ವಿಷಯದ ವಿವರಗಳಿಗೆ ದಾಟಿರಿ

ಜೂನ್ 13, 2014

7

ಇಪ್ಪತ್ತನೇ ಶತಮಾನದ ಭಾರತದಲ್ಲಿ ಯೋಗದ ಪುನರುತ್ಥಾನ

‍ನಿಲುಮೆ ಮೂಲಕ

– ಶರತ್ ಹರಿಹರಪುರ ಸತೀಶ್

ತಿರುಮಲೈ ಕೃಷ್ಣಮಾಚಾರ್ಯಪದ್ಮಾಸನದಲ್ಲಿ (ಸಾಧ್ಯವಾದರೆ) ಕುಳಿತು, ಕಣ್ಣು ಮುಚ್ಚಿ ‘ಯೋಗ’ ಎಂಬುದನ್ನು ಮನಸಿನಲ್ಲೇ ಕಲ್ಪಿಸಿಕೊಂಡರೆ ನಿಮ್ಮ ಕಣ್ಣು ಮುಂದೆ ಬರುವ ಚಿತ್ರ ಯಾವುದು? ಟಿವಿಯಲ್ಲಿ ಬರುವ ಒಬ್ಬ ಭಾರತದ ವ್ಯಕ್ತಿಯಾಗಿರಬಹುದು (ಬಾಬಾ ರಾಮದೇವ್, ಫಿಲಂ ತಾರೆ, ಇತ್ಯಾದಿ) ಅಥವಾ ಒಬ್ಬ ಪಾಶ್ಚಾತ್ಯ ದೇಶದ ವ್ಯಕ್ತಿಯೇ ಆಗಿರಬಹುದು ……. ಅಲ್ಲವೇ? ಭಾರತದ ಓರ್ವ ಮಹಾನ್ ವ್ಯಕ್ತಿಯ ಮುಖಚಿತ್ರ ಯಾರಿಗೂ ಕಾಣಿಸುವುದಿಲ್ಲ. ಏಕೆಂದರೆ ಅಂತಹ ಮನುಷ್ಯ ಇದ್ದರು ಎನ್ನುವುದು ಅನೇಕರಿಗೆ ಗೊತ್ತೆಇಲ್ಲ.

ಪತಂಜಲಿ ಮಹರ್ಶಿಗಳು ಯೋಗ ಸೂತ್ರಗಳನ್ನು ಬರೆದು ಸುಮಾರು 2400 ವರ್ಷಗಳೇ ಆಗಿರಬಹುದು. ಮೊದಲಿಗೆ ಮುಸ್ಲಿಮರು, ನಂತರ ಬ್ರಿಟಿಷರ ದಬ್ಬಾಳಿಕೆಯಲ್ಲಿ ನಮ್ಮ ಗುರುಕುಲ ಶಿಕ್ಷಣ ಪದ್ಧತಿ ನಾಶವಾಯಿತು. ಇದರ ಜೊತೆಗೆ ಯೋಗಾಸನದ ವಿದ್ಯೆಯು ಕ್ಷೀಣವಾಯಿತು. ಇಪ್ಪತ್ತನೇ ಶತಮಾದಲ್ಲಿ ಅದಕ್ಕೆ ಪುನರ್ಜೀವ ನೀಡಿದವರೇ ‘ಶ್ರೀ ತಿರುಮಲೈ ಕೃಷ್ಣಮಾಚಾರ್ಯ’. ಇಡೀ ವಿಶ್ವದಲ್ಲಿ ಕೋಟ್ಯಾಂತ ಜನರು ವಿವಿಧ ಶೈಲಿಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಮೂಲ 125ಕ್ಕೂ ಹೆಚ್ಚು ವರುಷಗಳ ಹಿಂದೆ ಜನಿಸಿದ ಕೃಷ್ಣಮಾಚಾರ್ಯರು.

ಚಿತ್ರದುರ್ಗದಲ್ಲಿ ಜನಿಸಿದ ಕೃಷ್ಣಮಾಚಾರ್ಯರು (18 ನವೆಂಬರ್ 1888 – 28 ಫೆಬ್ರುವರೀ 1989) ಸಂಸ್ಕೃತ ಮತ್ತು ವೇದಗಳ ಜೊತೆಗೆ, ತಮ್ಮ ತಂದೆಯವರಾದ ‘ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ’ ಅವರಿಂದ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿತರು. ಮೈಸೂರು, ಪಟ್ನಾ ಹಾಗೂ ಕಾಶಿಯಲ್ಲಿ ಶಡ್ದರ್ಶನಗಳಲ್ಲಿ ಪಾಂಡಿತ್ಯ ಪಡೆದರು. ಮಾನಸ ಸರೋವರದ ಬಳಿ ಒಂದು ಗುಹೆಯಲ್ಲಿ ವಾಸವಾಗಿದ್ದ ‘ರಾಮ ಮೋಹನ ಬ್ರಹ್ಮಚಾರಿ’ ಅವರಿಂದ ಕೂಡ ವಿದ್ಯೆ ಸ್ವೀಕರಿಸಿದರು.

ನಂತರ ಮೈಸೂರಿಗೆ ಹಿಂದುರಿಗಿ ಶ್ರೀಕೃಷ್ಣ ರಾಜ ಒಡೆಯರ್-೪ ಅವರ್ ಆಸ್ಥಾನ ವಿದ್ವಾಂಸರಾದರು. ಮಹಾರಾಜರ ಪ್ರೋತ್ಸಾಹದಲ್ಲಿ ಭಾರತದಾದ್ಯಂತ ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಯೋಗಾಸವನ್ನೂ ಪ್ರದರ್ಶಿಸಿದರು. ಇದರ ಮಧ್ಯೆ ಆಚಾರ್ಯರು ಅನೇಕ ಪುಸ್ತಕಗಳನ್ನು ಬರೆದರು. ಅದರಲ್ಲಿ ಮುಖೈವಾದುದು ‘ಯೋಗ ಮಕರಂದ’, ‘ಯೊಗಾಸನಗಳು’, ‘ಯೋಗ ರಹಸ್ಯ’ ಮತ್ತು ‘ಯೋಗವಲ್ಲಿ’. 1933ರಲ್ಲಿ ಜಗನ್ಮೋಹನ ಅರಮನೆಯಲ್ಲಿ ಯೋಗಾಶಾಲೆಯೊಂದನ್ನೂ ಆರಂಭಿಸಿದರು. ದುರಾದ್ರುಷ್ಟವಶ ಈ ಯೋಗಾಶಾಲೆಯನ್ನು ಸ್ವಾತಂತ್ರ ಭಾರತದ ಮೈಸೂರಿನ ಮೊದಲ ಮುಖ್ಯ ಮಂತ್ರಿಯಾದ ಕೆ.ಸಿ.ರೆಡ್ಡಿಯವರು ಮುಚ್ಚಿಸಿದರು. ಅದರ ಕಾರಣ ಆಚಾರ್ಯರು ಮೈಸೂರಿನಿಂದ ಬೆಂಗಳೂರಿಗೆ ಅನಂತರ ಮದ್ರಾಸಿಗೆ ತೆರಳಿದರು. ಮದ್ರಾಸಿನಲ್ಲಿ ಕೆಲ ಕಾಲ ವಿವೇಕಾನಂದ ಕಾಲೆಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. 1989ರಲ್ಲಿ ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು.


ಕೃಷ್ಣಮಾಚಾರ್ಯರು ಮೈಸೂರಿನಲ್ಲಿ ಯೋಗಾಶಾಲೆಯನ್ನು ನೆಡೆಸುತ್ತಿದ್ದ ಆ ದಿನಗಳೆ ಭಾರತದಲ್ಲಿ ಯೋಗದೀಪವನ್ನು ಮತ್ತೆ ಬೆಳಗಿದ ದಿನಗಳು. ಆ ಜ್ಯೋತಿ ನಿರಂತರ ಬೆಳಗಿಸುವ ಹೊಣೆಯನ್ನು ಹೊತ್ತವರು ಮುಖ್ಯವಾಗಿ ಅವರ್ ಮೂರು ಶಿಷ್ಯರು. ಕೆ ಪಟ್ಟಾಭಿ ಜೋಯಿಸ್, ಮಗನಾದ ದೇಶಿಕಾಚಾರ್ ಹಾಗು ಭಾವಮೈದುನನಾದ ಬಿ.ಕೆ.ಎಸ್ ಅಯ್ಯಂಗಾರ್. ಪಟ್ಟಾಭಿ ಜೋಯಿಸ್ ಅವರು ಮೈಸೂರಿನಲ್ಲಿ, ದೇಶಿಕಾಚಾರ್ ಅವರು ಮದ್ರಾಸಿನಲ್ಲಿ ಮತ್ತು ಬಿ.ಕೆ.ಎಸ್ ಅಯ್ಯಂಗಾರ್ ಅವರು ಪುಣೆಯಲ್ಲಿ ಯೋಗವೃಕ್ಷದ ಇನ್ನಷ್ಟು ಬೀಜಗಳನ್ನು ಬಿತ್ತಿದರು. ಕ್ರಮೆಣ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಈ ಮೂವರು ಯೋಗ ಪ್ರಚಾರಣೆಗೆ ಕಾರಣರಾದರು.
ಭಾರತ ಅಥವಾ ಅಮೇರಿಕ, ಯುರೋಪಿನ ಯಾವುದೇ ದೇಶವಿರಬಹುದು, ಯೋಗದ ಯಾವುದೇ ಶೈಲಿ ಇರಬಹುದು, ಅದೆಲ್ಲದರ ಋಷಿಮೂಲ ದಕ್ಷಿಣ ಭಾರತದ ಒಬ್ಬ ಸಾಮಾನ್ಯ ಬ್ರಾಹ್ಮಣ …. ತಿರುಮಲೈ ಕೃಷ್ಣಮಾಚಾರ್ಯ.
ಕೃಷ್ಣಮಾಚಾರ್ಯರು ಹೇಳಿದಂತೆ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡುವಾಗ ….

“ಉಸಿರನ್ನು ತೆಗೆದುಕೊಂಡರೆ ಪರಮಾತ್ಮ ನಮ್ಮಲ್ಲಿಗೆ ಬರುತ್ತಾನೆ,
ಆ ಉಸಿರನ್ನು ಹಿಡಿದರೆ ಪರಮಾತ್ಮ ನಮ್ಮಲ್ಲಿ ಉಳಿಯುತ್ತಾನೆ,
ಆ ಉಸಿರನ್ನು ಬಿಟ್ಟಾಗ ನಾವು ಪರಮಾತ್ಮಾನೆಡೆಗೆ ಹೋಗುತ್ತೇವೆ,
ಆ ಬಿಟ್ಟ ಉಸಿರಿನ ಸ್ಥಿತಿಯನ್ನು ಹಿಡಿದರೆ ನಮ್ಮನ್ನು ನಾವು ಪರಮಾತ್ಮನಿಗೆ ಸಮರ್ಪಿಸುತ್ತೇವೆ”

7 ಟಿಪ್ಪಣಿಗಳು Post a comment
  1. Universal
    ಜೂನ್ 13 2014

    ನಮ್ಮ ಜನ ಬೇಡದ ವಿಷಯದ ಬಗ್ಗೆ ತಲೆಕೆಡಿಸಿಕೊಂಡು ಚಿತ್ರಾನ್ನ ಮಾಡಿಕೊಳ್ಳುವರೇ ಸಿವಾಯಿ ಇಂತಹ ಯಪಯೋಗಕರ ವಿಷಯಗಳು ಅವರಿಗೆ ಬೇಕಿಲ್ಲ.

    ಉತ್ತರ
  2. ಅರುಣ್ ಕುಮಾರ್
    ಜೂನ್ 14 2014

    ಶರತ್ ರವರೆ ತಮ್ಮ ಈ ಅಂಕಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ತುಂಬಾ ದಿನಗಳಿಂದ ಕನ್ನಡದಲ್ಲಿನ ಯೋಗಾಭ್ಯಸದ ಪುಸ್ತಕಗಳನ್ನು ಹುಡುಕುತ್ತಿದ್ದೆ. ಈ ಅಂಕಣದ ಮೂಲಕ ಯಾವ ಪುಸ್ತಕಗಳನ್ನು ಹುಡುಕಬೇಕೆಂಬುದು ತಿಳಿಯಿತು.ತುಂಬಾ ಧನ್ಯವಾದಗಳು.
    ಆರ್ಚಾಯರ ಮೂಲ ಪುಸ್ತಕಗಳು ಈಗಲೂ ಲಭ್ಯವಿದೆಯೆ?.ಲಭ್ಯವಿದ್ದರೆ ದಯವಿಟ್ಟು ತಿಳಿಸಿ.

    ಉತ್ತರ
    • ಶರತ್
      ಜೂನ್ 15 2014

      ಪುಸ್ತಕಗಳು ಲಭ್ಯವಿದೆ … online ನೋಡಿ…

      ಉತ್ತರ
      • ಅರುಣ್ ಕುಮಾರ್
        ಜೂನ್ 20 2014

        ಅಂತರ್ಜಾಲದಲ್ಲಿ ಜಾಲಾಡಿದೆ,ಕೆವಲ ಆಂಗ್ಲ ಪುಸ್ತಕಗಳು ಮಾತ್ರ ಲಭ್ಯವಿದೆ. 😦

        ಉತ್ತರ
  3. ಜುಲೈ 5 2017

    ಸ್ವಾಮಿ,
    ತಮ್ಮ ಇಂಟರ್ನೆಟ್ ತಾಣವನ್ನು ನೋಡಿ ಬಹಳ ಸಂತೋಷವಾಗಿದೆ. ಯೋಗದ ಬಗ್ಗೆ ಹಲವು ವಿಷಯಗಳನ್ನು ವಿವರಿಸಿದ್ದೀರಿ. ಆದರೆ, ಆತ್ಮವಂಚನೆಯಿಲ್ಲದೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿರಿ. ಖಂಡಿತ ಉತ್ತರಿಸುವಿರಿ ಎಂದು ನಂಬುತ್ತೇನೆ.

    ನಾನು ಚಿತ್ರದುರ್ಗದ ಶ್ರೀ. ಮಹದೇವಭಟ್ಟರ ದೂರದ ರಕ್ತ ಸಂಬಂಧಿ. ನಾವು ಹೊಳಲ್ಕೆರೆಯವರು. ನಮ್ಮ ದಾಯಾದಿಗಳಾದ ಶ್ರೀ. ಸೇತುರಾಮಯ್ಯನವರ ಸೋದರಿ ಶೀಮತಿ. ರಂಗಮ್ಮನವರನ್ನು ಶ್ರೀ. ಸಿ. ಮಹದೇವ್ ಭಟ್ಟರನ್ನು ವಿವಾಹವಾಗಿದ್ದಾರೆ. ಆ ದಂಪತಿಗಳು ಒಬ್ಬ ಮಗ ಲಂಡನ್ ನಗರದಲ್ಲಿ ಸುಪ್ರಸಿದ್ದ ಡಾ ಆಗಿ ಕೆಲಸ ಮಾಡುತ್ತಿದ್ದಾನೆ. (ಶ್ರೀ. ಭಾನುದೇವ ಭಟ್)ಈಗ ಮಹದೇವ್ ಭಟ್ ಇಲ್ಲ.

    ನಾನು, ನನ್ನ ಪತ್ನಿ, ಹೋದವಾರ ಬೆಂಗಳೂರಿಗೆ ಹೋದಾಗ ಅವರ ಮನೆಗೆ ಭೇಟಿಕೊಟ್ಟು. ಶ್ರೀಮತಿ ರಂಗಮ್ಮನವರನ್ನೂ ಅವರ ಸೊಸೆ ಚಿ.ಸೌ.ವಾರಿಜಾ ಭಟ್ ರವರನ್ನೂ ಶರ್ಮಣ್ಣ, ಶಾರದಮ್ಮರವರನ್ನು ಭೇಟಿಮಾಡಿ ಬಂದೆವು.

    ವಿಕಿಪೀಡಿಯ ದಲ್ಲಿ ಸಂಪಾದಕನಾಗಿ ಕೆಲಸಮಾಡುತ್ತಿರುವ ನಾನು ಸಹಜವಾಗಿ ಏಕೆ ಸನ್ಮಾನ್ಯ ಮಹದೇವ್ ಭಟ್ಟರ ಲೇಖನ ಪ್ರಕಟವಾಗಿಲ್ಲ ಎಂದು ಕೇಳಿದಾಗ ವಿಷಯ ತಿಳಿದು ನೋವಾಯಿತು.

    ರಂಗಮ್ಮ, ಮಹದೇವ್ ಭಟ್ (ಅವರೂ ಜೋಯಿಸರ ವಂಶದವರು)ಮತ್ತು ಪಟ್ಟಾಭಿ ಜೋಯಿಸ್ ಜೊತೆಜೊತೆಯಾಗಿ ಯೋಗಾಭ್ಯಾಸದ ಕಮ್ಮಟಗಳನ್ನು ನಡೆಸುತ್ತಾ ಬಂದಿರುವ ವಿಚಾರ ನನ್ನ ಬಳಿ ಹೇಳಿ ಬೇಸರಪಟ್ಟು ಕೊಂಡರು
    ಪ್ರಚಾರ ಪ್ರಿಯರಲ್ಲದ ಸರಳ ವ್ಯಕ್ತಿತ್ವದ ಶುದ್ಧ ಮನಸ್ಸಿನ ದೇವರಂತಹ ಮನುಷ್ಯರವರು ಅವರನ್ನು ನಿಮ್ಮ ಜೊತೆ ಸೇರಿಸಿಕೊಳ್ಳದೆ ಅವರ ಹೆಸರು ಎಲ್ಲೆಲ್ಲೂ ಬಾರದ ತರಹ ಮಾಡಿದ್ದೀರಿ.
    ಇಂಟರ್ನೆಟ್ ನಲ್ಲಿ ಎಲ್ಲಿನೋಡಿದರೂ ಪಟ್ಟಾಭಿ,ಬಿ.ಕೆ.ಎಸ್ ಐಯಂಗಾರ್ ಇದೆಯೇ ಹೊರತು ನಿಮ್ಮ ಆಪ್ತ ಗೆಳೆಯ ಮುಂಬಯಿ ನೇಪಿಯನ್ ಸೀ ಉಪನಗರವಾಸಿ ಭಟ್ಟರ ಹೆಸರೇ ಇಲ್ಲವಲ್ಲ ಸ್ವಾಮಿ ಇದು ನ್ಯಾಯವೇ ? ನಿಮ್ಮ ಎದೆ ತಟ್ಟಿಕೊಂಡು ಉತ್ತರಿಸಿ. ?

    ನನಗಂತೂ ಒಳ್ಳೆಯತನ, ಸ್ನೇಹ, ಪ್ರೀತಿ, ವಾತ್ಸಲ್ಯ ಮಾನವತೆಯ ಬಗ್ಗೆ ನಂಬಿಕೆ ಮಾಯವಾಗುತ್ತಿದೆ.

    ನಮಸ್ಕಾರ.

    H.R.Laxmivenkatesh,
    Ghatkopar west,
    Mumbai-400 084

    M: 9004356819
    M :9867606819

    ಉತ್ತರ
  4. ಜುಲೈ 5 2017

    I have saved the above feed back in my computer. thnaks Sharat.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments