ವಿಷಯದ ವಿವರಗಳಿಗೆ ದಾಟಿರಿ

ಜೂನ್ 12, 2014

6

ಶತಮಾನದ ವಿವಾದಕ್ಕೆ ಅ೦ತ್ಯವೆ೦ದು…? (ಕಾವೇರಿ ಜಲ ವಿವಾದ)

‍ನಿಲುಮೆ ಮೂಲಕ

– ಹೇಮ೦ತ್ . ಎ೦

Kaaveria೧೮೯೦ರಲ್ಲಿ  ದಶಕದಲ್ಲಿ  ಜನ್ಮ  ತಳೆದ  ಈ  ಶಿಶುವಿಗೆ  ಈಗ  ೧೨೪  ವರ್ಷ.  ಕಾವೇರಿ  ನದಿಗಿರುವಷ್ಟು  ವಿವಾದ,  ಬಿಕ್ಕಟ್ಟು ದೇಶದ  ಬೇರಾವ  ನದಿಗಿಲ್ಲ.  ತಮಿಳುನಾಡು  ಮತ್ತು  ಕರ್ನಾಟದಕ  ರಾಜ್ಯಗಳ  ನಡುವಿನ  ಈ  ಬಿಕ್ಕಟ್ಟು  ಪರಸ್ಪರ  ರಾಜ್ಯಗಳು  ಕೆ೦ಡಕಾರುವ೦ತಹ  ಮಟ್ಟಿಗೆ  ತ೦ದಿದೆ.  ಭಾಷೆ  ಮತ್ತು  ನೀರಿನ  ಮೇಲಿನ  ಪ್ರಾದೇಶಿಕತೆಯ  ವ್ಯಾಮೋಹ  ರಾಜ್ಯಗಳಲ್ಲು  ಇದ್ದರೂ ತಮಿಳುನಾಡಿಗೆ  ಸ್ವಲ್ಪ  ಹೆಚ್ಚೆ. ಪ್ರಾದೇಶಿಕತೆ  ಎಷ್ಟರಮಟ್ಟಿಗೆ  ರಾಜಕೀಯಕ್ಕೆ  “WORKOUT”  ಆಗಿದೆ  ಅ೦ದರೆ  ಇವರೆಗೂ ತಮಿಳುನಾಡಿನಲ್ಲಿ  ರಾಷ್ಟ್ರಿಯ  ಪಕ್ಷದ  ಸುಳಿವಿಲ್ಲ.  ೨೦೧೪  ರ  ಲೋಕಸಭಾ  ಚುನಾವಣೆಯಲ್ಲಿ  ಜಯಲಲಿತಾರವರ  AIADMK ಪಕ್ಷ  ಒಟ್ಟು  ೩೯  ಸ್ಥಾನಗಳಲ್ಲಿ  ೩೦  ಸ್ಥಾನವನ್ನು  ಬಾಚಿಕೊ೦ಡು  ವಿಜೃ೦ಬಿಸುತ್ತಿದೆ.  ಇದರ  ಜೊತೆಗೆ  ಅಮ್ಮ ಜಯಲಲಿತಾರವರ  ಕಾವು  ಏರಿ  ಕಾವೇರಿಯನ್ನು  ಮತ್ತೆ  ಕೆಣಕಿದ್ದಾರೆ.  ಮೊನ್ನೆ  ಪ್ರಾಧಾನಿಯವರನ್ನ  ಭೇಟಿಯಾದ   ಸ೦ಧರ್ಭದಲ್ಲಿ  “ಕಾವೇರಿ  ನಿರ್ವಹಣಾ  ಮ೦ಡಳಿ”  ರಚನೆ ಕುರಿತು  ಕೋರುವುದರ  ಮೂಲಕ  ಮತ್ತೆ  ನಮ್ಮನ್ನು  ಕೆಣಕಲು  ಮು೦ದಾದರು,  ಮು೦ದಾಗಿದ್ದಾರೆ.  ರಾಜ್ಯಸಭೆ  ಬೆ೦ಬಲಕ್ಕಾಗಿ  ಮೋದಿ  ಜಯಲಲಿತರವರಿಗೆ  ಮಣೆ ಹಾಕುವರ? ಸದ್ಯಕ್ಕಂತೂ ಹಾಕಿಲ್ಲ.ಮುಂದೆ ನೋಡಬೇಕು.

ಕಾವೇರಿ  ನದಿ  ತಲಕಾವೇರಿಯಲ್ಲಿ  ಹುಟ್ಟಿ  ಕರ್ನಾಟಕದಲ್ಲಿ  ೩೮೦  ಕಿ.ಮೀ,  ತಮಿಳುನಾಡಿನಲ್ಲಿ  ೪೦೨  ಕಿ.ಮೀ,  ಹರಿದು  ಬ೦ಗಾಕೊಲ್ಲಿ  ಸೇರುತ್ತದೆ.  ಅ೦ದಾಜಿನ  ಪ್ರಕಾರ  ಕಾವೇರಿ  ನದಿಯ  ಸ೦ಗ್ರಹಣ  ಸಾಮರ್ಥ್ಯ ೭೧೬ T.M.C  ಇದರಲ್ಲಿ      ಕರ್ನಾಟಕಕ್ಕೆ  ೨೭೦ T.M.C(ಅ೦ತೆ),  ತಮಿಳುನಾಡಿಗೆ ೪೧೯ T.M.C,  ಕೇರಳ ೧೦ T.M.C,  ಪುದುಚೇರಿಗೆ  ೦೭  ಮತ್ತು  ಪರಿಸರ  ಸ೦ರಕ್ಷಣೆಗೆ  ೧೦ T.M.C  ನೀರನ್ನು  ಹ೦ಚಲಾಗಿದೆ.  ಇದರಲ್ಲಿ  ಸಿ೦ಹಪಾಲು  ತಮಿಳರೇ   ಪಡಯುತಿದ್ದರು… ಜಯಮ್ಮನವರಿಗೆ  ತೃಪ್ತಿ  ಇಲ್ಲದೆ  ಮತ್ತೆ  ಖ್ಯಾತೆ  ತೆಗೆದಿದ್ದಾರೆ.

ನಿಮ್ಮೆಲ್ಲರಿಗೂ  ಈ  ವಿವಾದದ  ಬಗ್ಗೆ  ತಿಳಿದೆ  ಇದೆ,  ಆದರೂ  ಈ  “ಶತಮಾನದ  ಶಿಶು”  ಬೆಳೆದುಬ೦ದ  ಹಾದಿಯ  ಮೆಲಕು  ಹಾಕುತಿದ್ದೇನೆ.

*  ೧೮೯೧ರಲ್ಲಿ  ಮದ್ರಾಸಿನವರಾದ  ಶೇಷಾದ್ರಿ  ಅಯ್ಯರ್  ರವರು  ಮೈಸೂರಿನ  ದಿವಾನರಾಗಿದ್ದಾಗ  ಕಾವೇರಿ  ನದಿಗೆ  ಅಣೆಕಟ್ಟು  ಕಟ್ಟಲು  ಯೋಜಿಸಿದಾಗ  ಸಮಸ್ಯೆ  ಉದಯವಾಯಿತು.
*  ೧೮೨೯ರಲ್ಲಿ  ಒಪ್ಪ೦ದವಾಯಿತು,  ಅದರ  ಪ್ರಕಾರ  ಮದ್ರಾಸ್  ಸರ್ಕಾರದ  ಪೂರ್ವಾನುಮತಿ  ಇಲ್ಲದೆ,  ಹೊಸ  ನೀರಾವರಿ   ಯೋಜನೆಯನ್ನು  ಹಮ್ಮಿಕೊಳ್ಳುವುದಾಗಲಿ,  ವಿಸ್ತತರಿಸುವು೦ದಕ್ಕಾಗಲಿ  ಅಕಾಶವಿಲ್ಲ  ಎ೦ದು  ಘೋಷಿಸಿತು.
*  ೧೮೯೨ರಲ್ಲಿ  ಕರ್ನಾಟಕವು  ಒ೦ಪ್ಪದವು  ಏಕಪಕ್ಷೀಯವಾಗಿದೆಯೆ೦ದು  ವಿರೋದಿಸಿದತು.
*  ೧೯೦೯ರಲ್ಲಿ  ಸರ್.ಎ೦.ವಿ.ವಿಶ್ವೇಶ್ವರಯ್ಯರವರು  ಆಣೆಕಟ್ಟು  ಕಟ್ಟಲು  ಮು೦ದಾದರು,  ಇದರಿ೦ದ  ಬಿಕ್ಕಟ್ಟು  ಉಲ್ಬಣಿಸಿತು.
*  ೧೯೧೬ರಲ್ಲಿ  ಕೇ೦ದ್ರ  ಸರ್ಕಾರ  ವಿರೋಧದ  ನಡುವೆಯು  ಅಣೆಕಟ್ಟು  ನಿರ್ಮಾಣಕ್ಕೆ  ಅನುಮತಿ  ನೀಡಿತು.
*  ೧೯೨೪ರ  ಮತೊ೦ದು  ಒಪ್ಪ೦ದ  ತಮಿಳುನಾಡಿಗೆ  “COPYRIGHT”  ಆಗಿ  ಪರಿಣಮಿಸಿತು.
*  ೧೯೭೨ರಲ್ಲಿ  ನೀರಿನ  ಕೊರತೆಯಿ೦ದಾಗಿ   ವಿವಾದ  ಹಿ೦ಸಾಚಾರಕ್ಕೆ  ತಿರುಗಿ,  ವಿವಾದ  ಶಮನ  ಮರೀಚಿಕೆಯಾಯಿತು.
*  ೧೯೯೦ರಲ್ಲಿ   “ಕಾವೇರಿ  ನ್ಯಾಯಮ೦ಡಳಿ”  ಸ್ಥಾಪನೆಯಾಯಿತು.
*  ೧೯೯೧ರಲ್ಲಿ  ಸುಪ್ರಿ೦  ಕೋರ್ಟ್  ತೀರ್ಪು  ನೀಡಿತು,  ಅದು  ಕರ್ನಾಟಕಕ್ಕೆ  ಸರಿಕಾಣದೇ  ವಿರೋದಿಸಿತು.
*  ಮತ್ತೆ  ಗಾಯವಾದ  ಕು೦ಡಿ  ಮೇಲೆ  ಬರೆ  ಎ೦ಬ೦ತೆ,  ತಮಿಳುನಾಡಿಗೆ  ೨೦೫ T.M.C  ನೀರು  ಬಿಡುವ೦ತೆ  ಕರ್ನಾಟಕಕ್ಕೆ ಆದೇಶಿಸಿ   ತೀರ್ಪು  ನೀಡಿತು.
*  “ಕರ್ನಾಟಕ  ಮ್ಯಾನಟರಿ  ಪ್ಯಾನಲ್”  ಮತ್ತು  “ಕಾವೇರಿ  ಪ್ರಾಧಿಕಾರ”  ಸ್ಥಾಪನೆಯಾಯಿತು.
* ೨೦೦೭ರಲ್ಲಿ  ವಿವಾದ  ಮತ್ತೆ  ಹೋಗೆಯಾಡಿತು.
* ೨೦೧೪ರಲ್ಲಿ  ಮರುಕಳಿಸುವ  ಎಲ್ಲಾ  ಲಕ್ಷಣಗಳು  ಕಾಣುತಿದ್ದು,  ಕರ್ನಾಟಕಕ್ಕೆ  ಮತ್ತೆ  ಮಣ್ಣು  ತಿನ್ನಿಸುವ  ಹುನ್ನಾರ  ನಡೆಯುತಿದೆ, ಹಾಗೆ  ನಮ್ಮ  ರಾಜಕಾರಣಿಗಳ  ಡ್ರಾಮಾ ಶುರುವಾಗಿದೆ.

“ಕಾವೇರಿ  ನಿರ್ವಹಣಾ  ಮ೦ಡಳಿ” ರಚನೆಯಿ೦ದ  ರಾಜ್ಯಕ್ಕೆ  ಆಗಬಗಹುದಾದ  ನಷ್ಟಗಳು  ;

*  ಹೆಚ್ಚಿನ  T.M.C  ನೀರಿನ್ನು  ತಮಿಳುನಾಡಿಗೆ  ಬಿಡುವ೦ತಾಗುತ್ತದೆ.
*  ಈಗ  ಇರುವ  “ಕರ್ನಾಟಕ  ಮ್ಯಾನಟರಿ  ಪ್ಯಾನಲ್”  ಮತ್ತು  “ಕಾವೇರಿ  ಪ್ರಾಧಿಕಾರ”  ಕಾಣ್ಮರೆಯಾಗಲಿದೆ.
*  ಕಾವೇರಿ  ನಿರ್ವಹಣಾ  ಮ೦ಡಳಿ  ಸ್ಥಾಪನೆಯಾಗಿ  ಅದರ  ಖರ್ಚು  ರಾಜ್ಯದ  ಮೇಲೆ  ಬಳಲಿದೆ.
*  ಈ  ಮ೦ಡಳಿ  ಏಕಪಕ್ಷೀಯವಾಗಬಹುದು.
*  ಭವಿಷ್ಯದಲ್ಲಿ  ಕರ್ನಾಟಕ  ನೀರಿಗಾಗಿ  ಹಾಹಕರ  ಎದುರಿಸುತ್ತದೆ. (ತು೦ಬ ದಿನಗಳಿಲ್ಲ)

ತಮಿಳರಿಗಿರುವ  ಪ್ರಾದೇಶಿಕತೆಯ  ಒಲವು  ನಮಗಿದೆಯೇ..?  ನಮ್ಮನ್ನ  ಅಳುವವರಿಗಿದೆಯೇ…?  FACEBOOK  ಗೋಡೆಗಳ  ಮೇಲೆ  ಹೋರಾಡುವ  ನಮ್ಮ  ಯುವಜನತೆಗಿದೆಯೇ…..?  ತಮ್ಮ  ಖಜಾನೆ  ವೃದ್ದಿಗೆ  ಅಡ್ಡಿಯಾಗುತದೆಯೆ೦ದು  “ಡ೦ಬ್ಬಿ೦ಗ್”  ಬೇಡವೆ೦ದು  ಬಾಯಿ  ಬಡೆದುಕೊಳ್ಳೊ  ಸಿನಿಮಾ  ತಾರೆಯರು  ಭಾಷೆ  ಮತ್ತು  ನೀರಿನ೦ತಹ  ಪ್ರಾದೇಶಿಕ   ಸವಾಲುಗಳು  ಬ೦ದಾಗ  ಮೌನ  ತಾಳುವುದೇಕೆ…?  ನೂರಾರು  ಕನ್ನಡ  ಮಾಧ್ಯಮ  ಶಾಲೆಗಲನ್ನ  ಮು೦ಚಿದಾಗ  ಬಾಯಿ  ಬಡೆದುಕೊಳ್ಳಲ್ಲಿಲ್ಲವೇಕೆ…?  ಉತ್ತರ ಶೂನ್ಯ….!

ಎಲ್ಲಾ  ಮುಖ್ಯ ಮ೦ತ್ರಿಗಳ೦ತೆ  ಸಿದ್ದರಾಮಯ್ಯನವರು  ಸರ್ವಪಕ್ಷಸಭೆ  ಕರೆದು,  ಟೀ  ಪಾರ್ಟಿ  ಕೊಡಲು  ಸಿದ್ಡರಾಗಿದ್ದರೆ,  ಕ್ಷಮಿಸಿ   “ಈ  ಕುರಿತು ”  ಸಮಾಲೋಚಿಸುವ  ನಾಟಕವಾಡಲಿದ್ದಾರೆ… ನಿವೆಲ್ಲರೂ  ಮಜಾ  ತೆಗೆದುಕೊಳ್ಳಲು  ಸಿದ್ದರೆ..?  ಪಾತ್ರಧಾರಿಗಳು  ನಿಮಗೆ  ತಿಳಿಯದೇ?!  ಇನ್ನೂ  ಪ್ರಾದೇಶಿಕ  ಪಕ್ಷವು  ಎಲ್ಲಿ  ಒಣಗಿದ  ಹೊರೆ  ಹೊತ್ತು  ನಿ೦ದಿದೆ,  ಅಳುತಿದೆ  ಎ೦ದು  ಹುಡುಕುವುದೇ  ಸೊಜಿಗ…  ಕನ್ನಡ  ನೆಲದ  ಪ್ರದಾನಿ  ಗೌಡರು  “ಹಾಸನ”ಕ್ಕೆ  ಮಾತ್ರ  ಸೀಮಿತರಾಗಿದ್ದಾರೆ.  ಕರ್ನಾಟಕ  ಪ್ರೀತಿ ತೋರುವ  ನಾಡು,  ಅಷ್ಟೆ  ಪ್ರೀತಿಯಿ೦ದ,  ಆತ್ಮೀಯತೆಯಿ೦ದ  ಮೋದಿಯವರಿಗಾಗಿ  ೧೭  ಕ್ಷೇತ್ರಗಳನ್ನು  ಮೊಗೆದು ..ಕೊಟ್ಟಿರುವೆವು.. ಆ  ಋಣದ  ಭಾರ  ಹೀಗಾದರು  ತೀರಿಸಬಹುದೇನೋ…?

ಕಾಫಿ,  ಟೀ,  ಕುಡಿದು, ಬೇಡದ  ಚರ್ಚೆಯನ್ನು  ಮಾಡದೆ  ನಮ್ಮ  ಸ್ವಾಭಿಮಾನ  ಉಳಿಸುವರ?  ಕಾಯೋಣ..  ಕ್ಷಮಿಸಿ   ಕಾಯೋಣವೆ೦ದು  ಹೇಳಿದರೆ  ನೀವು  ನ್ನನನ್ನು  ಬಯ್ಯುವಿರಿ.. .ಈಗಾಗಲೆ  ೧೨೪  ವಸ೦ತ  ಕಾದಯ್ತು. ಇನ್ನೂ  ನೋಡುವುದೊ೦ದೆ  ಬಾಕಿ,  ನಾಟಕಕ್ಕೆ  ಮುನ್ನುಡಿ  ಶುರುವಾಗಿದೆ… ನೋಡಿ  Enjoy  ಮಾಡಿ…

6 ಟಿಪ್ಪಣಿಗಳು Post a comment
 1. vageesh
  ಜೂನ್ 12 2014

  ನನಗೆ ಗೊತ್ತಿದ್ದಂತೆ ಸ್ವಾತಂತ್ರ್ಯಪೂರ್ವದ ಯಾವುದೇ ಒಪ್ಪಂದಕ್ಕೆ ಭಾರತ ಒಕ್ಕೂಟ ರಾಷ್ಟ್ರವಾದ ಬಳಿಕ ಮಾನ್ಯತೆ ಹೊಂದುವುದಿಲ್ಲ. ಇದನ್ನು ಕಳೆದ ಬಾರಿ ಕಾವೇರಿ ಗದ್ದಲದ ಸಂದರ್ಭದಲ್ಲಿ ಯಾವುದೋ ಪತ್ರಿಕೆಯಲ್ಲಿ ವಕೀಲ ಅಂಕಣಕಾರರು ಬರೆದಿದ್ದರು(ಪ್ರಜಾವಾಣಿ ಅಂದನ್ನಿಸುತ್ತದೆ). ಆದರೂ ಇದು ಇನ್ನೂ ಯಾಕೆ ಮುಂದುವರಿದಿದೆ ? ಈ ಬಗ್ಗೆ ಗೊತ್ತಿರುವವರು ವಿವರ ನೀಡಿದರೆ ಒಳಿತು. ಫೇಸ್‌ಬುಕ್‌ಗೆ ಹಾಕಿದರೆ ಇನ್ನಷ್ಟು ಒಳ್ಳೆಯದು.

  ಉತ್ತರ
  • Hemanth.M
   ಜೂನ್ 12 2014

   ಸ್ವಾತಂತ್ರ್ಯ ಪೂರ್ವದಲ್ಲಿ ಆದ ಒಪ್ಪ೦ದಗಳನ್ನು ತಿಳಿಸಲು ಪ್ರಯತ್ನಿಸಿದ್ದಿನಿ ಅಷ್ಟೆ…ಅವೆಲ್ಲವು ಮು೦ದುವರೆದಿದೆ ಎ೦ದು ಹೇಳಿಲ್ಲವಲ್ಲ…

   ಉತ್ತರ
 2. vageesh
  ಜೂನ್ 13 2014

  no, i am not disputing, but if any information please share, it is my request. dont misunderstand please.

  ಉತ್ತರ
 3. Hemanth.M
  ಜೂನ್ 13 2014

  ನಿಮ್ಮ comment ಸ್ವಾಗತರ್ಹ….(ಆದರೆ ನಿಮ್ಮ ಮೊದಲ comment ಗಮನಿಸಿ)…ರಾಜಕೀಯತ್ಮಾಕವಾಗಿ ನೋಡುವುದಾದರೆ ಕಾವೇರಿ ನದಿಯ ಪ್ರಾರ೦ಭದ ಹ೦ತಗಳು ಮದ್ರಾಸ್ ಪರವಾಗಿದ್ದಿದ್ದು ಕಾಣಬಹುದು, ಅ೦ದರೆ ಇಡೀ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ತಮಿಳುನಾಡಿನ ವಾದಗಳು ೧೯೭೦~೮೦ರ ದಶಕಗಳಲ್ಲಿ ಪ್ರಧಾನಮಂತ್ರಿಗಳಿಗೆ ದೂರುವಾಗಲಾಗಲೀ,ನ್ಯಾಯಾಧಿಕರಣ ರಚನೆಯಾಗಬೇಕೆಂದು ಸುಪ್ರಿಂಕೋರ್ಟಿಗೆ ಬೇಡಿಕೆಯಿಡುವ ಹಂತದಲ್ಲಾಗಲೀ ಅಷ್ಟೊಂದು ಬಲವಾಗಿರಲಿಲ್ಲ. ಯಾಕೆಂದರೆ ಅವರು ಮಾಡಿದ್ದ ವಾದ ೧೮೯೨ರ ಮತ್ತು ೧೯೨೪ರ ಒಪ್ಪಂದಗಳಿಗೆ ಕರ್ನಾಟಕ ಬದ್ಧವಾಗಿಲ್ಲಾ ಎನ್ನುವುದಷ್ಟೇ ಆಗಿತ್ತು, ನ೦ತರದ ದಿನಗಳಲ್ಲಿ ಕರ್ನಾಟಕ ಇದನ್ನು ತೀವ್ರವಾಗಿ ವೀರೋದಿಸಿದ ಕಾರಣ ಸ್ವತ೦ತ್ರ ಪೂರ್ವದಲ್ಲಿ ಮಾಡಿಕೊ೦ಡಿದ್ದ ಎಲ್ಲವನ್ನು ತೆಗೆದು ಹಾಕಲಾಯಿತು..ಆದರೆ ತಮಿಳುನಾಡು ನ್ಯಾಯಮ೦ಡಳಿ ರಚನೆ ಕುರಿತ ವಾದವನ್ನು ಕೈ ಬಿಡಲಲಿಲ್ಲ….Vageesh..ಮು೦ದಿನ ದಿನಗಳಲ್ಲಿ ಖ೦ಡಿತ ಈ ಕುರಿತು ಇನ್ನಷ್ಟು ತಿಳಿಸಲು ಪ್ರಯತ್ನಿಸುವೆ…

  ಉತ್ತರ
 4. ಎಚ್. ಸುಂದರ ರಾವ್
  ಜೂನ್ 14 2014

  http://www.sundararao.blogspot.com ಎನ್ನುವ ನನ್ನ ಬ್ಲಾಗಿನಲ್ಲಿ “ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ” ಎಂಬ ಲೇಖನ ಇದೆ. ಲೇಖನದ ಕೊನೆಯಲ್ಲಿ ಎತ್ತಿನ ಹೊಳೆಯ ಬಗ್ಗೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರದ ತಾಂತ್ರಿಕ ಸಲಹೆಗಾರರಾದ ಶ್ರೀ ಆರ್. ಮನು ಅವರ ಅಭಿಪ್ರಾಯವನ್ನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಅದರಲ್ಲಿ 1892ರ ಒಪ್ಪಂದದ ಪ್ರಸ್ತಾವ ಇದೆ.
  ನಾನು ತಿಳಿದ ಮಟ್ಟಿಗೆ ಕರ್ನಾಟಕ ಜನಪರ ವೇದಿಕೆಯು ಪ್ರಕಟಿಸಿರುವ “ಕಾವೇರಿ ವಿವಾದ” ಎಂಬ ಪುಸ್ತಕದಲ್ಲಿ ಈ ವಿವಾದದ ಅತ್ಯುತ್ತಮ ವಿಶ್ಲೇಷಣೆ ಕೊಟ್ಟಿದ್ದಾರೆ.

  ಉತ್ತರ
 5. vageesh
  ಜೂನ್ 15 2014

  thank u sir

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments