Skip to content

ಮೇ 9, 2014

31

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 3

by CSLC Ka

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

80 ಮತ್ತು 84ರ ಸಂದರ್ಭದಲ್ಲಿ ಕೆಲವು ಅನಾಹುತಗಳು ಸಂಭವಿಸಿದವು. 84ರ ಚುನಾವಣೆಯಲ್ಲಿ ನಿರ್ಣಾಯಕವಾದದ್ದು ಭಾವನಾತ್ಮಕ ಓಟುಗಳು. ಆರ್ಥಿಕ ಪರಿಕಲ್ಪನೆಗಳು ಅಥವಾ ದೇಶದ ಇತರ ಯಾವುದೇ ವಿಚಾರಗಳಿಗೆ ಬದಲಾಗಿ, ನಮ್ಮ ಪರವಾಗಿ ನಿಂತಿದ್ದಂತಹ ಒಬ್ಬ ನಾಯಕಿಗೆ ತೊಂದರೆಯಾಯಿತು. ಆಕೆಯ ಕೊಲೆಯಾಯ್ತು ಎನ್ನುವ ಕಾರಣಕ್ಕೋಸ್ಕರ ಈ ಸಂದರ್ಭದಲ್ಲಿ ಅವರ ಜೊತೆಗಿರಬೇಕು ಎನ್ನುವ ಭಾವನಾತ್ಮಕ ಅಂಶವೇ ಮುಖ್ಯವಾಯಿತು. ಹಾಗಾಗಿ, ಆಗ ಒಂದೇ ಪಕ್ಷದ ಪರವಾಗಿ ಮತಗಳು ಚಲಾವಣೆಯಾಗಿ ಕಾಂಗ್ರೇಸ್ ಅಧಿಕಾರಕ್ಕೆ ಬಂತು.

ಈ ಸಂದರ್ಭದಲ್ಲಿ ಎಷ್ಟೋ ಜನ ಯೋಗ್ಯರು, ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕೆಲಸ ನಿರ್ವಹಿಸಿರುವಂತಹ ಅನೇಕರು ಸೋತು ಬಿಟ್ಟರು. ಚಂದ್ರಶೇಖರ್, ಅಟಲ್ಜಿ ಅವರಂತಹ ನಾಯಕರೇ ಸೋತುಬಿಟ್ಟರು.ಅಟಲ್ ಬಿಹಾರಿ ವಾಜಪೇಯಿಯವರಿಗಿಂತ ಒಬ್ಬ ದೊಡ್ಡ ಸಂಸದೀಯ ಪಟುವಿನ ಹೆಸರು ಹೇಳುವುದೇ ಕಷ್ಟ. ಇಡೀ ಸ್ವತಂತ್ರ ಭಾರತದಲ್ಲಿ ತುಂಬಾ ಪ್ರಮುಖರು ಎಂದು ಹೇಳುವ ಕೆಲವೇ ಕೆಲವರ ಹೆಸರಿನಲ್ಲಿ ಅಟಲ್ಜಿ ಕೂಡಾ ಒಬ್ಬರು.ಹೀಗೆ ಅವರದಲ್ಲದೇ ಇರುವಂತಹ ಹಲವು ಕಾರಣಗಳಿಂದಾಗಿ ಕೆಲವು ಬಾರಿ ಚುನಾವಣಾ ಫಲಿತಾಂಶಗಳು ವ್ಯತ್ಯಾಸವಾಗುತ್ತವೆ. ಯಾರೋ ಒಬ್ಬತಜ್ಞರು ಹೇಳುವಂತೆ; ‘Truth is not determined by mejarity votes’ ಈ ರೀತಿಯಲ್ಲಿ ಸತ್ಯವೇ ಆಗಬೇಕು, ಸತ್ಯದ ಪರವಾಗೇ ಚುನಾವಣೆ ಫಲಿತಾಂಶ ಇರಬೇಕು ಎಂದೇನಿಲ್ಲ. ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ರೂಪುಗೊಳ್ಳುತ್ತದೆ ಅಷ್ಟೆ. ಇದಕ್ಕೆ ಮತ್ತೆ ಬೇರೆ ಯಾವುದೇ issue ಮುಖ್ಯವಾಗಿರಲಿಲ್ಲ.

ಆದರೆ, ಬಹಳ ದೊಡ್ಡ issue ಯಾವುದು ಎಂದರೆ, ಮತ್ತೆ ವಿ.ಪಿ.ಸಿಂಗ್ ಅವರು ಮುಂಚೂಣಿಗೆ ಬಂದಾಗ ಮಂಡಲ್ issue ಒಂದು ಕಡೆ ಮತ್ತೊಂದು ಕಡೆ ರಥಯಾತ್ರೆ. ಆಗ ಪರಸ್ಪರ Conflicting ಐಡಿಯಾಲಜಿಗಳು ಎದುರುಬದರಾದವು. ಒಂದು ಕಡೆಯಿಂದ ಹಿಂದುಳಿದವರಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಕೊಡುವಂತಹ ಆರ್ಥಿಕ ಸಬಲೀಕರಣದ ಚರ್ಚೆಗಳು ಮುಂದೆ ಬಂದವು. ಅಂದರೆ, ಪ್ರತಿನಿಧಿಯಾಗುವವನು ಈ ವಿಚಾರಗಳ ಪರವಾಗಿ ಇರಬೇಕೆನ್ನುವಂತಹ ಪ್ರಶ್ನೆ ಬಂದಿತು. ಆದರೂ, ಬಹಳ ಸ್ಪಷ್ಟವಾದ ವಿಚಾರವೇನೂ ಮೂಡಿ ಬರಲಿಲ್ಲ. ಬಹಳ ವಿಭಿನ್ನವಾದ ಛಿದ್ರವಾದ ವಿಚಾರಗಳಿದ್ದವು.ಆದರೆ issue ಮಾತ್ರಹಿಂದುಳಿದವರ ಸಬಲೀಕರಣ, ಅವರಿಗೆ ಸಮಾನ ಅವಕಾಶಗಳು ಮತ್ತು ಅವರನ್ನುಆರ್ಥಿಕವಾಗಿ ಸಬಲೀಕರಣಗೊಳಿಸುವುದು. ಈ ವಿಚಾರಗಳು ರಾಜಕಾರಣದಲ್ಲಿ ಬಹಳ ಪ್ರಬಲವಾಗಿ ಮುಂಚೂಣಿಗೆ ಬಂದವು.

ಹಾಗೆಯೇ ಪ್ರತಿನಿಧಿತ್ವ ಎನ್ನುವುದು ಕೆಲವು ವೇಳೆ ನಮ್ಮ ಇಚ್ಛೆಯನ್ನು ಮೀರಿ ಆಗುವಂತಹುದು. ನಾನು ಕೆಲವು ವರ್ಷಗಳ ಹಿಂದೆ 94ರಲ್ಲಿ ಕಾಂಗ್ರೇಸ್ ಪಕ್ಷದಿಂದ ಪಾರ್ಲಿಮೆಂಟರಿ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಅದು ನನ್ನ ಮೊದಲನೇ ಚುನಾವಣೆ .(ಒಂದು ಸಾರಿ ಗೆದ್ದಿದ್ದೆ.ಮತ್ತೊಂದು ಸಾರಿ ಸೋತೆ.) ಆಗ ಕಾರ್ಕಳದಲ್ಲಿ ನಾನು ತುಳು ಬಾಷೆಯಲ್ಲಿ ಲ್ಯಾಂಡ್ ರಿಫಾರಮೇಶನ್, ಹಿಂದೆ ಗೇಣಿ ಮಾಡುತ್ತಿದ್ದವರೆಲ್ಲಾ ಈಗ ಭೂ ಮಾಲಿಕರಾಗಿದ್ದೀರಿ ಹಾಗೂ ಇನ್ನೂ ಕೆಲವು ವಿಚಾರಗಳ ಬಗ್ಗೆ ಭಾಷಣ ಮಾಡುತ್ತಿದ್ದೆ. ಎಷ್ಟು ಜನರಿಗೆ ಭೂಮಿ ಸಿಕ್ಕಿದೆ ಎನ್ನುವ ಎಲ್ಲಾ ಅಂಕಿ ಸಂಖ್ಯೆಗಳ ವರದಿ ನನ್ನ ಬಳಿ ಇತ್ತು. ನನ್ನ ಜೊತೆ ಗೋಪಾಲ ಭಂಡಾರಿಯವರು ಇದ್ದರು. ಆಗ ಒಬ್ಬ ಹುಡುಗ ಕೇಳಿದ. ‘ಅದಾಯ್ತು ಸಾರ್, ನೀವು ಮಾಡಿದ್ದೆಲ್ಲಾ ಹೌದು, ಕಾಂಗ್ರೇಸ್ ಪಾರ್ಟಿಯವರು ಇದೆಲ್ಲಾ ಕೊಟ್ಟಿದ್ದು ನಿಜ. ಅದಕ್ಕಾಗಿ ನಿಮಗೆ ಸುಮಾರು ಸರಿ ಓಟು ಕೂಡ ನಾವು ಕೊಟ್ಟಿದ್ದಾಯ್ತು. ಈಗ ನಮ್ಮ ವಿಷಯ ಹೇಳಿ. ನಮಗೀಗ ಬೇಕಾದಂತಹ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿಲ್ಲ. ನನಗೆ ಉದ್ಯೋಗ ಸಿಗುತ್ತಿಲ್ಲ, ಈಗ ನೀವು ಮಾತನಾಡಿದ್ದು ಅದು ನಮ್ಮ ಅಜ್ಜನ ಕಾಲದ ವಿಷಯವಾಯ್ತು’ ಎಂದ. ಅವನು ಇಷ್ಟು ಮಾತಾಡಲಿಕ್ಕೆ ಕಾರಣ, ಅವನಿಗೆ ಭೂಮಿ ಹಕ್ಕು ಸಿಕ್ಕು, ಭೂಮಿಯ ಒಡೆಯನಾಗಿ,ಅದರಿಂದ ಶಿಕ್ಷಣ ಪಡೆದಿರುವುದು. ಅಂದ್ರೆ ಅವನ ಪ್ರಕಾರ ಹಿಂದೆ ಭೂಮಿ ಸಿಕ್ಕಿದ್ದಕ್ಕೆ ಅವನ ತಂದೆ, ಅಜ್ಜಂದಿರು ಓಟು ಕೊಟ್ಟಿದ್ದಾರೆ.ಈಗ ನನ್ನ ಕತೆ ಬಗ್ಗೆ ಮಾತಾಡಬೇಕು ಎನ್ನುವುದು ಅವನ ವಿಚಾರ. ಅಂದರೆ,ಪ್ರತಿನಿಧಿತ್ವ ಪ್ರಶ್ನೆ ಮುಖ್ಯ ಆಗುತ್ತದೆ. ಈಗ ಒಂದೇ ಮನೆಯಲ್ಲಿ ಅವನ ತಂದೆ ಮತ್ತು ಅವನು ಇಬ್ಬರೂ ಇದ್ದಾರೆ. ಅಪ್ಪ ನಮ್ಮ ಪರವಾಗಿ ಓಟು ಹಾಕುತ್ತಾನೆ ಹಿಂದಿನ ನಾವು ಮಾಡಿರುವ ಕೆಲಸದ ಕಾರಣದಿಂದ.ಆದರೆ, ಮಗ ಹಾಕುವುದಿಲ್ಲ. ಮಗನ ವಿಚಾರವೇ ಬೇರೆ ಇದೆ.ಈ ಸಂದರ್ಭದಲ್ಲಿ ಇವರಲ್ಲಿ ಯಾರೊಬ್ಬರ ಪರ ನಿಲುವು ತೆಗೆದುಕೊಂಡರೂ, ಒಬ್ಬರು ನಮ್ಮ ಪರವಾಗಿ ನಿಲ್ಲದಿರುವಂತಹ ಸ್ಥಿತಿ. ಓಟು ಕಳೆದುಕೊಳ್ಳಬೇಕಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ನಮ್ಮ ಇತರ ಯಾವ ಕೆಲಸಗಳು ಗಮನಕ್ಕೆ ಬರುವುದಿಲ್ಲ. .ನಾವು ಎಷ್ಟು ಪಾದಯಾತ್ರೆ ಮಾಡಿದರೂ, ರಾಜಕಾರಣದಲ್ಲಿ ಏನೇ ಹೋರಾಟ ಮಾಡಿದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಅದರ ಬಗ್ಗೆ ಹೇಳಿದರೆ ‘ಪುರುಸೊತ್ತು ಇತ್ತು ನಡೆದ್ರಿ’ ಅಂತ ಹೇಳ್ತಾರೆ. ಒಂದು ಕಮಿಟ್ಮೆಂಟಿಗೋಸ್ಕರ ನಡೆದ್ರಿ ಅಂತ ಯಾರೂ ಹೇಳುವುದಿಲ್ಲ. ಪುರುಸೊತ್ತಿತ್ತು ನಡೆದ್ರಿ, ಪುರುಸೊತ್ತಿದೆ ಬಿಡು ನಡಿತಾನೆ. ಎಲ್ಲರಿಗೂ ಅಷ್ಟು ಪುರುಸೊತ್ತು ಇರೋದಿಲ್ಲ ಅಂತ ಹೇಳುತ್ತಾರೆ. ನಡೆದವರಿಗೆ ಗೊತ್ತು ನಡೆಯೋದು ಎಷ್ಟು ಕಷ್ಟ ಅಂತ.ಅನೇಕ ಸಂದರ್ಭಗಳಲ್ಲಿ ಯಾವುದಾದರೂ ಒಂದು ಕಾರಣಕ್ಕಾಗಿ ಹೋರಾಟ ಮಾಡಿರುತ್ತೇವೆ. ಅದರ ಪ್ರಯೋಜನ ಆಗಬಹುದು ಅಂತ ಲೆಕ್ಕ ಇಟ್ಟುಕೊಂಡರೆ ಇಂತಹ ಯಾವ ಅಂಶಗಳು ಕೆಲವೊಮ್ಮೆ ಲೆಕ್ಕಕ್ಕೇ ಬರುವುದಿಲ್ಲ. ನಮಗೆ ಉಲ್ಟಾ ಹೊಡೆದಿರುತ್ತವೆ. ಕಾಕತಾಳೀಯವಾಗಿ ಕೆಲವೊಮ್ಮೆ ಮಾತ್ರ ಪ್ರಯೋಜನಕ್ಕೆ ಬಂದಿರುತ್ತವೆ ಅಷ್ಟೇ.

ಹೀಗೆಯೇ, ರಾಜೀವ್ ಗಾಂಧಿ 18 ವರ್ಷದವರಿಗೆ ಮತದಾನದ ಹಕ್ಕನ್ನು ನೀಡಿದ ತಕ್ಷಣ, ಈ ಕಾರಣಕ್ಕಾಗಿ ಅವರು ತೀರಿದ ನಂತರ ಕಾಂಗ್ರೇಸ್ ಪಕ್ಷಕ್ಕೆ ಯಾರೂ ಓಟು ಹಾಕಲಿಲ್ಲ. ಯದ್ವಾತದ್ವ ಪಕ್ಷವನ್ನು ಸೋಲಿಸಿದರು 89ರ ಸಂದರ್ಭದಲ್ಲಿ.ರಾಜೀವ್ ಗಾಂಧಿಯಿಂದ ನಮಗೆ ಮತದಾನದ ಹಕ್ಕು ಸಿಕ್ಕಿದೆ. ಹಾಗಾಗಿ ಅವರಿಗೆ ಓಟು ಹಾಕಬೇಕು ಎನ್ನುವಂತಹ ಪ್ರಶ್ನೆ ಬರಲಿಲ್ಲ. ಆದರೆ, ಯಾವಾಗ ಜನರು ಮತ್ತೆ ಕಾಂಗ್ರೇಸ್ನ ಪರವಾಗಿ ಬಂದರು ಎಂದರೆ, ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ. ಇವರು ಮತ್ತು ಮನಮೋಹನ್ ಸಿಂಗ್ ಲಿಬರಲೈಸೇಷನ್, ಪ್ರೈವೇಟೈಸೇಷನ್, ಗ್ಲೋಬಲೈಸೇಷನ್ ನೀತಿಯನ್ನು ಜಾರಿಗೆ ತಂದರು. ಆ ನಂತರ ತಂತ್ರಜ್ಞಾನ ಎಲ್ಲ ಬರಲು ಪ್ರಾರಂಭವಾಯಿತು. ಆಗ ಯುವಜನತೆ ಸಬಲವಾಗಿ, ಉದ್ಯೋಗ ಪಡೆದು ಸಾವಿರ ಸಂಬಳ ನೋಡುವುದೇ ಕಷ್ಟ ಎನ್ನುವಂತಹ ಸಂದರ್ಭದಲ್ಲಿ ಲಕ್ಷ ಸಂಬಳವನ್ನು ಎಣಿಸುವುದಕ್ಕೆ ಯಾವಾಗ ಪ್ರಾರಂಭ ಮಾಡಿದರೋ ಆಗ ಯುವ ಜನತೆಯೆಲ್ಲಾ ಮುಂಚೂಣಿಗೆ ಬರಲು ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಪ್ರತಿನಿಧಿತ್ವ ಎಂದರೆ, ಯುವಜನತೆಗೆ ಹೆಚ್ಚಿನ ಮಹತ್ವ ಕೊಡುವುದು, ಅವರನ್ನ ಪ್ರತಿನಿಧಿಸುವುದು, ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸುವುದು ಮುಖ್ಯವಾಯಿತು. ಉಳಿದಿರುವ ವಿಚಾರಗಳೆಲ್ಲ ಗೌಣವಾದವು ಅಥವಾ ಮುಖ್ಯವಾಗಿ ಪರಿಗಣಿಸಲ್ಪಡಲಿಲ್ಲ. ಜಾತಿಯ ಬಗ್ಗೆ, ಮತದ ಬಗ್ಗೆ ಮಾತನಾಡುವುದು. ಹಿಂದೆ ಇದೇ ವಿಚಾರಗಳು ಸಬಲೀಕರಣದ issueಗಳಾಗಿದ್ದವು. ಆದರೆ, ಇದ್ದಕ್ಕಿದ್ದ ಹಾಗೆ, ಈ ವಿಚಾರಗಳು Divisive  ವಿಚಾರಗಳಾಗಿ, ತಂತ್ರಜ್ಞಾನ, ಯುವಜನತೆಯ ವಿಚಾರಗಳೇ Empowering issueಗಳಾದವು. ಇದು ಸ್ವಲ್ಪ ವರ್ಷಗಳ ಕಾಲ ಪ್ರಾತಿನಿಧ್ಯದ ಪರಿಕಲ್ಪನೆಯಾಗಿ ಚಲಾವಣೆಯಲ್ಲಿತ್ತು.

ಇದಾದ ಕೆಲವು ವರ್ಷಗಳ ನಂತರದಲ್ಲಿ, ಈ ಲಿಬರಲೈಸೇಷನ್, ಪ್ರೈವೇಟೈಸೇಷನ್, ಗ್ಲೋಬಲೈಸೇಷನ್ನ ಜೊತೆ ಜೊತೆಗೆ ಭ್ರ್ರಷ್ಟಾಚಾರವೂ ಸೇರಿಕೊಂಡಿದೆ ಎನ್ನುವುದು ಗೊತ್ತಾದ ತಕ್ಷಣ ಪುನಃ ಪ್ರಾತಿನಿಧ್ಯದ issue ಬೇರೆಯಾಗಲಿಕ್ಕೆ ಪ್ರಾರಂಭವಾಯಿತು.ಇವತ್ತಿನ ರಾಜಕಾರಣದಲ್ಲಿ ಬೇರೆ ಬೇರೆ ಸಾಕಷ್ಟು ವಿಚಾರಗಳು ಇದ್ದರೂ ಕೂಡಾ ಭ್ರ್ರಷ್ಟಾಚಾರ Focal point ಆಗಲಿಕ್ಕೆ ಪ್ರಾರಂಭವಾಯಿತು.ಅಂದರೆ ಈಗಿರುವಂತಹ ಬಹು ಮುಖ್ಯವಾದ ಒಂದು issue ಅಂದರೆ ಅದು Curruption. ಇದೇ ಈಗ ಸೆಂಟ್ರಲ್ ಆಗಿರುವಂತಹ ವಿಚಾರ. ಅದಕ್ಕೆ ಮುಖ್ಯವಾಗಿ ಕಾರಣ ಕರ್ತೃಗಳಾಗಿರುವವರು ರಾಜಕಾರಣಿಗಳು ಹಾಗಾಗಿ Curruption ಇದೆ ಎನ್ನುವಂತಹ ವಿಚಾರ ವ್ಯಕ್ತವಾಗುತ್ತಿದೆ.

ಜನರಿಗೆಮೂಲಭೂತವಾಗಿ ರಾಜಕಾರಣಿಗಳ ಬಗ್ಗೆ ಅಸಮಧಾನ ಇರುವುದರಿಂದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರ ಪರವಾಗಿ ನಿಂತರು. ಆದರೆ, ಒಂದು ತಿಂಗಳಾಗುವುದರ ಒಳಗಾಗಿ ಈ ರೀತಿ ಆಯ್ಕೆಯಾದ ಆಪ್ ಪಕ್ಷದವರಿಗೂ ಕೂಡಾ ಕೆಲವು ಅನುಭವಗಳಾದವು. ಈ ಪಕ್ಷದವರು ಮೊದಲು ಹೇಳುತ್ತಿದ್ದು ಏನು?ಸಾರ್ವಜನಿಕ ಬದುಕಿನಲ್ಲಿರುವವನ ಮೇಲೆ ಏನಾದರು ಒಂದು ಕೇಸ್ ದಾಖಲಾಯ್ತು ಅಂದರೆ ಅವನು ಆ ಕ್ಷೇತ್ರದಲ್ಲಿ ನಂತರ ಇರುವ ಹಾಗಿಲ್ಲ. ಹೊರಗೆ ಹೋಗತಕ್ಕದ್ದು ಎನ್ನುತ್ತಿದ್ದರು. ಆದರೆ, ದೆಹಲಿಯ ಕಾನೂನು ಮಂತ್ರಿಯ ಮೇಲೆ ಕೇಸ್ ದಾಖಲಾಗಿದೆ. ಅದಕ್ಕೆ ನ್ಯಾಯಾಲಯವೇ ನಿರ್ದೇಶನ ಮಾಡಿದೆ. ಈಗ ಆ ಪಕ್ಷದವರು ಏನು ಹೇಳ್ತಾರೆ?ಅದೇನು ರಾಜೀನಾಮೆ ಕೊಡುವಂತಹ ದೊಡ್ಡ ಅಪರಾಧವೇನಲ್ಲ ಎನ್ನುತ್ತಿದ್ದಾರೆ. ಇದಕ್ಕೂ ಹಿಂದಿನ ಪಕ್ಷಗಳು ಹೇಳುತ್ತಿದ್ದುದು ಏನು? ಆರೋಪಗಳಿವೆ ಅಷ್ಟೇ, ಅದು ಅಪರಾಧವಾಗಿ ಸಾಬೀತಾಗಿಲ್ಲ ಎನ್ನುತ್ತಿದ್ದವು. ಈಗ ಪ್ರಶ್ನೆ ಇರುವುದು ಆರೋಪಿ ರಾಜೀನಾಮೆ ಕೊಡಬೇಕೋ, ಅಥವಾ ಅಪರಾಧಿ ರಾಜೀನಾಮೆ ಕೊಡಬೇಕೋ?ಎಂಬುದು. ಆರೋಪಿ ಮತ್ತು ಅಪರಾಧಿಯ ಮಧ್ಯೆ ಸಾಕಷ್ಟು ಪ್ರಕ್ರಿಯೆಗಳಿವೆ. ಹೀಗೆ ಈ ಚುನಾವಣೆಯಲ್ಲಿ ಪ್ರತಿನಿಧಿತ್ವ ಅಂದರೆ ಅದು ಭ್ರಷ್ಟಾಚಾರವನ್ನು ವಿರೋಧಿಸುವ ಒಂದು ವಿಚಾರದಿಂದ ಕೂಡಿರುವುದಾಗಿತ್ತು. ..(ಮುಂದುವರೆಯುವುದು)

ಭಾಗ 1

ಭಾಗ 2

Advertisements
Read more from ಲೇಖನಗಳು
31 ಟಿಪ್ಪಣಿಗಳು Post a comment
 1. ಯಮ್
  ಮೇ 9 2014

  “ಈಗ ನಮ್ಮ ವಿಷಯ ಹೇಳಿ. ನಮಗೀಗ ಬೇಕಾದಂತಹ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿಲ್ಲ. ನನಗೆ ಉದ್ಯೋಗ ಸಿಗುತ್ತಿಲ್ಲ, ಈಗ ನೀವು ಮಾತನಾಡಿದ್ದು ಅದು ನಮ್ಮ ಅಜ್ಜನ ಕಾಲದ ವಿಷಯವಾಯ್ತು’”: ಇದು “ಪ್ರತಿನಿಧಿತ್ವ ಪ್ರಶ್ನೆ”. … “ಪ್ರತಿನಿಧಿತ್ವ ಎಂದರೆ, ಯುವಜನತೆಗೆ ಹೆಚ್ಚಿನ ಮಹತ್ವ ಕೊಡುವುದು, ಅವರನ್ನ ಪ್ರತಿನಿಧಿಸುವುದು, ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸುವುದು.” ಇತ್ಯಾದಿ ಇತ್ಯಾದಿ.

  ಅಂದರೆ ಇವರ ಪ್ರಕಾರ ಪ್ರತಿನಿಧಿತ್ವ ಎಂದರೆ ಹೇಗೆ ಓಟುಗಳನ್ನು ಕೇಳುವುದು ಅಥವಾ ಓಟನ್ನು ಕೇಳಲು ಇರುವ ಕಾರಣ ಎಂದಾಯಿತು. ಇದನ್ನು ಒಂದು ವಿವಿಯ ರಾಜಕೀಯ ಶಾಸ್ತ್ರದ ವಿಭಾಗ ಪ್ರಕಟ ಪಡಿಸುತ್ತದೆ. ಬಹುಶಃ ಅವರು ಇದನ್ನೇ ಕಳಿಸಿ ಕೊಡುತ್ತಿರಲೂಬಹುದು.

  ಇದು ನಮ್ಮ ಶಿಕ್ಷಣ ವ್ಯವಸ್ತೆಯ (ಅಧೋ)ಗತಿಗೆ ಹಿಡಿದ ಕನ್ನಡಿನಾ? ಅಥವಾ ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವವರ ಕಥೆನಾ?

  [ಅಂದ ಹಾಗೆ, Devisive ಎನ್ನೋ ಪದ ಇಲ್ಲ. Divisive ಎನ್ನೋ ಪದ ಇದೆ. ಆದರೆ ಅದರ ಅರ್ಥ ‘ಅಪ್ರಮುಖ’ ಅಲ್ಲ.]

  ಉತ್ತರ
  • ಮೇ 13 2014

   ಯಮ್ ರವರೆ

   ನಿರ್ದಿಷ್ಟವಾಗಿ ತಮ್ಮ ಸಮಸ್ಯೆ ಏನು? ಲೇಖನದಲ್ಲಿ ಸಮಸ್ಯೆ ಇದ್ದರೆ ಅದನ್ನು ಚರ್ಚಿಸಿ, ತೊಂದರೆ ಇಲ್ಲ, ಅದನ್ನು ಬಿಟ್ಟು ಉಳಿದಂತೆ ನಿಮ್ಮ ಸರ್ಟಿಫಿಕೇಟ್ ನ ಅಗತ್ಯ ಇಲ್ಲಿ ಯಾರಿಗೂ ಇಲ್ಲ. ಶಿಕ್ಷಣ ಅಧೋಗತಿಗೆ ತಲುಪಿದೆ ಎಂದೆನಿಸಿದರೆ ಬಂದು ಉದ್ದಾರ ಮಾಡಿ ಬೆಳಕನ್ನು ನೀಡಿ ಸಹಕರಿಸಬೇಕಾಗಿ ವಿನಂತಿ. ನಿಮ್ಮ ಪ್ರತಿಷ್ಠೆಯ ಮಾತುಗಳು ನಿಮ್ಮ ಬಳಿಯೇ ಇದ್ದರೆ ಒಳಿತು.

   ಇನ್ನು ಪ್ರತಿನಿಧಿತ್ವದ ಅರ್ಥ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ ಎಂಬುದು ಅವರ ವಾದ. ಹಾಗೆಂದ ಮಾತ್ರಕ್ಕೆ ಅದು ಅತ್ಯಂತಿಕವಾದುದು ಎಂಬುದು ನನ್ನ ಅಭಿಪ್ರಾಯವಲ್ಲ. ಪ್ರತಿನಿಧಿತ್ವ ಎಂದರೇನು? ಎಂಬ ಪ್ರಶ್ನೆಗೂ ಪ್ರತಿನಿಧಿತ್ವ ಬದಲಾಗುತ್ತಿರುವುದರ ಸ್ವರೂಪ ಏನು? ಎಂಬ ಪ್ರಶ್ನೆಗೂ ವ್ಯತ್ಯಾಸವಿದೆ. ಪ್ರತಿನಿಧಿತ್ವ ಎಂಬುದರ ವ್ಯಾಖ್ಯಾನ ನೀಡಿಕೊಂಡೆ ಅದರ ಕುರಿತು ಅಧ್ಯಯನ ಮಾಡುವ ಅಗತ್ಯವಿಲ್ಲ ಎಂಬುದಕ್ಕೆ ಅದಕ್ಕೆ ಸರಿಸಮಾನಾದ ಸಂಶೋಧನೆಗಳು ನೈಸರ್ಗಿಕ ವಿಜ್ಞಾನದಲ್ಲಿ ದೊರಕುತ್ತವೆ. ಆದ್ದರಿಂದ ತಾವು ಅವರು ನೀಡಿದ ಯಾವುದೋ ಒಂದು ವ್ಯಾಖ್ಯಾನವನ್ನೇ ಜಗತ್ತಿನ ತಮ್ಮಂತಹ ಬುದ್ದಿಜೀವಿಗಳು ಒಪ್ಪಿದ್ದಾರೆಂಬ ಭ್ರಮೆಯಲ್ಲಿ ಇರಬೇಡಿ..

   ಲೇಖನದಲ್ಲಿ ಸಮಸ್ಯೆ ಇದ್ದರೆ ಆ ಸಮಸ್ಯೆಯ ಕುರಿತು ನಿರ್ದಿಷ್ಟವಾಗಿ ಚರ್ಚಿಸಿ, ಅದನ್ನು ಇಟ್ಟುಕೊಂಡು ಚೆ್ಚೆಯನ್ನು ಮುಂದೆ ತೆಗೆದುಕೊಂಡು ಹೋದರೆ ಜ್ಞಾನದ ವೃದ್ದಿಯಾದರೂ ಆದೀತು. ಅದನ್ನು ಬಿಟ್ಟು ಯಾವುದೋ ಒಂದು ಸಾಲನ್ನು ಇಟ್ಟುಕೊಂಡು ಅತಾರ್ಕಿಕ ಜಡ್ಜ ಮೆಂಟನ್ನು ನೀಡುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ..

   ಉತ್ತರ
   • ಯಮ್
    ಮೇ 17 2014

    ಬಹಳ ಸಿಟ್ಟು ಮಾಡಿಕೊಂಡು ಉತ್ತರಿಸಿದ ಹಾಗಿದೆ. ಇರಲಿ. ನನ್ನ ಮಾತು ಕೋಪ ತರಿಸಿದ್ದಾದರೆ, ಕ್ಷಮೆ ಇರಲಿ. ಸ್ವಲ್ಪ serious ಚರ್ಚೆ ಮಾಡೋಣ ಇನ್ನು.
    * “ಶಿಕ್ಷಣ ಅಧೋಗತಿಗೆ ತಲುಪಿದೆ ಎಂದೆನಿಸಿದರೆ ಬಂದು ಉದ್ದಾರ ಮಾಡಿ ಬೆಳಕನ್ನು ನೀಡಿ” ಎನ್ನುವುದರ ಅರ್ಥ ಏನು? ಸ್ವತಃ ಕೆಲಸ ಮಾಡದ ಹೊರತು ವಿಮರ್ಶೆ ಮಾಡಬಾರದು ಎಂದೋ? ಹಾಗಾದರೆ ಅನಂತಮೂರ್ತಿಯವರನ್ನು ಟೀಕಿಸಲು ನೀವೂ ಕಾದಂಬರಿ ಬರೆಯಬೇಕಾಗುತ್ತದೆ. ಹಾಗೆ ಸಿದ್ಧು ಅವರನ್ನು ಟೀಕಿಸಲು ನೀವೂ ಮುಖ್ಯಮಂತ್ರಿಯಾಗಬೇಕಾಗುತ್ತದೆ. ಇವೆಲ್ಲ ಮಾಡಿದ್ದೀರಾ? ಇಲ್ಲ ತಾನೇ?
    * “ಇನ್ನು ಪ್ರತಿನಿಧಿತ್ವದ ಅರ್ಥ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ” ಎಂದು ಒಪ್ಪಿಕೊಂಡರೂ, ಈ ವಾದ ಮಾಡಲು ನೀವು ಮೊದಲು ‘ಪ್ರತಿನಿಧಿತ್ವ’ ಎಂದರೇನು ಎಂದು ನಿರ್ಧಿಷ್ಟಪಡಿಸಬೇಕಾಗುತ್ತದೆ. ಅದೊಂದು ಪದವೋ? ಪರಿಕಲ್ಪನೆಯೋ?ಇನ್ನೇನೋ? ಅದೊಂದು ಪದವಾಗಿದ್ದರೆ, ‘ನೋಡಿ ಈ ಪದದ ಅರ್ಥ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ’ ಎಂದು ತೋರಿಸಬಹುದು. ಆದರೆ ಇದು ಒಂದು ನೀರಸವಾದ ವಿಚಾರ. ಬಿ. ಎಲ್ ಶಂಕರ್ ಅವರ ವಾದ ಹೀಗಿರಬಹುದೇ? ‘ಪ್ರತಿನಿಧಿತ್ವ’ ಎಂಬ ಪರಿಕಲ್ಪನೆಗೆ X ಎನ್ನುವ ಅರ್ಥ ಇದೆ, ಆದರೆ ಜನರು ಮಾತ್ರ ಅದನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾ ಬಂದಿದ್ದಾರೆ. ಆದರೆ ಇಂಥ ವಾದ ಮಂಡನೆ ಅವರ ಭಾಷಣದಲ್ಲಿ ನನಗೆಲ್ಲೂ ಕಾಣಿಸಲಿಲ್ಲ.
    * ‘ಪ್ರತಿನಿಧಿತ್ವ’ ಪದಕ್ಕೆ ನಿಮ್ಮ ರಾಜ್ಯಶಾಸ್ತ್ರದಲ್ಲಿ ಒಂದು ನಿರ್ಧಿಷ್ಟ ಅರ್ಥ ಇದೆ ಎಂದುಕೊಂಡಿದ್ದೇನೆ. ನಿಮ್ಮ ಈ ಭಾಷಣಕಾರರಿಗೆ ಅದು ಗೊತ್ತೂ ಇಲ್ಲ, ಅವರಿಗೆ ಅದು ಅರ್ಥವೂ ಆಗಿಲ್ಲ. ಇಂಥ ಒಂದು ಭಾಷಣವನ್ನು ‘ನಾಡು- ನುಡಿ: ಮರುಚಿಂತನೆ’ ಎಂದೆಲ್ಲಾ ಪ್ರಚಾರಮಾಡುತ್ತಿದ್ದೀರ. ಯಾಕೋ ತಿಳಿಯಲಿಲ್ಲ. ನೀವೂ ಹೇಳಲಿಲ್ಲ. ನಾನು ಊಹೆ ಮಾಡಿದೆ. ನಿಮಗೆ ಸಿಟ್ಟು ಬಂತು. ಅದಿರಲಿ. ‘ಪ್ರತಿನಿಧಿತ್ವ’ ಪದಕ್ಕೆ ರಾಜ್ಯಶಾಸ್ತ್ರದಲ್ಲಿ ಒಂದು ನಿರ್ಧಿಷ್ಟ ಅರ್ಥ ಇದೆ ಎನ್ನುವುದು, water ಎನ್ನುವ ಪರಿಕಲ್ಪನೆಯ ಅರ್ಥ H2O ಎಂದಂತೆ. ಅಂದಮೇಲೆ, waterನ ಅರ್ಥ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ ಎಂದರೆ ಏನು ಅರ್ಥ? ನಿಮ್ಮ ಪ್ರಕಾರ ಬಿ. ಎಲ್ ಶಂಕರ್ ಹೇಳುತ್ತಿರುವುದು ಈ ರೀತಿಯ ಒಂದು ಅರ್ಥಹೀನ ವಿಚಾರ. ಇದನ್ನೇ ನೀವು ‘ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು’ ಎಂದೆಲ್ಲಾ ಕರೆಯುತ್ತಿದ್ದೀರಿ.
    * “ಪ್ರತಿನಿಧಿತ್ವ ಎಂದರೇನು? ಎಂಬ ಪ್ರಶ್ನೆಗೂ ಪ್ರತಿನಿಧಿತ್ವ ಬದಲಾಗುತ್ತಿರುವುದರ ಸ್ವರೂಪ ಏನು? ಎಂಬ ಪ್ರಶ್ನೆಗೂ ವ್ಯತ್ಯಾಸವಿದೆ” ಎನ್ನುತ್ತೀರಿ. ಯಾವ ವ್ಯತ್ಯಾಸ? ಪ್ರತಿನಿಧಿತ್ವ ಎಂದರೆ ಏನು ಎಂದೇ ಗೊತ್ತಿಲ್ಲದಿದ್ದ ಮೇಲೆ ಯಾವುದರ ಸ್ವರೂಪ ಬದಲಾಗುತ್ತಿದೆ ಎಂದು ಹೇಗೆ ಹೇಳುವುದು? ನೀವು ಹೇಳುತ್ತಿರುವುದಕ್ಕೂ, ‘ಆಬ್ರಕದಬ್ರಾದ ಬದಲಾಗುತ್ತಿರುವ ಸ್ವರೂಪ’ ಎಂಬ ಹೇಳಿಕೆಗೂ ಏನಾದರೂ ವ್ಯತ್ಯಾಸ?
    * “ಆದ್ದರಿಂದ ತಾವು ಅವರು ನೀಡಿದ ಯಾವುದೋ ಒಂದು ವ್ಯಾಖ್ಯಾನವನ್ನೇ ಜಗತ್ತಿನ ತಮ್ಮಂತಹ ಬುದ್ದಿಜೀವಿಗಳು ಒಪ್ಪಿದ್ದಾರೆಂಬ ಭ್ರಮೆಯಲ್ಲಿ ಇರಬೇಡಿ..” ಅರ್ಥ ಆಗಲಿಲ್ಲ. ಸ್ವಲ್ಪ ನಿಧಾನವಾಗಿ, ಸಿಟ್ಟು ಮಾಡಿಕೊಳ್ಳದೆ ಬರೆಯಿರಿ.
    * ಕಾದಂಬರಿಗಳನ್ನು ಸಮಾಜವೈಜ್ಞಾನಿಕ ಕೃತಿಗಳಂತೆ ಪರಿಗಣಿಸುವ ಬರಹಗಾರರನ್ನು ನೀವುಗಳು ಅದೆಲ್ಲೋ ಹಿಗ್ಗಾಮುಗ್ಗಾ ಬೈದದ್ದು ನೆನಪು. ತಾವು ಈಗ ಈ ರಾಜಕಾರಣಿಗಳ ಭಾಷಣಗಳನ್ನು ಅದೇ ರೀತಿ ಪರಿಗಣಿಸುತ್ತಿಲ್ಲವೇ? ಸಿಟ್ಟು ಮಾಡಿಕೊಳ್ಳ ಬೇಡಿ. ಪ್ರತಿನಿಧಿತ್ವ ಪದದ ಅರ್ಥಗೊತ್ತಿಲ್ಲದ ಒಬ್ಬ ರಾಜಕಾರಣಿಯ ಭಾಷಣವನ್ನು ‘ನಾಡು- ನುಡಿಯ ಮರುಚಿಂತನೆ’ ಎಂದು ನೀವು ಪ್ರಚಾರ ಮಾಡುತ್ತಿರುವುದಾದರೆ ಒಂದು ವಿವಿಯಲ್ಲಿ ರಾಜಕೀಯಶಾಸ್ತ್ರದ ವಿಭಾಗದ ಅವಶ್ಯಕತೆ ಏನಿದೆ? ನೀವು ಸಂಶೋಧನೆ ಮಾಡುವ ಅವಶ್ಯಕತೆ ಏನಿದೆ? ಅದಕ್ಕೆ ಹೇಳಿದ್ದು ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವವರ ಕಥೆಯಾಯಿತು ನಿಮ್ಮದು ಎಂದು. ನಿಮಗೆ ಅದೂ ಅರ್ಥ ಆಗಲಿಲ್ಲ. 😛

    ಉತ್ತರ
    • ಮೇ 23 2014

     ಯಮ್ ರವರೆ..

     1. ನಿಮ್ಮ ಪ್ರಶ್ನೆಗಳು ಗಹನವಾದವು..ಅಂತಹ ಪ್ರಶ್ನೆಗಳನ್ನು ಎತ್ತುವ ಮಟ್ಟಿಗೆ ಈ ಲೇಖನ ಸಹಾಯ ಮಾಡಿದೆ ಎಂದು ನಂಬುತ್ತೇನೆ. ಹಾಗಾಗಿ ಈ ಕಾಲಂ ನಲ್ಲಿ ಹಾಕಿದ ಲೇಖನ ವೇಸ್ಟ್ ಆಗಲಿಲ್ಲ ಭಾವಿಸುತ್ತೇನೆ. (ಹಾಗೆಯೇ ಶಂಕರ್ ರವರನ್ನು ಸಮರ್ಥಿಸುವ ಯಾವ ಇರಾದೆಯೂ ನನಗಿಲ್ಲ, ಚರ್ಚೆಯಾಗಲಿ ಎಂಬ ಉದ್ದೇಶದಿಂದಲೇ ಇಲ್ಲಿ ಹಾಕಲಾಗಿದೆ ಅಷ್ಟೆ)

     2. ಬೇರೆಯವರನ್ನು ಟೀಕಿಸಲು ನಾವು ಅದೇ ಆಗಿರಬೇಕೆಂಬ ನಿಯಮವೇನೂ ಇಲ್ಲ ಎಂಬುದು ಸತ್ಯ. ಆದರೆ ಟೀಕೆಯ ಸ್ವರೂಪವೇ ಸರಿ ಇಲ್ಲದಿದ್ದರೆ ಅಂದರೆ ಕನಸ್ಟ್ರಕ್ಟಿವ್ ಕ್ರಿಟಿಸಿಸಮ್( ಇದರ ಬಗ್ಗೆ ನಿಮಗೆ ಹೆಚ್ಚಿಗೆ ತಿಳಿದಿದೆ ಎಂಬ ನಂಬಿಕೆ) ಆಗಿರದಿದ್ದರೆ ಏನು ಹೇಳಬೇಕು? ಹಿಂದಿನ ಕಮೆಂಟ್ ಗಳಲ್ಲಿ ತಾವು ತಮ್ಮ ಪ್ರಶ್ನೆಯನ್ನು ಸರಿಯಾಗಿ ಕೇಳದೆ ನಿರ್ಣಯಗಳನ್ನು ನೀಡಿದ್ದರಿಂದ ನಾನು ಹಾಗೆನ್ನಬೇಕಾಯಿತು. ಅನಂತಮೂರ್ತಿಯವರ ಕಾದಂಬರಿಯ ದೋಷಗಳನ್ನು ತಿಳಿಸಲು ಕಾದಂಬರಿ ಬರೆಯುವ ಅಗತ್ಯತೆ ಖಂಡಿತ ಇಲ್ಲ, ಆದರೆ, ಆ ಕಾದಂಬರಿಯಲ್ಲಿರುವ ಸಮಸ್ಯೆ ಏನು ಎಂದು ಸ್ಪಷ್ಟವಾಗಿ ಹೇಳದಿದ್ದರೆ ನಾನು ಹಿಂದೆ ನೀಡಿದ ಕಾಮೆಂಟಿನಂತೆಯೆ ಪ್ರತಿಕ್ರಿಯೆ ಬರುತ್ತದೆ. ಆದರೆ ನಿಮ್ಮ ಈಗಿನ ಕಮೆಂಟಿಗೆ ಅಂತಹ ಉತ್ತರ ಸಮಂಜಸವಾಗುವುದಿಲ್ಲ

     3. ಪ್ರತಿನಿಧಿತ್ವದ ಅರ್ಥ ನಿರ್ದಿಷ್ಟವಾಗಿ ಇದೆ ಸರಿ, ಆದರೆ ಇವರು ಅದರ ಸಮಸ್ಯೆಗಳ ಕುರಿತು ಥೀಮ್ ಇದ್ದುದರಿಂದ ಅದರ ಕುರಿತು ಮಾತನಾಡಲು ಇಚ್ಚಿಸದರು ಎಂದುಕೊಳ್ಳುತ್ತೇನೆ. ಪ್ರತಿನಿಧಿತ್ವ ಎಂದರೇನು ಎಂದು ಅವರಿಗೆ ತಿಳಿಯದಿರಬಹುದು, ಸಾಮಾನ್ಯವಾಗಿ ಯಾವುದನ್ನು ಪ್ರತಿನಿದಿ, ಪ್ರತಿನಿಧಿತ್ವ ಎಂದು ಸೂಚಿಸುತ್ತಾರೋ ಅದರ ಆಧಾರದ ಮೇಲೆ ಅವರು ಮಾತನಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರು ರಾಜಕೀಯ ಕ್ಷೇತ್ರದಲ್ಲಿ ಪ್ರತಿನಿಧಿತ್ವ ಎಂದು ಅರ್ಥೈಸಿಕೊಂಡಿರುವ ವಿಧಾನದಲ್ಲಿ ಅವರು ಮಾತನಾಡಿರಬಹುದು.

     4, ಅವರು ಹೇಳುತ್ತಿರುವಂತೆ ಅದರ ಸ್ವರೂಪ ಬದಲಾಗುತ್ತಿರಬಹುದು, ಅದರ ಇಂಗಿತ ಕಾಲದಿಂದ ಕಾಲಕ್ಕೆ ಅದರ ಅರ್ಥವೂ ಬದಲಾಗುತ್ತಿದೆ ಎಂದು ಏಕೆ ಭಾವಿಸಬೇಕು? ಆದರೆ ಅವರು ಹೇಳುತ್ತಿರುವುದು ಅಂತಿಮ ಸತ್ಯ ಎಂದೂ ಕೂಡ ಭಾವಿಸುವ ಅಗತ್ಯವಿಲ್ಲ.

     5. ಗಾಜಿನ ಮನೆಯಲ್ಲಿ ಕಲ್ಲು ಹೊಡೆಯುವ ಕುರಿತು..ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ರಾಜ್ಯಶಾಸ್ತ್ರವಿಭಾದಲ್ಲಿ ಪಿ.ಹೆಚ್.ಡಿಯನ್ನೂ ಮಾಡಿರುವ ವಿದ್ವಾಂಸರೂ ಹೌದು..ಹಾಗಾಗಿ ಅವರನ್ನು ಉಲ್ಲೇಖಿಸಿದರೆ ರಾಜ್ಯಶಾಸ್ತ್ರ ವಿಭಾಗವನ್ನು ಮುಚ್ಚುವ ಸಂದರ್ಭ ಬರಲಿಕ್ಕಿಲ್ಲ ಎಂಬುದು ನನ್ನ ಭಾವನೆ.

     ಇನ್ನು ಲೇಖನದ ಕುರಿತು ನನ್ನ ವಿಚಾರ: ಅವರು ಪ್ರತಿನಿಧಿತ್ವ ಎಂದರೇನು? ಎಂಬುದನ್ನು ಹೇಳಲಿಲ್ಲ ಎನ್ನುವುದನ್ನ ನಾನೂ ಒಪ್ಪುತ್ತೇನೆ. ಅದರ ಕುರಿತ ಜ್ಞಾನ ಇದ್ದಂತೆಯೂ ಕಾಣುವುದಿಲ್ಲ. ಅವರು ಯಾವ ಬದಲಾವಣೆಗಳನ್ನು ಇಟ್ಟುಕೊಂಡು ಪ್ರಾತಿನಿಧ್ಯದ ಬದಲಾವಣೆ ಎಂದು ಹೇಳುತ್ತಿದ್ದಾರೋ ಅವೆಲ್ಲವೂ ಮತದಾರ ಮತ ಹಾಕುವಾಗ ಗಮನಿಸುವ ವಿಷಯಗಳಾಗಿದ್ದು, ಒಂದೊಂದು ಕಾಲಘಟ್ಟದಲ್ಲಿ ರಾಜಕೀಯ ಪಕ್ಷವನ್ನು ಚುನಾಯಿಸುವಾಗ ಒಂದೊಂದು ವಿಷಯಕ್ಕೆ ಆಧ್ಯತೆಯನ್ನು ನೀಡುತ್ತಾನೆ. ಆಯಾ ಕಾಲಘಟ್ಟದಲ್ಲಿ ಸಂಭವಿಸಿದ ಘಟನೆಗಳ ಆಧಾರದ ಮೇಲೆ ಮತ್ತು ಕೆಲವಾರು ವ್ಯಕ್ತಿಗಳ ಆಧಾರದ ಮೇಲೆ ಮತದಾರರ ಆಯ್ಕೆ ಬದಲಾಗುತ್ತಾ ಹೋಗುತ್ತದೆ. ಆದ್ದರಿಂದ ಅವರು ಯಾವುದನ್ನೂ ಪ್ರತಿನಿಧಿತ್ವ ಸ್ವರೂಪಲ್ಲಿನ ಬದಲಾವಣೆ ಎಂದು ಹೇಳುತ್ತಿದ್ದಾರೋ ಅವೆಲ್ಲವನ್ನೂ ಮತದಾರರ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳೆಂದು ಪರಿಗಣಿಸಬಹುದು. ಆಯಾ ಕಾಲಘಟ್ಟದಲ್ಲಿ ಬದಲಾಗುವ ಪರಿಸ್ಥಿತಿಯು ರಾಜಕೀಯ ಪಕ್ಷವನ್ನು, ಸರ್ಕಾರವನ್ನು ಬದಲಾಯಿಸುತ್ತದೆಯೇ ಹೊರತು ಪ್ರಾತಿನಿಧ್ಯಕ್ಕೂ ಅದಕ್ಕೂ ಎಲ್ಲಿಯೂ ಸ್ಪಷ್ಟವಾದ ಸಂಬಂಧ ಕಾಣುವುದಿಲ್ಲ.

     ಒಟ್ಟಿನಲ್ಲಿ ರಾಜಕೀಯ ಸನ್ನಿವೇಶದಲ್ಲಿ ಆಗುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲಾಗದೆ ಅವುಗಳನ್ನು ಪ್ರಾತಿನಿಧ್ಯದ ಸ್ವರೂಪದಲ್ಲಿನ ಬದಲಾವಣೆ ಎಂದು ಲೇಖಕರು ವಾದಿಸುತ್ತಿದ್ದಾರೆ..

     ಇವಿಷ್ಟು ನನ್ನ ಅನಿಸಿಕೆ..

     ಉತ್ತರ
 2. Nagshetty Shetkar
  ಮೇ 10 2014

  AAP roadshow in Banaras tremendous success. Arvindji will win the seat by huge margin. Big blow to fascists.

  ಉತ್ತರ
  • ಸರ್ಜರಿವಾಲ್
   ಮೇ 13 2014

   ನಿಮ್ಮ ಕೇಜರಿವಾಲನಂತೆಯೇ ನಿಮ್ಮ ಕಮೆಂಟು ನಾನ್ಸೆನ್ಸ್.ರಾಹುಲ್ ಸರ್ ಅವರಿಗೆ ಹೇಳಿ ಈ ಕಮೆಂಟನ್ನು ಹರಿದು ಬಿಸಾಡಬೇಕು

   ಉತ್ತರ
  • ವಿಜಯ್ ಪೈ
   ಮೇ 13 2014

   ನಮ್ಮ ಶೆಟ್ಕರ್ ಸಾಹೇಬರು ಸ್ವಲ್ಪ ಲೇಟ್ ಮಾಡಿದ್ರು..ಮೊದಲೇ ಏನಾದರೂ ಚುನಾವಣಾ ಪ್ರಚಾರಕ್ಕೆ ಇಳಿದು ಬಿಟ್ಟಿದ್ದಿದ್ದರೆ ಆಪ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಶತ-ಪ್ರತಿಶತ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಕಣಕ್ಕಿಳಿದು ಸಾಹೇಬರು ತಮ್ಮ ಪ್ರಚಾರವನ್ನು ಮೇಧಾ ಪಾಟ್ಕರ ಮತ್ತು ಕೇಜ್ರಿವಾಲ್ ಗೆ ಮಾತ್ರ ಸಿಮೀತಗೊಳಿಸಿದ್ದು ಆಪ್ ನ ದುರ್ದೈವ.. ಆಪ್ ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿಕೊಂಡಿದೆ.

   ಉತ್ತರ
   • ಗಿರೀಶ್
    ಮೇ 14 2014

    ನಿಮ್ಮ ಊಹೆ ತಪ್ಪು ಪೈಗಳೆ, ಆಪ್ ಎಂದಿಗೂ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸಿಲ್ಲ. ಅವರ್ ಉದ್ದೇಶ ಏನಿದ್ದರೂ ಬೇರೆಯವರು ಅಧಿಕಾರಕ್ಕೆ ಬರದಂತೆ ತಡೆಯುವುದು. ಹಾಗಾಗಿಯೇ ಈ ಶೆಟ್ಕರ್ ಮಹಾನುಭಾವ ಆಪ್ ಸೇರಿರುವುದು. ತನ್ನಿಂದಾಗಲ್ಲ ಬೇರೆಯವರಿಗೆ ಬಿಡಲೊಲ್ಲ.

    ಉತ್ತರ
    • viji
     ಮೇ 14 2014

     ತುಂಬಾ ಸರಿ ಹೇಳಿದ್ದೀರಿ ಗಿರೀಶ್

     ಉತ್ತರ
   • Nagshetty Shetkar
    ಮೇ 14 2014

    ನಾನೊಬ್ಬ ಆಂ ಆದ್ಮಿ. ಎಲ್ಲಾ ಕ್ಷೇತ್ರಗಳಿಗೆ ಖುದ್ದಾಗಿ ಹೋಗಿ ಪ್ರಚಾರ ಮಾಡಲು ನನ್ನಿಂದ ಸಾಧ್ಯವಿಲ್ಲ. ಆಂ ಆದ್ಮಿಗಳೆಲ್ಲ ಆಂ ಆದ್ಮಿ ಪಕ್ಷದ ಬೆಂಬಲಕ್ಕೆ ನಿಂತರೆ ಎಲ್ಲೆಡೆ ಜಯಭೇರಿ ಮೊಳಗುತ್ತದೆ. ಆದರೆ ಅದಾನಿ ಹಾಗೂ ಅಂಬಾನಿ ಹಣ ಹಾಗಾಗದ ಹಾಗೆ ಮಾಡಿದೆ ಈ ಬಾರಿ.

    ಉತ್ತರ
    • Nagshetty Shetkar
     ಮೇ 15 2014
     • ಮಾರ್ಕ್ಸ್ ಮಂಜು
      ಮೇ 15 2014

      Long time Mr.Shetkar how are You.I was busy in west begngal.ಪಶ್ಛಿಮ ಬಂಗಾಳದಲ್ಲಿ ಮತ್ತೆ ಸಮಾನತೆಯ ಯುಗ ಶುರುವಾಗುತ್ತದೆ.ಈ ಬಾರಿ ಜನರಿಗೆ ಮಮತಾ ಮೋದಿಯವರ ನಾಟಕ ಗೊತ್ತಾಗಿದೆ.

      ಉತ್ತರ
     • ವಿಜಯ್ ಪೈ
      ಮೇ 15 2014

      ಗುರುಗಳೆ..ಇಲ್ಲಿ ಮಾಡಿದ ಹಾಗೆ..ಮುಂಬೈ, ವಾರಣಾಸಿಯಲ್ಲಿ ಕೂಡ ನೀವೇ ಪ್ರಚಾರ ಮಾಡಿ, ಮಾತನಾಡಿ, ನೀವೇ ಚಪ್ಪಾಳೆ ಹೊಡೆತಿದ್ರಾ? ಅಥವಾ ನಿಮ್ಮ ಶಿಷ್ಯನನ್ನು ಕರೆದುಕೊಂಡು ಹೋಗಿದ್ರಾ? 🙂

      ಉತ್ತರ
    • ವಿಜಯ್ ಪೈ
     ಮೇ 15 2014

     [ನಾನೊಬ್ಬ ಆಂ ಆದ್ಮಿ.]
     ಹೌದು..ಈಗ ಮಾವಿನಹಣ್ಣಿನ ಸೀಜನ್..ಆಮ್ ತಿನ್ನಬೇಕು..ಅದೂ ಬಿಟ್ಟಿ ಸಿಕ್ಕರೆ ಬಿಡಲೇಬಾರದು…

     [ಆಂ ಆದ್ಮಿಗಳೆಲ್ಲ ಆಂ ಆದ್ಮಿ ಪಕ್ಷದ ಬೆಂಬಲಕ್ಕೆ ನಿಂತರೆ ಎಲ್ಲೆಡೆ ಜಯಭೇರಿ ಮೊಳಗುತ್ತದೆ.]
     ಆದರೆ ಗುರುಗಳೆ, ಸಿಗುವ.ಮಾವಿನ ಹಣ್ಣಿನ ಮೇಲೆ ಆಸೆ ಇರುವಂತಹ ನಿಮ್ಮಂತಹ ಕಲಬೆರೆಕೆಗಳೆಲ್ಲ ಸೇರಿದರೆ ..ಜಯಭೇದಿ ಸುರುವಾಗಬಹುದೇನೊ ಎಂಬ ಅನುಮಾನ ನನಗೆ.

     [ಆದರೆ ಅದಾನಿ ಹಾಗೂ ಅಂಬಾನಿ ಹಣ ಹಾಗಾಗದ ಹಾಗೆ ಮಾಡಿದೆ ಈ ಬಾರಿ.]
     ಸುಟ್ಟುಭಸ್ಮ ಮಾಡಿಬಿಡುವ ‘ಶರಣ’ರ ಮುಂದೆ ಇವರ್ಯಾವ ಲೆಕ್ಕ ಅಂತ?

     ಉತ್ತರ
  • ವಿಜಯ್ ಪೈ
   ಮೇ 16 2014

   [AAP roadshow in Banaras tremendous success. Arvindji will win the seat by huge margin. Big blow to fascists.]

   ಚುನಾವಣೆ ಫಲಿತಾಂಶ ಕೇಳಿ ಗುರು-ಶಿಷ್ಯರು ಜ್ವರ ಬಂದು ಹಾಸಿಗೆ ಹಿಡಿದಿರಬೇಕು..ಶೀಘ್ರ ಗುಣಮುಖರಾಗಲಿ ಎಂಬ ಹಾರೈಕೆ :). ನಮ್ಮ ಗೊಣಗಲಿ ಸಾಹೇಬರ ಗತಿ ಏನಾಗಿದೆ ಎಂಬ ಚಿಂತೆ! 😦

   ಉತ್ತರ
   • Nagshetty Shetkar
    ಮೇ 16 2014

    ವಾರಣಾಸಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ನಿಜ. ಆದರೆ ನಮೋಸುರ ಅಂತಹ ದೊಡ್ಡ ಅಂತರದಲ್ಲಿ ಗೆದ್ದಿಲ್ಲ. ಅದಾನಿ ಅಂಬಾನಿಗಳ ಬೆಂಬಲವಿಲ್ಲದೆಯೂ ನಮೋಸುರನ ಎದುರು ಆಮ್ ಆದ್ಮಿ ನಿಂತು ಸೆಣಸಾಡಬಹುದೆಂದು ಕೆಜ್ರೀವಾಲಜಿ ಸಾಬೀತು ಪಡಿಸಿದ್ದಾರೆ. ಇದು ನಿಜಕ್ಕೂ ಜನಸಾಮಾನ್ಯರ ವಿಜಯ.

    ಉತ್ತರ
    • Nagshetty Shetkar
     ಮೇ 16 2014

     ವಿಜಯ್ ಅವರೇ, ಕೆಜ್ರೀವಾಲ್ ಅವರ ಸೋಲು ಚರಿತ್ರೆಯ ಗರ್ಭ ಸೇರಲಿದೆ. ಈಗ ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸುವುದು ಕೆಜ್ರೀವಾಲ್ ಇರಲಿ ಅಡ್ವಾಣಿಯವರಿಗೂ ಸಾಧ್ಯವಿಲ್ಲ. ಆದುದರಿಂದ ಪ್ರಧಾನಿ ಮೋದಿಯವರು ಹಳೆಯದನ್ನು ಮರೆತು ಭ್ರಷ್ಟಾಚಾರ ಮುಕ್ತ ಹಾಗೂ ಸೆಕ್ಯೂಲರ್ ತತ್ವಗಳಿಗೆ ಬದ್ಧವಾದ ಆಡಳಿತ ಕೊಡುತ್ತಾರೆ ಎಂದು ಆಶಿಸೋಣ. ಮೋದಿಯವರು ಅದಾನಿ ಅಂಬಾನಿಗಳಿಗೆ ಕಡಿವಾಣ ಹಾಕತಕ್ಕದ್ದು. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡತಕ್ಕದ್ದು. ಪ್ರತಿಗಾಮಿ ಮತೀಯವಾದ ಬೆಳೆಯದ ಹಾಗೆ ಎಚ್ಚರ ವಹಿಸತಕ್ಕದ್ದು.

     ಉತ್ತರ
     • Nagshetty Shetkar
      ಮೇ 17 2014
     • ಮೇ 17 2014

      ಶರಣರು ಮೋದಿಗೆ ಟ್ರೇನಿಂಗ್ ಕೊಡಬೇಕಾಗಿ ವಿನಂತಿ.

      ಉತ್ತರ
      • Nagshetty Shetkar
       ಮೇ 18 2014

       ದರ್ಗಾ ಸರ್ ಅವರ ಪ್ರತಿಭೆಯನ್ನು ಮೋದಿ ಸರಕಾರ ಸೆಕ್ಯೂಲರ್ ತತ್ವಗಳಿಗೆ ಬದ್ಧವಾಗಿ ಸಮಾನತೆಯ ಗರಿಮೆಗಾಗಿ ಬಳಸಿಕೊಳ್ಳಲು ಸಿದ್ಧವಿದ್ದರೆ ಶರಣರೂ ಬಸಾವದ್ವೈತದ ಪರಿಮಳವನ್ನು ದೆಹಲಿಯಲ್ಲಿಯೂ ಹರಡಲು ಸಿದ್ಧ.

       ಉತ್ತರ
     • ವಿಜಯ್ ಪೈ
      ಮೇ 18 2014

      [ವಾರಣಾಸಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ನಿಜ. ಆದರೆ ನಮೋಸುರ ಅಂತಹ ದೊಡ್ಡ ಅಂತರದಲ್ಲಿ ಗೆದ್ದಿಲ್ಲ. ]
      ಒಹ್ ಹೌದೆ? 3.37 ಲಕ್ಷ ನಿಮ್ಮ ಪ್ರಕಾರ ತುಂಬಾ ಸಣ್ಣದಾದ ಅಂತರವೆಂದಾಯಿತು..ಅದೂ ಉತ್ತರ ಪ್ರದೇಶದಂತಹ ಮತ-ಜಾತಿಯಿಂದಲೇ ರಾಜಕೀಯ ನಡೆಯುವ ರಾಜ್ಯದಲ್ಲಿ!. ಕೇಜ್ರಿವಾಲ್ ಮೋದಿಯ ಠೇವಣಿ ಹೋಗುತ್ತದೆ ಎಂದಿದ್ದರು!. ಆದರೂ ಏನೇ ಇರಲಿ..ಮಣ್ಣು ಮುಕ್ಕಿದರೂ ಸಮರ್ಥನೆ ಮಾಡುವ ಕಲೆ ಆದುನಿಕ ‘ಶರಣ’ರಿಗಿದೆ.

      [ಅದಾನಿ ಅಂಬಾನಿಗಳ ಬೆಂಬಲವಿಲ್ಲದೆಯೂ ನಮೋಸುರನ ಎದುರು ಆಮ್ ಆದ್ಮಿ ನಿಂತು ಸೆಣಸಾಡಬಹುದೆಂದು ಕೆಜ್ರೀವಾಲಜಿ ಸಾಬೀತು ಪಡಿಸಿದ್ದಾರೆ.]
      ಈ ಬಗ್ಗೆ ನವೀನ್ ಜಿಂದಾಲ್ ಮತ್ತು ಫೋರ್ಡ್ ಫೌಂಡೇಶನ್ ನ್ನು ಕೇಳಿ ನೋಡಿ. ಅಜ್ಙಾನ ದೂರವಾಗುತ್ತದೆ.

      [ಈಗ ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸುವುದು ಕೆಜ್ರೀವಾಲ್ ಇರಲಿ ಅಡ್ವಾಣಿಯವರಿಗೂ ಸಾಧ್ಯವಿಲ್ಲ. ]
      ಒಹ್ ಈಗ ಗೊತ್ತಾಯಿತೆ?. ಪಾಪ..ನಿಮ್ಮ ಪುಂಗಿನಾದ ವ್ಯರ್ಥವಾಯಿತು. ನೀವು ಸ್ವಲ್ಪ ದಿನ ರೆಸ್ಟ್ ತೆಗೆದುಕೊಂಡರೆ ಒಳ್ಳೆಯದು. ಮಾನಸಿಕ ಆರೋಗ್ಯ ಸುಧಾರಿಸಬಹುದು.

      [ಆದುದರಿಂದ ಪ್ರಧಾನಿ ಮೋದಿಯವರು ಹಳೆಯದನ್ನು ಮರೆತು ಭ್ರಷ್ಟಾಚಾರ ಮುಕ್ತ ಹಾಗೂ ಸೆಕ್ಯೂಲರ್ ತತ್ವಗಳಿಗೆ ಬದ್ಧವಾದ ಆಡಳಿತ ಕೊಡುತ್ತಾರೆ ಎಂದು ಆಶಿಸೋಣ]
      ಹಳೆಯದನ್ನು ಮರೆಯುವುದು ಅಂದರೆ ನಿಮ್ಮ ೧೨ ವರುಪಗಳ ನಿರಂತರ ಪುಂಗಿನಾದವನ್ನು ಮರೆಯುವುದು ಎಂದೇ??. ಈ ನಿಮ್ಮ ಬ್ರ್ಯಾಂಡಿನ ಒಮ್ಮುಖ ‘ಭ್ರಷ್ಟಾಚಾರ ಮುಕ್ತ ‘, ‘ಸೆಕ್ಯೂಲರ್ ತತ್ವ’ ಗಳ ಪಾಠಕ್ಕೆ ಮತದಾರರು ಚೆನ್ನಾಗಿಯೇ ಬಾರಿಸಿದ್ದಾರೆ. ನಮಗೆ ಬೇಕಾಗಿರುವುದು ನಿಜವಾದ ಭ್ರಷ್ಟಾಚಾರ ಮುಕ್ತ, ಎಲ್ಲರೂ ಒಂದೇ ಎಂಬ ಸೆಕ್ಯೂಲರ್ ತತ್ವಗಳು..ಅವು ಖಂಡಿತವಾಗಿಯೂ ಮೋದಿ ಆಡಳಿತದಲ್ಲಿ ಬರುತ್ತವೆ.

      [ಮೋದಿಯವರು ಅದಾನಿ ಅಂಬಾನಿಗಳಿಗೆ ಕಡಿವಾಣ ಹಾಕತಕ್ಕದ್ದು. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡತಕ್ಕದ್ದು. ಪ್ರತಿಗಾಮಿ ಮತೀಯವಾದ ಬೆಳೆಯದ ಹಾಗೆ ಎಚ್ಚರ ವಹಿಸತಕ್ಕದ್ದು.]
      ಹಾಕತಕ್ಕದ್ದು/ಕಾಪಾಡತಕ್ಕದ್ದು/ವಹಿಸತಕ್ಕದ್ದು !!. ಅಪ್ಪಣೆ ಮಹಾಪ್ರಭು..ಅಪ್ಪಣೆ ಮಹಾಪ್ರಭು..ತಾವಿನ್ನು ಬಾಯಿ ಮುಚ್ಚತಕ್ಕದ್ದು ಮತ್ತು ವಿಶ್ರಾಂತಿ ತೆಗೆದುಕೊಳ್ಳತಕ್ಕದ್ದು!

      ಉತ್ತರ
    • ಮೇ 20 2014

     ಹೌದು ಪಾಪ! ಕೇಜ್ರೀವಾಲ್ ಬಹಳ ಕಡಿಮೆ ಅಂತರದಿಂದ ಸೋತಿದ್ದಾರೆ.
     ಮೋದಿಯವರಿಗೆ ಕೇವಲ 5,81,022 ಬಿದ್ದರೆ,
     ಕೀಜ್ರೀವಾಲರಿಗೆ ಬಿದ್ದದ್ದು 2,09,238.
     ಅಂದರೆ, ಕೇವಲ 3,71,784 ಅಂತರದಿಂದ ಸೋತಿದ್ದಾರೆ!
     ಅಂದರೆ, ಮತ್ತೊಬ್ಬ ಕೇಜ್ರೀವಾಲ್ ನಿಂತಿದ್ದರೂ, ವಾರಣಾಸಿಯಲ್ಲಿ ಮೋದಿ ಗೆಲ್ಲುತ್ತಿದ್ದರು!!

     ವಿವರಗಳಿಗಾಗಿ ಈ ಅಧಿಕೃತ ಕೊಂಡಿ ನೋಡಿ: http://eciresults.ap.nic.in/ConstituencywiseS2477.htm?ac=77

     ಉತ್ತರ
     • ಮೇ 20 2014

      ಇನ್ನು ನಮ್ಮ ಶೇಟ್ಕರರು, ಮೇಧಾ ಪಾಟ್ಕರ್ ಅವರ ಪ್ರಚಾರಕ್ಕೂ ಹೋಗಿದ್ದರು.
      ಅಲ್ಲೂ ಅಷ್ಟೇ! ಮೇಧಾ ಪಾಟ್ಕರ್ ಅವರು ಬಹಳವೇ ಕಡಿಮೆ ಅಂತರದಿಂದ ಸೋತಿದ್ದಾರೆ!
      ಮೊದಲ ಸ್ಥಾನ ಪಡೆದ ಕಿರೀಟ್ ಸೋಮಯ್ಯ ಅವರಿಗೆ 5,25,285 ಮತಗಳು ಬಿದ್ದರೆ,
      ಮೇಧಾ ಪಾಟ್ಕರ್ ಅವರಿಗೆ, 76,451 ಮತಗಳು ಬಿದ್ದಿವೆ.
      ಅಂದರೆ, ಮೂರನೇ ಸ್ಥಾನದಲ್ಲಿರುವ ಮೇಧಾ ಅವರಿಗೂ ಮತ್ತು ಮೊದಲ ಸ್ಥಾನದ ಅಭ್ಯರ್ಥಿಗೂ ಕೇವಲ 4,48,834 ಮತಗಳ ಅಂತರವಿದೆ ಅಷ್ಟೇ!
      ಅಂದರೆ, ಇನ್ನೂ ಆರು ಜನ ಮೇಧಾ ಪಾಟ್ಕರ್ ಅವರು ನಿಂತು, ಇವರಷ್ಟೇ ಅಗಾಧ ಮೊತ್ತದ ಮತಗಳನ್ನು ಕಬಳಿಸಿದ್ದರೆ, ಆಗ ಅವರೆಲ್ಲರ ಒಟ್ಟು ಮತಗಳು ಗೆದ್ದ ಅಭ್ಯರ್ಥಿಯ ಮತಗಳನ್ನು ಸರಿಗಟ್ಟುತ್ತಿದ್ದವು!!

      ಅಮೇಠಿಯಲ್ಲಿ ರಾಹುಲ್ ಗಾಂಧಿಯವರನ್ನು ಮಣಿಸಲು ಹೋಗಿದ್ದ ಕುಮಾರ್ ವಿಶ್ವಾಸ್ ಠೇವಣಿ ಕಳೆದುಕೊಂಡರು.
      ಅದೇ ರೀತಿ, ಆಪ್ ಪಕ್ಷದ ಮುಖ್ಯಸ್ಥ ಮತ್ತು ವಾರಣಾಸಿಯ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ ಯೋಗೇಂದ್ರ ಯಾದವ್ ಅವರಿಗೂ ಠೇವಣಿ ಸಿಗಲಿಲ್ಲ.
      ಕೇಜ್ರೀವಾಲ್ ಅವರಿಗೆ ಕೂದಲಿನಂತರದಲ್ಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಯಿತು.
      ಠೇವಣಿ ಉಳಿಯಲು, ಶೇಕಡಾ 6 ರಷ್ಟು ಮತ ಗಳಿಸಬೇಕು. ಕೇಜ್ರೀವಾಲರಿಗೆ ಶೇಕಡಾ 7 ಮತ ಬಿದ್ದಿತು!

      ಇನ್ನು ಕರ್ನಾಟಕದಲ್ಲಿ ಆಪ್ ಪಕ್ಷದ ಎಲ್ಲಾ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡರು!!

      ಬಹಳ ಸ್ತಾನಗಳಲ್ಲಿ NOTA ಗೆ ಆಪ್ ಪಕ್ಷಕ್ಕಿಂತ ಹೆಚ್ಚು ಮತಗಳು ಬಿದ್ದಿವೆ!!!!

      ಉತ್ತರ
     • Nagshetty Shetkar
      ಮೇ 20 2014

      ಮೋದಿ ಅಲೆ ಇದ್ದಿದ್ದರೆ ವಾರಣಾಸಿಗೆ ಅಪರಿಚಿತರಾದ ಅರವಿಂದ ಕೇಜರೀವಾಲ ಅವರಿಗೆ 2,09,238 ವೋಟುಗಳು ಬೀಳುತ್ತಿದ್ದವೆಯೇ ಮಿ. ಎಸ ಎಸ ಏನ್ ಕೆ??? ಕೇಜರೀವಾಲ ಅವರಿಗೆ 2,09,238 ವೋಟುಗಳ ಸಾಧನೆಗೆ ನನ್ನ ಅಳಿಲು ಸೇವೆಯೂ ಕಾರಣ.

      ಮೇಧಾ ಪಾಟ್ಕರ್ ಅವರಿಗೆ ನಿರೀಕ್ಷೆ ಇಟ್ಟುಕೊಂಡಷ್ಟು ವೋಟು ಬೀಳದಿರಲು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿರುವ ಮನುವಾದವೇ ಕಾರಣ. ಹೆಣ್ಣು ಎಂಬ ಕಾರಣಕ್ಕೆ ಅದೆಷ್ಟೋ ಜನ ಮೇಧಾ ಅವರಿಗೆ ವೋಟು ಹಾಕಲಿಲ್ಲ. ಮನುವಾದ ನಾಶವಾಗದ ಹೊರತು ನಾಡಿನ ಮಹಿಳೆಯರು ಉದ್ಧಾರವಾಗುವುದಿಲ್ಲ.

      ಕರ್ನಾಟಕದಲ್ಲಿ ಆಮ್ ಆದ್ಮೀ ಪಕ್ಷ ಇನ್ನೂ ಬಲಿಯಬೇಕಾಗಿದೆ. ಮುಂದಿನ ಅಸೆಂಬಲಿ ಚುನಾವಣಾ ಹೊತ್ತಿಗೆ ಬಲಿಯುವ ನಿರೀಕ್ಷೆ ಇದೆ. ಸ್ವಲ್ಪ ತಾಳ್ಮೆ ಇರಲಿ.

      ಉತ್ತರ
      • ಮೇ 20 2014

       ನೀವು ಹೇಳಿದ್ದು ಸರಿ. ಎಲ್ಲೂ ಮೋದಿ ಅಲೆ ಇರಲಿಲ್ಲ; ಏಕೆಂದರೆ, ಅಲ್ಲಿದ್ದದ್ದು ‘ಮೋದಿ ಸುನಾಮಿ’!! 😉
       ಆ ಸುನಾಮಿ ಎಷ್ಟು ಬಲವಾಗಿತ್ತೆಂದರೆ, ಮೋದಿ ದೇಶದ ಯಾವುದೇ ಭಾಗದಲ್ಲಿ ನಿಂತಿದ್ದರೂ, ಇದೇ ರೀತಿ ಗೆಲ್ಲುತ್ತಿದ್ದರು.

       ವಾರಣಾಸಿ ಬಿಡಿ. ದೆಹಲಿಯಲ್ಲೂ ಆಪ್ ಪಕ್ಷಕ್ಕೆ ಒಂದೂ ಸ್ಥಾನ ಸಿಗಲಿಲ್ಲ.
       ಅಲ್ಲಿನ ಜನ ಆಪ್ ಪಕ್ಷದ 49 ದಿನಗಳ ಆಡಳಿತದ ರುಚಿ ಉಂಡಿದ್ದರಲ್ಲ.
       ಇನ್ನು ಜನ ಹೇಗೆ ತಾನೆ ಮತ್ತೆ ಅವರಿಗೆ ಮತ ಹಾಕುತ್ತಾರೆ!?
       ಕೇಜ್ರೀವಾಲ್ ದೆಹಲಿಯಲ್ಲಿ ನಿಂತಿದ್ದರೂ ಸೋಲುತ್ತಿದ್ದರು; ಆಗ ದೊಡ್ಡ ಅಪಮಾನವಾಗುತ್ತಿತ್ತು; ಯೋಗೇಂದ್ರ ಯಾದವ್ ನಾಲ್ಕನೇ ಸ್ಥಾನ ಪಡೆದು ಹೀನಾಯವಾಗಿ ಸೋತರಲ್ಲ, ಆ ರೀತಿ!
       ಈಗಾದರೆ, ಮೋದಿ ಎದುರು ನಿಂತು ಸೋತೆ ಎನ್ನುವುದು ಹೆಮ್ಮೆಯ ಸಂಗತಿ! 😉

       ಇದೀಗ, ಕೇಜ್ರಿಯವರು ಮತ್ತೆ ಸರಕಾರ ಮಾಡೋಣ ಎಂದು ಕಾಂಗ್ರೆಸ್ಸಿನ ಬಾಗಿಲು ಬಡಿದು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಾಯಿತು.
       ನೆನಪಿಡಿ, ದೆಹಲಿ ಸರಕಾರಕ್ಕೆ ರಾಜಿನಾಮೆ ನೀಡಿದ ನಂತರ, ಸುಪ್ರೀಂ ಕೋರ್ಟಿಗೆ ಹೋಗಿ, ದೆಹಲಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಆದೇಶ ನೀಡುವಂತೆ ಕೋರಿದ್ದರು.
       ಇದೀಗ, ಚುನಾವಣೆ ಬೇಡ, ಸರಕಾರ ಮಾಡೋಣ ಎಂದು “ಭ್ರಷ್ಟ ಕಾಂಗ್ರೆಸ್” ಮುಂದೆ ಮತ್ತೆ ಭಿಕ್ಷಾಪಾತ್ರೆ ಹಿಡಿದು ನಿಂತಿರುವುದು ಏನನ್ನು ತೋರಿಸುತ್ತದೆ?
       ಇಂತಹ “ಭ್ರಷ್ಟ”ರಿಗೆ ನೀವಲ್ಲದೆ ಇನ್ಯಾರು ತಾನೇ ಬೆಂಬಲ ನೀಡಲು ಸಾಧ್ಯ!?

       ಉತ್ತರ
 3. ಕಿರಣ್
  ಮೇ 17 2014

  ನಿಲುಮೆಯ ಮಂದಿಗೆ,

  ತಾವು ಆಗೀಗ ನಿಲುಮೆ ಹೇಗೆ ಕಾಮೆಂಟ್ಗಳನ್ನು ಮಾಡರೇಟ್ ಮಾಡುವುದಿಲ್ಲ ಮತ್ತು ಅದು ತನ್ನ ಹೆಗ್ಗಳಿಕೆ ಎನ್ನುವುದನ್ನು ಓದಿದ್ದೇನೆ. ಒಂದು ರೀತಿಯಲ್ಲಿ ನಿಜ. ಆದರೆ ಅದರ negative sideಅನ್ನೂ ಕೂಡ ನೀವು ಗಮನಿಸಬೇಕು. ಈ ಲೇಖನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಲೇಖನ ಇರುವುದೇ ಒಂದು ವಿಚಾರದ ಕುರಿತು, ೧೮ರ ಪೈಕಿ ಸುಮಾರು ೧೫ ಕಾಮೆಂಟ್ ಗಳು ಬರಿಯ ಅರ್ಥವಿಲ್ಲದ ತಲೆಹರಟೆಗಳು. ಒಂದು ಲೇಖನಕ್ಕೆ ಈ ರೀತಿಯ ಪ್ರತಿಕ್ರಿಯೆಗಳು ಬರುವುದು, ಅವುಗಳನ್ನು ಪ್ರಕಟವಾಗಲು ಬಿಡುವುದು ಯಾವ ರೀತಿಯಲ್ಲಿ ಹೆಗ್ಗಳಿಕೆಯ ಮಾತಾಯಿತು. serious ಓದುಗ ಇಲ್ಲಿ ಬಂದರೆ, ತಿಪ್ಪೆಯಲ್ಲಿ ನಾಣ್ಯ ಹುಡುಕಿದಂತೆ ಕಾಮೆಂಟ್ ಗಳನ್ನು ಹುಡುಕಬೇಕಾಗುತ್ತದೆ. ನನಗೆ ಇದರ ಕುರಿತು ಬಹಳ ಅಸಮಾಧಾನವಿದೆ.

  ಉತ್ತರ
  • Nagshetty Shetkar
   ಮೇ 18 2014

   ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ಕಾಮೆಂಟುಗಳನ್ನು ನಿರ್ವಾಹಕರು ನಿಯಂತ್ರಿಸುವುದು ಸಮಸ್ಯೆಗೆ ಪರಿಹಾರವಲ್ಲ. ಕಮೆಂಟುಗಳಿಗೆ +೧/-೧ ವೋಟು ಹಾಕುವ ಸೌಲಭ್ಯ ಕಲ್ಪಿಸಿಕೊಟ್ಟರೆ ಓದುಗರೇ ಜಾಳು ಕಾಮೆಂಟುಗಳನ್ನು ಕೆಳ ತಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕಮೆಂಟುಗಳಿಗೆ disqus ಅನ್ನು ಅಳವಡಿಸಿಕೊಳ್ಳುವುದು ಉತ್ತಮ.

   ಉತ್ತರ
  • ವಿಜಯ್ ಪೈ
   ಮೇ 18 2014

   ಕಿರಣ ನಿಮಗಾಗಿರುವ ಅಸಮಾಧಾನ ಸಕಾರಣವಾದುದು. ಆದರೆ ಏನು ಮಾಡುವುದು ಇಲ್ಲೊಬ್ಬ ತಲೆಹರಟೆ/ತಲೆಬುಡವಿಲ್ಲದೆ ಮಾತನಾಡುವ, ಯಾವ್ಯಾದಾವುದೋ ಲೇಖನಗಳಲ್ಲಿ ಬಂದು ಸಂಬಂಧವಿಲ್ಲದ ವಿಷಯದ ಬಗ್ಗೆ ಕಮೆಂಟ್ ಮಾಡಿ ಉಗಿಸಿಕೊಳ್ಳುವ ಹವ್ಯಾಸವಿರುವ ಗಿರಾಕಿಯೊಬ್ಬರಿದ್ದಾರೆ. ಅವರ ಅಸಂಭಂದ್ದ ಕಮೆಂಟ್ ಗಳನ್ನು ನೋಡಿ ಸುಮ್ಮನಿರಲಾರದೆ ನಾವೂ ಪ್ರತಿಕ್ರಿಯೆ ಕೊಡಬೇಕಾಗುತ್ತದೆ. ಅವರಿಂದಾಗಿ ನಾವೆಲ್ಲ ದಾರಿ ತಪ್ಪಬೇಕಾಗಿದೆ. ಇದು ತಮ್ಮ ಗಮನಕ್ಕೆ ಬಂದಿದೆ ಅಂದುಕೊಳ್ಳುತ್ತೇನೆ.

   ಉತ್ತರ
   • Nagshetty Shetkar
    ಮೇ 18 2014

    ವಿಜಯ್ ಅವರೇ. ನೀವು ದಾರಿ ತಪ್ಪಲು ನಮೋಸುರನೇ ಕಾರಣ. ಅವನ ಗುಣಗಾನವನ್ನು ಮಾಡಲು ನಿಲುಮೆಯ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ ನೀವುಗಳು. ನಾನು ನಿಮ್ಮ ಪ್ರತಿಗಾಮಿತ್ವವನ್ನು ವಿರೋಧಿಸಿದ್ದೇನೆ. ನಿಮ್ಮನ್ನು ಸರಿದಾರಿಗೆ ದರ್ಗಾ ಸರ್ ಅವರೊಬ್ಬರೇ ತರಬಲ್ಲರು. ಏಕೆಂದರೆ ಅವರು ವಚನ ಸಾಹಿತ್ಯದ ಸಮಾನತೆ, ಸೂಫಿಗಳ ಅನುಭಾವ, ಮಾರ್ಕ್ಸ್ ವಾದದ ವೈಚಾರಿಕತೆ, ಹಾಗೂ ಪತ್ರಿಕೋದ್ಯಮದ ಸಮಕಾಲೀನತೆಯಿಂದ ಪಕ್ವವಾದವರು. ಇಂದು ಪ್ರತಿನಿಧಿತ್ವದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ದರ್ಗಾ ಸರ್ ಅವರೇ ಕನ್ನಡದ ಪ್ರಗತಿಪರ ಮನಸ್ಸುಗಳ ಪ್ರತಿನಿಧಿ.

    ಉತ್ತರ
    • ವಿಜಯ್ ಪೈ
     ಮೇ 18 2014

     ನಿಮ್ಮ ಕಷ್ಟ ಅರ್ಥಮಾಡಿಕೊಂಡಿದ್ದೇನೆ..ಫಲಿತಾಂಶದ ನಂತರ ನಿಮಗಾಗಿರರುವ ದು:ಖಕ್ಕೆ ಖೇದವಿದೆ.

     [ನಿಮ್ಮನ್ನು ಸರಿದಾರಿಗೆ ದರ್ಗಾ ಸರ್ ಅವರೊಬ್ಬರೇ ತರಬಲ್ಲರು.]
     ಹೂಂ..ಅವರು ಸರಿದಾರಿಗೆ ಬಂದ ಮೇಲೆ ಮತ್ತು ನಿಮ್ಮನ್ನು ಸರಿ ದಾರಿಗೆ ತಂದ ಮೇಲೆ!. ಅವರ ಯುನಿವರ್ಸಿಟಿಯ ವಿದ್ಯಾರ್ಥಿಯಾದ ನಿಮ್ಮ ‘ಪ್ರತಿಭೆ’ ಯನ್ನು ನೋಡಿದರೆ ಎಲ್ಲರಿಗೂ ಅರಿವಾಗುತ್ತದೆ..ಕಲಿಸಿದ ಗುರುವಿನ ಪ್ರತಿಭೆ/ವಿಚಾರ ವೈಖರಿ ಎಂತದ್ದಿರಬೇಕು ಎಂದು. ಆದರೂ ಶೆಟ್ಕರ್ ಅವರೆ..ನಿಮ್ಮ ಯಾವತ್ತೂ ಹಾಸ್ಯಭರಿತ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು..ಹೀಗೆಯೇ ನಗಿಸುತ್ತಲೇ ಇರಿ. 🙂

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments