Skip to content

ಏಪ್ರಿಲ್ 16, 2014

11

ನಿಲೇಕಣಿಯವರ ದ್ವಂದ್ವ ಮತ್ತು ಬುದ್ದಿಜೀವಿಗಳ ಬೌದ್ಧಿಕ ಭ್ರಷ್ಟಚಾರ

by ನಿಲುಮೆ

– ರಾಕೇಶ್ ಶೆಟ್ಟಿ

NUK೧.”ಎನ್.ಡಿ.ಎ ಸರ್ಕಾರದಲ್ಲಿ ಪ್ರಧಾನಿ ವಾಜಪೇಯಿಯವರು ಅಭಿವೃದ್ಧಿ ರಾಜಕಾರಣದ ಶಖೆಗೆ ಕಾರಣರಾದವರು,ಅವರಿಗಿಂತ ಮೊದಲಿಗೆ ಹಾಗೆ ಯಾರೂ ಮಾಡಿರಲಿಲ್ಲ” (Page 245)

೨.”ಅಭಿವೃದ್ಧಿ ರಾಜಕಾರಣವೆನ್ನುವುದು ನಮ್ಮ ರಾಜಕಾರಣಿಗಳು ಅಂದುಕೊಂಡಂತೆ ಕೆಲಸಕ್ಕೆ ಬಾರದ್ದೇನಲ್ಲ.ಇದಕ್ಕೆ ಉದಾಹರಣೆಯಾಗಿ ಗುಜರಾತಿನಲ್ಲಿ ನರೇಂದ್ರ ಮೋದಿಯವರು ತನ್ನ ಅಭಿವೃದ್ಧಿ ಮಂತ್ರದಿಂದಲೇ ಕಾಂಗ್ರೆಸ್ಸ್ ಪ್ರಣಾಳಿಕೆಯ ಉಚಿತ ವಿದ್ಯುತ್ ಅನ್ನು ಮತದಾರರ ಮುಂದೆಯೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದರು.ಮೋದಿಯವರ ಹಿಂದುತ್ವ ರಾಜಕಾರಣವೆಲ್ಲದರ ಮಧ್ಯೆಯೂ ಭ್ರಷ್ಟ ಸಬ್ಸಿಡಿ ಸಿಸ್ಟಂಗಿಂತಲೂ ಅಭಿವೃದ್ಧಿ ರಾಜಕಾರಣವೂ ಹೇಗೆ ವಿದ್ಯುತ್,ನೀರಾವರಿ ಮತ್ತು ಸಂಪರ್ಕ ಸೌಲಭ್ಯವನ್ನು ಜನರಿಗೆ ಕಲ್ಪಿಸುತ್ತವೆ ಅನ್ನುವುದನ್ನು ಮತದಾರರಿಗೆ ಹೇಳುವಲ್ಲಿ ಸಫಲರಾಗಿದ್ದಾರೆ.ಇದಕ್ಕಿಂತ ಮೊದಲಿಗೆ ಸುಧಾರಣವಾದಿ ರಾಜಕಾರಣಿಗಳ್ಯಾರು ಉದ್ಯಮ ಆಧಾರಿತ ಅಭಿವೃದ್ಧಿ ಯೋಜನೆಗಳಿಂದ ಬಡವರ ಬಾಳು ಹಸನಾಗುವುದರ ಬಗ್ಗೆ ತೋರಿಸುವಲ್ಲಿ ಸಫಲರಾಗಿರಲಿಲ್ಲ” – (Page 310)

೩.”ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡಿದಾಗ,ನನ್ನ ತಂದೆಯವರ ಪ್ರತಿಪಾದಿಸುತಿದ್ದ ‘ನೆಹರೂ ಸೋಷಿಯಲಿಸಂ’ ಅನ್ನುವ ಭ್ರಮೆಯನ್ನು ಕಳಚಿ ಎಸೆಯಬೇಕಾಗಿ ಬಂತು”- (Page 17)

೪.”ಕಾಂಗ್ರೆಸ್ಸ್ ಸರ್ಕಾರಗಳು ಬಲಿಷ್ಟ ಜಾತಿಗಳ ತೆಕ್ಕೆಗೆ ಅಧಿಕಾರವನ್ನು ನೀಡಿ, ಕುಟುಂಬ ರಾಜಕಾರಣವನ್ನು ಜಾರಿಗೆ ತಂದವು.ಆ ಮೂಲಕ ಆಡಳಿತವನ್ನು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ರಕ್ತಸಂಬಂಧದಲ್ಲೇ ಇರುವಂತೆ ನೋಡಿಕೊಂಡವು”- (Page 158)

ಮೇಲೆ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಇದ್ಯಾರೋ ಬಿಜೆಪಿಯ ಪರ ಒಲವುಳ್ಳ ಲೇಖಕನೋ,ಅಥವಾ ಬಿಜೆಪಿಯ ರಾಜಕಾರಣಿಯೋ ಬರೆದಿರುವುದು ಅನ್ನಿಸುತ್ತದಲ್ಲವೇ?

ಆದರೆ,ನಿಮ್ಮ ಊಹೆ ತಪ್ಪು.ಇದನ್ನು ಬರೆದವರು ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿರುವ ನಂದನ್ ನಿಲೇಕಣಿಯವರು ತಮ್ಮ  “Imagining India” ಪುಸ್ತಕದಲ್ಲಿ!

ನಾನು ಇಲ್ಲಿ ಉಲ್ಲೇಖಿಸಿರುವುದು ಸ್ಯಾಂಪಲ್ ಅಷ್ಟೇ.ಇಂತ ಭರಪೂರ ವೈರುಧ್ಯಗಳ ಬಗ್ಗೆ “ಸಿಟಿಜನ್ಸ್ ಫಾರ್ ಡೆಮೊಕ್ರೆಸಿ,ಬೆಂಗಳೂರಿನವರು” ೪೦ ಪುಟಗಳಷ್ಟು ಪಿಡಿಎಫ್ ಪ್ರತಿಯನ್ನು ಆನ್ಲೈನ್ ನಲ್ಲಿ ಬಿಟ್ಟಿದ್ದಾರೆ.ನಾನು ಅದರ ಒಂದಿಷ್ಟು ಅಂಶವನ್ನಷ್ಟೇ ಇಲ್ಲಿ ತೋರಿಸಿದ್ದೇನೆ.ಪೂರ್ಣ ಪಿಡಿಎಫ್ ಲಿಂಕ್ ಇಲ್ಲಿದೆ : (http://www.slideshare.net/cfdbengaluru/nandan-nilekani-hypocrisy-opportunism-14th-april?qid=ea3b6b5b-02e8-48ed-8d20-af535bef2cf1&v=qf1&b=&from_search=1)

ಆ ಪಿಡಿಎಫ್ ಅನ್ನು ಪೂರ್ಣವಾಗಿ ಓದಿದರೆ ನಿಲೇಕಣಿಯವರ ಹಿಪೋಕ್ರೆಸಿಯ ಬಗ್ಗೆ ಅರಿವಾದೀತು.

ತಮ್ಮ ಪುಸ್ತಕದುದ್ದಕ್ಕೂ ಕಾಂಗ್ರೆಸ್ಸಿನ ಆಡಳಿತವನ್ನು ಟೀಕಿಸುತ್ತಾ, ವಾಜಪೇಯಿಯವರ “ಸುವರ್ಣ ಚತುಷ್ಪತ,ಗ್ರಾಮ ಸಡಕ್,ಸರ್ವ ಶಿಕ್ಷಣ ಅಭಿಯಾನ,ಸಾಗರ್ ಮಾಲಾ” ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ನೀಲೆಕಣಿ ಕಡೆಗೆ ಅದೇ ಕಾಂಗ್ರೆಸ್ಸಿನ ತೆಕ್ಕೆಗೆ ಬಿದ್ದಿದ್ದನ್ನು ಹಿಪೋಕ್ರೆಸಿಯಲ್ಲವೇ?

ಸೋನಿಯಾ,ರಾಹುಲ್ ಗಾಂಧಿ ತಮ್ಮ ಬೆನ್ನು ತಟ್ಟಿಕೊಳ್ಳಲು ಬಳಸುವ ನರೇಗಾ ಯೋಜನೆಯ ವೈಫಲ್ಯದ ಬಗ್ಗೆ ಪುಟ 311 ರಲ್ಲಿ ನಂದನ್ ಬರೆಯುತ್ತಾರೆ! ಕಾಂಗ್ರೆಸ್ಸಿನ ವಂಶಾಡಳಿತವನ್ನು ಟೀಕಿಸುತ್ತಾರೆ, ಕಡೆಗೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ನನಗೆ ನಂಬಿಕೆಯಿದೆ ಎನ್ನುತ್ತಾರೆ!

Page 58,350 ಮತ್ತಿತ್ತರ ಕಡೆಗಳಲ್ಲಿ “ಮೀಸಲಾತಿ”ಯನ್ನು ವಿರೋಧಿಸಿದ್ದ ನಿಲೇಕಣಿಯವರು ಮೊನ್ನೆ ಮೊನ್ನೆ ಖಾಸಗಿ ರಂಗದಲ್ಲೂ ಮೀಸಲಾತಿ ಬೇಕು ಅಂದಿದ್ದರು! ತಾವು ಇನ್ಫೋಸಿಸ್ ನಲ್ಲಿ ಇದ್ದಾಗ ಈ ಬಗ್ಗೆ ಯೋಜನೆಯೊಂದನ್ನೇಕೆ ರೂಪಿಸಲಿಲ್ಲ ನಿಲೇಕಣಿಯವರೇ? ಬಹುಷಃ ಇದಕ್ಕಿಂತ ದೊಡ್ಡ ಹಿಪೋಕ್ರೆಸಿ ಇದೆಯಾ? ಹೇಗಿದೆ ವರಸೆ?

ಇನ್ನು ಪುಟ 58ರಲ್ಲಿ ಪ್ರಾದೇಶಿಕ ಅಸಮಾನತೆಯ ಬಗ್ಗೆ ಮಾತನಾಡುತ್ತ ಕರ್ನಾಟಕದಲಿ ಕನ್ನಡವನ್ನು ಹೇರಲು ಹೊರಟಿದ್ದರ ಬಗ್ಗೆ ಮಾತನಾಡುತ್ತಾರೆ.ಪುಟ 205ರಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಸರ್ಕಾರಿ ಶಾಲೆಗಳನ್ನು ಖಾಸಗಿ/ಎನ್.ಜಿ.ಓ ಗಳ ತೆಕ್ಕೆಗೆ ನೀಡಬೇಕೆನ್ನುತ್ತಾರೆ ನಿಲೇಕಣಿ.ಮತ್ತು ಖಾಸಗೀಕರಣವನ್ನು ಉಗ್ರವಾಗಿ ವಿರೋಧಿಸುವ, ಕನ್ನಡದ ಬಗ್ಗೆ ಮಾತನಾಡುವ ಮತ್ತು ಮೀಸಲಾತಿಯನ್ನು ಬೆಂಬಲಿಸುವ ನಮ್ಮ  ಬುದ್ದಿಜೀವಿಗಳಾದ ಅನಂತ ಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ!

ನಿಲೇಕಣಿಯವರು ಪ್ರಾಮಾಣಿಕರಿರಬಹುದು.ಆದರೆ, ಈ ಪರಿಯ ದ್ವಂದ್ವಾಲೋಚನೆಯಿರುವವರು ನಮ್ಮ ನಾಯಕರಾಗಲು ಹೊರಟಾಗ ಅವರ ಇಬ್ಬಗೆ ಧೋರಣೆಯನ್ನು,ನೈತಿಕತೆಯನ್ನು ಪ್ರಶ್ನಿಸಲೇಬೇಕಲ್ಲವೇ? ಹಾಗೂ-ಹೀಗೂ ಅವರೂ ಈಗ ರಾಜಕಾರಣಿ,ಹಾಗಾಗಿ ಹಿಪೋಕ್ರೆಸಿಯೆಲ್ಲಾ ಸಾಮಾನ್ಯ ಅಂದುಕಂಡು ಬಿಡೋಣ.ಆದರೆ,ಸಾಕ್ಷಿ ಪ್ರಜ್ನೆಗಳೆಂದು ಅವರ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ಈ ಮೂರ್ತಿ-ಕಾರ್ನಾಡ್ ರನ್ನು ಹೇಗೆ ಬಿಡುವುದು?

ನಮ್ಮ ಅನಂತ ಮೂರ್ತಿಗಳು,ಮೊದಲಿಗೆ ಮೋದಿ ಪ್ರಧಾನಿಯಾದರೇ ಭಾರತವನ್ನು ಬಿಡುತ್ತೇನೆ ಎಂದರು,ಕಡೆಗೆ ಬಿಡೋಲ್ಲ ಅಂತೇಳಿದರು.ಆಮೇಲೆ ಮೋದಿ ಬೇಡ ಅಡ್ವಾಣಿ ಪ್ರಧಾನಿಯಾಗಲಿ ಅಂದರು.ರಾಹುಲ್ ಪ್ರಧಾನಿಯಾದರೂ ಅಡ್ಡಿಯಿಲ್ಲ ಎಂದರು.ಈ ಮಧ್ಯೆ ಕೇಜ್ರಿವಾಲನ ಆಪ್ ಅನ್ನು ಬೆಂಬಲಿಸುತ್ತೇನೆಂದರು ಮರುದಿನವೇ  ಇತರೆ ಆಸ್ಥಾನ ಸಾಹಿತಿಗಳೊಂದಿಗೆ ಸೇರಿಕೊಂಡು ಸುದ್ದಿಗೋಷ್ಟಿ ನಡೆಸಿ ‘ಕಾಂಗ್ರೆಸ್ಸ್” ಅನ್ನು ಬೆಂಬಲಿಸುತ್ತೇನೆಂದರು.”ಮೋದಿ ಮಾನಸಿಕವಾಗಿ ಭ್ರಷ್ಟರಾಗಿದ್ದಾರೆ”ಎನ್ನಲು ಈ ಅನಂತ ಮೂರ್ತಿಗಳಿಗೆ ಯಾವ ಮಟ್ಟದ “ನೈತಿಕತೆ”ಯಿದೆ? ಭ್ರಷ್ಟ ಕಾಂಗ್ರೆಸ್ಸನ್ನು ಬೆಂಬಲಿಸುವ ಮೂರ್ತಿಯವರೇನು ಮಾನಸಿಕವಾಗಿ ಪರಮ ಪಾವನರೇ?

ಅವಕಾಶವೇ “ಮೂರ್ತಿ”ವೆತ್ತಾಗ ಪ್ರಶಸ್ತಿಗಳು “ಅನಂತ” ಅಂತ ಹಿಂದೊಮ್ಮೆ ಬರೆದಿದ್ದೆ.ನಮ್ಮ ಮೂರ್ತಿಯವರು ಗೆದ್ದೆತ್ತಿನ ಬಾಲ ಹಿಡಿದು ಹೊರಟಾಗಲೆಲ್ಲ ಈ ಮಾತು ನೆನಪಾಗುತ್ತದೆ.

ಇನ್ನು ನಮ್ಮ ಕಾರ್ನಾಡರದು ಬೇರೆಯೇ ಹಾದಿ.೨೦೦೭ರ ಕಾವೇರಿ ಟ್ರಿಬ್ಯೂನಲ್ ತೀರ್ಪು ಬಂದಾಗ ಊರಿಗೆ ಒಂದು ದಾರಿಯಾದರೇ ಇವರದೇ ಒಂದು ದಾರಿಯಾಗಿತ್ತು.ಬೆಂಗಳೂರಿನಲ್ಲಿ ನೈಟ್ ಲೈಫ್ ವಿಸ್ತರಿಸಿ ಅಂತ ಕಾರ್ನಾಡರು ಪ್ರತಿಭಟನೆ ಮಾಡುತ್ತಾರೆ.ಆದರೆ, ಈ ನೈಟ್ ಲೈಫ್ ವಿಸ್ತರಣೆಯಿಂದ ಪೋಲಿಸರ ಮೇಲೆ ಎಷ್ಟು ಒತ್ತಡ ಬೀಳುತ್ತದೆ?ಅಸಲಿಗೆ ಅಷ್ಟು ಜನ ಪೋಲಿಸ್ ಸಿಬ್ಬಂದಿ ಇದ್ದಾರೆಯೇ ಇತ್ಯಾದಿ ಆಲೋಚನೆಗಳೆಲ್ಲ ಈ ಬುದ್ದಿಜೀವಿ ಮಹಾಶಯರಿಗೆ ಬರುವುದೇ ಇಲ್ಲ. ಆದರೂ ನಾವಿವರನ್ನು ಬುದ್ದಿಜೀವಿ ಎನ್ನಬೇಕು!

ಬಾಯಿ ತೆರೆದಾಗಲೆಲ್ಲ ಖಾಸಗೀಕರಣವನ್ನು,ಬಂಡವಾಳಶಾಹಿಗಳನ್ನು ಜರಿಯುವ ಈ ಮೂರ್ತಿ,ಕಾರ್ನಾಡ್ ಮತ್ತಿತರ ಬುದ್ದಿ ಜೀವಿಗಳು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಅನ್ನುತಿದ್ದ ನಾರಾಯಣ ಮೂರ್ತಿ,ಕಿರಣ್ ಮಜಂದಾರ್ ಅಂತವರು ರಾಜಕೀಯಕ್ಕೆ ಬರಲಿ ಅನ್ನುತ್ತಾರೆ!ಖಾಸಗಿಯವರ ಕೈಗೆ ಸರ್ಕಾರಿ ಶಾಲೆಗಳನ್ನು ಕೊಡಿ ಅನ್ನುವ ನಿಲೇಕಣಿಯವರನ್ನು ಬೆಂಬಲಿಸುತ್ತಾರೆ.

ಇದಕ್ಕಿಂತ ದೊಡ್ಡ ಬೌದ್ಧಿಕ ದಾರಿದ್ರ್ಯ ಮತ್ತು ನೈತಿಕ ಭ್ರಷ್ಟತೆಗೆ ಉದಾಹರಣೆ ಬೇಕಾ?

Advertisements
Read more from ಲೇಖನಗಳು
11 ಟಿಪ್ಪಣಿಗಳು Post a comment
 1. ಏಪ್ರಿಲ್ 17 2014

  ಈ ತರಹದ ದ್ವಂದ್ವಗಳು ಇರುವದು ನಿಜವೇ ಆದರೆ ಅದನ್ನು ಖಂಡಿತಾ ಪ್ರಶ್ನಿಸಲೇಬೇಕಾಗುತ್ತೆ

  ಉತ್ತರ
 2. Nagshetty Shetkar
  ಏಪ್ರಿಲ್ 17 2014

  ನೀಲೇಕಣಿಯವರದ್ದು ಮುಕ್ತ ಮನಸ್ಸು. ನಮೋಸುರನ ಹಾಗೆ ಐಡಿಯಾಲಜಿಗೆ ತಮ್ಮನ್ನು ಮಾರಿಕೊಂಡವರಲ್ಲ ನೀಲೇಕಣಿಯವರು. ನಮೋಸುರನ ಅಭಿವೃದ್ಧಿ ರಾಜಕಾರಣದ ಬಗ್ಗೆ ಮೊದಮೊದಲು ಒಳ್ಳೆಯ ಅಭಿಪ್ರಾಯವಿಟ್ಟುಕೊಂಡಿದ್ದರೂ ನಂತರ ಅಭಿವೃದ್ಧಿಯ ಹೆಸರಿನಲ್ಲಿ ಗುಜರಾತಿನಲ್ಲಿ ನಡೆದಿರುವ ಅನ್ಯಾಯದ ಅರಿವು ನೀಲೇಕಣಿ ಅವರಿಗಾಗಿದೆ. ಆದುದರಿಂದಲೇ ಅವರು ನಮೋಸುರನ ಬಗ್ಗೆ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಗುಜರಾತಿನ ಜನಸಾಮಾನ್ಯರಿಗಾದ ಅನ್ಯಾಯ ದೇಶದ ಎಲ್ಲರಿಗೂ ಆಗುವುದು ಬೇಡ ಅಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ನಮೋಸುರನ ಅಭಿವೃದ್ಧಿ ರಾಜಕಾರಣವನ್ನು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ನೀಲೇಕಣಿ ಈಸ್ ಎ ಗ್ರೇಟ್ ಮ್ಯಾನ್. ಗುಣಕ್ಕೆ ಮತ್ಸರ ಬೇಡ.

  ಉತ್ತರ
  • ವಿಜಯ್ ಪೈ
   ಏಪ್ರಿಲ್ 17 2014

   ಗಂಜಿಗಿರಾಕಿಗಳಿಗೆ ಜಯವಾಗಲಿ!!. ಇಲ್ಲಿ ಬೆಂಬಲಿಸಲು ಆಪ್ ಇರಲಿಲ್ಲವೆ ಮಹಾನುಭಾವರೆ?? ನಿಮ್ಮ ಪ್ರಜ್ಞಾವಂತರ ಪ್ರಜ್ಞಾವಂತಿಕೆ ಮಣ್ಣು ತಿನ್ನುತ್ತಿತ್ತೆ ಬೆಂಬಲಿಸದೇ ಇರಲು??. ಆಪ್ ಅಭ್ಯರ್ಥಿ ವೀಕ್ ಇದ್ದಿದ್ದರಿಂದ ಬೆಂಬಲಿಸಲಿಲ್ಲ ಎಂಬ ಪಿಳ್ಳೆ ನೆವ ಬೇಡ..ನಮ್ಮ ‘ಪ್ರಜ್ಞಾವಂತ’ ಸಾಹಿತಿಗಳ ಶಕ್ತಿ ತುಂಬಾ ದೊಡ್ಡದು. ಸಾಧಾರಣವಾದುದದಲ್ಲ.. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಇವರ ಬೆಂಬಲದಿಂದಲೇ ಕಾಂಗೈ ಅಧಿಕಾರಕ್ಕೆ ಬರಲಿಲ್ಲವೆ?

   ಉತ್ತರ
   • Nagshetty Shetkar
    ಏಪ್ರಿಲ್ 17 2014

    “ಆಪ್ ಅಭ್ಯರ್ಥಿ ವೀಕ್ ಇದ್ದಿದ್ದರಿಂದ ಬೆಂಬಲಿಸಲಿಲ್ಲ ಎಂಬ ಪಿಳ್ಳೆ ನೆವ ಬೇಡ”

    ಪಿಳ್ಳೆ ನೆವ ಅಲ್ಲ, ವಸ್ತುಸ್ಥಿತಿ ಅದು. ಆಪ್ ಅಭ್ಯರ್ಥಿಯ ಹೆಸರನ್ನೇ ಆ ಕ್ಷೇತ್ರದ ಜನ ಕೇಳಿಲ್ಲ, ಇನ್ನು ಅ***ಕು**.. ತರಹದ ದೊಡ್ಡ ಹೆಗ್ಗಣವನ್ನು ಬಿಲದಿಂದ ಹೊರ ಓಡಿಸಲು ಆಕೆಗೆ???

    ಉತ್ತರ
    • ವಿಜಯ್ ಪೈ
     ಏಪ್ರಿಲ್ 18 2014

     [ಪಿಳ್ಳೆ ನೆವ ಅಲ್ಲ, ವಸ್ತುಸ್ಥಿತಿ ಅದು. ಆಪ್ ಅಭ್ಯರ್ಥಿಯ ಹೆಸರನ್ನೇ ಆ ಕ್ಷೇತ್ರದ ಜನ ಕೇಳಿಲ್ಲ, ಇನ್ನು ಅ***ಕು**.. ತರಹದ [ಪಿಳ್ಳೆ ನೆವ ಅಲ್ಲ, ವಸ್ತುಸ್ಥಿತಿ ಅದು. ಆಪ್ ಅಭ್ಯರ್ಥಿಯ ಹೆಸರನ್ನೇ ಆ ಕ್ಷೇತ್ರದ ಜನ ಕೇಳಿಲ್ಲ, ಇನ್ನು ಅ***ಕು**.. ತರಹದ ದೊಡ್ಡ ಹೆಗ್ಗಣವನ್ನು ಬಿಲದಿಂದ ಹೊರ ಓಡಿಸಲು ಆಕೆಗೆ???]
     ಹೌದೆ? ಹಾಗಿದ್ದರೆ ನಿಮ್ಮಂತಹ ಆಲ್ ಇಂಡಿಯಾ ಫೆಮಸ್ ಜನಗಳು ಆಪ್ ಅಭ್ಯರ್ಥಿಯ ಬೆನ್ನ ಹಿಂದೆ ನಿಂತು, ಅವರ ಪರಿಚಯವನ್ನು ಕ್ಷೇತ್ತದ ಜನಕ್ಕೆ ಮಾಡಿಸಿಕೊಡಬೇಕಿತ್ತು. ಇಬ್ಬರು ಜ್ಞಾನಪೀಠಿಗಳು, ಡಜನಗಟ್ಟಲೇ ಪ್ರಗತಿಪರರು, ಈ ಪ್ರಗತಿಪರರ ಉಕ್ಕಿ ಹರಿಯುವ ನೈತಿಕತೆ..ಇಷ್ಟೆಲ್ಲ ಸೇರಿದರೂ ಹೆಗ್ಗಣವನ್ನು ಓಡಿಸಬಹುದು ಎನ್ನುವ ಧಮ್ ಇಲ್ಲದಿದ್ದರೆ, ನಂಬಿಕೆ ಇಲ್ಲದಿದ್ದರೆ..ಛೆ! :(. ಇರಲಿ ನಿಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳೋಣ.

     [ಹೊರ ಓಡಿಸಲು ಆಕೆಗೆ???]]
     ನಾವು ಹೀಗೆ ಮಾತನಾಡಿದರೆ ಓಕೆ…ಆದರೆ ‘ಶರಣ’ ರೆಂದು ಅಪಾದಿಸಿಕೊಂಡವರು ‘ಆಕೆಗೆ’ ಎನ್ನುವ ಏಕವಚನ ಬಳಸುವುದು..ಛೆ.

     ಉತ್ತರ
     • Nagshetty Shetkar
      ಏಪ್ರಿಲ್ 18 2014

      ‘ಆಕೆ’ ಎಂಬುದು ಏಕವಚನ ಅಂತ ಯಾರು ನಿಮಗೆ ಹೇಳಿದ್ದು ಮಿ. ವಿಜಯ್?

      ಉತ್ತರ
      • ವಿಜಯ್ ಪೈ
       ಏಪ್ರಿಲ್ 18 2014

       ಒಹ್..ನಮಗೆ ನೇರವಾಗಿ ಪರಿಚಯವಿರದ, ಆತ್ಮೀಯರಲ್ಲದ ಒಬ್ಬರನ್ನು ಆಕೆ ಎಂದು ಕರೆಯುವುದು ಗೌರವ ಸೂಚಕವೆಂದಾಯಿತು..ಗೊತ್ತಿರಲಿಲ್ಲ..ಇನ್ನು ಮುಂದೆ ನಿಮ್ಮನ್ನು ಮತ್ತು ನಿಮ್ಮ ಗುರುಗಳನ್ನು ಈತ, ಆತ, ಅವನು, ಇವನು ಎಂದು ನಾವು ಕರೆಯಬಹುದು..

       ಉತ್ತರ
       • Nagshetty Shetkar
        ಏಪ್ರಿಲ್ 21 2014

        “ನಿಮ್ಮ ಗುರುಗಳನ್ನು ಈತ, ಆತ, ಅವನು, ಇವನು ಎಂದು ನಾವು ಕರೆಯಬಹುದು”

        ನೀವು ಮೊದಲಿನಿಂದಲೂ ದರ್ಗಾ ಸರ್ ಅವರ ಅವಹೇಳನ ಮಾಡುತ್ತಲೇ ಬಂದಿದ್ದೀರಿ. ದರ್ಗಾ ಸರ್ ಅವರನ್ನು ಚಣಾ ಬಸವಣ್ಣ ಅಂತ ಕರೆದದ್ದು ಯಾರು ಅಂತ ನಮಗೆ ಗೊತ್ತು. ನೀವು ದರ್ಗಾ ಸರ್ ಅವರನ್ನು ಬಹುವಚನದಲ್ಲಿ ಸಂಬೋಧಿಸಿದಾಗಲೂ ಅವರಿಗೆ ನೀವು ಕೊಡುವ ಗೌರವ ಎಷ್ಟು ಅಂತ ನಿಲುಮೆಯ ಓದುಗರೆಲ್ಲರಿಗೂ ತಿಳಿದಿದೆ ಮಿ. ವಿಜಯ್. ಈಗ ದರ್ಗಾ ಸರ್ ಅವರನ್ನು ನೀವು ಏಕ ವಚನದಲ್ಲಿ ಸಂಬೋಧಿಸುವ ಬೆದರಿಕೆ ಕೊಟ್ಟರೆ ಅವರು ಹೆದರುತ್ತಾರೆಯೇ?

        ಉತ್ತರ
     • Nagshetty Shetkar
      ಏಪ್ರಿಲ್ 18 2014

      “ಧಮ್ ಇಲ್ಲದಿದ್ದರೆ”

      ಶುರುವಾಯಿತು ನಿಮ್ಮ ನಮೋಸುರನ ಮಾದರಿಯ ಮ್ಯಾಚೋ ಭಾಷೆ. ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ ಮಿ. ವಿಜಯ್?

      ಉತ್ತರ
      • ವಿಜಯ್ ಪೈ
       ಏಪ್ರಿಲ್ 18 2014

       ಉತ್ತರ ಇಲ್ಲದಾಗ ಪಲಾಯನ..ವಿಷಯಾಂತರ ಮಾಡಿ!

       ಉತ್ತರ
 3. ಏಪ್ರಿಲ್ 22 2014

  Nagshetty ಯವರೇ… ತೀರಾ ಪುಸ್ತಕ ಬರೆಯುವಾಗಲೂ, ಸರಿಯಾಗಿ ತಿಳಿದುಕೊಳ್ಳದೆ ಪುಸ್ತಕ ಬರೆದರೇ ..? ಅದಿರಲಿ , ಮೋದಿಯವರ ಬಗ್ಗೆ ಈಗ ತಿಳ್ಕೊಂಡಿರೋದೆ ಸತ್ಯ ಅನ್ಕೊಳ್ಳೋಣ.. ಆದ್ರೆ ಕಾಂಗ್ರೆಸ್ನಾ ಟೀಕೆ ಮಾಡುತ್ತಿದ್ದವರು ಈಗ ಪಪ್ಪು ಮಹಾಶಯನನ್ನ ಪ್ರಧಾನಿ ಪಟ್ಟಕ್ಕೆ ಯೋಗ್ಯ ಅಭ್ಯರ್ಥಿ ಅಂತಾರಲ್ಲ.. ಆ ಭಾವನೆ ಬೆಳೆಯುವಂತ ಘನಂದಾರಿ ಕೆಲ್ಸ ಪಪ್ಪು ಎನ್ ಮಾಡಿದ್ರು.. ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments