ಹೀಗೊಂದು ಊರಿನ ಕತೆ:
– ಬಾಲಚಂದ್ರ ಭಟ್
ಅದೊಂದು ಊರು. ಬಡವ-ಬಲ್ಲಿದ, ಬುದ್ದಿವಂತ, ದಡ್ಡ ಎಲ್ಲರೂ ಇದ್ದ ಊರು. ಆ ಊರಿಗೆ ದರೋಡೆಕೋರರ ಕಾಟ. ಹಿಂಸೆ, ಬಲಾತ್ಕಾರ, ದೋಚುವದು ಇವೆಲ್ಲವನ್ನೂ ಮಾಡುತ್ತಿದ್ದರು.ದರೋಡೆಕೊರರನ್ನು ಎದುರಿಸುವದಕ್ಕೆ ಭಯಪಟ್ಟ ಕೆಲವು ಚಿಂತಕರು ದರೋಡೆಕೋರರ ಜೊತೆ ಸಂಧಾನಕ್ಕಿಳಿಯುವ ದಾರಿಯನ್ನು ಯೋಚಿಸಿದರು. ಕೆಲವು ಸಾಹಸಿಗಳು ದಾಳಿಕೋರರಿಗೆ ಅವರದೇ ರೀತಿಯಲ್ಲಿ ಉತ್ತರಿಸುವ ಯೋಜನೆ ಹಾಕಿಕೊಂಡರು.ಒಮ್ಮೆ ದರೋಡೆಕೋರರು ಹಳ್ಳಿಗೆ ಧಾಳಿಯಿಟ್ಟರು. ಚಿಂತಕರು ವಿದ್ಯಾವಂತರೇನೊ ಹೌದು. ಆದರೆ ದರೋಡೆಕೋರರನ್ನು ಎದುರಿಸುವ ಧೈರ್ಯ ಇರಲಿಲ್ಲ. ಹೆದರಿ ಬಾಗಿಲು ಹಾಕಿಕೊಂಡರು.ದರೋಡೆಕೋರರು ಬಗ್ಗದಿದ್ದಾಗ ಚಿಂತಕರು ಊರಿನ ಸಂಪತ್ತನಲ್ಲಿ ಕೆಲವು ಭಾಗವನ್ನು ಹಂಚಿಕೊಳ್ಳುವ ಒಪ್ಪಂದದೊಂದಿಗೆ ಪ್ರಾಣವನ್ನು ಉಳಿಸಿಕೊಂಡರು. ಆದರೆ ಊರಿನ ಕೆಲ ಸಾಹಸಿಗಳು ದರೋಡೆಕೋರರ ಜೊತೆ ಹೋರಾಡಿದರು. ಎರಡೂ ಕಡೆ ಪ್ರಾಣ ಹಾನಿ ಸಂಭವಿಸಿತು.ಇದೆಲ್ಲದಕ್ಕೂ ಚಿಂತಕರ ಮನೆಯ ಮುಚ್ಚಿದ ಬಾಗಿಲುಗಳೆ ಪ್ರೇಕ್ಷಕರಾದವು. ಹಾಗೂ ಹೀಗೂ ಊರಿನ ಹೋರಾಟಗಾರರು ದರೋಡೆಕೋರರನ್ನು ಬಗ್ಗು ಬಡಿದರು. ಕೆಲವು ದರೋಡೆಕೋರರು ಓಡಿ ಹೋದರು. ಸೆರೆಸಿಕ್ಕ ದರೋಡೆಕೋರರನ್ನು ತಳಿಸಲಾಯಿತು. ಊರು ದರೋಡೆಕೋರರಿಂದ ಮುಕ್ತಿ ಹೊಂದಿ ಉಸಿರಾಡುವಂತಾಯಿತು. ಊರಿನ ವಾತಾವರಣ ತಿಳಿಯಾಯಿತು.ಈಗ ಚಿಂತಕರು ಮನೆಯ ಬಾಗಿಲನ್ನು ತೆರೆದು ಹೊರಬಂದರು. ಊರಿನ ಜನರಿಂದ ತಳಿಸಲ್ಪಡುತ್ತಿದ್ದ ದರೋಡೆಕೋರರನ್ನು ನೋಡಿದರು. ಕೂಡಲೇ ದರೋಡೆಕೋರರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ವಿರೋಧಿಸಿದರು. ಈ ಊರಿನಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಆಪಾದಿಸಿದರು. ಮಾನವೀಯತೆಯ ಪಾಠ ಹೇಳಿದರು.ಅವರನ್ನು ಬಲಿಪಶುಗಳೆಂದು ಸಂತೈಸಲಾಯಿತು. ಕ್ರಮೇಣ ದರೋಡೆಕೋರರನ್ನು ಸಾಮಜಿಕ ವಲಯದಲ್ಲಿ ಸಂತೈಸುವದು, ಅವರ ಹಕ್ಕು, ಅಭಿವೃದ್ಧಿ, ಕಲ್ಯಾಣಗಳ ಕುರಿತ ಆಂದೋಲನಗಳು ಆ ಊರಿನ ಸಮಾಜಮುಖಿ ಬೆಳವಣಿಗೆಯಾಗಿ ಮಾರ್ಪಾಟಾಯಿತು. ಆ ಊರಿನ ಕೆಲವು ಭಾಗಗಳನ್ನು ದರೋಡೆಕೋರರಿಗೆ ಸ್ವತಂತ್ರವಾಗಿ ಬಿಟ್ಟುಕೊಡುವಂತೆ ಒತ್ತಡ ಹೇರಿದರು. ದರೋಡೆಕೋರರಿಗಾಗಿಯೇ ಅವರಿಗೆ ಒಪ್ಪಿತವಾದ ನ್ಯಾಯಾಂಗಕ್ಕೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಲಾಯಿತು. ದರೋಡೆಕೋರರನ್ನು ವಿರೋಧಿಸುವವರನ್ನು ಮನುಷ್ಯ ವಿರೋಧಿ ಎಂದು ಕರೆಯಲಾಯಿತು. ಆ ಊರಿನ ರಾಜಕೀಯ ಹಿತಾಸಕ್ತಿ ಹಾಗೂ ಪೈಪೋಟಿಯೆ ಇವೆಲ್ಲಕ್ಕೂ ಕಾರಣ ಎನ್ನುವದು ನಿರ್ವಿವಾದವಾಗಿತ್ತು.
ಇಷ್ಟಕ್ಕೆ ಮುಗಿಯಲಿಲ್ಲ…
ಈ ಸಾಮಾಜಿಕ ಬದಲಾವಣೆ ಆ ಊರಿನ ಸಾಂಸ್ಕೃತಿಕ, ಐತಿಹಾಸಿಕ ಸಂಗತಿಗಳನ್ನು ಸಂಪೂರ್ಣ ದೋಚಿತ್ತು. ಬದಲಾಗಿ ಹೊಸದೊಂದು ಇತಿಹಾಸ ಹಾಗೂ ಸಾಮಾಜಿಕ ಚಿತ್ರಣ ತೆರೆಯಲ್ಪಟ್ಟಿತ್ತು ದರೋಡೆಕೋರರು ದೋಚಿದ್ದು ಸಾಮಾಜಿಕ ಅಸಮಾನತೆಯ ವಿರುದ್ಧ ಅವರ ಹೋರಾಟವಾಗಿತ್ತೆಂದೂ ಹೇಳಲಾಯಿತು. ಅದಕ್ಕೆ ಕಾರಣ ಆ ಊರಿನಲ್ಲಿ ಸಾವಿರಾರು ವರ್ಷಗಳಿಂದ ನಡೆಯಲ್ಪಟ್ಟಿದ್ದ ದೌರ್ಜನ್ಯವೇ ಕಾರಣ ಎನ್ನಲಾಯಿತು. ಅದಕ್ಕೆ ಪೂರಕವಾಗಿ ಆ ಊರಿನಲ್ಲಿ ಪ್ರಚಲಿತವಿದ್ದ ಜಾನಪದ ಕಥೆಗಳು,ಗೀತೆಗಳು, ರೂಢಿಯಲ್ಲಿ ಬಳಕೆಯಲ್ಲಿದ್ದ ಗಾದೆಮಾತುಗಳು ಸಾಕ್ಷಗಳಾದವು.ಆ ಊರಿನ ಗ್ರಾಮ್ಯ ಕಥೆಗಳಲ್ಲಿ ಹೇಳಲ್ಪಟ್ಟ ಸನ್ನಿವೇಶ ವೈಪರೀತ್ಯಗಳು, ಜಗಳ,ಭಿನ್ನಾಭಿಪ್ರಾಯಗಳನ್ನು ಕ್ರಾಂತಿಯೆಂದು ಬಿಂಬಿಸಿ, ಆ ಕ್ರಾಂತಿಯು ಫ್ರಾನ್ಸ್ ಹಾಗೂ ರಷ್ಯಾದಲ್ಲಿ ನಡೆದ ಕ್ರಾಂತಿಗೆ ಸಮಾನವಾದುದೆಂದು ಚಿತ್ರಿಸಲಾಯಿತು. ಆ ಊರಿನಲ್ಲಿ ಪ್ರಚಲಿತವಾಗಿದ್ದ ಜಾನಪದ ಕಥೆಗಳು, ಗೀತೆಗಳು ’ಐತಿಹಾಸಿಕ ದೌರ್ಜನ್ಯದ’ ಚಿತ್ರಣಕ್ಕೆ ಹೊಸ ಆಯಾಮವನ್ನು ಕೊಟ್ಟವು. ಕ್ರಮೇಣ ಆ ಜಾನಪದ ಕಥೆಗಳು ಇತಿಹಾಸದ ಕನ್ನಡಿಯಾಯಿತು.ಅಲ್ಲೆಲ್ಲೊ ಇದ್ದ ಸ್ತ್ರೀವಾದಿಗಳು ಈ ಜಾನಪದ ಸಾಹಿತ್ಯವು ಆ ಊರಿನಲ್ಲಾದ ಮಹಿಳೆಗಾದ ಅನ್ಯಾಯವನ್ನು ಬಿಂಬಿಸುತ್ತದೆ ಎಂದರು. ಆ ಜಾನಪದ ಕಥೆಗಳಿಗೆ ವ್ಯತಿರಿಕ್ತವಾದ ಸಾಹಿತ್ಯಗಳು ಬಂಡಾಯ ಸಾಹಿತ್ಯವೆಂಬಂತೆ ಹೊರಬಂದವು. ಜಾನಪದ ಕತೆಗಳಲ್ಲಿ ಚಿತ್ರಿತವಾದ ’ವ್ಯಕ್ತಿತ್ವದ’ ವಿರೋಧಾಭಾಸವೆನಿಸುವ ವ್ಯಕ್ತಿತ್ವದ ಕಲ್ಪನೆಗಳು ಹೊಸ ಸಾಹಿತ್ಯದ ಮೂಲಕ ಪಠ್ಯವಾದವು. ಇದನ್ನು ಆ ವಿವಿಧ ದೌರ್ಜನ್ಯಗಳ ವಿರುದ್ಧ ಹೋರಾಟದ ಧ್ಯೋತಕವೆಂಬಂತೆ ಸೃಷ್ಟಿಸಲಾಯಿತು. ಹಾಗೂ ಇದನ್ನು ಬರಹಗಾರನ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಆಧುನಿಕ ಮನೋಭಾವದ ಅಲೆಯೆಂಬಂತೆ, ದೌರ್ಜನ್ಯ ಹಾಗೂ ಹೆಪ್ಪುಗಟ್ಟಿದ ಸಮಾಜ ವಿರುದ್ಧ ನಿಂತ ಚೈತನ್ಯವೆಂಬಂತೆ ಸ್ವೀಕೃತವಾಯಿತು. ಆದರೆ ಆ ಹಳೆಯ ಜಾನಪದ ಸಾಹಿತ್ಯಗಳ ಮೂಕ ಕಾಲ್ಪನಿಕ ವ್ಯಕ್ತಿ ಚಿತ್ರಣಗಳು ಬಹುಷಃ ಹೊಸ ಸಾಹಿತ್ಯದಲ್ಲಿ ಮೂಡಿಬಂದ ತಮ್ಮದೇ ಇನ್ನೊಂದು ಚಿತ್ರಣವನ್ನು ಕಲ್ಪಿಸಿಕೊಳ್ಳಲಾರದಷ್ಟು ಅತ್ಪ್ರೇಕ್ಷೆಯಾಗಿತ್ತೇನೊ ಈ ನವ ಸಾಹಿತ್ಯದಲ್ಲಿನ ನಿರೂಪಣೆ. ಇಂತಹ ಸಾಹಿತಿಗಳಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದವು ಎಂಬುದನ್ನು ಬೇರೆ ಹೇಳಬೇಕಿಲ್ಲ. ಈ ಎಲ್ಲವನ್ನೂ ವಿರೋಧಿಸುವವನನ್ನು ಫ್ಯಾಸಿಸ್ಟ್ ಎಂದು ಕರೆಯಲಾಯಿತು.
ಇದಿಷ್ಟು ಆ ಊರಿನ ಪ್ರಚಲಿತ ವಿದ್ಯಾಮಾನ.
ಆ ಊರಿನಲ್ಲಿ ಎಷ್ಟೊ ವರ್ಷಗಳಿಂದ ಬದುಕಿದ್ದ ಒಣ ಮರವನ್ನು ಕೇಳಿದೆ. “ಈ ಊರು ಮೊದಲು ಹೇಗಿತ್ತು? ಜನ ಹೇಗಿದ್ದರು” ಎಂದು.
ಅದಕ್ಕೆ ಮರ ಹೇಳಿತು. “ಈ ಊರಿನಲ್ಲಿ ’ಹೀಗೆ’ ಇರಬೇಕಿತ್ತೆಂದು ಇರಲಿಲ್ಲ. ಹಾಗಾಗಿ ’ಹೀಗೆಯೇ’ ಇತ್ತೆಂದು ಹೇಳಲಾರೆ. ಹೇಗೆ ಬೇಕೊ ಹಾಗಿತ್ತು. ಆದರೆ ಈಗ ಈ ಊರು ವರ್ತಮಾನದ ರಾಜಕೀಯ ಅಗತ್ಯತೆಯನ್ನು ಇತಿಹಾಸದಲ್ಲಿಟ್ಟು ರೂಪಿಸುತ್ತಿದೆ” ಎಂದಿತು.
ಕತೆ ಮುಗಿಯಲಿಲ್ಲ. ಮುಂದುವರಿಯುತ್ತಲೇ ಇದೆ…
ಚಿತ್ರ ಕೃಪೆ : freemusicmates.blogspot.com
1500 years story… good story.
ಧನ್ಯವಾದಗಳು ನಾಗರಾಜ್
ಬರಿ ಓಳು.
ಈ ಕತೆಯನ್ನು ಬರೆಯುವಾಗ ನನ್ನ ಮನಸ್ಸಿನ ತುಂಬೆಲ್ಲಾ ನೀವೆ ರೂಪದರ್ಶಿಯಾಗಿ ತುಂಬಿಕೊಂಡಿದ್ದೀರಿ ಶೆಟ್ಕರ್. ಇದಕ್ಕೆ ನೀವೆ ಪ್ರೇರಣೆ. 🙂
He he! You can give Mr. Vijay a run for money as standup comedian, Vaidik brand.
ದರ್ಗಾ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ..ಲಡಾಯಿ ಲದ್ದಿಯ ಸೇವನೆ. ಸರಿಯಾಗಿದ್ದು ಉಲ್ಟಾ, ಉಲ್ಟಾ ಆಗಿದ್ದು ಸರಿ ಕಾಣುವುದು ತುಂಬಾ ಸಹಜ . :). ಸರಕಾರದ ಎಡ ಗಂಜಿ ಗಿರಾಕಿಗಳ ಸ್ಕಿಮಿನಲ್ಲಿ ಕನ್ನಡಿಯೇನಾದರೂ ಸಿಕ್ಕರೆ ತಂದಿಟ್ಟುಕೊಳ್ಳಿ..ಉಪಯೋಗವಾಗುತ್ತದೆ!
He he! bhattarannu hogaliddu paigalige marmaaghaatavuntu maadide!
ನಮ್ಮ ಪ್ರಿಯ ಗುರುಗಳ ಮಿದುಳಿಗೆ ಹೊಡೆತ ಬಿದ್ದಿರುವ ಸೂಚನೆ..ಶೀಘ್ರ ಗುಣಮುಖರಾಗಿ ಎಂಬ ಹಾರೈಕೆ ! 🙂
“ಜನರನ್ನು ಬಾಧಿಸುತ್ತಿರುವ ಯಾವ ಜ್ವಲಂತ ಪ್ರಶ್ನೆಗಳನ್ನು ಮೋದಿ ಈ ವರೆಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲೆ ಹೋಗಲಿ ಅಲ್ಲಿ ಅತ್ಯಂತ ಕೀಳುದರ್ಜೆಯ ಭಾಷಣ ಮಾಡುವ ಈತ ಬಾಯಿಗೆ ಬಂದಂತೆ ಮಾತಾಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾನೆ. ನೆಹರೂ ಬೇಡ ಕನಿಷ್ಠ ವಾಜಪೇಯಿಯನ್ನು ಪಕ್ಕಕ್ಕಿಟು ನೋಡಿದರೂ ಇಂಥವರು ನಮ್ಮ ಪ್ರಧಾನಿಯಾಗಬೇಕೆ! ಎಂದು ಅನಿಸದಿರದು.”
“ನರೇಂದ್ರ ಮೋದಿ ಹೆಸರಿಗೆ ಮಾತ್ರ ಪ್ರಧಾನಿ ಅಭ್ಯರ್ಥಿ. ಆತ ಅಧಿಕಾರಕ್ಕೆ ಬಂದರೆ ಅಂಬಾನಿ ಸೇರಿದಂತೆ ದೇಶದ ಕಾರ್ಪೊರೇಟ್ ಕಂಪೆನಿಗಳೇ ದೇಶವನ್ನು ಆಳುತ್ತವೆ. ಈ ಚುನಾವಣೆ ಅವರಿಗೆ ಒಂದು ಉದ್ದಿಮೆ ಇದ್ದಂತೆ. ಉದ್ದಿಮೆಯಲ್ಲಿ ಹಣ ಹೂಡಿ ನೂರುಪಟ್ಟು ಲಾಭ ಮಾಡಿಕೊಳ್ಳುವಂತೆ ಈ ಚುನಾವಣೆಯಲ್ಲಿ ಈ ಬಂಡವಾಳಿಗರು ಹಣ ಹೂಡಿಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ದಲ್ಲಾಳಿ ಮಾತ್ರ.”
http://ladaiprakashanabasu.blogspot.in/2014/03/blog-post_31.html
[ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಪರ್ಯಾಯವಾಗಿ ಈ ದೇಶವನ್ನು ಉದ್ದರಿಸಲು ನರೇಂದ್ರ ಮೋದಿ ಎಂಬ ಪವಾಡ ಪುರುಷ ಅವತರಿಸಿ ಬಂದಿದ್ದಾನೆ ಎಂದು ನಗಾರಿ ಬಾರಿಸುವ ಕಾರ್ಪೊರೇಟ್ ಮಾಧ್ಯಮಗಳು ಯುಪಿಎ ಸರಕಾರದ ನೀತಿಗಳಿಗೆ ಪರ್ಯಾಯವಾಗಿ ಧೋರಣೆ ಯನ್ನು ಪ್ರತಿಪಾದಿಸುತ್ತಿರುವ ಎಡಪಕ್ಷಗಳನ್ನು ಯಾಕೆ ಕಡೆಗಣಿಸಿವೆ.]
[ದೃಶ್ಯ ಮಾಧ್ಯಮಗಳ ಎಲ್ಲ ಸುದ್ದಿ ಚಾನೆಲ್‌ಗಳ ವಾರ್ತೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಒಂದೇ ಒಂದು ನಿಮಿಷ ಅವಕಾಶವನ್ನು ಯಾಕೆ ಕೊಡುತ್ತಿಲ್ಲ.]
ಛೆ..ಹೀಗೆಲ್ಲ ಅನ್ಯಾಯ ಮಾಡಬಾರದು..ನಮ್ಮ ಎಡಬಿಡಂಗಿಗಳ ಗೋಳಾಟ ನಾವು ಅರ್ಥ ಮಾಡಿಕೊಳ್ಳಬೇಕು.. 🙂
[“ಜನರನ್ನು ಬಾಧಿಸುತ್ತಿರುವ ಯಾವ ಜ್ವಲಂತ ಪ್ರಶ್ನೆಗಳನ್ನು ಮೋದಿ ಈ ವರೆಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ]
ಪಾಪ..ಈಗಾಗಲೇ ಉಲ್ಬಣಗೊಂಡಿರಬೇಕು..ಪಾಪ ಈ ಸಾಹೇಬರಿಗೆ ಆಲ್ಸರ್, ಪೈಲ್ಸ್ ಆಗಿದ್ದು ಮೋದಿಗೆ ಹೇಗೆ ಗೊತ್ತಾಗಬೇಕು..ಆದರೂ ಏನೇ ಅನ್ನಿ..ಅದು ಜ್ವಲಂತ ಸಮಸ್ಯೆಯೆ!!
Mr. Vijay, have you read April issue of Hosa Manushya magazine edited by senior socialist thinker Prof. D. S. Nagabhushana? Under able leadership of Prof. D. S. Nagabhushana several sensible and progressive minds like Prasanna, Rajeeva Taranath, HS Raghavendra Rao, GK Govinda Rao, Savita Nagabhushana have explained why they don’t want NaMo as PM. Read to expand your knowledge. Prof. Nagabhushana has written insightful editorial also read it Mr. Vijay. Don’t be a koopa mandooka.
ಹ್ಮ..ಮೊದಲು ಕೊಟ್ಟ ಉದಾಹರಣೆ ನಿಮ್ಮ ‘ವಿಶ್ವಕೋಶ’ದ್ದು. ಅವರ ಗೊಣಗಾಟವೇ ಭಾರತದ ಸಮಸ್ತರ ‘ತವಕ.ತಲ್ಲಣ’ ಎಂಬ ಭಾವನೆ ನಿಮಗೆ. ಲಡಾಯಿ ಲೇಖಕರನ್ನು ಜಾತಿಭಾವನೆಯಿಂದ ನೋಡುತ್ತೇವೆ ಎಂಬುದು ನಿಮ್ಮ ಕಾಮಾಲೆ ಕಣ್ಣಿಗೆ ಕಂಡು ಬಂದ ‘ಸತ್ಯ’. ಈಗ ಎರಡನೆಯ ಉದಾಹರಣೆ ನಾನು ಕೇಳಿರದ, ಆದರೆ ವಿಶ್ವಪ್ರಸಿದ್ಧ ‘ಹೊಸ ಮನುಷ್ಯ’ ಮ್ಯಾಗಝಿನ್ ದ್ದು. ಬ್ರಾಹ್ಮಣ ಜಾತಿಯವರು ಬರೆದಿದ್ದಾರೆ ಅಂದರೆ ನಂಬಿಬಿಡುತ್ತಾರೆ ಎಂಬ ನಿಮ್ಮ ಟಿಪಿಕಲ್ ಮೆಂಟಾಲಿಟಿಯಿಂದ ಅಳೆದು ಕೊಟ್ಟಂತದ್ದು!. ಗೊತ್ತಾಯಿತೆ ಈಗ ಕೂಪ ಮಂಡೂಕ ಬುದ್ಧಿ ಯಾರದ್ದು ಅಂತ??. ಶೀಘ್ರ ಗುಣಮುಖರಾಗಿ ಎಂಬ ಹಾರೈಕೆ 🙂
+1 yes. DSN is one of finest mind among us
ಅಷ್ಟೇ ಅಲ್ಲ, ಪ್ರೊ. ಡಿ ಎಸ್ ನಾಗಭೂಷಣ ಸಂಪಾದಿಸುತ್ತಿರುವ ಹೊಸ ಮನುಷ್ಯ ಪತ್ರಿಕೆಯು ಲಂಕೇಶ್ ಪತ್ರಿಕೆಯ ತರುವಾಯ ಕಾಲದಲ್ಲಿ ಬಂದ ಎಲ್ಲಾ ಕನ್ನಡ ಪತ್ರಿಕೆಗಳ ಸಮೂಹದಲ್ಲಿ ತನ್ನ ತತ್ವಪರತೆ ಹಾಗೂ ವಿಚಾರ ಪ್ರಖರತೆಯಿಂದ ಎದ್ದು ಅನನ್ಯವಾಗಿ ಕಾಣುತ್ತದೆ. ಬೆಸ್ಟ್ ಮ್ಯಾಗಜಿನ್ ಆಫ್ ಅವರ್ ಟೈಮ್ಸ್.
“senior socialist thinker Prof. D. S. Nagabhushana…….”?
ಯಾವ ಯುನಿವರ್ಸಿಟಿಯಲ್ಲಿ/ಕಾಲೇಜಲ್ಲಿ ಪಾಠ ಮಾಡ್ತಿದ್ರಪ್ಪ ಇವರು? ಕೊನೆ ಪಕ್ಷ ಅವರು ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿದ್ದರ?? ಮೊದಲಿಗೆ ನಿಮ್ಮ ಅಜ್ಞಾನ ಸರಿಪಡಿಸಿಕೊಂಡು ನಂತರ ಇಲ್ಲಿ ಬಿಟ್ಟಿ ಉಪದೇಶ ಕೊಡಿ.
“ಯಾವ ಯುನಿವರ್ಸಿಟಿಯಲ್ಲಿ/ಕಾಲೇಜಲ್ಲಿ ಪಾಠ ಮಾಡ್ತಿದ್ರಪ್ಪ ಇವರು?”
ಯೂನಿವರ್ಸಿಟಿಯಲ್ಲಿ ಪಾಠ ಮಾಡಿದವರು ಮಾತ್ರ ಪ್ರೊಫೆಸರ್ ಅನ್ನಿಸಿಕೊಳ್ಳುತ್ತಾರಾ?? ನಾಗಭೂಷಣ ಸರ್ ಅವರು ಲೋಹಿಯಾ ಚಿಂತನೆ ಬಗ್ಗೆ ಹಲವಾರು ಸಮ್ಮರ್ ಸ್ಕೂಲ್ ನಡೆಸಿ ಅವುಗಳಲ್ಲಿ ಸಮಾಜವಾದ ತತ್ವ ಹಾಗೂ ಆಚರಣೆಗಳ ಬೋಧನೆಯನ್ನು ವಿದ್ಯಾರ್ಥಿಗಳಿಗೆ ಮಾಡಿದ್ದಾರೆ, ಹಾಗೂ ವಿದ್ಯಾರ್ಥಿಗಳಿಂದ ಪ್ರೊಫೆಸರ್ ಅಂತ ಗೌರವದಿಂದ ಕರೆಸಿಕೊಂಡಿದ್ದಾರೆ.
ಸೊ, ಸಮ್ಮರ್ ಸ್ಕೂಲ್ ನಡೆಸಿ ಯಾರು ಬೇಕಾದ್ರೂ ಪ್ರೊಫೆಸರ್ ಅನ್ಸಕೊಳ್ಳಬಹುದು…. ತಮ್ಮಂತಹ ವಿತಂಡಿಗಳಿಂದ ಇನ್ಯಾವ ರೀತಿಯ ಸಮರ್ಥನೆ ಸಾಧ್ಯ.. ಯಾಕೆ, ಪ್ರೊಫೆಸರ್ ಅನ್ನಿಸ್ಕೊಂಡರೇನೇ ಗೌರವಾನಾ ಇಲ್ಲಾಂದ್ರೆ ಇಲ್ವಾ???? ಹಾಗೇನೆ ಡಾಕ್ಟ್ರು, ಜಸ್ಟೀಸ್, ಕ್ಯಾಪ್ಟನ್, ಕರ್ನಲ್, ಮುಂತಾಗಿ ಅನ್ನಿಸಿಕೊಳ್ಳಲು ಯಾವ ಯಾವ ರೀತಿಯ ಸಮ್ಮರ್ ,ವಿಂಟರ್, ಇತ್ಯಾಧಿ ಸ್ಕೂಲುಗಳನ್ನು ನಡೆಸ್ಬೇಕು ಅಂತ ಒಸಿ ಹೇಳ್ಬಿಡಿ ಸಿವಾ…
“ಹಾಗೇನೆ ಡಾಕ್ಟ್ರು, ಜಸ್ಟೀಸ್, ಕ್ಯಾಪ್ಟನ್, ಕರ್ನಲ್, ಮುಂತಾಗಿ ಅನ್ನಿಸಿಕೊಳ್ಳಲು ”
ಪ್ರಖ್ಯಾತ ಕ್ರಿಕೆಟ್ ದಾಂಡಿಗ ದಿಲೀಪ ವೆಂಗಸರ್ಕಾರ ಅವರು ‘ಕರ್ನಲ್’ ಎಂದು ಪ್ರೀತಿಯಿಂದ ಕ್ರಿಕೆಟ್ ವಲಯದಲ್ಲಿ ಕರೆಸಿಕೊಳ್ಳುತ್ತಿದ್ದರು.
ನಟ ರಾಜಕುಮಾರ್ ಅವರು ಅಭಿಮಾನಿಗಳಿಗೆ ಡಾಕ್ಟರ್ ರಾಜ್ ಅಲ್ಲವೇ?
ಭಾರತ ಕಂಡ ಅನನ್ಯ ಕ್ರಿಕೆಟಿಗ ಸೌರವ ಗಂಗೂಲಿ ಅವರನ್ನು ದಾದ ಎಂದು ಎಲ್ಲರೂ ಕರೆಯುವುದಿಲ್ಲವೇ?
ವಿತಂಡಿಗಳೇ, ಅವರಿಗೆ ಕರ್ನಲ್, ಡಾಕ್ಟರೇಟ್ ಗಳು ಹೇಗೆ ನೀಡಲಾಯಿತು ಎನ್ನುವುದನ್ನು ಗೂಗಲ್ ನಲ್ಲಿ ಹುಡುಕಿ. ಇನ್ನೂ ದಾದಾ ಅನ್ನೋದು ಪ್ರೊ. ಅನ್ನೋದು ಎರಡೂ ಒಂದೇನಾ?? ಅದೇನು ಪಟ್ಟವಾ??? ನಿಮ್ಮ ತಲೆ ಸರಿಯಾಗಿಟ್ಕೊಂಡು ಮಾತಾಡಿ.
ಭರ್ಜರಿ ವಾದ..ಮಿದುಳು ಬೇರೆಲ್ಲೊ ಸೇರಿಕೊಂಡಿರುವ ಸೂಚನೆ!!, ಬಹುಶಃ ಕಾಮ್ರೆಡ್ ನಂತೆಯೇ ಇವೂ ಕೂಡ ಅಂದುಕೊಂಡಿರಬೇಕು ನಮ್ಮ ಸಾಹೇಬರು 🙂
ನಾಳೆ ಪ್ರೀತಿಯಿಂದ ಯಾರಾದರೂ ನಮ್ಮ ಶೆಟ್ಕರ್ ಸಾಹೇಬರನ್ನು ವೈಸ್ ಚಾನ್ಸಲರ್ ಎಂದು ಕರೆದರೂ ಆಶ್ಚರ್ಯವಿಲ್ಲ…ನಮ್ಮ ಸಾಹೇಭರು ಒಂದು ಸಮ್ಮರ್ ಯುನಿವರ್ಸಿಟಿ ನಡೆಸಿದರೆ!! 🙂
+10000000000000000000000000000000000000000000000
ಹಿಂದೊಮ್ಮೆ, ಇದೇ ಡಿ.ಎಸ್.ನಾಗಭೂಷಣ್ ಅವರು ಕೆಂಡಸಂಪಿಗೆಯಲ್ಲಿ “ಉತ್ತರಖಂಡದ ಜಲಪ್ರಳಯ: ನಾವು ಕಲಿಯಬೇಕಾದ ಪಾಠಗಳು:ಡಿ.ಎಸ್.ನಾಗಭೂಷಣ ಬರಹ ” ಬರೆದಿದ್ದರು.
http://kendasampige.com/article.php?id=6376
ಅಲ್ಲಿ ನಮ್ಮ ಶೆಟ್ಕರ್ ಸಾಹೇಬರ ಪ್ರತಿಕ್ರಿಯೆ ನೋಡಿ ತಮ್ಮ ಪ್ರೀತಿಯ ‘ಪ್ರೊಫೆಸರ್’ ಲೇಖನದ ಬಗ್ಗೆ..
[ ಉತ್ತರಾಂಚಲದ ಬಹುತೇಕ ನಿವಾಸಿಗಳಿಗೆ ಪ್ರವಾಸೋದ್ಯಮವೇ ಎರಡು ಹೊತ್ತಿನ ಅನ್ನದ ಮಾರ್ಗ. ಪ್ರವಾಸಿಗಳ ಸೌಕರ್ಯಕ್ಕಾಗಿ ಹೋಟೆಲು ಮಳಿಗೆಗಳನ್ನು ಕೇದಾರನಾಥದಂತಹ ಸ್ಥಳದಲ್ಲಿ ಕಟ್ಟುವುದು ಅನಿವಾರ್ಯ. ವಿದ್ಯುಚ್ಛಕ್ತಿಗಾಗಿ ಆಣೆಕಟ್ಟು ಹಾಗೂ ವಿದ್ಯುತ ಸ್ಥಾವರಗಳು ಬೇಕಾಗಿವೆ. ದೇಶದ ಮಿಕ್ಕೆಡೆ ಜನರು ಅನುಭವಿಸುತ್ತಿರುವ ಅಭಿವೃದ್ಧಿಯ ಫಲವನ್ನು ಉತ್ತರಾಂಚಲದ ಜನರು ಸ್ವಲ್ಪವಾದರೂ ಅನುಭವಿಸುವುದು ಬೇಡವೇ?!! ಹಿಮಾಲಯದಲ್ಲಿ ಮೋಜು ಸಂಸ್ಕೃತಿ ಬೆಳೆಯುತ್ತಿರುವುದರ ಬಗ್ಗೆ ಇಲ್ಲಿ ಪಾಠ ಹೇಳುತ್ತಿರುವವರು ಸ್ವಿಟ್ಜರ್ಲ್ಯಾಂಡ್ ಮೊದಲಾದ ಐರೊಪ್ಯ ದೇಶಗಳಿಗೆ ಪ್ರವಾಸ ಹೋಗಿದ್ದು ಸುಖ-ಸಂತೋಷಗಳ ಅನ್ವೇಷಣೆಗೆಂದೇ ಅಲ್ಲವೇ? — ನಾಗಶೆಟ್ಟಿ ಶೆಟ್ಕರ್…]
[ Re: Why should secular Indian tourists see Kedarnath as a holy religious place?! Why should they see Kedarnath as a symbol of Vairagya?! Afaik the author is a secular socialist who doesn’t believe in Hindu religious philosophy. Nor does he seek Vairagya, he has called himself a Bhavi. How can he then demand the secular Indian tourists go to Kedarnath seeking Vairagya? Isn’t that hypocrisy? For secular Indian tourists, Kedarnath is a mountain picnic spot. What is wrong in having resorts in Indian mountains? Not all Indians can afford to go to Switzerland like the author. -Nagshetty]
ಇವರಿಗೆ ಒಬ್ಬರು ಉತ್ತರ ಬರೆದಿದ್ದರು..
[Re: ನಿಮ್ಮಂಥ ಹಿಪೋಕ್ರೈಟ್ ಅನ್ನು ನಾನು ಈ ವರಗೆ ನೋಡಿಲ್ಲ. ಅಲ್ರೀ ಹೋಟೆಲ್ ಗಳನ್ನ ಅಣೆಕಟ್ಟನ್ನ ಕಟ್ಟಬೇಡಿ ಅಂತ ಲೇಖಕರು ಹೇಳುತ್ತಿಲ್ಲ. ಕೇದಾರ ಹರಿದ್ವಾರಗಳು ಪುಣ್ಯ ಕ್ಷೇತ್ರಗಳು, ಅದರಲ್ಲೂ ವೈರಾಗ್ಯವನ್ನು ಸೂಚಿಸುವ ಶಿವನ ಕ್ಷೇತ್ರಗಳು, ಅಲ್ಲಿ ರೆಸಾರ್ಟ್ ಗಳನ್ನು, ಮೋಜಿನ/ಕುಡಿತದ ಕೇಂದ್ರಗಳನ್ನು ಆರಮ್ಭಿಸಬೇಡಿ ಅಂತ ಹೇಳಿದ್ದರಶ್ಟೆ. Switzerland ಗೂ ಕೇದಾರನಾಥಕ್ಕೋ ಅಗಾಧ ವ್ಯತ್ಯಾಸವಿದೆ. ನಿಮ್ಮಂಥ ಮೂರ್ಖರಿಗೆ ಅದು ಅರ್ಥವಾಗಲಾರದು. ಅಲ್ಲದೆ, ಏನನ್ನು ಮಾಡುವುದಿದ್ದರೂ planned ಆಗಿ, ಪರಿಸರಕ್ಕೆ ಹಾನಿ ಆಗದಂತೆ ಮಾಡಿ ಅಂತ ಹೇಳಲು ಲೇಖಕರು ಹೊರಟಿದ್ದಾರೆ. (ನೀವು ಯಾವತ್ತಾದರೂ ಯೂರೋಪ್ ಗೆ ಹೋಗಿದ್ದರೆ ಅದು ನಿಮಗೆ ಅರ್ಥವಾದೀತು – ಇಲ್ಲದಿದ್ದರೆ ಕೂಪ ಮಂಡೂಕದಂತೆ ಸುಮ್ಮನೆ ಟೀಕಿಸಬೇಡಿ) ನಿಮ್ಮಂಥ ಎಡಬಿಡಂಗಿಗಳಿನ್ದಲೇ ನಮ್ಮ ದೇಶ ಈ ಸ್ಥಿತಿ ತಲುಪಿರೋದು.] ಎಂದು.
ಬಹುಶಃ ಆಗ ನಮ್ಮ ಸಾಹೇಬರು ಡಿ.ಎಸ್ ನಾಗಭೂಷಣ ರ ಸಮ್ಮರ್ ಕ್ಲಾಸ್ ಗೆ ಆಡ್ಮಿಶನ್ ಮಾಡಿಸಿರಲಿಲ್ಲವೇನೊ! 🙂
ಪ್ರೊ. ಡಿ ಎಸ್ ನಾಗಭೂಷಣ ಅವರ ಎಲ್ಲಾ ಧೋರಣೆಗಳೂ ವಿಚಾರಗಳೂ ಅಭಿಪ್ರಾಯಗಳೂ ಸರಿ ಅಂತ ನಾನು ತಿಳಿದಿಲ್ಲ. ನಾನು ಅವರ ಅಂಧ ಅಭಿಮಾನಿ ಅಲ್ಲ. ಅವರ ಚಿಂತನೆ ಡೀಲ ಆದಾಗ ಅದನ್ನು ಟೀಕಿಸುವುದು ನನ್ನ ಕರ್ತವ್ಯ. ಅದನ್ನೇ ನಾನು ಕೆಂಡಸಂಪಿಗೆಯ ಆ ಲೇಖನದ ಸಂದರ್ಭದಲ್ಲಿ ಮಾಡಿದ್ದು. ಹಾಗೆ ಪ್ರೊ. ಡಿ ಎಸ್ ನಾಗಭೂಷಣ ಅವರು ಸಮಕಾಲೀನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೊಸ ಹೊಳಹನ್ನು ಕೊಟ್ಟಾಗ ಅದನ್ನು ತಿರಸ್ಕರಿಸುವ ಹಾಗೂ ಲಘುವಾಗಿ ಭಾವಿಸುವ ಅಲ್ಪ ನಾನಲ್ಲ. ಹೊಸ ಮನುಷ್ಯ ಪತ್ರಿಕೆಯಲ್ಲಿ ಪ್ರೊ. ಡಿ ಎಸ್ ನಾಗಭೂಷಣ ಅವರು ನಮೋ ಅನ್ನು ಮತದಾರರು ಏಕೆ ತಿರಸ್ಕರಿಸ ತಕ್ಕದ್ದು ಅಂತ ಚೆನ್ನಾಗಿ ಹೇಳಿದ್ದಾರೆ. ನೀವು ಅದನ್ನು ಓದಿಯೇ ಇಲ್ಲ, ಆದರೂ ಪ್ರೊ. ಡಿ ಎಸ್ ನಾಗಭೂಷಣ ಅವರ ಟೀಕೆ ಮಾಡುತ್ತಿದ್ದೀರಿ!
ಇನ್ನು ಹಿಮಾಲಯವನ್ನು ಹಿಂದೂ ಪವಿತ್ರ ಸ್ಥಳವಾಗಿ ನೋಡುವ ಅಗತ್ಯ ಇಲ್ಲ. ಲಿಂಗವಂತನಿಗೆ ದೇವಾಲಯಗಳ ಹಂಗೇ ಇಲ್ಲ, ಪವಿತ್ರ ಕ್ಷೇತ್ರಗಳ ಹಂಗು ಉಂಟೇ? ಹಿಮಾಲಯದಲ್ಲಿ ರಿಸಾರ್ಟ್ ಬೇಡ ಅನ್ನುವವರು ಕಾಯಕ ದ್ರೋಹಿಗಳು. ಇಂದು ಪ್ರವಾಸೋದ್ಯಮದಿಂದ ದಿನದ ಅನ್ನ ಸಂಪಾದಿಸುವವರು ಕೋಟ್ಯಾಂತರ ಜನರಿದ್ದಾರೆ. ಹಿಮಾಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಿದರೆ ಇನ್ನೂ ಅನೇಕರಿಗೆ ಅನ್ನ ಭಾಗ್ಯ ಸಿಗುತ್ತದೆ. ಆದರೆ ಬಂಡವಾಳಶಾಹಿಗಳನ್ನು ದೂರ ಇಟ್ಟು ಸರಕಾರವೇ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವುದು ಉತ್ತಮ.
ಪ್ರೊ. ಡಿ. ಎಸ್. ನಾಗಭೂಷಣ ಅವರು ಎಲ್ಲಾ ದೃಷ್ಟಿಯಿಂದಲೂ ಸಮಾಜವಾದಿಗಳಿಗೆ ಪ್ರೊಫೆಸರ್ ಆಗಿದ್ದಾರೆ. ಗ್ಹೆಂಟ್ ವಿಶ್ವವಿದ್ಯಾನಿಲಯ ಹಾಗೂ ಅದರ ಆಶ್ರಯದಲ್ಲಿ ಕುವೆಂಪು ವಿಶ್ವದ್ಯಾನಿಲಯದಲ್ಲಿ ಪ್ರತಿಗಾಮಿ ತತ್ವಗಳ ಬಗ್ಗೆ ಹಾಸ್ಯಾಸ್ಪದ ಹಾಗೂ ಜೀವವಿರೋಧಿ ‘ಸಂಶೋಧನೆ’ ಮಾಡಿ ಪ್ರೊಫೆಸರ್ ಅನ್ನಿಸಿಕೊಳ್ಳುವುದಕ್ಕಿಂತ ಸಮಾಜವಾದಿ ಚಿಂತನೆಯನ್ನು ಮಣ್ಣಿನ ಮಕ್ಕಳಿಗೆ ಪಾಠ ಮಾಡಿ ಅವರಿಂದ ಗೌರವದಿಂದ ಪ್ರೊಫೆಸರ್ ಅನ್ನಿಸಿಕೊಳ್ಳುವುದು ಎಷ್ಟೋ ಮೇಲು.
I am wondering, why Mr.DSN didn’t involve in any discussion on vachana Debate
ಪ್ರೊ. ಡಿ ಎಸ್ ನಾಗಭೂಷಣ ಅವರ ಹೊಸ ಮನುಷ್ಯ ಪತ್ರಿಕೆಯಲ್ಲಿ ಸಿ ಎಸ್ ಎಲ್ ಸಿ ವಚನ ‘ಸಂಶೋಧನೆ’ ವಿವಾದದ ಬಗ್ಗೆ ಲೇಖನ ನೋಡಿದ ನೆನಪು. ಆದರೂ ಅವರು ಇನ್ನಷ್ಟು ಸಾರ್ವಜನಿಕವಾಗಿ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು ಎಂಬ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ದರ್ಗಾ ಸರ್ ಅವರ ಬೆಂಬಲಕ್ಕೆ ಪ್ರಜ್ನಾವಂತರು ನಿಂತಿದ್ದರೆ ಅವಧಿಯಲ್ಲಿ ಸಿ ಎಸ್ ಎಲ್ ಸಿ ಯ ಪೂರ್ಣ ಪತನ ಆಗುತ್ತಿತ್ತು.
ನಿಮ್ಮ ಸಾಹೇಬರ ಲೇಖನ ಮತ್ತು ಪ್ರತಿಕ್ರಿಯೆಗಳ ಯೋಗ್ಯತೆ ನೋಡಿಯೇ ಈ ‘ಪ್ರಜ್ಞಾವಂತ’ರು ಹತ್ತಿರ ಬರಲಿಲ್ಲ . ಪಾಪ…ಎಲ್ಲ ಏಟುಗಳನ್ನು ಒಬ್ಬರೇ ತಿನ್ನಬೇಕಾಯಿತು! ಏನು ಮಾಡುವುದು ಮಾಡಿದ್ದುಣ್ಣೊ ಮಹಾರಾಯ.
ಶರಣರೇ ತಾವು [[ಇನ್ನು ಹಿಮಾಲಯವನ್ನು ಹಿಂದೂ ಪವಿತ್ರ ಸ್ಥಳವಾಗಿ ನೋಡುವ ಅಗತ್ಯ ಇಲ್ಲ. ಲಿಂಗವಂತನಿಗೆ ದೇವಾಲಯಗಳ ಹಂಗೇ ಇಲ್ಲ, ಪವಿತ್ರ ಕ್ಷೇತ್ರಗಳ ಹಂಗು ಉಂಟೇ? ಹಿಮಾಲಯದಲ್ಲಿ ರಿಸಾರ್ಟ್ ಬೇಡ ಅನ್ನುವವರು ಕಾಯಕ ದ್ರೋಹಿಗಳು.]] ಹೀಗೆ ಅಪ್ಪಣೆ ಕೊಟ್ಟಿದ್ದೀರಿ. ಸರಿ ಕಾಯಕ ಜೀವಿಗಳಿಗೆ ಅನ್ಯಾಯವಾಗಬಾರದಲ್ಲವೇ?? ಕೂಡಲ ಸಂಗಮದಲ್ಲಿ ಡ್ರಗ್ಸ್ , ಹೆರಾಯಿನ್ ಸೆರೆ, ಮಾಂಸ ಮಾರಲು ಹೋರಾಟ ಮಾಡಿ. ಏಕೆಂದರೆ ಕಾಯಕ ಜೀವಿಗಳಿಗೆ ಅನ್ಯಾಯವಾಗಬಾರದು. ಹಾಗೆ ಈ ಕಾರ್ಯ ಕಾರ್ಫೋರೇಟಗಳಿಗೆ ಬೇಡ ಕಾರಣ ಒತ್ತು ಗಾಡಿಗಳಲ್ಲಿ ಇವನ್ನೆಲ್ಲ ಮಾರೋಣ ಏನಂತೀರಿ? ನೀವು ನಿಮ್ಮ ಅನುಕೂಲ ನೋಡಿಕೊಂಡು ತಿಳಿಸಿ . ನಾನು ಸಹ ನಿಮ್ಮೊಂದಿಗೆ ಬರುವೆ. ಶರಣರು ಈ ಕಾಯಕದಿಂದ ಹೇರಳ ಲಾಭ ಗಳಿಸುವಂತಾಗಲಿ. ಹೇಗೂ ನೀವೆ ಹೆಳಿರುವಿರಿ.[[ಲಿಂಗವಂತನಿಗೆ ದೇವಾಲಯಗಳ ಹಂಗೇ ಇಲ್ಲ, ಪವಿತ್ರ ಕ್ಷೇತ್ರಗಳ ಹಂಗು ಉಂಟೇ? ]] ಕಾರಣ ಇನ್ನು ಮುಂದೆ ಎಲ್ಲಾ ಲಿಂಗಾಯತರಲ್ಲೂ ನಮ್ಮ ಪ್ರಾರ್ಥನೆ ಏನೆಂದರೆ ಎಲ್ಲೆಲ್ಲಿ ನಿಮ್ಮ ದೇವಾಲಯಗಳುಂಟೋ ಅಲ್ಲಲ್ಲಿ ನೀವು ದಾರು (ಸೆರೆ) ಮಾರಿರಿ. ಡ್ರಗ್ಸ್ ಹೆರಾಯಿನ್ ಮಾರಿರಿ. ಮಾಂಸ ಮಾರಿರಿ. ಮಣ್ಣಿನ ಮಕ್ಕಳಿಗೆ ಪೂಜನೀಯವಾದ ಎತ್ತಿನ ಹಾಗೂ ಅದರವ್ವ ಗೋಪವ್ವನ ಕಡಿದು ಮಾರಿರಿ. ಹೇರಳ ಲಾಭ ಗಳಿಸಿರಿ. ನಿಮಗೆ ಯಾರಾದರೂ ತಕರಾರು ಮಾಡಿದರೆ ನಮ್ಮ ಶೆಟ್ಕರ್ ಸಾರ್ ಇದ್ದಾರೆ . ಚಿಂತೆ ಬಿಡಿ.
“ಕೂಡಲ ಸಂಗಮದಲ್ಲಿ ಡ್ರಗ್ಸ್ , ಹೆರಾಯಿನ್ ಸೆರೆ, ಮಾಂಸ ಮಾರಲು ಹೋರಾಟ ಮಾಡಿ. ”
This shows your perverse mind.
“ಎಲ್ಲಾ ಲಿಂಗಾಯತರಲ್ಲೂ ನಮ್ಮ ಪ್ರಾರ್ಥನೆ ಏನೆಂದರೆ ಎಲ್ಲೆಲ್ಲಿ ನಿಮ್ಮ ದೇವಾಲಯಗಳುಂಟೋ ಅಲ್ಲಲ್ಲಿ ನೀವು ದಾರು (ಸೆರೆ) ಮಾರಿರಿ. ಡ್ರಗ್ಸ್ ಹೆರಾಯಿನ್ ಮಾರಿರಿ. ಮಾಂಸ ಮಾರಿರಿ. ಮಣ್ಣಿನ ಮಕ್ಕಳಿಗೆ ಪೂಜನೀಯವಾದ ಎತ್ತಿನ ಹಾಗೂ ಅದರವ್ವ ಗೋಪವ್ವನ ಕಡಿದು ಮಾರಿರಿ. ಹೇರಳ ಲಾಭ ಗಳಿಸಿರಿ. ”
This shows your brahministic world view and hatred towards non-Brahmins.
[ಅವರ ಚಿಂತನೆ ಡೀಲ ಆದಾಗ ಅದನ್ನು ಟೀಕಿಸುವುದು ನನ್ನ ಕರ್ತವ್ಯ.]
ಒಹ್ ..ಅಂದರೆ ಅವರು ಆಗಾಗ ಡೀಲ ಆಗ್ತಾ ಇರುತ್ತಾರೆ ಅಂತಾಯಿತು. ಅವರು ಆ ರೀತಿ ಡೀಲ ಆಗಿ ನಿಮ್ಮ ‘ಲೈನ’ಲ್ಲಿ ಇಲ್ಲದಿದ್ದಾಗ ಟೀಕಿಸುವುದು ನಿಮ್ಮ ಕರ್ತವ್ಯ.. ಸರಿಯಾಗಿದೆ ‘ಶರಣ’ ರೆ!
[ಹಾಗೆ ಪ್ರೊ. ಡಿ ಎಸ್ ನಾಗಭೂಷಣ ಅವರು ಸಮಕಾಲೀನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೊಸ ಹೊಳಹನ್ನು ಕೊಟ್ಟಾಗ ಅದನ್ನು ತಿರಸ್ಕರಿಸುವ ಹಾಗೂ ಲಘುವಾಗಿ ಭಾವಿಸುವ ಅಲ್ಪ ನಾನಲ್ಲ.]
ಛೆ..ಛೆ..ಅದ್ಹೇಗೆ ನೀವು ಈ ವಿಷಯದಲ್ಲಿ ಅಲ್ಪರಾಗಲು ಸಾಧ್ಯ. ನೀವು ಇದರಲ್ಲಿ ಅಲ್ಪತನ ತೋರಿಸಿದರೆ, ಅದು ನಿಮ್ಮ ಎಡಬಿಡಂಗಿ ಸಿದ್ಧಾಂತಕ್ಕೆ ಮಾಡುವ ಅವಮಾನವಾಗುತ್ತದೆ!.
[ಹೊಸ ಮನುಷ್ಯ ಪತ್ರಿಕೆಯಲ್ಲಿ ಪ್ರೊ. ಡಿ ಎಸ್ ನಾಗಭೂಷಣ ಅವರು ನಮೋ ಅನ್ನು ಮತದಾರರು ಏಕೆ ತಿರಸ್ಕರಿಸ ತಕ್ಕದ್ದು ಅಂತ ಚೆನ್ನಾಗಿ ಹೇಳಿದ್ದಾರೆ. ನೀವು ಅದನ್ನು ಓದಿಯೇ ಇಲ್ಲ, ಆದರೂ ಪ್ರೊ. ಡಿ ಎಸ್ ನಾಗಭೂಷಣ ಅವರ ಟೀಕೆ ಮಾಡುತ್ತಿದ್ದೀರಿ!]
ಪುಂಗಿ ಕಂಪನಿಯ ಲೇಖನಗಳನ್ನು ಓದುವುದು ಟೈಂಪಾಸ್ ಗೆ ..ಹಾಸ್ಯ ಲೇಖನಗಳಂತೆ. ಅದೂ ನೆಟ್ ನಲ್ಲಿ ಸಿಕ್ಕರೆ!!.
[ಹಿಮಾಲಯದಲ್ಲಿ ರಿಸಾರ್ಟ್ ಬೇಡ ಅನ್ನುವವರು ಕಾಯಕ ದ್ರೋಹಿಗಳು. ಇಂದು ಪ್ರವಾಸೋದ್ಯಮದಿಂದ ದಿನದ ಅನ್ನ ಸಂಪಾದಿಸುವವರು ಕೋಟ್ಯಾಂತರ ಜನರಿದ್ದಾರೆ.]
ಉತ್ತರ ಇಲ್ಲೇ ಇದೆ..ಮತ್ತೆ ಮತ್ತೆ ನಿಮ್ಮ ಹಳೇ ಡಬ್ಬ ಬಡೆಯಬೇಡಿ!
“ನಿಮ್ಮಂಥ ಹಿಪೋಕ್ರೈಟ್ ಅನ್ನು ನಾನು ಈ ವರಗೆ ನೋಡಿಲ್ಲ. ಅಲ್ರೀ ಹೋಟೆಲ್ ಗಳನ್ನ ಅಣೆಕಟ್ಟನ್ನ ಕಟ್ಟಬೇಡಿ ಅಂತ ಲೇಖಕರು ಹೇಳುತ್ತಿಲ್ಲ. ಕೇದಾರ ಹರಿದ್ವಾರಗಳು ಪುಣ್ಯ ಕ್ಷೇತ್ರಗಳು, ಅದರಲ್ಲೂ ವೈರಾಗ್ಯವನ್ನು ಸೂಚಿಸುವ ಶಿವನ ಕ್ಷೇತ್ರಗಳು, ಅಲ್ಲಿ ರೆಸಾರ್ಟ್ ಗಳನ್ನು, ಮೋಜಿನ/ಕುಡಿತದ ಕೇಂದ್ರಗಳನ್ನು ಆರಮ್ಭಿಸಬೇಡಿ ಅಂತ ಹೇಳಿದ್ದರಶ್ಟೆ. Switzerland ಗೂ ಕೇದಾರನಾಥಕ್ಕೋ ಅಗಾಧ ವ್ಯತ್ಯಾಸವಿದೆ. ನಿಮ್ಮಂಥ ಮೂರ್ಖರಿಗೆ ಅದು ಅರ್ಥವಾಗಲಾರದು. ಅಲ್ಲದೆ, ಏನನ್ನು ಮಾಡುವುದಿದ್ದರೂ planned ಆಗಿ, ಪರಿಸರಕ್ಕೆ ಹಾನಿ ಆಗದಂತೆ ಮಾಡಿ ಅಂತ ಹೇಳಲು ಲೇಖಕರು ಹೊರಟಿದ್ದಾರೆ. (ನೀವು ಯಾವತ್ತಾದರೂ ಯೂರೋಪ್ ಗೆ ಹೋಗಿದ್ದರೆ ಅದು ನಿಮಗೆ ಅರ್ಥವಾದೀತು – ಇಲ್ಲದಿದ್ದರೆ ಕೂಪ ಮಂಡೂಕದಂತೆ ಸುಮ್ಮನೆ ಟೀಕಿಸಬೇಡಿ) ನಿಮ್ಮಂಥ ಎಡಬಿಡಂಗಿಗಳಿನ್ದಲೇ ನಮ್ಮ ದೇಶ ಈ ಸ್ಥಿತಿ ತಲುಪಿರೋದು”
“ಪುಂಗಿ ಕಂಪನಿಯ ಲೇಖನಗಳನ್ನು ಓದುವುದು ಟೈಂಪಾಸ್ ಗೆ ”
Now you are calling even prof. Nagabhushana a pungi. You haven’t read even one issue of his magazine!
Sir…. Adbhutha Vishleshane…… Sarvakalakkoo Salluva Kathe………..