕೈಗೆ ಸಿಕ್ಕಿದ್ದರೆ ಎಡಗೈಯಿಂದ ಕಪಾಳಕ್ಕೆ ನಾಲ್ಕು ಬಾರಿಸುತ್ತಿದ್ದರು ಈ ಸ್ವಯಂಘೋಷಿತ, ಸರಕಾರಿ ಗಂಜಿಕೇಂದ್ರದಲ್ಲಿರುವ ಎಡಬಿಡಂಗಿ ‘ಕಾಯಕ’ ಯೋಗಿಗಳಿಗೆ!.

           @ಮಾರ್ಕ್ಸ್ ಮಂಜಣ್ಣ..
           ಓತಿಕ್ಯಾತಕ್ಕೆ ಬೇಲಿಗೂಟ ಸಾಕ್ಷಿ!,,ಸರಿಯಾಗಿದೆ.

         • Naani
          ಮಾರ್ಚ್ 18 2014

          ನೆತ್ತರು ಹೀರಿದ ಶೋಷಕರ ಗುಮ್ಮ ತೋರಿಸಿ ಸುಳ್ಳುಗಳ ತುತ್ತೂರಿ ಊದಿ ಗಂಜಿ ಸಂಪಾದಿಸುವುದನ್ನು ‘ಕಾಯಕ’ವೆಂದರೆ ಆ ಶಬ್ದಕ್ಕೇ ಅಪಚಾರ.

          ಉತ್ತರ
          • Nagshetty Shetkar
           ಮಾರ್ಚ್ 18 2014

           ಗುಮ್ಮ? ಹೀಗೆ ನಿಮ್ಮ ಹಾಗೆ ಸತ್ಯದ ಎದೆಯೇ ಮೇಲೆ ಹೊಡೆದು ಸುಳ್ಳಿನ ಚಕ್ರಾಧಿಪತ್ಯ ಸ್ಥಾಪಿಸುವುದು ವೈದಿಕರ ಜಾತಧರ್ಮ.

          • Naani
           ಮಾರ್ಚ್ 18 2014

           ಸತ್ಯದ ಎದೆಮೇಲೆ ಸುಳ್ಳಿನ ಚಕ್ರಾಧಿಪತ್ಯ ಕಟ್ಟುತ್ತಿರೋದು ಯಾರು ಎಂದು ವಚನ ಮತ್ತು ಮಾರ್ಕ್ಸ್ ನ ಕುರಿತ ನಿಮ್ಮ ಮತ್ತು ನಿಮ್ಮ ಗುರುವಿನ ಬುರುಡೆಗಳನ್ನು ಓದಿರುವ ಎಲ್ಲರೂ ಬಲ್ಲರು!!! ಅದನ್ನೇಕೆ ಸುಮ್ಮನೆ ಯಾವುದೋ “ವೈದಿಕರ ಜಾತ ಧರ್ಮ” ವೆಂದು ತಮ್ಮ ಮೂಲವನ್ನು ಅಲ್ಲಿ ಗಂಟು ಹಾಕಿಕೊಳ್ಳುವ ವ್ಯಾಧಿಗೆ ಬಿದ್ದಿದ್ದೀರಿ. ತುಟಿಬಿಚ್ಚಿದರೆ ಬರೀ ಸುಳ್ಳುಗಳನ್ನೆ ಪೋಣಿಸಿ ಶರಣ ಕಾಯಕ ಎಂದು ತೇಪೆ ಹಚ್ಚೋದು ಇಲ್ಲಿ ಎಲ್ಲಾ ಕಂಡಿದ್ದಾರೆ.

         • ಗಿರೀಶ್
          ಮಾರ್ಚ್ 18 2014

          ಬಡವನ ತಟ್ಟೆಯಲ್ಲಿರುವ ಗಂಜಿ ಕಸಿದು ಕುಡಿದು, ವೈದಿಕರ ಬಾಯಿಗೆ ಒರೆಸುವ ಕಾಯಕ ಯೋಗಿಗಳ ಸಮಾಜಸೇವೆ. 😀

          ಉತ್ತರ
  • Nagshetty Shetkar
   ಮಾರ್ಚ್ 17 2014

   ರಕ್ತ ಪೀಪಾಸುರ ಸೊಳ್ಳೆಗಳಿಗಿಂತ ಗೆದ್ದಲುಗಳು ಎಷ್ಟೋ ವಾಸಿ. ಸಹಸ್ರಾರು ವರ್ಷಗಳಿಂದ ಶೋಷಿತರ ರಕ್ತ ಹೀರುತ್ತಲೇ ಬಂದಿರುವ ವೈದಿಕ ಸೊಳ್ಳೆಗಳು ಭಾರತೀಯ ಸಮಾಜಕ್ಕೆ ಮಲೇರಿಯ ಡೆಂಗುಗಳಿಗಿಂತ ಅಪಾಯಕಾರಿ. ಡಿ ಡಿ ಟಿ ಆದರೂ ಹೊಡೆದು ಈ ರಕ್ತ ಪೀಪಾಸುರ ಸೊಳ್ಳೆಗಳ ನಿರ್ಮೂಲನ ಮಾಡಿ ಸಮಾಜದ ಸ್ವಾಸ್ಥ್ಯ ಕಾಪದಬೇಕಾಗಿದೆ.

   ಉತ್ತರ
   • ಮಾರ್ಕ್ಸ್ ಮಂಜು
    ಮಾರ್ಚ್ 18 2014

    Mr.Nagshetty Shetkar ಸೂಕ್ಷ್ಮವಾಗಿ ಗ್ರಹಿಸಿದಾಗ ಡಿ.ಡಿ.ಟಿ ಮತ್ತು ಎಂಡೋ ಸಲ್ಪಾನ್ ಗಳು ಬಂಡವಾಳಶಾಹಿ ಸಾಮ್ರಾಜ್ಯಗಳು ಅಭಿವೃದ್ಧಿಶೀಲ ದೇಶಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಹುನ್ನಾರದ ಭಾಗಗಳೇ ಆಗಿವೆ.ಆದುದರಿಂದ ನಾವುಗಳು ತಮಾಶೆಗೂ ಇಂತ ಪದಗಳನ್ನು ಬಳಸದಿರುವ ಜಾಗ್ರತೆಯಲ್ಲಿರಬೇಕಾಗುತ್ತದೆ

    ಉತ್ತರ
    • Naani
     ಮಾರ್ಚ್ 18 2014

     ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ …….ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ………….ಹ್ಹ ವಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ …………..ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ …………………….. ತಡೆಯಾಕ್ಕಾಗ್ತಿಲ್ಲಪ್ಪಾ…….

     ಉತ್ತರ
     • ಮಾರ್ಕ್ಸ್ ಮಂಜು
      ಮಾರ್ಚ್ 18 2014

      Mr.Naani ಇದರಲ್ಲಿ ನಗುವಂತದ್ದೇನಿದೆ ಅನ್ನುವುದು ತಿಳಿಯುತ್ತಿಲ್ಲ.ಬಡವರ ಅಳುವಿನಲ್ಲಿ ನಗುವುದು ಬಂಡವಾಳಶಾಹಿಯ ಕ್ರೌರ್ಯದ ಪ್ರತೀಕ.ಫ್ಯೂಡಲ್ ಸಿಸ್ಟಂನಿಂದ ಪ್ರೇರಿತರಾದವರಿಗಷ್ಟೇ ಹೀಗೆ ಬದುಕಲು ಸಾಧ್ಯ

      ಉತ್ತರ
      • Nagshetty Shetkar
       ಮಾರ್ಚ್ 18 2014
      • Naani
       ಮಾರ್ಚ್ 20 2014

       ಹೌದಾ!!!!??? “ಫ್ಯೂಡಲ್ ಸಿಸ್ಟಂ’ ಅಂದ್ರೆ ಏನು ಅಂತ ಒಸಿ ಹೇಳಿ ಸ್ವಾಮಿ, ನನ್ನ ‘ಪ್ರೇರಣೆ’ ಏನೂಂತ ಸ್ವಲ್ಪ ನಾನು ಅರ್ಥಮಾಡಿಕೊಳ್ಳಕ್ಕೆ ಟ್ರೈ ಮಾಡ್ತೀನಿ. ಆಮೇಲೆ ಈ ಶೆಟ್ಕರ್ ನ +1 ಗೆ ವಿಚಾರಿಸಿಕೊಳ್ಳುವಾ….

       ಉತ್ತರ
       • ಮಾರ್ಕ್ಸ್ ಮಂಜು
        ಮಾರ್ಚ್ 20 2014

        Mr.Naani

        Indian feudalism refers to the feudal society that made up India’s social structure until independence in 1947.

        ಉತ್ತರ
        • Naani
         ಮಾರ್ಚ್ 21 2014

         ಹೌದಾ!! ಅರೆರೆ ಮಿಸ್ ಮಾಡ್ಕೊಂಡೆ ಸಾರಿ 1947ಕ್ಕಿಂತ ಮುಂಚೆ ನಾನು ಹುಟ್ಟಿರಲಿಲ್ಲ. ಹಾಗಾಗಿ ಅದು ಹೇಗಿತ್ತು ಗೊತ್ತಿಲ್ಲ.!!!!! ರೀ ಮಂಜಣ್ಣನವರೇ, ಈ ತರದ ಥಿಲ್ಲಾನಗಳನ್ನು ಬಹಳಷ್ಟು ಕೇಳಿಯಾಗಿದೆ. ನಾನು ಕೇಳಿದ್ದು ಫೂಡಲ್ ಸಿಸ್ಟಂ ಯಾವಾಗ ಇತ್ತು ಅಂತಲ್ಲ. ಫ್ಯೂಡಲ್ ಸಿಸ್ಟಂ ಅಂದ್ರೆ ಏನು? ಅಂತ. ಅದು ಏನೂ ಅಂತ ಹೇಳಿ ನಂತರ ಅದು ಯಾವಾಗ ಇತ್ತು ಎನ್ನುವುದರ ಬಗ್ಗೆ ಮಾತಾಡುವ!!!

         ಉತ್ತರ
         • ಮಾರ್ಕ್ಸ್ ಮಂಜು
          ಮಾರ್ಚ್ 22 2014

          Mr.Naani, don’t be so innocent.! I hope you were born by November 2013. Please read this story. I quote ” Feudalism is not just alive but flourishing in India, its economic and social progress nowithstanding. And proof of this, if any were needed, came in the form of a horrific incident that has left people shell-shocked. – See more at: http://www.hindustantimes.com/comment/feudalism-is-flourishing-in-india/article1-1148091.aspx#sthash.F7bhP0Ur.dpuf

          ಉತ್ತರ
          • Naani
           ಮಾರ್ಚ್ 22 2014

           ಓಹೋ ಪೋಲೀಸರು ತಮ್ಮ ಮನೆ ಹೆಣ್ಣುಮಕ್ಕಳನ್ನು ಒಡೆಯೋದು ಫ್ಯೂಡಲ್ ಸಿಸ್ಟಮ್ಮೂ!!!! (ನನಗೆ ಇಂಗ್ಲೀಸು ಸರಿಯಾಗಿ ಬರಾಕ್ಕುಲ್ಲ ತಪ್ಪಾಗಿದ್ರೆ ಕ್ಸಮಿಸಿ ಬುಡಿ). ಏಕೆ ಸಿವಾ ಅದನ್ನು ಫ್ಯೂಡಲ್ ಸಿಸ್ಟಮ್ಮು ಅಂತ ಕರೀಬೇಕು?… ಒಸಿ ಸರಿಯಾಗಿ ಕನ್ನಡೆಲ್ಲಿ ವಿವರಿಸಿ ಗುರವೇ….

          • ಮಾರ್ಕ್ಸ್ ಮಂಜು
           ಏಪ್ರಿಲ್ 1 2014

           Mr.Naani ,this is what Mr.Shripad Bhat says in Vartamana about ‘Feudalism’.ಮಿ.ಶ್ರೀಪಾದ ಭಟ್ಟರು ವರ್ತಮಾನ ಕಾಲದ ಸಾಕ್ಷಿಪ್ರಜ್ನೆಯಲ್ಲೊಬ್ಬರು

           “ಒಂದು ಕಾಲದ ಮಾತಾಗಿದ್ದ ಫ್ಯೂಡಲ್ ಹಿಂಸಾಚಾರ ಅತ್ಯಂತ ತ್ವರಿತಗತಿಯಲ್ಲಿ ಮರಳಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಬಿಹಾರದಂತಹ ರಾಜ್ಯದಲ್ಲಿ ಪ್ಯೂಡಲ್ ಪಡೆ ರಣವೀರ ಸೇನಾ ಮತ್ತೆ ತಲೆಯತ್ತಲಿದೆ. 27 ಮಾರ್ಚ 2014ರ ಹಿಂದೂ ಪತ್ರಿಕೆಯಲ್ಲಿ “ಬಿಹಾರದ ಬಟಾನಿ ತೋಲಾದಲ್ಲಿ ರಣವೀರ ಸೇನ ಪಡೆ ದಲಿತ ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು, ಹಿಂದುಳಿದ ಮುಸ್ಲಿಂರನ್ನು ಕೊಚ್ಚಿ ಹಾಕಿ ಹತ್ಯೆ ಮಾಡಿತ್ತು. ತೊಂಭತ್ತರ ದಶಕದಲ್ಲಿ ರಣವೀರ ಸೇನಾ ಪಡೆ ಬಿಜೆಪಿಯ ಎಲೆಕ್ಷನ್ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿ ಬಿಜೆಪಿಗೆ ಮತ ಹಾಕಲು ಆದೇಶಿಸಿತು. 2012ರಲ್ಲಿ ಹತ್ಯೆಗೊಂಡ ಈ ರಣವೇರ ಸೇನೆಯ ಮುಖ್ಯಸ್ಥ ಭ್ರಹ್ಮೇಶ್ವರ ಸಿಂಗ್ ತಾನು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕಾನಾಗಿದ್ದೆ ಎಂದು ಒಪ್ಪಿಕೊಂಡಿದ್ದ. ಆತ ಮೋದಿ ಪ್ರಧಾನಿ ಆಗುವ ಆಸೆ ಕಂಡಿದ್ದ. ಬಿಹಾರಿನ ಬಿಜೆಪಿ ನಾಯಕ ಗಿರಿರಾಜ ಸಿಂಗ್ ಈ ಭ್ರಹ್ಮೇಂದ್ರ ಸಿಂಗ್ ಅವರನ್ನು ಬಿಹಾರದ ಗಾಂಧಿ ಎಂದು ಕರೆದಿದ್ದ. ರಣವೀರ ಸೇನೆ ಪಡೆಯ ಪಠ್ಯಗಳು ಹೆಚ್ಚೂ ಕಡಿಮೆ ಆರೆಸ್ಸೆಸ್ ಸಿದ್ಧಾಂತಗಳು. ಗೋಹತ್ಯೆ ನಿಷೇಧ, 370 ಕಲಮನ್ನು ರದ್ದುಗೊಳಿಸುವುದು, ಸ್ಯೂಡೋ ಸೆಕ್ಯುಲರ್ ಗಳ ಹುಟ್ಟಡಗಿಸುವುದು ಇವುಗಳಲ್ಲಿ ಮುಖ್ಯವಾದವು” ಎಂದು ವರದಿಯಾಗಿದೆ.

          • Naani
           ಏಪ್ರಿಲ್ 2 2014

           ರೀ ಬರೀ ಕಿವಿಗೆ ಹೂ ಸುತ್ತೋ ಕೆಲ್ಸಾನೇ ಮಾಡ್ತಿದ್ದೀರಪ್ಪಾ!!! ಫ್ಯೂಡಲ್ ಹಿಂಸಾಚಾರ, ಫ್ಯೂಡಲ್ ಪಡೆ ಅನ್ನೋ ಪದಗಳು ಮತ್ತು ಹೆಂಗಸ್ರು, ಮಕ್ಳು, ಮುಸಲ್ಮಾನರನ್ನು ಹೊಡೆದ್ರು ಬಡಿದ್ರು ಅಂತ ಕತೆ ಹೋಡೀತೀದಿರಪ್ಪ (ಅದೂ ಸ್ವಂತದ್ದಲ್ಲ ಯಾರೋ ಹೇಳಿದ್ದರ ಕಾಪಿ ಪೇಸ್ಟ್) ಫ್ಯೂಡಲ್ ಸಿಸ್ಟಂ ಒಳಗೆ ಏನು ಮಾಡುತ್ತಾರೆ ಅಂತಲ್ಲ ನನ್ನ ಪ್ರಶ್ನೆ; ಫ್ಯೂಡಲ್ ಸಿಸ್ಟಂ ಅಂದರೇನೂ? ಅಂತ!!!! ನಂತರ “ಭಟ್ರು’ಗಳು, ‘ಥಾಪರ್’ಗಳು,, ‘ಶರ್ಮಾ’ಗಳು, ‘ಹಬೀಬ್’ಗಳು ಹೇಳಿದ ಕಥೆಗಳೆಲ್ಲಾ ಆ ಸಿಸ್ಟಂನದಾ ಇಲ್ಲಾ ಬೇರೆ ಇನ್ನೇನಾದರೂ ನಾ ಅಂತ ಮಾತಾಡುವಾ… ಮೊದಲು ಪ್ರಶ್ನೆಗೆ ಮಾತ್ರ ಉತ್ತರ ಕೊಡಿ, ಕಥೆ ಆಮೇಲೆ ಹೊಡಿವಿರಂತೆ, ಬರ್ಲಾ…..

 5. ಮಾರ್ಚ್ 17 2014

  ಧರ್ಮ ಎನ್ನುವ ಪದವನ್ನು ಭಾರತದ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು.
  ಇಲ್ಲಿಯವರೆಗೆ ಪಾಶ್ಚಾತ್ಯರ “Religion” ಎನ್ನುವ ಪದದ ಮೂಲಕ ಅರ್ಥ ಮಾಡಿಕೊಂಡು ಎಡವಟ್ಟಾಗಿದೆ.
  Religionಗೂ ಧರ್ಮಕ್ಕೂ ಏನೇನೂ ಸಂಬಂಧವಿಲ್ಲ.
  ಎಲ್ಲಿಯವರೆಗೆ ಈ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಮತ್ತು ಎಲ್ಲಿಯವರೆಗೆ ಪಾಶ್ಚಾತ್ಯರ ನೆರಳಿನಿಂದ ಹೊರಬಂದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲವೋ, ಅಲ್ಲಿಯವರೆಗೆ ನಮಗೆ ‘ಭಾರತ’ ಅರ್ಥವಾಗುವುದಿಲ್ಲ!

  ಉತ್ತರ
 6. ವಿಜಯ್ ಪೈ
  ಮಾರ್ಚ್ 17 2014

  ನಮ್ಮ ಗಂಜಿ ಗಿರಾಕಿಗಳಿಗೆ ಹಿಂದುಯಿಸ್ಮ ಬಗ್ಗೆ ಒಮ್ಮಿಂದೊಮ್ಮೆಗೆ ಅಕ್ಕರೆ ಸುರುವಾಗಿಬಿಟ್ಟಿದೆ!!. ನೋಡಿ…ಇನ್ನೊಂದಿಷ್ಟು ಕಾರ್ಡುಗಳು 🙂

  http://communalism.blogspot.in/2014/03/save-hinduism-from-hindutva-series_16.html

  ಉತ್ತರ
 7. naveennayak799
  ಮಾರ್ಚ್ 18 2014

  ಮಾರ್ಕ್ಸ್ ಮಂಜು ಅವರಿಗೆ.
  ಎಷ್ಟು ಲೋಡ್ ಮರಳು ಬೇಕೆಂದು ಹೇಳಿದರೆ ಜಾತಿ ಜಾತಿ ಎನ್ನುವ ಜಾತ್ಯತೀತರ ತಲೆ ಮೇಲೆ ಸುರಿಯಲು ಸಹಕಾರವಾದೀತು. 🙂

  ಉತ್ತರ
  • ಮಾರ್ಕ್ಸ್ ಮಂಜು
   ಮಾರ್ಚ್ 18 2014

   What ಮರಳು Mr.naveennayak799 (like Gems Bond 007) ?

   ನಿಮ್ಮ ಫೋಟೋ ನೋಡಿದಾಗ ನೀವಿನ್ನು ಯುವಕರೆನ್ನುವುದು ತಿಳಿದುಬರುತ್ತದೆ.ನೀವು ಇಂತ ವಯಸ್ಸಿನಲ್ಲಿ ಜಾತಿವ್ಯವಸ್ಥೆಯಂತ ಕರಾಳ ಮನುವಾದಿ ಶಾಸನದ ವಿರುದ್ಧ ನಿಲ್ಲಬೇಕು.ಅಂತದ್ದರಲ್ಲಿ ಇದೇನಿದು. Wake up Dear Young Man

   ಉತ್ತರ
   • naveennayak799
    ಮಾರ್ಚ್ 19 2014

    ನೀವೇ ಮೇಲೆ ಹೇಳಿದ್ದೀರಲ್ಲ ! ಮರಳು ಮರಳು ಅಂತ 🙂
    ಜಾತಿ ವ್ಯವಸ್ತೆಯನ್ನು ಎಲ್ಲಿ ಏನು ಮಾಡಬೇಕೆಂದು ತಿಳಿದಿದೆ, ಮಾಡುತಿದ್ದೇನೆ ಕೂಡ. ಆದರೆ ಜಾತಿಯನ್ನು ನನ್ನ ಗಂಜಿ ಸಂಪಾದನೆಗೆ ಖಂಡಿತವಾಗಿಯೂ ಬಳಸುತ್ತಿಲ್ಲ. ಮೊದಲೇ ಯುವಕ ನೋಡಿ ! ಸ್ವಾಭಿಮಾನದ ಕಿಚ್ಚು ಬೇರೆ .ಅದಲ್ಲದೇ ಇನ್ನೊಬ್ಬರ ನೋವನ್ನು ನನ್ನ ಅವಕಾಶವನ್ನಾಗಿ ಮಾರ್ಪಡಿಸುವುದು ನನ್ನಿಂದಾಗದು.

    Mr.naveennayak799 (like Gems Bond 007) ? 🙂
    ಮಾರ್ಕ್ಸ್ ಮಂಜು = ? ನಾನೇನಾದರೂ ಸೇರಿಸಲೇ !

    ಉತ್ತರ
  • valavi
   ಮಾರ್ಚ್ 18 2014

   naveen nayikare nimma maatu satya.

   ಉತ್ತರ

ನಿಮ್ಮದೊಂದು ಉತ್ತರ ಮಾರ್ಕ್ಸ್ ಮಂಜು ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments