ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 14, 2014

1

ತುಷ್ಟೀಕರಣ ನಿಲ್ಲದ ಹೊರತು ಕಾಶ್ಮೀರ ತಣಿಯದು

by ನಿಲುಮೆ

– ಯೋಗೀಶ ತೀರ್ಥಪುರ

J&Kಕಾಶ್ಮೀರ ಹಿಂದೂಗಳ ಪಾಲಿಗೆ ನರಕವಾಗಿ ಪರಿವರ್ತಿತವಾಗಿದೆ. ಹಿಂಸೆ, ಶೋಷಣೆಯ ದಳ್ಳುರಿಯಲ್ಲಿ ಇಲ್ಲನ ಹಿಂದೂಗಳ ಸ್ಥಿತಿ ತೀರಾ ದಯನೀಯವಾಗಿದೆ. ಇಷ್ಟೆಲ್ಲ ನಡೆದಿದ್ದರೂ ಕಾಶ್ಮೀರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತುಷ್ಟೀಕರಣ ರಾಜಕಾರಣದಲ್ಲೇ ಮುಂದುವರಿದಿರುವುದು ದುರದೃಷ್ಟಕರ.

1947ರ ವಿಭಜನೆಯ ನಂತರದ ಕಾಲದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ದಿಂದ ಸುಮಾರು 4.5 ಲಕ್ಷ ಹಿಂದುಗಳು ಕಾಶ್ಮೀರಕ್ಕೆ ಸ್ಥಳಾಂತರಗೊಂಡರು. ಈ ಹಿಂದುಗಳಿಗೆ ಕಾಶ್ಮೀರದಲ್ಲಿ ಮತದಾನದ ಹಕ್ಕಿಲ್ಲ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹಿಂದುಗಳಿಗೆ ವಿಧಾನಸಭೆಯಲ್ಲಿ 31% ರಷ್ಟೇ ಪ್ರತಿ ನಿಧಿತ್ವ ಸಿಗುವಂತೆ ಒಟ್ಟು ಸ್ಥಾನಗಳ ಹೊಂದಾಣಿಕೆಯನ್ನು ಮಾಡಲಾಗಿದೆ.

ಕಾಶ್ಮೀರಿ ಹಿಂದುಗಳಲ್ಲಿ ಸಾಕ್ಷರತಾ ಪ್ರಮಾಣವು 88%ರಷ್ಟು ಇದ್ದರೂ ರಾಜ್ಯ ಸರಕಾರದ ಸೇವೆ, ಸಾರ್ವಜನಿಕವಲಯ ಮತ್ತು ಸರಕಾರಿ ಕಂಪೆನಿಗಳಲ್ಲಿ ಹಿಂದು ಕಾರ್ಮಿಕರ ಪ್ರಮಾಣವು 4.8% ರಷ್ಟು ಮಾತ್ರ ಇದೆ. 1980 ರಿಂದ 1990ರ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾದ ಮೇಲೆ ಈ ಪ್ರಮಾಣವು 1.7%ಕ್ಕೆ ಇಳಿಯಿತು. ಕಾಶ್ಮೀರದಲ್ಲಿನ ಯಾವ ಆರ್ಥಿಕ ವ್ಯವಹಾರವೂ ಹಿಂದೂಗಳ ಕೈಯಲ್ಲಿ ಇಲ್ಲ. ಕಾಶ್ಮೀರದ 97.4% ಭೂಮಿಯು ಮುಸಲ್ಮಾನರ ಒಡೆತನದಲ್ಲಿದೆ. ಕೇವಲ 2.6% ಭೂಮಿಯು ಮಾತ್ರ ಹಿಂದು ಮತ್ತು ಇತರ ಅಲ್ಪಾಸಂಖ್ಯಾತರ ಒಡೆತನದಲ್ಲಿದೆ. 1985ರಲ್ಲಿ ಕಾಶ್ಮೀರದಲ್ಲಿ ನೋದವಣೆ ಮಾಡಲ್ಪಟ್ಟ ಲಘು ಉದ್ಯೋಗಗಳ ಸಂಖ್ಯೆ 46,293 ಇತ್ತು. ಇದರಲ್ಲಿ 0.01% ರಷ್ಟು ಉದ್ಯೋಗಗಳು ಹಿಂದುಗಳ ಒಡೆತನದಲ್ಲಿದ್ದವು ಮತ್ತು ವಿದ್ಯುತ್ ಆಧಾರಿತ ಉದ್ಯೋಗಗಳ ಪೈಕಿ 98.9%ರಷ್ಟು ಮುಸಲ್ಮಾನರ ಒಡೆತನದ್ದಲಿವೆ. ಕಾಶ್ಮೀರದಲ್ಲಿನ 96%ರಷ್ಟು ಸೇಬು ತೋಟಗಳ ಜಮೀನು ಮುಸಲ್ಮಾನರ ಒಡೆತನದ್ದಲಿದೆ.

ಕಾಶ್ಮೀರದಲ್ಲಿ ಭಯೋತ್ಪಾದಕರು ಮಾಡಿದ ಹಿಂಸಾಚಾರದಿಂದ ಕಳೆದ 12 ವರ್ಷಗಳಲ್ಲಿ 13,500 ಕ್ಕಿಂತಲೂ ಹೆಚ್ಚು ಜನರು ಬಲಿಯಾಗಿದ್ದಾರೆ! ಗಾಯಗೊಂಡವರ ಸಂಖ್ಯಾ 18 ಸಾವಿರಕ್ಕಿಂತ ಹೆಚ್ಚು ಜನ. ಮತ್ತೊಂದೆಡೆ ಕೇಂದ್ರ ಸರಕಾರವು ನೀಡಿರುವ ಮಾಹಿತಿಯ ಪ್ರಕಾರ ಪಾಕ್ ಪ್ರಚೋದಿತ ಆತಿಕ್ರಮಣಕಾರರು ಕಾಶ್ಮೀರದಲ್ಲಿ ಮಾಡಿದ ರಹಸ್ಯ ಕಾರ್ಯಾಚರಣೆಗಳಲ್ಲಿ ಇದುವರೆಗೆ 30,000 ಅಮಾಯಕ ನಾಗರಿಕರು ಸಾವನ್ನಪಿದ್ದಾರೆ.

ಕಾಶ್ಮೀರದಲ್ಲಿನ ಹಿಂಸಾಚಾರ ದಿಂದ ಇದುವರೆಗೆ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾಗಿದೆ. ಹಿಂಸಾಚಾರದಿಂದಾಗಿ ಸಾವಿರಾರು ಮಹಿಳೆಯರು ವಿಧವೆಯಾಗಿದ್ದಾರೆ. ಅನೇಕರು ಅನಾಥರಗಿದ್ದಾರೆ! ಹಿಂಸಾಚಾರದಲ್ಲಿ ಹೆಚ್ಚಾಗಿ 15 ರಿಂದ 30 ವರ್ಷದವರನ್ನು ಹತ್ಯೆ ಮಾಡಲಾಗಿದೆ. ಇಡೀ ಪೀಳಿಗೆಗಳೆ ಹಿಂಸಾಚಾರದಲ್ಲಿ ಬಲಿಯಾಗುತ್ತದೆ. ಕಾಶ್ಮೀರ ಸುಲಭವಾಗಿ ಬೇಟೆ ಎಂದು ಇಸ್ಲಾಮಿಕ್ ಭಯೋತ್ಪಾದಕರು ಭಾವಿಸಿದ್ದಾರೆ.

ಭಯೋತ್ಪಾದನೆಯ ಹಂತಗಳು : 1987 ರಿಂದ 1995ರ ಕಾಲಾವಧಿಯು ಕಾಶ್ಮೀರದಲ್ಲಿನ ಭಯೋತ್ಪಾದನೆಯ ಪ್ರಥಮ ಹಂತವೆಂದು ಪರಿಗಣಿಸಲ್ಪಡುತ್ತದೆ. ಈ ಕಾಲದಲ್ಲಿ ಭಯೋತ್ಪಾದಕರು ಕಾಶ್ಮೀರಿ ಜನತೆಯಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಮೂಡಿಸಿದರು. ಭಯೋತ್ಪಾದಕರ ಕಾರ್ಯಚಟುವಟಿಕೆಗಳನ್ನು ಸಮರ್ಥಿಸುತ್ತಾ ಕಾಶ್ಮೀರಿ ಜನರ ರಸ್ತೆಗೆ ಬರತೊಡಗಿದರು. ಕಾಶ್ಮೀರ ಮುಕ್ತಿಯ ಸಮಯವು ಈಗ ಸಮೀಪಿಸುತ್ತಿದೆ ಎನ್ನುವ ಭಾವನೆಯನ್ನು ಜನತೆಯಲ್ಲಿ ಮೂಡಿಸಲಾಯಿತು. 1995ರ ನಂತರ ಪಾಕಿಸ್ತಾನದ ಪ್ರೇರಣೆಯಿಂದ ಭಯೋತ್ಪಾದನೆಯ ಎರಡನೇಯ ಹಂತವು ಪ್ರಾರಂಭವಾಯಿತು.

ಪಾಕ್ ಪ್ರಚೋದಿತ ಹಾಗೂ ಪ್ರಶಿಕ್ಷಿತ ಉಗ್ರಗಾಮಿಗಳು ಮತ್ತು ಇಸ್ಲಾಂನ ಹೆಸರಿನಲ್ಲಿ ಜಿಹಾದ್‍ಗೆ ಕರೆ ನೀಡುವ ಭಯೋತ್ಪಾದಕರು ಭಾರತಕ್ಕೆ ಬರತೊಡಗಿದರು. ಕೊಲೆ, ದರೋಡೆ ಇವೇ ಮುಂತಾದ ಅಪರಾಧಗಳಲ್ಲಿ ದೋಷಿಗಳೆಂದು ನಿರ್ಧರಿಸಲ್ಪಟ್ಟವರನ್ನು ಸಹ ಪಾಕಿಸ್ತಾನವು ತರಬೇತಿ ನೀಡಿ ಕಾಶ್ಮೀರದೊಳಗೆ ನುಗ್ಗಿಸಿತು. ಹೀಗೆ ವಿವಿಧ ಷಡ್ಯಂತ್ರಗಳು ಕಾಶ್ಮೀರವನ್ನು ದುರ್ಬಲಗೊಳಿಸಿವೆ. ಪ್ರತ್ಯೇಕತಾವಾದಿ ಶಕ್ತಿಗಳ ಹಾಗೂ ಪಾಕ್‍ನ ಕುಮ್ಮಕ್ಕು ಇಲ್ಲಿನ ಸ್ಥಿತಿಯನ್ನು ಸಂಪೂರ್ಣ ಬಿಗಡಾಯಿಸಿದೆ. ಈ ಬಗ್ಗೆ ಸೂಕ್ತಕ್ರಮ ಕೈಗೊಂಡು ನಾಗರಿಕರಲ್ಲಿ ಸ್ಥೈರ್ಯ ತುಂಬಬೇಕಿದ್ದ ಕಾಶ್ಮೀರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮತಬ್ಯಾಂಕ್ ಆಸೆಗಾಗಿ ಹಿಂದೂಗಳ ಹಾಗೂ ರಾಷ್ಟ್ರದ ಹಿತವನ್ನು ಬಲಿ ಕೊಡುತ್ತಿವೆ.

1 ಟಿಪ್ಪಣಿ Post a comment
 1. ಏಪ್ರಿಲ್ 14 2014

  ಕಾಶ್ಮೀರದ ಕತ್ತಿ, ನೆತ್ತಿಯ ಮ್ಯಾಗೆ ತೂಗುತ್ತಿ
  ರಾಷ್ಟ್ರದೊಳಗೆ ಪರರಾಜ್ಯವ ಕಟ್ಟಲು ಹಾಕತಾರ ಹೊಂಚ
  ಶಸ್ತ್ರಹಿಡಿದು ಸರಿ ರಾತ್ರಿ ಹಗಲು ಕೊರಿತಾರ ಭೂಮಿಯಂಚ
  ಮುಖಂಡ ಜನರಂತಾರ, ಇದು ದ್ರೋಹಿಯ ಹುನ್ನಾರ
  ದೇಶದ್ರೋಹಿಗಳ ಹಿಡಿದು, ಸುತ್ತ ಸದೆಬಡಿದು, ಉತ್ತರಕೆ ನಡೆದು
  ಈ ನಾಡ ಮೇಲೆತ್ತಿ… ನಿಲ್ಲೋಣ ಎದೆ ತಟ್ಟಿ ||೨||

  ಹುಡುಕುವ ಬಳ್ಳಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ……..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments