ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 30, 2014

21

ಕೃತಘ್ನ ಜಸ್ವಂತ್ ಸಿಂಗ್?

‍ನಿಲುಮೆ ಮೂಲಕ

– ನರೇಂದ್ರ ಕುಮಾರ್

ಜಸ್ವಂತ್ ಸಿಂಗ್ಚುನಾವಣೆ ಘೋಷಣೆಯಾದಂತೆ ರಾಜಕಾರಣಿಗಳ ಬಣ್ಣ ಬಯಲಾಗಲು ಆರಂಭಿಸುತ್ತದೆ. ಚುನಾವಣೆಗೆ ಮುನ್ನ ಸಿದ್ಧಾಂತದ ಕುರಿತು ಮಾತನಾಡುವ ರಾಜಕಾರಣಿಗಳಿಗೆ, ಸಿದ್ಧಾಂತವೆನ್ನುವುದು ಕೇವಲ ರಾಜಕೀಯ ಪಕ್ಷದಲ್ಲುಳಿಯಲು ಇರುವ ಸಾಧನವಷ್ಟೇ ಎನ್ನುವುದು ಚುನಾವಣೆಯ ಸಮಯದಲ್ಲಿ ಸಾಬೀತಾಗುತ್ತದೆ. ಪ್ರತಿ ಚುನಾವಣೆಯ ಸಮಯದಲ್ಲೂ ಬಹಿರಂಗಗೊಳ್ಳುವ ಸಂಗತಿಯಿದು. ಇದೀಗ ಈ ರೀತಿ ಮುಖವಾಡ ಕಳಚಿ ನೈಜತೆ ಗೋಚರಿಸಿರುವುದು ಜಸ್ವಂತ್ ಸಿಂಗ್ ಅವರ ವಿಷಯದಲ್ಲಿ!

ಜಸ್ವಂತ್ ಸಿಂಗ್ ಕಳೆದ ಹಲವು ದಶಕಗಳಿಂದ ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ. ಅವರು ತಮ್ಮನ್ನು ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಭಾಜಪ ಪಕ್ಷವೇ ಅವರನ್ನು ತನ್ನೊಡನೆ ಸೇರಿಸಿಕೊಂಡಿದೆ ಎಂದು ಹೇಳಿದರೆ ಸರಿಯಾದೀತು. ಜಸ್ವಂತ್ ಸಿಂಗ್ ಎಂದೂ ಜನನಾಯಕರಾಗಿರಲಿಲ್ಲ. ಹೀಗಿದ್ದಾಗ್ಯೂ ಭಾಜಪ ಅವರಿಗೆ ತನ್ನ ಪಕ್ಷದಲ್ಲಿ ಸ್ಥಾನ ನೀಡಿತ್ತು. ವಾಜಪೇಯಿ ಸರಕಾರದಲ್ಲಿ ಅವರು ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನೂ ಪಡೆದರು. ಮುಂದೆ ಅವರ ಮಗನಿಗೂ ಭಾಜಪದಲ್ಲಿ ಸ್ಥಾನ ಸಿಕ್ಕಿತು ಮತ್ತು ವಿಧಾನಸಭೆಯಲ್ಲಿ ಶಾಸಕರಾದರು.

ಜಸ್ವಂತ್ ಸಿಂಗ್ ಅವರಿಗೆ ಒಂಬತ್ತು ಬಾರಿ ಸಂಸದರಾಗಲು ಭಾಜಪ ಅವಕಾಶ ನೀಡಿತು. 1989ರಲ್ಲಿ ಜೋಧಪುರ್ ಮತ್ತು 1991 ಹಾಗೂ 1996ರಲ್ಲಿ ಚಿತ್ತೋರಘರ್ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಆದರೆ ಮುಂದಿನ ಚುನಾವಣೆಯಲ್ಲಿ, ಅಂದರೆ 1998ರಲ್ಲಿ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು. ಹೀಗಿದ್ದಾಗ್ಯೂ ಅವರನ್ನು ರಾಜ್ಯಸಭೆಯ ಮೂಲಕ ಪ್ರವೇಶ ಮಾಡಿಸಿ, ಅವರನ್ನು ವಾಜಪೇಯೀ ಮಂತ್ರಿಮಂಡಲದಲ್ಲಿ ವಿದೇಶಾಂಗ ಮಂತ್ರಿಯನ್ನಾಗಿ ಮಾಡಲಾಯಿತು. ಮುಂದೆ 2002ರಲ್ಲಿ ಅವರು ವಿತ್ತಸಚಿವರಾಗಿ ಎರಡು ಬಾರಿ ಬಜೆಟ್ ಮಂಡಿಸುವ ಅವಕಾಶವನ್ನೂ ಪಡೆದರು. 2004ರಲ್ಲಿ ರಾಜ್ಯಸಭೆಗೆ ಪುನರ್ನಾಮಕರಣಗೊಂಡ ಜಸ್ವಂತ್ ಸಿಂಗ್ ಅವರು, 2009ರಲ್ಲಿ ಲೋಕಸಭಾ ಚುನಾವಣೆಗೆ ಡಾರ್ಜಿಲಿಂಗ್ ಇಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಭಾಜಪಾವು ಗೋರ್ಖಾ ಜನಮುಕ್ತಿ ಮೋರ್ಚಾದೊಡನೆ ಹೊಂದಾಣಿಕೆ ಮಾಡಿಕೊಂಡದ್ದರಿಂದಾಗಿ ಜಸ್ವಂತ್ ಸಿಂಗ್ ಚುನಾವಣೆಯಲ್ಲಿ ಗೆದ್ದರು. 2012ರಲ್ಲಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಭಾಜಪಾವು ಚುನಾವಣೆಯಲ್ಲಿ ನಿಲ್ಲಿಸಿತ್ತು. ಆದರೆ, ಭಾಜಪಕ್ಕೆ ಆವಶ್ಯಕ ಬಹುಮತ ಇಲ್ಲದ್ದರಿಂದ ಜಸ್ವಂತ್ ಸಿಂಗ್ ಆ ಚುನಾವಣೆಯಲ್ಲಿ ಗೆಲ್ಲಲಿಲ್ಲ; ಹಮೀದ್ ಅನ್ಸಾರಿಯವರು ಉಪರಾಷ್ಟ್ರಪತಿಯಾದರು.

ಈ ಸಲದ ಚುನಾವಣೆಯಲ್ಲಿ ಜಸ್ವಂತ್ ಸಿಂಗ್ ಅವರು ರಾಜಸ್ಥಾನದ ಬಾರ್ಮೇರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ್ದರು. ಆದರೆ, ಅವರಿಗೆ ಭಾಜಪಾ ಟಿಕೆಟ್ ನೀಡಲು ನಿರಾಕರಿಸಿತು. ಇದೇ ವಿಷಯವನ್ನೇ ದೊಡ್ಡದಾಗಿ ಮಾಡಿದ ಜಸ್ವಂತ್ ಸಿಂಗ್ ಅವರು, ಭಾಜಪಾ ಪಕ್ಷವನ್ನೇ ಬಿಡುವ ಮತ್ತು ಪಕ್ಷಕ್ಕೆ ಧಿಕ್ಕಾರ ಹಾಕಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.ಕಣದಿಂದ ಹಿಂದೆ ಸರಿಯಲು ಅವರು ನಿರಾಕರಿಸಿದ್ದರಿಂದ,ಈಗ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ೬ ವರ್ಷಗಳ ಕಾಲಕ್ಕೆ ಉಚ್ಚಾಟಿಸಿದೆ.

ತನಗೆ ಭಾಜಪಾ ಇಷ್ಟೆಲ್ಲಾ ಅವಕಾಶ ನೀಡಿದ್ದನ್ನು ಸ್ಮರಿಸದೇ, ಜಸ್ವಂತ್ ಸಿಂಗ್ ಅವರು ಪಕ್ಷಕ್ಕೇ ದ್ರೋಹ ಬಗೆದದ್ದು ಸರಿಯೇ? ಜನನಾಯಕರಲ್ಲದಿದ್ದರೂ ಇಷ್ಟು ಬಾರಿ ಲೋಕಸಭೆಯನ್ನು ಮತ್ತು ರಾಜ್ಯಸಭೆಯನ್ನು ಸ್ಪರ್ಧಿಸುವ ಅವಕಾಶವನ್ನು ಭಾಜಪ ಅವರಿಗೆ ನೀಡಿದೆ. ಅವರು ಹಿಂದೊಮ್ಮೆ ವಿವಾದಕ್ಕೊಳಗಾಗಿ ಪಕ್ಷದಿಂದ ಉಚ್ಚಾಟನೆಗೊಂಡ ನಂತರದಲ್ಲಿ, ಮತ್ತೊಮ್ಮೆ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗಿದೆ. ಪಕ್ಷವು ಅಧಿಕಾರಕ್ಕೆ ಬಂದ ಸಮಯದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥ್ಹಾನ ನೀಡಲಾಗಿದೆ. ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮಾಡಿದ್ದೂ ದೊಡ್ಡ ಗೌರವದ ಸಂಗತಿಯೇ. ಮತ್ತು ಅವರ ಮಗನಿಗೆ ಪಕ್ಷದಲ್ಲಿ ಸ್ಥಾನ ನೀಡಿ, ವಿದಾನಸಭೆ ಶಾಸಕನಾಗಲು ಅವಕಾಶ ನೀಡಿದ್ದೂ ಭಾಜಪವೇ. ಇದೀಗ ಜಸ್ವಂತ್ ಸಿಂಗ್ ಅವರಿಗೆ 76 ವರ್ಷ. ಈ ಸಮಯದಲ್ಲಿ ತನಗಿಂತ ಚಿಕ್ಕವರಿಗೆ ಪಕ್ಷದಲ್ಲಿ ಅವಕಾಶ ನೀಡಲು ಮತ್ತು ಚಿಕ್ಕವರನ್ನು ಬೆಳೆಸಲು ಸಹಕಾರ ನೀಡುವುದು ಅವರ ಕರ್ತವ್ಯವಲ್ಲವೇ? ಸಾಯುವವರೆಗೂ ತಾನೇ ಚುನಾವಣೆಗೆ ನಿಲ್ಲಬೇಕು, ತಾನೇ ಮಂತ್ರಿಯಾಗಬೇಕು, ತನ್ನ ಕುಟುಂಬದವರೇ ಮುಂದೆ ಬರಬೇಕೆನ್ನುವುದು ಯಾವ ಸಂಸ್ಕೃತಿ?

ಚಿತ್ರಕೃಪೆ :yespunjab.com

 

21 ಟಿಪ್ಪಣಿಗಳು Post a comment
 1. udayaravi
  ಮಾರ್ಚ್ 31 2014

  ಶ್ರೀ ಜಸ್ವಂತ್ ಸಿಂಗ್‌ರವರವರಿಗೆ ಪಕ್ಷ ಅಗತ್ಯಕ್ಕಿಂತ ಹೆಚ್ಚಿನ ಮನ್ನಣೆ, ಸ್ಥಾನಮಾನವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಸೇನೆಯಲ್ಲಿ ಉನ್ನತ ಸ್ಥಾನದಲ್ಲಿದ್ದವರು ಎಂಬ ಕಾರಣಕ್ಕಾಗಿ ಶ್ರೀ ವಾಜಪೇಯಿರವರು ಇವರಿಗೆ ಹಣಕಾಸು, ರಕ್ಷಣೆ, ವಿದೇಶಾಂಗದಂತಹ ಉನ್ನತ ಹುದ್ದೆಯನ್ನು ನೀಡಿದ್ದರು. ಪಕ್ಷದ ಉನ್ನತಿಯಲ್ಲಿ ತಮ್ಮ ಪಾಲೂ ಇದೆ ಎನ್ನುವವರು ಪಕ್ಷದ ಇತಿಹಾಸದ ಪುಟಗಳಲ್ಲಿ ಶಾಶ್ವತ ಕಪ್ಪು ಚುಕ್ಕೆಯಂತಿರುವ ಕಂದಹಾರ್ ಪ್ರಕರಣದಲ್ಲಿ ಇವರೇ ಉಗ್ರಗಾಮಿಗಳ ದಿಬ್ಬಣದ ನೇತೃತ್ವ ವಹಿಸಿದ್ದರು ಎಂಬುದನ್ನು ಮರೆಯಲಾದೀತೇ? ಕಳೆದ ಚುನಾವಣೆಯಲ್ಲಿ ಪಕ್ಷದಿಂದ ದೂರ ಸರಿದು ದೂರದ ಡಾರ್ಜಿಲಿಂಗ್ ನಲ್ಲಿ ಗೂರ್ಖಾ ನ್ಯಷನಲ್ ಫ್ರಂಟ್‌ನ ಸಹಕಾರದೊಂದಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು.ಅನಂತರ ಪಕ್ಷದ ಯಾವ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡ ಸಂದರ್ಭಗಳಿಲ್ಲ. ಇಷ್ಟಾಗಿಯೂ ಮಗನಿಗೆ ರಾಜಸ್ಥಾನದ ವಿಧಾನಸಭೆಯ ಸ್ಥಾನ ಪ್ರಾಪ್ತಿಯಾಯಿತು. ತನ್ನ ಕೊನೆಯ ಲೋಕಸಭೆಯ ಚುನಾವಣೆಯನ್ನು ಸ್ವರಾಜ್ಯದಲ್ಲೇ ಎದುರಿಸುತ್ತೇನೆ ಎನ್ನುವವರಿಗೆ ಅದನ್ನು ಪಕ್ಷವನ್ನು ಕೇಳಿ ಒಪ್ಪಿಸಬೇಕು ಎನ್ನುವ ಸೌಜನ್ಯವೂ ಇರಬೇಕಲ್ಲವೇ. ತಮ್ಮ ಹಿರಿತನಕ್ಕೆ ಪಕ್ಷವೇ ತಲೆಬಾಗಬೇಕೆನ್ನುವ ನಿಲುವು ಉದ್ಧಟತನ ಎನ್ನಿಸುವುದಿಲ್ಲವೇ? ಗೆಲ್ಲಬೇಕಾದ ಪ್ರತಿಯೊಂದು ಸ್ಥಾನವೂ ಮುಖ್ಯವಾಗಿರುವ ಈ ಸಂದರ್ಭದಲ್ಲಿ ರಾಜಾಸ್ಥಾನದ ಜಾಟ್ ರಾಜಕಾರಣ ಕಾರಣಕ್ಕಾಗಿ ಬರ್ಮೇರ್ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿರುವುದು ರಾಜಕೀಯ ತಂತ್ರಗಳಲ್ಲಿ ಒಂದು ಎಂದು ಗಣಿಸಿ, ತಾವೂ ಸಹಕರಿಸಿದ್ದರೆ ರಾಜ್ಯ ಸಭಾ ಸ್ಥಾನವೋ, ಇನ್ಯಾವುದೋ ರಾಜತಾಂತ್ರಿಕ ಹುದ್ದೆಯೋ ಲಭ್ಯವಾಗಿ ಪಕ್ಷಕ್ಕೆ ಮಾರ್ಗದರ್ಶನ ನೀಡಬಹುದಿತ್ತಲ್ಲವೇ? ಸಮಷ್ಠಿ ಹಿತದ ವಿರುದ್ಧವಾದ ವ್ಯಕ್ತಿಯ ಅಹಂ ಚಿಂತನೆಗಳು ವಿನಾಶದೆಡೆಗೇ ಒಯ್ಯುವವು ಎನ್ನುವುದನ್ನು ತಿಳಿಯಲು ಇತಿಹಾಸದ ಪುಟಗಳನ್ನೇ ತಿರುವಬೇಕಾಗಿಲ್ಲ. ವರ್ತಮಾನದಲ್ಲಿಯೇ ಇಂತಹ ನಿದರ್ಶನಗಳು ನಮ್ಮ ಮುಂದಿವೆ. ಅದರಲ್ಲೂ ನಾವು ಕನ್ನಡಿಗರು ಅದರ ಪ್ರತ್ಯಕ್ಷದರ್ಶಿಗಳಾಗಿದ್ದೇವೆ. ವಯಸ್ಸು, ಅನುಭವ ಇವು ಮನುಷ್ಯನನ್ನು ಪಕ್ವ ಮಾಡಿ ದೈವತ್ವದೆಡೆಗೆ ಒಯ್ಯುವಂತಹ ಸಾಧನಗಳಾಗಬೇಕು. ಇಲ್ಲವಾದಲ್ಲಿ ಅವು ಪಡೆಯಬೇಕಾದ ಗೌರವ ಸಮ್ಮಾನಗಳನ್ನು ಗಳಿಸುವುದರಲ್ಲಿಯೂ ವಿಫಲವಾಗುತ್ತವೆ ಎಂಬುದನ್ನು ಮರೆಯದಿರೋಣ.

  ಉತ್ತರ
 2. ಮಾರ್ಕ್ಸ್ ಮಂಜು
  ಏಪ್ರಿಲ್ 1 2014

  ಹಿರಿಯರಿಗೆ ಅವಮಾನ ಮಾಡುವುದು ನಿಮ್ಮ ಸನಾತನ ಸಂಸ್ಕೃತಿಗೆ ವಿರುದ್ಧವಾಗುವುದಿಲ್ಲವೇನು
  ನಮೋಸುರ ಆರ್ಭಟದಲ್ಲಿ ಎಲ್ಲರೂ ತತ್ತರ Mr.ನರೇಂದ್ರ ಕುಮಾರ್

  ಉತ್ತರ
  • ಏಪ್ರಿಲ್ 1 2014

   ಹಿರಿಯರು ತಮಗೆ ತಾವೇ ಅಪಮಾನ ಮಾಡಿಕೊಂಡರೆ ಅದಕ್ಕೇನೆನ್ನಬೇಕು?

   ಜಸ್ವಂತ್ ಸಿಂಗ್ ಅವರಿಗೆ ಭಾಜಪವೇನೂ ಲೋಕಸಭಾ ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡುವುದಿಲ್ಲ ಎನ್ನಲಿಲ್ಲ.
   ಆದರೆ, ತಾವು ಹೇಳಿದ್ದೇ ನಡೆಯಬೇಕು ಎಂದು ಜಸ್ವಂತ್ ಸಿಂಗ್ ಹಟ ಹಿಡಿದರು.

   ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ ಅಲ್ಲವೇ? ಅದು ಜಸ್ವಂತ್ ಸಿಂಗ್ ಅವರಿಗೇಕೆ ಅರ್ಥವಾಗಲಿಲ್ಲ?
   ಹಿರಿಯರಾದವರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಅದು ಬಿಟ್ಟು ಮಕ್ಕಳಂತೆ ಹಟಹಿಡಿದು ಕುಳಿತರೆ….!?

   ಮತ್ತು ಜಸ್ವಂತ್ ಸಿಂಗ್ ಅವರು ಪಕ್ಷದಿಂದ ಎಷ್ಟೆಲ್ಲಾ ಪ್ರಯೋಜನ ಪಡೆದಿರುವರು.
   ಆದರೆ, ಅವರು ಪಕ್ಷಕ್ಕೆ ಕೊಟ್ಟದ್ದೇನು?
   ಪಕ್ಷಕ್ಕೆ ಅತ್ಯಂತ ಅಗತ್ಯವಾದ ಸಮಯದಲ್ಲಿ ಅವರು ಬಹಳ ಅಯೋಗ್ಯರಾಗಿ ನಡೆದುಕೊಂಡು ಪಕ್ಷದ ಮಾನವನ್ನು ಹರಾಜು ಹಾಕಿಬಿಟ್ಟರು!!

   ಈ ಸಂದರ್ಭಕ್ಕಾಗಿಯೇ ಹೇಳಿ ಮಾಡಿಸಿದಂತ ಈ ಹಿತೋಪದೇಶದ ನುಡಿ:
   “ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ”

   ಉತ್ತರ
  • Nagshetty Shetkar
   ಏಪ್ರಿಲ್ 6 2014

   ಶಿವ್ ವಿಶ್ವನಾಥನ್ ಅವರ ಈ ಲೇಖನ ನೋಡಿ ಮಂಜು ಅವರೇ:

   http://www.thehindu.com/opinion/lead/is-narendra-modi-genuinely-bjp/article5872576.ece

   ಉತ್ತರ
   • ವಿಜಯ್ ಪೈ
    ಏಪ್ರಿಲ್ 8 2014

    ಆಹಾ ನಾಟಕದ ಪರಾಮಾವಧಿಯೆ!. ಪಾಪ..ಈ ಇಂಗ್ಲೀಷ್ ಎಡಬಿಡಂಗಿಗೆ ಈಗ ಬಿಜೆಪಿಯ ಬಗ್ಗೆ ಕಾಳಜಿ ಆರಂಭವಾಗಿದೆ..ಹೋದ ಚುನಾವಣೆಯಲ್ಲಿ ಪ್ರಖರ ಹಿಂದುತ್ವವಾದಿಯಾಗಿ ಕಂಡಿದ್ದ ಆಡ್ವಾಣಿಯವರ ಬಗ್ಗೆ ಈಗ ಕಕ್ಕುಲಾತಿ ಪ್ರಾರಂಭವಾಗಿದೆ.

    ಮೋದಿಯಿಂದ ಬಿಜೆಪಿ ಹಾಳಾಗುತ್ತದೆ ಎನ್ನುವುದನ್ನು ಪ್ರತಿಪಾದಿಸುವ ಭರದಲ್ಲಿ [“BJP is a frame work of values,an organisational system,a style of politics and a way of constructing social reality”.] ಎಂದು ಆ ಲೇಖಕರು ಹೇಳಿದ್ದಾರೆ. ಹೀಗಾದರೂ ಜ್ಞಾನೋದಯವಾಯಿತಲ್ಲ. 🙂

    ಉತ್ತರ
    • Nagshetty Shetkar
     ಏಪ್ರಿಲ್ 9 2014

     ಶಿವ್ ವಿಶ್ವನಾಥನ್ ನಮ್ಮ ನಾಡಿನ ಅತ್ಯುತ್ತಮ ಚಿಂತಕರಲ್ಲಿ ಒಬ್ಬರು. ಅವರ ಬಗ್ಗೆ ಅಸಭ್ಯವಾಗಿ ಮಾತನಾಡಬೇಡಿ ಮಿ. ವಿಜಯ್. ಮೋದಿ ಮೋಹ ನಿಮ್ಮ ನಾಲಗೆಯಿಂದ ಎಂತೆಂತಹ ಮಾತುಗಳನ್ನು ಹೊರಡಿಸುತ್ತಿದೆ ಎಂಬುದರ ಅರಿವು ನಿಮಗಿದೆಯೇ?

     ಉತ್ತರ
     • ವಿಜಯ್ ಪೈ
      ಏಪ್ರಿಲ್ 9 2014

      ಇನ್ನು ಮುಂದೆ ಈ ‘ಚಿಂತ’ಕರು ಚಿಂತೆ ಮಾಡುವುದನ್ನು ಬಿಡುವುದು ಒಳ್ಳೆಯದು..ಅವರ ಆರೋಗ್ಯದ ದೃಷ್ಟಿಯಿಂದ! 🙂

      “BJP is a frame work of values,an organisational system,a style of politics and a way of constructing social reality”
      ಅಂದ ಹಾಗೆ ಮೇಲಿನದು ಆ ಅತ್ಯುತ್ತಮ ಚಿಂತಕರೇ ಬರೆದಿದ್ದು..ಎರಡೆರಡು ಸಲ ಓದಿಕೊಳ್ಳಿ ..ನೆನಪಿಗೆ ತಂದು ಕೊಳ್ಳಿ, ಇನ್ನು ಮುಂದೆ ಬಿಜೆಪಿಯ ಬಗ್ಗೆ ಮಾತನಾಡುವಾಗ!

      ಉತ್ತರ
 3. ಏಪ್ರಿಲ್ 1 2014

  Fun Facts about AAP.
  They told us they were against Widespread Corruption in this country.
  AAP’s Candidate against Sonia Gandhi – None
  AAP’s Candidate against Salman Khurshid – None
  AAP’s Candidate against Sachin Pilot – None
  AAP’s Candidate against 2G fame A.Raja – None
  AAP’s Candidate against P. Chidambaram’s son – None
  AAP’s Candidate against Owaisi – None
  AAP’s Candidate against Ashok Chavan – None
  AAP’s Candidate against Rahul Gandhi – Poet turned Comedian
  AAP’s Candidate against Kapil Sibal – Biased journalist

  ಉತ್ತರ
  • Nagshetty Shetkar
   ಏಪ್ರಿಲ್ 6 2014

   ಆಮ್ ಆದ್ಮಿ ಪಕ್ಷಕ್ಕೆ ವ್ಯಕ್ತಿಗಳು ಮುಖ್ಯವಲ್ಲ, ತತ್ವ ಮುಖ್ಯ. ಭ್ರಷ್ಟಾಚಾರ ಎಂಬುದು ವ್ಯ್ಕತಿಗತ ನೆಲೆಯಲ್ಲಿ ಸೋಲಿಸುವನ್ಥದಲ್ಲ. ಅದು ಸಾಂಸ್ಥಿಕ, ಅದರ ನೆಲೆ ಮೂಲತಹ ಮನುವಾದದಲ್ಲಿದೆ. ಮನುವಾದವನ್ನು ಸೋಲಿಸೋಣ ಬನ್ನಿ.

   ಉತ್ತರ
   • ಏಪ್ರಿಲ್ 7 2014

    [[ಆಮ್ ಆದ್ಮಿ ಪಕ್ಷಕ್ಕೆ ವ್ಯಕ್ತಿಗಳು ಮುಖ್ಯವಲ್ಲ, ತತ್ವ ಮುಖ್ಯ. ಭ್ರಷ್ಟಾಚಾರ ಎಂಬುದು ವ್ಯ್ಕತಿಗತ ನೆಲೆಯಲ್ಲಿ ಸೋಲಿಸುವನ್ಥದಲ್ಲ. ಅದು ಸಾಂಸ್ಥಿಕ, ಅದರ ನೆಲೆ ಮೂಲತಹ ಮನುವಾದದಲ್ಲಿದೆ. ಮನುವಾದವನ್ನು ಸೋಲಿಸೋಣ ಬನ್ನಿ.]]

    ಆಮ್ ಆದ್ಮಿ ಪಕ್ಷ ತನ್ನ ಸ್ಥಾಪಕ ಸದಸ್ಯರನ್ನೇ ಒಬ್ಬೊಬ್ಬರನ್ನಾಗಿ ಉಚ್ಚಾಟಿಸುತ್ತಿದೆ.
    ಪಕ್ಷ ಸ್ಥಾಪನೆಯಾಗಿ ಇನ್ನೂ ಒಂದು ವರ್ಷವೂ ಆಗಿಲ್ಲ, ಆಗಲೇ ಸ್ಥಾಪಕ ಸದಸ್ಯರ ಉಚ್ಚಾಟನೆ!

    ನೆನ್ನೆ ಒಬ್ಬ ಸ್ಥಾಪಕ ಸದಸ್ಯರ ಉಚ್ಚಾಟನೆಯಾಯಿತು. ಅವರನ್ನು ಏಕೆ ಉಚ್ಚಾಟಿಸಿದರು ಗೊತ್ತೇ?
    ಅವರು ನಮ್ಮ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದರು – ಆ ಪತ್ರದಲ್ಲಿ, “ಆಮ್ ಆದ್ಮಿ ಪಕ್ಷವನ್ನು ಅಮೆರಿಕದ CIA ನಿಯಂತ್ರಿಸುತ್ತಿದೆ; ಇದನ್ನು ದಯವಿಟ್ಟು ತನಿಖೆ ಮಾಡಿ. ಆಮ್ ಆದ್ಮಿ ಪಕ್ಷ ದೇಶಕ್ಕೆ ಗಂಡಾಂತರಕಾರಿಯಾಗಬಹುದು” ಎಂದು ಬರೆದಿದ್ದರು!

    ಪಕ್ಷದ ಸ್ಥಾಪಕ ಸದಸ್ಯರಿಗೇ ಪಕ್ಷದ ಕುರಿತಾಗಿ ಈ ರೀತಿ ಅನುಮಾನಗಳು ಹುಟ್ಟುತ್ತಿವೆ. ಸತ್ಯವನ್ನು ಹೇಳಿದ ತಕ್ಷಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ.

    ಶೇಟ್ಕರ್ ಅವರೇ, ನೀವು ಅಮೆರಿಕದ ಬಂಡವಾಳಶಾಹಿಯನ್ನು ವಿರೋಧಿಸುವವರು.
    ಆದರೆ, ಅಮೆರಿಕದಂತಹ ಬಂಡವಾಳಶಾಹಿ ದೇಶ ಸಹಾಯ ನೀಡುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವವರು!!

    ಉತ್ತರ
   • ವಿಜಯ್ ಪೈ
    ಏಪ್ರಿಲ್ 8 2014

    ಪಾಪ..ಬಹುಶ: ನಮ್ಮ ಗುರುಗಳಿಗೆ ಗೊತ್ತಿಲ್ಲವೆನಿಸುತ್ತದೆ. ಕೇಜ್ರಿವಾಲ್ ನಾಮಪತ್ರ ಸಲ್ಲಿಸುವ ಮೊದಲು ಗಂಗಾನದಿಯಲ್ಲಿ ಮುಳುಗು ಹಾಕಿ, ದೇವಾಲಯ ಹೊಕ್ಕು ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದು :). ರಾಹುಲ್ ಗಾಂಧಿ ಹೋಮ-ಹವನ ಮಾಡಿಸಿ, ಅಮ್ಮ-ಮಗ ಇಬ್ಬರೂ ಅದರಲ್ಲಿ ಭಾಗವಹಿಸಿ ಆಮೇಲೆ ನಾಮಪತ್ರ ಸಲ್ಲಿಸಿದ್ದು. ಇಲ್ಲಿ ಈ ಮಹಾನುಭಾವರು ಮನುವಾದ/ಬ್ರಾಹ್ಮಣ್ಯ/ವೈದಿಕ/ಪುರೋಹಿತಶಾಹಿ ಅಂತೆಲ್ಲ ಡಬ್ಬ ಬಡೆಯುತ್ತ ತಿರುಗಾಡುತ್ತಿದ್ದಾರೆ!. ಉಳಿದವರಿಗೆ ಹೋಗಲಿ, ಇವಕ್ಕೆ ಅವುಗಳ ಅರ್ಥ ಸರಿಯಾಗಿ ಆಗಿದೆಯೋ ಇಲ್ಲವೊ ನೋಡಬೇಕು.

    ಆಪ್ , ಕೇಜ್ರಿವಾಲ್ ಎನ್ನುವ ಮಹಾನುಭಾವರೆ, ಸ್ವಲ್ಪ ದಿನಗಳ ಹಿಂದೆ ಒಬ್ಬ ತವಕ, ತಲ್ಣಣದ ಮರಿ ಲೇಖಕರು ಬರೆದಿದ್ದನ್ನು ನೀವು ಓದಿರಲೇ ಬೇಕು.. ಓದಿಲ್ಲವಾದಲ್ಲಿ ಇಲ್ಲಿದೆ ನೋಡಿ..
    [ಖಂಡಿತ, ಇದು ಅಸ್ಪಶ್ಯತಾಚರಣೆಯೇ. ಯಾಕೆಂದರೆ ಕೇಜ್ರಿವಾಲ್ ಎಂಬ ಮಾರ್ವಾಡಿ ವ್ಯಾಪಾರಸ್ಥ ಜಾತಿಗೆ ಸೇರಿದ, ಮೀಸಲಾತಿ ವಿರೋಧಿ ಹೋರಾಟದ ಹಿನ್ನೆಲೆಯಿಂದ ಬಂದ ವ್ಯಕ್ತಿಗೆ ‘ಆತ ಮೀಸಲಾತಿ ವಿರೋಧಿ’ ಎಂಬ ಒಂದೇ ಕಾರಣಕ್ಕೆ ಕ್ಷಣಕ್ಷಣಕ್ಕೂ ಆತನಿಗೆ ಭರಪೂರ ಪ್ರಚಾರ ನೀಡಿ ಪೋಷಿಸುತ್ತಿವೆ. ಶ್ರೀಮಂತ ಸಮುದಾಯದ ಹಿನ್ನೆಲೆಯ ಮಾಜಿ ರೆವಿನ್ಯೂ ಅಧಿಕಾರಿ ಕೇಜ್ರಿವಾಲ್ ದಿಲ್ಲಿಯಂತಹ ಚಿಕ್ಕ ರಾಜ್ಯದಲ್ಲಿ ಅರೆಬರೆ ಅಧಿಕಾರ ಹಿಡಿಯುತ್ತಲೇ ಮಾಧ್ಯಮಗಳು ಅವನನ್ನು ಇಂದ್ರ, ಚಂದ್ರ ಎನ್ನುತ್ತವೆ ಮತ್ತು ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತವೆ! ಆದರೆ? ದಲಿತ ಕುಟುಂಬದ ಹಿನ್ನೆಲೆಯ, ತಮ್ಮ ಬದುಕು, ಉದ್ಯೋಗ ಎಲ್ಲವನ್ನೂ ತ್ಯಾಗ ಮಾಡಿ ಕೇಜ್ರಿವಾಲ್‌ಗಿಂತಲೂ ಬಹಳ ಹಿಂದೆಯೇ, ಶ್ರೀಮಂತರ ದುಡ್ಡಿನ ಹಂಗಿಲ್ಲದೆ ಕೇವಲ ಕೆಲ ತನ್ನ ಸಹೋದ್ಯೋಗಿ ದಲಿತ ಸರಕಾರಿ ನೌಕರರ ನೆರವಿನಿಂದ ‘ಬಹುಜನ ಸಮಾಜ ಪಕ್ಷ’ ಎಂಬ ಬೃಹತ್ ರಾಷ್ಟ್ರೀಯ ಪಕ್ಷ ಕಟ್ಟಿ ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಧಿಕಾರ ಹಿಡಿದರೂ ಕಾನ್ಶೀರಾಮ್‌ರಂತಹ ಸಾಧನೆ ಮಾಡಿದ ಮಾಜಿ ದಲಿತ ರಕ್ಷಣಾ ಇಲಾಖೆಯ ಅಧಿಕಾರಿಗೆ ಮಾಧ್ಯಮಗಳು ಅಂತಹ ಪ್ರಚಾರ ನೀಡಲಿಲ್ಲ! ಬದಲಿಗೆ ಕಡೆಗಣಿಸುತ್ತಲೇ, ಅಲ್ಲಗಳೆಯುತ್ತಲೇ, ಅವರ ವಿರುದ್ಧ ನೆಗೆಟಿವ್ ಆಗಿ ಬರೆಯುತ್ತಲೇ ಮಾಧ್ಯಮಗಳು ತಮ್ಮ ಸಿನಿಕತನವನ್ನು ತೋರಿಸಿಕೊಂಡವು.]

    ನಮಗೆ ಗೊತ್ತಿಲ್ಲದ್ಧೇನಲ್ಲ ಸ್ವಾಮಿ. ನಿಮಗೆ ಆಪ್ , ಕೇಜ್ರಿವಾಲ್ ಅಂದಿದ್ದು ತಾತ್ಕಾಲಿಕ ಗುರಾಣಿ..ಎಡಬಿಡಂಗಿಗಳಿಗೆ ಈ ದೇಶದಲ್ಲಿ ತಮ್ಮ ಸಿದ್ಧಾಂತ ಅವಸಾನದ ಹಂತದಲ್ಲಿದೆ ಎಂದು ಗೊತ್ತಾಗಿದೆ. ‘ಸ್ವಾಮಿದೇವನೇ ಜನಲೋಕಪಾಲನೆ’ ಎಂದು ಕೇಜ್ರಿವಾಲ್ ನನ್ನು ನೋಡುತ್ತಾ ಹಾಡುತ್ತಿರುವುದು ಪ್ರಚಲಿತ ಟ್ರೆಂಡ್ ಜೊತೆ ತಾವೂ ಕೂಡ ಹೋಗುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ..ಅತ್ತ ‘ರಾಹುಲ್ ಜಿ’ ಅನ್ನುತ್ತಿರುವುದು ಕರ್ನಾಟಕದಲ್ಲಿ ಮೇಯಲು ಹುಲ್ಲಿನ ವ್ಯವಸ್ಥೆ ಮಾಡಿಕೊಳ್ಳಲು!.

    ಉತ್ತರ
    • Nagshetty Shetkar
     ಏಪ್ರಿಲ್ 9 2014

     ಕೆಜ್ರೀವಾಲ್ ಸರ್ ಅವರು ನಮ್ಮ ನಡುವಿನ ಕ್ರಿಸ್ತ ಮಹಾಪುರುಷ ಎಂದರೆ ಅತಿಶಯೋಕ್ತಿಯಾಗಲಾರದು. ಸಾರ್ವಜನಿಕವಾಗಿ ತಮ್ಮ ಕೆನ್ನೆಗೆ ಹೊಡೆದ ವ್ಯಕ್ತಿಯ ಮನೆಗೆ ಹೋಗಿ ಹೊಡೆದವನನ್ನು ಕಕ್ಕುಲಾತಿಯಿಂದ ಮಾತನಾಡಿಸಿ ಬಂದಿದ್ದಾರೆ ನಿನ್ನೆ. ಕ್ಷಮೆಯೇ ಧರ್ಮದ ಮೂಲವಯ್ಯ!

     ಉತ್ತರ
     • ವಿಜಯ್ ಪೈ
      ಏಪ್ರಿಲ್ 9 2014

      ಹೊ..ಹೌದೆ? ಆಮೇಲೆ ನಿಮ್ಮ ತವಕ-ತಲ್ಲಣದ ಲೇಖಹರು ಕೇಜ್ರಿವಾಲ್ ಜಾತಿ ಕೆದಕಿ, ಶಬ್ದದ ಮೂಲಕ ಕೆನ್ನೆಗೆ ಬಾರಿಸಿದ್ದನ್ನು ಓದಿಲ್ಲವೆ? ಅವರ ಮನೆಗೂ ಕೇಜ್ರಿವಾಲ್ ಬಹುಶ: ಬರುತ್ತಾರಿರಬೇಕು! 🙂
      ..*ಮಚಾಗಿರಿಯೇ ಕರ್ನಾಟಕದ ಎಡಬಿಡಂಗಿಗಳ ಪುಕ್ಕಟೆ ಗಂಜಿಯ ಮೂಲವಯ್ಯ!

      ಉತ್ತರ
     • ವಿಜಯ್ ಪೈ
      ಏಪ್ರಿಲ್ 10 2014

      ಇನ್ನೊಂದು ವಿಷಯ ಕೇಳುವುದು ಮರೆತೆ..ಆಧುನಿಕ ಕ್ರಿಸ್ತ ಮಹಾಪುರುಷನ ಬೆಂಬಲಿಗರು ಆ ರಿಕ್ಷಾ ಚಾಲಕನಿಗೆ ಚೆನ್ನಾಗಿ ಥಳಿಸಿದಂತೆ ಹೌದೆ? ಮತ್ತೊಂದೇನೆಂದರೆ ಮಹಾಪುರುಷರು ಕ್ಷಮೆ ಕೆಳಲು ಹೋಗುವಾಗ ಕ್ಯಾಮರಾ/ವಿಡಿಯೊ ಎಲ್ಲ ವ್ಯವಸ್ಥೆ ಮಾಡಿಕೊಂಡೇ ಹೋಗಿದ್ದರಂತೆ..ಹೌದೆ? ಪ್ರಧಾನಿಗಲು ತರಾತುರಿಯಲ್ಲಿರುವವರು ಮಾಡಿಸಿದ್ದು ಇದು ಎಂದು ಘಟನೆ ನಡೆದ ಮೇಲೆ ಹೇಳಿಕೆ ಕೊಟ್ಟ ಮಹಾಪುರುಷರಿಗೆ, ರಿಕ್ಷಾಚಾಲಕನ ಮನೆಗೆ ಭೇಟಿ ಕೊಟ್ಟಾಗ, ಆತ ತಮ್ಮ ಪಕ್ಷದ ಮಾಜಿ ಬೆಂಬಲಿಗನೇ ಅಂತ ತಿಳಿದು ಬಾಯಿ ಮುಚ್ಚಿ ಹೋಯಿತಂತೆ..ಹೌದೆ??.. ಏನೋ..ಇದನ್ನೇಲ್ಲ ನಾನು ಮಿಡಿಯಾದಲ್ಲಿ ನೋಡಿದ್ದು. ಮಹಾಪುರುಷರ ಮೇಲಿನ ಹೊಟ್ಟೆಕಿಚ್ಚಿನಿಂದಾಗಿ, ಬಂಡವಾಳ ಶಾಹಿ ಪ್ರೇರಿತ ಮಿಡಿಯಾಗಳು ಹಬ್ಬಿಸುತ್ತಿರುವ ಸುಳ್ಳಿನ ಹುನ್ನಾರ ಇದ್ದರೂ ಇರಬಹುದು!!

      ಉತ್ತರ
      • Nagshetty Shetkar
       ಏಪ್ರಿಲ್ 10 2014

       ಹೌದು, ಇವೆಲ್ಲವೂ ನೀವು ನಮೋ ಸೈಬರ್ ಆರ್ಮಿಯ ಕಾಲಾಳುಗಳು ಎಂಜಲು ಕಾಸಿನ ಆಸೆಗೆ ಹರಡುತ್ತಿರುವ ಸುಳ್ಳು ಸುದ್ದಿಗಳು.

       ಉತ್ತರ
 4. Nagshetty Shetkar
  ಏಪ್ರಿಲ್ 7 2014

  “ಆಮ್ ಆದ್ಮಿ ಪಕ್ಷ ತನ್ನ ಸ್ಥಾಪಕ ಸದಸ್ಯರನ್ನೇ ಒಬ್ಬೊಬ್ಬರನ್ನಾಗಿ ಉಚ್ಚಾಟಿಸುತ್ತಿದೆ.”

  It is purging by design. All corrupt, criminal, and bjp/congress proxies will be thrown out. Only true servants of people be nurtured.

  ಉತ್ತರ
 5. ಏಪ್ರಿಲ್ 7 2014

  [[It is purging by design. All corrupt, criminal, and bjp/congress proxies will be thrown out. Only true servants of people be nurtured.]]

  ಅನೇಕ ಪ್ರಾಮಾಣಿಕರು, ದೇಶಭಕ್ತರು, ದೇಶದ ಕುರಿತಾಗಿ ನೈಜ ಕಾಳಜಿ ಉಳ್ಳವರು ದೊಡ್ಡ ಸಂಖ್ಯೆಯಲ್ಲಿ ಆಪ್ ಸೇರಿದರು.
  ಆಪ್ ಪಕ್ಷದಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದರ ಒಳಗೆ ಪವೇಶಿಸಿದ ನಂತರ, ಅಲ್ಲಿ ನಡೆಯುತ್ತಿರುವ ಭಯಾನಕ ದೇಶವಿದ್ರೋಹಿ ಚಟುವಟಿಕೆಗಳಿಂದ ಭಯಭೀತರಾಗಿ, ಈ ವಿಷಯವನ್ನು ಕೇಜ್ರೀವಾಲ್ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದರು. ಅವರು ಅದನ್ನು ಲೆಕ್ಕಿಸದಿದ್ದಾಗ, ಈ ಕುರಿತಾಗಿ ಕೇಂದ್ರ ಸರಕಾರ ಮತ್ತು ರಾಷ್ಟ್ರಾಧ್ಯಕ್ಷರನ್ನು ಎಚ್ಚರಿಸಿದರು. ಈ ವಿಷಯ ತಿಳಿದ ಕೂಡಲೇ, ತಮ್ಮ ಬಣ್ಣ ಎಲ್ಲಿ ಬಯಲಾಗುವುದೋ ಎಂದು ಹೆದರಿ, ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತಿದೆ!

  ಪ್ರಾಮಾಣಿಕರು ಮತ್ತು ದೇಶಭಕ್ತರು ಪಕ್ಷದಿಂದ ಉಚ್ಚಾಟಿತಗೊಂಡ ನಂತರ, ಅಲ್ಲಿ ಉಳಿಯುವವರು ಕಳ್ಳರು, ಸುಳ್ಳರು, ಕದೀಮರು, ಲೂಟಿಕೋರರು, ದೇಶದ್ರೋಹಿಗಳು, ಹಣಕ್ಕಾಗಿ ದೇಶವನ್ನೇ ಮಾರುವವರು, ನಕ್ಸಲರು, ಮಾವೋವಾದಿಗಳು, ಲೆನಿನ್^ವಾದಿಗಳು, ಸ್ಟಾಲಿನ್^ವಾದಿಗಳು, ಮಾರ್ಕ್ಸ್^ವಾದಿಗಳು,……!

  ಉತ್ತರ
 6. Nagshetty Shetkar
  ಏಪ್ರಿಲ್ 7 2014

  This is shameless propaganda by right wing. No one is more democratic in India than kejriwalji.

  ಉತ್ತರ
  • ಏಪ್ರಿಲ್ 7 2014

   [[This is shameless propaganda by right wing. No one is more democratic in India than kejriwalji.]]

   This person is one of the founders of AAP and was actively involved in anti-corruption movements of Anna Hazare. Till yesterday, you didn’t find any fault with him. You utilized him till you wanted him. And when you realized that, your true face will be shown, you don’t want him!!

   Shetkar,
   You are talking about democracy. You also talk about communism and Marxism.
   Don’t you know that, communism and democracy don’t go together and are opposite polls?
   Why are you acting like a third rate hypocrite!?
   Either you should believe in Democracy or Communism, but not both.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments