ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ?
– ರಾಘವೇಂದ್ರ ಸುಬ್ರಹ್ಮಣ್ಯ
(*) ಲೈಂಗಿಕ ಶಿಕ್ಷಣ ಕೊಟ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನ ನಾನೊಪ್ಪಲ್ಲ.
(*) ಹುಡುಗೀರು ಗಿಡ್ಡವಾದ, ಬಿಗಿಯಾದ ಉಡುಪು ತೊಡೋದನ್ನ ನಿಲ್ಲಿಸಿದ್ರೆ, ಮೊಬೈಲ್ ಉಪಯೋಗ ಕಡಿಮೆ ಮಾಡಿದ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನೂ ನಾನೊಪ್ಪಲ್ಲ.
(*) ಯಾವನೋ ಎರೆಕ್ಷನ್ ತಡೆಯಲಾಗದವ ಮಾತ್ರ ರೇಪ್ ಮಾಡ್ತಾನೆ ಅನ್ನೋದನ್ನೂ ನಾನೊಪ್ಪಲ್ಲ.
ಹೆಣ್ಣು ಬೈಕ್ ಓಡಿಸಿದ್ರೂ ಮರುಳಾಗ್ತಾಳೆ, ಡಿಯೋ ಹಾಕಿದ್ರೂ ಆಕರ್ಷಿತಳಾಗ್ತಾಳೆ, ಹೇರ್ ಜೆಲ್ ಹಾಕಿಯೂ ಹುಡುಗಿಯರನ್ನ ಪಟಾಯಿಸಬಹುದು ಅನ್ನೋ ಮೂರನೇ ದರ್ಜೆಯ ಜಾಹೀರಾತಿನ ಬಗ್ಗೆ ಕಮಕ್-ಕಿಮಕ್ ಎನ್ನದ ನಮ್ಮ ಮಹಿಳಾವಾದಿಗಳು ಹಾಗೂ ಬುದ್ಧಿಜೀವಿಗಳು, ಅತ್ಯಾಚಾರ ನಡೆದಾಗ ಮಾತ್ರ ಬೊಬ್ಬಿರಿಯುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ನಮ್ಮ ಸಮಾಜ ಉದ್ಧಾರವಾಗುವುದರೆಡೆಗೆ ಮೊದಲ ಹೆಜ್ಜೆ ಇಡಬಹುದೇನೋ. ಇನ್ನು ನಮ್ಮ ಸಿನಿಮಾಗಳೋ, ಅದರ ಸೂಪರ್ ಸ್ಟಾರ್ ಕಪೂರ್, ಖಾನ್ ಮಹಾಶಯರ ಕಥೆಯಂತೂ ಕೇಳುವುದೇ ಬೇಡ. ಸಿನಿಮಾಗಳಲ್ಲಿ ತಮ್ಮ ಮಕ್ಕಳ ವಯಸ್ಸಿನ ಹೆಂಗೆಳೆಯರನ್ನು ಚೀಪ್-ಟ್ರಿಕ್ ಉಪಯೋಗಿಸಿ ಬಲೆಗೆ ಬೀಳಿಸುವುದಲ್ಲದೇ, ಚಡ್ಡಿ-ಬನಿಯಾನ್ ಜಾಹಿರಾತಿನಲ್ಲೂ ಹೆಣ್ಣುಗಳು ತಮ್ಮನ್ನು ಮುತ್ತುವುದರಂತಹ ಸಂದೇಶವನ್ನು ಜನರಿಗೆ ಕೊಡುತ್ತಾರೆ. ಇಂತಹ ಟೀವಿ ಜಾಹೀರಾತುಗಳು, ದ್ವಂದ್ವಾರ್ಥ ಸಂಭಾಷಣೆಯ ಚಿತ್ರಗಳನ್ನು ನೋಡಿ ಬೆಳೆದ ಮಕ್ಕಳು ಇನ್ನೆಂತಹ ಪಾಠ ಕಲಿಯಲು ಸಾಧ್ಯ!? ಸಧ್ಯಕ್ಕೆ ಲೈಂಗಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಿರುವುದು, ನಮ್ಮ ಕುಲಗೆಟ್ಟ ಟಿವಿ ಸಿನಿಮಾ ಮಾಧ್ಯಮದ ಮೇಲಿನ ಹಿಡಿತ ಹಾಗೂ ಸ್ವಲ್ಪ ನೈತಿಕತೆಯ ಪಾಠಗಳು.
ಇನ್ನೊಂದು ಮಾತು ತಿಳಿಯೋಣ. ಅತ್ಯಾಚಾರಿಯ ಮನಸ್ಸು ವಿಕೃತಿಯಿಂದ ತುಂಬಿರುವಂತದ್ದು. ಅದೊಂದು ಮಾನಸಿಕ ರೋಗಗಳ ಗೂಡು. ವಿಕ್ಷಿಪ್ತ ವಾಂಛೆಗಳ ಕೂಪ. ಆ ವ್ಯಕ್ತಿಗೆ ‘ಆ ಸಮಯಕ್ಕೆ’ ಏನೋ ಒಂದು ಸಿಕ್ಕಿದರಾಯ್ತು. ಮಗುವೋ, ಹೆಂಗಸೋ, ವೃದ್ಧೆಯೋ ಯಾವುದಾದರೂ ಸರಿ. ಅದು ಸಿಗಲಿಲ್ಲವೆಂದಾದಲ್ಲಿ ಗಂಡಸರ ಮೇಲೂ, ಪ್ರಾಣಿಗಳ ಮೇಲೂ ಏರಿದವರ ಬಗ್ಗೆ ನಾವು ಕೇಳಿದ್ದೇವೆ. ನಿಜವಾದ ಗಂಡಸು ಹೆಣ್ಣಿನ ಮೈಮೇಲೆ ಏರುವುದಿಲ್ಲ. ಮೃಗದಂತೆ ಬಳಸಿ ಬಿಸಾಡುವುದಿಲ್ಲ. ಆದ್ದರಿಂದ ನನ್ನ ಪ್ರೀತಿಯ ಮಹಿಳಾವಾದಿಗಳೇ….ಯಾವನೋ ಒಬ್ಬ ಝಿಪ್ ನಿಲ್ಲದವ ಪ್ಯಾಂಟ್ ಬಿಚ್ಚಿದ್ದಕ್ಕೆ ಇಡೀ ಗಂಡುಕುಲದ ಮೇಲೆ ಹರಿಹಾಯ್ದು, ಮನುಸ್ಮೃತಿಯನ್ನು ಚರ್ಚೆಗೆ ಎಳೆದು ನಿಲ್ಲಿಸುವ ಅಗತ್ಯವಿಲ್ಲ. ಯಾವುದೋ ಒಂದು ಹೆಣ್ಣು ರಾತ್ರಿ ಹನ್ನೆರಡಕ್ಕೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ನಿಂತದ್ದಕ್ಕೆ ‘ರಾತ್ರಿ ಹನ್ನೆರಡಕ್ಕೆ ಗಂಡಸಿನೊಡನೆ ಮನೆಯ ಹೊರಗೆ ಇವಳಿಗೇನು ಕೆಲಸ!?’ ಎಂದು ಅನುಮಾನಿಸುವ ಅಗತ್ಯವೂ ಇಲ್ಲ. ಅತ್ಯಾಚಾರಕ್ಕೆ ಹೆಣ್ಣಿನ ಸ್ವಾತಂತ್ರ್ಯಹರಣ ಉತ್ತರವಲ್ಲ. ಹಾಗಂತ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಮಧ್ಯದ ಅಂತರವನ್ನೂ fairer sex ಅರ್ಥೈಸಿಕೊಳ್ಳಬೇಕು.
ಬೆಂಗಳೂರಿನಲ್ಲಿ ಸರಗಳ್ಳತನ ಯಾಕೆ ಹೆಚ್ಚಾಯಿತು? ಎನ್ನುವುದನ್ನೊಮ್ಮೆ ಯೋಚಿಸಿ ನೋಡಿ. ಯಾವ ಹೆಣ್ಣೂ ಕೂಡ ‘ಬಾ ನನ್ನ ಸರವನ್ನು ಕದಿ’ ಎಂದು ಕೂಗಲಿಲ್ಲ. ಆದರೆ, ಕದಿಯುವವನ ಮನಸ್ಥಿಯನ್ನೂ ಒಮ್ಮೆ ಅವಲೋಕಿಸಿ ನೋಡಿ. ಅವನ ವೈಯುಕ್ತಿಕ ಆರ್ಥಿಕ ಕಾರಣಗಳೇನೋ, ಎಷ್ಟೋ!? ಸರಗಳ್ಳತನದಲ್ಲಿ ನಾವು ಹೇಗೆ ಕಳ್ಳನನ್ನು ಬಂಧಿಸಿ ಶಿಕ್ಷಿಸುವುದು ಮಾತ್ರವಲ್ಲದೇ, ಹೆಂಗೆಳೆಯರಿಗೂ ಎಚ್ಚರ ಕೊಡುತ್ತೇವೆಯೋ ಹಾಗೆಯೇ ಬೇರೆ ಅಪರಾಧಗಳಲ್ಲಿಯೂ ಶೋಷಿತವರ್ಗವನ್ನು ಎಚ್ಚರಗೊಳಿಸುವುದು ಅತ್ಯಗತ್ಯ. ಹಸುಳೆಗಳ ಮೇಲೆ ಅತ್ಯಾಚಾರಗೈಯ್ಯುವ ಪಶುಗಳ ಬಗ್ಗೆ ಈ ಯಾವ ಥಿಯರಿಗಳೂ ಕೆಲಸಕ್ಕೆ ಬರೋಲ್ಲ. ಅಂಥವರನ್ನು ಸುಮ್ಮನೆ ನಾಲ್ಕು ರಸ್ತೆ ಸೇರುವಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸುವುದಷ್ಟೇ ಉತ್ತರ ಎನ್ನಬಹುದೇನೋ.
ಇಂತಹ ಅತ್ಯಾಚಾರಗಳ ವಿಷಯಕ್ಕೆ ಬಂದಾಗ ನಾವೆಷ್ಟು ಅಸಹಾಯಕರು ಎಂದು ನೋಡಿದರೆ ಕರುಳು ಕಿವುಚುತ್ತದೆ. ಯಾವನೋ ಕ್ರೂರಿ, ಕರುಣೆ ತೋರದೆ ಮಾಡಿದ ಕೆಲಸಕ್ಕೆ ಬಲಿಯಾದ ಹೆಣ್ಣುಮಗುವಿನ ಫೋಟೋ ಮಾಧ್ಯಮದಲ್ಲೆಲ್ಲಾ ಬಿತ್ತರವಾಗುತ್ತದೆ. ಆದರೆ ಮೃಗಸಮಾನನಾದ ಅತ್ಯಾಚಾರಿಯನ್ನು ಮಾತ್ರ ಮುಖ ಮುಚ್ಚಿ ಮರ್ಯಾದೆಗೆ ಧಕ್ಕೆಯಾಗದಂತೆ ಪೋಲೀಸರು ಕರೆತರುವಾಗ ನಮ್ಮ ಕಾನೂನಿನ ಬಗೆಗೇ ಅಸಹ್ಯ ಹುಟ್ಟುತ್ತದೆ. ಕೆಲ ನಾಚಿಕೆಗೇಡಿ ರಾಜಕಾರಣಿಗಳು ಅತ್ಯಾಚಾರಿಗಳನ್ನು ವಹಿಸಿಕೊಂಡು ಹೇಳಿಕೆಗಳನ್ನು ನೀಡುವಾಗ, ಅತ್ಯಾಚಾರಿಗಳನ್ನು ಕಲ್ಲುಹೊಡೆದು ಸಾಯಿಸಬೇಕೋ ಅಥವಾ ಈ ರಾಜಕಾರಣಿಗಳನ್ನು ಸಾಯಿಸಬೇಕೋ ಅಂತಾ ಒಮ್ಮೆ ಗೊಂದಲ ಮೂಡುತ್ತದೆ.
ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ ಎಂಬುದೇ ನನ್ನ ಗೊಂದಲ
ಚಿತ್ರ ಕೃಪೆ : groundreport.com
ಅತ್ಯಾಚಾರಿಯನ್ನು ಮುಖ ಮುಚ್ಚಿ ಕರೆದುಕೊಂಡುಬರುವ ಪೋಲೀಸರನ್ನು ಕಂಡರೇ ಅಸಹ್ಯವಾಗತ್ತೆ.
ಕೌಟುಂಬಿಕ ವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆಲ್ಲ ಮುಖ್ಯಕಾರಣ ಎನಿಸುತ್ತದೆ. ಹಿರಿಯರು, ಮಹಿಳೆಯರು, ಕಾನೂನು ಹೀಗೆ ಯಾವುದರ ಬಗ್ಗೂ ಭಯವೇ ಇಲ್ಲ. ದೇವರಂತೂ ಬಿಡಿ. ನೈತಿಕ ಶಿಕ್ಷಣ ಕೊಡಬೇಕು ಅಂದರೆ ಕೇಸರೀಕರಣವಾಗುತ್ತದೆ. ಸಾಮಾಜಿಕ ಮೌಲ್ಯ ಅಂದಕೂಡಲೇ ಪ್ರತಿಗಾಮಿತನವಾಗುತ್ತದೆ! ಮಕ್ಕಳು ಬೆಳೆದಂತೆ ಬೆಳೆಯಲಿ ಬಿಡಿ ಅಂದರೆ ಹೀಗೆಯೇ ಆಗುತ್ತದೆ. ಪ್ರಗತಿಪರ ಎಂದುಕೊಳ್ಳುವವರು ಹಿಂದಿನ ಮೌಲ್ಯಗಳನ್ನು ಪ್ರಶ್ನಿಸಬಲ್ಲರು, ಒಡೆಯಬಲ್ಲರು. ಪರ್ಯಾಯ ಮೌಲ್ಯ ಕೊಡುವ ಶಕ್ತಿ ಅವರಿಗಿಲ್ಲ. ಎಲ್ಲವನ್ನೂ ಪ್ರಶ್ನಿಸುವ ಧಿಕ್ಕರಿಸುವ ಪೀಳಿಗೆಯ ಫಲ ಇದು.
Nadu rasteyalli kallu hodedu kollabeke horatu paryaaya marga bekilla…guilty should be punish…
ಆಗ ಮಾನವ ಹಕ್ಕು ಹೋರಾಟಗಾರರು ಎದ್ದು ಬರುತ್ತಾರೆ!!
ಈ ಮನೋವಿಕಾರಕ್ಕೆ ಅತಿ-ಮಡಿವಂತ-ಸಮಾಜವೇ ಕಾರಣ!
೧. ಇಬ್ಬರು ವಯಸ್ಕರು (ಯಾವುದೇ ಲಿಂಗದವರು) ಸಮ್ಮತಿಸಿ ಲೈಂಗಿಕತೆಯಲ್ಲಿ ತೊಡುಗುವುದು ಸಹಕವೆಂದು ಒಪ್ಪಿಕೊಳ್ಳಬೇಕು. ಇವರ ನಡುವೆ ಸಂಪ್ರದಾಯವಾದುಗಳು ಮೂಗು-ತೂರಿಸಬಾರದು
೨. ಒತ್ತಾಯವಾಗಿ ಮದುವೆ ಮಾಡಿಸಬಾರದು .
http://ladaiprakashanabasu.blogspot.in/2014/07/blog-post_5227.html
“ನಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಬಯಸುತ್ತೇವೆ. ಆದರೆ ಉಳಿದು ಏನೇ ಆಗಲಿ, ಅವರು ಮೊದಲು ಮನುಷ್ಯರಾಗಬೇಕು. ಮನುಷ್ಯರಾಗಲು ಯಾರೂ ಹಾತೊರೆಯುತ್ತಿಲ್ಲ. ಏನೋ ಆಗಲು ಹೋಗಿ ಏನೇನೋ ಆಗುತ್ತಾರೆ. ಜಾತಿ-ಧರ್ಮದ ಗೆರೆ ದಾಟಿ, ಸೌಹಾರ್ದ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ.”
ಬುರುಡೆ!
ಮಾನವರಾಗೋದು ಅಂದರೇನು? ಹುಟ್ಟಿನಿಂದಲೇ ಮುನುಷ್ಯನಿಗೆ ದಯೆ, ಪ್ರೀತಿ ಮುಂದಾದ ಭಾವನೆಗಳು ಇರುತ್ತವೆ.
ಲೈಂಗಿಕ ಮನೋವಿಕಾರ ಎಲ್ಲ ದೇಶದಲ್ಲೂ ಇದೆ. ಇದಕ್ಕೆ ಮನೋವೈದ್ಯರ ಸಲಹೆ ಮದ್ದು ಹೊರತು, ಬಿಟ್ಟಿ ಉದೇಶಗಳಲ್ಲ
ಮಾನವನಾಗುವುದು ಎಂದರೆ ವಚನಕಾರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮತಾ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿರುವುದು. ದರ್ಗಾ ಸರ್ ಅವರ ಸಂದೇಶವೂ ಇದೇ ಆಗಿದೆ.
ವಚನಕ್ಕೂ ದರ್ಗಾಗಳಿಗೂ ಏನು ಸಂಬಂಧ? ಲಿಂಗಾಯತರು ಯಾವ ಮುಸ್ಲಿಂ ಆದರು?
ನನಗೆ ವಚನಗಳ ಬಗೆ ಹೆಚ್ಚು ಆಸಕ್ತಿಯಿಲ್ಲ.
“ವಚನಕಾರರ ತತ್ವಾದರ್ಶ” 😀
[[ಮಾನವನಾಗುವುದು ಎಂದರೆ ವಚನಕಾರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮತಾ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿರುವುದು. ದರ್ಗಾ ಸರ್ ಅವರ ಸಂದೇಶವೂ ಇದೇ ಆಗಿದೆ.]]
ಬಾಯಲ್ಲಿ “ವಚನಕಾರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ” ಎಂದು ಉಪದೇಶ. ಮನೆಯಲ್ಲಿ ಹಾಗು ಆಚರಣೆಯಲ್ಲಿ ತಮ್ಮ ಹುಟ್ಟಿನಿಂದ ಬಂದ ಬೇರೆಯ ಧರ್ಮದದ ಪಾಲನೆ!! ಇದು ಮಾನವೀಯತೆ!!
ವೈದಿಕರು ಅಮಾನವೀಯರು ಏಕೆಂದರೆ ಬಾಯಲ್ಲೂ ವೈದಿಕತೆ ಹಾಗು ಆಚರಣೆಯಲ್ಲೂ ವೈದಿಕತೆ.
ಆಹಾ!! ಅಬ್ಬ ಆಷಾಡಭೂತಿ !!
http://ladaiprakashanabasu.blogspot.in/2014/07/blog-post_5227.html
“ಎಲ್ಲದಕ್ಕೂ ಮೊದಲು ನಾವು ಮಾನವರಾಗಬೇಕಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಏನೇ ಆಗಿರಲಿ ಅದಕ್ಕೂ ಮೊದಲು ಮಾನವರಾದ ನಂತರ ನಮ್ಮ ಜೀವನದ ಸಾಮಾಜಿಕ ಕ್ಷೋಭೆ ಸಂಘರ್ಷಗಳು ಕಡಿಮೆಯಾಗುತ್ತವೆ. “
“ಧರ್ಮದ ಗೆರೆ ದಾಟಿ, ಸೌಹಾರ್ದ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ.”
ಧರ್ಮ ಮುನುಷ್ಯನ ಜೀವನಕ್ಕೆ ಒಂದು ಮರ್ಯಾದೆ/ಎಲ್ಲೇ ಕಟ್ಟಿಕೊಡುತ್ತದೆ. ಎಲ್ಲ ಗೆರೆ/ಮರ್ಯಾದೆ/ಎಲ್ಲೇ ಮೀರುವವರು ಸೌಹಾರ್ದವಾಗಿರುವುದಿಲ್ಲ, ಅದರ ಸೋಗು ಹಾಕುತ್ತರೆ.
ನಿಜವಾದ ಧರ್ಮವೆಂದರೆ ಮಾನವೀಯತೆ. ಮಾನವೀಯತೆಗೆ ಒಂದು ಸೀಮಿತ ಚೌಕಟ್ಟನ್ನು ವೈದಿಕ ಧರ್ಮ ಹೇರಿದೆ.
ಯಾಕೆ ಹೇರಿದೆ? ಅದಕ್ಕೆ ಕಾರಣಗಳಿವೆ. ನಿಮಗೆ ವೈದಿಕ-ಧರ್ಮದಲ್ಲಿ ಆಸ್ಥೆ ಇಲ್ಲದಿದ್ದರೆ ಪರವಾಗಿಲ್ಲ. ವೈದಿಕತೆಗೆ ಅಪಾತ್ರರು ಅನರ್ಹರ ಮತಾಂತರದ ಗುರಿಯಿಲ್ಲ. ಅದು ಕೇವಲ ಶ್ರೇಷ್ಠರ ಧರ್ಮ!
ಮಾನವೀಯತೆ ಅನ್ನೋದು ಧರ್ಮವೇ? ಹಾಗಾದರೆ ನಾಯಿ-ಇಯತೆ ನಾಯಿಗಳ ಧರ್ಮ, ಹಂದಿ-ಇಯತೆ ಹಂದಿಗಳ ಧರ್ಮ.
ಧರ್ಮ ಮಾನವೀಯತೆಯಲ್ಲಿರುವ ಲೋಪಗಳನ್ನು ನಿಯಂತ್ರಿಸಿ ಶ್ರೇಷ್ಠತೆಗೆ ದಾರಿ ತೋರುವುದು.
ಎಲ್ಲದಕ್ಕೂ (ರೇಪೂ ಸೇರಿ) ದರ್ಗಾರಾಧನೆಯಲ್ಲಿ, ವಚನಗಳಲ್ಲಿ ಉತ್ತರವಿದೆ ಎಂಬುದು ಭ್ರಮೆ. ಹಾಗಿದ್ದರೆ ಸಂವಿಧಾನ ಯಾಕೆ? ವಿಜ್ನಾನ ತಂತ್ರಜ್ನಾನ ಯಾಕೆ? ಶೆಟ್ಕರ್ ಅವರೇ ನಿಮ್ಮದೂ ಒಂದು ಬಗೆಯ ವಚನ ಅಥವಾ ದರ್ಗಾ ಮೂಲಭೂತವಾದ ಅನಿಸುವುದಿಲ್ಲವೇ?
ಭಟ್ಟರೇ, ಭಾರತದಲ್ಲಿ ಚಾಲನೆಯಲ್ಲಿರುವ ಸಂವಿಧಾನ ಮನು ಪ್ರಣೀತ ಸ್ಮೃತಿಗಳು ಅಂತ ಈಗಾಗಲೇ ದೇವನೂರ ಮಹಾದೇವ ಹೇಳಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳೂ ಮನುವಾದಿಗಳ ಯಜಮಾನಿಕೆಯಡಿಯಲ್ಲೇ ಇವೇ ಅಂತ ಡಿ ಆರ್ ನಾಗರಾಜ್ ಹೇಳಿದ್ದಾರೆ. ಎಲ್ಲಿಯವರೆಗೆ ಮನುವಾದವು ಈ ದೇಶದ ಮನಸ್ಸುಗಳನ್ನು ನಿಯಂತ್ರಿಸುತ್ತಿರುತ್ತದೆಯೋ ಅಲ್ಲಿಯವರೆಗೆ ಸ್ತ್ರೀಯರಿಗೆ ನೆಮ್ಮದಿಯಿಲ್ಲ. ವಚನಕಾರರ ತತ್ವಾದರ್ಶಗಳನ್ನು ಸಮಾಜ ಅಳವಡಿಸಿಕೊಂಡರೆ ಮಾತ್ರ ಉಳಿಗಾಲ. ನನ್ನ ನೇರ ನಿಷ್ಟುರ ಮಾತುಗಳು ತಮಗೆ ದರ್ಗಾರಾಧನೆ ಅಂತ ಅನ್ನಿಸಿದರೆ ತಪ್ಪು ದರ್ಗಾ ಸರ್ ಅವರದ್ದೂ ಅಲ್ಲ ನನ್ನದೂ ಅಲ್ಲ!!
[ಸಂವಿಧಾನ ಮನು ಪ್ರಣೀತ ಸ್ಮೃತಿಗಳು ಅಂತ ಈಗಾಗಲೇ ದೇವನೂರ ಮಹಾದೇವ ಹೇಳಿದ್ದಾರೆ]
ಅವರು ಹೆಲಿದ್ದಾರೆ. ಇವರು ಹೇಳಿದ್ದಾರೆ ..
ಎಡ ಪಂಥಿಯರು ಬರೆದಿರುವ ಭಾರತದ ಸಂವಿಧಾನ ಸನಾತನ ಧರ್ಮಕ್ಕೆ ಮಾರಕವಾಗಿದೆ. ಮನುವಾದಿಗಳು ಬರೆದಿದ್ದರೆ ಸಂವಿಧಾನವು ಇಷ್ಟು ಕೆಟ್ಟದಾಗಿ ಇರುತ್ತಿರಲಿಲ್ಲ.
ಶೆಟ್ಕರ್ ಮಹಾಶಯರೇ, ದರ್ಗಾ ಹೇಳಿದ್ದಾರೆ, ಮಹದೇವ ಹೇಳಿದ್ದಾರೆ…ಎಲ್ಲ ಆಯಿತು. ನೀವೇನು ಹೇಳ್ತೀರಿ ಅದನ್ನು ಹೇಳಿ. ನಿಮ್ಮ ದಿವ್ಯ ಚಿಂತನೆಯ ಪೂರ್ಣ ಬರಹವನ್ನು ಎಲ್ಲಿಯೂ ಓದಿದಂತಿಲ್ಲ. ಅವರಿವರು ಬರೆದ ಲೇಖನಕ್ಕೆ ಕಲ್ಲು ಎಸೆಯುವ ಜೊತೆಗೆ ಗಿಡ ನೆಡುವ ಕೆಲಸವೇನಾದರೂ ಜೀವನದಲ್ಲಿ ಮಾಡಿದ್ದೀರಾ? ದಯವಿಟ್ಟು ತಿಳಿಸಿ.
ಅಂದಹಾಗೆ ಮರೆತಿದ್ದೆ. ಚಂಪಾ ಅವರು ಸಂಕ್ರಮಣದ ಮೇ ಜೂನ್ ೨೦೧೪ ರ ಸಂಚಿಕೆಯಲ್ಲಿ ನಿಮ್ಮ ದರ್ಗಾ ಸರ್ ಅವರ ಭ್ರಮೆ ಬಗ್ಗೆ ಕೆಲ ಮಾತು ಬರೆದಿದ್ದಾರೆ. ನೀವಂತೂ ಓದಲೇಬೇಕು.
ದರ್ಗಾ ಸರ್ ಅವರದ್ದು ಭ್ರಮೆ ಅಲ್ಲ, ವಚನಕಾರ ತತ್ವಾದರ್ಶ ಹಾಗೂ ಮಾರ್ಕ್ಸ್ವಾದದಿಂದ ಪಕ್ವವಾದ ಚಿಂತನೆ. ಚಂಪಾ ಸರ್ ಹಿರಿಯರು, ಅವರು ಏನಾದರೂ ಹೇಳಿಕೊಳ್ಳಲಿ, ನಿಮಗೆ ತಾಕತ್ತಿದ್ದರೆ ದರ್ಗಾ ಸರ್ ಅವರ ಚಿಂತನೆಗೆ ನೇರವಾಗಿ ಮುಖಾಮುಖಿಯಾಗಿ.
ಯಾವ ದರ್ಗಾ ಇದು? ವಚನಕಾರರಿಗೂ ಸಾಬರಿಗೂ ಏನು ಸಂಬಂಧ?
http://avadhimag.com/2013/06/24/%E0%B2%B0%E0%B2%82%E0%B2%9C%E0%B2%BE%E0%B2%A8%E0%B3%8D-%E0%B2%A6%E0%B2%B0%E0%B3%8D%E0%B2%97%E0%B2%BE-%E0%B2%AC%E0%B2%B0%E0%B3%86%E0%B2%A6-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%AC/
ಮೊದಲು ಹೇಳಿ “ರಂಜಾನ್ ದರ್ಗಾ” ಹಿಂದೂಗಳ? ಮುಸ್ಲಿಂಗಳ?
ಮುಸ್ಲಿಂ ಆದರೆ ಅವರು ನಮ್ಮ ತಾತ್ವಿಕ-ವಾದಕ್ಕೆ ಮೂಗು ಹೇಗೆ ತೂರಿಸ್ತಾರೆ?
“ಮೊದಲು ಹೇಳಿ “ರಂಜಾನ್ ದರ್ಗಾ” ಹಿಂದೂಗಳ? ಮುಸ್ಲಿಂಗಳ?”
ಮಾಯ್ಸಣ್ಣ, ಮೊದಲು ಮಾನವರಾಗಿ ನೀವು. ಆಮೇಲೆ ಮಾತು.
ನಾನು ಮಾನವನೇ, ಬೇಕಾದರೆ ಜೀವಶಾಸ್ತ್ರಜ್ಞರನ್ನು ಕರೆಸಿ ಪರೀಕ್ಷಿಸಿರಿ.
ಮುಸ್ಲಿಂ ಒಬ್ಬನಿಗೆ ನಮ್ಮ ವೇದ ಇತ್ಯಾದಿಗಳ ಬಗ್ಗೆ ವದರಕ್ಕೆ ಏನು ಅಧಿಕಾರ?
ಅವರ ಧರ್ಮದಲ್ಲಿ ಸುಧಾರಣೆ ಮಾಡಲು ಎನೂ ಇಲ್ಲವೇ?
ನಾನೊಬ್ಬ ಸನಾತನೀ (ಕರ್ಮ-ಸಿದ್ಧಾಂತಿ) ನಾನು ನನ್ನ ಧರ್ಮವನ್ನು ಬಿಟ್ಟು ಪರಧರ್ಮವನ್ನು ಓದುವುದಿಲ್ಲ ಹಾಗು ಟೀಕಿಸುವುದಿಲ್ಲ; ನಮ್ಮ ಮಠದ ಗುರುಗಳು ಸಹ.
ಮಾತೆತ್ತಿದರೆ ವೈದಿಕ ಅದು ಇದು, ಕಿರಿಕಿರಿ ಎನಿಸುವ ಪ್ರಶ್ನೆಬಂದರೆ ಮನುಸ್ಮ್ರತಿ ಇತ್ಯಾದಿ ತರ್ಕ ಹೀನ ಬಡಬಡಿಕೆಗೆ ಉತ್ತರಿಸಲು ತಾಕತ್ತುಗಳು ಬೇಡ. ಇದೇನು ಡಬ್ಲು ಡಬ್ಲು ಎಫ್ ಅಂದುಕೊಂಡ್ರಾ? ಅನೇಕತೆಯನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಕೇವಲ ವಚನ, ದರ್ಗಾ ಚಿಂತನೆ ಅನ್ನುವ ಬಹುಳತೆ ಒಪ್ಪದ, ಏಕಪಕ್ಷೀಯ ಒಣ ಚಿಂತಕರಿಗೆ ಹೇಳುವುದೇನು?
ಮನುಸ್ಮೃತಿಯ ಪ್ರಸ್ತಾಪ ಮಾಡಿದಾಗೆಲ್ಲ ಈ (ನವ) ವೈದಿಕರು ತೊಣಚಿ ಕಡಿದವರ ಹಾಗೆ ಏಕೆ ವರ್ತಿಸುವುದು?
ದರ್ಗಾರಾಧನೆ ಬಗ್ಗೆ ಹೇಳಿದರೆ ನಿಮಗೆ ತೊಣಚಿ ಹೊಕ್ಕಂತೆ ಆಗಲ್ಲವೇ? ಹಂಗೆ!!!
ಮನುಸ್ಮೃತಿಯ ಬಗ್ಗೆ ನನಗೆ ಯಾವ ಅಭ್ಯಂತರವಿಲ್ಲ. ನನಗೆ ಅದನ್ನು ಉಲ್ಲೇಖಿಸಿದರೆ ಯಾವ ಇರುಸುಮುರುಸು ಇಲ್ಲ.
ಮನುಸ್ಮೃತಿಯು ಒಂದು ಕಾಲಘಟ್ಟದಲ್ಲಿ ಸಮಾಜದ ಸುವ್ಯವಸ್ಥೆಗೆ ಕಾರಣವಾಗಿತ್ತು! ಅದರ ಬಗ್ಗೆ ನನಗೆ ಯಾವ ಕೀಳರಿಮೆ ಇಲ್ಲ. ನಾನೊಬ್ಬ ಒಂದು ಬಗೆಯ ನವವೈದಿಕ!
ಅದಿರಲಿ
ನಿಮ್ಮ ದರ್ಗಾ ಹಿಂದುವೋ, ಲಿಂಗಯನರೋ, ಇಲ್ಲ ಸಾಬರೋ? ಯಾವ ಧರ್ಮದವರು? ನಿತ್ಯ ಲಿಂಗ ಪೂಜೆ ಮಾಡುವ ಬಸವಣ್ಣನ ತತ್ವದ ಅನುಯಾಯಿಯೇ? ಬಸವಣ್ಣನವರ ತತ್ವ ಹಾಗು ಇಸ್ಲಾಂ ಒಂದೆಯೇ?
ಭಟ್ಟರೇ, ದರ್ಗಾ ಸರ್ ಅವರ ಪ್ರಗತಿಪರ ಹೋರಾಟಕ್ಕೆ ನನ್ನ ವಸ್ತುನಿಷ್ಠ ತತ್ವಬದ್ಧ ಬೆಂಬಲವಿದೆ. ಇದು ತಪ್ಪೇ?
ಭಟ್ಟರೇ,
ವೈದಿಕರಿಗೆ ಪಾಖಂಡಿಗಳ ಬಗ್ಗೆ ನಿಗಾ ಇರಬೆಕು. ನೋಡಿ ಹೇಗೆ ನನ್ನ ಪ್ರಶ್ನೆಗೆ ಉತ್ತರ-ಕೊಡದೆ ಓಡಿ ಹೋಗುತ್ತಿದ್ದಾರೆ!
ಬಾಯಲ್ಲಿ ಬಸವಣ್ಣನ ವಚನ, ಆಚರಣೆಯಲ್ಲಿ ನಂಬಿಕೆಯಲ್ಲಿ ಲಿಂಗಪೂಜೆ ಇಲ್ಲ! ಅವರು ಲಿಂಗವನ್ನು ದೇವರು ಎಂದೇ ನಂಬುವುದಿಲ್ಲ !! ಸೋಮನಾಥದ ಲಿಂಗದ ಕತೆ!!
ದರ್ಗಾ ಸಾಹೇಬರ ಹಿರಿಯ ಮಿತ್ರರಾದ ಶೂದ್ರ ಶ್ರೀನಿವಾಸ್ ಕೂಡ ಒಮ್ಮೆ ಈ ಭ್ರಮಾಧೀನ ಸ್ಥಿತಿಯ ಬಗ್ಗೆ ಬರೆದಿದ್ದರು. ಆ ಲೇಖನ ನಮ್ಮ ಶೆಟ್ಕರ್ ಗುರುಗಳ ವಿಶ್ವಕೋಶವಾದ ಲಡಾಯಿ ಯಲ್ಲಿಯೇ ಇದೆ. 🙂
ದರ್ಗಾರಾಧಕ ಕಾಮೆಂಟುವೀರ ಶೆಟ್ಕರ್ ಸಾಹೇಬ್ರೆ, “ನಿಮ್ಮ ದಿವ್ಯ ಚಿಂತನೆಯ ಪೂರ್ಣ ಬರಹವನ್ನು ಎಲ್ಲಿಯೂ ಓದಿದಂತಿಲ್ಲ. ಅವರಿವರು ಬರೆದ ಲೇಖನಕ್ಕೆ ಕಲ್ಲು ಎಸೆಯುವ ಜೊತೆಗೆ ಗಿಡ ನೆಡುವ ಕೆಲಸವೇನಾದರೂ ಜೀವನದಲ್ಲಿ ಮಾಡಿದ್ದೀರಾ? ದಯವಿಟ್ಟು ತಿಳಿಸಿ” ಎಂದಿದ್ದೆ. ಮತ್ತೆ ಕಲ್ಲು ಎಸೆಯುತ್ತಲೇ ಕೂತಿದ್ದೀರಿ? ನಿಮ್ಮ ಪ್ರಗಲ್ಭ ಚಿಂತನೆಯನ್ನು ಇನ್ನಷ್ಟು ಓದುವ ಕುತೂಹಲ. ಅದಕ್ಕೆ ಕೇಳಿದ್ದೇನೆ. ಕಾಮೆಂಟು ಬಿಟ್ಟು ಸ್ವತಂತ್ರ ಲೇಖನ ತಮ್ಮಿಂದ ಹೊರಬಿದ್ದಿದ್ದರೆ…ಅದು.
ಓಹೋ! ನಿಮ್ಮ ಹಾಗೆ ಲೇಖನ ಬರೆಯುವವರು ಮಾತ್ರ ನಿಲುಮೆಯಲ್ಲಿ ಕಮೆಂಟು ಮಾಡಲು ಅರ್ಹರೋ? ಲೇಖನ ಬರೆಯದ ಓದುಗರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವೋ? ಇದೆಂತಹ ಎಲಿಟಿಸಂ ನಿಮ್ಮದು ಛೀ!
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮಕ್ಕೆ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
ಪೈಗಳೇ, ಲಡಾಯಿ ಬ್ಲಾಗನ್ನು ಲದ್ದಿ ಎಂದೇ ಕರೆಯುವ ನೀವು ಅದೇ ಲದಾಯಿಯಲ್ಲಿ ಬಂದ ಶೂದ್ರ ಸರ್ ಅವರ ಲೇಖನ ಮಾತ್ರ ಫ್ರೂಟ್ ಸಲಾಡ್ ಅನ್ನೋ ರೀತಿಯಲ್ಲಿ ಬಿಮ್ಬಿಸುತ್ತಿದ್ದೀರಲ್ಲ!!
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
@ಮಾಡರೇಟರ್: ಈ ಮಾಯ್ಸ ಒಬ್ಬ ಟ್ರಾಲ್. ಒಂದೇ ಕಮೆಂಟನ್ನು ಹಲವು ಕಡೆ ಚರ್ಚೆಯ ಹಳಿ ತಪ್ಪಿಸಲು ಮಾಡಿದ್ದಾರೆ. ಅವರನ್ನು ನಿಲುಮೆಯಿಂದ ಬ್ಯಾನ್ ಮಾಡಿ.
ಮಾಯ್ಸ ರವರ ಪ್ರಶ್ನೆ ಸರಿಯಾಗಿದೆ.ಬರೀ ಬುರುಡೆ ಬಿಟ್ಕಂಡು ಹಿಂದುಗಳನ್ನು ಹೀಯಾಳಿಸುವ ತಮ್ಮ ಮುಸ್ಲೀಂ ಮೂಲಭೂತವಾದಿತನವನ್ನು ಶರಣರ/ವಚನಗಳ ಮುಖವಾಡ ತೊಡಿಸಿ ದ್ವೇಷಕಾರುವ ಇಂತವರ ಮುಖವಾಡ ಕಳಚಬೇಕಿದೆ. ು ತಮ್ಮದು ಬರುಡೆ ಅಲ್ಲ, ಶರಣಧರ್ಮದ ಬಗ್ಗೆ ನಿಜವಾಗಲೂ ಪ್ರಾಮಾಣಿಕ ನಂಬಿಕೆ ಇದೆ ಎನ್ನುವುದನ್ನು ತೋರಿಸಲು ಲಿಂಗಾಯತ ಧರ್ಮಕ್ಕೆ ಮತಾಂತರವಾಗಲೇಬೇಕು, ದರ್ಗಾರಿಗೆ ಬೇರೆ ದಾರೀನೆ ಇಲ್ಲ. ಇಲ್ಲಾಂದ್ರೆ ತಮ್ಮಧಾರ್ಮಿಕ ಮೂಲಭೂತವಾದಿತನಕ್ಕೆ ವಚನಕಾರರ/ಶರಣಧರ್ಮ ಮುಖವಾಡ ತೊಡಿಸಿದ್ದಾರೆ ಎನ್ನುವುದು ಖಾತರಿಯಾಗುತ್ತದಷ್ಟೆೇ
ಮಾಯ್ಸ ಒಬ್ಬ ಟ್ರೊಲ್ ಯಾಕೆ ಅಂದರೆ ಅವನು ವೈದಿಕತೆ ಸಮರ್ಥಕ.
ಈ ವಯ್ಯ ಬಂದು ಎಲ್ಲಾ ಕಡೆ “ರಂಜಾನ್ ದರ್ಗಾ” ಒಬ್ಬ ಮಹಾ ಲಿಂಗಾಯತ ಧರ್ಮದ ಅನುಯಾಯಿ
ಎಂದು ಸುಳ್ಳು ಸುಳ್ಳೇ ದಿನಕ್ಕೆ ಸಾವಿರ ಸಲ ಕೊರೆದರು ಸರಿ.! ಭೇಷ್ ಬಸವ!
[ಪೈಗಳೇ, ಲಡಾಯಿ ಬ್ಲಾಗನ್ನು ಲದ್ದಿ ಎಂದೇ ಕರೆಯುವ ನೀವು ಅದೇ ಲದಾಯಿಯಲ್ಲಿ ಬಂದ ಶೂದ್ರ ಸರ್ ಅವರ ಲೇಖನ ಮಾತ್ರ ಫ್ರೂಟ್ ಸಲಾಡ್ ಅನ್ನೋ ರೀತಿಯಲ್ಲಿ ಬಿಮ್ಬಿಸುತ್ತಿದ್ದೀರಲ್ಲ!!]
ನಿಮ್ಮ ವಿಶ್ವಕೋಶದಲ್ಲಿ ಬಂದಿದ್ದನ್ನು ತಾನೇ ನೀವು ನಂಬುವುದು??. ಅದಕ್ಕೆ ಆ ಲೇಖನದ ಪ್ರಸ್ತಾಪ 🙂
ಛೆ ಛೆ ಶೆಟ್ಕರ್ ಮಹಾಶಯ, ನಾನು ಹೇಳಿದ್ದನ್ನು ಮತ್ತೊಮ್ಮೆ ಓದಿ ಉತ್ತರಿಸಿ. ನಿಲುಮೆಯಲ್ಲಿ ಲೇಖನ ಬರೆದರೆ ಮಾತ್ರ ಕಮೆಂಟು ಬರೀಬೇಕು ಅಂತ ಹೇಗೆ ಓದಿಕೊಂಡಿರಿ? ಅಲ್ಲಿ ಇಲ್ಲಿ ಕಮೆಂಟು ಮಾತ್ರ ಬರೆದಿದ್ದೀರೋ ಇನ್ನೇನಾದರೂ ಲೇಖನ ಬರೆದಿದ್ದೀರೋ ಅಂತ. ಭಾರೀ ಅಭಿಮಾನಿಯಾಗಿ ಕೇಳಿದ್ದೇನೆ!!
ಮತ್ತೆ ನಮ್ಮ ಶೆಟ್ಕರ್ ಗುರುಗಳಿಂದ ಲಡಾಯಿ ಲದ್ದಿ!. ಅದೂ ಉತ್ಪ್ರೇಕ್ಷಾಬ್ರಹ್ಮ ಸುನ್ನತಿಕುಮಾರ ಸಾಹೇಬರದ್ದು!!. ಕಂದಕ ತೋಡುವ ಎಡಬಿಡಂಗಿಗಳು ನೀಡುವ ಇಂತಹ ಉಪದೇಶಗಳನ್ನು ಕೇಳಲು ಮಜವಾಗಿರುತ್ತವೆ..:).
ಅಂದಹಾಗೆ ಈ ಲಿಂಕ್ ಇಲ್ಲಿ ಬಂದದ್ದು ಏಕೊ? ಜಾತಿಕಂದರ ಮೀರಿದರೆ ರೇಪ್ ನಿಲ್ಲಬಹುದು ಅಂತಾನಾ??
“ಜಾತಿಕಂದರ ಮೀರಿದರೆ ರೇಪ್ ನಿಲ್ಲಬಹುದು”
ಹೌದು. ಖಂಡಿತ ಜಾತಿ ಭೇದ ನಶಿಸಿದಾಗ ರೇಪು ಕೂಡ ಕಡಿಮೆಯಾಗುತ್ತದೆ. ಭಾರತದ ಹಳ್ಳಿಗಳಲ್ಲಿ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಲ್ಲಿ ಬಹುಪಾಲು ಶೋಷಿತ ಜಾತಿಗಳಿಗೆ ಸೇರಿದವರು. ಹಾಗೂ ಅತ್ಯಾಚಾರಿಗಳು ಶೋಷಕ ಜಾತಿಗಳಿಗೆ ಸೇರಿದವರು. ಈ ಸತ್ಯ ತಿಳಿಯದ ಅಮಾಯಕರೇ ನೀವು ಮಿ. ಪೈ?!!
ಯಾವಾಗ ನಿಮ್ಮ ಗುರುಗಳು ರಂಜಾನ್ ದರ್ಗಾಅವರೇ ಸಾರುತ್ತಿರುವ ಮಹಾನ್ ಮಾನವತಾವಾದದ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
ಯಾಕೆ ಲಿಂಗಾಯತ ಧರ್ಮ ಅವರ ಧರ್ಮದಷ್ಟು ಶ್ರೇಷ್ಠವಲ್ಲ ಸೇರಿಕೊಳ್ಳಲು ಎಂದು ಅವರ, ನಿಮ್ಮ ಅಭಿಪ್ರಾಯವೋ!
{ಅತ್ಯಾಚಾರಿಗಳು ಶೋಷಕ ಜಾತಿಗಳಿಗೆ ಸೇರಿದವರು}
ಅದ್ಭುತವಾದ ಸಂಶೋಧನೆ! !!
ಅಂದಹಾಗೆ ಈ “ಶೋಷಕ ಜಾತಿಗಳು” ಅಂದ್ರೆ ಬರೀ ಬ್ರಾಹ್ಮಣರು ಮಾತ್ರವೇನಾ??? ಇಲ್ಲಾ ಲಿಂಗಾಯತರು ಗೌಡ, ಕುರುಬ, ಬಂಟ, ಇತ್ಯಾಧಿ ಜಾತಿಗಳವರುೂ ಸೇರ್ಕಂಡವರಾ???? ಒಸಿ ಸ್ಪಷ್ಟಪಡಿಸಿ ಗುರುವೇ…
ಎಲ್ಲದಕ್ಕೂ ಜಾತಿಯೇ ಕಾರಣ. ಜಾತಿ ಅಂದ ತಕ್ಷಣ ಬ್ರಾಹ್ಮಣರ ವೈದಿಕರ ತಪ್ಪು.. ಅದೇ ರಾಗ ಅದೇ ತಾಳ!!
ನಿಮ್ಮ ಗುರುಗಳು ರಂಜಾನ್ ದರ್ಗಾಅವರೇ ಸಾರುತ್ತಿರುವ ಮಹಾನ್ ಮಾನವತಾವಾದದ ಲಿಂಗಾಯತ ಧರ್ಮವೇ ಮಹಾನ್. ಆದರೆ ಯಾಕೆ ಲಿಂಗಾಯತ ಧರ್ಮ ಅವರ ಧರ್ಮದಷ್ಟು ಸೇರಿಕೊಳ್ಳಲು ಶ್ರೇಷ್ಠವಲ್ಲ ಎಂದು ಅವರ, ನಿಮ್ಮ ಅಭಿಪ್ರಾಯವೋ!
ಇದೇ ಕೆಲಸ ಒಬ್ಬ ಬ್ರಾಹ್ಮಣ ಮಾಡಿದ್ದರೆ (ಬಾಯಲ್ಲಿ ವಚನಗಳನ್ನು ಹೋಗಲಿ, ಮನೆಯಲ್ಲಿ ವೈದಿಕತೆ ಪಾಲಿಸಿದ್ದರೆ), ಅದು ಮಾತ್ರ ಹಿಪೊಕ್ರಸಿ!
ಹ್ಮ..
೧) ಒಂದೇ ಜಾತಿಯ.ಧರ್ಮದ ಜನರಲ್ಲಿ ಅತ್ಯಾಚಾರ,ಅನಾಚಾರಗಳು ನಡೆಯುವುದಿಲ್ಲ.
೨) ಅತ್ಯಾಚಾರ ಮಾಡುವಾಗ ಜಾತಿ ಸರ್ಟಿಫಿಕೆಟ್ ಕೇಳಿಯೇ ಮಾಡುತ್ತಾರೆ. ನಾನು ಇಂತಿಂಥ ಜಾತಿ/ಧರ್ಮ ಎಂದು ಹೇಳಿದರೆ ‘ಸಾರಿ’ ಎಂದು ಹೇಳಿ ಕೈಬಿಡುತ್ತಾರೆ..ಇಲ್ಲವೇ ಎಕ್ಟ್ರಾ ಅತ್ಯಾಚಾರ ಮಾಡುತ್ತಾರೆ.
ಧನ್ಯವಾದಗಳು..ಜಾತಿಕಂದರ ಮೀರುವುದರಿಂದ ಅತ್ಯಾಚಾರ ತಡೆಯಬಹುದು ಎಂಬ ಶೋಧನೆಗೆ. ಇದು ಒಂದು ತರಹದಲ್ಲಿ ‘ಕೆಳಗೆ ಎಲ್ಲೊ ಹೊಡೆದರೆ, ಮೇಲೆ ಹಲ್ಲು ಉದುರಿತಂತೆ’ ಎಂಬಂತೆ ಕೇಳಲು ಮಜವಾಗಿದೆಯಾದರೂ..ನೀವು ಹೇಳಿದ್ದಿರೆಂದ ಮೇಲೆ ನಂಬೋಣವೆನಿಸುತ್ತಿದೆ :).
ಅತ್ಯಾಚಾರಿಗಳಿಗೆಲ್ಲಾ ವಚನದ ಪಾಠವನ್ನು ನೀಡಬೇಕಾಗುವ ಬೃಹತ್ ಪ್ರಾಜೆಕ್ಟ್ ಒ೦ದನ್ನು ಸರ್ಕಾರವು ಅನುಷ್ಟಾನಕ್ಕೆ ತ೦ದು ಅದಕ್ಕೆ ದರ್ಗಾ ಮಹಾಶಯರನ್ನು ಅಧ್ಯಕ್ಷರನ್ನಾಗಿ ಮಾಡಿದರೆ.. ರೇಪ್ಗಳು ಕಡಿಮೆಯಾಗುವುದಲ್ಲದೆ, ಮು೦ದಿನ ದಿನಗಳಲ್ಲಿ ವಚನಗಳ ಸೊಗಸಿಕೆಗೆ ಮಾರುಹೋಗಿ.. ಪ್ರತಿ ಮನೆಯಲ್ಲಿಯೂ ವಚನಗಳು ಕುಣಿಯತೊಡಗಿ.. ಜನಸ೦ಖ್ಯಾ ಸ್ಫೋಟಕ್ಕೂ ಕಡಿವಾಣ ಹಾಕಬಹುದಲ್ಲವೇ? ಹೆ..ಹೆ.. ಅಗಿ ಹೋಗುವ ಕಥೆಯಲ್ಲ ಇದು…
ನಾವಡರೆ, ಹೌದು ವಚನಗಳ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಖಂಡಿತ ಸ್ತ್ರೀ ಶೋಷಣೆ ನಿಲ್ಲುತ್ತದೆ. ಆದುದರಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಬೋಧನೆಯನ್ನು ಮಾಡತಕ್ಕದ್ದು ಅಂತ ಈ ಹಿಂದೆಯೇ ನಾನು ಅಭಿಪ್ರಾಯ ಪಟ್ಟಿದ್ದೇನೆ. ವಚನ ಬೋಧನೆಯ ಅನುಷ್ಠಾನದ ಉಸ್ತುವಾರಿಯನ್ನು ದರ್ಗಾ ಸರ್ ಅವರ ನೇತೃತ್ವದ ಕಮಿಟಿಯೊಂದು ಮಾಡತಕ್ಕದ್ದು ಅಂತ ಕೂಡ ಹೇಳಿದ್ದೇನೆ. ನಿಮ್ಮೆಲ್ಲರ ಬೆಂಬಲ ಹಾಗೂ ಸಹಕಾರವಿದ್ದರೆ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲೇ ಇದು ಸಾಧ್ಯವಾಗಬಹುದು.
ನಿದ್ರಾಮಯ್ಯ ಸರ್ಕಾರದಲ್ಲೇ?! ಆದಂಗಾತು ಬಿಡಿ.
ಅಯ್ಯೋ ಸ್ವಾಮಿ ..
ವಚನದಲ್ಲಿ ಲಿಂಗಾಯತ ಧರ್ಮದಲ್ಲಿ ಅಷ್ಟೊಂದು ಮಹತ್ವ ಹಾಗು ಮೆಚ್ಚುಗೆ ಇದೆ ಎಂದು ಹೇಳುವ ನಿಮ್ಮ ದರ್ಗಾ ಯಾಕೆ ಇನ್ನೂ ಲಿಂಗಾಯತಕ್ಕೆ ಮತಾಂತರವಾಗಿಲ್ಲ?
ಯಾವ ವೈದಿಕರು ಬಂದು ವಚನಗಳ ಟೀಕೆ ಮಾಡುತ್ತಿದ್ದಾರೆ ಈ ಕಾಲಮಾನದಲ್ಲಿ? ವೈದಿಕರಿಗೆ ವಚನದ ತತ್ವ ಇಲ್ಲವೇ ಟೀಕೆ ಎರಡರಲ್ಲೂ ಆಸಕ್ತಿಯಿಲ್ಲವಲ್ಲ!
ನಾನಂತೂ ಹಾಗು ನನಗೆ ಗೊತ್ತಿರುವ ವೈದಿಕರಂತೂ ವಚನವನ್ನು ಓದುವುದೂ ಇಲ್ಲ ಹಾಗು ಟೀಕಿಸುವುದೂ ಇಲ್ಲ. ನಮಗೆ ನಮ್ಮ ವೈದಿಕ ಗ್ರಂಥಗಳನ್ನೇ ಓದಲು ಪುರುಸೊತ್ತಿಲ್ಲ!!
ಇನ್ನೂ ಒಂದು ಪಕ್ಷ ನನಗೆ ಲಿಂಗಾಯತದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದಾರೆ “ಆಚರಣೆಯಲ್ಲಿ ಲಿಂಗಯತರಾದ” ಮೈಸೂರಲ್ಲಿ ಇರುವ JSS ಮಠಕ್ಕೋ ಇಲ್ಲವೇ ತುಮಕೂರಿನ ಸಿದ್ಧಗಂಗಾ ಮಠಕ್ಕೋ ಹೋಗಿ ಕೇಳುತ್ತೇನೆ.. ಈ ದರ್ಗಾ, ಅಬ್ದುಲ್, ಇಮ್ರಾನ್ ಇಲ್ಲವೇ ಮುಸ್ತಫಾ ಬಳಿ ಯಾಕೆ? ಅವರ ಬಳಿ ಖುರಾನ್ ಕಲಿಯಲು ಹೋಗಬೇಕು ತಾನೇ?
ಇಲ್ಲಿ ಸುಮ್ಮನೆ ಬಂದು ಹುಚ್ಚಂಬಟ್ಟೆ ಟಿಪ್ಪಣಿಗಳನ್ನು ಬರೆದು ರಂಜಾನ್ ದರ್ಗಾರನ್ನು ಯಾಕೆ ನಿಷ್ಟುರ ಪ್ರಶ್ನೆಗೆ ಗುರಿ-ಮಾಡುತ್ತಿದ್ದೀರಿ?
ಸಧ್ಯದ ಪರಿಸ್ಥಿತಿಯಲ್ಲಿ ಶಾಲೆಯಲ್ಲಿ ಕಡ್ಡಾಯ ವಚನಭೋದನೆಗೆ ಹೊರಟರೆ ಅದು ಕೇಸರಿಕರಣವಾಗದೆ? ಮುಸ್ಲಿಂ/ಕ್ರಿಶ್ಚಿಯನ್ ವಿದ್ಯಾರ್ಥಿಗಳ ಮೇಲೆ ವಚನ ಹೇರುವುದು ಹೇಗೆ? ಆದರೆ ದರ್ಗಾಸಾಹೇಬರನ್ನು ಅದರ ಅಧ್ಯಕ್ಸರನ್ನಾಗಿ ಮಾಡಿದರೆ ಪರಿಸ್ಥಿತಿ ಸ್ವಲ್ಪ ತಿಳಿಯಾಗಬಹುದು. ಆಗ ಕೆಂಬಣ್ಣ ಗುಲಾಬಿ ಬಣ್ಣಕ್ಕೆ ತಿರುಗಬಹುದು. ಈಗಾಗಲೇ ತುಕ್ಕು ಹಿಡಿದಿರುವ ಕುಡುಗೋಲು ಮತ್ತಷ್ಟು ಮೊಂಡಾಗಬಹುದು. ಅಂತೆಯೆ ವಚನಗಳೊಂದಿಗೆ, ಅವಕ್ಕೆ ದರ್ಗಾ ಸಾಹೇಬರ ವಾಖ್ಯಾನವನ್ನು ಬೊನಸ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಉಣ ಬಡಿಸಿದರೆ…ನಮ್ಮಲ್ಲಿರುವ ಸಮಾಜೋನ್ಮುಖಿ ಪ್ರಗತಿಪರ ಆತ್ಮಗಳು ಈ ‘ಕೆಸರಿಕರಣ’ ವನ್ನು ತುಂಬು ಹೃದಯದಿಂದ ಸ್ವಾಗತಿಸಬಹುದು.
ಆದರೂ ನನ್ನ ಪ್ರಕಾರ, ಇದನ್ನು ಸುಲಭವಾಗಿ ಕಾರ್ಯರೂಪಕ್ಕೆ ತರಲು..
೧) ಶ್ರೀಯುತ ದರ್ಗಾ ಸಾಹೇಬರು ಒಬ್ಬ ಕ್ರಿಶ್ಚಿಯನ್ ಶಿಷ್ಯನನ್ನು ಸ್ವೀಕಾರ ಮಾಡಬೇಕು.
೨) ಬಸವಣ್ಣನವರು ಮತ್ತು ಅವರ ವಚನಗಳು ಯಾವತ್ತೂ ಹಿಂದು ಧರ್ಮಕ್ಕೆ ಸೇರಿದವು ಅಲ್ಲ. ಅವರು ಸ್ತಾಪಿಸಿದ ಧರ್ಮ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಆದರ್ಶದ ಮೇಲೆ ನೆಲೆಗೊಂಡಿದೆ, ಬಸವಣ್ಣನವರು ಪ್ರವಾದಿ ಪೈಗಂಬರ್ ಮತ್ತು ಯೇಸುಕ್ರಿಸ್ತನಿಂದ ಪ್ರಭಾವಿತರಾಗಿದ್ದರು ಎಂದು ‘ಹೇಗಾದರೂ’ ಮಾಡಿ ಪ್ರೂವ್ ಮಾಡಬೇಕು.
ಇಷ್ಟಾದರೆ ಉಳಿದ ಅನುಷ್ಠಾನ ಕಾರ್ಯ ಬಹು ಸುಲಭ.
[ಶ್ರೀಯುತ ದರ್ಗಾ ಸಾಹೇಬರು ಒಬ್ಬ ಕ್ರಿಶ್ಚಿಯನ್ ಶಿಷ್ಯನನ್ನು ಸ್ವೀಕಾರ ಮಾಡಬೇಕು.]
ಹೇ ಹೇ .. ಯಾಕೆ ಈ Nagshetty Shetkar ನಾಲಾಯಕ್ಕೋ?
[ಬಸವಣ್ಣನವರು ಪ್ರವಾದಿ ಪೈಗಂಬರ್ ಮತ್ತು ಯೇಸುಕ್ರಿಸ್ತನಿಂದ ಪ್ರಭಾವಿತರಾಗಿದ್ದರು ಎಂದು ‘ಹೇಗಾದರೂ’ ಮಾಡಿ ಪ್ರೂವ್ ಮಾಡಬೇಕು.]
ಅದನ್ನೇ ಮಾಡುತ್ತಿರುವುದು!!
[ಹೇ ಹೇ .. ಯಾಕೆ ಈ Nagshetty Shetkar ನಾಲಾಯಕ್ಕೋ? ]
ನಮ್ಮ ಶೆಟ್ಕರ್ ಗುರುಗಳು ದರ್ಗಾ ಸಾಹೇಬರ ಆತ್ಮ ಬಂಧು.. ಅವರ ಮುಖವಾಣಿ ಮತ್ತು ಅಧಿಕೃತ ವಕ್ತಾರರು. ಅವರ ಪರವಾಗಿ ಹೇಳಿಕೆಗಳನ್ನು ಉದುರಿಸುವವರು ಅಥವಾ ಉದ್ಧರಿಸುವವರು. ನಿಮಗೆ ಕೆಲವೊಂದು ಸಲ ಇವರು ಅವರೊ ಅಥವಾ ಅವರು ಇವರೊ ಅನ್ನುವ ಗೊಂದಲ ಉಂಟಾಗುತ್ತದೆ…ಶೆಟ್ಕರ್ ಗುರುಗಳು ಮತ್ತು ಅವರ ಗುರುಗಳು ಹೆಸರೆರಡು ದೇಹವೊಂದು ಇದ್ದ ಹಾಗೆ!..ಆದ್ದರಿಂದ Nagshetty Shetkar ಅವರನ್ನು ಶಿಷ್ಯರೆಂದು ಪರಿಗಣಿಸಲೇಬಾರದು!
ಇನ್ನೊಂದೇನೆಂದರೆ ಕ್ರಿಶ್ಚಿಯನ್ ಶಿಷ್ಯರನ್ನು ಸ್ವೀಕಾರ ಮಾಡಿದರೆ, ಅವರು ತಮ್ಮ ಧರ್ಮದವರನ್ನು ಮತ್ತು ದರ್ಗಾ ಸಾಹೇಬರು ಅವರ ಧರ್ಮದವರನ್ನು ವಚನ ಭೋದನಾ ಪ್ರಾಜೆಕ್ಟಿನಲ್ಲಿ ಸುಲಭವಾಗಿ ಸಕ್ರಿಯಗೊಳ್ಳುವಂತೆ ಮಾಡಬಹುದು.
[[ಬಸವಣ್ಣನವರು ಪ್ರವಾದಿ ಪೈಗಂಬರ್ ಮತ್ತು ಯೇಸುಕ್ರಿಸ್ತನಿಂದ ಪ್ರಭಾವಿತರಾಗಿದ್ದರು ಎಂದು ‘ಹೇಗಾದರೂ’ ಮಾಡಿ ಪ್ರೂವ್ ಮಾಡಬೇಕು.]
ಅದನ್ನೇ ಮಾಡುತ್ತಿರುವುದು!!]
ಆದರೆ ನನಗೆ ಒಂದು ಅನುಮಾನವಿದೆ ಇಲ್ಲಿ. ೧೨ ನೆಯ ಶತಮಾನದ ಹೊತ್ತಿಗಾಗಲೇ ಮಧ್ಯಪ್ರಾಚ್ಯದ ಸಮಾನತೆಯ ಪ್ರಚಾರಕರು ಸಾಕಷ್ಟು ಸಲ ಬಂದು, ಇಲ್ಲಿಯ ಪುರೋಹಿತಶಾಹಿ ಬ್ರಾಹ್ಮಣರನ್ನು ಬೆಂಡೆತ್ತಿ, ಇವರನ್ನು ಅಷ್ಟು ಸುಲಭದಲ್ಲಿ ತಿದ್ದಲಾಗದು, ತಾವೇ ಇಲ್ಲಿ ಕೆಲವು ಶತಮಾನಗಳ ಕಾಲ ನೆಲೆ ಊರಿ ಇವರನ್ನು ತಿದ್ದಬೇಕು, ಎಕ್ಕುಟ್ಟಿ ಹೋಗಿರುವ ಇಲ್ಲಿಯ ಸಮಾಜದಲ್ಲಿ ಸಮಾನತೆ ತರಬೇಕು ಎಂಬ ನಿಸ್ವಾರ್ಥತೆಯಿಂದ ತಮ್ಮ ಮಾತೃದೇಶ ಬಿಟ್ಟು ಬಂದು ಇಲ್ಲಿ ಆಳ್ವಿಕೆ ಸುರು ಮಾಡಿದರು. ಈ ಉದಾತ್ತತೆಯನ್ನು ನೋಡಿದ/ಕೇಳಿದ ಬಸವಣ್ಣನವರಿಗೆ ಇಸ್ಲಾಂ ಧರ್ಮದ ಪ್ರಭಾವ ಆಗಿತ್ತು ಎಂದು ಪ್ರೂವ್ ಮಾಡಬಹುದು. ಆದರೆ..ಕ್ರಿಶ್ಚಿಯನ್ ಧರ್ಮದ ಪ್ರಭಾವವನ್ನು ಹೇಗೆ ಪ್ರೂವ್ ಮಾಡುವುದು??
[ನಿಸ್ವಾರ್ಥತೆಯಿಂದ ತಮ್ಮ ಮಾತೃದೇಶ ಬಿಟ್ಟು ಬಂದು ಇಲ್ಲಿ ಆಳ್ವಿಕೆ ಸುರು ಮಾಡಿದರು]
ಅವರು ಹೇಳೋದು ವೈದಿಕರು ದೇಶವನ್ನು ಹಾಳುಮಾಡಿದ್ದನ್ನು ಸರಿಮಾಡಲು ಮೊಗಲರು ಹಾಗು ಬ್ರಿಟಿಷರು ಬಂದುದು ಎಂದೋ !!
[ಅವರು ಹೇಳೋದು ವೈದಿಕರು ದೇಶವನ್ನು ಹಾಳುಮಾಡಿದ್ದನ್ನು ಸರಿಮಾಡಲು ಮೊಗಲರು ಹಾಗು ಬ್ರಿಟಿಷರು ಬಂದುದು ಎಂದೋ !!]
ಹೌದು..ಪುರೋಹಿತಶಾಹಿ ಪ್ರೇರಿತ ಅಸಮಾನತೆಯಿಂದ ಗಬ್ಬೆದ್ದುಹೋಗಿದ್ದ ನಮ್ಮ ದೇಶದಲ್ಲಿ ಸಾಮಾಜಿಕ ಸಮಾನತೆ ಕಂಡುಬಂದಿದ್ದೆ ಮುಸ್ಲಿಂರ ಆಳ್ವಿಕೆ ಪ್ರಾರಂಭವಾದ ಮೇಲೆ ಅಂತ ವಾರ್ತಾಭಾರತಿಯ ಸಂಪಾದಕ/ಸಂತಾಪಕ ರೊಬ್ಬರು ಬರೆದಿದ್ದರು. ಭೌದ್ಧರ ನರಮೇಧವಾಗಿದ್ದೇ ಬ್ರಾಹ್ಮಣರಿಂದಂತೆ. ಮತ್ತೊಬ್ಬರು ಅಕ್ಬರ್ ಗಿಂತ ಔರಂಗ್ ಜೇಬ್ ಎಷ್ಟೊ ಪಟ್ಟು ಒಳ್ಳೆಯವನಂತೆ. ಅಕ್ಬರ್ ನಿಗೆ ಹಿಂದೂ ರಾಣಿಯಿದ್ದಿದ್ದರಿಂದ, ಹಿಂದುಗಳೆಡೆಗೆ ಪ್ರೇಮವಿದ್ದದ್ದರಿಂದ ಆತನನ್ನು ಸುಖಾ-ಸುಮ್ಮನೆ ಹೊಗಳಲಾಗುತ್ತಿದೆ ಎಂದು ಬರೆದಿದ್ದರು. ನಮ್ಮ ದರ್ಗಾ ಸಾಹೇಬರು ಮುಸ್ಲಿಂ ಧಾಳಿಕೋರ ಮೊಹಮ್ಮದ್ ಬಿನ್ ಕಾಸಿಂ ನ ಮೊತ್ತಮೊದಲ ಧಾಳಿಗೆ, ಕೊಳ್ಳೆಹೊಡೆಯಲು ಸಹಾಯ ಮಾಡಿದ್ದೇ ಒಬ್ಬ ಬ್ರಾಹ್ಮಣ ಎಂಬ ಸಂಶೋಧನೆ ಮಂಡಿಸಿದ್ದರು. ಹಾಗೆಯೇ our own ಶೆಟ್ಕರ್ ಗುರುಗಳ ಪ್ರಕಾರ ” Baber is one of the finest human beings” . ಬರುವ ದಿನಗಳಲ್ಲಿ ತೈಮೂರ,ಚೆಂಗಿಸ್ ಖಾನ್, ಖಿಲ್ಜಿ, ಘೋರಿ, ಘಜ್ನಿ ಗಳ ಬಗ್ಗೆ ಇವರ ಸದಭಿಪ್ರಾಯಗಳು ಮೂಡಿಬರಬಹುದೇನೊ ಎಂದ ಕಾಯೋಣ.
“ಮ್ಮ ದರ್ಗಾ ಸಾಹೇಬರು ಮುಸ್ಲಿಂ ಧಾಳಿಕೋರ ಮೊಹಮ್ಮದ್ ಬಿನ್ ಕಾಸಿಂ ನ ಮೊತ್ತಮೊದಲ ಧಾಳಿಗೆ, ಕೊಳ್ಳೆಹೊಡೆಯಲು ಸಹಾಯ ಮಾಡಿದ್ದೇ ಒಬ್ಬ ಬ್ರಾಹ್ಮಣ ಎಂಬ ಸಂಶೋಧನೆ ಮಂಡಿಸಿದ್ದರು. ಹಾಗೆಯೇ our own ಶೆಟ್ಕರ್ ಗುರುಗಳ ಪ್ರಕಾರ ” Baber is one of the finest human beings” .”
ಇತಿಹಾಸ ಓದಿ ಮಿ. ಪೈ. ನೀವು ಭ್ರಮಿಸಿರುವಷ್ಟು ಪಾಪದವರಲ್ಲ ವೈದಿಕರು. ಬ್ರಾಹ್ಮಣರ ಆಸೆಬುರುಕತನ ಜಗತ್ ಕುಖ್ಯಾತ!
ಸಂವೇದನಾ ಶೀಲ ಆಡಳಿತಗಾರ ಬಾಬರ್ ಬಗ್ಗೆ ಪ್ರಾಪಗಾಂಡ ಮಾಡುವುದನ್ನು ನಿಲ್ಲಿಸಿ.
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
[ಇತಿಹಾಸ ಓದಿ ಮಿ. ಪೈ. ನೀವು ಭ್ರಮಿಸಿರುವಷ್ಟು ಪಾಪದವರಲ್ಲ ವೈದಿಕರು. ಬ್ರಾಹ್ಮಣರ ಆಸೆಬುರುಕತನ ಜಗತ್ ಕುಖ್ಯಾತ! ]
ಒಹ್ ಹೌದೆ?? ವೈದಿಕರು, ಬ್ರಾಹ್ಮಣರು ಆಸೆಬುರುಕರು ಎಂದು ಹೇಳಿದರೆ, ಅದು ಉಳಿದವರು ಸೆಗಣಿ ತಿಂದಿದ್ದಕ್ಕೆ ಸಮರ್ಥನೆಯಾಗುತ್ತದೆಯೆ?? ಉಳಿದವರನ್ನು ಮಾನವೀಯರನ್ನಾಗಿ ಮಾಡುತ್ತದೆಯೆ?
[ಸಂವೇದನಾ ಶೀಲ ಆಡಳಿತಗಾರ ಬಾಬರ್ ಬಗ್ಗೆ ಪ್ರಾಪಗಾಂಡ ಮಾಡುವುದನ್ನು ನಿಲ್ಲಿಸಿ.]
ನಿಮ್ಮ ಮೊಹಮ್ಮದ್ ಬಿನ್ ಕಾಸಿಂ ಪುರಾಣದ ಸುಳ್ಳನ್ನು ಅವಧಿಯಲ್ಲಿ ಸಾಕ್ಷಿ ಸಮೇತ ಬಿಚ್ಚಿದಾಗ, ಇದನ್ನು ಬರೆದಿದ್ದು ನಾನಲ್ಲ ಹರ್ಡೆಕರ್ ಮಂಜಪ್ಪನವರು ಅಂತ ಒಬ್ಬರು ನಾಪತ್ತೆಯಾಗಿದ್ದರು!. ನಿಮ್ಮ ಸಂವೇದನಾ ಶೀಲ ಆಡಳಿತಗಾರ ಶ್ರೀಯುತ ಬಾಬರ ರ ಸಂವೇದನಾಶೀಲತೆಯನ್ನು ಇಲ್ಲಿಯೇ ನಿಲುಮೆಯಲ್ಲಿ ಗುರು ನಾನಕರ ಗೃಂಥದಿಂದಲೇ ಸ್ಪಷ್ಟಗೊಳಿಸಲಾಗಿತ್ತು. ಬಹುಶ: ನಿಮಗೆ ಜಾಣಮರೆವು ಕಾಡುತ್ತಿರಬಹುದು. ಅಂದ ಹಾಗೆ ಶ್ರೀಯುತರಾದ ತೈಮೂರ,ಚೆಂಗಿಸ್ ಖಾನ್, ಖಿಲ್ಜಿ, ಘೋರಿ, ಘಜ್ನಿ ಯವರು ಕೂಡ ಸಂವೇದನಾಶೀಲತೆಯನ್ನು ಹೊಂದಿದ್ದರೆ ಎಂದು ತಮ್ಮ ಬಾಯಿಯಿಂದ ತಿಳಿಯುವ ಬಯಕೆ.
ಬಾಬರ್ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ವೈದಿಕರು ಈ ನಾಡಿನ ತಳವರ್ಗದವರಿಗೆ ಮಾಡಿದ ಅನ್ಯಾಯಗಳ ಬಗ್ಗೆ ಮಾತನಾಡಿ ಮಿ. ವಿಜಯ್.
@ಶೆಟ್ಕರ್ ಸಾಹೇಬರು..
ಒಹ್ ಹಾಗಾ? ಬಾರಿಸಿದ ಶ್ರೀಯುತ ಬಾಬರ್ ಮತ್ತು ಕಂಪನಿಯ ಮಾತು ಬೇಡ… ಕೈ ಆಡಿಸಿದ ವೈದಿಕರ/ಬ್ರಾಹ್ಮಣರ ವಿಷಯವನ್ನೇ ಚರ್ಚಿಸೋಣ ಅಂತೀರ? ಆಯಿತು..ಈಚಿನ ೨೦೦೦ ವರುಷಗಳಲ್ಲಿ, ನೂರು ವರುಷಕ್ಕೆ ಒಂದು ಘಟನೆಯಂತೆ ವೈದಿಕರು/ಬ್ರಾಹ್ಮಣರು ಮಾಡಿದ ಅತ್ಯಾಚಾರ/ಅನಾಚಾರ/ಕೊಲೆ/ಕಗ್ಗೊಲೆ/ಸಾಮೂಹಿಕ ರಕ್ತಪಾತ ಗಳ ೨೦ ಘಟನೆಗಳ ಪಟ್ಟಿ ಕೊಡಿ (ಅದಕ್ಕಿಂತ ಹೆಚ್ಚಿದ್ದರೂ ಅಡ್ಡಿಯಿಲ್ಲ). ನಾನು ನೀವು ಕೊಟ್ಟಿದ್ದರ ಎರಡು ಪಟ್ಟು ಘಟನೆಗಳನ್ನು ನಿಮ್ಮ ಸಂವೇದನಾಶೀಲ ಶ್ರೀಯುತ ಬಾಬರ ಮತ್ತು ಕಂಪನಿಯ ಬಗ್ಗೆ ಇತಿಹಾಸದ ಸಾಕ್ಷಿಸಮೇತ ಕೊಡುತ್ತೇನೆ ಮತ್ತು ನೀವು ಕೊಟ್ಟ ಪಟ್ಟಿಯ ಎರಡರಷ್ಟು ಸಮಾಜಕ್ಕೆ ತೀರ ಉಪಯುಕ್ತರಾಗಿ ಬಾಳಿದ ವೈದಿಕ/ಬ್ರಾಹ್ಮಣರ ಪಟ್ಟಿ ಕೊಡುತ್ತೇನೆ. ಒಪ್ಪಿಗೆಯೆ?
ಇನ್ನೊಂದು ವಿಷಯ,
೧) ಕುತ್ತಿಗೆಗೆ ಬಂದಾಗ ನಾನು ಹೇಳಿದ್ದು ಬ್ರಾಹ್ಮಣ್ಯ..ಬ್ರಾಹ್ಮಣರ ವಿರುದ್ಧವಲ್ಲ ನಾನು ಎಂದು ಎಂದಿನಂತೆ ಉಲ್ಟಾ ಹೊಡೆಯಬೇಡಿ. ನೀವು ಯಾವುದರ ಪರ/ವಿರುದ್ಧ ಎಂಬುದು ಸ್ಫಷ್ಟವಾಗಿದೆ.
೨) ನಿಮ್ಮ ಅದೇ ಹಳೆಯ ಡಬ್ಬವಾದ ಕಾದಸೀಸ, ಪುರುಷಸೂಕ್ತ ಬಡೆಯಬೇಡಿ!
ಮತ್ತೊಂದು ಮಾತು ಮರೆತೆ..ನಾನು ಕೊಡುವ ಉಪಯುಕ್ತರ ಪಟ್ಟಿಯಲ್ಲಿ ಕಮ್ಯುನಿಷ್ಟ್ ಬ್ರಾಹ್ಮಣರು ಇರುವುದಿಲ್ಲ.. ಎಡಬಿಡಂಗಿ ಸಮಾಜೋದ್ಧಾರಕರು ನಿಮ್ಮ ಗೆಳಯರಾಗಿಯೇ ಇರಲಿ! 🙂
ನಾಳೆ ಒಬ್ಬ ‘ದಲಿತ’ ಹಿಟ್ಲರ್ ಬಂದು ವೈದಿಕರ/ಮೇಲ್ಜಾತಿಗಳ ನಾಮೋ-ನಿಶಾನ್ ಅಳಿಸಿಹಾಕುವ ಕನಸುಕಾಣುತ್ತಿದ್ದರೆ ಒಳಒಳಗೆ. ಹೊರಗಡೆ ಮಾನವೀಯತೆ, ವಚನಗಳ ಮುಖವಾಡ!!
ಎಷ್ಟು ಕ್ರೋಧ ಹಾಗು ಹಗೆ ಇದೆ ಒಳಗೆ.. ಹೊರಗೆ ತಾವು ಮಹಾಮಾನವತಾವಾದಿಗಳು!
ಮೋದಿ ಗೆದ್ದಿದ್ದು ಒಳ್ಳೇದೆ ಆಯಿತು..?!
“ನಮ್ಮ ಶೆಟ್ಕರ್ ಗುರುಗಳು ದರ್ಗಾ ಸಾಹೇಬರ ಆತ್ಮ ಬಂಧು.”
ದರ್ಗಾ ಸರ್ ಅವರು ನಮ್ಮಲ್ಲಿ ಅನೇಕರಿಗಿಂತ ಹೆಚ್ಚು ಪ್ರತಿಭಾಶಾಲಿಯೂ, ವಿದ್ವತ್ತ್ ಉಳ್ಳವರೂ, ವರ್ಚಸ್ವಿಯೂ, ಸಾಧಕನೂ, ಚಿಂತನ ಶಕ್ತಿ ಉಳ್ಳವರೂ ಆಗಿದ್ದಾರೆ. ಆದರೂ ಅವರು ಬಹಳ ವಿನಯವಂತರು, ಕರುಣಾಳು, ಸ್ವಾರ್ತ ವಿಹೀನರು ಹಾಗೂ ಅಹಂಕಾರ ರಹಿತರು. ಬಸವಧರ್ಮದ ನಿಜ ಅನುಯಾಯಿಗಳೆಲ್ಲ ದರ್ಗಾ ಸರ್ ಅವರ ಆತ್ಮ ಬಂಧುಗಳೇ ಆಗಿದ್ದಾರೆ.
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
ಅಬ್ಬಬ್ಬ ಮುಖವಾಣಿಯೆಂದರೆ ಹೀಗಿರಬೇಕು!
[ಶೆಟ್ಕರ್ ಗುರುಗಳು ಮತ್ತು ಅವರ ಗುರುಗಳು ಹೆಸರೆರಡು ದೇಹವೊಂದು ಇದ್ದ ಹಾಗೆ!]
ತಮ್ಮ ಡಬ್ಬವ ತಾವೇ ಬಡಿಯುತಿಹರು
ತಮ್ಮ ತೇರನು ತಾವೇ ಎಳೆಯುತಿಹರು
ಸಾಲದಕ್ಕೆ ಬಿಟ್ಟಿ ಭಟ್ಟಂಗಿಗಳನ್ನಿಟ್ಟುಕೊಂಡಿಹರು
ಕೆಲವೊಮ್ಮೆ ತಾವೇ ಭಟ್ಟಂಗಿಗಳ ಹೆಸರಿನಲಿ ಬರೆಯುತಿಹರು..
“ತಮ್ಮ ಡಬ್ಬವ ತಾವೇ ಬಡಿಯುತಿಹರು
ತಮ್ಮ ತೇರನು ತಾವೇ ಎಳೆಯುತಿಹರು”
ಇದು ತನಗೆ ಜ್ಞಾನೋದಯವಾಗಿದೆ ಎಲ್ಲ ಕಡೆ ಡಬ್ಬ ಬಡಿಯುತ್ತಿರುವ ನಿಮ್ಮ ಗ್ಹೆಂಟ್ ಗುರುವಿಗೆ ಹೇಳಿ.
ಕೊನೆಯ ಎರಡು ಸಾಲುಗಳು ಬಿಟ್ಟು ಹೋಗಿದ್ದವು…:)
ಆಧುನಿಕ ಚೆನ್ನಬಸವಣ್ಣನೊ…ಅರೆಬೆಂದ ಚಣಾ ಬಸವಣ್ಣನೊ
ನೀನಗಿಂತ ಚೆನ್ನಾಗಿ ಬೇರ್ಯಾರು ಬಲ್ಲರು ಕೂಡಲಸಂಗಮದೇವ..
“ಕೂಡಲಸಂಗಮದೇವ” ಮಾನವತಾವಾದದ ಸೆಕ್ಯುಲರ್ ಮಾಡಲು “ಕೂಡಲಸಂಗಮದರ್ಗಾ” ಎಂದು ಮಾಡಿದರೂ ತಪ್ಪಿಲ್ಲ ಅಂತಾರೆ ಅನ್ನಿಸುತ್ತೆ.
ಗ್ಹೆಂಟ್ ಗುರುವಿನ ಮಾತು ಬಂದಾಗೆಲ್ಲ ಮರ್ಮಾಘಾತವಾಗಿ ಚಣ ಬಸವಣ್ಣನ ಸ್ಮರಣೆ ಮಾಡುತ್ತೀರಲ್ಲ ಮಿ ವಿಜಯ್!! ಛೆ!
“ಮರ್ಮಾಘಾತವಾಗಿ ”
ಮರ್ಮಸ್ಥಳಕ್ಕೆ ಸಂಬಂಧಪಟ್ಟ ಆಚರಣೆ ಹಿಂದೂಗಳಲ್ಲಿ ಇಲ್ಲ.. ಈ ಸಂಬಂಧದ ಧಾರ್ಮಿಕ ಆಚರಣೆ ಕುರಿತು ನಿಮ್ಮ ಗುರುಗಳನ್ನು ಕೇಳಿ, ಚನ್ನಾಗಿ ಗೊತ್ತಿರುತ್ತದೆ.
ವಿಜಯ್ ಅವರಿಗೆ ಮರ್ಮಾಘಾತವಾದರೆ ನಿಮ್ಮ ಮರ್ಮಸ್ಥಲಕ್ಕೂ ನೋವಾಗುತ್ತದೆ ಅಂತ ಕಾಣುತ್ತದೆ ಮಾಯ್ಸ ಅವರೇ! ಅದಕ್ಕೆ ವಿಜಯ್ ಅವರನ್ನು ಉದ್ದೇಶಿಸಿ ಬರೆದ ಕಮೆಂಟಿಗೆ ಅವರ ಬದಲು ನೀವು ಪ್ರತಿಕ್ರಿಯಿಸಿದ್ದೀರಿ!!
modalu namage avasyakate eruvudu twarita gatiya nyayang vyavaste, egagale aparad madiruva drohigalannu galligerisabeku, avagaladru ulida dustarige swalp hedarike barabahudu.
Maysa vs Shetkar, when an immovable object meets irresistible force!
ಅರೇ .. ಮಾನವೀಯತೆ ಅಂತೆ .. ಮಗು-ತೋರಿಸಿ ದಾರಿಯಲ್ಲಿ ಭಿಕ್ಷೆ ಬೇಡೋ ಹಾಗೆ!
ಮೊದಲು ಶುದ್ಧ ಲಿಂಗಾಯತರ ಹಾಗೆ ಹಣೆಗೆ ವಿಭೂತಿ, ಕೊರಳಿಗೆ ಲಿಂಗ ಹಾಗು ನಿತ್ಯ ಲಿಂಗಪೂಜೆ ಮಾಡಿ, ಆಮೇಲೆ ಬಂದು ನಮಗೆ ವಚನದ ಪಾಠ ಹೇಳಲಿ. ಬಾಯಲ್ಲಿ ಹೇಳೋದು ವಚನ, ಮನೆಯಲ್ಲಿ, ಆಚರಣೆಯಲ್ಲಿ ಅನ್ಯಧರ್ಮ! ಇದೆಂತ ಪಾಖಂಡಿ?
“ರೀ ಬುರುಡೆ ಬಿಟ್ಕಂಡು ಹಿಂದುಗಳನ್ನು ಹೀಯಾಳಿಸುವ ತಮ್ಮ ಮುಸ್ಲೀಂ ಮೂಲಭೂತವಾದಿತನವನ್ನು ಶರಣರ/ವಚನಗಳ ಮುಖವಾಡ ತೊಡಿಸಿ ದ್ವೇಷಕಾರುವ ಇಂತವರ ಮುಖವಾಡ ಕಳಚಬೇಕಿದೆ”
“ಮೊದಲು ಶುದ್ಧ ಲಿಂಗಾಯತರ ಹಾಗೆ ಹಣೆಗೆ ವಿಭೂತಿ, ಕೊರಳಿಗೆ ಲಿಂಗ ಹಾಗು ನಿತ್ಯ ಲಿಂಗಪೂಜೆ ಮಾಡಿ, ಆಮೇಲೆ ಬಂದು ನಮಗೆ ವಚನದ ಪಾಠ ಹೇಳಲಿ.”
ದರ್ಗಾ ಸರ್ ಅವರು ನಮ್ಮ ಕಾಲದ ಚನ್ನಬಸವಣ್ಣ. ಅವರ ಬಗ್ಗೆ ಬಸವಧರ್ಮದ ನಿಜ ಅನುಯಾಯಿಗಳಿಗೆ ಬಹಳ ಗೌರವವಿದೆ. ದರ್ಗಾ ಸರ್ ಅವರಿಂದ ಬಸಾವದ್ವೈತದ ಬಗ್ಗೆ ಪ್ರೇರಣೆ ಪಡೆದವರು ನಮ್ಮ ನಾಡಿನಲ್ಲಿ ಅಷ್ಟೇ ಅಲ್ಲ ಅನೇಕ ದೇಶಗಳಲ್ಲಿ ಇದ್ದಾರೆ. ದರ್ಗಾ ಸರ್ ಅವರು ಬಸವಧರ್ಮಕ್ಕೆ ಸಲ್ಲಿಸಿದ ಸೇವೆಗೆ ಅವರಿಗೆ ರಾಜ್ಯ ಸರಕಾರ ಬಸವಶ್ರ್ರೀ ಪ್ರಶಸ್ತಿ ಕೊಟ್ಟು ಗೌರವಿಸಿದೆ (ಅದೂ ನಿಮ್ಮ ಭಾಜಪ ಶೆಟ್ಟರ್ ಸರಕಾರದ ಅವಧಿಯಲ್ಲಿ!) ವಚನ ಸಾಹಿತ್ಯದ ಬಗ್ಗೆ ದರ್ಗಾ ಸರ್ ಅವರಿಗಿರುವ ವಿದ್ವತ್ತಿಗೆ ಇಡೀ ಕನ್ನಡ ಸಾರಸ್ವತ ಲೋಕ ಮಾರು ಹೋಗಿದೆ. ಕೋಮು ಸೌಹಾರ್ದತೆಯ ಜಾತ್ಯತೀತ ತತ್ವಗಳ ಸಮಾನತೆಯ ಹರಿಕಾರನಾಗಿ ಕನ್ನಡ ನಾಡಿನಲ್ಲಿ ಮುಂಚೂಣಿಯಲ್ಲಿದ್ದಾರೆ ದರ್ಗಾ ಸರ್. ಇಂತಹವರ ಯೋಗ್ಯತೆಯನ್ನು ಅಳೆಯಲು ನಿಮ್ಮಂತಹ ಅಲ್ಪ ಬುದ್ಧಿಯ ಸಿಂಗಳೀಕಗಳ ಬಾಲದ ಅಗತ್ಯವಿದೆಯೇ???
ಮೊದಲು ಶುದ್ಧ ಲಿಂಗಾಯತರ ಹಾಗೆ ಹಣೆಗೆ ವಿಭೂತಿ, ಕೊರಳಿಗೆ ಲಿಂಗ ಹಾಗು ನಿತ್ಯ ಲಿಂಗಪೂಜೆ ಮಾಡಿ, ಆಮೇಲೆ ಬಂದು ನಮಗೆ ವಚನದ ಪಾಠ ಹೇಳಲಿ. ಬಾಯಲ್ಲಿ ಹೇಳೋದು ವಚನ, ಮನೆಯಲ್ಲಿ, ಆಚರಣೆಯಲ್ಲಿ ಅನ್ಯಧರ್ಮ! ಇದೆಂತ ಪಾಖಂಡಿ?
ವಿಜಯ ಪೈ ಅವರಿಗೆ—- ನಾವು ಚಿಕ್ಕವರಿದ್ದಾಗ ಎಲ್ಲಾ ರೋಗಕ್ಕೂ ಮದ್ದು ಎಂದು ”ಕಸ್ತೂರಿ ಮಾತ್ರೆ” ಎಂಬ ಸಾಸಿವೆ ಗಾತ್ರದ tablet ಕೊಡುತ್ತಿದ್ದರು. ಇಂದು ಎಲ್ಲಾ ಸಾಮಾಜಿಕ ಅನಿಷ್ಟಗಳಿಗೆ ಕಾರಣ ಮತ್ತು ಅದಕ್ಕೆ ಮದ್ದು ಏನು ಎಂದು ಈ ಚರ್ಚೆಯಿಂದ ತಿಳಿದು ಬರುತ್ತಿದೆ. ಇದು ಎಲ್ಲರಿಗೂ ತಿಳಿಯಬೇಕಾದ ಅವಶ್ಯಕತೆಯಿರುವುದರಿಂದ ಈ ಔಷದಿಯ ನಿರ್ಮಾಪಕರು ಪತ್ರಿಕೆ/ಟಿ ವಿ ಗಳಲ್ಲಿ ಜಾಹಿರಾತು ಕೊಟ್ಟರೆ ಒಳ್ಳೆಯದು. ಅಲ್ಲವೇ?
ಹೌದು :). ಇವು ‘ನೂಲ್ಯಲ್ಯಾಕೊ ಚೆನ್ನಿ?..ನೂಲ್ಯಲ್ಯಾಕೊ ಚೆನ್ನಿ?..ರಾಟಿ ಇಲ್ಲೊ ಜಾಣಾ~ ರಾಟಿ ಇಲ್ಲೊ ಜಾಣಾ~ ‘ ಗಿರಾಕಿಗಳು.
ನೀವು ಹೇಳಿದ ‘ಕಸ್ತೂರಿ’ ಮಾತ್ರೆಯನ್ನು ಕನಿಷ್ಟ ಆ ಕಂಪನಿಯವರು ಅದನ್ನು ಕಂಡು ಹಿಡಿದು, ಪ್ರಚಾರ ಮಾಡಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು…ಆದರೆ ಈ ಪುಂಗಿ ಗಿರಾಕಿಗಳದ್ದು ಬಿನ್ ಬಂಡವಾಳ ಬಿಜಿನೆಸ್. ಯಾರೊ ಬರೆದ ವಚನಗಳು ..ಈ ಜನರ ಮಾರಾಟ!. ಬಹುಶ: ವಚನ ಬರೆದವರಿಗೂ ಕೂಡ ಈ ‘ರಾಮಬಾಣ’ದ ಭ್ರಮೆ ಇರಲಿಲ್ಲವೇನೊ. ಈ ಜನಕ್ಕೆ ತಮ್ಮ ರಾಮಬಾಣದ ಮೇಲೆ ಅಷ್ಟು ನಂಬಿಕೆಯಿದ್ದರೆ, ಕರ್ನಾಟಕದ ಜೈಲುಗಳಿಗೆ ಹೋಗಿ ಸುದಾರಣಾ ಸಪ್ತಾಹ ಹಮ್ಮಿಕೊಂಡರೆ ಆಗುತ್ತಿರಲಿಲ್ಲವೆ?? ಗಂಜಿಸಂಪಾದನೆಯೂ ಆಗುತ್ತಿತ್ತು, ಒಂದೆರಡು ಸಣ್ಣ-ದೊಡ್ಡ ಸೈಜಿನ ಪ್ರಶಸ್ತಿಗಳು ಹೆಚ್ಚಿಗೆ ಸಿಗುತ್ತಿದ್ದವು.