ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ:
– ರಾಘವೇಂದ್ರ ಸುಬ್ರಹ್ಮಣ್ಯ
ಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.
ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.
ಇನ್ನು ಭಾರತದ ವಿಷಯಕ್ಕೆ ಬಂದರೆ ನಮಗೆ ಕಾಣಸಿಗುವುದೇನೆಂದರೆ, ಭಾರತೀಯ ನಾಗರೀಕತೆಗಳು (ಹಾಗೂ ರಾಜರ ಸಾಮ್ರಾಜ್ಯಗಳು) ಸಾಂಕೇತಿಕ ಜೀವನಶೈಲಿಯಲ್ಲಿ ಗಾಡವಾದ ನಂಬಿಕೆಯನ್ನು ಹೊಂದಿರುವುದು ಹಾಗೂ ಇದಕ್ಕನುಗುಣವಾಗಿ ಭಾರತಖಂಡದ ಮೂಲಧರ್ಮವಾದ ಹಿಂದೂ ಧರ್ಮದಿಂದ ಹಿಡಿದು, ವಾಸ್ತುಶಿಲ್ಪ, ಕಲಾಪ್ರಕಾರಗಳವರೆಗೆ ಎಲ್ಲವೂ ಸಾಂಕೇತಿಕವಾದ ಜೀವನಮೌಲ್ಯವನ್ನು ಬಿಂಬಿಸುವುದು. ನಮ್ಮ ಪುರಾಣಕಥೆಗಳಲ್ಲಿ ಬರುವ ಕತೆಗಳು, ಅವುಗಳಲ್ಲಿನ ಪಾತ್ರಗಳು, ಪೂಜಿಸಲ್ಪಡುವ ದೇವರುಗಳು ಮತ್ತವುಗಳ ರೂಪಗಳು ಯಾವುದನ್ನೂ ನೀವು ಬರೀ ತೋರಿಕೆಯೆಂದು ಭಾವಿಸುವ ಹಾಗೆಯೇ ಇಲ್ಲ. ಅಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ, ನಾಗರೀಕತೆ ಏನನ್ನೋ ಹೇಳಲು ಹೊರಟಿರುವ ತುಡಿತ ಎದ್ದು ಕಾಣುತ್ತದೆ. ನಮ್ಮ ದೇವರುಗಳಾದ ಗಣಪ, ತ್ರಿಮೂರ್ತಿಗಳು, ನಂದಿ, ನಾಗ, ರಾಮಾಯಣದ ಹತ್ತುಮುಖದ ರಾವಣ, ಅವನನ್ನು ಸೋಲಿಸಲು ರಾಮನಿಗೆ ಸಹಾಯಮಾಡಿದ ಹನುಮಂತ, ರಾವಣನೊಂದಿಗೆ ಒಮ್ಮೆ ಹೋರಾಡಿದ ಜಟಾಯು, ಕುಂಭಕರ್ಣ, ಮಹಾಭಾರತದ ಗಾಂಧಾರಿ, ಸಂಜಯ, ವಿಧುರ, ಶಕುನಿ, ಬಕಾಸುರ, ಘಟೋತ್ಕಜ, ಹಿಡಿಂಬೆ, ಜರಾಸಂಧ, ಶಿಶುಪಾಲ….ಈ ಪಾತ್ರಗಳು ನಿಜಜೀವನದಲ್ಲಿ ಘಟಿಸುವುದು ಎಷ್ಟೇ ಅಸಾಧ್ಯವೆನ್ನಿಸಿದರೂ ಸಹ, ಅಲ್ಲಿ ಪ್ರತಿಯೊಂದಕ್ಕೂ ಒಂದು ಸಾಂಕೇತಿಕ ಅರ್ಥವಿದೆ, ಔಚಿತ್ಯವಿದೆ, ಅವುಗಳ ಹಿಂದೆ ಒಂದು ಸಂದೇಶವಿದೆ. ಹೀಗಾಗಿ ಭಾರತೀಯರಿಗೆ ಸಾಂಕೇತಿಕವಾಗಿ ಪ್ರತಿಮೆಗಳನ್ನು ನಿರ್ಮಿಸುವಿದರಲ್ಲಿ ಎಲ್ಲಿಲ್ಲದ ಆಸಕ್ತಿ. ನಮ್ಮ ರಾಷ್ಟ್ರೀಯ ಲಾಂಚನವನ್ನು ನಾವು ಅಶೋಕನ ಕಾಲದ ಒಂದು ಪ್ರತಿಮಾಸ್ತಂಭಯಿಂದಲೇ ಆಯ್ಕೆಮಾಡಿರುವುದೂ ಇದಕ್ಕೊಂದು ಸಣ್ಣ ನಿದರ್ಶನ.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಸರಿಸುಮಾರು ಒಂದುವರ್ಷದಿಂದ ಭಾರತದಲ್ಲಿ ಅತ್ಯಂತ ಚರ್ಚಿಸಲ್ಪಟ್ಟಿರುವ ಒಂದು ವಿಷಯವೆಂದರೆ, ಸರ್ದಾರ ವಲ್ಲಬಾಭಾಯಿ ಪಟೇಲರ ‘ಐಕ್ಯತಾ ಪ್ರತಿಮೆ'(Statue of Unity)ಯ ನಿರ್ಮಾಣ. ಪ್ರಧಾನಿ ಪದವಿಗೆ ಅಂದು ಮುಂಚೂಣಿಯಲ್ಲಿದ್ದ ಮೋದಿ ತಮ್ಮ ಕನಸಾದ ‘ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ’ಯೊಂದನ್ನು ನಿರ್ಮಿಸಬೇಕೆಂಬ ಬಯಕೆಯನ್ನು ಜನರಿಗೆ ಪರಿಚಯಿಸಿದರು. ಎತ್ತರವೆಂದರೆ ಬರೀ ಅಂತಿಂಥಾ ಎತ್ತರವಲ್ಲ, ಸಧ್ಯದ ಅತ್ಯಂತ ಎತ್ತರದ ಪ್ರತಿಮೆಯಾದ 153ಮೀ ಎತ್ತರದ ‘ವಸಂತ ದೇವಾಲಯದ ಬುಧ್ಧ (Spring Temple Buddha)’ನಿಗಿಂತ ಬರೀ ಒಂದೆರಡು ಮೀಟರ್ ಎತ್ತರವಲ್ಲ. ಮೋದಿ ಕನಸು ಕಾಣುವಾಗ ಸಣ್ಣದ್ದನ್ನು ಎಂದಿಗೂ ಕಾಣುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಹಾಗಾಗಿ ಅವರು ಈಗಿರುವ ಪ್ರತಿಮೆಯನ್ನು ಮೀರಿಸಿ, ಅದಕ್ಕಿಂತಾ ಬರೋಬ್ಬರಿ 29ಮೀ ಎತ್ತರದ ಪ್ರತಿಮೆಯನ್ನು ಕಟ್ಟುವ ಕನಸು ಕಂಡರು. ಇಂಥಾ ದೊಡ್ಡ ಯೋಜನೆಯ ರೂಪುರೋಷೆ ಸಿದ್ದಮಾಡುವಾಗ ಸಹಜವಾಗಿಯೇ ಅವರ ಮನಸ್ಸಿಗೆ ಬಂದದ್ದು, ಹರಿದುಹಂಚಿದ್ದ ಭಾರತವನ್ನು ಒಂದು ಒಕ್ಕೂಟವನ್ನಾಗಿ ಮಾಡಿದ ‘ಉಕ್ಕಿನ ಮನುಷ್ಯ’, ತಮ್ಮ ರಾಜ್ಯದವರೇ ಆದ ಸರ್ದಾರ ಪಟೇಲರು. ಅವರ ಪ್ರತಿಮೆಯನ್ನೇ ಜಗತ್ತಿನ ಅತ್ಯಂತ ದೊಡ್ಡ ಪ್ರತಿಯನ್ನಾಗಿಸುವ ಕನಸು ಹಂಚಿದರು. ಅತ್ಯಂತ ದೊಡ್ಡ ಪ್ರತಿಮೆಯೆಂದ ಮೇಲೆ ಅದಕ್ಕೆ ವೆಚ್ಚವಾಗುವ ಹಣವೂ ದೊಡ್ಡದೇ, ಅದರ ಬಗ್ಗೆ ಪ್ರತಿಮಾತೂ ದೊಡ್ಡದೇ. ಈಗ ಸಧ್ಯಕ್ಕೆ ಅದರ ಸುತ್ತಮುತ್ತ ನಿರ್ಮಾಣವಾಗಿರುವ ವಿವಾದವೂ ಸಹ ದೊಡ್ಡದೇ
ಬಹುಷಃ ನಮ್ಮ ನಿಮ್ಮಂತಹ ಯಾರೇ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಒಂದು ಸಂಸ್ಥೆ ಈ ಕೆಲಸಕ್ಕೆ ಕೈ ಹಾಕಿದ್ದರೆ, ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರೇನೋ. ಆದರೆ ಇತ್ತೀಚೆಗಿನ ಕೇಂದ್ರ ವಿತ್ತೀಯ ಬಜೆಟ್ಟಿನಲ್ಲಿ ಈ ಯೋಜನೆಗೆ ಸರ್ಕಾರ ಇನ್ನೂರು ಕೋಟಿ ಮೀಸಲಿಟ್ಟುರುವುದು ಬಹಳ ಜನರಿಗೆ ಅಪಥ್ಯವಾದಂತಿದೆ. ಅರುಣ್ ಜೇಟ್ಲಿಯವರು ಈ ಅನುದಾನವನ್ನು ಘೋಷಣೆ ಮಾಡಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ಯುದ್ಧವೇ ನಡೆದು ಹೋಯಿತು. ಕೆಲವರು ‘ಅದೇ 200 ಕೋಟಿಯಲ್ಲಿ ಬಹಳಷ್ಟು ಬಡವರ ಹೊಟ್ಟಿ ತುಂಬಿಸಬಹುದಿತ್ತು’ ಎಂದರೆ, ಇನ್ನು ಕೆಲವರು ‘ಇದರ ಅಗತ್ಯವೇನಿದೆ!? ನಾವ್ಯಾಕೆ ಜಗತ್ತಿನಲ್ಲಿ ಅತೀ ಎತ್ತರದ ಪ್ರತಿಮೆ ಕಟ್ಟಬೇಕು!? ಜಗತ್ತನ್ನೇ ಗೆಲ್ಲಬೇಕೆಂಬ ಕೆಟ್ಟ ಹಪಹಪಿ ಇದರಿಂದ ವ್ಯಕ್ತವಾಗುತ್ತದೆ. ಜಗತ್ತು ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತದೆ’ ಎಂದರು . ಕೆಲವರಂತೂ ‘ಇದು ನರೇಂದ್ರ ಮೋದಿಯವರ ವೈಯುಕ್ತಿಕ ಕನಸು. ಅವರ ಕನಸಿನ ಯೋಜನೆಗೆ, ಯಾರೋ ಒಬ್ಬ ‘ಗುಜರಾತಿ’ಯ ಪ್ರತಿಮೆಗೆ ಎಲ್ಲಾ ಭಾರತೀಯರು ಯಾಕೆ ಹಣ ತೆರಬೇಕು!?’ ಎಂಬ ಅಲ್ಪತನವನ್ನೂ ತೋರಿದರು.
ನಾನೇಕೆ ಇಂತಹ ಒಂದು ಬೃಹತ್ ಯೋಜನೆಯನ್ನು ಭಾರತೀಯರು ಬೆಂಬಲಿಸಬೇಕೆಂಬ ಒಂದೆರಡು ಮಾತನ್ನು ಹಂಚಿಕೊಳ್ಳಬಯಸುತ್ತೇನೆ. ಈ ದುಡ್ಡನ್ನು ಬೇರೆ ಕಡೆ ಖರ್ಚುಮಾಡಬಹುದೆಂಬ ಉದ್ದೇಶವನ್ನು ಒಂದುಕಡೆ ಒಪ್ಪಿಕೊಂಡರೂ ಸಹ, ಈ ಯೋಜನೆಯನ್ನು ಒಪ್ಪಿಕೊಳ್ಳವಂತೆ ಮಾಡುವ ಅಂಶಗಳು, ತಿರಸ್ಕರಿಸುವ ಅಂಶಗಳಿಗಿಂತ ಹೆಚ್ಚು ಬಲಶಾಲಿಯಾಗಿವೆ. ನನ್ನ ಪ್ರಕಾರ ಇಂತಹ ಪ್ರತಿಮೆಯೊಂದನ್ನು ನಿರ್ಮಿಸುವುದು ‘ಕೆಟ್ಟದ್ದೇನೂ’ ಅಲ್ಲ. ಅಂಕಿಅಂಶಗಳು ನನಗೆ ತಿಳಿದಂತೆ ಹೀಗಿವೆ:
(*) ಈ ಯೋಜನೆಯ ಒಟ್ಟುವೆಚ್ಚ 2500 ಕೋಟಿರೂಪಾಯಿಗಳು ಹಾಗೂ ಇದರಲ್ಲಿ ಉಪಯೋಗಿಸಲ್ಪಡುವ ಬಹುಪಾಲು ಉಕ್ಕು ಮತ್ತು ಕಬ್ಬಿಣ ಮರುಉಪಯೋಗಸಲ್ಪಡುವ ಲೋಹಗಳಿಂದ ಬರಲಿದೆ. ಕೇಂದ್ರ ಸರ್ಕಾರದ ಬಜೆಟ್ ವೆಚ್ಚ (ರೂ. 200ಕೋಟಿ), ಇದರಲ್ಲಿ ಶೇಕಡಾ 10ಕ್ಕಿಂತ ಕಡಿಮೆ. ಗುಜರಾತಿನ ಸರ್ಕಾರ ಸಹ ತನ್ನ ಬಜೆಟ್ಟಿನಲ್ಲಿ ಈ ಯೋಜನೆಗಾಗಿ ನೂರು ಕೊಟಿಯಷ್ಟು ಹಣ ಮೀಸಲಿಟ್ಟಿದೆ.
ಈ ಪ್ರತಿಮೆಯ ನಿರ್ಮಾಣ “ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ” ನಡೆಯಲಿದೆ. ಅಂದರೆ ಯೋಜನೆಯ ಒಟ್ಟು ಹಣ ಸರ್ಕಾರ, ಖಾಸಗಿ ಸಂಸ್ಥೆಗಳ ಹೂಡಿಕೆ ಹಾಗೂ ಜನಸಾಮಾನ್ಯರ ದೇಣಿಗೆಯಿಂದ ಬರಲಿದೆ. ಇದರಲ್ಲಿ ಹೆಚ್ಚಿನ ಹಣ ಸ್ವಯಂಪ್ರೇರಿತ ಕೊಡುಗೆಯಾಗಿರುವುದರಿಂದ, ‘ಸರ್ಕಾರ ಈ ಹಣವನ್ನು ಬೇರೆ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಬಹುದಿತ್ತು’ ಎಂಬ ವಾದ ಸುಸಂಬದ್ಧವೇ ಅಲ್ಲ. ಈ ಪೂರ್ತಿ ಹಣ ‘ಒಂದು ನಿರ್ದಿಷ್ಟಕಾರ್ಯಕ್ಕಾಗಿ’ ಬಳಸಲ್ಪಡುತ್ತಿರುವುದರಿಂದ, ಯಾವ ‘ಬೇರೆ ಉತ್ತಮ ಕಾರ್ಯ’ಕ್ಕಾಗಿ ಈ ಹಣವನ್ನು ಬಳಸಬಹುದಿತ್ತು? ಎಂಬುದನ್ನು ಸ್ಪಷ್ಟಪಡಿಸದೆ, ಅದಕ್ಕಾಗಿ ಜನರನ್ನು ಹುರಿದುಂಬಿಸದೆ, ಹಣವನ್ನು ಒಟ್ಟುಗೂಡಿಸುವ ಸಾಹಸವನ್ನೂ ತೋರದೆ ಬರೀ ‘ಬೇರೆ’ ಹಾಗೂ ‘ಉತ್ತಮ’ ಕಾರ್ಯಗಳ ವಾದದ ಗೋಡೆಯ ಹಿಂದೆ ಅವಿತು ಒಬ್ಬ ವ್ಯಕ್ತಿಯ ಜನಾನುರಾಗಿ ಶ್ರಮವನ್ನು ವ್ಯರ್ಥವೆಂದು ಕರೆಯುವುದು ಹೇಡಿತನ ಹಾಗೂ ಅಲೋಚನಾರಾಹಿತ್ಯದ ತುತ್ತತುದಿಯಷ್ಟೇ.
(*) ಈ ಪ್ರತಿಮೆ ಅತ್ಯಂತ ಎತ್ತರವಾದದ್ದು. ಹಾಗಾಗಿ ಇದು ಬರೀ ನಿರ್ಮಾಣ ಸಾಹಸವಷ್ಟೇ ಅಲ್ಲ. ಬಹಳ ದೊಡ್ಡ ಅಭಿಯಂತರ (engineering) ಸವಾಲು ಹಾಗೂ ಸಾಹಸವೂ ಹೌದು. ಅತೀಕ್ಲಿಷ್ಟವಾದ ಗಣಕೀಕೃತ ದ್ರವ ಬಲವಿಜ್ಞಾನ ವಿಶ್ಲೇಷಣೆ (computational fluid dynamics analysis), ವಾಯು ಭಾರ ವಿಶ್ಲೇಷಣೆ (wind load analysis), ಹಾಗೂ ರಾಚನಿಕ ವಿಶ್ಲೇಷಣೆ (structural analysis)ಯ ಸವಾಲುಗಳನ್ನು ಮೆಟ್ಟಿನಿಂತು ಇಂತಹ ಪ್ರತಿಮೆಯ ನಿರ್ಮಾಣ ಮಾಡಿ ಪ್ರಪಂಚಕ್ಕೆ ತೋರಿಸುವುದು, ಭಾರತೀಯರಿಗೆ ಎಷ್ಟು ಹೆಮ್ಮೆಯ ವಿಷಯವಾಗಲಿದೆ ಎನ್ನುವುದನ್ನು ಟೀಕಾಕಾರೊಮ್ಮೆ ಅರ್ಥೈಸಿಕೊಳ್ಳುವುದೊಳ್ಳೆಯದು. ಜಗತ್ತಿನ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಕಟ್ಟುವ ಪ್ರಯತ್ನದಲ್ಲಿ ಎಂಜಿನಿಯರುಗಳು ದಿನನಿತ್ಯದ ಜೀವನದಲ್ಲಿ ಉಪಯೋಗವಾಗುವಂತ ಎಷ್ಟೊಂದು ಉತ್ತರಗಳನ್ನು ಕಂಡುಹಿಡಿದರು ಎಂದೊಮ್ಮೆ ತಿಳಿಯುವುದೊಳ್ಳೆಯದು.
(*) ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ತಜ್ಞರು ಬೇಕು. ಅಂದಮೇಲೆ ಈ ಯೋಜನೆ ತನ್ನ ಬಹಳಷ್ಟು ಸಮಸ್ಯೆಗಳೊಂದಿಗೆ, ಬಹಳಷ್ಟು ಉದ್ಯೋಗಗಳನ್ನೂ ಸೃಷ್ಟಿಸಲಿದೆ. ಬರೀ ಉದ್ಯೋಗಗಳನ್ನಲ್ಲ, ಬಹಳಷ್ಟು ಭಾರತೀಯ ಉದ್ಯೋಗಗಳನ್ನು. ಹೌದು, ಸಧ್ಯದ ಸುದ್ದಿಗಳ ಪ್ರಕಾರ ಅಮೇರಿಕಾ ಮೂಲದ ಟರ್ನರ್ ಕಂಪನಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಆದರೆ, ಕೆಲವು ಟೀಕಾಕಾರರ ಪ್ರಕಾರ ಭಾರತೀಯ ಯೋಜನೆಯೊಂದನ್ನು ಅಮೇರಿಕಾ ಮೂಲದ ಕಂಪನಿ ಮಾಡಿದರೆ ಉದ್ಯೋಗಗಳು ಭಾರತದಲ್ಲಲ್ಲ, ಅಮೇರಿಕಾದಲ್ಲಿ ಸೃಷ್ಟಿಯಾಗಲಿವೆ ಎಂದು ಕೂಗಾಡುತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಜೆಕ್ಟುಗಳು ಯಾವರೀತಿಯಲ್ಲಿ ಕಾರ್ಯಗತಗೊಳ್ಳುತ್ತವೆ ಎಂದು ತಿಳಿಯದೆ ತಮ್ಮ ವಿವೇಚನಾಶೂನ್ಯತೆಯನ್ನು ಮೆರೆದಿದ್ದಾರೆ. ತಮಾಷೆಯೆಂದರೆ ಇವರಲ್ಲಿ ಬಹಳಷ್ಟು ಮಂದಿ ಬೆಂಗಳೂರು, ಗುರಗಾಂವ್ ಹಾಗೂ ಹೈದರಾಬಾದಿನಲ್ಲಿರುವ ಗೂಗಲ್, ಹನಿವೆಲ್, ಮೈಕ್ರೋಸಾಫ್ಟಿನ ಆಫೀಸುಗಳಲ್ಲಿ ಕುಳಿತು ಈ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅಮೇರಿಕಾದ ಕಂಪನಿಗಳು ಭಾರತದಲ್ಲಿ ಇವರನ್ನು ಕೂರಿಸಿಕೊಂಡು ಅಮೇರಿಕಾದ ಕೆಲಸಗಳನ್ನು ಮಾಡಿಸಿಕೊಂಡರೆ ಏನೂ ತೊಂದರೆಯಿಲ್ಲ, ಆದರೆ ಅಮೇರಿಕಾದ ಕಂಪನಿಯೊಂದು ಭಾರತದಲ್ಲಿ ಇವರಂತವರನ್ನೇ ಕೂರಿಸಿಕೊಂಡು ಭಾರತದ ಕೆಲಸಗಳನ್ನು ಮಾಡುವಂತಿಲ್ಲವಂತೆ, ಇವರ ಪ್ರಕಾರ ಇಂತವರಿಗೆ, ಟರ್ನರ್ ಈ ಯೋಜನೆಯನ್ನು ಪ್ರಾಂಭಿಸುವ ಮುನ್ನ, ಭಾರತದಲ್ಲಿ ಟರ್ನರ್ (ಇಂಡಿಯಾ) ಪೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ತೆರೆಯಬೇಕು, ಅದರ ಒಟ್ಟು ಉದ್ಯೋಗಿಗಳಲ್ಲಿ 90% ಗಿಂತ ಹೆಚ್ಚಿನಷ್ಟು ಭಾರತೀಯರನ್ನೇ ನೇಮಿಸಿಕೊಳ್ಳಬೇಕೆಂಬ ಕನಿಷ್ಟ ನಿಯಮಾವಳಿಗಳೂ ತಿಳಿದಂತಿಲ್ಲ. ಒಟ್ಟಿನಲ್ಲಿ, ‘ದೇಶದ ಅರ್ಥಿಕತೆಗೆ, ಔದ್ಯೋಗಿಕತೆಗೆ ಈ ಯೋಜನೆ ಸಹಾಯಮಾಡುವುದಿಲ್ಲ’ ಎಂಬ ಇವರ ವಾದದಲ್ಲಿ ಯಾವುದೇ ಹುರುಳಿಲ್ಲ.
(*) “ಪ್ರತಿಮೆಗಳ ಮೇಲೆ ಹಕ್ಕಿಗಳು ಪಿಕ್ಕೆ ಹಾಕುತ್ತವೆ, ಅದಕ್ಕೆ ಯಾರೋ ಚಪ್ಪಲಿಯಲ್ಲಿ ಹೊಡೆಯುತ್ತಾರೆ, ಅದರಿಂದ ಗಲಭೆಗಳಾಗುತ್ತವೆ” ಎಂದು ವಿರೋಧಿಸುತ್ತಿರುವ ಕೆಲ ಪ್ರಭೃತಿಗಳು ಈ ಪ್ರಾಜೆಕ್ಟಿನ ಮಹಾಗಾತ್ರವನ್ನೇ ಅರ್ಥಮಾಡಿಕೊಂಡಂತಿಲ್ಲ. ಅವರ ಆಲೋಚನೆಗಳು, ಅವರು ಊಹಿಸಿರುವ ಪ್ರತಿಮೆಗಳಷ್ಟೇ ಕುಬ್ಜವಾದದ್ದರಿಂದ ಅಂತವರಿಗೆ ನಾನು ಏನೂ ಹೇಳಬಯಸುವುದಿಲ್ಲ. ಹಾಗೇಸುಮ್ಮನೇ 93ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆಯ ಕಡೆಗೆ ಯಾರೋ ಒಬ್ಬ ಚಪ್ಪಲಿ ಎಸೆಯುವ ದೃಶ್ಯವನ್ನೊಮ್ಮೆ ಊಹಿಸಿಕೊಂಡು ನಗುತ್ತೇನಷ್ಟೇ.
(*) ಈ ಪ್ರತಿಮೆ ಸಾಂಕೇತಿಕವಾಗಿ ಭಾರತದ ಐಕ್ಯತೆ ಹಾಗೂ ಪಟೇಲರಿಗೆ ಸಲ್ಲುವ ಸನ್ಮಾನವಾದರೂ ಸಹ, ಈ ಸ್ಮಾರಕ ಒಂದು ಪ್ರವಾಸಿತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ನೋಡಲು ಜನರು ಬಂದೇ ಬರುತ್ತಾರೆ. ಒಬ್ಬಿಬ್ಬರಲ್ಲ, ಬಹಳಷ್ಟು ಜನರು ಬರುತ್ತಾರೆ. ನಮ್ಮ ದೇಶದಿಂದ ಮಾತ್ರವಲ್ಲದೇ, ವಿದೇಶದಿಂದಲೂ ಬರುತ್ತಾರೆ. ಅಂದ ಮೇಲೆ ಈ ಪ್ರತಿಮೆಯಿರುವ ಸುತ್ತಲಿನ ಪ್ರದೇಶದಲ್ಲಿ ಹೋಟೆಲುಗಳು, ಪಾರ್ಕುಗಳು, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಾಪಿಡುವ ಒಂದು ವಸ್ತುಸಂಗ್ರಹಾಲಯ ಎಲ್ಲವೂ ನಿರ್ಮಾಣವಾಗಲಿವೆ. ಅಂದಮೇಲೆ ಮತ್ತಷ್ಟು ಉದ್ಯೋಗಗಳ ಸೃಷ್ಟಿ. ಇದರೊಂದಿಗೆ, ಸ್ಥಳೀಯ ಅರ್ಥಿಕತೆ ಮತ್ತಷ್ಟು ಚುರುಕುಪಡೆಯಲಿದೆ. ನಾವಿನ್ನೂ ಪ್ರವಾಸಿಗಳು ವ್ಯಯಿಸಲಿರುವ ಹಣ, ಟಿಕೇಟಿನ ದುಡ್ಡಿನ ಬಗ್ಗೆ ಮಾತೇ ತೆಗೆದಿಲ್ಲ. ನನ್ನ ಆಲೋಚನೆ ಪ್ರಕಾರ ಈ ಯೋಜನೆ, ಈ ಪ್ರತಿಮೆಯೊಳಗೆ ಅಥವಾ ಪಕ್ಕದಲ್ಲಿ ಎಲವೇಟರ್ ಅಥವಾ ಮೆಟ್ಟಿಲುಗಳನ್ನು ನಿರ್ಮಿಸಿ, ಪ್ರವಾಸಿಗಳಿಗೆ ಮೇಲಿನಿಂದ ವಿಹಂಗಮ ನೋಟವೊಂದಕ್ಕೆ ಅನುವು ಮಾಡಿಕೊಡಲಿದೆ. ಅದರ ಟಿಕೇಟಿನ ಶುಲ್ಕವನ್ನೂ ಸೇರಿಸಿ ನೀವೇ ಲೆಕ್ಕ ಹಾಕಿ. ಇದು ನಿಜವಾಗಿಯೂ ಜಗತ್ತಿನ ಅತಿ ದೊಡ್ಡ ಪ್ರತಿಮೆಯಾದಲ್ಲಿ, ಮುಂದಿನ 25 ವರ್ಷಗಳಲ್ಲಿ ಇದನ್ನು ನೋಡಲು ಬರುವ ಜನರ ಸಂಖ್ಯೆಯನ್ನೊಮ್ಮೆ ಊಹಿಸಿ ಮತ್ತೊಮ್ಮೆ ಲೆಕ್ಕ ಹಾಕಿ. ಈ ಬಹಳಷ್ಟು ಟೀಕಾಕಾರರ ಪ್ರಕಾರ ಅಮೇರಿಕಾದ ಲಿಬರ್ಟಿ ಪ್ರತಿಮೆಯೂ ಸಹ ದುಡ್ಡಿನ ಅಪವ್ಯಯವೇ ಆಗಿರಬಹುದು. ಆದರೆ ಅದನ್ನು ಕಟ್ಟಿದಾಗಿನಿಂದ ಇಂದಿನವರೆಗಿನ ಹೂಡಿಕೆಯ ಪ್ರತಿಪಲ(ROI – Return On Investment)ವನ್ನೊಮ್ಮೆ ಗಮನಿಸಿದರೆ, ಆ ಪ್ರತಿಮೆಯನ್ನು ಫ್ರೆಂಚರು ಕಟ್ಟಿಮುಗಿಸಿದ ನಂತರ ನೂರುಪಟ್ಟು ಆದಾಯವನ್ನು ಒದಗಿಸಿದೆ.
(*) ಇನ್ನೊಂದು ಮಾತು ಮರೆಯದಿರೋಣ. ಇಷ್ಟೆಲ್ಲಾ ‘ಖರ್ಚು’ ಭಾರತದ ಅತ್ಯಂತ ಉನ್ನತಮಟ್ಟದ ನಾಯಕರಾದ ಪಟೇಲರಿಗಾಗಿ ಅಂತಾದಲ್ಲಿ, ಅದರಿಂದ ಸೃಷ್ಟಿಯಾಗಲಿರುವ ಉದ್ಯೋಗಗಳು, ಅದರಿಂದ ಬರಲಿರುವ ಆದಾಯ ಇವೆಲ್ಲಾ ಅವರ ಹೆಸರಿನಿಂದ ಅಂತಾದಲ್ಲಿ, ನನ್ನ ಪ್ರಕಾರ ಇದು ಕಾರ್ಯಗತಮಾಡಲೇ ಬೇಕಾದ ಯೋಜನೆ. ಇಷ್ಟು ವರ್ಷ, ದೇಶದ ಪ್ರತೀ ನಗರದಲ್ಲೂ ಒಂದು ರಸ್ತೆಗೆ ಒಬ್ಬರದೇ ಹೆಸರಿಟ್ಟು, ಎಲ್ಲಾ ವಿಮಾನನಿಲ್ದಾಣಗಳೂ ಒಂದೇ ಕುಟುಂಬದ ಬಳುವಳಿಯೇನೋ ಎಂಬಂತೆ ಹೆಸರಿಟ್ಟು ಸಂಭ್ರಮಿಸುತ್ತಿರುವ ನಾವು, ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ‘ಉಕ್ಕಿನ ಮನುಷ್ಯ’ನಿಗೆ, ಆತನ ನೆನಪಿಗೆ ಒಂದು ಪ್ರತಿಮೆ ನಿರ್ಮಿಸಲೂ ಹಿಂದೆ ಮುಂದೆ ನೋಡುವಂತಾದೆವೇ!? ಅದಕ್ಕಾಗಿ ವ್ಯಯಿಸಲು ಇಚ್ಚಿಸುವ ಇನ್ನೂರು ಕೋಟಿಗೂ ಲೆಕ್ಕ ಕೇಳುತ್ತಿದ್ದೇವೆಯೇ!? ಹಾಗೇ ಲೆಕ್ಕಕ್ಕೆ ಒಂದು ಮಾತು, ಸರ್ಕಾರ ವ್ಯಯಿಸಲಿರುವ ಈ ಇನ್ನೂರು ಕೋಟಿ ಹಣ, 2G ಹಗರಣದ ಒಟ್ಟು ಮೊತ್ತದ 0.02% ಅಷ್ಟೇ.
(*) ನನಗನ್ನಿಸಿದ ಪ್ರಕಾರ ಈ ಟೀಕಾಕಾರ ಪ್ರಕಾರ ಭಾರತದ ಮಂಗಳಯಾನವೂ ಸಹ ವೃಥಾ ಖರ್ಚೇ! ಇಡೀ ವಿಶ್ವದಲ್ಲಿ ಎಲ್ಲರಿಗಿಂತ ಅತೀ ಕಡಿಮೆ ವೆಚ್ಚದಲ್ಲಿ ಮಂಗಳನಲ್ಲಿ ಕಾಲಿರಿಸುವ ಕನಸು ಕಂಡು, ಅದನ್ನು ಮಾಡಿತೋರಿಸಿ, ಜಗತ್ತನೇ ನಿಬ್ಬೆರಗಾಗಿಸಿದ ನಮ್ಮ ಸಾಧನೆಯೂ ಇವರ ಮಟ್ಟಿಗೆ ಸಣ್ಣದು ಹಾಗೂ ವೃಥಾಖರ್ಚು. ರಾಕೇಶ ಶರ್ಮಾ ಚಂದ್ರಯಾನ ಮಾಡಿದ್ದೂ ವ್ಯರ್ಥ. ‘ಅವನಲ್ಲಿಗೆ ಹೋದರೆ ನಮಗೇನು ಸಿಕ್ಕಿತು!? ಪಾಪ, ಇಲ್ಲೆಷ್ಟು ಹಸಿದ ಹೊಟ್ಟೆಗಳಿವೆ ನೋಡಿ!?’ ಅಂದು ಕೇಳುತ್ತಾರೆ. “ಕ್ರೀಡಾ ವಿಶ್ವವಿದ್ಯಾಲಯವನ್ನೇಕೆ ಸ್ಥಾಪಿಸಬೇಕು!? ಪಿ.ಟಿ ಉಷಾ ಒಲಂಪಿಕ್ಸಿನಲ್ಲಿ ಓಡಿದರೆ ನನಗೇನು!? ಪಾಪ, ಇಲ್ಲೆಷ್ಟು ಜನ ಪುಟ್ಪಾತಿನ ಮೇಲೆ ಮಲಗಿದ್ದಾರೆ ನೋಡಿ!?” ಅನ್ನಬಹುದು. ಅದಕ್ಕೇ ಇರಬೇಕು ದಾರ್ಶನಿಕರು ಹೇಳಿರುವುದು ‘ಕೆಲವರನ್ನು ಎಂದಿಗೂ ಮೆಚ್ಚಿಸಲು ಸಾಧ್ಯವಿಲ್ಲ’ ಎಂದು
ಕೊನೇ ಮಾತು: ಈ ಪ್ರತಿಮೆ ನಿರ್ಮಾಣವಾಗಲಿಲ್ಲವೆಂದರೆ ನಾವೇನೂ ಪಟೇಲರನ್ನು ನೆನಪಿಸಿಕೊಳ್ಳುವುದೆಲ್ಲವೆಂದಲ್ಲ. ನಮ್ಮ ಮನಸ್ಸಿನಲ್ಲಿ ಅವರು ಖಂಡಿತಾ ಬದುಕಿರುತ್ತಾರೆ. ಆದರೆ, ಒಬ್ಬ ನಾಯಕನಿಗೆ ವಿನೂತನವಾದ ರೀತಿಯಲ್ಲಿ ಧನ್ಯವಾದಗಳನ್ನರ್ಪಿಸುವ ಕನಸೊಂದನ್ನು, ಅವಕಾಶವೊಂದನ್ನು ನಮ್ಮ ಸಧ್ಯದ ಪ್ರಧಾನಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಪೂರ್ತಿಮಾಡುವ ಮೂಲಕ ಇಡೀ ವಿಶ್ವದ ಕಣ್ಸೆಳೆಯುವ ಅದ್ಬುತ ಸುವರ್ಣಾವಕಾಶ ನಮಗೆ ಒದಗಿಬಂದಿದೆ. ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇವೆಯೋ ಅಥವಾ ಕೈಚೆಲ್ಲುತ್ತೇವೆಯೋ ಎನ್ನುವುದು ನಮಗೆ ಬಿಟ್ಟದ್ದು. ಅಖಂಡ ಭಾರತದ ಪೂರ್ಣ ಪರಿಕಲ್ಪನೆ ಹಾಗೂ ಅದರ ಬಗ್ಗೆ ಹೆಮ್ಮೆ ಇರುವ ಯಾವ ಭಾರತೀಯನೂ ಈ ಯೋಜನೆಯನ್ನು ವಿರೋಧಿಸಲಾರ ಎಂದು ನನ್ನ ದೃಡವಾದ ನಂಬಿಕೆ.
ಚಿತ್ರ ಕೃಪೆ :videathink.com665
ಐನೂರಾತೊಂಬತ್ತೇಳು ಅಡಿ ಎತ್ತರದ ಕಸ.
ಶೆಟ್ಕರ್ ಮಹಾಶಯರು, ಇದೊಂದು ಮಾತ್ರ ಸರಿಯಾಗಿ ಹೇಳಿದ್ದಾರೆ. ಕಮ್ಮಿಗಳು ಸಮಾಜವಾದಿಗಳು ಹಾಕಿರುವ ಕಸ ತೆಗೆಯದೆ ಪ್ರತಿಮೆ ಕಸದಂತೆ. ಕಸದಲ್ಲಿ ಏನೇ ಹಾಕಿದರೂ ಕಸವೇ, ಕಸವನ್ನೆಲ್ಲಾ ಶುಭ್ರಗೊಳಿಸಿದ ನಂತರ ಮೋದಿ ಈ ಕೆಲಸಕ್ಕಿಳಿಯಬಹುದಿತ್ತು.
ಯಾರೊ ಒಬ್ಬರು ಬೆಂಗಳೂರಿನ ಹತ್ತಿರ ಬಸವಣ್ಣನ ಬೃಹತ್ ಪ್ರತಿಮೆ ಸ್ಥಾಪಿಸಬೇಕೆಂದು ಹೊರಟಿದ್ದರು..ಬಹುಶ: ಅದಕ್ಕೂ ಇದು ಅನ್ವಯಿಸುತ್ತದೆ ಅಂದುಕೊಳ್ಳುತ್ತೇನೆ…
ಉಳ್ಳವರು ಶಿವಾಲಯವ ಮಾಡುವರು..
ಬರೀ ಗಂಡಸರ ಮೂರ್ತಿಗಳು ಯಾಕೆ?
ಪುತ್ಥಳಿಗಳಲ್ಲೂ ಲಿಂಗಾನುಪಾತ ಅಸಮಲೋಲನಿಸುತ್ತಿದೆ.
ಒಹ್ ಹೌದೆ??
112 ಅಡಿಯ ಬಸವಣ್ಣನ ಪ್ರತಿಮೆ ಮಾಡಲು ಹೊರಟವರು ಉಳ್ಳವರಾದರು. ಅವರ ಮುಂದೆ ಏನಾದರೂ ನೀವು ಈ ನಿಮ್ಮ ‘ಕಸ’ ಕಲ್ಪನೆಯ ಡಬ್ಬ ಬಾರಿಸಿದಿದ್ದರೆ, ನಿಮ್ಮ ಬಾಯಿಗೆ ತಗಡಿನ ಪಟ್ಟಿ ಹೊಡೆದಿರುತ್ತಿದ್ದರು!.
ಅಂದಹಾಗೆ ..ಈ ಕೆಳಗಿನ ಮಾತುಗಳನ್ನು ಯಾರು ಬರೆದಿದ್ದರು ಎಂದು ತಮ್ಮ ನೆನಪಿಗೆ ಬರಬಹುದೆ?..ಓದಿ ನೋಡಿ
“ಸುವರ್ಣ ಕರ್ನಾಟಕ ಆಚರಣೆಯಲ್ಲಿ ಶರಣರ ನವನವೋನ್ಮೇಷಶಾಲಿನಿಯದ ವಿಚಾರಧಾರೆಯನ್ನು ಲೋಕ ಅರಿಯುವಂತೆ ಮಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಹಾನ್ ಆಡಳಿತಗಾರರೂ ಆಗ್ದಿದ ಬಸವಣ್ಣನವರ ಬೃಹತ್ ಮೂರ್ತಿಯನ್ನು ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸುವುದು ಕೂಡ ಅವಶ್ಯವಾಗಿದೆ. (ಬಸವಣ್ಣನವರಿಗೆ ವ್ಯಕ್ತಿಪೂಜೆಯಲ್ಲಿ ನಂಬಿಕೆ ಇರಲಿಲ್ಲ, ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸುವುದು ಬಸವ ತತ್ತ್ವಕ್ಕೇ ವಿರುದ್ಧವಾಗಿದೆ. ಅಂತೆಯೆ ವಿಧಾನಸೌಧದ ಮುಂದೆ ಪ್ರಜಾಪ್ರಭುತ್ವದ ಸಂಕೇತವಾಗಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪನೆ ಮಡುವುದು ಅವಶ್ಯವಾಗಿದೆ ಹೊರತಾಗಿ ವ್ಯಕ್ತಿಪೂಜೆಗಾಗಿ ಅಲ್ಲ.) “
ಒಂದು ಉಪಾಯ..!
ವಿಧಾನ ಸೌಧವನ್ನು “ಬಸವಾದಿ ಮೂರ್ತಿಗಳ” ಮ್ಯೂಸಿಯಂ ಮಾಡಿದರೆ ಹೇಗೆ?
[ವಿಧಾನ ಸೌಧವನ್ನು “ಬಸವಾದಿ ಮೂರ್ತಿಗಳ” ಮ್ಯೂಸಿಯಂ ಮಾಡಿದರೆ ಹೇಗೆ?]
:). ನಿಮ್ಮ ಈ ಸಲಹೆಯನ್ನು ಕೇಳಿ ನಮ್ಮ ಶೆಟ್ಕರ್ ಗುರುಗಳು ಒಳಗೊಳಗೆ ತವಕ ಅನುಭವಿಸುತ್ತಿರಬಹುದು. ಇದೇನಾದರೂ ಕಾರ್ಯರೂಪಕ್ಕೆ ಬಂದರೆ, ತಮ್ಮ ಗುರು ಅ.ಚ ಬಸವಣ್ಣನವರ ಪಕ್ಕದಲ್ಲಿ ತನ್ನದು ಕೂಡ ಒಂದು-ಒಂದೂವರೆ ಫೂಟಿನ ಪ್ರತಿಮೆ ಸ್ಥಾಪನೆಯಾಗಬಹುದೇನೊ ಅಂತ!
😀 .. ಆ ಮ್ಯೂಸಿಯಮ್ನ ಹೆಸರು “ಬಸವ ದರ್ಗಾ” 🙂 .. ಅಲ್ಲಿಗೆ ಅದು ಸಂಪೂರ್ಣ ಸೆಕ್ಯುಲರ್!
@ಸಂಪಾದಕ ಶೆಟ್ಟಿ: ಏನಿದು ದರ್ಗಾ ಸರ್ ಅವರನ್ನಷ್ಟೇ ಅಲ್ಲ ಕ್ರಾಂತಿ ಪುರುಷ ಬಸವಣ್ಣನವರನ್ನೂ ಲೇವಡಿ ಮಾಡುವ ಕಾಮೆಂಟುಗಳನ್ನು ಪ್ರಕಟಿಸಿದ್ದೀರಲ್ಲ?! ಇದು ವಚನಕಾರರ ತತ್ವಾದರ್ಶಗಳಿಗೆ ನೀವು ಕೊಡುವ ಗೌರವವೇ? ಕೆಲವು ಪುಂಡ ಪೋಕರಿಗಳ ತೆವಲಿಗೆ ನಿಮ್ಮ ಸೈಟು ಕುಲಗೆಟ್ಟು ಹೋಗುತ್ತಿದೆಯಲ್ಲ! ನೀವು ಸಕ್ರಿಯರಾಗದಿದ್ದರೆ ನಿಮಗೆ ಉಳಿಗಾಲವಿಲ್ಲ.
ಓಯ್!!
ನಾನು ಹೇಳಿದ ಬಸವ ನಿಮ್ಮ ವಚನ ಬಸವ ಅಲ್ಲ.
ಬಸವ ಅಂದರೆ ಹಲವು ಅರ್ಥಗಳಿವೆ. ಪೋಲಿ ದನಕ್ಕೂ ಬಸವ ಎನ್ನುವರು. ಈ ವಿಧಾನ ಸೌಧದಲ್ಲಿ ಈಗೀಗ “ಬಸವಗಳು” ಹೆಚ್ಚಿಗೆ ಆಗಿವೆ. ಅವು ಮೊಬೈಲ್ ಫೋನ್ಅಲ್ಲಿ ಏನೇನೋ ನೋಡ್ತಾವೆ!
Ramjan Darga says:
July 5, 2013 at 12:18 am
ಅಮರೇಶ್ ಅವರು ಬಿಜನಳ್ಳಿಯ ಚಮ್ಮಾವುಗೆಗಳ ಬಗ್ಗೆ ಬರೆಯುತ್ತ ‘ಸ್ಥಾವರಕ್ಕಳಿವುಂಟು’ ಎಂದು ಶರಣರು ಹೇಳಿದ್ದನ್ನು ನಾನು ಮರೆತಿರುವುದಾಗಿ ತಿಳಿಸಿದ್ದಾರೆ. ಅವುಗಳಿಗಾಗಿ ಸ್ಮಾರಕ ಭವನ ನಿರ್ಮಿಸಬೇಕೆಂಬ ನನ್ನ ಆಶಯವನ್ನು ಅಲ್ಲಗಳೆದಿದ್ದಾರೆ. ಅದು ಸ್ಥಾವರ ಎಂದು ವಾದಿಸಿದ್ದಾರೆ. ಬಸವತತ್ತ್ವದ ಪ್ರಕಾರ ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರ! ಸೂರ್ಯ, ಚಂದ್ರ, ಪೃಥ್ವಿ ಕೂಡ ಸ್ಥಾವರ. ನಾನು ಮತ್ತು ಅಮರೇಶ್ ಕೂಡ ಸ್ಥಾವರರೆ. ಆದರೆ ನಮ್ಮೊಳಗೆ ಜೀವವಿರುವ ವರೆಗೆ ಮಾತ್ರ ಚಲನಶೀಲರಾಗಿರುತ್ತೇವೆ. ಗಂಟೆಗೆ ಸಾವಿರ ಮೈಲಿ ಹೋಗುವ ವಿಮಾನ ಕೂಡ ಸ್ಥಾವರ. ಅದರೊಳಗಿನ ಇಂಧನ ಮುಗಿದ ಮೇಲೆ ಅದು ನಿಷ್ಕ್ರಿಯವಾಗಿರುತ್ತದೆ. ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರವೆ. ಅದಕ್ಕೆ ಸಾವು ಎಂಬುದು ಕಟ್ಟಿಟ್ಟ ಬುತ್ತಿ. ಅಂತೆಯೆ ಅಲ್ಲಮ ಪ್ರಭುಗಳು ‘ರೂಪಿಂಗೆ ಕೇಡುಂಟು’ ಎಂದು ಹೇಳುತ್ತಾರೆ. ಚೈತನ್ಯದಿಂದ ವಸ್ತುವಿನ ನಿರ್ಮಾಣವಾಗಿದೆ. ಆ ವಸ್ತು ಕೊನೆಗೊಂದು ದಿನ ನಿರ್ನಾಮವಾಗಿ ಚೈತನ್ಯವಾಗುತ್ತದೆ. ಈ ವೈಜ್ಞಾನಿಕ ಸತ್ಯವನ್ನು ಶರಣರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಆ ಕಾರಣದಿಂದಲೇ ಬಸವಣ್ಣನವರು ‘ಸ್ಥಾವರ ಜಂಗಮ ಒಂದೆ ಎಂಬೆ’ ಎಂದೂ ಹೇಳಿದ್ದಾರೆ. ಜಂಗಮ ಎಂಬುದೇ ಚೈತನ್ಯ, ಸ್ಥಾವರ ಎಂಬುದೆ ವಸ್ತು. (ಜಂಗಮಕ್ಕೆ 8 ಅರ್ಥಗಳಿವೆ) ಈ ಸಂದರ್ಭದಲ್ಲಿ ಅದು ಚೈತನ್ಯ ಎಂಬ ಅರ್ಥ ಕೊಡುತ್ತದೆ.
Ramjan Darga ಹಿಂದುವಾ? ಇಲ್ಲದಿದ್ದರೆ ಅವರ ಮಾತು ನಮ್ಮ ಧರ್ಮದ ವಿಚಾರದಲ್ಲಿ ಯಾವ ಲೆಕ್ಕಕ್ಕೆ?
ಆತ ಲಿಂಗಯತರಾಗಿ ನಿತ್ಯ ಲಿಂಗ ಪೂಜೆ ಮಾಡುತ್ತಾರ?
ಅಗತ್ಯ ಅಂದರೆ ಸಾಕಲ್ಲ? ಅಗತ್ಯತೆ ಅಂತ ಹೇಳುವ ಅಗತ್ಯವೇನಿತ್ತು?
ಅವರದ್ದು ಆಂಗ್ಲ ಮಾಧ್ಯಮದಲ್ಲಿ ಕಲಿತ ಕನ್ನಡ. ಅಗತ್ಯ = necessary, ಅಗತ್ಯತೆ = necessity.
:D.. ಒಳ್ಳೆಯ ಗಮನಿಸಿಕೆ 🙂
ಆದರೆ ನನ್ನ ಅನುಭವದಲ್ಲಿ ಕನ್ನಡಮಾಧ್ಯಮದವರೇ ಹೆಚ್ಚು ತಪ್ಪುಗಳನ್ನು ಮಾಡುವುದು ಭಾಷಾನುವಾದಿಸುವಾಗ.
ಈ ದೇಶದಲ್ಲಿ ಕಸಕ್ಕೆ ಕೊರತೆಯೇನಿಲ್ಲ.ದರ್ಗಾ ಸಾಹಿತ್ಯದ ಕಸ,ಸಮಾಜವಾದದ ಕಸ,ಲದ್ದಿ ಜೀವಿಗಳ ಕಸ…ಕಸಗಳನ್ನು ನೋಡಿ ನೋಡಿ ಕೆಲವರಿಗೆ ಎಲ್ಲವೂ ಕಸವಾಗಿ ಕಾಣುತ್ತದೆ
‘ದರ್ಗಾ ಸಾಹಿತ್ಯ ಕಸ”
ಓಹೋ! ತಮ್ಮ ಗ್ಹೆಂಟ್ ಗುರುಗಳದ್ದು ಐನೂರಾತೊಂಬತ್ತೇಳು ಅಡಿ ಎತ್ತರದ ಲದ್ದಿ. ಅದರ ಶಿಖರವೇರಿದರೆ ನಿಮಗೆ ಪಿ ಎಚ್ ಡಿ?!!
Hamsanandi ಮತ್ತು Nagshetty Shetkar:
“ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು, ಮತ್ತದರ ಅಗತ್ಯ”. ಕನ್ನಡ ಮಾದ್ಯಮದಲ್ಲೇ ಓದಿರುವ ನಿಮಗೆ ಈ ಪದ ಬಳಕೆ ಸರಿಯಾಗಿದೆಯೆಂದನ್ನಿಸುತ್ತಿದೆಯೇ?
ಶೀರ್ಷಿಕೆ “ಐನೂರ ತೊಂಬತ್ತೇಳು ಅಡಿ ಎತ್ತರದ ಕಸ ನನಗೇಕೆ ಅಗತ್ಯ ಎಂದು ಕಂಡಿದೆ” ಅಂತ ಇದ್ದರೆ ಸರಿ ಇರುತ್ತಿತ್ತು ರಾಘವ ಸುಬ್ಬಣ್ಣ ಅವರೇ!
ಇಲ್ಲ ಇಲ್ಲ. “ಐನೂರಾತೊಂಬತ್ತೇಳು ಎತ್ತರದ ಅಡಿಯ ಕನಸಿನಲ್ಲಿ, ರಂಜಾನ್ ದರ್ಗಾ ಅವರನ್ನು ತೂರಿಸುವುದೇಕೆ ಸಾಧ್ಯವಿಲ್ಲ!?” ಅಂತಾ ಶೀರ್ಷಿಕೆ ಇಟ್ಟಿದ್ದರೆ ಇನ್ನೂ ಸೂಕ್ತವಾಗುತ್ತಿತ್ತು ನಾಗು ಶೆಡ್ತಿ ಅವರೇ.
ಸಂಪಾದಕರೆ, ವೈಯಕ್ತಿಕ ನಿಂದನೆಯೇ ಪ್ರಧಾನವಾಗಿರುವ ಇಂತಹ ಕಮೆಂಟಿಗೆ ಏಕೆ ಅವಕಾಶ ನೀಡಿದ್ದೀರಿ? ಇದೊಂದೇ ಕಮೆಂಟು ಸಾಕಲ್ಲವೇ ಈ ಲೇಖನ ಕರ್ತೃವಿನ ಸಂಸ್ಕಾರ ಎನಥದ್ದು ಎಂದು ಅರ್ಥ ಮಾಡಿಕೊಳ್ಳಲು?
ಸಂಸ್ಕಾರದ ಬಗ್ಗೆ ನೀ ಸೊಲ್ಲೆತ್ತದಿರಯ್ಯಾ,
ನಿನಗಾಪುಣ್ಯದ ಅಂಶವಿಲ್ಲಯ್ಯಾ
ಬೇವಿನಾ ಬೀಜವ ಬಿತ್ತಿ, ಮಾವಿನ ಹಣ್ಣನ್ನು ಬಯಸಿದರೆಂತಯ್ಯಾ
ಹರಹರಾ ಶ್ರೀ ನಾಗ ಶೆಟ್ಕರಾ
ರೀ ರಾಘವೇಂದ್ರ..
ಮಹಾಮಾನವತಾವಾದಿ ಇವರು, ರಂಜಾನ್ ದರ್ಗಾಗಾಗಿ ನಿಟ್ಟುಪವಾಸವನ್ನು ಮಾಡ್ತಿರುತ್ತಾರೆ…
ಅವರಿಗೆ ಮಾವು, ಹಣ್ಣು ಎಂದು ಯಾಕೆ ಅವರ ಧರ್ಮಭ್ರಷ್ಟ ಮಾಡುತ್ತೀರ?
ನಾಳೆ ಬಂದು ಏಕಾದಶಿ ಉಪವಾಸ ವೈದಿಕರ ಮೂಢನಂಬಿಕೆ. ಮನುವಾದಿಗಳ ಹುನ್ನಾರ ಎಂದು ಭಾಷಣ ಬಿಗೀತಾರೆ!!
ನೀವು ಯಾರ ಬೀಜದಿಂದ ಹುಟ್ಟಿದ್ದೀರೋ ಅವರನ್ನೇ ಕೇಳಿ ಅವರು ಬಿಟ್ಟಿದ್ದು ಬೇವಿನ ಬೀಜವನ್ನೋ ಮಾವಿನ ಬೀಜವನ್ನೋ ಅಂತ!
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
ಈ ಅಣಿಮುತ್ತುಗಳು ರಂಜಾನ್ ದರ್ಗಾ ಅವರ ಬಾಯಿಂದ ಬಂದದ್ದೋ, ಅಥವಾ ವಚನ ಸಾಹಿತ್ಯದ ಸಗ್ಗವೋ!?
ನಿಮಗೂ ನನಗೂ ಇರುವ ವ್ಯತ್ಯಾಸವೆಂದರೆ, ನಾನೀಗ ನಿಲುಮೆಯ ನಿರ್ವಾಹಕರ ಹತ್ತಿರ ಹೋಗಿ ‘ಇಂತದನ್ನೂ ನೋಡಿಯೂ ಸುಮ್ಮನೆ ಕೂತಿದ್ದೀರಿ!! ಈ ಕಮೆಂಟನ್ನು ತೆಗೆಯಿರಿ’ ಎಂದು ಅಳುವುದಿಲ್ಲ. ಜನ ನೋಡಬೇಕು ನಿಮ್ಮ ಬೀಜದಿಂದ ಹುಟ್ಟಿದ ಸಾಲುಗಳನ್ನು 🙂
ಹೌದು ದೊರೆ, ತಾವು ನಮ್ಮನ್ನು ರಾಘು ಸುಬ್ಬಣ್ಣ ಅಂದರೆ ಅದು ವೈಯುಕ್ತಿಕ ಅಲ್ಲ. ನಾನು ನಿಮ್ಮನ್ನು ನಾಗು ಅಂದರೆ ಅದು ವೈಯುಕ್ತಿಕವೋ!?
ಬಾಯಿಗೆ ಬಂದಂತೆ ಮಾತನಾಡಿ, ಈಗ ಸಂಸ್ಕಾರ ಬಗ್ಗೆ ಬೇರೆ ಮಾತು. ನೀವೊಂತರಾ ಕನ್ನಡದ ಆಜಂ ಖಾನ್ ಇದ್ದಂಗೆ.
“ಐನೂರಾ ತೊಂಬತ್ತೇಳು ಅಡಿ ಎತ್ತರದ ಕನಸು, ಮತ್ತದರ ಅಗತ್ಯ” – ಅನ್ನುವುದೂ ಇಂಗ್ಲಿಷ್ ನಿಂದಲೇ ಅನುವಾದಿಸಿದಂತಿದೆ.
ಅನುವಾದಿಸಿದರೆ, ತಪ್ಪಲ್ಲ. ಪದಕ್ಕೆ ಪದವಿಡುವ ಬದಲು ಕನ್ನಡದಲ್ಲೇ ಯೋಚಿಸಿದರೆ ಈ ಕೆಲವು ತಲೆಬರಹಗಳು ಹೊಳೆದಾವು:
೧) ಐನೂರ ತೊಂಬತ್ತೇಳು ಅಡಿ ಎತ್ತರದ ಕನಸು – ನಮಗೇಕೆ ಬೇಕು?
೨) ನಮಗಿರಲಿ ಐನೂರ ತೊಂಬತ್ತೇಳು ಅಡಿ ಎತ್ತರದ ಕನಸು
೩) ಇದು ಐನೂರ ತೊಂಬತ್ತೇಳಡಿ ವಿಗ್ರಹವಲ್ಲ – ನಮಗೆ ಬೇಕಾದ ಎತ್ತರದ ಕನಸು
ಹೀಗೆ ಸಂದರ್ಭಕ್ಕೆ ತಕ್ಕಂತೆ ಬರೆಯಬಹುದು – The Five Hundred Ninetyseven Feet High Dream and It’s Necessity ಎಂಬುದನ್ನ ಪದಪದವಾಗಿ ಕನ್ನಡಕ್ಕೆ ತಂದರೆ ಮಾತ್ರ ಅಸಹಜವಾಗಿ ಕಾಣುತ್ತದೆ,
+1
ಕನ್ನಡ ಬರಹಗಾರರ ಸ್ವಂತಿಕೆಯ ದಿವಾಳಿನೆಸ್ ಹೊಸತೇನಲ್ಲ !!
ಬರಹಗಾರರು ಕನ್ನಡ-ಭಾಷಾ-ಮಾಧ್ಯಮ-ಶಿಕ್ಷಿತರು ಎಂಬುದು ಸ್ವಾಕ್ಷೇಪ-ಶೋಚನೀಯ.
ನಾನು ಆಂಗ್ಲ-ಭಾಷಾ- ಮಾಧ್ಯಮ-ಶಿಕ್ಷಣ- ಪ್ರಾಪ್ತ ಹಾಗು ಪ್ರಥಮಭಾಷಾ-ಸಂಸ್ಕ್ರತ-ವಿದ್ಯಾರ್ಥಿ!
ನಾನೀ ಲೇಖನ-ಶೀರ್ಷಿಕೆಯನ್ನು “ಅನಾಕ್ಷೇಪಣಿಯ ೫೯೭ ಅಡಿಗಳ ಈ ಮಹಾವ್ಯಯ” ಎಂದು ಸೃಜಿಸುತ್ತಿದ್ದೆ!
ತಿದ್ದು: ಅನಾಕ್ಷೇಪಣಿಯ ಅಲ್ಲ ಅನಾಕ್ಷೇಪಣೀಯ
ನಿಮಗೆ ಈ ಲೇಖನದ ಶೀರ್ಷಿಕೆ ಇಂಗ್ಳೀಷಿನ ನೇರ ಅನುವಾದ ಅಂತನ್ನಿಸಿದಕ್ಕೆ ನನಗೆ ಆಶ್ಚರ್ಯವಾಗುತ್ತಿದೆ. ಒಬ್ಬ ಮಹಾಶಯರಂತೂ ನನ್ನ ಎಜುಕೇಶನ್ ಸರ್ಟಿಫಿಕೇಟಿಗೇ ಕೈ ಹಾಕಿ, ನಾನು ಆಂಗ್ಲ ಮಾಧ್ಯಮದಲ್ಲಿ ಓದಿದ್ದೆಂದು ಘೋಷಸಿಯೂಬಿಟ್ಟರು. ಹಲಸಿನಹಣ್ಣು ಬದಿಗಿಟ್ಟು, ಬರೇ ಮೇಣವನ್ನೇ ಬಾಯಿಗೆ ಮೆತ್ತಿಕೊಳ್ಳುತ್ತೇನೆಂದರೆ ನನಗೇನೂ ಅಭ್ಯಂತರವಿಲ್ಲ, ಮುಂದುವರೆಸಿ. ಭಾಷಾನುವಾದದ ಪಾಠ ನಿಮ್ಮಲ್ಲೇ ಇರಲಿ. ನಿಮ್ಮ ಕನ್ನಡ ಅನುವಾದದ ಪಾಠಗಳೂ ನಿಮಗೇ ಇರಲಿ. ನಮಗೇಕೆ ಬೇಕು? ಎನ್ನುವ ಪದದ ಭಾವಾರ್ಥ ನನಗೆ ಅಗತ್ಯತೆ(neccesity)ಯಾಗಿಯೇ ಕಂಡುಬರುತ್ತಿದೆ. So, the title stays. If you have a better argument, bounce it off. Shall discuss.
ಮಹಾವ್ಯಯವೋ, ಮಹಾ ಅವ್ಯಯವೋ ಎಂಬುದನ್ನು ಕಾಲ ನಿರ್ಧರಿಸುತ್ತದೆ. ನನ್ನ, ನಿಮ್ಮ ಸಲಹೆ ಅಗತ್ಯವಿಲ್ಲ ಬಿಡಿ, Maaysa ಅವರೇ 🙂
ಅಬ್ಬಾ ಇಂಗ್ಲಿಷು !! ನೀವು ಬೆಂಗಳೂರೋರ?
ಅಂದ ಹಾಗೆ ನಿಮಗೆ ಸಲಹೆ ಕೊಟ್ಟಿಲ್ಲ . ನಮ್ಮದು ಬರೀ ಟೀಕೆ ! 🙂
ಕನ್ನಡ ಮಾಧ್ಯಮದಲ್ಲಿ ಓದಿದೋರಿಗೆ ಕನ್ನಡ-ಪಾಠವೇ! ಎಲ್ಲಾದರೂ ಉಂಟೇ !
ಇದನ್ನ ಓದುವಾಗ ಒಂದು ಹೊತ್ತು ಹೊಟ್ಟೆಗೆ ನೆಟ್ಟಗೆ ಗತಿಯಿಲ್ಲದ ನಮ್ಮೂರ ಬೋರಣ್ಣನು ತಮ್ಮ ವಂಶದ ಯಾರೋ ಹಿರಿಯರ ನೆನಪಿನಲ್ಲಿ ದೊಡ್ಡ ಬಾಡೂಟ ಹಾಕಿಸಿ, ಊರ ಸರ್ಕಲ್ನಲ್ಲಿ ಅವರ ಪ್ರತಿಮೆ ಸ್ಥಾಪಿಸಿ ಎಲ್ಲರಿಗೂ ತನ್ನ ವಂಶದ ಹೆಚ್ಚುಗಾರಿಕೆಯನ್ನ ತೋರಿಸ್ತೇನೇಂತ ಓಡಾಡ್ತಾ ಇದ್ದಿದ್ದು ನೆನಪಾಗುತ್ತೆ. ಅವನೂ ಸಹ ಈ ಲೇಖನದ ಪೀಠಿಕೆಯಲ್ಲಿದ್ದಂತೆ ಪ್ರತಿಮೆ ಔತಣಕೂಟ ಇತ್ಯಾದಿಗಳು ಹ್ಯಾಗೆ ಚರಿತ್ರೆಯಲ್ಲಿ ಜನಜೀವನದಲ್ಲಿ ಹಾಸುಹೊಕ್ಕಾಗಿದೇಂತ ಮುಕ್ಕಾಲುತಾಸು ಕೊರೆದು ಕೊನೆಗೆ ನನ್ಹತ್ರ ಸಾವಿರ ರುಪಾಯಿ ಚಂದಾ ಕೇಳಿದ ಅಂತೀನಿ! “ಅಲ್ವೋ ಬೋರಣ್ಣ, ಹೆಂಡತಿ ನತ್ತು ಕೇಳಿದ್ರೆ – ಮಗ ಸೈಕಲ್ಲು ಕೇಳಿದ್ರೆ ನಾವು ಬಡುವ್ರು ನಮ್ಮತ್ರ ಅದುಕ್ಕೆಲ್ಲಾ ದುಡ್ಡಿಲ್ಲಾಂತಿದ್ಯಲೋ” ಅಂತ ಕೇಳಿದ್ರೆ “ಆ ಮಾತು ಇಲ್ಲ್ಯಾಕೆ, ಅಮ್ಯಾಗೆ ನೋಡನ” ಅಂತ ತೇಲಿಸಿಬಿಡ್ತಾನೆ!
ಮಾಯಾವತಿ ಪ್ರತಿಮೆ ನಿರ್ಮಾಣವಾಗುವಾಗ ಜನರ ಹಣ ದುಂದು ಅಂತ ಅಂದವರು ಇವಾಗ ತಾವೇ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರೋದು ಚೋದ್ಯ. ಹೀಗೆ ಪ್ರಜಾಪ್ರಭುತ್ವವೂ ರಾಜನ ಸ್ವಂತ ತೆವಲುಗಳಿಗೆ ಖರ್ಚು ಮಾಡುವ ರಾಜಪ್ರಭುತ್ವದಂತಾದರೆ ಹ್ಯಾಗೆ? ಇದೇ ಒಂದು ಪದ್ದತಿಯಾಗಿ ನಾಳೆ ಮತ್ತೊಂದು ಸರ್ಕಾರ ಬಂದಿದ್ದು ನೆಹರೂದ್ದು, ಇಂದಿರಾ-ರಾಜೀವ್-ಸೋನಿಯಾ ಗಳದ್ದು ಕೊನೆಗೆ ರಾಹುಲ್-ಪ್ರಿಯಾಂಕಾದ್ದೂ ಸಾವಿರ ಅಡಿ ಪ್ರತಿಮೆ ಮಾಡ್ತೀವಿ ಆಂತ ಹೊರಡುತ್ತೆ. ಅವಾಗ ಯಾವ ನೆಲೆಗಟ್ಟಲ್ಲಿ ವಿರೋಧಿಸ್ತೀರಿ?
ಆ ಬೋರಣ್ಣ ಸಾವಿರ ರುಪಾಯಿ ಚಂದಾ ಕೇಳಿದ್ದಾಗ ನಾನು “ನಿಮ್ಮ ತಾತ ಮುತ್ತಾತಂದು ಪ್ರತಿಮೆಗೆ ನಾನ್ಯಾಕ್ ಕೊಡ್ಬೇಕು?” ಅಂತ ಒಂದು ಮಾತು ಬಿಟ್ಟೆ. ಅದ್ದಕ್ಕೆ ಅವ್ನು “ಆ ಥರಾ ಚೀಪ್ ಮೈಂಡೆಡ್ಡಾಗಿ ಆಡಬೇಡ್ವೋ, ನಿಮ್ಮಜ್ಜಂದು ಹೆಣ ಸುಡಕ್ಕೂ ನಿಮ್ಹತ್ರ ಕಾಸಿಲ್ದಿದ್ದಾಗ ನಂ ಊರ್ ಹಿರಿಯಾಂತ ನಾವೇ ಊರಾಗೆ ಚಂದಾ ಎತ್ತಿ ಕೊಟ್ಟಿರ್ಲಿಲ್ಲಾ, ಇದೂ ಹಂಗೇಯ! ಬೇಕಾರೆ ನಿಂ ಮುತ್ತಾತಂದೂ ಇನ್ನೊಂದ್ ಸರ್ಕಲ್ನಾಗೆ ಪ್ರತಿಮೆ ನಿಲ್ಸುವಂತೆ, ನಾವೇನ್ ಬ್ಯಾಡ ಅಂದ್ವಾ!” ಅಂತಂದ.
“(*) ಈ ಯೋಜನೆಯ ಒಟ್ಟುವೆಚ್ಚ 2500 ಕೋಟಿರೂಪಾಯಿಗಳು ಹಾಗೂ ಇದರಲ್ಲಿ ಉಪಯೋಗಿಸಲ್ಪಡುವ ಬಹುಪಾಲು ಉಕ್ಕು ಮತ್ತು ಕಬ್ಬಿಣ ಮರುಉಪಯೋಗಸಲ್ಪಡುವ ಲೋಹಗಳಿಂದ ಬರಲಿದೆ. ಕೇಂದ್ರ ಸರ್ಕಾರದ ಬಜೆಟ್ ವೆಚ್ಚ (ರೂ. 200ಕೋಟಿ), ಇದರಲ್ಲಿ ಶೇಕಡಾ 10ಕ್ಕಿಂತ ಕಡಿಮೆ. ಗುಜರಾತಿನ ಸರ್ಕಾರ ಸಹ ತನ್ನ ಬಜೆಟ್ಟಿನಲ್ಲಿ ಈ ಯೋಜನೆಗಾಗಿ ನೂರು ಕೊಟಿಯಷ್ಟು ಹಣ ಮೀಸಲಿಟ್ಟಿದೆ.”
So according to the author, one useless idol costs more than the whole Indian union budget!
Get the numbers straight!
“..ಮುಂದಿನ 25 ವರ್ಷಗಳಲ್ಲಿ ಇದನ್ನು ನೋಡಲು ಬರುವ ಜನರ ಸಂಖ್ಯೆಯನ್ನೊಮ್ಮೆ ಊಹಿಸಿ ಮತ್ತೊಮ್ಮೆ ಲೆಕ್ಕ ಹಾಕಿ. ಅಮೇರಿಕಾದ ಲಿಬರ್ಟಿ ಪ್ರತಿಮೆ…ಇಂದಿನವರೆಗಿನ ಹೂಡಿಕೆಯ ಪ್ರತಿಪಲ(ROI – Return On Investment)…ನೂರುಪಟ್ಟು ಆದಾಯ…”
ಬೋರಣ್ಣನೂ ಸಹಾ ಚಂದಾ ಎತ್ತುವಾಗ ಹೀಗೇ ತನ್ನಜ್ಜನ ಪ್ರತಿಮೆಯ ಬಳಿ ಕಾಣಿಕೆಡಬ್ಬಇಡುವ ಮಾತನ್ನ ಆಡುತ್ತಿದ್ದ. ಕೇಳಿದ ಜನ ‘ರಟ್ಟೇ ಬಗ್ಗಿಸಿ ದುಡಿಯಲಾರದೇ ನೂರೆಂಟು ಯೋಜನೆಗಳನ್ನ ಮಾತಾಡುವ ಬೋರಣ್ಣ” ಅಂತ ನಗುತ್ತಿದ್ದರು ಆನ್ನೋದು ಬೇರೆ ಮಾತು ಬಿಡಿ.
ಪ್ರಶ್ನೆ ಏನೆಂದರೆ “ಹಿಂದಿನ ಕಾಲದ ರಾಜರಂತೆ ಪ್ರಜಾಪ್ರಭುತ್ವವೂ ಪ್ರಜೆಗಳಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳ ಮೂಲಕ ಆರ್ಥಿಕತೆಯನ್ನ ಮೇಲೆತ್ತುವ ಮಾದರಿಯನ್ನ ಅಲಕ್ಷಿಸಿ, ಗುಡಿ-ಚರ್ಚು-ಮಸೀದಿ-ಮಾನ್ಯುಮೆಂಟುಗಳನ್ನ ಕಟ್ಟಿ ಕಾಣಿಕೆಡಬ್ಬ ಇಡುವ ಮಾದರಿಯನ್ನ ತುಳಿಯಬೇಕೇ?” ಅಂತ.
ಬೋರಣ್ಣನ ಸ್ನೇಹಿತರಾದ ರಮೇಶ್ ಅವರೇ,
ನನಗನ್ನಿಸಿದ್ದು ನಾನು ಹೇಳಿದ ಮೇಲೆ, ನಿಮಗನ್ನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ನಿಮಗೂ ಇದೆ. ನಿಮ್ಮ ಕಮೆಂಟುಗಳಿಗೆ ಧನ್ಯವಾದ. ಆದರೆ, ನಿಮಗೆ ಬೇಕಾದಷ್ಟು ಸಾಲುಗಳನ್ನು ಮಾತ್ರ quote ಮಾಡಿ, ನಿಮ್ಮ ವಾದಗಳನ್ನು ಮುಂದಿಡಬೇಡಿ. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಇರುವ ವ್ಯತ್ಯಾಸವೇ ಅದು 🙂
(*) one useless idol costs more than the whole Indian union budget!
Get the numbers straight!
Thanks for jumping into the conclusion of the idol being ‘useless’, on all our behalf 🙂 In-fact I did get a glance of the Indian Union budget. And our Total budget stands at 1794891.96 Crores. Our capital is 226780
.53 crores and our revenue is 1568111.43 crores. Govt is spending 200 crores on this project, which is 8% of the total estimated cost of the project and “0.01228% of the WHOLE Indian union budget”
So, as far as getting number straight goes, I will leave the ball in your court to recheck that statement and to decide whose numbers has to be straightened.
(*) ಪ್ರಜಾಪ್ರಭುತ್ವವೂ ಪ್ರಜೆಗಳಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳ ಮೂಲಕ ಆರ್ಥಿಕತೆಯನ್ನ ಮೇಲೆತ್ತುವ ಮಾದರಿಯನ್ನ ಅಲಕ್ಷಿಸಿ…..
ಆ ನೇರವಾದ ಯೋಜನೆಗಳು ಯಾವುವು ಅಂಥಾ ಹೇಳಿ ಪುಣ್ಯ ಕಟ್ಕೊಂಡ್ರೆ, ಬೋರಣ್ಣನ ಆತ್ಮಕ್ಕೆ ಶಾಂತಿ ಸಿಗಬಹುದು. ಅದೂ ಅಲ್ಲದೆ ಬರೀ ನೇರವಾದ ಯೋಜನೆಗಳಿಂದಲೇ ಆರ್ಥಿಕತೆ ಮೇಲೇಳುತ್ತೆ ಅನ್ನುವ ತಮ್ಮ ಅರ್ಥಶಾಸ್ತ್ರದ ಜ್ಞಾನದ ಧೂಳನ್ನೊಮ್ಮೆ ಕೊಡಕಿದರೆ ನಿಮ್ಮ ಅತೃಪ್ತ ಆತ್ಮಕ್ಕೂ ಸ್ವಲ್ಪ ಅಸಿಡಿಟಿ ಕಡಿಮೆಯಾಗಬಹುದು. ಅದೂ ಅಲ್ಲದೆ, ಈ ಪ್ರತಿಮೆಗೂ, ಭಾರತದ ಅರ್ಥವ್ಯವಸ್ಥೆಗೂ A=B ಅನ್ನುವ ನೇರ ಸಂಬಂಧ ಕಲ್ಪಿಸಿರುವ ನಿಮ್ಮ ಊಹಾಸಾಮರ್ಥ್ಯಕ್ಕೆ ನಮೋ ನಮಃ (Oh sorry!!….ನಮೋ ನಮಃ ಅಂದಾಗ ಯಾರದ್ದೋ ಹೆಸರು ಹೇಳ್ದೆ ಅಂತಾ ಅನ್ನಿಸಿದ್ರೆ, ಅಥವಾ ನಾನು ಪುರೋಹಿತ ಶಾಹಿ ಅನ್ನಿಸಿದ್ರೆ, ಕ್ಷಮೆ ಇರಲಿ)
(*) “ನಿಮ್ಮ ತಾತ ಮುತ್ತಾತಂದು ಪ್ರತಿಮೆಗೆ ನಾನ್ಯಾಕ್ ಕೊಡ್ಬೇಕು?”
“ಇದರಲ್ಲಿ ಹೆಚ್ಚಿನ ಹಣ ಸ್ವಯಂಪ್ರೇರಿತ ಕೊಡುಗೆಯಾಗಿರುವುದರಿಂದ….” ಅಂತಾ ಬರೆದಿರೋದನ್ನ ನೀವು ಓದಲಿಲ್ಲ ಅನ್ಸುತ್ತೆ. ಖಂಡಿತಾ ಕೊಡಬೇಡಿ ಸ್ವಾಮಿ. ಚಂದಾ ಕೇಳೋಕೆ ಬಂದಾಗ ಮುಖದ ಮೇಲೆ ಬಾಗಿಲು ಹಾಕಿ ವಾಪಾಸು ಕಳಿಸಿ.
(*) ಇದೇ ಒಂದು ಪದ್ದತಿಯಾಗಿ ನಾಳೆ ಮತ್ತೊಂದು ಸರ್ಕಾರ ಬಂದಿದ್ದು ನೆಹರೂದ್ದು, ಇಂದಿರಾ-ರಾಜೀವ್-ಸೋನಿಯಾ ಗಳದ್ದು ಕೊನೆಗೆ ರಾಹುಲ್-ಪ್ರಿಯಾಂಕಾದ್ದೂ ಸಾವಿರ ಅಡಿ ಪ್ರತಿಮೆ ಮಾಡ್ತೀವಿ ಆಂತ ಹೊರಡುತ್ತೆ. ಅವಾಗ ಯಾವ ನೆಲೆಗಟ್ಟಲ್ಲಿ ವಿರೋಧಿಸ್ತೀರಿ?
ಕನಸು ಕಾಣುವುದಕ್ಕೂ ಬರಗೆಟ್ಟಿರುವ ಪಕ್ಷದವರು, ಇಂತದ್ದೊಂದು ಯೋಜನೆಯನ್ನು ಮಾಡ್ತಾರೆ ಅನ್ನುವ ಭಂಡ ಭರವಸೆ ನನಗಿಲ್ಲ. ಇಂತಾ ಕನಸನ್ನೂ ಎರವಲು ತಗೊಂಡು, ಅವರು ಇನ್ನೊಂದು ಪ್ರತಿಮೆ ನಿಲ್ಲಿಸ್ತಾರೆ ಅಂದ್ರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಅಂತಹ ಒಂದು ಪ್ರತಿಮೆ, ಒಬ್ಬ ನಾಯಕನಿಗೆ ಸಲ್ಲುವ ಗೌರವವಾಗಿರಬೇಕು, ಅಥವಾ ನಮ್ಮ ಇತಿಹಾಸ ಬದಲಿಸಿದ ಒಂದು ಘಟನೆಯ ಕುರುಹಾಗಿರಬೇಕು. ರಾಹುಲ ಪಾರ್ಲಿಮೆಂಟಲ್ಲಿ ನಿದ್ರಿಸುವ ಭಂಗಿಯಲ್ಲಿ, ಸೋನಿಯಾ ತನ್ನ ಕೆಟ್ತ ಹಿಂದಿಯ ಭಾಷಣ ಮಾಡುವ ಭಂಗಿಯಲ್ಲಿ, ಪ್ರಿಯಾಂಕ ಇಟ್ಟಿಗೆಯ ಭಟ್ಟಿ ಹಾರಿದ ಭಂಗಿಯಲ್ಲಿ ಪ್ರತಿಮೆಗಳನ್ನು ನಿರ್ಮಿಸುವುದಕ್ಕೆ ನನ್ನ ವಿರೋಧ ಬದಿಗಿರಲಿ, ನಿಮ್ಮಂತವರೂ ಪ್ರತಿಭಟಿಸ್ತಾರೆ ಅನ್ನೋ ಭರವಸೆ ನನಗಿದೆ.
ಯಾವನೊ ಒಬ್ಬ ಬಡವ ಒಮ್ಮೆ ಒಬ್ಬ ಒಳ್ಳೆ ತಿಳುವಳಿಕಸ್ಥನ ಮುಂದೆ ಬಂದನಂತೆ, ಅದು-ಇದು ಮಾತನಾಡುತ್ತ, ತನಗೆ ಅಕ್ಕಿ ತೆಗೆದುಕೊಳ್ಳಲು ಸ್ವಲ್ಪ ಹಣ ಕಡಿಮೆ ಬಿದ್ದಿದೆ ಎಂದನಂತೆ. ಅದಕ್ಕೆ ನಮ್ಮ ತಿಳುವಳಿಕಸ್ಥ ಸಾಹೇಬರು ಅವನನ್ನು ಅಡಿಯಿಂದ ಮುಡಿವರೆಗೆ ಒಮ್ಮೆ ನೋಡಿ ‘ಏನಯ್ಯಾ ಈ ಅಂಗಿ,ಚಡ್ಡಿ,ಧೋತ್ರಕ್ಕೆ ಹಣ ಖರ್ಚು ಮಾಡುವ ಬದಲು ಅಕ್ಕಿ ತೆಗೆದುಕೊಳ್ಳಲು ಆಗ್ತಿರ್ಲಿಲ್ವಾ ನಿಂಗೆ?’ ಅಂದರಂತೆ!. ಅಂಗಿ-ಚಡ್ಡಿ ಹಾಕಿಕೊಳ್ಳುವುದಕ್ಕೂ, ಅಕ್ಕಿಗೆ ಹಣ ಕಡಿಮೆ ಬಿದ್ದಿದ್ದಕ್ಕೂ ನಂಟು ಕಲ್ಪಿಸಲಾಗದೆ ಆ ಬಡವ ತಲೆ ಕೆರೆದುಕೊಂಡನಂತೆ..ನಮ್ಮ ತಿಳುವಳಿಕಸ್ಥರು ತಮ್ಮ ಬಗಲ ಜೋಳಿಗೆಗೆ ಕೈಹಾಕಿ ದಪ್ಪನ ಪುಸ್ತಕವೊಂದನ್ನು ತೆಗೆದರಂತೆ. ಮತ್ತೆಲ್ಲಿ ಪುಸ್ತಕದಿಂದ ಪುರಾಣ ಓದಿ ಹೇಳಲು ಸುರು ಮಾಡಿಬಿಡುತ್ತಾರೆನೊ ಎಂದು ಹೆದರಿ, ಆ ಬಡವ ಅಲ್ಲಿಂದ ಕಾಲು ಕಿತ್ತನಂತೆ..
—
ಇತ್ತಿತ್ತಲಾಗಿ ದಿನ ಸಂಜೆ ಟಿ.ವಿ ನೋಡೊ ತಿಮ್ಮಯ್ಯನಿಗೆ ಸಾಹಿತಿಗಳ ಆಸ್ಪತ್ರೆ ಖರ್ಚು, ಅವುಗಳ ಗಂಜಿ ಖರ್ಚು, ಅವುಗಳಿಗೆ ಆ-ಈ ಹೆಸರಿನ ಪ್ರಶಸ್ತಿ ಕೊಟ್ಟು ಸಾಕುವುದನ್ನು ನೋಡಿ, ಇವುಗಳ ಬದಲಿಗೆ ಒಂದು ಹತ್ತು ಹಳ್ಳಿ ಸ್ಕೂಲುಗಳ ಸುಧಾರಣೆಗೆ ಸರ್ಕಾರ ಆ ಹಣ ಕೊಡಬಾರದಿತ್ತೆ ಅನಿಸಿತಂತೆ..
ಮೊದಲಿಗೆ ಐನೂರಾತೊಂಬತ್ತೇಳು ಅಲ್ಲ “ಐನೂರ ತೊಂಬತ್ತೇಳು” (ಎರಡು ಪದಗಳು) ಇಲ್ಲವೇ “ಐನೂರ್ತೊಂಬತ್ತೇಳು”/”ಐನೂರುತೊಂಬತ್ತೇಳು” (ಒಂದು ಪದ). ಯಾಕೆ?ನೀವು ತುಸು ನೋಡಿ ತಿಳಿಯವುದು.
ಇದೇ ಪರಂಪರೆ ಮುಂದುವರಿಸಿ, ಮುಂದೆ ಸಾವಿರ ಅಡಿ ಎತ್ತರದ ಮೋದಿ ಪುತ್ತಳಿ ನಿಲ್ಲಿಸೋದು.!!
ಇದೇನು ಹೊಸತಲ್ಲ. ಇಡೀ ಸೋಮನಾಥದೇವಾಲಯವನ್ನು ಕೇಂದ್ರಸರಕಾರದ ಹಣದಲ್ಲೇ ಜೀರ್ಣೋದ್ಧಾರವನ್ನು ಮಾಡಿದ್ದು.
ನಾಳೆ ಹಂಪೆಯ ಜೀರ್ಣೋದ್ಧಾರವನ್ನು ಮಾಡಿಸೋಣ ಬಿಡಿ, ಶ್ರಿರಾಮುಲು-ಅನ್ನು ಮುಖ್ಯಮಂತ್ರಿಯನ್ನು ಮಾಡಿ.
ಓಹ್… 815ರಲ್ಲಿ, 1042ರಲ್ಲಿ, 1143ರಲ್ಲಿ, 1308ರಲ್ಲಿ, 1375ರಲ್ಲಿ, 1451ರಲ್ಲಿ, 1665ರಲ್ಲಿ, 1783ರಲ್ಲಿ ಎಲ್ಲಾ ಬಾರಿಯೂ ಕೇಂದ್ರ ಸರ್ಕಾರದ ಖರ್ಚಿನಲ್ಲೇ ಕಟ್ಟಿದ್ದೋ!? ಸರ್ಕಾರ ಇದನ್ನು ಕಟ್ಟಲು ಕೈಹಾಕಿದ್ದು ಒಂದೇ ಸಲ, ಅದೂ ಸಹ ಗಾಂಧಿ ‘ಇದರ ದುಡ್ಡು ಸಾರ್ವಜನಿಕ ದೇಣಿಗೆಯಿಂದಲೇ ಬರಬೇಕು’ ಎಂದು ಹೇಳಿದ ಮೇಲೆ ಎಂದು ನಿಮಗೂ ಗೊತ್ತು, ನನಗೂ ಗೊತ್ತು. ಪಟೇಲರು ಈ ಯೋಜನೆಯನ್ನು ನಡೆಸಲೇಬೇಕೆಂದು ಪಟ್ಟು ಹಿಡಿದು ನಿಂತಾಗ ಸಿಫಿಲಿಸ್ ನೆಹರೂ ಯಾವರೀತಿ ಆ ಪ್ರಾಜೆಕ್ಟಿಗೆ ಕಲ್ಲುಹಾಕಿದ? ಹೇಗೆ ಪಟೇಲರನ್ನು ಮುಸ್ಲಿಂವಿರೋಧಿಯೆಂದು ಜರಿದ? ಹಾಗೂ ಗಾಂಧಿ ಮತ್ತು ಪಟೇಲರ ಮರಣಾನಂತರ ಯೋಜನೆಯ ಮೇಲ್ವಿಚಾರಕರಾದ ತನ್ನದೇ ಕಾಂಗ್ರೆಸ್ಸಿನ ಕೆ.ಎಂ. ಮುನ್ಶಿಯವರನ್ನು ಹೇಗೆ ನಡೆಸಿಕೊಂಡ? ಅಂದಿನ ರಾಷ್ಟ್ರಪತಿ ರಾಜೆಂದ್ರ ಪ್ರಸಾದರು ಶಿಲಾನ್ಯಾಸಕ್ಕೆ ಹೊರಟಾಗ ಎಷ್ಟು ರೀತಿಯಲ್ಲಿ ತಡೆಯೊಡ್ಡಿದ? ಎಂದೂ ನಿಮಗೆ ಗೊತ್ತು. ಇವತ್ತು ಆ ದೇವಸ್ಥಾನ ನಡೆಯುತ್ತಿರುವುದು ಸೋಮನಾಥ ಟ್ರಸ್ಟಿನಿಂದ ಎನ್ನುವುದೂ ನಿಮಗೆ ಗೊತ್ತಿಲ್ಲದಿರುವುದೇನಲ್ಲ.
ಅಷ್ಟು ಬಾರಿ ಅದನ್ನು ದ್ವಂಸಗೊಳಿಸಿದರೂ, ಅದು ಹಿಂದೆಂದಿಗಿಂತಲೂ ಮತ್ತಷ್ಟು ಭವ್ಯವಾಗಿ ನಿಲ್ಲುತ್ತಿರುವುದು ಬಹುಷಃ ಮಯಾಸ ಅವರಿಗೆ ಅಪಥ್ಯವಾದಂತಿದೆ. ಅಥವಾ ಸಿಫಿಲಿಸ್ ನೆಹರೂವಿನಂತೆ ಅವರಿಗೆ ಸೋಮನಾಥ ಮಂದಿರ ಹಿಂದೂಗಳಿಗಾದ ಅನ್ಯಾಯವನ್ನು ಪರಿಗಣಿಸಿ, ಅದನ್ನು ಅವರಿಗೆ ಮರಳಿಸುವ ಪ್ರಯತ್ನವಾಗಿ ಕಾಣದೆ, ಬಹುಷಃ ಹಿಂದೂ ಓಲೈಕೆಯಂತೆ ಕಂಡಿರಬೇಕು.
ಸಾವಿರ ಅಡಿಯ ಪ್ರತಿಮೆ, ಹಂಪಿ ಜೀರ್ಣೋದ್ಧಾರ…ಹೂಂ…. ನಿಮ್ಮ ಆಶೀರ್ವಾದ ಇದ್ರೆ ಅದನ್ನೂ ಮಾಡೋಣ ಬಿಡಿ, ಮಯಾಸ ಅವರೆ 🙂 ಸಾವಿರ ಅಡಿಯ ಪ್ರತಿಮೆಯ ಮಾತಿನಲ್ಲೇನೋ ಅರ್ಥವಾಗುವ ವ್ಯಂಗ್ಯವಿದೆ. ಆದರೆ ಹಂಪಿಯ ಜೀರ್ಣೋದ್ಧಾರದಲ್ಲೂ ನಿಮಗೆ ಯಾಕೆ ಕಸಿವಿಸಿ ಕಂಡುಬರುತ್ತಿದೆಯೋ ಗೊತ್ತಿಲ್ಲ!? ಅಲ್ಲೂ ನಿಮಗೆ ಹಿಂದೂ ಓಲೈಕೆ ಕಂಡುಬರುತ್ತಿದೆಯೇನೋ…..ಪಾಪ!!
ನಾನು ಯಾವ ವ್ಯಂಗ್ಯಟಿಪ್ಪಣಿಯನ್ನು ಮಾಡಿಲ್ಲ ..
ವೈಚಾರಿಕತೆಯ ಕೊರತೆಯು ಯಾವಾಗಲು ಅಬ್ಬರ, ಆಡಂಬರ ಹಾಗು ಸಮ್ಭ್ರಮವಾಗಿರುತ್ತದೆ!
ಸಮ್ಭ್ರಮವಾಗಿರುತ್ತದೆ ಅಲ್ಲ ಸಂಭ್ರಮವಾಗಿರುತ್ತದೆ.