ಮೂ(ರ್ತಿ)ತ್ರ ವಿಸರ್ಜನೆ ಮತ್ತು ಕಲಬುರ್ಗಿಯ ಅಸಹನೆ..
ಹೃಷಿಕೇಶ್, ಚಿಕ್ಕಮಗಳೂರು
’ಸಂಸ್ಕಾರ’ದ ನಾರಾಯಣಪ್ಪ ಸಂಪ್ರದಾಯವನ್ನೇ ತಿರಸ್ಕರಿಸಿ ಕೊನೆಗೂ ಯಾರಿಗೂ ಬೇಡವಾದ ಶವವನ್ನಾಗಿ ಮಲಗಿಸಿದ ಅನಂತ ಮೂರ್ತಿ, ಸೂರ್ಯನ ಕುದುರೆಯಲ್ಲಿ ಹಡೆವೆಂಕಟನ ಮೂಲಕ ಆಧುನೀಕತೆ ಮತ್ತು ಸಾಂಪ್ರದಾಯಿಕತೆಯ ದ್ವಂದ್ವಗಳನ್ನು ಮುಂದಿಡುತ್ತಾರೆ. ಬೆತ್ತಲೆ ಪೂಜೆ ಏಕೆ ಕೂಡದು? ಎಂಬ ಪುಸ್ತಕದಲ್ಲಿಯೂ ಇಂತಹ ದ್ವಂದ್ವ ಇರುವುದನ್ನು ಮೂರ್ತಿಯವರೆ ಒಪ್ಪಿಕೊಳ್ಳುತ್ತಾರೆ, ಅಂದರೆ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ದ್ವಂದ್ವವಾಗಿದೆ. ಮೂರ್ತಿಯವರು ನಿಜವಾಗಿಯೂ ನಾರಾಯಣಪ್ಪನೋ ಅಥವಾ ದ್ವಂದ್ವದಲ್ಲಿ ಸಿಲುಕಿಕೊಂಡಿರುವ ವಿದ್ಯಾವಂತ ಭಾರತೀಯನೋ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಅವರು ಸಂಪ್ರದಾಯ ಮತ್ತು ಆಧುನೀಕತೆಗಳ ನಡುವೆ ಅನುಸಂಧಾನ ನಡೆಸುತ್ತಿರುವ ಸೃಜನಶೀಲ ಚಿಂತಕ ಎಂದೇ ನಂಬಿಕೊಂಡಿದ್ದೆ.
ಆದರೆ, ಇತ್ತೀಚಿನ ಮೂರ್ತಿಯವರ ಹೇಳಿಕೆಗಳು ಹಾಗೂ ಅವರ ಕುರಿತ ಹೇಳಿಕೆಗಳು ಇವರು ಎಲ್ಲಿಗೂ ಸಲ್ಲದವರು ಎಂಬ ಅಭಿಪ್ರಾಯವನ್ನು ಹುಟ್ಟಿಸುತ್ತಿದೆ. ಕಾದಂಬರಿ, ಕಥೆಗಳಲ್ಲಿನ ದ್ವಂದ್ವಗಳು ಒಬ್ಬ ವ್ಯಕ್ತಿಯಾಗಿ ಅವರಿಗೆ ಕಾಡಲೇ ಇಲ್ಲ ಎಂಬುದು ಇತ್ತೀಚಿನ ನನ್ನ ಅನುಮಾನ. ಹಾಗಾದರೆ ಅವರು ಬರೆದದ್ದು ಹಾಗೂ ಈಗ ಮಾತನಾಡುತ್ತಿರುವುದು ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳು ಎಂದು ತೋರುತ್ತವೆ, ಅಂದರೆ ಹಿಪೋಕ್ರಾಟ್ ಎನ್ನದೆ ವಿಧಿ ಇಲ್ಲ. ಇರಲಿ, ಈಗ ಮೂತ್ರ ವಿಸರ್ಜನೆಯ ಕುರಿತು ಅವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ.
ದೇವರನ್ನು ನಂಬುವುದು ಬಿಡುವುದು ಅಥವಾ ತಿರಸ್ಕರಿಸುವುದು ಎಲ್ಲಾ ಸಮಾಜದಲ್ಲಿಯೂ ಬೆಳೆದುಬಂದ ರೀತಿ ರಿವಾಜು ಆಗಿದೆ. ನಾಸ್ತಿಕ ಆಸ್ತಿಕ ಎಂಬ ಭೇದ ಅನಂತ ಮೂರ್ತಿ ಹುಟ್ಟುಹಾಕಿದ್ದಲ್ಲ, ಅವರು ಹುಟ್ಟುವ ಮುನ್ನವೇ ಅಂತಹ ಭೇದಗಳು ಸಮಾಜದಲ್ಲಿ ಸಾಮಾನ್ಯವಾಗಿದ್ದವು. ಆದರೆ ಇಂತವರು ಹುಟ್ಟಿದ ಮೇಲೆ ಭೇದ ಭಿನ್ನತೆಗಳನ್ನು ವೈರತ್ವಕ್ಕೆ ತಿರುಗಿಸುವ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ. ಕಲ್ಬುರ್ಗಿ ದೇವರನ್ನು ನಂಬಲ್ಲ ಹಾಗಾಗಿ ಎಲ್ಲಾ ದೇವರನ್ನು ನಾಶ ಮಾಡಿ ಅಂತ ಹೇಳ್ತಾರೆ, ಎಂಥ ಮೂಢಮತೆ.
ನಾಸ್ತಿಕವಾದವು ದೇವರನ್ನು ಅಲ್ಲಗಳೆಯುತ್ತದೆ, ಒಂದು ಹಂತದಲ್ಲಿ ಇಲ್ಲವೇ ಇಲ್ಲ ಎಂದು ಸಾರುತ್ತದೆ. ಆದರೆ ದೇವರನ್ನು ಮತ್ತು ನಾಸ್ತಿಕತೆಯನ್ನು ಒಟ್ಟಿಗೆ ಇಟ್ಟುಕೊಂಡುಹೋಗುವ ಗುಣವನ್ನು ಸಂಪ್ರದಾಯಗಳು ರೂಢಿಸಿಕೊಂಡಿವೆ. ಆದ ಮಾತ್ರಕ್ಕೆ ವಾಚಾಮಗೋಚರವಾಗಿ ಹಿಯಾಳಿಸುವ ಕೃತ್ಯಕ್ಕೆ ಈ ಸಂಪ್ರದಾಯವು ಸಹಕಾರ ನೀಡುವುದಿಲ್ಲ. ಅಂತವರಿಗೆ ಸಂಸ್ಕಾರ ದ ನಾರಾಯಣಪ್ಪನಿಗೆ ಆದ ದುರ್ದೆಸೆಯೇ ಆಗುತ್ತದೆ. ಆದ್ದರಿಂದ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಆಗುವ ಲಾಭ ನಷ್ಟ ವಯುಕ್ತಿಕ, ಆದರೆ ದೇವರ ಮೂರ್ತಿಯ ಮೇಲೆ ಮಾಡಿದರೆ ಅದರ ಪರಿಣಾಮ ಸಾಮಾಜಿಕ.
ಸ್ವಾಮಿ, ಅನಂತ ಮೂರ್ತಿಯವರೆ ನಿಮ್ಮ ಹೆಂಡತಿ ನಂಬುವ ದೇವರ ಮೂರ್ತಿಯ ಮೇಲೆ ಉಚ್ಚೆ ಒಯ್ಯಲು ನಿಮಗೆ ಸಾಧ್ಯವೆ? ಖಂಡಿತ ಸಾಧ್ಯವಿಲ್ಲ, ಏಕೆಂದರೆ ಕ್ರಿಶ್ಚಿಯಾನಿಟಿ, ಇಸ್ಲಾಂಗಳು ಭಿನ್ನತೆಯನ್ನು ಮಟ್ಟಹಾಕಿಬಿಡುತ್ತವೆ. ಆದರೆ ಹಿಂದೂ ಸಂಪ್ರದಾಯ ಅಂತಹ ಭಿನ್ನತೆಗಳನ್ನೂ ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗುತ್ತದೆ. ಹಾಗಾಗಿಯೇ ಮೂರ್ತಿಯಂತ ಮೂರ್ಖರು ಮೂತ್ರ ಮಾಡಲು ಸಾಧ್ಯವಾಗುತ್ತದೆ, ಅದನ್ನು ಸಹಿಸಲು ಜನರಿಗೂ ಸಾಧ್ಯವಾಗುತ್ತದೆ.
ಇನ್ನ, ಕಲ್ಬುರ್ಗಿಯ ಬಗ್ಗೆ ಎರಡು ಮಾತನ್ನು ಹೇಳಲೇ ಬೇಕು. ಕರ್ನಾಟಕದ ಹೆಮ್ಮೆಯ ವಿವಿಯ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಅನುಭವಿ ಪ್ರಾಧ್ಯಾಪಕರು ಇಂತಹ ಹೀನಕೃತ್ಯದಲ್ಲಿ ತೊಡಗಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ. ಇವರಿಗೆ ಯಾವುದಾದರೂ ಆಗುವುದಿಲ್ಲ ಎಂದಾದರೆ ಶತಾಯಗತಾಯ ಅದನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗುತ್ತಾರೆ. ಅದಕ್ಕೆ ಎರಡು ನಿದರ್ಶನಗಳಿವೆ: ಒಂದು, ಕುವೆಂಪು ವಿವಿಯ ಸಿ.ಎಸ್.ಎಲ್.ಸಿ. ಸಂಶೋಧನಾ ಕೇಂದ್ರದ ಸಂಶೋಧನೆಯನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳ ಕಾಲು ಹಿಡಿದರು, ಅದರಲ್ಲಿಯೂ ಒಂದು ಹವಾ ಹುಟ್ಟಿಸಿ ವಿಕೃತ ಸಂಶೋಧನೆ ಎಂದು ಕಂಡಕಂಡಲ್ಲಿ ಗೋಳಾಡುತ್ತಾ ಸಂಶೋಧನಾ ಕೇಂದ್ರನ್ನು ಮುಚ್ಚಿಸುವಲ್ಲಿ ಸಫಲರಾದರು ಎಂದು ಕೇಳಿದ್ದೇನೆ. ಎರಡು, ಬಸವ ಪ್ರಶಸ್ತಿಯನ್ನು ಮೂರ್ತಿಯವರಿಗೆ ಘೋಷಿಸಿದಾಗ ಅಸಮಾಧಾನದ ಹೊಗೆ ಎದ್ದಿದ್ದು ಇದೇ ಕಲ್ಬುರ್ಗಿಯ ಎದೆಯಲ್ಲಿ, ಅಂದಿನಿಂದ ಅವರ ಗೋಳು ಮತ್ತೆ ಪ್ರಾರಂಭವಾಯಿತು. ಮೊದಲು ಬಸವ ಈಸ್ ನಾನ್ ಸೆನ್ಸ್ ಫಿಲಾಸಫರ್ ಎಂದು ಮೂರ್ತಿಯವರು ಹೇಳಿದ್ದಾರೆಂದು ವಿವಾದವೆಬ್ಬಿಸಲು ಪ್ರಯತ್ನಿಸಿದರು, ಆದರೆ ಆ ಪಟಾಕಿ ಟುಸ್ ಆಯಿತು, ಯಾವ ಲಿಂಗಾಯತ ಮಠಗಳೂ ಮೂರ್ತಿ ವಿರುದ್ಧ ಬಂಡೇಳಲಿಲ್ಲ.
ಈಗ ಮತ್ತೊಂದು ಪಟಾಕಿಯನ್ನು ಹತ್ತಿಸಿದ್ದಾರೆ, ಮಠಗಳು ಏನು ಮಾಡಲಿಲ್ಲ ಎಂದಾದರೆ ಇಡೀ ಹಿಂದೂ ಸಮಾಜವನ್ನೇ ಮೂರ್ತಿಯವರ ವಿರುದ್ಧ ನಿಲ್ಲಿಸುವ ಹುನ್ನಾರ ಮಾಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಢಮ್ ಎನ್ನುತ್ತದೆ ಎಂಬುದು ಮಾತ್ರ ತಿಳಿದಿಲ್ಲ. ಕಲ್ಬುರ್ಗಿಯವರಿಗೆ ಯಾವುದಾದರೂ ಒಂದು ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಸಮಾಧಾನ ಮಾಡದಿದ್ದರೆ ಅವರಲ್ಲಿ ಮಲಗಿರುವ ಕೋಮುವಾದಿತನವನ್ನು ಜಾಗೃತ ಗೊಳಿಸಿ ರಾಜ್ಯದಲ್ಲಿ ಸಂಘರ್ಷವನ್ನು ಉಂಟುಮಾಡಲು ಹಿಂದೆ ಮುಂದೆ ನೋಡುವುದಿಲ್ಲ.
ಅಮೂ ಚಿತ್ರಕೃಪೆ:http://www.bellevision.com/belle/index.php?action=article&type=2795
I feel that URA Murthy is a sadist.
You have misconception about URA sir. Read what Darga Sir has said on URA:
http://ladaiprakashanabasu.blogspot.in/2014/06/blog-post_7217.html
ಅನಂತಮೂರ್ತಿಯವರು ‘ಬೆತ್ತಲೆ ಪೂಜೆ ಏಕೆ ಕೂಡದು’ ಎಂಬ ಪುಸ್ತಕದಲ್ಲಿ ಈಗ ಪ್ರಸ್ತುತ ವಿವಾದದ ಹುತ್ತವಾಗಿರುವ ವಿಷಯವನ್ನು ಯಾವ ಸಂದರ್ಭದಲ್ಲಿ,ಯಾವ contextನಲ್ಲಿ ಹೇಳಿದ್ದಾರೆ ಎಂಬುದನ್ನು ಗಮನಿಸದೆ ಕಲಬುರ್ಗಿಯವರು ನಿನ್ನೆ ಸಭೆಯಲ್ಲಿ ತಮ್ಮ ವಿತಂಡವಾದಕ್ಕೆ, ಮೌಢ್ಯ ನಿರಾಕರಣೆಯ ಮಾತುಗಳಿಗೆ ಮೂರ್ತಿಯವರ ಪುಸ್ತಕದಲ್ಲಿನ ನಾಲ್ಕಾರು ಸಾಲುಗಳನ್ನು ಊರುಗೋಲಾಗಿಟ್ಟುಕೊಂಡಿದ್ದು ಹಾಸ್ಯಾಸ್ಪದ. ಮೂರ್ತಿಯವರಿಗೆ ಬಸವ ಪ್ರಶಸ್ತಿ ಘೋಷಣೆಯಾದಾಗಲಿಂದ ಅವರನ್ನು ಹಳಿಯುತ್ತಲೇ ಬಂದ ಕಲಬುರ್ಗಿಯವರು ಪ್ರಜಾವಾಣಿಯಲ್ಲಿ ನಡೆದ ತಮ್ಮ ಪತ್ರ ಸಮರದಲ್ಲಿ ಕೊನೆಗೆ ಸೋಲನ್ನು ಒಪ್ಪಬೇಕಾಯ್ತು. ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಅನಂತಮೂರ್ತಿಯವರು ಬಸವಣ್ಣನ ಬಗ್ಗೆ ಹೇಳಿದ್ದನ್ನು ಸರಿಯಾಗಿ ಓದದೆ, ಅರ್ಥಮಾಡಿಕೊಳ್ಳದೆ ಕೊಟ್ಟ ಉದಾಹರಣೆಯಿಂದ “ಬಯಲು ಪಾಲಾದರು”. ಆದರೂ ಮೂರ್ತಿಯವರ ಬಗ್ಗೆ ಅವರ ಅಸಹನೆ ಇನ್ನೂ ಕೊನೆಯಾಗಿಲ್ಲ. ಮತ್ತ್ಯಾವ ಸಂಶೋಧನೆ ಮಾಡಿ ಅನಂತಮೂರ್ತಿಯವರನ್ನು ಬಯಲು ಮಾಡಲು ಹೋಗಿ ತಾವೇ ಬೆತ್ತಲಾಗುತ್ತಾರೋ ತಿಳಿಯದು. ಇವತ್ತು ಟಿ ವಿ ೯ ನಲ್ಲಿ ನಡೆದ ಚರ್ಚೆಯಲ್ಲಿ ನಿನ್ನೆಯ ಜೋಶ್ ಇರಲಿಲ್ಲ. ಕಲಬುರ್ಗಿಯವರಿಗೆ ಪುಕ್ಕಟೆ ಪ್ರಚಾರಕ್ಕೆ ಇಂತಹ ಸನ್ನಿವೇಶ ಸೃಷ್ಟಿ ಏಕೆ ಬೇಕಾಗಿತ್ತು?
Only the so called intellectuals are capable of defecating through their mouths and eat from the other end (I think they are used to eat in their toilet and defecate in their dining hall, as they are self proclaimed intellectuals) if I am hurting their feelings like stating the facts, I am sorry…………..
ಎರಡೂ ದದ್ದು ಹೊರಗ್ಹಾಕು ! (ಗಾದೆ)