ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 18, 2014

12

ಜಾತ್ಯಾತೀತರೆನಿಸಿಕೊಳ್ಳಲು ಮುಸಲ್ಮಾನರ ಟೋಪಿ ಧರಿಸಲೇಬೇಕೆ?

‍ನಿಲುಮೆ ಮೂಲಕ

– ನರೇಂದ್ರ ಕುಮಾರ್

Secular Nandan Nilekaniಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದನ್ ನೀಲೇಕಣಿಯವರು ಸ್ಪರ್ಧಿಸುತ್ತಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಣೆಯಾದ ಕೂಡಲೇ ಮುಸಲ್ಮಾನರ ಟೋಪಿ ಧರಿಸಿ ತಾವು ಕೂಡಾ “ಜಾತ್ಯಾತೀತ”ರೆಂದು ಲೋಕಕ್ಕೆಲ್ಲಾ ಸಾರಿದರು. ಈ ರೀತಿ ಮುಸಲ್ಮಾನ ಟೋಪಿ ಧರಿಸಿ “ಜಾತ್ಯಾತೀತ”ರಾಗುವುದು ಕಾಂಗ್ರೆಸ್ ಪರಂಪರೆಯೇ ಆದಂತಿದೆ. ಅದಕ್ಕಿಂತಲೂ ಮಿಗಿಲಾಗಿ, ಮುಸಲ್ಮಾನ ಟೋಪಿ ಧರಿಸದಿದ್ದವರನ್ನು “ಕೋಮುವಾದಿ” ಎಂದು ಖಂಡಿಸಲಾಗುತ್ತದೆ. ಒಂದೆರಡು ವರ್ಷದ ಹಿಂದೆ ಗುಜರಾತಿನಲ್ಲಿ ನಡೆದ ಸದ್ಭಾವನಾ ಸಭೆಯೊಂದರಲ್ಲಿ ನರೇಂದ್ರ ಮೋದಿಯವರಿಗೆ ಮುಸಲ್ಮಾನರೊಬ್ಬರು ಟೋಪಿ ನೀಡಿದರು. ಮೋದಿಯವರು ಆ ಟೋಪಿಯನ್ನು ಧರಿಸಲಿಲ್ಲ. ಆ ಕೂಡಲೇ ಅವರನ್ನು “ಕೋಮುವಾದಿ” ಎಂದು ಖಂಡಿಸಲಾಯಿತು.

ಇದು ಯಾವ ಸೀಮೆ ಜಾತ್ಯಾತೀತತೆ? ಒಂದು ಕೋಮಿನ ಟೋಪಿ ಧರಿಸಿದರೆ ಜಾತ್ಯಾತೀತ, ಧರಿಸದಿದ್ದರೆ ಕೋಮುವಾದಿ!? ಈ ದೇಶದಲ್ಲಿ ಬೇರೆ ಕೋಮುಗಳೇ ಇಲ್ಲವೆ? ಅವುಗಳಲ್ಲಿ ಅನೇಕ ಕೋಮುಗಳೂ ಅಲ್ಪಸಂಖ್ಯಾತವಲ್ಲವೇ? ಆ ಕೋಮುಗಳ ಲಾಂಚನವನ್ನೋ, ಟೋಪಿಯನ್ನೋ ಈ ರಾಜಕಾರಣಿಗಳು ಏಕೆ ಧರಿಸಿ ಪತ್ರಿಕೆಗಳಲ್ಲಿ ಚಿತ್ರ ಹಾಕಿಸಿಕೊಳ್ಳುವುದಿಲ್ಲ? ಮುಸಲ್ಮಾನ ಟೋಪಿ ಧರಿಸದಿದ್ದವರು ಕೋಮುವಾದಿಯಾಗುವುದಾದರೆ, ಆ ಉಳಿದ ಅಲ್ಪಸಂಖ್ಯಾತ ಕೋಮುಗಳ ಟೋಪಿ ಧರಿಸದಿದ್ದವರೂ ಕೋಮುವಾದಿ ಆಗಬೇಕಲ್ಲವೇ? ಮುಸಲ್ಮಾನರಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿರುವವರು ಜೈನರು. ಯಾವ ರಾಜಕಾರಣಿಯೂ ಜೈನರ ದಿರಿಸು ಧರಿಸಿ ತನ್ನ “ಜಾತ್ಯಾತೀತತೆ”ಯನ್ನು ಮೆರೆದದ್ದು ನನಗೆ ತಿಳಿದಿಲ್ಲ. ಅಥವಾ ಪಾರ್ಸಿ ಲಾಂಚನ ಧರಿಸಿಯೋ, ಇಲ್ಲವೇ ಬೌದ್ಧರ ದಿರಿಸು ಧರಿಸಿಯೋ, ಕ್ರೈಸ್ತರಂತೆ ವೇಷ ಹಾಕಿದ್ದೋ ಎಲ್ಲೂ ನೋಡಿಲ್ಲ.

ಜಾತ್ಯಾತೀತರೆನಿಸಿಕೊಳ್ಳಲು ಪ್ರತಿಯೊಂದು ಕೋಮಿನ ಜೊತೆಯೂ ಗುರುತಿಸಿಕೊಳ್ಳಬೇಕೆನ್ನುವುದು ಮಾನದಂಡವಾದರೆ, ಈ ದೇಶದಲ್ಲಿ ಯಾರೂ ಜಾತ್ಯಾತೀತರಾಗಲು ಸಾಧ್ಯವಿಲ್ಲ. ಈ ದೇಶದಲ್ಲಿ ಸಹಸ್ರಾರು ಜಾತಿಗಳಿವೆ ಮತ್ತು ಆ ಪ್ರತಿಯೊಂದು ಜಾತಿಗೂ ತನ್ನದೇ ಆದ ಲಾಂಚನವೋ, ಟೋಪಿಯೋ ಅಥವಾ ಪೂಜಾಪದ್ಧತಿಯೋ ಇರುತ್ತದೆ. ಜಾತ್ಯಾತೀತನೆನಿಸಿಕೊಳ್ಳಬೇಕಾದವನು ಈ ಎಲ್ಲಾ ಜಾತಿಗಳ ಲಾಂಚನವನ್ನೂ ಧರಿಸಬೇಕಲ್ಲವೇ? ಆದರೆ, ಯಾವ ರಾಜಕಾರಣಿಯೂ ಇದೆಲ್ಲ ಮಾಡಿದ್ದು ನಾವು ಕಾಣುವುದಿಲ್ಲ. ಕೇವಲ ಮುಸಲ್ಮಾನರ ಟೋಪಿ ಧರಿಸಿದವರು “ಜಾತ್ಯಾತೀತ”ರೆನಿಸಿಕೊಂಡು ಬಿಡುತ್ತಾರೆ! ಇದು ವಿಚಿತ್ರವಲ್ಲವೇ? ಇದೇ ಮಾನದಂಡವನ್ನು ಅನುಸರಿಸಿದರೆ ಮಹಾತ್ಮಾ ಗಾಂಧಿಯವರೂ ಜಾತ್ಯಾತೀತರಾಗಲು ಸಾಧ್ಯವಿಲ್ಲ. ಏಕೆಂದರೆ, ಅವರೆಂದೂ ಮುಸಲ್ಮಾನ ಟೋಪಿ ಧರಿಸಲೇ ಇಲ್ಲ!!

ತನ್ನತನವನ್ನು ಉಳಿಸಿಕೊಂಡೇ ಮಹಾತ್ಮಾ ಗಾಂಧಿಯವರು ಜಾತ್ಯಾತೀತರೆನಿಸಿಕೊಳ್ಳಲಿಲ್ಲವೇ? ಅವರು ಇಂಗ್ಲೆಂಡಿಗೆ ಹೋದರೂ ತಮ್ಮ ಉಡುಪನ್ನು ಬದಲಾಯಿಸಿಕೊಳ್ಳಲಿಲ್ಲ. ಬ್ರಿಟಿಷರ ಜೊತೆ ನಡೆಸಿದ ಸಂವಾದಗಳಲ್ಲೂ ಅವರು ಸ್ವದೇಶೀ ಉಡುಪನ್ನೇ ಧರಿಸಿರುತ್ತಿದ್ದರು. ಮುಸಲ್ಮಾನರ ಮಸೀದಿಗೆ ಹೋದರೂ ಅವರು ಮುಸಲ್ಮಾನ ಟೋಪಿ ಧರಿಸಲಿಲ್ಲ. ಆ ಕಾರಣಕ್ಕೆ ಅವರನ್ನು ಕೋಮುವಾದಿ ಎಂದು ಯಾರೂ ಕರೆಯಲಿಲ್ಲ.

ಇಂದು ನಮ್ಮ ಮುಂದಿರುವ ಕಾಂಗ್ರೆಸ್ ಪಕ್ಷಕ್ಕೆ “ಜಾತ್ಯಾತೀತ” ಎನ್ನುವ ಪದ ಚುನಾವಣೆಗಳಲ್ಲಿ ಮುಸಲ್ಮಾನರ ಮತ ಪಡೆಯುವ ಸಾಧನವಾಗಿದೆಯಷ್ಟೇ. ಉಳಿದವರನ್ನೆಲ್ಲಾ ಕೋಮುವಾದಿಗಳೆಂದು ಕರೆದು, ತಾನು ಮಾತ್ರ ಮುಸಲ್ಮಾನರ ಬಂಧು ಎಂದು ಕರೆಸಿಕೊಂಡು, ಅವರ ಮತಗಳನ್ನೆಲ್ಲಾ ಬಾಚಿಕೊಳ್ಳುವ ಹುನ್ನಾರ ಕಾಂಗ್ರೆಸ್ಸಿನದು. “ಜಾತ್ಯಾತೀತ ಗುಂಪಿನ” ಉಳಿದ ಪಕ್ಷಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. “ಜಾತ್ಯಾತೀತ”ರೆನಿಸಿಕೊಳ್ಳಲು ಅವುಗಳಲ್ಲಿ ಪೈಪೋಟಿಯೇ ಏರ್ಪಟ್ಟಿದೆ. ಬಿಹಾರವು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದಾಗ, ಗುಜರಾತ್ ಸರಕಾರ ಆರ್ಥಿಕ ಸಹಾಯ ನೀಡಿತ್ತು. ಆದರೆ, ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಏಕೆಂದರೆ, ನರೇಂದ್ರ ಮೋದಿಯವರ ಕೈಯ್ಯಲ್ಲಿ ಸಹಾಯ ತೆಗೆದುಕೊಂಡು ಬಿಟ್ಟರೆ ತನ್ನನ್ನು ಮುಸಲ್ಮಾನರು “ಕೋಮುವಾದಿ” ಎಂದು ತಿಳಿದುಬಿಡುತ್ತಾರೆ ಮತ್ತು ಅವರ ಮತಗಳು ತನಗೆ ಸಿಗುವುದಿಲ್ಲ ಎನ್ನುವ ಭಯ!

ಮುಸಲ್ಮಾನರ ಓಲೈಕೆಗೆ ಮತ್ತೊಂದು ಹೆಸರು “ಜಾತ್ಯಾತೀತ”. ಈ ಓಲೈಕೆಯ ಮೊದಲ ಹೆಜ್ಜೆ ಎಂದರೆ ಮುಸಲ್ಮಾನರ ಟೋಪಿ ಧರಿಸುವುದು. ಒಬ್ಬ ವ್ಯಕ್ತಿ ಕಾಂಗ್ರೆಸ್ಸಿಗನಾಗಬೇಕೆಂದರೆ, ಆತನಿಗೆ ಕಾಂಗ್ರೆಸ್ಸಿನಲ್ಲಿ ಸ್ಥಾನ ಸಿಗಬೇಕೆಂದರೆ, ಆತ ತನ್ನ ಜಾತ್ಯಾತೀತತೆಯನ್ನು ಸಾಬೀತುಪಡಿಸಲೇಬೇಕು. ಆ ಪರಂಪರೆಯ ಅಂಗವಾಗಿಯೇ ನಂದನ್ ನೀಲೇಕಣಿಯವರು ಕಾಂಗ್ರೆಸ್ಸಿನ ಚುನಾವಣಾ ಆಭ್ಯರ್ಥಿಯಾದ ಕೂಡಲೇ ಮುಸಲ್ಮಾನ ಟೋಪಿ ಧರಿಸಿರುವುದು!

12 ಟಿಪ್ಪಣಿಗಳು Post a comment
 1. naveennayak799
  ಮಾರ್ಚ್ 18 2014
 2. M.A.Sriranga
  ಮಾರ್ಚ್ 18 2014

  ಒಂದು ಜಾತಿಯ “ಟೋಪಿ” ಯನ್ನು ತಲೆಯ ಮೇಲೆ ಹಾಕಿಕೊಂಡಾಕ್ಷಣ ಅವರು ಜಾತ್ಯಾತೀತರಾಗುತ್ತಾರೆಂದರೆ ಅದಕ್ಕಿಂತ ದೊಡ್ಡ ಜೋಕ್ ಮತ್ತೊಂದಿರಲಾರದು! ಅಸಲಿಗೆ ಜಾತಿಗಳಿಂದ ಅತೀತರಾಗುವುದು(=ದೂರವಿರುವುದು) ಜಾತ್ಯಾತೀತರ ಲಕ್ಷಣವಲ್ಲವೇ ಎಂದು ಕೇಳಿದ ಕೂಡಲೇ ನಾವು “ಕೋಮುವಾದಿ”ಗಳಾಗಿಬಿಡುತ್ತೇವೆ! ಇದು ಮತ್ತೊಂದು ವಿಪರ್ಯಾಸ. ಟೋಪಿ=ವೋಟು ಎಂಬುದು ತುಂಬಾ ಹಳೆಯ ಸಮೀಕರಣ. ಅದನ್ನು ‘ನಿಜವಾದ ‘ ಜಾತ್ಯಾತೀತರು ಅರ್ಥ ಮಾಡಿಕೊಳ್ಳಬೇಕಾಗಿದೆ.

  ಉತ್ತರ
 3. Nagshetty Shetkar
  ಮಾರ್ಚ್ 18 2014

  ನಂದನ್ ಅವರು ಗಾಂಧೀ ಟೊಪ್ಪಿ ಧರಿಸಿದ್ದರೆ ನೀವು ಇಷ್ಟೆಲ್ಲಾ ಗಲಾಟೆ ಮಾಡುತ್ತಿದ್ದರಾ?

  ಉತ್ತರ
  • Naani
   ಮಾರ್ಚ್ 18 2014

   ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡವರು ಮಾತ್ರ ಈ ಶೆಟ್ಕರ್ ತರ ತಲೆಬುಡವಿಲ್ಲದ ಪ್ರಶ್ನೆಕೇಳಲು ಸಾಧ್ಯ!!!! ಇನ್ನೂ ಈತನ ಹೆಸರಿನಲ್ಲಿ ಆಗಾಗ ಓರ್ವ ಮುಸಲ ಬರೀತಾ ಇರೋದು ಅನ್ನೋದನ್ನು ತಿಳ್ಕೊಳಕ್ಕೆ ಪುರಾವೆ ಬೇಕಾ!!!

   ಉತ್ತರ
   • Naani
    ಮಾರ್ಚ್ 18 2014

    ಆ ಮುಸಲನಿಗೆ ತನ್ನ ಸ್ವಜಾತಿ ಪ್ರೇಮ ಮತ್ತು ಅನ್ಯ ಧರ್ಮೀಯರ ಮೇಲಿನ ನಂಜನ್ನು ಕಾರಲು ಶರಣನೆಂಬ ಮುಖವಾಡ ಬೇರೆ. ಲಿಂಗಾಯುತರು ಶೀಘ್ರ ಈತನ ನಿಜಮುಖವನ್ನು ಅರಿತು ತಮ್ಮ ಶರಣರನ್ನು ಉಳಿಸಿಕೊಳ್ಳದಿದ್ದರೆ ಈತ ಅವರನ್ನೆಲ್ಲಾ ಪೂರ್ಣ ಹೈಜಾಕ್ ಮಾಡ್ಕೊಂಡು ಮಸೀದಿಗೆ ಎಳಕೊಂಡೋಗೋದು ಗ್ಯಾರಂಟಿ.

    ಉತ್ತರ
    • Nagshetty Shetkar
     ಮಾರ್ಚ್ 22 2014

     Who are you vaidikshahi to bother about lingayats? We know who the exploiter in this country is and who Darga sir is fighting against. You manuvadis can no longer brainwash lingayats to believe that Muslims are our enemy. Lingayats, Dalits, and Muslims are brothers who suffered the same fate under vaidikshahi.

     ಉತ್ತರ
   • Nagshetty Shetkar
    ಮಾರ್ಚ್ 21 2014


    Naani
    Mar 18 2014
    ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡವರು ಮಾತ್ರ ಈ ಶೆಟ್ಕರ್ ತರ ತಲೆಬುಡವಿಲ್ಲದ ಪ್ರಶ್ನೆಕೇಳಲು ಸಾಧ್ಯ!!!! ”

    You appear like to be one of the sniper attackers in avadhi debate. Call me mad dog and kill me?

    ಉತ್ತರ
  • ಮಾರ್ಚ್ 18 2014

   [[ನಂದನ್ ಅವರು ಗಾಂಧೀ ಟೊಪ್ಪಿ ಧರಿಸಿದ್ದರೆ ನೀವು ಇಷ್ಟೆಲ್ಲಾ ಗಲಾಟೆ ಮಾಡುತ್ತಿದ್ದರಾ?]]
   ಗಾಂಧೀ ಟೊಪ್ಪಿಗೂ ಮುಸಲ್ಮಾನರ ಟೊಪ್ಪಿಗೂ ಏನು ಸಂಬಂಧ!?
   ಗಾಂಧಿ ಟೊಪ್ಪಿಯೂ ಒಂದು ಜಾತಿಗೆ ಸೇರಿದ್ದಾ?
   ಕಾಂಗ್ರೆಸ್ ಸೇರಿದವರು ಗಾಂಧಿ ಟೊಪ್ಪಿ ಹಾಕುವುದು ಸರಿ. ಆದರೆ, ಮುಸಲ್ಮಾನರ ಟೊಪ್ಪಿ ಏಕೆ?
   ಹಾಗಿದ್ದರೆ, ಕಾಂಗ್ರೆಸ್ಸಿಗೆ ಸೇರಿದ ಮಹಿಳೆಯರೆಲ್ಲಾ ಬುರಕಾ ಹಾಕಲೇಬೇಕಾ? ಇಲ್ಲದಿದ್ದರೆ ಅವರೆಲ್ಲಾ ‘ಕೋಮುವಾದಿ’ಗಳಾಗುವರಲ್ಲವೇ!?

   ಒಂದು ಕುತೂಹಲದ ಪ್ರಶ್ನೆ?
   ಕಾಂಗ್ರೆಸ್ಸಿನ ಟೊಪ್ಪಿಗೆ ‘ಗಾಂಧಿ ಟೊಪ್ಪಿ’ ಎಂದು ಏಕೆ ಹೇಳುತ್ತಾರೆ?
   ಮಹಾತ್ಮಾ ಗಾಂಧಿಯವರು ಆ ಟೋಪಿ ಧರಿಸಿದ ಒಂದು ಚಿತ್ರವನ್ನೂ/ವಿಡಿಯೋವನ್ನೂ ನಾನು ಇಲ್ಲಿಯವರೆಗೆ ಕಂಡಿಲ್ಲ.
   ಹಾಗಿದ್ದರೂ ಅದಕ್ಕೆ ‘ಗಾಂಧಿ’ ಹೆಸರು ಹೇಗೆ ಅಂಟಿಕೊಂಡಿತೋ?

   ಉತ್ತರ
  • ಗಿರೀಶ್
   ಮಾರ್ಚ್ 18 2014

   ಶರಣರು ಗಾಂಧಿಯನ್ನು ಭಯೋತ್ಪಾದಕರಾಗಿ ಪರಿಗಣಿಸಿದಂತಿದೆ. 😉

   ಉತ್ತರ
 4. baboochiranthan
  ಮಾರ್ಚ್ 18 2014

  Sri Nandan Nilekani has already put swetha (white) cap on Indian. No exaggeration if he wears another Swetha cap on himself. It will pay him the dividend.

  ಉತ್ತರ
 5. ಮಾರ್ಚ್ 21 2014

  ಮುಸಲ್ಮಾನರಿಗೆ ಟೊಪ್ಪಿ ಹಾಕಬೇಕೆಂದಿದ್ದರೆ, ಅವರ ಟೊಪ್ಪಿ ನಾವು ಮೊದಲು ಹಾಕಿಕೊಳ್ಳಬೇಕು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments