ವಿಷಯದ ವಿವರಗಳಿಗೆ ದಾಟಿರಿ

ಮೇ 28, 2014

6

“ಮಹಾನ್” ಇತಿಹಾಸಕಾರರೆಂಬ “ಮಹಾತ್ಮ”ರ ಸನ್ನಿಧಿಯಲ್ಲಿ….

‍ನಿಲುಮೆ ಮೂಲಕ

– ರಾಘವೇಂದ್ರ ಅಡಿಗ ಎಚ್ಚೆನ್

Eminent Historiansಕೆಲತಿಂಗಳ ಹಿಂದೆ ಬೆಂಗಳೂರಿನ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ಅಪರೂಪದ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕನ್ನಡದ ಖ್ಯಾತ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದ ಆ ಕಾರ್ಯಕ್ರಾಮಕ್ಕೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ನನ್ನಂತಹ ಸಾಕಷ್ಟು ಜನರು ಬಂದಿದ್ದರು. ಅಸಲಿಗೆ ಅಲ್ಲಿ ಬಿಡುಗಡೆಯಾಗುತ್ತಿದ್ದ ಪುಸ್ತಕಳು ಸಹ ಅಷ್ಟೇ ಕುತೂಹಲ ಹುಟ್ಟಿಸುವಂತಿದ್ದವು. ಸ್ವತಂತ್ರ  ಭಾರತದ ಖ್ಯಾತ ಪತ್ರಿಕಾ ಬರಹಗಾರ, ಸಂಶೋಧಕ ಅರುಣ್ ಶೌರಿಯವರ ಪುಸ್ತಕದ ಬಿಡುಗಡೆ ಕಾರ್ಯಕ್ರಾಮವದಾಗಿತ್ತು.

ಅರುಣ್ ಶೌರಿ ಅವರೊಬ್ಬ ಪತ್ರಕರ್ತ, ಪತ್ರಿಕಾ ಸಂಪಾದಕ, ಧೀಮಂತ ರಾಜಕಾರಣಿ, ಸತ್ಯನಿಷ್ಟ ಬರಹಗಾರರಾಗಿ ಭಾರತದಾದ್ಯಂತ ಹೆಸರು ಮಾಡಿದವರು. ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವಿದ್ದ ಸಂದರ್ಭದಲ್ಲಿ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶೌರಿಯವರು ಸರ್ಕಾರಿ ಕೆಲಸ ಹಾಗೂ ಪತ್ರಿಕಾ ರಂಗ ಎರಡರಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿಕೊಂಡಿರುವವರು.ಭಾರತದ ಪ್ರಸಿದ್ದ ಆಂಗ್ಲ ದೈನಿಕ “ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದ ಶೌರಿಯವರು ಆ ಸಮಯದಲ್ಲಿ ಸಾಕಷ್ಟು ಭ್ರಷ್ಟಾಚರಗಳನ್ನು, ಹಗರಣಗಳನ್ನೂ ಬೆಳಕಿಗೆ ತಂದಿದ್ದರು. ಇವರ ಕೆಲಸ, ಸಮಾಜ ಸೇವೆಗೆ ಮೆಚ್ಚಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪುರಸ್ಕಾರ, ಫ್ರೀಡಮ್ ಟು ಪಬ್ಲಿಷ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಮೊದಲಿನಿಂದಲೂ ಅಧ್ಯಯನ, ಸಂಶೊಧನೆಗಳಲ್ಲಿ ಆಸಕ್ತಿ ತಳೆದಿದ್ದ ಅರುಣ್ ಶೌರಿಯವರು ತಾವೇ ಖುದ್ದಾಗಿ ಸಾಕಷ್ಟು ಪುಸ್ತಕಗಳನ್ನು  ರಚಿಸಿದ್ದಾರೆ. “The Only Fatherland’’, “The World of Fatwas’’, “Eminent Historians’’, “ Does He know a Mother’s Heart?’’ ಇವೇ ಮೊದಲಾದ ಕೃತಿಗಳನ್ನು ರಚಿಸಿರುವ ಶೌರಿ ಈ ಒಂದೊಂದರಲ್ಲಿಯೂ ಸಾಕಷ್ಟು ಮಾಹಿತಿಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ.ಅರುಣ್ ಶೌರಿಯವರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ತ್ರಾಸದಾಯಕವದ ಕೆಲಸ.ಅವರಷ್ಟು ಚಿಂತನೆಗೆ ಹಚ್ಚುವ  ಬರಹಗಾರರು ಮತ್ತೊಬ್ಬರು ಸಿಕ್ಕುವುದು ತೀರಾ ಅಪರೂಪವೆನ್ನಬೇಕು. ಅಂತಹಾ ಶೌರಿಯವರ ಪುಸ್ತಕವೊಂದು ಕನ್ನಡಕ್ಕೆ ಬಂದಿದೆ.ಅರುಣ್ ಶೌರಿಯವರ “Eminent Historians’’ಕೃತಿಯನ್ನು “ಮಹಾನ್” ಇತಿಹಾಸಕಾರರು ಎನ್ನುವ ಹೆಸರಿನಲ್ಲಿ ಮಂಜುನಾಥ ಅಜ್ಜಂಪುರರವರು ಕನ್ನದಕ್ಕೆ ಅನುವಾದಿಸಿ ನಮ್ಮ ಕೈಗಿತ್ತಿದ್ದಾರೆ. ಇತಿಹಾಸದ ಬಗ್ಗೆ  ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇಷ್ಟವಾಗುವ ಕೃತಿ ಇದು ಎಂದರೆ ತಪ್ಪಾಗಲಾರದು.

ಇಲ್ಲಿ ಅರುಣ್ ಶೌರಿಯವರು ತಾವು ಯಾವುದೇ ಹಿಂಜರಿಕೆಯಿಲ್ಲದೆ ಸತ್ಯವನ್ನು ಹೊರಹಾಕುವುದನ್ನು ಕಾಣುತ್ತೇವೆ. ವಿದ್ವಾಂಸರೆಂದರೆ ನಾವುಗಳು ಮಾತ್ರವೇ ಎಂದು ಸದಾ ಪ್ರಚಾರದಲ್ಲಿ ತೊಡಗಿರುವ ವಾಮಪಂಥೀಯರು ಮಾಡಿರುವ ಇತಿಹಾಸದ ವಿಕೃತಿಗಳನ್ನು ಆಧಾರ ಸಮೇತ ರುಜುವಾತುಪಡಿಸಿರುವ ಶೌರಿಯವರ ಬರಹವನ್ನು ಓದಿದ ಯಾರೇ ಆದರೂ ನಮ್ಮ ದೇಶದಲ್ಲಿನ ಈ “ಮಹಾನ್” ಇತಿಹಾಸಕಾರರ ಬಗ್ಗೆ ರೇಜಿಗೆ ಪಟ್ಟುಕೊಳ್ಳದಿರಲಾರರು.

ಒಟ್ಟು ಮೂರು ಭಾಗಗಳಲ್ಲಿ 21 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಕೃತಿಯಲ್ಲಿ ಶೌರಿಯವರು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR).  ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (‌NCERT).  ನಂತಹಾ  ಗುರುತರವಾದ, ಮುಂದಿನ ಪೀಳಿಗೆಯ ಬೌದ್ಧಿಕ ವಿಕಾಸದ ಮೇಲೆ ಪರಿಣಾಮ ಬೀರಬಲ್ಲಂಥ ಅಪರಿಮಿತ ಶಕ್ತಿಯನ್ನು ಹೊಂದಿರುವ ಸಂಸ್ಥೆಗಳಲ್ಲಿ ನ ಆಯಕಟ್ಟಿನ ಹುದ್ದೆಗಳಲ್ಲಿರುವ ಹೊಣೆಗೇಡಿ ಬುದ್ದಿಜೀವಿಗಳ ಬಣ್ಣ ಬಯಲು ಮಾಡಿದ್ದಾರೆ. ಮೊಹಮದ್ ಹಬೀಬ್, ಬಿಪನ್ ಚಂದ್ರ, ಆರ್.ಎಸ್.ಶರ್ಮಾ, ರೋಮಿಲಾ ಥಾಪರ್, ತಸ್ನೀಮ್ ಅಹ್ಮದ್, ಸತೀಶ್ ಚಂದ್ರ, ಇವರೇ ಮುಂತಾದ ಬುದ್ದಿಜೀವಿಗಳೆನಿಸಿದ “ಮಹಾನ್” ಇತಿಹಾಸಕಾರರು ತಾವುಗಳು ತಮ್ಮ ಮೂಗಿನ ನೇರಕ್ಕೆ ಬರೆದುದನ್ನೇ ಇತಿಹಾಸವೆಂದು ನಂಬಿಸುತ್ತಾ ಬರುತ್ತಿರುವ ರೀತಿಯನ್ನು ಯಥಾವತ್ ಬೆಳಕಿಗೆ ತರುವ ಪ್ರಯತ್ನವನ್ನು ನಾವಿಲ್ಲಿ ಕಾಣುತ್ತೇವೆ.

“ಸೆಕ್ಯೂಲರಿಸ್ಟ್” ಇತಿಹಾಸಕಾರರೆಂದು ಖ್ಯಾತಿ ಗಳಿಸಿರುವ ಇತಿಹಾಸಕಾರರು ಈ ದೇಶದ ಇತಿಹಾಸ ಸಂಬಂಧಿತ ಸಂಸ್ಥೆಗಳನ್ನು ಅದ್ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆನ್ನುವುದನ್ನು ಶೌರಿಯವರ ಈ ಪುಸ್ತಕದಲ್ಲಿ ನಾವು ಎಳೆ ಎಳೆಯಾಗಿ ನೋಡುತ್ತೇವೆ. ಇಂತಹಾ ಇತಿಹಾಸಕಾರರಲ್ಲಿ ನಾವು ಮುಖ್ಯವಾಗಿ ಸಾಂಸ್ಕೃತಿಕ ವಿಕೃತಿ ಹಾಗು ಬೌದ್ದಿಕ ಅಪ್ರಮಾಣಿಕತೆಯನ್ನು ಗುರುತಿಸಬಹುದು. ವಸಾಹತುಷಾಹಿಯ ಮನೋಭಾವದವರಾದ ಇವರು ಸತ್ಯಕ್ಕೆ ಬೆಲೆಕೊಡದ ಸಾರ್ವಜನಿಕ ಹಣವನ್ನು ಪೋಲು ಮಾಡುವ ಇವರುಗಳ ಬಣ್ಣವನ್ನು ಶೌರಿಯವರ ಈ ಕೃತಿ ಬಯಲು ಮಾಡಿದೆ. ಈ “ಮಹಾನ್” ಇತಿಹಾಸಕಾರರು ತಾವುಗಳು ಸಂಶೊಧನೆ ಹೆಸರಿನಲ್ಲಿ ಮಾಡುವ ಕೃತಿ ಚೌರ್ಯವಿರಬಹುದು, ಭ್ರಷ್ಟಚಾರವಿರಬಹುದು ಅದಕ್ಕೆ ಲೆಕ್ಕವಿಲ್ಲ. ಅಷ್ಟೇ ಅಲ್ಲದೆ ಇವರುಗಳು ತಾವು ಮಾಡುವ ಈ ಬಗೆಯ ಸಂಶೋಧನೆಗಾಗಿ ಸರ್ಕಾರದಿಂದ ಪಡೆದುಕೊಂಡ ಹಣವನ್ನೂ ಸಹ ನ್ಯಾಯಯುತ ಕೆಲಸಕ್ಕೆ ಬಳಸದೆ ಸುಮ್ಮನೆ ಪೋಲು ಮಾಡಿರುವುದಕ್ಕೆ ಶೌರಿಯವರು ಈ ಪುಸ್ತಿಕೆಯಲ್ಲಿ ಸಾಕಶ್ಟು ಉದಾಹರಣೆಗಳನ್ನು ನೀಡಿದ್ದಾರೆ.

ಇನ್ನೂ ಕೆಲವೊಮ್ಮೆ ಕೆಲವು ನೈಜ ದೃಷ್ಟಿಕೋನದ ಇತಿಹಾಸಕಾರರು ತಾವು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನಾಗಲೀ, ಮದ್ಯಯುಗದ ಭಾರತದ ಇತಿಹಾಸವನ್ನಾಗಲೀ ದಾಖಲಿಸಲು ಹೊರಟರೆಂದರೆ ಅದನ್ನು ಕೂಡ ಕೆಂದ್ರ ಸರ್ಕಾರದಲ್ಲಿರುವ ಪ್ರಭಾವಿಗಳು ವಿಫಲಗೊಳಿಸುತ್ತಾರೆ. ಏಕೆಂದರೆ ಕೇಂದ್ರದಲ್ಲಿನ ನಾಯಕರುಗಳಿಗೆ “ತಮಗೆ ಸರಿಹೊಂದುವಂತಹ” ಇತಿಹಾಸವನ್ನು ರಚಿಸಲು ಇಂತಹಾ ನೈಜ ದೃಷ್ಟಿಕೋನದ ಇತಿಹಾಸಕಾರರು ಒಪ್ಪುವುದಿಲ್ಲ. ಆಗ ಮತ್ತೆ ಅದೇ ಪ್ರಭಾವಿಗಳು ಯಾರು “ತಮಗೆ ಸರಿಹೊಂದುವಂತೆ” ಇತಿಹಾಸವನ್ನು ತಿರುಚಿ ಬರೆಯಬಲ್ಲರೋ ಅಂಥವರೇ ಸಂಶೊಧನೆ ನಡೆಸಲು, ಪುಸ್ತಕಗಳನ್ನು ರಚಿಸಲು ಆದೇಶಿಸುತ್ತಾರೆ.

ಅರುಣ್ ಶೌರಿಯವರು ಇಲ್ಲಿ ಪ್ರಸ್ತಾಪಿಸುವ ಇನ್ನೊಂದು ಪ್ರಮುಖ ವಿಚಾರವೆಂದರೆ ಈ “ಮಹಾನ್” ಇತಿಹಾಸಕಾರರು ತಾವುಗಳು ಹಿಂದೂ ಧರ್ಮದ ಮೇಲೆ, ಇಸ್ಲಾಂ ಪೂರ್ವ ಇತಿಹಾಸದ ಮೇಲೆ ಯಾವೆಲ್ಲ ರೀತಿಯಲ್ಲಿ ಧಾಳಿ ನಡೆಸಿದ್ದಾರೆ ಎನ್ನುವುದು. ಈ ಎಲ್ಲಾ “ಮಹಾನ್” ಇತಿಹಾಸಕಾರರೂ ತಾವುಗಳು ಇತಿಹಾಸವನ್ನು ಇಸ್ಲಾಂನ ದೃಷ್ಟಿಕೋನದಿಂದ ನೊಡುತ್ತಾರೆ. ಎಂದರೆ ಇವರೆಲ್ಲರಿಗೂ ಇಸ್ಸ್ಲಾಂ ಪೂರ್ವದ ಇತಿಹಾಸದ ಅವಧಿ ಅದು ಗಾಢ ಅಂಧಕಾರದ ಅವಧಿಯಾಗಿರುತ್ತದೆ. ಹಿಂದೂ ಎನ್ನುವ ಎಲ್ಲವಕ್ಕೂ ಅಪಾರ್ಥವನ್ನು ಕಲ್ಪಿಸಲು ಮುಂದಾಗುವ ಇಂತಹವರುಗಳು ಕೇವಲ ವಾಮಪಂಥೀಯ ಇತಿಹಾಸಕಾರರಷ್ಟೇ ಅಲ್ಲ ಇವರುಗಳು ಹಿಂದೂ ಧರ್ಮದ ವಿರೋಧಿಗಳು ಕೂಡಾ ಹೌದು. ಇವರೆಲ್ಲರ ಬರವಣಿಗೆಗಳಲ್ಲಿ ಇರುವುದು ಹಿಂದೂ ವಿರೋಧಿ, ಭಾರತ ವಿರೋಧಿ ಭಾವನೆಗಳೇ. ತುಂಬಿ ತುಳುಕುತ್ತಿರುವುದನ್ನು, ಭಾರತ ವಿರೋಧಿ ಆದ ಎಲ್ಲವನ್ನೂ ವೈಭವದಿಂದ ಚಿತ್ರಿಸಿಸ್ರುವ ಇವರ ರೀತಿಯನ್ನು ಶೌರಿಯವರು “ಮಹಾನ್” ಇತಿಹಾಸಕಾರರು ಕೃತಿಯಲ್ಲಿ ದಾಖಲೆ ಸಮೇತ ಬಯಲು ಮಾಡಿದ್ದಾರೆ.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ನಂತಹಾ ಸಂಸ್ಥೆಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಇಂತಹಾ ವಿದ್ವಾಂಸರು ಮಾಡಿರುವ ಕೆಲಸಗಳು ನಿಜಕ್ಕೂ ಖೇದಕರ. ಇಂದು ಭಾರತದಲ್ಲಿ ಇತಿಹಾಸ ಸಂಶೋಧನಾ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅನೇಕ ಮಹತ್ವದ ಸಂಶೊಧನೆಗಳು ನಡೆದಿವೆ. ಆದರೆ ಅವೆಲ್ಲವೂ ನಡೆದಿರುವುದು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ಸಂಸ್ಥೆಯ ಹೊರಗಡೆಯಲ್ಲಿ. ಎನ್ನುವುದು ವಿಪರ್ಯಾಸ. ಈ “ಮಹಾನ್” ಇತಿಹಾಸಕಾರರುಗಳ ದುಷ್ಟ ಕೂಟ ನಡೆಸಿರುವ ಭ್ರಷ್ಟಾಚಾರ, ಕೃತಿಚೌರ್ಯ ಇತ್ಯಾದಿಗಳನ್ನು ಗಮನಿಸಿದಾಗ ಎಂಥವರಿಗೂ ಒಂದು ಕ್ಷಣ ಗಾಬರಿಯಾಗದೇ ಇರದು. ಅಷ್ಟೇ ಅಲ್ಲ ದೇಶದ ಚರಿತ್ರೆಗೇ, ಸ್ವಾಭಿಮಾನಕ್ಕೆ ಘಾಸಿಮಾಡಲು ಹೊರಟಿರುವ ಇವರ ಕೆಲಸವನ್ನು ಕಂಡರೆ ಬಹಳವೇ ವಿಷಾದವೆನಿಸುತ್ತದೆ.  “ಇತಿಹಾಸವನ್ನು ಅರಿಯದವನು ಇತಿಹಾಸವನ್ನು ನಿರ್ಮಿಸಲಾರ” ಎನ್ನುವುದೊಂದು ಹಳೆಯ ಮಾತು. ಆದರೆ ಈ “ಮಹಾನ್” ಇತಿಹಾಸಕಾರರ ಇತಿಹಾಸವನ್ನು ನೋಡಿದಾಗ ಇತಿಹಾಸವನ್ನು ಅರಿಯದೆಯೂ, ಇಲ್ಲವೇ ಇತಿಹಾಸವನ್ನು ತಮಗೆ ಬೇಕಾದಂತೆ ಬರೆದುಕೊಂಡೂ ಸಹ ಇತಿಹಾಸವನ್ನು ನಿರ್ಮಿಸಬಹುದೇನೋ(ಅದು ಕೆಟ್ಟ ಇತಿಹಾಸವೇ ಆದರೂ)  ಎನಿಸುತ್ತದೆ!

ದುರಂತವೆಂದರೆ ಇಂದಿಗೂ ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿ, ಸ್ನಾತಕೋತ್ತರ ಪದವಿಯವರೆವಿಗೂ “ಸೆಕ್ಯೂಲರಿಸ್ಟ್” ಇತಿಹಾಸಕಾರರೆಂದು ತಮ್ಮನ್ನು ತಾವು ಘೋಷಿಸಿಕೊಂಡ ಇವರುಗಳು ಬರೆದಿದ್ದನೇ ಓದಬೇಕಾಗಿದೆ. ಇವರುಗಳು “ತಮಗೆ ಸರಿಹೊಂದುವಂತೆ’’ ರಚಿಸಿಕೊಂಡ ಇತಿಹಾಸವನ್ನೇ ನಮ್ಮ ಮಕ್ಕಳು ಭಾರತದ ಇತಿಹಾಸವೆಂಬಂತೆ ತಿಳಿಯುತ್ತಾರೆ. ಮುಂದೆ ಇದೇ ಅವರ ಚಿಂತನೆ, ದೇಶದ ಇತಿಹಾಸ, ಸಂಸ್ಕೃತಿಗಳ ಬಗೆಗಿನ ಅವರ ದೃಷ್ಟಿಕೋನವನ್ನು ನಿರ್ಧರಿಸುತ್ತದೆ!

ಈ ನಿಟ್ಟಿನಲ್ಲಿ ಅರುಣ್ ಶೌರಿಯವರು ಬರೆದ ಈ ಕೃತಿಯು ಬಹಳವೇ ಮಹತ್ವಪೂರ್ಣವಾದುದು. ನಾವು-ನೀವುಗಳೂ ಸೇರಿದಂತೆ ದೇಶದ ಯುವಜನಾಂಗ ಕಲಿತಿರುವ, ಕಲಿಯುತ್ತಿರುವ ಇತಿಹಾಸ ಪಠ್ಯವು ಅದಷ್ಟು ನಿಖರವಾದುದು ಎನ್ನುವುದರ ಬಗ್ಗೆ ತಿಳಿಸಿಕೊಟ್ಟಿರುವ ಈ ಕೃತಿಯು ತೋರಿಸಿಕೊಟ್ಟಿದೆ.  ಇಂತಹಾ ಪುಸ್ತಕಗಳಿಗೆ ಸಾರ್ವಜನಿಕ ವಲಯಗಳಲ್ಲಿ ದೊರೆಯಬೇಕಾದ ಪ್ರಚಾರವೇನಾದರೂ ದೊರೆತದ್ದೇ ಆದರೆ ಆಗಲಾದರೂ ಇಂತಹಾ “ಸೆಕ್ಯೂಲರ್” ಇತಿಹಾಸಕಾರರ ಬಣ್ನ ಬಯಲಾಗಿ ತಮ್ಮ ಜೀವಮಾನದುದ್ದಕ್ಕೂ ತಾವು ಮಾಡಿಕೊಂಡು ಬಂದ ಇತಿಹಾಸದ ವಿಕೃತಿಗೆ ಬೆಲೆತೆರಬೇಕಾಗುತ್ತದೆ.

ಕಡೆಯದಾಗಿ ಈ ಕೃತಿಯಲ್ಲಿನ ಪ್ರಸ್ತಾವನೆಯಲ್ಲಿ ಡಾ. ಎಸ್. ಎಲ್.  ಭೈರಪ್ಪನವ್ರು ಅಭಿಪ್ರಾಯಪ್ಡುವಂತೆ “ವಾದಗಳಿಗೆ ಬಲಿಬೀಳದೆ ಬೇರವಾಗಿ ವಾಸ್ತವತೆಯನ್ನೂ factನ್ನು ನೋಡುವ ಅವಕಾಶ ಇರಬೇಕು…….” ಇಂತಹಾ ವಾಸ್ತವತೆಯನ್ನು ತೆರೆದು ತೋರಿಸುವಂತಹಾ ಪುಸ್ತಕಗಳು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಕ್ಕೆ ಬರುವಂತಾಗಬೇಕು.  ಇಂತಹುಗಳಿಂದ ಪ್ರೇರಣೆಗೊಂಡು ಕನ್ನಡಿಗರು ತಾವೇ ಮೂಲ ಆಕರಗಳನ್ನು ಶೋಧಿಸಿ ಸ್ವತಂತ್ರವಾದ ಕೃತಿಗಳನ್ನು ರಚಿಸುವಂತಾದರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಬೇರೆ ಇರಲಾರದು.

6 ಟಿಪ್ಪಣಿಗಳು Post a comment
 1. ಮೇ 28 2014
 2. Nagshetty Shetkar
  ಮೇ 28 2014

  “ಮೊಹಮದ್ ಹಬೀಬ್, ಬಿಪನ್ ಚಂದ್ರ, ಆರ್.ಎಸ್.ಶರ್ಮಾ, ರೋಮಿಲಾ ಥಾಪರ್, ತಸ್ನೀಮ್ ಅಹ್ಮದ್, ಸತೀಶ್ ಚಂದ್ರ, ಇವರೇ ಮುಂತಾದ ಬುದ್ದಿಜೀವಿಗಳೆನಿಸಿದ “ಮಹಾನ್” ಇತಿಹಾಸಕಾರರು ತಾವುಗಳು ತಮ್ಮ ಮೂಗಿನ ನೇರಕ್ಕೆ ಬರೆದುದನ್ನೇ ಇತಿಹಾಸವೆಂದು ನಂಬಿಸುತ್ತಾ ಬರುತ್ತಿರುವ ರೀತಿ”

  ಇದು ಶೌರಿ ಹಾಗೂ ನೀವು ನಿಮ್ಮ ಮೂಗಿನ ನೇರಕ್ಕೆ ಮಾಡುತ್ತಿರುವ ಆಪಾದನೆ. ರೋಮಿಲ ಥಾಪರ್ ಅವರು ವಿಶ್ವದ ಅಗ್ರಗಣ್ಯ ಇತಿಹಾಸಕಾರರಿಂದ ಮನ್ನಣೆ ಪಡೆದಿರುವಂತಹ ಹಿರಿಯ ಸಂಶೋಧಕರು. ಅವರ ಯೋಗ್ಯತೆ, ಸಾಧನೆ, ಹಾಗೂ ಸತ್ಯನಿಷ್ಠೆಯ ಹತ್ತಿರವೂ ಶೌರಿ ಬರುವುದಿಲ್ಲ. ದೊಡ್ಡವರ ಬಗ್ಗೆ ಚಿಕ್ಕದಾಗಿ ಮಾತನಾಡುವ ಚಾಳಿ ಬಿಡಿ.

  ಉತ್ತರ
 3. ಮೇ 29 2014

  ನಾಗಶೆಟ್ಟಿ ಶೆಟ್ಕರ್ ಅವರೆ,

  “ವಾದಗಳಿಗೆ ಬಲಿಬೀಳದೆ ಬೇರವಾಗಿ ವಾಸ್ತವತೆಯನ್ನೂ factನ್ನು ನೋಡುವ ಅವಕಾಶ ಇರಬೇಕು…….” ಅನ್ನೋ ಸಾಲನ್ನ ನೀವು ಗಮನಿಸಲಿಲ್ಲ ಅಂತ ಕಾಣುತ್ತೆ.

  ಮೂಲ ಪುಸ್ತಕವನ್ನ ಓದಿರುವುದರಿಂದ ಈ ಮಾತು – ಅರುಣ್ ಶೌರಿ ಅವರು ಮಾಡುವ “ಆಪಾದನೆ”ಗಳಿಗೆ ನನ್ನ ನೆನಪಿನಂತೆ ಬಹುಪಾಲು ಆಧಾರ ಒದಗಿಸಿದ್ದಾರೆ. ಅವರು ತಮ್ಮ ಮೂಗಿನ ನೇರಕ್ಕೆ ಮಾಡಿರುವ ಆಪಾದನೆಯೋ ಇಲ್ಲವೇ ವಾಸ್ತವತೆಯ ಮೇಲೆ ಬರೆದಿರುವುದೋ ಎನ್ನುವುದನ್ನು ತಿಳಿಯಲು ಪುಸ್ತಕ ಓದುವುದು ಅಗತ್ಯ. ಇಲ್ಲದೇ ಸುಮ್ಮನೆ ಯಾರು ದೊಡ್ಡವರು, ಯಾವುದು ಚಿಕ್ಕ ಮಾತು ಅನ್ನುವುದರಬಗ್ಗೆ ಮಾತಾಡುವುದರಿಂದ ಉಪಯೋಗವಿಲ್ಲ ಬಿಡಿ.

  ಉತ್ತರ
 4. vinayak
  ಮೇ 29 2014

  ಶೆಟ್ಕರ್ ಅವರೆ ನಿಮ್ಮ ರೊಮಿಲ್ಲಾ ಮತ್ತು ಅವರ ಕಂಪನಿ ವಿಶ್ವನಾಥ ಮಂದಿರದ ನೆಲಸಮಕ್ಕೆ ಕೆಲವು ಕಾರಣ ನೀಡಿದೆ. ಅಲ್ಲಿ ಅಪವಿತ್ರ ಕೆಲಸ ನಡೆಯಿತು ಅದಕ್ಕಾಗಿ ಅದನ್ನು ಕೆಡವಲಾಯಿತು ಇತ್ಯಾದಿ. ಇರಲಿ ಅದೇ ಸ್ಥಳದಲ್ಲಿ ಜ್ಞಾನವ್ಯಾಪೀ ಮಸೀದೆ ಕಟ್ಟಿದ್ದಾರಲ್ಲಾ ? ಮಸೀದೆಗೆ ಆ ಸ್ಥಳ ಪವಿತ್ರ ಹೇಗಾಯಿತು? ಅವೇ ಅಪವಿತ್ರ ಇಟ್ತಿಗೆ ಕಟ್ಟಿಗೆ ಉಪಯೋಗಿಸಿದ್ದಾರಲ್ಲಾ?? ಆಗ ಎಲ್ಲಿ ಹೋಯಿತು? ಅಪವಿತ್ರತೆ?? ಅಂಬೇರಿನ ಉದಯಪುರದ ಇನ್ನೂ ಅನೇಕ ನೂರಾರು ದೇವಾಲಯ ಕೆಡವಿದರಲ್ಲಾ ಆಗೆಲ್ಲಿತ್ತು ಅಪವಿತ್ರತೆ?? ಇಂಥ ಅನೇಕ ಕಟ್ತು ಕಥೆಗಳ ಗಂಟೇ ನಿಮ್ಮ ಮಹಾನ್ ಇತಿಹಾಸಕಾರರ ಗ್ರಂಥಗಳಲ್ಲಿದೆ. ಅದನ್ನೇ ಶೌರಿ ಹೇಳಿದ್ದಾರೆ. ಕಂಡದ್ದನ್ನು ಕಂಡ ಹಾಗೆ ಹೇಳಿದರೆ ……. ಗೆ ಬೆಂಕಿ ಹತ್ತಿತಂತೆ ಎನ್ನುವಂತೆ ಮಾತನಾಡುವಿರಲ್ಲಾ???

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments