ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2014

25

ಜೋಶಿಯವರು ಕಂಡಂತೆ.. ಉಳಿದವರು ಕಂಡಂತೆ.. ಹೀಗಂತೆ…

‍ನಿಲುಮೆ ಮೂಲಕ

-ಶ್ರೀವತ್ಸ ಜೋಶಿ

ಉಳಿದವರು ಕಂಡಂತೆಬೇಡಾ ನಂಬಬೇಡಾ… ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ.

‘ಉಳಿದವರು ಕಂಡಂತೆ’ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ.

ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ.

ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು.

ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, “ಈರೀತಿಯದು ಕನ್ನಡದಲ್ಲಿ ಇದೇ ಮೊದಲು” ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು.

’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ “ದ್ರಾಕ್ಷಿ ಹುಳಿಯಾಗಿದೆ” ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು.

ದ್ರಾಕ್ಷಿ ಅಲ್ಲ. ಹಲಸಿನಹಣ್ಣಿನ ದೃಷ್ಟಾಂತದ ಮೂಲಕ ಇದನ್ನು ನಿಮಗೆ ವಿವರಿಸುತ್ತೇನೆ. ಹಲಸಿನಹಣ್ಣು ತಿನ್ನಲಿಕ್ಕೆ ಸಿಹಿಯಾಗಿ ರುಚಿಯಾಗಿ ಇರುತ್ತದಾದರೂ ಅದು ಬಾಳೆಹಣ್ಣು ಅಥವಾ ಮಾವಿನಹಣ್ಣಿನಂತೆ ಅಲ್ಲವಲ್ಲ? ಮುಳ್ಳಿರುವ ಸಿಪ್ಪೆ, ಒಡೆದರೆ ಮೈಕೈಯೆಲ್ಲ ತಾಗುವ ಮೇಣ, ತೊಳೆಗಳನ್ನು ಬಿಡಿಸುವುದೆಂದರೆ ದೊಡ್ಡ ರಂಪ ರಾಮಾಯಣ. ಮತ್ತೆ ಆ ತೊಳೆಗಳೊಳಗಿನ ಬೀಜ ಬಿಸಾಡಬೇಕು. ಅಂತೂ ಕಷ್ಟದ ಕೆಲಸ. ಈ ಪತ್ರಿಕೆಗಳ ತಥಾಕಥಿತ ವಿಮರ್ಶಕಪ್ರಭೃತಿಗಳಿಗೆ ಹಲಸಿನ ತೊಳೆಗಳನ್ನು ಬಿಡಿಸಿ ಅಂದವಾಗಿ ಪ್ಲೇಟ್‌ನಲ್ಲಿ ಜೋಡಿಸಿ ಅದರ ಮೇಲೊಂದಿಷ್ಟು ಸಕ್ಕರೆಪುಡಿಯನ್ನೋ ಜೇನುತುಪ್ಪವನ್ನೋ ಸುರಿದು, ಸಾಧ್ಯವಾದರೆ ಬಾಯಲ್ಲಿ ತುತ್ತನ್ನೂ ಇಟ್ಟು (ಹಾಗೆಂದರೇನೆಂದು ನೀವೇ ಅರ್ಥಮಾಡಿಕೊಳ್ಳಿ) ಅವರಿಂದ “ಆಹಾ! ಎಂಥ ಮಧುರವಾಗಿದೆ” ಎಂದು ಉದ್ಗಾರ ಬರುವುದು ಅಭ್ಯಾಸವಾಗಿ ಹೋಗಿದೆ. ಅಂಥವುಗಳಿಗೆ ತೊಳೆ ಬಿಡಿಸಿ ಕೊಡುವ ಬದಲು ಇಡೀ ಹಲಸಿನಹಣ್ಣನ್ನೇ ಕೊಟ್ಟು “ತೆಗೊಳ್ರಯ್ಯಾ ಬಿಡಿಸಿ ತಿಂದು ನೋಡಿ ರುಚಿ ಹೇಗಿದೆ ಅಂತ ಹೇಳಿ” ಅಂದ್ರೆ ಅವು ಜನ್ಮದಲ್ಲಿ ಹಲಸಿನಹಣ್ಣು ನೋಡದೇ ಇರುವವರಂತೆ ಒದ್ದಾಡಿದರೆ ಅಚ್ಚರಿಯಿಲ್ಲ ಅಲ್ಲವೇ? ಅದೇ ಆಗಿರುವುದು ’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆಯ ವಿಚಾರದಲ್ಲಿ!

ರಕ್ಷಿತ್ ಶೆಟ್ಟಿ ಮತ್ತು ತಂಡದವರು ತಯಾರಿಸಿರುವ ಈ ಅದ್ಭುತ ಸಿನೆಮಾ, ಈಗಿನ ಕಾಲದ ಅಸಂಬದ್ಧ ಟೈಟಲ್‌ಗಳ, ಕೆಟ್ಟ ಸಂಭಾಷಣೆಗಳ, ಐಟಂ ಸಾಂಗು, ಮಚ್ಚು ಲಾಂಗುಗಳ ಸಿದ್ಧಸೂತ್ರಗಳಿಗೆ ಜೋತುಬಿದ್ದಿರುವ, ಕ್ರಿಯಾಶೀಲತೆ ಶೂನ್ಯವಾಗಿರುವ ಕಚಡಾ ಸಿನೆಮಾಗಳಿಗಿಂತ ಗಾವುದ ದೂರಕ್ಕೆ, ಗಂಭೀರ ಎತ್ತರಕ್ಕೆ ನಿಲ್ಲುವ ಸಿನೆಮಾ. “ಮಾಮೂಲಿ run-of-the-mill ಚಿತ್ರ, ಪ್ಲೇಟ್‌ನಲ್ಲಿ ಬಿಡಿಸಿಟ್ಟ, ಅಷ್ಟಿಷ್ಟು ಸಕ್ಕರೆಪುಡಿಯನ್ನೂ ಚಿಮುಕಿಸಿದ ಹಲಸಿನ ತೊಳೆಗಳನ್ನು ಚಪ್ಪರಿಸಿದರಾಯ್ತು” ಎಂದುಕೊಂಡು ಹೋಗಿದ್ದ “ವಿಮರ್ಶಕ”ರಿಗೆ ಈ ಸಿನೆಮಾದ ತಲೆಬುಡ ಅರ್ಥ ಆಗಿಲ್ಲ.

“ಟ್ರೈಲರ್ ನಂಬಿ ಸಿನೆಮಾ ನೋಡಬಾರದು ಎನ್ನುವುದಕ್ಕೆ ಈ ಮಹಾ ‘ಬೋರ್’ಗರೆಯುವ ಸಿನೆಮಾ ಸಾಕ್ಷಿ! ಎಕ್ಸ್ಟ್ರಾ ಕಾಸಿದ್ದರೆ ಮಾತ್ರ ಈ ಸಿನೆಮಾ ನೋಡಬಹುದು, ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಉಳಿದುಕೊಂಡು ಬಿಡಿ!” ಎಂಬುದು ಕನ್ನಡಪ್ರಭದ ವಿಮರ್ಶೆ. “ಥಿಯೇಟರ್ ನಲ್ಲಿ ‘ಉಳಿದವರಿಗೆ’ ಅಪಾಯ!” ಎಂಬ ಶೀರ್ಷಿಕೆ ಬೇರೆ. ಅಪಾಯ ಇರುವುದು ಚಿತ್ರಕ್ಕಲ್ಲ, ಪ್ರೇಕ್ಷಕನಿಗೂ ಅಲ್ಲ. ತನ್ನ ಮೂರ್ಖತನವನ್ನು ಜಗಜ್ಜಾಹಿರು ಮಾಡಿ ಮೂರುಕಾಸಿನ ಮರ್ಯಾದೆಯನ್ನು ಬಿಚ್ಚಿಟ್ಟ ಆ ವಿಮರ್ಶಕನಿಗೆ!

ಪ್ರಜಾವಾಣಿ ಕೂಡ ಈ ಚಿತ್ರದ ವಿಮರ್ಶಾಪರೀಕ್ಷೆಯಲ್ಲಿ utter failure! ಚಿತ್ರವಿಡೀ ’ನಟನೆ’ ಇರಬೇಕು ಎಂದು ಹುಡುಕಿದ ಪ್ರಜಾವಾಣಿಗೆ ಒಂದೆರಡು ದೃಶ್ಯಗಳಲ್ಲಿ ಮಾತ್ರ ’ನಟನೆ’ ಇರುವುದು, ಮತ್ತೆಲ್ಲವೂ ಕಚ್ಚಾ ಹಲಸಿನಹಣ್ಣಿನಂತೆ ಇದೆ ಎಂಬ ಅನುಭವವಾಗಿದೆ. “ಹಾಗೆ ನೋಡಿದರೆ ತನ್ನ ಮಗನಿಗಾಗಿ ಹಂಬಲಿಸುವ ತಾಯಿಯ ಪ್ರಸಂಗ ಸಿನೆಮಾದ ಹೈಲೈಟ್. ಕಿಶೋರ್ ಮತ್ತು ಯಜ್ಞಾಶೆಟ್ಟಿ ನಡುವಣ ಮೌನ ಸಂಭಾಷಣೆಯ ಪುಟ್ಟ ದೃಶ್ಯಗಳು ಕೂಡ ರಮಣೀಯವಾಗಿವೆ. ಈ ಆರ್ದ್ರತೆ ಇನ್ನಷ್ಟು ದೃಶ್ಯಗಳಿಗೆ ಪಸರಿಕೊಂಡಿದ್ದರೆ ’ಉಳಿದವರು ಕಂಡಂತೆ’ ಒಂದು ವಿಶಿಷ್ಟ ಚಿತ್ರವಾಗುತ್ತಿತ್ತು. ಅದಿಲ್ಲವಾದ್ದರಿಂದ ಇದೊಂದು ವಿಫಲ ಪ್ರಯೋಗ” ಎಂದಿದೆ ಪ್ರಜಾವಾಣಿ. ಕಂಪ್ಲೀಟ್ ರಾಂಗ್. ವಿಫಲ ಆದದ್ದು ಚಿತ್ರವಲ್ಲ, ಚಿತ್ರದ ಮೌಲ್ಯ ಅರಿಯದ ಪ್ರಜಾವಾಣಿ! ಕೃತಕ ಆರ್ದ್ರತೆಯನ್ನು ತುಂಬಿಸುವುದನ್ನು (= ತೊಳೆಗಳು ಸಪ್ಪೆಇದ್ದರೆ ಜೇನಿನಲ್ಲಿ ಅದ್ದಿ ವಿಮರ್ಶಕರಿಗೆ ಕೈತುತ್ತು ಕೊಡುವುದನ್ನು) ಮಾಡದಿರುವುದರಿಂದಲೇ ಚಿತ್ರವು ನಮಗೆಲ್ಲ ಏಕ್‌ದಂ ಇಷ್ಟವಾಗಿದೆ. ಬಹುಶಃ ರಕ್ಷಿತ್ ಶೆಟ್ಟಿಯ ಉದ್ದೇಶವೂ ಅದೇ ಆಗಿದ್ದಿರಬೇಕು.

ಇನ್ನೊಂದು ಪತ್ರಿಕೆ ವಿಜಯಕರ್ನಾಟಕ ಸಹ ವಿಮರ್ಶೆಯಲ್ಲಿ ಅನುತ್ತೀರ್ಣ! “ಕತೆಯೊಂದು ಕಾಡಲು ತುಂಬಾ ಸರ್ಕಸ್ ಮಾಡಬೇಕಿಲ್ಲ. ಅದು ಹೃದಯಕ್ಕೆ ಹತ್ತಿರವಾದರೆ ಸಾಕು. ಇದು ಚಾರ್ಲಿ ಚಾಪ್ಲಿನ್ ಮಾತು. ಆದರೆ ಕತೆ ಹೇಳುವ ಕ್ರಮದಲ್ಲಿ ತುಂಬಾನೇ ಗೊಂದಲ ಮೂಡಿಸುತ್ತಾರೆ ಈ ಚಿತ್ರದ ನಿರ್ದೇಶಕರು.” ಎಂದು ಬರೆದಿದೆ ಆ ಪತ್ರಿಕೆ. ವಿಜಯವಾಣಿಯ ಹಣೆಬರವೂ ಅಷ್ಟೇ. “ಡಬ್ಬಿಂಗ್ ಇಲ್ಲದೆ ಚಿತ್ರೀಕರಣದ ವೇಳೆಯೇ ಧ್ವನಿಮುದ್ರಿಸಿಕೊಂಡಿದ್ದರಿಂದ ಯಾವೊಂದು ಪಾತ್ರದ ಮಾತಿನಲ್ಲೂ ಸ್ಪಷ್ಟತೆ ಇಲ್ಲ. ಮೂರಲ್ಲ, ಎರಡು ಕೊಲೆ. ಒಂದು ನಿಗೂಢ ನಾಪತ್ತೆಯ …ಕಂಡಂತೆ’ಯಲ್ಲಿ ಅಂತ್ಯದಲ್ಲಿ ಯಾರೂ ಸಾಯುವುದಿಲ್ಲ. ಪ್ರೇಕ್ಷಕನ ಹೊರತು” ಎಂದು ಅದು ಷರಾ ಬರೆದಿದೆ. ನಿಜವಾಗಿ ಸತ್ತಿರುವುದು ಪ್ರೇಕ್ಷಕನಲ್ಲ; ಸತ್ತು ಪಾತಾಳಕ್ಕಿಳಿದಿರುವುದು ದಿನಪತ್ರಿಕೆಗಳಲ್ಲಿ ಚಿತ್ರವಿಮರ್ಶಕರ ವಸ್ತುನಿಷ್ಠೆ ಮತ್ತು ಸಮಷ್ಟಿಪ್ರಜ್ಞೆ. ಮತ್ತೇನಲ್ಲ.

ಅಸಲಿಗೆ ಈ ವಿಮರ್ಶಕರೆಲ್ಲ ಈ ಚಿತ್ರದಲ್ಲಿ ’ಕಥೆ’ಯನ್ನು, ಕೊಲೆರಹಸ್ಯವನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಿದರೆಂಬುದೇ ಅರ್ಥವಾಗದ, ಅರ್ಥಹೀನ ವಿಚಾರ. ಸಿನೆಮಾ ಇರುವುದು ಆ ಘಟನೆಯ (ಕೊಲೆಯ) ಬಗ್ಗೆ ಅಲ್ಲ. ಆ ಘಟನೆಯನ್ನು ಅವರಿವರು ಹೇಗೆ ತಿಳಿದುಕೊಂಡಿದ್ದಾರೆ ಮತ್ತು ಬಣ್ಣಿಸುತ್ತಾರೆ ಎಂಬುದರ ಬಗ್ಗೆ. ಪ್ರೇಕ್ಷಕರಾಗಿ ನಾವು ಮಾಡಬೇಕಾದ್ದು ಸಹ ಆ ಕೊಲೆರಹಸ್ಯವನ್ನು ಬಿಡಿಸುವ ಕೆಲಸವನ್ನಲ್ಲ. ಅವರಿವರು ಅದನ್ನು ಬಣ್ಣಿಸುವಾಗ ತೆರೆದಿಟ್ಟುಕೊಳ್ಳುವ “ಬದುಕಿನ ಬಣ್ಣ”ಗಳನ್ನು ಆಸ್ವಾದಿಸುವುದು. ಬೇಕಿದ್ದರೆ ಅವುಗಳೊಂದಿಗೆ ನಮ್ಮನ್ನು ರಿಲೇಟ್ ಮಾಡಿಕೊಳ್ಳುವುದು. ಅಷ್ಟೇ. ಸಿಂಪಲ್. ಹಾಗೆ ಮಾಡಿದಾಗಿನ ಅನುಭೂತಿಯೇ ಬೇರೆ! ಮರದ ಆ ಪುಟ್ಟ ಆಟಿಗೆಯಲ್ಲಿ, ಉರಿಸಿಟ್ಟ ಲಾಟೀನುಗಳಲ್ಲಿ, ಒರಿಜಿನಲ್ ರೇಬಾನ್ ಕನ್ನಡಕವನ್ನು ತಾನೂ ಹಾಕಿಕೊಳ್ಳಬೇಕು ಎಂಬ ಆ ಹುಡುಗನ ಆಸೆಕಂಗಳಲ್ಲಿ, ದುಬೈಗೆ ಹೋಗುತ್ತೇನೆಂದು ಊರಿಗೆಲ್ಲ ಹೇಳುವ ಮೀನುಗಾತಿ ರತ್ನಕ್ಕನ ಸಡಗರದಲ್ಲಿ, ಯಕ್ಷಗಾನ ಬಯಲಾಟದಲ್ಲಿ, ಹುಲಿವೇಷದ ’ವೇಷ’ದಲ್ಲಿ, ಬೆರ್ಚಪ್ಪನಲ್ಲಿ,ಕಾಗೆಯ ಕೂಗಿನಲ್ಲಿ – ಹೀಗೆ ಚಿತ್ರದುದ್ದಕ್ಕೂ ರಕ್ಷಿತ್ ಶೆಟ್ಟಿ ಸೂಚ್ಯವಾಗಿ ತೋರಿಸಿರುವ subtle yet profound ಸಂಕೇತಗಳಷ್ಟೇ ಸಾಕು ಮೆದುಳು ಮತ್ತು ಬಾಯಿ ಏಕಕಾಲಕ್ಕೆ ಆಕಳಿಸುವುದನ್ನು ತಡೆಗಟ್ಟಲು. ಬಹುಶಃ ಈ ವಿಮರ್ಶಕರೆಲ್ಲ ಮೆದುಳನ್ನು ಮನೆಯಲ್ಲೇ ಬಿಟ್ಟುಹೋಗಿರ್ತಾರೆ ಸಿನೆಮಾ ನೋಡುವಾಗ

ನನಗೆ ಹೀಗೂ ಅನಿಸುತ್ತದೆ. ಇದೇ ಚಿತ್ರ ಒಂದುವೇಳೆ ತಮಿಳು/ತೆಲುಗಿನಲ್ಲಿ ಕಮಲಹಾಸನ್‌ನಂಥವರೋ, ಹಿಂದಿಯಲ್ಲಿ ನಾನಾ ಪಾಟೇಕರ್‌ನಂಥವರೋ ಮಾಡಿದ್ದಿದ್ದರೆ ಇದೇ ಪತ್ರಿಕೆಗಳು ಏನೇನೆಲ್ಲ ಉಪಮೆ ಉತ್ಪ್ರೇಕ್ಷೆಗಳನ್ನು ಬಳಸುತ್ತಿದ್ದವು ಎಂದು ನಮಗೆಲ್ಲ ಗೊತ್ತೇ ಇದೆ. ಇಂಗ್ಲಿಷ್‌ನಲ್ಲಿ ಹಾಲಿವುಡ್ ನಿರ್ಮಿತವಾಗಿದ್ದರಂತೂ ಆಸ್ಕರ್ ನಾಮಿನೇಷನ್‌ಗೆ ಯೋಗ್ಯ ಎಂದು ಬರೆಯಲೂ ಅವು ನಾಚುತ್ತಿರಲಿಲ್ಲ (ಆಗಲೂ ಚಿತ್ರದ ವಸ್ತು/ಅರ್ಥ ತಮ್ಮ ತಲೆಯೊಳಗೆ ಹೊಕ್ಕಿರುತ್ತಿರಲಿಲ್ಲ, ಆ ಮಾತು ಬೇರೆ). ಆದರೆ ಕನ್ನಡದಲ್ಲಿ ಉತ್ಸಾಹಿ ಹುಡುಗನೊಬ್ಬ ಮಾಡಿದ್ದಾನೆಂದರೆ “ಹಿತ್ತಲ ಗಿಡ ಮದ್ದಲ್ಲ” ಧೋರಣೆ? ಅದೇ ದೊಡ್ಡ ದುರಂತ. ಕನ್ನಡಿಗರ ಮಟ್ಟಿಗಂತೂ ಅತಿದೊಡ್ಡ ಶಾಪ ಅದು.

ಇರಲಿ. ಈ ಚಿತ್ರದ ಸ್ಪಷ್ಟ, ಸತ್ಯನಿಷ್ಠ ವಿಮರ್ಶೆ ಪತ್ರಿಕೆಯಲ್ಲಿ ಪ್ರಕಟವಾದದ್ದು ಓದಲೇಬೇಕು ಅಂತನಿಸಿದರೆ ನೀವು ಓದಬೇಕಾದ್ದು ಉದಯವಾಣಿಯಲ್ಲಿ ಬಂದಿರುವ ವಿಮರ್ಶೆಯನ್ನು. “ವಾಸ್ತವಕ್ಕೆ ಸಮೀಪವಾದ, ಆದರೆ ಅನೇಕರಿಗೆ ಅಪರಿಚಿತವಾದ ಒಂದು ಜಗತ್ತನ್ನು ಸಿನಿಮಾದೊಳಗೆ ತಂದಿರುವುದು ರಕ್ಷಿತ್ ಸಾಧನೆ. ಕಡಲಕಿನಾರೆಯಲ್ಲಿ, ಬಂದರಿನ ಆಸುಪಾಸಿನಲ್ಲಿ, ಮೀನುಜೆಟ್ಟಿಯ ಸಮೀಪದಲ್ಲಿ ನಡೆದುಹೋಗುತ್ತಿದ್ದರೆ ನಿಮಗೆ ಎದುರಾಗುವ ದೃಶ್ಯ , ಕೇಳಿಸುವ ಸದ್ದು ಎರಡೂ ಚಿತ್ರದೊಳಗೆ ಹಾಗ್ಹಾಗೇ ಬಂದುಬಿಟ್ಟಿದೆ.” ಎನ್ನುತ್ತದೆ ಆ ವಿಮರ್ಶೆ. ಮೇಲಿನ ವಿವರಣೆಯಲ್ಲಿ ನಾನು ಕಚ್ಚಾ ಹಲಸಿನಹಣ್ಣಿಗೆ ಹೋಲಿಸಿದ್ದು ಅದನ್ನೇ! ನಮಗೆ ಟಿನ್‌ನಲ್ಲಿ ಸಕ್ಕರೆಸಿರಪ್‌ನಲ್ಲಿ ಹಾಕಿಟ್ಟ ಹಲಸಿನ ತೊಳೆ ಇಷ್ಟ ಆಗೋಲ್ಲ. ಹಲಸಿನಹಣ್ಣನ್ನು ನಾವೇ ಕಡಿದು ತೊಳೆ ಬಿಡಿಸಿ ತಿನ್ನುವುದೆಂದರೆ ಪರಮಾನಂದ! ಮುಂದುವರಿಯುತ್ತ ಉದಯವಾಣಿ ಹೇಳುತ್ತದೆ- “ಒಂದು ಸಿನೆಮಾ ನೋಡಿದ ನಂತರವೂ ನಮ್ಮನ್ನು ಗುಂಗಿನಲ್ಲಿಡಬೇಕು, ಒಂದು ಪರಿಸರಕ್ಕೆ ನಿಷ್ಠವಾಗಿರಬೇಕು, ಮತ್ತು ನಮ್ಮ ಅನುಭವದ ಒಂದು ಭಾಗವಾಗಬೇಕು ಎಂದು ಆಸೆಪಡವವರು ಇದನ್ನು ಪ್ರೀತಿಯಿಂದ ನೋಡಬಹುದು.” ಎಂದು. ನನ್ನದೂ ಡಿಟೋ ಅದೇ ಅಭಿಪ್ರಾಯ! ಮೊನ್ನೆಮೊನ್ನೆ SKSE ಹಿಂದಿ ಚಿತ್ರವನ್ನು ನೋಡುವಾಗ ನಡುವೆ ಬೋರೆನ್ನಿಸಿ ಆಕಳಿಸಿದ್ದ ನಾನು ’ಉಳಿದವರು ಕಂಡಂತೆ’ಯನ್ನು ಭರಪೂರವಾಗಿ ಆನಂದಿಸಿದೆ, ಮನೆಗೆ ಬಂದು Raaga.comದಲ್ಲಿ ಹಾಡುಗಳನ್ನು, ಥೀಮ್ ಮ್ಯೂಸಿಕ್‌ಅನ್ನು ಮತ್ತೊಮ್ಮೆ ಕೇಳಿದೆ. ಅಂದಮೇಲೆ ಚಿತ್ರದ ಗುಂಗು ನನ್ನಲ್ಲಿ ಉಳಿದಿದೆ ಎಂದೇ ಅರ್ಥ ತಾನೆ?

* * *

ರಕ್ಷಿತ್ ಶೆಟ್ಟಿ ಮತ್ತು ಅವರ ಇಡೀ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಲೇ ವೈಯಕ್ತಿಕವಾಗಿ ನನಗೊಂದು ಅಂತರಾಳದ ಬಯಕೆಯೂ ಇದೆ. ಅದೇನೆಂದರೆ, ಈ ಚಿತ್ರವು ಪ್ರೇಕ್ಷಕ ಜನಸಾಮಾನ್ಯರ word-of-mouth ವಿಮರ್ಶೆಗಳಿಂದಲೇ ಪ್ರಚಾರ ಪಡೆದು ಭರ್ಜರಿ ಪ್ರದರ್ಶನಗಳಿಂದ ಶತದಿನೋತ್ಸವ ಸಂಭ್ರಮವನ್ನು ಕಾಣಬೇಕು. ಅದರ ನೆನಪಿಗೋಸ್ಕರ ರಕ್ಷಿತ್ ಶೆಟ್ಟಿ ಒಂದು ಚಿಕ್ಕಚೊಕ್ಕ ಸಮಾರಂಭವನ್ನು ಏರ್ಪಡಿಸಬೇಕು. ಕಪ್ರ, ಪ್ರವಾ, ವಿಕ ಮತ್ತು ವಿವಾ ಪತ್ರಿಕೆಗಳ ಆ ವಿಮರ್ಶಕ ಪ್ರಭೃತಿಗಳನ್ನು ಆಹ್ವಾನಿಸಿ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಅವರನ್ನು ವಿಶೇಷವಾಗಿ ವೇದಿಕೆಗೆ ಕರೆತಂದು “ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಈ ಮಹಾಶಯರುಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ” ಎಂದು ಸ್ವತಃ ರಕ್ಷಿತ್ ಶೆಟ್ಟಿಯೇ ಅವರನ್ನು ಸನ್ಮಾನಿಸಬೇಕು. Having the last laugh ಎಂದರೆ ಹಾಗಿರಬೇಕು!

Meanwhile, ನೀವಿನ್ನೂ ’ಉಳಿದವರು ಕಂಡಂತೆ’ ವೀಕ್ಷಿಸಿಲ್ಲವಾದರೆ, ಯಾವುದೇ ಪೂರ್ವಾಗ್ರಹವಿಲ್ಲದೆ ಚಿತ್ರವನ್ನು ವೀಕ್ಷಿಸಿ ಆನಂದಿಸಿ

Trailor ಇಲ್ಲಿದೆ ನೋಡಿ: http://youtu.be/Q5YAhG-_CRY

 

ಚಿತ್ರಕೃಪೆ : ಕನ್ನಡಪ್ರಭ

25 ಟಿಪ್ಪಣಿಗಳು Post a comment
  1. Nagshetty Shetkar
    ಏಪ್ರಿಲ್ 4 2014

    ರಕ್ಷಿತ್ ಶೆಟ್ಟಿ ಪತ್ರಿಕೆಗಳಿಗೆ ಸಾಕಷ್ಟು ದಕ್ಷಿಣೆ ಕೊಟ್ಟಿಲ್ಲ ಅಂತ ಕಾಣಿಸುತ್ತದೆ. ದಕ್ಷಿಣೆ ಚೆನ್ನಾಗಿ ಕೊಟ್ಟರೆ ವಿಮರ್ಶಕರು ಚೆನ್ನಾಗಿ ಹರಸುತ್ತಾರೆ, ಕಡಿಮೆ ಕೊಟ್ಟರೆ ಕಡಿಮೆ ಹರಸುತ್ತಾರೆ, ಕೊಡಲಿಲ್ಲ ಅಂದರೆ ಶಪಿಸುತ್ತಾರೆ. ಇದು ವಿಮರ್ಶೆಯ ಬಿಸಿನೆಸ್ ಮಾಡಲ್. ಶೆಟ್ಟರು ಜಿಪುಣತನ ತೋರಿ ಎಡವಟ್ಟು ಮಾಡಿಕೊಂಡರು.

    ಉತ್ತರ
    • Nagshetty Shetkar
      ಏಪ್ರಿಲ್ 4 2014
      • ಮಾರ್ಕ್ಸ್ ಮಂಜು
        ಏಪ್ರಿಲ್ 4 2014

        What is this Mr.Nagshetty Shetkar.What work Sharana like you has in these kind of ಬೂರ್ಜ್ವ post?

        ಉತ್ತರ
        • Nagshetty Shetkar
          ಏಪ್ರಿಲ್ 4 2014

          You are right Mr. Manju. Srivatsa Joshi’s writing has always been bourgeoisie even when he wrote in Vijaya Karnataka. Why is he celebrating a murder mystery? Isn’t that perversity in the name of entertainment? Is this the right time for entertainment? Especially when fascist forces are threatening to take over the reigns of India. Oh Mr. Joshi is an American I forgot! Movie seeing is Capitalist timepass and writing about it is Materialist obsession. Why is Nilume entertaining Mr. Joshi? Any idea Mr. Manju?

          ಉತ್ತರ
          • ಏಪ್ರಿಲ್ 7 2014

            [[Why is he celebrating a murder mystery? ]]

            ಎಲ್ಲ ಸಂಗತಿಗಳಲ್ಲೂ ಋಣಾತ್ಮಕವಾದುದನ್ನೇ ಕಾಣುವುದು ನಿಮ್ಮ ಹವ್ಯಾಸ.
            ಮತ್ತು ನಿಮಗೆ ನೀವೇ “+1” ಕೊಟ್ಟುಕೊಳ್ಳುವುದೂ ನಿಮಗೆ ಸಹಜ.
            ಸ್ವಂತದ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವುದು, ಅಸಹ್ಯ, ಅಪಮಾನ ಎಂದು ನಿಮಗೆಂದೂ ಅನ್ನಿಸುವುದೇ ಇಲ್ಲವೇನೋ!
            ಪಾಪ ನಿಮಗೆ ಯಾರೂ ಬೆನ್ನು ತಟ್ಟುವುದೇ ಇಲ್ಲವಾದ್ದರಿಂದ ನೀವಿನ್ನೇನು ಮಾಡಲು ಸಾಧ್ಯ!?

            ನಿಮಗೆ ನಮ್ಮ ಸಮಾಜ ಅರ್ಥವಾಗಲಾರದು. ಏಕೆಂದರೆ, ನಿಮಗೆ ಅರ್ಥ ಪಡಿಸಲು, ಅದು ಮಾರ್ಕ್ಸ್^ನ ಬಾಯಿಂದಲೋ, ಲೆನಿನ್^ನ ಬಾಯಿಂದಲೋ, ಸ್ಟಾಲಿನ್^ನ ಬಾಯಿಂದಲೋ, ಮಾವೋನ ಬಾಯಿಂದಲೋ ಉದುರಬೇಕು.
            ಒಂದು ಸಿನಿಮಾ, ತತ್ಕಾಲೀನ ಸಮಾಜದ ಪ್ರತಿಬಿಂಬವಾಗಿರುತ್ತದೆ. ಅಲ್ಲಿನ ನೋವು-ನಲಿವುಗಳ ದಾಖಲೆ ಅದು. ಅದೊಂದು ಕಲೆ. ಅಲ್ಲಿ ತಂತ್ರಜ್ಞಾನಕ್ಕೂ ಸ್ಥಾನವಿದೆ.
            ನಿಮಗೆ ಇದೆಲ್ಲಾ ಅರ್ಥವಾಗದು. ಏಕೆಂದರೆ, ಕಮ್ಯುನಿಸ್ಟ್ ರಾಜ್ಯಗಳಲ್ಲಿ ಮನುಷ್ಯರೂ ಯಂತ್ರಗಳೇ. ಯಾರೂ ಸ್ವಂತ ಯೋಚಿಸುವಂತಿಲ್ಲ; ಮನುಷ್ಯರಿಗೆ ಸ್ವಾತಂತ್ರ್ಯವಿಲ್ಲ; ಎಲ್ಲರೂ ಸರ್ವಾಧಿಕಾರಿ ಹೇಳಿದಂತೆ ಮಾತ್ರ ಕೇಳಬೇಕು. ನೀವು, ಇಂತಹ ಕಮ್ಯುನಿಸ್ಟ್ ಸರಕಾರಕ್ಕೆ ಹಾತೊರೆಯುತ್ತಿರುವಾಗ, ನಿಮಗೆ ಮನುಷ್ಯರ ಮನಸ್ಸಿನ ತಲ್ಲಣ ಎಲ್ಲಿ ಅರ್ಥವಾಗಬೇಕು?

            ಉತ್ತರ
            • Nagshetty Shetkar
              ಏಪ್ರಿಲ್ 7 2014

              Neither AAP nor Congress is communist although both appreciate Marxist approach to politics. NaMo is more similar to communist dictators than either Kejriwalji or Rahulji. I’m all for AAP & Kejriwalji.

              ಉತ್ತರ
              • ಏಪ್ರಿಲ್ 7 2014

                [[NaMo is more similar to communist dictators]]

                Carl Marx is the father of communism. And you are a marxist and believe in the worldview of Marxism. So, you must be a communist.
                So, if you feel NaMo is similar to communist dictator, then you must be happy right!? 😉

                ಉತ್ತರ
                • Nagshetty Shetkar
                  ಏಪ್ರಿಲ್ 9 2014

                  “if you feel NaMo is similar to communist dictator, then you must be happy right!?”

                  stupid logic. shows you are brain dead. marxism talks favourably of dictatorship of the proletariat but it does not support dictatorship of individuals. you don’t know abc of marxism and yet you argue for the sake of argument.

                  ಉತ್ತರ
                  • ಏಪ್ರಿಲ್ 9 2014

                    ಮಾವೋ, ಲೆನಿನ್, ಸ್ಟಾಲಿನ್ ಅನುಷ್ಠಾನಕ್ಕೆ ತಂದ ಕಮ್ಯುನಿಸಂ ಎಲ್ಲರಿಗೂ ಪರಿಚಿತವೇ. ವಿರೋಧಿಗಳನ್ನು ಯಾವ ರೀತಿ ಸಮಾಧಿ ಮಾಡಿ ವಿರೋಧವನ್ನು ಮೆಟ್ಟಿದರು, ಯಾವ ರೀತಿ ಸಹಸ್ರಾರು ಜನರ ಕೊಲೆಗೈದರು, ಇತ್ಯಾದಿಗಳೆಲ್ಲಾ ಗುಟ್ಟಾಗೇನಿಲ್ಲ.

                    ಚೀನಾದಲ್ಲಿ ನಡೆದ ಟಿಯಾನ್ನಮನ್ ಚೌಕದ ಕಥೆಯೂ ಇದೇ ರೀತಿ. ಅದೆಷ್ಟು ಸಹಸ್ರ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರೋ ದೇವರೇ ಬಲ್ಲ. ವಿದ್ಯಾರ್ಥಿಗಳನ್ನು ಕೊಂದದ್ದು ಮಾತ್ರವಲ್ಲ, ಟಿಯಾನ್ನಮನ್ ಚೌಕಕ್ಕೆ ಸಂಬಂಧಿಸಿದ ಸಮಸ್ತ ದಾಖಲೆಗಳನ್ನೂ ಚೀನಾ ಸರ್ವಾಧಿಕಾರಿಗಳು ಅಳಿಸಿ ಹಾಕಿದ್ದಾರೆ.

                    ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ಯಾವ ರೀತಿ ಮಾಡಿದರು ಎಂಬುದೂ ಎಲ್ಲರಿಗೂ ತಿಳಿದಿದೆ. ಆಗ ತಾನೇ ಹುಟ್ಟಿದ ಹಸುಳೆಗಳ ತಲೆಗೆ ಗುಂಡು ಹೊಡೆದು ಕೊಂದು ಅವರು ಜನಸಂಖ್ಯಾ ನಿಯಂತ್ರಣ ಮಾಡಿದರೆಂದರೆ, ಯಾವ ರಾಕ್ಷಸರಿಗೂ ಅವರು ಕಡಿಮೆಯಲ್ಲ. ಅಥವಾ ಅವರ ಕ್ರೌರ್ಯಕ್ಕೆ ರಾಕ್ಷಸರೂ ನಾಚಿಯಾರು!

                    ಇಷ್ಟೆಲ್ಲಾ ಕುಖ್ಯಾತಿಯ ಮಾರ್ಕ್ಸಿಸಂ, ಕಮ್ಯುನಿಸಂಗೆ ಸೇರಿದ ಸರ್ವಾಧಿಕಾರಿಗಳಿಗೆ ಮೋದಿಯವರು ಸಾಟಿಯಾಗಲು ಸಾಧ್ಯವೇ ಇಲ್ಲ.
                    ಮೋದಿಯವರು ಯಾವ ವಿರೋಧಿಯನ್ನೂ ಕೊಂದಿಲ್ಲ. ಮೋದಿಯವರು ಮುಖ್ಯಮಂತ್ರಿಯಾದ ಹೊಸತರಲ್ಲಿ ನಡೆದ ಕೋಮುಗಲಭೆಯನ್ನು ಅವರ ತಲೆಗೆ ಉದ್ದೇಶಪೂರ್ವಕವಾಗಿ ಕಟ್ಟಲಾಗಿದೆಯಷ್ಟೇ. ಕಾಂಗ್ರೆಸ್ ಮತ್ತು ಇನ್ನಿತರ ಜಾತ್ಯಾತೀತವಾದಿ ಪಕ್ಷಗಳ ಕಾಲದಲ್ಲಿ ನೂರಾರು ಕೋಮುಗಲಭೆಗಳು ನಡೆದಿವೆ ಮತ್ತು ಹತ್ತಾರು ಸಹಸ್ರ ಜನ ಕೊಲ್ಲಲ್ಪಟ್ಟಿದ್ದಾರೆ. ಇವಕ್ಕೆ ಹೋಲಿಸಿದರೆ ಗುಜರಾತಿನಲ್ಲಿ ನಡೆದದ್ದು ಏನೇನೂ ಅಲ್ಲ. ಜೊತೆಗೆ, ಗುಜರಾತಿನಲ್ಲಿ ಕೇವಲ ಮೂರು ದಿನಗಳಲ್ಲಿ ಗಲಭೆಯನ್ನು ಹತೋಟಿಗೆ ತರಲಾಯಿತು; ಗಲಭೆಗಳಲ್ಲಿ ಭಾಗವಹಿಸಿದವರಿಗೆ ಶಿಕ್ಷೆಯೂ ಜಾರಿಯಾಗಿದೆ; ಮಂತ್ರಿಯಾಗಿದ್ದವರಿಗೂ ಶಿಕ್ಷೆಯಾಗಿದೆ ಮತ್ತು ಅವರನ್ನು CBI ಅಂತಹ ಸಂಸ್ಥೆಯ ಸಹಾಯದಿಂದ ರಕ್ಷಿಸಲು ಮೋದಿಯವರೇನೂ ಪ್ರಯತ್ನಿಸಿಲ್ಲ; ನ್ಯಾಯ ವಿಚಾರಣೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅದೇ, ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ನಡೆದ ಗಲಭೆಗಳಲ್ಲಿ ಒಬ್ಬರಿಗೂ ಶಿಕ್ಷೆಯಾಗಿಲ್ಲ; ತನ್ನ ಪಕ್ಷಕ್ಕೆ ಸೇರಿದವರನ್ನು CBI ಮೂಲಕ ಕಾಂಗ್ರೆಸ್ ರಕ್ಷಿಸಿದೆ ಮತ್ತು ಅಂತಹವರಿಗೆ ಮಂತ್ರಿಗಿರಿಯ ಬಹುಮಾನವೂ ಲಭಿಸಿದೆ!

                    ನಿಮ್ಮ ಕಮ್ಯುನಿಸ್ಟ್ ಮತ್ತು ಮಾರ್ಕ್ಸಿಸ್ಟ್ ಸರ್ವಾಧಿಕಾರಿಗಳಿಗೆ ಅವರೇ ಸಾಟಿಯಷ್ಟೇ!

                    ಉತ್ತರ
                    • Nagshetty Shetkar
                      ಏಪ್ರಿಲ್ 9 2014

                      ನಿಮ್ಮ ಟೈಮ್ ಪಾಸ ವಾದ ಮುಂದುವರೆಸಿ. ಆದರೆ ವೋಟು ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ಹಾಕಿ.

                    • ಏಪ್ರಿಲ್ 9 2014

                      ಶೇಟ್ಕರ್,
                      ನಿಮಗೆ ಇಲ್ಲಿನ ಚರ್ಚೆಗಳು ಸಮಯ ಕಳೆಯಲು ಇರಬಹುದು.

                      ಆಮ್ ಆದ್ಮಿ ಪಕ್ಷದ ಸರಕಾರವನ್ನು 49 ದಿನ ಅನುಭವಿಸಿದ ದೆಹಲಿಯ ಜನರೂ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಬಾರದೆಂದು ನಿರ್ಣಯಿಸಿದ್ದಾರೆ!
                      ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ಸಿನ B-Team ಎಂಬುದೂ ಸಾಬೀತಾಗಿದೆ. ಭಾಜಪವನ್ನು ಮತ್ತು ನರೇಂದ್ರ ಮೋದಿಯವರನ್ನು ನೇರವಾಗಿ ಎದುರಿಸಲಾಗದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷವನ್ನು ಹುಟ್ಟು ಹಾಕಿತು. ಆದರೆ, ಅದು ಕೂಡಾ ಕೆಲಸ ಮಾಡಲಾರದೆಂದು ತಿಳಿದ ನಂತರ, ಅದು ಇಮಾಂ ಬುಖಾರಿಯವರ ಬಳಿ ಭಿಕ್ಷಕ್ಕೆ ಹೋಯಿತು!

                      ಇದೀಗ, ಶ್ರೀ ಶ್ರೀ ರವಿಶಂಕರ್ ಮತ್ತು ಬಾಬಾ ರಾಮದೇವ್ ಅವರ ಸಭೆಗಳನ್ನೂ ನಡೆಸಬಾರದೆಂದು ಚುನಾವಣಾ ಆಯೋಗಕ್ಕೆ ದೂರು ತೆಗೆದುಕೊಂಡು ಹೋಗಿದೆ!
                      ಬುಖಾರಿಯವರು ಮುಸಲ್ಮಾನರ ಮತೀಯ ಸಭೆ ಸೇರಿಸಿ, ಮುಸಲ್ಮಾನರೆಲ್ಲರೂ ಕಾಂಗ್ರೆಸ್ಸಿಗೇ ಮತ ಹಾಕಿರೆಂದು ಹೇಳಿದರೆ ಪರವಾಗಿಲ್ಲ.
                      ಹಿಂದೂ ಸಂತರು ಧಾರ್ಮಿಕ ಸಭೆ ಸೇರಿಸುವ ಹಾಗಿಲ್ಲ! ಹೇಗಿದೆ ಕಾಂಗ್ರೆಸ್ಸಿನ “ಜಾತ್ಯಾತೀತವಾದ”!!?
                      ಅಂದರೆ, ಕಾಂಗ್ರೆಸ್ಸು ಎಷ್ಟು ಭಯಭೀತವಾಗಿದೆ ಎನ್ನುವುದು ತಿಳಿಯುತ್ತಿದೆ ಅಷ್ಟೇ!

                      ಮೋದಿ ಪ್ರವಾಹದಲ್ಲಿ ಕಾಂಗ್ರೆಸ್, ಕೇಜ್ರೀವಾಲ್, ಕಮ್ಯುನಿಸ್ಟರು, ಜಾತ್ಯಾತೀತವಾದಿಗಳು ಕೊಚ್ಚಿಹೋಗಲಿದ್ದಾರೆ.
                      ಮುಂದಿನ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಹೇಳಿಕೊಳ್ಳುವುದಕ್ಕೂ ಇರುವುದಿಲ್ಲ.

                      ನೀವೇಕೆ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ನಿಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ?
                      ಭಾಜಪಕ್ಕೆ ಮತ ಹಾಕುವುದರ ಮೂಲಕ ಭವ್ಯ ಭಾರತವನ್ನು ಸ್ವಾಗತಿಸಿ.

                  • ವಿಜಯ್ ಪೈ
                    ಏಪ್ರಿಲ್ 9 2014

                    ಶೆಟ್ಕರ್ ಸಾಹೇಬರೇ ನೀವು ಅಷ್ಟೆ..ಕಾಂಗ್ರೆಸ್ ಗೆ ಮತ ಹಾಕಿ ಮತ್ತೆ!. ನಿಮ್ಮ ಈ ‘ಆಪ್ ಬೆಂಬಲಿಸಿ’ ನಾಟಕದ ಭರದಲ್ಲಿ, ಗಂಜಿ ಕೇಂದ್ರದ ಪ್ರಾಯೋಜಕರನ್ನು ಮರೆತು ಬಿಟ್ಟಿರಾ ಮತ್ತೆ!. ನಿಮಗೆ ಮೊದಲೇ ಗೊಂದಲ ಹೆಚ್ಚು..ಅದಕ್ಕೆ ಹೇಳಿದೆ. ಅಂದಹಾಗೆ ನಿಮ್ಮ ಗುರು ಕೃಷ್ಣಪ್ಪನವರಿಗೂ ಹೇಳಿ..

                    ಉತ್ತರ
                    • Nagshetty Shetkar
                      ಏಪ್ರಿಲ್ 9 2014

                      “ಅಂದಹಾಗೆ ನಿಮ್ಮ ಗುರು ಕೃಷ್ಣಪ್ಪನವರಿಗೂ ಹೇಳಿ..”

                      ದರ್ಗಾ ಸರ್ ಅವರದ್ದು ಮೌಲ್ಯಾಧಾರಿತ ಹೋರಾಟ. ವಚನಕಾರರ ದರ್ಶನದಿಂದ ರೂಪಿತವಾದ ಸಾಮಾಜಿಕ ನ್ಯಾಯದ ಪರ ದರ್ಗಾ ಸರ್ ಅವರಿದ್ದಾರೆ. ಮೋದಿಯದ್ದು ಬ್ರಾಹ್ಮಣ್ಯದ ಪಾರಮ್ಯವೇ ಪರಮ ಗುರಿ. ಬ್ರಾಹ್ಮಣ್ಯಕ್ಕೆ ಆದರ್ಶವೇ ಇಲ್ಲ.

                    • ವಿಜಯ್ ಪೈ
                      ಏಪ್ರಿಲ್ 9 2014

                      ಇದಕ್ಕೆ ಹೇಳಿದ್ದು ನಾನು ನೀವು ಗೊಂದಲ ಮಾಡಿಕೊಳ್ಳುತ್ತೀರಿ ಅಂತ..ನಾನು ಕೃಷ್ಣಪ್ನೋರ ಬಗ್ಗೆ ಮಾತನಾಡಿದರೆ, ನೀವು ದರ್ಗಾರ ಹೆಸರು ತೆಗೆಯುತ್ತೀರಿ!! ;).. ನಾಳೆ ಮತದಾನದ ಹೊತ್ತಿಗೂ ಹೀಗೆಯೇ ಗೊಂದಲ ಮಾಡಿಕೊಂಡು ‘ಆಪ್’ ಗೆ ಮತ ಹಾಕಿ ಬಿಡುತ್ತಿರೇನೊ ಎಂಬ ಸಣ್ಣ ಸಂಶಯ ನನಗೆ..

                    • Nagshetty Shetkar
                      ಏಪ್ರಿಲ್ 9 2014

                      “ನಾನು ಕೃಷ್ಣಪ್ನೋರ ಬಗ್ಗೆ ಮಾತನಾಡಿದರೆ, ನೀವು ದರ್ಗಾರ ಹೆಸರು ತೆಗೆಯುತ್ತೀರಿ!!”

                      ಓ ಸಾರಿ! ನೀವು ದರ್ಗಾ ಸರ್ ಅವರ ಬಗ್ಗೆ ಮಾತನಾಡಿದಿರಿ ಅಂತ ತಿಳಿದೆ.

                    • ವಿಜಯ್ ಪೈ
                      ಏಪ್ರಿಲ್ 10 2014

                      [ಓ ಸಾರಿ! ನೀವು ದರ್ಗಾ ಸರ್ ಅವರ ಬಗ್ಗೆ ಮಾತನಾಡಿದಿರಿ ಅಂತ ತಿಳಿದೆ.]
                      ಪರವಾಗಿಲ್ಲ ಬಿಡಿ..ಏಕಪಾತ್ರಾಭಿನಯದ ಹೊತ್ತಿಗೆ ಕೆಲವೊಮ್ಮೆ ಗೊಂದಲ ಆಗುವುದು ಸಹಜ…

                    • Nagshetty Shetkar
                      ಏಪ್ರಿಲ್ 10 2014

                      “ಏಕಪಾತ್ರಾಭಿನಯ”

                      ನಿಮ್ಮ ಊಹಾಪೋಹಗಳು ನಗೆ ತರಿಸುತ್ತವೆ ಮಿ. ವಿಜಯ್ ನಿಮ್ಮ ಚಿಂತನೆಯಂತೆ.

                    • ವಿಜಯ್ ಪೈ
                      ಏಪ್ರಿಲ್ 10 2014

                      ಜೋರಾಗಿ ನಗಬೇಡಿ..ಮತ್ತೆ ಅಕ್ಕ ಪಕ್ಕದವರಿಗೆ ಅನುಮಾನ ಸುರುವಾದಿತು!. ಆದರೂ ಏನೇ ಇರಲಿ..ಹೀಗೆಲ್ಲ ಗೊಂದಲ ಮಾಡಿಕೊಳ್ಳಬಾರದು ಕೃಷ್ಣಪ್ನೋರೆ..ಏನೇ ಮಾಡಿದ್ರೂ ವಿಚಾರಮಾಡಿ, ಪರ್ಫೆಕ್ಟ್ ಆಗಿ ಮಾಡಬೇಕು, ಅನುಮಾನ ಬಾರದಂತೆ!. ಇದರಲ್ಲಿ ಇನ್ನೂ ಪಳಗಬೇಕು ನೀವು.

                    • Nagshetty Shetkar
                      ಏಪ್ರಿಲ್ 10 2014

                      “ಏನೇ ಮಾಡಿದ್ರೂ ವಿಚಾರಮಾಡಿ, ಪರ್ಫೆಕ್ಟ್ ಆಗಿ ಮಾಡಬೇಕು, ಅನುಮಾನ ಬಾರದಂತೆ!”

                      ಉದಾ: ಗೋದ್ರಾ ನರಮೇಧ

                    • ವಿಜಯ್ ಪೈ
                      ಏಪ್ರಿಲ್ 10 2014

                      ಸರಿಯಾಗಿ ಗ್ರಹಿಸಿದ್ದೀರಿ..ಸರಿಯಾಗಿಹೇಳಿದ್ರಿ.!..ಮೊದಲೇ ಪೆಟ್ರೊಲ್ ಎಲ್ಲ ಸಂಗ್ರಹಿಸಿ ಇಡಬೇಕು..ರೇಲ್ವೆ ಸ್ಟೇಶನ್ ಗೆ ತರಲು ಅನುಕೂಲವಾಗುವಂತೆ. ಆಮೇಲೆ ಮಾಡುವುದನ್ನೆಲ್ಲ ಮಾಡಿ, ಗೊಳೊ ಅಂತ ಅಳಬೇಕು ಸಂತೃಸ್ತರ ಹಾಗೆ. ಆದರೆ ಒಂದು ಮಾತು..post project success ಗೆ ಎಡ ಗಂಜಿ ಗಿರಾಕಿಗಳ ಸಹಾಯ, ಸಹಕಾರ ಬಹುಮುಖ್ಯ. ಹನ್ನೆರಡು ವರುಷವಾಗದರೂ, ಎಕ್ಕಾ ಮಕ್ಕಾ ಉಗಿಸಿಕೊಂಡರೂ, ಗಾಳಿ ಹಾಕುತ್ತ ಬೆಂಕಿ ಇದೆ, ಬೆಂಕಿ ಇದೆ ಎಂದು ಬೊಬ್ಬೆ ಹಾಕುತ್ತ ಇರುವುದು ಸಾಮಾನ್ಯ ಕೆಲಸವಲ್ಲ. ಇವೆಲ್ಲವೂ ಸೇರಿಕೊಂಡರೆ ಕೆಲಸ ಪರ್ಫೆಕ್ಟ್!!

  2. vidya
    ಏಪ್ರಿಲ್ 10 2014

    vijaya pai sariyagi jadisiddira.+1000000000000000000000000000000

    ಉತ್ತರ
    • Nagshetty Shetkar
      ಏಪ್ರಿಲ್ 10 2014

      Ishrath Jehan encounter.

      ಉತ್ತರ
      • ವಿಜಯ್ ಪೈ
        ಏಪ್ರಿಲ್ 11 2014

        ಮುಂದಿನ ಹೆಸರು ಸೋಹ್ರಾಬುದ್ದೀನ ದಾ? ನಂತರ ಮಾಲೆಗಾಂವ? ಸಂಜೋತಾ ಎಕ್ಸಪ್ರೆಸ್? ಮಕ್ಕಾ ಮಸ್ಜಿದ್?ಅಜ್ಮೇರ್? ಹ್ಮ..ಅದರ ನಂತರ ತಲೆ ಕೆರೆದುಕೊಳ್ಳುವುದು!!. ಶೀಘ್ರ ಗುಣಮುಖರಾಗಿ ಎಂಬ ಹಾರೈಕೆ.

        ಉತ್ತರ
  3. Nagshetty Shetkar
    ಏಪ್ರಿಲ್ 10 2014

    http://www.vox.com/2014/4/10/5597644/narendra-modi-india-elections

    “More Hindu nationalism means more anti-Muslim sentiment, which could potentially mean more religious violence within India and more popular anger toward the mostly-Muslim Pakistan. Both of those are already huge problems for India, as they lead to violence, instability, and catastrophic incidents. While Hindu-Muslim tension and violence within India are nothing new, they certainly have the potential to get worse if the government encourages those tensions, which Modi has an alarming track record of doing.”

    ಉತ್ತರ
    • ವಿಜಯ್ ಪೈ
      ಏಪ್ರಿಲ್ 11 2014

      ಅಂತೂ ವಿದೇಶದವರ ಹೆದರಿಕೆಯನ್ನು ಕೂಡ ಗಮನಿಸಲಾರಂಭಿಸಿದಿರಿ.ನಂಬಲಾರಂಬಿಸಿದಿರಿ. .ಅದೂ 9/11 ರ ನಂತರ ಹೆಸರಿನಲ್ಲಿ, ಚಹರೆಯಲ್ಲಿ ಮುಸ್ಲಿಂ ಅಂಶ ಕಂಡು ಬಂದರೂ ಬಟ್ಟೆ ಬಿಚ್ಚಿಸುತ್ತಿದ್ದ ಅಮೇರಿಕಾದ ಹೆದರಿಕೆಯನ್ನು!. ಆದರೆ ಏನೂ ಇರಲಿ..ಈ ಊಹಾಪೋಹಗಳಿಂದ/ಕಲ್ಪನೆಗಳಿಂದ ಸಿಕ್ಕಾಪಟ್ಟೆ ಹೆದರಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲವೆನಿಸುತ್ತದೆ..ನಿರಾಳವಾಗಿರಿ..ಅಂತದ್ದೇನೂ ಆಗುವುದಿಲ್ಲ! 🙂

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments