ಹೊಸ ಚಿಂತನೆ ಮೂಡಿ ಬರಲಿ
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ನಿಜ ಹೇಳಬೇಕೆಂದರೆ 2014ರ ಲೋಕಸಭಾ ಚುನಾವಣೆ ನಮ್ಮಲ್ಲಿನ ನೈಜ ರಾಷ್ಟ್ರೀಯತೆಗೆ ಅದರ ಪರಂಪರಾಗತವಾದ ಜಾತ್ಯಾತೀತತೆಯ ನಿಜ ಅರ್ಥವಂತಿಕೆಗೆ ಮತದಾರ ಕೊಡಬೇಕಾದ ಪ್ರಬುದ್ಧ ತೀರ್ಪು ಎನ್ನಬಹುದುದೇನೋ! ಅದರಲ್ಲೂ ಈ ಚುನಾವಣೆ ಈ ದೇಶದ ಅಲ್ಪಸಂಖ್ಯಾತ-ಬಹುಸಂಖ್ಯಾತರೆಂಬ ಸಂಕುಚಿತ ಅವಕಾಶವಾದಿ ಮನೋಭೂಮಿಕೆಯನ್ನೊದ್ದು, ಈ ದೇಶ ಒಂದು ರಾಷ್ಟ್ರವಾಗಿ, ಜಾತಿ-ಮತಗಳ ಸಣ್ಣತನವನ್ನು ಬದಿಗಿಟ್ಟು, ಈ ದೇಶದ ಭವ್ಯ ಭವಿಷ್ಯವನ್ನು ಕಣ್ತುಂಬಿಕೊಳ್ಳಲು ಈ ದೇಶದ ಶ್ರೀಸಾಮಾನ್ಯನಿಗೆ ಸ್ವತಃ ಆ ಭಗವಂತನೇ ನೀಡಿದ ಅವಕಾಶವೆಂದರೆ ಖಂಡಿತ ಉತ್ಪ್ರೇಕ್ಷೆ ಎಂದು ಭಾವಿಸಬೇಕಿಲ್ಲ. ಅದಲ್ಲೂ ಇಲ್ಲಿನ ಅಲ್ಪಸಂಖ್ಯಾತರೆಂದೇ ಬಿಂಬಿಸಲ್ಪಡುವ ಕ್ರೈಸ್ತ-ಮುಸುಲ್ಮಾನ ಬಂಧುಗಳಿಗೂ ಈ ಚುನಾವಣೆ ಈ ದೇಶದ ತಮ್ಮ ವಾರಸಿಕೆ ಶೃತಪಡಿಸಲು ಇದೊಂದು ಸದವಕಾಶ ಎನ್ನಲು ಅವರು ಸಂಕೋಚಪಡಬೇಕಿಲ್ಲ. ಈ ದೇಶದ ಬಹುತೇಕ ರಾಜಕೀಯ ನಾಯಕರು ಬುದ್ಧಿಜೀವಿವರ್ಗ ಅಕ್ಷರಶಃ ಈ ದೇಶದ ನೈಜ ರಾಷ್ಟ್ರೀಯತೆ ಮತ್ತದರ ಪಾರಂಪರಿಕ ಜಾತ್ಯಾತೀತತೆಯ ವೈಶಾಲ್ಯತೆಯನ್ನು ಪ್ರತಿಪಾದಿಸಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ದೇಶದ ಜಾತಿ-ಪಂಥಗಳಿಗೆ ಮೀರಿದ ಈ ರಾಷ್ಟ್ರ ನನ್ನದು, ಈ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಸವಾಲಾಗಿರುವ ಭಾರತದ ಇಂದಿನ ಜಾತ್ಯಾತೀತತೆಯ ವ್ಯಾಖ್ಯಾನದ ನೈಜ ಅರ್ಥವನ್ನು ಪುನರ್ರೂಪಿಸುವ ಅವಕಾಶ ಒದಗಿಬಂದಿರುವುದು ಈ ದೇಶದ ಅಲ್ಪಸಂಖ್ಯಾತರೆಂದು ಕರೆಯಲ್ಪಡುತ್ತಿರುವವರು ಮಾಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎಂದರೆ ತಪ್ಪಲ್ಲ. ಈ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ ಹಿಂದುಗಳ ಗುಮ್ಮವನ್ನು ಮುಸಲ್ಮಾನರ ಮುಂದೆ, ಮುಸಲ್ಮಾನರ ಗುಮ್ಮವನ್ನು ಹಿಂದುಗಳ ಮುಂದೆ ತೋರಿಸಿ ಅಖಂಡ ಭಾರತವನ್ನು ತುಂಡಾಗಿಸಿ ಅವರ ಸುತ್ತ ಗಿರಕಿ ಹೊಡೆಯುತ್ತಿದ್ದ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದೊಂದು ತುಂಡನ್ನು ಆಳಲು ಕೊಟ್ಟು, ಬ್ರಿಟಿಷರು ಹೋದ ಮೇಲೆ ಇಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ಸ್ ಮಾಡಿದ್ದೇನು?
ಈ ದೇಶದ ಅಖಂಡತೆ ಸಮಗ್ರತೆಯ ಬಗ್ಗೆ ಹೇಳುತ್ತಲೇ, ಜಾತ್ಯಾತೀತತೆಯ ಮಾತಾಡುತ್ತಾ ‘ಜಾತೀಯತೆ’ಯ ವಿಷಬೀಜ ಬಿತ್ತಿ, ಓಟಿಗಾಗಿ ದರ್ಮ-ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿ, ಮತ್ತದರ ಮುಂದೆ ತಾವೇ ಧರ್ಮದ ರಕ್ಷಕರು ಎಂದು ಹೇಳುತ್ತಾ ಇಡೀ ದೇಶದ ಒಂದು ಭಾಗದ ಜನ ಮತ್ತೊಂದು ಭಾಗದವರನ್ನು ಸದಾ ಸಂಶಯದಿಂದ ನೋಡುತ್ತಲೇ, ಈ ದೇಶದಲ್ಲೇ ಹುಟ್ಟಿ ಈ ನೆಲದ ಅನ್ನ ತಿಂದು ಈ ನೆಲಕ್ಕೇ ದ್ರೋಹ ಬಗೆಯುವಂತ ಪಾತಕಿಗಳನ್ನು ಸೃಷ್ಟಿಸಿರುವ ಕಾಂಗ್ರೆಸ್ ಮತ್ತಿತರ ಜಾತ್ಯತೀತ ಪಕ್ಷಗಳ ಅದೇ ಆಳಸಲು ಘೋಷಣೆ ‘ಜಾತ್ಯಾತೀತತೆ ಭಾರತದ ಐಕ್ಯತೆ ಮತ್ತು ಸಮಗ್ರತೆ’ ಮತ್ತು ಇಲ್ಲಿನ ‘ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಹೊಣೆ’ ಎಂದು ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಅರವತ್ತೈದು ವರ್ಷಗಳ ನಂತವೂ ಈ ದೇಶದ ಅಲ್ಪಸಂಖ್ಯಾತ ವರ್ಗಗಳು ಇಲ್ಲಿನ ಸ್ವಘೋಷಿತ ಸೆಕ್ಯುಲರ್ ಪಕ್ಷಗಳ ಸೆಕ್ಯುಲರ್ ವಾದವನ್ನು ಒಮ್ಮೆ ವಿಮರ್ಶಿಸುವ ಹೊಣೆಗಾರಿಕೆ ಮತ್ತು ರಾಷ್ಟ್ರ ಕಾಳಜಿಯ ಹಿನ್ನೆಲೆಯಲ್ಲಿ ಈ ದೇಶದೆ ಅಲ್ಪಸಂಖ್ಯಾತ ಬಂಧುಗಳ ಮೇಲೆ ಇಂದು ಖಂಡಿತ ಇದೆ ಎನಿಸುತ್ತದೆ.
ಒಮ್ಮೆ ಇಲ್ಲಿನ ಅಲ್ಪಸಂಖ್ಯಾತ ಬಂಧುಗಳು ತಮ್ಮ ಜಾತಿ-ಮತಗಳ ಗಡಿ ದಾಟಿ ಯೋಚಿಸುವುದಾದರೇ ಆ ಬಂಧುಗಳು ಬಾಳ ಬೇಕಾಗಿರುವುದು ರಾಜಕಾರಣ ಅಥವಾ ರಾಜಕೀಯ ಪಕ್ಷಗಳ ಕೃಪಕಟಾಕ್ಷದಿಂದಲ್ಲ. ಬದಲಿಗೇ ಈ ದೇಶದ ಸರ್ವಾಂಗೀಣ ಪ್ರಗತಿಯ ಹಿಂದೆ ನಮ್ಮ ಬದುಕಿದೆ ಆ ಬದುಕಿನಲ್ಲಿ ನಮ್ಮದೂ ಒಂದು ನೆಲೆಯಿದೆ ಎಂದು ಅರ್ಥೈಸಿಕೊಳ್ಳುವ ಮಾನಸಿಕತೆಯಲ್ಲಿ ಎನ್ನುವುದು. ಈ ದೇಶವನ್ನು ಬ್ರಿಟಿಷರು ಹೇಗೆ ಒಡೆದು ಆಳಿದರೋ ಅದೇ ರೀತಿ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಅದನ್ನು ನೆಹರು ಕಾಲದಿಂದಲೂ ಮಾಡುತ್ತಾ ಬರುತ್ತಿದೆ. ಇಂದು ಇಡೀ ದೇಶದ ಪ್ರತಿ ಭಾಗದಲ್ಲೂ ಜಾತಿ-ಧರ್ಮದ ಹೆಸರಿನಲ್ಲಿ ಪ್ರತ್ಯೇಕತೆಯ ಒಡಕಿನ ಅಪಸ್ವರ ಕೇಳಿ ಬರುತ್ತಿದೆ. ಜಾತಿ-ಮತಗಳ ವಿಷಗಾಳಿ ಬೀಸುತ್ತಿದ್ದರೂ ಈ ದೇಶದ ಜಾತ್ಯತೀತ ಪಕ್ಷಗಳು ಪೊಳ್ಳು ಜಾತ್ಯಾತೀತತೆಯ ತಮ್ಮ ಮುಖವಾಡ ಕಳಚಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ‘ಹಬ್ಬ ಹೋದರೂ, ಹೋಳಿಗೆ ಹೋಗುವುದಿಲ್ಲ’ ಎಂಬ ಗಾದೆ ಮಾತಿದೆಯಲ್ಲ! ಹಾಗಾಗಿ ಈ ದೇಶದ ಅಲ್ಪಸಂಖ್ಯಾತ ಬಂದುಗಳೇ ಆ ಕೆಲಸವನ್ನು ಮಾಡಬೇಕಿದೆ. ಅವರು ಮಾಡಬೇಕಾದ ಒಂದೇ ಕೆಲಸವೆಂದರೇ ತಮ್ಮ ಸ್ವಂತದ ಜಾತಿ-ಮತಗಳನ್ನು ಮೀರಿ ನಿಂತು ಈ ದೇಶದ ಅಖಂಡತೆಗೆ ಪೂರಕವಾಗಿರುವ ಇಡೀ ದೇಶವನ್ನು ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿ, ಕಛ್ನಿಂದ ಕಾಮರೂಪದವರೆಗೆ ಈ ರಾಷ್ಟ್ರವನ್ನು ಒಂದೆಂಬ ಭಾವದಿಂದ ಸ್ವೀಕರಿಸುವ ಅವಶ್ಯಕತೆಯಿದೆ. ಹೊರಗಿನಿಂದ ಪ್ರೇರೇಪಿಸುವ ದೇಶವಿರೋಧಿ ಶಕ್ತಿಗಳನ್ನು ದೂರವಿಟ್ಟು ಹತ್ತಿರವಿರುವ ನಮ್ಮದೇ ಬಂಧುಗಳನ್ನು ಆಲಂಗಿಸುವ ಅವಶ್ಯಕತೆಯಿದೆ.
ಇಂದು ಇಡೀ ದೇಶ, ಅಷ್ಟೇ ಏಕೆ ಇಡೀ ಜಗತ್ತಿನ ದೃಷ್ಟಿ ನರೇಂದ್ರ ಮೋದಿಯರ ಮೇಲಿದೆ. ಈ ದೇಶದ ಬಹುತೇಕ ಯುವರಕ್ತದ ಚಿತ್ತ ನರೇಂದ್ರ ಮೋದಿಯೆಡೆಗೆ ನೆಟ್ಟಿದೆ. ಈ ದೇಶವನ್ನು ಹೇಗಾದರೂ ಮಾಡಿ ಸರಿದಾರಿಗೆ ತರಬಹುದಾದ ಆಶಾಕಿರಣ ಅದೊಂದೇ ಎಂದು ಈ ಯುವ ಜನತೆಗೆ ಮನವರಿಕೆಯಾಗಿದೆ. ಅವರ ದೃಷ್ಟಿಯಲ್ಲಿ ಮೋದಿಯೊಬ್ಬರೇ ಈ ದೇಶದ ಅನೇಕ ಸಮಸ್ಯೆಗಳಿಗೆ ಉತ್ತರವೆಂದು ನಂಬಿದ್ದಾರೆ. “ಮನೆ ಗೆದ್ದು, ಮಾರು ಗೆಲ್ಲು” ಎನ್ನುವ ಗಾದೆಯಂತೆ ಅದನ್ನು ಮೋದಿಯವರು ತಮ್ಮ ಕರ್ಮಭೂಮಿ ಗುಜರಾತಿನಲ್ಲಿ ನಿರೂಪಿಸಿದ್ದಾರೆ. ಮನೆಗೆದ್ದಿದ್ದಾರೆ ಈಗ ಮಾರು ಗೆಲ್ಲಬೇಕಿದೆ. ಇದೇ ಜವಬ್ದಾರಿ ಈಗ ಇಲ್ಲಿನ ಅಲ್ಪಸಂಖ್ಯಾತ ಬಂಧುಗಳ ಮೇಲೂ ಇದೇ. ಈ ದೇಶದಲ್ಲಿ ವಾಸಿಸುವ ಇಲ್ಲಿನ ಅಲ್ಪಸಂಖ್ಯಾತ ಬಂಧುಗಳು ನಂಬುವ ಇಸ್ಲಾಂ ಹಾಗೂ ಕ್ರೈಸ್ತ ಮತಗಳು ಆಕ್ರಮಕಾರಿ ಶಾಸನಗಳ ಮೂಲಕ ಬಂದಿರಬಹುದು ಆದರೆ ಇಲ್ಲಿನ ಈ ಬಂಧುಗಳ ಮೂಲ ನೆಲೆ ಅಕ್ಷರಶಃ ಭಾರತವೇ ಆಗಿದೆ. ಈ ದೇಶದ ಸಾಮರಸ್ಯವನ್ನು ಜಾತ್ಯಾತೀತತೆಯ ಸೋಗಿನಲ್ಲಿ ಹಾಳುಮಾಡಿಕೊಂಡು ಬಂದಿರುವ ಅವಕಾಶವಾದಿ ಪಕ್ಷಗಳ ನಿಜರೂಪವನ್ನು ಅರಿತುಕೊಂಡು ಎಲ್ಲಕ್ಕಿಂತ ದೇಶ ಮೊದಲು ಎನ್ನುವ ಅವಕಾಶ ಇದಕ್ಕಿಂತ ಮತ್ತೊಂದಿರಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಅಲ್ಪಸಂಖ್ಯಾತರ ರಕ್ಷಕರು ತಾವು ಎಂದು ಈ ಜಾತ್ಯತೀತ ಮಂದಿ ತೋರಿಕೊಂಡರೂ ಇವರ ಅಂತರಾಳದಲ್ಲಿರುವುದು ಮಾತ್ರ ಸಾಮರಸ್ಯವನ್ನು ಕದಡುವ ರಾಷ್ಟ್ರ ವಿದ್ರೋಹಿ ಚಿಂತನೆಗಳೇ ಎಂಬುದನ್ನು ಅರಿತುಕೊಳ್ಳುವಲ್ಲಿ ಈ ರಾಷ್ಟ್ರದ ಹಿತವಿದೆ ಕೂಡಿಬಾಳುವ ಸಮರಸತೆಯ ಭಾವವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.
ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಅದರ ಸಮಾನ ಮನಸ್ಕ ಪಕ್ಷಗಳು ಪ್ರತಿಬಾರಿ ಜಾತ್ಯಾತೀತತೆಯ ಮಾತಾಡುತ್ತವೆ. ಒಮ್ಮೆ ಗಮನಿಸಿ ನರೇಂದ್ರ ಮೋದಿ ಹೋದಕಡೆಗೆಲ್ಲ ಭಾರತದ ಬಗ್ಗೆ ಮಾತಾಡುತ್ತಾರೆ ಈ ದೇಶದ ಭವಿತವ್ಯದ ತಮ್ಮ ಕನಸನ್ನು ಎಲ್ಲರ ಮುಂದೆ ತೆರೆದಿಡುತ್ತಾರೆ. ಸಲ್ಮಾನ್ ಖುರ್ಷಿದ್ರಂತಹ ಕಾಂಗ್ರೆಸ್ ನಾಯಕರು ಮುಸಲ್ಮಾನನೊಬ್ಬ ತಂದ ಟೋಪಿಯನ್ನು ಧರಿಸಲಿಲ್ಲ ಎನ್ನುವುದನ್ನು ದೊಡ್ಡ ವಿಷಯವನ್ನಾಗಿಸುತ್ತಾರೆ.ಅದೇ ಕಾಲಕ್ಕೆ ಅವರದೇ ಕಾಂಗ್ರೆಸ್ಸ್ ಸರ್ಕಾರ ಇಲ್ಲಿನ ಶಿಕ್ಷಣ ವೇತನ ಪಡೆದು, ಇಲ್ಲಿಯ ಅನ್ನತಿಂದು ಬದುಕಿ,ಭಾರತದ ವಿರೋಧಿ ಘೋಷಣೆ ಕೂಗುವ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಹಾಕಿದ ದೇಶದ್ರೋಹದ ಕೇಸನನ್ನು ಹಿಂಪಡೆಯುತ್ತಾ ವಿದ್ರೋಹಿಗಳ ಬೆಂಬಲಕ್ಕೆ ನಿಲ್ಲುತ್ತದೆ. ಇದು ದೇಶವಾಸಿಗಳಿಗೆ ಯಾವ ಸಂದೇಶವನ್ನು ನೀಡಬಹುದೆನ್ನುವುದನ್ನು ಯೋಚಿಸಬೇಕಿದೆ. ಈ ದೇಶದ ಐಕ್ಯತೆ ಸಮಗ್ರತೆಯ ಮಾತಾಡುತ್ತಲೇ ಈ ವರೆಗೆ ದೇಶವನ್ನಾಳಿದ ಈ ಪಕ್ಷಗಳೇ ಪ್ರಸ್ತುತ ಈ ದೇಶದ ಐಕ್ಯತೆಗೆ ಒಂದು ಸವಾಲು ಎನ್ನುವಂತಿವೆ.
ಪ್ರತಿ ರಾಜ್ಯಗಳಲ್ಲೂ ಜಾತಿಗೊಂದು ಪಕ್ಷಕಟ್ಟಿ ಸದಾ ಜಾತಿ ಸಮೀಕರಣ ನಡೆಸುತ್ತಲೇ ರಾಜ್ಯ ರಾಜಕಾರಣ ಮಾಡುತ್ತಾ ಲೋಕಸಭಾ ಚುನಾವಣೆ ಬಂದೊಡನೆ ಎಲ್ಲ ರಾಜ್ಯಗಳಲ್ಲಿನ ನಾಯಕರು ಸಂಘಕಟ್ಟಿ ಪ್ರಧಾನಿ ಪಟ್ಟಕ್ಕೆ ಕೋಟು ಹೊಲಿಸಿಕೊಳ್ಳುವ ತೃತೀಯ ರಂಗವೂ ಈ ದೇಶದ ಸಮಗ್ರತೆಗೂ ಒಂದು ದೊಡ್ಡ ಸವಾಲೇ ಅಗಿದ್ದರೂ ಈ ಅವಕಾಶವಾದಿ ನಾಯಕರಿಗೆ ಮತ ಕೊಟ್ಟರೆ ಇದಕ್ಕಿಂದ ವಿದ್ರೋಹ ಬೇರೆ ಇರಲು ಸಾಧ್ಯವೇ? ಇವರ ಐಕ್ಯತೆಯ ಮಾತು ಹಾಸ್ಯಾಸ್ಪದವಲ್ಲದೇ ಮತ್ತೇನು?
ಇಂದು ದೇಶದ ಉದ್ದಗಲ ನಕ್ಸಲ್-ಮಾವೋಗಳ ಅಟಾಟೋಪ ಮೇರೆಮೀರಿದೆ, ವಿದೇಶಿ ಶಕ್ತಿಗಳು ಹಣಬಲದಿಂದ ಈ ದೇಶದ ಸಮಗ್ರತೆಗೆ ಬಹುದೊಡ್ಡ ಸವಾಲಾಗಿರುವ ಹಿನ್ನೆಲೆಯಲ್ಲಿ ಎದೆಕೊಟ್ಟು ಹೋರಾಡುತ್ತಾ ಸುದೀರ್ಘ ಆಡಳಿತ ನಡೆಸಿ ಯಶಸ್ವಿಯಾಗಿರುವ ಮೋದಿಗಲ್ಲದೇ ಆ ಗಂಡೆದೆ ಉತ್ತರ ಕುಮಾರನ ಪೌರುಷ ತೋರಿಸಿ ಒಂದು ಪುಟ್ಟ ಕೇಂದ್ರಾಡಳಿತ ಪ್ರದೇಶವನ್ನು ಎರಡು ತಿಂಗಳೂ ಆಳಲಾಗದ ಪುಕ್ಕಲು ಕೇಜ್ರಿವಾಲರರಿಗಿದೆಯೇ? ಇಂಥಹ ರಣಹೇಡಿಗೆ ನಾವು ಮತ ಹಾಕಬೇಕೇ?!
ಇತ್ತೀಚೆಗೆ ನರೇಂದ್ರ ಮೋದಿಯವರು ಅರುಣಾಚಲಕ್ಕೆ ಭೇಟಿ ನೀಡಿದಾಗ ಅರುಣಾಚಲವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಚೀನಾಕ್ಕೆ ಎಚ್ಚರಿಕೆ ಕೊಟ್ಟಿದ್ದು ಅರುಣಾಚಲವನ್ನು ಕಬಳಿಸಲು ಬಂದರೆ ‘ಹುಷಾರ್’ ಎಂದು ಧಮಕಿ ಹಾಕುವ ದೈರ್ಯ ನೆಹರು ಆದಿಯಾಗಿ ಯಾವ ನಾಯಕನಿಗೆ ಅದು ಸಾಧ್ಯವಾಗಿದೆ? ಇಂದು ವೀಸಾ ಕೇಳದಿದ್ದರೂ ಮೋದಿಯ ವಿಸಾ ಬಗ್ಗೆ ಮಾತಾಡುವ ಅಮೆರಿಕಾ ಅದರ ರಾಯಭಾರಿಯನ್ನು ಮೋದಿಯವರ ಬಳಿ ಕಳಿಸುತ್ತದೆ. ಇಂಗ್ಲೆಂಡಿನ ಸಂಸದರು ಮೋದಿಯ ಸಂಪರ್ಕ ಸಾಧಿಸುತ್ತಾರೆ, ಸದ್ದಿಲ್ಲದೇ ಜಪಾನ್ ‘ಧೋಲೆರಾ’ ಎಂಬ ಹೈಟೆಕ್ ನಗರಕ್ಕೆ ಸಹಾಯಾಸ್ತ ನೀಡುತ್ತಿದೆ. ಮೋದಿಯವರ ಜನಪ್ರಿಯತೆಯನ್ನು ಕಂಡು ಪಾಕಿಸ್ತಾನವಂತೂ ಸ್ವಲ್ಪ ಹೆಚ್ಚಾಗಿಯೇ ಬೆವರುತ್ತಿದೆ. ನರೇಂದ್ರ ಮೋದಿಯವರನ್ನು ಮುಗಿಸಲು ಇನ್ನಿಲ್ಲದ ಪ್ರಯತ್ನವನ್ನು ತನ್ನ ಭಯೋತ್ಪಾದಕ ಭಂಟರ ಮೂಲಕ ಮಾಡುವ ಹೀನಕೃತ್ಯಕ್ಕೆ ಕೈಹಾಕಿರುವುದು ಬೇಹುಗಾರಿಕ ವರದಿಯ ಮೂಲಕ ತಿಳಿದುಬರುತ್ತಿದೆ.
ಇಂದು ಇಡೀ ಭಾರತ ವಿರೋಧಿ ಶಕ್ತಿಗಳೆಲ್ಲ ಮೋದಿ ವಿರೋಧಿಯಾಗಿರುವುದು, ಇಂದೆಂದೂ ಕಾಣದಂತೆ ಏಕ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹಣಿಯಲು ನಿಂತಿರುವುದು ಭಾರತದ ಹೊರಗೂ ಒಳಗೂ ಗೋಚರವಾಗುತ್ತಿದೆ ಎಂದರೆ ಮೋದಿ ಒಬ್ಬ ಮಹಾನ್ ರಾಷ್ಟ್ರಭಕ್ತ ಎನ್ನುವುದಕ್ಕೆ ಮತ್ತೇನು ಸಾಕ್ಷಿಬೇಕು? ಈ ದೇಶವನ್ನು ಮುನ್ನೆಡಲು ಬೇಕಾದ ಅರ್ಹತೆ ಇನ್ಯಾವುದಿದೆ ಹೇಳಿ? ದೇಶವಾಸಿಗಳು ‘ನಮೋ’ ಗೆ ಜೈ ಎನ್ನಲು ಇಷ್ಟು ಸಾಕಲ್ಲವೇ?
ಈ ಹಿನ್ನೆಲೆಯಲ್ಲಿ ಸೆಕ್ಯುಲರ್ ಪಕ್ಷಗಳು ಮತ್ತು ಎಡಪಂಥೀಯ ಬುದ್ಧಿಜೀವಿಗಳ ತಾಳಕ್ಕೆ ಇಲ್ಲಿನ ಅಲ್ಪಸಂಖ್ಯಾತ ವರ್ಗ ತಾಳ ಹಾಕುತ್ತಲೇ ಇರಬೇಕೆ ಎನ್ನುವುದನ್ನು ಒಮ್ಮೆ ಯೋಚಿಸಬೇಕು.
ಮತ್ತೊಂದು ವಿಷಯ, ಒಬ್ಬ ವ್ಯಕ್ತಿ ಆತ ಬಹುಸಂಖ್ಯಾತ-ಅಲ್ಪಸಂಖ್ಯಾತ ಎನ್ನುವ ಸಮೀಕರಣ ಅದು ಒಡೆದು ಆಳುವ ರಾಜಕಾರಣದ ದಾಳವಷ್ಟೇ. ಆದರೆ ಆತ ಯಾವುದೇ ಮತ-ಪಂಥದವನಿರಲಿ ತಾನು ಎಲ್ಲಿ ನೆಲೆಕಂಡಿರುವನೋ ಆ ದೇಶಕ್ಕೆ ನಿಷ್ಠೆ ತೋರಬೇಕೆನ್ನುವ ಸಾಮಾನ್ಯ ಚಿಂತನೆ ಆತನಲ್ಲಿ ಮೂಡಿದಾಗ ಸಹಜವಾಗಿ ಸೋಗಲಾಡಿ ಸೆಕ್ಯುಲರ್ ವಾದ ತಾನಾಗಿ ಮೂಲೆ ಸೇರುವುದು ನಿಶ್ಚಿತ. ನರೇಂದ್ರ ಮೋದಿಯವರ ಈ ಹೊಸ ಅಲೆ ಖಂಡಿತವಾಗಿ ಈ ಮುಖವಾಡದ ಪೊರೆ ಕಳಚ್ಚುತ್ತಿದೆ ಎನ್ನುವುದು ಕ್ರಮೇಣ ಗೋಚರವಾಗುತ್ತಿದೆ. ಈ ಚಿಂತನೆಗೆ ನಮ್ಮೆಲ್ಲರ ಮನಸ್ಸು ತೆರೆದುಕೊಳ್ಳಬೇಕಿದೆ!
ಚಿತ್ರ ಕೃಪೆ :http://www.authorstream.com
ಬಹಳ ಉತ್ತಮ ಲೇಖನ. ಭಾಜಪಕ್ಕೆ ಪೂರ್ಣ ಬಹುಮತ ಸಿಗಲಿ, ನರೇಂದ್ರ ಮೋದಿ ಪ್ರಧಾನಿಯಾಗಲಿ. ಆಗ ಭಾರತ ಜಾಗತಿಕ ಶಕ್ತಿಯಾಗುವತ್ತ ದಾಪುಗಾಲಿಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತಿನ ಮುಸಲ್ಮಾನರು ಸುಖ-ಶಾಂತಿಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅಲ್ಲಿನ ಅನೇಕ ಮುಸಲ್ಮಾನ ನಾಯಕರು ಮೋದಿಯ ಪರವಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿರುವುದೇ ಇದಕ್ಕೆ ಸಾಕ್ಷಿ.
2002ರಲ್ಲಾದ ಗೋಧ್ರಾ ರೈಲು ನಿಲ್ದಾಣದಲ್ಲಿ “ಕಾರಸೇವಕರ ಜೀವಂತ ದಹನ”ದ ಘಟನೆ ಮತ್ತು ಆ ನಂತರದಲ್ಲಿ ನಡೆದ ಗಲಭೆಗಳ ನಂತರದಲ್ಲಿ, ಕಳೆದ 12 ವರ್ಷಗಳಿಂದ ಗುಜರಾತಿನಲ್ಲಿ ಒಂದು ಕೋಮುಗಲಭೆಯೂ ನಡೆದಿಲ್ಲ ಎನ್ನುವುದು, ಮೋದಿಯವರ ಶುದ್ಧ ಆಡಳಿತಕ್ಕೆ ಹಿಡಿದ ಕೈಗನ್ನಡಿ.
ಅದೇ ರೀತಿ, ಭಾರತದಾದ್ಯಂತ ಕೋಮುಗಲಭೆಗಳು ಶಾಶ್ವತವಾಗಿ ನಿಲ್ಲಬೇಕಾದರೆ, ಮುಸಲ್ಮಾನರಾದಿಯಾಗಿ ಎಲ್ಲರೂ ಸುಖ-ಶಾಂತಿಗಳಿಂದ ನೆಮ್ಮದಿಯ ಜೀವನ ನಡೆಸಬೇಕಾದರೆ, ನರೇಂದ್ರ ಮೋದಿಯಂತಹ ನಿಸ್ಪೃಹ, ಸುಶೀಲ, ಶುದ್ಧ ಹಸ್ತದ ವ್ಯಕ್ತಿ ಭಾರತಕ್ಕೆ ಪ್ರಧಾನಿಯಾಗಬೇಕು.
2014ರ ಚುನಾವಣೆ ಈ ನಿಟ್ಟಿನಲ್ಲಿ ನಿರ್ಣಾಯಕವೆನಿಸಲಿದೆ. ಎಲ್ಲ ಭಾರತೀಯರೂ, ಜಾತಿ-ಮತಗಳನ್ನು ಬದಿಗಿಟ್ಟು, ತಾನು ಭಾರತೀಯ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟು ಚುನಾವಣೆಯಲ್ಲಿ ಮತ ಚಲಾಯಿಸಿದರೆ, ಭಾರತದ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವೇ ಇಲ್ಲ.
ಬಹಳ ಪ್ರಬುದ್ಧ ಲೇಖನ. ಗುಣಕ್ಕೆ ಮತ್ಸರವಿಲ್ಲದೆ ಮೂಡಿ ಬಂದಿದೆ. ಮೋದಿಯ ಅಸ್ಥಿತ್ವ ಇರುವುದು ರಾಷ್ಟ್ರೀಯತೆಯಲ್ಲಿ. ರಾಷ್ಟ್ರೀಯತೆ ಇರುವುದು “ನಮ್ಮ” ಹಿತದಲ್ಲಿ. ನಮ್ಮ ಹಿತಕ್ಕೆ ನಾವು ಮತಹಾಕ ಬೇಕಾಗಿದೆ. ರಾಜಕೀಯ ಪಕ್ಷಗಳ ಸೋಗಲಾಡಿತನಕ್ಕಲ್ಲ. ಜಾತಿಯ ಹೆಸರು, ಧರ್ಮದ ಹೆಸರು ನಮ್ಮನ್ನು ಪ್ರತ್ಯೇಕಿಸೀತೇ ಹೊರತು ಮಾನುಷ ಸಹಜ ಪ್ರೇಮವನ್ನೂ ಎತ್ತಿ ಹಿಡಿಯಲಾರದು. ನನ್ನ ಒಂದು ಮತ ದೇಶದ ಹಿತಕ್ಕೆ ಇರಬೇಕೇ ಹೊರತು ನನ್ನ ಸ್ವಹಿತಕ್ಕಲ್ಲ; ನಮ್ಮ ಹಿತಕ್ಕೆ. ಈ ದೇಶದ ಮೇಲೆ, ದೇಶಕ್ಕಾಗಿ ತ್ಯಾಗ ಮಾಡಿದವರ ಮೇಲೆ ಎಳ್ಳಿನೊಂದು ಭಾಗ ಪ್ರೀತಿ ಇರುವವನು ಮೋದಿಗಲ್ಲದೆ ಮತ್ತಾರಿಗೂ ಮತ ಹಾಕಲಾರ. ಭಾಜಪಾದಲ್ಲೂ ಕೆಟ್ಟವರಿದ್ದಾರೆ. ಆದರೆ ಅದೊಂದೇ ಪಕ್ಷ ರಾಷ್ಟ್ರೀಯತೆಯನ್ನು ಸಮಗ್ರವಾಗಿ ಎತ್ತಿಹಿಡಿದಿದೆ. ರಾಷ್ಟ್ರೀಯತೆಗೆ ಮೋದಿಯಲ್ಲದೆ ಮತ್ತೊಂದು ಆಯ್ಕೆ ಇಲ್ಲ.
+10000000000
ಈ ಲೇಖನದ ಹಲವು ಅಂಶಗಳಲ್ಲಿ ನನ್ನ ಸಹಮತವಿದೆ. ಆದರೆ ಬರಹದ ಧಾಟಿ,ಅದರ ಒಟ್ಟಾರೆ tone ಮಾತ್ರ ಇದರ “ಡ್ಯಾನಿ ಪಿರೇರಾ” ಅಲ್ಲ, ಈ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ. ಕ್ರೈಸ್ತ ಹೆಸರು ಪಿರೇರ ಅಲ್ಲ, “ಪೆರೇರಾ”. ಪಾಪ, ಈ ಸೂಕ್ಷ್ಮತೆ ಗುರುತಿಸುವಲ್ಲಿ ಲೇಖಕ ಸೋತ. ಇಷ್ಟು ಮಾತ್ರ ಅಲ್ಲ, ಲೇಖನದ ಹಲವೆಡೆ ಈ “ನ್ಯೂನತೆ” ಕಾಣುತ್ತಿದೆ. ನನ್ನ ಈ ಪ್ರತಿಕ್ರಿಯೆಗೆ ಬಹುಶಃ ಬರಬಹುದಾದ ಮರು ಪ್ರತಿಕ್ರಿಯೆ ನನ್ನ ಮಾತನ್ನು ಪುಷ್ಟೀಕರಿಸಲಿದೆ.
ಕಾಂಗ್ರೆಸ್ ಮುಸ್ಲಿಮರಿಗೆ ಆರೆಸ್ಸಸ್ ಗುಮ್ಮ ತೋರಿಸಿ ಮತ ಕಬಳಿಸಿತೆ ಹೊರತು ಏನನ್ನೂ ಮಾಡಿಲ್ಲ ಎನ್ನುವುದು ಕಾಟು ಸತ್ಯ. ಅಷ್ಟಕ್ಕೂ ೮೦೦ ವರ್ಷ ಈ ದೇಶವನ್ನಾಳಿದ ಸಮುದಾಯಕ್ಕೆ ಈ ಕಾಂಗ್ರೆಸ್ಸಿನ ಅವಶ್ಯಕತೆಯಾದರೂ ಯಾಕೆ? ಮುಸ್ಲಿಮರ ಹಿನ್ನಡೆಗೆ ಮುಸ್ಲಿಮರೇ ಕಾರಣ. ಇದರಲ್ಲಿ ಯಾವುದೇ ಸಂಶಯ ಬೇಡ. ಸಾಕಷ್ಟು ವಿದ್ಯೆ ಪಡೆದುಕೊಂಡ, ಇಸ್ಲಾಮಿನ ಮೂಲತತ್ವ ‘ಜ್ಞಾನಾರ್ಜನೆ; ಯನ್ನು ಚೆನ್ನಾಗಿ ಅರ್ಥೈಸಿಕೊಂಡು ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಮುಸ್ಲಿಮರು ಬಹಳಷ್ಟು ಸಾಧಿಸಿದ್ದಾರೆ. ನಮ್ಮ ಭಾರತದಲ್ಲೂ ಸಾಧಿಸಿಲ್ಲವೆ? ಯಾವ ಕ್ಷೇತ್ರದಲ್ಲಿ ಮುಸ್ಲಿಮರು ಸಾಧನೆಗೈದಿಲ್ಲ? ನಮಗೆ ಯಾವ ಪಕ್ಷದ ಕೃಪಾಕಟಾಕ್ಷ ವೂ ಬೇಕಿಲ್ಲ. “ಎಲ್ಲಿಯವರೆಗೆ ಒಂದು ಸಮುದಾಯ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಲು ಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ದೇವರು ಅವನಿಗೆ ಸಹಾಯ ಮಾಡಲಾರ” ಪವಿತ್ರ ಕುರ್’ಆನಿನ ಈ ಮುತ್ತಿನಂಥ ಮಾತುಗಳ ಅರ್ಥ ಮುಸ್ಲಿಮರಿಗೆ ಇದೆಯೇ? ದೇಶದ ಹಿತವನ್ನು ಒಟ್ಟಾರೆಯಾಗಿ ಕಾಯುವ ಪಕ್ಷಕ್ಕೆ ಮತ ನೀಡಿ ಈ ದೇಶವನ್ನು ಮುನ್ನಡೆಸಬೇಕಾದ ಕರ್ತವ್ಯ ಪ್ರತ್ಯೊಬ್ಬ ಭಾರತೀಯನಿಗಿದೆ.
ದಲಿತರು, ಮುಸಲ್ಮಾನರು, ಹಿಂದುಳಿದವರು ಒಂದಾಗಬೇಕು. “ಎಲ್ಲಿಯವರೆಗೆ ತುಳಿತಕ್ಕೊಳಗಾದ ಹಿಂದುಳಿದವರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಒಂದೇ ಎಂಬುದನ್ನು ಅರಿತು ಒಂದಾಗುವುದಿಲ್ಲವೋ; ಎಲ್ಲಿಯವರೆಗೆ ಇವರಿಬ್ಬರೂ ಸೇರಿ, ಬಹುಪಾಲು ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು, ಸಿಖ್ಖರು ಮೊದಲಾದವರ ಪೂರ್ವಜರು ತಮ್ಮ ಪೂರ್ವಜರ ರಕ್ತ ಸಂಬಂಧಿಗಳಾಗಿದ್ದವರು ಎಂಬ ಸತ್ಯವನ್ನು ಅರಿತು, ಇವರೆಲ್ಲರ ಜೊತೆ ಒಂದಾಗಿ ರಾಜ್ಯಶಕ್ತಿಯನ್ನು ಪಡೆಯಲು ಹೋರಾಡುವುದಿಲ್ಲವೋ ಅಲ್ಲಿಯವರೆಗೆ ಶೋಷಕ ಮಹಾಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ.”
ಅಂದರೆ ಕ್ರಿಶ್ಚಿಯನ್ನರನ್ನು ಮುಸಲ್ಮಾನರನ್ನು ಮಾತೃ ಧರ್ಮಕ್ಕೆ ಕರೆತರಲು ಹೋರಾಡುತಿದ್ದೀರಾ ?
ಅಯ್ಯಾ ಶೆಟ್ಕರ್ ಶರಣ, ದಲಿತರು ಹಿಂದುಳಿದವರು ಮುಸಲ್ಮಾನರು ಒಂದಾಗಬೇಕು. ಅವರೆಲ್ಲರೂ ಲಿಂಗವಂತರಾಗಬೇಕೆ? ಹೌದೂ ಅವರಿನ್ನೂ ಹಿಂದುಳಿದಿದ್ದಾರೆ! ಹಾಗಾದರೆ ಹಿಂದುಳಿದವರನ್ನು ಮೇಲಕೆತ್ತಿದ್ದೆವೆಂದು ಬುರುಡೆ ಬಿಟ್ಟ ನಿಮ್ಮವರು ಮಾಡಿದ್ದೇನು? ಏನು ಕಡಿದು ಕಟ್ಟೆ ಹಾಕಿದ್ದೀರೆಂದು ಸಾಮಾಜಿಕ ಕ್ರಾಂತಿಯೆಂದು ಕೊಚ್ಚಿಕೊಳ್ಳುತ್ತೀರಲ್ಲ.
ಮನುವಾದದ ನಾಶವಾಗುವ ವರೆಗೆ ಸುಮ್ಮನಿರುವವರಲ್ಲ ನಾವು.
ಈ ವರ್ಷ ಕಮ್ಯುನಿಸಂನ 25ನೇ ಪುಣ್ಯತಿಥಿ!
ಪುಣ್ಯ ಪಾಪದ ತಿಥಿಗಳು ನಿಮ್ಮ ಸನಾತನಿಗಳ ಲೆಕ್ಕಚಾರಗಳು Mr.SSNK
ಮಾರ್ಕ್ಸ್ ವಾದ ಸಾರ್ವಕಾಲಿಕ ಸತ್ಯ ಅದಕ್ಕೆ ಅಂತ್ಯವಿಲ್ಲ
[[ಪುಣ್ಯ ಪಾಪದ ತಿಥಿಗಳು ನಿಮ್ಮ ಸನಾತನಿಗಳ ಲೆಕ್ಕಚಾರಗಳು Mr.SSNK. ಮಾರ್ಕ್ಸ್ ವಾದ ಸಾರ್ವಕಾಲಿಕ ಸತ್ಯ ಅದಕ್ಕೆ ಅಂತ್ಯವಿಲ್ಲ]]
ನಿಮಗೆ ಪುಣ್ಯ ಅನ್ನೋ ಪದವೇ ಅಲರ್ಜಿ ಅಲ್ಲವೇ!?
ಸೆಮೆಟಿಕ್ ಮತಗಳಲ್ಲಾಗಲೀ, ಮಾರ್ಕ್ಸ್ ಚಿಂತನೆಯಲ್ಲಾಗಲೀ ಪುಣ್ಯಕ್ಕೆ ಸ್ಥಳವೇ ಇಲ್ಲವಲ್ಲ. ಅಲ್ಲಿರುವುದೆಲ್ಲಾ ಬರೇ ‘ಪಾಪ’ ಅಷ್ಟೇ!! ಹಾಗಾಗಿಯೇ, ನಿಮ್ಮ ಮಾರ್ಕ್ಸ್ ಚಿಂತನೆಯ ಮೂಲವಾದ ಪಶ್ಚಿಮದ ಭಾಷೆಗಳಲ್ಲಿ ‘ಪುಣ್ಯ’ ಅನ್ನೋ ಪದವೇ ಇಲ್ಲ! 😉
ಇರಲಿ ಬಿಡಿ. ನೀವು ಪಾಪವನ್ನೇ ಇಟ್ಟುಕೊಳ್ಳಿ, ಬೇಡ ಅಂದವರಾರು?
ತಿಥಿಯಲ್ಲಿ ಮಾಡೋ ವಡೆ ಬಹಳ ರುಚಿಯಾಗಿರುತ್ತೆ. ಅದನ್ನ miss ಮಾಡ್ಕೋಬೇಡಿ 🙂
ಇವತ್ತಿನ ನಿಮ್ಮ ‘ಮಾರ್ಕ್ಸ್ ವಾದ’ ನೋಡಿದರೆ, ಕಾರ್ಲ್ ಮಾರ್ಕ್ಸ್ ಕೂಡಾ ಮಾರ್ಕ್ಸಿಸ್ಟ್ ಅನ್ನಿಸಿಕೊಳ್ಳಕ್ಕೆ ಇಷ್ಟಪಡೋಲ್ಲ ಗೊತ್ತಿರಲಿ. 😀
http://ladaiprakashanabasu.blogspot.in/2014/03/blog-post_24.html
+1
+೧
ಚೆನ್ನಾಗಿದೆ ತಮಾಶೆ!
ಶೇಟ್ಕರ್ ಅವರು ಬರೆಯೋದಿಕ್ಕೆ ಮಾರ್ಕ್ಸ್ ಮಂಜಣ್ಣ +1 ಹಾಕೋದು.
ಮಾರ್ಕ್ಸ್ ಮಂಜಣ್ಣ ಹಾಕಿದ +1ಗೆ ಶೇಟ್ಕರ್ ಅವರು +1 ಹಾಕೋದು!
ಶೇಟ್ಕರ್, ಮಾರ್ಕ್ಸ್ ಮಂಜಣ್ಣ ಅವರೇ,
ಯಾಕೆ ಅಲ್ಲಿಗೇ ನಿಲ್ಲಿಸಿಬಿಟ್ಟಿರಿ? ಇನ್ನೂ ಒಂದು ಹತ್ತಿಪ್ಪತ್ತು ಸಲ +1 ಹಾಕ್ಬೋದಲ್ವೇ?
ನಿಮ್ಮ ಬೆನ್ನನ್ನು ನೀವೇ ಎಷ್ಟು ಸಲ ಬೇಕಾದ್ರೂ ತಟ್ಟಿಕೊಳ್ಳಬಹುದು…..ಕೈ ನೋವು ಬರೋವರ್ಗೂ ತಟ್ಕೋಳಿ! 😉
ಹ್ಮ..ಇನ್ನೊಂದು ನಮ್ಮ ಶೆಟ್ಕರ್ ಪ್ರಿಯ ಬಡಾಯಿ ಲದ್ದಿ..ಎಂದಿನಂತೆಯೇ ‘ಲೋಕ ಹೆಣಗಲಿ..ತಾನು ಗೊಣಗಲಿ’ ಎಂಬಂತೆ ಎಂದಿನ ಗೊಣಗಾಟವೇ ತುಂಬಿದ, ಟಿಪಿಕಲ್ ಬಕೆಟ್ ಕಂಪನಿಯ ಲೇಖನ!. ಪಾಪ..ಎಷ್ಟು ಎಡಬಿಡಂಗಿಗಳಿಗೆ ಹೊಟ್ಟೆಯಲ್ಲಿ ಆಲ್ಸರ್ ಆಗಿದೆಯೋ ಏನೊ?..ಚೆಕ್ ಅಪ್ ಮಾಡಿಸಿಕೊಳ್ಳುವುದು ಒಳ್ಳೆಯದು..ಈಗ ಹೇಗಿದ್ದರೂ, ಈ ಪ್ರಗತಿಪರಾವಲಂಬಿಗಳ ಚಿಕಿತ್ಸೆಯ ಖರ್ಚನ್ನು ಸರಕಾರ ನೋಡಿಕೊಳ್ಳುತ್ತದೆ ಯಾವುದಾದರೂ ಒಂದು ಸ್ಕೀಮಿನಲ್ಲಿ.
ಅಯ್ಯಾ ಶರಣ ಶೆಟ್ಕರ್ ಎಂದಾದರೂ ನಿನಗೆ ಉತ್ತರ ಕೊಟ್ಟು ಅಭ್ಯಾಸ ಇದೆಯೇ? ಅದ್ಯಾರು ನಿನಗೆ ಡಿಗ್ರೀ ಕೊಟ್ಟರೊ? ಬಹುಶಃ ಯಾವುದೋ ಎಡ ಪಂತೀಯರಿಂದಲೇ ತುಂಬಿರುವ ತಲೆಹುಳುಕ ವಿಶ್ವವಿದ್ಯಾಲಯವೇ ಇರಬೇಕು. ನಿನ್ನ ಸಂಶೋಧನಾ ವರದಿಗಳು ಹೀಗೇಯೆ ಇರುತ್ತವೆಯೆ? ಉತ್ತರಗಳೇ ಇರದೆ, ಕೇವಲ ಯಾವುದೋ ಪ್ರಶ್ನೆಗೆ ಇನ್ಯಾವುದೋ ಉತ್ತರ. ಕೂಲಿ ಸಿಕ್ತಾ ಅಂದ್ರೆ ಶಿವಲಿಂಗ ತೂತಾಗಿದೆ ಎನ್ನುವ ಹಾಗೆ 😀
Read my thesis. It answers all your questions on Vachana and Lingayat religion.
ಯಾವ ರದ್ದಿ ಪೇಪರ್ ಅಂಗಡಿಯಲ್ಲಿ ಸಿಗುತ್ತೆ?
““ಡ್ಯಾನಿ ಪಿರೇರಾ” ಅಲ್ಲ, ಈ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ.”
ಭದ್ರಾವತಿ ಅವರೇ, ನಿಲುಮೆಯಲ್ಲಿ ನಮೋ ಸೈಬರ್ ಸೇನೆಯ ಕಾಲಾಳುಗಳು ಫೇಕ್ ಐಡಿ ಬಳಸಿ ಬರೆಯುತ್ತಲೇ ಬಂದಿದ್ದಾರೆ. ಈ ಪಿರೆರಾ ಕೂಡ ಅಸಲಿಯಲ್ಲಿ ಒಬ್ಬ ವೈದಿಕ ವಟು ಆಗಿದ್ದರೆ ಆಶ್ಚರ್ಯವೆನಿಲ್ಲಾ.
[[ಭದ್ರಾವತಿ ಅವರೇ, ನಿಲುಮೆಯಲ್ಲಿ ನಮೋ ಸೈಬರ್ ಸೇನೆಯ ಕಾಲಾಳುಗಳು ಫೇಕ್ ಐಡಿ ಬಳಸಿ ಬರೆಯುತ್ತಲೇ ಬಂದಿದ್ದಾರೆ. ಈ ಪಿರೆರಾ ಕೂಡ ಅಸಲಿಯಲ್ಲಿ ಒಬ್ಬ ವೈದಿಕ ವಟು ಆಗಿದ್ದರೆ ಆಶ್ಚರ್ಯವೆನಿಲ್ಲಾ.]]
ಶೇಟ್ಕರ್ ಅವರೇ,
ಇಲ್ಲಸಲ್ಲದ ಆರೋಪ ಮಾಡುವುದರಲ್ಲೇ ನೀವು ಕಾಲ ಕಳೆಯುತ್ತೀರಲ್ಲ, ನಿಮಗೆ ಬೇರೆ ಕೆಲಸವೇ ಇಲ್ಲವೇ!?
ಅರ್ಥಪೂರ್ಣವಾದ ಒಂದು ವಾಕ್ಯವನ್ನೂ ನೀವು ಇಲ್ಲಿಯವರೆಗೆ ಬರೆದಿಲ್ಲ.
ಮಾತೆತ್ತಿದರೆ ಬ್ರಾಹ್ಮಣ್ಯ, ವೈದಿಕ, ಇತ್ಯಾದಿ ಮಾತನಾಡಿ ವಿಷವನ್ನು ಕಾರುವುದು.
ಕಡೆಗೆ “Fake Id” ಎಂದು ಕೂಗಾಡಿ ಪಲಾಯನಗೈಯ್ಯುವುದು.
ಇಲ್ಲಿ ಲೇಖನ ಬರೆಯುವವರಾಗಲೀ, ಪ್ರತಿಕ್ರಿಯೆ ಬರೆಯುವವರಾಗಲೀ, ಏತಕ್ಕಾಗಿ Fake Id ಬಳಸಬೇಕು!?
ನೀವು “ಕಳ್ಳನ ಮನಸ್ಸು ಹುಳ್ಳಹುಳ್ಳಗೆ” ಎನ್ನುವಂತೆ ಆಡುತ್ತಿರುವಿರಿ.
ಈ ಕೆಳಗಿನ ಕೊಂಡಿ ಓದಿ, ಡ್ಯಾನಿ ಪಿರ್ರೇರಾ ಅವರ ಕುರಿತಾಗಿ ತಿಳಿಯುತ್ತದೆ ಮತ್ತು ಅವರೇನೂ ನಿಮ್ಮಂತೆ Fake ಅಲ್ಲ ಅನ್ನುವುದು ಸಾಬೀತಾಗುತ್ತದೆ:
http://tinyurl.com/lrz62hy
ಡ್ಯಾನಿ ಪಿರ್ರೇರಾ ವೈದಿಕ ವಟು ಅಲ್ಲ ಅಂತ ಪ್ರೂವ್ ಮಾಡ್ರೀ ಸರ. ಸಂಘ ಪರಿವಾರದ ಗರಡಿಯಲ್ಲಿ ಬೆಳೆದವರಲ್ಲವೋ ಇವರು?
[ಸಂಘ ಪರಿವಾರದ ಗರಡಿಯಲ್ಲಿ ಬೆಳೆದವರಲ್ಲವೋ ಇವರು?]
ಯಾಕೆ? ನಿಮ್ಮ ಹಾಗೆ ಜಾತಿ/ಧರ್ಮದ ಪುಂಗಿ ಬಾರಿಸುತ್ತಿಲ್ಲ..ದೇಶದ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಈ ಅನುಮಾನ ಬಂತೆ??:). ಬಹುಶ: ಮುಜಾಫರ್ ಅಸಾದಿ ಬಗ್ಗೆ ಕೂಡ ಇದೇ ಅನುಮಾನ ಬಂದಿರಬಹುದು ಈ ಪುಂಗಿ ಕಂಪನಿಗೆ!
ಫೇಕ್ ID ವೀರರು ಇಂಟರ್ ನೆಟ್ ನಲ್ಲಿ ಜನಜನಿತ. ಅವರ ಬಗ್ಗೆ ಕಡಿಮೆ ಹೇಳಿದಷ್ಟು ಒಳ್ಳೆಯದು. ಪ್ರತಿಯೊಬ್ಬನಿಗೂ ಹತ್ತರಿಂದ ಹದಿನೈದು id ಗಳಿವೆ ಎಂದು ಕೇಳಿದ್ದೇನೆ. ಅಷ್ಟು ಮಾತ್ರ ಅಲ್ಲ, ಈ ಫೇಕ್ ವೀರರ ಅಟ್ಟಹಾಸಕ್ಕೆ ಬೆಚ್ಚಿ, ಬೆದರಿ, ನೆಟ್ ಬಿಟ್ಟು ಓಡಿದವರು ಎಷ್ಟೋ?
ಹೌದ್ರೀ ಸರ! ಈ ಫೇಕ್ ಐಡಿ ವೀರರು ಅವಧಿಯಲ್ಲಿ ದರ್ಗಾ ಸರ್ ಅವರ ಮೇಲೆ ಸ್ನೈಪರ್ ಅಟಾಕ್ ಮಾಡಿ ಒಂದು ಒಳ್ಳೆಯ ಚರ್ಚೆಯ ಹಾದಿ ತಪ್ಪಿಸಿದರು. ಆದರೆ ದರ್ಗಾ ಸರ್ ಮಾತ್ರ ಇವರಿಗೆ ಬಗ್ಗದೆ ಬಹಳ ಸಂಯಮದಿಂದ ಇವರ ಎಲ್ಲಾ ಪ್ರಶ್ನೆಗಳಿಗೆ ಅರ್ಹವಾದ ಉತ್ತರವನ್ನೇ ಕೊಟ್ಟರು. ದರ್ಗಾ ಸರ್ ಈಸ್ ಗ್ರೇಟ್.
ಹಹಾ..ನಮ್ಮ ಸಾಹೇಬರು ಸಾಟಿಯಿಲ್ಲದ ಕಾಮಿಡಿ ಕಿಂಗ್..:). ಹೌದು ಅವಧಿಯಲ್ಲಿ ಅದನ್ನು ಓದಿದ ಎಲ್ಲರಿಗೂ ಗೊತ್ತೆ ಇದೆ ಆ ಲೇಖನದ ಗುಣಮಟ್ಟ..ಶತಮಾನದ ‘ಅತ್ಯುತ್ಕೃಷ್ಟ’ ಲೇಖನ ಅದು 🙂
ಮಿ. ವಿಜಯ್, ನಿಮ್ಮ ಬುದ್ಧಿ ಸ್ಥಿಮಿತದಲ್ಲಿದೆಯೇ? ದರ್ಗಾ ಸರ್ ಅವರು ಬಹಳ ಸಂಯಮದಿಂದ ಅವಧಿಯ ಚರ್ಚೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು ಅಂತ ಅಂದದ್ದು ಅದು ಹೇಗೆ ಕಾಮಿಡಿ ಆಯಿತು?? ಸತ್ಯವನ್ನೇ ಕಾಮಿಡಿ ಅಂತ ಹೇಳಿ ತಲೆ ಸವರುವ ನಿಮ್ಮ ವೈದಿಕ ಬುದ್ಧಿಗೆ ಏನನ್ನುವುದು?
ದರ್ಗಾ ಸರ್ ಅವರ ಲೇಖನದ ಬಗ್ಗೆ ನಿಮಗೆ ತಾರ್ಕಿಕ ತಾತ್ವಿಕ ಸಮಸ್ಯೆಗಳಿದ್ದರೆ ಅವುಗಳನ್ನು ಮುಂದಿಟ್ಟು ವಾದ ಮಾಡಿ. ಅದು ಬಿಟ್ಟು ದರ್ಗಾ ಸರ್ ಅವರ ತೇಜೋಭಂಗ ಮಾಡಲೇ ಬೇಕೆಂಬ ಹಠದಿಂದ ಅವರ ಲೇಖನದ ಬಗ್ಗೆ ಅಲ್ಲಸಲ್ಲದ್ದನ್ನು ಹೇಳಬೇಡಿ.
ಶೇಟ್ಕರ್ ಅವರಿಗೆ ದರ್ಗಾ ಅವರನ್ನು ಕಂಡರೆ ಆಗೋಲ್ಲ ಅನ್ನಿಸುತ್ತೆ! 😉
ಈ ಚರ್ಚೆಗೆ ಸಂಬಂಧಿಸದೇ ಇರುವ ದರ್ಗಾ ಅವರ ಹೆಸರನ್ನು ಎಳೆದುಕೊಂಡು ತರುವುದು, ಅವರ ‘ಗುಣಗಾನ’ ಮಾಡುವುದು, ಅವರು ಬೇರೆಲ್ಲೋ ಮಾಡಿರುವ ಚರ್ಚೆಯನ್ನು ಇಲ್ಲಿ ಪ್ರಸ್ತಾಪಿಸುವುದು, ಇಲ್ಲಿನವರ ಕೈಯ್ಯಲ್ಲಿ ದರ್ಗಾ ಅವರನ್ನು ಬೈಸುವುದು!!
ಯಾಕೆ ಸ್ವಾಮಿ, ಅವರ ಹೆಸರನ್ನು ಎಳೆದು ತಂದು ಬೈಸುವುದು?
ನಿಮಗೆ ಅವರ ಕುರಿತಾಗಿ ಗೌರವ ಇದ್ದರೆ, ಅದನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಿ.
ನೀವು ಬಾಯಿಗೆ ಬಂದಂತೆ ಮಾತನಾಡುವುದು ಮತ್ತು ನಂತರ ದರ್ಗಾ ಅವರ ಶಿಷ್ಯ ಎಂದು ಬಿಡುವುದು….! 😀
ದರ್ಗಾ ಅವರನ್ನು ಬೈಸುವುದಕ್ಕೇ ಹೀಗೆ ಮಾಡ್ತಿದೀರ ಅನ್ಸುತ್ತೆ. ಇಲ್ದೇ ಇದ್ರೆ ಹೀಗೆ ಮಾಡ್ತಿರಲಿಲ್ಲ.
ಪಾಪ, ಆ ದರ್ಗಾ ಅವರಿಗೆ ತಮ್ಮ ‘ಶಿಷ್ಯ’ನ ಪ್ರತಾಪ ತಿಳಿದರೆ, ತಮ್ಮ ಶಿಷ್ಯ ಗಣದಿಂದ ಶೇಟ್ಕರ್ ಅವರ ಉಚ್ಚಾಟನೆ ಆಗುವುದು ಖಂಡಿತ! 😉
“ಈ ಚರ್ಚೆಗೆ ಸಂಬಂಧಿಸದೇ ಇರುವ ದರ್ಗಾ ಅವರ ಹೆಸರನ್ನು ಎಳೆದುಕೊಂಡು ತರುವುದು”
ಈ ಕೆಲಸ ಮಾಡುವುದರಲ್ಲಿ ನಿಮ್ಮ ವಿಜಯ್ ಪೈ ನಿಸ್ಸೀಮರು, ನಾನಲ್ಲ. ಫೇಕ್ ಐಡಿ ವೀರರ ಬಗ್ಗೆ ಭದ್ರಾವತಿ ಅವರು “ಈ ಫೇಕ್ ವೀರರ ಅಟ್ಟಹಾಸಕ್ಕೆ ಬೆಚ್ಚಿ, ಬೆದರಿ, ನೆಟ್ ಬಿಟ್ಟು ಓಡಿದವರು ಎಷ್ಟೋ” ಅಂತ ಹೇಳಿದರಲ್ಲ, ಅದಕ್ಕೆ ಪ್ರತಿಕ್ರಿಯಿಸಿದ್ದೇನೆ. ದರ್ಗಾ ಸರ್ ಅವರು ಫೇಕ್ ವೀರರ ಅಟ್ಟಹಾಸಕ್ಕೆ ಬೆಚ್ಚಿ, ಬೆದರಿ, ನೆಟ್ ಬಿಟ್ಟು ಓಡಿಹೋಗಲಿಲ್ಲ; ಅವರು ಬಹಳ ಸಂಯಮದಿಂದ ಫೇಕ್ ವೀರರನ್ನು ಎದುರಿಸಿದರು ಅಂತ ಹೇಳಿದ್ದೇನೆ ಅಷ್ಟೇ. ದರ್ಗಾ ಸರ್ ಅವರನ್ನು ಬೈಸುವುದಕ್ಕೇ ಹೀಗೆ ಮಾಡ್ತಿದ್ದೇನೆ ಎಂಬುದು ನಿಮ್ಮ ದುರಾಲೋಚನೆ ಕುತರ್ಕ ಸುಳ್ಳಿನ ಕಂತೆ.
ಇಬ್ಬರ ನಡುವೆ ತಂದಿಡುವುದು ಇವರ ಪುರಾತನ ಶೈಲಿಯಲ್ಲವೇ Mr.Nagshetty Shetkar. I think you know this very well
ಒಹೊ..ಈಗ ಈ ಮೇಲಿನ ಸಾಹೇಬರು ಉರಿಯುವ ಬೆಂಕಿಗೆ ಗಾಳಿ ಹಾಕುವ ‘ಕಾಯಕ’ ಪ್ರಾರಂಭ ಮಾಡಿದಂತಿದೆ. ಒಳ್ಳೆ ಜೊತೆ! ಓತಿಕ್ಯಾತ ಮತ್ತು ಬೇಲಿಗೂಟ!!
ಶೇಟ್ಕರ್ ಅವರೇ,
ಬರೇ ಈ ಚರ್ಚೆ ಮಾತ್ರವಲ್ಲ, ಎಲ್ಲಾ ಚರ್ಚೆಯಲ್ಲೂ ನೀವು ದರ್ಗಾ ಅವರ ಹೆಸರು ಎಳೆದು ತಂದಿದ್ದೀರಿ.
ಪ್ರಶ್ನೆ ಕೇಳಿದ ಕೂಡಲೇ, ದರ್ಗಾ ಅವರಿಗೆ ಪತ್ರ ಬರೆಯಿರಿ, ಎಂದೆಲ್ಲಾ ಹೇಳುವಿರಿ.
ನಿಮ್ಮ ಎಲ್ಲಾ ಚರ್ಚೆಯಲ್ಲೂ ದರ್ಗಾ ಅವರ ಹೆಸರನ್ನು ಮೊದಲು ಪ್ರಸ್ತಾಪಿಸುವವರು ನೀವೇ!
ದರ್ಗಾ ಅವರಿಗೆ ಬೇಕಾದರೆ, ಅವರು ಬಂದು ಚರ್ಚೆಯಲ್ಲಿ ಭಾಗವಹಿಸುತ್ತಾರೆ.
ನೀವ್ಯಾಕೆ ಪ್ರತಿ ಚರ್ಚೆಯಲ್ಲೂ ಅವರ ಹೆಸರನ್ನು ಇಲ್ಲಿಗೆ ಎಳೆದು ತರೋದು?
ನಿಮಗೆ ಚರ್ಚೆಯಲ್ಲಿ ಉತ್ತರಿಸುವ ತಾಕತ್ತಿಲ್ಲ; ನಿಮ್ಮ ಬಳಿ ಚರ್ಚೆಯಲ್ಲಿ ಮಾತನಾಡಲು ವಿಷಯವಾಗಲೀ, ತರ್ಕವಾಗಲೀ ಇಲ್ಲ.
ಹೀಗಾಗಿ, ಏನೇನೋ ಹೇಳ್ತೀರಿ, ದರ್ಗಾ ಅವರನ್ನೇ ಕೇಳಿ ಅಂತೀರಿ…..!
ಚರ್ಚೆಯಲ್ಲಿ ಭಾಗವಹಿಸ್ತಿರೋದು ನೀವು. ಉತ್ತರಿಸಬೇಕಾದವರು ನೀವು. ದರ್ಗಾ ಅವರು ಉತ್ತರಿಸೋಲ್ಲ. ಯಾರೂ ದರ್ಗಾ ಅವರನ್ನ ಕೇಳೋದಿಲ್ಲ. ಬೇಕಾದರೆ ನೀವೇ ದರ್ಗಾ ಅವರನ್ನು ಇಲ್ಲಿಗೆ ಕರ್ಕೊಂಡು ಬಂದು ಚರ್ಚೆಯಲ್ಲಿ ಉತ್ತರಿಸಲು ಹೇಳಿ.
ಅದೆಲ್ಲಾ ಬಿಟ್ಟು, ‘ದರ್ಗಾ’ ಜಪ ಮಾಡಿದ್ರೆ, ಅವರನ್ನು ಬೈಸೋದು ಬಿಟ್ಟು ಇನ್ನೇನೂ ಸಾಧಿಸೋಲ್ಲ.
ಆಗ, ನಿಮಗೆ ದರ್ಗಾ ಅವರನ್ನ ಕಂಡ್ರೆ ಆಗೋಲ್ಲ ಅಂತಾನೇ ಎಲ್ಲಾ ತಿಳ್ಕೋಬೇಕಾಗೋತ್ತೆ.
ಇನ್ನು ನಿಮ್ಮಿಷ್ಟ!
ಶತಮಾನದ ‘ಅತ್ಯುತ್ಕೃಷ್ಠ’, ಹಿಂದೆ ಯಾರೂ ಬರೆಯದ, ಮುಂದೆ ಬರೆಯಲಾಗದ ಒಂದು ಲೇಖನವನ್ನು ವರ್ಣಿಸಲು ನೀವು ಕೇವಲ ಒಳ್ಳೆಯ ಎಂಬ ಶಬ್ದ ಉಪಯೋಗಿಸಿದ್ದು ಕಾಮಿಡಿ ತಾನೆ?? ಇದು ನೀವು ದರ್ಗಾ ಯುನಿವರ್ಸಿಟಿಯ ಅಜೀವ ವಿದ್ಯಾರ್ಥಿಯಾಗಿ ಮಾಡಿದ ಅಪಚಾರ ಎಂದೇ ನನ್ನ ಭಾವನೆ!
[[ಈ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ. ಕ್ರೈಸ್ತ ಹೆಸರು ಪಿರೇರ ಅಲ್ಲ, “ಪೆರೇರಾ”. ಪಾಪ, ಈ ಸೂಕ್ಷ್ಮತೆ ಗುರುತಿಸುವಲ್ಲಿ ಲೇಖಕ ಸೋತ.]]
ನಿಮ್ಮ ಪ್ರತಿಕ್ರಿಯೆ ಓದಿದಂತೆ, “ಹಳೇ ಸೇತುವೆ”ಯ ಅಬ್ದುಲ್ ನೀವೇನಾ ಎಂದು ಅನುಮಾನ ಬರುತ್ತಿದೆ!
ಲೇಖಕ ಕ್ರೈಸ್ತನಾದರೇನು, ಮುಸಲ್ಮಾನನಾದರೇನು?
ಆತನ ಮತವನ್ನಾಧರಿಸಿ, ಆತನ ಲೇಖನವನ್ನು ಒಪ್ಪಿಕೊಳ್ಳಬೇಕೆ ಇಲ್ಲವೇ ಎಂದು ನೀವು ವಾದಿಸುತ್ತಿರುವಂತಿದೆ!!
[[ದೇಶದ ಹಿತವನ್ನು ಒಟ್ಟಾರೆಯಾಗಿ ಕಾಯುವ ಪಕ್ಷಕ್ಕೆ ಮತ ನೀಡಿ ಈ ದೇಶವನ್ನು ಮುನ್ನಡೆಸಬೇಕಾದ ಕರ್ತವ್ಯ ಪ್ರತ್ಯೊಬ್ಬ ಭಾರತೀಯನಿಗಿದೆ]]
ಶತಪ್ರತಿಶತ ಒಪ್ಪುವಂತಹ ಮಾತು.
[[ಯಾವ ಕ್ಷೇತ್ರದಲ್ಲಿ ಮುಸ್ಲಿಮರು ಸಾಧನೆಗೈದಿಲ್ಲ?]]
ಮುಸಲ್ಮಾನರೆಲ್ಲರೂ ವಿದ್ಯಾವಂತರಾಗಬೇಕು, ಉತ್ತಮ ಸಾಧನೆಗಳನ್ನು ಗೈಯ್ಯಬೇಕು, ಒಳ್ಳೆಯ ಬದುಕನ್ನು ಬದುಕಬೇಕು.
ಆದರೆ, ಕಳೆದ 65 ವರ್ಷಗಳಿಂದ ಆಳುತ್ತಿರುವ ಸರಕಾರಗಳಲ್ಲಿ ಹೆಚ್ಚಿನವು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮುಸಲ್ಮಾನರಿಗೆ ಆಮಿಷಗಳನ್ನು ತೋರಿಸಿದ್ದಾರೆಯೇ ಹೊರತು, ಅವರನ್ನು ಉದ್ದಾರ ಮಾಡುವ ಒಂದು ಕೆಲಸವನ್ನೂ ಮಾಡಿಲ್ಲ. ಮುಸಲ್ಮಾನರಿಗೆ ಕಾಂಗ್ರೆಸ್ ಅಗತ್ಯವಿಲ್ಲದಿರಬಹುದು. ಆದರೆ, ಕಾಂಗ್ರೆಸ್ಸಿಗೆ ಮುಸಲ್ಮಾನರ ಅಗತ್ಯವಿದೆ ಎನ್ನುವುದು ನಿಶ್ಚಿತ.
[ಆದರೆ ಬರಹದ ಧಾಟಿ,ಅದರ ಒಟ್ಟಾರೆ tone ಮಾತ್ರ ಇದರ “ಡ್ಯಾನಿ ಪಿರೇರಾ” ಅಲ್ಲ, ಈ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ. ಕ್ರೈಸ್ತ ಹೆಸರು ಪಿರೇರ ಅಲ್ಲ, “ಪೆರೇರಾ”. ಪಾಪ, ಈ ಸೂಕ್ಷ್ಮತೆ ಗುರುತಿಸುವಲ್ಲಿ ಲೇಖಕ ಸೋತ. ಇಷ್ಟು ಮಾತ್ರ ಅಲ್ಲ, ಲೇಖನದ ಹಲವೆಡೆ ಈ “ನ್ಯೂನತೆ” ಕಾಣುತ್ತಿದೆ. ನನ್ನ ಈ ಪ್ರತಿಕ್ರಿಯೆಗೆ ಬಹುಶಃ ಬರಬಹುದಾದ ಮರು ಪ್ರತಿಕ್ರಿಯೆ ನನ್ನ ಮಾತನ್ನು ಪುಷ್ಟೀಕರಿಸಲಿದೆ.]
ಅಬ್ದುಲ್..ನಿಮ್ಮಿಂದ ಈ ಮಟ್ಟದ ‘ನ್ಯೂನತೆ’ ಹುಡುಕುವಿಕೆ ನಿರೀಕ್ಷಿಸಿರಲಿಲ್ಲ.
ಇದೊಂಥರ..
– ಹೆಸರು ಅಬ್ದುಲ್ ಅಂತ ಇದೆ ಏನೊ ಹೌದು..ಆದರೆ ಗಡ್ಡ ಬಿಟ್ಟಿಲ್ಲ. ಬಹುಶ: ಮುಸಲ್ಮಾನ್ ಇರಲಿಕ್ಕಿಲ್ಲ ಅಂತ ‘ಎಲ್ಲ ಸಾಬರೂ ಗಡ್ಡ ಬಿಡಲೇಬೇಕು/ಬಿಡ್ತಾರೆ’ ಎಂಬ ಭ್ರಮೆಯಲ್ಲಿರುವ ವ್ಯಕ್ತಿ ಹೇಳಿದಂತೆ.
– ಹೆಸರು ಸಂಜಯ ಖಾನ ಅಂತೆ ಅದ್ಹೇಗೆ ಸಾಧ್ಯ ಎಂದು ಆ ಹೆಸರಿನ ಹಿನ್ನೆಲೆ ಗೊತ್ತಿಲ್ಲದವ ಕೇಳಿದಂತೆ.
ಮೂಲ ಕ್ರಿಶ್ಚಿಯನ್ ಹೆಸರುಗಳು ಸ್ಥಳೀಯ ಜನರ ಬಾಯಿಯಲ್ಲಿ ಬೇರೆಯೇ ರೂಪ ಪಡೆದುಕೊಂಡಿವೆ. ಸೆಬಾಸ್ಟಿಯನ್ –> ಬಸ್ತ್ಯಾಂವ್ , ಪೀಟರ್–> ಪೆದ್ರು, ಎ/ಇಮ್ಯಾನುಯೆಲ್ —> ಮುನವೆಲ್ ಹೀಗೆ ತಮಗೆ ಉಚ್ಚಾರಣೆಗೆ ಸುಲಭವೆನಿಸುವ ರೂಪ ಪಡೆದುಕೊಂಡಿವೆ. ನಾನು ಗಮನಿಸಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಕ್ರೈಸ್ತ ರಲ್ಲಿ ಇದು ಸಹಜ.
[ದೇಶದ ಹಿತವನ್ನು ಒಟ್ಟಾರೆಯಾಗಿ ಕಾಯುವ ಪಕ್ಷಕ್ಕೆ ಮತ ನೀಡಿ ಈ ದೇಶವನ್ನು ಮುನ್ನಡೆಸಬೇಕಾದ ಕರ್ತವ್ಯ ಪ್ರತ್ಯೊಬ್ಬ ಭಾರತೀಯನಿಗಿದೆ.]
ಇದು ಒಪ್ಪುವಂತದ್ದು. ಪಕ್ಷವಲ್ಲ ದೇಶ ಮುಖ್ಯ
ನರೇಂದ್ರ, ನಿಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆಯ ಅಗತ್ಯ ಇಲ್ಲ. ಆದರೂ ಬರೆಯುತ್ತಿದ್ದೇನೆ. ಅದೇ ಅಬ್ದುಲ್, ನಾನು ಅನುಮಾನ ಬೇಡ. ನನಗೆ ಸುತ್ತಿ ಬಳಸಿ ಮಾತನ್ನಾಡುವ, ಅಥವಾ ಮಲ್ಟಿಪಲ್ ಫೇಕ್ ಗುರುತಗಳನ್ನ ಇಟ್ಟುಕೊಂಡು ಬರೆಯುವ ಅಗತ್ಯವೂ ಇಲ್ಲ. ಹಾಗೆಯೇ ನಾನೇನೂ ದೊಡ್ಡ ಮಟ್ಟದ ಬರಹಗಾರನೂ ಅಲ್ಲ. ನಿಮ್ಮಂಥ ಸಹೃದಯಿಗಳು ಪ್ರೋತ್ಶಾಹಿಸಿದ ಕಾರಣ ಬರೆಯುವ ಹುಮ್ಮಸ್ಸು ನನ್ನಲ್ಲಿ. ನಾನು ಲೇಖನ ಬರೆದ ವ್ಯಕ್ತಿಯ ಗುರುತಿನ ಬಗ್ಗೆ ಮಾತ್ರ ಬರೆದು ಸುಮ್ಮನಾಗಿದ್ದಾರೆ ನನ್ನ ಉದ್ದೇಶದ ಬಗ್ಗೀ ಅನುಮಾನ ಪಡಬಹುದಿತ್ತು. ಆದರೆ, ಮುಂದ್ವರಿದು ನಾನು ನನ್ನ ಅನಿಸಿಕೆಗಳನ್ನು ಬರೆದು, ಅದರಲ್ಲಿರುವ ಕೆಲವು ಅಂಶಗಳನ್ನು ಒಪ್ಪುವ ಮೂಲಕ ನನಗೆ ನಾನೇ absolve ಮಾಡಿಕೊಂಡೆ.
ಭದ್ರಾವತಿ ಅವರೆ ನಿಮ್ಮ ಕೆಲವು ಮಾತುಗಳು ನನಗೆ ತುಂಬಾ ಹಿಡಿಸಿದವು. [[೮೦೦ ವರ್ಷ ಈ ದೇಶವನ್ನಾಳಿದ ಸಮುದಾಯಕ್ಕೆ ಈ ಕಾಂಗ್ರೆಸ್ಸಿನ ಅವಶ್ಯಕತೆಯಾದರೂ ಯಾಕೆ? ಮುಸ್ಲಿಮರ ಹಿನ್ನಡೆಗೆ ಮುಸ್ಲಿಮರೇ ಕಾರಣ]] [[ಯಾವ ಕ್ಷೇತ್ರದಲ್ಲಿ ಮುಸ್ಲಿಮರು ಸಾಧನೆಗೈದಿಲ್ಲ? ನಮಗೆ ಯಾವ ಪಕ್ಷದ ಕೃಪಾಕಟಾಕ್ಷ ವೂ ಬೇಕಿಲ್ಲ. “ಎಲ್ಲಿಯವರೆಗೆ ಒಂದು ಸಮುದಾಯ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಲು ಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ದೇವರು ಅವನಿಗೆ ಸಹಾಯ ಮಾಡಲಾರ” ಪವಿತ್ರ ಕುರ್’ಆನಿನ ಈ ಮುತ್ತಿನಂಥ ಮಾತುಗಳ ಅರ್ಥ ಮುಸ್ಲಿಮರಿಗೆ ಇದೆಯೇ?]] ಮುತ್ತಿನಂಥ ಮಾತುಗಳಿವು. ಇವೇ ಮಾತುಗಳನ್ನು ದಲಿತ ವಿದ್ಯಾವಂತರೂ ಮುಸ್ಲೀಂ ವಿದ್ಯಾವಂತರೆಲ್ಲ ಚನ್ನಾಗಿ ತಿಳಿದುಕೊಂಡಿದ್ದರೆ ಈ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಯಾರದೋ ಮೇಲೆ ಗೂಬೆ ಕೂರಿಸಿ ಯಾರನ್ನೋ ಎತ್ತಿ ಕಟ್ಟಿ ಈ ದೇಶವನ್ನು ಹಳ್ಳ ಹಿಡಿಸಲು ಸಾಚಾರ್ ಸುಡುಗಾಡು ಸುಟ್ಟು ಸಮಿತಿ ಅದು ಇದು ಎಂದೆಲ್ಲ ಹೇಳುತ್ತಾ ಸದಾ ಒಬ್ಬರನ್ನು ಇನ್ನೋಬ್ಬರು ಸಂಶಯದಿಂದ ನೋಡುತ್ತಲೇ ಇರುವಂತೆ ಮಾಡುವ ಈ ದೇಶದ ರಾಜಕೀಯದವರು ಅನಾದಿ ಕಾಲದಿಂದಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಲೇ ಬಂದಿದ್ದಾರೆ. ಇನ್ನು ಹಿಂದು ಎಡಬಿಡಂಗಿಗಳು ಇದಕ್ಕೆ ಉಪ್ಪು ಖಾರ ಹಚ್ಚಿ ವೈಭವೀಕರಿಸುತ್ತಾರೆ. ಮಾಧ್ಯಾಮವೂ ಇತ್ತೀಚೆಗೆ ಇದರಲ್ಲಿ ಶಾಮೀಲಾಗಿದೆ. ಸರಿಯಾಗಿ ಸಮಸ್ಯೆಯ ಮೂಲ ಅರಿತು ಹೇಳಿದ ನಿಮಗೆ ಒಂದು ನಮನ. ಹಾಗೆ ವ್ಯಕ್ತಿಯ ಧರ್ಮ ಮುಖ್ಯವಲ್ಲ. ಆತನ ವಿಚಾರವು ಮುಖ್ಯವಾಗಬೇಕು.
[[ನರೇಂದ್ರ, ನಿಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆಯ ಅಗತ್ಯ ಇಲ್ಲ. ಆದರೂ ಬರೆಯುತ್ತಿದ್ದೇನೆ. ಅದೇ ಅಬ್ದುಲ್, ನಾನು ಅನುಮಾನ ಬೇಡ.]]
😀
[[ನಾನು ಲೇಖನ ಬರೆದ ವ್ಯಕ್ತಿಯ ಗುರುತಿನ ಬಗ್ಗೆ ಮಾತ್ರ ಬರೆದು ಸುಮ್ಮನಾಗಿದ್ದಾರೆ ನನ್ನ ಉದ್ದೇಶದ ಬಗ್ಗೀ ಅನುಮಾನ ಪಡಬಹುದಿತ್ತು. ಆದರೆ, ಮುಂದ್ವರಿದು ನಾನು ನನ್ನ ಅನಿಸಿಕೆಗಳನ್ನು ಬರೆದು, ಅದರಲ್ಲಿರುವ ಕೆಲವು ಅಂಶಗಳನ್ನು ಒಪ್ಪುವ ಮೂಲಕ ನನಗೆ ನಾನೇ absolve ಮಾಡಿಕೊಂಡೆ.]]
ಆದರೆ, ಲೇಖಕನ ಜಾತಿ-ಮತದ ಚರ್ಚೆಯ ಅಗತ್ಯವಿರಲಿಲ್ಲ ಅಲ್ಲವೇ?
ಲೇಖಕರು ಬರೆದಿರುವ ಲೇಖನದ ವಿಷಯಕ್ಕೂ ಮತ್ತು ಲೇಖಕರ ಮತಕ್ಕೂ ತಳಕು ಹಾಕಿದಂತಾಯಿತಲ್ಲವೇ?
ಲೇಖನವನ್ನು ಓದುವಾಗ, ಲೇಖಕನ ಮತ ಯಾವುದೆಂದು ತಿಳಿಯುವ ಕುತೂಹಲ, ನಮ್ಮನ್ನು ಪೂರ್ವಾಗ್ರಹರನ್ನಾಗಿ ಮಾಡಬಹುದಲ್ಲವೇ?
ಶೇಟ್ಕರ್ ಅವರಂತೂ ಹೀಗೆ ಬರೆದಿದ್ದಾರೆ:
[[ಡ್ಯಾನಿ ಪಿರ್ರೇರಾ ವೈದಿಕ ವಟು ಅಲ್ಲ ಅಂತ ಪ್ರೂವ್ ಮಾಡ್ರೀ ಸರ. ಸಂಘ ಪರಿವಾರದ ಗರಡಿಯಲ್ಲಿ ಬೆಳೆದವರಲ್ಲವೋ ಇವರು?]]
ಅಂದರೆ, ಲೇಖನದ ವಿಷಯಕ್ಕಿಂತ, ಲೇಖಕನು ಯಾವ ಗುಂಪಿಗೆ ಸೇರಿದವರು, ಅವರ ಜಾತಿ ಯಾವುದು, ಅವರ ಮತ ಯಾವುದು, ಇತ್ಯಾದಿಗಳೇ ಮುಖ್ಯವಾಗಿಬಿಟ್ಟರೆ……!! ಇದಲ್ಲವೇ ಜಾತೀಯತೆ, ಮತಾಂಧತೆ!?
ನೀವು ಮುಂದುವರೆದು, ನಿಮಗೆ ಯಾವ ಅಂಶ ಹಿಡಿಸಲಿಲ್ಲವೆನ್ನುವುದನ್ನೂ ಬರೆದಿದ್ದೀರಿ. ಈ ರೀತಿ ವಸ್ತುನಿಷ್ಠವಾಗಿ ಬರೆದರೆ ಮಾತ್ರ ಅರ್ಥಪೂರ್ಣ ಚರ್ಚೆ ನಡೆಸಬಹುದು.
ಕೇವಲ ಲೇಖಕನ ಹಿನ್ನೆಲೆ, ಆತನ ಗುಂಪು, ಆತನ ಜಾತಿ-ಮತ ಇತ್ಯಾದಿಗಳನ್ನೇ ಎತ್ತಿಹಿಡಿದು ಮಾತನಾಡುತ್ತಿದ್ದರೆ, ಲೇಖನದ ವಿಷಯ ಮೂಲೆಗುಂಪಾಗುತ್ತದೆ.