ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2014

21

ನಿಮ್ಮ ಬಳಿಯಿರುವ ಎರಡು ದನಗಳು ಹಾಗೂ ’ಇಸಂ’ಗಳು …

by ನಿಲುಮೆ

– ರಾಘವೇಂದ್ರ ಸುಬ್ರಹ್ಮಣ್ಯ

ಹಸುಗಳುಸೋಶಿಯಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅದರಲ್ಲಿ ಒಂದನ್ನು ತೆಗೆದುಕೊಂಡು ನಿಮ್ಮ ನೆರೆಯವನಿಗೆ ಕೊಡುತ್ತದೆ.

ಕಮ್ಯೂನಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಕೊಡುತ್ತದೆ.

ಫ್ಯಾಸಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಮಾರುತ್ತದೆ.

ಕ್ಯಾಪಿಟಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ.

ನಾಝೀಯಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತದೆ.

ಬ್ಯೂರೋಕ್ರಾಟಿಸಂ (ಅಧಿಕಾರಶಾಹಿ): ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು, ಒಂದು ದನಕ್ಕೆ ಗುಂಡಿಕ್ಕೆ, ಇನ್ನೊಂದು ದನದ ಹಾಲು ಹಿಂಡಿ, ಆಮೇಲೆ ಆ ಹಾಲನ್ನು ಚೆಲ್ಲುತ್ತದೆ.

ಸಾಂಪ್ರದಾಯಿಕ ಬಂಡವಾಳಶಾಹಿ (Traditional Capitalism): ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ. ನಿಮ್ಮ ದನದ ಹಿಂಡು ದೊಡ್ಡದಾಗುತ್ತದೆ ಹಾಗೂ ಆರ್ಥಿಕಸ್ಥಿತಿ ಉತ್ತಮಗೊಳ್ಳುತ್ತದೆ. ನೀವು ನಿಮ್ಮ ದನದ ಹಿಂಡನ್ನು ಮಾರಿ ವ್ಯವಹಾರದಿಂದ ಸ್ವಯಂನಿವೃತ್ತಿ ಪಡೆದು, ಬರುವ ಸಂಪಾದನೆಯಿಂದ ನಿವೃತ್ತಿ ಜೀವನ ನಡೆಸುತ್ತೀರಿ.

ರಾಯಲ್ ಬ್ಯಾಕ್ ಆಫ್ ಸ್ಕಾಟ್ಲಾಂಡ್ ಸಾಹಸೋದ್ಯಮ ಬಂಡವಾಳಶಾಹಿ (RBS Venture Capitalism): ನಿಮ್ಮ ಬಳಿ ಎರಡು ದನಗಳಿವೆ. ನೀವದರಲ್ಲಿ ಮೂರುದನಗಳನ್ನು ನಿಮ್ಮ ಭಾವನ ಬ್ಯಾಂಕಿನ ಸಾಲದ ಮೇಲೆ ಸೃಷ್ಟಿಸಿರುವ ಪಬ್ಲಿಕ್ ಲಿಮಿಟೆಡ್ ಕಂಪೆನಿಗೆ ಮಾರುತ್ತೀರಿ. ಆನಂತರ ಒಂದು ಸಾಲದ ಶೇರುಗಳ ಕಾಯ್ದೆಯೊಂದಿಗೆ ಸಾಮಾನ್ಯ ವಾಗ್ದಾನ ಪತ್ರವೊಂದನ್ನು ಕಾರ್ಯಗತಗೊಳಿಸಿ ನಾಲ್ಕು ದನಗಳನ್ನು ವಾಪಾಸು ಪಡೆಯುತ್ತೀರಿ. ಜೊತೆಗೆ ಆ ಎಲ್ಲಾ ಐದು ದನಗಳಿಗೆ ತೆರಿಗೆ ವಿನಾಯ್ತಿಯನ್ನೂ ಪಡೆಯುತ್ತೀರಿ. ನಂತರ ಆರು ದನಗಳಿಂದ ಹಾಲು ಕರೆಯುವ ಹಕ್ಕನ್ನು ಕೇಮನ್ ದ್ವೀಪದಲ್ಲಿ ಲಿಸ್ಟ್ ಮಾಡಲಾಗಿರುವ ಒಬ್ಬ ನಿಗೂಡ ವ್ಯಕ್ತಿಯ ಪ್ರಮುಖ ಮಾಲಿಕತ್ವವಿರುವ ಒಂದು ಕಂಪನಿಗೆ ದಲ್ಲಾಳಿಯೊಬ್ಬನ ಮೂಲಕ ಮಾರುತ್ತೀರಿ, ಹಾಗೂ ಆ ಕಂಪನಿಯಿಂದ ಎಲ್ಲಾ ಏಳು ದನಗಳ ಹಕ್ಕನ್ನು ವಾಪಸು ಖರೀದಿಸುತ್ತೀರಿ. ನಿಮ್ಮ ಕಂಪನಿಯ ವಾರ್ಷಿಕ ವರದಿಯಲ್ಲಿ ಎಂಟುದನಗಳಿವೆ ಹಾಗೂ ಇನ್ನೊಂದು ದನವನ್ನು ಕೊಳ್ಳುವ ತೆರೆದ ಆಯ್ಕೆ ನಿಮಗೆ ಬಿಟ್ಟಿದೆ.

ಅಮೇರಿಕನ್ ಬಹುರಾಷ್ಟ್ರೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ಒಂದನ್ನು ಮಾರಿ, ಉಳಿದೊಂದು ದನದ ಮೇಲೆ ನಾಲ್ಕುದನಗಳಷ್ಟು ಹಾಲುಕೊಡುವಂತೆ ಒತ್ತಡ ಹೇರುತ್ತೀರಿ. ಸ್ವಲ್ಪ ಕಾಲದ ನಂತರ ‘ನಮ್ಮ ದನ ಹೇಗೆ ಸತ್ತಿತು!?’ ಎಂಬುದನ್ನು ವಿಶ್ಲೇಷಿಸಲು ಒಬ್ಬ ಸಲಹೆಗಾರ(consultant)ನನ್ನು ನೇಮಕ ಮಾಡುತ್ತೀರಿ.

ಫ್ರೆಂಚ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಮುಷ್ಕರ ಮಾಡಿ, ಗಲಭೆಯೆಂದನ್ನು ಸಂಘಟಿಸಿ, ರಾಸ್ತಾರೋಕೋ ಚಳುವಳಿ ಮಾಡುತ್ತೀರಿ. ಯಾಕೆಂದರೆ ನಿಮಗೆ ಮೂರು ದನಗಳು ಬೇಕಾಗಿವೆ.

ಇಟಾಲಿಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಆದರೆ ಅವೆಲ್ಲಿವೆಯೆಂದು ನಿಮಗೆ ಗೊತ್ತಿಲ್ಲ. ಆದ್ದರಿಂದ, ನೀವು ಲಂಚ್ ಮಾಡಲು ನಿರ್ಧರಿಸುತ್ತೀರ

ಸ್ವಿಸ್ ಸಂಸ್ಥೆ: ನಿಮ್ಮ ಬಳಿ 5,000 ದನಗಳಿವೆ. ಆದರೆ ಅವ್ಯಾವುದೂ ನಿಮ್ಮದಲ್ಲ. ನೀವು ಅವುಗಳನ್ನು ನೋಡಿಕೊಳ್ಳುವುದಕ್ಕಾಗಿ ಅವುಗಳ ವಾರಸುದಾರರಿಂದ ಶುಲ್ಕ ವಸೂಲಿ ಮಾಡುತ್ತೀರಿ.

ಚೈನೀಸ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅವುಗಳನ್ನು ನೋಡಿಕೊಳ್ಳಲು ನೀವು 300 ಜನರನ್ನು ನಿಯಮಿಸುತ್ತೀರಿ. ನೀವು ನಿಮ್ಮೆಲ್ಲಾ ನಾಗರೀಕರಿಗೆ ಉದ್ಯೋಗ ಕಲ್ಪಿಸಿರುವುದಾಗಿ ಹಾಗೂ ಅತ್ಯುತ್ತಮ ಗೋ-ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದಾಗಿ ಘೋಷಿಸುತ್ತೀರಿ. ಆಮೇಲೆ, ನಿಜವಿಷಯವನ್ನು ವರದಿ ಮಾಡಲು ಪ್ರಯತ್ನಿಸಿದ ಪತ್ರಿಕಾ ವರದಿಗಾರನನ್ನು ಬಂಧಿಸುತ್ತೀರಿ.

ಭಾರತೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವವುಗಳನ್ನು ಪೂಜಿಸುತ್ತೀರಿ

ಬ್ರಿಟಿಷ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅವೆರಡೂ ಹುಚ್ಚುದನಗಳು

ಇರಾಕಿ ಸಂಸ್ಥೆ: ನಿಮ್ಮ ಬಳಿ ಬಹಳಷ್ಟು ದನಗಳಿವೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ನಿಮ್ಮಲ್ಲಿ ಒಂದೂ ದನವಿಲ್ಲವೆಂದು ನೀವು ಹೇಳಿಕೆ ಕೊಡುತ್ತೀರಿ. ಆದರೆ ನಿಮ್ಮನ್ನು ಯಾರೂ ನಂಬುವುದಿಲ್ಲ. ಬದಲಿಗೆ ನಿಮ್ಮ ಮೇಲೆ ಬಾಂಬುಗಳಿಂದ ದಾಳಿ ನಡೆಸಿ, ನಿಮ್ಮ ಇಡೀ ದೇಶವನ್ನು ಚಿಂದಿ-ಚಿತ್ರಾನ್ನ ಮಾಡುತ್ತಾರೆ. ಈಗಲೂ ನಿಮ್ಮಲ್ಲಿ ಒಂದೂ ದನವಿಲ್ಲ. ಆದರೆ ಕನಿಷ್ಟ ನಿಮ್ಮಲ್ಲಿ ಪ್ರಜಾಪ್ರಭುತ್ವವಿದೆಯೆಂದು ನಿಮ್ಮ ಮೇಲೆ ದಾಳಿ ಮಾಡಿಸಿದವರು ನಿಮ್ಮನ್ನು ಸಮಾಧಾನಿಸುತ್ತಾರೆ.

ಆಸ್ಟ್ರೇಲಿಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಕಂಪನಿ ಚೆನ್ನಾಗಿ ನಡೆಯುತ್ತಿದೆ. ನೀವು ಆಫೀಸಿನ ಬಾಗಿಲು ಮುಚ್ಚಿ, ಒಂದೆರಡು ಬಿಯರ್ ಕುಡಿಯಲು ಹೋಗುತ್ತೀರಿ.

ನ್ಯೂಜಿಲ್ಯಾಂಡ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನಿಮ್ಮ ಎಡಬದಿಯಲ್ಲಿರುವ ದನ ನಿಮಗೆ ಆಕರ್ಷಕವಾಗಿ ಕಾಣಿಸುತ್ತದೆ.

ಗ್ರೀಕ್ ಸಂಸ್ಥೆ 1: ನಿಮ್ಮ ಬಳಿ ಪ್ರೆಂಚ್ ಹಾಗೂ ಜರ್ಮನ್ ಬ್ಯಾಂಕುಗಳಿಂದ ಸಾಲವಾಗಿ ಪಡೆದ ಎರಡು ದನಗಳಿವೆ. ನೀವು ಅವೆರಡನ್ನೂ ತಿಂದು ಮುಗಿಸುತ್ತೀರಿ. ಬ್ಯಾಂಕುಗಳು ಹಾಲಿಗಾಗಿ ಕರೆಮಾಡಿದಾಗ, ನೀವು ದಿಕ್ಕುತೋಚದಾಗಿ ವಿಶ್ವಬ್ಯಾಂಕಿಗೆ ಫೋನಾಯಿಸುತ್ತೀರಿ. ವಿಶ್ವಬ್ಯಾಂಕ್ ನಿಮಗೆ ಎರಡು ದನಗಳನ್ನು ಸಾಲವಾಗಿ ಕೊಡುತ್ತದೆ. ನೀವು ಅವನ್ನೂ ತಿಂದು ಮುಗಿಸುತ್ತೀರಿ. ನಂತರ ಬ್ಯಾಂಕುಗಳು ಮತ್ತು ವಿಶ್ವಬ್ಯಾಂಕು ತಮ್ಮ ದನಗಳಿಗಾಗಿ ಹಾಗೂ ಹಾಲಿಗಾಗಿ ನಿಮಗೆ ಕರೆ ಮಾಡುತ್ತವೆ.
ನೀವು ಚೌರ ಮಾಡಿಸಿಕೊಳ್ಳಲು ಭಂಡಾರಿಶಾಪಿಗೆ ಹೋಗುತ್ತಿರಿ………

ಗ್ರೀಕ್ ಸಂಸ್ಥೆ 2: ನಿಮ್ಮ ಬಳಿ ಎರಡು ದನಗಳಿವೆ. ನೀವು 3000 ದನಗಳಿಗಾಗುವಷ್ಟು ಮೇವಿನ ಹುಲ್ಲು, ಕಲಗಚ್ಛುಗಳನ್ನು ಕೊಂಡು, ಅದನ್ನು ಶೇಖರಿಸಲು ಕಣಜಗಳನ್ನು ಕಟ್ಟಿಸಿ, ತಳಿಸಂವರ್ಧನಾ ಘಟಕಗಳನ್ನು ಕಟ್ಟಿ, ಅದಕ್ಕಾಗಿ 3000 ಎತ್ತುಗಳನ್ನು ಖರೀದಿಸಿ, ಹಾಲುಕರೆಯಲು ದೊಡ್ಡ ಘಟಕಗಳು, ಅದನ್ನು ಶೇಖರಿಸಲು ಶೀತಲೀಕರಣ ಘಟಕಗಳು, ದನಗಳಿಗಾಗಿ ಕಸಾಯಿಖಾನೆಗಳು ಮುಂತಾದುವನ್ನು ಸ್ಥಾಪಿಸುತ್ತೀರಿ. ನಿಮ್ಮಬಳಿ ಈಗಲು ಎರಡೇ ಹಸುಗಳಿವೆ

ಜಪಾನೀಸ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಆ ದನಗಳು ಸಾಮಾನ್ಯ ದನಗಳಿಗಿಂತ ಹತ್ತುಪಟ್ಟು ಸಣ್ಣದಾಗಿರುವಂತೆ ಹಾಗೂ ಇಪ್ಪತ್ತು ಪಟ್ಟು ಹೆಚ್ಚು ಹಾಲುಕೊಂಡುವಂತೆ ತಳಿವಿನ್ಯಾಸ ಮಾಡುತ್ತೀರಿ. ಆನಂತರ ಒಂದು ಬುದ್ಧಿವಂತ ದನದ ಕಾರ್ಟೂನ್ ಸೃಷ್ಟಿಸಿ ಅದಕ್ಕೆ ಕೌಕೆಮೋನ್ ಎಂಬ ಹೆಸರಿಟ್ಟು ಜಗತ್ತಿನಾದ್ಯಂತ ಮಾರುತ್ತೀರಿ.

ಜರ್ಮನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಆ ದನಗಳು ತಿಂಗಳಿಗೊಂದು ಬಾರಿ ಮಾತ್ರ ಮೇವು ತಿಂದು, ನೂರು ವರ್ಷ ಬಾಳುವಂತೆ ಹಾಗೂ ತಮ್ಮಷ್ಟಕ್ಕೆ ತಾವೇ ಹಾಲು ಕರೆದುಕೊಳ್ಳುವಂತೆ ಪುನರ್ವಿನ್ಯಾಸ ಮಾಡುತ್ತೀರಿ.

ರಶ್ಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಅವುಗಳನ್ನು ಎಣಿಸಿ ನೋಡಿದಾಗ ಐದು ದನಗಳ ಲೆಕ್ಕ ಸಿಗುತ್ತದೆ. ನೀವು ಇನ್ನೊಮ್ಮೆ ಎಣಿಸುತ್ತೀರಿ. ಈ ಬಾರಿ ನಲವತ್ತೆರಡು ದನಗಳ ಲೆಕ್ಕ ಸಿಗುತ್ತದೆ.ತಲೆಕೊಡವಿ ಮತ್ತೊಮ್ಮೆ ಎಣಿಸುತ್ತೀರಿ. ಹನ್ನೆರಡು ದನಗಳ ಲೆಕ್ಕ ಸಿಗುತ್ತದೆ. ನೀವು ಲೆಕ್ಕ ನಿಲ್ಲಿಸಿ ಇನ್ನೊಂದು ವೋಡ್ಕಾ ಬಾಟಲಿಯನ್ನು ತೆರೆಯುತ್ತೀರಿ.

ಕೊನೆಯದು (ಹಾಗೂ ನಾನೇ ಬರೆದದ್ದು):

ಎಐಸಿಸಿಯಿಸಂ:
ನಿಮ್ಮ ಬಳಿ ಎರಡು ದನಗಳಿವೆ. ನೀವದನ್ನು ನೋಡಿಕೊಳ್ಳಲು ಹಣ ಸಾಲದೆ ನಿಮ್ಮ ಮೂಲಕಂಪನಿಯಿಂದ ಐವತ್ತು ಸಾವಿರ ರೂಪಾಯಿ ಸಾಲತೆಗೆದುಕೊಂಡು ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತೀರಿ. ಅದೇ ಸಮಯಕ್ಕೆ, ಮೂಲಕಂಪನಿಯ ಕಾರ್ಯದರ್ಶಿ ನೀವೇ ಅಗಿರುವುದರಿಂದ, ನಿಮ್ಮ ಮೇಲೆ ನೀವೇ ಮರುಕ ಪಟ್ಟು, ನಿಮಗೊಂದಷ್ಟು ಸಾಲ ಕೊಟ್ಟು ಅದನ್ನು ಮನ್ನಾ ಮಾಡುತ್ತೀರ. ಬಂದಿರುವ ಸಾಲದಲ್ಲಿ ದನಗಳ ಆರೈಕೆಯನ್ನು ಮಾಡುವ ಬದಲು, ಒಂದಷ್ಟು ಕಟ್ಟಡಗಳನ್ನು ಕಟ್ಟಿ ಅವುಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿ ಮಾಡಿ ಮತ್ತಷ್ಟು ದನಗಳನ್ನ್ನು ಕೊಂಡು, ಅವುಗಳನ್ನು ಮೇಲೆ ಹೇಳಿದ ಸ್ವಿಸ್ ಸಂಸ್ಥೆಯ ಜವಾಬ್ದಾರಿಗೆ ಕೊಟ್ಟು ನಮಗೇನೂ ಗೊತ್ತೇ ಇಲ್ಲ ಎಂಬಂತೆ ಕುಳಿತಿರುತ್ತೀರಿ.

ಅದೇ ಸಮಯದಲ್ಲಿ ನಿಮ್ಮ ಅಳಿಯ ಕೇವಲ ಐದುಲಕ್ಷ ರೂಪಾಯಿ ಬಂಡವಾಳದಲ್ಲಿ, ನೂರಾ ನಲವತ್ತು ಕೋಟಿಯಷ್ಟು ಜಮೀನು ಕೊಂಡು ಹಗರಣಕ್ಕೆ ಸಿಲುಕಿಕೊಂಡಾಗ ನೀವವನನ್ನು ರೈತನೆಂದು ನಿರೂಪಿಸಿ ಬಚಾಯಿಸುತ್ತೀರಿ.

ನಿಮ್ಮ ಮನೆಯ ಮಗ ಎಷ್ಟೇ ಮೂರ್ಖನಾಗಿದ್ದರೂ ಅವನನ್ನೇ ನಾಯಕನೆಂದು ಬಿಂಬಿಸಿ ‘ಅಧಿಕಾರದಾಹವೆಂಬುದು ವಿಷ’ ಎಂದು ಕೂಗಾಡಿಸಿ, ಕೊನೆಗೆ ಚುನಾವಣೆಯಲ್ಲಿ ಸೋತು ಸುಣ್ಣವಾದಮೇಲೂ, ಅದೇ ಅಧಿಕಾರಕ್ಕಾಗಿ ಸ್ಪೀಕರ್ ಇಂದ ರಾಷ್ಟ್ರಪತಿಯ ಮನೆಯವರೆಗೆ ಅಲೆಯುತ್ತೀರಿ.

(ವಿ.ಸೂ: ಎಐಸಿಸಿಯಿಸಂ ಎಂಬುದು ಬಹಳ ಕ್ಲಿಷ್ಟ ಹಾಗೂ ಬಹಳ ಆಳವಾದ ಜನೋಪಯೋಗಿ ಸಿದ್ಧಾಂತ. ಅದನ್ನು ಒಂದೆರಡು ನಿಮಿಷಗಳಲ್ಲಿ ನಿರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನತೆ ಇವೇ ಒಂದೆರಡು ಸಾಲುಗಳಲ್ಲಿ ಅದನ್ನು ಅರ್ಥೈಸಿಕೊಳ್ಳಬೇಕಾಗಿ ವಿನಂತಿ)

ಚಿತ್ರಕೃಪೆ :hareraama.in

Advertisements
Read more from ಲೇಖನಗಳು
21 ಟಿಪ್ಪಣಿಗಳು Post a comment
 1. ಜುಲೈ 10 2014

  Really wonderful and easily digestable vichara dhare. Thanks for enlightening us. Nammadhella “dhana” da buddhi. Adda Biddde Swamy!

  ಉತ್ತರ
 2. Nagshetty Shetkar
  ಜುಲೈ 10 2014

  ನಮೋಸರಕಾರ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅದರಲ್ಲಿ ಒಂದನ್ನು ಕದ್ದು ಕಡಿದು ಪಶ್ಚಿಮದ ದೇಶಗಳಿಗೆ ಬೀಫ್ ರೂಪದಲ್ಲಿ ಮಾರುತ್ತದೆ. ಮತ್ತೊಂದನ್ನು ಗೋಮಾತೆ ಅಂತ ಪೂಜೆ ಮಾಡಲು ನಿಮ್ಮನ್ನು ಪ್ರೋತ್ಸಾಹಿಸಿ ನಿಮ್ಮ ದನಕ್ಕೆ ಸಾಬರಿಂದ ಅಪಾಯವಿದೆ ಎಂದು ಭೀತಿಯ ಬೀಜವನ್ನು ಬಿತ್ತಿ ಗೋರಕ್ಷಣಾತೆರಿಗೆಯನ್ನು ನಿಮ್ಮ ಮೇಲೆ ವಿಧಿಸುತ್ತದೆ.

  ಉತ್ತರ
 3. ವಿಜಯ್ ಪೈ
  ಜುಲೈ 10 2014

  ಗಂಜಿಕೇಂದ್ರ ಗಿರಾಕಿಗಳ ಸರಕಾರ : ನೀವು ಎರಡು ದನ ಸರಕಾರ ನಡೆಸುವವರಿಗೆ ಕೊಡಬೇಕು. ದನಕ್ಕೆ ಮೇವು, ಸಾಕುವ ಖರ್ಚು ಕೊಡಬೇಕು. ದಿನಕ್ಕೆ ಎರಡು ಹೊತ್ತು ಹೋಗಿ-ಬಂದು ಹಾಲನ್ನು ಹಿಂಡಿ ಕೊಟ್ಟು ಬರಬೇಕು. ಗಂಜಿಯ ವ್ಯವಸ್ಥೆಯನ್ನೂ ಮಾಡಬೇಕು. ಇದಾದ ಮೇಲೆ ವರ್ಷಕ್ಕೊಮ್ಮೆ ಸರಕಾರದಲ್ಲಿರುವ ಒಬ್ಬೊಬ್ಬರಬ್ಬನ್ನು ಆರಿಸಿ ಉತ್ತಮ ಹಸು ಸಾಕಣೆ ಪ್ರಶಸ್ತಿಯನ್ನೂ ಕೊಡಬೇಕು. ಇವುಗಳ ಮಧ್ಯದಲ್ಲಿ ಆಗಾಗ ಶತ-ಶತಮಾನಗಳಿಂದ ಶೋಷಣೆ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಂಬ ಪುಕ್ಕಟೆ ಭಾಷಣವನ್ನು ಕೇಳಲು ರೆಡಿಯಾಗಿರಬೇಕು.

  ಉತ್ತರ
 4. ಜುಲೈ 15 2014

  ನಾಗಶೆಟ್ಟಿ ಶೆಟ್ಕರ್ ಇಸಂ:

  ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ಒಂದಕ್ಕೆ ರಂಜಾನ್ ದರ್ಗಾ ಅಂತಲೂ, ಇನ್ನೊಂದಕ್ಕೆ ಪುರೋಹಿತಶಾಹಿ ಎಂದು ಹೆಸರಿಟ್ಟು, ಮೊದಲ ದನವನ್ನೇ ಪೂಜಿಸುತ್ತಾ, ಎರಡನೇ ದನಕ್ಕೆ ಊಟವನ್ನೇ ಹಾಕದೆ ಅದನ್ನು ಸಾಧ್ಯವಾದ ಎಲ್ಲಾ ರೀತಿಗಳಿಂದಲೂ ಹಿಂಸಿಸುತ್ತೀರಿ.

  ಇದೆರಡೇ ದನಗಳನ್ನು ಹಿಡಿದುಕೊಂಡೇ ಸಾಮಾಜಕ ತಾಣಗಳಲ್ಲೆಲ್ಲಾ ದೊಂಬರಾಟ ನಡೆಸುತ್ತೀರಿ. ಆ ದೊಂಬರಾಟವನ್ನು ಯಾರೂ ಪ್ರಶಂಸಿಸದಿದ್ದಾಗ, ತಾವೇ ತಮ್ಮ ಆಟಕ್ಕೆ +೧ ಅಂತಾ ಮೆಚ್ಚುಗೆ ಸೂಚಿಸಿಕೊಂಡು, “ತಮ್ಮ ತಮ್ಮ ತನುವನ್ನು ಸಂತೈಸಿಕೊಳ್ಳುತ್ತೀರ” 😛

  ಉತ್ತರ
  • ಗಿರೀಶ್
   ಜುಲೈ 16 2014

   +1 ಇಸಂ

   ಉತ್ತರ
  • Nagshetty Shetkar
   ಜುಲೈ 16 2014

   ನೀವು ವೈದಿಕರೇ ಹೀಗೆ. ಪ್ರಗತಿಪರರ ಹೋರಾಟವನ್ನು ಹಳಿ ತಪ್ಪಿಸಲು ಏನಾದರೂ ಷಡ್ಯಂತ್ರ ಮಾಡುತ್ತಲೇ ಇರುತ್ತೀರಿ.

   ಉತ್ತರ
   • ಗಿರೀಶ್
    ಜುಲೈ 16 2014

    ಶೆಟ್ಕರಿಸಂ: ನಿಮ್ಮ ಬಳಿ ಎರಡು ಹಸು ಇರುತ್ತದೆ, ಒಂದು ಹಸುವಿಗೆ ನಿಲುಮೆಯೆಂತಲೂ ಇನ್ನೊಂದಕ್ಕೆ ವಿಜಯ್ ಪೈ ಎಂತಲೂ ಹೆಸರಿಟ್ಟು ದಿನವೂ ಬೆಳಿಗ್ಗೆ ಎದ್ದು ಅವಕ್ಕೆ ಹೊಡೆಯುತ್ತೀರಿ, ಒಂದು ಹಂದಿಯನ್ನು ಸಾಕಿ ಅದಕ್ಕೆ ರಂಜಾನ್ ಎಂದು ಹೆಸರಿಟ್ಟು ಅದರಲ್ಲಿ ದಿನವೂ ಹಾಲು ಕರೆಯಲು ಪ್ರಯತ್ನಿಸುತ್ತೀರಿ ಅದಕ್ಕೆ ಸೆಕ್ಯುಲರ್ ಹಾಲೆಂದು ಕರೆಯಲು ಬಯಸುತ್ತೀರಿ 😀

    ಉತ್ತರ
    • Nagshetty Shetkar
     ಜುಲೈ 16 2014

     ಹೀಗೇಕೆ ನನ್ನ ಹೆಗಲಿನಿಂದ ನಿಮ್ಮ ಬಂದೂಕನ್ನು ಚಲಾಯಿಸುತ್ತಿದ್ದೀರಿ??? ನಿಮಗೆ ಧೈರ್ಯ ಇದ್ದರೆ ನೇರವಾಗಿಯೇ ದರ್ಗಾ ಸರ್ ಅವರನ್ನು ಹಂದಿ ಎಂದು ಕರೆಯಿರಿ. ನೀವು ವೈದಿಕರಿಗೆ ಹಂದಿ ಎಂದರೆ ಹೇಸಿಗೆ ಅಲ್ಲವೇ?

     ಉತ್ತರ
     • ಗಿರೀಶ್
      ಜುಲೈ 16 2014

      ವೈಧಿಕರಿಗೆ ಹಂದಿ ಎಂದರೆ ಅಸಹ್ಯವೆ? ರಂಜಾನರಿಗಲ್ವ? ಹಂದಿಗಾದರೂ ಸ್ವಲ್ಪ ಉತ್ತರದಾಯಿತ್ವ ಇರುತ್ತದೆ ಎಂದು ಕೊಂಡಿದ್ದೇನೆ

      ಉತ್ತರ
      • Nagshetty Shetkar
       ಜುಲೈ 17 2014

       “ವೈಧಿಕರಿಗೆ ಹಂದಿ ಎಂದರೆ ಅಸಹ್ಯವೆ? ”

       ವೈದಿಕರು ಹಂದಿ ಸಾಕಿದ್ದು ನೀವು ನೋಡಿದ್ದೀರಾ? ಹೋಗಲಿ ಹಂದಿಯನ್ನು ಮುಟ್ಟಿಸಿಕೊಂಡಿದ್ದು ಎಲ್ಲಾದರೂ ಕೇಳಿದ್ದೀರಾ?

       ಉತ್ತರ
       • ಗಿರೀಶ್
        ಜುಲೈ 18 2014

        ರಂಜಾನರೇಕೆ ಸಾಕಬಾರದು, ಬಸವಣ್ಣನ ಜಾತಿ ವಿರೋಧದ ಹೋಾಟವನ್ನು ಅಭಿನವ ಬಸವಣ್ಣರೇಕೆ ಅನುಸರಿಸಬಾರದು ಹಂದಿಯನ್ನೇಕೆ ಅವರು ದಲಿತರಂತೆ ನೋಡುತ್ತಾರೆ ಶೆಟ್ ಕರ ಸಾಯೇಬ್ರೆ

        ಉತ್ತರ
  • valavi
   ಜುಲೈ 18 2014
 5. ಜುಲೈ 16 2014

  ಮಿ. ಶೆಟ್ಕರ್, ನಾನು ವೈದಿಕನಲ್ಲ. ಆದರೂ ನಿಮ್ಮಂತ ಸತ್-ಗುರುಗಳು ಜನಿವಾರ ಹಾಕಿ ನನ್ನನ್ನು ವೈದಿಕನನ್ನಾಗಿ ಮಾಡಿದಮೇಲೆ, ತಲೆಬಾಗಿಸಿ ಸ್ವೀಕರಿಸದೆ ಇನ್ನೇನು ಮಾಡಲಿ. ‘ಹಾಕಿದ ಜನಿವಾರವಾ….ಸತ್ಗುರುನಾಥ…ಹಾಕಿದ ಜನಿವಾರವಾ’ ಅಂತಾ ಹಾಡು ಹೇಳಿ ಕುಣಿತೀನಿ 🙂

  ನೀವು ಪ್ರಗತಿಪರರೋ ಅಲ್ಲವೋ ಗೊತ್ತಿಲ್ಲ. ‘ಪರಪರ ಎಂದು ಕೆರೆದುಕೊಳ್ಳುವ ಪರರು’ ಎಂದಂತೂ ಗೊತ್ತಾಯ್ತು. ನೀವು ನಿಜವಾಗಿಯೂ ಪ್ರಗತಿಪರರಾಗಿದ್ದಿದ್ದರೆ, ಇಷ್ಟೊತ್ತಿಗೆ ಮುಂದುವರೆದು ಎಲ್ಲಿಗೋ ತಲುಪಬೇಕಾಗಿತ್ತು. ನಾನಂತೂ ನೀವು ಪ್ರಗತಿಹೊಂದಿದ್ದನ್ನು ಕಂಡಿಲ್ಲ. ನನ್ನ ಜೀವನಾವಧಿಯಲ್ಲಿ ಅದನ್ನು ಕಾಣುವ ಸೌಭಾಗ್ಯವೂ ನನಗಿದ್ದಂತಿಲ್ಲ. ಸುಖಾಸುಮ್ಮನೇ ಇನ್ನೂ ಮೋದಿಯ ಗುಂಗಿನಲ್ಲೇ ಇದ್ದೀರಿ 😛

  ಉತ್ತರ
  • Nagshetty Shetkar
   ಜುಲೈ 19 2014

   “ನಾನು ವೈದಿಕನಲ್ಲ.”

   What you are then? Charvaka?

   ಉತ್ತರ
   • ಜುಲೈ 20 2014

    ಬ್ರಾಹ್ಮಣಾಸೋ ಅತಿರಾತ್ರೇ ನ ಸೋಮೇ ಸರೋ ನ ಪೂರ್ನಮಭಿತೋ ವದಂತ: |
    ಸಂವತ್ಸರಸ್ಯ ತದಹ: ಪರಿ ಷ್ಠ ಯನ್ಮಂಡೂಕಾ: ಪ್ರಾವೃಷೀಣಂ ಬಭೂವ ||

    ನನ್ನ ಜಾತಿಯಾಗಲೀ (ಅಂತದ್ದೊಂದು ಇದ್ದರೆ), ಮತವಾಗಲೀ, ಧಾರ್ಮಿಕ ದೃಷ್ಟಿಕೋನಗಳಾಗಲೀ ದಾರಿಬದಿಯಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ಹಣ್ಣಲ್ಲ. ನಿಮಗದನ್ನು ಸಾರಿ ಹೇಳುವ ಅಗತ್ಯ ನನಗೆ ಕಂಡುಬರುತ್ತಿಲ್ಲ. ನಾನೇನೆಂದು ನನಗೆ ಅರಿವಾದರೆ ಸಾಕು.

    ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

    ಉತ್ತರ
    • Nagshetty Shetkar
     ಜುಲೈ 20 2014

     ಕೆಲಸಕ್ಕೆ ಬಾರದ ಸಂಸ್ಕೃತ ಶ್ಲೋಕವನು ಪಠಿಸಿ ತಾನು ಮಹಾ ಜ್ಞಾನಿ ಅಂತ ತೋರಿಸಿಕೊಳ್ಳುವ ತಮ್ಮ ತೆವಲಿಗೆ ನನ್ನನೇಕೆ ಬಳಸಿಕೊಲ್ಲುತ್ತಿದ್ದೀರಿ? ತಮ್ಮ ಹಲಸಿನ ಹಣ್ಣಿನ ಸೊಳೆಗಳನ್ನು ತಾವೇ ಸುಲಿದು ತಿನ್ನಿ, ಆದರೆ ಕೈಗಂಟಿದ ಮೇಣವನ್ನು ನನ್ನ ತಲೆಯ ಮೇಲೆ ತಿಕ್ಕಬೇಡಿ.

     ಉತ್ತರ
     • ಜುಲೈ 20 2014

      “If not vaidhika, what are you? Charvaaka!?” ಅಂಥಾ ಹಲಸಿನಹಣ್ಣಿನ ರೇಟ್ ಕೇಳಲು ಬಂದಿದ್ದು ನಾನೋ, ನೀವೋ!?

      ಶ್ಲೋಕವನ್ನು ಓದುವಷ್ಟು ಜ್ಞಾನ ತಮಗಿಲ್ಲ ಎನ್ನುವುದನ್ನು, ‘ಕೆಲಸಕ್ಕೆ ಬಾರದ ಶ್ಲೋಕ’ಎಂದು ಕರೆದು ಮುಚ್ಚಿಡಲು ಪ್ರಯತ್ನಿಸಬೇಡಿ. ಕೆಳಗೆ ವಚನದ ಸಾಲನ್ನೂ ಹಾಕಿದ್ದೇನೆ. ಓದಿ ಪುನೀತನಾಗು ನಾಗೇಶ್ವರಾ

      ಉತ್ತರ
  • ವಿಜಯ್ ಪೈ
   ಜುಲೈ 20 2014

   [ನೀವು ನಿಜವಾಗಿಯೂ ಪ್ರಗತಿಪರರಾಗಿದ್ದಿದ್ದರೆ, ಇಷ್ಟೊತ್ತಿಗೆ ಮುಂದುವರೆದು ಎಲ್ಲಿಗೋ ತಲುಪಬೇಕಾಗಿತ್ತು. ]
   ರಾಘವೇಂದ್ರ..ಇದು ನಿಜವಾಗಿಯೂ ತಪ್ಪು ಕಲ್ಪನೆ. ಅವರು ನಡೆಯುತ್ತಿದ್ದಾರೆ. ತಮ್ಮ ನಡಿಗೆಯನ್ನು ಅವರು ಮನುವಿನ ಕಾಲದಿಂದ ಪ್ರಾರಂಭ ಮಾಡಿದ್ದಾರೆ..ನಡೆದು-ನಡೆದು ಹನ್ನೆರಡನೆಯ ಶತಮಾನಕ್ಕೆ ಬಂದು ತಲುಪಿದ್ದಾರೆ. ಸುಸ್ತಾಗಿದ್ದರಿಂದ ಅಲ್ಲಿಯೇ ಸ್ವಲ್ಪ ಕುಳಿತು ಹಿಂದಿನ ಪಯಣವನ್ನು ಮೆಲಕು ಹಾಕುತ್ತಿದ್ದಾರೆ. ಇನ್ನೊಂದು ಸ್ವಲ್ಪ ಕಾಲದಲ್ಲಿ (ಅಂದರೆ ಇನ್ನೊಂದು 50-60 ವರುಷ) ಈ ಶತಮಾನಕ್ಕೆ ಖಂಡಿತ ಬಂದು ತಲಪುತ್ತಾರೆ. ವಿಶ್ವಾಸವಿರಲಿ…

   [ನಾನಂತೂ ನೀವು ಪ್ರಗತಿಹೊಂದಿದ್ದನ್ನು ಕಂಡಿಲ್ಲ. ನನ್ನ ಜೀವನಾವಧಿಯಲ್ಲಿ ಅದನ್ನು ಕಾಣುವ ಸೌಭಾಗ್ಯವೂ ನನಗಿದ್ದಂತಿಲ್ಲ.]
   ನೀವು ಹೀಗೆ ಕರುಬುದಕ್ಕಿಂತ ಅವರ ದಿಕ್ಕಿನ ಕಡೆ ಮುಖ ಮಾಡಿ ನಡೆಯಲು ಪ್ರಾರಂಭಿಸಿ.. ಆಗ ಇಬ್ಬರೂ ಸಮಾನ ಪ್ರಗತಿಪರರಾಗುತ್ತೀರಿ. ಸಧ್ಯದಲ್ಲಿ ಸಮಾನತೆಗೆ ಇದೊಂದೆ ಸೂತ್ರ. 🙂

   ಉತ್ತರ
 6. valavi
  ಜುಲೈ 18 2014

  ಶ್ರೀಯುತ ರಾಘವೇಂದ್ರ ಅವರೆ ನೀವು ಬರೆದ ಲೇಖನದಲ್ಲಿ ಕೆಲವು ವಿಷಯ ತಿಳಿಸುವದನ್ನು ಮರೆತಿದ್ದೀರಿ. ಇವನ್ನಿಷ್ಟು ನಿಮ್ಮ ಲೇಖನದಲ್ಲಿ ದಯವಿಟ್ಟು ಸೇರಿಸಿದರೆ ನಿಮ್ಮ ಮಾಹಿತಿ ಪೂರ್ಣವಾಗುತ್ತದೆ. [[ಭಾರತೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವವುಗಳನ್ನು ಪೂಜಿಸುತ್ತೀರಿ]] ನೀವು ಇಷ್ಟೇ ಮಾಹಿತಿ ನೀಡಿದ್ದೀರಿ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ. ಏನೆಂದರೆ ಭಾರತೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಅವನ್ನು ಪೂಜಿಸುತ್ತೀರಿ. ಆದರೆ ಅವುಗಳಿಗೆ ಆ ಪೂಜೆಯಿಂದ ಯಾವ ಲಾಭವು ಇಲ್ಲ. ಅವುಗಳಿಗೆ ಬೇಕಾದ ಅತ್ಯಗತ್ಯ ನೀರು ಮೇವು ಇತ್ಯಾದಿಗಳಿಂದ ಅವುಗಳ ಹೊಟ್ಟೆ ನೀವು ತುಂಬಿಸುವದಿಲ್ಲ. ಅವು ಪ್ಲಾಸ್ಟಿಕ ಚೀಲಗಳನ್ನು ನುಂಗಿ ಅಪಾಯ ಮಾಡಿಕೊಂಡರೂ ನಿಮಗದು ಸಂಭಂಧಿಸಿಲ್ಲ. ಗೋವು ಪೂಜೆಗೆ ಮಾತ್ರ. ಮೂತ್ರ ಸಗಣಿ ಪಂಚಗವ್ಯಕ್ಕೆ ಮಾತ್ರ. ಆಗಸ್ಟೇ ನಿಮಗೆ ಅದು ಪೂಜನೀಯ ಪ್ರಾಣಿ. ಮಿಕ್ಕಂತೆ ಅದು ಹಾದಿ ಬದಿಯ ಕಸ ಕಡ್ಡಿ ಮಾತ್ರ ತಿಂದು ಇಲ್ಲವೆ ನಿಮ್ಮ ಮನೆಯ ತಂಗಳು ಬಂಗಳು ತಿಂದು ನಿಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಮಾತ್ರ ಬೇಕು. ಕುಂಕುಮ ಹಚ್ಚಿ ಧೂಪ ಬೆಳಗಿ ಆರತಿ ಮಾಡಿ ಒಂದು ಹಿಡಿ ಅಕ್ಕಿ ಒಂದು ನಿಂಬೆ ಗಾತ್ರದ ಬೆಲ್ಲ [ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ] ಕೊಟ್ಟರೆ ನಿಮಗೇನೋ ದೇವರು ಪುಣ್ಯವನ್ನು ನಿಮ್ಮ ಅಕೌಂಟಿಗೆ ಬರೆಯುತ್ತಾನೆ?? ಆದರೂ ದನಕ್ಕೆ ಯಾವ ಪ್ರಯೋಜನವೂ ಇಲ್ಲ. ಆದರೆ ನಿಮಗೆ ಗೋಪೂಜೆ ಮಾಡಿದ ಸಂತೃಪ್ತಿ ಇದೆ. ಜೈ ಗೋಮಾತಾ.

  ಉತ್ತರ
 7. ಜುಲೈ 19 2014

  Vallavi ಅವರೇ, ಇದೊಂದು ರಾಜಕೀಯಾಸ್ತೆಯ ಹಾಸ್ಯ(politico humour)ದ ಪೋಸ್ಟ್ ಅಷ್ಟೇ. ಭಾರತೀಯರು ದನಗಳನ್ನು ಪೂಜಿಸುವುದನ್ನೂ ಸಹ ಅದೇ ತಿಳಿಹಾಸ್ಯದ ಎಳೆಯಲ್ಲಿ ಬರೆದದ್ದು. ‘ಪೂಜೆಯಿಂದ ಯಾವ ಲಾಭವೂ ಇಲ್ಲ’ ಎಂಬುವುದನ್ನು ವೈಯುಕ್ತಿಕ ನೆಲೆಯಲ್ಲಿ ನಾನು ಒಪ್ಪುವುದಿಲ್ಲವಾದರೂ, ನಿಮ್ಮ ಸಾಲುಗಳಿಗೆ ನನ್ನ ಅಭ್ಯಂತರವಿಲ್ಲ 🙂

  ಉತ್ತರ
 8. Maaysa
  ಜುಲೈ 20 2014

  ಸೋಶಿಯಲಿಸಂ: ನಿಮ್ಮ ಬಳಿ ಎರಡು ಹಸುಗಳಿವೆ. ಇನ್ನೊಬ್ಬರ ಬಳಿ ಎರಡು ಎತ್ತುಗಳಿವೆ. ನಿಮ್ಮಂದ ಒಂದು ಹಸುವನ್ನು ಕೊಂಡು ಬದಲಿಗೆ ಇನ್ನೊಬ್ಬರ ಎತ್ತನ್ನು ಒಂದು ಕೊಡುತ್ತದೆ. ನಿಮ್ಮ ಹಸು ಮತ್ತು ಎತ್ತುಗಳನ್ನು ಬಳಸಿ ನೀವು ದೊಡ್ಡ ದನದ ಹಿಂಡನ್ನು ಮಾಡುವಿರಿ ಹಾಗು ಬಹಳ ಲಾಭವನ್ನು ಮಾಡುವಿರಿ. ಆ ಲಾಭದ ಅರ್ಧವನ್ನು ತೆರಿಗೆ ಎಂದು ಸರಕಾರ ಕಸಿದುಕೊಳ್ಳುವುದು. ಆದರೆ ಕೆಲಕಾಲದ ಬಳಿಕ ನಿಮ್ಮ ಬಳಿ ಎತ್ತುಗಳು ಹಸುಗಳಿಗಿಂತ ಹೆಚ್ಚಾಗಿ ನಷ್ಟವಾಗುತ್ತಿದೆ. ಆ ಸರಕಾರ ನಿಮ್ಮ ಎತ್ತುಗಳನ್ನು ಸೂಕ್ತವಾದ ದರಕೊಂಡು ನಿಮ್ಮ ನಷ್ಟವನ್ನು ಭರಿಸುವುದು. ಒಂದು ವೇಳೆ ನೀವು ಪೂರ್ತಿದಿವಾಳಿಯಾದರೆ ನಿಮಗೆ ನಿರುದ್ಯೋಗ ಭತ್ಯೆ ಎಂದು ಒಂದು ಹಸು ಮತ್ತೊಂಡು ಎತ್ತನ್ನು ಕೊಡುವುದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments