ವಾಲ್ಮೀಕಿ ಯಾರು?
– ನವೀನ್ ನಾಯಕ್
ಕೆ.ಎಸ್ ನಾರಾಯಣಾಚಾರ್ಯರ ” ವಾಲ್ಮೀಕಿ ಯಾರು ” ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.
ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ.ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ ” ಈಕೆ ಪರಿಶುದ್ಧೆ ! ಸ್ವೀಕರಿಸು ” ಎನ್ನುವಾಗ ಮಹರ್ಷಿಯು ತಾನು ಸುಳ್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ ” ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ” |
( ಉತ್ತರಾಯಣ 96-16 ). ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು ” ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ ” ನೆಂದೂ ಹೇಳಿದೆ.
ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ ( ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು. ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮದ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.
“ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದ” ಈ ವಾಕ್ಯದ ಅರ್ಥವನ್ನು ತಿರುಚಿದ್ದೇ ಅಥವಾ ಅಪಾರ್ಥ ಮಾಡಿಕೊಂಡಿರುವುದೇ ದುರಾದೃಷ್ಟಕರ. ಅದನ್ನೇ ಹೀಗೆ ಯೋಚಿಸಿ ! ರೈತನು ಇದ್ದಕಿದ್ದಂತೆ ವೈದ್ಯನೋ ಇಂಜಿನಿಯರೋ ಆಗಲು ಸಾದ್ಯವೇ ? ಅಥವಾ ವೈದ್ಯನು ಹಾಗೂ ಇಂಜಿನಿಯರ್ ದಿಢೀರನೇ ರೈತನಾಗಲು ಸಾಧ್ಯವೇ ? ಇಲ್ಲವಲ್ಲ ! ಈ ಕುರಿತು ಲೇಖಕರು ತಮ್ಮನ್ನೇ ಉದಾಹರಿಸಿಕೊಳ್ಳುತ್ತಾರೆ. ತಮ್ಮ ಎದುರಲ್ಲೇ ಹುಡುಗನೊಬ್ಬ ತೂರಿದ ಕಲ್ಲಿನಿಂದ ಪಕ್ಷಿಯೊಂದು ಸತ್ತು ಕೆಳಗೆ ಬಿದ್ದಿತು. ಈ ದುರಂತವನ್ನು ವೀಕ್ಷಿಸಿದ ನಾನು ಮಮ್ಮಲ ಮರುಗಿದೆ. ವಾಲ್ಮೀಕಿಯವರ ಜೀವನದಲ್ಲಿ ನಡೆದ ಕ್ರೌಂಚ ಪಕ್ಷಿಗಳ ಘಟನೆಯಂತೇ ಇಲ್ಲವೇ? ಇದರಿಂದ ನಾನು ವಾಲ್ಮೀಕಿಯಾಗಲಿಲ್ಲ ಎನ್ನುತ್ತಾರೆ. ಶ್ರೀ ಸಿದ್ದರಾಮಯ್ಯನವರು ದಿಢೀರನೇ ಮುಖ್ಯಮಂತ್ರಿಯಾದರೇ ? ಹಲವು ಮಜಲುಗಳನ್ನು ಅವರು ದಾಟಲಿಲ್ಲವೇ! ಅದೆಲ್ಲದರ ಪ್ರಯತ್ನದ ಮೂಲಕ ತಾನೇ ಇಂದು ಮುಖ್ಯಮಂತ್ರಿ ಪಟ್ಟದಲ್ಲಿರುವುದು. ಆಯಾ ವೃತ್ತಿಯ ಕುರಿತು ಅಭ್ಯಸಿಸಬೇಕು . ದಿಢೀರನೇ ಈ ಪ್ರಪಂಚದಲ್ಲಿ ಏನೂ ಆಗುವುದಿಲ್ಲ ಪ್ರತಿಭಟನೆಯನ್ನು ಹೊರತುಪಡಿಸಿದರೆ !
ಹಿಂದಿನ ಕಾಲದಲ್ಲಿ ಬ್ರಾಹ್ಮಣನ ಮಗನಾದರೂ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಬ್ರಾಹ್ಮಣ ಪಟ್ಟಕ್ಕೆ ಅರ್ಹನಾಗುತ್ತಾನೇ ಹೊರತು ಈಗಿರುವಂತೆ ವಂಶ ಪಾರಂಪರ್ಯದಂತಲ್ಲ.ಅದನ್ನೇ ಆಚಾರ್ಯರು ಹೇಳಿದ್ದು. ತೆಗಳಿದ್ದಲ್ಲ,ಷಡ್ಯಂತರ ಮಾಡಿದ್ದಲ್ಲ!
ಪ್ರತಿಭಟಿಸುವವರೆಲ್ಲಾ ಶಾಂತ ಮನಸ್ಥಿತಿಯಿಂದ ಕೃತಿಯನ್ನು ಒಮ್ಮೆಯಾದರೂ ಓದಬೇಕು. ಲೇಖಕರ ಕಾಳಜಿ ಇರುವುದು ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೆ ಒಳಿತಲ್ಲೇ ಹೊರತು ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟುವುದರಲ್ಲಿ ಅಲ್ಲ. ಒಂದೆರಡು ಸಾಲನ್ನೇ ಕೃತಿ ಎಂದುಕೊಳ್ಳುವುದು ಮೂಢತೆಯಾಗುತ್ತದೆ. ಇದೆಲ್ಲದರ ನಡುವೆ ಡುಂಢಿ ‘ಕೃತಿ’ಯನ್ನು ನಿಷೇಧಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಬೀದಿಗಿಳಿಯುತಿದ್ದ ಬುದ್ದಿಜೀವಿಗಳೆನಿಸಿಕೊಂಡವರು ಈಗ ಕಾಣೆಯಾಗಿದ್ದಾರೆ.
ಬರಹಗಾರರೇ ಎಚ್ಚರ !
ಇತ್ತೀಚೆಗೆ ಎರಡು ಸುದ್ದಿಗಳು ಗಾಬರಿಪಡಿಸಿದವು.
1 ವಿ ಆರ್ ಭಟ್ ಎಂಬುವರ ಬಂಧನ.
2. ಪ್ರೊ|| ಕೆ ಎಸ್ ನಾರಾಯಣಾಚಾರ್ಯರ ಬಂಧನಕ್ಕೆ ಒತ್ತಾಯ.
ಸಂಗತಿಗಳು ಎಷ್ಟೇ ಸತ್ಯವಾಗಿದ್ದರೂ, ಅಭಿವ್ಯಕ್ತಿ ಸ್ವಾತಂತ್ರ್ಯವು ಎಷ್ಟೇ ಇದೆಯೆಂದರೂ ಬರಹಗಾರನು ಸಾರ್ವಜನಿಕವಾಗಿ ಬಳಸುವ ಭಾಷೆಯು ಆವೇಶಭರಿತವಾದಾಗ ಇಂತಹ ತೊಂದರೆಗಳು ಸಂಭವಿಸುತ್ತವೆ ಎನಿಸಿತು.
ಸನಾತನ ಧರ್ಮದಲ್ಲಿ ಹುರುಳು ಇದೆಯೋ ಇಲ್ಲವೋ ಎಂಬ ಜಿಜ್ಞಾಸೆಗೆ (ಅದರಲ್ಲೂ ಹೆಂಗಸರಿಗೆ!) ವಾಚಿಕ ಉತ್ತರಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಂತಹ “ತಿರುಳು” ನಮ್ಮಲ್ಲಿದ್ದರೆ “ಅದನ್ನು ಅವರಿಗೆ ಚೆನ್ನಾಗಿ ತೋರಿಸಬೇಕೇ” ವಿನಾ ವೀರಾವೇಶದ, ಉದ್ವೇಗದ ಹೇಳಿಕೆಗಳು ನಿರರ್ಥಕ ಮತ್ತು ಅಪಾಯಕಾರಿ ಕೂಡ !
ಇನ್ನು ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬ ಆರ್ಯೋಕ್ತಿ ಹಾಗೂ ‘ಮೂರ್ಖರೊಡನೆ ವಾದ ಸಲ್ಲ’ ಎಂಬ ಸರ್ವಜ್ಞ ವಚನಗಳ ಪ್ರಕಾರ, ಸತ್ಯವನ್ನು ತೀಕ್ಷ್ಣ ಮಾತುಗಳಿಂದ ಅಭಿವ್ಯಕ್ತಿಸುವುದೂ ಕೂಡ ಬಂಡೆಗೆ ತಲೆ ಚಚ್ಚಿಕೊಂಡಂತೆ !
ಹಾಗಾದರೆ ಸಾರ್ವಜನಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾದರೆ ಇರಬೇಕಾದ ಪೂರ್ವಸಿದ್ಧತೆಗಳೇನು?
ನಿರುದ್ವಿಗ್ನ ಮನಸ್ಸ್ಥಿತಿ ಹಾಗೂ ಅನ್ಯೋಕ್ತಿ, ವಕ್ರೋಕ್ತಿಗಳಿಂದ ಕೂಡಿದ ಧ್ವನಿಪೂರ್ಣ ಭಾಷೆ ಅವಶ್ಯ ಎನಿಸುತ್ತದೆ.
ಇದಕ್ಕೆ ಉದಾಹರಣೆಯಾಗಿ ಒಂದು ಸಣ್ಣ ಕಥೆ ಹೇಳುತ್ತೇನೆ.
*
ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ತನ್ನ ದೇವರ ಅನುಗ್ರಹದಿಂದ ಆ ಹಂದಿ ಒಮ್ಮೆಗೇ 67 ಮರಿಗಳಿಗೆ ಜನ್ಮವಿತ್ತಿತು.
ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ |
ಕರಿಣೀ ಚಿರಾಯ ಸೂತೇ ಶೂರಮಹೀಪಾಲಲಾಲಿತಂ ಕಲಭಮ್ ||
(ಕೊಳಕು ಹಂದಿಯು ಅನತಿಕಾಲದಲ್ಲಿ ನೂರಾರು ಮರಿಗಳನ್ನು ಹೆರುತ್ತದೆ. ಆದರೆ ಆನೆಯು ರಾಜರಿಂದ ಆದರಿಸಲ್ಪಡುವ ಒಂದೇ ಒಂದು ಮರಿಯನ್ನು ದೀರ್ಘಾವಧಿಯಲ್ಲಿ ಹೆರುತ್ತದೆ. ಇದು ವೇದಾಂತ ದೇಶಿಕರು ಶತಮಾನಗಳ ಹಿಂದೆಯೇ ಹೇಳಿದ ಮಾತು!)
ಹೀಗೆ 67 ಹಂದಿ ಮರಿಗಳ ಹಿಂಡಿನಿಂದ ಸಾಧುಹಸುವಿನ ಕೊಟ್ಟಿಗೆ ತುಂಬಿಹೋಯಿತು ಮಾತ್ರವಲ್ಲ, ಹಂದಿಗಳ ಹೊಲಸನ್ನು ಸಹಿಸುವುದು ಸಾಧುಹಸುವಿಗೆ ಅಸಾಧ್ಯವಾಯಿತು. ದಯವಿಟ್ಟು ನಿನ್ನ ಮರಿಗಳನ್ನು ಕರೆದುಕೊಂಡು ನಿನ್ನ ರೊಪ್ಪಕ್ಕೆ ಹೊರಡು ಎಂದು ಆ ಹೊಲಸು ಹಂದಿಯನ್ನು ಬೇಡಿಕೊಂಡಿತು ನಮ್ಮ ಸಾಧುಹಸು.
ಕಣ್ಣು ಕೆಕ್ಕರಿಸಿಕೊಂಡು ಆ ಪುಣ್ಯಕೋಟಿಯನ್ನು ಬೆದರಿಸುತ್ತಾ, ನಾವು ಇಲ್ಲಿ ಹುಟ್ಟಿದ್ದೇವೆ ಎಂದ ಮೇಲೆ ಇದು ನಮ್ಮದೇ ಜಾಗ. ನಾವಿಲ್ಲಿ ಯುದ್ಧವಿದ್ಯಾಲಯವೊಂದನ್ನು ಕಟ್ಟಲಿದ್ದೇವೆ. ನೀನು ಬೇಕಾದರೆ ನಿನ್ನ ಕರುವಿನೊಂದಿಗೆ ಇಲ್ಲೇ ಮೂಲೆಯಲ್ಲಿರು. ನಮ್ಮ ತಂಟೆಗೇನಾದರೂ ಬಂದರೆ, ಅಬ್ಬೇಪಾರಿಗಳಿಗೆ ತೊಂದರೆ ಕೊಡುತ್ತಿದ್ದೀಯೆ ಎಂದು ನಿನ್ನ ಮೇಲೇ ಮೃಗೀಯಸರ್ಕಾರಕ್ಕೆ ದೂರು ಕೊಡುತ್ತೇನೆ ಎಂದಿತು ಆ ಹೊಲಸು ಹಂದಿ.
ಕರುಣೆತೋರಿ ಆಶ್ರಯ ನೀಡಿದ ಸಾಧುಹಸು ದಿಗ್ಭ್ರಾಂತವಾಯಿತು! ಅದರ ಮುಂದೆ ಉಳಿದದ್ದು ಎರಡೇ ಆಯ್ಕೆಗಳು. ಒಂದೋ, ಆ ಹಂದಿಗಳ ಹೊಲಸನ್ನು ಸಹಿಸಿಕೊಂಡು ನರಳುತ್ತಾ ಅಲ್ಲೇ ಸಾಯುವುದು ಅಥವಾ ಈ 67 ಹೊಲಸು ಹಂದಿಗಳು ಹಾಗೂ ಅವುಗಳ ಭವಿಷ್ಯತ್ ಸಂತತಿಗಳು ಆಕ್ರಮಿಸದಿರುವಷ್ಟು ದೂರದ ಇನ್ನಾವುದಾದರೂ ಶಾಂತ ನೆಲೆಯನ್ನು ಹುಡುಕಿಕೊಳ್ಳುವುದು ! ನಿರ್ಧರಿಸಲಾಗದೆ ತೊಳಲುತ್ತಾ ಹೊರಗೆ ಮಳೆಯಲ್ಲಿ ನೆನೆಯುತ್ತಾ ಕರುವಿನೊಂದಿಗೆ ನಿಂತಿತು ಸಾಧುಹಸು !
ನೀತಿ: ಓದುಗರ ವಿವೇಚನೆಗೇ ಬಿಟ್ಟಿದೆ.
*
ಈ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧು ಹಸು ಹಾಗೂ ಹೊಲಸು ಹಂದಿಗಳು ಯಾರ್ಯಾರನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಜಾಣ ವಾಚಕರಿಗೆ ವಿವರಿಸಬೇಕಾದ ಅಗತ್ಯವಿಲ್ಲ. ಇಷ್ಟಾಗಿಯೂ ಇಲ್ಲಿ ನೇರವಾಗಿ ಯಾರನ್ನೂ ಪ್ರಸ್ತಾಪಿಸಿಲ್ಲ. ಈ ಕಥೆ ತಿರುಪತಿಯ ತಪ್ಪಲಲ್ಲೇ ಏಕೆ ನಡೆಯಿತು ಎಂಬುದನ್ನೂ ಸಂಖ್ಯೆಗಳ ಬಳಕೆಯನ್ನೂ, ವರ್ತಮಾನದ ಅರಿವಿರುವ ಜಾಣ ಓದುಗರು ಊಹಿಸಿಕೊಂಡರೆ ಅದಕ್ಕೆ ಲೇಖಕನು ಹೊಣೆಗಾರನಲ್ಲ !
ಓದುಗರ ಅಭಿಪ್ರಾಯಗಳಿಗೆ ಸ್ವಾಗತ.
02-08-2014 – ಎಸ್ ಎನ್ ಸಿಂಹ, ಮೇಲುಕೋಟೆ
+100000 (y)
ನಿಮ್ಮ ಆಬಿಪ್ರಾಯ ೧೦೦% ಸತ್ಯ… ಈ ಹಂದಿಗಳನ್ನು ಒಳಗಡೆ ಬಿಡಲೇ ಬಾರದು
ಕತೆಯ ಮರ್ಮವು ಚೆನ್ನಾಗಿದೆ…
ಆದರೆ ಮೂರನೇ ದಾರಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿಕೊಟ್ಟಿದ್ದಾನೆ!
good thought
ಸ್ಪಂದಿಸಿದ ಎಲ್ಲರಿಗೂ ಧನ್ಯವಾದ. ಸೈಟಿನ ವ್ಯವಸ್ಥಾಪಕರು ಒಂದು ಶಬ್ದವನ್ನು ಬದಲಾಯಿಸಿದ್ದಾರೆ. “ತನ್ನ ದೇವರ ಕೃಪೆಯಿಂದ” ಎಂಬಲ್ಲಿ “ಸೈತಾನನ ಕೃಪೆಯಿಂದ” ಎಂದು ತಿದ್ದಿಕೊಂಡು ಓದಿಕೊಳ್ಳಿ.
ಹಾಗೆ ಕಾಳಿದಾಸನ ಜಾತಿಯನ್ನು ಕುರುಬವೆಂದು ಹೇಳಲಾಗದು. ಕಾಳಿದಾಸನ ಕಾಲವೂ ಕೂಡ ನಿರ್ಧಾರವಾಗಿಲ್ಲ. ಇದು ನಾನು ಸರಕಾರಿ ಪುಸ್ತಕದಲ್ಲೇ ಓದಿದ್ದೀನಿ.
ಅವಿವೇಕಿಗಳಿಗೆ ಯಾವುದೂ ಸರಿಯಾಗಿ ಅರ್ಥವಾಗುವುದಿಲ್ಲವೆನ್ನುವುದು ಇದರಿಂದ ಶತಸ್ಸಿದ್ಧವಾಯಿತು.
ರಾಮಾಯಣವು ವೈದಿಕತೆಯ ಹಿರಿಮೆಯನ್ನು ಸಾರುತ್ತದೆ. ಅದು ಹಂತ ಹಂತದಲ್ಲೂ ಬ್ರಾಹ್ಮಣ್ಯವನ್ನೇ ಮೆರೆದಿದ್ದೆ. ಇಂತಹ ಗ್ರಂಥವನ್ನು ಬರೆದ ವಾಲ್ಮೀಕಿ ಶೂದ್ರನೇ ಆಗಿದ್ದರೂ ವೈದಿಕತೆಯ ಪ್ರಸಾರಕ. ವಾಲ್ಮೀಕಿಯ ಹುಟ್ಟಿನ ಬಗ್ಗೆ ನಡೆಯುತ್ತಿರುವ ವಿವಾದವೂ ಬ್ರಾಹ್ಮಣ್ಯದ ಪಿತೂರಿಯೇ ಆಗಿದೆ. ವೈದಿಕತೆಯನ್ನು ವಾಲ್ಮೀಕಿಯ ಮೂಲಕ ತಳವರ್ಗದವರ ಮೇಲೆ ಹೆರುವ ಷಡ್ಯಂತ್ರ ಇದಾಗಿದೆ. ತಳವರ್ಗದವರಿಗೆ ಬಸವಣ್ಣ ಹಾಗೂ ವಚನಕಾರರ್ರು ಆದರ್ಶ, ವಾಲ್ಮೀಕಿ ಅಲ್ಲ. ವೈದಿಕತೆಯನ್ನು ಧಿಕ್ಕರಿಸಿ ಸಮಾನತೆಯನ್ನು ಬೆಳೆಸೋಣ ಬನ್ನಿ.
ನಮ್ಮ ಸಾಹೇಬರು ಈಗ ಬ್ರಾಹ್ಮಣ/ವೈದಿಕ ಪದಗಳ ಬದಲಾಗಿ, ಎಚ್ಚರಿಕೆಯಿಂದ ಬ್ರಾಹ್ಮಣ್ಯ/ವೈದಿಕತೆ ಬಳಸುತ್ತಿರುವುದು, ತಮ್ಮ ಎಂದಿನ ಪುಂಗಿಯನ್ನು ಕೊಂಚ ಬೇರೆ ರಾಗದಲ್ಲಿ ನುಡಿಸುತ್ತಿರುವುದು ಕಂಡು ಆಶ್ಚರ್ಯವಾಯಿತು!,,ಯಾವುದರ ಎಫೆಕ್ಟೊ?. ;).
ಬ್ರಾಹ್ಮಣ == ಬ್ರಾಹ್ಮಣ್ಯ ಎಂಬ ಸಮೀಕರಣವನ್ನು ನಾನು ಒಪ್ಪುವುದಿಲ್ಲ. ಅಂತಹ ಸಮೀಕರಣವನ್ನು ಯಾರಾದರೂ ಮಾಡಿದಾಗೆಲ್ಲ ನಾನು ತತ್ವಬದ್ಧನಾಗಿ ವಿರೋಧಿಸಿದ್ದೇನೆ. ಬ್ರಾಹ್ಮಣರಲ್ಲೂ ಬ್ರಾಹ್ಮಣ್ಯ ವಿರೋಧಿಗಳಿದ್ದಾರೆ ಬ್ರಾಹ್ಮಣೇತರರಲ್ಲೂ ಬ್ರಾಹ್ಮಣ್ಯಕ್ಕೆ ಜೈ ಎನ್ನುವವರಿದ್ದಾರೆ ಎಂಬ ಸತ್ಯವನ್ನು ಮರೆಮಾಚಲಾಗದು. ಈ ಲೇಖನದ ವಸ್ತುವಿಗೆ ಸಂಬಂಧಿಸಿದ ಹಾಗೆ ಒಂದು ಮಾತು – ಕೆ ಎಸ ನಾರಾಯಣ ಆಚಾರ್ಯ ಅಂತಹವರು ವಾಲ್ಮೀಕಿ ಒಬ್ಬ ಬ್ರಾಹ್ಮಣ ಎಂದು ಸಾಧಿಸುವುದರ ಮೂಲಕ ಬ್ರಾಹ್ಮಣ == ಬ್ರಾಹ್ಮಣ್ಯ ಎಂಬ ಸಮೀಕರಣವನ್ನು ಎತ್ತಿ ಹಿಡಿಯುತ್ತಿದ್ದಾರೆ. ಆದುದರಿಂದ ಅವರನ್ನು ನೀವೂ ವಿರೋಧಿಸತಕ್ಕದ್ದು ಮಿ. ವಿಜಯ್.
ಬ್ರಾಹ್ಮಣ = ಬ್ರಾಹ್ಮಣ್ಯ ಎಂಬ ಸಮೀಕರಣವನ್ನು ನಮ್ಮ ನಡುವಿನ ದೊಡ್ಡ ಸಂತ ದೇವನೂರ ಮಹಾದೇವ ಕೂಡ ಒಪ್ಪುವುದಿಲ್ಲ. ನೋಡಿ http://ladaiprakashanabasu.blogspot.in/2014/08/blog-post_77.html
“ಭಾರತದ ಸಾಮಾಜಿಕ ವಿಷಮತೆಯಲ್ಲಿ ಬ್ರಾಹ್ಮಣರಿಗೇ ಒಂದು ರಾಜ್ಯ ಕೊಟ್ಟರೂ ಅಲ್ಲೂ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇತ್ಯಾದಿಗಳು ಭೂತಾಕಾರವಾಗಿ ಬೆಳೆದು, ಅವಹೇಳನ ಆತ್ಮಹತ್ಯೆಗಳು ಹೆಚ್ಚಿ, ಮತ್ತೆ ಪ್ರತ್ಯೇಕತೆ ಪ್ರಶ್ನೆ ಏಳುತ್ತದೆ. ದಲಿತರಿಗೇ ಪ್ರತ್ಯೇಕ ರಾಜ್ಯ ಕೊಟ್ಟರೂ ಅಲ್ಲೂ ಮೇಲುಕೀಳು ಎಂದು ಹೊಡೆದಾಟ ಕೊಲೆಗಳಾಗಿ ಮತ್ತೆ ಪ್ರತ್ಯೇಕತೆ ಪ್ರಶ್ನೆಯೇ ಏಳುತ್ತದೆ. ಚಾತುರ್ವರ್ಣದ ಜಾತಿ ಪದ್ಧತಿಯ ಶ್ರೇಣಿ ಆಳವಾಗಿ ಬೇರೂರಿ ಸಮಾನತೆಯ ಸಹಬಾಳ್ವೆಯು ಭಾರತೀಯರಿಗೆ ಅಸಹಜವಾಗಿದೆ, ಏನು ಮಾಡೋಣ?”
ಪ್ರಖರ ಚಿಂತಕ ಹಾಗೂ ಸತ್ಯನಿಷ್ಠ ರಾಜಕೀಯ ವಿಶ್ಲೇಷಕ ಸನತ್ ಬೆಳಗಲಿ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ:
“ಅಧಿಕಾರಕ್ಕೆ ಬರುವವರೆಗೆ ‘ಹಿಂದೂ ಬಂಧು ಒಂದು’. ಒಮ್ಮೆ ಅಧಿಕಾರಕ್ಕೆ ಬಂದ ನಂತರ ಉಳಿದವರನ್ನು ಕೊಂದು ಬ್ರಾಹ್ಮಣ್ಯ ಮುಂದು. ಇದು ಸಂಘ ಪರಿವಾರ ಅನುಸರಿಸಿಕೊಂಡು ಬಂದ ನೀತಿ. ಕಳೆದ ಶತಮಾನದ ಮೊದಲ ದಶಕದಲ್ಲಿ ದೇಶದೆಲ್ಲೆಡೆ ಜಾತಿ ವಿರೋಧಿ ಆಕ್ರೋಶ ಭುಗಿಲೆದ್ದಾಗ, ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಪುಲೆ, ಆಗರಕರ್ ಮತ್ತು ಶಾಹು ಮಹಾರಾಜರು ಶ್ರೇಣೀಕೃತ ಜಾತಿ ಪದ್ಧತಿ ವಿರುದ್ಧ ದನಿಯೆತ್ತಿದಾಗ, ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಬ್ರಾಹ್ಮಣ್ಯವನ್ನು ಕಾಪಾಡಿಕೊಳ್ಳಲು ಅದೇ ಮಹಾರಾಷ್ಟ್ರದಲ್ಲಿ ಹುಟ್ಟಿದ ಸಂಘಟನೆ- ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಶೂದ್ರ ಸಮುದಾಯ ತಿರುಗಿ ಬೀಳದಂತೆ ಹಿಂದುತ್ವದ ಗೂಟಕ್ಕೆ ಕಟ್ಟಿ ಹಾಕುವುದು ಈ ಸಂಘಟನೆಯ ರಹಸ್ಯ ಕಾರ್ಯಸೂಚಿ. ಒಮ್ಮೆ ಗುರಿ ಸಾಧಿಸಿದ ನಂತರ ಮತ್ತೆ ಅದೇ ಪುರೋಹಿತಶಾಹಿ ಹೇರಿಕೆ. ಇದು ಅದರ ಚಾಳಿ.”
“ಪರಿವಾರದ ಗುರುವೆಂದೇ ಗುರುತಿಸಿ ಕೊಂಡಿರುವ ರಾಘವೇಶ್ವರ ಭಾರತಿ ಇತ್ತೀಚೆಗೆ ಹೊನ್ನಾವರದ ಸಮಾವೇಶದಲ್ಲಿ ವೈದಿಕರಿಲ್ಲದ ಊರು ಅಮಂಗಳ. ವೈದಿಕರಿಲ್ಲದ ಸಮಾಜ ಅಮಂಗಳ. ಸಮಾಜ ವೈದಿಕರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದ್ದಾರೆ. ಇಂತಹ ಮಾತುಗಳು ಬರೀ ಹೇಳಿಕೆಗಳೆಂದು ನಿರ್ಲಕ್ಷ ಮಾಡಿದರೆ, ಭಾರತದ ವೈದಿಕೇತರ ಸಮುದಾಯಗಳಿಗೆ ಗಂಡಾಂತರ ಕಾದಿದೆ. ಇವರು ಬುದ್ಧನನ್ನು ಮುಗಿಸಿ ಬೌದ್ಧ ಧರ್ಮವನ್ನು ದೇಶದಂದ ಗಡಿಪಾರು ಮಾಡಿದರು. ಜೈನ ಧರ್ಮ ತಲೆಯೆತ್ತದಂತೆ ಮೂಲೆಗುಂಪು ಮಾಡಿದರು. 12ನೆ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಸಿಡಿದ ಬಸವ ಚಳವಳಿಯನ್ನು ಹೊಸಕಿ ಹಾಕಿದರು. ಮಧುವರಸ ಮತ್ತು ಹರಳಯ್ಯ ಅವರನ್ನು ಕಲ್ಯಾಣದಲ್ಲಿ ಆನೆಯಿಂದ ತುಳಿಸಿ ಕೊಲ್ಲಿಸಿದರು. ಬಸವಣ್ಣ ನವರನ್ನು ಕೂಡಲಸಂಗಮದ ನದಿಯಲ್ಲಿ ಕಡಿದು ಹಾಕಿದರು. ಹೀಗೆ ಚರಿತ್ರೆಯಲ್ಲಿ ಸಮಾನತೆ ಪರವಾಗಿ ದನಿಯೆತ್ತುವವರನ್ನೆಲ್ಲ ಮುಗಿಸುತ್ತಲೇ ಬಂದಿದ್ದಾರೆ.”
“ಬರೀ ಭಟ್ಟ, ಜುಟ್ಟ, ಜನಿವಾರಗಳ ವಿರುದ್ಧ ಪ್ರತಿಭಟಿಸಿದರೆ ಸಾಲದು, ಈ ಎಲ್ಲ ವಿಕೃತಿಗಳ ಹಿಂದೆ ಇರುವ ಫ್ಯಾಸಿಸ್ಟ್ ಅಜೆಂಡಾದ ವಿರುದ್ಧ ಭಾರತದ ಜನತೆಯನ್ನು ಎಚ್ಚರಗೊಳಿಸಬೇಕಿದೆ.”
http://ladaiprakashanabasu.blogspot.in/2014/08/blog-post_82.html
ಈ ಪ್ರಖರ ಚಿಂತಕರ ವಿಚಾರಗಳ ಪ್ರಖರತೆ ಸಿಕ್ಕಾಪಟ್ಟೆ ಕಣ್ಣು ಕುಕ್ಕುವಂತದ್ದು..ಹತ್ತಿರ ಹೋಗಲಾರದಂತದ್ದು. ಆದ್ದರಿಂದ ಅವುಗಳನ್ನು ನೀವೇ ಓದಿ..ನಿಮ್ಮ ಲೆವಲ್ ಗೆ ತಕ್ಕಂತಿದೆ ಅವರ ವಿಚಾರಗಳು.. ಈ ” ಚಿಂತಕ” ಮಹಾನುಭಾವರ ಲೇಖನದ ಹೆಡಿಂಗ್ ನೋಡಿ “ಕೋಮು ಕ್ರಿಮಿಗಳ ವಾಂತಿ ಭೇದಿ ” !. ಒಳಗೆ ತನ್ನ ಎಂದಿನ ಹಳಸಲು ಹೂರಣದ ತುರುಕಾಟ. ಈ ಈ ಗಿರಾಕಿ ತಾನು ಲೇಖನದ ಹೆಸರಿನಲ್ಲಿ ಮಾಡುತ್ತಿರುವ ವಾಂತಿ-ಭೇದಿ ಸಮಾಜದಲ್ಲಿ ಸುವಾಸನೆ ಹುಟ್ಟಿಸುತ್ತದೆ ಎಂಬ ಭ್ರಮೆಯಲ್ಲಿರುವಂತಿದೆ. ಇಂತಹ ಲದ್ದಿಯನ್ನು ಇಲ್ಲಿ ತಂದು ಹಾಕಿ ನಮಗೆ ಓದಿಸುವ ಕೃಪೆ ಮಾಡಬಾರದಾಗಿ ವಿನಂತಿ. ಅವರು ಗೊಣಗುತ್ತಿರುವುದು ನಿಮ್ಮ ಕಿವಿಯಲ್ಲಿ..ಅದನ್ನು ನೀವು ಕೇಳಿಸಿಕೊಂಡರೆ ಸಾಕು!
ಬೆಳಗಲಿ ಅವರದ್ದು ತೀಕ್ಷ್ಣವಾದ ಭಾಷೆ. ಆದರೆ ಅದು ಸತ್ಯನಿಷ್ಠವಾದ ಭಾಷೆ; ಬಂಡವಾಳಶಾಹಿಯ ರಂಗಿನ ಸೋಗಿನ ಮಾತಲ್ಲ! ಆದುದರಿಂದಲೇ ಅದು ನಿಮಗೆ ಮರ್ಮಾಘಾತವನ್ನುಂಟು ಮಾಡಿದೆ.
ಒಹ್..ಹೌದೆ?? ಗೊತ್ತಿರಲಿಲ್ಲ. ಹಾಗಾದರೆ ಅವರು ನಿಮ್ಮ ಬಳಗದ ಕಿವಿಯಲ್ಲಷ್ಟೇ ಗೊಣಗಲಿ!..ನಮಗೆ ಮರ್ಮಾಘಾತ ಉಂಟು ಮಾಡುವುದು ಬೇಡ!!
ಥೂ ಅಸಹ್ಯಾ… ಪೈ.
ಮತ್ತೆ ಮರ್ಮಸ್ಥಳದ ವಿಷಯಕ್ಕೆ ಹೋದ್ರಿ.
ಅದಕ್ಕೆ ಅದೇನೋ ‘ಮರ್ಮಾಘಾತದಲ್ಲೇ’ ಆಸಕ್ತಿ.. ದರಿದ್ರ!
ಯಪ್ಪಾ!!,,ನಾನಲ್ಲ..ನಿಮ್ಮ ಗೆಳೆಯ ಶೆಟ್ಕರರು ಬಳಸಿದ ಶಬ್ದ ಅದು! 🙂
ಒಹ್ ಹೌದೆ? ಈ ಕೆಳಗಿನದ್ದನ್ನು ಬರೆದಿದ್ದು ಯಾರು ಎಂದು ಗೊತ್ತೆ?
[ಇವತ್ತಿನ ಇತರೆ ಜಾತಿಗಳ ವಿದ್ಯಮಾನ ನೋಡಿದರೆ, ಬ್ರಾಹ್ಮಣ ಲಿಂಗಾಯಿತ ಒಕ್ಕಲಿಗ ಇತ್ಯಾದಿ ಪ್ರಬಲ ಜಾತಿಗಳವರೆಲ್ಲ ತಮ್ಮ ಒಳ ಪಂಗಡ ಮರೆತು ಒಟ್ಟಾಗಿ ತಮ್ಮ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿವೆ. ವಿಪರ್ಯಾಸವೆಂದರೆ ಈ ಸಮಾಜದ ಕೊನೆಯ ಘಟಕವಾದ ದುರ್ಬಲ ಅಸ್ಪೃಶ್ಯರು ಇರುವ ತಮ್ಮ ಒಡಕನ್ನು ಹೆಚ್ಚಿಸಿಕೊಳ್ಳುತ್ತಾ ನಡೆಯುತ್ತಿದ್ದಾರೆ. ಒಂದೇ ಕಾಲಮಾನದಲ್ಲಿ ಇದು ಜರುಗುತ್ತಿದೆ.]
[ಈ ದೇಶದಲ್ಲಿ ಬ್ರಾಹ್ಮಣರಿಗೇನೆ ಒಂದು ರಾಜ್ಯ ಕೊಟ್ರೂವೆ ಅಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಮತ್ತಿನ್ಯಾವುದೋ ಹುಟ್ಕಂಡು ನೂರೆಂಟು ಭಿನ್ನಾಭಿಪ್ರಾಯಗಳು ಆ ಬ್ರಾಹ್ಮಣರ ರಾಜ್ಯದಲ್ಲೇ ಬರುತ್ತೆ. ಅಲ್ಲಿ ಜರುಗುವ ವಾಗ್ವಾದ, ಗೇಲಿ, ಅವಹೇಳನ, ಆತ್ಮಹತ್ಯೆಗಳು ಆ ರಾಜ್ಯದ ಸಹಜ ಕ್ರಿಯೆಗಳಾಗಬಹುದು. ಹಾಗೇನೆ ದಲಿತರಿಗೇನೆ ಒಂದು ರಾಜ್ಯ ಕೊಟ್ರೂನು ಅಲ್ಲೂ ಕೂಡಾ ಬಲಗೈ, ಎಡಗೈ, ಎಡಗೈನ ಹೆಬ್ಬೆರಳು, ಬಲಗೈನ ಹೆಬ್ಬೆರಳು ಅಥವಾ ಕಿರುಬೆರಳು ಹೀಗೆ ವಿವಾದ, ಜಗಳ, ಮತ್ತೆ ಕೊಲೆಗಳು ಈ ರಾಜ್ಯದ ದಿನನಿತ್ಯ ಜರುಗುವ ಕ್ರಿಯೆಗಳಾಗಬಹುದು.
ಇದು ಯಾಕೆಂದರೆ ಸಮಾನತೆ ಹಾಗೂ ಸಹಬಾಳ್ವೆ ನಮಗೆ ರೂಢಿಯಾಗಿಲ್ಲ.]
ಬ್ರಾಹ್ಮಣರಿಗೆ ಒಂದು ರಾಜ್ಯ ಕೊಡುವುದು ಬೇಡ. ಎಲ್ಲ ಜಾತಿಗಳ ಬ್ರಾಹ್ಮಣ್ಯವಾದಿಗಳನ್ನೂ ವೈದಿಕತೆಯ ಸಮರ್ಥಕರನ್ನೂ ಯಾವುದಾದರೂ ಬೇರೆ ಗ್ರಹಕ್ಕೆ ಕಳುಹಿಸಿಬಿಡುವುದು ಈ ಜಗತ್ತಿನ ಭವಿಷ್ಯದ ದೃಷ್ಟಿಯಿಂದ ಉತ್ತಮ.
ಸಮಾಜಸುಧಾರಣೆ, ಜಾತಿನಿರ್ಮೂಲನ, ಮಹಿಳಾಸಮಾನತೆ ಯನ್ನೇ ‘ತಮ್ಮ ಸುಧಾರಣೆ’ಯ ಬಂಡವಾಳ ಮಾಡಿಕೊಂಡ..ಈ ನಿಟ್ಟಿನಲ್ಲ ಮಾಡಿದ ಒಂದು ನಾಲ್ಕು ಒಳ್ಳೆಯ ಕೆಲಸಗಳ ಪಟ್ಟಿ ಕೊಡಿ ಎಂದರೆ ಟೌನಹಾಲ್, ಫ್ರೀಡಂಪಾರ್ಕ್, ಕ್ಲಾಕ್ ಟಾವರ ಮುಂದೆ ಭಾರಿ ಧರಣಿ ಮಾಡಿದೆವು ಎಂದು ಧರಣಿಗಳ ಲಿಸ್ಟ್ ಕೊಡುವವರನ್ನು, ಆಮೇಲೆ ಎವಿಡೆನ್ಸ್ ಆಗಿ 24+1 ಜನ ಭಾಗವಹಿಸಿದ ಸಭೆಗಳ ಫೋಟೊ ತೋರಿಸುವವರನ್ನು ಯಾವ ಗ್ರಹಕ್ಕೆ ಕಳಿಸೋಣ??
ಅನ್ಯ ಗ್ರಹ ಬೇಡ, ನೆರೆಯ ಪಾಕಿಗೆ ಕಳಿಸಿದರೆ ಸಾಕು. ಎರಡೇ ದಿನದಲ್ಲಿ ಪುಂಗಿ ನಿಲ್ಲುತ್ತದೆ.
ಅವರೂ ಕೂಡ ನಮ್ಮವರೇ ಆದರೆ ಅವರಿಗೆ ಹುಚ್ಚು ಹಿಡಿದಿದೆ.
ಅವರನ್ನು ಬೇರೆಲ್ಲಿಗೂ ಕಳಿಸೋದು ಬ್ಯಾಡ. ಇಲ್ಲೇ ಇರಲಿ; ಆದರೆ ವಸಿ ಗಾಂಚಾಲಿ ಕಡಮೆ ಇರಲಿ!
[ಬ್ರಾಹ್ಮಣ್ಯವಾದಿಗಳನ್ನೂ ವೈದಿಕತೆಯ ಸಮರ್ಥಕರನ್ನೂ ಯಾವುದಾದರೂ ಬೇರೆ ಗ್ರಹಕ್ಕೆ ಕಳುಹಿಸಿಬಿಡುವುದು ]
ಓಹೋ.. ದೇಶದಿಂದ ಓಡಿಸೋ ಹೊಂಚಾಯಿತು.
ಈಗ ಬೇರೆ ಗ್ರಹಕ್ಕೇ ಕಳಿಸ್ತಾರಂತೆ ದೊಣ್ಣೇನಾಯಕರು! ಇವರ ಅಪ್ಪಣೆಗಾಗಿ ಕಾಯ್ತಾ ಇದ್ದೀವಿ ನಾವು.!!
ಇದೇ ಇವರ ಮಾನವತಾವಾದ, ಸಮಾನತೆ ಇತ್ಯಾದಿ ಬುರುಡೆಗಳು!
ನಾನೂ ಅಷ್ಟೆ.. ಮಾರ್ಕ್ಸ ಓದಿಕೊಂಡವನು/ಕಮ್ಯುನಿಷ್ಟ್ = ಸಮಾಜ ಸುಧಾರಕ, ಕೋಮುಸೌಹಾರ್ದ ತರುವವನು, ಪ್ರಗತಿಪರ, ಸಾಕ್ಷಿಪ್ರಜ್ಞೆ ಎಂಬ ಸ್ವ ಅಪಾದಿತ ಸಮೀಕರಣವನ್ನು ಒಪ್ಪುವುದಿಲ್ಲ. ಅವರ ನಡೆ-ನುಡಿಗಳನ್ನು ಚೆನ್ನಾಗಿ ಬಲ್ಲೆ. ನನ್ನ ವಿರೋಧ ಇರುವುದು ಈಗಿರುವ ಗಂಜಿ ಗಿರಾಕಿಗಳಾಗಿರುವ ಎಡಬಿಡಂಗಿಗಳ ವಿರುದ್ದ (ಅದೂ ವಿಶೇಷವಾಗಿ ಕರ್ನಾಟಕ ರಾಜ್ಯದವು).. ಇವರು ಎಲ್ಲ ರೀತಿಯಿಂದಲೂ ಈ ದೇಶಕ್ಕೆ ಕಂಟಕರು. ಮಾನವೀಯತೆ ಇರುವ, ನಿಜ ಸಮಾಜ ಸುಧಾರಕರು ಎಲ್ಲಿದ್ದರೂ ಪ್ರೀತಿಯಿದೆ, ಗೌರವವಿದೆ. ಅವರ ಧರ್ಮ/ದೈವ ನಂಬಿಕೆ ಇವ್ಯಾವತ್ತು ನನಗೆ ಮುಖ್ಯವಲ್ಲ.
—-
ಹಾಗೆಯೇ ಲೇಖನಕ್ಕೆ ಸಂಬಂಧಿಸಿದಂತೆ ನನ್ನದು ಒಂದು ಮಾತು. ನಾರಾಯಣಾಚಾರ್ಯರು ಹೇಳಲು ಹೊರಟಿದ್ದು ಹುಟ್ಟಿನಿಂದಲೇ ಯಾರೂ ಬ್ರಾಹ್ಮಣ, ಶೂದ್ರರಾಗುವುದಿಲ್ಲ. ಸಾಧನೆಯಿಂದ ಎಂದು. ಅಜೆಂಡ ಪ್ರೇರಿತರಿಗೆ ಅದು ಅರ್ಥ ಆಗುವುದಿಲ್ಲ ಅಷ್ಟೆ!
“ಪುರೋಹಿತಶಾಹಿಯನ್ನು ಖಂಡಿಸಿ ಮಾತನಾಡುವುದು ಇಂದು ನಿನ್ನೆಯ ಸಂಗತಿ ಏನಲ್ಲ. ವೇದಗಳನ್ನು ಪ್ರಮಾಣ ಎಂದು ಒಪ್ಪದ ಚಾರ್ವಾಕನೂ ಖಂಡಿಸಿದ್ದಾನೆ. ಅಲ್ಲಿಂದೀಚೆಗೆ ಬುದ್ಧ, ಬಸವಾದಿಗಳೆಲ್ಲರೂ ಪುರೋಹಿತಶಾಹಿಯನ್ನು ಗುರಿಯಾಗಿಸಿಕೊಂಡವರೇ. ಹಾಗೆಯೇ ಆಧುನಿಕ ಕಾಲಘಟ್ಟದಲ್ಲಿ ಕೇರಳದ ನಾರಾಯಣ ಗುರು, ಸ್ವಾಮಿ ವಿವೇಕಾನಂದರು ಹೀಗೆ ಅನೇಕರು ಪುರೋಹಿತ ಶಾಹಿಯನ್ನು ತಮ್ಮದೇ ಆದ ರೀತಿಯಲ್ಲಿ ಖಂಡಿಸಿದ್ದಾರೆ, ಟೀಕಿಸಿದ್ದಾರೆ ಮತ್ತು ವಿಮರ್ಶಿಸಿದ್ದಾರೆ.”
http://ladaiprakashanabasu.blogspot.in/2014/08/blog-post_4.html
ಹೂಂ..ಅಂದ ಹಾಗೆ ಈ ಪುರೋಹಿತಶಾಹಿ ಅಂದರೇನು ಅಂತ ವಿವರಿಸುತ್ತೀರ ಸ್ವಲ್ಪ? ಇವರ ಲಕ್ಷಣ, ಕಾರ್ಯಚಟುವಟಿಕೆ ..ಯವ-ಯಾವ ಮತ/ಧರ್ಮಗಳಲ್ಲಿ ಇವರು ಯಾವ-ಯಾವ ರೂಪದಲ್ಲಿರುತ್ತಾರೆ ಎಂದು. ಈ ಲೇಖನ ಬರೆದವರಿಗೆ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಇನ್ನೂ ತನಕ ಉತ್ತರವೇ ಬರಲಿಲ್ಲ. ಆದ್ದರಿಂದ ನಿಮ್ಮಂತಹ ಸಬ್ಜೆಕ್ಟ್ ಎಕ್ಸಪರ್ಟ್ ಗಳು ಇದರ ಬಗ್ಗೆ ತಿಳಿಸಿ ಹೇಳಿದರೆ, ನಮ್ಮಂತಹ ಪಾಮರರಿಗೂ ಇದರಿಂದ ಉಪಯೋಗವಾಗುವುದು..ದೇಶ ಉದ್ಧಾರವಾಗುವುದು.
ಪುರೋಹಿತಶಾಹಿ ಅನ್ನೋದಾದರೆ ಇರಾನ್-ದೇಶದಲ್ಲಿ ಮುಲ್ಲಾಶಾಹಿ, ವ್ಯಾಟಿಕನ್ ಅಲ್ಲಿ ಪಾದ್ರಿಶಾಹಿ ಅಂತಾರ?
ಮೊದಲು “ಪುರೋಹಿತಶಾಹಿ” ಪದದ ರಚನೆಯೇ ತಪ್ಪು.
Theocracyಗೆ ಸರಿಯಾದ ಪದ ಮತಶಾಹಿ/ಮತಶಾಸನ !
ಹಿಂದೂ ಅರಸನೊಬ್ಬ ಒಂದು ಮತಕ್ಕೆ ಸೀಮಿತವಾದದ್ದು ವಿರಳ. ಕೃಷ್ಣದೇವರಾಯನೇ ವೈಷ್ಣವ, ವೀರಶೈವ, ಶೈವ, ಜೈನ ಇತ್ಯಾದಿ ಹಲವು ಮತಗಳಿಗೆ ಆಶ್ರಯ ಕೊಟ್ಟಿದ್ದನು. ಹಾಗೆ ಮೈಸೂರ ಅರಸರೂ ಸಹ.
ಇವೆಲ್ಲ ಆ ವೆದವನಿಗೆ ಅರ್ಥ ಆಗಬೇಕಲ್ಲ !!
[ಚಾರ್ವಾಕನೂ ಖಂಡಿಸಿದ್ದಾನೆ. ಅಲ್ಲಿಂದೀಚೆಗೆ ಬುದ್ಧ, ಬಸವಾದಿಗಳೆಲ್ಲರೂ ಪುರೋಹಿತಶಾಹಿಯನ್ನು ಗುರಿಯಾಗಿಸಿಕೊಂಡವರೇ. ]
ಸುಳ್ಳು! ಪುರೋಹಿತಶಾಹಿ ಎಂಬುದೇ ಇಲ್ಲ, ಇರಲಿಲ್ಲ ನಮ್ಮ ದೇಶದಲ್ಲಿ. ಇನ್ನು ಖಂಡಿಸೋದೇನು?
ವೈದಿಕರು ಏನು ಚಾರ್ವಾಕರು, ಬೌದ್ಧರನ್ನು ಹಾಗು ಇತ್ಯಾದಿ ವಿರೋಧಿಗಳನ್ನು ಸುಮ್ಮನೆ ಬಿಟ್ಟಿದ್ದಾರೆಯೇ? ಭಾರತದಲ್ಲಿ ಇಂದು ಎಲ್ಲಿದ್ದಾರೆ ಚಾರ್ವಾಕಾದಿಗಳು?
ಲಿಂಗಾಯತರಲ್ಲೂ ಒಂದು ಕೃಶಸಮೂಹವಷ್ಟೇ ಇಂದು ವೈದಿಕತೆಯನ್ನು ವಿರೋಧಿಸೋದು.
ಬಾಹುಳ್ಯದಲ್ಲಿ ವೀರಶೈವರು ಹಿಂದೂ ಧರ್ಮವನ್ನು ಹಾಗು ಅದರ ವೈದಿಕತೆಯನ್ನು ಒಪ್ಪುವವರೇ. ಒಮ್ಮೆ ಮಲೆಮಹದೇಶ್ವರನ ಬೆಟ್ಟಕ್ಕೆ ಹೋಗಿ ನೋಡಿಕೊಂಡುಬರಬಹುದು.
ಅತರ್ಕವಾದ ಸುಳ್ಳುಗಳನ್ನು ಬರೆದು ಸಮಾನತೆಯನ್ನು ಸಾಧಿಸಲು ಹೊರಡುವುದು, ಮುಂದೆ ಅವರಿಗೇ ಮಾರಕ.
ರಾಮಾಯಣದ ಬಗ್ಗೆ ಭಗವಾನ್ ಅವರಿಗಿಂತ ಕ್ರಾಂತಿಕಾರಕವಾಗಿ ವಿಚಾರ ಮಂಥನ ನಡೆಸಿರುವ ನಾಗಶೆಟ್ಟಿ ಅವರಿಗೆ ಏಕೆ ಇನ್ನೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿಲ್ಲ? ಪಟ್ಟಣಶೆಟ್ಟಿಯವರು ನಾಗಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿಯೊಂದನ್ನು ತಕ್ಷಣವೇ ಘೋಷಿಸಲಿ ಎಂದು ಆಗ್ರಹ ಪಡಿಸೋಣವೇ?
ಮಾನ್ಯ ಶೆಟ್ಕರ್ ಅಲ್ಲಿರುವ ಒಂದು ಅದ್ಭುತ ಪ್ರತಿಭೆಯೆಂದರೆ ನೀವು ಯಾವುದೇ ವಿಷಯವನ್ನು ಮಾತನಾಡಿ. ಅವರದನ್ನು ಬ್ರಾಹ್ಮಣ್ಯ ವೀರಶೈವ ದ್ವೇಷಕ್ಕೆ ಸರಾಗವಾಗಿ ಎಳೆದು ತರುತ್ತಾರೆ. ನಿಜಕ್ಕೂ ಬ್ರಾಹ್ಮಣರು ಲಿಂಗಾಯತ/ವೀರಶೈವರಿ ಈ ಮಟ್ಟಿಗೆ ಹೊಡೆದಾಡಿದ್ದರೊ ಇಲ್ಲವೊ ಗೊತ್ತಿಲ್ಲ.
ಗಿರೀಶ್ .. ಶೆಟ್ಕರ್ ಅವರ ಗುರುಗಳಾದ ದರ್ಗಾ ಅವರು ಲಿಂಗಾಯತರ ಇಲ್ಲವೇ ಮುಸ್ಲಿಮ್ಮಾ?
ಇದು ಬ್ರಾಹ್ಮಣ ಹಾಗು ವೀರಶೈವರ ನಡುವಿನದ್ದಲ್ಲ ವಿಷಯ!
“ಶೆಟ್ಕರ್ ಅವರ ಗುರುಗಳಾದ ದರ್ಗಾ ಅವರು ಲಿಂಗಾಯತರ ಇಲ್ಲವೇ ಮುಸ್ಲಿಮ್ಮಾ?”
ದರ್ಗಾ ಸರ್ ಅವರಂತಹ ಮಹಾನ್ ಚೇತನವನ್ನು ಜಾತಿಕುಲಮತಗಳ ಚೌಕಟ್ಟಿನಲ್ಲಿ ನೋಡುವುದು ತಪ್ಪು. ದರ್ಗಾ ಸರ್ ಅವರು ಒಂದು ಸಾತ್ವಿಕ ಶಕ್ತಿ. ಜಗತನ್ನು ಬೆಳಗುವ ಬೆಳಕು.
ಗಿರೀಶ್ …
ನೀವು ಯಾರನ್ನಾದರೂ ನಿಮ್ಮ ಪರವಾಗಿ ಮಾತಾಡಕ್ಕೆ ಯಾವೋನೋ ಒಬ್ಬದ ಅಗ್ಗದ ಜನವನ್ನು ಕೂಲಿಗೆ ಇಟ್ಟುಕೊಂಡಿದ್ದೀರಾ?
ನಾನೇನು ದರ್ಗಾ ಅನ್ಕೊಂಡ್ರ ಮಾಯ್ಸ? ಶೆಟ್ಕರನ್ನು ನೇಮಿಸಿಕೊಂಡ ಹಾಗೆ ನೇಮಿಸಿಕೊಳ್ಳಲು?
ರೀ ಗಿರೀಶ್,
ನೇಮ ಅನ್ನೋದು ವೈದಿಕರ ಪದ! ಅನಾರ್ಯ ಸಂಸ್ಕೃತಿಯವರನ್ನು ದಾಸ್ಯಕ್ಕೆ ಇಟ್ಟುಕೊಂಡಿದ್ದಾರೆ.
who is this darga?
Darga is a person or a state which oscillates between a Sharana and a mullah!!
oscillate ಪದದ ತಪ್ಪು ಬಳಕೆ!
ಸರಿಪಡಿಸಿ
‘keep switching sides’
wow! depending upon the context. Right?
ಕನ್ನಡ! ಅಲ್ಲ!
oscillate = ಅಲುಗಾಡು.. ತೂಗಾಡು..
ನೀವು ಪಕ್ಷ-ಬದಲಿಸು ಎಂದು ಹೇಳಬೇಕು ತಾನೆ?
ದರ್ಗಾ ಸರ್ ಅವರು ಎಂದಾದರೂ ಮುಲ್ಲಾ ತರಹ ವರ್ತಿಸಿದನ್ನಾಗಲಿ ಮುಲ್ಲಾಗಳಿಗೆ ಬೆಂಬಲ ನೀಡಿದನ್ನಾಗಲಿ ನೀವು ಕಂಡಿದ್ದೀರಾ? ತಮ್ಮ ಪಾಡಿಗೆ ಬಸವಜ್ಞಾನವನ್ನು ಜನಸಾಮಾನ್ಯರಿಗೆ ಹಂಚುತ್ತಿರುವ ಅಪ್ಪಟ ಶರಣ ಅವರು.
ಪುಯ್ ಪುಯ್ .. ಅದೇ ರಾಗದಲ್ಲಿ.. ಅದೇ ತಾಳದಲ್ಲಿ..
ಸಂತೋಷ ಅವರೇ, ದರ್ಗಾ ಸರ್ ಅವರನ್ನು ನೀವೆಷ್ಟೇ ಹಂಗಿಸಿ ಲೇವಡಿ ಮಾಡಿ, ಅವರು ಮಾತ್ರ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬಸವಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ನಿಮಗೆ ಬಹುಶಃ ತಿಳಿದಿರಲಿಕ್ಕಿಲ್ಲ. ದರ್ಗಾ ಸರ್ ಅವರು ೨೦೧೪ ಇಸವಿಯ ಬಸವಶ್ರೀ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
_http://www.prajavani.net/article/%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%B8%E0%B2%B5%E0%B2%BE%E0%B2%B2%E0%B3%81
ಅಯ್ಯೋ .. ಅದಕ್ಕೇನಂತೆ.. ಈ ಅಧ್ಯಕ್ಷ ಸ್ಥಾನಕ್ಕೂ ಪರೋಕ್ಷ ಮಿಸಾಲಾತಿ ಇರಬಹುದಲ್ಲ!!
ಇನ್ನು ಬಸವ ಪ್ರಶಸ್ತಿಯನ್ನು ಕೊಡೋದು ಯಾರು? ಅದೇನು ನೊಬೆಲ್ ಪುರಸ್ಕಾರವೇ?
ಮಾಯ್ಸ, ಅದನ್ನು ಕಂಡು ಹಿಡಿಯಲು ಸಾಧ್ಯವಾಗುವುದು ಹೇಗೆ?
ಅವರ ಊಳಿಗಕ್ಕಿರೋದು ಬರುತ್ತಲ್ಲ ಎಲ್ಲಾ ವಿಷಯಕ್ಕೂ ಅದನ್ನ ಝಾಡಿಸಿ ಕೇಳಬೇಕು!
“ಮನುವಾದಿಗಳು ಮಾಡಿರುವ ಮೊದಲ ಕೆಲಸವೆಂದರೆ ಮುಸಲ್ಮಾನರ ವಿರುದ್ಧ ದಲಿತರನ್ನು ಎತ್ತಿ ಕಟ್ಟಿರುವುದು. ಸಮಾನ್ಯವಾಗಿ ಸಾಂಸ್ಕೃತಿಕ ಭಿನ್ನತೆ ಇರುವಲ್ಲಿ ಕೋಮುವಾರು ವಿಷಬೀಜ ಬಿತ್ತುವುದು ಸುಲಭ.ಅದೇ ಇಲ್ಲಿಯು ನಡೆದಿದೆ ಎನಿಸುತ್ತದೆ. ಆದರೆ ದೇಶದ ಹಲವಾರು ಇತಿಹಾಸಕಾರರು, ವಿದ್ವಾಂಸರು ತಿಳಿಸಿರುವಂತೆ ಭಾರತದ ಬಹುತೇಕ ಮುಸ್ಲಿಂ ಜನತೆ ಮೂಲವಾಗಿ ಶೂದ್ರಾತೀ ಶೂದ್ರರೇ ಆಗಿದ್ದಾರೆ. ಅವರೆಲ್ಲರು ಕೆಳವರ್ಗದಿಂದ ಮತಾಂತರ ಹೊಂದಿದವರೇ ಆಗಿದ್ದಾರೆ. ಹೀಗೆಂದ ಮೇಲೆ ಅಲ್ಲಿ ದಲಿತರ ಪಾಲು ಹೆಚ್ಚಿದೆ ಎಂಬುದು ನಿರ್ವಿವಾದ.ಅಷ್ಟಲ್ಲದೆ ಮುಸಲ್ಮಾನರ ಮತ್ತು ದಲಿತರ ನಡುವೆ ಸಾಂಸ್ಕೃತಿಕ ನಂಟಿದೆ ಎಂಬುದು ‘ಪೀರಲ’ ಹಬ್ಬದಿಂದ ನಮಗೆ ತಿಳಿಯುತ್ತದೆ. ಆದರೆ ಒಂದೇ ಧರ್ಮದ ಸವರ್ಣೀಯರಿಗೂ, ದಲಿತರಿಗೂ ಇರುವ ಸಂಬಂಧ, ಮಡಿ-ಮೈಲಿಗೆ ಸಂಬಂಧ, ಒಡೆಯ-ಆಳಿನ ಸಂಬಂಧ, ಮೇಲು-ಕೀಳಿನ ಸಂಬಂಧ, ಇರಲಿ, ಆಹಾರ ಪದ್ಧತಿಯಲ್ಲೂ ಸಹ ಗೋಮಾಂಸ ಭಕ್ಷಣೆಯಲ್ಲಿ ದಲಿತರು ಮತ್ತು ಮುಸಲ್ಮಾನರು ನಡುವೆ ಇರುವ ಸಾಮ್ಯತೆ ಎದ್ದು ಕಾಣುವಂತಹದ್ದು. ವಿವೇಕಾನಂದರು ಹೇಳುತ್ತಾರೆ ‘‘ಭಾರತದ ಬಡವರಲ್ಲಿ ಇಷ್ಟೊಂದು ಜನ ಯಾಕೆ ಮಹಮ್ಮದೀಯರಾಗಿದ್ದಾರೆ? ಕತ್ತಿಯ ಭಯಕ್ಕಂಜಿ ಅವರು ಮತಾಂತರ ಗೊಂಡರು ಎನ್ನುವುದು ಬರೀ ಬೊಗಳೆಯಷ್ಟೆ. ಅವರು ನಿಜಕ್ಕೂ ಮತಾಂತರವಾದದ್ದು ಜಮೀನುದಾರರು ಹಾಗೂ ಪುರೋಹಿತರಿಂದ ಮುಕ್ತಿ ಪಡೆಯುವ ಸಲುವಾಗಿ’’ಎಂದು.”
_http://ladaiprakashanabasu.blogspot.in/2014/08/blog-post_40.html
ಉತ್ತರಪ್ರದೇಶದ ಮದರಾಸದಲ್ಲಿ ಮೊನ್ನೆ ಬಲವಂತದ ಮತಾಂತರವಾಯಿತಲ್ಲ ಅದೂ ಪುರೋಹಿತರಿಂದ ಮುಕ್ತಿ ಪಡೆಯಲಿಕ್ಕೇನಾ?? ಅಥವಾ ಇದೂ ಬೊಗಳೆನ?? ಇಲ್ಲ ನಿಮ್ಮ ಸ್ವಘೋಶಿತ ಶರಣರ ಬುಡುಬುಡಿಕೆ ಪುಂಗಿನಾದವಾ??
ನಿಮ್ಮಲ್ಲಿ ಚರ್ಚಿಸಲು ವಿಷಯ/ಪುರಾವೆ ಇಲ್ಲ ಅದಕ್ಕೆ ವಿಷಯಾಂತರ.. ಈ ಚರ್ಚೆಯಲ್ಲಿ ಮುಸಲ್ಮಾನರು ಏಕೆ ನುಸುಳಿದರೋ ನಾ ಕಾಣೆ… ವಿಷಯ ವಾಲ್ಮಿಕಿ ಯಾರು? ಇಲ್ಲಿ ಮುಸಲ್ಮಾನ/ಮತಾಂತರ ವಿಷಯದ ಪ್ರಸ್ತಾಪದ ಅಗತ್ಯವಾದರೂ ಏನಿತ್ತು?? ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ!!??
ಈ Nagshetty Shetkar ಆಗಲೇ ಮತಾಂತರ ಆದವರು. ಅವರಿಗೆ ಆ ಹೊಸ ಧರ್ಮದ ಪ್ರಚಾರಕ್ಕೆ ತುಂಬಾ ಸಿಗ್ತಿದೆ.
“ಹರಿಹರ ಕವಿ ರಗಳೆ ಬರೆಯುವಾಗ ಬ್ರಿಟಿಷರು ಇನ್ನೂ ನಾಗರೀಕತೆಯ ಪರಿಚಯವೇ ಇರದ ಅದಿವಾಸಿಗಳಾಗಿದ್ದರು ಎಂಬುದು ನಮಗೆ ಗೊತ್ತಿರುವ ಸತ್ಯ. ಆದರೇ ಹರಿಹರನ ರಗಳೆಗಳಲ್ಲಿ ಪುರೋಹಿತಶಾಹಿಯ ಕಥೆಗಳಿರೋದು ರಾಕೇಶ್ ಶೆಟ್ಟಿಯವ್ರೆ, ಬುದ್ದಿಜೀವಿ ಎಂದು ಕುಹಕವಾಡೋ ನಿಮ್ಮ ಹಾಗೂ ನಿಮ್ಮ ಪರಿವಾರದವರಿಗೆ ಅರಿವಿಲ್ಲವೆ. ಬೇಡರ ಕಣ್ಣಪ್ಪನಂತಹ ಕತೆಗಳನ್ನ ಹರಿಹರ ಕವಿ ಭವಿಷತ್ತಿನಲ್ಲಿ ಆಗಬಹುದಾದದ್ದನೇ ಊಹಿಸಿ, ಹತ್ತಾರು ಶತಮಾನಗಳ ಹಿಂದೆಯೇ ಬರೆದಿದ್ದ ಎಂಬಂತೆ ವಾದ ಮಾಡಲಾರಿರಿ ಎಂದುಕೊಂಡಿರುತ್ತೇನೆ.
ಇನ್ನು ವಚನಸಾಹಿತ್ಯ ಚಳುವಳಿಯಲ್ಲಿ ಬಹುಪಾಲು ವಚನಕಾರರು ದೇವಸ್ಥಾನಗಳಿಂದ ಹೊರಗೆಯೇ ಉಳಿದು, ದೇವರನ್ನು ಕುಳಿತಲ್ಲಿಯೇ ಕಾಣುವಂತಹ ವಚನಗಳನ್ನ ರಚಿಸಿದರು. ದೇವಾಲಯಗಳು ಎಲ್ಲರಿಗೂ ಮುಕ್ತವಾಗಿದ್ದವು ಎನ್ನುವುದಾದರೇ ಇಂತಹ ವಚನಗಳನ್ನೇಕೆ ಟೀಕಾಸ್ತ್ರಗಳಂತೆ ಬರೆಯುತ್ತಿದ್ದರು. ವಚನಗಳ ಬಗ್ಗೆ ಸಂಶೋಧಕರಾದ ಬಾಲು ಸಂಗಡಿಗರು ಪ್ರಸ್ತಾಪಿಸಿದ ಕಪೋಲಕಲ್ಪಿತ ವ್ಯಾಖ್ಯಾನವನ್ನೇ ಪುನಃ ಪ್ರಸ್ತಾಪಿಸುವುದು ಚರ್ಚೆಯನ್ನ ದಾರಿ ತಪ್ಪಿಸುವ ಅಥವಾ ಗಾಯ ಮಾಯದಂತೆ ಮಾಡುವ ಕ್ರಿಯೆಗಳೆಂದು ಭಾವಿಸುತ್ತೇನೆ. ಕನಕಕಿಂಡಿಯ ಪ್ರತೀತಿಯನ್ನೂ ಒಮ್ಮೆ ನೆನಪಿಸಿಕೊಂಡುಬಿಡಿ.”
ಸುಮ್ಮೆ ಕಾಪಿ ಪೇಸ್ಟ್!
ಸತ್ಯ ಯಾರ ಬಾಯಿಂದ ಬಂದರೂ ಅದನ್ನು ಗೌರವಿಸುವ ವಿನಯ ನನಗಿದೆ. ನಿಮಗೆ?
ತಾವು ಆಗಲೇ ಚರ್ಚೆಯನ್ನು ದಾರಿ ತಪ್ಪಿಸಿಯಾಗಿದೆಯಲ್ಲ… ತಾವು ಲೇಖನಕ್ಕಂತೂ ಪೂರಕವಾದ ಅಥವಾ ಸಂಬಂಧಿಸಿದ ಪ್ರತಿಕ್ರಿಯೆ ಕೊಡೊದಿಲ್ಲ… ಇನ್ನು ನಿಮ್ಮ ಪ್ರತಿಕ್ರಿಯೆಗಳಿಗೆ ಪ್ರಶ್ನೆ ಅಥವ ಅದನ್ನು ಖಂಡಿಸಿ ಬರೆದರೇ ಅಲ್ಲಿಂದಲೂ ವಿಷಯಾಂತರ ಇದು ಒಂಥರ ಕಪ್ಪೆ ಜಾತಿ… ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಾರೋದು.. ೨ ಕಡೆ ಹಿಡಿದರೆ ಅವರಿಗೆ ಪತ್ರ ಬರೆಯಿರಿ ಅಂತ ಇನ್ಯಾರನ್ನೋ ತೋರಿಸುವುದು…
ಸನತ್ ಬೆಳಗಲಿ ಅವರ ಭಾಷೆ ತುಸು ಹೆಚ್ಚೇ ತೀಕ್ಷ್ಣ, ಆದರೆ ಬ್ರಾಹ್ಮಣ್ಯದ ವಿರುದ್ಧ ಅವರದ್ದು ತಾತ್ವಿಕ ಹೋರಾಟ.
ಡಾ|| ಅಬ್ದುಲ್ ಕಲಾಂ ಅವರ ಮಾತುಗಳನ್ನೋದಿ:
ಕಮ್ಯುನಿಸ್ಟರನ್ನು ನೋಡಿ. ಅವರು ಅದೆಷ್ಟು ಗುಂಪುಗಳಾಗಿ ಒಡೆದು ಹೋಗಿದ್ದಾರೋ ಅವರಿಗೇ ಗೊತ್ತಿಲ್ಲ!
ಅವರನ್ನು ಬೇರೆ ರಾಜ್ಯಕ್ಕಲ್ಲ, ಬೇರೆ ಗ್ರಹಕ್ಕೆ ಸಾಗಿಸಿ ಹಾಕಿದರೂ ಮತ್ತಷ್ಟು ಒಡೆದು ಹೋಗುತ್ತಲೇ ಇರುತ್ತಾರೆ.
ತತ್ತ್ವದ ಆಧಾರದ ಮೇಲೆ ಒಡೆದರೂ, ಅಧಿಕಾರಕ್ಕಾಗಿ ಅವರು “ಎಡ ರಂಗ”, “ಪ್ರಗತಿಪರರ ವೇದಿಕೆ”, ಇತ್ಯಾದಿಗಳ ಸೋಗು ಹಾಕುತ್ತಿರುತ್ತಾರೆ.
ಇತ್ತೀಚಿನ ಚುನಾವಣೆಯಲ್ಲಿ “ಎಡ ರಂಗ” ಎಡದಲ್ಲೂ ಕಾಣುತ್ತಿಲ್ಲ, ಬಲದಲ್ಲೂ ಕಾಣುತ್ತಿಲ್ಲ, ಮಧ್ಯದಲ್ಲೂ ಕಾಣುತ್ತಿಲ್ಲ.
“ಕಾಂಗ್ರೆಸ್ ಮುಕ್ತ್ ಭಾರತ್” ಪ್ರವಾಹದಲ್ಲಿ ಕಮ್ಯುನಿಸ್ಟರು ಕೊಚ್ಚಿ ಹೋದರೋ, ಮುಳುಗೇ ಹೋದರೋ ತಿಳಿಯುತ್ತಿಲ್ಲ!
nice article but i didnt get to meaning of that number and place.please send me
nice article
I appreciate Mr.nagshetty Shetkar for his lonely fight against “ಪುರೋಹಿತಶಾಹಿ” s here. He is just ripping apart these Sanaatanavaadis with logics
ಆಂಗ್ಲಪ್ರೇಮಿಗಳೇ ಸರಿಯಾದ ವ್ಯಾಕರಣದಲ್ಲಿ ಬರೆಯಿರಿ..
ಪುರೋಹಿತಶಾಹಿ ಅನ್ನೋದೇ ಇಲ್ವಲ್ಲ.. ಇಲ್ದೇ ಇರೋದರ ಜತೆ ಆವಯ್ಯ ಕಿತ್ತಾಡೋದು.. ಅಂದ್ರೇನ್ ಅರ್ಥ?
@ನಾಗಶೆಟ್ಟಿ ಶೆಟ್ಕರ್..
ಶೆಟ್ಕರ್ ಸಾಹೇಬರೆ..
ನಾವು ಮುಖ್ಯ ವಿಷಯದಿಂದ ಆಚೆ ಹೋಗದಿರೋಣ. ನಿಮ್ಮ ಪ್ರಕಾರ..
೧) ಪುರೋಹಿತಶಾಹಿ ಅಂದರೆ ಏನು? ಇವರ ಲಕ್ಷಣಗಳೇನು? ಇವರನ್ನು ಹೇಗೆ ಗುರುತಿಸಬಹುದು?
೨) ಬ್ರಾಹ್ಮಣ್ಯ ಅಂದರೆ ಏನು?
೩) ವೈದಿಕತೆ ಅಂದರೆ ಏನು?
ಇವುಗಳಿಗೆ ನೀವು ಉತ್ತರ ಕೊಡಬೇಕಾದದ್ದು ಅತಿ ಅವಶ್ಯಕ ಮತ್ತು ಕರ್ತವ್ಯ. ಉತ್ತರ ಕೊಡಲಿಲ್ಲವೆಂದರೆ ಆ ಶಬ್ದಗಳನ್ನು ಇಲ್ಲಿ ಬಳಸಲು ಹೋಗಬೇಡಿ.
(ಉಳಿದ ಸ್ನೇಹಿತರಲ್ಲಿ..ದಯವಿಟ್ಟು ನಮ್ಮ ಸಾಹೇಬರು ಈ ಪ್ರಶ್ನೆಗೆ ಉತ್ತರ ಕೊಡುವ ತನಕ ಅವರನ್ನು ಬೇರೆ ಕಡೆ ಸೆಳೆಯದಿರಿ 🙂 )
ಅವರ ವ್ಯಾಖ್ಯಾನಗಳನ್ನು ಕಟ್ಟಿಕೊಂಡು ಏನಾಗಬೇಕು? ಗೂಬೆ ಹತ್ತಿರ ಶಾಸ್ತ್ರ ಕೇಳಿದಂಗೆ!
ಈ ಸಾಹೇಬರ ಮತ್ತು ಅವರ ಬಳಗದವರ ‘ಹೋರಾಟ’, ಜೀವನೋಪಾಯ ನಿಂತಿರುವುದೇ ಈ ಪುರೋಹಿತಶಾಹಿ, ಬ್ರಾಹ್ಮಣ್ಯ, ವೈದಿಕತೆ ಎಂಬ ಶಬ್ದಗಳ ಮೇಲೆ. ಅವರು ಎರಡು ಪ್ರತಿಕ್ರಿಯೆಗಳಿಗೊಮ್ಮೆ ಇದನ್ನು ಬಳಸುತ್ತಾರೆ…ಅಂದ ಮೇಲೆ ಅದರ ಅರ್ಥವನ್ನು ಅವರು ಅರಿದು ಕುಡಿದಿರಲೇಬೇಕು!. ಆದ್ದರಿಂದ ಹೇಳಲಿ ಬಿಡಿ..ಇವರ ಹೋರಾಟದ ತಳಹದಿ ಏನು ಎಂಬುದಾದರೂ ಗೊತ್ತಾಗುತ್ತದೆ. 🙂
ಪೈ..
ಪುರೋಹಿತಶಾಹಿ ಎಂಬುದು ನಮ್ಮ ದೇಶದಲ್ಲೇ ಇಲ್ಲ… ಈ ಗೂಬೆಗೆ ಏನ್ ಗೊತ್ತು?
ಅದ್ಯಾರೋ ಹೇಳಿದನ್ನ ಬಂದು ಇಲ್ಲೀ ಪುನಃ ಹೇಳೋ ಗಿಳಿ ಇದು. ಅದಕ್ಕೆ ಆ ಶಬ್ದಗಳ ಅರ್ಥ ಗೊತ್ತಿದ್ರೆ ಹಿಂಗೆ ಹುಚ್ಚಂಗೆ ಬರೆದು ಬೊಬ್ಬೆ ಹೊಡೆಯ್ತಿರಲಿಲ್ಲ.
ಪುರೋಹಿತಶಾಹಿ ಬಗ್ಗೆ ಒಂದಷ್ಟು.. ಪ್ರತಿಕ್ರಿಯೆ
_http://ladaiprakashanabasu.blogspot.in/2014/08/blog-post_7.html
ಥೋ!..ಸ್ವಾಮಿ..ನಮ್ಮ ಚರ್ಚೆ ಇರುವುದು ನಿಮ್ಮ ಜೊತೆ. ನಿಮ್ಮ ವಿವರಣೆ ಬೇಕು ಈ ಶಬ್ದಗಳಿಗೆ. ನಿಮ್ಮ ತಲೆಗೊಳಗೂ ಸ್ವಲ್ಪ ಸ್ವಂತದ್ದು ಇದೆ ಎಂದು ಭಾವಿಸಿದ್ದೇನೆ. ಈ ಲಿಂಕುಗಳನ್ನು ಹುಡುಕಿಕೊಳ್ಳುವ ಕೆಲಸವನ್ನು ನಿಮಗಿಂತ ಚೆನ್ನಾಗಿ ನಾವು ಮಾಡಬಲ್ಲೆವು!
ಆಯ್ತಾ.. ಆ ವಯ್ಯ ಇಷ್ಟೇ! ಅಲ್ನೋಡು ಅಂದ್ ಬಿಟ್ ಓಡಿ ಹೋಗೋದು.!
“ಆರೋಗ್ಯಪೂರ್ಣ, ತರ್ಕಬದ್ಧ, ವೈಜ್ಞಾನಿಕ ವಿಮರ್ಶೆಯನ್ನು ತಾಳಿಕೊಳ್ಳಲಾಗದ ಕಲಾಕತಿ ಮತ್ತು ಸಮಾಜ ಯಾವತ್ತೂ ಬಹುದೂರ ಕ್ರಮಿಸಲಾರದು. ಅವುಗಳ ಸಂಕುಚಿತತೆಯೇ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಅನಾಹುತಗಳನ್ನು ಸಷ್ಟಿಸುತ್ತಲೇ ಅವಸಾನದತ್ತ ಹೆಜ್ಜೆ ಹಾಕುತ್ತದೆ.”
_http://ladaiprakashanabasu.blogspot.in/2014/08/blog-post_10.html
ತಾನೊಬ್ಬನೇ ದೊಡ್ಡ ಮನುಷ್ಯ .. ವ್ಯ ವ್ಯ ವ್ಯ!
ದೊಡ್ಡ ಮನುಷ್ಯ ಅಂತ ಎಂದೂ ಎಲ್ಲಿಯೂ ನನ್ನನ್ನು ಕರೆದುಕೊಂಡಿಲ್ಲ. ನನಗೆ ಜ್ಞಾನೋದಯವಾಗಿದೆ ಜ್ಞಾನೋದಯವಾಗಿದೆ ಅಂತ ಎಲ್ಲೆಡೆ ಸಾರುತ್ತಾ ಬೀಗಿದವನಲ್ಲ. ವಚನಗಳಲ್ಲಿ ಜಾತಿಕುಲ ಪದಗಳು ಎಷ್ಟು ಬಾರಿ ಬಳಸಲ್ಪಟ್ಟಿವೆ ಅಂತ ಎಣಿಸಲು ಹೋದವನಲ್ಲ. ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲವೇ ಇಲ್ಲ, ಶ್ರೇಣೀಕೃತ ಸಮಾಜವೆಂಬುದು ಬ್ರಿಟೀಷರ ಕಲ್ಪನೆ ಅಂತ ಸಾಧಿಸಲು ಹೋಗಲಿಲ್ಲ. ಸಿ ಎಸ್ ಎಲ್ ಸಿ ಯ ಹೆಸರಿನಲ್ಲಿ ಹಾಸ್ಯಾಸ್ಪದ ಸಂಶೋಧನೆ ಮಾಡಲಿಲ್ಲ. ನಾನು ದೊಡ್ಡ ಮನುಷ್ಯನಾಗಲು ಹೇಗೆ ಸಾಧ್ಯ? ನಾನೊಬ್ಬ ಸರಳ ಶರಣ.
ನಿಮ್ಮ ಅನಿಸಿಕೆ ತುಂಬಾ ಮಜವಾದ ದೃಷ್ಟಾಂತದಿಂದ ಕೂಡಿದೆ. ಅನಾದಿ ಕಾಲದಿಂದಲು ನಡೆದು ಬಂದ ವ್ಯಕ್ತಿ ಶ್ರೇಯೊ ಧರ್ಮವನ್ನು ನಿವು ಹೇಳಿದ ಹಂದಿಗಳಂತ ಮನಸ್ಥತಿಯವು ಒಂದು ಬುಡಕ್ಕೆ ಕಟ್ಟಿ ಅಕ್ಷರ ಸಂಸ್ಕೃತಿಯನ್ನು ವಶಪಡಿಸಿಕೊಂಡು ಪಾಪ ಸಾಧು ಹಸುಗಳನ್ನು ಮೂಕರನ್ನಾಗಿಸಿ ಇಂದಿಗು ಸತ್ಯದ ಬಾಯಿಮುಚ್ಚಲು ಆವೇಶ ಪಡುತ್ತಿರುವುವು.
dhanyavaada….
ಸ ರ ,
ಗಣಪ ರಾಮಾಯಣ ಬರೆಯಲು ಕಾರಣ ಹೇಳಿ pls
ಕಾಳೀದಾಸ ಚರಿತ್ರೇಯಲ್ಲಿ ಕೇವಲ ತಾಯಿಯ ದರ್ಶನದಿಂದ ಕವಿರತ್ನನಾಗಲಿಲ್ಲವೋ