ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 22, 2014

10

ಅಂಬೇಡ್ಕರ್ ರ ’ಹಿಂದುತ್ವ’ ವನ್ನು ಅರಸುತ್ತಾ-ಭಾಗ ೧

‍ನಿಲುಮೆ ಮೂಲಕ

– ಬಾಲಚಂದ್ರ ಭಟ್

ಡಾ.ಬಿ.ಆರ್ ಅಂಬೇಡ್ಕರ್ಇಂದು ಡಾ. ಅಂಬೇಡ್ಕರರನ್ನು ಒಬ್ಬ ಹಿಂದೂ ದೇಶಭಕ್ತರೆಂದು ಕರೆದರೆ ಜನ ಹೇಗೆಪ್ರತಿಕ್ರಿಯಿಸಬಹುದು? ಖಂಡಿತ ಗಲಿಬಿಲಿಯಾಗುತ್ತಾರೆ. ಇದೊಂದು ಮನುವಾದಿಯ ಕುತಂತ್ರಎಂದು ಕೋಪಿಸಿಕೊಳ್ಳಬಹುದು. ಆದರೆ ಯಾವ ಮಟ್ಟಿಗೆ ಅಂಬೇಡ್ಕರರ ವ್ಯಕ್ತಿತ್ವ ನಮ್ಮಿಂದಮರೆಮಾಚಲ್ಪಟ್ಟಿದೆ ಎಂದರೆ, ಅಂಬೇಡ್ಕರ್ ಎಂದರೆ ಕೆಳಜಾತಿಗೆ ಮೀಸಲು ಎನ್ನುವ ಕೆಲವರ್ಗಗಳ ಧೋರಣೆಯಾದರೆ ಅವರೊಬ್ಬ ಬ್ರಾಹ್ಮಣ ವಿರೋಧಿ ಎಂದು ಅವರನ್ನು ಉಪೇಕ್ಷಿಸುವ ವರ್ಗ ಇನ್ನೊಂದು ಕಡೆ ಇದೆ.

ಆದರೆ ಇಂದಿನ ವರ್ತಮಾನ ರಾಜಕೀಯದಲ್ಲಿ ಅಂಬೇಡ್ಕರರ ಹಕ್ಕುಸ್ವಾತಂತ್ರ್ಯವನ್ನು ಹೊತ್ತವರೆಂಬಂತೆ ಅವರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವವರ ಹುಚ್ಚಾಟ, ತಿಕ್ಕಲುತನಗಳಿಂದ ಅದೇ ಸ್ಟೀರಿಯೋಟೈಪಿನಿಂದ ಅಂಬೇಡ್ಕರರನ್ನುನೋಡಬೇಕಾದ ಪರಿಸ್ಥಿತಿ ಬಂದಿರುವದರಿಂದ ಅವರಲ್ಲಿನ ಭವ್ಯ, ಗಂಭೀರ, ಪ್ರಭುದ್ಧವ್ಯಕ್ತಿತ್ವ ಹಾಗೂ ದಾರ್ಶನಿಕತೆ ಅಕ್ಷರಶಃ ಮರೆಯಾಗಿರುವದು ಅತ್ಯಂತ ದುರದೃಷ್ಟಕರ.ಅದೇ ಅವರ ಕನಸು ನನಸಾಗದಿರುವದಕ್ಕೂ ಕಾರಣ.

ಹಿಂದೂ ಸಂಪ್ರದಾಯದಲ್ಲಿನ ಜಾತಿಗಳ ಬಗ್ಗೆ ಅವರ ಸಂಶೋಧನೆ ನಮಗೆ ತಿಳಿದದ್ದುಅತ್ಯಲ್ಪ.ಅರವಿಂದನ್ ನೀಲಕಂದನ್ ಅವರ ’Bodhisattva’s hindutva(part 1-6 )’ ವನ್ನು ಓದಿದಾಗ ಅಂಬೇಡ್ಕರರಲ್ಲಿದ್ದ ಸಮಗ್ರ ಹಿಂದುತ್ವ ನನ್ನ ತಿಳುವಳಿಕೆಗೆಬಂದಿದ್ದು. ಅದನ್ನು ಆಯ್ದು, ಸಂಕ್ಷಿಪ್ತವಾಗಿ ಈ ಲೇಖನವನ್ನು ಬರೆದಿದ್ದೇನೆ.

ಜಾತಿ ಪದ್ದತಿಗಳ ವಿರುದ್ಧ ಅಂಬೇಡ್ಕರರು ಹೋರಾಡಿದರು ಎಂಬುದು ಎಲ್ಲರಿಗೂ ತಿಳಿದ ಸತ್ಯ.ಆದರೆ ಜಾತಿಗಳ ವಿರುದ್ಧ ಅವರ ಹೋರಾಟವು ಅವರ ಕನಸಿನ ಹಿಂದೂ ಧರ್ಮವೇ ಆಗಿತ್ತು ಎಂಬುದುನಿರ್ವಿವಾದ. ತಮ್ಮ ‘Annihilation of caste'(page no.30) ಯಲ್ಲಿ ಅವರುಹೇಳಿದ್ದು ಹೀಗೆ “ಎಲ್ಲಿಯವರೆಗೆ ಜಾತಿಗಳು ಇರುವದೊ ಅಲ್ಲಿಯವರೆಗೆ ಸಂಘಟನೆಸಾಧ್ಯವಿಲ್ಲ.ಎಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮವು ದುರ್ಬಲವಾಗಿಯೇ ಇರುವದು”.

೧೯೨೭ ರಲ್ಲಿ ದಲಿತರಿಗೆ ದೇವಾಲಯದ ಪ್ರವೇಶದ ಹಕ್ಕಿನ ಬಗ್ಗೆಪ್ರಸ್ತಾಪಿಸಿ ಅವರು ಹೇಳಿದ್ದು ಹೀಗಿದೆ “ಹಿಂದುತ್ವವು ಸ್ಪಶ್ಯೃ ಹಾಗೂ ಅಸ್ಪಶ್ಯೃಎಲ್ಲರಿಗೂ ಸೇರಿದುದಾಗಿದೆ. ಕೇಳಜಾತಿಗೆ ಸೇರಿದ್ದ ವಾಲ್ಮಿಕಿ, ವ್ಯಾಧಗೀತ, ಚೋಕಮೇಳಮತ್ತು ರೋಹಿದಾಸರುಗಳು ಹಿಂದು ಧರ್ಮಕ್ಕೆ ನೀಡಿದ ಕೊಡುಗೆಯು, ಬ್ರಾಹ್ಮಣರಾದ ವಸಿಷ್ಟ,ಕ್ಷತ್ರಿಯರಾಗಿದ್ದ ಕೃಷ್ಣ, ವೈಶ್ಯರಾಗಿದ್ದ ಹರ್ಷ, ಹಾಗೂ ಶೂದ್ರರಾಗಿದ್ದತುಕಾರಮರುಗಳು ನೀಡಿದ ಕೊಡುಗೆಯಷ್ಟೆ ಮಹತ್ವಪೂರ್ಣವಾದುದು” ( ’ಬಹಿಷ್ಕೃತ್ ಭಾರತ್’ದಲ್ಲಿ). ಇಲ್ಲಿ ಅವರ ಆಧುನಿಕ ಹಿಂದೂ ಧರ್ಮವನ್ನು ಕಟ್ಟುವ ಮನೋಭಾವ ಹಾಗೂ ಸಂಘಟನೆಯಬಗೆಗಿನ ಆಸ್ಥೆಯನ್ನು ಗುರುತಿಸಬಹುದು.

ತಮ್ಮ ಸಂವಿಧಾನದಲ್ಲಿ, ಸಾಂಸ್ಕೃತಿಕವಾಗಿ ಒಂದೇತಳಹದಿಯ ಮೇಲೆ ನಿಂತಿರುವದರಿಂದ ಸಿಖ್, ಜೈನ್, ಬೌದ್ಧ, ಲಿಂಗಾಯಿತ, ವೈಷ್ಣವರೆಲ್ಲರನ್ನೂ ಹಿಂದೂ ಎಂಬ ಒಂದೇ ಧರ್ಮದ ಕಾನೂನಿನಡಿಯಲ್ಲಿ ನಿರೂಪಿಸಿದ್ದರು.ಅಂಬೇಡ್ಕರರು ವಿ.ಡಿ ಸಾವರ್ಕರ್, ಹಾಗೂ ಆರ್ಯ ಸಮಾಜದ ಶ್ರದ್ಧಾನಂದರುಗಳ ಜೊತೆ ಬಹಳ ಆತ್ಮೀಯತೆಯನ್ನು ಹೊಂದಿದ್ದರು.ಅದಕ್ಕೆ ಕಾರಣ ಸಾವರ್ಕರ್ ಹಾಗೂ ಶ್ರದ್ಧಾನಂದರುಗಳುಹಿಂದೂ ಧರ್ಮವನ್ನು ಕಟ್ಟಲು ಹಿಂದೂ ಸಂಪ್ರದಾಯದಲ್ಲಿನ ಅಸ್ಪಶ್ಯೃತೆಯ ವಿರುದ್ಧಹೋರಾಡಿದ್ದು. ತಮ್ಮ ’ಜನತಾ’ ಮ್ಯಾಗಜಿನ್ ನಲ್ಲಿ ಸಾವರ್ಕರರ ಹೋರಾಟವನ್ನುಪ್ರಶಂಸಿಸಿದ್ದರು. ಅಷ್ಟೆ ಅಲ್ಲ ಸಾವರ್ಕರರನ್ನು ಗಾಂಧಿಜಿಯ ಹತ್ಯೆಯ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದಾಗ ಅವರ ಬೆಂಬಲಕ್ಕಿದ್ದರು(ಮನೋಹರ್ ಮಲ್ಗಾಂವ್ಕರ್ ಅವರ‘The Men Who Killed Gandhi’ (1978) ಯಲ್ಲಿ ಉಲ್ಲೇಕವಾಗಿದೆ). ತಮ್ಮ ಕೃತಿಯಾದ’‘What Congress and Gandhi Have Done to the Untouchables’ ನಲ್ಲಿಕಾಂಗ್ರೆಸ್ ಹಾಗೂ ಗಾಂಧೀಜಿಯವರ ಅಸ್ಪಶ್ಯೃರ ಬಗೆಗಿನ ನಡೆಯನ್ನು ಟೀಕಿಸುತ್ತಾ, ಸ್ವಾಮಿಶ್ರದ್ಧಾನಂದರ ಹೋರಾಟವನ್ನು ಪ್ರಶಂಸಿಸಿ ’The Swami was the greatest and themost sincere champion of the Untouchables” ’(ಸ್ವಾಮಿ ಶ್ರದ್ಧಾನಂದರುಅಸ್ಪಶ್ಯೃರ ಶ್ರೇಷ್ಟ ಹಾಗೂ ಪ್ರಾಮಾಣಿಕ ಗೆಲುವುದಾರ) ಎಂದು ಉಲ್ಲೇಖಿಸಿದ್ದಾರೆ.

೧೯೩೯ ರಲ್ಲಿ ಅಂಬೇಡ್ಕರರು ಆರ್.ಎಸ್.ಎಸ್ ಕ್ಯಾಂಪ್ ಗೆ ಭೇಟಿ ನೀಡಿದ್ದಾಗ ಅಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸುತ್ತಿರುವದನ್ನು ನೋಡಿ, ತುಂಬುಹೃದಯದಿಂದ ಹೇಳಿದ್ದು ಹೀಗೆ.”ಸ್ವಯಂ ಸೇವಕರು ಜಾತಿ ಭೇದವಿಲ್ಲದೆ ಸಮಾನತೆ ಹಾಗೂಭಾತೃತ್ವದಿಂದ ಬೆರೆತು ಓಡಾಡುತ್ತಿರುವದನ್ನು ನೋಡಿದರೆ ಬಹಳ ಸಂತೋಷವಾಗುತ್ತದೆ”ಎಂದು.ಅಂಬೇಡ್ಕರರ ಹೆಸರಿನ ಹಿಂದೆ ನಿಂತು ಆರ್. ಎಸ್ ಎಸ್ ಅನ್ನು ಬ್ರಾಹ್ಮಣ್ಯ, ಮನುವಾದಿ, ಜಾತೀವಾದಿ ಎಂದೆಲ್ಲ ತರಾಟೆಗೆ ತೆಗೆದುಕೊಳ್ಳುವ ಪ್ರಗತಿಪರರಿಗೆ ಇದೊಂದು ದೊಡ್ಡ ಕಪಾಳಮೊಕ್ಷವಲ್ಲವೇ?

ಆದರೆ ನಮ್ಮಲ್ಲಿ ಇವತ್ತು ಅನೇಕರು ಅವರನ್ನು ಹಿಂದೂ ವಿರೋಧಿ ಎಂದು ಕರೆಯಲು ೧೯೩೫ ರಲ್ಲಿ ಅವರು ಮಾಡಿದ ಮಾತನ್ನುಉಲ್ಲೇಖಿಸುತ್ತಾರೆ.”ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ”, ಹಾಗೂ ಬುದ್ಧಿಸಂ ಗೆ ಮತಾಂತರವಾದದ್ದನ್ನು ಉಲ್ಲೇಖಿಸುತ್ತಾರೆ. ನಿಜ, ಅವರು ಹಿಂದೂಧರ್ಮದಲ್ಲಿದ್ದ ಅನೇಕ ನ್ಯೂನ್ಯತೆಗಳನ್ನು ಟೀಕಿಸಿದ್ದರು.ಆದರೆ,ಅವರು ಹಿಂದೂ ಎನ್ನುವ ಶಬ್ದವನ್ನು ಎರಡು ರೀತಿಯಲ್ಲಿ ಉಲ್ಲೇಖಿಸಿದ್ದರುಎನ್ನುವದು ಸ್ಪಷ್ಟ. ಸ್ಮೃತಿಗಳಲ್ಲಿನ ಶಾಸ್ತ್ರಗಳಿಂದ ವಿಧಿಸಲ್ಪಟ್ಟ ಜಿಡ್ಡುಸಂಪ್ರದಾಯಗಳ ಹಿಂದುತ್ವವನ್ನು ವಿರೋಧಿಸಿದರು ಹಾಗೂ ಆಧ್ಯಾತ್ಮಿಕ ತತ್ವಗಳಲ್ಲಿನಹಿಂದುತ್ವವನ್ನು ಪ್ರೀತಿಸಿದ್ದರು, ಉಪನಿಷತ್ತಿನಲ್ಲಿನ ಅದ್ವೈತ ವನ್ನು(ಅದಕ್ಕೆ ಅವರುBrahmaism’ ಎಂದು ಕರೆದಿದ್ದಾರೆ) ಮುಕ್ತವಾಗಿ ಹೆಮ್ಮೆಯಿಂದಉಲ್ಲೇಖಿಸಿದ್ದಾರೆ.’ತತ್ವಮಸಿ’ ಹಾಗೂ ‘ಅಹಂ ಬ್ರಹ್ಮಾಸ್ಮಿ’ ಎನ್ನುವ ಉಕ್ತಿಗೆದಾರ್ಶನಿಕರಂತೆ ಅರ್ಥವನ್ನು ವ್ಯಾಖ್ಯಾನಿಸಿದ್ದಾರೆ.

ತಮ್ಮ ’Annihilation of castes’ ಪುಸ್ತಕದಲ್ಲಿ ಹೀಗೆ ಉಲ್ಲೇಕಿಸಿದ್ದಾರೆ.

 • “…ಧಾರ್ಮಿಕ ತತ್ವಗಳಲ್ಲಿ ಅಡಕವಾಗಿರಬೇಕಾದ ಸ್ವಾತಂತ್ರ್ಯ, ಭಾತೃತ್ವ, ಸಮಾನತೆ ಯತತ್ವಗಳನ್ನು ನಾವು ಹೊರದೇಶದವರಿಂದ ಕಲಿಯಬೇಕಿಲ್ಲ, ಅವು ನಮ್ಮ ಉಪನಿಷತ್ತುಗಳಲ್ಲೆಇವೆ”(ಪೇಜ್ ನಂ.೫೨ )
 • “..ಉಪನಿಷತ್ತಿನಲ್ಲಿನ ’ಬ್ರಹ್ಮ’ ತತ್ವಗಳು ಬೋಧಿಸುವ ’ಪ್ರಜಾಪ್ರಭುತ್ವ’ ತತ್ವಗಳನ್ನು ಜಗತ್ತಿನ ಬೇರೆ ಯಾವುದೆ ಧಾರ್ಮಿಕ ಗ್ರಂಥಗಳೂ ಬೋಧಿಸಲಾರವು ಎಂಬುದರಲ್ಲಿ ಸಣ್ಣ ಅನುಮಾನವೂ ಇಲ್ಲ”  (ಪೇಜ್ ನಂ. ೨೧೮).

ಭಾರತ ಹಾಗೂ ಪಾಕಿಸ್ಥಾನ ವಿಭಜನೆಯನ್ನು ಅವರು ಅಪೇಕ್ಷಿಸಿದ್ದರು. ಯಾಕೆಂದರೆ ಹಿಂದುಮುಸ್ಲಿಮರು ವಿಭಜನೆಯಾದರೆ ಮಾತ್ರ ಹಿಂದುಗಳು ಸ್ವತಂತ್ರವಾಗಿ ಬದುಕಬಹುದೆಂದು, ಇಲ್ಲದಿದ್ದರೆ ಮುಸ್ಲೀಮರೆ ಆಡಳಿತ ನಡೆಸುವಂತಾಗುತ್ತದೆ ಎಂದಿದ್ದರು(Thoughts on linguistic states page no.16). ಹಿಂದೂ ಮತ್ತು ಬೌದ್ಧ ಧರ್ಮಗಳು ಒಂದೇ ತಳಹದಿಯಮೇಲೆ ನಿಂತಿರುವದನ್ನು ಅವರು ಮನಗಂಡಿದ್ದರು. “ಭಾರತ ಹಾಗೂ ಪಾಕಿಸ್ಥಾನಗಳ ನಡುವಿನಐಕ್ಯತೆ ಬರಿಯ ಸುಳ್ಳು, ಭಾರತ ಹಾಗೂ ಬರ್ಮಾ ಗಳ ನಡುವೆ ಇರುವ ಆಧ್ಯಾತ್ಮಿಕ ಐಕ್ಯತೆಭಾರತ ಮತ್ತು ಪಾಕಿಸ್ಥಾನದ ನಡುವೆ ಇಲ್ಲ” ಎಂದು ಹೇಳಿದ್ದಾರೆ.(Thoughts on Pakistan, p.60). ಇದರರ್ಥ ಬೌದ್ಧಧರ್ಮವನ್ನು ಯಾವತ್ತಿಗೂಅವರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿ ನೋಡಲಿಲ್ಲ. ಬದಲಾಗಿ ಹಿಂದೂ ಧರ್ಮದ ಶುದ್ಧರೂಪವನ್ನು ಬೌದ್ಧ ಧರ್ಮದಲ್ಲಿ ನಿರೀಕ್ಷಿಸಿದರು ಅಷ್ಟೆ.

ಹಿಂದೂ ಅಥವಾ ಬೌದ್ಧ ಧರ್ಮಕ್ಕೆ ಉಳಿದ ರಿಲಿಜಿಯನ್ ಗಳಂತೆ ಪ್ರತ್ಯೇಕ ಚೌಕಟ್ಟು ಅಥವಾ ರಿಲಿಜಿಯನ್ ಗಳ ಗುಣಲಕ್ಷಣಗಳೆ ಇಲ್ಲದಿದ್ದಾಗ ಬೌದ್ಧಧರ್ಮಕ್ಕೆ ಅವರ ಮತಾಂತರವನ್ನು ಕೂಡ ಹಿಂದೂ ಧರ್ಮದ ಆದರ್ಶವನ್ನು ಹುಡುಕಿಕೊಂಡು ಹೋದ ಪರಿ ಎನ್ನಬಹುದೆ ಹೊರತು Baptism ನ ಹಿನ್ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ.

ಅಂಬೇಡ್ಕರರು ವೈದಿಕ ಕಾಲದಲ್ಲಿ ಹೆಂಗಸರಿಗೆ ಉಪನಯನ ಸಂಸ್ಕಾರ, ಸ್ವಾತಂತ್ರ್ಯ, ಹಾಗೂ ಶಿಕ್ಷಣ ಇತ್ತೆಂದು ಗಾರ್ಗಿ, ಮೈತ್ರೆಯಿ ಹಾಗೂ ವಿಧ್ಯಾಧರಿಗಳ ಉದಾರಣೆಗಳನ್ನು ಕೊಟ್ಟು ಹೇಳುತ್ತಾರೆ. ಹಾಗೂ ವೈದಿಕ ಕಾಲವು ಜಾತಿಯತೆಯಿಂದ ಹೊರತಾಗಿತ್ತೆಂದೂ ಅವರು ಹೇಳಿದ್ದನ್ನು ಗಮನಿಸಬಹುದು(Writings and Speeches, Vol 3, p.432, and p.122).

ಕೇವಲ ಬೌದ್ಧದರ್ಮ ಮಾತ್ರವಲ್ಲ, ಮನುಸ್ಮೃತಿಗಿಂತಲೂ ಹಿಂದೆ ಇದ್ದ ವೈದಿಕ ಕಾಲವೂ ಶುದ್ಧ ರೂಪದ ಆದರ್ಶ ಹಿಂದೂ ಧರ್ಮವನ್ನು ಹೊಂದಿತ್ತು, ಆದರೆ ನಂತರ ಬಂದ ಮನುಸ್ಮೃತಿಯಿಂದ ಅದು ನಾಶವಾಯಿತೆಂದು ಅಭಿಪ್ರಾಯ ಪಡುತ್ತಾರೆ. .(quoted in Vasant Moon p.192).

ಧನಂಜಯ್ ಖೀರ್ ಅವರು ಬರೆದ ’Dr. Ambedkar: Life and Mission’ ನಲ್ಲಿ ಹೀಗೊಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಒಮ್ಮೆ ವಯಸ್ಸಾದ ಭಕ್ತರೊಬ್ಬರು ಅಂಬೇಡ್ಕರರ ಬಳಿ ಗಣೇಶನ ವಿಗ್ರಹವನ್ನು ಹೊತ್ತು ತರಲು ಕೇಳಿಕೊಂಡನಂತೆ. ಅದಕ್ಕೆ ಅಂಬೇಡ್ಕರರು ನಗುತ್ತಾ ಅಂದರಂತೆ “ನಿಮಗ್ಯಾರು ನಾನು ದೇವರನ್ನು ನಂಬುವದಿಲ್ಲವೆಂದು ಹೇಳಿದ್ದು? ನಡೆಯಿರಿ ಹೋಗೋಣ” ಎಂದರಂತೆ. ಹಿಂದುತ್ವವನ್ನು ತ್ಯಜಿಸಿದ್ದರೆ ಇದು ಸಾಧ್ಯವಿತ್ತೆ?

ಇಷ್ಟೆಲ್ಲ ಅವರ ಜ್ನಾನ ಭಾರತೀಯ ಸಂಸ್ಕೃತಿಯ ಬಗೆಗಿನ ಸಂಶೋಧನೆಗಳನ್ನು ಗಮನಿಸಿದಾಗ ಇಂದು ಅವರು ಚಿತ್ರಿಸಲ್ಪಟ್ಟಿರುವ ರೀತಿ ಅವರನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದೆ ಎನಿಸದೆ ಇರದು. ಅಂಬೇಡ್ಕರರೇ ಸ್ವತಃ ತಳ್ಳಿ ಹಾಕಿದ ಹಾಗೂ ಇಂದು ಅವೈಜ್ನಾನಿಕವೆಂದು ಸಾಬೀತಾಗಿರುವ ಆರ್ಯ-ದ್ರಾವಿಡ(Aryan Invasion Theory) ಯನ್ನು ಅವರ ಹಿಂಬಾಲಕರು ಇನ್ನೂ ಭದ್ರವಾಗಿ ನಂಬಿಕೊಂಡಿದ್ದಾರೆಂದರೆ ಅಂಬೇಡ್ಕರರ ವಿಶಾಲ ಬುದ್ಧಿಮತ್ತೆ ಅವರ ಅನುಯಾಯಿಗಳಿಗೆ ಸಿದ್ಧಿಸಿಲ್ಲವೆಂದೆ ಅರ್ಥ. ಅಂಬೇಡ್ಕರರ ಹಿಂದೂ ಧರ್ಮದ ಆಧ್ಯಾತ್ಮಿಕ ತತ್ವಗಳ ಮೇಲಿನ ಅಪಾರ ಪ್ರೀತಿ ಹಾಗೂ ಜಾತಿಗಳನ್ನು ನಾಶ ಮಾಡಿ ಸಮಾನತೆಯಡಿಯಲ್ಲಿ ಹಿಂದೂ ಧರ್ಮವನ್ನು ಕಟ್ಟಬೇಕೆಂದುಕೊಂಡ ಅವರ ಆದರ್ಶಗಳನ್ನು ಮರೆಮಾಚಿ ಅಂಬೇಡ್ಕರರ ವಾರಸುದಾರರಂತೆ ಕೆಲವು ಮತಾಂಧ ಲೇಖಕರುಗಳು ಅವರನ್ನು ಬೆಂಬಲಿಸುವ ಸೋಗಿನಲ್ಲಿ ಹಿಂದುತ್ವವನ್ನು ಒಡೆದು ಆಳುವ ಕುತಂತ್ರ ಬುದ್ಧಿಯನ್ನು ತೋರಿಸುತ್ತಿದ್ದಾರೆ. ಇಂತಹ ಆಟಕ್ಕೆ ಅಂಬೇಡ್ಕರರ ದೂರದರ್ಶಿತ್ವದ ಬಗೆಗೆ ತಿಳುವಳಿಕೆಯೆ ಇಲ್ಲದ ಕೆಲವು ದಲಿತರು ಬಲಿಯಾಗುತ್ತಿರುವದು ಒಂದು ಕಡೆಯಾದರೆ, ರಾಜಕೀಯ ದಾಳಕ್ಕೆ ಬಲಿಪಶುಗಳಾಗುತ್ತಿರುವದು ಇನ್ನೊಂದು ದುರಂತ.

ಅಂಬೇಡ್ಕರರ ಹಿಂದುತ್ವದ ಕನಸು ನನಸಾಗಲಿ, ಹಾಗೆಯೆ ತಮ್ಮ ಧಾರ್ಮಿಕ ಅಸಹಿಷ್ಣುತೆಗನುಗುಣವಾಗಿ ಅವರನ್ನು ಗುತ್ತಿಗೆಗೆ ತೆಗೆದುಕೊಂಡ ಮತಾಂಧ ಪತ್ರಕರ್ತರ ಪ್ರಯತ್ನಗಳು ವಿಫಲವಾಗಲಿ.

ಚಿತ್ರಕೃಪೆ :buddhistory.blogspot.com

 

10 ಟಿಪ್ಪಣಿಗಳು Post a comment
 1. ಏಪ್ರಿಲ್ 22 2014

  ಅಂಬೇಡ್ಕರರು ಮುಸಲ್ಮಾನರಾಗಿಯೋ ಇಲ್ಲವೇ ಕ್ರೈಸ್ತರಾಗಿಯೋ ಮತಾಂತರಗೊಳ್ಳಲಿಲ್ಲ.
  ಅವರನ್ನು ಮುಸಲ್ಮಾನರನ್ನಾಗಿ ಮಾಡಲು ಮತ್ತು ಕ್ರೈಸ್ತರನ್ನಾಗಿ ಮಾಡಲು, ಆಯಾ ಮತಕ್ಕೆ ಸೇರಿದವರು ಹಣದ ಹೊಳೆ ಹರಿಸಲೂ ಸಿದ್ಧರಿದ್ದರು.
  ಅಂಬೇಡ್ಕರ್ ತಾವೇಕೆ ಮುಸಲ್ಮಾನರಾಗಲಿಲ್ಲ ಮತ್ತು ಕ್ರೈಸ್ತರಾಗಲಿಲ್ಲ ಎನ್ನುವುದನ್ನು ಅವರೇ ಉತ್ತರಿಸಿದ್ದಾರೆ.
  ಹಿಂದುಗಳನ್ನು, ವೈದಿಕ ಮತವನ್ನು ತೆಗಳುವವರು ಮತ್ತು ಇಸ್ಲಾಮನ್ನು ಕೊಂಡಾಡುವವರು, ಅಂಬೇಡ್ಕರರ ಉತ್ತರವನ್ನು ಓದುವುದೊಳ್ಳೆಯದು!

  ಉತ್ತರ
 2. Nagshetty Shetkar
  ಏಪ್ರಿಲ್ 22 2014

  ಮೇಧಾ ಪಾಟ್ಕರ್ ಪರವಾಗಿ ಪ್ರಚಾರದಲ್ಲಿ ನಿರತನಾಗಿದ್ದೇನೆ. ಬಹಳ ಬಿಸಿ. ನಿಮ್ಮ ತಪ್ಪು ಕಲ್ಪನೆಗಳನ್ನು ಚುನಾವಣೆಯ ಬಳಿಕ ದೂರ ಮಾಡುತ್ತೇನೆ.

  ಉತ್ತರ
  • ಏಪ್ರಿಲ್ 22 2014

   ಮೇಧಾ ಪಾಟ್ಕರ್…..ಬಿಸಿ!!
   ಬಿಸಿ ಬಿಸಿ ಸುದ್ದಿ…..ಅವರ ಬಿಸಿ ನಿಮಗೂ ತಟ್ಟಿತೆ!
   ಈ ಬಿರು ಬೇಸಿಗೆಯಲ್ಲಿ ಮತ್ತಷ್ಟು ಬಿಸಿ ಸೇರಿಕೊಂಡರೆ ಹೇಗಾಗಿರಬೇಡ, ಪಾಪ ನಿಮ್ಮ ಸ್ಥಿತಿ!!?

   ಉತ್ತರ
  • ವಿಜಯ್ ಪೈ
   ಏಪ್ರಿಲ್ 23 2014

   ನೋಡಿದ್ರಾ? ನೀವೆಲ್ಲ ತಿಳಿದ ಹಾಗೆ ಸಾಧಾರಣ ಜನ ಅಲ್ಲ ನಮ್ಮ ಗುರುಗಳು..ಆಲ್ ಇಂಡಿಯಾ ಫಿಗರ್ರು!!. ಈಶಾನ್ಯ ಮುಂಬಯಿಯಲ್ಲಿ ಇವರ ಮಾತು ಕೇಳಿ, ಪಾಟ್ಕರ್ ಗೆ ಭರ್ಜರಿ ಮತ ಬಿಳುವ ಸಾಧ್ಯತೆ ಇದೆ.ಇದಾದ ನಂತರ ವಾರಾಣಸಿಗೆ ಹೋಗಿ ಕೇಜ್ರಿವಾಲ್ ನ ಪರವಾಗಿ ಪ್ರಚಾರ ಮಾಡಿ ಮೋದಿಯನ್ನು ಸೋಲಿಸ್ತಾರೆ. ಕರ್ನಾಟಕದಲ್ಲೂ ಆಪ್ ಪರವಾಗಿ ಪ್ರಚಾರ ಮಾಡ್ತಿದ್ರು..ಆದರೆ ಗಂಜಿ ಉಂಡ ಮನೆಗೆ ದ್ರೋಹ ಬಗೆಯಬಾರದು ಅನ್ನೊ ಒಂದೇ ಕಾರಣದಿಂದ ಮಾಡಲಿಲ್ಲ ಅಷ್ಟೇ…ಇಲ್ಲವಾದರೆ ಇಲ್ಲೂ ಕನಿಷ್ಟ ೭-೮ ಆಪ್ ಕ್ಯಾಂಡಿಡೇಟ್ ಗಳು ಆರಿಸಿ ಬರುವ ಹಾಗೆ ಮಾಡುತ್ತಿದ್ದರು.

   ಉತ್ತರ
   • Nagshetty Shetkar
    ಏಪ್ರಿಲ್ 23 2014

    “ಕರ್ನಾಟಕದಲ್ಲೂ ಆಪ್ ಪರವಾಗಿ ಪ್ರಚಾರ ಮಾಡ್ತಿದ್ರು”

    ಪ್ರಚಾರ ಮಾಡಿರುವೆ. ಅನುಮಾನ ಬೇಡ.

    ಉತ್ತರ
    • ಏಪ್ರಿಲ್ 24 2014

     ನೀವು ನಮ್ಮ ತಪ್ಪು ಕಲ್ಪನೆಗಳನ್ನು ನಿವಾರಿಸುವಿರೆಂದು ಕಾಯುತ್ತಾ ಕುಳಿತಿದ್ದೇನೆ. ದಯವಿಟ್ಟು ವಾದದ ಸರಕುಗಳ ಜೊತೆ ಬನ್ನಿ ಮಾತನಾಡುವ.

     ಉತ್ತರ
    • ನವೀನ
     ಏಪ್ರಿಲ್ 24 2014

     ವಿಜಯ್ ಸರ್,
     ಅತ್ತಿಂದಿತ್ತ,ಇತ್ತಿಂದಿತ್ತ ಜಿಗಿಯುವ ಗಂಜಿ ಗಿರಾಕಿಗಳನ್ನು ನೋಡಿದವರು,ಸಿಗುವ ನಾಲ್ಕು ಪುಡಿ ಓಟುಗಳನ್ನು ಕೊಡುವುದಿಲ್ಲವೆಂಬ ಭಯದಿಂದ ಕರ್ನಾಟಕದಲ್ಲಿ ಕೆಲವರು ಪ್ರಚಾರ ಮಾಡಿಲ್ಲವೆನ್ನುವುದು ಕಹಿಸತ್ಯವಾಗಿದೆ.ಹಾಗಾಗಿಯೇ ಸೀಮೆ ಬದಲಾಗಿದೆ ಅನ್ನುವ ಅನುಮಾನ ಬಲವಾಗಿದೆ

     ಉತ್ತರ
 3. ಏಪ್ರಿಲ್ 23 2014

  ಮಾನ್ಯರೇ, ನಿಜವಾಗಿಯೂ ಇದು ಒಳ್ಳೆಯ ಲೇಖನ. ಅಂಬೇಡ್ಕರ್ ಒಬ್ಬರು ಹಿಂದುತ್ವ ವಾದಿಗಳು ಎಂಬುದನ್ನು ಅಧಾರ ಸಮೇತ ಸಾಭೀತು ಪಡಿಸಿದ್ದ್ದೀರಿ. ಧನ್ಯವಾದಗಳು.ಬಹುತೇಕ ನಮ್ಮ ಭಾರತಕ್ಕೆ ಅವರೊಬ್ಬ ಮಹಾಪುರುಷರು ಹೌದು. ಮಾನವತಾವಾದಿಗಳು ಹೌದು. ಆದರೆ ಅವರ ಆದರ್ಶಗಳನ್ನು ಬದಿಗೊತ್ತಿ ಅವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಲೇಖನಗಳಿಂದ ಜನ ಹೆಚ್ಚೆತ್ತು ಬದಲಾಗುವುದು ಸೂಕ್ತ.

  ಉತ್ತರ
 4. Bindu
  ಏಪ್ರಿಲ್ 27 2014

  ಇಂತಹ ಲೇಖನಗಳನ್ನು ಓದಿ, ಅಂಬೇಡ್ಕರ್ ಬಗ್ಗೆ ತಿಳಿದಿರುವ ನಾವು ಸಂತೋಷ ಪಡಬಹುದು, ಆದರೆ ಅಂಬೇಡ್ಕರ್ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿರುವರಿಗೆ ಜ್ಞಾನೋದಯವಾಗುತ್ತದೆ ಎಂದು ತಿಳಿದರೆ ಅದು ನಮ್ಮ ಭ್ರಮೆ ಅಷ್ಟೇ !

  ಒಬ್ಬ ವ್ಯಕ್ತಿಯನ್ನು ಅವರ ಸಾಧನೆಯಿಂದ ಅಳೆಯದೆ ಅವರ ಜಾತಿಯಿಂದ ಅಳೆಯುವ ಮೂರ್ಖರೆ ಹೆಚ್ಚು ನಮ್ಮ ಸಮಾಜದಲ್ಲಿ.

  ಉತ್ತರ
 5. chandraskhekhar
  ಜುಲೈ 28 2016

  ಅಂಬೇಡ್ಕರ್ ರವರ ಹಿಂದೂತ್ವವಾದವನ್ನು, ಹಾಗೂ ಹಿಂದೂಧರ್ಮದ ಮೇಲಿನ ನಂಬಿಕೆಯನ್ನು ಕಂಡರೆ ಖೂಷಿಯಾಗುತ್ತದೆ,ಕೆಲವು ಕಿಡಿಗೆಡಿಗಳಿಂದ, ಅವರ ಭವ್ಯಭಾರತದ ಕನಸು, ನನಸಾಗದಿರುದಕ್ಕೆ, ಬಹಳ ವಿಷಾದ ವೆನಿಸಿದೆ…..
  ಭವ್ಯರೂಪದ ಭವಿಷ್ಯದ ಭಾರತದಲ್ಲಿ, ಎಲ್ಲಿಯವರೆಗೂ, ಜಾತಿ,ಜಾತಿ ಎಂದು ಕಿತ್ತಾಡುತ್ತಾರೋ,ಅಲ್ಲಿಯವರೆಗೂ,ಈ ಭಾರತ ರಾಷ್ಟ್ರ ,ಉದ್ದಾರವಾಗುವುದಿಲ್ಲ, ನೇಪ ಮಾತ್ರಕ್ಕೆ, ಭಾರತ develop ಆಗುತ್ತಿದೆ ಎಂದು ತಿಳಿಯಬಹುದು, ಅಷ್ಟೆ……….

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments