ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2014

42

ಕಲ್ಬುರ್ಗಿ,ಕಲ್ಲು ಮತ್ತು Colonial Consciousness

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

consciousnessಬೆಂಗಳೂರಿನ ವಿಜ್ಞಾನ ಭವನದಲ್ಲಿ ಜೂನ್ ೯ರ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ವಯಸ್ಸಿನಲ್ಲಿ ಹಿರಿಯರಾದ (ಕೇವಲ ವಯಸ್ಸಿನಲ್ಲಷ್ಟೇ) ಪ್ರೊ.ಎಂ.ಎಂ. ಕಲ್ಬುರ್ಗಿಯವರು, ” ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು. ಅವುಗಳಿಗೆ ಕಾಯುವ ಶಕ್ತಿಯೂ ಇಲ್ಲ, ಕಾಡುವ ಶಕ್ತಿಯೂ ಇಲ್ಲ. ದೇವತೆ, ದೇವಾಲಯಗಳ ವಿರುದ್ಧ ಚಳವಳಿ ನಡೆಯಬೇಕು.” ಅಂತೆಲ್ಲ ಬಡಬಡಿಸಿ ಎಲ್ಲರಿಂದ ತಪರಾಕಿ ಹಾಕಿಸಿಕೊಂಡ ಮೇಲೆ “ನಾ ಹಂಗೇ ಹೇಳೇ ಇಲ್ಲಾರೀ, ನಾನು ಹಿಂದೂ ಇದ್ದೀನಿ, ನಾನ್ಯಾಕೇ ಮೂತ್ರ ಮಾಡಿ ಅಂತ ಹೇಳ್ತೀರ್ರೀ… ಅನಂತಮೂರ್ತಿ ಹಿಂಗ್ ಬರ್ದಾರಾ ಅಂತ ನಾನ್ ಸಭಿಯೋಳಗ ಹೇಳಿನ್ರೀ… ತಪ್ಪ್ ತಿಳಿ ಬ್ಯಾಡರ್ರೀ…” ಅಂತೆಲ್ಲ ಸೃಷ್ಟೀಕರಣ ಕೊಟ್ಟರು.

ನಿಜವಾಗಿ ಕಲ್ಬುರ್ಗಿಯವರ ಮನಸ್ಸಿನಲ್ಲಿದ್ದಿದ್ದು “ಮೂರ್ತಿ”ಗಳ ಮೇಲೆ ಮೂತ್ರ ಮಾಡಿದ ಹೊರೆ ಹೊರಿಸಿ ಅದರ ಜೊತೆಗೆ ಮೂರ್ತಿ ಪೂಜೆ ಮಾಡುವ ಜನರ “ಮೌಢ್ಯ” (ಅವರ ಮಂದ ಬುದ್ದಿಯ ಪ್ರಕಾರ) ನಿವಾರಿಸುವುದಾಗಿತ್ತು ಅನ್ನಿಸುತ್ತದೆ.ಕಲ್ಬುರ್ಗಿಯವರು ಹೀಗೆ ಹೇಳಿಕೆ ಕೊಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ (“ಮೂರ್ತಿ” ಮತ್ತು “ಮೌಢ್ಯ”) ಹೊಡೆಯುವ ಆಲೋಚನೆಯಲ್ಲಿದ್ದರೇನೋ.ಪಾಪ!

“ಮೂರ್ತಿ”ಗಳ ಮೇಲೆ ಕಲ್ಬುರ್ಗಿಯವರಿಗೆ ಈ ವಿಶೇಷ ಮಮತೆ ಯಾಕೆ? ಪ್ರಜಾವಾಣಿಯಲ್ಲಿ “ಮೂರ್ತಿ”ಗಳಿಗೆ ೧೦ ಲಕ್ಷ ಸರ್ಕಾರಿ ಕಾಣಿಕೆ ಕೊಟ್ಟದ್ದನ್ನು ವಿರೋಧಿಸಿ ಸೋತುಹೋಗಿದ್ದ ಕಲ್ಬುರ್ಗಿಗಳು,”ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ” ಅನ್ನುವ ಮೂಲಕ ಸೇಡು ತೀರಿಸಿಕೊಂಡರು, ಅನ್ನುವಲ್ಲಿಗೆ ಅವರ ಹೇಳಿಕೆಯ ಮೊದಲನೇ “ಹಕ್ಕಿ” ಯಾವುದೆಂದು ಹೊಳೆಯುತ್ತದೆ.

ಅಸಲಿಗೆ ತಪ್ಪೆಲ್ಲ ಆಯ್ಕೆ ಸಮಿತಿಯದ್ದು!
“ಪರಾವಲಂಬಿ ಜೀವಿ”ಗಳ ನಡುವೆ “ಪ್ರಶಸ್ತಿ/ಹಣ”ವನ್ನು ಸಮನಾಗಿ ಹಂಚಿದ್ದರೆ ಮೂತ್ರ,ಮೂರ್ತಿ ಇತ್ಯಾದಿ ವಿವಾದಗಳೇ ಆಗ್ತಿರ್ಲಿಲ್ಲ ಮಾರ್ರೆ. ಎಲ್ಲವನ್ನೂ ಒಬ್ಬರಿಗೆ ಕೊಟ್ಟರೆ.ಇನ್ನೊಬ್ಬರಿಗೆ (ತಮಗಾದ) ಅನ್ಯಾಯವನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ(!) ಇದ್ದೇ ಇರುತ್ತದಪ್ಪ… (ಸೂ : “ಪರಾವಲಂಬಿ ಜೀವಿ”ಗಳನ್ನು ಕೆಲವರು “ಬುದ್ಧಿಜೀವಿ”ಗಳು ಅನ್ನುತ್ತಾರೆ.ನಾನು ಇನ್ಮುಂದೆ ಪ್ರೀತಿಯಿಂದ “ಪರಾವಲಂಬಿ ಜೀವಿ” ಎನ್ನುತ್ತೇನೆ)

ಇನ್ನು ಅವರ ಹೇಳಿಕೆಯ ಎರಡನೇ ಹಕ್ಕಿಯಾದ “ಮೌಢ್ಯ”ವೆಲ್ಲಿದೆ ಅಂತ ಹುಡುಕುತ್ತ ಹೊರಟರೆ ಅದು ಹೋಗಿ ನಿಲ್ಲುವುದು ಕಲ್ಬುರ್ಗಿಯವರ ಮೆದುಳಿನಲ್ಲೇ! ಈ ರೀತಿಯ ಮೆದುಳು ಕೇವಲ ಅವರೊಬ್ಬರದೇ ಅಲ್ಲ ನಮ್ಮ ಬಹುತೇಕ “ಚಿಂತಕ”ರದ್ದೂ ಹೌದು. (ಮೆದುಳು ಅಂದರೆ ಅವರ “ಚಿಂತನಾ ವಿಧಾನ” ಅಂತ ಓದಿಕೊಳ್ಳಿ). ನಮ್ಮ ಚಿಂತಕರ ಮೆದುಳು ಒಂದು ಖಾಯಿಲೆಯಿಂದ ನರಳುತ್ತಿದೆ.ಅದಕ್ಕೆ “Colonial Consciousness” ಎಂದು ಹೆಸರು.ಅದರಲ್ಲಿ ಹಲವರು ಖಾಯಿಲೆಯ ಎರಡನೇ ಹಂತವಾದ “Colonial Sub-Consciousness ” ಅನ್ನೂ ಕೂಡ ತಲುಪಿರಬಹುದು ಅನ್ನುವುದು ನನ್ನ ಕಿಡಿಗೇಡಿ ಊಹೆ! ಹಾಸ್ಯ ಪಕ್ಕಕ್ಕಿರಲಿ. ಏನಿದು “Colonial Consciousness”? ಕನ್ನಡಲ್ಲಿ ಇದನ್ನು “ವಸಹಾತುಶಾಹಿ ಪ್ರಜ್ಞೆ” ಎಂದು ಅನುವಾದಿಸಬಹುದು.

“Colonial Consciousness” ಅನ್ನು ಸುಲಭವಾಗಿ ವಿವರಿಸಲು ಪ್ರಯತ್ನಿಸುವುದಾದರೆ ; ವಸಾಹತು ಕಾಲದಲ್ಲಿ ಭಾರತವನ್ನು ಆಕ್ರಮಿಸಿಕೊಂಡ ಯುರೋಪಿಯನ್ನರಿಗೆ ಇಲ್ಲಿನ ಸಮಾಜವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ.ಕಡೆಗೆ ಅವರ ಸಹಾಯಕ್ಕೆ ಬಂದಿದ್ದು ಯುರೋಪಿನಿಂದ ತಂದ ಸಮಾಜ ವಿಜ್ಞಾನದ ಕನ್ನಡಕ…! ಅದನ್ನೇ ಧರಿಸಿಕೊಂಡು ಭಾರತೀಯ ಸಮಾಜವನ್ನು ಅವರು ನೋಡಿದಾಗ ಸಹಜವಾಗಿಯೇ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಗೆ ಮತ್ತು ಅಂದಿನ ಕ್ರಿಶ್ಚಿಯನ್ ಥಿಯಾಲಜಿಗೆ ಸಮೀಕರಿಸುತ್ತ ಇಲ್ಲಿನ ಸಾಮಾಜಿಕ ಕಟ್ಟುಪಾಡುಗಳನ್ನು Define ಮಾಡಿ ತಮ್ಮ ಯುರೋಪಿಯನ್ ಕನ್ನಡಕವನ್ನು ಭಾರತೀಯರಿಗೆ ತೊಡಿಸಿದರು.ಆಗಿನ ಕಾಲದ ಭಾರತೀಯ ಜೀವಿಗಳು ಅದೇ ಯುರೋಪಿಯನ್ ಕನ್ನಡಕದಿಂದಲೇ ಭಾರತವನ್ನು ಗುರುತಿಸುತ್ತ, ಕಡೆಗೆ ಆ ಕನ್ನಡಕ ಮುಂದಿನ ಪೀಳಿಗೆ ಬರುವಷ್ಟರಲ್ಲಿ ‘In-Built’ ಅನ್ನುವಷ್ಟರ ಮಟ್ಟಿಗೆ ನಿಂತುಬಿಟ್ಟಿತು.ಈಗ ಆ ‘In-Built’ ಯುರೋಪಿಯನ್ ಸಮಾಜ ವಿಜ್ಞಾನದ ಕನ್ನಡಕವನ್ನು ಧರಿಸಿ ಭಾರತವನ್ನು ನೋಡಲು ಕಲಿತಿರುವುದನ್ನು “Colonial Consciousness” ಎನ್ನಬಹುದು.

ಗಂಭೀರ ದನಿಯಲ್ಲಿ ಹೇಳುವುದಾದರೆ,ಈ “Colonial Consciousness” ಎಂಬುದು ನಾವು ಬದುಕುತ್ತಿರುವ ಪರಿಸರವನ್ನು ನಾವು ನಮ್ಮದೇ ಅನುಭವಗಳ ಮೂಲಕ ನೋಡಲು ನಮಗೆ ಬಿಡುತ್ತಿಲ್ಲ ಎನ್ನಬಹುದು.

ಇದು “Colonial Consciousness” ಹೇಗೆಲ್ಲ ಮಾತನಾಡಿಸುತ್ತದೆ ಎನ್ನುವ ಉದಾಹರಣೆಯನ್ನು ಕಲ್ಬುರ್ಗಿಯವರ ಅವತ್ತಿನ ಭಾಷಣದ ಈ ಮಾತುಗಳನ್ನು ನೋಡಿದರೆ ತಿಳಿಯುತ್ತದೆ “ಕ್ರೈಸ್ತರು, ಮುಸಲ್ಮಾನರು, ಬೌದ್ಧರೂ ಹೀಗೆ ಎಲ್ಲ ಜಾತಿ ಧರ್ಮದವರು ಭಾರತ ದೇಶವನ್ನು ಆಳಿ ಅವರವರ ನಂಬಿಕೆಗಳನ್ನು ಬಿತ್ತಿದ ಪರಿಣಾಮ ಇಂದು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೂಢನಂಬಿಕೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಡವರು ವಾಸಿಸುವ ಕಡೆ ಮೂಢನಂಬಿಕೆಗಳು ಹೆಚ್ಚಾಗಿದ್ದು ಶಿಕ್ಷಣ ದೂರವಾದ್ದರಿಂದ ಇಂದು ಮೂಢನಂಬಿಕೆ ದೊಡ್ಡ ಮಟ್ಟದಲ್ಲಿ ಬೇರುಬಿಟ್ಟಿದೆ.

“Colonial Consciousness” ನ ಮೊದಲ Effect ಎಂದರೆ, ಸೆಮೆಟಿಕ್ ರಿಲಿಜನ್ನುಗಳಾದ ಜೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳ ಜೊತೆಗೆ ಬೌದ್ಧ,ಜೈನ,ಹಿಂದೂ(ಯಿಸಂ) ಅನ್ನು ಸಮೀಕರಿಸುವುದು.ಎರಡನೆಯದು ನಮ್ಮನ್ನಾಳಿದ ಮುಸ್ಲಿಂ ಮತ್ತು ಯುರೋಪಿನವರು ಹೇಳಿಕೊಟ್ಟಂತಹ ಗಿಳಿ ಪಾಠವಾದ ಮೂರ್ತಿ ಪೂಜೆ ಕೆಟ್ಟದ್ದು ಇತ್ಯಾದಿ ಎನ್ನುವ ವರಾತಗಳು ಶುರುವಾಗುತ್ತವೆ.

ನಮ್ಮ ಚಿಂತಕರು ನಮ್ಮ ಸಮಾಜವನ್ನು ನೋಡುತ್ತಿರುವುದು ಯುರೋಪಿಯನ್ನರು ತೊಡಿಸಿ ಹೋಗಿರುವ ಸಮಾಜ ವಿಜ್ಞಾನದ ಕನ್ನಡಕದಿಂದ.ಆ ಕನ್ನಡಕದ ಮೂಲಕ ನೋಡಿದಾಗಲೇ ಈ ಮಹಾಶಯರುಗಳಿಗೆ ಮೂರ್ತಿಪೂಜೆಯೆನ್ನುವುದು “ತಪ್ಪು” ಎನ್ನಿಸುತ್ತದೆ. ಈ ಬಗ್ಗೆ ಬೆಲ್ಜಿಯಂ ಗೆಂಟ್ ಯುನಿವರ್ಸಿಟಿಯ ಪ್ರೊ.ಬಾಲಗಂಗಾಧರ ಅವರು ಬರೆದಿರುವ ಕೆಲವು ಲೇಖನಗಳನ್ನು, ಪ್ರೊ.ರಾಜರಾಮ್ ಹೆಗಡೆ,ಪ್ರೊ.ಜೆ ಸದಾನಂದ,ಪ್ರೊ.ಷಣ್ಮುಖ ಮತ್ತಿತರು ಕನ್ನಡಕ್ಕೆ ಅನುವಾದಿಸಿ “ಪೂರ್ವಾವಲೋಕನ” ಅನ್ನುವ ಪುಸ್ತಕ ರೂಪದಲ್ಲಿ ತಂದಿದ್ದಾರೆ. ಆ ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಇಲ್ಲಿ Quoteಮಾಡುವುದು ಸೂಕ್ತವೆನಿಸಿತು.

ಜೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳ ಜೊತೆಗೆ ಬೌದ್ಧ,ಜೈನ,ಹಿಂದೂ(ಯಿಸಂ) ಅನ್ನು ಸಮೀಕರಿಸುವುದರ ಬಗ್ಗೆ ಹೀಗೆ ಬರೆಯುತ್ತಾರೆ :“…ಯಾರಾದರು ‘ಹಿಂದೂಯಿಸಂ ಎಂದರೇನು?’ ಎಂದು ಕೇಳಿದರೆ ಅಂಥದೊಂದು ವಸ್ತುವು ಪಾಶ್ಚಾತ್ಯ ಗ್ರಂಥಾಲಯಗಳಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲಿಯೂ ಇಲ್ಲವೆಂದು ಹೇಳಿ. ನಿಮ್ಮನ್ನು ನೀವು ಹಿಂದೂ ಎಂದು ಕರೆದುಕೊಳ್ಳುವದು ಒಂದು ಸಂಪ್ರದಾಯವೇ ಹೊರತು ಬೇರೇನೂ ಅಲ್ಲ ಎಂಬುದಾಗಿಯೂ ಹೇಳಿ. “ನೀವು ನಿಮ್ಮ ತಂದೆಯವರನ್ನು ನಂಬಿದ್ದಿರಿ, ಅವರು ತಮ್ಮ ಪೂರ್ವಿಕರಲ್ಲಿ ನಂಬಿಕೆಯನ್ನು ಇರಿಸಿದ್ದರು ಮತ್ತು ಆ ಪೂರ್ವಿಕರು ಇಂಥವುಗಳನ್ನು ಮುಂದುವರೆಸಿಕೊಂಡು ಹೋಗಲು ಸದಾ ಅನುಗ್ರಹಿಸಿದ್ದಾರೆ” ಎಂಬುದಾಗಿಯೂ ತಿಳಿಸಿ. ಅವರಿಗೆ ಮತ್ತೂ ಹೇಳಿ: ನಿಮ್ಮ ಪೂರ್ವಿಕರ ಸಂಪ್ರದಾಯಗಳನ್ನು ಜೀವಂತವಾಗಿರಿಸಿಕೊಳ್ಳಲು ನಿಮಗೆ ಯಾವುದೇ ರೀತಿಯ ಕಾರಣಗಳು ಬೇಕಿಲ್ಲ ಹಾಗು ಸಂಪ್ರದಾಯವನ್ನು ಆಚರಿಸುವುದಕ್ಕೆ ಇರುವ ಒಂದೇ ಒಂದು ಕಾರಣವೆಂದರೆ ನಾವು ಏನನ್ನು ಆಚರಿಸುತ್ತಿದ್ದೇವೆಯೋ ಅದೇ ಸಂಪ್ರದಾಯವಾಗಿದೆ, ಮತ್ತು ‘ಹಿಂದೂ’ ಎಂಬುದರ ಅರ್ಥವೂ ಅದೇ ಆಗಿದೆ.“

ಸೆಮೆಟಿಕ್ ರಿಲಿಜನ್ನಿನ ಕಟ್ಟುಪಾಡುಗಳೊಂದಿಗೆ ಹಿಂದೂ ಎಂದು ಗುರುತಿಸಲ್ಪಡುವ ಸಾಂಪ್ರಾದಾಯಿಕ ಸಮುದಾಯವನ್ನು ಸಮೀಕರಿಸುವ ಮೊದಲಿಗೆ ನಾವು “ಸಂಪ್ರದಾಯ” ಎಂದರೇನು ಅನ್ನುವುದನ್ನು ಅರಿಯುವುದು ಒಳ್ಳೆಯದು.ಸಂಪ್ರದಾಯಗಳು ಪರಂಪರಾಗತವಾಗಿ ನಾವು ನಡೆಸಿಕೊಂಡು ಬರುತ್ತಿರುವ ಆಚರಣೆಗಳು.ಅವುಗಳನ್ನು ಯಾವುದೋ ಪುಸ್ತಕ ರೂಪದಲ್ಲಿ ಹೀಗೆಯೇ ಮಾಡಬೇಕು,ಇಷ್ಟೇ ಮಾಡಬೇಕು ಅಂತೆಲ್ಲ ಬರೆದಿರುವುದಿಲ್ಲ.ಮುತ್ತಜ್ಜನಿಂದ- ಅಜ್ಜನಿಗೆ,ಅಜ್ಜನಿಂದ-ಅಪ್ಪನಿಗೆ,ಅಪ್ಪನಿಂದ-ಮಕ್ಕಳಿಗೆ ಬರುವಾಗಲೂ ಆ ಆಚರಣೆಗಳಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾವಣೆಗಳಾಗಿರುತ್ತವೆ.ಹಾಗೆ ಬದಲಾವಣೆಗಳಾದಾಗಲೂ ಅದು ಸಂಪ್ರದಾಯ ಬದ್ಧವಾಗಿಯೇ ಇರುತ್ತದೆ. ಆದರೆ ಇದೇ ಮಾತು “ರಿಲಿಜನ್ನು”ಗಳ ವಿಷಯದಲ್ಲಿ ನಿಜವಾಗುವುದಿಲ್ಲ.ಅವರ ನಡಾವಳಿಗಳೆಲ್ಲವೂ ಅವರ ರಿಲಿಜನ್ನಿನ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟಿದೆ.ಅವನ್ನು ಮೀರುವುದನ್ನೂ ಆಯಾ ರಿಲಿಜನ್ನುಗಳು ಒಪ್ಪುವುದಿಲ್ಲ.

ಮೂರ್ತಿ ಪೂಜೆಯ ಬಗ್ಗೆ :”…ಒಬ್ಬನು ಕ್ರಿಶ್ಚಿಯನ್, ಯೆಹೂದಿ ಅಥವಾ ಮುಸ್ಲಿಮನಾಗಿದ್ದರೆ ಅವನು ಮೂರ್ತಿಗಳನ್ನು worship ಮಾಡಿದರೆ ಡೆವಿಲ್ಲ ಅಥವಾ ಸೈತಾನನನ್ನು worship ಮಾಡಿದಂತೇ ಎಂಬುದಾಗಿ ನಂಬುತ್ತಾನೆ. ಅವರ ಬೈಬಲ್ಲಿನ ಸತ್ಯದೇವನು ಹೇಳಿದ ಪ್ರಕಾರ ಡೆವಿಲ್ಲನನ್ನು worship ಮಾಡಿದವರು ನರಕದಲ್ಲಿಯೇ ಶಾಶ್ವತವಾಗಿ ಕೊಳೆಯುತ್ತಾರೆ. ಇದನ್ನು ಯಾರು ನಂಬಿರುತ್ತಾರೊ ಅವರು ನರಕದಲ್ಲಿ ಕೊಳೆಯುವ ಹೆದರಿಕೆಯಿಂದ ಗಣೇಶನ ಪೂಜೆಯನ್ನು ಮಾಡದಿದ್ದರೆ ಅದಕ್ಕೊಂದು ಕಾರಣವಿದೆ. ಈ ರಿಲಿಜನ್ನುಗಳ ಪ್ರಕಾರ ಗಾಡ್ idolatry ಯನ್ನು ನಿಷೇಧಿಸಿದ್ದಾನೆ ಹಾಗೂ ಅದನ್ನು ಆಚರಿಸುವವರಿಗೆ ನರಕದಲ್ಲಿ ಅತ್ಯಂತ ಕ್ರೂರವಾದ ಶಿಕ್ಷೆಯನ್ನು ವಿಧಿಸುತ್ತಾನೆ, ಹಾಗಾಗಿ ಅದೊಂದು sin ಆಗಿದೆ. ಹಾಗಾಗಿ ಅವರು idolatry ಒಂದು ಮಹಾಪಾಪವೆಂದು ನಮಗೆ ಹೇಳಿದರೆ ನಮಗೆ ಅರ್ಥವಾಗುತ್ತದೆ. ಆದರೆ ನಾವು ನಮ್ಮ ‘ಮೂರ್ತಿಪೂಜೆ’ಯನ್ನು ಬಿಟ್ಟುಬಿಡಲು ಇದು ಕಾರಣವೇ ಅಲ್ಲ. ಗಣೇಶನ ಪೂಜೆಯನ್ನು ಮಾಡುವುದು ನಮ್ಮ ಸಂಪ್ರದಾಯದ ಒಂದು ಭಾಗ. ಹಾಗಾಗಿ ನಾವು ಅದನ್ನು ಮಾಡದಿರಲಿಕ್ಕೆ ನಮಗೆ ಯಾವ ಕಾರಣವೂ ಇಲ್ಲ.”

ಮೂರ್ತಿ ಪೂಜೆ ಇತ್ಯಾದಿಗಳೆಲ್ಲ ನಮ್ಮ ಸಂಪ್ರದಾಯದಗಳು ಹಾಗಾಗಿ ಆಚರಿಸುತ್ತೇವೆ ಅಂತೇನಾದರೂ ನಾವು ಈ ಜನರಿಗೆ ಉತ್ತರ ಕೊಟ್ಟರೆ,ನಮಗೆ ಬರಬಹುದಾದ ಮುಂದಿನ ಪ್ರಶ್ನೆ,ಸಂಪ್ರದಾಯವನ್ನು ಏಕೆ ಆಚರಿಸಬೇಕು? : ನಾವು ಹೀಗೆ ಉತ್ತರಿಸಬಹುದೇ – “ಒಂದು ಆಚರಣೆ ಅಸ್ತಿತ್ವದಲ್ಲಿರಲಿಕ್ಕೆ ಪ್ರತ್ಯೇಕ ‘ಕಾರಣ’ ಅಥವಾ ‘ಸಮರ್ಥನೆ’ಗಳು ಬೇಕಿಲ್ಲ.ಬದುಕುವುದನ್ನು ಮುಂದುವರಿಸಲಿಕ್ಕೆ ಹೇಗೆ ಒಬ್ಬನಿಗೆ ಕಾರಣಗಳು ಬೇಕಿಲ್ಲವೊ ಅದೇ ರೀತಿಯಲ್ಲಿ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಲಿಕ್ಕೂ ಆತನಿಗೆ ಕಾರಣಗಳು ಬೇಕಿಲ್ಲ. ಉದಾ: ‘ಗಣೇಶ ಪೂಜೆಯನ್ನು ಏಕೆ ಮಾಡಬೇಕು?’ ಎಂಬ ಪ್ರಶ್ನೆಗೆ ಉತ್ತರವೆಂದರೆ, “ ಏಕೆಂದರೆ ಈ ಪೂಜೆಯನ್ನು ಮಾಡಲಿಕ್ಕೆ ಕಲಿಸಿದ್ದಾರೆ”. ‘ ಹಣೆಗೆ ಕುಂಕುಮವನ್ನು ಏಕೆ ಇಡಬೇಕು?’: “ಏಕೆಂದರೆ ಅದು ನಮ್ಮ ಆಚರಣೆ”. ಇನ್ನೂ ಹೆಚ್ಚಿಗೆಯೇನನ್ನೂ ಹೇಳುವ ಅಗತ್ಯವಿಲ್ಲ.”

ಸೆಮೆಟಿಕ್ ರಿಲಿಜನ್ನುಗಳ ಮತ್ತು ಯುರೋಪ್ ಸಮಾಜ ವಿಜ್ಞಾನದ ಕಣ್ಣುಗಳಿಂದ ನಮ್ಮ ಸಂಪ್ರದಾಯ,ಆಚರಣೆಗಳ ಕುರಿತ ಪ್ರಶ್ನೆಗಳನ್ನು ನಾವು ನಿಜವಾಗಿ ಎದುರಿಸ ಬೇಕಿರುವ ರೀತಿ ಮೇಲೆ ಉಲ್ಲೇಖಿಸಿದ ಧಾಟಿಯಲ್ಲಿರಬೇಕೆ ಹೊರತು,ನಾವು ಹಿಂದಿನವರೂ ಮಾಡುತಿದ್ದಕ್ಕೆಲ್ಲಕ್ಕೂ ವೈಜ್ಞಾನಿಕ ಕಾರಣಗಳಿದ್ದವು ಎನ್ನುವ ದಾಟಿಯಲ್ಲಿರಬಾರದು ಅನ್ನುವುದು ನನ್ನ ಅನಿಸಿಕೆ.ಅಷ್ಟಕ್ಕೂ, ಅದೇಕೆ ಎಲ್ಲಾ ಆಚರಣೆಗಳ ಹಿಂದೆ ನಾವು ’ವೈಜ್ಞಾನಿಕ ಕಾರಣ’ಗಳನ್ನೇ ಹುಡುಕಬೇಕು? ಬೇರೆ ಕಾರಣಗಳು ಇರಲಾರದೇ ಅಥವಾ ಕಾರಣಗಳಾದರೂ ಇರಲೇಬೇಕೇ?

ಒಂದು ರಿಲಿಜನ್ನು ಇಲ್ಲದೆಯೇ ಬದುಕಬಹುದು ಅನ್ನುವುದನ್ನೂ ನಾವು ನಮ್ಮ ಮೂಲಕ ಅವರಿಗೆ ಮನವರಿಕೆ ಮಾಡಿಕೊಡಬೇಕೆ ಹೊರತು, ಅವರ ಜೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳ ಟೀಕೆಗೆ ಪ್ರತಿಯಾಗಿ ನಾವೂಗಳೂ ಸಹ, ನಮ್ಮ “ಪವಿತ್ರಗ್ರಂಥಗಳು”, “ಸತ್ಯದೇವ”, “ ಹತ್ತು ದೈವಾಜ್ಞೆಗಳು” “ ಹಿಂದೂಯಿಸಂ ಎಂಬ ರಿಲಿಜನ್ನು” ಎಂದೆಲ್ಲ ಉತ್ತರಿಸುತ್ತಹೋದರೆ ನಮಗರಿವಿಲ್ಲದೆಯೇ ನಾವು ಅವರದೇ ಕೆಲಸವನ್ನೇ ಮಾಡಿದಂತಾಗುವುದಿಲ್ಲವೇ? ಉದಾಹರಣೆಗೆ : ಕಲ್ಬುರ್ಗಿಯವರ ಹೇಳಿಕೆಗೆ ಕನ್ನಡ ಪ್ರಭದಲ್ಲಿ ಪ್ರತಿಕ್ರಿಯಿಸಿರುವ ಡಾ.ಚಿದಾನಂದ ಮೂರ್ತಿಗಳು, ಕ್ರಿಶ್ಚಿಯನ್ನರಿಗೆ ಜೆರುಸಲೇಂ, ಮುಸ್ಲಿಂರಿಗೆ ಮಕ್ಕಾವಿದ್ದಂತೆ ಹಿಂದೂಗಳಿಗೆ ವಾರಣಾಸಿ ಹಾಗೆ ಅನ್ನುವ ಅರ್ಥದಲ್ಲಿ ಮಾತನಾಡಿಸುವುದೂ ಸಹ “Colonial Consciousness”

“ನಮಗೆ “ನಮ್ಮದೇ” ಆದ ಒಂದು “ರಿಲಿಜನ್ನಿನ” ಅವಶ್ಯಕತೆಯಿಲ್ಲ; ನಾವು ಯಾರೆಂಬುದನ್ನು ಕಂಡುಹಿಡಿಯಲು ನಮಗೆ “ಹಿಂದೂಯಿಸಂ” ಎಂಬ ರಿಲಿಜನ್ನಿನ ಅವಶ್ಯಕತೆಯಿಲ್ಲ. ಒಮ್ಮೆ ನಮ್ಮ ಸಂಸ್ಕೃತಿಯನ್ನು ಈ ರೀತಿಯಲ್ಲೇ ಬದಲಾಯಿಸಬೇಕು ಎಂದಾದಲ್ಲಿ ಎಲ್ಲಾ ಭಾರತೀಯರು ಹಾಗೂ ನಿಮ್ಮೆಲ್ಲಾ ಪೂರ್ವಜರು ಮೆಕಾಲೆ ವರ್ಣಿಸಿದ ರೀತಿಯಲ್ಲೇ ಧಡ್ಡಶಿಖಾಮಣಿಗಳಾಗುವುದರಲ್ಲಿ ಸಂದೇಹವಿಲ್ಲ” ಎನ್ನುತ್ತಾರೆ ಪ್ರೊ.ಬಾಲು

ಈ ಕಲ್ಬುರ್ಗಿ,ಮೂರ್ತಿಯಂತ ವಯಸ್ಸಿನ ಹಿರಿಯರು ಅವರ ಬಾಯಿಗೆ ಬಂದ ಹಾಗೆ ಮಾತಾನಾಡಿಕೊಳ್ಳುವುದಾದರೆ ಮಾತನಾಡಿಕೊಳ್ಳಲಿ.ಆದರೆ ಕನಿಷ್ಟ ನಮ್ಮ ಮುಂದಿನ ಪೀಳಿಗೆಗೆ ನಾವು ಈ ಹಳೆತಲೆಗಳು ಮೂರ್ತಿಪೂಜೆಯನ್ನೂ,ನಮ್ಮ ಆಚರಣೆಗಳನ್ನೂ ಏಕೆ ವಿರೋಧಿಸುತ್ತಾರೆ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿಕೊಟ್ಟು “Colonial Consciousness” ನಿಂದ ಹೊರಬರುವ ಮಾರ್ಗವನ್ನು ತಿಳಿಸಬೇಕಾದದ್ದು ಈ ಕ್ಷಣದ ತುರ್ತುಗಳಲ್ಲೊಂದು.

ಈ ಸತ್ಯವನ್ನು ನಮ್ಮ ಹಿರಿಯರು (ಅಂದರೆ,ಹಿಂದೂಗಳೆಂದು ಹೇಳಿಕೊಳ್ಳಲು ಹಿಂಜರಿಯದ ಮತ್ತು “ಸೆಕ್ಯುಲರ್” ಅಲ್ಲದ) ಆದಷ್ಟು ಬೇಗ ಅರಿತುಕೊಂಡರೆ,ಕಿರಿಯರಿಗೆ ನಮ್ಮ ಸಮಾಜವನ್ನು ನೋಡಲು ತೊಡಕಾಗುತ್ತಿರುವ “Colonial Consciousness” ಅನ್ನು ನಿವಾರಿಸಬಹುದು.ಹಾಗೆ ಮಾಡುವ ಮೊದಲಿಗೆ ಮೊದಲಿಗೆ ಆ ಹಿರಿಯರು ಸಹ “Colonial Consciousness”ನಿಂದ ಹೊರಬರಬೇಕಿದೆ.

ಚಿತ್ರಕೃಪೆ : http://www.thewitnesswithin.com

42 ಟಿಪ್ಪಣಿಗಳು Post a comment
 1. Anil Pyati
  ಜೂನ್ 19 2014

  ಮಿ ರಾಕೇಶ್ ಅವರೆ ತುಂಬ ಅರ್ಥಪೂರ್ಣವಾದ ಹಾಗೂ ಅಪಾರ ಒಳನೋಟಗಳನ್ನಿಟ್ಟುಕೊಂಡು ಈ ಲೇಖನ ಬರೆದಿದ್ದಿರಿ. ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು. ಒಂದು ಪ್ರಶ್ನೆ, ಹಿಂದು ಸಂಪ್ರದಾಯದ ಪ್ರತಿಯೊಂದು ಆಚರಣೆಗಳನ್ನು ವೈಜ್ಞಾನಿಕ ನಿಯಮಗಳೊಂದಿಗೆ ಸಮಿಕರಿಸಿ ಅದರ ಅರ್ಥಾನರ್ಥಗಳನ್ನು ವಿಷ್ಲೇಶಿಸುವ ನಮ್ಮ ಪರಾವಲಂಬಿ ಜೀವಿಗಳು ಯಾವ ಯುರೋಪಿಯನ್ ಮನೊಧರ್ಮವನ್ನು ಅಳವಡಿಸಿಕೊಂಡಿದ್ದಾರೋ ಅದೆ ಯುರೋಪಿಯನ್ನರು ಬೈಬಲ್ಲಿನ ಉಕ್ತಿಗೆ ವ್ಯತಿರಿಕ್ತವಾಗಿ ಗೆಲಿಲಿಯೋ ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂದು ವೈಜ್ಞಾನಿಕವಾಗಿ ಸಾಧಿಸಿದಾಗ ಅದು ಕೇವಲ ತಮ್ಮ ಧರ್ಮಗ್ರಂಥದ ಅವಹೇಳನ ಎಂದು ಆರೋಪ ಹೊರಿಸಿ ಜೈಲಿಗಟ್ಟಿದ್ದು ಈ ಲದ್ದಿ ಜೀವಿಗಳಿಗೆ ಗೊತ್ತಿದೆಯೋ ಗೊತ್ತಿಲ್ಲವೊ ನನಗಂತು ಗೊತ್ತಿಲ್ಲ. ಅಂಥ ಸಂಕುಚಿತ ಜನಾಂಗದವರು ಬಿತ್ತಿದ ಸುಳ್ಳನ್ನೆ ಸತ್ಯವೆಂದು ಪ್ರಮಾಣಿಕರಿಸಿ ಅವರನ್ನು ಹೆಮ್ಮೆಯಿಂದ ಹಿಂಬಾಲಿಸುತ್ತಿರುವ ನಮ್ಮ ಪರಾವಲಂಬಿಗಳಿಗೆ ಏನು ಹೇಳಬೇಕು??

  ಉತ್ತರ
 2. Dunkin Jalki
  ಜೂನ್ 19 2014

  ಚೆನ್ನಾಗಿದೆ ಲೇಖನ.

  ಉತ್ತರ
 3. Nagshetty Shetkar
  ಜೂನ್ 22 2014

  ಕನ್ನಡ ನಾಡಿನ ಪ್ರಗತಿಪರ ಚಿಂತಕರೆಲ್ಲ ಒಂದಾಗಿ ಮೋದಿ ಸರಕಾರವನ್ನು ನೈತಿಕವಾಗಿ ವಿರೋಧಿಸಬೇಕಾಗಿರುವ ಈ ಸಂದರ್ಭದಲ್ಲಿ ಪರಸ್ಪರ ಕೆಸರು ಎರಚುತ್ತಾ ಸಮಯ ನಷ್ಟ ಮಾಡುತ್ತಿರುವುದು ಖೇದನೀಯ. ಕಲಬುರ್ಗಿ-ಮೂರ್ತಿ ಪ್ರಕರಣದಿಂದ ಲಾಭವನ್ನು ಬಲಪಂಥೀಯರು ಪಡೆಯುತ್ತಿದ್ದಾರೆ. ಇದಕ್ಕೆ ನಿಲುಮೆಯ ಶೆಟ್ಟರ ಲೇಖನವೇ ಒಂದು ನಿದರ್ಶನ.

  ಉತ್ತರ
  • ಮಾರ್ಕ್ಸ್ ಮಂಜು
   ಜೂನ್ 23 2014

   You are right Mr.Nagshetty Shetkar all Secular forces should unite.Some one has to take lead for this

   ಉತ್ತರ
   • Nagshetty Shetkar
    ಜೂನ್ 23 2014

    ಮಾರ್ಕ್ಸ್ ಮಂಜು ಅವರೇ, ನೀವು ಹೇಳುತ್ತಿರುವುದು ಸರಿಯಾಗಿದೆ. ಮೋದಿ ಪ್ರಣೀತ ಬಲಪಂಥೀಯ ರಾಜಕಾರಣವನ್ನು ನಾಡಿನ ಸೆಕ್ಯೂಲರ್ ಪ್ರಜ್ಞಾವಂತ ಸಮುದಾಯವು ಪ್ರಜಾಸತ್ತಾತ್ಮಕವಾಗಿ ವಿರೋಧಿಸಬೇಕಾಗಿದೆ. ನಮ್ಮ ಸಮುದಾಯದ ನಾಯಕತ್ವವನ್ನು ವಹಿಸಲು ದರ್ಗಾ ಸರ್ಅವರಿಗಿಂತ ಹೆಚ್ಚು ಸಮರ್ಥರೂ ಯೋಗ್ಯರೂ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ. ಬ್ರಾಹ್ಮಣ್ಯವನ್ನು ವಿರೋಧಿಸಲು ವಚನಕಾರರ ಆದರ್ಶಗಳನ್ನೂ ಮಾರ್ಕ್ಸನ ತತ್ವಗಳನ್ನೂ ದರ್ಗಾ ಸರ್ ಅವರಿಗಿಂತ ಪರಿಣಾಮಕಾರಿಯಾಗಿ ಇದುವರೆಗೆ ಯಾರೂ ಬಳಸಿಲ್ಲ. ಮೋದಿ ಕೂಡ ಬ್ರಾಹ್ಮಣ್ಯದ ಒಂದು ಮುಖವೇ ಆಗಿರುವುದರಿಂದ ದರ್ಗಾ ಸರ್ ಅವರು ಮೋದಿಯನ್ನು ನ್ಯೂಟ್ರಲೈಸ್ ಮಾಡಬಲ್ಲರು ಎಂದು ನಾವುಗಳು ಆಶಿಸಬಹುದು. ದರ್ಗಾ ಸರ್ ಅವರಿಗೆ ನಾಡಿನ ಪ್ರಗತಿಪರರೆಲ್ಲರೂ ಬೆಂಬಲ ಕೊಡತಕ್ಕದ್ದು.

    ಉತ್ತರ
    • Naani
     ಜೂನ್ 24 2014

     ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ………………
     ತಡೆಯೋಕ್ಕಾಗ್ತಿಲ್ಲಪ್ಪಾ :-0 ………

     ಉತ್ತರ
     • Naani
      ಜೂನ್ 24 2014

      ಶೆಟ್ಕರ್ ಈ ಪೋಸ್ಟನ್ನು ದರ್ಗಾರ ಫೇಸ್ಬುಕ್ಕಿ ಲಿಂಕ್ ಮಾಡ್ರಪ್ಪ…. ಶಿಷ್ಯನ ಈ ಕ್ಯಾತೆಗಳನ್ನು ನೋಡಿ ಗುರುವೇ ಶಿಷ್ಯನ ಕಾಲಿಗೆ ಧೀರ್ಘದಂಡ ನಮಸ್ಕಾರ ಹಾಕಲಿ 🙂

      ಉತ್ತರ
      • ಮಾರ್ಕ್ಸ್ ಮಂಜು
       ಜೂನ್ 24 2014

       What is so funny Mr.Naani? I appreciate Mr.Nagshetty Shetkar for his positive attitude in a negative envmnt of Namosura. he is really thinking in a way how secular forces should think now.

       Mr.Nagshetty Shetkar you have striked it right,its hight time that this movement should start

       ಉತ್ತರ
       • Naani
        ಜೂನ್ 24 2014

        ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹಹ್ಹ್ಹ ಹ್ಹ್ಹ್ಹಹ್ಹ ………………
        ತಡೆಯೋಕ್ಕಾಗ್ತಿಲ್ಲಪ್ಪಾ 🙂

        ಉತ್ತರ
      • ಮಾರ್ಕ್ಸ್ ಮಂಜು
       ಜೂನ್ 26 2014

       Timely Article I would say

       ಉತ್ತರ
       • ಶೆಟ್ಕರ್ ಸಾಹೇಬರು ಈ ಮಾರ್ಕ್ಸ್ ಮಂಜು ಅವರನ್ನು ಕರ್ಕೊಂಡು ಆದಷ್ಟು ಬೇಗ ಅವರ ಗುರುಗಳ ನೇತೃತ್ವದಲ್ಲಿ ಕ್ರಾಂತಿ ಮಾಡಲಿ ಎಂದು ಹಾರೈಸುತ್ತೇನೆ

        ಉತ್ತರ
        • ವಿಜಯ್ ಪೈ
         ಜುಲೈ 1 2014

         ತಮ್ಮ ಗಂಜಿಕೇಂದ್ರ ಹೇಗಾದರೂ ಉಳಿದರೆ ಸಾಕು ಎಂಬ ಆಸೆ, ಕನವರಿಕೆಯಲ್ಲಿ ಅವರಿರುವಾಗ ರಾಕೇಶ ಶೆಟ್ಟರಿಗೆ ಕ್ರಾಂತಿ ಮಾಡಿಸುವ ಬಯಕೆ!!. 😉

         ಉತ್ತರ
        • Nagshetty Shetkar
         ಜುಲೈ 5 2014

         Revolution will happen Mr. Shetty, please be patient. You are now witnessing the last days of capitalism and communalism in India. The triumph of truth is inevitable. Darkness won’t be there forever. Darga Sir is combining Marxism with Basavadvaita for popularising leftist ideology in Karnataka. He has travelled to many countries and everywhere people flock in large numbers to listen to him. Soon the spirit of humanism will spread like a fire and devour capitalism and communalism.

         ಉತ್ತರ
         • ವಿಜಯ್ ಪೈ
          ಜುಲೈ 5 2014

          [Revolution will happen]
          Revolution ನ್ನೊ ಅಥವಾ Loose motion ನ್ನೊ??.
          Revolution ಆಗುವ ತನಕ ನಿಮ್ಮ Loose motion ನಲ್ಲಿ communism ವಿಸರ್ಜನೆ ಆಗದ ಹಾಗೆ ನೋಡಿಕೊಳ್ಳಿ!

          [Darga Sir is combining Marxism with Basavadvaita for popularising leftist ideology in Karnataka. He has travelled to many countries and everywhere people flock in large numbers to listen to him.]
          ಹೂಂ..ಮೊನ್ನೆ ನ್ಯೂಯಾರ್ಕನಲ್ಲಿ ದರ್ಗಾ ಸಾಹೇಬರ ಭಾಷಣ ಕೇಳಲು, ಕೈಕುಲುಕಲು ಜನರು ಮುಗಿ ಬಿದ್ದು ಆರು ಗಂಟೆ ಟ್ರಾಫಿಕ್ ಜಾಮ್ ಆಯಿತು ಮತ್ತು ದರ್ಗಾರ ಜನಪ್ರಿಯತೆಯಿಂದ ಅಸೂಯೆಪಟ್ಟ ಬರಾಕ್ ಒಬಾಮ್ ಎರಡು ದಿನ ಹೊಟ್ಟೆ ನೋವಿನಿಂದ ಬಳಲಿದ, ಈಗ CIA ಯ ಸ್ಪೆಶಲ್ ಬ್ರಾಂಚ್ ವೊಂದನ್ನು ದರ್ಗಾ ಸಾಹೇಬರ ಚಟುವಟಿಕೆಗಳ ಮೇಲೆ ನಿಗಾ ಇಡಲು ನೇಮಕ ಮಾಡಲಾಗಿದೆ ಎಂಬುದನ್ನು ಎಲ್ಲೊ ಓದಿದ ನೆನಪು.

          ಉತ್ತರ
          • Nagshetty Shetkar
           ಜುಲೈ 5 2014

           Mr. Vijay, recently Vartamana removed your filthy comments on langoti. But you have resumed filth throwing in Nilume. Shows your culture.

           Don’t underestimate Darga Sir’s influence on common people. He is Channabasavanna of our age.

          • Naani
           ಜುಲೈ 5 2014

           ಜಾತಿಗಳ ಬಗ್ಗೆ ನಿಮ್ಮ ಡೋಂಗಿ “Channabasavanna of our age” (ಶೇಟ್ಕರರಿಂದ ಮಾನ ಹರಾಜು ಹಾಕಿಸಿಕೊಳ್ಳುತ್ತಿರುವ ಅವರ ಗುರು-ಹೆಸರು ನಾನು ಹೇಳಲ್ಲ, ಅವರೇ ಹೇಳಿದ್ದಾರೆ) ರಿಗಿಂತ ವ್ಯತಿರಿಕ್ತವಾಗಿ ಆ ‘ನಿಜ ಚೆನ್ನಬಸವಣ್ಣ’ ಹೇಳುತ್ತಾನೆ:

           “ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ ಎರಡೆಲೆಯಾಯಿತ್ತು
           ಮಾದಿಗನಲ್ಲಿ,
           ಹುಸಿ ನಾಲ್ಕೆಲೆಯಾಯಿತ್ತು ಸಮ್ಮಗಾರನಲ್ಲಿ, ಹುಸಿ ಆರೆಲೆಯಾಯಿತ್ತು
           ಅಗಸನಲ್ಲಿ,
           ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ, ಹುಸಿ ಸಸಿಯಾಗಿತ್ತು ಹಾದರಿಗನಲ್ಲಿ,
           ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ, ಹುಸಿ ಮರವಾಯಿತ್ತು ಜೂಜುಗಾರನಲ್ಲಿ,
           ಹುಸಿ ಹೂವಾಯಿತ್ತು ಡೊಂಬನಲ್ಲಿ, ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ,
           ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ,
           ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ.
           ಇಂತೀ ಹುಸಿಯ ನುಡಿವವರಿಗೆ
           ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
           ಪಾದೋದಕವಿಲ್ಲಾಗಿ ಮೋಕ್ಷವಿಲ್ಲ.
           ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
           ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು.
           -ಚೆನ್ನಬಸವಣ್ಣ”

           ನಿಮ್ಮ “ಡೋಂಗೀ Channabasavanna of our age” ವಚನಕಾರರು ವೇದ/ವೈಧಿಕ ವಿರೋಧಿಗಳೆನ್ನುತ್ತಾರೆ; ನಮ್ಮ ‘ನಿಜ ಚೆನ್ನಬಸವಣ್ಣ’ನವರು ವೇದಶಾಸ್ತ್ರದ ಬಗ್ಗೆ ಹೀಗೆ ಹೇಳುತ್ತಾರೆ:

           ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ,
           ಕೊಂಡಾಡಿಸಿಕೊಳ್ಳಲ್ಪಟ್ಟ
           ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ.
           ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ
           ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ
           ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ, ಅವನು ಬ್ರಾಹ್ಮಣನಲ್ಲ,
           ಅವನು ಪಂಚಮಹಾಪಾತಕ, ಆತ ಶ್ವಪಚನೆಂದು ಪುರಾಣಪ್ರಸಿದ್ಧ.
           ಅದೆಂತೆಂದಡೆ, ಗರುಡಪುರಾಣದಲ್ಲಿ:
           “ಶ್ರುತಯಃ ಸ್ಮೃತಯಸ್ಸರ್ವೇ ಪುರಾಣಾನ್ಯಖಿಲಾನಿ ಚ
           ವದಂತಿ ಭೂತಿಮಹಾತ್ಮ್ಯಂ ತತಸ್ತಂ ಧಾರಯೇದ್ದ್ವಿಜಃ
           ತದಭಾವೇ ತಥಾ ವಿಪ್ರೋ ಲೌಕಿಕಾಗ್ನಿಂ ಸಮಾಹರೇತ್
           ಭಸ್ಮನೈವ ಪ್ರಕುರ್ವೀತ ನ ಕುರ್ಯಾನ್ಮೃತ್ತಿಕಾದಿಭಿಃ
           ಗೋಪೀಚಂದನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ
           ಶತೈಕವಿಂಶತಿಕುಲಂ ಸೋ[s]ಕ್ಷಯಂ ನರಕಂ ವ್ರಜೇತ್
           ಮತ್ತಂ ಕೂರ್ಮಪುರಾಣದಲ್ಲಿ:
           ತ್ರಿಪುಂಡ್ರಂ ಬ್ರಾಹ್ಮಣೋ ವಿದ್ವಾನ್ ಮನಸಾ[s]ಪಿ ಲಂಘಯೇತ್
           ಶ್ರುತ್ಯಾ ವಿಧೀಯತೇ ತಸ್ಮಾತ್ತ್ಯಾಗೀ ತು ಪತಿತೋ ಭವೇತ್ ಎಂದುದಾಗಿ
           ನಮ್ಮ ಕೂಡಲಚೆನ್ನಸಂಗಮದೇವರಲ್ಲಿ,
           ಶ್ರುತಿಸ್ಮೃತಿ ಪ್ರಸಿದ್ಧವಾದ ಶ್ರೀಮಹಾವಿಭೂತಿಯನಿಟ್ಟಾತನೆ ಸದ್ಬ್ರಾಹ್ಮಣ.
           ಈ ಮಹಾವಿಭೂತಿಯ ಬಿಟ್ಟು ಮಣ್ಣು ಮಸಿ ಮರದ ರಸಂಗಳ
           ಹಣೆಯಲ್ಲಿ ಬರೆದುಕೊಂಡನಾದಡೆ
           ಆವ ವಿಪ್ರನಲ್ಲ; ಆವ ಪಾಪಿ, ಶುದ್ಧ ಶ್ವಪಚ ಕಾಣಿಭೋ
           -ಚೆನ್ನಬಸವಣ್ಣ

           ನಿಮ್ಮ “ಡೋಂಗಿ Channabasavanna of our age” ಹಿಂದೂ ದೇವರು/ದೇವಾಲಯಗಳ ಬಗ್ಗೆ (ತನ್ನ ಮುಸ್ಲೀಂ ನಂಬಿಕೆಯ ಕಾಫಿರರ ಸೈತಾನರೆಂಬಂತೆ) ತಿರಸ್ಕಾರ ತೋರಿದರೆ ನಮ್ಮ ‘ನಿಜ ಚೆನ್ನಬಸವಣ್ಣ’ನವರು ಅವುಗಳ ಮಹತ್ವವನ್ನು ಹೀಗೆ ಸಾರುತ್ತಾರೆ:

           ಕೃತಯುಗ ಹದಿನೇಳು ಲಕ್ಷದ ಮೇಲೆ ಇಪ್ಪತ್ತೆಂಟುಸಾವಿರ ವರುಷದಲ್ಲಿ
           ಕೇತಾರದೇವರು ಮೂಲಸ್ಥಾನ.
           ತ್ರೇತಾಯುಗ ಹನ್ನೆರಡು ಲಕ್ಷದ ಮೇಲೆ ತೊಂಬತ್ತಾರುಸಾವಿರ ವರುಷದಲ್ಲಿ
           ಸೇತುಬಂಧ ರಾಮೇಶ್ವರದೇವರು ಮೂಲಸ್ಥಾನ.
           ದ್ವಾಪರಯುಗ ಎಂಟುಲಕ್ಷದ ಮೇಲೆ ಅರವತ್ತುನಾಲ್ಕುಸಾವಿರ ವರುಷದಲ್ಲಿ
           ಸೌರಾಷ್ಟ್ರ ಸೋಮಯ್ಯದೇವರು ಮೂಲಸ್ಥಾನ.
           ಕಲಿಯುಗ ನಾಲ್ಕುಲಕ್ಷದ ಮೇಲೆ ಮೂವತ್ತೆರಡುಸಾವಿರ ವರುಷದಲ್ಲಿ
           ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವರು ಮೂಲಸ್ಥಾನ.
           ಇದು ಕಾರಣ ಕೂಡಲಚೆನ್ನಸಂಗಯ್ಯ ಸಾಕ್ಷಿಯಾಗಿ
           ಭಕ್ತರಿಗೆ ಜಂಗಮವೆ ಮೂಲಸ್ಥಾನ.
           -ಚೆನ್ನಬಸವಣ್ಣ

           ಕರ್ಮಸಿದ್ದಾಂತದ ಬಗ್ಗೆ/ ಸ್ವರ್ಗ-ನರಕದ ಬಗ್ಗೆ ನಿಮ್ಮ “ಡೋಂಗಿ Channabasavanna of our age” ವೈಧಿಕರ ಮೌಢ್ಯ ಎಂದು ಜರೆದರೆ ನಮ್ಮ ‘ನಿಜಚೆನ್ನಬಸವಣ್ಣ’ ಹುಷಾರು ಅವು ಇವೆ ಎಂದು ಹೀಗೆ ಹೇಳುತ್ತಾರೆ:
           ಗುರುಲಿಂಗದಲ್ಲಿ ಪೂಜೆಯ ಮಾಡಿ,
           ಜಂಗಮಲಿಂಗದಲ್ಲಿ ಉದಾಸೀನವ ಮಾಡಿದಡೆ
           ಗುರುಲಿಂಗದ ಪೂಜಕರಿಗೆ ಶಿವದೂತರ ದಂಡನೆ
           ಎಂಬುದ ಮಾಡಿದೆಯಯ್ಯಾ.
           ಲೋಕದ ಕರ್ಮಿಗಳಿಗೆ ಯಮದೂತರ ದಂಡನೆ
           ಎಂಬುದ ಮಾಡಿದೆಯಯ್ಯಾ.
           ಭಕ್ತಿಯನರಿಯರು, ಯುಕ್ತಿಯನರಿಯರು
           ಕೂಡಲಚೆನ್ನಸಂಗಮದೇವಾ
           -ಚೆನ್ನಬಸವಣ್ಣ

           ಸಾಕಾ ಇನ್ನೂ ಬೇಕಾ ಶೇಟ್ಕರ್!!! ಒಟ್ನಲ್ಲಿ ಪದೇ ಪದೇ ದರ್ಗಾ ಹೆಸರೆಳಕೊಂಡು ಬಂದು (ಪಾಪ ಅವರ ಪಾಡಿಗೆ ಅವರು ತಮ್ಮ ಗಂಜಿಕೇಂದ್ರದ ಕೆಲಸ ಮಾಡಿಕೊಂಡು ಇದ್ದರೂ) ಅವರ ಮಾನವನ್ನು ಹರಾಜಾಕುವುದನ್ನೇ ನಿಮ್ಮ ಕಾಯಕ ಮಾಡ್ಕೊಂಡುಬಿಟ್ಟಿದ್ದೀರಿ!!! ಪಾಪ ಅವರು ನಿಮಗೇನು ಕೇಡು ಮಾಡಿದರೋ?? ನೀವು ಸೇಡು ತೀರಿಸಿಕೊಳ್ಳುತ್ತಿದ್ದೇರಿ!!! ನಡೀಲಿ.. ನಡೀಲಿ…!

          • Nagshetty Shetkar
           ಜುಲೈ 6 2014

           “ನನ್ನ ಒಳಗಿವಿಯಲ್ಲಿ ಭಾವುಕ ದನಿಯೊಂದು ಬಸ­ವಣ್ಣನವರ ಮಾನವೀಯತೆ ಬಗ್ಗೆ ಆರ್ದ್ರ­ವಾಗಿ ಉಪನ್ಯಾಸ ಮಾಡುತ್ತಿರುವುದು ಕೇಳಿಸಿತು. ಆ ದನಿ ಗುರುತು ಸಿಕ್ಕಲು ಬಹಳ ಹೊತ್ತು ಹಿಡಿ­ಯ­ಲಿಲ್ಲ. ಅದು ನನ್ನ ಬಹುದಿನದ ಮಿತ್ರ­ರಾದ ಉತ್ಕಟ ಬಸವಪ್ರಚಾರಕ ರಂಜಾನ್ ದರ್ಗಾ ಅವ­ರದು.”

           http://www.prajavani.net/columns/ಬಸವನ-ನೆನಪು-ಆರ್ದ್ರತೆ-ಆತಂಕ

          • Naani
           ಜುಲೈ 7 2014

           ಈ’ ಬುರುಡೆ’ಗೆ ಆ ‘ಊಸರವಳ್ಳಿ’ ಸಾಕ್ಷಿನಾ??? ಈ ‘ಪ್ರಕಾಶ’ವೇ ಇಲ್ಲದ ‘ಶಿವ’ ಯದ್ವಾತದ್ವಾ ಆ ಕಡೆಗೂ ಈಕಡೆಗೂ ಪಲ್ಟಿಹೊಡಿತಿರ್ತದೆ. ಪರಸ್ಪರ ಹೊಗಳ್ಕೊಂಡು ಪ್ರಶಸ್ತಿ ಪಡೆಯೋದು; ನಂತರ ಅವರವರೇ ಕಾಲೆಳಕಳೋದು ಗೊತ್ತಿಲ್ಲದ್ದಾ?? ಮುಂದಿನ ವರ್ಷವಾದರೂ (ಈ ವರ್ಷ ಅಮೂರ್ತಿಗೆ ಕೊಡಿಸಿದಂಗೆ) ನನಗೇ ‘ಬಸವಶ್ರೀ’ ಕೊಡಿಸಲಿ ಎಂದು ಆ ‘ಊಸರವಳ್ಳಿ’ ಈ ‘ಬುರುಡೆ’ಗೆ ಬಕೀಟ್ ಹಿಡಿದ್ದನ್ನು ನಿಜಾ ಅಂತ ನಂಬ್ಕೊಂಡ್ ಬಿಟ್ರಲ್ಲಾ!!! ಛೆ ಛೆ ಛೇ… . ಬರೀ ಕಾಪಿಪೇಸ್ಟು, ಯಾಕೆ ಶೇಟ್ಕರ್, ಸ್ವಂತ ಬುದ್ದಿ ಇಲ್ವಾ???

          • ವಿಜಯ್ ಪೈ
           ಜುಲೈ 7 2014

           @ನಾಗಶೆಟ್ಟಿ ಶೆಟ್ಕರ್..

           ಒಂದಲ್ಲ ಮೂರು ಕಮೆಂಟ್ ಹಾಕಿದ್ದೆ..’ಆಭಿವ್ಯಕ್ತಿ ಸ್ವಾತಂತ್ರ್ಯ’ ಪ್ರತಿಪಾದಿಸುವವರು ಆ ಮೂರನ್ನೂ ತೆಗೆದಿದ್ದಾರೆ!. ನಿಮಗೆ ನಿಮ್ಮ ಆಸಕ್ತಿಯ ಲಂಗೋಟಿ ಮಾತ್ರ ಕಂಡು ಬಂತೆನೊ!.ಇಲ್ಲಿವೆ ನೋಡಿ ನಾನು ಹಾಕಿದ ಕಮೆಂಟುಗಳು..

           ಮಾರ್ಕ್ಸವಾದದ ಇತಿಹಾಸದಲ್ಲಿಯೇ ಬಿದ್ದು ಒದ್ದಾಡುತ್ತಿರುವ ಈ ಎಡ ವಿಘ್ನ ಸಂತೋಷಿಗಳು ಮಾತೆತ್ತಿದರೆ ಅದೇ ಕಥೆ..ಅದೇ ಕೊರೆತ..ಅದೇ ಸ್ಟಿರಿಯೊಟೈಪಡ್ ಬಡಬಡಿಕೆ!. ಸರಕಾರ ಅಧಿಕಾರಕ್ಕೆ ಬಂದ ತಿಂಗಳೊಪ್ಪತ್ತಿನ್ನಲ್ಲಿಯೇ ಇವರಿಗೆ ನಿಕ್ಕಿ ಭವಿಷ್ಯ ತಿಳಿದುಬಿಟ್ಟಿದೆ!. ಚುನಾವಣೆಯ ಮುನ್ನವೂ ಈ ‘ಗುಮ್ಮ ಬಂತು ಗುಮ್ಮ’ ಕಥೆಯನ್ನು ನಿರಂತರವಾಗಿ ಸುರು ಹಚ್ಚಿಕೊಂಡಿದ್ದರು..ಫಲಿತಾಂಶ ಕಣ್ಣ ಮುಂದೆಯೇ ಇದೆ.

           ಇವರುಗಳು ಯಾವ ಮಟ್ಟದ ಉತ್ಪ್ರೇಕ್ಷಿತ ಸುಳ್ಳುಗಳನ್ನು ಯಾವುದೇ ಮುಲಾಜಿಲ್ಲದೆ, ಬೇಜವಾಬ್ದಾರಿಯುತವಾಗಿ ಹರಡಬಲ್ಲರು ಎಂಬುದಕ್ಕೆ ಈ ಕೆಳಗಿನ ವಾಕ್ಯಗಳೆ ಸಾಕ್ಷಿ..

           [ಇವಲ್ಲದೆ ವಿ.ಎಚ್.ಪಿ, ಬಜರಂಗ ದಳ ಮತ್ತು ಇನ್ನಿತರ ಹಿಂದೂ ಸಾಂಸ್ಕೃತಿಕ ಮುಖವಾಡದ ಮತೀಯವಾದಿ ಸಂಘಟನೆಗಳು ಸಕ್ರಿಯಗೊಳ್ಳತೊಡಗಿವೆ. ಈ ಸಕ್ರಿಯಗೊಳ್ಳುವುದರ ಫಲವಾಗಿ ಪುಣೆಯಲ್ಲಿ ಕೋಮು ಗಲಭೆಯಿಂದಾಗಿ ಮುಸ್ಲಿಂ ಯುವಕ ಕೊಲ್ಲಲ್ಪಟ್ಟಿದ್ದಾನೆ.]
           [ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಇದು ಪ್ರಯೋಗಿಸಲ್ಪಡುತ್ತದೆ. ಪುಣೆಯಲ್ಲಿನ ಕೊಲೆ ಇದರ ಆರಂಭವಷ್ಟೆ.]

           ಇನ್ನು ಹರ್ಷವರ್ಧನ ಹೇಳಿದ್ದು ‘ ಕೇವಲ ಕಾಂಡೋಮನಿಂದ ಏಡ್ಸ್ ನ ಹರಡುವಿಕೆ ತಡೆಗಟ್ಟಲಾಗುವುದಿಲ್ಲ..ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು’ ಎಂದು. ಇದು ತಪ್ಪೆ??..ಅಷ್ಟಕ್ಕೂ ಕರ್ಷವರ್ಧನ ಕಾಂಡೋಮ ಬಳಸಲೇಬೇಡಿ ಎಂದಿದ್ದಾರೆಯೆ?. ಎಲ್ಲದಕ್ಕೂ ಸಂಘ ಪರಿವಾರ, ಬ್ರಾಕ್ಮಣ್ಯ, ಸನಾತನ ಮೌಲ್ಯ ತಗುಲಿಹಾಕುವ ಈ ಜನರ ಚಟ ಎಂದಾದರೂ ಕಡಿಮೆ ಆಗಬಹುದೆ?

           [ಈ ಏಡ್ಸ್ ಕಾಯಿಲೆಯ ಕುರಿತಾಗಿ ಈ ಸಂಘ ಪರಿವಾರದ ಮಂತ್ರಿಯ ಬೇಜವ್ದಾರಿ ಮತ್ತು ಮತೀಯವಾದದ ಚಿಂತನೆಗಳಿಗೆ ಏನನನ್ನುವುದು?]
           ಇದರಲ್ಲಿ ಅದೆಂತಹ ಮತೀಯವಾದ ಕಂಡುಬಂತು ಎಂದು ಹೇಳಿದರೆ ಒಳ್ಳೆಯದು!. ಹರ್ಷವರ್ಧನ ಏನಾದರೂ ಹಿಂದುಗಳು ಕಾಂಡೋಮ್ ಬಳಸಬಾರದು, ಮುಸ್ಲಿಂರು ಕಡ್ಡಾಯವಾಗಿ ಬಳಸಬೇಕು ಎಂದರೆ?. ಅಕಸ್ಮಾತ ಹಾಗೆ ಹೇಳಿದಿದ್ದರೆ ನೀವು ದು:ಖ ಪಡುವ ಬದಲು ಸಂತೋಷ ಪಡಬೇಕಿತ್ತು..ಮುಸ್ಲಿಂ ರ ಆರೋಗ್ಯದ ಬಗ್ಗೆ ‘ಸಂಘ ಪರಿವಾರಿ, ಸನಾತನವಾದಿ, ಬ್ರಾಹ್ಮಣ್ಯ’ ಪ್ರತಿಪಾದಿಸುವ ಹರ್ಷವರ್ಧನರಿಗೆ ಕಾಳಜಿ ಇದೆಯೆಂದು!. ಏಡ್ಞ ಕಾಯಿಲೆ ತಡೆಗಟ್ಟುವಲ್ಲಿ ನೈತಿಕ ಶಿಸ್ತಿನ ಪಾತ್ರದ ಹೇಳಿಕೆ ಬೇಜವಾಬ್ದಾರಿಯದ್ದಾದರೆ, ನಿಮ್ಮ ಪ್ರಕಾರ ಜವಾಬ್ದಾರಿಯುತ ಹೇಳಿಕೆ ಎಂದರೆ ಏನು ಎಂದು ತಿಳಿದುಕೊಳ್ಳಬಹುದೆ?

           ನಮ್ಮ ಭಾರತದ, ಅದರಲ್ಲೂ ಕರ್ನಾಟಕದ ‘ಬುದ್ದಿಜೀವಿ’ ಗಳಿಗೆ ಕೆಲವೊಂದು ಸಲ ಭಾರತೀಯ ಮೌಲ್ಯಗಳ ಬಗ್ಗೆ ನೆನಪಾಗುತ್ತದೆ..ಅದ್ಯಾವಾಗೆಂದರೆ ಉಳಿದವರು ಇವರ ಬಗ್ಗೆ ಏಕವಚನದಲ್ಲಿ ಮಾತನಾಡಿದಾಗ, ಇವರ ಬಿರುದು-ಬಾವಲಿಗಳ ಬಗ್ಗೆ ಅಸಡ್ಡೆ ತೋರಿದಾಗ, ಇವರ ವಯಸ್ಸನ್ನು ಗಮನಿಸದೆ ಮಾತನಾಡಿದಾಗ..ಆಗ ಇದು ನಮ್ಮ ಸಂಸ್ಕೃತಿ ಅಲ್ಲ ಎನ್ನುವ ಮಾತು ಇವರ ಬಾಯಿಯಿಂದ ಬರುತ್ತದೆ. ಉಳಿದೆಲ್ಲ ಸಂದರ್ಭಗಳಲ್ಲಿ ಇವರಿಗೆ ಇಲ್ಲಿಯ ಮೌಲ್ಯಗಳು ‘ಸನಾತನ, ಪುರೋಹಿತಶಾಹಿ, ಬ್ರಾಹ್ಮಣ್ಯ’ ವನ್ನು ಪ್ರತಿನಿಧಿಸುತ್ತವೆ!.
           —————————
           ಆನಂದ ಪ್ರಸಾದ ಕಮೆಂಟ್ :
           ಹೊಸ ಸರಕಾರ ಬಂದಾಗ ಅದು ಕಾರ್ಯಾಂಗವಾದ ಅಧಿಕಾರಶಾಹಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಹೊಸ ಸರಕಾರದ ಕಾರ್ಯವೈಖರಿಯನ್ನು ಮೊದಲ ಆರು ತಿಂಗಳವರೆಗೆ ಕಾದು ನೋಡುವ ಪದ್ಧತಿ ಇದೆ. ಆದರೆ ವಿರೋಧ ಪಕ್ಷದವರು ಅಥವಾ ವಿರೋಧಿ ಸಿದ್ಧಾಂತದವರು ಸಾಧಾರಣವಾಗಿ ಹೊಸ ಸರಕಾರ ಬಂದ ಕೂಡಲೇ ಅದನ್ನು ವಿಮರ್ಶಿಸಲು ತೊಡಗುವುದು ಮಾಮೂಲಿ. ಇದಕ್ಕೆ ಬಿಜೆಪಿ ಅಥವಾ ಸಂಘ ಪರಿವಾರದವರು ಕೂಡ ಹೊರತಲ್ಲ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸಿದಾದ ಬಿಜೆಪಿ ಹಾಗೂ ಸಂಘ ಪರಿವಾರದವರು ಎರಡನೇ ದಿನದಿಂದಲೇ ಆಮ್ ಆದ್ಮಿ ಪಕ್ಷಕ್ಕೆ ಸವಾಲು ಹಾಕಿ ದಿನ ನಿತ್ಯ ಟಿವಿ ವಾಹಿನಿಗಳಲ್ಲಿ ಅಬ್ಬರಿಸುತ್ತಿದ್ದರು. ಇದಕ್ಕೆ ಹೋಲಿಸಿದರೆ ಎಡಪಂಥೀಯರು ಮೋದಿಯವರನ್ನು ಹಾಗೆ ಒರಟಾಗಿ ತರಾಟೆಗೆ ತೆಗೆದುಕೊಳ್ಳುವುದು ಕಂಡುಬರುತ್ತಿಲ್ಲ.

           ಇದಕ್ಕೆ ನನ್ನ ಕಮೆಂಟ್:
           [ಇದಕ್ಕೆ ಹೋಲಿಸಿದರೆ ಎಡಪಂಥೀಯರು ಮೋದಿಯವರನ್ನು ಹಾಗೆ ಒರಟಾಗಿ ತರಾಟೆಗೆ ತೆಗೆದುಕೊಳ್ಳುವುದು ಕಂಡುಬರುತ್ತಿಲ್ಲ.]
           ಹಾಗೆ ಮಾಡಲು ಬಂಡವಾಳದ ಕೊರತೆ ಇದೆ..ತಮ್ಮ ಮಾತುಗಳನ್ನೇ ತಾವು ನುಂಗಬೇಕಾದ ಸಂದರ್ಭ ಎಡಪಂಥಿಯರಿಗೆ ಕಳೆದ ಚುನಾವಣೆಯ ಫಲಿತಾಂಶದ ನಂತರ ಬಂದಿದೆ, .ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ವಸ್ತು ಸ್ಥಿತಿ ಗಮನಿಸಿದರೆ ಇವರುಗಳು ಚೇತರಿಸಿಕೊಳ್ಳುವುದಕ್ಕಿಂತ ಇತಿಹಾಸವಾಗುವ ಸಾಧ್ಯತೆಗಳೆ ಸಾಕಷ್ಟಿದೆ. ಆಪ್ ಹಳ್ಳ ಹಿಡಿದದ್ದೇ ಈ ತಥಾಕಥಿತ ಎಡಪಂಥೀಯ, ಸಮಾಜವಾದಿ ಜನರ ಸಹವಾಸದಿಂದ.
           —-
           ಜಿ.ವಿ ಕಾರ್ಲೊ, ಹಾಸನ ಕಮೆಂಟ್ :
           ನಾನು ಹೈಸ್ಕೂಲು ಓದುತ್ತಿರುವಾಗ ‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮ್ರತ್ಯು’ ಎಂಬ ಪುಸ್ತಕವೊಂದನ್ನು ಬಹಳಷ್ಟು ಜನ ಓದುತ್ತಿದ್ದರು. ಇದನ್ನೇ ಪಠ್ಯ ಪುಸ್ತಕವನ್ನಾಗಿ ಮಾಡಿ ಎಲ್ಲರೂ ಒದ್ದೆ ಲಂಗೋಟಿಯನ್ನೇ ಉಡಬೇಕೆಂದು ಕಾನೂನು ಮಾಡಿದರೆ ಹೇಗೆ?
           ಇದಕ್ಕೆ ನನ್ನ ಕಮೆಂಟ್:
           ಕಷ್ಟಪಟ್ಟು ಅವಾಹಿಸಿಕೊಳ್ಳುವ ತವಕ-ತಲ್ಲಣಗಳಿಂದ ಆಗಾಗ ಲಂಗೋಟಿ ಒದ್ದೆ ಮಾಡಿಕೊಳ್ಳುವುದಕ್ಕಿಂತ ಇದು ಒಳ್ಳೆಯದು! 🙂

          • ವಿಜಯ್ ಪೈ
           ಜುಲೈ 7 2014

           ತಮ್ಮ ಡಬ್ಬವ ತಾವೇ ಬಡಿಯುತಿಹರು
           ತಮ್ಮ ತೇರನು ತಾವೇ ಎಳೆಯುತಿಹರು
           ಸಾಲದಕ್ಕೆ ಬಿಟ್ಟಿ ಭಟ್ಟಂಗಿಗಳನ್ನಿಟ್ಟುಕೊಂಡಿಹರು
           ಕೆಲವೊಮ್ಮೆ ತಾವೇ ಭಟ್ಟಂಗಿಗಳ ಹೆಸರಿನಲಿ ಬರೆಯುತಿಹರು..
           ಆಧುನಿಕ ಚೆನ್ನಬಸವಣ್ಣನೊ…ಅರೆಬೆಂದ ಚಣಾ ಬಸವಣ್ಣನೊ
           ನೀನಗಿಂತ ಚೆನ್ನಾಗಿ ಬೇರ್ಯಾರು ಬಲ್ಲರು ಕೂಡಲಸಂಗಮದೇವ..

          • Naani
           ಜುಲೈ 7 2014

           ಹ್ಹ ಹ್ಹ ಹ್ಹ ಸರಿಯಾಗಿ ಹೇಳಿದಿರಿ ವಿಜಯ್ !!!!!!!!

         • ಮಾರ್ಕ್ಸ್ ಮಂಜು
          ಜುಲೈ 8 2014

          Mr.Nagshetty Shetkar let this ಪೈ and ಶೆಟ್ಟಿ speak as they wish.I hope Mr.Darga will travel to all over Karnataka along with travelling all over the world and Spread Marxism with Basavadvaita

          ಉತ್ತರ
          • Nagshetty Shetkar
           ಜುಲೈ 8 2014

           +೧

           ದರ್ಗಾ ಸರ್ ಅವರು ಪೈ ಶೆಟ್ಟಿ ತರಹದ ವೈದಿಕ ಗಿಂಡಿ ಮಾಣಿಗಳನ್ನು ಅದೆಷ್ಟೋ ನೋಡಿದ್ದಾರೆ. ಇಂತಹವರಿಗೆಲ್ಲ ದರ್ಗಾ ಸರ್ ಹೆದರಿ ಸುಮ್ಮನಾಗುತಾರೆಯೇ?!! ವೈದಿಕರ ಅಟ್ಟಹಾಸ ಈಗ ಇತಿಹಾಸ. ಇದು ಸಮಾನತೆಯ ಪರ್ವ. ವೈದಿಕರಿಗಿಲ್ಲ ಇಲ್ಲಿ ಅಗ್ರಪಂಕ್ತಿ. ಮಾರ್ಕ್ಸ್ ವಾದ ಹಾಗೂ ಬಸವಾದ್ವೈತವು ಜೊತೆಗೂಡಿ ಸಮಾನತೆಯನ್ನು ಸಾಧಿಸಲಿವೆ. ವಿಶ್ವಾಸವಿರಲಿ.

          • ವಿಜಯ್ ಪೈ
           ಜುಲೈ 8 2014

           ಎಡಬಿಡಂಗಿ ಮಂಡ ಮಾಣಿಗಳ ಎಂದಿನ ಪ್ರಲಾಪ ಮತ್ತು ಕೊನೆಯಿಲ್ಲದ, ತಲೆಬುಡವಿಲ್ಲದ ಹಗಲುಕನಸು! 🙂

 4. caarvaka
  ಜೂನ್ 25 2014

  ದಡ್ಡಜೀವಿಗಳಿಗೆಲ್ಲಾ ನಿಲುಮೆಯು ಒಂದು ವೇದಿಕೆಯು. ರಾಕೇಶ್ ಶೆಟ್ಟರು ದಡ್ಡರಲ್ಲೇ ದಡ್ಡರು. ಹಿಂದೂವನ್ನು ಹಿಂದುವೂ, ರೋಗವನ್ನು ರೋಗವೂ, ಶೆಟ್ಟರನ್ನು ಶೆಟ್ಟರೂ, ಬ್ರಾಹ್ಮಣರನ್ನು ಬ್ರಾಹ್ಮಣರೂ ಅರ್ಥ ಮಾಡಿಕೊಳ್ಳಬೇಕು ಎಂದು ಶೆಟ್ಟರು ಹೇಳುತ್ತಿದ್ದಾರೆ. ಶೆಟ್ಟರಿಗೆ ‘science’ ಎಂಬುದರ ಅರಿವೇ ಇಲ್ಲ. ಏಕೆಂದರೆ ಶೆಟ್ಟರಿಗೆ ಒಂದು ರೋಗವಿದೆ. ಅದು ‘stupid consciousness’. “ಮಡೆಸ್ನಾನ ಏಕೆ ಮಾಡಬೇಕು?” ‘ಏಕೆಂದರೆ ಅದು ನಮ್ಮ ಆಚರಣೆ’. “ಸತಿ ಏಕೆ ಮಾಡಬೇಕು?” ‘ಏಕೆಂದರೆ ನಮ್ಮ ತಾತ ಮಾಡುತ್ತಿದ್ದರು’. ‘ರೋಗ ಏಕೆ ಬರುತ್ತದೆ?’ ‘ಬರುವುದೇ ರೋಗದ ಕೆಲಸ, ಆದರಿಂದ ಬರುತ್ತದೆ’. ಮಜವಾಗಿದೆ!

  ಉತ್ತರ
  • Caarvaaka ಮಹಾಶಯರೆ..
   ದಡ್ಡಜೀವಿಗಳ ವೇದಿಕೆಯಲ್ಲಿ ತಾವು ಆಗಾಗ ಹಣಕುವುದು ಮತ್ತು ತಮ್ಮ ಮಹೋನ್ನತ ಜ್ಞಾನದಿಂದ ಪ್ರೇರಿಸಲ್ಪಟ್ಟ ವಿಶ್ಲೇಷಣೆಯನ್ನು ಮಾಡುವುದು ಏಕೊ ಎಂದು ಗೊತ್ತಾಗಲಿಲ್ಲ. ನೀವು ಬುದ್ಧಿವಂತರಲ್ಲಿಯೇ..’ಅತೀ’ ಬುದ್ಧಿವಂತರು ಎಂಬುದನ್ನು ಬೇಶರತ್ತಾಗಿ ಒಪ್ಪಿಕೊಳ್ಳುತ್ತೇನೆ..ಇನ್ನಾದರೂ ತಾವು ತಮ್ಮ ‘ಸಮಾನ’ರ ಬಂಧು-ಬಳಗವನ್ನು ಹುಡುಕಿಕೊಂಡು ಹೋಗಬಹುದು..ಇತ್ತ ಬರುವ ಕಷ್ಟ ತೆಗೆದುಕೊಳ್ಳದೆ!

   ಉತ್ತರ
 5. Nagshetty Shetkar
  ಜುಲೈ 7 2014

  “ತಮ್ಮ ಡಬ್ಬವ ತಾವೇ ಬಡಿಯುತಿಹರು”

  ನಾಣಿ ಹಾಗೂ ವಿಜಯ್ ಅವರೇ, ಬಸ­ವಣ್ಣನವರ ಮಾನವೀಯತೆ ಬಗ್ಗೆ ಆರ್ದ್ರ­ವಾಗಿ ಉಪನ್ಯಾಸ ಮಾಡುವುದೂ ಅಪರಾಧವೇ?!! ಹಾಗಾದರೆ ನಿಮ್ಮ ಪ್ರಕಾರ ದರ್ಗಾ ಸರ್ ಏನು ಮಾಡತಕ್ಕದ್ದು? ನಿಮ್ಮ ಬಾಲಗಂಗಾಧರ ಹಾಗೂ ಅವರ ಬಾಲಗ್ರಹಪೀಡಿತ ಬಾಲಂಗೋಚಿಗಳ ‘ಸಂಶೋಧನೆ’ಯನ್ನು ಮೆಚ್ಚಿ ಅದರ ಪ್ರಸರಣ ಕಾರ್ಯದಲ್ಲಿ ತೊಡಗಿದರೆ ಮಾತ್ರ ಅವರಿಗೆ ಮುಕ್ತಿಯೇ?!!

  ಉತ್ತರ
  • ವಿಜಯ್ ಪೈ
   ಜುಲೈ 7 2014

   [ಬಸ­ವಣ್ಣನವರ ಮಾನವೀಯತೆ ಬಗ್ಗೆ ಆರ್ದ್ರ­ವಾಗಿ ಉಪನ್ಯಾಸ ಮಾಡುವುದೂ ಅಪರಾಧವೇ?!!]
   ಖಂಡಿತವಾಗಿಯೂ ಅಲ್ಲ. ಅದನ್ನಿಲ್ಲಿ ಯಾರೂ ಪ್ರಶ್ನಿಸಲೂ ಇಲ್ಲ. ಶುದ್ದ ಬಸವಣ್ಣನವರ ವಿಚಾರಗಳನ್ನು ಹರಡವುದು ಬೇರೆ ಮತ್ತು ನಿಮ್ಮ ಮಾರ್ಕ್ಸ್ ವಾದ, ಎಡಪಂಥೀಯವಾದ, ಸ್ವಂತ ಸಿದ್ಧಾಂತ, ರಾಜಕೀಯ, ಧರ್ಮದ ನಿಲುವುಗಳಿಂದ ಪ್ರೇರೆಪಿಸಲ್ಪಟ್ಟ ಉಪನ್ಯಾಸ/ಲೇಖನಗಳನ್ನು ನೀವುಗಳು ‘ಬಸವಣ್ಣನವರ ವಿಚಾರಗಳು’ ಎಂಬ ಬ್ರ್ಯಾಂಡಿನಡಿ ಹರಡುವುದು, ತುರುಕುವುದು ಯಾವತ್ತೂ ಪ್ರಶ್ನಾರ್ಹ. ತಪ್ಪಾದಾಗ ಅದರ ಹೊಣೆಯನ್ನು ನೀವು ಹೊರದೆ, ಬಸವಣ್ಣನವರನ್ನು ನಿಮ್ಮ ಗುರಾಣಿಯನ್ನಾಗಿ ಬಳಸುವುದು ಸರಿಯೆನಿಸುತ್ತದೆಯೆ??

   [ನಿಮ್ಮ ಬಾಲಗಂಗಾಧರ ಹಾಗೂ ಅವರ ಬಾಲಗ್ರಹಪೀಡಿತ ಬಾಲಂಗೋಚಿಗಳ ‘ಸಂಶೋಧನೆ’ಯನ್ನು ಮೆಚ್ಚಿ ಅದರ ಪ್ರಸರಣ ಕಾರ್ಯದಲ್ಲಿ ತೊಡಗಿದರೆ ಮಾತ್ರ ಅವರಿಗೆ ಮುಕ್ತಿಯೇ?!!]
   ಗುರುಗಳೆ ಇದನ್ನೇ ಹೇಳಿದ್ದು..ಡಬ್ಬ ಬಡಿಯುವ ಕೆಲಸದಿಂದ ಮೊದಲು ಮುಕ್ತಿ ಪಡೆದುಕೊಂಡರೆ ಒಳ್ಳೆಯದು. ಸರಿಯಾದದ್ದು ತನ್ನ ಸ್ವಂತ ಬಲದ ಮೇಲೆಯೇ ನಿಲ್ಲುತ್ತದೆ..ಜೊಳ್ಳು ಇತಿಹಾಸ ಸೇರುತ್ತದೆ!.

   ಉತ್ತರ
   • Nagshetty Shetkar
    ಜುಲೈ 7 2014

    ನಿಮ್ಮ ಅರ್ಥದಲ್ಲಿ ಶುದ್ಧ ಬಸವಣ್ಣ ವಿಚಾರ ಅಂದರೆ ಏನು? ಕರ್ಮ ಸಿದ್ಧಾಂತವೇ? ಮನುಸ್ಮ್ರುತಿಯೇ?

    ಉತ್ತರ
    • Naani
     ಜುಲೈ 8 2014

     ರೀ ಬಸವಣ್ಣನ ವಿಚಾರಗಳು “ಒಂದೋ ಮಾರ್ಕ್ಸ್ ವಾದವಾಗಿರಬೇಕು; ಇಲ್ಲವೇ ಮನುಸ್ಮೃತಿಯಾಗಿರಲೇಬೇಕೆ??” ಏಕೆ ಅದನ್ನು ಬಿಟ್ಟು ಬಸವಣ್ಣ ಏನು ಹೇಳಿದ್ದಾರೋ ಅದನ್ನೇ ಹೇಳಲಿಕ್ಕಾಗುವುದಿಲ್ಲವೇ???

     ಬರೀ ಬುರುಡೆ ಏಕೆ ಬಿಡೋದನ್ನೇ ಏಕೆ ನೀವು ಕಾಯಕವಾಗಿಸಿಕೊಂಡಿದ್ದೀರಿ? ಬಾಲಗಂಗಾಧರರ ಗುಂಪು ವಚನಗಳ ಬಗ್ಗೆ ನೀಡಿರುವ ವಿವರಣೆಗಳಲ್ಲಿ “ಕರ್ಮಸಿದ್ದಾಂತವಾಗಲೀ” ಇಲ್ಲವೇ “ಮನುಸ್ಮೃತಿಯಾಗಲೀ” ಎಲ್ಲಿದೆ? ಅದನ್ನು ತೋರಿಸಿ, ಬರೀ ಬುರುಡೆ ಬಿಡಬೇಡಿ….

     ಉತ್ತರ
    • ವಿಜಯ್ ಪೈ
     ಜುಲೈ 8 2014

     [ನಿಮ್ಮ ಅರ್ಥದಲ್ಲಿ ಶುದ್ಧ ಬಸವಣ್ಣ ವಿಚಾರ ಅಂದರೆ ಏನು? ಕರ್ಮ ಸಿದ್ಧಾಂತವೇ? ಮನುಸ್ಮ್ರುತಿಯೇ?]
     ಅಂದರೆ ನಿಮಗೆ ಶುದ್ಧವಾಗಿ ಏನನ್ನೂ ನೋಡಲು ಬರುವುದಿಲ್ಲ, ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಲು ಬರುವುದಲ್ಲ..ನೋಡುವಲ್ಲಿ, ಒಪ್ಪಿಕೊಳ್ಳುವಲ್ಲಿ ಸಮಸ್ಯೆ ಇದೆ ಎಂದಾಯಿತು. ನಿಮ್ಮ ವಿಚಾರಗಳು ನಿಮ್ಮವು, ..ಬಸವಣ್ಣನವರವು ಶುದ್ಧವಾಗಿ ಅವರವು..ನಿಮ್ಮ ಈ ಲೇಪನಪ್ರಿಯತೆಯಿಂದ ಹುಟ್ಟಿಕೊಂಡ ಸಿದ್ಧಾಂತವನ್ನು ಮಾರಲು ನೀವು ಬಂದಳಿಕೆಯಂತೆ ಬಸವಣ್ಣ ಎಂಬ ಮರವನ್ನು ಆಶ್ರಯಿಸಿರುವುದೇಕೆ??. ನಿಮ್ಮ ವಿಚಾರ/ಸಿದ್ಧಾಂತಗಳಿಗೆ ಬಸವಣ್ಣನನ್ನು ಹೊಣೆ ಮಾಡಬೇಡಿ. ದರ್ಗಾರ ಜೊತೆ ಸಮಸ್ಯೆ ಇರುವವರಿಗೆಲ್ಲ ಬಸವಣ್ಣನ ಜೊತೆ ಸಮಸ್ಯೆಯಿದೆ ಎಂಬಂತೆ ಬಿಂಬಿಸುವ ಕಾಯಕ ಸುರುಹಚ್ಚಿಕೊಳ್ಳಬೇಡಿ..ನಂಬಲು ಜನ ಮೂರ್ಖರಲ್ಲ..

     ಉತ್ತರ
  • Naani
   ಜುಲೈ 8 2014

   ನಿಮ್ಮ ದರ್ಗಾ ಯಾರ ಬಾಲ ಹಿಡಿಯುವುದೂ ಬೇಡ. ಬಸವಣ್ಣ ಮತ್ತು ಇತರ ವಚನಕಾರರ ವಿಚಾರಗಳನ್ನು ತಿರುಚಿ ಇಲ್ಲದ ಅರ್ಥಗಳನ್ನು ‘ವಾಚ್ಯವಾಗಿ’, ‘ಸೂಚ್ಯವಾಗಿ’ ಅನ್ನೋ ಬುರುಡೆ ಪುರಾಣ ಊದಿ ತಮ್ಮ ವೈಯುಕ್ತಿಕ ರಿಲಿಜನ್ನಿನ ವಿಚಾರಗಳನ್ನೇ ವಚನಕಾರರ ಹೆಸರಲ್ಲಿ ಊದುವುದನ್ನು ಬಿಟ್ಟರೆ ಸಾಕು. ವಚನಕಾರರು ಯಾವ ಸಾಧನೆಯ ಮಾರ್ಗದರ್ಶಿಯಾಗಿ ಈ ವಚನಗಳನ್ನು ಬರೆದಿರುವರೋ ಅದನ್ನು ಅರ್ಥಮಾಡಿಕೊಂಡು ಬರೆಯಲಿ ಸಾಕು.

   ಇನ್ನೂ ಅವರು ಎಲ್ಲಿಯಾದರೂ ಏನಾದರೂ ಊದಿಕೊಂಡಿರಲಿ ಅವರನ್ನು ಇಲ್ಲಿ ನೀವು ಎಳೆತಂದರೆ ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ತಮ್ಮ ವಾದವನ್ನು ಸಮರ್ಥಿಸಬೇಕು ಇಲ್ಲವೇ ಅದು ಬುರುಡೆಪುರಾಣ ಎನ್ನುವುದಷ್ಟೇ ನನ್ನ ತೀರ್ಮಾನ. ಇದುವರೆಗೂ ಒಂದಾದರೂ ಆ ರೀತಿಯ ಸಮಂಜಸ ಉತ್ತರ ತಮ್ಮಿಂದ ಬಂದಿರುವ ನಿಧರ್ಶನವಿದೆಯೇ???

   ಉತ್ತರ
   • Nagshetty Shetkar
    ಜುಲೈ 8 2014

    “ನಿಮ್ಮ ದರ್ಗಾ ಯಾರ ಬಾಲ ಹಿಡಿಯುವುದೂ ಬೇಡ”

    ನೀವು ಹಿಡಿರುವುದು ಬಾಲು ಅವರ ಬಾಲವನ್ನೋ ಮತ್ತೇನನ್ನೋ???

    ಉತ್ತರ
    • Naani
     ಜುಲೈ 8 2014

     ಬುರುಡೆ ಬಿಡುವುದನ್ನು ಬಿಟ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ರೆ ಬೇರೆಯವರಿಂದಲೂ ನೀವು ಉತ್ತರ ನಿರೀಕ್ಷಿಸಬಹುದು ಶೆಟ್ಕರ್. ಇಷ್ಟೊಂದು ಪ್ರಶ್ನೆಯಲ್ಲಿ ಒಂದಕ್ಕೂ ಉತ್ತರ ಕೊಡೋ ಯೋಗ್ಯತೆ ಇಲ್ಲದ ನೀವು ಯಾರ್ಯಾರು ಏನೇನು ಹಿಡ್ಂಡಿದ್ದಾರೆ ಅನ್ನೋದನ್ನು ನೋಡೋ ತೆವಲು ಮಾತ್ರ ಆಗಾಗ ನಿಮ್ಮಲ್ಲಿ ಇಣುಕ್ಕುತ್ತಿರುತ್ತದೆ, ಅಲ್ವಾ??? ಪಾಪ ದರ್ಗಾರನ್ನು ಬಿಟ್ಟುಬಿಡಿ ಅವರಪಾಡಿಗೆ ಅವರಿದ್ದು ಬಿಡಲಿ.

     “ಇದುವರೆಗೂ ಒಂದಾದರೂ ಆ ರೀತಿಯ ಸಮಂಜಸ ಉತ್ತರ ತಮ್ಮಿಂದ ಬಂದಿರುವ ನಿಧರ್ಶನವಿದೆಯೇ???”

     ಉತ್ತರ
     • Nagshetty Shetkar
      ಜುಲೈ 9 2014

      ಡಂಕಿನ್ ಝಳಕಿ ಅವರೇ, ನಿಮ್ಮ ಗುರು ಬಾಲು ಅವರಿಗೆ ‘ಜ್ಞಾನೋದಯ’ವಾಗಿದೆಯಂತೆ! 😉 ಹಾಗಂತ ಅವರೇ ಎಲ್ಲೆಡೆ ಡಂಗುರ ಸಾರುತ್ತಿದ್ದಾರೆ!! 😛 ನೀವೇ ಮೊದಲಾದ ‘ಬಾಲಂ’ಗೋಚಿಗಳಿಗೆ ‘ಜ್ಞಾನೋದಯ’ವಾಗುವುದು ಯಾವಾಗ?? 😉

      ಉತ್ತರ
      • ರೀ ಶೆಟ್ಕರ್,
       ವಿಷಯದ ಬಗ್ಗೆ ಮಾತನಾಡಲಿಕ್ಕೆ ನಿಮ್ಮ ಖಾಲಿ ತಲೆಯಲ್ಲಿ ಏನೂ ಉಳಿದಿಲ್ಲವೇ? ಬರಿ nonsense ಮಾತಾಡ್ತೀರಲ್ರಿ…
       ನನಗೆ ‘ಜ್ಞಾನೋದಯ’ವಾಗಿದೆ ಅಂತ ಬಹಿರಂಗವಾಗಿ ಹೇಳಿಕೊಳ್ಳಲಿಕ್ಕೂ ಧೈರ್ಯ ಬೇಕಾಗುತ್ತದೆ.ಅವರಿಗೆ ‘ಜ್ಞಾನೋದಯ’ವಾಗಿದೆಯೋ ಇಲ್ಲವೋ ಕಟ್ಟಿಕೊಂಡು ತಮಗೂ ತಮ್ಮ ಗುರುಗಳಿಗೂ ಆಗಬೇಕಾದ್ದೇನಿದೆ.ಸಾಧ್ಯವಾದರೆ, ನಿಮ್ಮ ಗುರುಗಳಿಗೆ ವಚನ ಸರಣಿಯ ಲೇಖನಗಳಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಈಗಲಾದರೂ ಉತ್ತರಿಸುವ ಬೌದ್ಧಿಕತೆ ಉಳಿದಿದೆಯೇ ಎಂದು ಮೊದಲು ಪರೀಕ್ಷಿಸಿಕೊಳ್ಳಿ.ಅದು ಬಿಟ್ಟು ಉಳಿದವರ ಬಗ್ಗೆ ಹೀಗೆ ವೈಯುಕ್ತಿಕ ಟೀಕೆಗಿಳಿಯುವುದು ನಿಮ್ಮ ಬೌದ್ಧಿಕ ದಾರಿದ್ರ್ಯವನ್ನಷ್ಟೇ ತೋರಿಸುತ್ತದೆ.

       ಉತ್ತರ
       • Nagshetty Shetkar
        ಜುಲೈ 10 2014

        “ನಿಮ್ಮ ಗುರುಗಳಿಗೆ ವಚನ ಸರಣಿಯ ಲೇಖನಗಳಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಈಗಲಾದರೂ ಉತ್ತರಿಸುವ ಬೌದ್ಧಿಕತೆ ಉಳಿದಿದೆಯೇ”

        ಗ್ಹೆಂಟ್ ಮಠದ ಸ್ವಾಮಿಗಳ ಗಿಂಡಿ ಮಾಣಿ ಆಗಿ ನೀವುಗಳೆಲ್ಲ ಪಡೆದ ಜ್ಞಾನವೇನು ಅಂತ ಎಲ್ಲರಿಗೂ ಗೊತ್ತು – ಪ್ರಜಾವಾಣಿಯ ಹಳೆಯ ಸಂಚಿಕೆಗಳನ್ನು ನೋಡಿ ಬೇಕಿದ್ದರೆ. ನಿಮ್ಮ ಡಂಕಿನ್ ಅವರಿಗೆ ನಿಜಕ್ಕೂ ದರ್ಗಾ ಸರ್ ಅವರ ವಚನ ಸರಣಿಯ ಲೇಖನಗಳ ಬಗ್ಗೆ ವೈಚಾರಿಕ ಆಸಕ್ತಿ ಇದ್ದರೆ ತಮ್ಮ ಸ್ವನಾಮಧೇಯದಿಂದಲೇ ದರ್ಗಾ ಸರ್ ಅವರಿಗೆ ಬರೆಯಲು ಹೇಳಿ ಶೆಟ್ರೆ! ಫೇಕ್ ಐಡಿ ಬಳಸಿ ದರ್ಗಾ ಸರ್ ಮೇಲೆ ಸ್ನೈಪರ್ ಆಟಾಕ್ ಮಾಡುವ ಕೆಟ್ಟ ಚಾಳಿ ಬಿಡಲು ಹೇಳಿ.

        ಉತ್ತರ
        • ವಿಜಯ್ ಪೈ
         ಜುಲೈ 10 2014

         ಈ ಎಡಬಿಡಂಗಿ ಮಂಡ ಮಾಣಿ ಗಳಿಗೆ ತಾವಾಡುವ ಮಾತು ತಮಗೂ ಅನ್ವಯಿಸುತ್ತದೆ ಎಂದು ಅನಿಸದಿರುವುದು ಆಶ್ಚರ್ಯ! 🙂

         ಉತ್ತರ
        • ಚರ್ಚೆಯಲ್ಲೇ ಇದ್ದಿರದ ಡಂಕಿನ್ ಅವರನ್ನೇಕೆ ಎಳೆದು ತರುತ್ತೀರಿ.ಡಂಕಿನ್ ಅವರು ಪಕ್ಕಕ್ಕಿರಲಿ.ಸುಮ್ಮನೇ ಟೈಮ್ ಪಾಸ್ ಮಾತುಗಳೇಕೆ?
         ನಿಮ್ಮ ಗುರುಗಳ ವಚನ ಸರಣಿಗಳಲ್ಲಿ ಕೇಳಿದ ಪ್ರಶ್ನೆಗಳು ಇನ್ನೂ ಅನಾಥವಾಗಿ ಬಿದ್ದಿವೆ.ಅವರು ಉತ್ತರಿಸಬಲ್ಲರೆಂದಾದರೆ,ಅವನ್ನು ಒಟ್ಟು ಮಾಡಿ ಪ್ರಕಟಿಸುತ್ತೇನೆ. ಹೇಳಿ ನಿಮ್ಮ ಗುರುಗಳು ಉತ್ತರಿಸಬಲ್ಲರಾ? ಹೇಳಿ

         ಉತ್ತರ
         • Nagshetty Shetkar
          ಜುಲೈ 12 2014

          ೧. ಡಂಕಿನ್ ಅವರು ಚರ್ಚೆಯಲ್ಲಿ ನಿಜಕ್ಕೂ ಇಲ್ಲದಿದ್ದರೆ ಅವರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಲ್ಲವೇ? ನಿಮ್ಮ ಮೂಲಕ ಹೇಳಿಸುವ ಬಾಬತ್ತೇ ಇರುತ್ತಿರಲಿಲ್ಲ!!

          ೨. ನಾನು ಎಂದೋ ನಿಮಗೆ ಹೇಳಿದ್ದೆ. ವಚನಗಳ ಬಗ್ಗೆ ನಿಮಗೆ ಇರುವ ಎಲ್ಲಾ ಹಿರಿ ಕಿರಿ ಪ್ರಶ್ನೆಗಳನ್ನು ಒಂದು ಓಪನ್ ಪತ್ರದ ರೂಪದಲ್ಲಿ ದರ್ಗಾ ಸರ್ ಅವರಿಗೆ ಬರೆಯಿರಿ ಅಂತ. ನಿಮ್ಮ ಪ್ರಶ್ನೆಗಳಿಗೆ ದರ್ಗಾ ಸರ್ ಎಂದೂ ಹೆದರುವವರಲ್ಲ. ಆದರೆ ನಿಮಗೇ ಧೈರ್ಯ ಇರಲಿಲ್ಲ ದರ್ಗಾ ಸರ್ ಅವರಿಗೆ ವಸ್ತುನಿಷ್ಠವಾಗಿ ಪ್ರಶ್ನೆಗಳನ್ನು ಕೇಳಲು! ಈಗ ಕಪಟ ಧೈರ್ಯ ತೋರಿಸುತ್ತಿದ್ದೀರಿ.

          ಉತ್ತರ
          • ಡಂಕಿನ್ ಅವರು ಚರ್ಚೆಯಲ್ಲಿ ನಿಜಕ್ಕೂ ಇಲ್ಲದಿದ್ದರೆ ಅವರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಲ್ಲವೇ? ನಿಮ್ಮ ಮೂಲಕ ಹೇಳಿಸುವ ಬಾಬತ್ತೇ ಇರುತ್ತಿರಲಿಲ್ಲ!!

           ಅಂದರೆ ಉದಾಹರಣೆಗೆ ನಾಳೆ ನೀವು ಬರಾಕ್ ಒಬಾಮಾ ಮೇಲೆ ಏನಾದರೂ ಅಪಾದನೆ ಮಾಡಿದರೆ, ಒಬಾಮಾನೆ ಬಂದು ಸ್ಪಷ್ಟಿಕರಣ ನೀಡಬೇಕು!. ಅಸಲಿಯತ್ತು ತಿಳಿದ ಬೇರೆ ಯಾರೂ ಉತ್ತರಿಸಿದರೆ ಅದು ಮಾನ್ಯವಲ್ಲ ಎಂಧಾಯಿತು. ಅಂದ ಹಾಗೆ ಒಂದು ಮಾತು, ದರ್ಗಾ ಸಾಹೇಬರಿಗೆ ನಿಮ್ಮ ಮೂಲಕ ಹೇಳಿಸುವ, ಹೇಳಿಕೆ ಕೊಡಿಸುವ ಹರಕತ್ತು ಇದೆಯೆ?? ನೀವು ಅವರ ಮುಖವಾಣಿಯೆ ಅಥವಾ ಅಧಿಕೃತ ವಕ್ತಾರರೆ??

           ನಾನು ಎಂದೋ ನಿಮಗೆ ಹೇಳಿದ್ದೆ. ವಚನಗಳ ಬಗ್ಗೆ ನಿಮಗೆ ಇರುವ ಎಲ್ಲಾ ಹಿರಿ ಕಿರಿ ಪ್ರಶ್ನೆಗಳನ್ನು ಒಂದು ಓಪನ್ ಪತ್ರದ ರೂಪದಲ್ಲಿ ದರ್ಗಾ ಸರ್ ಅವರಿಗೆ ಬರೆಯಿರಿ ಅಂತ.

           ಅವಧಿಯಲ್ಲಿ ಓದುಗರು ಕೇಳಿದ್ದು ಕ್ಲೊಸ್ಡ್ ಪ್ರಶ್ನೆಗಳೆ?? ಅವುಗಳ ಗತಿ ಏನಾಯಿತು? ಈಗ ಹೊಸ ಆಟ ಆಡಲು ಮತ್ತೆ ರೆಡಿನಾ?

           ನಿಮ್ಮ ಪ್ರಶ್ನೆಗಳಿಗೆ ದರ್ಗಾ ಸರ್ ಎಂದೂ ಹೆದರುವವರಲ್ಲ

           ಹಾಗೆಯೇ ಉತ್ತರ ಹೇಳುವವರು ಅಲ್ಲ!

           ಆದರೆ ನಿಮಗೇ ಧೈರ್ಯ ಇರಲಿಲ್ಲ ದರ್ಗಾ ಸರ್ ಅವರಿಗೆ ವಸ್ತುನಿಷ್ಠವಾಗಿ ಪ್ರಶ್ನೆಗಳನ್ನು ಕೇಳಲು! ಈಗ ಕಪಟ ಧೈರ್ಯ ತೋರಿಸುತ್ತಿದ್ದೀರಿ.

           ವಸ್ತುನಿಷ್ಠವಾಗಿ ಉತ್ತರಿಸುವವರಿಗೆ ಪ್ರಶ್ನೆ ಕೇಳಬಹುದು. ಅದೇ ಮಾರ್ಕ್ಸ್, ಪುರೋಹಿತಶಾಹಿ, ಬ್ರಾಹ್ಮಣ್ಯ, ಮನು ಮುಂತಾದ ಅರ್ಥವಿಲ್ಲದ, ಕೇಳಿ-ಕೇಳಿ ಬೇಸರ ಬಂದ ಬುಡು-ಬುಡಿಕೆ ಬಿಟ್ಟು ಬೇರೆ ಏನಾದರೂ ಬಂಡವಾಳ ಇದೆಯೆ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments