“ಉಳಿದವರು ಕಂಡಂತೆ” – ಅವರಿವರು ಕಂಡಂತೆ
– ವಸಂತ ಗಿಳಿಯಾರ್ ಕಂಡಂತೆ
ಅವರಿವರು ಕಂಡಂತೆ “ಉಳಿದವರು ಕಂಡಂತೆ” ಚಿತ್ರ ಹೇಗಿದೆಯೋ ಎಂಬುದರ ಬಗ್ಗೆ ನಾನು ಮಂಡೆಕೆಡಿಸಿಕೊಳ್ಳಲಾರೆ.. ತಾಂತ್ರಿಕವಾಗಿ ಮೊದಲ ನಿರ್ದೇಶನದಲ್ಲೆ ಗೆದ್ದಿದ್ದಾರೆ ರಕ್ಷಿತ್ ಎಂದು ನೇರವಾಗಿ ಮಾರ್ಕ್ ಕೊಡುತ್ತಿದ್ದೇನೆ. ಮಿಕ್ಕುಳಿದಂತೆ ಭಾಷೆ ಅರ್ಥವಾಗುವುದಿಲ್ಲ ಎಂದು ಮಗುಮ್ಮಾಗಿ ದೂರುವವರಿಗೆ ನಾನು ಕೇಳುವುದು ಇಷ್ಟನ್ನೆ ಒಂದು ಚೂರೂ ಅರ್ಥವಾಗದಿದ್ದರೂ ಕೆಲವರು english,ತಮಿಳು,ತೆಲುಗು ಚಿತ್ರವನ್ನ ನೋಡುವುದಿಲ್ಲವೇ? ಇದು ನಮ್ಮದೇ ರಾಜ್ಯದ ಒಂದು ಪ್ರದೇಶದ ವಿಶಿಷ್ಟವಾದಂತ ಚಂದದ ಕುಂದಗನ್ನಡವೆಂಬ ಭಾಷೆ. ಅರ್ಥವಾಗದಿದ್ದರೂ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ.. ನಿಮ್ಮ ಪ್ರಯತ್ನ ವ್ಯರ್ಥವಾಗದು..ಯಾಕೆಂದರೇ ನಮ್ಮದೇ ರಾಜ್ಯದಲ್ಲಿ ಕನ್ನಡ ಭಾಷೆ ಯಾವ ಯಾವ ರೀತಿಯಲ್ಲಿದೆ ಎಂಬುದು ನಿಮ್ಮ ಗ್ರಹಿಕೆಗೆ ನಿಲುಕುತ್ತದೆ.. “ಉಳಿದವರು ಕಂಡಂತೆ” ಚಿತ್ರ ನನಗೆ ನನ್ನ ಬಾಲ್ಯದ ಬದುಕನ್ನ ನೆನಪಿಸಿತು.. ರಿಚ್ಚಿ ಪಾತ್ರವನ್ನ ಕಂಡು ನನಗೆ ನನ್ನ ಬಾಲ್ಯದ ಗೆಳೆಯ ಹಂದಾಡಿಯ ರಾಬರ್ಟ್ ನೆನಪಾದ. ಡೆಮಕ್ರಶಿ ನನ್ನ ಬಾಲ್ಯದ ಅವತಾರದ ಚಿತ್ರಣವೆಂದೆನಿಸಿತು..
“ಪೇಪರ್ ಪೇಪರ್ ಮೆಡಿಸಿನ್ ಪೇಪರ್” ಎಂಬ ಹಾಡು ಬಾಲ್ಯದಲ್ಲಿ ದನಕಾಯುವಾಗ ನಮ್ಮ ಗುಂಪಿನಲ್ಲಿ ನಾವು ಹಾಡಿಕೊಳ್ಳುತ್ತಿದ್ದ ಚಲನಚಿತ್ರ ಗೀತೆಯ ನೆನಪು ತಂದರೆ ವಿಟ್ಲಪಿಂಡಿಯ ಹುಲಿವೇಶ ಕಣ್ಣ ಮುಂದೆ ಹಾದು ಹೋದಂತಾಯಿತು.. ಊರಿಗೆ ಕೇವಲ ೪೦೦ ಕಿಲೋಮೀಟರ್ ದೂರದಲ್ಲಿರುವ ನನಗಿಂತ ಸಾವಿರಾರು ಕಿಲೋಮೀಟರ್ ದೂರದಲ್ಲಿರುವವರಿಗೆ ಅಥವ ಊರಿನಿಂದ ದೂರವೆ ಉಳಿದವರಿಗೆ ಇದು ಮತ್ತಷ್ಟು ಆಪ್ತವಾಗಿ ಕಾಣಿಸ ಬಹುದು. ಕಥೆಯೆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ ಘಟಿಸುವ ಘಟನೆಗಳು ಒಂದನ್ನೊಂದು ಬೆನ್ನತ್ತುವ ರೀತಿ ಸೊಗಸಾಗಿದ. ಚಿತ್ರ ಮುಗಿಸಿ ಹೊರಬಂದ ಮೇಲೆ ನನ್ನೊಳಗೆ ಕಥೆ ಆರಂಭವಾಗಲು ಆರಂಬಿಸಿತು.. ಒಂದೊಂದು ಪಾತ್ರದಲ್ಲು ಒಂದೊಂದು ಕಥೆ ಅರಳ ತೊಡಗಿತು. ಚಿತ್ರ ಒಳಗೊಂಡ ಸಂಗೀತ ಸಾಹಿತ್ಯ ನವಿರು ಭಾವದ ಅಲರು ಕಂಪನವನ್ನ ಹುಟ್ಟಿಸುತ್ತದೆ..” ಮಳೆ ಮರೆತು ಹಸಿರಾಗಿ ನಿಂತಾಗ ಈ ಭೂಮಿ ..ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ.. ಹಾಡು ಗುಂಗಿನಂತೆ ಕಾಡುತಿದೆ.. ಹೌದು ಉಳಿದವರು ಕಂಡಂತೆ ಒಂದು ಉತ್ತಮವಾದ ಚಿತ್ರ.. ಕನ್ನಡಕ್ಕೊಂದು ಪ್ರಯೋಗಾತ್ಮಕ ಚಿತ್ರ ಎಂದು ಹೇಳಬಲ್ಲೆ.. ರಕ್ಷಿತ್ ಮತ್ತು ತಂಡಕ್ಕೆ ನನ್ನದೂಂದು ಅಭಿನಂದನೆ…
*** *** ***
– ಅವಿನ್ ಶೆಟ್ಟಿ ಕಂಡಂತೆ
ಹೊಡಿ ಬಡಿ ಅದೇ ಮರ ಸುತ್ತುವ ಪ್ರೀತಿ ಪ್ರೇಮ ಚಿತ್ರಗಳನ್ನು ನೋಡಿ ನೋಡಿ ಅನಾರೋಗ್ಯಕ್ಕೆ ತುತ್ತಾದ ಸದಬಿರುಚಿಯ ಕನ್ನಡ ಪ್ರೇಕ್ಷಕನಿಗೆ ಒಂದು ಆರೋಗ್ಯಕರ ಚಿತ್ರ .. “ಉಳಿದವರು ಕಂಡಂತೆ ”
ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ಕಡೆ ತುಂಬ ಜನ ಸೇರಿರುತ್ತಾರೆ ಅಲ್ಲಿ ಏನಾಗಿದೆ ಎಂದು ಸ್ಪಷ್ಟ ಚಿತ್ರಣ ನನಗೆ ಗೊತ್ತಾಗಿರುವುದಿಲ್ಲ ಒಟ್ಟಿನಲ್ಲಿ ಅಲ್ಲಿ ಏನೋ ಘಟನೆ ಸಂಬವಿಸಿದೆ ಎಂದಷ್ಟೇ ಗೊತ್ತು.. ಈಗೆ ಅಲ್ಲಿದ್ದವರನ್ನು ವಿಚಾರಿಸಿದಾಗ ಒಬ್ಬಬ್ಬರು ಆ ಘಟನೆಯನ್ನು ತರ ತರ ವಿವರಿಸುತ್ತಾರೆ ಅದು ಈಗೆ ಬಂದು ಆಗೇ ಆಗಿ ಈಗೆ ಆಯಿತು… ಉಳಿದವರು ಕಂಡದ್ದನ್ನು ಅರ್ಥ ಮಾಡಿ ಕೊಂಡು ಈಗೆ ಆಗಿರಬೊಹುದೆಂದು ಮನದಲ್ಲೇ ಘಟನೆಯ ಸ್ಪಷ್ಟಚಿತ್ರಣವನ್ನು ಕಲ್ಪಿಸಿಕೊಂಡು ಅರ್ಥ ಮಾಡಿಕೊಳ್ಳುವುದು ಬುದ್ದಿವಂತರ ಲಕ್ಷಣ …
“ಉಳಿದವರು ಕಂಡಂತೆ” ಚಿತ್ರದ ಬಗ್ಗೆ ನಕಾರಾತ್ಮಕವಾಗಿ ವಿಮರ್ಶೆ ಗೀಚಿದ ಕನ್ನಡ ಪತ್ರಿಕೆಯ ಚಿತ್ರ ವಿಮರ್ಶಕರು ಇಷ್ಟನ್ನು ಅರ್ಥೈಸಿ ಕೊಂಡಿದ್ದರೆ ಸಾಕಿತ್ತು .. ಬರಿ ಸ್ಟಾರ್ ನಟರ ಚಿತ್ರಗಳನ್ನೇ ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬರೆಯುವುದನ್ನು ಇನ್ನಾದರೂ ನಿಲ್ಲಿಸಿ ಹೊಸಬರ ಪ್ರಯೋಗಾತ್ಮಕ ಚಿತ್ರಗಳನ್ನು ಸರಿಯಾಗಿ ಗುರಿತಿಸದೆ ಬಾಯ್ಗೆ ಬಂದಾಗೆ ವಿಮರ್ಶೆ ಗೀಚುವುದು ಒಳ್ಳೆಯ ಬೆಳೆವಣಿಗೆಯಲ್ಲ. “ಲೂಸಿಯ” ನಂತರ ಕನ್ನಡದಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ “ಉಳಿದವರು ಕಂಡಂತೆ” ತುಂಬ ವಿಶೇಷವಾಗಿ ಮೂಡಿಬಂದಿರುವ ಚಿತ್ರ .. ಬರಿ ಸಿನಿಮಾ ನೋಡುತ್ತಾ ಪಾಪ್ ಕಾರ್ನ್ ತಿಂದು ಎದ್ದೋಗುವ ಸೋಮಾರಿ ಪ್ರೇಕ್ಷಕನ ಮೆದುಳಿಗೆ ನಾಜೂಕಿನ ಕೆಲಸ ಕೊಟ್ಟಿದ್ದಾರೆ ರಕ್ಷಿತ್ ಶೆಟ್ರು(ನಿರ್ದೇಶಕ) ಒಂಥರ ಫಜಲ್ ಆಡಿದ ಹಾಗೆ .. ಎಪ್ಪತ್ತು ಎಂಬತ್ತರ ದಶಕದ ಕರಾವಳಿ ಚಿತ್ರಣವನ್ನು ತೋರಿಸಿದ ರೀತಿ ಮತ್ತು ಹುಲಿ ವೇಷದ ಕುಣಿತ ಅದ್ಬುತ ಅಷ್ಟೊಂದು ಮನೋಜ್ಞವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಚಾವ್ಲಾ, ಮಂಗಳೂರು ಕನ್ನಡ ,ಕುಂದ ಗನ್ನಡ (ಕುಂದಾಪ್ರ ಕನ್ನಡ )ತುಳು ,ಮಂಡ್ಯ ಕನ್ನಡ .. ಆಯಾ ಪಾತ್ರಕ್ಕೆ ತಕ್ಕಂತೆ ಬಾಷಾ ದೃವೀಕರಣ ಗೊಳಿಸಿ ಚಿತ್ರದಲ್ಲಿ ಬಾಷಾ ಸೊಗಡನ್ನು ಬೆರೆಸಿದ ರೀತಿಯೂ ಗಮನಾಹ್ರ.ದೃಶ್ಯಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಚೂರು ಕಿರೀ ಕಿರೀ ಆದರೂ ಮತ್ತೇನೋ ತಣ್ಣನೆ ಅನುಬವ ,ಕಾಕಿಗ್ ಬಣ್ಣ ಕಾಂತ” ಕುಂದಗನ್ನಡ ಸಾಹಿತ್ಯ ಶ್ರೇಯಗೋಶಲ್ ದ್ವನಿಯಲ್ಲಿ ಮದುರವಾಗಿ ಮೂಡಿ ಬಂದಿದೆ. ಶೀತಲ್ ಯಜ್ಞ ಕಿಶೋರ್ ರಕ್ಷಿತ್ ಅಚ್ಯುತ್ ಎಲ್ಲರೂ ಉಳಿದವರು ಕಂಡ ಪಾತ್ರಕ್ಕೆ ಈವ ತುಂಬಿದ್ದಾರೆ. ನಿರ್ದೇಶಕ ರಕ್ಷಿತ್ ರ ಹೊಸತನಕ್ಕೆ ಅಬಿನಂದನೆಗಳು ಮತ್ತು ತಲೆಗ್ ಹುಳ ಬಿಟಿದ್ಕೆ ..
*** *** ***
– ಗುರುಪ್ರಸಾದ್ ಆಚಾರ್ಯ ಕಂಡಂತೆ
ಕೆಲವೊಮ್ಮೆ ನಾವುಗಳು ಕೆಲವೊಂದು ವಿಷಯಕ್ಕೆ ಯಾವ ರೀತಿ ಸೆಟ್ ಆಗಿ ಬಿಡ್ತೇವೆ ಅಂದ್ರೆ…. ಅದರಿಂದ ಹೊರಬರೋಕೆ ಆಗೋದಿಲ್ಲ… ಅದೇ ರೀತಿ ಕೆಲವೊಂದು ಜನರಿಗೆ ಸಿನಿಮಾ ಅಂದ್ರೆ… ಇದೇ ರೀತಿ…. ಮೂರು ಲವ್ ಸಾಂಗ್… ನಾಲ್ಕು ಫೈಟ್… ಫಾರಿನ್ ಲೊಕೇಶನ್ನು…. ಇದಿಷ್ಟೇ…. ಇದಕ್ಕೆ ಹೊರತಾಗಿ ಏನಾದ್ರೂ ಹೊಸ ರೀತಿಯ ಪ್ರಯತ್ನವಾದರೆ…. ಥೂ ಏನ್ ಡಬ್ಬಾ ಸಿನಿಮಾನಪ್ಪಾ ಅಂತಾರೆ…. ಅದೇ ಥರದ ಹಾಲಿವುಡ್ ಸಿನಿಮಾ ಮಾಡಿದ್ರೆ…. ” ಏನ್ ಸಕ್ಕತ್ತಾಗಿದೆ ಗುರು…. ಅದೇನ್ ಥಿಂಕಿಂಗ್…. ವ್ಹಾ….” ಹಾಗೆ ಹೀಗೆ ಅಂತ ಅಟ್ಟಕ್ಕೇರಿಸುತ್ತೇವೆ… ನಮ್ಮವರು ಮಾಡಿದರೆ…. ಇರಲಿ ಬಿಡಿ…ನಮ್ಮವರಿಗೆ ಬೆಲೆಕೊಡೋದನ್ನ ಯಾವಾಗ್ಲೋ ಬಿಟ್ಟು ಬಿಟ್ಟಿದ್ದೇವೆ… ಉಳಿದವರು ಕಂಡಂತೆ…. ಒಂದು ಸಾಧಾರಣ ಕನ್ನಡ ಸಿನಿಮಾ ಅಲ್ಲ….. ಅದೊಂದು ಸಿನಿಮಾದಲ್ಲಿ ಕಥೆ ಹೇಳುವ ಹೊಸ ಶೈಲಿ… ಒಂದು ಘಟನೆಯನ್ನ… ಆ ಘಟನೆಯಲ್ಲಿನ ಪಾತ್ರಗಳ ದೃಷ್ಟಿಕೋನದಲ್ಲಿ ನೋಡೋದು…. ಬಹುಶ ನೀವ್ ಏನ್ ಕಥೆ ಅಂದ್ರೆ ಹೇಳೋಕಂತೂ ಆಗಲ್ಲ… ಅದನ್ನ ನೋಡಿಯೇ ಆನಂದಿಸಬೇಕು…. ಆದರೆ ಪ್ರತಿಯೊಮ್ಮೆ ನೀವು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದ ಘಟನೆಯಲ್ಲಿಗೇ ಇನ್ನೊಬ್ಬನ ಪಾತ್ರ ಬಂದು ಸೇರುವಾಗ ಮನಸ್ಸಿಗಾಗೋ ಖುಷಿ ಬೇರೇನೇ….” ಓಹ್ ಇದು…. ಆವಾಗಿನದ್ದಲ್ವಾ… ” ಅಂತ ಮನಸ್ಸು ತನಗೆ ತಾನೇ ಹೇಳಿಕೊಳ್ಳುತ್ತದೆ. ಇಂತಹ ಒಂದು ಅದ್ಭುತ ಪ್ರಯತ್ನಕ್ಕೆ… ನಿರ್ದೇಶಕ “ರಕ್ಷಿತ್ ಶೆಟ್ಟಿಗೆ ” ಸಲಾಂ ಹೊಡೆಯಲೇ ಬೇಕು…. ಕಥೆಯ ನಿರೂಪಣೆ ಹೇಗೋ… ಹಾಗೇ… ಅದಕ್ಕೆ ತಕ್ಕಂತ ದೃಶ್ಯ…. ಅದನ್ನ ಸೆರೆ ಹಿಡಿದ ರೀತಿಯೂ ಅದ್ಭುತ… ಸಿನಿಮಾಕ್ಕೆ ಬೇಕಾದ ರೀತಿಯ ಹಾಡು…. ಹಿನ್ನಲೆ ಸಂಗೀತ… ಇನ್ನು ಅಭಿನಯದ ವಿಚಾರಕ್ಕೆ ಬಂದರೆ ಒಬ್ಬರಿಗಿಂತ ಒಬ್ಬರು ಮಿಗಿಲು… ಅದರಲ್ಲೂ ನಟಿ ” ತಾರ “ಅವರ ತಾಯ್ತನದ ಭಾವಾಭಿವ್ಯಕ್ತಿ…. ವಾಹ್ ಹೇಳೋಕಾಗೋಲ್ಲ… ಬಹುಶ ಇಲ್ಲಿನ ಕುಂದಾಪುರ ಭಾಷೆ ಅಥವಾ ತುಳು ಭಾಷೆ ಮಂಗಳೂರಿನ ಕನ್ನಡ ಮಾತಾಡುವ ರೀತಿ ಕೆಲವರಿಗೆ ಹಿಡಿಸದೇ ಹೋಗಬಹುದೇನೋ… ಆದರೆ ಅದೆಲ್ಲವನ್ನೂ ಪ್ರಸ್ತುತ ಪಡಿಸಿದ ರೀತಿ ಅದ್ಭುತ….ಹಲವು ಕಡೆ “ರಿಚ್ಚಿ” ಪಾತ್ರದ ಡೈಲಾಗ್ ನಿಮಗೆ ಕಚಗುಳಿ ಇಡುತ್ತದೆ… ಇಡಿಯ ಸಿನಿಮಾದಲ್ಲಿ ಆ ರಿಚ್ಚಿ ಇನ್ನೊಬ್ಬರಿಗೆ ಹೊಡೆಯುವಾಗ ತಾನು ಹೇಳುತ್ತಿದ್ದ ಕಥೆ…. ಆ ಕಥೆಯ ಕೊನೆಯಲ್ಲಿನ ” ಕನ್ಫ್ಯೂಶನ್ ” ಸ್ವತಃ ತನಗೇ ಆಗೋದನ್ನ ತೋರಿಸಿದ ರೀತಿ…. ವರ್ಣಿಸಲಸದಳ….. ನಾನು ಹೇಳಿರೋ ಮಾತುಗಳು ನಿಮಗೆ ಅರ್ಥವಾಗಿರಲಿಕ್ಕಿಲ್ಲ.(ನೀವು ಸಿನಿಮಾ ನೋಡಿರದಿದ್ದರೆ).. ಅದಕ್ಕೆ ನಿಮಗೊಂದೇ ಪರಿಹಾರ ಸೂಚಿಸ್ತೇನೆ….. ಹೋಗಿ ನೋಡ್ಕೊಂಡು ಬನ್ನಿ….
” ಎಂಚಿನ ಸಾವು ಮಾರ್ರೇ ನನಲಾ ತೂತುಜರಾ… ಪೋದ್ ತೂಲೆ…. ”
(ಎಂಥಾ ಸಾವು ಮಾರ್ರೇ ಇನ್ನೂ ನೋಡಿಲ್ವಾ…. ಹೋಗಿ ನೋಡಿ)
ನಮಸ್ತೆ…ಮೊದಲಿಗೆ ಸಿನಿಮಾ ಒಬ್ಬ ವ್ಯಕ್ತಿಯನ್ನು ಆತನ ಹಿನ್ನೆಲೆಯನ್ನು ಮತ್ತು ಆತನ ಪರಿಶ್ರಮವನ್ನು ಗಣನೆಗೆ ತೆಗೆದುಕೊಂಡು ನೋಡುವನ್ತಹದ್ದಲ್ಲ. ಮಣಿರತ್ನಂ ದೊಡ್ಡ ನಿರ್ದೇಶಕರೇ ಆದರೂ ಅವರ ಕಡಲ್ ಚಿತ್ರವನ್ನು ತನ್ಮಯನಾಗಿ ನೋಡಲು ತಾಕತ್ತು ಬೇಕು. ಇರಲಿ.
ಉಳಿದವರು ಕಂಡಂತೆ ಚಿತ್ರವನ್ನು ಬೈಯ್ಯುವ, ಹೊಗಳುವ ಭರದಲ್ಲಿ ನಡೆಯುತಿರುವ ಚರ್ಚೆ ನೋಡಿ ನನಗೆ ನಗುಬರುತ್ತದೆ.ಸಿನಿಮಾಕ್ಕೆ ಒಂದು ಲಯ ಮತ್ತು ಗಟ್ಟಿಯಾದ ಕತೆ ಮತ್ತು ಅದಕ್ಕೊಪ್ಪುವ ನಿರೂಪಣೆ ಬೇಕೇ ಬೇಕು. ಉಳಿದವರು ಕಂಡಂತೆ ಚಿತ್ರದಲ್ಲಿ ಅದ್ಯಾವುದೂ ಇಲ್ಲ. ಅಷ್ಟೆಲ್ಲಾ ಮಾಡಿದ, ಅಷ್ಟೆಲ್ಲಾ ಇರುವ ಚಿತ್ರದಲ್ಲಿ ಅದೆಲ್ಲಾ ಯಾಕಿಲ್ಲ ಎಂದರೆ ನಿರ್ದೇಶಕರಿಗೆ ಕತೆಯ ಮೇಲೆ ಹಿಡಿತ ಇಲ್ಲದಿರುವುದು. ಇಷ್ಟಕ್ಕೂ ಯಾವತ್ತೋ ಒಂದು ದಿನ ಯಾವುದೋ ಒಂದು ಸಿನಿಮಾ ನೋಡುವ ಪ್ರೇಕ್ಷಕನಿಗೆ ಸಿನಿಮಾ ಚೆನ್ನ ಎನಿಸಬಹುದು. ಆದರೆ ಅವರಿಂದ ಏನು ಉಪಯೋಗ[ಶ್ರೀವತ್ಸ ಜೋಷಿ] ದಿನ ಸಿಹಿ ತಿನ್ನುವವನಿಗೆ ರುಚಿಯ ವ್ಯತ್ಯಾಸ ಗೊತ್ತಾಗುತ್ತದೆ. ಅಪರೂಪಕ್ಕೆ ತಿನ್ನುವವನಿಗೆ ತಿಂದದ್ದೇ ಮಹಾ ಪ್ರಸಾದ.
ಇರಲಿ ಇಲ್ಲಿ ಗುರು ಪ್ರಸಾದ್ ಆಚಾರ್ಯ ಅವರ ಅಸಡ್ಡೆಯ ಮಾತಿಗೆ ಅವರಲ್ಲಿ ದತ್ತಾಂಶದ ಕೊರತೆ ಎದ್ದು ಕಾಣುತ್ತದೆ.ಪ್ರೇಕ್ಷಕ ಹೊಸತನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ. ಹಾಗೆಯೇ ಅತೀ ಬುದ್ದಿವಂತಿಕೆಯನ್ನು ಪೋಷಿಸಿಲ್ಲ. ಲೂಸಿಯ, 6-5=2, ಹಾಡೇ ಇಲ್ಲದ ನಿಷ್ಕರ್ಷ, ಪೋಲಿಸ್ ಸ್ಟೋರಿ, ಎ, ಉಪೇಂದ್ರ, ಮುಂಗಾರು ಮಳೆ, ದುನಿಯಾ, ಮೈಸೂರು ಮಲ್ಲಿಗೆ ಚಿನ್ನಾರಿ ಮುತ್ತ, ಹೀಗೆ ಹೊಸಬರ ಹಳಬರ ಪ್ರಯತ್ನ ಪ್ರಯೋಗಗಳನ್ನು ಎಗ್ಗು ಸಿಗ್ಗಿಲ್ಲದೆ ಒಪ್ಪಿಕೊಂಡಿದ್ದಾನೆ. ದಿನಗಟ್ಟಲೆ ಓಡಿಸಿದ್ದಾನೆ. ಹಾಗೆ ನೋಡಿದರೆ ಉಕ ಅರ್ಥವಾಗದ ಸಿನಿಮ ಅಲ್ಲ. ಗೊಂದಲವನ್ನು ನಿವಾರಿಸದ ಸಿನಿಮ. ಅತಿಯಾದ ಭರವಸೆ ಎದ್ದು ಕಾಣುತ್ತದೆ.
ಹಾಗೆಯೇ ಪತ್ರಿಕಾ ವಿಮರ್ಶೆಯ ವಿಷಯಕ್ಕೆ ಬಂದರೆ ಇಲ್ಲಿಯವರೆಗೆ ಬಿಡುಗಡೆಯಾದ ಎಲ್ಲಾ ಚಿತ್ರದ ಬಗ್ಗೆಯೂ ಪತ್ರಿಕೆಗಳು ವಿಮರ್ಶೆ ಮಾಡುತ್ತವೆ. ಅದರಲ್ಲಿ ಕೆಟ್ಟದಾಗಿ ಒಳ್ಳೆಯದಾಗಿ ಮಾಡಿರುವ ಉದಾಹರಣೆ ತುಂಬಾ ಇವೆ. ಉಪೇಂದ್ರ ಚಿತ್ರವನ್ನು ಜಾಳು ಜಾಳು ನಿರೂಪಣೆ ಎಂದಿದ್ದರು, ಗೊಂಬೆಗಳ ಲವ್ ಸೂಪರ್ , ಕತ್ತೆಗಳು ಸಾರ್ ಕತ್ತೆಗಳು ಕೆಟ್ಟ ಸಿನಿಮ… ಹೀಗೆ ಇತಿಹಾಸ ತಿರುವಿದರೆ ಸುಮಾರು ಚಿತ್ರದ ವಿಮರ್ಶೆಗೂ ಅದರ ಜನರ ತೀರ್ಪಿಗೂ ಅಜಗಜಾಂತರ ವ್ಯತ್ಯಾಸ ಇದ್ದದ್ದನ್ನು ನಾವು ಗಮನಿಸಬೇಕು. ಈಗ ಪತ್ರಿಕಾ ಮಾಧ್ಯಮ ಹೀಗೆಳೆದಿರಬಹುದು ಎಂದುಕೊಂಡರೆ ಜನರ ತೀರ್ಪೇನು ಎಂಬುದು ಪ್ರಶ್ನೆ..? ಮತ್ತು ಅದೇ ನಿಜವಾದ ಫಲಿತಾಂಶ ಕೂಡ. ಒಬ್ಬ ಚಿತ್ರ ನಿರ್ದೇಶಕ ಪತ್ರಿಕೆಗೆ ಚಿತ್ರ ಮಾಡುವುದಿಲ್ಲ ಅಲ್ಲವೇ? ಉಕ ವಿಷಯದಲ್ಲಿ ಜನರ ತೀರ್ಪು ಏನು ಎಂಬುದು ಈಗಾಗಲೇ ಗೊತ್ತಾಗಿದೆ.
ತೆರೆಯ ಮೇಲೆ ಖಾಲಿ ತಲೆಯಲ್ಲಿ ನೋಡಿದರೆ ಇವೆಲ್ಲಾ ಲೆಕ್ಕಕ್ಕೆ ಸಿಗುತ್ತವೆ ಎಂಬುದು ನನ್ನ ಅನಿಸಿಕೆ.
http://kannadachitravimarshe.blogspot.in/2014/03/blog-post_28.html
http://ravindratalkies.blogspot.in/2014/03/blog-post_30.html
ಅಭಿಪ್ರಾಯಕ್ಕೆ ಸ್ವಾಗತ.